Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಏತ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ - Vistara News

ಬೆಂಗಳೂರು

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಏತ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ

Yettinahole Project: ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ನಿರ್ಣಾಯಕ ಘಟ್ಟ ತಲುಪಿದ್ದು, ಏತ ಕಾಮಗಾರಿಗಳ ಯಶಸ್ವಿ ಪೂರ್ವ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗಿದೆ.

VISTARANEWS.COM


on

Yettinahole project
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಕೈಗೆತ್ತಿಕೊಂಡಿರುವ ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು (Yettinahole Project) ನಿರ್ಣಾಯಕ ಘಟ್ಟ ತಲುಪಿದ್ದು, ಮೊದಲನೇ ಹಂತದ ಏತ ಕಾಮಗಾರಿಗಳ ಯಶಸ್ವಿ ಪೂರ್ವ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ, ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ (Projected population for 2023-24) ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವುದು. ಜೊತೆಗೆ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50 ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವ 23,251.66 ಕೋಟಿ ರೂ. ಮೊತ್ತದ ಉದ್ದೇಶಿತ ರಾಜ್ಯದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆ ಇದಾಗಿದೆ.

2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೇ ಹಂತದ ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ ವಿಯರ್-1,4 ಮತ್ತು 5 ರಿಂದ ನೀರನ್ನೆತ್ತಿ (ಒಟ್ಟಾರೆ 35.50 ಕ್ಯುಸೆಕ್) ವಿತರಣಾ ತೊಟ್ಟಿ-3 ರವರೆಗೆ (Delivery Chamber-3) ಪೂರೈಸಿ ತದನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-4 ರ ಮುಖಾಂತರ ಗುರುತ್ವ ಕಾಲುವೆಗೆ ನೀರನ್ನು ಹರಿಸಲು ಯೋಜಿಸಲಾಗಿದೆ. ಗುರುತ್ವ ಕಾಲುವೆಯು ಒಟ್ಟು 252.61 ಕಿ.ಮೀ ಉದ್ದವಿದ್ದು, ಈ ಪೈಕಿ ಸ:42.00 ಕಿ.ಮೀ ವರಗಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ನಂತರದ ಕಾಮಗಾರಿಗಳು ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವ ಕಾಲುವೆಯ ಸ:32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮುಖಾಂತರ ತಾತ್ಕಾಲಿಕವಾಗಿ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ಇದರನ್ವಯ ನವೆಂಬರ್-2023 ರಿಂದಲೇ ಪೂರ್ವ ಪರಿಕ್ಷಾರ್ಥ ಚಾಲನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ವಿಯರ್-4&5 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-3 ರವರೆಗೆ ನೀರನ್ನು ಪೂರೈಸಲಾಗಿತ್ತು. ಪ್ರಸ್ತುತ ಇವುಗಳ ಜೊತೆ ವಿಯರ್-1 ರಿಂದಲೂ ಸಹ ನೀರನ್ನೆತ್ತಿ ವಿತರಣಾ ತೊಟ್ಟಿ-4 ರವರೆಗೆ ಪೂರೈಸಿ, ಅಲ್ಲಿಂದ ಗುರುತ್ವ ಕಾಲುವೆಗೆ ಆ.20ರಂದು ಯಶಸ್ವಿಯಾಗಿ ನೀರು ಹರಿಸಲಾಗಿದ್ದು, ಗುರುತ್ವ ಕಾಲುವೆಯಲ್ಲಿನ ನೀರು ಸ:32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ವೇದಾ ವ್ಯಾಲಿಯನ್ನು ಪ್ರವೇಶಿಸಿ ಈಗಾಗಲೇ ಹಳೇಬೀಡು ಮತ್ತು ಬೆಳವಾಡಿ ಕೆರೆಗಳು ತುಂಬಿ ಕೋಡಿ ಬಿದ್ದು, ವಾಣ ವಿಲಾಸ ಸಾಗರದತ್ತ ನೀರು ಹರಿಯುತ್ತಿದೆ.

ಪ್ರಸಕ್ತ ವಿಯರ್-3 ಅನ್ನು ಹೊರತುಪಡಿಸಿ, ಉಳಿದ ಎಲ್ಲಾ ವಿಯರ್‌ಗಳಿಂದ ಸೆಪ್ಟೆಂಬರ್-5ರೊಳಗೆ ಪೂರ್ವ ಪರೀಕ್ಷಾರ್ಥವಾಗಿ ನೀರನ್ನೆತ್ತಿ ಗುರುತ್ವ ಕಾಲುವೆಗೆ ಪೂರೈಸಲು ಯೋಜಿಸಲಾಗಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಪೂರ್ವ ಪರೀಕ್ಷಾರ್ಥ ಚಟುವಟಿಗಳನ್ನು ಪೂರ್ಣಗೊಳಿಸಿ, ಶೀಘ್ರದಲ್ಲಿಯೇ ಅಧಿಕೃತವಾಗಿ ಮಾನ್ಯ ಮುಖ್ಯಮಂತ್ರಿಗಳ ಹಾಗೂ ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಯೋಜನೆಯ ಕಾಮಗಾರಿಗಳಿಗೆ ಪ್ರಾಯೋಗಿಕ ಚಾಲನೆ ನೀಡಿ ರಾಜ್ಯಕ್ಕೆ ಸಮರ್ಪಿಸಲಾಗುತ್ತದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ 2024ರ ಜುಲೈ ಅಂತ್ಯದವರೆಗೆ ಒಟ್ಟಾರೆ ಸಂಚಿತ 16,152.05 ಕೋಟಿ ರೂ. ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಯೋಜನೆಯನ್ನು 2026-27ನೇ ಸಾಲಿನಲ್ಲಿ 2027ರ ಮಾ.31 ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ಇದನ್ನೂ ಓದಿ | Water Price Hike: ಬೆಂಗಳೂರು ಜಲಮಂಡಳಿಗೆ ₹87 ಕೋಟಿ ಬಾಕಿ ಉಳಿಸಿಕೊಂಡು ಶ್ರೀಸಾಮಾನ್ಯನ ಬೆನ್ನಿಗೆ ಬರೆ ಹಾಕಲು ಮುಂದಾದ ರಾಜ್ಯ ಸರ್ಕಾರ!

ಎತ್ತಿನಹೊಳೆ ಯೋಜನೆಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿರುವ 8 ವಿಯರ್‌ಗಳ ಹತ್ತಿರ ನೀರಿನ ಹರಿವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ (Real time discharge measurement) ಜರ್ಮನ್ ತಂತ್ರಜ್ಞಾನವನ್ನೊಳಗೊಂಡ Telemetry ವ್ಯವಸ್ಥೆಯನ್ನು 2018 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನ ಮುಂಗಾರಿನ ಹಂಗಾಮಿನಲ್ಲಿ ಜೂನ್-1 ರಿಂದ ಆಗಸ್ಟ್-20 ರವರೆಗೆ 13.34 ಟಿ.ಎಂ.ಸಿ ನೀರು ದಾಖಲಾಗಿರುವ ಪೈಕಿ ತಿರುವುಗೊಳಿಸಬಹುದಾದಂತಹ ನೀರಿನ ಪ್ರಮಾಣವು 9.23 ಟಿ.ಎಂ.ಸಿ ಗಳಾಗಿರುತ್ತದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Kannada New Movie: ಪ್ರಜ್ವಲ್ ದೇವರಾಜ್-ಅದಿತಿ‌ ಪ್ರಭುದೇವ ಅಭಿನಯದ ʼಮಾಫಿಯಾʼ ಚಿತ್ರ ಸದ್ಯದಲ್ಲೇ ತೆರೆಗೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಎಚ್. ನಿರ್ದೇಶಿಸಿರುವ ಬಹು ನಿರೀಕ್ಷಿತ “ಮಾಫಿಯಾ” ಚಿತ್ರ (Kannada New Movie) ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಎಚ್. ನಿರ್ದೇಶಿಸಿರುವ ಬಹು ನಿರೀಕ್ಷಿತ “ಮಾಫಿಯಾ” ಚಿತ್ರವನ್ನು (Kannada New Movie) ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ ಅಥವಾ ಮ್ಯೂಟ್ ಹೇಳದೆ ಯು\ಎ ಪ್ರಮಾಣಪತ್ರ ನೀಡಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ “ಮಾಫಿಯಾ” ಚಿತ್ರದ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವುದಾಗಿ ನಿರ್ಮಾಪಕ ಕುಮಾರ್ ತಿಳಿಸಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಬಿಡುಗಡೆಗೆ ಪ್ರಜ್ವಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ಈ ಚಿತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಾಗೂ ಗಗನ್ ಭಡೇರಿಯಾ ಸಂಗೀತ ನೀಡಿದ್ದಾರೆ. ಎಸ್. ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್, ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

Continue Reading

ಬೆಂಗಳೂರು

Kannada New Movie: ಐವರು ನಿರ್ದೇಶಕರ 5 ಕಥೆಗಳ ʼಬಿಟಿಎಸ್ʼ ಚಿತ್ರದ ಟ್ರೇಲರ್ ರಿಲೀಸ್‌; ಹೊಸ ಪ್ರಯತ್ನಕ್ಕೆ ರಾಜ್ ಬಿ ಶೆಟ್ಟಿ ಸಾಥ್‌

ಐವರು ನಿರ್ದೇಶಕರು, ಐದು ಕಥೆಗಳನ್ನಿಟ್ಟುಕೊಂಡು “ಬಿಟಿಎಸ್” ಎಂಬ ಸಿನಿಮಾ (Kannada New Movie) ಮಾಡಿದ್ದಾರೆ. ಆಸಕ್ತಿಕರ ವಿಷಯಗಳನ್ನಿಟ್ಟುಕೊಂಡು ಜನರ ಮನಸ್ಸು ಗೆಲ್ಲಲ್ಲು ಮುಂದಾಗಿದ್ದಾರೆ‌. ಯುವ ಪ್ರತಿಭಾನ್ವಿತರ ತಂಡಕ್ಕೆ ನಟ ರಾಜ್ ಬಿ ಶೆಟ್ಟಿ ಸಾಥ್ ನೀಡಿ, ಪ್ರಯತ್ನ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. ಟ್ರೇಲರ್ ಅನ್ನು “ಭೀಮ” ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿದ್ದಾರೆ. ಬಿಟಿಎಸ್ (ಬಿಹೈಂಡ್ ದಿ ಸ್ಕ್ರೀನ್) ಚಿತ್ರವನ್ನು ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಒಂದು ಚಿತ್ರವನ್ನು ಇಬ್ಬರು ನಿರ್ದೇಶಕರು ಸೇರಿ ನಿರ್ದೇಶಿಸಿರುವ ಉದಾಹರಣೆ ಸಾಕಷ್ಟಿದೆ. ಆದರೆ ಐದು ಜನ ನಿರ್ದೇಶಕರು, ಐದು ಕಥೆಗಳನ್ನಿಟ್ಟುಕೊಂಡು “ಬಿಟಿಎಸ್” ಎಂಬ ಸಿನಿಮಾ (Kannada New Movie) ಮಾಡಿದ್ದಾರೆ. ಆಸಕ್ತಿಕರ ವಿಷಯಗಳನ್ನಿಟ್ಟುಕೊಂಡು ಜನರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ‌. ಯುವ ಪ್ರತಿಭಾನ್ವಿತರ ತಂಡಕ್ಕೆ ನಟ ರಾಜ್ ಬಿ ಶೆಟ್ಟಿ ಸಾಥ್ ನೀಡಿ, ಪ್ರಯತ್ನ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. ಟ್ರೇಲರ್ ಅನ್ನು “ಭೀಮ” ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿದ್ದಾರೆ.

ಬಿಟಿಎಸ್ (ಬಿಹೈಂಡ್ ದಿ ಸ್ಕ್ರೀನ್) ಚಿತ್ರವನ್ನು ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.

ತೆರೆಯ ಹಿಂದಿನ ವಿಷಯಗಳನ್ನು ಐವರು ನಿರ್ದೇಶಕರು ತೆರೆಯ ಮೇಲೆ ತರುವ ಮೂಲಕ ಹೊಸ ಪ್ರಯತ್ನ ಮಾಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಚೆನ್ನಾಗಿದೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಭೀಮ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಈ ವೇಳೆ ನಿರ್ದೇಶಕರಲ್ಲಿ ಒಬ್ಬರಾದ ಕುಲದೀಪ್ ಕಾರಿಯಪ್ಪ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಮುಂದಾದಾಗ ನಮ್ಮನ್ನು ಯಾರು ಬೆಂಬಲಿಸುವುದಿಲ್ಲ ಎಂದು ಸಮಾಜವನ್ನು ಬಯ್ಯುವುದಕ್ಕೆ ಮುಂದಾಗುತ್ತೇವೆ. ಸಾಧನೆ ಮಾಡಲು ಮುಂದಾದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕಥೆಯ ತಿರುಳು. ನನ್ನ ಕಥೆಯ ಹೆಸರು “ಹೀರೋ” ಅಪರೂಪದ ವಿಷಯಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ವಿವರಿಸಿದರು.

ಮತ್ತೊಬ್ಬ ನಿರ್ದೇಶಕ ಸಾಯಿ ಶ್ರೀನಿಧಿ ಮಾತನಾಡಿ, ಸಾಲ ಮಾಡಿಯಾದರೂ ಚಿತ್ರ ಮಾಡಬೇಕು ಎನ್ನುವ ಆಸೆ ನನಗೆ. ನನ್ನ ಆಸೆಗೆ ನಿರ್ಮಾಪಕ ಮುರುಳಿ ಕೃಷ್ಣ ನೆರವಾದರು. ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ‌. ಕಾಫಿ, ಸಿಗರೆಟ್ ಮತ್ತು ಲೈನ್ ಎನ್ನುವುದು ನನ್ನ ಕಥೆಯ ಭಾಗ ಎಂದರು.

ಪ್ರಜ್ವಲ್ ರಾಜ್, “ಬಾನಿಗೊಂದು ಎಲ್ಲೆ ಎಲ್ಲಿದೆ” ಎನ್ನುವುದು ನಾನು ನಿರ್ದೇಶನ ಮಾಡಿರುವ ಕಥೆಯ ಭಾಗ ಎಂದು ಹೇಳಿಕೊಂಡರು.

ಇದನ್ನೂ ಓದಿ: Ganesh Chaturthi 2024: ಪಿಒಪಿ ಗಣೇಶ ಮೂರ್ತಿಗೆ ನಿಷೇಧ; ಹಬ್ಬ ಆಚರಣೆಗೆ ಏನೆಲ್ಲಾ ನಿಯಮಗಳು? ಇಲ್ಲಿದೆ ವಿವರ

ನಿರ್ದೇಶಕಿ ಅಪೂರ್ವ ಭಾರದ್ವಾಜ್ ಮಾತನಾಡಿ, ಇಷ್ಟು ವರ್ಷ ನಟಿಯಾಗಿ ಕಾಣಿಸಿಕೊಂಡಿದ್ದೆ. ಈಗ ನಿರ್ದೇಶಕಿಯಾಗಿದ್ದೇನೆ. ಐದು ನಿರ್ದೇಶಕರು ಐದು ಕಥೆ ಹೇಳುವುದು ಎನ್ನುವ ವಿಷಯ ಆಸಕ್ತಿಕರವಾದದ್ದು, ಹೀಗಾಗಿ ಒಂದು ಕಥೆಯನ್ನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮಹದೇವ ಪ್ರಸಾದ್ ಮತ್ತು ಶ್ರೀಪ್ರಿಯಾ ನನ್ನ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.‌‌ ಮೇಕಪ್ ಕುರಿತ ಕಥೆ. ಮೇಕಪ್ ಮ್ಯಾನ್ ಮತ್ತು ಟಚ್ಚಪ್ ಬಾಯ್‌ಗೆ ಚಿತ್ರ ಅರ್ಪಿಸುವೆ ಎಂದು ಮಾಹಿತಿ ಹಂಚಿಕೊಂಡರು.

ಕಥೆ ಹೇಳುವಾಗ ಬಹಳಷ್ಟು ನಿರ್ದೇಶಕರು ನಿರ್ಮಾಪಕರ ಮನಸ್ಸು ಗೆದ್ದು ಬಿಡ್ತಾರೆ. ಆದರೆ ಅದು ಸಿನಿಮಾದಲ್ಲಿ ಯಶಸ್ಸು ಗಳಿಸಲು ವಿಫಲರಾಗುತ್ತಾರೆ. ಅದ್ಯಾಕೋ ಗೊತ್ತಿಲ್ಲ. ಕನ್ನಡದಲ್ಲಿ ಬಹಳಷ್ಟು ಕಥೆಗಾರರು ಇದ್ದಾರೆ. ಆದರೆ ಯಶಸ್ಸು ಮಾತ್ರ ಕಡಿಮೆ ಎಂದರು ನಟ ಮೂಗು ಸುರೇಶ್.

ನಿರ್ಮಾಪಕ ಮುರುಳಿ ಕೃಷ್ಣ ಮಾತನಾಡಿ, ಐದು ಜನ ನಿರ್ದೇಶಕರ ಐದು ಕಥೆಗಳು ಸೇರಿ “ಬಿಟಿಎಸ್” ಚಿತ್ರವಾಗಿದೆ. ಐದು ಮಂದಿ‌ ನಿರ್ದೇಶಕರು ಅವರೇ ಚಿತ್ರದ ಆಧಾರ ಸ್ತಂಭ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಟಿಸಿರುವ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ವಿಜಯ್ ಕೃಷ್ಣ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

“ಬಿಟಿಎಸ್” ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕರಾದ ರಾಮೇನಹಳ್ಳಿ ಜಗನ್ನಾಥ್, ವಿನಯ್ ಪ್ರೀತಂ, ಗುರುರಾಜ ಕುಲಕರ್ಣಿ, ಶ್ರೀಧರ್ ಶಿಕಾರಿಪುರ, ಜೈಶಂಕರ್, ದೇವನೂರು ಚಂದ್ರು, ಚೇತನ್ ಕೇಶವ್, ಇಸ್ಲಾವುದ್ದೀನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Prajwal Revanna Case: ಪ್ರಜ್ವಲ್‌ ರೇವಣ್ಣ ವಿರುದ್ಧ 2144 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Prajwal Revanna Case: ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, 137 ಸಾಕ್ಷಿಗಳ ಹೇಳಿಕೆ ಸೇರಿ 2144 ಪುಟಗಳ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್ ರೇವಣ್ಣ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 137 ಸಾಕ್ಷಿಗಳ ಹೇಳಿಕೆ ಸೇರಿ 2144 ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ವಿಶೇಷ ಜನಪ್ರತಿನಿಗಳ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿದೆ.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿರುವ ತನಿಖಾಧಿಕಾರಿ ಸುಮಾರಾಣಿ ಅವರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 137 ಸಾಕ್ಷಿಗಳ ಹೇಳಿಕೆ ಸೇರಿದಂತೆ 2144 ಪುಟಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ | Student Missing: ಓದಿಲ್ಲ ಎಂದು ಬೈದದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪ ಕುರಿತ ಎಫ್‌ಐಆರ್‌ ರದ್ದುಪಡಿಸಲು ಕೋರಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಆಗಸ್ಟ್ 29ಕ್ಕೆ ಇತ್ತೀಚೆಗೆ ಮುಂದೂಡಿತ್ತು.

ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಜುಲೈ 24ರಂದು ವಜಾಗೊಂಡಿತ್ತು. ನಾಲ್ಕನೇ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದಕ್ಕೂ ಮೊದಲು ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಇದರಲ್ಲಿ ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ಸೇರಿವೆ. ಅದೇ ರೀತಿ ಜುಲೈ 24ರಂದು ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಇದರಿಂದ ನಾಲ್ಕನೇ ಕೇಸ್‌ನಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾಗಿತ್ತು.

ಏನಿದು ಪ್ರಕರಣ?

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್‌ ವಿರುದ್ದ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್‌ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಹಾಸನ ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ವಕೀಲ ದೇವರಾಜೇಗೌಡ ಪುತ್ರ ಡಿ.ಚರಣ್‌ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದರು.

ಸಂಸದರಾಗಿ ಶ್ರೇಯಸ್‌ ಎಂ.ಪಟೇಲ್‌ ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿಲ್ಲ. ಆ ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಹಾಗಾಗಿ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ ಹಾಗೂ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರ ಡಿ.ಚರಣ್‌ ಕೋರಿದ್ದಾರೆ. ಅರ್ಜಿ ಸಂಬಂಧ ಶ್ರೇಯಸ್‌ ಪಟೇಲ್‌ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

Continue Reading

ಶ್ರೀ ಕೃಷ್ಣ ಜನ್ಮಾಷ್ಟಮಿ

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Krishna janmastami: ಇನ್ನೇನು ಕೃಷ್ಣಜನ್ಮಾಷ್ಟಮಿ ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಬಾಲಗೋಪಾಲನ ನಾನಾ ಅವತಾರಗಳ ಫೋಟೋಶೂಟ್‌ಗಳು ಆರಂಭಗೊಂಡಿದೆ. ಮುದ್ದು ಬೆಣ್ಣೆ ಕೃಷ್ಣನಿಂದಿಡಿದು, ರಾಧಾ-ಕೃಷ್ಣರ ಅಂದದ ಪೋಟ್ರೈಟ್‌ಗಳಿಗೆ ಮಾನ್ಯತೆ ಹೆಚ್ಚಾಗಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

By

Here are 4 ideas for krishna janmashtami photoshoot
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣಜನ್ಮಾಷ್ಟಮಿ (Krishna janmastami) ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಕೃಷ್ಣನ ನಾನಾ ಅವತಾರಗಳ ಫೋಟೋಶೂಟ್‌ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ, ಎಲ್ಲೆಡೆ ಕೃಷ್ಣಜನ್ಮಾಷ್ಟಮಿ ಥೀಮ್‌ ಫೋಟೋಶೂಟ್‌ ಟ್ರೆಂಡಿಯಾಗಿದೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಕೃಷ್ಣನ ಅವತಾರಕ್ಕೂ ಫೋಟೋಶೂಟ್‌ :

“ಪ್ರತಿ ಮನೆಯಲ್ಲೂ ಮಕ್ಕಳಿಗೆ ಒಮ್ಮೆಯಾದರೂ ಸರಿಯೇ! ಕೃಷ್ಣ ಅಥವಾ ರಾಧೆಯ ಅವತಾರವನ್ನು ಹಾಕಿಸಿರುತ್ತಾರೆ. ಫೋಟೋ ತೆಗೆಸಿ ಸಂತಸ ಪಟ್ಟಿರುತ್ತಾರೆ. ಬಾಲ ಕೃಷ್ಣನಿಂದಿಡಿದು ರಾಧಾ-ಕೃಷ್ಣನಂತೆ ಫೋಟೋಶೂಟ್‌ ಮಾಡಿಸುವುದು ಹೆಚ್ಚಾಗಿದೆ. ಈ ಕಾನ್ಸೆಪ್ಟ್ ಇದೀಗ ಮತ್ತಷ್ಟು ಬೆಳವಣಿಗೆ ಕಂಡಿದೆ. ಚಿಣ್ಣರಿಗೆ ಮಾತ್ರವಲ್ಲ, ಇದೀಗ ಟೀನೇಜ್‌ ಹುಡುಗ-ಹುಡುಗಿಯರು ಕೂಡ ರಾಧಾ-ಕೃಷ್ಣರ ಫೋಟೋಶೂಟ್‌ ಮಾಡಿಸಲಾರಂಭಿಸಿದ್ದಾರೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಇದಕ್ಕೆ ಪೂರಕ ಎಂಬಂತೆ, ಪೌರಾಣಿಕ ಹಿನ್ನೆಲೆಯ ಫೋಟೋಶೂಟ್‌ ಮಾಡುವ ಫೋಟೋಗ್ರಾಫರ್ಸ್ ಕೂಡ ಸುಲಭವಾಗಿ ದೊರೆಯುತ್ತಿದ್ದಾರೆ. ಪ್ರಿ ಹಾಗೂ ವೆಡ್ಡಿಂಗ್‌ ಶೂಟ್‌ ಮಾಡುವವರು ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾನ್ಸೆಪ್ಟ್ಗಳಿಗೂ ಫೋಟೋಶೂಟ್‌ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಕೃಷ್ಣಜನ್ಮಾಷ್ಟಮಿಯ ಫೋಟೋಶೂಟ್‌ ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಫೋಟೋಗ್ರಾಫರ್‌ .

Here are 4 ideas for krishna janmashtami photoshoot

ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ :

ಪ್ರತಿ ವರ್ಷವೂ ಕೃಷ್ಣನ ಫೋಟೋಶೂಟ್‌ಗಾಗಿಯೇ ಸಾಕಷ್ಟು ಸ್ಟುಡಿಯೋಗಳು ಪ್ಯಾಕೇಜ್‌ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೇ ಕೃಷ್ಣನ ಅಲಂಕಾರಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ಒದಗಿಸುತ್ತವೆ. ಅಷ್ಟೇಕೆ? ಈ ಪ್ಯಾಕೇಜ್‌ನಲ್ಲಿ ಫೋಟೋಗ್ರಾಫರ್‌ನಿಂದಿಡಿದು, ಬಾಡಿಗೆಗೆ ಫೋಟೋ ಕ್ಲಿಕ್ಕಿಸುವ ಸ್ಥಳ ಅಂದರೇ, ಸ್ಟಾಟ್‌ ಸೇರಿದಂತೆ ಎಲ್ಲವನ್ನೂ ಪ್ಯಾಕೇಜ್‌ಗೆ ತಕ್ಕಂತೆ ಒದಗಿಸುತ್ತವೆ. ಹಣ ನೀಡಿದರಾಯಿತಷ್ಟೇ! ಎನ್ನುತ್ತಾರೆ ಬಾಲಕೃಷ್ಣನ ಫೋಟೋಶೂಟ್‌ ಮಾಡಿಸಿದ ಪೋಷಕರಾದ ಕಿರಣ್‌ ಹಾಗೂ ಲಕ್ಷ್ಮಿ.

Here are 4 ideas for krishna janmashtami photoshoot

ಕೃಷ್ಣ ಜನ್ಮಾಷ್ಟಮಿ ಫೋಟೋಶೂಟ್‌ಗೆ 4 ಐಡಿಯಾ :

· ಆನ್‌ಲೈನ್‌ನಲ್ಲೂ ಸಾಕಷ್ಟು ಫೋಟೋ ಸ್ಟುಡಿಯೋಗಳು ಬಜೆಟ್‌ ಫ್ರೆಂಡ್ಲಿ ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ ನೀಡುತ್ತವೆ ಉಪಯೋಗಿಸಿಕೊಳ್ಳಿ.
· ಆಯಾ ವಯಸ್ಸಿಗೆ ತಕ್ಕಂತೆ ಥೀಮ್‌ ಆಯ್ಕೆ ಮಾಡಿ, ಸ್ಟೈಲಿಂಗ್‌ ಮಾಡಿ.
· ಫೋಟೋ ಕಾಂಪಿಟೇಷನ್‌ಗೆ ಕಳುಹಿಸುವುದಾದಲ್ಲಿ, ಪ್ರೊಫೆಷನಲ್‌ ಫೋಟೋಗ್ರಾಫಿ ಮಾಡಿಸಿ.
· ನೀವೇ ಖುದ್ದು ಫೋಟೋಶೂಟ್‌ ಮಾಡುವುದಾದಲ್ಲಿ ಬಾಡಿಗೆಗೆ
ಔಟ್‌ಫಿಟ್ಸ್ ಪಡೆದು ಮಾಡಿ. ಖರ್ಚು ಕಡಿಮೆಯಾಗುವುದು.

Here are 4 ideas for krishna janmashtami photoshoot
Here are 4 ideas for krishna janmashtami photoshoot

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Bomb threat to Wonderla Amusement Park in Urdu
ರಾಮನಗರ29 seconds ago

Bomb Threat : ಉರ್ದು ಭಾಷೆಯಲ್ಲಿ ವಂಡರ್‌ ಲಾ ಅಮ್ಯುಸ್ಮೆಂಟ್ ಪಾರ್ಕ್‌ಗೆ ಬಾಂಬ್‌ ಬೆದರಿಕೆ

Railway Line
ವಾಣಿಜ್ಯ2 mins ago

Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ!

Kannada New Movie
ಬೆಂಗಳೂರು11 mins ago

Kannada New Movie: ಪ್ರಜ್ವಲ್ ದೇವರಾಜ್-ಅದಿತಿ‌ ಪ್ರಭುದೇವ ಅಭಿನಯದ ʼಮಾಫಿಯಾʼ ಚಿತ್ರ ಸದ್ಯದಲ್ಲೇ ತೆರೆಗೆ

Viral Video
Latest14 mins ago

Viral Video: ಬಾಲ್ಕನಿಯಿಂದ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು; ಆಘಾತಕಾರಿ ವಿಡಿಯೊ

Viral News
ವೈರಲ್ ನ್ಯೂಸ್19 mins ago

Viral News: ಹೆಂಡ್ತಿ ತವರಿಗೆ ಹೋಗ್ತಿದ್ದಂತೆ ಪ್ರೇಯಸಿ ಜೊತೆ ಲವ್ವಿಡವ್ವಿ- ಸ್ಕೂಲ್‌ ಮೇಸ್ಟ್ರನ್ನು ರೆಡ್‌ಹ್ಯಾಂಡಾಗಿ ಹಿಡಿದು ಅಲ್ಲೇ ಮದ್ವೆ

Kannada New Movie
ಬೆಂಗಳೂರು26 mins ago

Kannada New Movie: ಐವರು ನಿರ್ದೇಶಕರ 5 ಕಥೆಗಳ ʼಬಿಟಿಎಸ್ʼ ಚಿತ್ರದ ಟ್ರೇಲರ್ ರಿಲೀಸ್‌; ಹೊಸ ಪ್ರಯತ್ನಕ್ಕೆ ರಾಜ್ ಬಿ ಶೆಟ್ಟಿ ಸಾಥ್‌

Prajwal Revanna Case
ಕರ್ನಾಟಕ26 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿರುದ್ಧ 2144 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Here are 4 ideas for krishna janmashtami photoshoot
ಶ್ರೀ ಕೃಷ್ಣ ಜನ್ಮಾಷ್ಟಮಿ28 mins ago

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Air India
ದೇಶ37 mins ago

Air India: ನಿಯಮ ಉಲ್ಲಂಘನೆ: ಏರ್‌ ಇಂಡಿಯಾಕ್ಕೆ ಬಿತ್ತು ಬರೋಬ್ಬರಿ 90 ಲಕ್ಷ ರೂ. ದಂಡ

Viral Video
Latest37 mins ago

Viral Video: ಬೇಟೆಯಾಡಲು ಗೋಡೆ ಹತ್ತಿದ ದೈತ್ಯ ಹೆಬ್ಬಾವು; ಗಾಬರಿಗೊಳಿಸುವ ವಿಡಿಯೊ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌