Shikhar Dhawan: ಶಿಖರ ಸಾಧನೆಯ ವೀರ ಈ ಶಿಖರ್​ ಧವನ್​; ದಾಖಲೆ ಪಟ್ಟಿ ಹೀಗಿದೆ - Vistara News

ಕ್ರೀಡೆ

Shikhar Dhawan: ಶಿಖರ ಸಾಧನೆಯ ವೀರ ಈ ಶಿಖರ್​ ಧವನ್​; ದಾಖಲೆ ಪಟ್ಟಿ ಹೀಗಿದೆ

Shikhar Dhawan: ಐಪಿಎಲ್​ ಟೂರ್ನಿಯ ಇತಿಹಾಸದಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಶಿಖರ್​ ಧವನ್​ ಹೆಸರಿನಲ್ಲಿದೆ.

VISTARANEWS.COM


on

Shikhar Dhawan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ತಂಡದ ಅನುಭವಿ ಆಟಗಾರ ಶಿಖರ್​ ಧವನ್(Shikhar Dhawan)​ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ(shikhar dhawan retirement) ಹೇಳುವ ಮೂಲಕ ತೆರೆ ಎಳೆದಿದ್ದಾರೆ. ಇಂದು(ಶನಿವಾರ) ಬೆಳಗ್ಗೆ ಟ್ವಿಟರ್​ ಎಕ್ಸ್​ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು. ಕ್ರಿಕೆಟ್​ ವೃತ್ತಿ ಬದುಕಿನಲ್ಲಿ(shikhar dhawan records) ಅವರು ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.

1. ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ. 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 174 ಎಸೆತಗಳಿಂದ 187 ರನ್ ಸಿಡಿಸಿ ಈ ದಾಖಲೆ ಬರೆದಿದ್ದರು.

2. ಕ್ರಿಸ್ ಗೇಲ್, ಹರ್ಷಲ್ ಗಿಬ್ಸ್ ಮತ್ತು ಸೌರವ್ ಗಂಗೂಲಿ ಅವರೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ (ಮೂರು) ಅತಿ ಹೆಚ್ಚು ಶತಕದ ಜಂಟಿ ದಾಖಲೆಯನ್ನು ಧವನ್ ಹಂಚಿಕೊಂಡಿದ್ದಾರೆ.

3. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಜಂಟಿ ಆತಿಥ್ಯದಲ್ಲಿ ನಡೆದಿದ್ದ 2015ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಪರ ಪ್ರಮುಖ ರನ್ ಗಳಿಸಿದ ಆಟಗಾರ.

4. ಐಸಿಸಿ ಏಕದಿನ ಟೂರ್ನಿಯಲ್ಲಿ 65ರ ಸರಾಸರಿಯಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆ. 16 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದರು.

5. 2013ರಲ್ಲಿ ಅತಿ ಹೆಚ್ಚು ಏಕದಿನ ಶತಕ, 2014ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನ.

6. 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​. 114(94), 102*(107), 48(41), 68(92), 31(24), 68(65), 125(128), 78(83), 46( 34), 21(22) ರನ್ ಕಲೆಹಾಕಿ ಚಾಂಪಿಯನ್ಸ್​ ಟ್ರೋಫಿ ಇತಿಹಾಸದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ದಾಖಲೆ ನಿರ್ಮಿಸಿದ್ದರು. ಭಾರತ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

7. ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ದಿನದ ಊಟದ ಮೊದಲು ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್.

8. ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 1,000 (ಜಂಟಿ-ವೇಗದ), 2,000, 3,000 ರನ್‌ಗಳನ್ನು ತಲುಪಿದ ವೇಗದ ಭಾರತೀಯ ಬ್ಯಾಟ್ಸ್‌ಮನ್.

ಇದನ್ನೂ ಓದಿ Shikhar Dhawan Retirement: ಕೀಪರ್​ ಆಗಿದ್ದ ಧವನ್​ ಬ್ಯಾಟರ್​ ಆಗಿದ್ದೇಗೆ?; ಕ್ರಿಕೆಟ್​ ಜರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ

9. ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ಮತ್ತು 2017 ರಲ್ಲಿ ಅತಿ ಹೆಚ್ಚು ಸ್ಕೋರರ್​.

10. ಐಸಿಸಿ ಟೂರ್ನಿಗಳಲ್ಲಿ 1000 ರನ್‌ಗಳನ್ನು ತಲುಪಿದ ವೇಗದ ಬ್ಯಾಟ್ಸ್‌ಮನ್.

11. ಏಷ್ಯಾ ಕಪ್ 2018ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

12. ಐಪಿಎಲ್​ ಟೂರ್ನಿಯ ಇತಿಹಾಸದಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಮೊದಲ ಆಟಗಾರ.

ಇದನ್ನೂ ಓದಿ Shikhar Dhawan Retirement: ಟ್ಯಾಟೂ ಹಾಕಿಸಿ ಎಚ್​ಐವಿ ಪರೀಕ್ಷೆ ಮಾಡಿಸಿಕೊಂಡಿದ್ದ ಧವನ್​

13. ಸತತವಾಗಿ ಎರಡು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಗೆದ್ದ ಆಟಗಾರ.

14. 2021 ರಲ್ಲಿ, ಧವನ್ ಅವರಿಗೆ ಭಾರತ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2025: ಮುಂಬೈ ಇಂಡಿಯನ್ಸ್​ಗೆ ಶ್ರೇಯಸ್​ ಅಯ್ಯರ್​, ಕೆಕೆಆರ್​ಗೆ ಸೂರ್ಯಕುಮಾರ್​ ನಾಯಕ!​

IPL 2025: ಸೂರ್ಯಕುಮಾರ್​ ಯಾದವ್​ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್​ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು.

VISTARANEWS.COM


on

IPL 2025
Koo

ಮುಂಬಯಿ: ಐಪಿಎಲ್(IPL 2025)​ ಆಟಗಾರ ಮೆಗಾ ಹರಾಜು(ipl 2025 mega auction) ಪ್ರಕ್ರಿಯೆ ನಡೆಯುವ ಮುನ್ನವೇ ಕೆಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ತೆರೆ ಮರೆಯಲ್ಲಿ ಭಾರೀ ಕಸರತ್ತು ಆರಂಭಿಸಿದೆ. ಹೌದು, ಇದೀಗ ವರದಿಯಾದ ಪ್ರಕಾರ ಭಾರತ ಟಿ20 ತಂಡದ ನಾಯಕ, ಪ್ರಸ್ತುತ ಮುಂಬೈ ಇಂಡಿಯನ್ಸ್(mumbai indians) ತಂಡದ ಆಟಗಾರ ಸೂರ್ಯಕುಮಾರ್​ ಯಾದವ್​ಗೆ ಹಾಲಿ ಚಾಂಪಿಯನ್​ ಕೆಕೆಆರ್(KKR)​ ತಂಡದಿಂದ ನಾಯಕತ್ವದ ಆಫರ್​ ಬಂದಿದೆ ಎಂದು ವರದಿಯಾಗಿದೆ.

ಮುಂಬೈ ಇಂಡಿಯನ್ಸ್​ ಕೂಡ ತನ್ನ ನಾಯಕತ್ವದಲ್ಲಿ ಬದಲಾವಣೆಗೆ ಮುಂದಾಗಿದ್ದು, ತಂಡದ ಆಟಗಾರ ಸೂರ್ಯಕುಮಾರ್​ ಅವರನ್ನು ಕೆಕೆಆರ್​ ತಂಡಕ್ಕೆ ಬಿಟ್ಟುಕೊಟ್ಟು ಕೆಕೆಆರ್​ ತಂಡದ ನಾಯಕ ಶ್ರೇಯಸ್​ ಅಯ್ಯರ್​ ಅವರನ್ನು ಖರೀದಿಸಿ ನಾಯಕತ್ವ ನೀಡಲು ಮುಂಬೈ ಇಂಡಿಯನ್ಸ್​ ನಿರ್ಧರಿಸಿದೆ ಎನ್ನಲಾಗಿದೆ. ಟ್ರೇಡಿಂಗ್​ ಮೂಲಕ ಉಭಯ ಆಟಗಾರರನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳಲು ಎರಡು ಫ್ರಾಂಚೈಸಿಗಳು ಯೋಜನೆ ನಡೆಸಿವೆ ಎಂದು ವರದಿಯಾಗಿದೆ. ಈ ಸುದ್ದಿ ಕೇಳಿ ಬಂದ ತಕ್ಷಣ ನೆಟ್ಟಿಗರು ಸೂರ್ಯಕುಮಾರ್​ಗೆ ಕೆಕೆಆರ್​ ಜೆರ್ಸಿ, ಶ್ರೇಯಸ್​ ಅಯ್ಯರ್​ಗೆ ಮುಂಬೈ ಜೆರ್ಸಿ ತೊಡಿಸಿದ ಎಡಿಟೆಡ್​ ಫೋಟೊವನ್ನು ಶೇರ್​ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ IPL 2025: ಗೆಳೆಯ ಕೆ.ಎಲ್​ ರಾಹುಲ್​ರನ್ನು ಮತ್ತೆ ಆರ್​ಸಿಬಿಗೆ ಕರೆತರಲು ಮುಂದಾದ ಕೊಹ್ಲಿ

ಮುಂಬೈ ತಂಡ ಕಳೆದ ಬಾರಿ ಹಾರ್ದಿಕ್​ ಪಾಂಡ್ಯ ಅವರನ್ನು ಗುಜರಾತ್​ ತಂಡದಿಂದ ಟ್ರೇಡಿಂಗ್​ ಮೂಲಕ ಖರೀದಿಸಿ ತಂಡದ ನಾಯಕತ್ವ ನೀಡಿತ್ತು. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದ ನಾಯಕ ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಇದೀಗ ಕೆಕೆಆರ್​ ತಂಡವನ್ನು ಚಾಂಪಿಯನ್​ ಮಾಡಿರುವ, ಮುಂಬೈ ಮೂಲದವರೇ ಆದ ಶ್ರೇಯಸ್​ ಅಯ್ಯರ್​ ಅವರನ್ನು ತಂಡಕ್ಕೆ ಸೇರಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಸೂರ್ಯಕುಮಾರ್​ ಯಾದವ್​ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್​ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್​ ಚಾಂಪಿಯನ್​ ಕೂಡ ಆಗಿತ್ತು. ಗೌತಮ್​ ಗಂಭೀರ್​ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್​ ಕೆಕೆಆರ್​ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್​ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.

ಸೂರ್ಯಕುಮಾರ್​ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

ಶ್ರೇಯಸ್​ ಅಯ್ಯರ್​ ‘ಸಿಯೆಟ್ ಅವಾರ್ಡ್ಸ್'(CEAT Cricket Awards)ನಲ್ಲಿ ವರ್ಷದ T20 ನಾಯಕತ್ವ ಪ್ರಶಸ್ತಿಯನ್ನು ಗೆದಿದ್ದರು. ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು 2 ಬಾರಿ ಫೈನಲ್‌ ತಲುಪಿಸಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿತ್ತು. ಶ್ರೇಯಸ್​ ಅಯ್ಯರ್​ ಅವರು ಐಪಿಎಲ್​ನಲ್ಲಿ ಡೆಲ್ಲಿ ತಂಡದ ನಾಯಕನಾಗಿ ತಂಡವನ್ನು ಒಮ್ಮೆ ಫೈನಲ್​ ತಲುಪಿಸಿದ್ದರು. ಅಲ್ಲಿ ಮುಂಬೈ ವಿರುದ್ಧ ತಂಡ ಸೋಲು ಕಂಡು ರನ್ನರ್​ ಅಪ್​ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಆವೃತ್ತಿಯಲ್ಲಿ ಕೆಕೆಆರ್​ ತಂಡದ ನಾಯಕನಾಗಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. 

ಅಯ್ಯರ್​ ಇದುವೆರೆಗೆ 115 ಐಪಿಎಲ್​ ಪಂದ್ಯವನ್ನಾಡಿ 3127 ರನ್​ ಬಾರಿಸಿದ್ದಾರೆ. ಇದರಲ್ಲಿ 21 ಅರ್ಧಶತಕ ಒಳಗೊಂಡಿದೆ. 96 ಗರಿಷ್ಠ ವೈಯಕ್ತಿ ಮೊತ್ತವಾಗಿದೆ. ಭಾರತ ತಂಡದ ಪರ 51 ಟಿ20, 62 ಏಕದಿನ ಮತ್ತು 14 ಟೆಸ್ಟ್​ ಪಂದ್ಯಗಳನ್ನಾಡಿ ಒಟ್ಟು 4,336 ರನ್​ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 1, ಏಕದಿನದಲ್ಲಿ 5 ಶತಕ ಬಾರಿಸಿದ್ದಾರೆ.

Continue Reading

ಕ್ರೀಡೆ

Yuvraj Singh: ಐಪಿಎಲ್​ ಕೋಚಿಂಗ್​ ನಡೆಸಲಿದ್ದಾರೆ ಯುವರಾಜ್​ ಸಿಂಗ್; ಯಾವ ತಂಡ?

Yuvraj Singh: ಈ ಹಿಂದೆ ಯುವರಾಜ್​ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಕ್ಕೆ ಕೋಚ್‌ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಯುವಿ ಡೆಲ್ಲಿ ತಂಡದ ಕೋಚ್​ ಆಗುವ ಸಾಧ್ಯತೆ ಕಂಡುಬಂದಿದೆ.

VISTARANEWS.COM


on

Yuvraj Singh
Koo

ನವದೆಹಲಿ: ಟೀಮ್​ ಇಂಡಿಯಾದ(Team India) ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್(Yuvraj Singh)​ ಅವರು ಇದೀಗ ಕೋಚಿಂಗ್​ ನಡೆಸಲು ಮುಂದಾಗಿದ್ದಾರೆ. ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ(IPL 2025) ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡದ ಕೋಚ್​ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕೋಚ್​ ಆಗಿದ್ದ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್​ ಅವರನ್ನು ಕೋಚಿಂಗ್​ ಹುದ್ದೆಯಿಂದ ಕೆಳಗಿಳಿಸಿದೆ. ನೂತನ ಕೋಚ್​ ಹುಡುಕಾಟದಲ್ಲಿದ್ದ ಡೆಲ್ಲಿ ಇದೀಗ ಯುವರಾಜ್​ ಅವರನ್ನು ಕೋಚ್​ ಮಾಡಲು ಮುಂದಾಗಿದೆ ಎನ್ನಲಾಗಿದೆ. 2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಯುವರಾಜ್​ ಸಿಂಗ್​ ಅವರನ್ನು ಹರಾಜಿನಲ್ಲಿ 16 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ತಾವು ಆಡಿದ್ದ ತಂಡಕ್ಕೇ ಕೋಚ್​ ಆಗಲು ಯುವಿ ಸಿದ್ಧವಾದಂತಿದೆ. ಮೂಲಗಳ ಪ್ರಕಾರ ಯುವರಾಜ್​ ಜತೆ ಫ್ರಾಂಚೈಸಿ ಈಗಾಗಲೇ ಮಾತುಕತೆ ನಡೆಸಿದ್ದು ಕೋಚಿಂಗ್​ ನಡೆಸಲು ಯುವಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಈ ಹಿಂದೆ ಯುವರಾಜ್​ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಕ್ಕೆ ಕೋಚ್‌ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಯುವಿ ಡೆಲ್ಲಿ ತಂಡದ ಕೋಚ್​ ಆಗುವ ಸಾಧ್ಯತೆ ಕಂಡುಬಂದಿದೆ. ಯುವರಾಜ್​ ಸಿಂಗ್​ 132 ಐಪಿಎಲ್​ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್​ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಅವರ ಆಲ್​ರೌಂಡರ್​ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.

ಯುವರಾಜ್ ಸಿಂಗ್ ಅವರ ಬಯೋಪಿಕ್ ಕೂಡ ನಿರ್ಮಾಣವಾಗುತ್ತಿದೆ. ಯುವರಾಜ್ ಅವರ ಪ್ರಯಾಣವು ಸ್ಫೂರ್ತಿದಾಯಕವಾಗಿದ್ದು ಅದು ಈ ಸಿನಿಮಾ ಕತೆಯಾಗಲಿದೆ. ವೆರೈಟಿ ವರದಿಯ ಪ್ರಕಾರ, ಟಿ-ಸೀರೀಸ್‌‌‌ನ ಭೂಷಣ್ ಕುಮಾರ್ ಮತ್ತು 200 ನಾಟ್ ಔಟ್ ಸಿನೆಮಾದ ರವಿ ಭಾಗ್‌ಚಂದ್ಕಾ ಈ ಬಯೋಪಿಕ್‌‌ಗೆ ಜೀವ ತುಂಬಲಿದ್ದಾರೆ. ಸಿನಿಮಾ ತಂಡ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಿಲ್ಲ.

ಇದನ್ನೂ ಓದಿ Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

ಯುವರಾಜ್ ಸಿಂಗ್ ಅವರ ಜೀವನವು ಗೆಲುವು ಮತ್ತು ಉತ್ಸಾಹದ ಕತೆಯಾಗಿದೆ. ಭರವಸೆಯ ಕ್ರಿಕೆಟಿಗನಿಂದ ಹಿಡಿದು ಕ್ರಿಕೆಟ್ ನಾಯಕನಾಗಿ ನಂತರ ನಿಜ ಜೀವನದಲ್ಲಿ ನಾಯಕನಾಗಿ ಸಾಗಿದ ಅವರ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಹೇಳಬೇಕಾದ ಮತ್ತು ಕೇಳಬೇಕಾದ ಕಥೆಯನ್ನು ದೊಡ್ಡ ಪರದೆಗೆ ತರಲು ಮತ್ತು ಅವರ ಅಸಾಧಾರಣ ಸಾಧನೆಗಳನ್ನು ತೋರಿಸಲು ನಮಗೆ ಖುಷಿಯಿದೆ ಎಂದು ಸಿನಿಮಾ ತಂಡ ಹೇಳಿದೆ.

ರವಿ ಭಾಗ್ಚಂದ್ಕಾ ಯುವರಾಜ್ ಸಿಂಗ್ ಅವರನ್ನು “ಎಲ್ಲಾ ಅರ್ಥದಲ್ಲೂ ನಿಜವಾದ ದಂತಕಥೆ” ಎಂದು ಕರೆದಿದ್ದಾರೆ. ಯುವರಾಜ್ ಹಲವು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಅವರ ನಂಬಲಾಗದ ಕ್ರಿಕೆಟ್ ಪ್ರಯಾಣವನ್ನು ಸಿನಿಮೀಯ ಅನುಭವವಾಗಿ ಪರಿವರ್ತಿಸಲು ಮುಂದಾಗಿದ್ದು, ನಮ್ಮ ಬಗ್ಗೆ ನಂಬಿಕೆ ಹೊಂದಿರುವುದಕ್ಕೆ ಖುಷಿಯಿದೆ ಎಂದು ಹೇಳಿದ್ದಾರೆ. . ಯುವಿ ಕೇವಲ ವಿಶ್ವ ಚಾಂಪಿಯನ್ ಮಾತ್ರವಲ್ಲ, ಪ್ರತಿಯೊಂದು ಅರ್ಥದಲ್ಲೂ ನಿಜವಾದ ದಂತಕಥೆ ಎಂದು ಅವರು ಹೇಳಿದ್ದಾರೆ.

Continue Reading

ಕ್ರೀಡೆ

Cricket Meets Shooting: ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್​ ಕೊಟ್ಟ ಸೂರ್ಯಕುಮಾರ್​-ಮನು ಭಾಕರ್​

Cricket Meets Shooting: ಮನು ಭಾಕರ್​ ಅವರು ಈ ಫೋಟೊವನ್ನು ತಮ್ಮ ಟ್ವಿಟರ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, “ಟೀಮ್​ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು!” ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Cricket meets shooting
Koo

ಮುಂಬಯಿ: ಪ್ಯಾರಿಸ್​ ಒಲಿಂಪಿಕ್ಸ್​ ಶೂಟಿಂಗ್​ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್(Manu Bhaker)​ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರನ್ನು ಮುಂಬೈಯಲ್ಲಿ ಭೇಟಿಯಾಗಿದ್ದಾರೆ. ಉಭಯ ಕ್ರೀಡಾಪಟುಗಳು ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್​​ ಕೊಟ್ಟಿರುವುದು ನೆಟ್ಟಿಗರ ಗಮನಸೆಳೆದಿದೆ. ‘ಕ್ರಿಕೆಟ್ ಮೀಟ್ಸ್ ಶೂಟಿಂಗ್!'(Cricket Meets Shooting) ಎಂದು ನೆಟ್ಟಿಗರು ಈ ಫೋಟೊಗೆ ಕಮೆಂಟ್​ ಮಾಡಿದ್ದಾರೆ.

ಒಲಿಂಪಿಕ್ಸ್​ ಪದಕ ಗೆದ್ದ ಬಳಿಕ ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್​ ತಮ್ಮ ನೆಚ್ಚಿನ ಕಾರ್ಯ ಚಟುವಟಿಯಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈಗೆ ಆಗಮಿಸಿದ್ದ ವೇಳೆ ಕ್ರಿಕೆಟಿಗ ಸೂರ್ಯಕುಮಾರ್​ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯಕುಮಾರ್​ ಗನ್​ ಹಿಡಿದಂತೆ, ಮನು ಭಾಕರ್​ ಬ್ಯಾಟ್​ ಬೀಸಿದಂತೆ ನಗುಮುಗದಿಂದಲೇ ಫೋಟೊ ತೆಗೆಸಿಕೊಂಡಿದ್ದಾರೆ.

ಮನು ಭಾಕರ್​ ಅವರು ಈ ಫೋಟೊವನ್ನು ತಮ್ಮ ಟ್ವಿಟರ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, “ಟೀಮ್​ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು!” ಎಂದು ಬರೆದುಕೊಂಡಿದ್ದಾರೆ. ಒಲಿಂಪಿಕ್ಸ್​ ಪದಕ ಗೆದ್ದಾಗ ಮನು ಭಾಕರ್​ಗೆ ಸೂರ್ಯಕುಮಾರ್​ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ Manu Bhaker: ನಟ ವಿಜಯ್​ ಗೊತ್ತು, ಸಿಎಂ ಸ್ಟಾಲಿನ್‌ ಗೊತ್ತಿಲ್ಲ ಎಂದು ನಕ್ಕ ಮನು ಭಾಕರ್; ವಿಡಿಯೊ ವೈರಲ್​​

ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು. ಸದ್ಯ ದೇಶೀಯ ಕ್ರಿಕೆಟ್​ ಆಡಲಿರುವ ಸೂರ್ಯಕುಮಾರ್​ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿಯೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಗಸ್ಟ್​ 27ರಂದು ನಡೆಯುವ “ಬುಚ್ಚಿಬಾಬು ಟ್ರೋಫಿ’ ಆಹ್ವಾನಿತ(Buchi Babu Tournament) ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಇದಾದ ಬಳಿಕ ದುಲೀಪ್​ ಟ್ರೋಫಿ ಆಡಲಿದ್ದಾರೆ.

 22 ವರ್ಷದ ಮನು ಭಾಕರ್ ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ಪದಕ ಗೆದ್ದ ಬಳಿಕ ಭಾಕರ್(Manu Bhaker)​ ಅವರ ಜಾಹೀರಾತು ಮೌಲ್ಯದಲ್ಲಿ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಒಲಿಂಪಿಕ್ಸ್​ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್​ ಆಕ್ಟಿವ್​ವೇರ್​ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.

Continue Reading

ಕ್ರೀಡೆ

Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

Rohit Sharma:ರೋಹಿತ್ ಕೊನೆಯ ಬಾರಿಗೆ ಟೆಸ್ಟ್​ ಪಂದ್ಯವನ್ನಾಡಿದ್ದು 2024 ರ ಮಾರ್ಚ್‌ನಲ್ಲಿ. ಇಂಗ್ಲೆಂಡ್ ವಿರುದ್ಧ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು.

VISTARANEWS.COM


on

Rohit Sharma
Koo

ಮುಂಬಯಿ: ಮುಂದಿನ ತಿಂಗಳು ತವರಿನಲ್ಲಿ ನಡೆಯುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಈಗಿಂದಲೇ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ತವರಾದ ಮುಂಬೈಯ ಸಾರ್ವಜನಿಕ ಪಾರ್ಕ್ ಒಂದರಲ್ಲಿ, ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್(Abhishek Nayar) ಅವರೊಂದಿಗೆ ತರಬೇತಿ ಪಡೆಯುತ್ತಿರುವ ವಿಡಿಯೊ ವೈರಲ್(viral video)​ ಆಗಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದೆ. ಸದ್ಯ ಬಾಂಗ್ಲಾ ತಂಡ ಪಾಕಿಸ್ತಾನ ವಿರುದ್ಧ ಟೆಸ್ಟ್​ ಸರಣಿನ್ನಾಡುತ್ತಿದೆ.

ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಹೊರತುಪಡಿಸಿ ಉಳಿದ ಟೀಮ್​ ಇಂಡಿಯಾ ಆಟಗಾರರು ಸೆಪ್ಟೆಂಬರ್​ 5ರಿಂದ ಆರಂಭಗೊಳ್ಳಲಿರುವ ದುಲೀಪ್​ ಟ್ರೋಫಿಯಲ್ಲಿ ಆಡಲಿದ್ದಾರೆ. ಈ ಮೂವರು ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ.

ರೋಹಿತ್ ಕೊನೆಯ ಬಾರಿಗೆ ಟೆಸ್ಟ್​ ಪಂದ್ಯವನ್ನಾಡಿದ್ದು 2024 ರ ಮಾರ್ಚ್‌ನಲ್ಲಿ. ಇಂಗ್ಲೆಂಡ್ ವಿರುದ್ಧ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ಮೂರನೇ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ನಲ್ಲಿ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ರೋಹಿತ್​ ಬ್ಯಾಟಿಂಗ್​ ಫಾರ್ಮ್​ ದೊಡ್ಡ ಪಾತ್ರವನ್ನು ವಹಿಸಲಿದೆ.

ಕಳೆದ ಬುಧವಾರ ರೋಹಿತ್​ ಶರ್ಮ(Rohit Sharma) ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಮುಂಬಯಿಯ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ್ದರು. ಈ ಫೋಟೊ ವೈರಲ್(Viral News)​ ಆಗಿತ್ತು.

ಇದನ್ನೂ ಓದಿ Rohit Sharma: ಯುಪಿಎಸ್ಸಿ ಕೋಚಿಂಗ್​ನಲ್ಲಿಯೂ ರೋಹಿತ್​ ಶರ್ಮ ಹವಾ; ವೈರಲ್​ ವಿಡಿಯೊ ಇಲ್ಲಿದೆ

2ನೇ ಮಗುವಿನ ನಿರೀಕ್ಷೆಯಲ್ಲಿ ರೋಹಿತ್​


ರೋಹಿತ್​ ಪತ್ನಿ ರಿತಿಕಾ ಸಜ್ದೇಹ್ (Ritika Sajdeh) ಗರ್ಭಿಣಿಯಾಗಿದ್ದಾರೆ ಎಂದು ವರದಿಯಾಗಿದೆ. ರಿತಿಕಾ ಬೇಬಿ ಬಂಪ್‌ ವಿಡಿಯೊ ಒಂದು ವೈರಲ್​ ಆಗುತ್ತಿದ್ದು, ರೋಹಿತ್​ ಅಭಿಮಾನಿಗಳು ಜೂನಿಯರ್​ ಹಿನ್​ಮ್ಯಾನ್​ ಶೀಘ್ರದಲ್ಲೇ ಬರಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ. ರಿತಿಯಾ ಮುಂಬೈಯಲ್ಲಿ ತಿರುಗಾಡುವುದನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೊದಲ್ಲಿ ರಿತಿಕಾ ಅವರ ಬೆಬಿ ಬಂಪ್‌ ದೃಶ್ಯವು ಸೆರೆಯಾಗಿದೆ. ಹಾಗಾಗಿ, ರೋಹಿತ್​ ಪತ್ನಿಯು ಗರ್ಭಿಣಿಯಾಗಿರುವುದು ದೃಢಪಟ್ಟಿದೆ.

ತನ್ನ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರನ್ನು ರೋಹಿತ್ ಶರ್ಮಾ 2015ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ರೋಹಿತ್-ರಿತಿಕಾ ಇಬ್ಬರೂ 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಮದುವೆಯಾದ ಬಳಿಕವೂ ಕ್ರಿಕೆಟ್‌ ಪಂದ್ಯಗಳ ವೇಳೆ ಮೈದಾನದಲ್ಲಿದ್ದು ತನ್ನ ಪತಿ ರೋಹಿತ್​ಗೆ ರಿತಿಕಾ ಚಿಯರ್ ಮಾಡುತ್ತಿರುತ್ತಾರೆ. ರೋಹಿತ್​ ಶರ್ಮ ಮತ್ತು ರಿತಿಕಾ ಸಜ್ದೇಹ್(Ritika Sajdeh) ದಂಪತಿಗೆ ಈಗಾಗಲೇ ಓರ್ವ ಪುತ್ರಿ ಇದ್ದಾಳೆ. ಈಕೆಯ ಹೆಸರು ಸಮೈರಾ.

Continue Reading
Advertisement
IPL 2025
ಕ್ರಿಕೆಟ್4 seconds ago

IPL 2025: ಮುಂಬೈ ಇಂಡಿಯನ್ಸ್​ಗೆ ಶ್ರೇಯಸ್​ ಅಯ್ಯರ್​, ಕೆಕೆಆರ್​ಗೆ ಸೂರ್ಯಕುಮಾರ್​ ನಾಯಕ!​

Mann Ki Baat
ದೇಶ3 mins ago

Mann Ki Baat: ಚಂದ್ರಯಾನ-3ರ ಯಶಸ್ಸನ್ನು ದೇಶ ಮರೆಯಲು ಸಾಧ್ಯವೇ ಇಲ್ಲ: ʼಮನ್​ ಕಿ ಬಾತ್​ʼನಲ್ಲಿ ಮೋದಿ ಬಣ್ಣನೆ

Revathy Sampath
ಸಿನಿಮಾ11 mins ago

Revathy Sampath: ನಟಿಯ ಮೇಲೆ ಹಿರಿಯ ನಟನಿಂದ ಲೈಂಗಿಕ ದೌರ್ಜನ್ಯ; ಕೇರಳ ಚಿತ್ರರಂಗದಲ್ಲಿ ಮತ್ತೊಂದು ಕರಾಳ ವಿದ್ಯಮಾನ!

Health Expenditure
ಪ್ರಮುಖ ಸುದ್ದಿ20 mins ago

MLCs Health Expenditure: ಆರೋಗ್ಯಕ್ಕಾಗಿ ಲಕ್ಷ ಲಕ್ಷ ಕ್ಲೇಮ್; ಅತಿ ಹೆಚ್ಚು ಸರ್ಕಾರದ ಹಣ ಪಡೆದ ಎಂಎಲ್‌ಸಿಗಳು ಇವರೇ ನೋಡಿ!

Industrial City
ಬೆಂಗಳೂರು56 mins ago

Industrial City: ಹೊಸೂರಿನಲ್ಲಿ ಟಾಟಾ ಗ್ರೂಪ್‌ನಿಂದ ಇಂಡಸ್ಟ್ರಿಯಲ್‌ ಸಿಟಿ ನಿರ್ಮಾಣಕ್ಕೆ ಸಿದ್ಧತೆ; ಬೆಂಗಳೂರಿನ ಐಟಿ ಸಿಟಿ ಪಟ್ಟಕ್ಕೆ ಕುತ್ತು?

Yuvraj Singh
ಕ್ರೀಡೆ1 hour ago

Yuvraj Singh: ಐಪಿಎಲ್​ ಕೋಚಿಂಗ್​ ನಡೆಸಲಿದ್ದಾರೆ ಯುವರಾಜ್​ ಸಿಂಗ್; ಯಾವ ತಂಡ?

Physical abuse attempted rape of school girl The public who beat up the man
ಚಿಕ್ಕೋಡಿ1 hour ago

Physical Abuse : ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಾಮುಕನನ್ನು ಥಳಿಸಿದ ಸಾರ್ವಜನಿಕರು

ಬೆಂಗಳೂರು ಗ್ರಾಮಾಂತರ2 hours ago

Love Case : ಪ್ರೀತಿಗೆ ಪೋಷಕರ ವಿರೋಧ; ಒಬ್ಬರಿಗೊಬ್ಬರು ತಬ್ಬಿಕೊಂಡು ನೇಣಿಗೆ ಶರಣಾದ ಪ್ರೇಮಿಗಳು

Cricket meets shooting
ಕ್ರೀಡೆ2 hours ago

Cricket Meets Shooting: ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್​ ಕೊಟ್ಟ ಸೂರ್ಯಕುಮಾರ್​-ಮನು ಭಾಕರ್​

Gold Rate Today
ಚಿನ್ನದ ದರ2 hours ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬಂಗಾರ ಖರೀದಿಯ ಮುನ್ನ ಬೆಲೆ ಚೆಕ್‌ ಮಾಡಿ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ23 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌