Areca Nut Price: ದರ ಏರಿಳಿಕೆ; ಅಡಿಕೆ ಮಾರುಕಟ್ಟೆಯಲ್ಲೂ ಶುರುವಾಗಿದೆ ಷೇರುಪೇಟೆಯಂತೆ ಗೂಳಿ ಕಾಳಗ, ಕರಡಿ ಕುಣಿತ! - Vistara News

ಕೃಷಿ

Areca Nut Price: ದರ ಏರಿಳಿಕೆ; ಅಡಿಕೆ ಮಾರುಕಟ್ಟೆಯಲ್ಲೂ ಶುರುವಾಗಿದೆ ಷೇರುಪೇಟೆಯಂತೆ ಗೂಳಿ ಕಾಳಗ, ಕರಡಿ ಕುಣಿತ!

Areca Nut Price: ಅಡಿಕೆ ರೈತರ ಮುಖದಲ್ಲಿ ಗಾಬರಿ, ಆತಂಕ, ಗೊಂದಲಗಳ ಎಮೋಜಿಗಳು ಎದ್ದು ಕಾಣುತ್ತಿವೆ. ಕಳೆದ ವರ್ಷ 23,000 ರೂ. ತಲುಪಿದ್ದ ಸಿಪ್ಪೆ ಗೋಟು ಧಾರಣೆ, ಈ ಬಾರಿ 18,000 ತಲುಪಿ ರಿವರ್ಸ್ ಗೇರ್‌ಗೆ ಹಾಕಿದ್ದು, ಮತ್ತೆ ಮುಂದೆ ಹೋಗಲಿಲ್ಲ. ಈಗ 16,000 ರೂ.ಗೆ ಬಂದು ಹಿಮ್ಮುಖ ಚಲನೆಯಲ್ಲೇ ಇದೆ. ಅಡಿಕೆ ಮಾರುಕಟ್ಟೆಯಲ್ಲಿ ಏನು ನಡೆಯುತ್ತಿದೆ? ಈ ಕುರಿತ ‘ಗ್ರೌಂಡ್ ರಿಪೋರ್ಟ್’ ಇಲ್ಲಿದೆ.

VISTARANEWS.COM


on

rate fluctuations In the arecanut have started like the stock market
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅರವಿಂದ ಸಿಗದಾಳ್, ಮೇಲುಕೊಪ್ಪ

ಕಳೆದೊಂದು ವಾರದಿಂದ ಗ್ರಾಫ್‌ನಲ್ಲಿ ಅಡಿಕೆ ಧಾರಣೆಯ ಬಾಣ ಕೆಂಪು ಬಣ್ಣದೊಂದಿಗೆ ಇಳಿಮುಖವಾಗಿ ಚಲಿಸುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿನ (Areca Nut Price) ಧಾರಣೆ ಕುಸಿತಕ್ಕೆ ಕಾರಣಗಳನ್ನು ಪತ್ರಿಕೆಗಳು ಬಿಚ್ಚಿಡುತ್ತಿವೆ. ವಾಟ್ಸಪ್, ಫೇಸ್‌ಬುಕ್‌ಗಳಂತಹ ಜಾಲತಾಣಗಳಲ್ಲಿ ಧಾರಣೆ ಕುಸಿತಕ್ಕೆ ಕಾರಣವಾದ ಅಂಶಗಳೊಂದಿಗೆ ದೊಡ್ಡ ಚರ್ಚೆ ನೆಡೆಯುತ್ತಿದೆ.

ಅಡಿಕೆ ರೈತರ ಮುಖದಲ್ಲಿ ಗಾಬರಿ, ಆತಂಕ, ಗೊಂದಲಗಳ ಎಮೋಜಿಗಳು ಎದ್ದು ಕಾಣುತ್ತಿವೆ. ಕಳೆದ ವರ್ಷ ₹23000 ತಲುಪಿದ್ದ ಸಿಪ್ಪೆ ಗೋಟು ಧಾರಣೆ, ಈ ಬಾರಿ ₹18000 ತಲುಪಿ ರಿವರ್ಸ್ ಗೇರ್‌ಗೆ ಹಾಕಿದ್ದು, ಮತ್ತೆ ಮುಂದೆ ಹೋಗಲಿಲ್ಲ. ಈಗ ₹16,000 ಬಂದು, ಹಿಮ್ಮುಖ ಚಲನೆಯಲ್ಲೇ ಇದೆ. ರಾಶಿ ಇಡಿ ಧಾರಣೆಯಲ್ಲಿ ಮೂರು ದಿನದಲ್ಲಿ ₹.3000 ಇಳಿದು ಹೋಗಿದೆ. ₹.50,000 ಇದ್ದ ರಾಶಿ ಇಡಿ ದರ ಈಗ ₹.47,000 ಬಂದಿದೆ. ಮಂಡಿ, ಸಹಕಾರಿ ಸಂಘಗಳಲ್ಲಿ ಒಂದೆರಡು ಲಾಟ್‌ಗಳಿಗೆ ₹.48,000+ ತೋರಿಸಿ, ಬೆಳೆಗಾರರನ್ನು ಸಮಾಧಾನ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಅಡಿಕೆ ವ್ಯಾಪಾರದಲ್ಲಿ ನೆಡೆಯುತ್ತಿದ್ದ ಮುಸುಕಿನ ಕೈ ವ್ಯಾಪಾರದಲ್ಲಿ ರಾಶಿ ಇಡಿ ಧಾರಣೆ ₹.45,000 ಕ್ಕೆ ಕುಸಿದಿದೆ. ಅಡಿಕೆ ಧಾರಣೆಯ ಇಳಿಮುಖದ ಕಂಪನಕ್ಕೆ ಅನಧಿಕೃತ (ಬಿಲ್ ಇಲ್ಲದೆ, ಮನೆ ಅಂಗಳದಲ್ಲಿ, ಪೇಟೆಯ ಮೂಲೆ ಗಲ್ಲಿಯಲ್ಲಿ) ವ್ಯಾಪಾರಗಳು ತಟಸ್ಥವಾಗಿವೆ.

ಶ್ರಾವಣ ಮಾಸದಲ್ಲಿ ಅಡಿಕೆಗೆ ಬೆಲೆ ಬರುತ್ತೆ ಎಂಬ ಪ್ರಬಲ ಸಾಂಪ್ರದಾಯಿಕ ನಂಬಿಕೆಯಿಂದ ಮನೆಯಲ್ಲೇ ಇಟ್ಟುಕೊಂಡ ರೈತರ 20, 50 ಕೆಜಿ ಅಡಿಕೆಗೆ ಈ ಬಾರಿ ಮೌಲ್ಯ ಬರುವುದಿಲ್ಲ ಅಂತ ಪಂಚಾಂಗದ ಕ್ರೋಧಿ ಸಂವತ್ಸರಕ್ಕೂ ಗೊತ್ತಾಗಿದೆ!

ರೈತರು ಡೈರಿ ತೆಗೆದು, ಕನ್ನಡಕ ಧರಿಸಿ, ಬೇಸಿಕ್ ಸೆಟ್ ಫೋನಿನ ಕೀ ಪ್ಯಾಡ್‌ನ ನಂಬರ್ ಒತ್ತಿ ಮಧ್ಯವರ್ತಿ ವ್ಯಾಪಾರಿಗಳನ್ನು, ಅನಧಿಕೃತ ಏಜೆಂಟರುಗಳನ್ನು ಸಂಪರ್ಕಿಸಿದರೆ “ಈಗ ರೇಟಿಲ್ಲ ಗೌಡ್ರೆ, ಹಬ್ಬ ಮುಗಿಯಲಿ ಆಮೇಲೆ ಫೋನ್ ಮಾಡಿ, ನೋಡುವಾ” ಅಂತಿದಾರೆ.

ಸಹಕಾರಿ ಸಂಘಗಳಲ್ಲಿ ವಾರಗಳ ಹಿಂದೆ ₹.48,000 ಕ್ಕೆ ಬಿಡ್ಡಿಂಗ್ ಆಗಿದ್ದ ರಾಶಿ ಇಡಿ ‘ಲಾಟ್‌’ಗೆ ಈಗ ₹.35,000 ಬಿಡ್ಡಿಂಗ್ ದರ ಹಾಕಿ, ಗಾಬರಿ ಆತಂಕ ಮೂಡುವಂತೆ ಮಾಡಲಾಗಿದೆ! ಒಂದು ಕಡೆ ಮಳೆಗಾಲದಲ್ಲಿ ಬಿಸಿಲು ರಣಗುಡುತ್ತಿದೆ. ಇದ್ದಕ್ಕಿದ್ದಂತೆ ದಿನಕ್ಕೊಂದೆರಡು ಬಾರಿ ಹತ್ತು ನಿಮಿಷಗಳ ಆರ್ಭಟದ ಮಳೆ ಬಂದು ‘ರೌಡಿಸಮ್’ ತೋರಿಸುತ್ತಿದೆ! ಇಂತಹ ಒಂದು ವಿಶಿಷ್ಟ, ವಿಪರೀತ, ವಿಸ್ಮಯ ಸನ್ನಿವೇಷದ ಮಲೆನಾಡು/ಕರಾವಳಿಯಲ್ಲಿ, ಭೇಟಿಯಾದ ಅಡಿಕೆ ಬೆಳೆಗಾರರು ಪರಸ್ಪರ ಮಾತಾಡಿಕೊಳ್ಳುತ್ತಿರುವುದು ಎರಡು-ಮೂರು ಕಾಮನ್ ಸಬ್ಜೆಕ್ಟ್‌ಗಳ ಬಗ್ಗೆ ಮಾತ್ರ!!

ಮಾತಾಡಿಕೊಳ್ಳುವ ಟಾಪ್ ಟೆನ್ ವಿಷಯಗಳಲ್ಲಿ ಮೊದಲ ಮೂರು ವಿಷಗಳು: ಅಡಿಕೆ ಧಾರಣೆ ಇಳಿತ! ಅಡಿಕೆ ಕೊಳೆ ಉದುರಿದ್ದು! ಅಡಿಕೆ ಭೂಮಿಯ ಒತ್ತುವರಿ ತೆರವು! ಮೂರ್ನಾಲ್ಕು ದಿನಗಳಿಂದ ಅಡಿಕೆ ಧಾರಣೆ ಇಳಿತದ ವಿಚಾರವೇ ಅತ್ಯಂತ ಪ್ರಮುಖವಾದುದು. ಮತ್ತು ಪರಸ್ಪರ ಆಡಿಕೊಳ್ಳುತ್ತಿರುವ ಮಾತುಗಳಲ್ಲಿರುವುದು ಪ್ರಶ್ನೆ ಪತ್ರಿಕೆ ಮಾತ್ರ. ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳೆಲ್ಲವೂ ಔಟ್ ಆಫ್ ಸಿಲಬಸ್‌ ಮಾಹಿತಿಯವು! ಯಾರಿಗೂ ನಿಖರ ಉತ್ತರ ಗೊತ್ತಿಲ್ಲ!

1) ಅದಾನಿ ಗ್ರೂಪ್ ಆಫ್ ಕಂಪನೀಸ್ v/s ಹಿಂಡನ್ ಬರ್ಗ್ ಪ್ರಕರಣಗಳ ರೀತಿ ಸಹಕಾರಿ ವಲಯ v/s ಖಾಸಗೀ ವಲಯಗಳ ನಡುವೆ ಒಂದು ವ್ಯಾಪಾರೀ ಘರ್ಷಣೆಯ ವ್ಯವಹಾರ ಶುರುವಾಗಿದೆಯಾ?

2) ಹಿಂಡನ್ ಬರ್ಗ್ ಪ್ರಕರಣದಿಂದ ಷೇರು ಪೇಟೆ ತಲ್ಲಣವಾದಂತೆ, ಅಡಿಕೆ ಮಾರುಕಟ್ಟೆಯಲ್ಲೂ ಸಂಚಲನ ಉಂಟಾಗುತ್ತಿದೆಯಾ!!? ಮುಂದುವರೆಯಲಿದೆಯಾ?

3) ಹೂಡಿಕೆ ಮಾಡಿದ ಷೇರುದಾರರ ರೀತಿ, ಶ್ರಮ ಹೂಡಿ, ಅಡಿಕೆ ಬೆಳೆದ ಬೆಳೆಗಾರರ ಮೇಲೆ ಮಾರುಕಟ್ಟೆ ವಿಪರೀತ ದರ ಏರಿಳಿತದ ಪರಿಣಾಮ ಬೀರಲಿದೆಯಾ?

4) ಕೆಲವು ಖಾಸಗೀ ವರ್ತಕರು, ಮಧ್ಯವರ್ತಿಗಳು, ಬಿಲ್ ಇಲ್ಲದೇ ವ್ಯವಹಾರ ಮಾಡುವ ಏಜಂಟರ್‌ಗಳು ತಮ್ಮ ‘ಫಾರಂ ಹೌಸ್‌‌ಗಳಲ್ಲಿ’, ಶೆಡ್‌ಗಳಲ್ಲಿ ದೇಶೀ ಅಡಿಕೆ ಜೊತೆ, ವಿದೇಶಿ ಕಳಪೆ ಅಡಿಕೆ ಮತ್ತು ದೇಶೀಯ ಕಲ್ಲುಗೋಟಿನಂತಹ ಅಡಿಕೆಗಳನ್ನು ಕ್ವಾಲಿಟಿ ಅಡಿಕೆ ಜೊತೆ ಮಿಶ್ರಣ ಮಾಡುವ ದಂದೆ ಮಾಡುತ್ತಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ! ಇದು ನಿಜವಾ?

5) ವಿದೇಶಿ ಕಳಪೆ ಅಡಿಕೆ ಅವ್ಯಾಹತವಾಗಿ ಕಳ್ಳದಾರಿಯಲ್ಲಿ ಒಳ ನುಸುಳುತ್ತಿದ್ದರೂ… ಅನೇಕ ಸಂಸದರು, ಶಾಸಕರು ಮೌನವಾಗಿರುವುದರ ಹಿಂದಿನ ‘ಚಿದಂಬರ ರಹಸ್ಯ’ ಏನು?

6) ವಿದೇಶಿ ಕಳಪೆ ಅಡಿಕೆ ಅಕ್ರಮವಾಗಿ ದೇಶ ವ್ಯಾಪಿ ಸಿಗುವಂತಾಗಿದೆ ಎಂದು ಪತ್ರಿಕೆಗಳಲ್ಲಿ ವ್ಯಾಪಕ ಸುದ್ದಿ ಆಗುತ್ತಿದ್ದರೂ ಸರಕಾರದ ದಿಟ್ಟತನದ ಕ್ರಮ ಆಗದಿರುವುದಕ್ಕೆ ‘ಯಾರೆಲ್ಲ’ಕಾರಣರಾಗಿದ್ದಾರೆ?

7) ಗುಟ್ಕಾ ಕಂಪನಿಯವರು ಸಡನ್ನಾಗಿ ಕ್ವಾಲಿಟಿ ಕಾನ್ಸೆಪ್ಟ್ ತಂದು ಮಾರ್ಕೇಟ್‌ನಲ್ಲಿ ಅಡಿಕೆ ಧಾರಣೆ ಇಳಿಸುವ ಡ್ರಾಮಾ ಆಡ್ತಾ ಇದಾರಾ?

8) ಗುಟ್ಕಾ ಕಂಪನಿಯ ಹೆಸರು ಹೇಳಿ, ಕಳಪೆ ಅಡಿಕೆ ಕತೆ ಹಣೆದು, ಗೊರಬಲು ಫಾಲಿಷರ್ ಯಂತ್ರದ ಮೇಲೆ ಗೂಬೆ ಕೂರಿಸಿ ಮಧ್ಯವರ್ತಿಗಳೇ ಗೇಮ್ ಆಡ್ತಾ ಇದಾರಾ?

9) ವಿದೇಶಿ ಕಳಪೆ ಅಡಿಕೆಯನ್ನು ತಂದು ಮಿಶ್ರ ಮಾಡಿದ ಮಧ್ಯವರ್ತಿ ವ್ಯಾಪಾರಿಗಳು, ಆ ‘ಕಳಪೆ ಅಡಿಕೆಯ’ ಆಪಾದನೆಯನ್ನು ರೈತರ ಫಾಲೀಷ್ಡ್ ಗೊರಬಲು ಅಡಿಕೆಯ ಕಡೆ ತಿರುಗಿಸಿ, ತಾವು ಸಾಚಾ ಆಗಲು ರಂಗ ಸಜ್ಜಿಕೆ ನಿರ್ಮಾಣ ಮಾಡಿದ್ದಾರಾ?

10) ಸಹಕಾರಿ ಮತ್ತು ಖಾಸಗೀ ಅಡಿಕೆ ವ್ಯಾಪಾರಿಗಳ ಮಧ್ಯೆ ನೆಡೆಯುತ್ತಿರುವ ಘರ್ಷಣೆಗೆ ನಿಜವಾದ ಕಾರಣ ಏನು? ಅಡಿಕೆ GST?, ಅಕ್ರಮ ಸಾಗಾಣಿಕೆ?, ಲಾಭದ ವ್ಯತ್ಯಾಸ? ಬಿಗಿ ಕ್ರಮಗಳು, ವ್ಯಾಪಾರಿಗಳು/ಗುಟ್ಕಾ ಕಂಪನಿಗಳು ಖಾಸಗಿ ಮಂಡಿಯಲ್ಲಿನ ಅಡಿಕೆಯಲ್ಲಿ ಕಳಪೆ ಅಡಿಕೆ ಹೆಚ್ಚು ಮಿಶ್ರಣವಾಗಿದೆ ಎಂದಿದ್ದು?

11) ಚೇಣಿದಾರರು ಲಾಭದ ಆಸೆಯಿಂದ 100 ಕೆಜಿ ಹಸಿ ಅಡಿಕೆಗೆ 13 ಕೆಜಿ ರಾಶಿ ಇಡಿ ಕೊಡುವಾಗ ಕಳಪೆ ಗೊರಬಲು ಅಡಿಕೆಯನ್ನು ಮಿಶ್ರ ಮಾಡಿ ಕೊಡುತ್ತಿರುವುದು?

12) ಸಿಪ್ಪೆ ಗೋಟು ಸುಲಿದು, ನೆನಸಿ, ಚೊಗರಿನ ಬಣ್ಣ ಹಚ್ಚಿ, ಕಳಪೆ ಅಡಿಕೆಯನ್ನು “ತಲೆ ಮೇಲೆ ಹೊಡೆದಂತೆ” ಅದನ್ನು ರಾಶಿ ಇಡಿ ಅಡಿಕೆಯಾಗಿಸಿ ಮಾರಾಟ ದಂದೆ ಮಾಡುವ ಶಿರಸಿ, ಸಾಗರದ ಕೆಲವು ಮಧ್ಯವರ್ತಿಗಳು ಮಾಡುವ ಅವ್ಯವಹಾರ ವಿಪರೀತವಾಗಿ ಇಡೀ ಮಾರುಕಟ್ಟೆಯ ಎಲ್ಲ ಅಡಿಕೆಯ ಕ್ವಾಲಿಟಿಯನ್ನು ಅನುಮಾನಿಸುವಂತೆ ಮಾಡಿದೆಯಾ?

13) ಪಾನ್ ಮಸಾಲ ತಯಾರಕ ಪ್ರತಿನಿಧಿಗಳು ಕರ್ನಾಟಕಕ್ಕೆ ಬಂದು ಅಡಿಕೆ ಕ್ವಾಲಿಟಿ ಚೆಕ್ ಮಾಡ್ತಾ ಇದ್ದಾರೆ. ಕೆಲವು ಖಾಸಗಿ ದೊಡ್ಡ ಮಂಡಿಗಳಲ್ಲೇ ಹೆಚ್ಚು ಕಳಪೆ ಅಡಿಕೆ ಇರುವುದು ಬಯಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜವೇ?

14) ಮಲೆನಾಡು ಮತ್ತು ಕರಾವಳಿಯ ಕೆಂಪಡಿಕೆಯ ಒಟ್ಟು ವ್ಯವಹಾರದಲ್ಲಿ 20-25% ಗೊರಬಲು ಅಡಿಕೆಯೇ ಇರುತ್ತಿತ್ತು. ಆಗ ಗುಟ್ಕಾ ತಯಾರಿಕೆಗೆ ಕಳಪೆ ಅಡಿಕೆ ಆಗಿರದ ಅದು ಈಗ ಕಳಪೆ ಅಂತ ಸುದ್ದಿ ಆಗುತ್ತಿರುವುದೇಕೆ? ಗುಟ್ಕಾದಲ್ಲಿ ಈ ಅಡಿಕೆ ಬಳಸುವುದಿಲ್ಲ ಅಂತಾದರೆ, ಇಷ್ಟು ಸಮಯ ಈ ಎರಡನೇ ದರ್ಜೆಯ ಅಡಿಕೆ ಏನಾಗುತ್ತಿತ್ತು? ರಾತ್ರಿ ಬೆಳಗಾಗುವುದರೊಳಗೆ ಗುಟ್ಕಾದಲ್ಲಿ ಗಟ್ಟಿ ಅಡಿಕೆ ಬಳಸದಿರುವ ನಿರ್ಧಾರ ತೀರ್ಮಾನ ಆಯ್ತಾ?

15) ಇರುವ ಮಾಹಿತಿ ಪ್ರಕಾರ ಮತ್ತು ಗುಟ್ಕಾ ತಿನ್ನುವವರ ಅಭಿಪ್ರಾಯ ಗುಟ್ಕಾಕ್ಕೆ ಒಳ್ಳೆಯ ಸಾಫ್ಟ್ ಅಡಿಕೆ ಬೇಡ, ಗೋಟು, ಕಲ್ಲುಗೊಟು ರಾಮಡಿಕೆ ತರಹದ ಗಟ್ಟಿ ಅಡಿಕೆಗಳೇ ಬೇಕು. ಹಾಗಾದರೆ, ಅದು ಹೌದಾದರೆ ಈಗ ಶುರು ಆಗಿರುವ ಕ್ವಾಲಿಟಿ ಅಡಿಕೆ ಪ್ರಹಸನದ ಹಿಂದಿನ ಸೂತ್ರದಾರರು ಯಾರು? ವ್ಯಾಪಾರಿಗಳಾ? ಮಧ್ಯವರ್ತಿಗಳಾ? ಸ್ವತಃ ಗುಟ್ಕಾ ಕಂಪೆನಿಗಳಾ?

16) ಗಟ್ಟಿ ಅಡಿಕೆಯನ್ನು ಗುಟ್ಕಾದಲ್ಲಿ ಬಳಸುವುದಿಲ್ಲಾ ಅಂತಾದರೆ, ಈಗಲೂ ಎರಡನೇ ದರ್ಜೆಯ ಅಡಿಕೆ, ಕಳಪೆ ಅಡಿಕೆ, ಗೊರಬಲು ಅಡಿಕೆ, ಗಟ್ಟಿ ಅಡಿಕೆ, ಕಲ್ಲುಗೋಟು ಅಡಿಕೆ, ಗಟ್ಟಿ ಚಾಲಿ ಅಡಿಕೆಗಳನ್ನು ವಿಭಾಗಿಸಿ ಕೊಡುವುದನ್ನು ಪಾನ್ ಮಸಾಲ/ಗುಟ್ಕಾ ಕಂಪನಿಗಳು ಖರೀಧಿ ಮಾಡುತ್ತಿವೆ. ಅದನ್ನು ಏನು ಮಾಡುತ್ತಾರೆ?

17) ಸಹಕಾರಿ ಸಂಘಗಳು ಕೊಟ್ಟ ಅಧಿಕೃತ ಮಾಹಿತಿ ಪ್ರಕಾರ, ಎಲ್ಲಾ ಅಡಿಕೆಗಳು ತಿನ್ನುವುದಕ್ಕಾಗಿಯೇ ಸರಬರಾಜು ಆಗುತ್ತಿರುವುದು. ಅದರಲ್ಲೂ ಬಹುತೇಕ ಎಲ್ಲಾ ಅಡಿಕೆಗಳು ಗುಟ್ಕಾ‌ಕ್ಕೇ ಹೋಗುವುದು. ಅದು ಹೌದಾದರೆ, ಬೇಯಿಸಿದ ಕೆಂಪಡಿಕೆ ರಾಶಿ ಇಡಿ ಮತ್ತು ಬೇಯಿಸದ ಚಾಲಿ ಇಡಿ ಎಂದು ಯಾಕೆ ಬೇರೆ ಬೇರೆ ವರ್ಗೀಕರಣದಲ್ಲಿ ವ್ಯವಹಾರ ನೆಡೆಯುತ್ತಿದೆ?

18) ತೀರ್ಥಹಳ್ಳಿಯ ಸಾಂಪ್ರದಾಯಿಕ ಅಡಿಕೆ ಎಂಬ ಒಂದು ವಿಶೇಷ ಪ್ರಾಧಾನ್ಯತೆ ತೀರ್ಥಹಳ್ಳಿ ಭಾಗದ ಅಡಿಕೆಗೆ ಇತ್ತು ಮತ್ತು ಧಾರಣೆಯಲ್ಲೂ ಸ್ವಲ್ಪ ಮಟ್ಟದ ಮೌಲ್ಯ ಹೆಚ್ಚಿತ್ತು. ಆದರೆ, ಈಗ ಅಷ್ಟೇ ಸಾಂಪ್ರದಾಯಿಕ ಪದ್ದತಿಯಲ್ಲೇ ಮಾಡಿದ ತೀರ್ಥಹಳ್ಳಿ ಅಡಿಕೆಗಿಂತ, ಸಾಂಪ್ರದಾಯಕ ಪದ್ದತಿ ಅನುಸರಿಸದೇ ಸಂಸ್ಕರಣೆ ಮಾಡಿದ ಚನ್ನಗಿರಿ-ಚಿತ್ರದುರ್ಗದ ಅಡಿಕೆಗೆ ದರದ ಮೌಲ್ಯ ಹೆಚ್ಚಿದೆ. ಇದು ಹೇಗೆ?

19) ಅಡಿಕೆಯಲ್ಲದ ಅಡಿಕೆಯಂತಹ ಒಂದು ರೀತಿಯ ಬೀಜಕ್ಕೆ ಅಡಿಕೆ ಬಣ್ಣ ಬಳಿದು, ಅಡಿಕೆಗೆ ಸೇರಿಸುವ ಒಂದು ಸಂಚು ಬಹಿರಂಗಗೊಂಡಿದ್ದರ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿದೆ. ಏನಿದರ ಒಳ ಮರ್ಮ?

ಹಿಂಡನ್ ಬರ್ಗ್ ಷೇರು ಮಾರುಕಟ್ಟೆ ಅಲ್ಲಾಡಿಸಿದರೆ, ಅಡಿಕೆ ಕ್ವಾಲಿಟಿಯ hidden bug ಅಡಿಕೆ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿ ಗೂಳಿ ಕರಡಿಗಳ ಕಾಂತಾರ ಕುಣಿತ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೃಷಿ

Areca Nut : ಭಾರೀ ಪ್ರಮಾಣದ ಅಡಿಕೆ ತಿರಸ್ಕೃತವಾಗಿದ್ದು ನಿಜವೇ? ಅಸಲಿ ಸಂಗತಿ ಏನು? ಇದರ ಪರಿಣಾಮವೇನು?

Areca Nut : ಮೂರ್ನಾಲ್ಕು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಸಂಚಲನ ಸೃಷ್ಟಿಸಿದ ಕಳಪೆ ಅಡಿಕೆ ಮಿಶ್ರಣ, ತಿರಸ್ಕ್ರೃತ, ದರ ಇಳಿತ, ರೈತರ ಆತಂಕಗಳು ಮಾಧ್ಯಮ, ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆಯಾಗುತ್ತಿವೆ. ಖಾಸಗಿ ವರ್ತಕರೊಬ್ಬರ 77 ಲೋಡ್ ಅಡಿಕೆ ತಿರಸ್ಕೃತಗೊಂಡು, ₹ 55,000ಕ್ಕೆ ಕೊಂಡಿದ್ದನ್ನು ಅಲ್ಲಿ ₹.47,000 ಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ ಎಂಬ ಸುದ್ದಿಯ ಹಿನ್ನೆಲೆ ಮುನ್ನೆಲೆ ಏನು?

VISTARANEWS.COM


on

By

Arecanut Is it true that a large quantity of arecanut was rejected?
Koo

ಅರವಿಂದ ಸಿಗದಾಳ್, ಮೇಲುಕೊಪ್ಪ

ಖಾಸಗಿ ವರ್ತಕರೊಬ್ಬರ 77 ಲೋಡ್ ಅಡಿಕೆ (Areca Nut) ತಿರಸ್ಕೃತಗೊಂಡು, ₹.55,000ಕ್ಕೆ ಕೊಂಡಿದ್ದನ್ನು ಅಲ್ಲಿ ₹.47,000ಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ ಎಂಬ ಸುದ್ದಿ ಈಗ ಇನ್ನೂ ವ್ಯಾಪಿಸಿದ್ದು, ಕ್ವಾಲಿಟಿ ತಿರಸ್ಕ್ರೃತ ಅಡಿಕೆ ಸುದ್ದಿಯ ತಾಯಿ ಬೇರುಗಳು APMC (Agricultural Produce Market Committee)ಯ ಅಂಗಳದಿಂದ ಹೊರಗಡೆ ಇದೆ ಎಂದು ಹೇಳಲಾಗುತ್ತಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕ್ವಾಲಿಟಿ ತಿರಸ್ಕ್ರೃತ ಅಡಿಕೆ ಸುದ್ದಿಯ ವೃಕ್ಷದ ಸುತ್ತ ಅಗೆದು ಬುಡ ಬಿಡಿಸಿ ಬೇರು ಮಟ್ಟದ ವಿಶ್ಲೇಷಣೆ (Root cause analysis) ಮಾಡಲು ಹೊರಟರೆ, ಮತ್ತಷ್ಟು ಅನುಮಾನದ ‘ಬೇರು ಹುಳಗಳು’!

ಮೂರ್ನಾಲ್ಕು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಸಂಚಲನ ಸೃಷ್ಟಿಸಿದ ಕಳಪೆ ಅಡಿಕೆ ಮಿಶ್ರಣ, ತಿರಸ್ಕ್ರೃತ, ದರ ಇಳಿತ, ರೈತರ ಆತಂಕಗಳು ಮಾಧ್ಯಮ, ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆಯಾಗುತ್ತಿವೆ. ಖಾಸಗಿ ವರ್ತಕರೊಬ್ಬರ 77 ಲೋಡ್ ಅಡಿಕೆ ತಿರಸ್ಕೃತಗೊಂಡು, ₹.55,000ಕ್ಕೆ ಕೊಂಡಿದ್ದನ್ನು ಅಲ್ಲಿ ₹.47,000 ಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ ಎಂಬ ಸುದ್ದಿ ಪ್ರಕಟವಾದಾಗ, ಅನುಮಾನದ ಪ್ರಶ್ನೆಗಳು ಅಡಿಕೆ ರೈತರ ವಾಟ್ಸಪ್, ಫೇಸ್‌ಬುಕ್ ಗುಂಪುಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದವು.

೧. ಈ ಖಾಸಗಿ ವರ್ತಕರು ಯಾರು?
೨. ಅಷ್ಟೊಂದು (77 ಲೋಡ್) ಕಳಪೆ ಅಡಿಕೆ ಅಂತ ತಿರಸ್ಕಾರ ಆಗಲು ಆ ದೊಡ್ಡ ವರ್ತಕರೇ ಕಾರಣವಾ?
೩. ಆ ವರ್ತಕರಿಗೆ ಅಡಿಕೆ ಕೊಟ್ಟವರು ಯಾರು? ಚೇಣಿದಾರರು? ದೊಡ್ಡ ರೈತರು? ಕಳಪೆಗೆ ಅವರುಗಳು ಕಾರಣವಾ?
೪. ಆ ಖಾಸಗೀ ವರ್ತಕರೇ ವಾಸ್ತವಾಂಶವನ್ನು ಪ್ರಕಟಿಸಿದರೆ, ಅವರಲ್ಲಿ ಅಡಿಕೆ ಹಾಕುವ, ಹಾಕಿರುವ ರೈತರಿಗೆ ಅನುಕೂಲವಾಗುತ್ತದೆ ಅಲ್ಲವಾ?
೫. ಒಬ್ಬ ಖಾಸಗೀ ವರ್ತಕರ 77 ಲೋಡ್‌ಗಳು ಕಳಪೆ ಅಡಿಕೆ ಎಂದು ತಿರಸ್ಕಾರ ಆಗಿರುವುದರಿಂದ, ಇನ್ನು ಮುಂದೆ ಎಲ್ಲಾ ಖಾಸಗೀ ವರ್ತಕರ ಮಂಡಿಗೆ ಅಡಿಕೆ ಆವಕ ಕಮ್ಮಿಯಾಗಬಹುದಲ್ಲವಾ? ಈ ಬಗ್ಗೆ ಖಾಸಗೀ ವರ್ತಕರು ಒಟ್ಟಾಗಿ ಸತ್ಯಾಂಶವನ್ನು ಬಹಿರಂಗಗೊಳಿಸಿ, ಡ್ಯಾಮೇಜ್ ಕಂಟ್ರೂಲ್ ಮಾಡ್ತಾರಾ? ಇಲ್ಲಾಂದ್ರೆ, ಅಡಿಕೆ ಬೆಳೆಗಾರರು ಈಗಾಗಲೆ ಮಂಡಿಗಳಲ್ಲಿ ಸ್ಟಾಕ್ ಇರುವ ತಮ್ಮ ಅಡಿಕೆಯನ್ನು ಹಿಂಪಡೆಯುವ ದಾರಿ ಹಿಡಿಯಬಹುದು ಅಲ್ವಾ?
೬. 77 ಲೋಡ್ ಅಡಿಕೆ ತಿರಸ್ಕಾರವಾಗಿ, ನಂತರ ಕಡಿಮೆ ದರಕ್ಕೆ ಡೀಲ್ ಆದಾಗ ಆದ ನಷ್ಟವನ್ನು ವರ್ತಕರೇ ಭರಿಸುತ್ತಾರಾ? ಅಥವಾ ಅವರಲ್ಲಿ ಅಡಿಕೆ ಹಾಕುವ ರೈತರ ಮೇಲೆ ಹಾಕುತ್ತಾರಾ?
೭. 77 ಲೋಡ್ ಅಡಿಕೆ ತಿರಸ್ಕಾರವಾದಾಗ, ಅದರ ಕ್ವಾಲಿಟಿ ಚಕ್ ಮಾಡುವ ಪ್ರಯತ್ನ ಮಾಡಿದ್ದಾರಾ?
೮. ತಿರಸ್ಕಾರವಾದ 77 ಲೋಡ್ ಅಡಿಕೆಯ ಒಟ್ಟು ತೂಕ ಎಷ್ಟು? ನಷ್ಟವಾದ ಮೌಲ್ಯ ಎಷ್ಟು?
೯. ತಿರಸ್ಕಾರವಾದ 77 ಲೋಡ್‌ ವಾಪಸ್ ಬಂದಿಲ್ಲ, ಅಲ್ಲೇ ಕಡಿಮೆ ದರಕ್ಕೆ ಮರು ವ್ಯಾಪಾರ ಆಗಿದೆ ಅಂತಾದರೆ, ಅಷ್ಟೊಂದು ದೊಡ್ಡ ಮೊತ್ತದ ಮೇಲಿನ ಜಿಎಸ್‌ಟಿಯೂ ವ್ಯತ್ಯಾಸ ಆಗಿ, ಸರಕಾರಕ್ಕೆ ಜಿಎಸ್‌ಟಿಯೂ ಕಮ್ಮಿ ಆಗಿದೆಯಾ?
೧೦. ಹಾಗೆ ಗಮ್ಯ ತಲುಪಿದ ಅಡಿಕೆಗೆ ದರ ವ್ಯತ್ಯಾಸ ಮಾಡಲು ಅವಕಾಶ, ಜಿಎಸ್‌ಟಿ ಬದಲಿಸಲು ಅವಕಾಶ ಇದೆಯಾ? ಇದ್ದರೆ, ಮುಂದಿನ ದಿನಗಳಲ್ಲಿ ಉತ್ತಮ ಗುಣ ಮಟ್ಟದ ಅಡಿಕೆಗೂ ಕಳಪೆ ಅಡಿಕೆಯ ಕತೆ ಹೇಳಿ ಹೊಸ ‘ವಿಶಿಷ್ಟ ವ್ಯವಹಾರಕ್ಕೆ’ ಇದು ನಾಂದಿ ಆಗಬಹುದಾ? ಹೊಸ ವಿಶಿಷ್ಟ ವ್ಯವಹಾರದಲ್ಲಿ ಕೋಟಿ ಕೋಟಿ ಹಣ ಕಪ್ಪು ಬಣ್ಣಕ್ಕೆ ತಿರುಗಬಹುದಾ?
೧೧. ರೈತರು ಮುಸುಕಿನ ಕೈ ವ್ಯಾಪಾರಸ್ಥರಿಗೆ ಕೊಟ್ಟ ಗುಣಮಟ್ಟದ ಅಡಿಕೆಯನ್ನು ಬಳಸಿ, ಖಾಸಗೀ ವರ್ತಕರು ಕಳಪೆ ಅಡಿಕೆ ಮಿಶ್ರಣದ ಹಣ ವೃದ್ದಿಸುವ ಆಟ ಆಡುತ್ತಿರಬಹುದಾ? ಅಧಿಕೃತ ಬಿಲ್ ಮೂಲಕ ವ್ಯವಹರಿಸುವ ವರ್ತಕರಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅಡಿಕೆ ಕೊಡದೆ, ರೈತರೂ ಪರೋಕ್ಷವಾಗಿ ‘ಗುಣಮಟ್ಟದ ಮತ್ತು ಕಳಪೆ’ ಮಿಶ್ರಣದ ಸಮಸ್ಯೆಗೆ ಕಾರಣವಾಗುತ್ತಿದ್ದಾರಾ?
ಅಗೆದಷ್ಟೂ ಅನುಮಾನಗಳು, ಶಂಕೆಗಳು ಹುಟ್ಟಿಕೊಳ್ಳುತ್ತಿವೆ. ಒಂದು ಕಾಲದಲ್ಲಿ ಅಡಿಕೆ ನಂಬಿಕೆಯ ಪ್ರಮಾಣ ಮಾಡುವ ಮಾಧ್ಯಮವಾಗಿತ್ತು. ಅಡಿಕೆಯನ್ನು ಕೈಯಲ್ಲಿ ಹಿಡಿದು ಮಾತು ಕೊಟ್ರೆ ಮತ್ತೆ ಬೇರೆ ಸ್ಟ್ಯಾಂಪ್ ಪೇಪರ್ ಅಗ್ರಿಮೆಂಟ್ ಬೇಕಿರಲಿಲ್ಲ. ಅಡಿಕೆ ಇಟ್ಟ ಹರಿವಾಣದ ತಾಂಬೂಲ ಬದಲಾಯಿಸಿಕೊಂಡರೆ ಅದೇ ಒಪ್ಪಿತ ಅಗ್ರಿಮೆಂಟ್! ಈಗ ಅಂತಹ ಅಡಿಕೆಗೇ ಮಾನ ಹೋಗಿದೆ, ಹೋಗುತ್ತಿದೆ!

ಅಡಿಕೆ ಮಿಕ್ಸಿಂಗ್ ಭೂತದಿಂದ ಅಡಿಕೆ ರೈತರ ತಲೆಮೇಲೆ ಮತ್ತೊಂದು ತೂಗುಕತ್ತಿ:

ಕಳಪೆ ಅಡಿಕೆ ಮತ್ತು ತಿರಸ್ಕ್ರೃತ 77 ಲೋಡ್ ಅಡಿಕೆ ವಿಚಾರದ ಬಗ್ಗೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಮೂಲದಿಂದ ಒಂದಿಷ್ಟು ಮಾಹಿತಿ ಸಿಕ್ಕಿದ್ದು, ಕಳಪೆ ಎಂದು ತಿರಸ್ಕ್ರೃತಗೊಂಡ 77 ಲೋಡ್ ಅಡಿಕೆ ಶಿವಮೊಗ್ಗ APMC ಯದಲ್ಲ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಅಡಿಕೆ ವರ್ತಕರ ಸಂಘದವರು ಹೇಳಿದ್ದೇನು?:

ಈಗ ಎರಡು ಮೂರು ದಿನಗಳಿಂದ ಎಲ್ಲ ಪತ್ರಿಕೆಗಳಲ್ಲೂ ಕಳಪೆ ಗುಣಮಟ್ಟದ ಅಡಿಕೆ ತಿರಸ್ಕಾರ ಅನ್ನುವುದು ದೊಡ್ಡ ಸುದ್ದಿಯಾಗಿದೆ. ಅಡಿಕೆ ವ್ಯಾಪಾರದ ವಿಚಾರವಾಗಿ ಕೆಲವೊಂದು ಪ್ರಶ್ನೆಗಳನ್ನು ಎತ್ತಲಾಗಿದೆ. ಮೊದಲನೆಯದಾಗಿ ಯಾರೋ ಒಬ್ಬ ವರ್ತಕರ 77 ಲೋಡ್ ಅಡಿಕೆ ರಿಜೆಕ್ಟ್ ಆಗಿದೆ ಅನ್ನುವುದು ವಿಚಾರ, ನಮ್ಮ ಗಮನಕ್ಕೆ ಬಂದ ಹಾಗೆ ಶಿವಮೊಗ್ಗ APMC ಒಳಗೆ ವ್ಯಾಪಾರ ಮಾಡುವ ಯಾವ ಒಬ್ಬ ವ್ಯಾಪರಸ್ಥರ ಅಡಿಕೆ ಕೂಡ ಇಷ್ಟೊಂದು ಪ್ರಮಾಣದಲ್ಲಿ ರಿಜೆಕ್ಟ್ ಆಗಿಲ್ಲ.

ಈಗ ಅಡಿಕೆ ವ್ಯಾಪಾರ ಬರೀ ಶಿವಮೊಗ್ಗ ಮಾರುಕಟ್ಟೆಯ ವ್ಯಾಪಾರವಾಗಿ ಉಳಿದಿಲ್ಲ, ಶಿವಮೊಗ್ಗ APMC ಒಳಗಡೆಯಿಂದ ದಿನಕ್ಕೆ 10 ಲೋಡ್ ಅಡಿಕೆ ಉತ್ತರ ಭಾರತಕ್ಕೆ ಲೋಡ್ ಆದರೆ ಅದರ ಹತ್ತು ಪಟ್ಟು ಅಂದರೆ 100 ಲೋಡ್‌ಗಿಂತ ಜಾಸ್ತಿ ಅಡಿಕೆ APMC ಹೊರಗಡೆಯಿಂದ ಲೋಡ್ ಆಗುತ್ತದೆ. ಶಿವಮೊಗ್ಗ ಸುತ್ತ ಮುತ್ತ ಪ್ರತಿ ಹಳ್ಳಿಗಳಲ್ಲೂ ದಿನಕ್ಕೆ ಎರಡು ಮೂರು ಲೋಡ್ ಕಳಿಸುವ ಸಾಮರ್ಥ್ಯ ವಿರುವ ತುಂಬಾ ವ್ಯಾಪಾರಸ್ಥರಿದ್ದಾರೆ. ಪ್ರತಿದಿನ 10 ಲೋಡ್ ಅಡಿಕೆಯನ್ನು ಕಳಿಸುವ ವ್ಯಾಪಾರಸ್ಥರು ಕೂಡ ಇದ್ದಾರೆ.

ಒಂದು ಲೋಡ್ ಅಡಿಕೆ ಅಂದರೆ 24500 kg, ಇವತ್ತಿನ ಮಾರುಕಟ್ಟೆ ಧಾರಣೆಯಲ್ಲಿ ಒಂದು ಲೋಡ್‌ನ ಅಡಿಕೆಯ ಬೆಲೆ ಒಂದು ಕೋಟಿಗೂ ಅಧಿಕವಾಗುತ್ತದೆ. ಒಂದು ಲೋಡ್ ಅಡಿಕೆ ಶಿವಮೊಗ್ಗದಿಂದ ದಿಲ್ಲಿ, ಅಹಮದಾಬಾದ್ ತಲುಪಲು ₹.1,50,000 ಲಾರಿ ಬಾಡಿಗೆ ಆಗುತ್ತದೆ. ವಾಪಸ್ ತರಿಸಿದರೆ ಒಟ್ಟು ಮೂರು ಲಕ್ಷ ಆಗುತ್ತದೆ. ಹಾಗಾಗಿ ಯಾವ ವ್ಯಾಪಾರಸ್ಥರು ಕೂಡ ರಿಜೆಕ್ಟ್ ಆದರೆ ಮಾಲನ್ನು ವಾಪಸ್ ತರಿಸುವುದಿಲ್ಲ. ಒಂದು ಕ್ವಿಂಟಲ್‌ಗೆ ಒಂದು ಸಾವಿರ ಕಡಿಮೆಗೆ ಮಾರಿದರೂ ಬಾಡಿಗೆಗಿಂತ ಅದೇ ಲಾಭ ಅಂತ ಅಲ್ಲೇ ಮಾರಲು ಟ್ರೈ ಮಾಡ್ತಾರೆ.

ಯಾವ ಪಾನ್ ಮಸಾಲಾ ಕಂಪನಿಯವರೂ ಕೂಡ ಅಡ್ವಾನ್ಸ್ ಕೊಟ್ಟು ಅಡಿಕೆ ತರಿಸುವುದಿಲ್ಲ. ನಮ್ಮ ಅಡಿಕೆ ಹೋದ ಮೇಲೆನೇ ದುಡ್ಡು ಕೊಡೋದು. ಹಾಗಾಗಿ ಅವರು ಎಷ್ಟು ಕಟ್ ಮಾಡುತ್ತಾರೋ ಮಾಡಿಸಿಕೊಂಡು ಮಾರಲೇ ಬೇಕು ಅದು ಅನಿವಾರ್ಯ. ಆದರೆ ಇಷ್ಟೊಂದು ವ್ಯತ್ಯಾಸ, ಅಂದರೆ 55000 ರೂಪಾಯಿಗಳ ಅಡಿಕೆಯನ್ನು 47000 ರೂ.ಗೆ ಮಾರಿದರು ಅಂತ ಕೇಳ್ತಾ ಇರೋದು ಇದೇ ಮೊದಲು. ಇದರ ಸತ್ಯಾಸತ್ಯತೆ ಗೊತ್ತಿಲ್ಲ. ಯಾಕಂದ್ರೆ ಅಷ್ಟು ಡಿಫರೆನ್ಸ್ ಅಂದ್ರೆ ಒಂದು ಲೋಡ್‌ಗೆ ಇಪ್ಪತ್ತು ಲಕ್ಷ ಆಗುತ್ತದೆ, 77 ಲೋಡ್ ಅಂದ್ರೆ 15 ಕೋಟಿಗೂ ಅಧಿಕ! ಒಂದು ವರ್ಷ ಇಷ್ಟೊಂದು ಹಣ ಕಳೆದುಕೊಂಡರೆ ಎಷ್ಟೇ ದೊಡ್ಡ ವ್ಯಾಪಾರಿಯಾದರೂ ಉಳಿಯೋದು ಕಷ್ಟ!

ಇನ್ನು ಗುಣಮಟ್ಟದ ವಿಚಾರಕ್ಕೆ ಬಂದರೆ, ಬಹುಶಃ ಅಡಿಕೆ ಬಿಟ್ಟರೆ ಪ್ರಪಂಚದ ಯಾವುದೇ ಬೆಳೆಯಲ್ಲೂ ಕೂಡ ಇಷ್ಟೊಂದು ಪ್ರಮಾಣದ ಗುಣಮಟ್ಟಕ್ಕೆ ಅನುಗುಣವಾಗಿ ಇಷ್ಟೊಂದು ದರ ವ್ಯತ್ಯಾಸ ಇರುವ ಇನ್ನೊಂದು ಬೆಳೆ ಇರಲಾರದು. ಒಂದೇ ಮರದಲ್ಲಿ ಬಿಡುವ ಅಡಿಕೆ, ಅದನ್ನು ಯಾವ ಹಂತದಲ್ಲಿ ಮರದಿಂದ ಕೊಯ್ದು ಪ್ರೋಸೆಸ್ ಮಾಡುತ್ತೇವೆ ಅನ್ನುವುದರ ಮೇಲೆ ಅದರ ಬೆಲೆ ನಿರ್ಧಾರ ಆಗುತ್ತದೆ.

ಹಸ ಆದ್ರೆ 75,000, ಬೆಟ್ಟೆ ಆದ್ರೆ 55000, ರಾಶಿ ಇಡಿ ಆದ್ರೆ 48000, ಗೊರಬಲು ಆದ್ರೆ 30000 (ಈಗಿನ ಗರಿಷ್ಟ ದರದಲ್ಲಿ). ಈಗ ಸಮಸ್ಯೆ ಆಗಿರುವುದು ಇದರಲ್ಲೇ. ಈಗ ತುಂಬಾ ಜನರ ಮನೆಯಲ್ಲಿ ಗೊರಬಲನ್ನು ಪಾಲಿಷ್ ಮಾಡುವ ಅಥವಾ ಉಜ್ಜುವ ಮೆಷಿನ್ ಇದೆ. ಅದರಲ್ಲಿ ಗೊರಬಲನ್ನು ಉಜ್ಜಿ, ನಯಸ್ ಮಾಡಿ, ಬೇಯಿಸಿ ರಾಶಿ ಇಡೀ ಜೊತೆಗೆ ಕಳಿಸ್ತಾ ಇದಾರೆ. ಅದು ಬರಿ ಕಣ್ಣಿನಲ್ಲಿ ಅಷ್ಟೊಂದು ವ್ಯತ್ಯಾಸ ಕಾಣೋದಿಲ್ಲ, ಆದರೆ ಅದನ್ನ ಕಟ್ ಮಾಡಿ ನೋಡಿದರೆ ಒಳಗಡೆ ಬಿಳಿ ಇರುತ್ತದೆ. ಅದನ್ನ white cutting ಅಂತಾರೆ. ರಾಶಿ ಇಡಿ ಆದ್ರೆ brown ಅಥವಾ ಚಾಕೋಲೇಟ್ ಥರ cutting ಬರುತ್ತದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವಾಗ ಪ್ರತಿಯೊಂದು ಚೀಲವನ್ನು ಕೂಡ ಪರೀಕ್ಷೆ ಮಾಡಿ ಕಳಿಸುವುದು ಸುಲಭವಲ್ಲ. ಆದರೆ ಉತ್ತರ ಭಾರತದ manufacturer ಅಲ್ಲಿ ಒಟ್ಟಾರೆಯಾಗಿ ಒಂದು ಲೋಡ್‌‌ಯಿಂದ ಒಂದು ಹತ್ತು ಚೀಲ ತಗೊಂಡು ಪ್ರತಿ ಚೀಲದಲ್ಲೂ ಕಡಿಮೆ ಅಂದರೂ ಐದು kg ಅಡಿಕೆಯನ್ನು ಕಟ್ ಮಾಡುತ್ತಾರೆ. ಅವರಿಗೆ ಇಷ್ಟು ಶೇಕಡಾವಾರುಗಿಂತ ಜಾಸ್ತಿ white cutting ಬಂದ್ರೆ ಲೋಡ್‌‌ಅನ್ನೇ ರಿಜೆಕ್ಟ್ ಮಾಡುತ್ತಾರೆ. ಈಗ ಆಗಿರುವ ಸಮಸ್ಯೆ ಇದು. manufacturer ಯಾಕೆ 30,000 ರೂಪಾಯಿಯ ಅಡಿಕೆಯನ್ನು 50,000 ಕೊಟ್ಟು ಖರೀದಿ ಮಾಡ್ತಾರೆ? ಅದಕ್ಕೆ ರಿಜೆಕ್ಷನ್ ಜಾಸ್ತಿ ಆಗಿದೆ. ಇಷ್ಟು ಮೇಲ್ನೋಟದ ವಿಚಾರ.

ಈ ಸುದ್ದಿಗೆ ಮೂಲ ಕಾರಣ ಏನು?

ಇದೆಲ್ಲ ಇಷ್ಟು ಸುದ್ದಿಯಾಗಲು ಕಾರಣ ಮೊನ್ನೆ ಮ್ಯಾಮ್‌ಕೋಸ್‌ನವರು ಅವರ 35,000ಕ್ಕೂ ಹೆಚ್ಚು ಸದಸ್ಯರಿಗೆ ಕಳಿಸಿರುವ ಪತ್ರ. ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ, ತಮ್ಮ ಸಂಸ್ಥೆಗೆ ಬರುವ ರೈತರ ಅಡಿಕೆಯನ್ನು ಮಾತ್ರ ಖರೀದಿ ಮಾಡುತ್ತ ಇದ್ದರೂ ಕ್ವಾಲಿಟಿ ಮೇಂಟೈನ್ ಮಾಡೋಕೆ ಆಗ್ತಾ ಇಲ್ಲ ಅಂದರೆ? ಇದು ಎಷ್ಟು ದೊಡ್ಡ ಸಮಸ್ಯೆ ಅಂತ ಊಹಿಸಬಹುದು.

ನಮ್ಮ ಅಡಿಕೆ ವ್ಯವಹಾರದ ಇಂಡಸ್ಟ್ರಿ ಎಷ್ಟು ಅಗಾಧವಾಗಿದೆ ಅಂದರೆ ದೇಶದಲ್ಲಿ ನಡೆಯುವ IPL, WORLDCUP ಅಂಥದ್ದನ್ನೇ ನಮ್ಮ ಒಂದೆರಡು PAN MASALA ಕಂಪನಿಗಳು ಪ್ರಾಯೋಜಿಸುತ್ತವೆ ಅಂದ್ರೆ, ದೊಡ್ಡ ದೊಡ್ಡ bolywood starsಗಳನ್ನ ತಮ್ಮ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತವೆ!

ಅಡಿಕೆ ಮಂಡಿಗೆ ಕಳಿಸಿ ಮಾರೋದಕ್ಕಿಂತ, ಮನೆ ಬಾಗಿಲಲ್ಲೇ ಕೊಟ್ಟರೆ ಒಂದು ಸಾವಿರ ಜಾಸ್ತಿ ಕೊಟ್ಟು ತಗೊಂಡು ಹೋಗ್ತಾರೆ ಅಂತಾರೆ ರೈತರು. APMC ಒಳಗೆ ಅಡಿಕೆ ಮಾರಾಟ ಆದರೆ ಬಂದು ಖರೀದಿ ಮಾಡುವವರು ಒಂದು ಕ್ವಿಂಟಲ್ ಗೆ 50000ಕ್ಕೆ ಖರೀದಿ ಮಾಡಿದ್ರೆ ಅವರಿಗೆ 2500 GST ಸೇರಿ 52500 ಆಗುತ್ತದೆ. ಅದಕ್ಕಿಂತ ಮನೆ ಬಾಗಿಲಲ್ಲೇ 51000ಕ್ಕೆ ಖರೀದಿ ಮಾಡ್ತಾರೆ ಅಷ್ಟೇ.

ನಮ್ಮ ಮಲೆನಾಡಿನ ಬೆಳೆಗಳಲ್ಲಿ ರೈತರಿಗೆ ಅಡಿಕೆಗೆ ಇರುವಷ್ಟು ವ್ಯವಸ್ಥಿತ ಮಾರುಕಟ್ಟೆ ಬೇರೆ ಯಾವ ಬೆಳೆಗಳಿಗೂ ಇಲ್ಲ. ಅಡಿಕೆಗೆ ಸಿಗುವಷ್ಟು ಖಾಸಗಿ ಸಾಲ ಸೌಲಭ್ಯಗಳು ಕೂಡ ಯಾವ ಬೆಳೆಗಳಿಗೂ ಇಲ್ಲ. ರೈತರು ಹಣದ ಅವಶ್ಯಕತೆಗಾಗಿ ಅಡಿಕೆ ಮಾರುವ ಅವಶ್ಯಕತೆ ಇಲ್ಲ. ಸಹಕಾರ ಸಂಘಗಳಲ್ಲಿ ಅಥವಾ ಖಾಸಗಿ ಮಂಡಿಗಳಲ್ಲಿ ಅಡಿಕೆ ಮೇಲೆ ಸಾಲ ಸೌಲಭ್ಯದ ವ್ಯವಸ್ಥೆ ಇದೆ. ಆಮೇಲೆ ದಲ್ಲಾಳಿ ಮಂಡಿಯಿಂದ ವರ್ತಕರು ಅಡಿಕೆ ಖರೀದಿಸಿದರೆ, ನಾಳೆ ಅದರಲ್ಲಿ ಕ್ವಾಲಿಟಿ ವ್ಯತ್ಯಾಸ ಬಂದಲ್ಲಿ, ಅದು ಯಾವ ಮಂಡಿ ಯಲ್ಲಿ ಖರೀದಿಸಿದ್ದು, ಯಾವ ರೈತನದ್ದು ಅನ್ನುವ ಎಲ್ಲಾ ಮಾಹಿತಿ ದೊರೆಯುತ್ತದೆ. ಸರಿ ಪಡಿಸಿಕೊಳ್ಳಲು ಅವಕಾಶ ಇರುತ್ತದೆ. ಆದ್ರೆ ಈಗ 90 ಪರ್ಸೆಂಟ್ ಅಡಿಕೆ ವ್ಯವಹಾರ ಮಾರುಕಟ್ಟೆ ಹೊರಗಡೆ ಹಳ್ಳಿಯಲ್ಲೇ ನಡೆಯುತ್ತದೆ. ಮಾರಾಟದ ನಂತರ, ಮಾರಿದವರು ಯಾರು ಅಂತಾನು ಗೊತ್ತಿಲ್ಲ, ಖರೀದಿ ಮಾಡಿದವರು ಯಾರು ಅಂತಾನು ಗೊತ್ತಿರೋದಿಲ್ಲ. ಯಾವುದೇ ವ್ಯವಹಾರವಾದರೂ ಒಂದು systematic wayನಲ್ಲಿ ನಡೆದರೆ ಆ ಉದ್ಯಮದ ಬೆಳವಣಿಗೆಗೆ ಒಳ್ಳೆಯದು.

APMC ಅಡಿಕೆ ವರ್ತಕರ ಸಂಘದಿಂದ ಸಿಕ್ಕ ಮಾಹಿತಿಯಲ್ಲಿ ಅಡಿಕೆ ವ್ಯಾಪಾರದ ಹಿಂದಿನ ಒಂದಿಷ್ಟು ಚಿತ್ರಣಗಳು ಸಿಗುತ್ತವಾದರೂ, ಸಿಸ್ಟಮ್ಯಾಟಿಕ್ ಆಗಿ ನಡೆದ, ಕತ್ತಲೆಯಲ್ಲೇ ನೆಡೆಯುವ ಹೆಚ್ಚಿನ ಅಡಿಕೆ ವ್ಯವಹಾರದಲ್ಲಿ ಇಡೀ ಅಡಿಕೆ ವ್ಯಾಪಾರದ ಕರಾಳ ಮುಖ ಅಡಗಿರುವುದು.

ಅಡಿಕೆ ಧಾರಣೆಯ ಏರಿಳಿತ, GST ಕಳ್ಳತನ, ಫಾರಮ್ ಹೌಸ್ ಅಡಿಕೆ ರಹಸ್ಯ, ಕಳಪೆ ಅಡಿಕೆ, ಮಿಕ್ಸಿಂಗ್ ಮೋಸ, ಅಕ್ರಮ ಆಮದು, ಕಳ್ಳ ಸಾಗಾಣಿಕೆ…. ಇತ್ಯಾದಿಗಳು ಇರುವುದು ಅಡಿಕೆಯ ಆ ಕರಾಳ ಮಾರುಕಟ್ಟೆ ಒಳಗಡೆ. ಆ ಕರಾಳ ಅಡಿಕೆ ಮಾರುಕಟ್ಟೆಯಲ್ಲಿ ಬೆಂದು ಒಣಗಿದ ಒಂದಿಷ್ಟು ‘ಕಪ್ಪು’ ಅಡಿಕೆ ಅಗ್ರಿಕಲ್ಚರಲ್ ಪ್ರೊಡ್ಯುಸ್ ಮಾರ್ಕೇಟ್ ಕಮಿಟಿಯ (APMC) ಒಳಗೂ ರೈತರ ಹೆಸರಿನಲ್ಲೇ ಬರುತ್ತಿರುವುದೂ ಸತ್ಯ. APMC ಒಳಗಿನ ನೇರ ಸಿಸ್ಟಮ್ಯಾಟಿಕ್ ವ್ಯವಹಾರದಲ್ಲಿ ನಡೆದ ವ್ಯಾಪಾರದ ನಾಲ್ಕಾರು ಲೋಡ್ ಅಡಿಕೆಯೂ ಕಳಪೆ ಅಡಿಕೆ ಅಂತ ನಿರ್ಣಯವಾಗಿ REJECTED ಅಂತ ರೆಡ್ ಲೇಬಲ್ ಅಂಟಿಸಿಕೊಂಡು ತಿರಸ್ಕೃತವಾಗಿದೆ. ಇದರ ಪರಿಣಾಮವಾಗಿ ಧಾರಣೆಯ ಬಿಸಿ ಕಂಪನ ಮತ್ತು ಕಳಪೆ ಅಪವಾದ APMC ಒಳಗಿನ ಅಡಿಕೆಗೂ ತಟ್ಟಿದೆ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Prahlad Joshi: ರೈತರಿಗೆ ಗುಡ್‌ನ್ಯೂಸ್‌, ಹೆಸರು ಕಾಳು, ಸೂರ್ಯಕಾಂತಿ ಖರೀದಿಗೆ ಮುಂದಾದ ಕೇಂದ್ರ: ಪ್ರಹ್ಲಾದ್‌ ಜೋಶಿ

‘ಕೇಂದ್ರ ಸರ್ಕಾರದಿಂದ ಹೆಸರುಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಾಲ್‌ಗೆ 8682 ರೂ ( MSP) ಅಂತೆ ಖರೀದಿಗೆ ಅನುಮತಿ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ತಿಳಿಸಿದ್ದಾರೆ.

VISTARANEWS.COM


on

prahlad joshi
Koo

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ, MSP) ಯೋಜನೆಯಡಿ ರಾಜ್ಯದಲ್ಲಿ ಹೆಸರುಕಾಳು ಹಾಗೂ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕೇಂದ್ರ ಸಚಿವ ಪೋಸ್ಟ್ ಹಾಕಿದ್ದಾರೆ.

‘ಕೇಂದ್ರ ಸರ್ಕಾರದಿಂದ ಹೆಸರುಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಾಲ್‌ಗೆ 8682 ರೂ ( MSP) ಅಂತೆ ಖರೀದಿಗೆ ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. ‘ರಾಜ್ಯದ ಮಾರುಕಟ್ಟೆಗಳಲ್ಲಿ ಹೆಸರಿನ ಬೆಲೆ ಕುಸಿದು ರೈತರು ಬೆಳೆದ ಬೆಳೆಗೆ ಸರಿಯಾದ ಮೌಲ್ಯ ದೊರೆಯದೇ ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗಾಗಿ MSP ಅಡಿ ಹೆಸರು ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು ರಾಜ್ಯದ ರೈತರ ಹೆಸರುಕಾಳು ಬೆಳೆಯನ್ನು ಬೆಲೆ ಬೆಂಬಲ ಯೋಜನೆ , Price Support Scheme (PSS) ಅಡಿ ಖರೀದಿಗೆ ಅನುಮತಿ ನೀಡಿದ್ದು 2215 MT ಹೆಸರುಕಾಳು ಬೆಳೆಯನ್ನು 8682 ಪ್ರತಿ ಕ್ವಿಂಟಲ್ ರೂಪಾಯಿಯಂತೆ ಖರೀದಿ ಮಾಡಲಾಗುವುದು ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ. ಅದೇ ರೀತಿ ಸೂರ್ಯಕಾಂತಿ ಬೆಳೆಯನ್ನು ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಖರೀದಿಸಲು ಅನುಮೋದನೆ ನೀಡಿದ್ದು 13,210 ಮೆಟ್ರಿಕ್ ಟನ್ ಸೂರ್ಯಕಾಂತಿ ಬೆಳೆಯನ್ನು ಕೇಂದ್ರ ಸರ್ಕಾರ ಈ ಯೋಜನೆ ಅಡಿ ಖರೀದಿಸಲಿದೆ.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವಿನಂತಿಸಿದ ಪತ್ರ ದಿನಾಂಕ 21.08.24 ಕೇಂದ್ರ ಕೃಷಿ ಸಚಿವಾಲಯಕ್ಕೆ ತಲುಪಿದ ತಕ್ಷಣ ನಾನು ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರನ್ನು ಭೇಟಿ ಮಾಡಿ ರಾಜ್ಯದ ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಯನ್ನು ಖರೀದಿಸುವಂತೆ ವಿನಂತಿಸಿದ್ದೆ. ತಕ್ಷಣವೇ ಕೇಂದ್ರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಅನುಮತಿ ನೀಡುವಂತೆ ಸೂಚಿಸಿದರು. ಅದರಂತೆ ಕೇಂದ್ರ ಸರ್ಕಾರ ದಿನಾಂಕ 22.08.24 ರಂದು ಪತ್ರದ ಮುಖಾಂತರ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಜೋಶಿ ತಿಳಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ ತಕ್ಷಣವೇ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರಿಗೆ ಧನ್ಯವಾದಗಳು. ರಾಜ್ಯ ಸರ್ಕಾರವು ತಕ್ಷಣವೇ ರಾಜ್ಯದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಕೋರುತ್ತೇನೆ. ದೇಶದ ಪ್ರತಿ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ ಅವರ ಪ್ರತಿ ಸಮಸ್ಯೆಗೆ ಸೂಕ್ತ ಮತ್ತು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವುದರ ಮೂಲಕ ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Prahlad Joshi: ಇದು 100% ಭ್ರಷ್ಟಾಚಾರದ ಸರ್ಕಾರ, ರಾಹುಲ್‌ ಗಾಂಧಿ ಬೆಂಬಲದಿಂದಲೇ ಅಕ್ರಮ: ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ

Continue Reading

ಪ್ರಮುಖ ಸುದ್ದಿ

Tungabhadra Dam: ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

Tungabhadra Dam: ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ.

VISTARANEWS.COM


on

Koppala News
Koo

ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರೆಸ್ಟ್‌ ಗೇಟ್ ಮುರಿದಿರುವುದು (Crest Gate Crash) ಮಳೆಗಾಲ ಮುಗಿಯುವ ಮುನ್ನವೇ ಕಲ್ಯಾಣ ಕರ್ನಾಟಕ (Kalyana Karntaka) ಭಾಗದ ಅನ್ನದಾತರಿಗೆ (Farmers) ಶಾಕ್ ನೀಡಿದೆ. ಕ್ರೆಸ್ಟ್‌ ಗೇಟ್‌ ಮುರಿದುದರಿಂದ ಸುಮಾರು 15 ಟಿಎಂಸಿಯಷ್ಟು (TMC) ನೀರು ಹರಿದುಹೋಗಿದ್ದು, ಭರ್ತಿಯಾಗಿದ್ದ ಜಲಾಶಯ ಅಷ್ಟರ ಮಟ್ಟಿಗೆ ಈಗ ಖಾಲಿಯಾಗಿದೆ. ಇದರ ಪರಿಣಾಮ ಮೂರು ರಾಜ್ಯಗಳ 8 ಜಿಲ್ಲೆಗಳ ಲಕ್ಷಾಂತರ ರೈತರು ತಮ್ಮ ಎರಡು ಬೆಳೆಗಳನ್ನು ಕಳೆದುಕೊಳ್ಳುವ ಅನುಮಾನ ಮೂಡಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳಿಗೆ ಆಸರೆ ಆಗಿರುವ ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ‌, ರಾಯಚೂರು, ಆಂಧ್ರ ಪ್ರದೇಶದ ಕರ್ನೂಲ್, ಅನಂತಪುರ, ಕಡಪ, ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ಜೀವನಾಡಿ.

ಈ ಬಾರಿ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಆಗಿಲ್ಲ. ಆದರೆ ಡ್ಯಾಂ ತುಂಬಿದ್ದರಿಂದ ಕಾಲುವೆ ನೀರು ನಂಬಿಕೊಂಡು ರೈತು ಬಿತ್ತನೆ ಮಾಡಿದ್ದಾರೆ. ಬಳ್ಳಾರಿಯಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗಿದೆ. 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ.

ಆದರೆ ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು‌ ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ‌ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.

ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯುವುದು ಕೇವಲ ಇಪ್ಪತ್ತೈದು ಟಿಎಂಸಿ ನೀರು. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳುವುದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯದಿಂದ 15 ಟಿಎಂಸಿ ನೀರು ವ್ಯರ್ಥ; ಇಂದು ಸಿಎಂ ಸಿದ್ದರಾಮಯ್ಯ ಭೇಟಿ

Continue Reading

ಕೃಷಿ

Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Areca Nut Illegal Import: ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದು ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಅಡಿಕೆ ಬೆಳೆಗಾರರ ಪಾಲಿಗೆ ಆತಂಕಕಾರಿಯಾಗಿದೆ.

VISTARANEWS.COM


on

By

Areca Nut Illegal Import
Koo

ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರಸಕ್ತ ಹಣಕಾಸು ವರ್ಷದ (Areca Nut Illegal Import) ಜೂನ್‌ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ‍ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಸರಾಸರಿ ಪ್ರತೀ ದಿನ ಒಂದು ಅಕ್ರಮ ಪ್ರಕರಣ!

ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಬಯಲಿಗೆ ಬಂದು, ವಶಪಡಿಸಿಕೊಂಡ ಅಕ್ರಮ ಪ್ರಕರಣಗಳು. ಬಯಲಿಗೆ ಬಾರದೆ ಡೀಲ್ ಆದ ಪ್ರಕರಣಗಳು ಎಷ್ಟಿರಬಹುದು? ಡ್ರೈ ಫ್ರೂಟ್ ಹೆಸರಲ್ಲಿ, ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ಹೆಸರಲ್ಲಿ ಬಂದ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಈಶಾನ್ಯ ರಾಜ್ಯಗಳ ಚೆಕ್‌ಪೋಸ್ಟ್‌ಗಳಲ್ಲಿ, ನಮ್ಮಲ್ಲಿ ಅಕ್ರಮ ಮರಳು ಸಾಗಾಣಿಕೆ ರೀತಿಯಲ್ಲಿ ಆದಂತೆ, ದೇಶದ ಒಳಗೆ ಬಂದು ಉದುರುತ್ತಿರುವ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಅವುಗಳ ಒಟ್ಟು ತೂಕ ಎಷ್ಟು ಲಕ್ಷ ಟನ್ ಇರಬಹುದು? ಅವುಗಳ ಮೌಲ್ಯದ ಕತೆ ಏನು?

ಈಗ ಬಹಿರಂಗಗೊಂಡ 84 ಪ್ರಕರಣಗಳಲ್ಲಿನ ಒಟ್ಟು ಅಡಿಕೆ 3009 ಟನ್‌ಗಳು

ಅಂದರೆ, 30,09,000 ಕೆ.ಜಿ! ಸರಾಸರಿ ಪ್ರತೀ ಕೆಜಿ ಅಡಿಕೆಗೆ ₹ 400 ಎಂದು ಪರಿಗಣಿಸಿದರೆ, ₹ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ! ಲೆಕ್ಕ ಸಿಗದೇ ಇರುವ ಅಕ್ರಮ ಅಡಿಕೆಯ ಮೌಲ್ಯ ಎಷ್ಟಿರಬಹುದು? ಖಂಡಿತವಾಗಿ ಅದು ಭಯಾನಕವಾದ ಮೊತ್ತವೇ ಆಗಿರುತ್ತದೆ. ಇಷ್ಟಕ್ಕೂ ಇದು ಮೂರು ತಿಂಗಳ ವ್ಯವಹಾರದ್ದು! ವರ್ಷ ಪೂರ್ತಿಗೆ ಎಷ್ಟಾಗಬಹುದು?

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದೇ ರೀತಿ ಅಕ್ರಮವಾಗಿ ವಿದೇಶಿ ಅಡಿಕೆ ಭಾರತಕ್ಕೆ ಬರುತ್ತಿರುವ ಅಂಕಿ ಅಂಶಗಳು ಕೇಂದ್ರ ಸರಕಾರ ನಿರ್ಮಿಸಿರುವ ವ್ಯವಸ್ಥೆಯ ಒಳಗಿನ ಬಿಗಿ ಹಿಡಿತವನ್ನು ಅನುಮಾನಿಸುವಂತಿವೆ.
2020–21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿದ್ದರೆ, 2021–22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್‌ ವಶಪಡಿಸಿಕೊಳ್ಳಲಾಗಿದೆ. 2022–23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023–24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್‌ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇಷ್ಟೊಂದು ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ರಾಜಾರೋಷವಾಗಿ ಪ್ರತೀ ವರ್ಷವೂ ನುಗ್ಗಿ ಬರುತ್ತಿದೆ ಎಂದಾದರೆ, ದೇಶದ ಆರ್ಥಿಕ ಮತ್ತು ಭದ್ರತೆಯ ವಿಷಯದಲ್ಲೂ ಸಂಶಯ ಮತ್ತು ಭಯ ಹುಟ್ಟಿಸುತ್ತಿದೆ. ಅಡಿಕೆಯೇ ಅಕ್ರಮವಾಗಿ ಈ ಪರಿ ಬರುತ್ತಿರುವಾಗ, ಬೇರೆ ವಸ್ತುಗಳೂ ಕೂಡ ಹೀಗೇ ಬರುತ್ತಿರಬಹುದಲ್ಲವೆ? ಅವುಗಳ ಕತೆ ಏನು?
ಈ ಬಾರಿ ಕಾಫಿ, ಮೆಣಸು, ಕೋಕೊ ಬೆಲೆಗಳು ಏರಿದಂತೆ, ದೇಶೀಯ ಅಡಿಕೆಗೂ ಕ್ವಿಂಟಾಲ್‌ಗೆ ‘ಅಬ್ ಕಿ ಬಾರ್ 60,000 ಪಾರ್’ ಎಂದು ನಿರೀಕ್ಷಿಸಿದ್ದ ಅಡಿಕೆಗೆ, ಈಗ ವಿದೇಶಿ ಅಕ್ರಮ ಆಮದಿನಿಂದಾಗಿ ಅಡಿಕೆ ದರ ಇಳಿ ಮುಖವಾಗಿದೆ.

ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ಭೂಕುಸಿತ; ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು

ಸಂಸದರ ಮೌನವೇಕೆ?

ಇಷ್ಟೆಲ್ಲ ಅಕ್ರಮಗಳು ನೆಡೆಯುತ್ತಿದ್ದರೂ ಬಹಿರಂಗವಾಗಿ ಸುದ್ದಿಯಾಗುತ್ತಿದ್ದರೂ, ಅಡಿಕೆ ಬೆಳೆಯುವ ಜಿಲ್ಲೆಗಳ (ಎಲ್ಲಾ ರಾಜ್ಯಗಳ) ಸಂಸದರು ಯಾಕೆ ಗಟ್ಟಿ ಧ್ವನಿ ಎತ್ತುತ್ತಿಲ್ಲ? ಅಕ್ರಮ ಅಡಿಕೆ ಆಮದಿಗೆ ಮೌನ ಸಮ್ಮತಿಯ ಬೆಂಬಲ ಕೊಡುತ್ತಿದ್ದಾರಾ? ಅಕ್ರಮವನ್ನು ತಡೆಯಲು ಸಂಸದರಿಗೆ ಸಾಧ್ಯವಾಗುತ್ತಿಲ್ಲವಾ? ಅಥವಾ ಪರೋಕ್ಷವಾಗಿ ಅಕ್ರಮ ಅಡಿಕೆ ಆಮದಿನಲ್ಲಿ ಕೆಲವು ಸಂಸದರು ಫಲಾನುಭವಿಗಳಾಗಿದ್ದಾರಾ? ಹಾಗಾಗಿಯೇ ಅಕ್ರಮ ಅಡಿಕೆ ಸಾಗಾಣಿಕೆಯಲ್ಲಿ ಮೌನವಾಗಿದ್ದಾರಾ? ವರ್ಷದಲ್ಲಿ ಒಂದೋ ಎರಡೋ ಪ್ರಕರಣಗಳಾದರೆ ಅದು ಅಷ್ಟು ಗಂಭೀರವಲ್ಲದ್ದಿರಬಹುದು.

ಇದು ಕಳೆದ ಮೂರು ತಿಂಗಳಲ್ಲಿ ಬಯಲಿಗೆ ಬಂದ ಪ್ರಕರಣಗಳೇ 84 ಅಂದರೆ? ಯಾವ ಸಂಸದರಿಗೂ ಇದು ಸೀರಿಯಸ್ ವಿಷಯ ಅಂತ ಅನಿಸುತ್ತಿಲ್ಲವಾ? ವಿರೋಧ ಪಕ್ಷಗಳ ಸಂಸದರಿಗೂ ಇದು ಮಹತ್ವದ ವಿಚಾರ ಅಂತ ಅನಿಸುತ್ತಿಲ್ಲವಾ? ಸೂಕ್ತ ಕಡಿವಾಣದ ಚಿಂತನೆಗೆ ಯಾರೂ ಮುಂದಾಗುತ್ತಿಲ್ಲವಾ? ಆಡಳಿತ ಮತ್ತು ವಿರೋಧ ಪಕ್ಷಗಳ ಸಂಸದರು, ದೇಶದ ಬಹುದೊಡ್ಡ ಹಗರಣದಂತೆ ಕಂಡು ಬರುವ ಈ ವಿದೇಶಿ ಅಕ್ರಮ ಅಡಿಕೆ ಆಮದನ್ನು ನಿಯಂತ್ರಣ ಮಾಡಲು ಸಮರೋಪಾದಿಯಲ್ಲಿ ಮುನ್ನುಗ್ಗಬೇಕಲ್ವಾ? ಯಾಕೆ ಮೌನ? ಕಳೆದ ವಾರ ಇದೇ ರೀತಿ ಅಕ್ರಮ ವಿದೇಶಿ ಅಡಿಕೆ ಒಳ ಬಂದ ಪ್ರಕರಣವನ್ನು ತನಿಖೆಗಾಗಿ ಸಿಬಿಐ(CBI) ಗೆ ವಹಿಸಿದ ಸುದ್ದಿ ಪ್ರಕಟವಾಗಿತ್ತು.

ಈಗ ಎಲ್ಲಾ 84 ಪ್ರಕರಣಗಳನ್ನೂ, ಮತ್ತು ಬಹಿರಂಗವಾಗದ, ವಶಪಡಿಸಿಕೊಳ್ಳದ ಅಕ್ರಮ ಅಡಿಕೆ ಸಾಗಾಣಿಕೆಗಳ ಪ್ರಕರಣಗಳನ್ನು ಸಿಬಿಐ(CBI) ತನಿಖೆಗೆ ವಹಿಸಬೇಕೆಂದು ಕೇಂದ್ರ ಸಂಸದರೆಲ್ಲ ಕೇಂದ್ರ ಸರಕಾರವನ್ನು ಗಂಭೀರವಾಗಿ ಒತ್ತಾಯಿಸುತ್ತಿಲ್ಲ ಏಕೆ? ಅಕ್ರಮ ವಿದೇಶಿ ಅಡಿಕೆಯ ಸಾಗಾಣಿಕೆಯ ಒಂದೇ ಒಂದು ಪ್ರಕರಣವೂ ಮುಂದೆ ನಡೆಯದಂತೆ ದೇಶದ ಎಲ್ಲಾ ಮಾರ್ಗಗಳನ್ನು (ಭೂ, ಜಲ, ವಾಯು) ಬಿಗಿಗೊಳಿಸಬೇಕಾದ ಅನಿವಾರ್ಯತೆ ಇಲ್ಲವಾ?
ದೇಶದೊಳಕ್ಕೆ ಬರುತ್ತಿರುವ ಅಕ್ರಮ ವಿದೇಶಿ ಅಡಿಕೆ ಸಮಸ್ಯೆ ಕೇವಲ ದೇಶೀಯ ಅಡಿಕೆ ಬೆಲೆಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಸಮಸ್ಯೆಯ ಗಂಭೀರತೆ ನೋಡಿದರೆ, ಇದು ಸಮಗ್ರ ದೇಶದ ಅರ್ಥ ವ್ಯವಸ್ಥೆ ಮತ್ತು ಭದ್ರತಾವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದಾದ ಪ್ರಕರಣಗಳಾಗಿ ಕಾಣುತ್ತಿವೆ.
ದಯವಿಟ್ಟು ರಾಜ್ಯದ ಎಲ್ಲ ಸಂಸದರು, ಶಾಸಕರು, ಸಚಿವರು ಈ ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಬಗ್ಗೆ ಪರಿಣಾಮಕಾರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prosecution against Siddaramaiah Hc reserves verdict after hearing arguments
ಕೋರ್ಟ್23 mins ago

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Colon cancer is on the rise‌ Those above 50 years of age are targeted
ಆರೋಗ್ಯ1 hour ago

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Suvarna Celebrity League a reality show launched on Star Suvarna
ಸಿನಿಮಾ2 hours ago

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Self harming
ಬೆಂಗಳೂರು4 hours ago

Self Harming : ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

Actor darshan
ಸಿನಿಮಾ5 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ದಿನ ಸೆರೆವಾಸ; ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್‌

CM Siddaramaiah
ರಾಜಕೀಯ5 hours ago

CM Siddaramaiah : ಸಿದ್ದರಾಮಯ್ಯ ವಿಷ್ಯದಲ್ಲಿ ಆತುರದ ನಿರ್ಣಯ; ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ- ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ

Road Accident
ಪ್ರಮುಖ ಸುದ್ದಿ7 hours ago

Road Accident : ಏರ್‌ಪೋರ್ಟ್‌ ರೋಡ್‌ನಲ್ಲಿ ಡೆಡ್ಲಿ ಹಿಟ್‌ ಆ್ಯಂಡ್‌ ರನ್‌; ಲಾಂಗ್‌ ಡ್ರೈವ್‌‌ ಬಂದಿದ್ದ ಮೂವರು ವಿದ್ಯಾರ್ಥಿಗಳು ಬಲಿ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರ ಅನುಮಾನವೇ ಸಂಬಂಧಗಳನ್ನು ಹಾಳು ಮಾಡುತ್ತೆ

Installation of Ganesha idol at home Muslim man preaches message of unity
ಗದಗ1 day ago

Ganesh Chaturthi: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ

karnataka weather Forecast
ಮಳೆ2 days ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌