Shocking Video : ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಪೊಲೀಸ್‌ ವಶಕ್ಕೆ - Vistara News

ವೈರಲ್ ನ್ಯೂಸ್

Shocking Video : ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಪೊಲೀಸ್‌ ವಶಕ್ಕೆ

Shocking Video : ಈ ವಿಡಿಯೋದಲ್ಲಿ ಹೆಣ್ಣು ನಾಯಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಆಘಾತಕಾರಿ ದೃಶ್ಯಗಳಿವೆ. ಸುರೇಂದ್ರ ಸಿಂಗ್‌ ಮುಗ್ಧ ಪ್ರಾಣಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಸುರಭಿ ರಾವತ್ ಎಂಬುವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

Shocking Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಜಿಯಾಬಾದ್: ಕಾಮುಕನೊಬ್ಬ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ವರದಿಯಾಗಿದೆ. ಹೆಣ್ಣು ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಭಯಾನಕ ವೀಡಿಯೊ (Shocking Video) ಆನ್ ಲೈನ್ ನಲ್ಲಿ ವೈರಲ್ ಆದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. 21 ಸೆಕೆಂಡುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಗಿದೆ. ಕ್ಲಿಪ್‌‌ನಲ್ಲಿರುವ ಆರೋಪಿಯನ್ನು ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಗಾಜಿಯಾಬಾದ್‌ನ ಮೋದಿನಗರದಲ್ಲಿ ನಿವಾಸಿ ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಡಿಯೋದಲ್ಲಿ ಹೆಣ್ಣು ನಾಯಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಆಘಾತಕಾರಿ ದೃಶ್ಯಗಳಿವೆ. ಸುರೇಂದ್ರ ಸಿಂಗ್‌ ಮುಗ್ಧ ಪ್ರಾಣಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಸುರಭಿ ರಾವತ್ ಎಂಬುವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ದುಷ್ಕೃತ್ಯಗಳನ್ನು ಕೇವಲ ಪ್ರಾಣಿಗಳ ಕ್ರೌರ್ಯ ಎಂದು ವರ್ಗೀಕರಿಸಬಾರದು. ಕಠಿಣ ಕಾನೂನು ಕ್ರಮದ ಅಗತ್ಯವಿದೆಯೇ ಎಂದು ಹೇಳಿದ್ದಾರೆ. ಘೋರ ವರ್ತನೆಗಾಗಿ ಆ ವ್ಯಕ್ತಿಯನ್ನು ಜೈಲಿಗೆ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಪೋಸ್ಟ್ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಜೊತೆಗೆ ಗ್ರಾಮೀಣ ಡಿಸಿಪಿ, ಗಾಜಿಯಾಬಾದ್ ಪೊಲೀಸ್ ಮತ್ತು ಯುಪಿ ಪೊಲೀಸರು ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಲಾಗಿದೆ. ಪ್ರಾಣಿಗಳ ಮೇಲಿನ ಇಂತಹ ದೌರ್ಜನ್ಯಗಳ ವಿರುದ್ಧ ಸಮಾಜವು ಧ್ವನಿ ಎತ್ತದಿದ್ದರೆ ಈ ರಾಕ್ಷಸರು ಮುಂದೆ ದುರ್ಬಲ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಬಹುದು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ಕ್ರೌರ್ಯದ ಕೃತ್ಯಗಳನ್ನು ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Narendra Modi: ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲು ಸಾಧ್ಯವೇ ಇಲ್ಲದ ಪಾಪ; ಪ್ರಧಾನಿ ಮೋದಿ ಗುಡುಗು

ವೀಡಿಯೊ ಬಗ್ಗೆ ನಾಗರಿಕರಿಂದ ಭಾರಿ ವಿರೋಧ ವ್ಯಕ್ತಗೊಂಡಿದೆ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಎಕ್ಸ್ ಬಳಕೆದಾರರು ಈ ಘಟನೆಯ ಬಗ್ಗೆ ತ್ವರಿತವಾಗಿ ಗಮನ ಹರಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇಂತಹ ಕೆಟ್ಟ ಮನಸ್ಥಿತಿ ಹೊಂದಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ . ಕೋಪಗೊಂಡ ನೆಟ್ಟಿಗರು, ಯುಪಿ ಪೊಲೀಸರನ್ನು ಟ್ಯಾಗ್ ಮಾಡಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

ವೀಡಿಯೊ ಪ್ರಸಾರವಾದ ನಂತರ, ಮೋದಿನಗರ ಪೊಲೀಸರು ಕ್ರಮ ಕೈಗೊಂಡು, ಪ್ರಾಣಿ ಕ್ರೌರ್ಯ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಬೆಂಗಳೂರು ಮೂಲದ ಯುವತಿಯ ಬೈಸೆಪ್ಸ್ ಫೋಟೊ; ಜಾತೀಯತೆಯ ಚರ್ಚೆಗೆ ಕಾರಣವೇನು?

Viral News: ಮಹಿಳಾ ಉದ್ಯಮಿಯೊಬ್ಬರು ತಮ್ಮ ಫೋಟೊ ಹಂಚಿಕೊಂಡು ಬರೆದ ಎರಡೇ ಎರಡು ಪದದ ಕ್ಯಾಪ್ಶನ್‌ ಇದೀಗ ಜಾತೀಯತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಬೆಂಗಳೂರು ಮೂಲದ ಕಂಟೆಂಟ್ ರೈಟಿಂಗ್ ಏಜೆನ್ಸಿಯ ಸಿಇಒ ಆಗಿರುವ ಅನುರಾಧಾ ತಿವಾರಿ (Anuradha Tiwari) ಎನ್ನುವವರು ಆಗಸ್ಟ್ 22ರಂದು ಸಾAಮಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಬೈಸೆಪ್ಸ್ ಫೋಟೊವನ್ನು ಪೋಸ್ಟ್ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ (Brahmin genes) ಎಂಬ ಶೀರ್ಷಿಕೆ ನೀಡಿದ್ದಾರೆ. ಇದೀಗ ಈ ಶಿರ್ಷಿಕೆ ಹಾಗೂ ಪೋಟೊ ವೈರಲ್ ಆಗಿದೆ.

VISTARANEWS.COM


on

Viral News
Koo

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಯಾವಾಗ, ಯಾವ ಸಂಗತಿ ವೈರಲ್‌ ಆಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಒಂದು ಚಿಕ್ಕ ಕ್ಯಾಪ್ಶನ್‌ ಅಥವಾ ಒಂದು ಫೋಟೊ ವಿವಾದ ಹುಟ್ಟು ಹಾಕುತ್ತದೆ, ಚರ್ಚೆಯ ಕಿಡಿ ಹೊತ್ತಿಸಿ ಬಿಡುತ್ತದೆ. ಈಗ ಅಂತಹದ್ದೇ ಒಂದು ಪೋಸ್ಟ್‌ ನೆಟ್ಟಿಗರ ಗಮನ ಸೆಳೆದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಉದ್ಯಮಿಯೊಬ್ಬರು ತಮ್ಮ ಫೋಟೊ ಹಂಚಿಕೊಂಡು ಬರೆದ ಎರಡೇ ಎರಡು ಪದದ ಕ್ಯಾಪ್ಶನ್‌ ಇದೀಗ ಜಾತೀಯತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಏನಿದು ವಿವಾದ? ಇಲ್ಲಿದೆ ವಿವರ (Viral News).

ಬೆಂಗಳೂರು ಮೂಲದ ಕಂಟೆಂಟ್ ರೈಟಿಂಗ್ ಏಜೆನ್ಸಿಯ ಸಿಇಒ ಆಗಿರುವ ಅನುರಾಧಾ ತಿವಾರಿ (Anuradha Tiwari) ಎನ್ನುವವರು ಆಗಸ್ಟ್ 22ರಂದು ಸಾAಮಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಬೈಸೆಪ್ಸ್ ಫೋಟೊವನ್ನು ಪೋಸ್ಟ್ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ (Brahmin genes) ಎಂಬ ಶೀರ್ಷಿಕೆ ನೀಡಿದ್ದಾರೆ. ಇದೀಗ ಈ ಶಿರ್ಷಿಕೆ ಹಾಗೂ ಪೋಟೊ ವೈರಲ್ ಆಗಿದ್ದು, ಅನೇಕರು ಅನುರಾಧಾ ಅವರ ನಡೆಯನ್ನು ಟೀಕಿಸಿದ್ದಾರೆ. ಜಾತೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂದೆಲ್ಲ ಹೇಳಿದ್ದಾರೆ. ಸದ್ಯ ಈ ಎಲ್ಲ ಟೀಕೆಗಳಿಗೆ ಉತ್ತರಿಸಿ ಅವರು ಸರಣಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಮೊದಲ ಪೋಸ್ಟ್‌ನಲ್ಲಿ ರಸ್ತೆಯಲ್ಲಿ, ಸ್ಕೂಟರ್‌ ಪಕ್ಕ ನಿಂತ ಅನುರಾಧಾ ತಿವಾರಿ ಅವರು ಎಡಗೈನಲ್ಲಿ ಎಳನೀರು ಹಿಡಿದುಕೊಂಡು ಬಲಗೈಯ ಬೈಸೆಪ್ಸ್ ಪ್ರದರ್ಶಿಸಿರುವ ಫೋಟೊ ಶೇರ್‌ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ ಎಂದು ಬರೆದುಕೊಂಡಿದ್ದಾರೆ. ಇಷ್ಟಕ್ಕೇ ಉರಿದುಕೊಂಡ ಹಲವರು, ಇಂತಹ ಫಿಟ್‌ನೆಸ್ ಬ್ರಾಹ್ಮಣರಲ್ಲಿ ಮಾತ್ರ ಕಂಡುಬರಲು ಸಾಧ್ಯ ಎಂಬಂತಿದೆ ಈ ಪೋಸ್ಟ್‌ ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. ಜತೆಗೆ ಜಾತೀಯತೆಯನ್ನು ಎಳೆದು ತಂದಿದ್ದಾರೆ. ಯಾಕೆ ಜಾತಿ ಪದ್ಧತಿ ಇನ್ನೂ ಬೇರೂರಿದೆ? ಇವರು ಹೇಳುತ್ತಿರುವುದು ನೋಡಿದರೆ ಉನ್ನತ ಅಥವಾ ನಿರ್ದಿಷ್ಟ ವಂಶವಾಹಿಗಳು ಫಿಟ್ ಆಗಿದ್ದಾರೆ. ಫಿಟ್ ಆಗಿರಲು ವಂಶಾವಾಹಿ ಕಾರಣ ಎಂಬಂತಿದೆ ಎಂದು ಹೇಳಿದ್ದಾರೆ. ಹೀಗೆ ಸಾಕಷ್ಟು ಮಂದಿ ಈ ಪೋಸ್ಟ್ ಅನ್ನು ಟೀಕಿಸಿದ್ದಾರೆ.

ತಿರುಗೇಟು ಕೊಟ್ಟ ಅನುರಾಧಾ

ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಸ್ಟ್‌ 23ರಂದು ಮತ್ತೊಂದು ಪೋಸ್ಟ್‌ ಮೂಲಕ ಅನುರಾಧಾ ತಿರುಗೇಟು ನೀಡಿದರು. “ನಿರೀಕ್ಷಿಸಿದಂತೆ ‘ಬ್ರಾಹ್ಮಣ’ ಎಂಬ ಪದದ ಉಲ್ಲೇಖವು ಅನೇಕರನ್ನು ಕೆರಳಿಸಿದೆ. ನಿಜವಾದ ಜಾತಿವಾದಿಗಳು ಯಾರು ಎಂಬುದನ್ನು ಇದು ತಿಳಿಸುತ್ತದೆ. ಸಾಮಾನ್ಯ ವಿಭಾಗದವರು ವ್ಯವಸ್ಥೆಯಿಂದ ಏನನ್ನೂ ಪಡೆಯುವುದಿಲ್ಲ – ಯಾವುದೇ ಮೀಸಲಾತಿ ಇಲ್ಲ, ಉಚಿತ ಕೊಡುಗೆಗಳಿಲ್ಲ. ನಾವು ಎಲ್ಲವನ್ನೂ ಸ್ವಂತವಾಗಿ ಸಂಪಾದಿಸುತ್ತೇವೆ ಮತ್ತು ನಮ್ಮ ವಂಶಾವಳಿಯ ಬಗ್ಗೆ ಹೆಮ್ಮೆ ಪಡಲು ಎಲ್ಲ ಹಕ್ಕು ನಮಗಿದೆʼʼ ಎಂದು ಹೇಳಿದರು. ಇದಕ್ಕೆ ಹಲವರು ಬೆಂಬಲ ಸೂಚಿಸಿದರೆ, ಸಹಜವಾಗಿ ಟೀಕೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

ಆಗಸ್ಟ್‌ 24ರಂದು ಮತ್ತೊಂದು ಪೋಸ್ಟ್‌ ಮಾಡಿದ ಅವರು ʼʼದಲಿತ / ಮುಸ್ಲಿಂ / ಬುಡಕಟ್ಟು ಜನಾಂಗ ಎಂದು ಹೆಮ್ಮೆಯಿಂದ ಹೇಳಿದರೆ ತೊಂದರೆ ಇಲ್ಲ. ಆದರೆ ಬ್ರಾಹ್ಮಣ ಎಂದು ಹೆಮ್ಮೆಯಿಂದ ಹೇಳಿದರೆ ಟೀಕಿಸುತ್ತಾರೆ. ಒಟ್ಟಿನಲ್ಲಿ ಬ್ರಾಹ್ಮಣರಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಲು ಇಡೀ ವ್ಯವಸ್ಥೆ ಕೆಲಸ ಮಾಡುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು (ಆಗಸ್ಟ್‌ 25) ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡ ಅನುರಾಧಾ, ʼʼಬ್ರಾಹ್ಮಣರು ಇಂದು ತಮ್ಮ ಪೂರ್ಣ ಹೆಸರನ್ನು ಬಹಿರಂಗಪಡಿಸಲು ಹೆದರುತ್ತಾರೆ. ನಮ್ಮ ವಿರುದ್ಧ ತುಂಬಾ ದ್ವೇಷವನ್ನು ಹರಡಲಾಗಿದೆ. ಸಾಮಾಜಿಕ ನ್ಯಾಯ ಕಾರ್ಯಕರ್ತರು ಮತ್ತು ರಾಜಕಾರಣಿಗಳು ನಮ್ಮನ್ನು ಖಳನಾಯಕರನ್ನಾಗಿ ಮಾಡಿದ್ದಾರೆ. ನಾವು ಯಾರಿಗೂ ಹಾನಿ ಮಾಡುವುದಿಲ್ಲ. ನಮಗೆ ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ನಮ್ಮ ಜಾತಿಯ ಬಗ್ಗೆ ನಾವೇಕೆ ನಾಚಿಕೆಪಡಬೇಕು?ʼʼ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸದ್ಯ ಅವರ ಈ ಎಲ್ಲ ಪೋಸ್ಟ್‌ಗಳು ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಂತೂ ಹೌದು.

Continue Reading

ಕ್ರೀಡೆ

Shakib Al Hasan: ಚೆಂಡೆಸೆದು ಪಾಕ್​ ಆಟಗಾರ ರಿಜ್ವಾನ್​ ಕೆಣಕಿದ ಶಕಿಬ್​ ಅಲ್​ ಹಸನ್; ವಿಡಿಯೊ ವೈರಲ್​

VISTARANEWS.COM


on

Shakib Al Hasan
Koo

ರಾವಲ್ಪಿಂಡಿ: ಬಾಂಗ್ಲಾದೇಶದ(Pakistan vs Bangladesh) ಹಿರಿಯ ಕ್ರಿಕೆಟ್​ ಆಟಗಾರ ಶಕಿಬ್​ ಅಲ್​ ಹಸನ್​(Shakib Al Hasan) ಮೈದಾನದಲ್ಲಿ ಅತಿರೇಕದ ವರ್ತನೆ​ ತೋರುವು ಅವರ ಸಾಮಾನ್ಯ ಗುಣ. ಹಲವು ಬಾರಿ ಅವರು ಈ ರೀತಿಯ ವರ್ತನೆ ತೋರಿ ಟೀಕಿಗೆ ಗುರಿಯಾಗಿದ್ದರು. ಇದೀಗ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿಯೂ ಶಕಿಬ್​ ತಾಳ್ಮೆ ಕಳೆದುಕೊಂಡ(Angry Shakib Al Hasan) ಘಟನೆ ನಡೆದಿದೆ.

ಪಾಕಿಸ್ತಾನದ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್(Mohammad Rizwan)​ ಕ್ರೀಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದರು. ಶಕಿಬ್​ ಬೌಲಿಂಗ್​ ನಡೆಸಲು ಮುಂದಾದ ವೇಳೆ ರಿಜ್ವಾನ್​ ಏಕಾಏಕಿ ಹಿಂದಕ್ಕೆ ತಿರುಗಿ ಫೀಲ್ಡರ್​ಗೆ ಏನೋ ಸನ್ನೆ ಮಾಡಿ ಬ್ಯಾಟಿಂಗ್​ ನಡೆಸಲು ಸಿದ್ಧರಾಗಲಿಲ್ಲ. ಸಿಟ್ಟಿಗೆದ್ದ ಶಕಿಬ್​​ ಚೆಂಡನ್ನು ನೇರವಾಗಿ ರಿಜ್ವಾನ್ ಕಡೆ ಎಸೆದರು. ಚೆಂಡು ರಿಜ್ವಾನ್ ತೆಲೆಯ ಪಕ್ಕಾದಲ್ಲೇ ಸಾಗಿ ಕೀಪರ್ ಕೈ ಸೇರಿತು. ಈ ವೇಳೆ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಮಧ್ಯ ಪ್ರವೇಶಿಸಿ ಶಬಿಕ್​ಗೆ ವಾರ್ನಿಂಗ್​ ನೀಡಿದರು. ಸದ್ಯ ಈ ವಿಡಿಯೊ ವೈರಲ್(viral video)​ ಆಗಿದೆ.

2 ವಾರಗಳ ಹಿಂದೆ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಸೂಪರ್ ಓವರ್(Shakib Al Hasan super over) ಆಡಲು ನಿರಾಕರಿಸಿದ ವಿವಾರವಾಗಿ ಶಕಿಬ್​ ಸುದ್ದಿಯಾಗಿದ್ದರು. ಇವರ ಈ ಕೆಟ್ಟ ನಿರ್ಧಾರದಿಂದ ತಂಡ ಟೂರ್ನಿಯಿಂದಲೇ ಹೊರಬಿದ್ದಿತ್ತು.

ಎಲಿಮಿನೇಟರ್ ಪಂದ್ಯವಾದ ಬಾಂಗ್ಲಾ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ತಂಡದ ನಾಯಕ ಶಕಿಬ್‌ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕನಿಷ್ಟ 5 ಓವರ್‌ ಆಡಿಸಬೇಕು ಎಂದು ಹಠ ಹಿಡಿದರು. ಇದಕ್ಕೆ ಒಪ್ಪದ ಆಯೋಜಕರು ಪಂದ್ಯವನ್ನೇ ರದ್ದುಗೊಳಿಸಿದರು. ಈ ಪರಿಣಾಮ ಬಾಂಗ್ಲಾ ಟಗರ್ಸ್‌ ತಂಡ ಟೂನಿಯಿಂದಲೇ ಹೊರಬಿದ್ದಿತ್ತು.

ಇದನ್ನೂ ಓದಿ Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಆಡಲಿಳಿದು ವಿಶ್ವಕಪ್‌ ಆಡಿದ್ದರು.

ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಆಪಾದಿತ ಕೊಲೆಗೆ ಸಂಬಂಧಿಸಿದಂತೆ 147 ಜನರಲ್ಲಿ ಶಕಿಬ್​ ಕೂಡ ಸೇರಿದ್ದಾರೆ ಎಂದು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ರಫೀಕುಲ್ ಇಸ್ಲಾಂ ಎನ್ನುವ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕಿಬ್​ ಅಲ್ ಹಸನ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಕಿಬ್ ಮಾತ್ರವಲ್ಲ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 500 ಮಂದಿಯನ್ನು ಇದರಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

Continue Reading

ಕ್ರೀಡೆ

Cricket Meets Shooting: ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್​ ಕೊಟ್ಟ ಸೂರ್ಯಕುಮಾರ್​-ಮನು ಭಾಕರ್​

Cricket Meets Shooting: ಮನು ಭಾಕರ್​ ಅವರು ಈ ಫೋಟೊವನ್ನು ತಮ್ಮ ಟ್ವಿಟರ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, “ಟೀಮ್​ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು!” ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Cricket meets shooting
Koo

ಮುಂಬಯಿ: ಪ್ಯಾರಿಸ್​ ಒಲಿಂಪಿಕ್ಸ್​ ಶೂಟಿಂಗ್​ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್(Manu Bhaker)​ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರನ್ನು ಮುಂಬೈಯಲ್ಲಿ ಭೇಟಿಯಾಗಿದ್ದಾರೆ. ಉಭಯ ಕ್ರೀಡಾಪಟುಗಳು ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್​​ ಕೊಟ್ಟಿರುವುದು ನೆಟ್ಟಿಗರ ಗಮನಸೆಳೆದಿದೆ. ‘ಕ್ರಿಕೆಟ್ ಮೀಟ್ಸ್ ಶೂಟಿಂಗ್!'(Cricket Meets Shooting) ಎಂದು ನೆಟ್ಟಿಗರು ಈ ಫೋಟೊಗೆ ಕಮೆಂಟ್​ ಮಾಡಿದ್ದಾರೆ.

ಒಲಿಂಪಿಕ್ಸ್​ ಪದಕ ಗೆದ್ದ ಬಳಿಕ ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್​ ತಮ್ಮ ನೆಚ್ಚಿನ ಕಾರ್ಯ ಚಟುವಟಿಯಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈಗೆ ಆಗಮಿಸಿದ್ದ ವೇಳೆ ಕ್ರಿಕೆಟಿಗ ಸೂರ್ಯಕುಮಾರ್​ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯಕುಮಾರ್​ ಗನ್​ ಹಿಡಿದಂತೆ, ಮನು ಭಾಕರ್​ ಬ್ಯಾಟ್​ ಬೀಸಿದಂತೆ ನಗುಮುಗದಿಂದಲೇ ಫೋಟೊ ತೆಗೆಸಿಕೊಂಡಿದ್ದಾರೆ.

ಮನು ಭಾಕರ್​ ಅವರು ಈ ಫೋಟೊವನ್ನು ತಮ್ಮ ಟ್ವಿಟರ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, “ಟೀಮ್​ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು!” ಎಂದು ಬರೆದುಕೊಂಡಿದ್ದಾರೆ. ಒಲಿಂಪಿಕ್ಸ್​ ಪದಕ ಗೆದ್ದಾಗ ಮನು ಭಾಕರ್​ಗೆ ಸೂರ್ಯಕುಮಾರ್​ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ Manu Bhaker: ನಟ ವಿಜಯ್​ ಗೊತ್ತು, ಸಿಎಂ ಸ್ಟಾಲಿನ್‌ ಗೊತ್ತಿಲ್ಲ ಎಂದು ನಕ್ಕ ಮನು ಭಾಕರ್; ವಿಡಿಯೊ ವೈರಲ್​​

ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು. ಸದ್ಯ ದೇಶೀಯ ಕ್ರಿಕೆಟ್​ ಆಡಲಿರುವ ಸೂರ್ಯಕುಮಾರ್​ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿಯೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಗಸ್ಟ್​ 27ರಂದು ನಡೆಯುವ “ಬುಚ್ಚಿಬಾಬು ಟ್ರೋಫಿ’ ಆಹ್ವಾನಿತ(Buchi Babu Tournament) ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಇದಾದ ಬಳಿಕ ದುಲೀಪ್​ ಟ್ರೋಫಿ ಆಡಲಿದ್ದಾರೆ.

 22 ವರ್ಷದ ಮನು ಭಾಕರ್ ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ಪದಕ ಗೆದ್ದ ಬಳಿಕ ಭಾಕರ್(Manu Bhaker)​ ಅವರ ಜಾಹೀರಾತು ಮೌಲ್ಯದಲ್ಲಿ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಒಲಿಂಪಿಕ್ಸ್​ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್​ ಆಕ್ಟಿವ್​ವೇರ್​ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.

Continue Reading

ವಿದೇಶ

Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

Israel vs Hezbollah War: ಇಸ್ರೇಲ್‌ ವಾಯುಪಡೆಯ ಸಮರ ಹೆಲಿಕಾಪ್ಟರ್‌ಗಳು ಲೆಬನಾನ್‌ ಅನ್ನು ಟಾರ್ಗೆಟ್‌ ಮಾಡಿದ್ದಲ್ಲದೇ, ಗಡಿ ದಾಟಿ ಬಂದ ಬಂದೂಕುಧಾರಿಗಳನ್ನೂ ಹತ್ಯೆಗೈದಿದೆ. ಜತೆಗೆ ರಾಕೆಟ್​ ದಾಳಿ ಕೂಡ ನಡೆಸಿ ಹಲವು ಕಟ್ಟಡಗಳನ್ನು ನಾಶಪಡಿಸಿದೆ.

VISTARANEWS.COM


on

Israel vs Hezbollah War
Koo

ಟೆಲ್‌ ಅವಿವ್‌: ತಮ್ಮ ಮೇಲೆ ಹಠಾತ್‌ ಆಕ್ರಮಣಗೈಯಲು ಮುಂದಾಗಿರುವ ಹೆಜ್ಬುಲ್ಲಾ ಉಗ್ರ ಸಂಘಟನೆಗೆ ಇಸ್ರೇಲ್(Israel vs Hezbollah War)​ವೈಮಾನಿಕ ರಾಕೆಟ್​ ದಾಳಿಯ ಬಿಸಿ ಮುಟ್ಟಿಸಲು ಆರಂಭಿಸಿದೆ. ಭಾನುವಾರ ಬೆಳಗ್ಗಿನ ಜಾವ ಲೆಬನಾನ್​ ಮೇಲೆ ದಾಳಿ ಆರಂಭಿಸಿದೆ. ಅತ್ತ ಹೆಜ್ಬುಲ್ಲಾ ಉಗ್ರ ಸಂಘಟನೆ ಕೂಡ ಪ್ರತಿ ದಾಳಿ ನಡೆಸುತ್ತಿರುವ ಕಾರಣ ಇಸ್ರೇಲ್​ನಲ್ಲಿ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ದಾಳಿಯ ಭೀಕರ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸಿದಂತೆ ರಾಕೆಟ್​ಗಳು ಸಿಡಿಯುತ್ತಿವೆ.

ಇಸ್ರೇಲ್‌ ವಾಯುಪಡೆಯ ಸಮರ ಹೆಲಿಕಾಪ್ಟರ್‌ಗಳು ಲೆಬನಾನ್‌ ಅನ್ನು ಟಾರ್ಗೆಟ್‌ ಮಾಡಿದ್ದಲ್ಲದೇ, ಗಡಿ ದಾಟಿ ಬಂದ ಬಂದೂಕುಧಾರಿಗಳನ್ನೂ ಹತ್ಯೆಗೈದಿದೆ. ಜತೆಗೆ ರಾಕೆಟ್​ ದಾಳಿ ಕೂಡ ನಡೆಸಿ ಹಲವು ಕಟ್ಟಡಗಳನ್ನು ನಾಶಪಡಿಸಿದೆ. ವರದಿಗಳ ಪ್ರಕಾರ 300 ರಾಕೆಟ್​ಗಳ ದಾಳಿಯನ್ನು ನಡೆಸಲು ಇಸ್ರೇಲ್​ ಮಿಲಿಟರಿ ಪಡೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸದ್ಯ ಯಾವುದೇ ಸಾವು ನೋವುಗಳ ಬಗ್ಗೆ ತಿಳಿದುಬಂದಿಲ್ಲ. ಹಲವು ಕಟ್ಟಡಗಳು ಈಗಾಗಲೇ ದ್ವಂಸಗೊಂಡಿದೆ. ಲೆಬನಾನ್ ಗಡಿ ಭಾಗದಲ್ಲಿರುವ ನಾಗರಿಕರಿಗೆ ಇಸ್ರೇಲ್​ ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆಯನ್ನು ಕೂಡ ನೀಡಿದೆ.

ಹೆಜ್ಬುಲ್ಲಾ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶದ ಕಡೆಗೆ 150 ಕ್ಕೂ ಹೆಚ್ಚು ಸ್ಪೋಟಕಗಳನ್ನು ಉಡಾವಣೆ ಮಾಡಿದೆ. ನಾವು ಭಯೋತ್ಪಾದಕರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದೇವೆ, ಅವರು ನಾಗರಿಕರನ್ನು ಗುರಿಯಾಗಿಸುತ್ತಾರೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದೆ. ಮೂರು ದಿನಗಳ ಹಿಂದಷ್ಟೇ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್‌ ತನ್ನ ವಶಕ್ಕೆ ಪಡೆದು­ಕೊಂಡಿರುವ ಗೋಲನ್‌ ಹೈಟ್ಸ್‌ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾ­ಯಿಸಿತ್ತು. ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು.

ಇದನ್ನೂ ಓದಿ Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಯುದ್ಧದಲ್ಲೇ ಮುಳುಗಿರುವ ಇಸ್ರೇಲ್​​ಗೆ ಮತ್ತಷ್ಟು ಭಿಕ್ಕಟ್ಟಿನ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಒಂದೆಡೆ ಗಾಜಾ, ಇನ್ನೊಂದು ಕಡೆ ರಫಾದಲ್ಲಿ ಹಮಾಸ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಜುಲೈ 28 ರಂದು Hezbollah, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್​ ಮೇಲೆ ರಾಕೆಟ್ ದಾಳಿ ನಡೆಸಿತ್ತು. ದಾಳಿ ವೇಳೆ 12 ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್​ಗೆ ಪಾಠ ಕಲಿಸಿದಂತೆ ಹೆಜ್ಬೊಲ್ಲಾಗೂ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ರಾಕೆಟ್ ದಾಳಿಯ ಎರಡು ದಿನಗಳ ನಂತರ ಜುಲೈ 30 ರಂದು ಇಸ್ರೇಲ್, ಹೆಜ್ಬೊಲ್ಲಾದ ಉನ್ನತ ಕಮಾಂಡರ್​​ ಫೌದ್ ಶುಕರ್​ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್​ನ 12 ಮಕ್ಕಳ ಸಾವಿಗೆ ಶುಕರ್ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು.

Continue Reading
Advertisement
New Fashion Trend
ಫ್ಯಾಷನ್16 mins ago

New Fashion Trend : ಯುವತಿಯರನ್ನು ಆಕರ್ಷಿಸುತ್ತಿದೆ ಇಂಡೊ-ವೆಸ್ಟರ್ನ್‌ ಡಿಸೈನ್‌‌‌ನ ಮ್ಯಾಚಿಂಗ್‌ ಸೀರೆ

Krishnadevaraya Palika Bazar
ಕರ್ನಾಟಕ24 mins ago

Krishnadevaraya Palika Bazaar: ಬೆಂಗಳೂರಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಉದ್ಘಾಟಿಸಿದ ಸಿಎಂ

Sound of UI
ಸಿನಿಮಾ40 mins ago

Sound of UI : ಸದ್ದು ಮಾಡುತ್ತಿದೆ UI ಚಿತ್ರದ ‘ಸೌಂಡ್ ಆಫ್ ಯುಐ’

Karkala Physical Abuse
ಕರ್ನಾಟಕ1 hour ago

Karkala Physical Abuse: ಕಾರ್ಕಳದ ಅತ್ಯಾಚಾರ ಸಂತ್ರಸ್ತೆ ರಕ್ತದಲ್ಲಿ ಡ್ರಗ್ಸ್ ಪತ್ತೆ; ಆರೋಪಿಗಳ ರಿಪೋರ್ಟ್‌ ನೆಗೆಟಿವ್!

Paul Valthaty
ಪ್ರಮುಖ ಸುದ್ದಿ1 hour ago

Paul Valthaty : ಅಮೆರಿಕದ ಕ್ರಿಕೆಟ್‌ ತಂಡದ ಕೋಚಿಂಗ್ ಹುದ್ದೆ ವಹಿಸಿಕೊಂಡ ಐಪಿಎಲ್ ಸ್ಟಾರ್‌ ಪಾಲ್ ವಾಲ್ತಾಟಿ

Krishna Janmastami 2024
ಧಾರ್ಮಿಕ2 hours ago

Krishna Janmastami 2024: ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಏಕೆ?

KAS Prelims exam
ಕರ್ನಾಟಕ2 hours ago

KAS Prelims exam: ಕೆಎಎಸ್‌ ಪ್ರಿಲಿಮ್ಸ್ ಮುಂದೂಡಲು ರಾಜ್ಯಪಾಲರಿಗೆ ಅಭ್ಯರ್ಥಿಗಳ ನಿಯೋಗ ಮನವಿ

Crime News
ದೇಶ2 hours ago

Murder Case : ಭಕ್ತನ ಮೈಮೇಲೆ ದೆವ್ವ ಸೇರಿದೆ ಎಂದು ಚೆನ್ನಾಗಿ ಬಡಿದು ಕೊಂದ ಚರ್ಚ್‌ ಫಾದರ್‌!

Gruha Lakshmi Scheme
ಕರ್ನಾಟಕ3 hours ago

Gruha Lakshmi Scheme: ಗೃಹಲಕ್ಷ್ಮೀ ದುಡ್ಡಿನಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ರೇಷ್ಮೆ ಸೀರೆ ಕಳುಹಿಸಿದ ಲಕ್ಷ್ಮಿ ಹೆಬ್ಬಾಳ್ಕರ್

crime news
ಪ್ರಮುಖ ಸುದ್ದಿ3 hours ago

Crime News : ತನ್ನನ್ನು ಬಿಟ್ಟು ಹೆಂಡತಿಗೆ ಹೆಚ್ಚು ಹಣ ಕೊಡುತ್ತಿ ದ್ದ ಪ್ರಿಯತಮನ ಮರ್ಮಾಂಗ ಕತ್ತರಿಸಿದ ಮಹಿಳೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ1 day ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌