Krishna Janmastami 2024: ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಏಕೆ? - Vistara News

ಧಾರ್ಮಿಕ

Krishna Janmastami 2024: ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಏಕೆ?

ಕೃಷ್ಣ ಬೆಣ್ಣೆ ಪ್ರಿಯ, ಬೆಣ್ಣೆ ಕಳ್ಳ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಜನ್ಮಾಷ್ಟಮಿಯಂದು (Krishna janmastami 2024) ಕೃಷ್ಣನಿಗೆ ಬೆಣ್ಣೆಯನ್ನು ಸಮರ್ಪಿಸುವುದು ಒಂದು ಕಾರಣ. ಜನ್ಮಾಷ್ಟಮಿಯಲ್ಲಿ ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಪ್ರಮುಖ ಸಂಪ್ರದಾಯವಾಗಿದೆ. ಆದರೆ ಬೆಣ್ಣೆ ಏಕೆ ಅಂತಹ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಹಿಂದೆ ಹಲವು ಕಥೆಯೇ ಇದೆ. ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಸಮರ್ಪಿಸುವ ಮೊದಲು ಅದರ ಮಹತ್ವವನ್ನು ತಿಳಿದುಕೊಳ್ಳಿ.

VISTARANEWS.COM


on

Krishna Janmastami 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆಮನೆಯಲ್ಲೂ ಆಚರಿಸಲ್ಪಡುವ ಜನ್ಮಾಷ್ಟಮಿಯು (Krishna janmastami 2024) ರೋಮಾಂಚನವನ್ನು ಉಂಟು ಮಾಡುವ ಹಿಂದೂ ಹಬ್ಬವಾಗಿದೆ (hindu festival). ಪ್ರತಿ ವರ್ಷ ಭಗವಾನ್ ಕೃಷ್ಣನ ಜನ್ಮ ದಿನವನ್ನು ಆಚರಿಸುವ ಮೂಲಕ ಮನೆ ಮನೆಯಲ್ಲೂ, ಮನ ಮನದಲ್ಲೂ ಕೃಷ್ಣನಿದ್ದಾನೆ ಎಂಬುದನ್ನು ಸಾರಲಾಗುತ್ತದೆ. ಈ ಬಾರಿ ಸೋಮವಾರ ಮತ್ತು ಮಂಗಳವಾರ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಈ ದಿನ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಉಪವಾಸ ಮಾಡುತ್ತಾರೆ, ವಿವಿಧ ಕಾರ್ಯಕ್ರಮಗಳನ್ನು ಆಚರಿಸುತ್ತಾರೆ. ಸಂಘ ಸಂಸ್ಥೆಗಳು ರಾಧಾ ಕೃಷ್ಣ, ಯಶೋಧ ಕೃಷ್ಣ ಸ್ಪರ್ಧೆಯನ್ನು ಆಯೋಜಿಸುತ್ತವೆ. ರಾಧಾ ಕೃಷ್ಣ ರಾಸಲೀಲೆ, ಮೊಸರು ಕುಡಿಕೆ ಉತ್ಸವವನ್ನು ನಡೆಸುತ್ತವೆ. ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಮಡಿಕೆ ಒಡೆಯುವುದು ಒಂದು ಪ್ರಮುಖ ಸಂಪ್ರದಾಯವಾಗಿದೆ. ಎತ್ತರದಲ್ಲಿ ಕಟ್ಟಿರುವ ಮೊಸರು, ಬೆಣ್ಣೆ ತುಂಬಿದ ಮಡಕೆಯನ್ನು ತಲುಪಲು ಮಾನವ ಪಿರಮಿಡ್‌ಗಳನ್ನು ರಚಿಸುವುದನ್ನು ನೋಡಲು ಕಣ್ಣಿಗೆ ಹಬ್ಬದಂತಿರುತ್ತದೆ.


ಜನ್ಮಾಷ್ಟಮಿಯಲ್ಲಿ ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಪಾಲಿಸಬೇಕಾದ ಪ್ರಮುಖ ಸಂಪ್ರದಾಯವಾಗಿದೆ. ಆದರೆ ಬೆಣ್ಣೆ ಏಕೆ ಅಂತಹ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಹಿಂದೆ ಒಂದು ಕಥೆಯೇ ಇದೆ.

ಗೋಪಾಲಕರ ಸಮುದಾಯದಲ್ಲಿ ಬೆಳೆದ ಕೃಷ್ಣನಿಗೆ ಹಸುಗಳೆಂದರೆ ಬಹಳ ಪ್ರೀತಿ. ಅವುಗಳ ನಡುವೆಯೇ ಬೆಳೆದಿರುವ ಅವನು ಹಾಲು ಮತ್ತು ಅದರ ಉತ್ಪನ್ನಗಳ ಮೇಲೆ ಸಹಜವಾಗಿ ಪ್ರೀತಿ ಬೆಳೆಸಿಕೊಂಡಿದ್ದಾನೆ. ಬೆಣ್ಣೆಯ ಮೇಲೆ ಕೃಷ್ಣನ ಒಲವು ಗೋಪಾಲಕ ಸಮಾಜದಲ್ಲಿ ಅವನ ಆಳವಾದ ಬೇರುಗಳನ್ನು ಪ್ರತಿಬಿಂಬಿಸುತ್ತದೆ.


ಬಾಲ್ಯದಲ್ಲಿ ಕೃಷ್ಣನು ʼಬೆಣ್ಣೆ ಕಳ್ಳʼ ಎಂಬ ಅಡ್ಡಹೆಸರನ್ನು ಹೊಂದಿದ್ದ. ಅವನು ತನ್ನ ಸ್ವಂತ ಮನೆಯಿಂದ ಮಾತ್ರವಲ್ಲದೆ ಗೋಕುಲದಲ್ಲಿರುವ ನೆರೆಹೊರೆಯವರಿಂದಲೂ ಬೆಣ್ಣೆ ಮತ್ತು ಮೊಸರು ಕದ್ದು ತಿಂದು, ಸ್ನೇಹಿತರಿಗೂ ತಿನ್ನಿಸುತ್ತಿದ್ದ. ಇದು ಜನರಿಗೆ ಕೋಪ ತರಿಸಿದರೂ ಕೃಷ್ಣನ ಪ್ರೀತಿ ಅದು ಬೆಣ್ಣೆಯಂತೆ ಕರಗುವ ಹಾಗೆ ಮಾಡುತ್ತಿತ್ತು. ಕೃಷ್ಣನ ಮೋಡಿ ಹೇಗಿತ್ತೆಂದರೆ ಕಳ್ಳತನದ ಹೊರತಾಗಿಯೂ ಅವನು ಎಲ್ಲರ ಹೃದಯವನ್ನು ಗೆಲ್ಲುತ್ತಿದ್ದ.


ಕೃಷ್ಣನಿಗೆ ಬೆಣ್ಣೆಯ ಮೇಲಿನ ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ ಅವನ ತಾಯಿ ಯಶೋದೆ, ಅವನ ಪ್ರೀತಿಯ ರಾಧೆ ಮತ್ತು ಗೋಪಿಯರು ಅವನಿಗಾಗಿ ವಿಶೇಷವಾಗಿ ಬೆಣ್ಣೆಯನ್ನು ತಯಾರಿಸುತ್ತಿದ್ದರು. ತಮ್ಮ ಕೈಗಳಿಂದ ತಿನ್ನಿಸುತ್ತಿದ್ದರು. ಕೃಷ್ಣನು ತಾವು ಪ್ರೀತಿಯಿಂದ ಮಾಡಿದ ಬೆಣ್ಣೆಯನ್ನು ಸವಿಯುವುದನ್ನು ನೋಡಿ ಅವರ ಹೃದಯದಲ್ಲಿ ಅಪಾರ ಆನಂದ ತುಂಬುತ್ತಿತ್ತು.

ಇದನ್ನೂ ಓದಿ: Yadgiri News: ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಮಡಕೆಯನ್ನು ಒಡೆದು ಬೆಣ್ಣೆ ತಿನ್ನುವುದು ಸಂತೋಷ ಮತ್ತು ಪ್ರೀತಿಯಿಂದ ತುಂಬಿರುತ್ತದೆ ಎಂಬುದನ್ನು ಕೃಷ್ಣನೇ ಸಾರಿದ್ದ. ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಮತ್ತು ಅನಗತ್ಯ ಒತ್ತಡ ಅಥವಾ ನಿರ್ಬಂಧಗಳಿಲ್ಲದೆ ಆನಂದಿಸಲು ಅವಕಾಶ ನೀಡಬೇಕು ಎಂಬುದನ್ನು ಈ ಕಥೆಗಳು ಬಿಂಬಿಸುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Krishna janmastami 2024: ಕೃಷ್ಣ ಜನ್ಮಾಷ್ಟಮಿಗೆ ಏನೆಲ್ಲ ಸಿಹಿ ತಿನಿಸು ತಯಾರಿಸಬಹುದು? ಇಲ್ಲಿದೆ ಟಿಪ್ಸ್‌

ನಾಲಿಗೆಯ ರುಚಿಯನ್ನು ತೃಪ್ತಿಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ (Krishna janmastami 2024) ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಧಾರಾಳವಾಗಿ ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.

VISTARANEWS.COM


on

By

Krishna janmastami 2024
Koo

ಕೃಷ್ಣ ಜನ್ಮಾಷ್ಟಮಿ (Krishna janmastami 2024) ಎಂದರೆ ದೇವರಿಗೆ ನೈವೇದ್ಯ ಮಾಡಲು, ಬಂದಂಥ ಅತಿಥಿಗಳನ್ನು ಸತ್ಕರಿಸಲು ಮನೆಯಲ್ಲಿ ಬಗೆಬಗೆಯ ಖಾದ್ಯ, ಸಿಹಿ ತಿಂಡಿಗಳನ್ನು (sweets) ಮಾಡಲೇಬೇಕು. ಹಾಗಂತ ಹಬ್ಬದ ಸಂದರ್ಭದಲ್ಲಿ ಆರೋಗ್ಯವನ್ನೂ ಕಡೆಗಣಿಸುವಂತಿಲ್ಲ. ಹೀಗಾಗಿ ಈ ಬಾರಿ ಜನ್ಮಾಷ್ಟಮಿಯಲ್ಲಿ (janmastami) ಸಿಹಿ ಜೊತೆಗೆ ಆರೋಗ್ಯಕರವಾದ (Healthy Sweets) ಖಾದ್ಯಗಳನ್ನು ಮನೆಯಲ್ಲೇ ಮಾಡಲು ಟ್ರೈ ಮಾಡಿನೋಡಬಹುದು.

ನಾಲಿಗೆಯ ರುಚಿಯನ್ನು ತೃಪ್ತಿ ಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.


ಖರ್ಜೂರ ಮತ್ತು ಒಣ ಹಣ್ಣಿನ ಲಡ್ಡು

ಖರ್ಜೂರದ ನೈಸರ್ಗಿಕ ಮಾಧುರ್ಯವನ್ನು ವಿವಿಧ ಒಣ ಹಣ್ಣುಗಳೊಂದಿಗೆ ಸವಿಯಬಹುದು. ಖರ್ಜೂರದ ಬೀಜಗಳನ್ನು ತೆಗೆದು ಹಾಲಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ಇಡಿ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳಂತಹ ಬೀಜಗಳನ್ನು ಖರ್ಜೂರದೊಂದಿಗೆ ಸೇರಿಸಿ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಫ್ರಿಜ್‌ನಲ್ಲಿ ಇಡಿ. ಜನ್ಮಾಷ್ಟಮಿಗೆ ಪರಿಪೂರ್ಣವಾದ ಆರೋಗ್ಯಕರ, ಶಕ್ತಿ-ಉತ್ತೇಜಿಸುವ ಲಡ್ಡು ಇದಾಗಿದೆ.

Krishna janmashtami
Krishna janmashtami


ಸೀಡ್ಸ್ ಲಡ್ಡು

ಚಿಯಾ, ಫ್ಲಾಕ್ಸ್ ಮತ್ತು ಸೂರ್ಯಕಾಂತಿಗಳಂತಹ ಬೀಜಗಳ ಮಿಶ್ರಣವನ್ನು ಲಘುವಾಗಿ ಹುರಿದು ಪುಡಿ ಮಾಡಿ. ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಲಡ್ಡು ಮಾಡಿ. ಪೋಷಕಾಂಶಗಳಿರುವ ಈ ಲಡ್ಡಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ ಸಮೃದ್ಧವಾಗಿವೆ.

Krishna janmashtami
Krishna janmashtami


ಫ್ರೂಟ್ ಸಲಾಡ್

ಬಾಳೆಹಣ್ಣು, ಸೇಬು, ದ್ರಾಕ್ಷಿ ಮತ್ತು ದಾಳಿಂಬೆಗಳಂತಹ ತಾಜಾ ಹಣ್ಣುಗಳನ್ನು ಕತ್ತರಿಸಿ ಹಾಲಿನ ಕೆನೆಯೊಂದಿಗೆ ಸೇರಿಸಿ. ಜೇನುತುಪ್ಪ ಬೆರೆಸಿ ಸಿಹಿಗೊಳಿಸಿ. ಈ ತಿಳಿ ಮತ್ತು ಕೆನೆ ಖಾದ್ಯವು ರುಚಿಕರವಾದದ್ದು ಮಾತ್ರವಲ್ಲದೆ ಅಗತ್ಯವಾದ ಜೀವಸತ್ವ, ಖನಿಜಾಂಶಗಳನ್ನು ಹೊಂದಿದೆ.


ಡ್ರೈ ಫ್ರೂಟ್ ಚಿಕ್ಕಿ

ಒಣ ಹಣ್ಣುಗಳಾದ ಶೇಂಗಾ, ಬಾದಾಮಿ ಮತ್ತು ಎಳ್ಳನ್ನು ಬೆಲ್ಲದೊಂದಿಗೆ ಹುರಿದು ಬೆರೆಸಿ ಡ್ರೈಫ್ರೂಟ್ ಚಿಕ್ಕಿ ತಯಾರಿಸಿ. ಮಿಶ್ರಣವನ್ನು ತುಪ್ಪ ಹಚ್ಚಿದ ಟ್ರೇಗೆ ಸುರಿಯಿರಿ. ಅದನ್ನು ತಣ್ಣಗಾಗಲು ಬಿಡಿ, ತದನಂತರ ತುಂಡುಗಳಾಗಿ ಕತ್ತರಿಸಿ. ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

ಇದನ್ನೂ ಓದಿ: Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!


ಡ್ರೈಫ್ರೂಟ್ ಲಡ್ಡು

ವಾಲ್‌ನಟ್ಸ್, ಬಾದಾಮಿ, ಗೋಡಂಬಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳಾಗಿ ಆಕಾರ ಮಾಡಿ ಮತ್ತು ತಣ್ಣಗಾಗಿಸಿ. ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಇದು ನೈಸರ್ಗಿಕ ಸಿಹಿಯನ್ನು ನೀಡುತ್ತದೆ.

Continue Reading

ಧಾರ್ಮಿಕ

Yadgiri News: ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಯಾದಗಿರಿ ಜಿಲ್ಲೆಯ (Yadgiri News) ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶುಕ್ರವಾರ 101 ದಂಪತಿಗಳಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

VISTARANEWS.COM


on

Yadgiri News
Koo

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶುಕ್ರವಾರ 101 ದಂಪತಿಗಳಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ (Yadgiri News) ನೆರವೇರಿತು.

ಶ್ರಾವಣ ಮಾಸದ ಅಂಗವಾಗಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಂಘದ ವ್ಯವಸ್ಥಾಪಕ ನರೇಂದ್ರ ರಾಠೋಡ ಅವರ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮ ನಡೆಸಲಾಯಿತು. ವಿವಿಧ ಭಾಗದಿಂದ ಆಗಮಿಸಿದ ದಂಪತಿಗಳು ಶ್ರೀ ಲಕ್ಷ್ಮಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: 7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ?

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗುರುಮಠಕಲ್‌ನ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಆಶೀರ್ವಚನ ನೀಡಿ‌ ಮಾತನಾಡಿ, ಶ್ರಾವಣ ಮಾಸದ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಂಡಿದ್ದು ಉತ್ತಮ ಧಾರ್ಮಿಕ ಕಾರ್ಯ ಇದಾಗಿದೆ ಎಂದರು.

ಮಹಾ ನೈವೇದ್ಯ, ಮಹಾಮಂಗಳಾರತಿ ವಿವಿಧ ಪೂಜಾ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಜಿಲ್ಲೆಯ ವಿವಿಧ ಭಾಗದಿಂದ ಭಕ್ತರು ಆಗಮಿಸಿ, ಶ್ರೀ ಲಕ್ಷ್ಮಿ ದೇವಿಯ ದರ್ಶನ ಪಡೆದರು.

ಇದನ್ನೂ ಓದಿ:UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ ರಿಲೀಸ್‌; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಕಾರ್ಯಕ್ರಮದಲ್ಲಿ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಅನಂತಪ್ಪ ಯದ್ಲಾಪುರ, ಕಾಶಿನಾಥ ರಾಠೋಡ, ವಿರೇಶ್ ಆವಂಟಿ, ಗುರು ತಲಾರಿ, ಶಂಕರ ನಾಯಕ, ಶರಣು, ಸಂಜೀವ್ ಚಂದಾಪುರ, ಅಯ್ಯಪ್ಪ ರಾಠೋಡ, ಮನೋಹರ್ ರಾಠೋಡ, ರಾಮು ಪವಾರ್, ರವಿಕುಮಾರ ಹಾಗೂ ಇನ್ನಿತರರು ಇದ್ದರು.

Continue Reading

ಶ್ರೀ ಕೃಷ್ಣ ಜನ್ಮಾಷ್ಟಮಿ

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Krishna janmastami: ಇನ್ನೇನು ಕೃಷ್ಣಜನ್ಮಾಷ್ಟಮಿ ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಬಾಲಗೋಪಾಲನ ನಾನಾ ಅವತಾರಗಳ ಫೋಟೋಶೂಟ್‌ಗಳು ಆರಂಭಗೊಂಡಿದೆ. ಮುದ್ದು ಬೆಣ್ಣೆ ಕೃಷ್ಣನಿಂದಿಡಿದು, ರಾಧಾ-ಕೃಷ್ಣರ ಅಂದದ ಪೋಟ್ರೈಟ್‌ಗಳಿಗೆ ಮಾನ್ಯತೆ ಹೆಚ್ಚಾಗಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

By

Here are 4 ideas for krishna janmashtami photoshoot
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣಜನ್ಮಾಷ್ಟಮಿ (Krishna janmastami) ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಕೃಷ್ಣನ ನಾನಾ ಅವತಾರಗಳ ಫೋಟೋಶೂಟ್‌ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ, ಎಲ್ಲೆಡೆ ಕೃಷ್ಣಜನ್ಮಾಷ್ಟಮಿ ಥೀಮ್‌ ಫೋಟೋಶೂಟ್‌ ಟ್ರೆಂಡಿಯಾಗಿದೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಕೃಷ್ಣನ ಅವತಾರಕ್ಕೂ ಫೋಟೋಶೂಟ್‌ :

“ಪ್ರತಿ ಮನೆಯಲ್ಲೂ ಮಕ್ಕಳಿಗೆ ಒಮ್ಮೆಯಾದರೂ ಸರಿಯೇ! ಕೃಷ್ಣ ಅಥವಾ ರಾಧೆಯ ಅವತಾರವನ್ನು ಹಾಕಿಸಿರುತ್ತಾರೆ. ಫೋಟೋ ತೆಗೆಸಿ ಸಂತಸ ಪಟ್ಟಿರುತ್ತಾರೆ. ಬಾಲ ಕೃಷ್ಣನಿಂದಿಡಿದು ರಾಧಾ-ಕೃಷ್ಣನಂತೆ ಫೋಟೋಶೂಟ್‌ ಮಾಡಿಸುವುದು ಹೆಚ್ಚಾಗಿದೆ. ಈ ಕಾನ್ಸೆಪ್ಟ್ ಇದೀಗ ಮತ್ತಷ್ಟು ಬೆಳವಣಿಗೆ ಕಂಡಿದೆ. ಚಿಣ್ಣರಿಗೆ ಮಾತ್ರವಲ್ಲ, ಇದೀಗ ಟೀನೇಜ್‌ ಹುಡುಗ-ಹುಡುಗಿಯರು ಕೂಡ ರಾಧಾ-ಕೃಷ್ಣರ ಫೋಟೋಶೂಟ್‌ ಮಾಡಿಸಲಾರಂಭಿಸಿದ್ದಾರೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಇದಕ್ಕೆ ಪೂರಕ ಎಂಬಂತೆ, ಪೌರಾಣಿಕ ಹಿನ್ನೆಲೆಯ ಫೋಟೋಶೂಟ್‌ ಮಾಡುವ ಫೋಟೋಗ್ರಾಫರ್ಸ್ ಕೂಡ ಸುಲಭವಾಗಿ ದೊರೆಯುತ್ತಿದ್ದಾರೆ. ಪ್ರಿ ಹಾಗೂ ವೆಡ್ಡಿಂಗ್‌ ಶೂಟ್‌ ಮಾಡುವವರು ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾನ್ಸೆಪ್ಟ್ಗಳಿಗೂ ಫೋಟೋಶೂಟ್‌ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಕೃಷ್ಣಜನ್ಮಾಷ್ಟಮಿಯ ಫೋಟೋಶೂಟ್‌ ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಫೋಟೋಗ್ರಾಫರ್‌ .

Here are 4 ideas for krishna janmashtami photoshoot

ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ :

ಪ್ರತಿ ವರ್ಷವೂ ಕೃಷ್ಣನ ಫೋಟೋಶೂಟ್‌ಗಾಗಿಯೇ ಸಾಕಷ್ಟು ಸ್ಟುಡಿಯೋಗಳು ಪ್ಯಾಕೇಜ್‌ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೇ ಕೃಷ್ಣನ ಅಲಂಕಾರಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ಒದಗಿಸುತ್ತವೆ. ಅಷ್ಟೇಕೆ? ಈ ಪ್ಯಾಕೇಜ್‌ನಲ್ಲಿ ಫೋಟೋಗ್ರಾಫರ್‌ನಿಂದಿಡಿದು, ಬಾಡಿಗೆಗೆ ಫೋಟೋ ಕ್ಲಿಕ್ಕಿಸುವ ಸ್ಥಳ ಅಂದರೇ, ಸ್ಟಾಟ್‌ ಸೇರಿದಂತೆ ಎಲ್ಲವನ್ನೂ ಪ್ಯಾಕೇಜ್‌ಗೆ ತಕ್ಕಂತೆ ಒದಗಿಸುತ್ತವೆ. ಹಣ ನೀಡಿದರಾಯಿತಷ್ಟೇ! ಎನ್ನುತ್ತಾರೆ ಬಾಲಕೃಷ್ಣನ ಫೋಟೋಶೂಟ್‌ ಮಾಡಿಸಿದ ಪೋಷಕರಾದ ಕಿರಣ್‌ ಹಾಗೂ ಲಕ್ಷ್ಮಿ.

Here are 4 ideas for krishna janmashtami photoshoot

ಕೃಷ್ಣ ಜನ್ಮಾಷ್ಟಮಿ ಫೋಟೋಶೂಟ್‌ಗೆ 4 ಐಡಿಯಾ :

· ಆನ್‌ಲೈನ್‌ನಲ್ಲೂ ಸಾಕಷ್ಟು ಫೋಟೋ ಸ್ಟುಡಿಯೋಗಳು ಬಜೆಟ್‌ ಫ್ರೆಂಡ್ಲಿ ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ ನೀಡುತ್ತವೆ ಉಪಯೋಗಿಸಿಕೊಳ್ಳಿ.
· ಆಯಾ ವಯಸ್ಸಿಗೆ ತಕ್ಕಂತೆ ಥೀಮ್‌ ಆಯ್ಕೆ ಮಾಡಿ, ಸ್ಟೈಲಿಂಗ್‌ ಮಾಡಿ.
· ಫೋಟೋ ಕಾಂಪಿಟೇಷನ್‌ಗೆ ಕಳುಹಿಸುವುದಾದಲ್ಲಿ, ಪ್ರೊಫೆಷನಲ್‌ ಫೋಟೋಗ್ರಾಫಿ ಮಾಡಿಸಿ.
· ನೀವೇ ಖುದ್ದು ಫೋಟೋಶೂಟ್‌ ಮಾಡುವುದಾದಲ್ಲಿ ಬಾಡಿಗೆಗೆ
ಔಟ್‌ಫಿಟ್ಸ್ ಪಡೆದು ಮಾಡಿ. ಖರ್ಚು ಕಡಿಮೆಯಾಗುವುದು.

Here are 4 ideas for krishna janmashtami photoshoot
Here are 4 ideas for krishna janmashtami photoshoot

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಧಾರ್ಮಿಕ

Rayara Aradhane 2024 : ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

Rayara Aradhane 2024 :

VISTARANEWS.COM


on

Rayara Aradhane 2024
Koo

ಮಂತ್ರಾಲಯ : ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೋಮವಾರ ರಾತ್ರಿ ಏಕಾಏಕಿ ಭರ್ಜರಿ ಮಳೆಯಾಗಿದೆ. ಅಂತೆಯೇ ಪುಣ್ಯ ಕ್ಷೇತ್ರವಾದ ಮಂತ್ರಾಲಯದಲ್ಲೂ ಏಕಾಏಕಿ ಭಾರೀ ಪ್ರಮಾಣದಲ್ಲಿ ಮಳೆ ಬಂದಿದೆ. ಇದರಿಂದಾಗಿ ರಾಯರ ಆರಾಧನೆಗೆ (Rayara Aradhane 2024) ಬಂದಿದ್ದ ಭಕ್ತರಿಗೆ ಸಮಸ್ಯೆ ಉಂಟಾಗಿದೆ. ಅವರೆಲ್ಲರಿಗೂ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಠದ ಪ್ರಾಕಾರದಲ್ಲಿ ಮಲಗಲು ಅವಕಾಶ ಮಾಡಿಕೊಟ್ಟು ಭಕ್ತರ ಪಾಲಿಗೆ ಆಪದ್ಬಾಂಧವರೆನಿಸಿಕೊಂಡಿದ್ದಾರೆ.

ಆಗಸ್ಟ್‌ 20ರಿಂದ ಮಂತ್ರಾಲಯದಲ್ಲಿ 353ನೇ ಗುರುರಾಯರ ಆರಾಧಾನ ಮಹೋತ್ಸವ ಆಯೋಜನೆಗೊಂಡಿದೆ. ಇಂದು ಪೂರ್ವಾರಾಧನೆ ನಡೆಯಲಿದೆ. ಹೀಗಾಗಿ ದೊಡ್ಡ ಪ್ರಮಾಣದ ಭಕ್ತರು ಮಂತ್ರಾಲಯಕ್ಕೆ ಸೋಮವಾರ ರಾತ್ರಿಯೇ ಆಗಮಿಸಿದ್ದರು. ಅವರಲ್ಲಿ ಕೊಠಡಿ ಪಡೆಯದವರು ಮಠದ ಕಾರಿಡಾರ್‌ನಲ್ಲಿಯೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ರಾತ್ರಿ ವೇಳೆ ಏಕಾಏಕಿ ಮಳೆ ಸುರಿದಿದೆ.

ಮಳೆ ಸುರಿಯುತ್ತಿರುವ ಮತ್ತು ಭಕ್ತರು ಸಂಕಷ್ಟದಲ್ಲಿರುವ ವಿಷಯ ತಿಳಿಸದ ಸುಬುಧೇಂದ್ರ ಶ್ರೀಗಳು ತಕ್ಷಣ ಅಲ್ಲಿಗೆ ಬಂದಿದ್ದು ಮಳೆಯಲ್ಲಿ ನೆನೆಯುತ್ತಿದ್ದ ಭಕ್ತರಿಗೆ ಮಠದ ಪ್ರಾಕಾರ ಹಾಗೂ ಪ್ರವಚನ ಮಂಟಪದಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶ್ರೀಗಳಿಗೆ ಭಕ್ತರು ಅಪಾರ ಗೌರವ ಸಲ್ಲಿಸಿದ್ದಾರೆ.

ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

ಮಂತ್ರಾಲಯ ಗುರು (Mantralaya guru) ರಾಘವೇಂದ್ರ ಸ್ವಾಮಿಗಳ (Rayara Aradhane 2024) 353ನೇ ಆರಾಧನಾ ಮಹೋತ್ಸವ (Raghavendra Aradhana Mahotsava) ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಗುರುಗಳು ಬೃಂದಾವನ ಪ್ರವೇಶಿಸಿದ ಈ ದಿನವನ್ನು ದೇಶ, ವಿದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯ ಆರಾಧನೆ ಮತ್ತು 22ರಂದು ಉತ್ತರಾರಾಧನೆ ನಡೆಯಲಿದೆ.

16ನೇ ಶತಮಾನದ ಸಂತರು ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಧರ್ಮವನ್ನು ಪ್ರತಿಪಾದಿಸಿದ್ದು, ಮಧ್ವಾಚಾರ್ಯರ ದ್ವೈತ ತತ್ತ್ವವನ್ನು ಜನಪ್ರಿಯಗೊಳಿಸಿದರು. ಗುರುಗಳು ಬೃಂದಾವನ ಪ್ರವೇಶಿಸಿರುವ ಕ್ಷೇತ್ರವಾಗಿರುವ ಮಂತ್ರಾಲಯದಲ್ಲಿ ಗುರುಗಳ ಆರಾಧನೆ ಆಗಸ್ಟ್ 21ರಂದು ನಡೆಯಲಿದೆ.
ಗುರುಗಳ ಆರಾಧನೆ ಎಂದರೇನು?

ರಾಘವೇಂದ್ರ ಸ್ವಾಮಿ ಆರಾಧನೆ ಎಂದರೆ ರಾಯರು ಜೀವಂತವಾಗಿ ಬೃಂದಾವನವನ್ನು ಪ್ರವೇಶಿಸಿರುವ ದಿನ. ದೇಶ ವಿದೇಶಗಳಲ್ಲಿ ಆಚರಿಸಲ್ಪಡುವ ಗುರುಗಳ ಆರಾಧನೆಯು ಹೆಚ್ಚಿನ ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಪ್ರಾರಂಭವಾಗುತ್ತದೆ. ಇದನ್ನು ವಾರ್ಷಿಕವಾಗಿ ಶ್ರಾವಣ ಕೃಷ್ಣ ಪಕ್ಷ ದ್ವಿತೀಯ ಅಥವಾ ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಚಂದ್ರನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿ ಚಂದ್ರನ ಕ್ಷೀಣಿಸುತ್ತಿರುವ ಎರಡನೇ ದಿನದಂದು ಆಚರಿಸಲಾಗುತ್ತದೆ.

ರಾಘವೇಂದ್ರ ಸ್ವಾಮಿಯು ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. 1621 ರಿಂದ 1671ರವರೆಗೆ ಅವರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀ ಮಠದ ಮುಖ್ಯಸ್ಥರಾಗಿದ್ದರು. ತಮ್ಮ ಜೀವನದಲ್ಲಿ ಹಲವಾರು ಪವಾಡಗಳನ್ನು ನಡೆಸಿರುವ ಅವರು ಮಧ್ವಾಚಾರ್ಯರ ಬೋಧನೆಗಳ ಮೇಲೆ ಹಲವಾರು ಭಜನೆ ಮತ್ತು ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಗುರು ಶ್ರೀ ರಾಘವೇಂದ್ರ ಸ್ವಾಮಿಗಳು 1671 ರಲ್ಲಿ ಸಮಾಧಿಯನ್ನು ಪ್ರವೇಶಿಸದರು. ಆವರ ಸಮಾಧಿ ಸ್ಥಳವನ್ನು ಬೃಂದಾವನ ಎಂದು ಕರೆಯಲಾಗುತ್ತದೆ. ಇದು ಮಂತ್ರಾಲಯದಲ್ಲಿದೆ.
ಮಂತ್ರಾಲಯದಲ್ಲಿ ಅದ್ಧೂರಿ ಆಚರಣೆ

ಗುರುಗಳ ಆರಾಧನೆಯನ್ನು ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಹಾ ಆರಾಧನೆ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ಮಠದ ಸಂಕೀರ್ಣವನ್ನು ಹಾಗೂ ಮಂತ್ರಾಲಯ ಪಟ್ಟಣವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಗುರುಗಳ ಮಹಾ ಆರಾಧನೆಯ ಅಂಗವಾಗಿ ನಡೆಯುವ ಮಹಾರಥೋತ್ಸವದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: Raichur News : ಉಸಿರಾಡುತ್ತಿವೆ ಮುಸ್ಲಿಂ ಧರ್ಮಗುರುಗಳ ಗೋರಿಗಳು, ಪವಾಡ ಎಂದ ಭಕ್ತರು

ವಿವಿಧ ಆಚರಣೆಗಳು

ಕಲಿಯುಗದ ಕಾಮಧೇನು ಎಂದೇ ಜಗತ್ಪ್ರಸಿದ್ಧಿ ಪಡೆದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಭಾನುವಾರವೇ ಆರಂಭಗೊಂಡಿದ್ದು, ಆಗಸ್ಟ್ 24ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಯರ ಉತ್ಸವ ಮೂರ್ತಿಯ ಬಲಿ, ರಥೋತ್ಸವ, ಗೋ ಪೂಜೆ, ಗಜಪೂಜೆ ಮತ್ತಿತರ ಪೂಜೆಗಳು ನಡೆಯುತ್ತವೆ. ಇದಕ್ಕೂ ಮೊದಲು ಧ್ವಜಾರೋಹಣ ನಡೆಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಪೂರ್ವ ಆರಾಧನಾ ದಿನದಂದು ಸಿಂಹ ವಾಹನ ಸವಾರಿ, ಮಧ್ಯ ಆರಾಧನಾ ದಿನದಂದು ಮಹಾ ಪಂಚಾಮೃತ ಅಭಿಷೇಕ, ಉತ್ತರ ಆರಾಧನಾ ದಿನದಂದು ಸ್ವರ್ಣ ರಥೋತ್ಸವವನ್ನು ನಡೆಸಲಾಗುತ್ತದೆ. ಮಠವು ಪ್ರತಿ ವರ್ಷ ಸಮಾಜ ಸೇವೆ ಮಾಡಿದ ಗಣ್ಯರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನೂ ನಡೆಸಲಾಗುತ್ತದೆ.

Continue Reading
Advertisement
Amy Jackson
ಸಿನಿಮಾ33 mins ago

Amy Jackson : ಮದುವೆಯ ಮೊದಲ ಚಿತ್ರಗಳನ್ನು ಹಂಚಿಕೊಂಡ ನಟಿ ಆ್ಯಮಿ ಜಾಕ್ಸನ್‌

Krishna janmastami 2024
ಆಹಾರ/ಅಡುಗೆ50 mins ago

Krishna janmastami 2024: ಕೃಷ್ಣ ಜನ್ಮಾಷ್ಟಮಿಗೆ ಏನೆಲ್ಲ ಸಿಹಿ ತಿನಿಸು ತಯಾರಿಸಬಹುದು? ಇಲ್ಲಿದೆ ಟಿಪ್ಸ್‌

New Fashion Trend
ಫ್ಯಾಷನ್1 hour ago

New Fashion Trend : ಯುವತಿಯರನ್ನು ಆಕರ್ಷಿಸುತ್ತಿದೆ ಇಂಡೊ-ವೆಸ್ಟರ್ನ್‌ ಡಿಸೈನ್‌‌‌ನ ಮ್ಯಾಚಿಂಗ್‌ ಸೀರೆ

Krishnadevaraya Palika Bazar
ಕರ್ನಾಟಕ1 hour ago

Krishnadevaraya Palika Bazaar: ಬೆಂಗಳೂರಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಉದ್ಘಾಟಿಸಿದ ಸಿಎಂ

Sound of UI
ಸಿನಿಮಾ2 hours ago

Sound of UI : ಸದ್ದು ಮಾಡುತ್ತಿದೆ UI ಚಿತ್ರದ ‘ಸೌಂಡ್ ಆಫ್ ಯುಐ’

Karkala Physical Abuse
ಕರ್ನಾಟಕ2 hours ago

Karkala Physical Abuse: ಕಾರ್ಕಳದ ಅತ್ಯಾಚಾರ ಸಂತ್ರಸ್ತೆ ರಕ್ತದಲ್ಲಿ ಡ್ರಗ್ಸ್ ಪತ್ತೆ; ಆರೋಪಿಗಳ ರಿಪೋರ್ಟ್‌ ನೆಗೆಟಿವ್!

Paul Valthaty
ಪ್ರಮುಖ ಸುದ್ದಿ2 hours ago

Paul Valthaty : ಅಮೆರಿಕದ ಕ್ರಿಕೆಟ್‌ ತಂಡದ ಕೋಚಿಂಗ್ ಹುದ್ದೆ ವಹಿಸಿಕೊಂಡ ಐಪಿಎಲ್ ಸ್ಟಾರ್‌ ಪಾಲ್ ವಾಲ್ತಾಟಿ

Krishna Janmastami 2024
ಧಾರ್ಮಿಕ3 hours ago

Krishna Janmastami 2024: ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಏಕೆ?

KAS Prelims exam
ಕರ್ನಾಟಕ3 hours ago

KAS Prelims exam: ಕೆಎಎಸ್‌ ಪ್ರಿಲಿಮ್ಸ್ ಮುಂದೂಡಲು ರಾಜ್ಯಪಾಲರಿಗೆ ಅಭ್ಯರ್ಥಿಗಳ ನಿಯೋಗ ಮನವಿ

Crime News
ದೇಶ3 hours ago

Murder Case : ಭಕ್ತನ ಮೈಮೇಲೆ ದೆವ್ವ ಸೇರಿದೆ ಎಂದು ಚೆನ್ನಾಗಿ ಬಡಿದು ಕೊಂದ ಚರ್ಚ್‌ ಫಾದರ್‌!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ1 day ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌