Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು! - Vistara News

ಆರೋಗ್ಯ

Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!

Health Tips: ನೋವು ನಿವಾರಕಗಳನ್ನು ದೀರ್ಘ ಕಾಲ ತೆಗೆದುಕೊಂಡರೆ, ಪದೇಪದೆ ತೆಗೆದುಕೊಂಡರೆ ಅಡ್ಡ ಪರಿಣಾಮಗಳು ತಪ್ಪಿದ್ದಲ್ಲ. ಹಾಗಾಗಿ ಯಾವುದೇ ರಾಸಾಯನಿಕಗಳಿಲ್ಲದ ನೈಸರ್ಗಿಕವಾದ ವಸ್ತುಗಳಿಂದಲೇ ನೋವು ನಿವಾರಣೆ ಆಗುವುದಾದರೆ ಆರೋಗ್ಯಕ್ಕೆ ಆಗುವಂಥ ಹಾನಿಯನ್ನು ತಪ್ಪಿಸಬಹುದಲ್ಲವೇ. ನೋವು ನಿವಾರಣೆಯ ಸಾಮರ್ಥ್ಯವುಳ್ಳ ಕೆಲವು ನೈಸರ್ಗಿಕ ಮೂಲಿಕೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೋವಿಗೆಂದು (Health Tips) ಔಷಧಿ ನುಂಗುವವರು ಬಹಳಷ್ಟು ಜನರಿದ್ದಾರೆ. ಆದರೆ ಯಾವುದೇ ನೋವು ನಿವಾರಕಗಳನ್ನು ದೀರ್ಘ ಕಾಲ ತೆಗೆದುಕೊಂಡರೆ, ಪದೇಪದೆ ತೆಗೆದುಕೊಂಡರೆ ಅಡ್ಡ ಪರಿಣಾಮಗಳು ತಪ್ಪಿದ್ದಲ್ಲ. ಹೃದಯದಿಂದ ಹಿಡಿದು ಯಕೃತ್‌ನವರೆಗೆ ಹಲವು ಅಂಗಗಳಿಗೆ ಇವು ಹಾನಿ ಮಾಡಬಲ್ಲವು. ಹಾಗಾಗಿ ಯಾವುದೇ ರಾಸಾಯನಿಕಗಳಿಲ್ಲದ ನೈಸರ್ಗಿಕವಾದ ವಸ್ತುಗಳಿಂದಲೇ ನೋವು ನಿವಾರಣೆ ಆಗುವುದಾದರೆ ಆರೋಗ್ಯಕ್ಕೆ ಆಗುವಂಥ ಹಾನಿಯನ್ನು ತಪ್ಪಿಸಬಹುದಲ್ಲ ಎಂಬ ಯೋಚನೆ ಬಂದರದು ಸಹಜ. ಕೆಲವು ಮೂಲಿಕೆಗಳು ಪ್ರಕೃತಿ ಸಹಜವಾಗಿಯೇ ನೋವನ್ನು ನಿವಾರಿಸುವಂಥ ಸಾಮರ್ಥ್ಯವುಳ್ಳವು. ಅಂಥ ಕೆಲವು ಮೂಲಿಕೆಗಳನ್ನು ಇಲ್ಲಿ ವಿವರಿಸಲಾಗಿದ್ದು, ನೋವು ನಿವಾರಕಗಳ ಅಡ್ಡ ಪರಿಣಾಮಗಳಿಲ್ಲದೆಯೇ ಅವುಗಳನ್ನು ಬಳಸಬಹುದು.

cloves

ಲವಂಗ

ಹಲ್ಲು ನೋವಿಗೆ ಯಾವುದೇ ಮಾತ್ರೆ ನುಂಗದೆಯೇ ಕಡಿಮೆ ಮಾಡಿಕೊಳ್ಳುವ ಉದ್ದೇಶವಿದ್ದರೆ ಲವಂಗ ಒಳ್ಳೆಯ ಆಯ್ಕೆ. ಪುಟ್ಟ ಹೂವಿನಂಥ ಆಕೃತಿಯಲ್ಲಿರುವ ಈ ಘಮಿಸುವ ಮೂಲಿಕೆಯನ್ನು ಬಳಸಿರುವುದಾಗಿ ಹಲವಾರು ಟೂತ್‌ಪೇಸ್ಟ್‌ಗಳ ಜಾಹೀರಾತುಗಳು ಹೇಳಿಕೊಳ್ಳುವುದನ್ನು ಗಮನಿಸಿರಬಹುದು. ಹಲ್ಲು ನೀವಿದ್ದಾಗ ನೇರವಾಗಿ ಲವಂಗವನ್ನೇ ಈ ಭಾಗದಲ್ಲಿ ಒತ್ತರಿಸಿಕೊಳ್ಳಬಹುದು ಅಥವಾ ಲವಂಗದ ಎಣ್ಣೆಯನ್ನೂ ಲೇಪಿಸಿಕೊಳ್ಳಬಹುದು. ಇದರಲ್ಲಿರುವ ಯುಜೆನಾಲ್‌ ಎಂಬ ಅಂಶವು ಪ್ರಬಲವಾದ ನೋವು ನಿವಾರಕ ಗುಣವನ್ನು ಹೊಂದಿದೆ. ಲವಂಗ ತೈಲದಲ್ಲಿ ಫಂಗಸ್‌ ವಿರೋಧಿ, ಬ್ಯಾಕ್ಟೀರಿಯ ವಿರೋಧಿ, ಉರಿಯೂತ ಶಾಮಕ ಗುಣಗಳಿವೆ. ಹಾಗಾಗಿ ನೋವು ನಿವಾರಣೆಗೆ ಲವಂಗವನ್ನು ಅಥವಾ ಲವಂಗ ತೈಲವನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದಂತೆ ಸುರಕ್ಷಿತವಾಗಿ ಬಳಸಬಹುದು.

ginger

ಶುಂಠಿ

ಈ ಘಾಟು ಖಾರದ ಬೇರಿನಲ್ಲಿ ಮುಖ್ಯವಾಗಿ ಇರುವುದು ಉತ್ಕರ್ಷಣ ನಿರೋಧಕ ಗುಣ. ಇದಲ್ಲಿರುವ ಜಿಂಜರಾಲ್‌ ಮತ್ತು ಶಗೋಲ್‌ನಂಥ ಪ್ರಬಲ ಉರಿಯೂತ ಶಾಮಕಗಳು ನೋವಿಗೆ ಕಾರಣವಾಗುವ ಅಂಶಗಳನ್ನು ತಗ್ಗಿಸುವುದಕ್ಕೆ ಕೆಲಸ ಮಾಡುತ್ತವೆ. ಹಾಗಾಗಿ ಸ್ನಾಯುಗಳ ನೋವು, ಮೈಕೈ ನೋವಿಗೆ ಶುಂಠಿಯ ಕಷಾಯ ಉತ್ತಮ ಉಪಶಮನ ನೀಡುತ್ತದೆ. ಶುಂಠಿಯ ರಸವನ್ನು ತೆಗೆದು, ಎಣ್ಣೆಯಲ್ಲಿ ಕುದಿಸಿ, ಶುಂಠಿ ಎಣ್ಣೆಯನ್ನಾಗಿ ಮಾಡಿಕೊಂಡು ಮೈಕೈ ನೋವಿಗೆ ಲೇಪಿಸಿ ಮಸಾಜ್‌ ಮಾಡುವ ಕ್ರಮವೂ ಕೆಲವೆಡೆ ಚಾಲ್ತಿಯಲ್ಲಿದೆ.

Peppermint
Tumeric Rhizome with Green Leaf and Turmeric Powder

ಪೆಪ್ಪರ್‌ಮಿಂಟ್‌

ತಲೆನೋವಿನಿಂದ ಹಿಡಿದು ಹಲವು ನೋವುಗಳ ನಿವಾರಣೆಗೆ ಪೆಪ್ಪರ್‌ಮಿಂಟ್‌ ತೈಲ ವ್ಯಾಪಕವಾಗಿ ಬಳಕೆಯಲ್ಲಿದೆ. ಇದರಲ್ಲಿರುವ ನೈಸರ್ಗಿಕವಾದ ನೋವು ನಿವಾರಕ ಗುಣದಿಂದ, ಹಲವಾರು ನೋವು ನಿವಾರಕ ತೈಲಗಳಲ್ಲೂ ಪೆಪ್ಪರ್‌ಮಿಂಟ್‌ ಬಳಸಲಾಗುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಇದರಲ್ಲಿದ್ದು, ಉರಿಯೂತ ನಿವಾರಣೆಗೆ ಇದು ಒಳ್ಳೆಯ ಮದ್ದು. ಇದರ ಎಲೆಗಳನ್ನು ಚಹಾ ಮಾಡಿ ಸೇವಿಸಬಹುದು ಅಥವಾ ಇದರ ತೈಲಗಳನ್ನು ನೋವಿರುವ ಭಾಗಕ್ಕೆ ಲೇಪಿಸಬಹುದು.

Mosquito Repellents
Tumeric Rhizome with Green Leaf and Turmeric Powder

ಬೆಳ್ಳುಳ್ಳಿ

ದಿನಬಳಕೆಯ ವಸ್ತುಗಳಲ್ಲೇ ಒಳ್ಳೆಯ ನೋವು ನಿವಾರಕವೆಂದು ಹೆಸರಾಗಿರುವುದೆಂದರೆ ಬೆಳ್ಳುಳ್ಳಿ ಗಡ್ಡೆ. ಮುಖ್ಯವಾಗಿ ಬ್ಯಾಕ್ಟೀರಿಯ ನಿರೋಧಕ, ಫಂಗಸ್‌ ಮತ್ತು ವೈರಸ್‌ ನಿರೋಧಕ ಗುಣಗಳೇ ಇದರ ನೋವು ನಿವಾರಕ ಸಾಮರ್ಥ್ಯಕ್ಕೆ ಕಾರಣ. ಸೋಂಕು ನಿವಾರಣೆ ಮಾಡುವ ಮೂಲಕ ಇದು ನೋವನ್ನೂ ಶಮನ ಮಾಡುತ್ತದೆ. ಗಂಟಲು ನೋವು, ಬೆನ್ನು ನೋವು ಮುಂತಾದ ಸಂದರ್ಭಗಳಲ್ಲಿ ಬೆಳ್ಳುಳ್ಳಿಯ ಕಷಾಯ, ಲೇಪಗಳು ಒಳ್ಳೆಯ ಕೆಲಸ ಮಾಡುತ್ತವೆ. ಮೈಕೈ ನೋವಿಗೆ, ಕೀಲು-ಸ್ನಾಯುಗಳ ನೋವಿಗೆ ಬೆಳ್ಳುಳ್ಳಿ ಎಣ್ಣೆ ಉತ್ತಮ ಮದ್ದು.

Tumeric Rhizome with Green Leaf and Turmeric Powder

ಅರಿಶಿನ

ಉರಿಯೂತ ಶಮನವೇ ಇದರ ಪ್ರಬಲವಾದ ಗುಣ. ಹಾಗಾಗಿ ಗಂಟಲು ನೋವಿನಂಥ ಸೋಂಕಿನ ನೋವಿನಲ್ಲಿ ಇದು ಒಳ್ಳೆಯ ಉಪಶಮನ ನೀಡುತ್ತದೆ. ಇದನ್ನು ಕಷಾಯದ ಮೂಲಕ ಅಥವಾ ಎಣ್ಣೆ ಮಾಡಿಯೂ ಬಳಸಬಹುದು. ಮಂಡಿ ನೋವು, ಇತರ ಯಾವುದೇ ಕೀಲುಗಳ ನೋವಿನಲ್ಲಿ ಅರಿಶಿನ ಮತ್ತು ಬೆಳ್ಳಿಳ್ಳಿಯ ಎಣ್ಣೆ ಮಾಡಿ ಲೇಪಿಸುವ ಕ್ರಮ ಪರಂಪರಾಗತ ಔಷಧೀಯ ಕ್ರಮದಲ್ಲಿ ಬಳಕೆಯಲ್ಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

Hair Combing: ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್‌ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ಈ ಲೇಖನ ಓದಿ.

VISTARANEWS.COM


on

Hair Combing
Koo

ನಮ್ಮ ಅಜ್ಜಿಯರ ಕಾಲದ ಹೆರಳು ಹಾಕುವ ಕ್ರಮವನ್ನೊಮ್ಮೆ ನೆನಪಿಸಿಕೊಳ್ಳಿ. ತಲೆಯ ಚರ್ಮಕ್ಕೆ, ಬೈತಲೆಗೆಲ್ಲ ಸರಿಯಾಗಿ ಎಣ್ಣೆ ಹಚ್ಚಿ, ತಲೆಯನ್ನು ಚೆನ್ನಾಗಿ ಬಾಚಿ (Hair Combing), ಕೂದಲಿನ ಸಿಕ್ಕು ಬಿಡಿಸಿ ನಂತರ ಹೆರಳು ಹಾಕುತ್ತಿದ್ದರು. ಹೀಗೆ ಜಡೆ ಹಾಕಿದರೆ ಮಾರನೇ ದಿನ ಆ ಹೊತ್ತಿನವರೆಗೆ ಹೆರಳು ಬಿಚ್ಚುತ್ತಿರಲಿಲ್ಲ, ಭದ್ರವಾಗಿ ಹಾಗೆಯೇ ಕುಳಿತಿರುತ್ತಿತ್ತು. ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್‌ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ತಲೆ ಬಾಚುವುದೆಂದರೆ ಕೂಲಿನ ಸಿಕ್ಕು ಬಿಡಿಸಿ, ಕೇಶಗಳನ್ನು ವ್ಯವಸ್ಥಿತಗೊಳಿಸುವುದು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ಅದಷ್ಟೇ ಅಲ್ಲ, ತಲೆಯ ಚರ್ಮದ ಮತ್ತು ಕೂದಲುಗಳ ಬುಡದ ಆರೋಗ್ಯವನ್ನು ಕಾಪಾಡುವಲ್ಲಿನ ಅಗತ್ಯ ಕೆಲಸವಿದು. ತಲೆಯ ಚರ್ಮದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ತೈಲದ ಅಂಶವು ಕೂದಲಿನ ಸಹಜ ಕಂಡೀಶನರ್‌ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ದಿನವೂ ಅದನ್ನು ಕೂದಲಿನ ಎಲ್ಲೆಡೆ ಹರಡುವುದು ಮುಖ್ಯ. ಅದನ್ನು ಒಂದೆಡೆ ಹಾಗೆಯೇ ಉಳಿಯಲು ಬಿಟ್ಟರೆ ತಲೆಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ತಲೆಯನ್ನು ಸಾದ್ಯಂತವಾಗಿ ಬಾಚುವುದು ಅಗತ್ಯ. ಇನ್ನೊಂದು ಮುಖ್ಯವಾದ ಲಾಭವೆಂದರೆ ತಲೆಯ ಭಾಗಕ್ಕೆ ಹೆಚ್ಚುವ ರಕ್ತ ಸಂಚಾರ. ಇದರಿಂದ ತಲೆಯ ಚರ್ಮಕ್ಕೆ ಮತ್ತು ಕೂದಲಿನ ಬುಡಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಸರಬರಾಜಾಗುತ್ತದೆ. ಜೊತೆಗೆ, ಸತ್ವಗಳೂ ಹೆಚ್ಚಾಗಿ ದೊರೆಯುತ್ತವೆ. ಇದಲ್ಲದೆ, ಕೂದಲಿನ ಬುಡವನ್ನು ಬಾಚುವುದರಿಂದ ಮೃತಕೋಶಗಳನ್ನು ತೆಗೆದುಹಾಕಿ, ಹೊಸ ಕೊಶಗಳು ಬರುವುದಕ್ಕೆ ನೆರವಾಗುತ್ತದೆ. ಇದರಿಂದ ತಲೆಹೊಟ್ಟಿನ ಬಾಧೆಯನ್ನೂ ನಿಯಂತ್ರಣಕ್ಕೆ ತರಬಹುದು.

Hair Comb

ಎಷ್ಟು ಬಾರಿ?

ಕೂದಲು ಬಾಚುವುದು ಅಗತ್ಯ ಎನ್ನುವುದು ಸರಿ. ಎಷ್ಟು ದಿನಕ್ಕೊಮ್ಮೆ ಅಥವಾ ದಿನಕ್ಕೆಷ್ಟು ಬಾರಿ ಕೂದಲು ಬಾಚಬೇಕು? ನೆನಪಾದಾಗೆಲ್ಲ ಬಾಚಣಿಕೆಗೆ ಕೈಯಿಕ್ಕಬೇಕೆ? ಇದಕ್ಕೊಂದು ಶಿಸ್ತು ಮಾಡಿಕೊಳ್ಳುವುದೇ… ಹೇಗೆ? ದಿನಕ್ಕೆ ಎರಡು ಬಾರಿ ಬಾಚುವುದು ಸಾಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಬೆಳಗಿನ ಹೊತ್ತು ಮತ್ತು ರಾತ್ರಿ ಮಲಗುವ ಮುನ್ನ ತಲೆಯನ್ನೆಲ್ಲ ಕೂಲಂಕಷವಾಗಿ ಬಾಚುವುದು ಒಳ್ಳೆಯ ಅಭ್ಯಾಸ. ಕೂದಲು ಮಿತಿಮೀರಿ ಗುಂಗುರಾಗಿದ್ದರೆ ಬಾಚುವಾಗ ಎಚ್ಚರಿಕೆ ಬೇಕಾಗುತ್ತದೆ. ಹಾಗೆಯೇ ಒದ್ದೆ ಕೂದಲನ್ನು ಎಂದಿಗೂ ಬಾಚಬೇಡಿ. ಕೂದಲು ಒದ್ದೆ ಇದ್ದಾಗ ಬೇಗನೇ ತುಂಡಾಗುತ್ತದೆ. ಹೆಚ್ಚಿನ ಸಾರಿ ಬುಡದಿಂದಲೇ ಕಿತ್ತು ಬರುತ್ತದೆ.
ತಲೆಯಲ್ಲಿ ತೀರಾ ಎಣ್ಣೆಯ ಚರ್ಮವಿದ್ದರೆ, ಹೆಚ್ಚು ಸಾರಿ ಬಾಚಿದಷ್ಟಕ್ಕೂ ಚರ್ಮದಲ್ಲಿರುವ ಎಣ್ಣೆಯಂಶವನ್ನು ಎಲ್ಲೆಡೆ ಹರಡಬಹುದು. ಇದರಿಂದ ಒಂದೆಡೆ ಜಿಡ್ಡು ಜಮೆಯಾಗಿ, ಚರ್ಮದ ಆರೋಗ್ಯ ಹಾಳಾಗುವುದನ್ನು ತಪ್ಪಿಸಬಹುದು. ತಲೆ ಚರ್ಮದ ನೈಸರ್ಗಿಕ ತೈಲ ಅಥವಾ ಸೇಬಂ ಕೂದಲಿನ ಬುಡಕ್ಕೆ ಅಂಟಿಕೊಂಡಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ಬರಬಹುದು. ತಲೆ ಚರ್ಮದ ಉಸಿರಾಟಕ್ಕೆ ತಡೆಯಾಗುವಂತೆ, ಸೂಕ್ಷ್ಮ ರಂಧ್ರಗಳು ಮುಚ್ಚಿಹೋಗಬಹುದು. ಇದರಿಂದ ಕೂದಲಿನ ಬೆಳವಣಿಗೆ ನಿಂತು ಹೋಗಿ, ತಲೆಗೂದಲು ತೆಳ್ಳಗಾಗಬಹುದು.

ಇದನ್ನೂ ಓದಿ: Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!

ಬಾಚಣಿಕೆ ಹೇಗಿರಬೇಕು?

ಇದೂ ಒಂದು ಪ್ರಶ್ನೆಯೇ ಎಂದು ನಗಬೇಡಿ. ಕೂದಲಿನ ಸಿಕ್ಕು ಬಿಡಿಸುವ ಉದ್ದೇಶವಿದ್ದರೆ ಅಗಲವಾದ ಹಲ್ಲುಗಳಿರುವ ಬಾಚಣಿಕೆಯ ಬಳಕೆ ಸರಿ. ತಲೆಯ ಚರ್ಮದಲ್ಲಿರುವ ತೈಲದಂಶವನ್ನು ಎಲ್ಲೆಡೆ ಸಮನಾಗಿ ಹರಡುವ ಉದ್ದೇಶವಿದ್ದರೆ ಒತ್ತೊತ್ತಾಗಿ ಹಲ್ಲುಗಳಿರುವ ಬಾಚಣಿಕೆ ಬೇಕಾಗುತ್ತದೆ. ಚೂಪಾದ ಮೊನೆಗಳಿರುವ ಪ್ಲಾಸ್ಟಿಕ್‌ ಬಾಚಣಿಕೆಗಳಿಗಿಂತ ಮೊಂಡಾದ ತುದಿಗಳಿರುವ ಮರದ ಬಾಚಣಿಕೆಗಳು ಒಳ್ಳೆಯವು. ಆದರೀಗ ನಾನಾ ರೀತಿಯ ಹೇರ್‌ಬ್ರಷ್‌ಗಳು ಲಭ್ಯವಿದ್ದು, ಹೆಚ್ಚಿನವುಗಳ ತುದಿ ಪರಚುವಂತೆ ಇರುವುದಿಲ್ಲ. ರಕ್ತ ಸಂಚಾರಕ್ಕೂ ಅನುಕೂಲ ಮಾಡುವಂತೆ ಇರುತ್ತವೆ.

Continue Reading

ಆರೋಗ್ಯ

Purity Check of Ghee: ತುಪ್ಪ ಶುದ್ಧವಾಗಿಯೇ ಎಂಬುದನ್ನು ಮನೆಯಲ್ಲೇ ಪರೀಕ್ಷಿಸುವುದು ಹೇಗೆ?

Purity Check of Ghee: ಶುದ್ಧ ತುಪ್ಪವು ಮೇಲ್ನೋಟಕ್ಕೆ ತನ್ನ ಘಮ, ಬಣ್ಣ ಮತ್ತು ರುಚಿಯಲ್ಲಿ ಎಲ್ಲಕ್ಕಿಂತ ಭಿನ್ನವೇ ಆಗಿರುತ್ತದೆ. ಯಾವುದೇ ಗಾಢ ಬಣ್ಣವಿಲ್ಲದೆ, ಕಟುವಾಗ ಘಮವಿಲ್ಲದೆ, ಅಂಟಾದ ರುಚಿಯಿಲ್ಲದ ತುಪ್ಪವನ್ನು ಶುದ್ಧವೆಂದು ನಂಬಬಹುದು. ಆದರೆ ತುಪ್ಪದಲ್ಲಿ ಏನೇನೋ ಜಿಡ್ಡು ಅಥವಾ ಪಿಷ್ಟಗಳು ಸೇರಿಲ್ಲವೆಂದು ನಂಬುವುದು ಹೇಗೆ?

VISTARANEWS.COM


on

Ghee benefits
Koo

ಶುದ್ಧ ಆಹಾರವನ್ನೇ ಸೇವಿಸಬೇಕೆಂಬುದು ಎಲ್ಲರ ಆಸೆ. ಆದರೆ ʻಶುದ್ಧʼ ಎಂಬ ಹಣೆಪಟ್ಟಿಯನ್ನು ಹೊತ್ತು ಬರುವುದರಲ್ಲಿ ಅರ್ಧಕ್ಕರ್ಧ ಕಲಬೆರಕೆಯ ಆಹಾರಗಳೇ. ಉದಾ, ತುಪ್ಪದ ಬಗ್ಗೆಯೇ ಹೇಳುವುದಾದರೆ, ಹಾಲಿನಿಂದ ತುಪ್ಪದವರೆಗಿನ ಪ್ರಕ್ರಿಯೆಯನ್ನು ಮನೆಯಲ್ಲೇ ನೀವೇ ಮಾಡಿಕೊಂಡರೆ ತುಪ್ಪ ಅಶುದ್ಧ ಎನ್ನುವ ರಗಳೆಯಿಲ್ಲ. ಇನ್ನು ಹಾಲಿನ ಗುಣಮಟ್ಟವೇ ಸರಿಯಿಲ್ಲದಿದ್ದರೆ, ಹಸು ಸಾಕಬೇಕಷ್ಟೇ! ಹಾಗಲ್ಲದೆ, ಅಂಗಡಿಯಿಂದ ಖರೀದಿಸಿ ತರುವ ತುಪ್ಪವೇ (Purity Check of Ghee) ಆಗಿದ್ದರೆ, ಅದರ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುವುದು ಹೇಗೆ? ತುಪ್ಪದಲ್ಲಿ ಏನೇನೋ ಜಿಡ್ಡು ಅಥವಾ ಪಿಷ್ಟಗಳು ಸೇರಿಲ್ಲವೆಂದು ನಂಬುವುದು ಹೇಗೆ? ಶುದ್ಧ ತುಪ್ಪವು ಮೇಲ್ನೋಟಕ್ಕೆ ತನ್ನ ಘಮ, ಬಣ್ಣ ಮತ್ತು ರುಚಿಯಲ್ಲಿ ಎಲ್ಲಕ್ಕಿಂತ ಭಿನ್ನವೇ ಆಗಿರುತ್ತದೆ. ಯಾವುದೇ ಗಾಢ ಬಣ್ಣವಿಲ್ಲದೆ, ಕಟುವಾಗ ಘಮವಿಲ್ಲದೆ, ಅಂಟಾದ ರುಚಿಯಿಲ್ಲದ ತುಪ್ಪವನ್ನು ಶುದ್ಧವೆಂದು ನಂಬಬಹುದು. ಆದರೆ ಈಗ ಕಲಬೆರಕೆ ವ್ಯವಹಾರಸ್ಥರು ಎಷ್ಟು ಚತುರರೆಂದರೆ, ಅನುಭವಿಗಳನ್ನೂ ಯಾಮಾರಿಸಿ ಬಿಡುತ್ತಾರೆ. ಇನ್ನು ಗುಣಮಟ್ಟ ಖಾತ್ರಿಯಲ್ಲಿ ಅನುಭವ ಇಲ್ಲದವರ ಪಾಡೇನು? ತುಪ್ಪದ ಗುಣಮಟ್ಟದ ಖಾತ್ರಿಗಾಗಿ ಕೆಲವು ಸರಳ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಇವೆಲ್ಲವೂ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತವೆ ಎಂದಲ್ಲ, ಆದರೆ ಕಲಬೆರಕೆ ಪತ್ತೆ ಮಾಡುವಲ್ಲಿ ಸಹಾಯವನ್ನಂತೂ ಖಂಡಿತ ಮಾಡುತ್ತವೆ.

It is rich in good fats Ghee Benefits

ಫ್ರೀಜಿಂಗ್‌ ಪರೀಕ್ಷೆ

ಅಂಗಡಿಯಿಂದ ತಂದ ಬಾಟಲಿ ಅಥವಾ ಪ್ಯಾಕ್‌ನಿಂದ ಕೊಂಚ ತೆಳುವಾದ ತುಪ್ಪವನ್ನು ತೆಗೆದು ಗಾಜಿನ ಸಣ್ಣ ಪಾತ್ರೆಗೆ ಹಾಕಿ. ಇದನ್ನು ಕೆಲ ಸಮಯ ಫ್ರಿಜ್‌ನಲ್ಲಿಡಿ. ನಾಲ್ಕಾರು ತಾಸಿನಲ್ಲಿ ಈ ತುಪ್ಪ ಸಂಪೂರ್ಣ ಗಟ್ಟಿಯಾಗುತ್ತದೆ. ಇದು ಹೀಗೆ ಗಟ್ಟಿಯಾಗುವಾಗ ಸಂಪೂರ್ಣ ಒಂದೇ ತೆರನಾಗಿ, ಸಮನಾಗಿ ಗಟ್ಟಿಯಾಗಬೇಕು. ಮೇಲ್ಮೈ ಸಮತಟ್ಟಾಗಿ ಇಲ್ಲದಿದ್ದರೆ, ನಡುವೆ ಎಲ್ಲಾದರೂ ಪದರಗಳು ಬಿಟ್ಟಿದ್ದರೆ ಗಾಜಿನ ಪಾತ್ರೆಯನ್ನು ಸುತ್ತಲೂ ಪರಿಶೀಲಿಸಿದಾಗ ಗೋಚರಿಸುತ್ತದೆ. ಕೊಬ್ಬರಿ, ಸೋಯಾ ಅಥವಾ ಸೂರ್ಯಕಾಂತಿ ಎಣ್ಣೆಗಳನ್ನು ಮಿಶ್ರ ಮಾಡಿದ್ದರ ಪರಿಣಾಮ ಇದಾಗಿರಬಹುದು.

ಬಿಸಿ ಪರೀಕ್ಷೆ

ಸಣ್ಣ ಪ್ಯಾನ್‌ನಲ್ಲಿ ಒಂದು ದೊಡ್ಡ ಚಮಚ ತುಪ್ಪವನ್ನು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತುಪ್ಪ ಶುದ್ಧವೇ ಆಗಿದ್ದರೆ ಒಂದೆರಡು ಕ್ಷಣಗಳಲ್ಲಿ ಅದು ಕರಗಿ, ನೀರಿನಂಥ ತಿಳಿಯಾದ ದ್ರವ ಮಾತ್ರವೇ ಕಾಣುತ್ತದೆ. ಒಂದೊಮ್ಮೆ ಬೇರೇನಾದರೂ ಅದಕ್ಕೆ ಸೇರಿದ್ದರೆ ಕರಗುವುದು ನಿಧಾನವಾಗಬಹುದು ಅಥವಾ ಕರಗಿದ ನಂತರ ಶೇಷವೇನಾದರೂ ಕಾಣಬಹುದು ಅಲ್ಲಿ.

Rich in antioxidants ghee is anti-inflammatory Ghee Benefits

ಅಯೋಡಿನ್‌ ಪರೀಕ್ಷೆ

ಒಂದು ದೊಡ್ಡ ಚಮಚ ತೆಳುವಾದ ತುಪ್ಪಕ್ಕೆ ಕೆಲವು ಹನಿ ಅಯೋಡಿನ್‌ ದ್ರಾವಣವನ್ನು ಸೇರಿಸಿ ಕಲಕಿ. ಈ ಮಿಶ್ರಣ ನಿಧಾನಕ್ಕೆ ನೀಲಿ ಬಣ್ಣಕ್ಕೆ ತಿರುಗಿದರೆ, ಆ ತುಪ್ಪದಲ್ಲಿ ಯಾವುದೋ ಪಿಷ್ಟದಂಥ ವಸ್ತುವನ್ನು ಮಿಶ್ರ ಮಾಡಲಾಗಿದೆ ಎಂಬುದು ಸ್ಪಷ್ಟ. ಮಿಶ್ರಣದಲ್ಲಿ ಯಾವುದೇ ಬಣ್ಣದ ಬದಲಾವಣೆ ಕಾಣದಿದ್ದರೆ ಸ್ಟಾರ್ಚ್‌ ಮಿಶ್ರಣ ಇಲ್ಲ, ಆದರೆ ಬೇರಾವುದೇ ಜಿಡ್ಡು ಇದ್ದರೆ ಅದು ತಿಳಿಯುವುದಿಲ್ಲ ಈ ಪರೀಕ್ಷೆಯಲ್ಲಿ.

ನೀರಿನ ಪರೀಕ್ಷೆ

ಒಂದು ಗಾಜಿನ ಗ್ಲಾಸ್‌ನಲ್ಲಿ ಮುಕ್ಕಾಲರಷ್ಟು ಶುದ್ಧ ನೀರನ್ನು ಇರಿಸಿಕೊಳ್ಳಿ. ಇದಕ್ಕೆ ಒಂದು ಸಣ್ಣ ಚಮಚ ತುಪ್ಪ ಹಾಕಿ. ಶುದ್ಧ ತುಪ್ಪ ನೀರಿನ ಮೇಲೆ ತೇಲುತ್ತಿರುತ್ತದೆ. ತುಪ್ಪ ಮಂದವಾಗಿಲ್ಲದೆ ತೆಳುವಾಗಿದ್ದರೂ ಅದು ನೀರಿನ ಮೇಲೆಯೇ ಇರಬೇಕು. ಹಾಗಲ್ಲದೆ, ನೀರಿನೊಂದಿಗೆ ಬೆರೆಯಿತು ಅಥವಾ ಅಡಿಯಲ್ಲಿ ಹೋಗಿ ಕುಳಿತಿತು ಎಂದಾದರೆ, ಅದಕ್ಕೇನೋ ಬೇರೆ ವಸ್ತುವನ್ನು ಮಿಶ್ರ ಮಾಡಲಾಗಿದೆ.

ಇದನ್ನೂ ಓದಿ: Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!

ಪೇಪರ್‌ ಪರೀಕ್ಷೆ

ಸಾಮಾನ್ಯವಾದ ಖಾಲಿ ಪೇಪರ್‌ ಮೇಲೆ ಒಂದೆರಡು ಹನಿ ತುಪ್ಪ ಹಾಕಿ. ಹತ್ತಾರು ನಿಮಿಷಗಳ ಕಾಲ ಹಾಗೆಯೇ ಬಿಡಿ ಅದನ್ನು, ಅಲ್ಲಾಡಿಸಲೂಬೇಡಿ. ಶುದ್ಧ ತುಪ್ಪ ಮೊದಲಿಗೆ ಕಾಗದಕ್ಕೆ ಹೀರಿಕೊಂಡು ಕೇವಲ ಜಿಡ್ಡಿನ ಗುರುತನ್ನು ಉಳಿಸುತ್ತದೆ. ಕ್ರಮೇಣ ಅದೂ ಮಾಯವಾಗಿ, ಪೇಪರ್‌ಗೆ ಹಾಕಿದ್ದ ತುಪ್ಪದ ಗುರುತು ಗೋಚರಿಸುವುದಿಲ್ಲ. ಕಲಬೆರಕೆ ತುಪ್ಪವಾದರೆ ಜಿಡ್ಡಿನ ಕಲೆ ಹಾಗೆಯೇ ಉಳಿಯುತ್ತದೆ. ಅದಕ್ಕೆ ಬೇರೆ ಬಣ್ಣವೂ ಬರಬಹುದು. ಮಾತ್ರವಲ್ಲ, ತುಪ್ಪದ ಗುರುತು ಸಂಪೂರ್ಣ ಮಾಯವಾಗದೆ ಅಂಟಾಗಿ ಕಾಣುತ್ತದೆ.

Continue Reading

ಬೆಂಗಳೂರು

CM Siddaramaiah: ಜಯದೇವ ಆಸ್ಪತ್ರೆಯ ನೆರವಿಗೆ ನಿಂತ ಸಿಎಂ; ಸಿಬ್ಬಂದಿ ಕೊರತೆ ನೀಗಿಸಲು ಕ್ರಮ

ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು ಎನ್ನುವುದು ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಮತ್ತು ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ನೂತನ ತಾಯಿ-ಮಕ್ಕಳ ಆಸ್ಪತ್ರೆ, ಬೋಧನಾ ಕಟ್ಟಡ, ಶವಾಗಾರ ಕಟ್ಟಡ, ನೂತನ ಮಾದರಿ ಅಡುಗೆ ಮನೆ, ಲಾಂಡ್ರಿ ಕಟ್ಟಡ, ವೈದ್ಯಕೀಯ ಘನ ತ್ಯಾಜ್ಯ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲೇ ಜಯದೇವ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ದಿನದ 24 ಗಂಟೆ ಜಯದೇವದಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆ ಒದಗಿಸಬೇಕು. ಇದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Bengaluru Power Cut: ಆ.28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು ಎನ್ನುವುದು ಸರ್ಕಾರದ ಗುರಿ ಎಂದು ತಿಳಿಸಿದರು.

ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟ ಮತ್ತು ಶುಚಿತ್ವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಬರಬೇಕು. ಆಗ ಮಾತ್ರ ಸರ್ಕಾರ ಕೊಡುವ ಅನುದಾನಕ್ಕೆ ಅರ್ಥ ಬರುತ್ತದೆ ಎಂದರು.

ಅಪಘಾತ ವಲಯಗಳ ಹತ್ತಿರದಲ್ಲೇ ಟ್ರಾಮಾ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಗಾಯಾಳುಗಳ ಜೀವ ಉಳಿಸಲು ಗೋಲ್ಡನ್ ಹವರ್ ಬಹಳ ಮುಖ್ಯ ಎನ್ನುವುದನ್ನು ಪರಿಗಣಿಸಿ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.

ನಾನು ಬಜೆಟ್‌ನಲ್ಲಿ ಹೇಳಿದ್ದನ್ನು ಜಾರಿ ಮಾಡಿ

ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಜವಾಬ್ದಾರಿಯಿಂದ ಜಾರಿ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ವೇದಿಕೆಯಿಂದಲೇ ಸಿಎಂ ಸೂಚನೆ ನೀಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಿಟ್ಟ ಬೇಡಿಕೆಗಳನ್ನು ಅನುಮೋದಿಸಿ ಹಣ ಬಿಡುಗಡೆ ಮಾಡಿದ್ದೇನೆ. ನೂತನ ಆಸ್ಪತ್ರೆ ಕಟ್ಟಡವನ್ನೂ ನಾನೇ ಉದ್ಘಾಟಿಸುತ್ತೇನೆ. ಬೇಗ ಕೆಲಸ ಮುಗಿಸಿ ಎಂದು ಸಚಿವರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ನ.15ಕ್ಕೆ ರಿಲೀಸ್‌

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Dinesh Gundu Rao: ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇರ್ ಸೆಂಟರ್: ಸಚಿವ ದಿನೇಶ್ ಗುಂಡೂರಾವ್

Dinesh Gundurao: ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ದೂರದ ನಗರಪ್ರದೇಶದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಜನರಿಗೆ ಅವರ ಜಿಲ್ಲೆಗಳಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಮುಂಬರುವ ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

VISTARANEWS.COM


on

Dinesh Gundurao
Koo

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ಮುಂಬರುವ ಒಂದು ತಿಂಗಳ ಒಳಗಾಗಿ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu rao) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 150 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ‌ಪೂಜೆ ನೆರವೇರಿಸಿದರು.‌

ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ನ.15ಕ್ಕೆ ರಿಲೀಸ್‌

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕೆ.ಸಿ ಜನರಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಂ.ಸಿ.ಎಚ್ ಆಸ್ಪತ್ರೆ, ಭೋದಕ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿಯ ಅನುದಾನವನ್ನು ಕೇಳಿದ್ದೆವು. ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲೇ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಭೂಮಿ ಪೂಜೆ ಕೂಡಾ ನೆರವೇರಿಸಲಾಗಿದೆ. ಇದರ ಸಂಪೂರ್ಣ ಸದುಪಯೋಗ ನಮ್ಮ ಜನಸಾಮಾನ್ಯರಿಗೆ ದೊರೆಯಲಿದೆ ಎಂದರು.‌

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಡಯಾಲಿಸಿಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, 750 ಕ್ಕೂ ಹೆಚ್ಚು ಏಕಬಳಕೆಯ ಡಯಾಲಿಸಿಸ್ ಹೊಸ ಯಂತ್ರಗಳನ್ನು ಅಳವಡಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಈ ಹಿಂದೆ ಶೇ. 30 ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿಗಳು ಸರಬರಾಜು ಆಗುತ್ತಿದ್ದವು. ಇದೀಗ ಶೇ. 70 ರಷ್ಟು ಔಷಧಿಗಳನ್ನು ನಿಗಮದಿಂದ ಖರೀದಿಸಿ, ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಶೇ. 90 ರಷ್ಟು ಔಷಧಿಗಳು ದೊರಕಿಸುವತ್ತ ಆರೋಗ್ಯ ಇಲಾಖೆ ಹೆಜ್ಜೆಯಿಟ್ಟಿದೆ ಎಂದರು.

ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ಇಂದು ದೂರದ ನಗರಪ್ರದೇಶದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಜನರಿಗೆ ಅವರ ಜಿಲ್ಲೆಗಳಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಮುಂಬರುವ ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅಪಘಾತ ಸಂಭವಿಸುವ ಹಾಟ್‌ಸ್ಪಾಟ್‌ಗಳಲ್ಲಿ ಪ್ರತ್ಯೇಕ ಅಂಬ್ಯುಲೆನ್ಸ್

ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.‌ 65 ನೂತನ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯನ್ನು ಅಪಘಾತಕ್ಕಿಡಾದವರ ನೆರವಿಗಾಗಿಯೇ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಇದನ್ನೂ ಓದಿ: Bengaluru Power Cut: ಆ.28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಆರೋಗ್ಯ ಸಚಿವರಾಗಿ ದಿನೇಶ್ ಗುಂಡೂರಾವ್ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತರುತ್ತಿದ್ದು, ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಜನಸಾಮಾನ್ಯರ ಆರೋಗ್ಯ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

Continue Reading
Advertisement
Deepfake Video
ವೈರಲ್ ನ್ಯೂಸ್21 mins ago

Deepfake Video: ಶುಬ್ ಮನ್ ಗಿಲ್ ಅನ್ನು ದೂಷಿಸಿದ ವಿರಾಟ್; ಡೀಪ್ ಫೇಕ್ ವಿಡಿಯೋ ವೈರಲ್

Road Accident
ಬೆಂಗಳೂರು21 mins ago

Road Accident : ಚಾಲುಕ್ಯ ಸರ್ಕಲ್‌ನಲ್ಲಿ ಸೈಕಲ್‌ ಸವಾರನಿಗೆ ಲಾರಿ ಡಿಕ್ಕಿ; ಹೊರಬಂತು ಮೆದುಳು!

Actor Chikkanna
ಪ್ರಮುಖ ಸುದ್ದಿ35 mins ago

Actor Chikkanna: ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ ವಿಚಾರಣೆಗೆ ಹಾಜರು

Actor Darshan
ಸ್ಯಾಂಡಲ್ ವುಡ್1 hour ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

Hair Combing
ಆರೋಗ್ಯ5 hours ago

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

dhavala dharini column Hanuman's setubandha to meet Sugriva in ramayana by narayana yaji
ಅಂಕಣ5 hours ago

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

karnataka weather Forecast
ಮಳೆ6 hours ago

Karnataka Weather : ಬೆಂಗಳೂರಿನಲ್ಲಿ ಘಳಿಗೆವೊಂದು ವಾತಾವರಣ; ಕರಾವಳಿಗೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ7 hours ago

Dina Bhavishya: ಈ ದಿನ ಆತ್ಮೀಯರೊಂದಿಗೆ ಕಾಲ ಕಳೆಯುವಿರಿ; ಆದ್ರೆ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ

Murder Case
ಬೆಂಗಳೂರು15 hours ago

Murder Case: ಶೀಲ ಶಂಕೆ; ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಭೀಕರ ಹತ್ಯೆ

Actor Darshan
ಬೆಂಗಳೂರು16 hours ago

Actor Darshan: ಪವಿತ್ರಾಗೌಡ ಜಾಮೀನು ಅರ್ಜಿಯ ಭವಿಷ್ಯ ಆ.31ಕ್ಕೆ ನಿರ್ಧಾರ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Actor Darshan
ಸ್ಯಾಂಡಲ್ ವುಡ್1 hour ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ5 days ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

ಟ್ರೆಂಡಿಂಗ್‌