Viral Video: ಕಳ್ಳತನ ಆರೋಪ: ವ್ಯಕ್ತಿಯ ಖಾಸಗಿ ಅಂಗಕ್ಕೆ ಮೆಣಸಿನ ಪುಡಿ ತುರುಕಿದ ದುಷ್ಕರ್ಮಿಗಳು - Vistara News

ವೈರಲ್ ನ್ಯೂಸ್

Viral Video: ಕಳ್ಳತನ ಆರೋಪ: ವ್ಯಕ್ತಿಯ ಖಾಸಗಿ ಅಂಗಕ್ಕೆ ಮೆಣಸಿನ ಪುಡಿ ತುರುಕಿದ ದುಷ್ಕರ್ಮಿಗಳು

ಬಿಹಾರದ ಅರಾರಿಯಾದ ಇಸ್ಲಾಂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದ್ದಾರೆ. ಇದರ ವಿಡಿಯೋ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳ್ಳತನ ಮಾಡಿದ್ದಾನೆ (theft Accused) ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಕೆಲವು ವ್ಯಕ್ತಿಗಳು ಸೇರಿ ಮೆಣಸಿನ ಪುಡಿ ತುಂಬಿರುವ ಘಟನೆ ಬಿಹಾರದ ಅರಾರಿಯಾದಲ್ಲಿ (Bihar’s Araria) ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಘಟನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಅರಾರಿಯಾದ ಇಸ್ಲಾಂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದ್ದಾರೆ. ಇದರ ವಿಡಿಯೋ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯ ಕೈಗಳನ್ನು ಹಿಂದಕ್ಕೆ ಕಟ್ಟಿ, ಅವನ ಪ್ಯಾಂಟ್ ಬಿಚ್ಚಿ ಕೆಲವು ಪುರುಷರು ಆತನನ್ನು ಮೊಣಕಾಲುಗಳ ಮೇಲೆ ಬಾಗಿಸುವಂತೆ ಒತ್ತಾಯಿಸುತ್ತಿರುವುದು ಸೆರೆಯಾಗಿದೆ.

ಆರೋಪಿಗಳಲ್ಲಿ ಒಬ್ಬ ಕಳ್ಳನ ಬೆನ್ನಿನ ಮೇಲೆ ಮೆಣಸಿನ ಪುಡಿ ಸುರಿದು ಪೆನ್ಸಿಲ್ ಬಳಸಿ ಗುದನಾಳದಲ್ಲಿ ತುಂಬಿಸಿರುವುದಾಗಿ ತಿಳಿದು ಬಂದಿದೆ. ಅನೇಕರು ಸೇರಿ ಆತನನ್ನು ಸಂಪೂರ್ಣ ತಪಾಸಣೆ ನಡೆಸುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದ ಈ ವಿಡಿಯೋದಲ್ಲಿ ಗುರುತಿಸಲಾದ ಮೊಹಮ್ಮದ್ ಸಿಫತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವೇಳೆ ಅಲ್ಲಿದ್ದ ಅನೇಕರು ಇದರ ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯು ಬಿಹಾರದಲ್ಲಿ “ತಾಲಿಬಾನ್ ರಾಜ್” ಅನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮರಾಠಿ ಚಿತ್ರ ನಿರ್ದೇಶಕಿ ಮನೆಗೆ ನುಗ್ಗಿದ ಕಳ್ಳ; ಆರನೇ ಮಹಡಿಯಲ್ಲಿದ್ದ ಮನೆಗೆ ಕಳ್ಳ ಬಂದು, ಹೋಗಿದ್ದು ಹೇಗೆ ವಿಡಿಯೋ ನೋಡಿ

ಈ ಕುರಿತು ಆರ್ ಜೆಡಿ ನಾಯಕ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ನಾನು ಮತ್ತು ನನ್ನ ಪಕ್ಷವು ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಂಚಿಕೆಯ ಬಗ್ಗೆ ಮಾತನಾಡುತ್ತೇವೆ. ಆದ್ದರಿಂದ ಜಾತಿವಾದಿಗಳು ಯಾವಾಗಲೂ ನಮ್ಮ ಆಡಳಿತವನ್ನು ಜಂಗಲ್ ರಾಜ್ ಎಂದು ನೋಡುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ ನಲ್ಲಿ ತೇಜಸ್ವಿ ಯಾದವ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದು, ತಾಲಿಬಾನ್ ಆಡಳಿತದ ಬಗ್ಗೆ ಮಾತನಾಡುವವರು ಮುಸ್ಲಿಮರ ಮತ ಕೇಳುವ ಮೊದಲು ತಾಲಿಬಾನಿ ಎಂದು ಕರೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಮರಾಠಿ ಚಿತ್ರ ನಿರ್ದೇಶಕಿ ಮನೆಗೆ ನುಗ್ಗಿದ ಕಳ್ಳ; ಆರನೇ ಮಹಡಿಯಲ್ಲಿದ್ದ ಮನೆಗೆ ಕಳ್ಳ ಬಂದು, ಹೋಗಿದ್ದು ಹೇಗೆ ವಿಡಿಯೋ ನೋಡಿ

ಮರಾಠಿ ಚಲನಚಿತ್ರ ನಿರ್ಮಾಪಕರ 6ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ಕಳ್ಳನೊಬ್ಬ ತೆರೆದ ಕಿಟಕಿಯ ಮೂಲಕ ಪ್ರವೇಶಿಸಿ, ಹೊರಗೆ ಹೋಗುವುದನ್ನು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ನಾಯಿ ಎಚ್ಚರಿಸಿದ್ದರಿಂದ ಕಳ್ಳ ಓಡಿ ಹೋಗಿದ್ದಾನೆ. ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಾಕಷ್ಟು ವೈರಲ್ (Viral Video) ಆಗಿದೆ.

VISTARANEWS.COM


on

By

Viral video
Koo

ಮರಾಠಿ ಚಲನಚಿತ್ರ (Marathi film) ಮತ್ತು ದೂರದರ್ಶನ ನಿರ್ದೇಶಕಿ (TV director) ಸ್ವಪ್ನಾ ವಾಘಮಾರೆ ಜೋಶಿ (Swapna Waghmare Joshi) ಅವರ ಮನೆಗೆ ಕಳ್ಳನೊಬ್ಬ ಪ್ರವೇಶಿಸಿದ್ದು, ಸಾಕುನಾಯಿ ನೀಡಿದ ಎಚ್ಚರಿಕೆಯಿಂದ ಕಳ್ಳ ಓಡಿ ಹೋಗುವಂತಾಯಿತು ಎಂಬುದಾಗಿ ಸ್ವಪ್ನಾ ವಾಘಮಾರೆ ಅವರ ಆಪ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Viral Video) ಸಹಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಸಾಕು ಪ್ರಾಣಿಗಳಿರುವುದು ಯಾಕೆ ಅಗತ್ಯ ಎಂಬುದನ್ನೂ ಅವರು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇನ್ ಸ್ಟಾ ಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲು ವಾಘಮಾರೆ ಅವರು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರಿಗೆ ಕರೆ ಮಾಡಿ ರಾತ್ರಿ 3 ಗಂಟೆಯ ಸುಮಾರಿಗೆ ತಮ್ಮ ಮನೆಯೊಳಗೆ ನಡೆದ ಘಟನೆಗಳ ಬಗ್ಗೆ ಹೇಳಿಕೊಂಡಿದ್ದಾರೆ ಎಂಬುದನ್ನು ಅಶೋಕ್ ವಿವರಿಸಿದ್ದಾರೆ.

ಪೋಸ್ಟ್‌ನ ಪ್ರಕಾರ ನಿರ್ದೇಶಕರು ಲಿವಿಂಗ್ ರೂಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳಲ್ಲಿ ಸಂಪೂರ್ಣ ವಿಡಿಯೋ ಸೆರೆಯಾಗಿದೆ. ಕಳ್ಳನೊಬ್ಬ ಪೈಪ್ ಮೂಲಕ ಹತ್ತಿಕೊಂಡು ಬಂದು ಆರನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನೊಳಗೆ ತೆರೆದ ಕಿಟಕಿಯ ಮೂಲಕ ಪ್ರವೇಶಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅವನು ಕದಿಯಲು ದುಬಾರಿ ವಸ್ತುಗಳನ್ನು ಹುಡುಕುತ್ತಾ ಮನೆಯೊಳಗೇ ಮುಕ್ತವಾಗಿ ತಿರುಗಾಡುತ್ತಿದ್ದ. ಸ್ವಪ್ನಾ ಮತ್ತು ಅವರ ತಾಯಿ ಮಲಗಿದ್ದ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದನು. ಅಲ್ಲಿದ್ದವರು ಕೊಂಚ ಎಚ್ಚರಗೊಂಡಂತೆ ಆಗಿದ್ದರಿಂದ ಒಳಗೆ ಹೋಗಲಿಲ್ಲ. ನಿರ್ದೇಶಕರ ಮಗಳ ಪರ್ಸ್‌ನಿಂದ 6,000 ರೂಪಾಯಿ ಕದ್ದಿದ್ದಾನೆ.

ಸ್ವಲ್ಪ ಸಮಯದ ಅನಂತರ ವಾಘಮಾರೆಯ ಸಾಕುನಾಯಿಗೆ ಕಳ್ಳ ಮನೆಗೆ ಬಂದಿರುವುದು ಗೊತ್ತಾಗಿ ಬೊಗಳಲು ಪ್ರಾರಂಭಿಸಿತ್ತು. ತಕ್ಷಣ ಮನೆಯಲ್ಲಿ ಇದ್ದವರು ಎಚ್ಚರಗೊಂಡರು. ಮನೆಯವರು ಕಳ್ಳನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಕಳ್ಳ ತಕ್ಷಣ ಮನೆಗೆ ನುಗ್ಗಿದ ದಾರಿಯಲ್ಲೇ ಓಡಿ ಹೋಗಿದ್ದಾನೆ.

ಇದೊಂದು ಎಲ್ಲರಿಗೂ ಎಚ್ಚರಿಕೆಯ ಘಟನೆಯಾಗಿದೆ. ವಿಶೇಷವಾಗಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ಇರುವ ಮನೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕಿದೆ ಎಂಬುದಾಗಿ ಅಶೋಕ್ ಈ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಅಂಧೇರಿಯ ಲೋಖಂಡ್ವಾಲಾ ಕಾಂಪ್ಲೆಕ್ಸ್ ನಲ್ಲಿ ನೆಲೆಸಿರುವ ಸ್ವಪ್ನಾ ಅವರ ನಿವಾಸದ 6 ನೇ ಮಹಡಿಯನ್ನು ಕಳ್ಳನೊಬ್ಬ ಪೈಪ್‌ಗಳ ಸಹಾಯದಿಂದ ಹೇಗೆ ಏರಿದ್ದಾನೆ ಮತ್ತು ಇಳಿದಿದ್ದಾನೆ ಎಂಬುದನ್ನು ನೋಡಿದರೆ ಖಂಡಿತಾ ಎಲ್ಲರೂ ಶಾಕ್ ಆಗುತ್ತೀರಿ ಎಂದು ಅಶೋಕ್ ತಿಳಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಈ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಕೆಲವರು ಕಟ್ಟಡಗಳ ಭದ್ರತಾ ಸಿಬ್ಬಂದಿಯನ್ನು ದೂಷಿಸಿದ್ದಾರೆ.

ಘಟನೆಯ ಕುರಿತು ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನಿರ್ದೇಶಕರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಒಬ್ಬರು ಬರೆದಿದ್ದಾರೆ, ಇದು ಆಘಾತಕಾರಿ! ಜಾಗೃತೆಯಾಗಿರಿ ಎಂದು ಹೇಳಿದ್ದಾರೆ. ಇನ್ನೊಬ್ಬರು ತುಂಬಾ ಆಘಾತಕಾರಿ. ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ವಿಂಡೀಸ್​ ಆಟಗಾರನ ಸಿಟ್ಟಿಗೆ ಸಿಕ್ಸರ್​ಗೆ ಸಿಡಿದ ಹೆಲ್ಮೆಟ್!

ಏನು ನರಕ … ಇದು ತುಂಬಾ ಭಯಾನಕವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ತುಂಬಾ ಕೆಟ್ಟದು ಮತ್ತು ಆಘಾತಕಾರಿ. ಕಾವಲುಗಾರರು ಸಾಮಾನ್ಯವಾಗಿ ರಾತ್ರಿ ಪಾಳಿಯಲ್ಲಿ ಮಲಗುತ್ತಾರೆ. ಕಿಟಕಿಗಳನ್ನು ಗ್ರಿಲ್‌ಗಳಿಂದ ಮುಚ್ಚುವುದು ಮುಖ್ಯ. ದೇವರಿಗೆ ಧನ್ಯವಾದಗಳು ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಅಂತಹ ಕಟ್ಟಡಗಳಲ್ಲಿ ಉತ್ತಮ ಭದ್ರತಾ ಸೇವೆ ಕೈಗೊಳ್ಳುವಂತೆ ಅನೇಕರು ಒತ್ತಾಯಿಸಿದ್ದಾರೆ.

Continue Reading

ಕ್ರೀಡೆ

Viral Video: ವಿಂಡೀಸ್​ ಆಟಗಾರನ ಸಿಟ್ಟಿಗೆ ಸಿಕ್ಸರ್​ಗೆ ಸಿಡಿದ ಹೆಲ್ಮೆಟ್!

Viral Video:2 ದಿನಗಳ ಹಿಂದಷ್ಟೇ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶದ(Pakistan vs Bangladesh) ಹಿರಿಯ ಕ್ರಿಕೆಟ್​ ಆಟಗಾರ ಶಕಿಬ್​ ಅಲ್​ ಹಸನ್​(Shakib Al Hasan) ​ತಾಳ್ಮೆ ಕಳೆದುಕೊಂಡ(Angry Shakib Al Hasan) ಘಟನೆ ನಡೆದಿತ್ತು.

VISTARANEWS.COM


on

Viral Video
Koo

ಗಯಾನ: 2016ರಲ್ಲಿ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಅಂತಿಮ ಓವರ್​ನಲ್ಲಿ ಸತತ 4 ಸಿಕ್ಸರ್​ ಬಾರಿಸಿ ವೆಸ್ಟ್​ ಇಂಡೀಸ್​ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್(Carlos Brathwaite), ಇದೀಗ ಅನಗತ್ಯವಾಗಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ​ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತಾಳ್ಮೆ ಕಳೆದುಕೊಂಡು ತನ್ನ ಹೆಲ್ಮೆಟ್ ಅನ್ನು ಬ್ಯಾಟ್​ನಿಂದ ಹೊಡೆದು ಸಿಕ್ಸರ್​ಗಟ್ಟಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಗ್ರ್ಯಾಂಡ್ ಕೇಮನ್ ಜಾಗ್ವಾರ್ ತಂಡದ ಜೋಶ್ ಲಿಟಲ್ ಎಸೆತದ ಬ್ರಾಥ್ ವೇಟ್ ಅವರ ಭುಜಕ್ಕೆ ತಾಗಿ ವಿಕೆಟ್​ ಕೀಪರ್​ ಕೈ ಸೇರಿತು. ಚೆಂಡಿಗೆ ಬ್ಯಾಟ್​ ತಾಗಿರಬಹುದು ಎಂದು ಕೀಪರ್​ ಔಟ್​ಗಾಗಿ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಔಟೆಂದು ತೀರ್ಪು ನೀಡಿದರು. ಅಂಪೈರ್ ಅವರ ತಪ್ಪು ನಿರ್ಣಯದಿಂದ ತಾಳ್ಮೆ ಕಳೆದುಕೊಂಡ ಬ್ರಾಥ್‌ವೈಟ್, ಡಗೌಟ್​ ಕಡೆಗೆ ಹೋಗುವಾಗ ಸಿಟ್ಟಿನಿಂದ ಹೆಲ್ಮೆಟ್‌ ಮೇಲಕ್ಕೆ ಎಸೆದು ಬ್ಯಾಟ್​ನಿಂದ ಜೋರಾಗಿ ಜೋರಾಗಿ ಹೊಡೆದರು. ಹೊಡೆದ ರಭಸಕ್ಕೆ ಹೆಲ್ಮೆಟ್‌ ಪುಡಿ ಪುಡಿಯಾಗಿ ಸಿಕ್ಸರ್ ಲೈನ್​ನಿಂದ ಹೊರಕ್ಕೆ ಸಿಡಿಯಿತು. ಬಳಿಕ ಬ್ಯಾಟ್​ ಕೂಡ ಎಸೆದು ಅಂಪೈರ್​ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಎಲ್ಲ ದೃಶ್ಯಗಳನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ Viral Video: ಸೊಸೆಯಿಂದ ಅತ್ತೆಯ ಮೇಲೆ ಭೀಕರ ಹಲ್ಲೆ ವಿಡಿಯೊದಲ್ಲಿ ಸೆರೆ​

2016ರ ಟಿ20 ವಿಶ್ವ ಕಪ್ ಫೈನಲ್​ನ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡಕ್ಕೆ ಗೆಲ್ಲಲು ಅಂತಿಮ ಓವರ್​ನಲ್ಲಿ 19 ರನ್​ ಬೇಕಿತ್ತು. ಈ ಓವರ್​ ಎಸೆಯಲು ಬಂದ ಬೆನ್​ ಸ್ಟೋಕ್ಸ್​ಗೆ ಕ್ರೀಸ್​ನಲ್ಲಿದ್ದ ಕಾರ್ಲೊಸ್ ಬ್ರಾಥ್‌ವೇಟ್ ಸತತ ನಾಲ್ಕು ಸಿಕ್ಸರ್‌ ಸಿಡಿಸಿ ವೆಸ್ಟ್ ಇಂಡೀಸ್​ಗೆ ಗೆಲುವು ತಂದು ಕೊಟ್ಟರು. ಈ ವೇಳೆ ಕಾಮೆಂಟರಿ ಪ್ಯಾನಲ್​ನಲ್ಲಿದ್ದ ಇಯಾನ್​ ಬಿಷಪ್​ ಕಾರ್ಲೊಸ್ ಬ್ರಾಥ್‌ವೇಟ್, ಹೆಸರನ್ನು ನೆನಪಿಡಿ! (‘Remember the Name’) ಎಂದು ಹೇಳುವ ಮೂಲಕ ವಿಂಡೀಸ್​ ಗೆಲುವಿನ ಸಂಭ್ರಮದಲ್ಲಿ ತಾವೂ ಕೂಡ ಭಾಗಿಯಾಗಿದ್ದರು.

2 ದಿನಗಳ ಹಿಂದಷ್ಟೇ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶದ(Pakistan vs Bangladesh) ಹಿರಿಯ ಕ್ರಿಕೆಟ್​ ಆಟಗಾರ ಶಕಿಬ್​ ಅಲ್​ ಹಸನ್​(Shakib Al Hasan) ​ತಾಳ್ಮೆ ಕಳೆದುಕೊಂಡ(Angry Shakib Al Hasan) ಘಟನೆ ನಡೆದಿತ್ತು. ಮೊಹಮ್ಮದ್​ ರಿಜ್ವಾನ್(Mohammad Rizwan)​ ಕ್ರೀಸ್​ನಲ್ಲಿ ಬ್ಯಾಟಿಂಗ್​ ನಡೆಸಲು ಸಿದ್ಧರಾಗದ ವೇಳೆ ಸಿಟ್ಟಿಗೆದ್ದ ಶಕಿಬ್​​ ಚೆಂಡನ್ನು ನೇರವಾಗಿ ರಿಜ್ವಾನ್ ಕಡೆ ಎಸೆದಿದ್ದರು. ಬಳಿಕ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಮಧ್ಯ ಪ್ರವೇಶಿಸಿ ಶಕಿಬ್​ಗೆ ವಾರ್ನಿಂಗ್​ ನೀಡಿದ್ದರು.

Continue Reading

ವೈರಲ್ ನ್ಯೂಸ್

Viral Video: ಸೊಸೆಯಿಂದ ಅತ್ತೆಯ ಮೇಲೆ ಭೀಕರ ಹಲ್ಲೆ ವಿಡಿಯೊದಲ್ಲಿ ಸೆರೆ​

ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಈ ವಿಡಿಯೋದಲ್ಲಿ ಸೆ ತನ್ನ ಅತ್ತೆಗೆ ಹಿಂಸೆ ನೀಡುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಈ ಕುರಿತು ನೆಟ್ಟಿಗರಿಂದ ಆಕ್ರೋಶವೂ ವ್ಯಕ್ತವಾಗಿದ್ದು, ಉತ್ತರ ಪ್ರದೇಶ ಪೊಲೀಸರಿಗೆ ಸಲ್ಲಿಸಿದ ದೂರುಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

VISTARANEWS.COM


on

By

Viral Video
Koo

ಕೆಲವು ಮನೆಗಳಲ್ಲಿ ಹಿರಿಯ ನಾಗರಿಕರ (senior citizens) ಮೇಲೆ ದೈಹಿಕ, ಮಾನಸಿಕ ಹಿಂಸೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋವೊಂದು ವೈರಲ್ (Viral Video) ಆಗಿದೆ. ಉತ್ತರ ಪ್ರದೇಶದಲ್ಲಿ (uttarpradesh) ನಡೆದಿದೆ ಎನ್ನಲಾದ ಈ ವಿಡಿಯೋದಲ್ಲಿ ಸೊಸೆ ತನ್ನ ಅತ್ತೆಗೆ ಹಿಂಸೆ ನೀಡುತ್ತಿರುವುದು ಕೆಮೆರಾದಲ್ಲಿ ಸೆರೆಯಾಗಿದೆ.

ಭಾರತದಲ್ಲಿ ಹಿರಿಯ ನಾಗರಿಕರ ನಿಂದನೆಯು ಆತಂಕಕಾರಿಯಾಗಿದೆ. ಅನೇಕ ಹಿರಿಯ ನಾಗರಿಕರು ತಮ್ಮ ಸ್ವಂತ ಕುಟುಂಬದವರಿಂದಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕಾನೂನು ಜಾರಿ ಸಂಸ್ಥೆಗಳ ವೈಫಲ್ಯವೂ ಕಾರಣವೆನ್ನಬಹುದು.

ಉತ್ತರ ಪ್ರದೇಶ ಪೊಲೀಸರಿಗೆ ಸಲ್ಲಿಸಿದ ದೂರುಗಳನ್ನು ನಿರ್ಲಕ್ಷಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ದೂರುಗಳು ಸೊಸೆಯರಿಂದ ನಿಂದನೆಯ ಬಗ್ಗೆ ಒಳಗೊಂಡಿರುತ್ತದೆ. ಈ ನಿರ್ಲಕ್ಷ್ಯದಿಂದಾಗಿಯೇ ಅಲ್ಲಿ ವಯಸ್ಸಾದವರು, ದುರ್ಬಲರು ಮತ್ತೂ ಶಕ್ತಿಹೀನರಾಗುತ್ತಾರೆ. ಅವರ ಜೀವನವನ್ನು ಪೀಡಿಸುವವರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಇತ್ತೀಚಿನ ಈ ವಿಡಿಯೋ ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಹಿರಿಯ ನಾಗರಿಕರನ್ನು ರಕ್ಷಿಸಲು ಹೆಚ್ಚು ದೃಢವಾದ ಕಾನೂನು ಪ್ರತಿಕ್ರಿಯೆಯ ತುರ್ತು ಅಗತ್ಯವನ್ನು ಇದು ಒತ್ತಿ ಹೇಳಿದೆ. ಸೊಸೆಯು ತನ್ನ ಅತ್ತೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.


ಇದನ್ನೂ ಓದಿ: Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳು ಹಿರಿಯರ ನಿಂದನೆಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕಿದೆ. ಹಿರಿಯ ನಾಗರಿಕರ ಯೋಗಕ್ಷೇಮವನ್ನು ಕಾಪಾಡಲು ಇಂತಹ ಪ್ರಕರಣಗಳನ್ನು ಕೂಲಂಕುಷವಾಗಿ ತನಿಖೆ ನಡೆಸುವುದು ಮತ್ತು ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಒಳಪಡಿಸುವುದು ಬಹುಮುಖ್ಯವಾಗಿದೆ ಎಂಬುದಾಗಿ ಅನೇಕರು ಒತ್ತಾಯವನ್ನೂ ಮಾಡಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ರೋಗ ವಾಸಿ ಮಾಡೋ ಅಂದ್ರೆ ಮೈ-ಕೈ ಮುಟ್ತಾನೆ ಈ ನಕಲಿ ಬಾಬಾ- ವಿಡಿಯೋ ಇದೆ

Viral Video: ನಕಲಿ ಬಾಬಾನೊಬ್ಬ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೊಟ್ಟೆನೋವಿಗೆಂದು ಪೋಷಕರ ಜೊತೆ ಬಂದಿದ್ದ ಯುವತಿಯ ಮೈಯನ್ನು ಮುಟ್ಟಿ ಆಕೆ ತಂದೆ ತಾಯಿ ಎದುರೇ ನಕಲಿ ಬಾಬಾ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯ ಎದೆ, ಹೊಟ್ಟೆಯನ್ನು ಮುಟ್ಟಿ ನಕಲಿ ಬಾಬಾ ವಿಕೃತಿ ಮೆರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ

VISTARANEWS.COM


on

Viral video
Koo

ನವದೆಹಲಿ: ಧರ್ಮ, ಧಾರ್ಮಿಕ ವಿಚಾರ, ದೇವರ ಹೆಸರು ಹೇಳಿಕೊಂಡು ದುಡ್ಡು ಮಾಡುವವರು ಒಂದು ಕಡೆಯಾದ್ರೆ ಅದೇ ವಿಚಾರವನ್ನಿಟ್ಟುಕೊಂಡು ಹೆಣ್ಣು ಮಕ್ಕಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ನಕಲಿ ಬಾಬಾ(Fake Baba)ಗಳು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿರುವ ಸುದ್ದಿಗಳು ಬೆಳಕಿಗೆ ಬರುತ್ತಿದ್ದರೂ ಜನರಿಗಂತೂ ಬುದ್ದಿ ಬರುತ್ತಲೇ ಇಲ್ಲ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಆ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ನಕಲಿ ಬಾಬಾನೊಬ್ಬ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೊಟ್ಟೆನೋವಿಗೆಂದು ಪೋಷಕರ ಜೊತೆ ಬಂದಿದ್ದ ಯುವತಿಯ ಮೈಯನ್ನು ಮುಟ್ಟಿ ಆಕೆ ತಂದೆ ತಾಯಿ ಎದುರೇ ನಕಲಿ ಬಾಬಾ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯ ಎದೆ, ಹೊಟ್ಟೆಯನ್ನು ಮುಟ್ಟಿ ನಕಲಿ ಬಾಬಾ ವಿಕೃತಿ ಮೆರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ

ಇನ್ನು ಯುವತಿ ಬಾಬಾನ ವರ್ತನೆಗೆ ಬೇಸತ್ತು ತನ್ನನ್ನು ಮುಟ್ಟದಂತೆ ಎಷ್ಟೇ ತಡೆದರೂ ಈ ಬಾಬಾ ಮಾತ್ರ ಮತ್ತೆ ಮತ್ತೆ ಅದನೇ ಮಾಡುತ್ತಾನೆ. ಅದೂ ಅಲ್ಲದೇ ಆಕೆಯ ತಂದೆ ತಾಯಿ ಕೂಡ ಆಕೆಯನ್ನು ಬಾಬಾನ ಚಿಕಿತ್ಸೆಗೆ ಸಹಕರಿಸುವಂತೆ ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬುದಾಗಿದೆ.

ಕೆಲವು ತಿಂಗಳಗಳ ಹಿಂದೆ ಚಾಮರಾಜನಗರದಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಚಿಕಿತ್ಸೆಗೆಂದು ಬಂದಿದ್ದ ವಿವಾಹಿತೆಯನ್ನು ನಕಲಿ ಬಾಬಾ ಒಬ್ಬ ತಲೆಕೆಡಿಸಿ ತನ್ನತ್ತ ಸೆಳೆದುಕೊಂಡಿದ್ದಾನೆ ಎಂದು ತಿಳಿದ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿತ್ತು. ಇಲ್ಲಿನ ನಿವಾಸಿ ಮಹಮದ್ ಅಫ್ಘಾನ್ ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಮೈಸೂರಿನ ಬಾಬಾ ಖುರ್ರಾಂ ಪಾಷಾ ಎಂಬಾತನ ವಿರುದ್ಧ ಈಗ ಗಂಭೀರ ಆರೋಪ ಕೇಳಿ ಬಂದಿದೆ.

ಮಹಮ್ಮದ್ ಅಫ್ಘನ್ ಹಾಗೂ ಆತನ ಪತ್ನಿ ತಿನ್ಜೀಯಾ ಕೌಸರ್ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸದಲ್ಲಿ ವಾಸಿಸುತ್ತಿದ್ದರು. ಪತ್ನಿ ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿ ದಂಪತಿ ತೆರಳಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಾಯಿಬಾಬಾನ 3ನೇ ಅವತಾರ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ನಕಲಿ ಬಾಬಾ ಪರಾರಿ!

Continue Reading
Advertisement
Hair Combing
ಆರೋಗ್ಯ3 hours ago

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

dhavala dharini column Hanuman's setubandha to meet Sugriva in ramayana by narayana yaji
ಅಂಕಣ3 hours ago

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

karnataka weather Forecast
ಮಳೆ4 hours ago

Karnataka Weather : ಬೆಂಗಳೂರಿನಲ್ಲಿ ಘಳಿಗೆವೊಂದು ವಾತಾವರಣ; ಕರಾವಳಿಗೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ5 hours ago

Dina Bhavishya: ಈ ದಿನ ಆತ್ಮೀಯರೊಂದಿಗೆ ಕಾಲ ಕಳೆಯುವಿರಿ; ಆದ್ರೆ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ

Murder Case
ಬೆಂಗಳೂರು13 hours ago

Murder Case: ಶೀಲ ಶಂಕೆ; ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಭೀಕರ ಹತ್ಯೆ

Actor Darshan
ಬೆಂಗಳೂರು14 hours ago

Actor Darshan: ಪವಿತ್ರಾಗೌಡ ಜಾಮೀನು ಅರ್ಜಿಯ ಭವಿಷ್ಯ ಆ.31ಕ್ಕೆ ನಿರ್ಧಾರ

Fashion Trend
ಫ್ಯಾಷನ್15 hours ago

Fashion Trend: ಕಟೌಟ್‌ ಪ್ಯಾಂಟ್‌ ಸೂಟ್‌; ಗ್ಲಾಮರಸ್‌ ಯುವತಿಯರ ಲೇಟೆಸ್ಟ್ ಆಯ್ಕೆ!

Stray Dogs Attack
ಕ್ರೈಂ15 hours ago

Stray Dogs Attack: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿ

R Ashok
ಬೆಂಗಳೂರು15 hours ago

R Ashok: ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ; ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದ ಆರ್‌. ಅಶೋಕ್‌

karnataka weather Forecast
ಮಳೆ15 hours ago

Karnataka Weather : ನಿರಂತರ ಮಳೆಗೆ ಮನೆ ಗೋಡೆ ಕುಸಿತ; ಮಹಿಳೆ ಆಸ್ಪತ್ರೆ ಪಾಲು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ5 days ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌