Fashion Trend: ಮಾನ್ಸೂನ್‌ನಲ್ಲಿ ಟ್ರೆಂಡಿಯಾಗಿದೆ ನಟ ರಿತೇಶ್ ಧರಿಸಿದ ಕಲರ್‌ ಡೆನಿಮ್‌ ಜಾಕೆಟ್‌! - Vistara News

ಫ್ಯಾಷನ್

Fashion Trend: ಮಾನ್ಸೂನ್‌ನಲ್ಲಿ ಟ್ರೆಂಡಿಯಾಗಿದೆ ನಟ ರಿತೇಶ್ ಧರಿಸಿದ ಕಲರ್‌ ಡೆನಿಮ್‌ ಜಾಕೆಟ್‌!

Fashion Trend: ಮಾನ್ಸೂನ್‌ ಸೀಸನ್‌ನಲ್ಲಿ ಇದೀಗ ಕಲರ್‌ ಡೆನಿಮ್‌ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಕಲರ್‌ ಕಾನ್ಸೆಪ್ಟ್ನ ಗಡಿ ದಾಟಿ ಎದ್ದು ಕಾಣುವಂತಹ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ. ಯಾವ್ಯಾವ ಶೈಲಿಯವು ಚಾಲ್ತಿಯಲ್ಲಿವೆ. ಇವುಗಳನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌‌ಗಳು ವಿವರಿಸಿದ್ದಾರೆ.

VISTARANEWS.COM


on

Fashion Trend
ಚಿತ್ರಗಳು: ರಿತೇಶ್‌ ದೇಶ್‌ಮುಖ್‌, ನಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಸೀಸನ್‌ನಲ್ಲಿ (Fashion Trend) ಮೆನ್ಸ್ ಕಲರ್‌ ಡೆನಿಮ್‌ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಇದುವರೆಗೂ ಇದ್ದ ಜಾಕೆಟ್‌ ಕಲರ್‌ ರೂಲ್ಸ್ ಬ್ರೇಕ್‌ ಮಾಡಿ, ಹೊಸತನ ಮೂಡಿಸುವ ಎದ್ದು ಕಾಣುವಂತಹ ಶೇಡ್‌ಗಳಲ್ಲಿ ಇವು ಬಿಡುಗಡೆಗೊಂಡಿವೆ. ಇದಕ್ಕೆ ಪೂರಕ ಎಂಬಂತೆ, ನಟ ರಿತೇಶ್‌ ದೇಶ್‌ಮುಖ್‌ ಧರಿಸಿದ್ದ ಕೇಸರಿ ಡೆನಿಮ್‌ ಜಾಕೆಟ್‌ ಇದೀಗ ಮೆನ್ಸ್ ಫ್ಯಾಷನ್‌ ಲೋಕದಲ್ಲಿ ಸಂಚಲನ ಮೂಡಿಸಿ, ಟ್ರೆಂಡಿಯಾಗಿವೆ.

Fashion Trend

ರಂಗಾದ ಮೆನ್ಸ್ ಜಾಕೆಟ್‌

ಇದುವರೆಗೂ ಬ್ಲ್ಯೂ & ಬ್ಲ್ಯಾಕ್‌ ಹಾಗೂ ಡಾರ್ಕ್‌ ಕಲರ್‌ಗಳಿಗೆ ಸೀಮಿತವಾಗಿದ್ದ, ಮೆನ್ಸ್ ಡೆನಿಮ್‌ ಜಾಕೆಟ್‌ ಕಾನ್ಸೆಪ್ಟ್ ಬದಲಾಗಿದೆ. ಬದಲಿಗೆ ಡಾರ್ಕ್‌, ಗ್ರೀನ್‌, ಬೇಜ್‌ ಹಾಗೂ ಆರೆಂಜ್‌ ಶೇಡ್‌, ಮರೂನ್‌ನಲ್ಲೂ ಡೆನಿಮ್‌ ಜಾಕೆಟ್‌ಗಳು ಬಿಡುಗಡೆಗೊಂಡಿವೆ. ಮೊದಲೆಲ್ಲಾ ಪ್ರೊಫೆಷನಲ್‌ ಪುರುಷರು ಡೆನಿಮ್‌ ಜಾಕೆಟ್‌ ಧರಿಸಲು ಹಿಂದೇಟು ಹಾಕುತ್ತಿದ್ದರು. ಬರಬರುತ್ತಾ ತಮ್ಮ ರಿಲಾಕ್ಸಿಂಗ್‌ ಸಮಯದಲ್ಲಿ ಹಾಗೂ ಔಟಿಂಗ್‌ನಲ್ಲಿ ಇವನ್ನು ಧರಿಸಲು ಆರಂಭಿಸಿದರು. ಕೇವಲ ಕಾಲೇಜು ಯುವಕರಿಗೆ ಮಾತ್ರ ಎಂಬಂತಿದ್ದ, ಈ ಡೆನಿಮ್‌ ಜಾಕೆಟ್‌ಗಳು ಕಾಲ ಕ್ರಮೇಣ ಎಲ್ಲಾ ವರ್ಗದ ಪುರುಷರಿಗೂ ಇಷ್ಟವಾಗತೊಡಗಿದವು. ನಂತರ ಇವುಗಳ ಡಿಮ್ಯಾಂಡ್‌ ಹೆಚ್ಚಾಗುತ್ತಿದ್ದಂತೆ, ಬಗೆಬಗೆಯ ವಿನ್ಯಾಸದಲ್ಲಿ ಬಿಡುಗಡೆಗೊಂಡವು. ಇದೀಗ ವೈವಿಧ್ಯಮಯ ಕಲರ್‌ಗಳಲ್ಲೂ ಎಂಟ್ರಿ ನೀಡಲಾರಂಭಿಸಿದವು ಎನ್ನುತ್ತಾರೆ ಮೆನ್ಸ್ ಫ್ಯಾಷನ್‌ ಡಿಸೈನರ್‌ ರಾಹತ್‌. ಅವರ ಪ್ರಕಾರ, ಇತ್ತೀಚೆಗೆ ಈ ಜನರೇಷನ್‌ ಹುಡುಗರು ಮಾತ್ರವಲ್ಲ, ಎಲ್ಲಾ ವಯಸ್ಸಿನವರು ಹಾಗೂ ಕ್ಷೇತ್ರದವರು ತಮ್ಮ ಔಟಿಂಗ್‌ನಲ್ಲಿ ಅಥವಾ ಕ್ಯಾಶುವಲ್‌ ಲುಕ್‌ನಲ್ಲಿ ಕಲರ್‌ ಡೆನಿಮ್‌ ಜಾಕೆಟ್‌ ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಕಲರ್‌ ಡೆನಿಮ್‌ ಡಿಸೈನ್ಸ್

ಎಂದಿನಂತೆ ಎರಡು ಪಾಕೆಟ್‌ಗಳು ಬಹುತೇಕ ಎಲ್ಲಾ ಡೆನಿಮ್‌ ಜಾಕೆಟ್‌ಗಳಲ್ಲಿ ಇಂದಿಗೂ ಮುಂದುವರೆದಿವೆ. ಬಟನ್‌ ಡೌನ್‌ ವಿನ್ಯಾಸ ಜಾಕೆಟ್‌ಗಳಲ್ಲಿ ಹೊಸ ರೂಪದಲ್ಲಿ ಲಗ್ಗೆ ಇಟ್ಟಿವೆ. ಕ್ರಾಪ್‌ ಜಾಕೆಟ್‌ ಇತ್ತೀಚಿನ ಟ್ರೆಂಡಿಯಾಗಿರುವ ಲೇಯರ್‌ ಲುಕ್‌ಗಳಲ್ಲಿ ಸೇರಿದೆ. ಲಾಂಗ್‌ ಜಾಕೆಟ್‌ ಸೈಡಿಗೆ ಸರಿದಿದೆ.

ಇದನ್ನೂ ಓದಿ: Star Saree Fashion: ಸೀರೆಗೆ ಕ್ರೋಚೆಟ್‌ ಬ್ಲೌಸ್‌ ಧರಿಸಿ ಟ್ರೆಂಡ್‌ ಸೆಟ್ ಮಾಡಿದ ಸೋನಂ ಕಪೂರ್!

ಕಲರ್‌ ಡೆನಿಮ್‌ ಜಾಕೆಟ್‌ ಆಯ್ಕೆ & ಸ್ಟೈಲಿಂಗ್‌ ಹೇಗೆ?

  • ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವಂತಹ ಕಲರ್‌ ಡೆನಿಮ್‌ ಆಯ್ಕೆ ಮಾಡಿ.
  • ಕಲರ್‌ ಜಾಕೆಟ್‌ಗೆ ಧರಿಸುವ ಟೀ ಶರ್ಟ್‌ ಅಥವಾ ಶರ್ಟ್ ಕಾಂಟ್ರಸ್ಟ್ ಆಗಿರಬೇಕು.
  • ಎಲಿಗೆಂಟ್‌ ಲುಕ್‌ ಈ ಜಾಕೆಟ್‌ನಲ್ಲಿ ಸಾಧ್ಯವಿಲ್ಲ. ಫಂಕಿ ಲುಕ್‌ ಗ್ಯಾರಂಟಿ.
  • ಔಟಿಂಗ್‌ ಹಾಗೂ ಪಾರ್ಟಿಗಳಿಗೆ ಈ ಲುಕ್‌ ಮ್ಯಾಚ್‌ ಆಗುತ್ತದೆ.
  • ವೆಸ್ಟರ್ನ್‌ ಸ್ಟೈಲಿಂಗ್‌ ಉತ್ತಮ ಆಯ್ಕೆ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Fashion Trend: ಕಟೌಟ್‌ ಪ್ಯಾಂಟ್‌ ಸೂಟ್‌; ಗ್ಲಾಮರಸ್‌ ಯುವತಿಯರ ಲೇಟೆಸ್ಟ್ ಆಯ್ಕೆ!

Fashion Trend: ಇದೀಗ ಪ್ಯಾಂಟ್‌ಸೂಟ್‌ಗೂ ಕಟೌಟ್‌ ಲುಕ್‌ ದೊರಕಿದೆ. ಸದಾ ಪ್ರತಿಯೊಂದು ಡ್ರೆಸ್‌ನಲ್ಲೂ ಗ್ಲಾಮರ್ ಬಯಸುವ ಯುವತಿಯರನ್ನು ಆಕರ್ಷಿಸಿದೆ. ಏನಿದು ಕಟೌಟ್‌ ಪ್ಯಾಂಟ್‌ಸೂಟ್‌ ? ಸ್ಟೈಲಿಂಗ್‌ ಹೇಗೆ ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Fashion Trend
ಚಿತ್ರಗಳು: ಅಕಾಂಕ್ಷಾ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಗ್ಲಾಮರಸ್‌ (Fashion Trend) ಯುವತಿಯರ ಪ್ಯಾಂಟ್‌ಸೂಟ್‌ಗೂ ಕಟೌಟ್‌ ಲುಕ್‌ ದೊರಕಿದೆ. ಹೌದು. ಸದಾ ಪ್ರತಿಯೊಂದು ಡ್ರೆಸ್‌ನಲ್ಲೂ ಗ್ಲಾಮರ್ ಬಯಸುವ ಹುಡುಗಿಯರನ್ನು ಇವು ಆಕರ್ಷಿಸಿವೆ. ಪ್ಯಾಂಟ್‌ಸೂಟ್‌ಗೂ ಗ್ಲಾಮರ್‌ ಟಚ್ ದೊರಕಿದ್ದು, ಇದೀಗ ಒಂದರ ಹಿಂದೊಂದರಂತೆ ನಾನಾ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ. ಕೆಲವೊಮ್ಮೆ ಕ್ರಾಪ್‌ ಬ್ಲೌಸ್‌ ಜೊತೆ ಪ್ಯಾಂಟ್‌ಸೂಟ್‌ಗೆ ಮ್ಯಾಚ್‌ ಮಾಡಿ ಡಿಸೈನರ್‌ಗಳು ಗ್ಲಾಮರ್‌ ಟಚ್‌ ನೀಡಿದರೇ, ಇದೀಗ ಡಿಸೈನರ್‌ಗಳು ಸೂಟ್‌ಗೆ ಕಟೌಟ್‌ ಡಿಸೈನ್‌ ಮಾಡಿ ಡಿಫರೆಂಟ್‌ ಲುಕ್‌ ನೀಡುತ್ತಿದ್ದಾರೆ.

Fashion Trend

ಏನಿದು ಕಟೌಟ್‌ ಪ್ಯಾಂಟ್‌ಸೂಟ್‌

ಒಂದೇ ಶೇಡ್‌ನ ಮಾನೋಕ್ರೋಮ್‌ ಪ್ಯಾಟ್‌ಸೂಟ್‌ಗಳೀಗ ಕಟೌಟ್‌ ಆಗಿದೆ ಎಂದರೇ, ಆ ಬ್ಲೇಝರ್‌ನ ಕೆಲವು ಭಾಗಗಳಿಗೆ ಕಟೌಟ್‌ ವಿನ್ಯಾಸ ಮಾಡಲಾಗಿರುತ್ತದೆ. ನೋಡಲು ಇದು ವಿಚಿತ್ರ ಎಂದೆನಿಸಿದರೂ ಪ್ರಯೋಗಾತ್ಮಕವಾಗಿ ಮಾಡಿದ ಈ ಡಿಸೈನ್‌ಗಳು ಇದೀಗ ನಾನಾ ಕಟೌಟ್‌ಗಳಲ್ಲಿ ಕಂಡು ಬರುತ್ತಿವೆ. ಒಂದಕ್ಕಿಂತ ಒಂದು ಡಿಸೈನ್‌ ಭಿನ್ನ-ವಿಭಿನ್ನ ವಿನ್ಯಾಸಗಳಲ್ಲಿ ಇತ್ತೀಚೆಗಿನ ಪ್ಯಾಂಟ್‌ಸೂಟ್‌ಗಳಲ್ಲಿ ಕಾಣಸಿಗುತ್ತಿವೆ. ಪ್ಯಾಂಟ್‌ಸೂಟ್‌ನ ಯಾವುದೇ ನಿರ್ದಿಷ್ಟ ಭಾಗವನ್ನು ನೀಟಾಗಿ ಅಂದವಾಗಿ ಕಾಣುವಂತೆ ಈ ಕಟೌಟ್‌ ಡಿಸೈನ್‌ಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಅವರ ಪ್ರಕಾರ, ಕಟೌಟ್‌ ಪ್ಯಾಂಟ್‌ಸೂಟ್‌ಗಳ ಯಾವುದೇ ಭಾಗ ಬೇಕಾದರೂ ಕಟ್‌ ಆದಂತೆ ಕಾಣಿಸಬಹುದು. ಇದಕ್ಕೆ ಇದೇ ಭಾಗವೆಂಬ ರೂಲ್ಸ್ ಇಲ್ಲ! ಎನ್ನುತ್ತಾರೆ.

Fashion Trend

ಮಾನೋಕ್ರೋಮ್‌ ಕಟೌಟ್‌ ಪ್ಯಾಂಟ್‌ಸೂಟ್‌

ಮಾನೋಕ್ರೋಮ್‌ ಹಾಗೂ ಸಾಲಿಡ್‌ ಶೇಡ್‌ನ ಕಟೌಟ್‌ ಪ್ಯಾಂಟ್‌ಸೂಟ್‌ಗಳು ಸದ್ಯ ಚಾಲ್ತಿಯಲ್ಲಿವೆ. ಇವು ಸೆಲೆಬ್ರೆಟಿಗಳ ಹಾಗೂ ಮಾಡೆಲ್‌ಗಳ ಫೇವರೇಟ್‌ ಪ್ಯಾಂಟ್‌ ಸೂಟ್‌ಗಳೆಂದರೂ ಅತಿಶಯೋಕ್ತಿಯಾಗದು. ವೇಸ್ಟ್ಲೈನ್‌ ಭಾಗದಲ್ಲಿ ಅತಿ ಹೆಚ್ಚು ಕಟೌಟ್‌ ಡಿಸೈನ್‌ಗಳನ್ನು ಮಾಡಲಾಗಿರುತ್ತವೆ. ಬಾಡಿ ಫಿಟ್‌ ಡಿಸೈನ್‌ನಲ್ಲಿ ಇವು ದೊರೆಯುವುದರಿಂದ ಹೆಚ್ಚು ಕಟೌಟ್‌ ಮಾಡಲಾಗುವುದಿಲ್ಲ ಎನ್ನುತ್ತಾರೆ ಡಿಸೈನರ್ಸ್.

Fashion Trend

ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ ಕಟೌಟ್‌ ಪ್ಯಾಂಟ್‌ಸೂಟ್ಸ್

ಅತಿ ಹೆಚ್ಚು ಬಾಲಿವುಡ್‌ ಹಾಗೂ ಫ್ಯಾಷನ್‌ ಕ್ಷೇತ್ರದವರು ಈ ಕಟೌಟ್‌ ಪ್ಯಾಂಟ್‌ಸೂಟ್‌ಗಳನ್ನು ಧರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಈ ಪ್ಯಾಂಟ್‌ಸೂಟ್‌ಗಳು ಸೆಲೆಬ್ರೆಟಿಗಳಿಗೆ ತಕ್ಕಂತೆ ನಾನಾ ಪ್ರಯೋಗಾತ್ಮಕ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.

ಇದನ್ನೂ ಓದಿ: Star Saree Fashion: ಸೀರೆಗೆ ಕ್ರೋಚೆಟ್‌ ಬ್ಲೌಸ್‌ ಧರಿಸಿ ಟ್ರೆಂಡ್‌ ಸೆಟ್ ಮಾಡಿದ ಸೋನಂ ಕಪೂರ್!

ಕಟೌಟ್‌ ಪ್ಯಾಂಟ್‌ಸೂಟ್ಸ್ ರಿಯಾಲಿಟಿ

  • ಕಟೌಟ್‌ ಪ್ಯಾಂಟ್‌ಸೂಟ್‌ ಎಲ್ಲರಿಗೂ ಮ್ಯಾಚ್‌ ಆಗದು.
  • ಅತಿ ದುಬಾರಿ ಪ್ಯಾಂಟ್‌ಸೂಟ್‌ಗಳಿವು .
  • ಸಾಲಿಡ್‌ ಕಲರ್ಸ್ ಎದ್ದು ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Vintage Jewelery Fashion: ವಿಂಟೇಜ್‌ ಜ್ಯುವೆಲರಿ ಫ್ಯಾಷನ್‌‌‌ನಲ್ಲಿ ಮರಳಿದ ಕಾಸಗಲದ ಹರಳಿನ ಕಿವಿಯೋಲೆ!

Vintage Jewelery Fashion: ಈ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಡಿಷನಲ್‌ ಲುಕ್‌ ನೀಡುವ ವಿಂಟೇಜ್‌ ಜ್ಯುವೆಲರಿ ಫ್ಯಾಷನ್‌ಗೆ ಸೇರಿರುವ ಆಂಟಿಕ್‌ ಲುಕ್‌ ನೀಡುವಂತಹ ಕಾಸಗಲದ ಹರಳಿನ ಕಿವಿಯೊಲೆಗಳು ಮರು ಎಂಟ್ರಿ ನೀಡಿದ್ದು, ಮಾನಿನಿಯರ ಅಂದವನ್ನು ಹೆಚ್ಚಿಸುತ್ತಿವೆ. ಟ್ರೆಂಡಿಯಾಗಿರುವ ಈ ಶೈಲಿಯ ಕಿವಿಯೊಲೆಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್.

VISTARANEWS.COM


on

Vintage Jewelery Fashion
ಚಿತ್ರಗಳು: ಶಮ್ನಾ ಕಾಸಿಮ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟೇಜ್‌ ಜ್ಯುವೆಲರಿಗಳಲ್ಲಿ (Vintage Jewelery Fashion) ಇದೀಗ ಕಾಸಗಲದ ಹರಳಿನ ಕಿವಿಯೊಲೆಗಳು ಟ್ರೆಂಡಿಯಾಗಿವೆ. ಹಾಗೆಂದು ಈ ವಿನ್ಯಾಸದ ಕಿವಿಯೊಲೆಗಳ ಸ್ಟೈಲಿಂಗ್‌ ಹೊಸತೇನಲ್ಲ! ಅಜ್ಜಿ ಕಾಲದ ಆಂಟಿಕ್‌ ವಿನ್ಯಾಸದಲ್ಲಿ ಬಹಳ ಕಾಲ ಪ್ರಚಲಿತದಲ್ಲಿದ್ದ ಕಿವಿಯೊಲೆಗಳಿವು. ಧರಿಸಿದಾಗ ನೋಡಲು ಪಕ್ಕಾ ಟ್ರೆಡಿಷನಲ್‌ ಲುಕ್‌ ನೀಡುವ ಈ ಕಾಸಗಲದ ಸ್ಟಡ್ಸ್, ಈ ಫೆಸ್ಟಿವ್‌ ಸೀಸನ್‌ನಲ್ಲಿ, ಅದರಲ್ಲೂ ವಿಂಟೇಜ್‌ ಜ್ಯುವೆಲರಿ ಕೆಟಗರಿಯಲ್ಲಿ ಮಹಿಳೆಯರ ಮನವನ್ನು ಗೆದ್ದಿವೆ.

Vintage Jewelery Fashion

ಕಾಸಗಲದ ಹರಳಿನ ವಿಂಟೇಜ್‌ ಜ್ಯುವೆಲರಿ ಫ್ಯಾಷನ್‌

ಅಂದಹಾಗೆ, ಕಿವಿಗೆ ಅಗಲವಾದ ಓಲೆಯನ್ನು ಧರಿಸುವುದು ರಾಜ-ಮಹಾರಾಜರ ಕಾಲದಿಂದಲೇ ಇದೆ. ಅಗಲವಾದ ಓಲೆ ಧರಿಸುವ ಮಹಿಳೆಯರು ಶ್ರೀಮಂತರು ಅಥವಾ ಗಣ್ಯ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತಿತ್ತು. ಅದರಲ್ಲೂ ಹರಳಿನ ಅಗಲವಾದ ಓಲೆಗಳನ್ನು ಧರಿಸುವ ಮಾನಿನಿಯರಿಗೆ ಹೆಚ್ಚು ಗೌರವ ನೀಡಲಾಗುತ್ತಿತ್ತು. ಕಾಲ ಕ್ರಮೇಣ, ಈ ಫ್ಯಾಷನ್‌ ಸೈಡಿಗೆ ಸರಿಯಿತು. ಪ್ರತಿಷ್ಠೆಯ ಸಂಕೇತವಾಗಿದ್ದ, ಈ ಶೈಲಿಯ ಕಾಸಗಲದ ಓಲೆಗಳು ಬರಬರುತ್ತಾ ಮತ್ತೊಮ್ಮೆ ಫ್ಯಾಷನ್‌ಗೆ ಸೇರಿಕೊಂಡಿತು. ಜೊತೆಗೆ ಒಂದಿಷ್ಟು ಬದಲಾವಣೆಗಳೊಂದಿಗೆ ವಿಂಟೇಜ್‌ ಜ್ಯುವೆಲರಿ ಕೆಟಗರಿಯಲ್ಲಿ ಮರು ಎಂಟ್ರಿ ನೀಡಿತು. ಅದರಲ್ಲೂ, ಯುವತಿಯರನ್ನು ಸೆಳೆಯತೊಡಗಿತು ಎನ್ನುತ್ತಾರೆ ಜ್ಯುವೆಲರಿ ಡಿಸೈನರ್‌ ರಾಘವ್‌ ಆಚಾರ್‌.

Vintage Jewelery Fashion

ಟ್ರೆಂಡ್‌ನಲ್ಲಿರುವ ವಿಂಟೇಜ್‌ ಹರಳಿನ ಕಿವಿಯೋಲೆಗಳು

ಭೂ ಚಕ್ರದಂತಹ ವಿನ್ಯಾಸ, ಹೂಗಳ ವಿನ್ಯಾಸ, ಚಕ್ರದೊಳಗೆ ನವಿಲಿನ ವಿನ್ಯಾಸ, ಸೂರ್ಯಕಾಂತಿ ಸೇರಿದಂತೆ ನಾನಾ ಬಗೆಯು ಹೂಗಳು ಅರಳಿರುವಂತೆ ಕಾಣಿಸುವ ವಿನ್ಯಾಸದವು ಅದರಲ್ಲೂ ಕುಂದನ್‌ ಅಥವಾ ಕೆಂಪು-ಹಸಿರು-ಬಿಳಿ ಹರಳಿನಲ್ಲಿ ಡಿಸೈನ್‌ ಮಾಡಲಾದ ಓಲೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ಕಿವಿ ಸರಪಳಿ ಜೊತೆಗೆ ಬಂದ ಕಿವಿಯೋಲೆಗಳು

ಇನ್ನು, ಈ ಟ್ರೆಡಿಷನಲ್‌ ಲುಕ್‌ ನೀಡುವ ಹರಳಿನ ಕಿವಿಯೊಲೆಗಳಲ್ಲಿ ಇದೀಗ ಮುತ್ತಿನ ಲೈನ್‌ ಇರುವಂತಹ ಲೇಯರ್‌ ಲುಕ್‌ ನೀಡುವ ಕಿವಿ ಸರಪಳಿ ಡಿಸೈನ್‌ಗಳು ಜೊತೆಯಾಗಿವೆ. ಕಿವಿಯೋಲೆಯೊಂದಿಗೆ ಅಟ್ಯಾಚ್‌ ಆಗಿರುವಂತಹ ವಿನ್ಯಾಸದಲ್ಲೂ ಬಂದಿವೆ. ಇನ್ನು ಕೆಲವು ಜುಮಕಾ ಶೈಲಿಯಲ್ಲೂ ಎಂಟ್ರಿ ನೀಡಿವೆ.

ಇದನ್ನೂ ಓದಿ: Fashion Trend: ಜೆನ್‌ ಜಿ ಫ್ಯಾಷನ್‌‌‌ಗೆ ಎಂಟ್ರಿ ಕೊಟ್ಟ ವೈಬ್ರೆಂಟ್‌ ಕ್ವಿರ್ಕಿ ಲೆಗ್ಗಿಂಗ್ಸ್!

ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡುವ ಕಾಸಗಲದ ಹರಳಿನ ಓಲೆಗಳು

  • ಸೀರೆ, ಲಂಗ-ದಾವಣಿಯಂತಹ ಟ್ರೆಡಿಷನಲ್‌ ಅಟೈರ್‌ನೊಂದಿಗೆ ಧರಿಸಬಹುದು.
  • ಹೇರ್‌ಸ್ಟೈಲ್‌ ಈ ಓಲೆಗಳಿಗೆ ಮ್ಯಾಚ್‌ ಆಗಬೇಕು.
  • ಸಾಂಪ್ರದಾಯಿಕ ಸ್ಟೈಲಿಂಗ್‌ ಈ ಓಲೆಗಳಿಗೆ ಬೆಸ್ಟ್ .
  • ಗೋಲ್ಡ್-ಸಿಲ್ವರ್‌ನಲ್ಲಿ ಮಾತ್ರವಲ್ಲ, 1 ಗ್ರಾಮ್‌ ಗೋಲ್ಡ್‌ ಮೆಟಲ್‌ನಲ್ಲೂ ಇವು ದೊರೆಯುತ್ತಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Saree Fashion: ಸೀರೆಗೆ ಕ್ರೋಚೆಟ್‌ ಬ್ಲೌಸ್‌ ಧರಿಸಿ ಟ್ರೆಂಡ್‌ ಸೆಟ್ ಮಾಡಿದ ಸೋನಂ ಕಪೂರ್!

Star Saree Fashion: ಬಾಲಿವುಡ್‌ ನಟಿ ಸೋನಂ ಕಪೂರ್‌, ಸೀರೆಗೆ ಕ್ರೋಚೆಟ್‌ ಬ್ಲೌಸ್‌ ಧರಿಸಿ, ನಯಾ ಫ್ಯಾಷನ್‌ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಅವರ ಈ ಸ್ಟೈಲಿಂಗ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಈ ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಟಿಪ್ಸ್ ಇಲ್ಲಿದೆ.

VISTARANEWS.COM


on

Star Saree Fashion
ಚಿತ್ರಗಳು: ಸೋನಂ ಕಪೂರ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀರೆಗೆ (Star Saree Fashion) ಕ್ರೋಚೆಟ್‌ ಬ್ಲೌಸ್‌ ! ಇದ್ಯಾವ ಬಗೆಯ ಮ್ಯಾಚಿಂಗ್‌ ಎಂದು ಯೋಚಿಸುತ್ತಿದ್ದೀರಾ! ಒಂದಕ್ಕೊಂದು ಸಂಬಂಧವಿಲ್ಲದ ಫ್ಯಾಷನ್‌ ಎಂದುಕೊಳ್ಳುತ್ತಿದ್ದೀರಾ! ಆದರೆ, ಈ ಮಿಕ್ಸ್ – ಮ್ಯಾಚ್‌ ಕಾನ್ಸೆಪ್ಟನ್ನು ನಟಿ ಸೋನಂ ಕಪೂರ್‌, ಪ್ರಯೋಗಿಸಿದ್ದಾರೆ. ಸೀರೆ ಪ್ರಿಯರ ಹುಬ್ಬೇರಿಸಿದ್ದಾರೆ.

ಸೋನಂ ಕಪೂರ್‌ ಪ್ರಯೋಗಾತ್ಮಕ ಸೀರೆ ಬ್ಲೌಸ್‌ ಸ್ಟೈಲಿಂಗ್‌

ಹೌದು. ಬಾಲಿವುಡ್‌ ನಟಿ ಸೋನಂ ಕಪೂರ್‌ ಆಗಾಗ್ಗೆ ಸೀರೆಗೆ ಬಗೆಬಗೆಯ ಯೂನಿಕ್‌ ಬ್ಲೌಸ್‌ ಧರಿಸಿ ಕಾಣಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ! ಆದರೆ, ಇದೀಗ ಸೋನಂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಊಹೆಗೂ ಸಿಗದ ಸ್ಟೈಲಿಂಗ್‌ ಮಾಡಿದ್ದಾರೆ. ಸೀರೆಯೊಂದಿಗೆ ವುಲ್ಲನ್‌ ಸ್ಟೆಟ್ಟರ್‌ನಂತೆ ಕಾಣುವ ಕ್ರೋಚೆಟ್‌ ಲಾಂಗ್‌ ರವಿಕೆ ಅಥವಾ ಟಾಪ್‌ ಧರಿಸಿ, ಸೀರೆ ಉಟ್ಟಿದ್ದಾರೆ. ಹೀಗೂ ಸೀರೆ ಫ್ಯಾಷನ್‌ ಮಾಡಬಹುದು ಎಂಬುದನ್ನು ತಮ್ಮ ಸಹೋದರಿ ರಿಯಾ ಕಪೂರ್‌ ಸ್ಟೈಲಿಂಗ್‌ನಲ್ಲಿ ತೋರಿಸಿಕೊಟ್ಟಿದ್ದಾರೆ. ಸೆಲೆಬ್ರೆಟಿ ಮಸಬಾ ಡಿಸೈನರ್‌ ಸೀರೆಯಲ್ಲಿ ಕಾಣಿಸಿಕೊಂಡು ನಯಾ ಫ್ಯಾಷನ್‌ಗೆ ನಾಂದಿ ಹಾಡಿದ್ದಾರೆ.

ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ

ನಮ್ಮ ದೇಸಿ ಸೀರೆ ಇದೀಗ ಇಂಡೋ-ವೆಸ್ಟರ್ನ್‌ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದು ಸೀರೆ ಉಡುವವರ ಸ್ಟೈಲಿಂಗ್‌ ಹಾಗೂ ಫ್ಯಾಷನ್‌ ಸೆನ್ಸ್ಗೆ ತಕ್ಕಂತೆ ಬದಲಾಗುತ್ತದೆ. ನೋಡಲು ವಿಚಿತ್ರ ಎಂದೆನಿಸಿದರೂ ಫ್ಯಾಷನ್‌ ಪ್ರಿಯರು ಇಂತಹ ಪ್ರಯೋಗಾತ್ಮಕ ಸೀರೆ ಸ್ಟೈಲಿಂಗ್‌ಗನ್ನು ಪ್ರಯೋಗಿಸತೊಡಗಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌. ಇನ್ನು, ಯುವ ಫ್ಯಾಷನಿಸ್ಟಾ ರಾಜ್‌ ಹೇಳುವಂತೆ, ಇತ್ತೀಚೆಗೆ ಕಂಡ ಕಂಡ ಟಾಪ್‌ ಹಾಗೂ ವೆಸ್ಟರ್ನ್ ಕ್ರಾಪ್‌ ಬ್ಲೌಸ್‌ಗಳನ್ನು ಸೀರೆಗಳೊಂದಿಗೆ ಧರಿಸುವುದು ಹೆಚ್ಚಾಗಿದೆ. ಕೆಲವೊಂದು ಆಕರ್ಷಕವಾಗಿ ಕಾಣುತ್ತವೆ. ಇನ್ನು, ನಟಿಯರು ಧರಿಸಿದ ನಂತರ ಕೆಲವು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ. ಇದರೊಂದಿಗೆ ಒಂದಿಷ್ಟು ಸಲಹೆ ಕೂಡ ನೀಡಿದ್ದಾರೆ.

ಇದನ್ನೂ ಓದಿ: Wedding Lehenga Tips: ವೆಡ್ಡಿಂಗ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆಗೆ ಇಲ್ಲಿದೆ 5 ಐಡಿಯಾ

ಸೀರೆಯೊಂದಿಗೆ ಕ್ರೋಚೆಟ್‌ ರವಿಕೆ ಪ್ರಯೋಗಿಸಲು ಹೀಗೆ ಮಾಡಿ

  • ಕಾಂಟ್ರಸ್ಟ್ ಶೇಡ್‌ದಾದಲ್ಲಿ ಡಿಫರೆಂಟ್‌ ಲುಕ್‌ ನೀಡುತ್ತದೆ.
  • ಸೀರೆಯೊಂದಿಗೆ ಲೈಟ್‌ವೈಟ್‌ ಕ್ರೋಚೆಟ್‌ ಬ್ಲೌಸ್‌ ಧರಿಸುವುದು ಉತ್ತಮ.
  • ಟ್ರಾನ್ಸಪರೆಂಟ್‌ ಕ್ರೋಚೆಟ್‌ ಟಾಪ್‌ ಆದಲ್ಲಿ, ಅದೇ ಶೇಡ್‌ನ ಇನ್ನರ್‌ ಧರಿಸಬಹುದು.
  • ಕ್ರೋಚೆಟ್‌ ಬ್ಲೌಸ್‌ಗೆ ಆದಷ್ಟೂ ಸಾದಾ ಡಾರ್ಕ್‌ ಶೇಡ್‌ನ ಸೀರೆ ಉಡಬೇಕು.
  • ಇಂಡೋ-ವೆಸ್ಟರ್ನ್‌ ಲುಕ್‌ ನೀಡುವುದರಿಂದ ಟ್ರೆಡಿಷನಲ್‌ ಮೇಕಪ್‌ ಬೇಡ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Wedding Lehenga Tips: ವೆಡ್ಡಿಂಗ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆಗೆ ಇಲ್ಲಿದೆ 5 ಐಡಿಯಾ

Wedding Lehenga Tips: ಮದುವೆಗಳಲ್ಲಿ ಧರಿಸುವ ವೆಡ್ಡಿಂಗ್‌ ಲೆಹೆಂಗಾಗಳು ದುಬಾರಿಯಾಗಿದ್ದರೇ ಸಾಲದು! ನೋಡಲು ಕೂಡ ಆಕರ್ಷಕವಾಗಿರಬೇಕು. ಥೀಮ್‌ಗೆ ಹೊಂದುವಂತಿರಬೇಕು ಎನ್ನುತ್ತಾರೆ ವೆಡ್ಡಿಂಗ್‌ ಸ್ಟೈಲಿಸ್ಟ್‌‌ಗಳು. ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದೈದು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Wedding Lehenga Tips
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಗ್ರ್ಯಾಂಡ್‌ ವೆರೈಟಿ ಲೆಹೆಂಗಾಗಳು (Wedding Lehenga Tips) ಎಂಟ್ರಿ ನೀಡಿವೆ. ಮದುಮಗಳು ಮಾತ್ರವಲ್ಲ, ಇತರರು ಧರಿಸಬಹುದಾದ ನಾನಾ ಡಿಸೈನ್‌ನ ಲೆಹೆಂಗಾಗಳು ಲಗ್ಗೆ ಇಟ್ಟಿವೆ. ಇನ್ನು, ಮದುವೆಗಳಲ್ಲಿ ಧರಿಸುವ ವೆಡ್ಡಿಂಗ್‌ ಲೆಹೆಂಗಾಗಳು ಕೇವಲ ದುಬಾರಿಯಾಗಿದ್ದರೇ ಸಾಲದು! ನೋಡಲು ಕೂಡ ಆಕರ್ಷಕವಾಗಿರಬೇಕು. ನಾವು ಕೊಡುವ ಬೆಲೆಗೆ ಅದು ತಕ್ಕನಾಗಿರಬೇಕು ಎನ್ನುತ್ತಾರೆ ವೆಡ್ಡಿಂಗ್‌ ಸ್ಟೈಲಿಸ್ಟ್ ಮೀರಜ್‌. ಈ ಕುರಿತಂತೆ ಒಂದೈದು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

Wedding Lehenga Tips

ಥೀಮ್‌ಗೆ ತಕ್ಕಂತೆ ಲೆಹೆಂಗಾ ಸೆಲೆಕ್ಷನ್‌ ಮಾಡಿ

ಮದುವೆಯು ತೀರಾ ಟ್ರೆಡಿಷನಲ್‌, ಕಂಟೆಂಪರರಿ ಅಥವಾ ಇಂಡೋ-ವೆಸ್ಟರ್ನ್‌ ಶೈಲಿಯಲ್ಲಿ ನಡೆಯುತ್ತಿದೆಯಾ! ಎಂಬುದನ್ನು ಮನಗಂಡು ಲೆಹೆಂಗಾ ಆಯ್ಕೆ ಮಾಡಬೇಕು. ಆಗಷ್ಟೇ ಥೀಮ್‌ಗೆ ತಕ್ಕಂತೆ ಕಾಣಿಸಬಹುದು.

Wedding Lehenga Tips

ಸೆಲೆಬ್ರೆಟಿ ಲುಕ್‌ ಲೆಹೆಂಗಾ ಆಯ್ಕೆ

ಮದುವೆಗಳಲ್ಲಿ ಸೆಲೆಬ್ರೆಟಿಯಂತೆ ಕಾಣಿಸಲು ಆದಷ್ಟೂ ಮೊದಲೇ ತಾರೆಯರ ಲೆಹೆಂಗಾಗಳನ್ನು ನೋಡಿ, ಫೋಟೋಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ. ಕೇವಲ ಬಾಯಿ ಮಾತಿನಲ್ಲಾದಲ್ಲಿ ಹುಡುಕುವುದು ಕಷ್ಟವಾಗಬಹುದು. ನೀವು ಭೇಟಿ ನೀಡುವ ಬೋಟಿಕ್‌ ಅಥವಾ ಲೆಹೆಂಗಾ ಸೆಂಟರ್‌ಗಳಲ್ಲಿ ನಿಮ್ಮ ಆಯ್ಕೆ ಹಾಗೂ ಫೋಟೋ ತೋರಿಸಿ. ಹುಡುಕಲು ಸುಲಭವಾಗುವುದು.

Wedding Lehenga Tips

ಟ್ರೆಂಡಿ ಲೆಹೆಂಗಾ ಆಯ್ಕೆಗಾಗಿ ಹೀಗೆ ಮಾಡಿ

ಲೆಹೆಂಗಾ ಕೊಳ್ಳುವ ಸಮಯದಲ್ಲಿ ಟ್ರೆಂಡಿಯಾಗಿರುವ ಡಿಸೈನ್ಸ್ ಕುರಿತಂತೆ ಅಂತರ್ಜಾಲದಲ್ಲಿ, ಫ್ಯಾಷನ್‌ ಮ್ಯಾಗಜೀನ್‌ಗಳಲ್ಲಿ ನೋಡಿ ತಿಳಿದುಕೊಳ್ಳಿ. ಉದಾಹರಣೆಗೆ., ಅಂಬಾನಿ ಫ್ಯಾಮಿಲಿಯ ಮಹಿಳೆಯರು ಧರಿಸಿದ್ದ ಲೆಹೆಂಗಾಗಳು ಇದೀಗ ಎಲ್ಲೆಡೆ ಟ್ರೆಂಡಿಯಾಗಿವೆ. ಲಕ್ಷ ರೂ. ಬೆಲೆಬಾಳುವ ಇವುಗಳ ರಿಪ್ಲೀಕಾ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಇಂತವನ್ನು ಕೂಡ ಖರೀದಿಸಬಹುದು.

Wedding Lehenga Tips

ಸೀಸನ್‌ಗೆ ತಕ್ಕಂತೆ ಫ್ಯಾಬ್ರಿಕ್‌ ಆಯ್ಕೆ ಮಾಡಿ

ಆಯಾ ಸೀಸನ್‌ಗೆ ತಕ್ಕಂತೆ ಲೆಹೆಂಗಾ ಫ್ಯಾಬ್ರಿಕ್‌ ಆಯ್ಕೆ ಮಾಡಿ. ಕೆಲವರು ಬೇಸಿಗೆಯಲ್ಲಿ ಭಾರಿ ತೂಕವಿರುವ ಲೆಹೆಂಗಾ ಆಯ್ಕೆ ಮಾಡಿ, ಭಾರ ಹೊರಲಾರದೇ, ಆರತಕ್ಷತೆಯಲ್ಲಿ ನಿಲ್ಲಲಾರದೇ ಒದ್ದಾಡುತ್ತಾರೆ. ಅದಕ್ಕಾಗಿ ಲೆಹೆಂಗಾ ಫ್ಯಾಬ್ರಿಕ್‌ ಆಯ್ಕೆ ಮಾಡುವಾಗ ಕೈಯಲ್ಲಿ ಹಿಡಿದು ಟ್ರಯಲ್‌ ನೋಡಿ, ಖರೀದಿಸಿ.

ಇದನ್ನೂ ಓದಿ: krishna janmashtami 2024: ಹೀಗಿತ್ತು ಸೆಲೆಬ್ರಿಟಿಗಳ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!

ಕಲರ್‌ / ಡಿಸೈನ್‌ಗೆ ಆದ್ಯತೆ ನೀಡಿ

ಧರಿಸುವವರ ಸ್ಕಿನ್‌ ಟೋನ್‌ಗೆ ತಕ್ಕಂತೆ ಗ್ರ್ಯಾಂಡ್‌ ಆಗಿರಬೇಕು. ಹ್ಯಾಂಡ್‌ ಎಂಬ್ರಾಯ್ಡರಿ ಹಾಗೂ ಡಿಸೈನ್ಸ್ ಮತ್ತು ಕಲರ್‌ಗೆ ಆದ್ಯತೆ ನೀಡಬೇಕು. ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾದ ಉದ್ದ ಹೊಂದಬೇಕು. ಬೋಟಿಕ್‌ನ ಡಿಸೈನರ್‌ ಬಳಿ ಇವೆಲ್ಲಾ ಮಾತನಾಡಿಕೊಂಡು ಕಸ್ಟಮೈಸ್ ಮಾಡಿಸಿಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Hair Combing
ಆರೋಗ್ಯ3 hours ago

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

dhavala dharini column Hanuman's setubandha to meet Sugriva in ramayana by narayana yaji
ಅಂಕಣ3 hours ago

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

karnataka weather Forecast
ಮಳೆ4 hours ago

Karnataka Weather : ಬೆಂಗಳೂರಿನಲ್ಲಿ ಘಳಿಗೆವೊಂದು ವಾತಾವರಣ; ಕರಾವಳಿಗೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ5 hours ago

Dina Bhavishya: ಈ ದಿನ ಆತ್ಮೀಯರೊಂದಿಗೆ ಕಾಲ ಕಳೆಯುವಿರಿ; ಆದ್ರೆ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ

Murder Case
ಬೆಂಗಳೂರು13 hours ago

Murder Case: ಶೀಲ ಶಂಕೆ; ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಭೀಕರ ಹತ್ಯೆ

Actor Darshan
ಬೆಂಗಳೂರು14 hours ago

Actor Darshan: ಪವಿತ್ರಾಗೌಡ ಜಾಮೀನು ಅರ್ಜಿಯ ಭವಿಷ್ಯ ಆ.31ಕ್ಕೆ ನಿರ್ಧಾರ

Fashion Trend
ಫ್ಯಾಷನ್15 hours ago

Fashion Trend: ಕಟೌಟ್‌ ಪ್ಯಾಂಟ್‌ ಸೂಟ್‌; ಗ್ಲಾಮರಸ್‌ ಯುವತಿಯರ ಲೇಟೆಸ್ಟ್ ಆಯ್ಕೆ!

Stray Dogs Attack
ಕ್ರೈಂ15 hours ago

Stray Dogs Attack: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿ

R Ashok
ಬೆಂಗಳೂರು15 hours ago

R Ashok: ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ; ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದ ಆರ್‌. ಅಶೋಕ್‌

karnataka weather Forecast
ಮಳೆ15 hours ago

Karnataka Weather : ನಿರಂತರ ಮಳೆಗೆ ಮನೆ ಗೋಡೆ ಕುಸಿತ; ಮಹಿಳೆ ಆಸ್ಪತ್ರೆ ಪಾಲು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ5 days ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌