ನ್ಯೂಯಾರ್ಕ್‌ನ ಅಲ್ಬನಿಯಲ್ಲಿ ಕನ್ನಡ-ಕಲಿ ಶಾಲೆಯ ಅದ್ಧೂರಿ ವಾರ್ಷಿಕೋತ್ಸವ - Vistara News

ವಿದೇಶ

ನ್ಯೂಯಾರ್ಕ್‌ನ ಅಲ್ಬನಿಯಲ್ಲಿ ಕನ್ನಡ-ಕಲಿ ಶಾಲೆಯ ಅದ್ಧೂರಿ ವಾರ್ಷಿಕೋತ್ಸವ

ಈ ವರ್ಷ ತೇರ್ಗಡೆಯಾದ ಕನ್ನಡ ಕಲಿ ಮುದ್ದು ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

VISTARANEWS.COM


on

ಕನ್ನಡ-ಕಲಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
benki-basanna-newyork

ಬೆಂಕಿ ಬಸಣ್ಣ, ನ್ಯೂಯಾರ್ಕ್
ಆಲ್ಬನಿ ನಗರದ ಕನ್ನಡ-ಕಲಿ ಶಾಲೆಯ ವಾರ್ಷಿಕೋತ್ಸವ ಮತ್ತು ಗ್ರ್ಯಾಜುಯೇಷನ್ ಪಾರ್ಟಿಯನ್ನು ಜುಲೈ 30ರಂದು ಕ್ಯಾನೋಜಾಹಾರಿ ಪಾರ್ಕಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ವರ್ಷ ತೇರ್ಗಡೆಯಾದ ಕನ್ನಡ ಕಲಿ ಮುದ್ದು ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡದ ಕಂದಮ್ಮಗಳಾದ ವಿಹಾನ್, ನಚಿಕೇತ್, ಆದ್ಯ, ಯುವಾನ್ ಮತ್ತು ಅವನಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಬೆಂಕಿ ಬಸಣ್ಣ ಮಾತನಾಡಿ, ಆಲ್ಬನಿ ಕನ್ನಡ ಕಲಿ ಶಾಲೆಯ ಪ್ರಾರಂಭ ಮತ್ತು ನಡೆದ ಬಂದ ಇತಿಹಾಸದ ಬಗ್ಗೆ ಮಾಹಿತಿ ಹಂಚಿಕೊಂಡರು. ಅಲ್ಕಾ ರಾವ್, ಮನು, ರಾಜೀವ್ ಮಾತನಾಡಿ, ಈ ಕನ್ನಡ ಕಲಿ ಶಾಲೆಯಿಂದ ತಮ್ಮ ಮಕ್ಕಳಿಗೆ ಸಿಗುತ್ತಿರುವ ಅವಕಾಶ ಮತ್ತು ಪ್ರಯೋಜನಗಳನ್ನು ಹಂಚಿಕೊಂಡು, ಶಾಲೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ಲತಾ ಅವರಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಂಬೈ ಕನ್ನಡ ಸಂಘದ ಹಿರಿಯ ಲೇಖಕಿ ಮತ್ತು ಕನ್ನಡ ಪ್ರೇಮಿ ಶಕುಂತಲಾ, ಕನ್ನಡಿಗ ಮಕ್ಕಳು, ಪೋಷಕರು, ಸಂಬಂಧಿಕರು ಹಾಜರಾಗಿದ್ದರು.

ಇದನ್ನೂ ಓದಿ | ಕೀನ್ಯಾದಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ: ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ

ಮೃಷ್ಟಾನ್ನ ವನ ಭೋಜನ
ಮಕ್ಕಳ ಪೋಷಕರು ಸ್ವತಃ ಪ್ರೀತಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಮಸಾಲ ಪುರಿ, ವೆಜ್ ಪಫ್‌, ಸಂಡಿಗೆ, ಸ್ಯಾಂಡ್‌ವಿಚ್, ಮೊಟ್ಟೆ, ಈರುಳ್ಳಿ ಬಜ್ಜಿ, ಪಕೋಡ, ಮಸಾಲೆ ಚಹಾ, ಮಜ್ಜಿಗೆ, ಕೋಸಂಬರಿ, ಚಪಾತಿ, ಆಲೂಗಡ್ಡೆ ಪಲ್ಯ, ಕಡಲೆಕಾಳು ಪಲ್ಯ, ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ, ಪಾಯಸ, ಐಸ್‌ಕ್ರೀಮ್‌, ಕಲ್ಲಂಗಡಿ ಹಣ್ಣು, ಚಿಪ್ಸ್ ಮತ್ತಿತರ ಪದಾರ್ಥಗಳನ್ನು ಕಾರ್ಯಕ್ರಮದಲ್ಲಿ ಹಾಜರಾಗಿದ್ದವರು ಸವಿದರು. ಪ್ರತಿಯೊಬ್ಬರೂ ಮನೆಯಿಂದ ಒಂದೊಂದು ಪದಾರ್ಥ ಮಾಡಿಕೊಂಡು ಬಂದಿದ್ದರು. ಈ ” ಪಾಟ್ ಲಕ್” ಸಂಸ್ಕೃತಿ ಅಮೆರಿಕದ ಅನಿವಾಸಿ ಭಾರತೀಯರಲ್ಲಿ ಜನಪ್ರಿಯವಾಗಿದೆ.

ಆದರ್ಶ ಗುರು ಲತಾ ಕಲಿಯಾತ್
ಕನ್ನಡ ಶಾಲೆಯನ್ನು ಅತ್ಯಂತ ಶ್ರೇಷ್ಠ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವ ಹೆಗ್ಗಳಿಕೆ ಲತಾ ಕಲಿಯಾತ್ ಅವರಿಗೆ ಸಲ್ಲುತ್ತದೆ. ಅವರು ಕ್ಯಾನ್ಸರ್ ಅನ್ನು ಗೆದ್ದ, ಸದಾ ಲವಲವಿಕೆಯಿಂದ ಇರುವ ಚೈತನ್ಯದ ಸ್ಫೂರ್ತಿಯಾಗಿದ್ದಾರೆ. 75 ವರ್ಷ ದಾಟಿದರೂ 25 ವರ್ಷದ ಯುವತಿಯರಿಗಿಂತಲೂ ಹೆಚ್ಚಿನ ಉತ್ಸಾಹ ಹೊಂದಿದ್ದಾರೆ. ಕೆಲ ತಿಂಗಳ ಹಿಂದೆ ಲತಾ ಅವರ 75ನೇ ಹುಟ್ಟು ಹಬ್ಬದಂದು ಶಿಷ್ಯರಾದ ಜಗನ್ನಾಥರಾವ್ ಬಹುಳೆ ರಚಿಸಿದ ಜೀವನಚರಿತ್ರೆ “ಛಲವೇ ಜೀವನ ಸಾಕ್ಷಾತ್ಕಾರ” ಪುಸ್ತಕ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ | ಮಂತ್ರಾಲಯದಲ್ಲಿ ಕರ್ನಾಟಕ ಯಾತ್ರಿ ನಿವಾಸ ಸ್ಥಾಪನೆ; ಅಯೋಧ್ಯೆಯಲ್ಲೂ ಜಾಗ ಕೇಳಲು ಸರ್ಕಾರ ನಿರ್ಧಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

All Eyes on Rafah:’ಆಲ್ ಐಸ್ ಆನ್ ರಫಾ’ ಎಐ ನಿರ್ಮಿತ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ 30 ಮಿಲಿಯನ್ ಜನರನ್ನು ಇದು ತಲುಪಿದ್ದು, ಸಾಕಷ್ಟು ಸಲೆಬ್ರಿಟಿಗಳು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

VISTARANEWS.COM


on

By

All Eyes on Rafah
Koo

ನವದೆಹಲಿ: ಹಲವಾರು ಮಂದಿಯ ಇನ್ ಸ್ಟಾಗ್ರಾಮ್ (Instagram) ಖಾತೆಗಳಲ್ಲಿ ಮಂಗಳವಾರ ‘ಆಲ್ ಐಸ್ ಆನ್ ರಫಾ’ (All Eyes on Rafah) ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಕಾಣಿಸಿಕೊಂಡಿದೆ. ಸೋಶಿಯಲ್ ಮೀಡಿಯಾ (social media) ಬಳಕೆದಾರರು ಎಐ (artificial intelligence) ರಚಿತವಾದ ಚಿತ್ರವನ್ನು ಪೋಸ್ಟ್ ಮಾಡಿದ್ದು, ಹಲವಾರು ಟೆಂಟ್ ಮನೆಗಳನ್ನು (tent house) ಚಿತ್ರದಲ್ಲಿ ಕಾಣಬಹುದಾಗಿದೆ.

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿರುವ ಡೇರೆಗಳನ್ನು ತೋರಿಸಿದೆ. ಅಲ್ಲಿ ಇಸ್ರೇಲ್ ನಿಂದ ನಡೆಸಿದ ದಾಳಿಯ ಅನಂತರ ಅನೇಕ ಪ್ಯಾಲೇಸ್ಟಿನಿಯರು ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್‌ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವವರ ಸಂಖ್ಯೆ 30 ಮಿಲಿಯನ್ ದಾಟಿದೆ.

ಪ್ಯಾಲೇಸ್ಟಿನಿಯನ್ನರ ವಿರುದ್ಧದ ದಾಳಿಯನ್ನು ಖಂಡಿಸಿ ಮತ್ತು ಕದನ ವಿರಾಮಕ್ಕೆ ಒತ್ತಾಯಿಸಲು ಇದು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಒಗ್ಗೂಡಿಸುತ್ತಿದೆ. ವರದಿಗಳ ಪ್ರಕಾರ ಡಬ್ಲ್ಯೂ ಹೆಚ್ ಒ ಪ್ರತಿನಿಧಿ ರಿಚರ್ಡ್ ಪೀಪರ್‌ಕಾರ್ನ್ ಅವರು ಫೆಬ್ರವರಿಯಲ್ಲಿ ಮೊದಲು ಈ ಘೋಷಣೆಯನ್ನು ಮಾಡಿದರು. ಡೇರೆ ಶಿಬಿರಗಳಿಂದ ತುಂಬಿದ ಪ್ರದೇಶವನ್ನು ಚಿತ್ರದಲ್ಲಿ ಕಾಣಬಹುದು. ಇದು ಇತ್ತೀಚಿನದು. ಎಲ್ಲರ ಗಮನ ಸೆಳೆಯಲು ಇದು ಅವರ ಪ್ರಯತ್ನ. ಇಸ್ರೇಲ್ ದಾಳಿಯಿಂದ ರಫಾದಲ್ಲಿ ಕನಿಷ್ಠ 45 ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವರು ನೆಟ್ಟಿಗರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಪೋಸ್ಟ್‌ ಶೇರ್‌ ಮಾಡಿದ ಸೆಲೆಬ್ರಿಟಿಗಳು

ಭಾರತೀಯ ನಟರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಕರೀನಾ ಕಪೂರ್ ಖಾನ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ ಅವರು “‘ಆಲ್ ಐಸ್ ಆನ್ ರಾಫಾ’ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಗುತ್ತದೆ ಎಂದು ನಾವು ಆರಂಭದಲ್ಲಿ ಭಾವಿಸಿರಲಿಲ್ಲ. ಸಾಕಷ್ಟು ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ಇದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶದ ಭಾವನೆ ಅಥವಾ ಉದ್ದೇಶ ಒಂದೇ. ಅನೇಕರನ್ನು ತಲುಪುವುದು ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಎಲ್ಲರ ಗಮನ ಸೆಳೆಯುವುದು.

ಇದನ್ನೂ ಓದಿ: Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

ರಫಾ ನಿರ್ಮೂಲನೆ ಮಾಡುವ ಗುರಿ

ಇದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೇಶದಲ್ಲಿ ಈ ಸಾವುನೋವುಗಳು ‘ದುರಂತ’ ಎಂದು ಹೇಳಿದ್ದಾರೆ. ರಫಾವನ್ನು ಹಮಾಸ್‌ ಉಗ್ರರ ಕಟ್ಟ ಕಡೆಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಪ್ಯಾಲೇಸ್ಟಿನಿಯರು ಆಶ್ರಯ ಪಡೆದಿದ್ದಾರೆ. ಪ್ಯಾಲೇಸ್ಟಿನ್ ಮೇಲಿನ ಇಸ್ರೇಲ್‌ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Continue Reading

ವಿದೇಶ

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

All Eyes on Rafah:ಕ್ರಿಕೆಟಿಗ ರೋಹಿತ್‌ ಶರ್ಮಾ(Rohit Sharma) ಪತ್ನಿ ರಿತಿಕಾ ಸಜ್ದೇಹ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಲ್ ಐಸ್‌ ಆನ್‌ ರಫಾ ಫೋಟೋ ಶೇರ್‌ ಮಾಡಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಅವರು ಭಾರೀ ಟೀಕೆಗೆ ಗುರಿಯಾಗಿದ್ದು, ಆಕೆಗೆ ರಫಾ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ನೆಟ್ಟಿಗರು ಜರಿದಿದ್ದಾರೆ.

VISTARANEWS.COM


on

All Eyes on Rafah
Koo

ನವದೆಹಲಿ: ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ(Israel-Palestine War) ಮುಂದುವರೆದಿರುವಂತೆಯೇ, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “ಎಲ್ಲರ ಕಣ್ಣುಗಳು ರಫಾ ಮೇಲೆ ”(All Eyes on Rafah) ಎನ್ನುವ ಫೋಟೋ ವು ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಫೋಟೋಗಳನ್ನು ಹಂಚಿಕೊಂಡು ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಪ್ಯಾಲೆಸ್ತೀನ್‌ ಪರವಾಗಿ ಧ್ವನಿ ಎತ್ತಿದ್ದಾರೆ. ಅದೇ ರೀತಿ ಕ್ರಿಕೆಟಿಗ ರೋಹಿತ್‌ ಶರ್ಮಾ(Rohit Sharma) ಪತ್ನಿ ರಿತಿಕಾ ಸಜ್ದೇಹ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಲ್ ಐಸ್‌ ಆನ್‌ ರಫಾ ಫೋಟೋ ಶೇರ್‌ ಮಾಡಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಅವರು ಭಾರೀ ಟೀಕೆಗೆ ಗುರಿಯಾಗಿದ್ದು, ಆಕೆಗೆ ರಫಾ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ನೆಟ್ಟಿಗರು ಜರಿದಿದ್ದಾರೆ.

ರಫಾ ಎಲ್ಲಿದೆ ಅನ್ನೋದಾದರೂ ಗೊತ್ತಿದೆಯೇ? ಕಾಶ್ಮೀರಿ ಪಂಡಿತರ ನರಮೇಧ, ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಇವುಗಳ ಬಗ್ಗೆ ಮೌನವಹಿಸಿದ್ದಿರಿ. ಈಗ ಹೇಗೆ ಪ್ಯಾಲೆಸ್ತೀನ್‌ ಪರವಾಗಿ ಧ್ವನಿ ಎತ್ತಲು ಸಾಧ್ಯವಾಯ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಟ್ರೋಲ್‌ ಆಗುತ್ತಿದ್ದಂತೆ ರಿತಿಕಾ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

ಏನಿದು ಆಲ್ ಐಸ್ ಆನ್ ರಫಾ ಫೋಟೋ?

ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಭಾನುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ನಾಗರಿಕರು ಸಾವನ್ನಪ್ಪಿದ್ದಾರೆ. ಇದರ ನಂತರ ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ರಫಾ ಮೇಲೆ ಎಲ್ಲರ ಕಣ್ಣು ಅರ್ಥ

‘ರಫಾ ಮೇಲೆ ಎಲ್ಲರ ಕಣ್ಣುಗಳು’ ಚಿತ್ರವು ನಡೆಯುತ್ತಿರುವ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳ ಕಚೇರಿಯ ನಿರ್ದೇಶಕ ರಿಕ್ ಪೀಪರ್ಕಾರ್ನ್ ಅವರ ಹೇಳಿಕೆಯಿಂದ ಈ ಘೋಷಣೆ ಹುಟ್ಟಿಕೊಂಡಿದೆ ಎಂದು ತೋರುತ್ತದೆ. ಫೆಬ್ರವರಿಯಲ್ಲಿ, “ಎಲ್ಲರ ಕಣ್ಣುಗಳು ರಫಾ ಮೇಲೆ ಇವೆ” ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನಗರವನ್ನು ಸ್ಥಳಾಂತರಿಸುವ ಯೋಜನೆಗೆ ಆದೇಶಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ನಡೆದಿದೆ.

ರಫಾವನ್ನು ಹಮಾಸ್‌ ಉಗ್ರರ ಕಟ್ಟ ಕಡೇಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಫೆಲೆಸ್ತೀನೀಯರು ಆಶ್ರಯ ಪಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್‌ನ ಇತ್ತೀಚಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಈ ಸಾಲಿನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಸೇರಿದ್ದಾರೆ.

ಇದನ್ನೂ ಓದಿ:Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

ರಫಾ ಮೇಲಿನ ಇತ್ತೀಚಿನ ಇಸ್ರೇಲ್​​ ದಾಳಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಗಾಜಾದಲ್ಲಿ ಶೀಘ್ರ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಪ್ಯಾಲೆಸ್ಟೈನ್ ಜನರನ್ನು ಬೆಂಬಲಿಸಿ ಮಾತನಾಡಿದವರಲ್ಲಿಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ಇಸ್ರೇಲ್‌ನ ಕ್ರಮಗಳನ್ನು ಖಂಡಿಸುವ ಬರಹವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ ಶೇರ್ ಮಾಡಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Viral Video:ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಪಾಕಿಸ್ತಾನ(Pakistan) ಎಂದರೆ ಭಾರತ ಮಾತ್ರ ಅಲ್ಲ, ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ದ್ವೇಷಿಸುವ ರಾಷ್ಟ್ರ. ಇನ್ನು ನೆರೆಯ ಅಫ್ಘಾನಿಸ್ತಾನ(Afghanistan) ಅಂತೂ ಪಾಕಿಸ್ತಾನದ ಕುಕೃತ್ಯದಿಂದ ಬೇಸತ್ತಿರೋದಂತೂ ಅಕ್ಷರಶಃ ನಿಜ. ಹೀಗಾಗಿಯೇ ಅಲ್ಲಿನ ಜನ ಪಾಕಿಸ್ತಾನ ಅಂದ್ರೆ ಸಾಕು ಕೆಂಡ ಕಾರುತ್ತಾರೆ ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ(Viral Video)ವೊಂದು ಭಾರೀ ಸದ್ದು ಮಾಡುತ್ತಿದ್ದು, ಹೀಗೇ ಮುಂದುವರೆದರೆ ಪಾಕ್‌ ಸಂಪೂರ್ಣವಾಗಿ ನಿರ್ಣಾಮ ಆಗದಂತೂ ನಿಜ ಅಂತಿದ್ದಾರೆ ವಿಡಿಯೋ ನೋಡಿದ ನೆಟ್ಟಿಗರು.

ಏನಿದು ವಿಡಿಯೋ?

ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

“ನೀವು ಆಕಡೆಯಿಂದ ದಾಳಿ ನಡೆಸಿ.. ನಾವು ಈ ಕಡೆಯಿಂದ ದಾಳಿ ನಡೆಸುತ್ತೇವೆ. ಅಫ್ಘಾನಿಸ್ತಾನ ನಿಮ್ಮ ಜೊತೆ ಯಾವಾಗಲೂ ಇದೆ. ಆಫ್ಗನ್‌ ಜನ ನಿಮ್ಮ ಜೊತೆಗಿದ್ದಾರೆ. ಇಬ್ಬರು ಜೊತೆಗೂಡಿ ದಾಳಿ ನಡೆಸಿದರೆ ಪಾಕ್‌ ಅನ್ನು ಮಟ್ಟ ಹಾಕಬಹುದು. ಅಲ್ಲಿನ ಸಾಮಾನ್ಯ ಜನರೊಡನೆ ನಮಗೇನು ದ್ವೇಷವಿಲ್ಲ. ಬದಲಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ನಮಗೆ ಅಸಮಾಧಾನ ಇದೆ” ಎಂದು ವೃದ್ಧ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಪಿಒಕೆ ಶೀಘ್ರದಲ್ಲೇ ಮತ್ತೆ ನಮ್ಮದಾಗುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಪಾಕಿಸ್ತಾನವನ್ನು ಯಾರೂ ಇಷ್ಟ ಪಡುವುದಿಲ್ಲ… ಅಫ್ಘಾನಿಸ್ತಾನ ಅತ್ಯಂತ ಹೆಚ್ಚಾಗಿ ದ್ವೇಷಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೋದಿ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಮತ್ತೊಬ್ಬ ನೆಟ್ಟಿಗ ರಿಯಾಕ್ಟ್‌ ಮಾಡಿದ್ದಾರೆ.

ಇನ್ನು ಈದೇ ವಿಡಿಯೋವನ್ನು ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Continue Reading

ವಿದೇಶ

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

Nawaz Sharif: ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

VISTARANEWS.COM


on

Nawaz Sharif
Koo

ಇಸ್ಲಮಾಬಾದ್‌: ಭಾರತದ ಜೊತೆ ಮಾಡಿಕೊಂಡಿದ್ದ 1999 ಲಾಹೋರ್‌ ಒಪ್ಪಂದ(1999 Lahore Declaration)ವನ್ನು ಪಾಕಿಸ್ತಾನವೇ ಮುರಿದಿತ್ತು. ಅದು ನಮ್ಮ ಅತಿ ದೊಡ್ಡ ತಪ್ಪಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌(Nawaz Sharif) ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾರ್ಗಿಲ್‌ ಯುದ್ಧ(Kargil War) ಜನರಲ್‌ ಫರ್ವೇಜ್‌ ಮುಷಾರಫ್‌(Pervez Musharraf) ಕುಕೃತ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Viral Video)ದಲ್ಲಿ ಬಹಳ ಸದ್ದು ಮಾಡುತ್ತಿದೆ.

ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

ಫೆಬ್ರವರಿ 21, 1999 ರಂದು ಎರಡು ಬದ್ಧ ವೈರಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ನೆರೆಹೊರ ರಾಷ್ಟ್ರಗಳ ನಡುವಿನ ಶಾಂತಿ ಒಪ್ಪಂದವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನ ಸಂಪರ್ಕವನ್ನು ಉತ್ತೇಜಿಸಲು ಕರೆ ನೀಡಿತು. ಆದಾಗ್ಯೂ, ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.

ಮಾರ್ಚ್ 1999 ರಿಂದ, ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದ ಮುಷರಫ್, ಲಡಾಖ್‌ನ ಕಾರ್ಗಿಲ್ ಜಿಲ್ಲೆಯೊಳಗೆ ಪಾಕ್‌ ಸೇನೆಯ ರಹಸ್ಯ ಒಳನುಸುಳುವಿಕೆಗೆ ಆದೇಶಿಸಿದರು. ನವದೆಹಲಿ ಒಳನುಸುಳುವಿಕೆಯನ್ನು ಕಂಡುಹಿಡಿದ ನಂತರ ಪೂರ್ಣ ಪ್ರಮಾಣದ ಯುದ್ಧವು ಸ್ಫೋಟಗೊಂಡಿತು. ಈ ಯುದ್ಧವನ್ನು ಭಾರತ ಗೆದ್ದಿತ್ತು. ಈ ಸಂರ್ಭದಲ್ಲಿ ಷರೀಫ್‌ ಪಾಕಿಸ್ತಾನದ ಪ್ರಧಾನಿ ಆಗಿದ್ದರು.

ಇದನ್ನೂ ಓದಿ:Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದೀಗ ಇದೇ ವಿಚಾರ ಬಗ್ಗೆ ಪ್ರಸ್ತಾಪಿಸಿರುವ ಷರೀಫ್‌ ಅಂದು ತಮ್ಮ ಸರ್ಕಾರ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಪ್ರಸಾರ ಮಾಡಿದ ನವಾಜ್ ಷರೀಫ್ ಅವರ ಭಾಷಣದ ಒಂದು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Continue Reading
Advertisement
Virat Kohli
ಕ್ರೀಡೆ1 min ago

Virat Kohli: ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಕಠಿಣ ಅಭ್ಯಾಸ; ಮುಂಬೈನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್​ ಮಾಡುತ್ತಿರುವ ಕೊಹ್ಲಿ

PM Narendra Modi
ದೇಶ13 mins ago

PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ

Arvind Kejriwal
ದೇಶ14 mins ago

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ‘ಮದುವೆ’ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Love Jihad
ಪ್ರಮುಖ ಸುದ್ದಿ18 mins ago

Love Jihad: ಲವ್ ಜಿಹಾದ್ ತಡೆಗೆ ಹೆಲ್ಪ್‌ಲೈನ್‌ ಆರಂಭಿಸಿದ ಶ್ರೀರಾಮಸೇನೆ

Karan Bhushan Singh
ದೇಶ29 mins ago

Karan Bhushan Singh: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಡಿಕ್ಕಿಯಾಗಿ ಇಬ್ಬರ ಸಾವು

mlc election
ರಾಜಕೀಯ32 mins ago

MLC Election: ಒಂದಾದ ಸಿಎಂ- ಡಿಸಿಎಂ, ಪರಂ ಗರಂ; ಅಖಾಡಕ್ಕಿಳಿದ ರಮೇಶ್‌ ಕುಮಾರ್‌

Viral Run Out Video
ಕ್ರೀಡೆ38 mins ago

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Ambareesh Birthday during Sumalatha Ambareesh Talks About Abhishek Ambareesh And Aviva
ಸ್ಯಾಂಡಲ್ ವುಡ್45 mins ago

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

All Eyes on Rafah
ರಾಜಕೀಯ49 mins ago

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

Bomb Threat
ಪ್ರಮುಖ ಸುದ್ದಿ52 mins ago

Bomb Threat: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಸಂದೇಶ; ಆತಂಕ ಸೃಷ್ಟಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ20 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌