ವಿಸ್ತಾರ Explainer | ಆಮಿರ್‌ ಖಾನ್‌ನ ಲಾಲ್‌ ಸಿಂಗ್‌ ಚಡ್ಡಾಗೆ ಬಾಯ್ಕಾಟ್‌ ಏಕೆ? - Vistara News

EXPLAINER

ವಿಸ್ತಾರ Explainer | ಆಮಿರ್‌ ಖಾನ್‌ನ ಲಾಲ್‌ ಸಿಂಗ್‌ ಚಡ್ಡಾಗೆ ಬಾಯ್ಕಾಟ್‌ ಏಕೆ?

ಆಮಿರ್‌ ಖಾನ್‌ಗೆ ವಿವಾದಗಳು ಹೊಸತಲ್ಲ. ಇದೀಗ ʼಬಾಯ್ಕಾಟ್‌ ಲಾಲ್‌ ಸಿಂಗ್‌ ಚಡ್ಡಾʼ ಅಭಿಯಾನವೇಕೆ? ಆಮಿರ್‌ ಖಾನ್‌ ನೀಡಿದ್ದ ವಿವಾದಾತ್ಮಕ ಹೇಳಿಕೆ ಏನು? ಅವರ ಸಮರ್ಥನೆ ಏನು? ಇಲ್ಲಿದೆ ಈ ಕುರಿತ ವಿಸ್ತೃತ ಮಾಹಿತಿ.

VISTARANEWS.COM


on

lal singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಬಾರಿ ಬಾಲಿವುಡ್‌ ನಟ ಆಮಿರ್‌ ಖಾನ್‌ ತಮ್ಮ ಮಹತ್ವಾಕಾಂಕ್ಷೆಯ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಹೊರತರುವ ಮುನ್ನವೇ ವಿವಾದ ಅವರ ಬೆನ್ನು ಹತ್ತಿತ್ತು. ಟ್ವಿಟರ್‌ನಲ್ಲಿ ʼಬಾಯ್ಕಾಟ್‌ ಲಾಲ್‌ ಸಿಂಗ್‌ ಚಡ್ಡಾʼ ಎಂಬುದು ಟ್ರೆಂಡ್‌ ಆಗಿತ್ತು. ಭರ್ತಿ ನಾಲ್ಕು ವರ್ಷಗಳ ಬಳಿಕ ಅವರ ನಟನೆಯ ಸಿನಿಮಾ ಬೆಳ್ಳಿ ತೆರೆಗೆ ಬರುತ್ತಿದೆ. ಇದರಲ್ಲಿ ಆಮಿರ್‌ ನಾಯಕ, ಕರೀನಾ ಕಪೂರ್‌ ನಾಯಕಿ. ದಕ್ಷಿಣ ಭಾರತದ ನಟ ನಾಗಚೈತನ್ಯ ಕೂಡ ಇದರಲ್ಲಿದ್ದಾರೆ. ಅದ್ವೈತ್‌ ಚಂದನ್‌ ನಿರ್ದೇಶನ. ಹಾಲಿವುಡ್‌ನ ಟಾಮ್‌ ಹ್ಯಾಂಕ್‌ ನಟನೆಯ “ಫಾರೆಸ್ಟ್‌ ಗಂಪ್‌ʼ ಸಿನಿಮಾದ ಅಧಿಕೃತ ರಿಮೇಕ್‌ ಇದು.

ಕೆಲ ದಿನಗಳ ಹಿಂದೆ ಆಮಿರ್‌ ಮಾತನಾಡುತ್ತ ʼʼನಾನು ಭಾರತವನ್ನು ಇಷ್ಟಪಡುವವನಲ್ಲ ಎಂದು ಕೆಲವು ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ, ನೋಡಿ ಎಂದು ಕೇಳಿಕೊಳ್ಳುತ್ತೇನೆʼʼ ಎಂದು ಮನವಿ ಮಾಡಿದ್ದರು. ಆಗಲೂ, ಬಾಯ್ಕಾಟ್‌ ಲಾಲ್‌ ಸಿಂಗ್‌ ಚಡ್ಡಾ ಟ್ರೆಂಡ್‌ ಇಷ್ಟೊಂದು ಪ್ರಮಾಣದಲ್ಲಿರಬಹುದು ಎಂದು ಐಡಿಯಾ ಅವರಿಗೆ ಇದ್ದಿರಲಿಕ್ಕಿಲ್ಲ ಅನಿಸುತ್ತದೆ. ಆದರೆ ಫಿಲಂ ಬಿಡುಗಡೆಯ ಹಿಂದಿನ ದಿನ ಅದರ ಬಿಸಿ ಮುಟ್ಟಿತೆಂದು ಕಾಣುತ್ತದೆ. ʼʼನಾನು ಕೈಮುಗಿದು ದೇವರ ಮುಂದೆ ನಿಂತಿದ್ದೇನೆ. ನನ್ನ ವೀಕ್ಷಕರ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಯಾರ ಭಾವನೆಗಳಿಗಾದರೂ ತಿಳಿಯದೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ. ನಾನು ಯಾರನ್ನೂ ನೋಯಿಸಬಯಸುವುದಿಲ್ಲ. ನನ್ನ ಸಿನಿಮಾ ನೋಡಲು ಇಷ್ಟಪಡದವರು ಇದ್ದರೆ, ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆʼʼ ಎಂದಿದ್ದರು. ʼʼಸಿನಿಮಾದಲ್ಲಿ ನಾನೊಬ್ಬನೇ ಇರುವುದಲ್ಲ. ನೂರಾರು ಜನ ಅದಕ್ಕಾಗಿ ಶ್ರಮ ಹಾಕಿದ್ದಾರೆ. ಜನ ಇಷ್ಟಪಡಬಹುದು ಎಂದುಕೊಂಡಿದ್ದೇನೆʼʼ ಎಂದಿದ್ದರು.

ಲಾಲ್‌ ಸಿಂಗ್‌ ಚಡ್ಡಾ ಬಹಿಷ್ಕಾರಕ್ಕೆ ಕಾರಣವೇನು?

ಲಾಲ್‌ ಸಿಂಗ್‌ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸುತ್ತಿರುವವರ ಮನದಲ್ಲಿ ಆಮಿರ್‌ ಖಾನ್‌ ಅವರ ಈ ಹಿಂದಿನ ಕೆಲವು ವರ್ತನೆಗಳ ಬಗ್ಗೆ ಕೋಪವಿದೆ. ಮುಖ್ಯವಾಗಿ ʼʼಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆʼʼ ಎಂದದ್ದು. ಇದಲ್ಲದೇ ಈ ಹಿಂದಿನ ಹಲವು ಸಂದರ್ಭಗಳಲ್ಲಿ ಆಮಿರ್‌ ತೋರಿದ ವರ್ತನೆಯನ್ನೂ ಈಗ ಮುನ್ನೆಲೆಗೆ ತರಲಾಗಿದ್ದು, ಇದೆಲ್ಲವೂ ಕ್ರೋಡೀಕರಿಸಿ ಈಗ ʼಬಾಯ್ಕಾಟ್‌ ಲಾಲ್‌ಸಿಂಗ್‌ ಚಡ್ಡಾʼ ರೂಪ ಪಡೆದಿದೆ.

ಲಾಲ್‌ ಸಿಂಗ್‌ ಚಡ್ಡಾ ಚಿತ್ರದಲ್ಲಿ ಆಮಿರ್‌ ಖಾನ್‌ ಕಡಿಮೆ ಐಕ್ಯೂ ಹೊಂದಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಂಥ ಲಾಲ್‌ ಸಿಂಗ್‌ ಪಾತ್ರದ ಮೂಲಕ ಸಿಖ್‌ ಸಮುದಾಯವನ್ನು ಅವಹೇಳನ ಮಾಡಿದ್ದಾರೆ. ಹಾಗೂ ಇಂಥ ವ್ಯಕ್ತಿ ಭಾರತೀಯ ಸೈನ್ಯಕ್ಕೆ ಸೇರುವಂತೆ ಚಿತ್ರಿಸುವ ಮೂಲಕ, ಸೈನ್ಯಕ್ಕೂ ಅವಮಾನ ಮಾಡಲಾಗಿದೆ ಎಂದು ಈ ಬಾಯ್ಕಾಟ್‌ ಪಡೆ ಹೇಳುತ್ತಿದೆ.

ಅಸಹಿಷ್ಣುತೆ ಹೇಳಿಕೆ

2014ರಲ್ಲಿ ಮೋದಿ ಪ್ರಧಾನಿಯಾದರು ಹಾಗೂ 2015ರಲ್ಲಿ ಗೋಮಾಂಸದ ಹಿನ್ನೆಲೆಯಲ್ಲಿ ಕೆಲವು ಲಿಂಚಿಂಗ್‌ ಪ್ರಕರಣಗಳು ನಡೆದವು ಈ ಸಂದರ್ಭದಲ್ಲಿ, ಒಂದು ಸಂದರ್ಶನದಲ್ಲಿ ಆಮಿರ್‌ ಖಾನ್‌ ಮಾತನಾಡುತ್ತ ʼʼದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ನನಗೆ ಅನಿಸುತ್ತಿದೆ. ನಮ್ಮ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಾವು ಈ ದೇಶ ತೊರೆಯುಬೇಕೆಂದು ನಿನಗೆ ಅನಿಸುತ್ತದೆಯೇ ಎಂದು ನನ್ನ ಪತ್ನಿ ಕಿರಣ್‌ ರಾವ್‌ ಕೇಳಿದ್ದಳುʼʼ ಎಂದು ಹೇಳಿದ್ದರು. ಇದರಿಂದ ಆಮಿರ್‌ ಬಗ್ಗೆ ಸಿಟ್ಟಿನ ಅಲೆಗಳು ದೇಶದಲ್ಲಿ ಎದ್ದಿದ್ದವು.

ಈ ಸಂದರ್ಭದಲ್ಲಿ ಆಮಿರ್‌ ಅವರು ಇ- ಕಾಮರ್ಸ್‌ ಸ್ನ್ಯಾಪ್‌ಡೀಲ್‌ನ ಬ್ರಾಂಡ್‌ ರಾಯಭಾರಿ ಆಗಿದ್ದರು. ನೆಟಿಜನ್‌ಗಳ ಸಿಟ್ಟು ಸ್ನ್ಯಾಪ್‌ಡೀಲ್‌ ಆ್ಯಪ್‌ನ ವಿರುದ್ಧ ತಿರುಗಿತ್ತು. ಸ್ನ್ಯಾಪ್‌ಡೀಲನ್ನು ಬಹಿಷ್ಕರಿಸುವ ಅಭಿಯಾನ ನಡೆಯಿತು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಸ್ನ್ಯಾಪ್‌ಡೀಲ್‌, ಮೂರು ತಿಂಗಳಲ್ಲಿ ಆಮಿರ್‌ ಅವರನ್ನು ತನ್ನ ಕಾಂಟ್ರಾಕ್ಟ್‌ನಿಂದ ಕೈಬಿಟ್ಟಿತ್ತು.

ಪಿಕೆ ಸಿನಿಮಾ ವಿವಾದ

pk

ಆಮಿರ್‌ ಖಾನ್‌ ವಿರುದ್ಧ ಇನ್ನಷ್ಟು ವಿವಾದದ ಬಿಸಿ ಸೃಷ್ಟಿಸಿದ ಸಿನಿಮಾ ಪಿಕೆ. ಇದರಲ್ಲಿ ಆಮಿರ್‌ ಖಾನ್‌ ಏಲಿಯನ್‌ ಆಗಿ ನಟಿಸಿದ್ದರು. ಸಿನಿಮಾದಲ್ಲಿ ಹಿಂದೂ ಧಾರ್ಮಿಕ ತಾಣಗಳಿಗೆ ನುಗ್ಗಿ ಅಲ್ಲಿನ ಆಚರಣೆಗಳನ್ನು ಪ್ರಶ್ನಿಸುವ, ಶಿವ ಮುಂತಾದ ದೇವತೆಗಳನ್ನು ಗೇಲಿ ಮಾಡುವ ಕೆಲವು ಚಿತ್ರಣಗಳನ್ನು ತೋರಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳವರು ಪಿಕೆ ಸಿನಿಮಾದ ವಿರುದ್ಧ ಅಭಿಯಾನ ನಡೆಸಿದ್ದರು.

ಇನ್ನು ಪಿಕೆ ಸಿನಿಮಾದ ಪೋಸ್ಟರ್‌ನಲ್ಲಿ ಕೇವಲ ಒಂದು ರೇಡಿಯೋದ ಮೂಲಕ ಮಾನ ಮುಚ್ಚಿಕೊಂಡಿದ್ದ ಆಮಿರ್‌ ಫೋಟೋ ಕೂಡ ʼಅಶ್ಲೀಲತೆʼಯ ಕೂಗನ್ನು ಎಬ್ಬಿಸಿತ್ತು. ಕೆಲವರು ಕೋರ್ಟಿಗೂ ಹೋಗಿದ್ದರು. ಆದರೆ ಕೋರ್ಟ್‌ ಇದರಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು.

ಸೆಲ್ಯೂಟ್‌ ಮಾಡಲು ನಿರಾಕರಿಸಿದರೇ?

ಇತ್ತೀಚೆಗೆ ಹೊಸದೊಂದು ವಿವಾದವೊಂದು ಆಮರ್‌ ಕೊರಳಿಗೆ ಸುತ್ತಿಕೊಳ್ಳತೊಡಗಿದೆ. ಇದು ʼಕೌನ್‌ ಬನೇಗಾ ಕರೋಡ್‌ಪತಿʼ ಕಾರ್ಯಕ್ರಮದ ಒಂದು ಎಪಿಸೋಡ್‌ಗೆ ಸಂಬಂಧಿಸಿದ್ದು. ಇದರಲ್ಲಿ ಕರ್ನಲ್‌ ಮಿಥಾಲಿ ಮಧುಮಿತಾ ಹಾಗೂ ಆಮಿರ್‌ ಖಾನ್‌ ಅತಿಥಿಗಳಾಗಿದ್ದರು. ಗುಂಡಿನ ಚಕಮಕಿಯ ನಡುವೆ ಜನರನ್ನು ರಕ್ಷಿಸಿದ ತಮ್ಮ ಕತೆಯನ್ನು ಮಿಥಾಲಿ ಹೇಳಿಕೊಂಡರು. ಆಗ ಅಮಿತಾಭ್‌ ಬಚ್ಚನ್‌ ಅವರು ʼʼನಾವೆಲ್ಲರೂ ಇವರಿಗೆ ಎದ್ದುನಿಂತು ಸೆಲ್ಯೂಟ್‌ ಸಲ್ಲಿಸೋಣʼʼ ಎಂದರು. ಹಿನ್ನೆಲೆಯಲ್ಲಿ ವಂದೇಮಾತರಂ ನುಡಿಸುತ್ತಿರುವಂತೆ ಎಲ್ಲರೂ ಎದ್ದುನಿಂತು ಸೆಲ್ಯೂಟ್‌ ನೀಡಿದರು.

ಈ ವಿಡಿಯೋದಲ್ಲಿ ಆಮಿರ್‌ ಖಾನ್‌ ಅವರ ಒಂದು ಮಗ್ಗುಲಿನ ನೋಟವನ್ನು ಮಾತ್ರ ತೋರಿಸುತ್ತಿದ್ದು, ಆಮಿರ್‌ ಇದರಲ್ಲಿ ಸೆಲ್ಯೂಟ್‌ ಹೊಡೆದದ್ದು ಕಾಣಿಸುವುದಿಲ್ಲ. ಈ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ʼʼನನಗೆ ಈ ಘಟನೆ ನೆನಪಾಗುತ್ತಿಲ್ಲʼʼ ಎಂದು ಆಮಿರ್‌ ಹೇಳಿದ್ದರು. ಪ್ರಸ್ತುತ ಬಾಯ್ಕಾಟ್‌ ಪಡೆ ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು, ʼʼಆಮಿರ್‌ ಖಾನ್‌ಗೆ ದೇಶದ ಬಗ್ಗೆ, ಸೈನಿಕರ ಬಗ್ಗೆ ಗೌರವವಿಲ್ಲʼʼ ಎಂದು ಟ್ರೋಲ್‌ ಮಾಡುತ್ತಿದೆ.

turkey

ಟರ್ಕಿಯ ಲೇಡಿಯ ಭೇಟಿ

2020ರಲ್ಲಿ ಟರ್ಕಿಯಲ್ಲಿ ಶೂಟಿಂಗ್‌ ನಿರತರಾಗಿದ್ದ ಆಮಿರ್‌ ಖಾನ್‌, ಅಲ್ಲಿನ ಫಸ್ಟ್‌ ಲೇಡಿ ಎಮಿನೆ ಎರ್ದೋಗನ್‌ ಅವರನ್ನು ಭೇಟಿಯಾದರು. ಈ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತು. ಇದೇ ಹೊತ್ತಿಗೆ, ಅಲ್ಲಿನ ಅಧ್ಯಕ್ಷ ತಯ್ಯಪ್‌ ಎರ್ದೋಗನ್‌ ಅವರು ಭಾರತ- ವಿರೋಧಿ ನಿಲುವುಗಳಲ್ಲಿ ಮಗ್ನರಾಗಿದ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರು. ʼʼಈ ಭೇಟಿಯ ಮೂಲಕ ಆಮಿರ್‌ ಪಾಕ್‌ ಪರ, ಭಾರತ ವಿರೋಧಿ ಎಂಬುದು ರುಜುವಾತಾಗಿದೆʼʼ ಎಂದು ಟ್ರೋಲ್‌ ಪಡೆ ಕಟುವಾಗಿ ಟೀಕಿಸಿತು.

ಫನಾ ನಿಷೇಧ

fanaa

ಹಾಗೆ ನೋಡಿದರೆ ಆಮಿರ್‌ ಅವರ ಹೆಚ್ಚಿನ ಸಿನಿಮಾಗಳು ಬಂದಾಗಲೂ ವಿವಾದ ಎಬ್ಬಿಸಿರುವುದು ಕಾಣಿಸುತ್ತದೆ. ʼಫನಾʼ ಫಿಲಂನಲ್ಲಿ ಆಮಿರ್‌ ಖಾನ್‌ ಅವರು ಉಗ್ರಗಾಮಿಯೊಬ್ಬನ ಪಾತ್ರ ನಿರ್ವಹಿಸಿದ್ದರು. 2006ರಲ್ಲಿ ಇದು ಬಂತು. ಅದೇ ಸಂದರ್ಭದಲ್ಲಿ ಆಮರ್‌ ಅವರು ನರ್ಮದಾ ಬಚಾವೊ ಆಂದೋಲನದಲ್ಲಿ ಭಾಗವಹಿಸಿದ್ದರು. ಮೇಧಾ ಪಾಟ್ಕರ್‌ ಅವರ ಪರ, ಗುಜರಾತಿನ ಆಗಿನ ಮುಖ್ಯಮಂತ್ರಿ ಮೋದಿ ಆಡಳಿತದ ವಿರುದ್ಧ ಟೀಕೆ ಮಾಡಿದ್ದರು. ಇದನ್ನನುಸರಿಸಿ ಗುಜರಾತ್‌ನಲ್ಲಿ ʼಫನಾʼ ಸಿನಿಮಾವನ್ನು ನಿಷೇಧಿಸಲಾಯಿತು.

ರಂಗ್‌ ದೇ ಬಸಂತಿ ವಿವಾದ

ʼರಂಗ್‌ ದೇ ಬಸಂತಿʼ ಸಿನಿಮಾವು, ಮೃತ ಇಂಡಿಯನ್‌ ಏರ್‌ಫೋರ್ಸ್‌ ಪೈಲಟ್‌ ಅಭಿಜಿತ್‌ ಗಾಡ್ಗೀಳ್‌ ಅವರ ಜೀವನ ಕತೆಯನ್ನು ಸ್ಥೂಲವಾಗಿ ಆಧರಿಸಿತ್ತು. ಆದರೆ ಈ ಚಿತ್ರವನ್ನು ತಮಗೆ ಮೊದಲೇ ತೋರಿಸಲಿಲ್ಲ ಎಂದು ಗಾಡ್ಗೀಳ್‌ ಅವರ ತಾಯಿ ಕವಿತಾ ಗಾಡ್ಗೀಳ್‌ ಅವರು ವಿವಾದ ಎಬ್ಬಿಸಿದ್ದರು. ವಾಯುಪಡೆಯನ್ನು ಕೂಡ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಕೂಡ ಕೆಲವರು ದೂರಿದ್ದರು. ಇನ್ನು ʼತ್ರಿ ಈಡಿಯಟ್ಸ್‌ʼ ಬಂದಾಗ, ತಮಗೆ ಕ್ರೆಡಿಟ್‌ ಕೊಡಲಿಲ್ಲ ಎಂದು ಚಿತ್ರದ ಮೂಲಕತೆಗಾರ ಚೇತನ್‌ ಭಗತ್‌ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

ವಿಮಾನಗಳಲ್ಲಿ ಪ್ರಕ್ಷುಬ್ಧತೆಯ (Flight Turbulence) ಸಮಯದಲ್ಲಿ ಸುರಕ್ಷಿತವಾಗಿರಲು ಪ್ರಯಾಣಿಕರಿಗೆ ಅಮೆರಿಕದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌, ವಿಮಾನ ಸಿಬ್ಬಂದಿ ಪಾಲಿಸಬಹುದಾದ ಮತ್ತು ಪ್ರಯಾಣಿಕರು ನಿರ್ವಹಿಸಬೇಕಾದ ಮಾರ್ಗಸೂಚಿಯನ್ನು ನೀಡಿದೆ. ಈ ಕುರಿತ ವಿವರಣೆ ಇಲ್ಲಿದೆ. ವಿಮಾನದೊಳಗಿನ ಪ್ರಕ್ಷುಬ್ಧತೆ (Flight Turbulence) ಎಂದರೇನು, ಇದರಿಂದ ಪಾರಾಗುವುದು ಹೇಗೆ ಎಂಬ ಮಾಹಿತಿಯೂ ಇಲ್ಲಿದೆ.

VISTARANEWS.COM


on

By

Flight Turbulence
Koo

ವಿಮಾನ (flight) ಹಾರುವಾಗ ವಾಯು ಒತ್ತಡದಿಂದ ಕೆಲವೊಮ್ಮೆ ಪ್ರಕ್ಷುಬ್ಧತೆ (Flight Turbulence) ಉಂಟಾಗುತ್ತದೆ. ವಿಮಾನ ನಡುಗುತ್ತದೆ. ಈ ಸಂದರ್ಭದಲ್ಲಿ ಹಠಾತ್ ಆಘಾತಗಳು ಸಂಭವಿಸಿ ಸಾವು ನೋವು ಉಂಟಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬೇಕಾಗುತ್ತದೆ. ಇತ್ತೀಚೆಗೆ ಸಿಂಗಾಪುರ ಏರ್‌ಲೈನ್ಸ್ (singapore airlines) ವಿಮಾನ ಇಂಥದ್ದೇ ಪರಿಸ್ಥಿತಿಗೆ ಒಳಗಾಗಿ ಪ್ರಯಾಣಿಕರೊಬ್ಬರು ಸಾವಿಗೀಡಾಗಿ, ಹಲವರು ಪ್ರಯಾಣಿಕರು ಗಾಯಗೊಂಡಿದ್ದರು. ಲಂಡನ್‌ನಿಂದ ಸಿಂಗಾಪುರಕ್ಕೆ ಹಾರುತ್ತಿದ್ದ ಬೋಯಿಂಗ್ 777-312ER ವಿಮಾನ 321ರಲ್ಲಿದ್ದ ಪ್ರಯಾಣಿಕರು ವಾಯು ಪ್ರಕ್ಷುಬ್ಧತೆಯ ಭಯಾನಕತೆಯನ್ನು ಅನುಭವಿಸಬೇಕಾಯಿತು.

ವಾಯು ಪ್ರಕ್ಷುಬ್ಧತೆ ಎಂದರೇನು?

ವಾಯು ಪ್ರಕ್ಷುಬ್ಧತೆಯು ಭೂಮಿಯ ವಾತಾವರಣದಲ್ಲಿ ಗಾಳಿಯ ಅನಿಯಮಿತ ಮತ್ತು ಅನಿರೀಕ್ಷಿತ ಚಲನೆಯಿಂದ ಉಂಟಾಗುತ್ತದೆ. ಇದು ವಿಮಾನ ಹಾರಾಟದ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ವೇಗವಾಗಿ ವಾಹನ ಓಡಿಸುತ್ತಿದ್ದಾಗ ಯಾವ ಸೂಚನಾ ಫಲಕ ಇಲ್ಲದೆ ಹಠಾತ್‌ ಹಂಪ್‌ ಎದುರಾದಾಗ ಏನಾಗುತ್ತದೋ ವಿಮಾನದೊಳಗೆ ಹಾಗೆಯೇ ಆಗುತ್ತದೆ. ವಿಮಾನವು ಚಾಲಕನ ನಿಯಂತ್ರಣ ಕಳೆದುಕೊಂಡು ಪತನಗೊಳ್ಳುವಂತಾಗುತ್ತದೆ.

ಆಗ ಏನು ಮಾಡಬೇಕು?

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಕುಳಿತಿರಬೇಕು. ಸೈನ್ ಆಫ್ ಆಗಿದ್ದರೂ, ಅದನ್ನು ಬಿಗಿಯಾಗಿ ಇರಿಸಬೇಕು.
ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿ. ಅವರ ಮಾತನ್ನು ಕೇಳಿ. ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಕ್ಷುಬ್ಧತೆಯ ಸಮಯದಲ್ಲಿ ಕ್ಯಾಬಿನ್ ಸುತ್ತಲೂ ಚಲಿಸುವುದನ್ನು ತಪ್ಪಿಸಿ ಮತ್ತು ಆತಂಕದಿಂದ ಕಿರುಚದೇ ಮೌನವಾಗಿ ಕುಳಿತುಕೊಳ್ಳಿ.

ಕ್ಯಾಬಿನ್‌ನಲ್ಲಿ ಇಟ್ಟಿರುವ ವಸ್ತುಗಳು ಮೈಮೇಲೆ ಬೀಳದಂತೆ ಸುರಕ್ಷಿತವಾಗಿರಿಸಿ. ಸೋರಿಕೆ ಅಥವಾ ಬೀಳುವಿಕೆಯನ್ನು ತಪ್ಪಿಸಲು ವಸ್ತುಗಳನ್ನು ಓವರ್ ಹೆಡ್ ವಿಭಾಗಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ.
ಪ್ರಕ್ಷುಬ್ಧತೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ. ರೆಸ್ಟ್ ರೂಮ್‌ ಅನ್ನು ಬಳಸಬೇಕಾದರೆ ಎದ್ದೇಳುವ ಮೊದಲು ಶಾಂತ ಕ್ಷಣಕ್ಕಾಗಿ ಕಾಯಿರಿ. ಸ್ಥಿರತೆಗಾಗಿ ಹ್ಯಾಂಡ್ರೈಲ್‌ಗಳನ್ನು ಬಳಸಿ.

ವಾಯು ಪ್ರಕ್ಷುಬ್ಧತೆಗೆ ಕಾರಣಗಳೇನು?

ಚಂಡಮಾರುತ, ಜೆಟ್ ಸ್ಟ್ರೀಮ್‌ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳಿಂದ ವಾಯು ಪ್ರಕ್ಷುಬ್ಧತೆ ಉಂಟಾಗಬಹುದು. ಹವಾಮಾನ ಬದಲಾವಣೆಗಳಿಂದಾಗಿ ಗಾಳಿಯ ಪ್ರಕ್ಷುಬ್ಧತೆಯು ಆಗಾಗ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ತೀವ್ರವಾದ ಪ್ರಕ್ಷುಬ್ಧ ಘಟನೆಗಳು ಅಪರೂಪ. ಪೈಲಟ್‌ಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ.

ಇದನ್ನೂ ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ಮಾಜಿ ಪೈಲೆಟ್ ಹೇಳಿದ್ದೇನು?

43 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಪೈಲಟ್ ಕ್ಯಾಪ್ಟನ್ ಕ್ರಿಸ್ ಹ್ಯಾಮಂಡ್ ಅವರು ಈ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಇಂಥ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೆಚ್ಚು ಸಮಾಧಾನದಿಂದ ಇರಿಸುವಂತೆ ಮಾಡುವ ಜವಾಬ್ದಾರಿ ಪೈಲಟ್‌ನದ್ದಾಗಿದೆ. ಎಲ್ಲಕ್ಕಿಂತ ಪೈಲಟ್‌ ತಾನು ಸಮಾಧಾನದಿಂದ ಇದ್ದು, ವಿವೇಚನೆ ಮತ್ತು ಅನುಭವ ಬಳಸಿ ವಿಮಾನವನ್ನು ನಿಯಂತ್ರಿಸಬೇಕಾಗುತ್ತದೆ. ಅನುಭವಿ ಚಾಲಕರು ಇಂಥ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡುತ್ತಾರೆ.

Continue Reading

ದೇಶ

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

Share Market: ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಇದು ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಗೆ ಹಿಡಿದ ಕನ್ನಡಿ ಎಂದೇ ವಿಶ್ಲೇಷಿಸಲಾಗುತಿದೆ.

VISTARANEWS.COM


on

Share Market
Koo

ಮುಂಬೈ: “ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದು ಭಾರತದ ಷೇರು ಮಾರುಕಟ್ಟೆಯು (Share Market) ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಇದೇ ಮಾತು ಹೇಳಿದ್ದಾರೆ. ಇದರ ಮಧ್ಯೆಯೇ, ಗುರುವಾರ (ಮೇ 23) ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಯ ಸಂಕೇತವಾಗಿಯೇ ಷೇರು ಮಾರುಕಟ್ಟೆಯು ದಾಖಲೆ ಬರೆದಿದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

“ನಿಫ್ಟಿಯು ದಾಖಲೆಯ ಏರಿಕೆ ಕಾಣುವ ಮೂಲಕ ಚುನಾವಣೆ ನಂತರದಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ ಎಂಬ ಸಂದೇಶ ರವಾನಿಸಿದೆ. ಅತಿ ಹೆಚ್ಚಿನ ಹಣ ಹೂಡಿಕೆ ಮಾಡುವವರು ಸೇರಿ ಎಲ್ಲರಿಗೂ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ” ಎಂದು ಜಿಯೋಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ರಣತಂತ್ರಗಾರ ವಿ.ಕೆ.ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಸಾರ್ವತ್ರಿಕ ಚುನಾವಣೆ ಫಲಿತಾಂಶದ ದಿನ ಷೇರು ಪೇಟೆಯಲ್ಲಿ ಲವಲವಿಕೆ ಇದ್ದೇ ಇರುತ್ತದೆ. ಆದರೆ, ಜೂನ್‌ 4ರಂದು ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಿರುವುದು ಹೂಡಿಕೆದಾರರ ಖುಷಿ ಹೆಚ್ಚಿಸಿದೆ.

Share Market

ಕೇಂದ್ರಕ್ಕೆ ಆರ್‌ಬಿಐ ಲಾಭಾಂಶದ ಕೊಡುಗೆ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.10 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಷೇರು ಮಾರುಕಟ್ಟೆ ಬಗ್ಗೆ ಮೋದಿ ಹೇಳಿದ್ದೇನು?

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Continue Reading

ಸಿನಿಮಾ

CGI Technology In Film: ʼವೆಸ್ಟ್‌ವರ್ಲ್ಡ್‌ʼನಿಂದ ʼಅವತಾರ್‌ʼ ಚಿತ್ರದವರೆಗೆ ಸಿಜಿಐ ತಂತ್ರಜ್ಞಾನದ ರೋಚಕ ಹಾದಿ! ವಿಡಿಯೊಗಳಿವೆ

ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ. ಇದರಲ್ಲಿ ಸಿಜಿಐ (CGI Technology In Film) ಕೂಡ ಒಂದು. 1970ರ ದಶಕದ ಆರಂಭದ ದಿನಗಳಿಂದಲೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ಸಾಕಷ್ಟು ಪ್ರಯೋಗಗಳಿಗೆ ಒಳಗಾಗಿದೆ. ಇದು ಸಾಕಷ್ಟು ಅದ್ಭುತ ಚಲನಚಿತ್ರಗಳ ಮೇಲೆ ಪ್ರಭಾವವನ್ನು ಬೀರಿದೆ. ಕಥೆ ಹೇಳುವ ಶೈಲಿ ಮತ್ತು ದೃಶ್ಯ ಸಂಯೋಜನೆಯ ಗಡಿಗಳನ್ನು ವಿಸ್ತರಿಸಿದೆ. ಚಲನಚಿತ್ರ ರಂಗದಲ್ಲಿ ಸಿಜಿಐ ನ ಮೈಲುಗಲ್ಲು ಹೇಗಿತ್ತು ಎನ್ನುವ ಕಿರು ನೋಟ ಇಲ್ಲಿದೆ.

VISTARANEWS.COM


on

By

CGI Technology In Film
Koo

ಹಿಂದಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ (film) ಒಂದು ವಿಶೇಷ ಸನ್ನಿವೇಶವನ್ನು ಚಿತ್ರಿಸಬೇಕಾದರೆ ಸೆಟ್‌ಗಳ ನಿರ್ಮಾಣಕ್ಕೆ ನಿರ್ಮಾಪಕರು (filmmakers), ಕೆಮರಾಮೆನ್‌ಗಳು (camera men) ಸಾಕಷ್ಟು ಕಷ್ಟಪಡುತ್ತಿದ್ದರು. ಆದರೆ ಈಗ ಎಲ್ಲವೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ತಂತ್ರಜ್ಞಾನದ (CGI Technology In Film) ಮೂಲಕ ನಡೆದುಹೋಗುತ್ತದೆ. ಇದೀಗ ʼಮುಂಜ್ಯಾʼ ಎಂಬ ಭಾರತದ ಚಿತ್ರದಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ʼಮುಂಜ್ಯಾʼ ಭಾರತದ ಮೊದಲ CGI ಚಿತ್ರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಹಿನ್ನೋಟ ಇಲ್ಲಿ ಕೊಡಲಾಗಿದೆ.

ಸಿನಿಮಾ ಜಗತ್ತಿನಲ್ಲಿ ಸಿಜಿಐಯ ವಿಕಾಸ ಒಂದು ಪ್ರಮುಖ ಮೈಲುಗಲ್ಲು ಎಂದರೆ ತಪ್ಪಾಗಲಾರದು. ಇದು ಸಿನಿಮಾದ ಭವಿಷ್ಯವನ್ನೇ ಬದಲಾಯಿಸಿತ್ತು. ಹಿಂದೆ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸಲು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದರು ಜೊತೆಗೆ ಆಪ್ಟಿಕಲ್ ತಂತ್ರಗಳನ್ನು ಅವಲಂಬಿಸಿದ್ದರು. ಕೆಮರಾ ಕೋನಗಳು, ಲೆನ್ಸ್ ಆಯ್ಕೆ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಸೆಟ್‌ ಗಳ ತಂತ್ರಗಳನ್ನು ಬಳಸುತ್ತಿದ್ದರು. ಹಸಿರು ಮತ್ತು ವಾಲ್ಯೂಮೆಟ್ರಿಕ್ ಎಲ್ಇಡಿ ಪರದೆಯನ್ನು ಬಳಸಿ ಹಿಂದೆ ಸೆಟ್ ವಿಸ್ತರಣೆಗಳನ್ನು ಕೈಯಿಂದ ನಿಖರವಾಗಿ ಚಿತ್ರಿಸಲಾಗುತ್ತಿತ್ತು.

ಈ ವಿಧಾನಕ್ಕೆ ಈಗ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಇಲ್ಲಿ ಕಂಪ್ಯೂಟರ್‌ಗಳು ಮತ್ತು ವಿವಿಧ ಸಾಫ್ಟ್‌ವೇರ್‌ಗಳು ಊಹಿಸುವ ಯಾವುದೇ ವಿನ್ಯಾಸವನ್ನು ರಚಿಸಲು ಇದು ಸಹಾಯ ಮಾಡುತ್ತದೆ. ಡಿಜಿಟಲ್ ಸೃಜನಶೀಲತೆಯೆಡೆಗಿನ ಈ ಬದಲಾವಣೆಯು ಸಿಜಿಐ ತಂತ್ರಜ್ಞಾನದ ಪ್ರಗತಿ ವೇಗವನ್ನು ಹೆಚ್ಚಿಸಿತ್ತು.


ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಮಾರ್ವೆಲ್‌ನ ದಿ ಅವೆಂಜರ್ಸ್‌ನಲ್ಲಿ ಮಾರ್ಕ್ ರುಫಲೋ ಧರಿಸಿರುವ ಸೂಟ್ ಮತ್ತು ಸುತ್ತಲಿನ ದೃಶ್ಯಗಳಿಗೆ ಮತ್ತೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.

ಸಿಜಿಐಯ ಮೊದಲ ಪ್ರಯೋಗ ಯಾವಾಗ?

ಸಿಜಿಐ ಅನ್ನು ಆಧುನಿಕ ಚಲನಚಿತ್ರಗಳಲ್ಲಿ ಮಾತ್ರ ನಾವು ಗಮನಿಸಿದ್ದೇವೆ. ಆದರೆ ಇದು 2000 ರ ದಶಕದಿಂದ ಹಾಲಿವುಡ್‌ನ ಚಿತ್ರೀಕರಣದಲ್ಲಿ ಬಳಕೆಯಾಗುತ್ತಿದೆ. ಕಂಪ್ಯೂಟರ್ ರಚಿತ ಚಿತ್ರಣ 1973ರ ವೆಸ್ಟ್‌ವರ್ಲ್ಡ್ ಮತ್ತು 1977ರ ಸ್ಟಾರ್ ವಾರ್ಸ್‌ನಲ್ಲೂ ಮಾಡಲಾಗಿದೆ.

ವೆಸ್ಟ್‌ವರ್ಲ್ಡ್ ( 1973)

ವೆಸ್ಟ್‌ವರ್ಲ್ಡ್ ಚಲನಚಿತ್ರದಲ್ಲಿ ಸಿಜಿಐ ಸಂಕ್ಷಿಪ್ತವಾಗಿ ಸರಿಸುಮಾರು 10 ಸೆಕೆಂಡ್ ನಷ್ಟೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಇದು ಬಣ್ಣಗಳನ್ನು ಬದಲಾಯಿಸುವುದು, ಸಂಕುಚಿತಗೊಳಿಸುವುದು ಮತ್ತು ಚಿತ್ರಣವನ್ನು ವಿಸ್ತರಿಸುವುದು ಸೇರಿದೆ.


ಸ್ಟಾರ್ ವಾರ್ಸ್ (1977)

ಇದರಲ್ಲಿ ಚಿಕಣಿ ಮಾದರಿಗಳು ಮತ್ತು ಬೆಳಕಿನ ತಂತ್ರಗಳ ಮಿಶ್ರಣವನ್ನು ಮಾಡಲಾಗಿದೆ. ಚಿತ್ರದ ಪ್ರಮುಖ ಕ್ಷಣವೊಂದರಲ್ಲಿ ಲ್ಯೂಕ್ ಸ್ಕೈವಾಕರ್ ಮತ್ತು ಇತರ ಎಕ್ಸ್-ವಿಂಗ್ ಪೈಲಟ್‌ಗಳು ಡೆತ್ ಸ್ಟಾರ್‌ನ ಮೇಲೆ ತಮ್ಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವಾಗ ಇದನ್ನು ಪ್ರಯೋಗಿಸಲಾಗಿದೆ. ಇದರಲ್ಲಿ 3ಡಿ ಯುದ್ಧತಂತ್ರದ ನಕ್ಷೆಯನ್ನು ತೋರಿಸಲಾಗಿದೆ. ಇದನ್ನು ಇಲಿನಾಯ್ಸ್ ವಿಶ್ವವಿದ್ಯಾಲಯವು ಚಿಕಾಗೋದ ಎಲೆಕ್ಟ್ರಾನಿಕ್ ದೃಶ್ಯೀಕರಣ ಪ್ರಯೋಗಾಲಯ ತಂಡದೊಂದಿಗೆ ಅಭಿವೃದ್ಧಿಪಡಿಸಿದೆ.


ಸಿಜಿಐನ ಸಂಪೂರ್ಣ ಬಳಕೆ

ಸಂಪೂರ್ಣವಾಗಿ ಸಿಜಿಐ ಪಾತ್ರವನ್ನು ಸ್ಟಾರ್ ವಾರ್ಸ್ ಮತ್ತೊಮ್ಮೆ ಪರಿಚಯಿಸಿದ್ದು 1999ರ ಸ್ಟಾರ್ ವಾರ್ಸ್ ಸಂಚಿಕೆ 1: ದಿ ಫ್ಯಾಂಟಮ್ ಮೆನೇಸ್‌ನಲ್ಲಿ ಜಾರ್ ಜಾರ್ ಬಿಂಕ್ಸ್ ಮೂಲಕ.

ಸ್ಟಾರ್ ವಾರ್ಸ್: ಎ ನ್ಯೂ ಹೋಪ್ (1977)

1977ರಲ್ಲಿ ಬಿಡುಗಡೆಯಾದ ಜಾರ್ಜ್ ಲ್ಯೂಕಾಸ್‌ನ ಸ್ಟಾರ್ ವಾರ್ಸ್: ಎ ನ್ಯೂ ಹೋಪ್‌ ಪ್ರಾಯೋಗಿಕ ಮತ್ತು ಚಿಕಣಿ ಪರಿಣಾಮಗಳೊಂದಿಗೆ ಬೆರೆಸಿದ ಸಿಜಿಐ ಅಂಶಗಳ ಮನಮುಟ್ಟುವ ಬಳಕೆಯ ಮೂಲಕ ಚಲನಚಿತ್ರ ನಿರ್ಮಾಣದ ಹೊಸ ಯುಗವನ್ನು ಪ್ರಾರಂಭಿಸಿತು. 80ರ ದಶಕದಲ್ಲಿ ಇದು ಟ್ರಾನ್, ಪ್ರಿಡೇಟರ್, ಸೂಪರ್‌ಮ್ಯಾನ್, ಇ.ಟಿ. ಮತ್ತು ಏಲಿಯನ್ಸ್‌ನಂತಹ ಚಲನಚಿತ್ರಗಳ ಮೇಲೆ ಇದು ಪ್ರಭಾವ ಬೀರಿತು.


ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ (1991)

ಹೆಚ್ಚಿನ ಚಲನಚಿತ್ರ ಶಾಲೆಗಳಲ್ಲಿ ಒಂದು ಸಾಮಾನ್ಯ ಮಾತು ಇದೆ. ಸ್ಟಾರ್ ವಾರ್ಸ್ ಆಟವನ್ನು ಪ್ರಾರಂಭಿಸಿತು ಮತ್ತು ನಂತರ ಜುರಾಸಿಕ್ ಪಾರ್ಕ್ ಅದನ್ನು ಬದಲಾಯಿಸಿತು. ಇದಕ್ಕೆ ಸರಿಯಾದ ಒಂದು ಚಿತ್ರ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ. ಈ ಚಿತ್ರದಲ್ಲಿ ಸಿಜಿಐ ಬಳಕೆಯಲ್ಲಿ ಇದು ಒಂದು ಅತ್ಯಂತ ಪ್ರಭಾವಶಾಲಿ ಚಲನಚಿತ್ರ. ಯಾಕೆಂದರೆ ಇಲ್ಲಿ ಖಳನಾಯಕನನ್ನು ಸಿಜಿಐ ಮೂಲಕ ಸಂಪೂರ್ಣ ಲಿಕ್ವಿಡ್ ಮೆಟಲ್ ಪಾತ್ರದಲ್ಲಿ ರಚಿಸಲಾಗಿದೆ. ಈ ಮೂಲಕ ಇದು ಯಾವುದೇ ಆಕಾರವನ್ನು ಮಾರ್ಫ್ ಮಾಡಬಹುದು ಎಂಬುದನ್ನು ನಿರೂಪಿಸಿತ್ತು.


ಜುರಾಸಿಕ್ ಪಾರ್ಕ್ (1995)

ಜುರಾಸಿಕ್ ಪಾರ್ಕ್ ಒಂದು ಬ್ಲಾಕ್ಬಸ್ಟರ್ ಚಿತ್ರ. ಇದು ಸಿಜಿಐ ಇತಿಹಾಸದಲ್ಲೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದರಲ್ಲಿ ಡೈನೋಸಾರ್‌ಗಳು ಕಲಾವಿದರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಇದರಲ್ಲಿ ಮಾನವನ ಪಕ್ಕದಲ್ಲಿ ಡೈನೋಸಾರ್ ತಲೆಯ ಕ್ಲೋಸ್-ಅಪ್ ಅಗತ್ಯವಿರುವಾಗ ಪ್ರಾಯೋಗಿಕ ಡೈನೋಸಾರ್ ಮಾದರಿಯನ್ನು ಬಳಸಿದ್ದರೆ ದೂರದ ಶಾಟ್ ಗಳಿಗಾಗಿ ಡೈನೋಸಾರ್‌ಗಳ ಸಿಜಿಐ ಆವೃತ್ತಿಗಳನ್ನು ಬಳಸಲಾಗಿತ್ತು.


ದಿ ಮ್ಯಾಟ್ರಿಕ್ಸ್ (1999)

ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ದೃಶ್ಯ ದಿ ಮ್ಯಾಟ್ರಿಕ್ಸ್ ಚಿತ್ರದ ತುಣುಕು ಚಿತ್ರ ನೋಡಿದವರೆಲ್ಲರಿಗೂ ನೆನಪಿರಬಹುದು. 360 ಡಿಗ್ರಿ ಕ್ಯಾಮರಾ ರಿಗ್‌ನ ಬಳಕೆ, ಮಧ್ಯದಲ್ಲಿ ಕೀನು ರೀವ್ಸ್‌ನ ಪ್ರತ್ಯೇಕ ಫೋಟೋಗಳನ್ನು ತೆಗೆಯುವ ಮೂಲಕ ನಟರು ಮತ್ತು ಸಿಜಿಐ ಒಟ್ಟಿಗೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಸಿಜಿಐ ಅನ್ನು ದೋಷರಹಿತವಾಗಿ ಕಾರ್ಯಗತಗೊಳಿಸಿದ ಕೀರ್ತಿ ಈ ಚಿತ್ರ ತಂಡದ್ದು.


ಅವತಾರ್ (2009)

ಅವತಾರ್ ಚಿತ್ರದ ದೃಶ್ಯಾವಳಿಗಳು ಎಲ್ಲರ ಕಣ್ಣ ಮುಂದಿದೆ. ಇದರಲ್ಲಿ ಮೋಷನ್ ಕ್ಯಾಪ್ಚರ್ ಮತ್ತು ಸಿಜಿಐ ಸಂಪೂರ್ಣ ಮಿಶ್ರಣವಾಗಿತ್ತು.ಇದರಲ್ಲಿ ಕ್ಯಾಮರಾಗಳನ್ನು ಬಳಸಿಕೊಂಡು ನಟರ ಹೆಚ್ಚು ವಿವರವಾದ ಫೇಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಆ ಡೇಟಾವನ್ನು ಬಳಿಕ ಕಂಪ್ಯೂಟರ್ ರಚಿತ ಅಕ್ಷರ ಮಾದರಿಗಳಿಗೆ ವರ್ಗಾಯಿಸುತ್ತದೆ. ಸಂಪೂರ್ಣ ಮೂರು ಗಂಟೆಗಳ ಚಿತ್ರದಲ್ಲಿ ಶೇ. 60ರಷ್ಟನ್ನು ಸಿಜಿಐ ಮೂಲಕವೇ ಚಿತ್ರಣ ಮಾಡಲಾಗಿದೆ. ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

ಇನ್ಸೆಪ್ಶನ್ (2010)

ಕ್ರಿಸ್ಟೋಫರ್ ನೋಲನ್ ಅವರ ಇನ್ಸೆಪ್ಶನ್ ನಲ್ಲಿ ಸಿಜಿಐನೊಂದಿಗೆ ಸಂಕೀರ್ಣ ನಿರೂಪಣಾ ರಚನೆಯ ನವೀನ ಅಪ್ಲಿಕೇಶನ್‌ ಅನ್ನು ಬಳಸಲಾಗಿದೆ. ಇದು ಕನಸಿನ ಕುಶಲತೆಯ ಮೂಲಕ ಮಾನವ ಮನಸ್ಸಿನ ಆಳವನ್ನು ಪರಿಶೋಧಿಸುತ್ತದೆ. ವೀಕ್ಷಕರ ವಾಸ್ತವತೆಯ ಗ್ರಹಿಕೆಗೆ ಸವಾಲು ಹಾಕುವ ಈ ಚಿತ್ರ ಪ್ರೇಕ್ಷಕರನ್ನು ತನ್ನ ಕಥೆಯೊಳಗೆ ಲೀನ ವಾಗುವಂತೆ ಮಾಡುತ್ತದೆ.


ಅವತಾರ್: ದಿ ವೇ ಆಫ್ ವಾಟರ್ (2022)

ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌ನ ಬಹುನಿರೀಕ್ಷಿತ ಮುಂದುವರಿದ ಭಾಗ ದಿ ವೇ ಆಫ್ ವಾಟರ್ ಸಿನಿಮೀಯ ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಮೀರಿ ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಅತ್ಯಾಧುನಿಕ ಸಿಜಿಐ ಮತ್ತು ಕಾರ್ಯಕ್ಷಮತೆ ಕ್ಯಾಪ್ಚರ್ ತಂತ್ರಜ್ಞಾನದ ಪ್ರಭಾವಶಾಲಿ ಪರಾಕಾಷ್ಠೆಯನ್ನು ಈ ಚಿತ್ರದಲ್ಲಿ ಕಾಣಬಹುದು.


ಸಿಜಿಐ ಪ್ರಭಾವ ಹೇಗಿದೆ?

ಇತ್ತೀಚಿನ ವರ್ಷಗಳಲ್ಲಿ ಸ್ಟುಡಿಯೋಗಳು ಮತ್ತು ಚಲನಚಿತ್ರ ನಿರ್ಮಾಪಕರು ಸಿಜಿಐ ಅನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಿಜಿಐ ಬಳಕೆಯಿಂದ ನಿಜವಾದ ಅನುಭವ, ಸಂತೃಪ್ತಿ ಕಲಾವಿದನಿಗೆ ಸಿಗುವುದಿಲ್ಲ. ಕಲಾವಿದರೊಬ್ಬರ ಪ್ರಕಾರ ಶೂಟಿಂಗ್ ವೇಳೆ ನಾನು ಜೆಟ್ ಗಳಲ್ಲಿ ಹಾರಲು ಬಯಸಿದರೆ ಸಿಜಿಐನಲ್ಲಿ ಜೆಟ್‌ಗಳೇ ಇರುವುದಿಲ್ಲ ಎನ್ನುತ್ತಾರೆ. ಈ ಹೇಳಿಕೆ ಚಿತ್ರರಂಗದ ಮಾರುಕಟ್ಟೆಯಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಯಾಕೆಂದರೆ ಚಿತ್ರಗಳಲ್ಲಿ ನೋಡುವ ದೃಶ್ಯಗಳು ಯಾವುದು ನಿಜವಲ್ಲ ಎಂದು ಪ್ರೇಕ್ಷಕರಿಗೆ ಗೊತ್ತಾದರೆ ಅವರು ಚಿತ್ರದ ಮೇಲಿನ ಆಸಕ್ತಿ ಕಳೆದುಕೊಳ್ಳಬಹುದು ಎನ್ನುವ ವಾದವೂ ಇದೆ.

ಇದನ್ನೂ ಓದಿ: Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

ಸಿಜಿಐನ ಭವಿಷ್ಯವೇನು?

ಸಿಜಿಐ ಭವಿಷ್ಯವು ಸ್ಟುಡಿಯೋದ ಮಿತಿಯಲ್ಲಿರುವುದು ಸ್ಪಷ್ಟ. ಚಿತ್ರೀಕರಣದಲ್ಲಿ ಈಗ ಅದ್ಧೂರಿ ಬಜೆಟ್‌ಗಳ ಯುಗವು ಕ್ಷೀಣಿಸುತ್ತಿದೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈಜ ಸಮಯದ ಫೋಟೊರಿಯಾಲಿಸ್ಟಿಕ್ ಹಿನ್ನೆಲೆಗಳನ್ನು ಪ್ರದರ್ಶಿಸುವ ಎಲ್ಇಡಿ ಪರದೆಗಳನ್ನು ಒಳಗೊಂಡಿರುವ ವರ್ಚುವಲ್ ಸೆಟ್ ಗಳ ಆಗಮನವು ಅಭೂತಪೂರ್ವ ಉನ್ನತ ಗುಣಮಟ್ಟದ ಸಿಜಿಐ ಯುಗವನ್ನು ಸೂಚಿಸುತ್ತದೆ.

ದಿ ಬ್ಯಾಟ್‌ಮ್ಯಾನ್, ಡ್ಯೂನ್ ಮತ್ತು ದಿ ಮ್ಯಾಂಡಲೋರಿಯನ್‌ನಂತಹ ಕೃತಿಗಳಲ್ಲಿ ಈ ನವೀನ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಗ್ರೀಗ್ ಫ್ರೇಸರ್‌ನಂತಹ ಸಿನಿಮಾಟೋಗ್ರಾಫರ್‌ಗಳು ಮುಂಚೂಣಿಯಲ್ಲಿದ್ದಾರೆ.

Continue Reading

ವಿದೇಶ

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಇರಾನ್ ಅಧ್ಯಕ್ಷರ ಸಾವು ವಿಶ್ವದಲ್ಲೇ ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಮಾಡಿದೆ. ವಿಮಾನ, ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ರಾಜಕೀಯ ನಾಯಕರ ಸಾವು ಇದೇ ಮೊದಲಲ್ಲ. ವಿಶ್ವದ ಹತ್ತು ಪ್ರಮುಖ ನಾಯಕರು ಈ ರೀತಿಯ ದುರಂತದಲ್ಲಿ ಮೃತಪಟ್ಟಿದ್ದಾರೆ.

VISTARANEWS.COM


on

By

Air Crashes
Koo

ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ (Ebrahim Raisi) ಅವರು ಭಾನುವಾರ ರಾತ್ರಿ ದೇಶದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ಸಾವನ್ನಪ್ಪಿದ್ದಾರೆ. ರೈಸಿ ಅವರ ದಣಿವರಿಯದ ಸ್ಫೂರ್ತಿಯ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದಾಗಿ ಇರಾನ್‌ ಆಡಳಿತ ರಾಷ್ಟ್ರದ ಜನರಿಗೆ ಭರವಸೆ ನೀಡಿದೆ. ವಿಮಾನ ದುರಂತಗಳಲ್ಲಿ ರಾಜಕೀಯ ನಾಯಕರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.


ಸ್ವೀಡನ್ ಪ್ರಧಾನಿ ಅರ್ವಿಡ್ ಲಿಂಡ್‌ಮನ್ (1936)

ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನಮಂತ್ರಿ ಆಗಿದ್ದ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. 1936ರ ಡಿಸೆಂಬರ್ 9ರಂದು ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ ಡಿಸಿ-2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನವು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಮನೆಗಳಿಗೆ ಅಪ್ಪಳಿಸಿದಾಗ ಮೃತಪಟ್ಟರು.

ಫಿಲಿಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ (1957)

ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ ವಿರೋಧಿ ನಿಲುವು ಮತ್ತು ಜನಪ್ರಿಯ ಕಾರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು 1957ರ ಮಾರ್ಚ್ 17ರಂದು ಥಟ್ಟನೆ ಕೊನೆಗೊಂಡಿತು. “ಮೌಂಟ್ ಪಿನಾಟುಬೊ” ಎಂದು ಕರೆಯಲ್ಪಡುವ ಅವರ ಸಿ-47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ ಮ್ಯಾಗ್ಸೆಸೆ ಮೃತಪಟ್ಟರು. 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು.


ಬ್ರೆಜಿಲ್ ಅಧ್ಯಕ್ಷ ನೆರೆಯು ರಾಮೋಸ್ (1958)

ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು 1958ರ ಜೂನ್ 16ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟರು.

ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆರಿಫ್ (1966)

ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್ ರಾಜಪ್ರಭುತ್ವವನ್ನು ಉರುಳಿಸಿದ 1958ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 1966ರ ಏಪ್ರಿಲ್ 13ರಂದು ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ ಡಿಹೆಚ್ 104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ಅನಂತರ ಅಧ್ಯಕ್ಷರಾದರು.


ಬ್ರೆಜಿಲ್ ಅಧ್ಯಕ್ಷ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ (1967)

ಬ್ರೆಜಿಲ್‌ನ 26ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ 1967ರ ಜುಲೈ 18ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ಅನಂತರ ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ವಿಮಾನ ಬ್ರೆಜಿಲಿಯನ್ ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಅವರ ಸಾವು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ (1980)

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಾವು ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣವನ್ನು ಕಳೆದುಕೊಂಡು ದುರಂತ ಸಾವು ಕಂಡರು.


ಲೆಬನಾನ್ ಪ್ರಧಾನಿ ರಶೀದ್ ಕರಾಮಿ (1987)

ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1987ರ ಜೂನ್ 1ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಕರಾಮಿ ಕೊಲ್ಲಲ್ಪಟ್ಟರು.

ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ (1988)

ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು 1988ರ ಆಗಸ್ಟ್ 17ರಂದು ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಸಿ-130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಯಿತು. ಅಪಘಾತದ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?


ಕಾಂಗ್ರೆಸ್‌ ನಾಯಕ ಮಾಧವರಾವ್ ಸಿಂಧಿಯಾ (2001)

ಮಾಧವರಾವ್ ಸಿಂಧಿಯಾ ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ನಾಯಕರಾಗಿದ್ದರು. 2001ರ ಸೆಪ್ಟೆಂಬರ್ 30ರಂದು ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತ ಸಂಭವಿಸಿತ್ತು.

ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (2024)

ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ ಎಸ್‌ ರಾಜಶೇಖರ್‌ ರೆಡ್ಡಿ ಅವರೂ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

Continue Reading
Advertisement
Vijayapura news
ಪ್ರಮುಖ ಸುದ್ದಿ1 hour ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Prajwal Revanna Case
ಪ್ರಮುಖ ಸುದ್ದಿ2 hours ago

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Yuvraj Singh
ಕ್ರೀಡೆ2 hours ago

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Kavya Maran
ಪ್ರಮುಖ ಸುದ್ದಿ3 hours ago

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Viral Video
ದೇಶ3 hours ago

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

Samsung Galaxy F55 5G Smartphone Released With Exciting Classy Veegan Leather Design
ದೇಶ3 hours ago

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Kannada New Movie
ಕರ್ನಾಟಕ3 hours ago

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Golden Star Ganesh Krishnam Pranaya Sakhi movie first song release in Mysore
ಕರ್ನಾಟಕ3 hours ago

Golden Star Ganesh: ಮೊದಲ ಹಾಡಿನಲ್ಲೇ ಮೋಡಿ ಮಾಡಿದ ʼಕೃಷ್ಣಂ ಪ್ರಣಯ ಸಖಿʼ

Mandya News
ಪ್ರಮುಖ ಸುದ್ದಿ3 hours ago

Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

11th Annual Mahotsav of Sri Annapurneswari Temple in Belagavi from 29th May
ಬೆಳಗಾವಿ3 hours ago

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ8 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌