ಹಲ್ಲೆಗೆ ಒಳಗಾದ ಬರಹಗಾರ ಸಲ್ಮಾನ್‌ ರಶ್ದಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ - Vistara News

ಪ್ರಮುಖ ಸುದ್ದಿ

ಹಲ್ಲೆಗೆ ಒಳಗಾದ ಬರಹಗಾರ ಸಲ್ಮಾನ್‌ ರಶ್ದಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ಶುಕ್ರವಾರ ಸಂಜೆ ಸಲ್ಮಾನ್‌ ರಶ್ದಿ ತಿವ್ರವಾದ ಹಲ್ಲೆಗೆ ಒಳಗಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ತಮ್ಮ ಒಂದು ಕಣ್ಣನ್ನು ಕಳೆದಕೊಳ್ಳಬಹುದೆಂದು ವೈದ್ಯರು ತಿಳಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂ ಯಾರ್ಕ್: ಭಾರತ ಮೂಲದ ಖ್ಯಾತ ಲೇಖಕ, ಕಾದಂಬರಿಕಾರ ಸಲ್ಮಾನ್‌ ರಶ್ದಿ ಮೇಲೆ ಶುಕ್ರವಾರ (ಆಗಸ್ಟ್‌ 12) ಸಂಜೆ ಹಲ್ಲೆ ನಡೆದಿದ್ದು, ಕೂಡಲೆ ಏರ್‌ಲಿಫ್ಟ್‌ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು ಸದ್ಯ ರಶ್ದಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಅವರು ತಮ್ಮ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರ ಏಜೆಂಟ್‌ ಆಂಡ್ರ್ಯೂ ವೈಲಿ ತಿಳಿಸಿದ್ದಾರೆ.

ಸಲ್ಮಾನ್‌ ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ತೀವ್ರವಾಗಿ ಹಲ್ಲೆಗೆ ಒಳಗಾದ ಸಲ್ಮಾನ್‌ ರಶ್ದಿ ಅವರು ತಮ್ಮ ಒಂದು ಕಣ್ಣು ಕಳೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅವರ ತೋಳಿನ ನರಗಳು ಕತ್ತರಿಸಲ್ಪಟ್ಟಿವೆ. ಲಿವರ್ ಕೂಡ ಹಾನಿಗೆ ಒಳಗಾಗಿರಬಹುದು ಎಂಬ ವಿಷಯವನ್ನು ಅವರ ಏಜೆಂಟ್‌ ತಿಳಿಸಿದ್ದಾರೆ.

ಸಲ್ಮಾನ್‌ ರಶ್ದಿ ಅವರ ಬರಹದಿಂದ ಇರಾನ್‌ ಹಾಗೂ ಶಿಯಾ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರಿಗೆ ಜೀವ ಬೆದರಿಕೆಯೂ ಇತ್ತು. ಹೀಗಾಗಿ ಅನೇಕ ವರ್ಷಗಳಿಂದ ಸಲ್ಮಾನ್‌ ತಲೆಮರೆಸಿಕೊಂಡಿದ್ದರು. ನ್ಯೂಯಾರ್ಕ್‌ನಲ್ಲಿ ಭಾಷಣ ನೀಡುತ್ತಿದ್ದ ಸಂದರ್ಭ ದುಷ್ಕರ್ಮಿಯೊಬ್ಬ ವೇದಿಕೆಯಲ್ಲಿ ಸಲ್ಮಾನ್‌ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಈ ಕೃತ್ಯಕ್ಕೆ ವಿಶ್ವದ ಅನೇಕ ಸಾಹಿತಿಗಳು ಹಾಗೂ ರಾಜಕಾರಣಿಗಳು ವಿರೋಧ ವ್ಯಕ್ತ ಪಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದಿದ್ದಾರೆ.

ಹೇಗಾಯಿತು ಈ ಹಲ್ಲೆ?

75 ವರ್ಷದ ಹಿರಿಯ ಬರಹಗಾರ ಸಲ್ಮಾನ್‌ ರಶ್ದಿ ಅವರಿಗೆ 1980ರ ದಶಕದಿಂದಲೂ ಜೀವ ಬೆದರಿಕೆಯಿತ್ತು. ಶುಕ್ರವಾರ (ಆಗಸ್ಟ್‌ 12) ಸಂಜೆ ನ್ಯೂಯಾರ್ಕ್‌ನ ಚಟಾಕ್ವಾ ವಿದ್ಯಾಲಯದ ನೂರಾರು ಪ್ರೇಕ್ಷಕರ ಸಮ್ಮುಖದಲ್ಲಿ ಸಲ್ಮಾನ್‌ ಕಲಾ ಸ್ವಾತಂತ್ರ್ಯದ ವಿಷಯವಾಗಿ ಭಾಷಣಕ್ಕೆ ವೇದಿಕೆ ಮೇಲೆ ಹೋದಾಗ, ಮುಸುಕಿನ ವ್ಯಕ್ತಿ ವೇದಿಕೆಗೆ ಧಾವಿಸಿ ಸಲ್ಮಾನ್‌ ಮೇಲೆ ಹಲ್ಲೆ ಮಾಡಿದ.

ಕಣ್ಣೆದುರೇ ನಡೆದ ಈ ಹಲ್ಲೆ ಪ್ರೇಕ್ಷಕರನ್ನು ಸ್ತಬ್ಧವಾಗಿಸಿತು. ಪ್ರೇಕ್ಷಕರು ಕೂಡಲೆ ವೇದಿಕೆಗೆ ಧಾವಿಸಿ ಸಲ್ಮಾನ್‌ ಅವರನ್ನು ರಕ್ಷಿಸಲು ಮುಂದಾದರು. ನ್ಯೂಯಾರ್ಕ್‌ ಪೊಲೀಸರು ಕೂಡಲೆ ಕ್ರಮ ಕೈಗೊಂಡು ದಾಳಿ ನಡೆಸಿದವನನ್ನು ಬಂಧಿಸಿದರು. ದಾಳಿ ನಡೆಸಿದವನನ್ನು ಹದಿ ಮಾಟರ್‌ (24) ಎಂದು ಗುರುತಿಸಲಾಗಿದೆ.

ಈ ಘಟನೆ ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವಿತು. ಗಾಬರಿಗೊಂಡಿದ್ದ ಪ್ರೇಕ್ಷಕರ ಕೂಗು ಸಭಾಂಗಣವನ್ನು ಆವರಿಸಿತು. ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಓರ್ವ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಈ ಕಾರ್ಯಕ್ರಮದ ವ್ಯವಸ್ಥಾಪಕರಾದ ಹೆನ್ರಿ ರೀಸ್‌ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸಲ್ಮಾನ್‌ ರಶ್ದಿ ಅವರಿಗೆ ಇದ್ದ ಬೆದರಿಕೆ ಏನು?

ಸಲ್ಮಾನ್‌ ರಶ್ದಿ ಮೂಲತಃ ಭಾರತದವರು. ಮುಸ್ಲಿಂ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದವರು. ನಂತರ ಇವರು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ನೆಲೆನಿಂತರು. ಸಲ್ಮಾನ್‌ ಬರೆದ ನಾಲ್ಕನೇ ಕಾದಂಬರಿಯಾದ ʼThe Satanic Versesʼ ಕೃತಿಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಬರೆಯಲಾಗಿದೆ ಎಂದು ಕೆಲ ಮುಸ್ಲಿಮರು ಆರೋಪಿಸಿದ್ದರು. 1988ರಲ್ಲಿ ಪ್ರಕಟವಾಗಿದ್ದ ಈ ಕೃತಿಯನ್ನು ಕೆಲವು ಮುಸ್ಲಿಂ ದೇಶಗಳಲ್ಲಿ ಬ್ಯಾನ್‌ ಕೂಡ ಮಾಡಲಾಗಿತ್ತು. ಇರಾನ್‌ ದೇಶದ ಮುಸ್ಲಿಂ ಮುಖಂಡ ಅಯತೊಲ್ಲಾ ರುಹೊಲ್ಲಾ ಖೊಮೆನಿ ಅವರು ರಶ್ದಿಯನ್ನು ಹತ್ಯೆ ಮಾಡುವವರಿಗೆ ಹಣ ನೀಡುವುದಾಗಿ ʼಫತ್ವಾʼ ಹೊರಡಿಸಿದರು.

ಇದಾದ ಬಳಿಕ ರಶ್ದಿ ಅನೇಕ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಜೀವನ ಸಾಗಿಸುತ್ತಿದ್ದರು. ಇರಾನ್‌ ಸರ್ಕಾರವು 1998ರಲ್ಲಿ ಫತ್ವಾವನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಹೇಳಿತು. ಹೀಗಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಸಲ್ಮಾನ್‌ ಸಾರ್ವಜನಿಕವಾಗಿ ಓಡಾಡಲು ಶುರು ಮಾಡಿದ್ದರು. ಆದರೆ ಅಯತೊಲ್ಲಾ ಖೊಮೆನಿ ಉತ್ತರಾಧಿಕಾರಿಯಾಗಿದ್ದ ಆಯತೊಲ್ಲ ಅಲಿ ಖಮೇನಿ 2019ರಲ್ಲಿ ಫತ್ವಾವನ್ನು ಹಿಂಪಡೆಯಲಾಗುವುದಿಲ್ಲ ಎಂದು ಘೋಷಿಸಿದ್ದರು.‌

ಇದನ್ನೂ ಓದಿ | ಸಲ್ಮಾನ್‌ ರಶ್ದಿ ಮೇಲೆ ದಾಳಿ ನಡೆಸಿದವನು ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral Video: ಚಲಿಸುತ್ತಿದ್ದ ರೈಲಿನ ಹೊರಗೆ ಜೋಷ್‌‌ನಿಂದ ನೇತಾಡಿದ ಯುವಕ; ಏನಾಯಿತು ನೋಡಿ

Viral Video: ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ

VISTARANEWS.COM


on

Viral Video
Koo


ಮುಂಬೈ: ಯುವಕರಿಗೆ ಚಲಿಸುತ್ತಿದ್ದ ವಾಹನಗಳ ಹಿಂದೆ ಓಡಿ ಅದನ್ನು ಹತ್ತುವ ಶೋಕಿ. ನಾವು ಹೆಚ್ಚಾಗಿ ಈ ದೃಶ್ಯವನ್ನು ಬಸ್ಸು, ರೈಲುಗಳನ್ನು ಹತ್ತುವಾಗ ಯುವಕರ ಈ ಸರ್ಕಸ್ ಅನ್ನು ಕಾಣುತ್ತೇವೆ. ಹಾಗೇ ಬಸ್ಸು ಅಥವಾ ರೈಲಿನ ಬಾಗಿಲಿನಲ್ಲಿ ನಿಂತು ನೇತಾಡುತ್ತಾ ಸಾಗುತ್ತಾರೆ. ಆದರೆ ಇದರಿಂದ ಅನೇಕರು ಅಪಾಯಕ್ಕೆ ಒಳಗಾಗಿದ್ದಾರೆ. ಇದನ್ನು ತಿಳಿದರೂ ಕೂಡ ಇನ್ನೂ ನಮ್ಮ ಯುವಕರು ಇಂತಹ ಸರ್ಕಸ್ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಿಂದ ಹೊರಗೆ ನೇತಾಡಿದ ಯುವಕನೊಬ್ಬ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ. ಹಾಗೇ ಘಟನೆಯ ಸಮಯ ಮತ್ತು ಸ್ಥಳ ತಿಳಿದುಬಂದಿಲ್ಲ.

ಆದರೆ ಈ ಘಟನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ಕಳುಹಿಸಲಾಗಿದೆ. ವಿಲಕ್ಷಣ ಅಪಘಾತದಿಂದ ಆ ಯುವಕ ಬದುಕುಳಿದಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಹಿಂದೆ ಕೂಡ ಮುಂಬೈನ ಉಪನಗರ ಸ್ಥಳೀಯ ರೈಲು ಚಲಿಸುವಾಗ ಅಪಾಯಕಾರಿ ಸ್ಟಂಟ್ ಮಾಡಿದ ಆರೋಪದ ಮೇಲೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌) ಪತ್ತೆ ಹಚ್ಚಿದ್ದರು. ಆತ ಫರ್ಹತ್ ಅಜಮ್ ಶೇಖ್ ಎಂಬುದಾಗಿ ತಿಳಿದುಬಂದಿದ್ದು, ಈ ಯುವಕ ಇಂತಹ ಸ್ಟಂಟ್‌ಗಳನ್ನು ಮಾಡಿ ಅಪಾಯಕ್ಕೆ ಒಳಗಾಗಿದ್ದಕ್ಕೆ ಗಂಭೀರ ಉದಾಹರಣೆಯಾಗಿದ್ದಾನೆ.

ಇದನ್ನೂ ಓದಿ: ಊಟದ ಪಾರ್ಸೆಲ್‌‌ನಲ್ಲಿ ಉಪ್ಪಿನಕಾಯಿ ಹಾಕಲು ಮರೆತ ಹೋಟೆಲ್‌‌; 35,000 ರೂ. ದಂಡ ಹಾಕಿದ ಕೋರ್ಟ್‌!

ಈತ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಒಂದು ಕೈ ಮತ್ತು ಕಾಲನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ ಶೇಖ್ ಈಗ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಆಗದೆ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಕೇಂದ್ರ ರೈಲ್ವೆ ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡದಂತೆ ಕಠಿಣ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

Continue Reading

ಕರ್ನಾಟಕ

Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

Dog Meat Controversy: ಬೆಂಗಳೂರಲ್ಲಿ ಸಿಕ್ಕಿರುವ ಮಾಂಸವನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ನಾಯಿ ಮಾಂಸ ಮಾರಾಟ ಎಂದು ದುರುದ್ದೇಶದಿಂದ ದೂರು ದಾಖಲಾಗಿತ್ತು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

VISTARANEWS.COM


on

Dog Meat Controversy
Koo

ದಾವಣಗೆರೆ: ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರು ನಾಯಿ ಮಾಂಸ ಪ್ರಕರಣ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ, ಲ್ಯಾಬ್‌ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, 15 ದಿವಸಕ್ಕೊಮ್ಮೆ ಮಾಂಸ ಮಾರಾಟ ಮಾಡುತ್ತಾರೆ. ನಾಯಿ ಮಾಂಸ ಅಲ್ಲ, ಅದು ಮೇಕೆ ಮಾಂಸ ಎನ್ನುವುದು ವರದಿಯಲ್ಲಿ ಧೃಡವಾಗಿದೆ. ಇವತ್ತು ವರದಿ ಬಂದಿದೆ ಎಂದು ತಿಳಿಸಿದ್ದಾರೆ.

ಪುನೀತ್‌ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ

ನಾಯಿ ಮಾಂಸ (Dog Meat) ಸಾಗಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿರುವ ಪುನೀತ್‌ ಕೆರೆಹಳ್ಳಿಗೆ (Puneeth Kerehalli) ನ್ಯಾಯಾಲಯವು ಶನಿವಾರ 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿತ್ತು. ಹಾಗಾಗಿ, ಇನ್ನೂ 14 ದಿನ ದಿನ ಪುನೀತ್‌ ಕೆರೆಹಳ್ಳಿಯು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯಲಿದ್ದಾರೆ. ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯದ ಜಡ್ಜ್‌ ವಿಜಯ್‌ ಕುಮಾರ್‌ ಅವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದರು.

ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದರು. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿತ್ತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಹಾಗೂ 351 (2) ಸೆಕ್ಷನ್‌ ಆರೋಪದಡಿ ಕಾಟನ್ ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು.

ಏನಿದು ಪ್ರಕರಣ?

ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಜು.26ರಂದು ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ್ದರು. ಇದರಿಂದ ಸ್ಥಳದಲ್ಲಿ‌ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮಾಂಸದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ ವಿರುದ್ಧ ನಾಯಿ ಮಾಂಸ ದಂಧೆ ಆರೋಪ ಕೇಳಿಬಂದಿದೆ. ಪರಿಶೀಲನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ | Dog Meat: ಅಬ್ದುಲ್‌ ರಜಾಕ್‌ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್‌ ಮಾಲಿಕರಿಗೆ ನೋಟೀಸ್‌

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೂಲಕ ನಾಯಿ ಮಾಂಸ ತಂದು, ನಗರದ ವಿವಿಧ ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದ್ದು, ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿದ್ದರು.

Continue Reading

ಪ್ರಮುಖ ಸುದ್ದಿ

CH Vijayashankar: ಬಯಸದೇ ಬಂದ ಭಾಗ್ಯ: ಮೇಘಾಲಯ ನೂತನ ರಾಜ್ಯಪಾಲ ಸಿಎಚ್‌ ವಿಜಯಶಂಕರ್

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸ್ವತಃ ಕರೆ ಮಾಡಿ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳ ಹಿಂದೆ ಅಧಿಕೃತ ನೇಮಕಾತಿ ಪತ್ರವೂ ದೊರಕಿದೆ. ನಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಯಾವುದೂ ಸವಾಲು ಅಲ್ಲ. ನಾನು ಮೇಘಾಲಯಕ್ಕೆ ರಾಜ್ಯಪಾಲ ಆಗಿರಬಹುದು. ಆದರೆ ಹುಣಸೂರು, ಮೈಸೂರು ಈ ನೆಲದ ಋಣ ನನ್ನ ಮೇಲೆ ಇದೆ ಎಂದು ಸಿ.ಎಚ್.ವಿಜಯಶಂಕರ್ (CH Vijayashankar) ಹೇಳಿದ್ದಾರೆ.

VISTARANEWS.COM


on

CH Vijayashankar2
Koo

ಮೈಸೂರು: ಇದು ನನಗೆ ಇದು ಬಯಸದೇ ಬಂದ ಭಾಗ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayamsevak Sangh) ಮತ್ತು ಭಾರತೀಯ ಜನತಾ ಪಕ್ಷ (BJP) ನನ್ನನ್ನು ಗುರುತಿಸಿ ಅವಕಾಶ ನೀಡಿದೆ ಎಂದು ಮೇಘಾಲಯದ (Meghalaya) ನೂತನ ರಾಜ್ಯಪಾಲರಾಗಿ (Governor) ನೇಮಕವಾಗಿರುವ ಮೈಸೂರಿನ ಮಾಜಿ ಸಂಸದ (Mysore Ex MP) ಸಿಎಚ್ ವಿಜಯಶಂಕರ್ (CH Vijayashankar) ಹೇಳಿದ್ದಾರೆ.

ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸಿಎಚ್‌ವಿ, ರಾಜ್ಯಪಾಲರಾಗಿ ನೇಮಕವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಹುಣಸೂರು ಕ್ಷೇತ್ರದ ಶಾಸಕ, ಮೈಸೂರು ಲೋಕಸಭೆ ಕ್ಷೇತ್ರದ ಸಂಸದ ಆಗಿದ್ದವನು. 2014ರಲ್ಲಿ ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್ ತಪ್ಪಿತು. ಹಾಸನಕ್ಕೆ ಹೋಗಿ ದೇವೇಗೌಡರ ಎದುರು ಸ್ಪರ್ಧಿಸಿ ಸೋತಿದ್ದೆ. ಅಲ್ಲಿಂದ ಸತತ ವನವಾಸ ಅನುಭವಿಸಿದ್ದೆ. ಈಗ ಅತ್ಯಂತ ದೊಡ್ಡ ಹುದ್ದೆ ದೊರಕಿದೆ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸ್ವತಃ ಕರೆ ಮಾಡಿ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳ ಹಿಂದೆ ಅಧಿಕೃತ ನೇಮಕಾತಿ ಪತ್ರವೂ ದೊರಕಿದೆ. ನಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಯಾವುದೂ ಸವಾಲು ಅಲ್ಲ. ನಾನು ಮೇಘಾಲಯಕ್ಕೆ ರಾಜ್ಯಪಾಲ ಆಗಿರಬಹುದು. ಆದರೆ ಹುಣಸೂರು, ಮೈಸೂರು ಈ ನೆಲದ ಋಣ ನನ್ನ ಮೇಲೆ ಇದೆ ಎಂದು ಸಿ.ಎಚ್.ವಿಜಯಶಂಕರ್ ಹೇಳಿದ್ದಾರೆ.

ನಿನ್ನೆ ನೇಮಕ

ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್‌ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ನಿನ್ನೆ ತಡರಾತ್ರಿ ಆದೇಶ ಹೊರಡಿಸಿದ್ದಾರೆ. 6 ಮಂದಿ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್‌ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ವಿಜಯಶಂಕರ್‌ ರಾಜಕೀಯ ಏಳುಬೀಳು

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರಿನಲ್ಲಿ 1956ರ ಅಕ್ಟೋಬರ್‌ 21ರಂದು ಜನಿಸಿದ ವಿಜಯಶಂಕರ್‌, ಬದುಕು ಕಟ್ಟಿಕೊಂಡದ್ದು ಮೈಸೂರಿನಲ್ಲಿ. ಅವರ ಶಿಕ್ಷಣ ಆಗಿದ್ದು ಬ್ಯಾಡಗಿಯಲ್ಲಿ. ಬಿಎಸ್ಸಿ ಪದವೀಧರರರಾದ ವಿಜಯಶಂಕರ್‌, ಹುಣಸೂರಿನಲ್ಲಿದ್ದ ತಮ್ಮ ಸಹೋದರಿಯ ಮನೆಗೆ ಬಂದವರು ಇಲ್ಲಿ ಆ ಕುಟುಂಬದವರು ನಡೆಸುತ್ತಿದ್ದ ಸಿಮೆಂಟ್‌ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ವೃತ್ತಿಯಲ್ಲಿ ಗುರುತಿಸಿಕೊಂಡ ವಿಜಯಶಂಕರ್‌ ನಂತರ ರಾಜಕೀಯ ಸೇರಿದರು.

90ರ ದಶಕದ ಆರಂಭದಲ್ಲಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡ ಅವರು ನಂತರ ಬಿಜೆಪಿಯನ್ನು ಸೇರಿಕೊಂಡರು. 1991ರಲ್ಲಿ ನಡೆದ ಹುಣಸೂರು ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಚಿಕ್ಕಮಾದು ವಿರುದ್ಧ ಸೋತರು. 1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದು ಶಾಸಕರಾದರು. 1998ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಅವರು, ಲೋಕಸಭೆ ಸದಸ್ಯರಾಗಿ ಚುನಾಯಿತರಾದರು. ಮರು ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ವಿರುದ್ಧ ಸೋತರು. 2004ರಲ್ಲಿ ಅವರನ್ನೇ ಮಣಿಸಿ ಎರಡನೇ ಬಾರಿಗೆ ಲೋಕಸಭೆ ಸದಸ್ಯರಾದರು. ಆಗ ಎನ್‌ಡಿಎ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿತು.

ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸಹಿತ ಹಲವಾರು ಕೆಲಸಗಳನ್ನು ವಿಜಯಶಂಕರ್‌ ಮಾಡಿಸಿದ್ದಾರೆ. 2009ರಲ್ಲಿ ಕಾಂಗ್ರೆಸ್‌ನ ವಿಶ್ವನಾಥ್‌ ವಿರುದ್ಧ ವಿಜಯಶಂಕರ್‌ ಸೋಲು ಕಂಡರು. ಆನಂತರ ರಾಜ್ಯ ರಾಜಕಾರಣಕ್ಕೆ ಮರಳಿದ ಅವರು ಯಡಿಯೂರಪ್ಪ ಸರಕಾರದ ವೇಳೆ ಎಂಎಲ್ಸಿ ಆದರು. ಕೊಡಗು ಹಾಗೂ ಚಾಮರಾಜನಗರ ಉಸ್ತುವಾರಿ, ಅರಣ್ಯ, ಹಾಗೂ ಸಣ್ಣ ಕೈಗಾರಿಕೆ ಸಚಿವರೂ ಆದರು. 2014ರಲ್ಲಿ ವಿಜಯಶಂಕರ್‌ ಅವರನ್ನು ಮೈಸೂರಿನ ಬದಲು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ನಿಯೋಜಿಸಿತು. ಅಲ್ಲಿ ದೇವೇಗೌಡರ ವಿರುದ್ಧ ವಿಜಯಶಂಕರ್‌ ಸೋತರು.

ಬಿಜೆಪಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ಗೆ ವಿಜಯಶಂಕರ್‌ ಸೇರಿಕೊಂಡರು. 2019ರಲ್ಲಿ ಮೈಸೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸೋತರು. ಒಂದೇ ವರ್ಷಕ್ಕೆ ಬಿಜೆಪಿಗೆ ಮರಳಿದರು. ಕಳೆದ ವರ್ಷ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಈ ಬಾರಿ ಲೋಕಸಭೆ ಚುನಾವಣೆಗೂ ಆಕಾಂಕ್ಷಿಯಾಗಿದ್ದರೂ ಟಿಕೆಟ್‌ ಸಿಕ್ಕಿರಲಿಲ್ಲ.

ಇದನ್ನೂ ಓದಿ: CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

Continue Reading

ಕ್ರೀಡೆ

Paris 2024 Shooting: ಶೂಟಿಂಗ್​ನಲ್ಲಿ ಫೈನಲ್​ ಪ್ರವೇಶಿಸಿದ ರಮಿತಾ ಜಿಂದಾಲ್; ಭಾರತಕ್ಕೆ 2 ಪದಕ ನಿರೀಕ್ಷೆ

Paris 2024 Shooting: ರಮಿತಾ ಕಳೆದ 20 ವರ್ಷಗಳಲ್ಲಿ ಮನು ಭಾಕರ್ ನಂತರ ಪದಕ ಸುತ್ತಿಗೆ ತಲುಪಿದ ಎರಡನೇ ಮಹಿಳಾ ಶೂಟರ್ ಎನಿಸಿಕೊಂಡರು.

VISTARANEWS.COM


on

Paris 2024 Shooting
Koo

ಪ್ಯಾರಿಸ್​: ಶೂಟಿಂಗ್​ನಲ್ಲಿ(Paris 2024 Shooting) ಭಾರತ ಸದ್ಯ 2 ಪದಕಗಳ ನಿರೀಕ್ಷೆಯಲ್ಲಿದೆ. ಇಂದು ನಡೆದ 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ರಮಿತಾ ಜಿಂದಾಲ್(Ramita Jindal) 631.5 ಅಂಕ ಗಳಿಸಿ 5 ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಅನುಭವಿ ಶೂಟರ್​ ಎಲವೆನಿಲ್ ವಲರಿವನ್(Elavenil Valarivan) 630.7 ಅಂಕ ಗಳಿಸಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಮಂದಿಗೆ ಫೈನಲ್​ ಪ್ರವೇಶ ಲಭಿಸಿತು. ಇಂದು ನಡೆಯುವ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ನಲ್ಲಿ ಭಾರತದ ಚೊಚ್ಚಲ ಪದಕದ ಗುರಿಯೊಂದಿಗೆ ಮನು ಭಾಕರ್​ ಕಣಕ್ಕಿಳಿಯಲಿದ್ದಾರೆ.

ರಮಿತಾ ಕಳೆದ 20 ವರ್ಷಗಳಲ್ಲಿ ಮನು ಭಾಕರ್ ನಂತರ ಪದಕ ಸುತ್ತಿಗೆ ತಲುಪಿದ ಎರಡನೇ ಮಹಿಳಾ ಶೂಟರ್ ಎನಿಸಿಕೊಂಡರು. ರಮಿತಾ ತನ್ನ ಕೋಚ್ ಸುಮಾ ಶಿರೂರ್ (ಅಥೆನ್ಸ್ 2004) ನಂತರ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ರೈಫಲ್ ಶೂಟರ್ ಆಗಿದ್ದಾರೆ. ಎಲವೆನಿಲ್ ವಲರಿವನ್ ಆರಂಭಿಕ ಮೂರು ಸೆಟ್​ಗಳಲ್ಲಿ ಅಗ್ರ 8ರೊಳಗೆ ಕಾಣಿಸಿಕೊಂಡಿದ್ದರೂ ಕೂಡ ಅಂತಿಮ ಮೂರು ಸೆಟ್​ಗಳಲ್ಲಿ ಹಿನ್ನಡೆ ಕಂಡು ಫೈನಲ್​ ಅವಕಾಶ ತಪ್ಪಿಸಿಕೊಂಡರು. ಕನಿಷ್ಠ 8ನೇ ಸ್ಥಾನ ಪಡೆಯುತ್ತಿದ್ದರೂ ಕೂಡ ಅವರಿಗೆ ಫೈನಲ್​ ಟಿಕೆಟ್​ ಲಭಿಸುತ್ತಿತ್ತು.

ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಲರಾಜ್


ಇದಕ್ಕೂ ಮುನ್ನ ನಡೆದಿದ್ದ ರೋಯಿಂಗ್​ ಸ್ಪರ್ಧೆಯಲ್ಲಿ(Paris Olympics 2024) ಭಾರತದ ಏಕೈಕ ಭರವಸೆ ಎನಿಸಿಕೊಂಡರಿವ ಬಾಲರಾಜ್​ ಪನ್ವರ್(Rower Balraj Panwar)​ ಇಂದು ನಡೆದ ಪುರುಷರ ಸಿಂಗಲ್ಸ್​ ಸ್ಕಲ್ಸ್​ ವಿಭಾಗದ ರಿಪಿಚೇಜ್‌ ಸುತ್ತಿನಲ್ಲಿ 7 ನಿಮಿಷ 12.41 ಸೆಂಕಡ್​ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ಪದಕದಾಸೆಯನ್ನು ಜೀವಂತವಿರಿಸಿದ್ದಾರೆ. ರಿಪಿಚೇಜ್‌ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆದ ಆಟಗಾರರಿಗೆ ಕ್ವಾರ್ಟರ್​ ಫೈನಲ್​ ಅರ್ಹತೆ ಲಭಿಸುತ್ತದೆ.

ಇದನ್ನೂ ಓದಿ Paris Olympics boxing: ಎದುರಾಳಿಗೆ ಪವರ್​ ಪಂಚ್​ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪ್ರೀತಿ ಪವಾರ್

7 ನಿಮಿಷ 10 ಸೆಂಕಡ್​ನಲ್ಲಿ ಗುರಿ ಮುಟ್ಟಿದ ಮೊನಕೊ ದೇಶದ ಕ್ವೆಂಟಿನ್ ಆಂಟೊಗ್ನೆಲ್ಲಿ ಮೊದಲ ಸ್ಥಾನ ಪಡೆದರು. ಕೇವಲ 2 ಸೆಂಕಡ್​ಗಳ ಅಂತರದಲ್ಲಿ ಭಾರತದ ನಾವಿಕ ಬಾಲರಾಜ್ ಮೊದಲ ಸ್ಥಾನದಿಂದ ವಂಚಿತರದಾದರು. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್​ ಪ್ರವೇಶಿಸಿದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.

ಸಿಂಧು ಗೆಲುವಿನ ಆರಂಭ


ಅವಳಿ ಒಲಿಂಪಿಕ್ಸ್(Paris Olympics)​ ಪದಕ ವಿಜೇತೆ, ಭಾರತದ ಸ್ಟಾರ್​ ಶಟ್ಲರ್​ ಪಿ.ವಿ ಸಿಂಧು(PV Sindhu) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಗೆಲುವಿನ ಶುಭಾರಂಭ ಕಂಡಿದ್ದಾರೆ. ಇಂದು(ಭಾನುವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ(Paris Olympics Badminton) ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡಿವ್ಸ್​ನ ಫಾತಿಮತ್ ನಬಾಹಾ ಅಬ್ದುಲ್ ರಝಾಕ್ ವಿರುದ್ಧ 21-9, 21-6 ನೇರ ಗೇಮ್​ಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಬುಧವಾರ ನಡೆಯಲಿದೆ.

Continue Reading
Advertisement
Viral Video
ಪ್ರಮುಖ ಸುದ್ದಿ2 mins ago

Viral Video: ಚಲಿಸುತ್ತಿದ್ದ ರೈಲಿನ ಹೊರಗೆ ಜೋಷ್‌‌ನಿಂದ ನೇತಾಡಿದ ಯುವಕ; ಏನಾಯಿತು ನೋಡಿ

Elephant attack
ಮಳೆ7 mins ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

Indo-Pak Romance
ವೈರಲ್ ನ್ಯೂಸ್13 mins ago

ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Dog Meat Controversy
ಕರ್ನಾಟಕ18 mins ago

Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

Actor Dhanush new poster from Kubera unveiled on his birthday
ಟಾಲಿವುಡ್27 mins ago

Actor Dhanush: ಧನುಷ್‌ ಬರ್ತ್‌ಡೇ ಸ್ಪೆಷಲ್‌; ‘ಕುಬೇರ’ ಸಿನಿಮಾದಿಂದ ಲುಕ್‌ ಪೋಸ್ಟರ್‌ ಔಟ್‌!

theft case
ಮೈಸೂರು43 mins ago

Theft case : ಪೊಲೀಸ್‌ ಮನೆಯಲ್ಲಿ ಕಳ್ಳರ ಕಳ್ಳಾಟ; ಚಿನ್ನಾಭರಣ ಕದ್ದು ಎಸ್ಕೇಪ್‌

CH Vijayashankar2
ಪ್ರಮುಖ ಸುದ್ದಿ48 mins ago

CH Vijayashankar: ಬಯಸದೇ ಬಂದ ಭಾಗ್ಯ: ಮೇಘಾಲಯ ನೂತನ ರಾಜ್ಯಪಾಲ ಸಿಎಚ್‌ ವಿಜಯಶಂಕರ್

Paris 2024 Shooting
ಕ್ರೀಡೆ58 mins ago

Paris 2024 Shooting: ಶೂಟಿಂಗ್​ನಲ್ಲಿ ಫೈನಲ್​ ಪ್ರವೇಶಿಸಿದ ರಮಿತಾ ಜಿಂದಾಲ್; ಭಾರತಕ್ಕೆ 2 ಪದಕ ನಿರೀಕ್ಷೆ

Ranveer Singh up for new film directed by Aditya Dhar
ಬಾಲಿವುಡ್59 mins ago

Ranveer Singh:‌ ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್; ರಣವೀರ್ ಸಿಂಗ್ ಹೊಸ ಸಿನಿಮಾ ಅನೌನ್ಸ್!

DK Shivakumar
ಕರ್ನಾಟಕ1 hour ago

DK Shivakumar: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಡಿಸಿಎಂ ಡಿಕೆಶಿ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant attack
ಮಳೆ7 mins ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ21 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

ಟ್ರೆಂಡಿಂಗ್‌