NEET UG 2022 | ನೀಟ್​ ಯುಜಿ ಪರೀಕ್ಷೆಯ ಕೀ ಉತ್ತರ ಇಂದು ಬಿಡುಗಡೆ ಸಾಧ್ಯತೆ; ರಿಸಲ್ಟ್​ ಆಗಸ್ಟ್ 21ಕ್ಕೆ - Vistara News

ಶಿಕ್ಷಣ

NEET UG 2022 | ನೀಟ್​ ಯುಜಿ ಪರೀಕ್ಷೆಯ ಕೀ ಉತ್ತರ ಇಂದು ಬಿಡುಗಡೆ ಸಾಧ್ಯತೆ; ರಿಸಲ್ಟ್​ ಆಗಸ್ಟ್ 21ಕ್ಕೆ

ನೀಟ್​ ಪರೀಕ್ಷೆ ಜುಲೈ 17ರಂದು ನಡೆದಿದೆ. ಒಂದು ತಿಂಗಳಾದರೂ ಅದರ ಕೀ ಉತ್ತರಗಳು ಇನ್ನೂ ಬಿಡುಗಡೆಯಾಗಿರಲಿಲ್ಲ. ಇಂದು ಎನ್​ಟಿಎ ಅಧಿಕೃತ ವೆಬ್​ಸೈಟ್​​ನಲ್ಲಿ ಕೀ ರಿಸಲ್ಟ್​ ಪ್ರಕಟಗೊಳ್ಳುವ ಸಾಧ್ಯತೆ ಇದೆ.

VISTARANEWS.COM


on

NEET UG 2022
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪದವಿಪೂರ್ವ ವೈದ್ಯಕೀಯ ಕೋರ್ಸ್​​ಗಳ ಪ್ರವೇಶ ಪರೀಕ್ಷೆ ನೀಟ್​ ಯುಜಿ 2022ರ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET UG 2022 ) ಕೀ ಉತ್ತರಗಳು ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಜುಲೈ 17ರಂದು ನೀಟ್​ ಯುಜಿ 2022ರ ಪರೀಕ್ಷೆ ನಡೆದಿತ್ತು. ಒಂದು ತಿಂಗಳು ಕಳೆದರೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕೀ ಉತ್ತರಗಳನ್ನು ಬಿಡುಗಡೆ ಮಾಡಿರಲಿಲ್ಲ ಮತ್ತು ಯಾವಾಗ ಬಿಡುಗಡೆ ಮಾಡುತ್ತೇವೆ ಎಂದು ಒಂದು ದಿನಾಂಕವನ್ನೂ ನಿಗದಿಪಡಿಸಿರಲಿಲ್ಲ. ಪರೀಕ್ಷೆ ಬರೆದವರು ಕಾಯುತ್ತಲೇ ಇದ್ದರು. ಇಂದು ಎನ್​ಟಿಎಯ ಅಧಿಕೃತ ವೆಬ್​ಸೈಟ್​ neet.nta.nic.in ನಲ್ಲಿ ಕೀ ಉತ್ತರಗಳು ಬಿಡುಗಡೆಯಾಗುವ ಸಾಧ್ಯತೆ ಇದ್ದು, ನೀಟ್​ ಯುಜಿ 2022ರ ಪರೀಕ್ಷಾ ಫಲಿತಾಂಶ ಆಗಸ್ಟ್​ 21ಕ್ಕೆ ಪ್ರಕಟಗೊಳ್ಳಲಿದೆ.

ಇಂದು ನೀಟ್​ ಕೀ ಉತ್ತರದೊಂದಿಗೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿಗಳ ಪ್ರತಿಕ್ರಿಯಾ ಶೀಟ್​ಗಳೂ ಕೂಡ ಎನ್​ಟಿಎ ವೆಬ್​​ಸೈಟ್​​ನಲ್ಲಿ ಲಭ್ಯವಾಗಲಿದೆ. ಹಾಗೇ, ಪರೀಕ್ಷೆ ಬರೆದಿರುವವರಿಗೆ ಏನಾದರೂ ಆಕ್ಷೇಪಣೆಗಳು ಇದ್ದರೆ, ಅದನ್ನು ಸಲ್ಲಿಸಲು ಕೂಡ ಅವಕಾಶ ಕಲ್ಪಿಸಲಾಗುತ್ತದೆ. ಎಂಬಿಬಿಎಸ್​, ಬಿಡಿಎಸ್​, ಬಿಎಎಂಎಸ್​, ಬಿಎಸ್​ಎಂಎಸ್​, ಬಿಯುಎಂಎಸ್​ ಮತ್ತು ಬಿಎಚ್ಎಂಎಸ್​ ಮತ್ತು ಇತರ ಕೋರ್ಸ್​​ಗಳಿಗೆ ಸೇರಲು ಬಯಸುವ ಸುಮಾರು 18 ಲಕ್ಷ ವಿದ್ಯಾರ್ಥಿಗಳು ಈ ಸಲ ನೀಟ್ ಯುಜಿ ಪರೀಕ್ಷೆ ಬರೆದಿದ್ದರು.

ಕೀ ಉತ್ತರ ಚೆಕ್​ ಮಾಡುವ ವಿಧಾನ ಹೀಗಿದೆ
1. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ವೆಬ್​ಸೈಟ್ neet.nta.nic.in ಗೆ ಭೇಟಿ ನೀಡಿ.
2. ಹೋಂ ಪೇಜ್​​ನಲ್ಲಿ ಕಾಣಿಸುವ ‘NEET 2022 Answer Key’ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ನಿಮ್ಮ ಕ್ರೆಡೆನ್ಷಿಯಲ್​​ಗಳನ್ನು ದಾಖಲಿಸಿ, ಲಾಗಿನ್ ಆಗಿ.
4. ಆಗ ಸ್ಕ್ರೀನ್​ ಮೇಲೆ ನೀಟ್​ ಯುಜಿ ಕೀ ಉತ್ತರಗಳು ಕಾಣಿಸುತ್ತವೆ.
ಇದೇ ಮಾದರಿಯ ವಿಧಾನಗಳನ್ನು ಅನುಸರಿಸಿ nta.ac.in ವೆಬ್​ಸೈಟ್​ನಲ್ಲೂ ಕೀ ಉತ್ತರಗಳನ್ನು ನೋಡಬಹುದು.

ಆಕ್ಷೇಪಣೆ ಸಲ್ಲಿಸುವುದು ಹೇಗೆ?
ನೀಟ್​ ಯುಜಿ ಕೀ ಉತ್ತರಗಳು ಬಿಡುಗಡೆಯಾಗುತ್ತಿದ್ದಂತೆ, ಎನ್​ಟಿಎಯ ವೆಬ್​ಸೈಟ್​ neet.nta.nic.inನಲ್ಲಿ ಒಂದು ವಿಂಡೋ ಆ್ಯಕ್ಟಿವೇಟ್​ ಆಗುತ್ತದೆ. ಅಲ್ಲಿ ಹೋಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನೇರವಾಗಿ ಆನ್​ಲೈನ್​ ಮೂಲಕ ಇಲ್ಲಿಯೇ ಸಲ್ಲಿಸಬೇಕು ಹೊರತು, ಯಾವುದೇ ಪತ್ರದಲ್ಲಿ ಬರೆದು ಪೋಸ್ಟ್​ ಅಥವಾ ಇನ್ಯಾವುದೇ ಮಾದರಿಯಲ್ಲಿ ಕಳಿಸಿದರೆ ಅದು ಸ್ವೀಕಾರಾರ್ಹವಲ್ಲ.

ಇದನ್ನೂ ಓದಿ: Neet Exam 2022 | ನೀಟ್‌ ಪರೀಕ್ಷೆಗೆ ಕ್ಷಣಗಣನೆ; ರಾಜ್ಯದ 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

M.R.Jayaram: ಶಿಕ್ಷಣ ತಜ್ಞ ದಿವಂಗತ ಡಾ.ಎಂ.ಎಸ್.ರಾಮಯ್ಯ ಅವರ ಹಿರಿಯ ಪುತ್ರ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಅವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರು ಎಂ.ಆರ್.ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

VISTARANEWS.COM


on

M.R.Jayaram
Koo

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಆರ್.ಜಯರಾಮ್ (M.R.Jayaram) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರು ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

M.R.Jayaram

ಡಾ.ಎಂ.ಆರ್.ಜಯರಾಮ್ ಕುರಿತು

ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್ ಅವರು ಕರ್ನಾಟಕದ ಹೆಸರಾಂತ ಲೋಕೋಪಕಾರಿ ಮತ್ತು ಶಿಕ್ಷಣ ತಜ್ಞ ದಿವಂಗತ ಡಾ.ಎಂ.ಎಸ್.ರಾಮಯ್ಯ ಅವರ ಹಿರಿಯ ಪುತ್ರ. 1947ರಲ್ಲಿ ಜನಿಸಿದ ಡಾ.ಜಯರಾಮ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಅವರು ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಕಾಯಕಕ್ಕೆ ಸಜ್ಜಾದರು.

M.R.Jayaram

1972ರಲ್ಲಿ, ತಮ್ಮ ಇಪ್ಪತ್ತೈದನೇ ವಯಸ್ಸಿನಲ್ಲಿ, ಜಯರಾಮ್ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಎಸ್ಆರ್‌ಟಿ) ಆಡಳಿತ ಮಂಡಳಿಯ (ಈಗ ಆಡಳಿತ ಮಂಡಳಿ) ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ತಮ್ಮ ಜಾಣ್ಮೆ ಮತ್ತು ನಿರ್ವಹಣಾ ಸಾಮರ್ಥ್ಯಗಳಿಂದ ಸಂಸ್ಥೆಗೆ ಗೌರವವನ್ನು ತಂದುಕೊಟ್ಟರು. ಅಂದಿನಿಂದ ಇದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ಪ್ರಮುಖ ಸಂಸ್ಥೆಯಾಗಿ ಅಭಿವೃದ್ಧಿ ಹೊಂದಿದೆ.

M.R.Jayaram

ರಾಜಕೀಯ ತ್ಯಜಿಸಿದ ಡಾ. ಜಯರಾಮ್

1972ರಲ್ಲಿ ಡಾ. ಜಯರಾಮ್ ಅವರು ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿ ಆಯ್ಕೆಯಾದರು. ನಾಲ್ಕು ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಯರಾಮ್ ಅವರು ರಾಜಕೀಯದಿಂದ ಬೇಸರಗೊಂಡು ವಿಧಾನಸಭೆಗೆ ರಾಜೀನಾಮೆ ನೀಡಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಚುನಾಯಿತ ಪ್ರತಿನಿಧಿಯೊಬ್ಬರು ತಾವೇ ಇಷ್ಟಪಟ್ಟು ಅಧಿಕಾರವನ್ನು ತ್ಯಜಿಸಿದಕ್ಕೆ ಇದು ಏಕೈಕ ಉದಾಹರಣೆಯಾಗಿದೆ. ರಾಜ್ಯ ಶಾಸಕಾಂಗದಿಂದ ಅವರು ಹೊರಗೆ ನಡೆದಿದ್ದು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಬಹಳ ಲಾಭವಾಗಿತ್ತು, ಯಾಕೆಂದರೆ ನಂತರ ಅವರು ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು.

1979ರಲ್ಲಿ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು (ಎಂಎಸ್ಆರ್‌ಎಂಸಿ) ಸ್ಥಾಪಿಸಿದರು ಮತ್ತು ಡಾ. ಜಯರಾಮ್ ಅವರು ಎಂಎಸ್ಆರ್‌ಎಂಸಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡರು. ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಲು ಅವರು ಎರಡೂ ಸಂಸ್ಥೆಗಳನ್ನು ಬಹಳ ಬುದ್ಧಿವಂತ ನಾಯಕತ್ವದೊಂದಿಗೆ ಮುನ್ನಡೆಸಿದರು, ಜೊತೆಗೆ ಪದವಿಪೂರ್ವ ಶಿಕ್ಷಣದಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿದರು. ಡಾ.ಎಂ.ಆರ್.ಜಯರಾಮ್ ಅವರು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಕೈಗೆಟುಕುವಿಕೆ ಮತ್ತು ಪ್ರವೇಶಕ್ಕೆ ಒತ್ತು ನೀಡುವ ಮೂಲಕ ಈ ಸಂಸ್ಥೆಗಳನ್ನು ಪರಿವರ್ತಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅವರ ಪ್ರಯತ್ನಗಳ ಪರಿಣಾಮವಾಗಿ, ಈ ಪ್ರಮುಖ ಸಂಸ್ಥೆಗಳು ದೇಶದ 25 ಸಂಸ್ಥೆಗಳಲ್ಲಿ ಆಯಾ ಕ್ಷೇತ್ರಗಳಲ್ಲಿವೆ.

M.R.Jayaram

ಡಾ.ಜಯರಾಮ್ ಅವರ ಉತ್ತಮ ನಾಯಕತ್ವಕ್ಕೆ ಸಾಕ್ಷಿ ಎಂಬಂತೆ ಇಂದು ಜಿಇಎಫ್ ತನ್ನ 85 ಎಕರೆ ಜ್ಞಾನ ಗಂಗೋತ್ರಿ ಕ್ಯಾಂಪಸ್‌ನಲ್ಲಿ 18 ಕಾಲೇಜುಗಳು / ಶಾಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಶಾಲೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ದಂತವೈದ್ಯಕೀಯ, ಕಾನೂನು, ಸಮಾಜ ವಿಜ್ಞಾನ ಮತ್ತು ಮ್ಯಾನೇಜ್‌ಮೆಂಟ್‌ ಸೇರಿವೆ. ಕ್ಯಾಂಪಸ್‌ನಲ್ಲಿ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳನ್ನು ಒಳಗೊಂಡ 11,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರ ದೃಢನಿಶ್ಚಯ ಮತ್ತು ನಿರಂತರ ಪ್ರಯತ್ನದಿಂದ ಈ ಪ್ರತಿಯೊಂದು ಸಂಸ್ಥೆಯೂ “ಅತ್ಯುತ್ತಮ ಕೇಂದ್ರ”ವಾಗಿ ಕರೆಯಿಸಿಕೊಳ್ಳುತ್ತಿದೆ.

M.R.Jayaram

ಡಾ.ಎಂ.ಎಸ್.ರಾಮಯ್ಯ ಅವರ ನಿಧನದ ನಂತರ, ಡಾ.ಜಯರಾಮ್ ಅವರು ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಿದರು. ಈಗ ತಮ್ಮ ತಂದೆಯ ನೆನಪಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವತ್ತ ಗಮನ ಹರಿಸಿದ್ದಾರೆ ಮತ್ತು ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ ಇಂದು ಬೆಂಗಳೂರಿನ ಹೆಮ್ಮೆಯಾಗಿದೆ. ಎಂ.ಎಸ್. ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸ್‌ಡ್‌ ಸ್ಟಡೀಸ್‌ ಕೂಡ ಅವರ ಸೃಷ್ಟಿಯಾಗಿದ್ದು, ನಂತರ ಅದು ಈಗ ಪ್ರಸಿದ್ಧ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡಿತು. ಮತ್ತು ಇದು ಅವರು ಅವಿರತವಾಗಿ ನಿರ್ಮಿಸಿದ ಹದಿಮೂರು ಬೋಧಕವರ್ಗಗಳನ್ನು ಒಳಗೊಂಡಿದೆ. ಹಾಗೇ ಡಾ.ಜಯರಾಮ್ ಅವರು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ.

ಡಾ.ಜಯರಾಮ್ ಅವರು ಶಿಕ್ಷಣ ತಜ್ಞರಲ್ಲದೆ, ಖ್ಯಾತ ಉದ್ಯಮಿ ಮತ್ತು ಕೈಗಾರಿಕೋದ್ಯಮಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಎಲ್ಲಾ ವ್ಯವಹಾರಗಳನ್ನು ಕ್ರೋಢೀಕರಿಸಿದರು ಮತ್ತು ಅವುಗಳನ್ನು “ವಾಲ್ಡೆಲ್ ಕಾರ್ಪೊರೇಷನ್” ಎಂಬ ಒಂದೇ ಹೆಸರಿನಡಿಯಲ್ಲಿ ತಂದರು. ವಾಲ್ಡೆಲ್ ವಿನ್ಯಾಸ ಎಂಜಿನಿಯರಿಂಗ್ ಮತ್ತು ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಮುದಾಯ ಅಭಿವೃದ್ಧಿ ಮತ್ತು ಲೋಕೋಪಕಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಆಧ್ಯಾತ್ಮಿಕ ಪುನರುತ್ಥಾನದ ಕೇಂದ್ರವಾದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ (ಮುಖ್ಯಸ್ಥ) ಆಗಿದ್ದಾರೆ. ಕ್ಷೇತ್ರವು ಹಳೆಯ ದೇವಾಲಯಗಳ ಪುನರುಜ್ಜೀವನ, ಕೈವಾರದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುವುದು, ಅನಾನುಕೂಲಕರ ಮತ್ತು ದುರ್ಬಲ ಜನಸಂಖ್ಯೆಯ ಕಲ್ಯಾಣ ಚಟುವಟಿಕೆಗಳನ್ನು ಒಳಗೊಂಡಿದೆ.

ಡಾ.ಜಯರಾಮ್ ಅವರು ಎಂ.ಎಸ್.ರಾಮಯ್ಯ ಚಾರಿಟೀಸ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದು, ಇದು ಹಲವಾರು ಉತ್ತಮವಾಗಿ ವ್ಯಾಖ್ಯಾನಿಸಲಾದ ಸಾಮಾಜಿಕ ಉದ್ದೇಶಗಳನ್ನು ಅನುಸರಿಸುತ್ತದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಟ್ರಸ್ಟ್ ವಾರ್ಷಿಕವಾಗಿ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುತ್ತದೆ.

ಡಾ.ಜಯರಾಮ್ ಅವರು ವೃತ್ತಿಪರ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 7000 ಕ್ಕೂ ಹೆಚ್ಚು ಉನ್ನತ ಶಿಕ್ಷಣವನ್ನು ಪ್ರತಿನಿಧಿಸುವ ಉನ್ನತ ವೃತ್ತಿಪರ ಸಂಸ್ಥೆಯಾದ ಎಜುಕೇಶನ್ ಪ್ರಮೋಷನ್ ಸೊಸೈಟಿ ಫಾರ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ.

ಸಂಸ್ಥೆಗಳು: ಅವರು ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟದ (ಸಿಒಎಂಇಡಿಕೆ) ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

ಪ್ರಶಸ್ತಿ: ಸೆಪ್ಟೆಂಬರ್‌ 2006 ರಲ್ಲಿ, ಡಾ.ಜಯರಾಮ್ ಅವರಿಗೆ ಶಿಕ್ಷಣ ಮತ್ತು ವ್ಯವಹಾರಕ್ಕೆ ನೀಡಿದ ಕೊಡುಗೆಗಾಗಿ ಯುಕೆಯ ಕೊವೆಂಟ್ರಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತು. ಮೇ 2022 ರಲ್ಲಿ, ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್ ನೀಡಿತು.

Continue Reading

ದೇಶ

NEET UG 2024 Re-Test Result: ನೀಟ್‌ ಮರುಪರೀಕ್ಷೆಯ ಫಲಿತಾಂಶ ಪ್ರಕಟ; ಹೀಗೆ ಚೆಕ್‌ ಮಾಡಿ

NEET UG 2024 Re-Test Result: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಫಲಿತಾಂಶವನ್ನು ಸೋಮವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ. ಮೇಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ ನಡೆಲಾಗಿತ್ತು.

VISTARANEWS.COM


on

NEET UG 2024 Re-Test Result
Koo

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ (Re-Test) ಫಲಿತಾಂಶವನ್ನು ಸೋಮವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ (NEET UG 2024 Re-Test Result). ಮೇಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ ನಡೆಲಾಗಿತ್ತು. ಈ ಪೈಕಿ 813 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಶನಿವಾರ ಆನ್ಸರ್‌ ಕೀ ಪ್ರಕಟಿಸಲಾಗಿತ್ತು.

ಚಂಡೀಗಢ, ಗುಜರಾತ್‌, ಹರಿಯಾಣ, ಮೇಘಾಲಯ ಸೇರಿ ಆರು ರಾಜ್ಯಗಳ ನಗರಗಳಲ್ಲಿ ಮರು ಪರೀಕ್ಷೆ ನಡೆದಿತ್ತು. ಈ ಪೈಕಿ ಛತ್ತೀಸ್‌ಗಢದಲ್ಲಿ 602 ಅಭ್ಯರ್ಥಿಗಳ ಪೈಕಿ 291 ವಿದ್ಯಾರ್ಥಿಗಳು ಹಾಜರಾದರೆ, ಹರಿಯಾಣದಲ್ಲಿ 494 ಅಭ್ಯರ್ಥಿಗಳ ಪೈಕಿ 287, ಮೇಘಾಲಯದಲ್ಲಿ 464 ವಿದ್ಯಾರ್ಥಿಗಳ ಪೈಕಿ 234 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಗುಜರಾತ್‌ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಮರು ಪರೀಕ್ಷೆ ಬರೆದಿದ್ದರು.

“ಜೂನ್ 23ರಂದು ಮರು ಪರೀಕ್ಷೆಗೆ ಹಾಜರಾದ ನೀಟ್ (ಯುಜಿ) 2024ರ ಎಲ್ಲ ಅಭ್ಯರ್ಥಿಗಳ ಪರಿಷ್ಕೃತ ಸ್ಕೋರ್‌ ಕಾರ್ಡ್‌ಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪರಿಷ್ಕೃತ ಸ್ಕೋರ್‌ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡಬಹುದು” ಎಂದು ಎನ್‌ಟಿಎ ತಿಳಿಸಿದೆ.

ಫಲಿತಾಂಶ ಹೀಗೆ ಚೆಕ್‌ ಮಾಡಿ

ನೀಟ್‌ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹಾಜರಿದ್ದು, ಮರುಪರೀಕ್ಷೆಯ ಮೇಲ್ವಿಚಾರಣೆ ನಡೆಸಿದರು.

ಯಾಕಾಗಿ ಮರು ಪರೀಕ್ಷೆ?

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಗ್ರೇಸ್ ಅಂಕದ ವಿವಾದ ದೇಶಾದ್ಯಂತ ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ ಎಂದೂ ಕೇಂದ್ರ ಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಮರುಪರೀಕ್ಷೆ ನಡೆಸಲಾಗಿತ್ತು.

Continue Reading

ಕರ್ನಾಟಕ

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Text Book: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣರ ಕುರಿತು ತಪ್ಪು ಮಾಹಿತಿ ಪ್ರಕಟಿಸಲಾಗಿದೆ ಎಂದು 2024ರ ಸಾಲಿನ ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಲೋಪ ಸರಿಪಡಿಸುವಂತೆ ಮನವಿ ಮಾಡಿದೆ. ಪಠ್ಯದಲ್ಲಿ ವೀರಶೈವ ಎಂಬ ಪದವನ್ನೇ ಕೈ ಬಿಡಲಾಗಿದ್ದು, ಇದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವೀರಶೈವ ಮಠಾಧೀಶರು ಪತ್ರ ಬರೆದಿದ್ದಾರೆ.

VISTARANEWS.COM


on

Text Book
Koo

ಬೆಂಗಳೂರು: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (Text Book) ಬಸವಣ್ಣರ ಕುರಿತು ತಪ್ಪು ಮಾಹಿತಿ ಪ್ರಕಟಿಸಲಾಗಿದೆ ಎಂದು 2024ರ ಸಾಲಿನ ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಲೋಪ ಸರಿಪಡಿಸುವಂತೆ ಮನವಿ ಮಾಡಿದೆ.

ಪಠ್ಯದಲ್ಲಿ ವೀರಶೈವ ಎಂಬ ಪದವನ್ನೇ ಕೈ ಬಿಡಲಾಗಿದ್ದು, ಇದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವೀರಶೈವ ಮಠಾಧೀಶರು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಪರವಾಗಿ ಡಾ. ಮಹಾಂತಲಿಂಗ ಶಿವಾಚಾರ್ಯ ಶ್ರೀ ಪತ್ರ ಬರೆದಿದ್ದಾರೆ. ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯಲ್ಲಿ ವೀರಶೈವ ಧರ್ಮದ ಗುರುಪರಂಪರೆಯ ಪಂಚಪೀಠಗಳ ಶಾಖಾಮಠಗಳ ಮಠಾಧೀಶರು ಸದಸ್ಯರಾಗಿದ್ದಾರೆ. ಈ ಎಲ್ಲ ಮಠಾಧೀಶರ ಒಮ್ಮತದ ಅಭಿಪ್ರಾಯವನ್ನು ಈ ಪತ್ರದಲ್ಲಿ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ.

ಈ ವರ್ಷದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣ ಅವರ ಪರಿಚಯವನ್ನು ಪರಿಷ್ಕರಿಸಲಾಗಿದೆ. 2016ರಿಂದ ಈಗ ಮೂರನೇ ಬಾರಿ ಪರಿಷ್ಕರಿಸಲಾಗಿದೆ. ಈ ಪರಿಷ್ಕರಣೆಯಲ್ಲಿ ವಿದ್ಯಾರ್ಥಿಗಳಿಗೆ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಬಸವಣ್ಣ ಅವರ ಪರಿಚಯದ ವೇಳೆ ವೀರಶೈವ ಪದ ಕೈ ಬಿಡಲಾಗಿದೆ. ಇದು ಸರಿಯಲ್ಲ ಎಂದು ವಚನದ ಮೂಲಕ ವಿವರಿಸಲಾಗಿದೆ.

ಬಸವಣ್ಣ ಅರಿವನ್ನೇ ಗುರುವಾಗಿಸಿಕೊಂಡಿದ್ದರು ಎಂದು ಪರಿಷ್ಕರಣೆ ಮಾಡಲಾದ ಪಠ್ಯಕ್ಕೂ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆ ತಪ್ಪುಗಳನ್ನೂ ಸರಿಪಡಿಸುವಂತೆ ತಿಳಿಸಲಾಗಿದೆ.

ಯಾವೆಲ್ಲ ತಪ್ಪುಗಳು?

ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ‘ವೀರಶೈವ’ ಪದವನ್ನು ತಗೆದು ಹಾಕಲಾಗಿದೆ. ಈ ಪರಿಷ್ಕರಣೆ ಸರಿಯಲ್ಲ‌. ಯಾಕೆಂದರೆ 30 ಹೆಚ್ಚು ಶಿವಶರಣರು 142 ವಚನಗಳಲ್ಲಿ 221 ಬಾರಿ ʼವೀರಶೈವʼ ಎಂಬ ಪದ ಬಳಸಿದ್ದಾರೆ. ಕೇವಲ 8 ಜನ ಶಿವಶರಣರು ತಮ್ಮ 10 ವಚನಗಳಲ್ಲಿ 12 ಕಡೆ ಮಾತ್ರ ‘ಲಿಂಗಾಯತ’ ಪದವನ್ನು ಬಳಸಿದ್ದಾರೆ. ಆದರೆ ಬಸವಣ್ಣ ತಮ್ಮ ಒಂದು ವಚನದಲ್ಲಿಯೂ ‘ಲಿಂಗಾಯತ’ ಪದ ಬಳಸಿಲ್ಲ. ಆದರೆ ಬಸವಣ್ಣ ಅವರೇ ಅನೇಕ ಬಾರಿ ತಮ್ಮ ವಚನಗಳಲ್ಲಿ ‘ವೀರಶೈವ’ ಪದ ಬಳಸಿರುವುದಲ್ಲದೇ ತಮ್ಮದೊಂದು ವಚನದಲ್ಲಿ ತಾವು ನಿಜ ವೀರಶೈವ’ (ವಚನ ಸಂಖ್ಯೆ 1,092) ಎಂದು ಹೇಳಿಕೊಂಡಿದ್ದಾರೆ.

ವಾಸ್ತವ ಹೀಗಿರುವಾಗ 2016 ಮತ್ತು 2022ರ ಪಠ್ಯಪುಸ್ತದಲ್ಲಿರುವ ʼವೀರಶೈವ’ ಪದವನ್ನು ತಗೆದು ಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ಇತಿಹಾಸವನ್ನು ತಿರುಚಿದಂತಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ ಮತ್ತು ಕಾನೂನು ಬಾಹಿರ ಕಾರ್ಯ ಎಂದು ಪ್ರತಿಕ್ರಿಯಿಸಲಾಗಿದೆ.

ಅಲ್ಲದೆ ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ಬಸವಣ್ಣನವರು ‘ಅರಿವನ್ನೇ ಗುರು’ವಾಗಿಸಿಕೊಂಡಿದ್ದರು. ಬಸವಣ್ಣನವರು ಇಷ್ಟಲಿಂಗದ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ಪ್ರಕಟಿಸಲಾಗಿದೆ. ಇದು ಸಂಪೂರ್ಣ ತಪ್ಪು ಮಾಹಿತಿ. ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬರಲ್ಲಿರುವ ಅಂತರಂಗದಲ್ಲಿರುವ ಪರಮಾತ್ಮನ ಆರಿವೇ ಗುರುವಾಗಬೇಕು. ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರಿದೀಪವಾಗಬೇಕೆಂದು ಪ್ರತಿಪಾದಿಸಿದ್ದಾರೆಯೇ ಹೊರತು ತಮಗೆ ಗುರುವಿಲ್ಲ. ತಮಗೆ ತಮ್ಮ ಅರಿವೇ ಗುರು ಎಂದು ಎಲ್ಲಿಯೂ ಯಾವ ಸಂದರ್ಭದಲ್ಲಿಯೂ ಹೇಳಿಲ್ಲ. ಅವರು ಅವರಲ್ಲಿರುವ ಗುರುವಿನ ಬಗೆಗಿನ ಗೌರವವನ್ನು ತಮ್ಮ ಅನೇಕ ವಚನಗಳಲ್ಲಿ ನಿರೂಪಿಸಿದ್ದಾರೆ. ತಾವು ಗುರುವಿನಿಂದ ಇಷ್ಟಲಿಂಗವನ್ನು ಪಡೆದಿದ್ದೇನೆ ಎಂದು ಆನೇಕ ವಚನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕ ವಚನಗಳ ಉದಾಹರಣೆಗಳಿವೆ.

ಬಸವಣ್ಣನವರ ವಚನಗಳಲ್ಲಿ ಗುರುವಿನ ಮತ್ತು ಗುರುಗಳಿಂದ ಇಷ್ಟಲಿಂಗ ಪಡೆದೆ ಎನ್ನುವ ಉಲ್ಲೇಖಗಳಿವೆ. ಆದ್ದರಿಂದ ಬಸವಣ್ಣನವರಿಗಿಂತ ಮೊದಲೇ ಇಷ್ಟಲಿಂಗ ಪೂಜೆಯಿತ್ತು ಎನ್ನುವುದಕ್ಕೆ ಆಧಾರಗಳಿವೆ. ಆದ್ದರಿಂದ ಇತಿಹಾಸಕ್ಕೆ ಹಾಗೂ ನಡೆದು ಬಂದ ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿಧ್ಯಾರ್ಥಿಗಳ ತಲೆ ತುಂಬಬಾರದು ಎಂದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ 9ನೇ ತರಗತಿಯ ಪಠ್ಯದಲ್ಲಿ ಆದ ದೋಷಗಳನ್ನು ಸರಿಪಡಿಸದಿದ್ದರೆ ನಾವು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: Pralhad Joshi: ಸಚಿವ ಪ್ರಲ್ಹಾದ್‌ ಜೋಶಿ ವೀರಶೈವರನ್ನು ಕಡೆಗಣಿಸಿಲ್ಲ: ಶ್ರೀ ರುದ್ರಮುನಿ‌ ಸ್ವಾಮೀಜಿ ಸಮರ್ಥನೆ

Continue Reading

ಶಿಕ್ಷಣ

Parenting Tips: ಕಾಲೇಜಿಗೆ ಹೊರಡಲು ಸಿದ್ಧವಾಗಿರುವ ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಸಂಗತಿಗಳಿವು!

10, 12ನೇ ತರಗತಿ ಪರೀಕ್ಷೆ ಮುಗಿದ ತಕ್ಷಣ ಮಕ್ಕಳಲ್ಲಿ ತಾವು ಇನ್ನು ಸ್ವತಂತ್ರರು ಎಂಬ ಭಾವನೆ ಬರುವುದು ಸಹಜ. ಬದುಕಿನಲ್ಲಿ ಗಂಭೀರತೆ ಅರಿಯದೇ ಇದ್ದರೆ ಅವರು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಪೋಷಕರು (Parenting Tips) ತಿಳಿಸಲೇಬೇಕಾದ ಕೆಲವು ಸಂಗತಿಗಳಿವೆ. ಇದರಿಂದ ಅವರು ಜೀವನ ಮತ್ತು ಶಿಕ್ಷಣ ಎರಡರಲ್ಲೂ ಯಶಸ್ಸು ಸಾಧಿಸಬಹುದು. ಪೋಷಕರು ಗಮನ ಹರಿಸಬೇಕಾದ ಸಂಗತಿಗಳ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Parenting Tips
Koo

ಎಸ್ ಎಸ್ ಎಲ್ ಸಿ (SSLC) ಮತ್ತು ಸೆಕೆಂಡ್ ಪಿಯುಸಿ (PUC) ಪರೀಕ್ಷೆಗಳ (Exam) ಫಲಿತಾಂಶದ ಅನಂತರ ಮಕ್ಕಳು ಜೀವನದ ಹೊಸ ಪ್ರಯಾಣವನ್ನು (new life) ಪ್ರಾರಂಭಿಸಲು ಸಿದ್ಧರಾಗುತ್ತಾರೆ. ಕೆಲವರು ಕಾಲೇಜಿನತ್ತ (collage) ಹೆಜ್ಜೆ ಹಾಕಿದರೆ ಇನ್ನು ಕೆಲವರು ಸ್ವಂತ ಬಿಸ್ ನೆಸ್ ಪ್ರಾರಂಭ ಅಥವಾ ತಂದೆ ತಾಯಿಯಿಂದ (Parenting Tips) ಕಲಿತ ಕೆಲಸಗಳನ್ನು ವೃತ್ತಿಯಾಗಿ ಪಡೆಯಲು ಸಿದ್ಧತೆ ನಡೆಸುತ್ತಾರೆ. ಒಂದು ಅರ್ಥದಲ್ಲಿ 12ನೇ ತರಗತಿಯ ಅನಂತರ ಮಕ್ಕಳು ತಮ್ಮ ವೃತ್ತಿಜೀವನವನ್ನು ನಿರ್ಧರಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡುತ್ತಾರೆ. ವಿಷಯ ಮತ್ತು ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಮತ್ತು ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ ಮಗುವೂ ಶಾಲೆಯನ್ನು ತೊರೆದು ಕಾಲೇಜಿಗೆ ಹೋಗುವ ವಯಸ್ಸಾಗಿದ್ದರೆ, ಪೋಷಕರಾಗಿ ಅವರ ವೃತ್ತಿ ಮತ್ತು ಭವಿಷ್ಯದ ಬಗ್ಗೆ ಕಾಳಜಿಯನ್ನು ತೋರುವುದು ಒಳ್ಳೆಯದು.

Parents moving college student

ಶಾಲಾ ಜೀವನಕ್ಕೂ ಕಾಲೇಜು ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶಾಲೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಮೇಲ್ವಿಚಾರಣೆಯಲ್ಲಿ ವಾಸಿಸುತ್ತಿದ್ದ ಮಗು, ವಯಸ್ಸಿನಲ್ಲಿ ಬೆಳೆಯುತ್ತದೆ ಮಾತ್ರವಲ್ಲದೆ ಅಂತಹ ವಾತಾವರಣಕ್ಕೆ ಹೋಗುತ್ತದೆ. ಅಲ್ಲಿ ಬಹುತೇಕ ಸ್ವತಂತ್ರನಾಗಲು ಪ್ರಾರಂಭಿಸುತ್ತದೆ. ಇಲ್ಲಿಂದ ಮಗುವಿನ ಆಲೋಚನೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಶಾಲಾ ವಾಹನದ ಬದಲು, ಮಕ್ಕಳು ತಮ್ಮ ಬೈಕ್-ಸ್ಕೂಟರ್ ಅಥವಾ ಕಾರನ್ನು ತಾನೇ ಓಡಿಸಿಕೊಂಡು ಕಾಲೇಜಿಗೆ ಹೋಗುವ ಹಾದಿಯಲ್ಲಿರುತ್ತಾರೆ. ಮಕ್ಕಳು ಈ ಸಂದರ್ಭದಲ್ಲಿ ವಿದ್ಯಾಭ್ಯಾಸದ ಜೊತೆಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೆಲ್ಲವೂ ಅವರಿಗೆ ಹೊಸ ಅನುಭವವಾಗಿದೆ. ಅವರು ಇದನ್ನು ಧನಾತ್ಮಕ ಮತ್ತು ಋಣಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ಪೋಷಕರು ತಮ್ಮ ಮಗುವಿಗೆ ಕಾಲೇಜಿಗೆ ಕಳುಹಿಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿಸಬೇಕು. ಇದರಿಂದ ಮಗು ಕಾಲೇಜು ಜೀವನದಲ್ಲಿ ಕಳೆದುಹೋಗುವುದಿಲ್ಲ. ಆದರೆ ತನ್ನ ಗುರಿಯನ್ನು ಸಾಧಿಸುವ ಜೊತೆಗೆ ಸಮಾಜದಲ್ಲಿ ಬದುಕಲು ಮತ್ತು ಸ್ವಯಂ ಆಗಲು ತರಬೇತಿಯನ್ನು ಪ್ರಾರಂಭಿಸಬಹುದು. ಮೊದಲ ಬಾರಿಗೆ ಕಾಲೇಜಿಗೆ ಹೋಗಲು ತಯಾರಿ ನಡೆಸುತ್ತಿರುವ ಮಕ್ಕಳು ಹಾಗೂ ಇವರ ಪೋಷಕರು ತಿಳಿದುಕೊಳ್ಳಬೇಕಾದ ಹಲವು ಸಂಗತಿಗಳಿವೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ವಿಚಾರಗಳು ಹಲವಾರು ಇದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

school and collage girl

1. ಶಾಲೆ ಮತ್ತು ಕಾಲೇಜು ನಡುವಿನ ವ್ಯತ್ಯಾಸ

ಶಾಲೆಯಿಂದ ಕಾಲೇಜಿಗೆ ಹೋಗುವುದು ಮಕ್ಕಳಿಗೆ ಒಂದು ಪ್ರಮುಖ ಹಂತವಾಗಿದೆ. ಮಗುವು ನಿಯಮ ಮತ್ತು ಶಿಸ್ತಿನ ಜೀವನದಿಂದ ಸಂಪೂರ್ಣವಾಗಿ ವಿಭಿನ್ನವಾದ ಸ್ಥಳದಲ್ಲಿದ್ದಾಗ ಅವನು ತನ್ನದೇ ಆದ ನಿಯಮಗಳನ್ನು ರೂಪಿಸಿಕೊಂಡು ಬದುಕುವ ಸಮಯ ಇದು. ಕಾಲೇಜು ಮಕ್ಕಳಿಗೆ ಸ್ವಾತಂತ್ರ್ಯ ನೀಡುತ್ತದೆ. ಅದಕ್ಕಾಗಿ ಅವರು ಬಹಳ ಸಮಯದಿಂದ ಕಾಯುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮಗುವು ಈ ಸ್ವಾತಂತ್ರ್ಯವನ್ನು ತಪ್ಪು ರೀತಿಯಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಕಾಲೇಜು ಮತ್ತು ಶಾಲೆಯ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ವಿವರಿಸಿ ಮತ್ತು ಅವನ ವೃತ್ತಿಜೀವನದ ಬಗ್ಗೆ ಅದರ ಗಂಭೀರತೆಯ ಬಗ್ಗೆ ತಿಳಿಸಿ.

2. ಕೇವಲ ಶಿಕ್ಷಣದತ್ತ ಗಮನಹರಿಸಬೇಡಿ

ಶಾಲೆಗಿಂತ ಕಾಲೇಜಿನಲ್ಲಿ ಅಧ್ಯಯನವೇ ಮುಖ್ಯವಾಗಿದ್ದರೂ ಕೇವಲ ಶಿಕ್ಷಣದತ್ತ ಗಮನ ಹರಿಸಿ ಇತರ ವಿಷಯಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅಧ್ಯಯನದ ಜೊತೆಗೆ ಉತ್ತಮ ಸ್ನೇಹಿತರೊಂದಿಗೆ ಸಮಯ ಕಳೆಯಲು, ಪ್ರಾಧ್ಯಾಪಕರೊಂದಿಗೆ ಸಂವಹನ ನಡೆಸಲು ಮತ್ತು ಕ್ಯಾಂಟೀನ್ ಅನ್ನು ಅನುಭವಿಸಲು ಮಗುವನ್ನು ಪ್ರೋತ್ಸಾಹಿಸಿ.

3. ಹಣದ ಮೌಲ್ಯ ತಿಳಿಸಿ

ಕಾಲೇಜಿಗೆ ಹೋಗುವ ಮೊದಲು ಮಕ್ಕಳು ಆರ್ಥಿಕ ವ್ಯವಸ್ಥೆಯನ್ನು ಸಹ ಅರ್ಥಮಾಡಿಕೊಳ್ಳಬೇಕು. ಕಾಲೇಜಿಗೆ ಹೋಗುವ ಪ್ರತಿಯೊಂದು ಮಗುವೂ ಪಾಕೆಟ್ ಮನಿಯನ್ನು ಹೇಗೆ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕೆಂದು ತಿಳಿದಿರಬೇಕು. ಹಣದ ಮೌಲ್ಯವನ್ನು ಅವರಿಗೆ ಕಲಿಸಿ. ನಿಗದಿತ ಪಾಕೆಟ್ ಮನಿಯಿಂದ ಅವರ ಕಾಲೇಜು ಖರ್ಚು ಭರಿಸಬೇಕೆಂದು ಹೇಳಿ. ಅಧ್ಯಯನ, ಕ್ಯಾಂಟೀನ್ ಮತ್ತು ಸ್ನೇಹಿತರ ನಡುವೆ ಎಷ್ಟು ಮತ್ತು ಹೇಗೆ ಹಣವನ್ನು ಖರ್ಚು ಮಾಡಬೇಕೆಂದು ಅವರಿಗೆ ತಿಳಿಸಿ.

4. ಅಡುಗೆಯನ್ನು ಕಲಿಸಿ

ಕಾಲೇಜು ಜೀವನಕ್ಕೆ ಪ್ರವೇಶಿಸುವುದು ಎಂದರೆ ಮಗು ಸ್ವಾವಲಂಬಿಯಾಗುವುದು. ಅಂತಹ ಪರಿಸ್ಥಿತಿಯಲ್ಲಿ, ಪೋಷಕರ ಸಹಾಯವಿಲ್ಲದೆ ಏಕಾಂಗಿಯಾಗಿ ಬದುಕಲು ಅಗತ್ಯವಾದ ಕೆಲಸಗಳನ್ನು ಹೇಗೆ ಮಾಡಬೇಕೆಂದು ಮಗುವಿಗೆ ತಿಳಿದಿರಬೇಕು. ನೀರು ಕಾಯಿಸುವುದು, ಅಡುಗೆ ಮಾಡುವುದು ಹೀಗೆ ಕಾಲೇಜಿಗೆ ಬಂದ ಮೇಲೆ ಓದುವ ಮಟ್ಟವೂ ಹೆಚ್ಚುತ್ತದೆ. ಅನೇಕ ಬಾರಿ ಮಕ್ಕಳು ಮನೆಯಿಂದ ದೂರ ಹೋಗಿ ಹಾಸ್ಟೆಲ್ ಅಥವಾ ಪಿಜಿಯಲ್ಲಿ ಇರಬೇಕಾಗುತ್ತದೆ. ಅಂತಹ ಪರಿಸ್ಥಿತಿ ಮಗು ಮೊದಲೇ ಸಿದ್ಧವಾಗಿರುವುದು ಒಳ್ಳೆಯದು.

ಇದನ್ನೂ ಓದಿ: Top 5 Engineering Courses: ಇವು ಬಹು ಬೇಡಿಕೆಯ ಟಾಪ್ 5 ಎಂಜಿನಿಯರಿಂಗ್ ಕೋರ್ಸ್‌ಗಳು

5. ವೈಯಕ್ತಿಕ ಸುರಕ್ಷತೆ

ಶಾಲಾ ದಿನಗಳಲ್ಲಿ ಮಗುವಿನ ಸುರಕ್ಷತೆಯ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಆದರೆ ಕಾಲೇಜಿಗೆ ಹೋದ ಅನಂತರ ಮಗುವಿನ ಸುರಕ್ಷತೆಯ ಜವಾಬ್ದಾರಿಯು ಮಗುವಿನ ಮೇಲಿರುತ್ತದೆ. ಅವನು ಒಬ್ಬನೇ ಕಾಲೇಜಿಗೆ ಹೋಗುವುದನ್ನು ಕಲಿಯುತ್ತಾನೆ. ತರಗತಿ ಮುಗಿಸಿ ಒಬ್ಬರೇ ಮನೆಗೆ ಹಿಂದಿರುಗುತ್ತಾರೆ. ಪೋಷಕರ ಮೇಲ್ವಿಚಾರಣೆ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಮಗುವಿಗೆ ತನ್ನನ್ನು ರಕ್ಷಿಸಿಕೊಳ್ಳಲು ಕಲಿಸಬೇಕು. ಯಾವುದೇ ಅಜ್ಞಾತ ಸ್ಥಳಕ್ಕೆ ಒಂಟಿಯಾಗಿ ಹೋಗಬೇಡಿ ಎಂದು ಮಗುವಿಗೆ ಹೇಳಿ. ಹೊಸ ಸ್ನೇಹಿತರು ಹೇಳುವ ಎಲ್ಲವನ್ನೂ ನಂಬಬೇಡಿ ಅಥವಾ ಸಂಬಂಧದಲ್ಲಿ ತನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಕಲಿಸಿ. ಯೋಚಿಸದೆ ಯಾರನ್ನೂ ನಂಬಬೇಡಿ ಎಂಬುದನ್ನು ತಿಳಿಸಿ.

6. ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಲು ಕಲಿಸಿ

ಮಗುವಿಗೆ ಕಾಲೇಜಿನಲ್ಲಿ ಹೊಸ ಸ್ನೇಹಿತರು ಸಿಗುತ್ತಾರೆ. ಕಾಲೇಜು ಸ್ನೇಹಿತರು ಹೆಚ್ಚಾಗಿ ನೋಟುಗಳ ವಿನಿಮಯದಿಂದ ಪ್ರಾರಂಭಿಸುತ್ತಾರೆ. ಶಾಲಾ ಸ್ನೇಹಿತರಂತೆ, ಅವರು ಬಾಲಿಶತೆಯನ್ನು ಹೊಂದಿರುವುದಿಲ್ಲ. ಆದರೆ ಇತರ ಅನೇಕ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಆದ್ದರಿಂದ, ಅವರು ಕಾಲೇಜಿನಲ್ಲಿ ಬುದ್ಧಿವಂತಿಕೆಯಿಂದ ಸ್ನೇಹಿತರನ್ನು ಆಯ್ಕೆ ಮಾಡಬೇಕು ಎಂಬುದನ್ನು ನಾವು ಮಕ್ಕಳಿಗೆ ತಿಳಿಸಬೇಕು.

Continue Reading
Advertisement
IND vs SA:
ಪ್ರಮುಖ ಸುದ್ದಿ16 mins ago

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

Viral News
Latest20 mins ago

Viral News: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

Viral Video
Latest21 mins ago

Viral Video: 1 ನಿಮಿಷದಲ್ಲಿ 35 ಪುಲ್-ಅಪ್! ಮೇಜರ್ ಜನರಲ್ ವಿಡಿಯೊ ಫುಲ್ ವೈರಲ್

Hero MotoCorp has introduced the new motorcycle The Centennial
ವಾಣಿಜ್ಯ25 mins ago

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Praveen Tej starrer Jigar released on July 5
ಕರ್ನಾಟಕ27 mins ago

Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ವೈರಲ್ ನ್ಯೂಸ್35 mins ago

Viral News: ಇದೆಂಥಾ ಹುಚ್ಚಾಟ! ಎನ್‌ಡಿಎ ಕಳಪೆ ಪ್ರದರ್ಶನದಿಂದ ಖಿನ್ನತೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

Hyperpigmentation
ಆರೋಗ್ಯ36 mins ago

Hyperpigmentation: ಕಾಡುವ ಈ ‘ಕಪ್ಪುಕಲೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

Viral Video
Latest42 mins ago

Viral Video: ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪ್ಲೀಸ್‌ ಎಂದ ಸಂಸದೆ; ಹೆಂಗಸರನ್ನು ನೋಡಲ್ಲ ಎಂದ ಸ್ಪೀಕರ್‌!

Viral Video
Latest50 mins ago

Viral Video: ಪ್ರೇಯಸಿಯ ಕಣ್ಮುಂದೆಯೇ ಆಕೆಯ ತಂದೆಯನ್ನು ಬರ್ಬರವಾಗಿ ಕೊಂದ ಪ್ರಿಯಕರ!

Dating Application
Latest58 mins ago

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌