Viral Video: ಚಾಲಕನ ಸಮೇತ ಬೈಕ್​ನ್ನು ಏರ್​ಲಿಫ್ಟ್ ಮಾಡಿದ ಟೋಯಿಂಗ್​ ವಾಹನ ! - Vistara News

ವೈರಲ್ ನ್ಯೂಸ್

Viral Video: ಚಾಲಕನ ಸಮೇತ ಬೈಕ್​ನ್ನು ಏರ್​ಲಿಫ್ಟ್ ಮಾಡಿದ ಟೋಯಿಂಗ್​ ವಾಹನ !

ನಾಗ್ಪುರದ ಸಾದರ್ ಬಜಾರ್ ಎಂಬಲ್ಲಿ ಚಿತ್ರೀಕರಿಸಲಾದ ವಿಡಿಯೋವನ್ನು Humnagpurkar ಎಂಬ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಹಲವರು ಇದನ್ನು ಖಂಡಿಸಿದ್ದಾರೆ.

VISTARANEWS.COM


on

Bike Towed
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನೋ ಪಾರ್ಕಿಂಗ್​ ಸ್ಥಳ, ಮಧ್ಯ ರಸ್ತೆಗಳಲ್ಲಿ ಅಥವಾ ಇನ್ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ, ಅವುಗಳನ್ನು ಪೊಲೀಸರು ಟೋಯಿಂಗ್ ಮಾಡಿ, ಠಾಣೆಗೆ ಒಯ್ಯುವುದು ದೇಶಾದ್ಯಂತ ಜಾರಿಯಲ್ಲಿರುವ ವ್ಯವಸ್ಥೆ. ಅಡ್ಡಾದಿಡ್ಡಿ, ಎಲ್ಲೆಂದರಲ್ಲಿ ನಿಲ್ಲುವ ವಾಹನಗಳನ್ನು ಎತ್ತಿ, ಎಳೆದುಕೊಂಡು ಹೋಗಲೆಂದೇ ವಾಹನಗಳೂ ಇರುತ್ತವೆ. ಹೀಗೆ ಟೋಯಿಂಗ್ ಮಾಡುವ ಹಲವು ವಿಡಿಯೋಗಳನ್ನು, ದೃಶ್ಯಗಳನ್ನು ನೀವೆಲ್ಲ ನೋಡಿರುತ್ತೀರಿ. ಆದರೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಟೋಯಿಂಗ್​ ಪ್ರಕ್ರಿಯೆಯ ವಿಡಿಯೋವೊಂದು ಭರ್ಜರಿ ವೈರಲ್ ಆಗುತ್ತಿದ್ದು, ತುಂಬ ವಿಭಿನ್ನವಾಗಿದೆ.

‘ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ಬೈಕ್​​ನ್ನು ಅದೆಲ್ಲಿ ನಿಲ್ಲಿಸಿದ್ದ ಗೊತ್ತಿಲ್ಲ, ಆದರೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸ್ಥಳಕ್ಕೆ ಟೋಯಿಂಗ್​ ವಾಹನ ಬಂದು ನಿಂತಿದೆ. ಆದರೆ ಒಂದು ವ್ಯತ್ಯಾಸವೆಂದರೆ ಟೋಯಿಂಗ್​ ವಾಹನದ ಚಾಲಕ ಬರೀ ಬೈಕ್​​ನ್ನು ಎತ್ತದೆ, ಸವಾರ ಬೈಕ್​ ಮೇಲೆ ಕುಳಿತಿದ್ದಂತೆ ಅವನನ್ನೂ ಸೇರಿಸಿಯೇ ಎತ್ತಿ ಗಾಳಿಯಲ್ಲಿ ತೇಲಾಡಿಸಿದ್ದಾರೆ. ಆ ಬೈಕ್​ ಸವಾರ ತನ್ನನ್ನು ಕೆಳಗೆ ಇಳಿಸಿ ಎಂದು ಕೇಳುತ್ತಿದ್ದಾನೆ. ಬೈಕ್ ಚಾಲಕ ಪೊಲೀಸರೊಂದಿಗೆ ಏನಾದರೂ ತಗಾದೆ ತೆಗೆದಿದ್ದಕ್ಕೆ ಹೀಗೆ ಮಾಡಿದರಾ? -ಯಾವ ಸಂದರ್ಭದಲ್ಲಿ ಹೀಗೆ ಚಾಲಕನ ಸಮೇತ ಬೈಕ್​ ಎತ್ತಿದರು ಎಂಬುದು ಗೊತ್ತಾಗಲಿಲ್ಲ’. ಆದರೆ ಇದೊಂದು ಫನ್ನಿ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

Humnagpurkar ಎಂಬ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ವಿಡಿಯೋ ಶೇರ್​ ಆಗಿದೆ. ಜುಲೈ ತಿಂಗಳಲ್ಲೇ ಪೋಸ್ಟ್ ಆದ ವಿಡಿಯೋ ಇದು. ಈಗ ಮತ್ತೆ ವೈರಲ್​ ಆಗುತ್ತಿದೆ. ಆ ಸವಾರ ತನ್ನ ಬೈಕ್​ ಬಗ್ಗೆ ತೋರಿಸಿರುವ ಪ್ರೀತಿ, ಬದ್ಧತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಟೋಯಿಂಗ್​ ಮಾಡಲು ಬಂದವರಿಗೆ ಬೈಕ್​ ತೆಗೆದುಕೊಂಡು ಹೋಗಲು ಬಿಡಬಾರದು ಎಂಬ ಕಾರಣಕ್ಕೆ ಅದರ ಮೇಲೆ ಹತ್ತಿ ಪ್ರತಿಭಟಿಸುತ್ತಿದ್ದಾರೆ ಎಂದೇ ಅನೇಕರು ಹೇಳಿದ್ದಾರೆ. ಅಂದಹಾಗೇ, ಈ ಘಟನೆ ನಡೆದಿದ್ದು ನಾಗ್ಪುರದ ಸಾದರ್ ಬಜಾರ್ ಎಂಬಲ್ಲಿ ಎನ್ನಲಾಗಿದ್ದು, ಒಂದಷ್ಟು ಜನ ಬಲವಾಗಿ ಖಂಡಿಸಿದ್ದಾರೆ. ಟೋಯಿಂಗ್​ ಸಿಬ್ಬಂದಿಯ ಅತಿರೇಕದ ವರ್ತನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ ಎಂದ ನೂತನ ಆಯುಕ್ತ ಪ್ರತಾಪ್‌ ರೆಡ್ಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral News: ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟಿದ್ದೇಕೆ ಮುಸ್ಲಿಂ ದಂಪತಿ?

Viral News: ಕೆಲವೊಂದು ಘಟನೆಗಳು ಜಾತಿ, ಧರ್ಮಗಳನ್ನು ಮೀರಿ ನಡೆಯುತ್ತವೆ. ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ಮಹಾಲಕ್ಷ್ಮಿ ಎಂದು ಹೆಸರಿಡುವ ಮೂಲಕ ಮುಸ್ಲಿಂ ದಂಪತಿ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದ್ದಾರೆ. ಈ ದಂಪತಿ ತಮ್ಮ ಮಗುವಿಗೆ ಮಹಾಲಕ್ಷ್ಮಿ ಎಂದು ಹೆಸರಿಟ್ಟಿದ್ದೇಕೆ? ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

Viral News
Koo

ಮಹಾರಾಷ್ಟ್ರ: ಎಲ್ಲಾ ಜನರಿಗೂ ಅವರ ಧರ್ಮ ಮತ್ತು ದೇವರ ಮೇಲೆ ಗೌರವವಿರುತ್ತದೆ. ಹಾಗಾಗಿ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಮ್ಮ ಧರ್ಮಕ್ಕೆ ಅನುಗುಣವಾಗಿ ದೇವರ ಹೆಸರನ್ನು ಇಡುತ್ತಾರೆ. ಆ ಧರ್ಮದವರನ್ನು ನೋಡಿದರೆ ಈ ಧರ್ಮದವರಿಗೆ ಆಗಲ್ಲ ಇತ್ಯಾದಿ ವೈರುದ್ಯಗಳೂ ಇವೆ. ಕೆಲವೊಮ್ಮೆ ಈ ಜಾತಿ, ಧರ್ಮಗಳನ್ನು ಮೀರಿದ ಭಾವವೊಂದು ಮೂಡುತ್ತದೆ. ಇಂತಹದ್ದೇ ಒಂದು ಘಟನೆ ನಡೆದಿದೆ. ಮುಸ್ಲಿಂ ದಂಪತಿ ತಮ್ಮ ಮಗಳಿಗೆ ಹಿಂದೂ ದೇವರ ಹೆಸರನ್ನು ಇಡುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ (Viral News)ಆಗಿದೆ.

ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ʼಮಹಾಲಕ್ಷ್ಮಿ ʼ ಎಂದು ನಾಮಕರಣ ಮಾಡಿದ್ದಾರಂತೆ. ಜೂನ್ 6ರಂದು ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಮೀರಾ ರೋಡ್ ನ ಫಾತಿಮಾ ಖಾತುನ್ ಎಂಬ 31 ವರ್ಷದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ ಮತ್ತು ನೋವು ಹೆಚ್ಚಾದ ಕಾರಣ ರೈಲಿನಲ್ಲಿರುವ ಶೌಚಾಲಯಕ್ಕೆ ತೆರಳಿದ್ದಾಳೆ. ಬಳಿಕ ರೈಲು ಲೋನಾವಾಲಾ ದಾಟಿದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಆಕೆಗೆ ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಹಿಳೆಯ ಪತಿ ತಯ್ಯಬ್ ಕರ್ಜಾತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮಗುವನ್ನು ರೈಲಿನಿಂದ ಕೆಳಗಿಳಿಸಿ ಹತ್ತಿರವಿದ್ದ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಸಿಬ್ಬಂದಿಗಳು ತಾಯಿ, ಮಗುವಿಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಮೂರು ದಿನಗಳ ನಂತರ ಡಿಸ್ಚಾರ್ಜ್ ಮಾಡಿದ್ದಾರೆ. ನಂತರ ಆ ಮುಸ್ಲಿಂ ದಂಪತಿ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹಿಂದೂ ದೇವರ ಹೆಸರನ್ನು ಇಟ್ಟು ಕುತೂಹಲ ಮೂಡಿಸಿದ್ದಾರೆ.

ಈ ಬಗ್ಗೆ ಮಗುವಿನ ತಂದೆ ತಯ್ಯಬ್ ಕರ್ಜಾತ್ ಅವರನ್ನು ಕೇಳಿದಾಗ, ತಿರುಪತಿಯಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಯಾಣಿಸಿದ ಕೆಲವು ಸಹ ಪ್ರಯಾಣಿಕರು ತನ್ನ ಮಗಳು ಈ ರೈಲಿನಲ್ಲಿ ಹುಟ್ಟಿದ್ದು, ದೇವಿಯ ದರ್ಶನ ಪಡೆದಂತೆ ಆಯಿತು ಎಂದು ಹೇಳಿದರಂತೆ. ಹಾಗಾಗಿ ತಾನು ಮಗುವಿಗೆ ಈ ಹೆಸರಿಟ್ಟೆ ಎಂದು ತಿಳಿಸಿದ್ದಾರೆ. ಹಾಗೇ ಈ ಘಟನೆಯ ವೇಳೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಈ ದಂಪತಿಗೆ ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಫಾತಿಮಾ ಅವರಿಗೆ ಜೂನ್ 20ಕ್ಕೆ ಹೆರಿಗೆ ಡೇಟ್ ನೀಡಲಾಗಿತ್ತು, ಆದರೆ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಆಕೆಗೆ ಜೂನ್ 6ಕ್ಕೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೆರಿಗೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ:Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

ಒಟ್ಟಾರೆ ಮುಸ್ಲಿಂ ದಂಪತಿ ತಮ್ಮ ಮಗಳಿಗೆ ಹಿಂದೂ ದೇವರ ಹೆಸರನ್ನಿಟ್ಟಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದಂತು ಖಂಡಿತ. ಈ ಮೂಲಕವಾದರೂ ಹಿಂದೂ ಮತ್ತು ಮುಸ್ಲಿಂ ಧರ್ಮದವರು ಸಹಬಾಳ್ವೆಯಿಂದ ಬಾಳುವಂತಾಗಲಿ.

Continue Reading

ವೈರಲ್ ನ್ಯೂಸ್

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

Viral News: ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಹೆದರಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿ ಸತ್ತಿದ್ದಾನೆ ಎಂದು ಎತ್ತಲು ಹೋದಾಗ ಶಾಕ್‌ ಆಗಿದ್ದಾರೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಇಲ್ಲಿದೆ ನೋಡಿ.

VISTARANEWS.COM


on

Viral News
Koo

ತೆಲಂಗಾಣ: ಕೊಳದಲ್ಲಿ, ನದಿಯಲ್ಲಿ ಹೆಣಗಳು ತೇಲುತ್ತಿರುವ ಘಟನೆಯನ್ನು ನಾವು ಹಲವು ಬಾರಿ ನೋಡಿರುತ್ತೇವೆ ಹಾಗೂ ಈ ತರಹದ ಘಟನೆಯ ಬಗ್ಗೆ ಕೇಳಿರುತ್ತೇವೆ. ವ್ಯಕ್ತಿಯನ್ನು ಯಾರಾದರೂ ಕೊಂದು ನದಿಗೆ ಎಸೆದಿರುತ್ತಾರೆ ಅಥವಾ ವ್ಯಕ್ತಿಯೇ ಜೀವನದ ಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಆಗ ಅವರ ಹೆಣ ನೀರಿನ ಮೇಲೆ ಬಂದು ತೇಲುತ್ತಿರುತ್ತದೆ. ಇಂತಹದ್ದೇ ಒಂದು ಘಟನೆ ಹನಮಕೊಂಡನಗರದಲ್ಲಿ ನಡೆದಿದೆ. ಹೆಣ ತೇಲುತ್ತಿದೆ ಎಂದು ಎತ್ತಲು ಹೋದ ಪೊಲೀಸ್‌ ತಂಡ ಬೇಸ್ತು ಬಿದ್ದಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆ ವ್ಯಕ್ತಿ ಎದ್ದು ನಿಂತಿದ್ದಾನೆ. ಸತ್ತಿದ್ದಾನೆ ಎಂದುಕೊಂಡ ವ್ಯಕ್ತಿ ಎದ್ದು ನಿಂತು ಮಾತನಾಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಅದೇ ರೀತಿ ಪೊಲೀಸರು ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಹೆಣ ಎತ್ತಲು ಹೋದಾಗ ಎದ್ದು ನಿಂತ ವ್ಯಕ್ತಿ!

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಿವಾಸಿಯಾಗಿದ್ದು, ಕಾಜಿಪೇಟೆಯ ಡೀಸೆಲ್ ಕಾಲೋನಿಯಲ್ಲಿ ವಾಸವಾಗಿದ್ದ. ಅವನು ಗ್ರಾನೈಟ್ ಗಣಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸಿಲಿನ ತಾಪದಲ್ಲಿ ಸುಮಾರು ಹನ್ನೆರಡು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿ ಸುಸ್ತಾದ ಕಾರಣ ಸ್ವಲ್ಪ ವಿಶ್ರಾಂತಿ ಪಡೆಯಲು ಕೊಳಕ್ಕೆ ಇಳಿದಿರುವುದಾಗಿ ತಿಳಿಸಿದ್ದಾನೆ. ಹಾಗೇ ವಿಶ್ರಾಂತಿ ಪಡೆಯುತ್ತಿದ್ದ ಆತ ಅಲ್ಲೇ ನಿದ್ರೆಗೆ ಜಾರಿದ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆತನ ದೇಹ ಕೊಳದಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಬಂದು ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆತ ಎದ್ದು ನಿಂತಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ ಜನರು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಿಸಿಲಿನ ತಾಪವನ್ನು ಸಹಿಸಲಾಗದೆ ಹೆಚ್ಚಿನ ಜನರು ನದಿ, ಕೊಳದಲ್ಲೇ ಮುಳುಗಿಕೊಂಡು ಹೆಚ್ಚು ಸಮಯ ಕಳೆಯುತ್ತಿದ್ದರು. ಇದಕ್ಕೆ ಈಗ ಈ ಘಟನೆಯು ಒಂದು ಸಾಕ್ಷಿಯಾಗಿದೆ.

ಇದನ್ನೂ ಓದಿ: salaries of prime minister: ರಾಷ್ಟ್ರಪತಿ, ಪ್ರಧಾನಿಗೆ ಸಂಬಳ, ಸೌಲಭ್ಯ ಎಷ್ಟಿರುತ್ತವೆ ಗೊತ್ತೆ?

ಅಲ್ಲದೇ ಕಳೆದವಾರ ರಾಜ್ಯದ ನಲ್ಗೊಂಡ ನಗರದ ನೀರಿನ ತೊಟ್ಟಿಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ಈ ವಿಚಾರ ತಿಳಿಯದೇ ಜನರು ಅದೇ ನೀರನ್ನು ಸೇವಿಸುತ್ತಿದ್ದರು. ಈ ಬಗ್ಗೆ ಪೊಲೀಸ್ ತನಿಖೆ ನಡೆದಿದ್ದು, ಸತ್ತ ವ್ಯಕ್ತಿ ಅವುಲಾ ವಂಶಿ ಎಂದು ತಿಳಿದುಬಂದಿದ್ದು, ಮೇ 24ರಿಂದ ಕಾಣೆಯಾಗಿದ್ದ. ನಂತರ ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Continue Reading

ವೈರಲ್ ನ್ಯೂಸ್

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

ಜರ್ಮನಿ ಕನ್ಯೆಯೊಂದಿಗಿನ ಪ್ರೇಮ ಆರಂಭದಿಂದ ವಿವಾಹದ ಬಂಧನದವರೆಗಿನ ಕಥೆಯನ್ನು ಭಾರತೀಯ ಯೂಟ್ಯೂಬರ್ ಧ್ರುವ ರಾಥಿ (YouTuber, Dhruv Rathee) ಹೇಳಿಕೊಂಡಿದ್ದಾರೆ. ಜರ್ಮನ್ ನ ಜೂಲಿ ಎಲ್ಬ್ರ್ ಅವರೊಂದಿಗಿನ ಮೊದಲ ಭೇಟಿ, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

By

YouTuber Dhruv Rathee
Koo

ಮೋದಿ ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರಿಗೂ ಯೂಟ್ಯೂಬರ್‌ ಧ್ರುವ ರಾಥಿ ಗೊತ್ತು. ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹರಿತ ವಿಡಿಯೊಗಳನ್ನು ಮಾಡುವ ಮೂಲಕ ಇವರು ಖ್ಯಾತರಾಗಿದ್ದಾರೆ. ಆದರೆ ಇವರ ಪ್ರೀತಿ, ಪ್ರೇಮ, ಪ್ರಣಯದ ಕತೆ ನಿಮಗೆ ಗೊತ್ತೆ? ಯೂಟ್ಯೂಬರ್ ಧ್ರುವ ರಾಥಿ (YouTuber Dhruv Rathee) ತಮ್ಮ ಪ್ರೇಮ ಕಥೆಯನ್ನು (Love story) ಹಂಚಿಕೊಂಡಿದ್ದಾರೆ. ಜರ್ಮನ್‌ನ (Germany) ಜೂಲಿ ಎಲ್ಬ್ರ್ (Juli Lbr) ಅವರೊಂದಿಗಿನ ಮೊದಲ ಭೇಟಿ, ಯಾವಾಗ ಪ್ರೀತಿಯಾಯಿತು, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

17.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಧ್ರುವ ರಾಥಿ ಪ್ರಸಿದ್ಧ ಭಾರತೀಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಪ್ರವಾಸದ ವಿಷಯದ ಕುರಿತೂ ಅವರು ಸದಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಶಾಲೆಯಲ್ಲಿ ಪೂರ್ಣಗೊಳಿಸಿದರು. ಜರ್ಮನಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದ ಅವರು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಧ್ರುವ ಅವರ ವೃತ್ತಿಪರ ಜೀವನ ಮತ್ತು ವ್ಲಾಗ್‌ಗಳ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿದಿದ್ದರೂ ಅವರ ಜರ್ಮನ್ ಪತ್ನಿ ಜೂಲಿ ಎಲ್ಬ್ರ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. 2021ರಲ್ಲಿ ಧ್ರುವ ಮತ್ತು ಜೂಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ವಿವಾಹವಾದರು. ಅದೂ ಒಂದೆರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ಬಳಿಕ. ಆದರೂ ಅವರು ತಮ್ಮ ಸಂಬಂಧವನ್ನು ಮಾಧ್ಯಮದಿಂದ ಮತ್ತು ಅಭಿಮಾನಿಗಳ ಊಹಾಪೋಹಗಳಿಂದ ದೂರವಿಟ್ಟಿದ್ದರು. 2022ರಲ್ಲಿ ಅವರು ಹಿಂದೂ ಸಂಸ್ಕೃತಿಯಂತೆ ಮತ್ತೆ ವಿವಾಹವಾದರು.

ಜೂಲಿ ಎಲ್ಬ್ರ್ ಅವರೊಂದಿಗೆ ಮೊದಲ ಭೇಟಿ

ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಧ್ರುವ, 2014ರಲ್ಲಿ ಜೂಲಿಯೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಅವರು ಮೊದಲ ಬಾರಿಗೆ ರೈಲಿನಲ್ಲಿ ಜೂಲಿ ಅವರನ್ನು ಭೇಟಿಯಾಗಿದ್ದರು. ಆಗ ತಮ್ಮಿಬ್ಬರಿಗೂ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿದರು. ಧ್ರುವ ತಮ್ಮ ಇಂಟರ್ನ್‌ಶಿಪ್‌ಗಾಗಿ ರೈಲು ಮೂಲಕ ಹೋಗುತ್ತಿದ್ದಾಗ ಜೂಲಿ ಶಾಲೆಗೆ ಹೋಗುತ್ತಿದ್ದರು. ಅವರು ಪ್ರತಿದಿನ ರೈಲಿನಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಮಾತನಾಡಲು ಪ್ರಾರಂಭಿಸಿದರು. ಧ್ರುವ ಅವರು ತಮ್ಮ ಯೂಟ್ಯೂಬ್ ಪ್ರಯಾಣವನ್ನು ಪ್ರಾರಂಭಿಸಿದ್ದು ಅದೇ ವರ್ಷ ಎಂದು ಹೇಳಿದ್ದಾರೆ.


ಕನಸಿನಂತೆ ಮದುವೆ

2021ರ ನವೆಂಬರ್ 24ರಂದು, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ಆತ್ಮೀಯರ ಸಮ್ಮುಖದಲ್ಲಿ ಧ್ರುವ ಅವರು ತಮ್ಮ ದೀರ್ಘಕಾಲದ ಗೆಳತಿ ಜೂಲಿಯನ್ನು ವಿವಾಹವಾದರು. ಈ ಕುರಿತು ಇನ್ ಸ್ಟಾ ಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣದಲ್ಲಿ ಅದು ಭಾರೀ ವೈರಲ್ ಆಗಿತ್ತು. ಜೂಲಿ ಅವರು ಬಿಳಿ ಗೌನ್ ಧರಿಸಿದ್ದು, ಧ್ರುವ ನೇವಿ ಬ್ಲೂ ಧಿರಿಸಿನಲ್ಲಿ ಮಿಂಚಿದ್ದರು.

ಕೋವಿಡ್ ಸಾಂಕ್ರಾಮಿಕದ ಸಮಯವಾದ್ದರಿಂದ ಇವರ ಮದುವೆಯಲ್ಲಿ ಕೇವಲ 22 ಮಂದಿ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದರು. ಮದುವೆಯ ಅನಂತರ ದಂಪತಿ ಕೆಲ ಕಾಲ ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ತಮ್ಮ ಜೀವನದ ಕೆಲವೊಂದು ಸುಂದರ ಕ್ಷಣಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


ಹಿಂದೂ ಸಂಸ್ಕೃತಿಯಂತೆ ವಿವಾಹ

ಧ್ರುವ ಅವರು ಪತ್ನಿ ಜೂಲಿಯೊಂದಿಗೆ 2022ರಲ್ಲಿ ಭಾರತಕ್ಕೆ ಬಂದರು. ಬಳಿಕ ಇಲ್ಲಿ ದಂಪತಿ ಹಿಂದೂ ಸಂಪ್ರದಾಯಗಳ ಪ್ರಕಾರ ಎರಡನೇ ಬಾರಿಗೆ ವಿವಾಹವಾದರು. ಈ ಕುರಿತು ಧ್ರುವ ಅವರು ವಿಡಿಯೋವನ್ನು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಜೂಲಿ ಅವರು ಭಾರವಾದ ಕಸೂತಿ ಇರುವ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಚೋಕರ್, ಕಿವಿಯೋಲೆ ಮತ್ತು ಮೂಗುತಿ ಯೊಂದಿಗೆ ಹಿಂದೂ ವಧುವಿನಂತೆ ಕಂಗೊಳಿಸಿದ್ದಾರೆ. ಮತ್ತೊಂದೆಡೆ ಧ್ರುವ ಅವರು ಪೇಟದೊಂದಿಗೆ ಶೇರ್ವಾನಿ ಧರಿಸಿದ್ದರು.

ಇದನ್ನೂ ಓದಿ: MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

ಜೂಲಿಗೆ ಹಿಂದಿ ಗೊತ್ತು

ಧ್ರುವ ದಂಪತಿ ಪರಸ್ಪರರ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಧ್ರುವ ಅವರು ಜರ್ಮನ್ ಭಾಷೆ ತಿಳಿದಿದ್ದು, ಅವರ ಪತ್ನಿ ಜೂಲಿ ಹಿಂದಿ ಕಲಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಧ್ರುವ ಅವರು ತಮ್ಮ ಪತ್ನಿ ಜೂಲಿಗಿಂತ ಉತ್ತಮವಾಗಿ ಜರ್ಮನ್ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಜೂಲಿ ಅವರಿಗೆ ಹಿಂದಿ ಸ್ವಲ್ಪ ಕಠಿಣವೆಂದು ಪರಿಗಣಿಸಿದ್ದಾರೆ.

ಧ್ರುವ ರಾಥಿ ಅವರ ಆಸ್ತಿ ಎಷ್ಟು?

ಧ್ರುವ ರಾಥಿ ಅವರು ಕಂಠದಾನ ಮಾಡುತ್ತಾರೆ ಮತ್ತು ಆಗಾಗ ಯೂಟ್ಯೂಬ್‌ನಲ್ಲಿ ತಮ್ಮ ಅನುಭವ, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ನಿವ್ವಳ ಸಂಪತ್ತು ಸುಮಾರು 4 ಮಿಲಿಯನ್ ಡಾಲರ್ ಅಂದರೆ, ಸುಮಾರು 33 ಕೋಟಿ ರೂ. ಆಗಿದೆ. ಯೂಟ್ಯೂಬ್ ಚಾನಲ್ ಮತ್ತು ವಿವಿಧ ಬ್ರ್ಯಾಂಡ್‌ಗಳ ಸಹಯೋಗವೇ ಅವರ ಪ್ರಾಥಮಿಕ ಆದಾಯದ ಮೂಲವಾಗಿದೆ.

Continue Reading

ದೇಶ

All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

All Eyes on Raesi: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ (ಜೂನ್ 9) ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಮಾತ್ರವಲ್ಲ ಈ ಹಿಂದೆ ʼಆಲ್ ಐಸ್ ಆನ್ ರಫಾʼ ಎನ್ನುವ ಪೋಸ್ಟ್‌ ಹಂಚಿಕೊಂಡು ರಫಾ (ಪ್ಯಾಲೆಸ್ತೀನ್‌) ಜನರಿಗಾಗಿ ಕಂಬನಿ ಸುರಿಸಿದ್ದ ಸೆಲೆಬ್ರಿಟಿಗಳು ಈಗ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿಗಳ ಇಬ್ಬಗೆಯ ನೀತಿಯನ್ನು ಹಲವರು ಪ್ರಶ್ನಿಸಿದ್ದಾರೆ.

VISTARANEWS.COM


on

All Eyes on Raesi
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ (ಜೂನ್ 9) ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi terror attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಬಸ್‌ ಆಳವಾದ ಕಮರಿಗೆ ಬಿದ್ದು, ದುರಂತ ಸಂಭವಿಸಿದೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಜತೆಗೆ ಈ ಹಿಂದೆ ʼಆಲ್ ಐಸ್ ಆನ್ ರಫಾʼ ಎನ್ನುವ ಪೋಸ್ಟ್‌ ಹಂಚಿಕೊಂಡು ರಫಾ (ಪ್ಯಾಲೆಸ್ತೀನ್‌) ಜನರಿಗಾಗಿ ಕಂಬನಿ ಸುರಿಸಿದ್ದ ಸೆಲೆಬ್ರಿಟಿಗಳು ಈಗ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಇಸ್ರೇಲ್‌ನ ವೈಮಾನಿಕ ದಾಳಿಯ ನಂತರ ದಕ್ಷಿಣ ಗಾಜಾದಲ್ಲಿ 45 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಳಿಕ ದಕ್ಷಿಣ ಗಾಜಾದ ರಫಾ ನಗರದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರಲ್ಲಿ ʼಆಲ್ ಐಸ್ ಆನ್ ರಫಾʼ ಎಂದು ಬರೆದು, ರಫಾ ನಿರಾಶ್ರಿತರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಈ ಪೋಸ್ಟ್‌ ಅನ್ನು ಭಾರತದ ಸೆಲೆಬ್ರಿಟಿಗಳೂ ಹಂಚಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಆಲಿಯಾ ಭಟ್, ಸಮಂತಾ ರುತ್ ಪ್ರಭು, ತ್ರಿಪ್ತಿ ಡಿಮ್ರಿ, ರಿಚಾ ಚಡ್ಡಾ, ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಮುಂತಾದ ಸೆಲೆಬ್ರಿಟಿಗಳು ʼಆಲ್ ಐಸ್ ಆನ್ ರಫಾʼ ಪೋಸ್ಟ್‌ ಹಂಚಿಕೊಂಡು ಕಂಬನಿ ಮಿಡಿದಿದ್ದರು. ಸದ್ಯ ಇವರೆಲ್ಲ ಭಾರತದಲ್ಲೇ ನಡೆದ ದುರಂತದ ಬಗ್ಗೆ ಮೌನ ವಹಿಸಿದ್ದು ನೆಟ್ಟಿಗರನ್ನು ಕೆರಳಿಸಿದೆ. ʼಆಲ್ ಐಸ್ ಆನ್ ರಿಯಾಸಿʼ ಎನ್ನುವ ಪೋಸ್ಟ್‌ ಈ ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಹಿಂದೂಗಳಿಗೆ ಯಾಕೆ ಮನಸ್ಸು ಮಿಡಿಯುತ್ತಿಲ್ಲ?

ʼʼದೂರದ ಪ್ಯಾಲೆಸ್ತೀನಿಯರಿಗಾಗಿ ಮಿಡಿದ ಸೆಲೆಬ್ರಿಟಿಗಳ ಮನಸ್ಸು ನಮ್ಮದೇ ದೇಶದ ಮುಗ್ಧರಿಗಾಗಿ ಯಾಕೆ ಮಿಡಿಯುತ್ತಿಲ್ಲ? ಭಯೋತ್ಪಾದನೆಗಾಗಿ ಬಲಿಯಾದ ಹಿಂದೂಗಳ ಬೆಂಬಲಕ್ಕೆ ಧಾವಿಸಲು ಸೆಲೆಬ್ರಿಟಿಗಳು ಮುಂದಾಗದಿರುವುದು ದುರಂತʼʼ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಸೋಷಿಯಲ್‌ ಮೀಡಿಯಾದ ಮೂಲಕ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ʼʼಎಲ್ಲರ ಕಣ್ಣು ರಫಾ ಮೇಲೆ ಎನ್ನುತ್ತಿದ್ದವರೆಲ್ಲ ಈಗ ಮೌನಕ್ಕೆ ಶರಣಾಗಿದ್ದಾರೆʼʼ ಎಂದು ಒಬ್ಬರು ರಿಯಾಸಿ ದುರಂತದ ಫೋಟೊವನ್ನು ಪೋಸ್ಟ್‌ ಮಾಡಿ ಸಿನಿಮಾ ನಟ-ನಟಿಯರಿಗೆ ಝಾಡಿಸಿದ್ದಾರೆ.

ʼʼಕೆಲವು ದಿನಗಳ ಹಿಂದೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಣ್ಣು ರಫಾದತ್ತ ನೆಟ್ಟಿತ್ತು. ಈಗ ಅವರ ಕಣ್ಣು ಮುಚ್ಚಿದೆ. ಅವರಿಗೆ ಮುಸ್ಲಿಂ ಭಯೋತ್ಪಾದಕರು ಹಿಂದೂ ಯಾತ್ರಾರ್ಥಿಗಳನ್ನು ಹತ್ಯೆ ಮಾಡಿರುವುದು ಕಾಣಿಸುತ್ತಿಲ್ಲʼʼ ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ರೋಹಿತ್‌ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್, ಮಾಧುರಿ ದೀಕ್ಷಿತ್‌ ಮುಂತಾದವರ ಮೌನವನ್ನೂ ಟೀಕಿಸಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ಇಬ್ಬಗೆಯ ನೀತಿ ಮತ್ತೊಮ್ಮೆ ಬಟಾ ಬಯಲಾಗಿದೆ.

ಇದನ್ನೂ ಓದಿ: Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

Continue Reading
Advertisement
Actor Darshan
ಕರ್ನಾಟಕ18 mins ago

Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!

Kiran Bedi announces her biopic by director Kushaal Chawla
ಬಾಲಿವುಡ್27 mins ago

Kiran Bedi: ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್‌: ಕುಶಾಲ್ ಚಾವ್ಲಾ ಆ್ಯಕ್ಷನ್‌ ಕಟ್‌!

mayank agarwal
ಕ್ರೀಡೆ27 mins ago

Mayank Agarwal: ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌

Rahul Gandhi
ದೇಶ28 mins ago

Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

Narendra Modi
ದೇಶ55 mins ago

Narendra Modi: ಜೂನ್‌ 21ರ ಯೋಗ ದಿನದಂದು ವಿಶೇಷ ಸ್ಥಳದಲ್ಲಿ ಮೋದಿ ಯೋಗ; ಯಾವುದದು?

Kuwait fire
ಪ್ರಮುಖ ಸುದ್ದಿ1 hour ago

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

IND vs USA
ಕ್ರಿಕೆಟ್1 hour ago

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

Kathua Terror Attack
ದೇಶ1 hour ago

Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Teachers Recruitment
ಪ್ರಮುಖ ಸುದ್ದಿ1 hour ago

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Dolly Dhananjay mana manakke Kotee Movie release
ಸ್ಯಾಂಡಲ್ ವುಡ್1 hour ago

Dolly Dhananjay: ಬಿಡುಗಡೆಗೂ ಮುನ್ನ ‘ಕೋಟಿ’ ಪೇಯ್ಡ್ ಪ್ರೀಮಿಯರ್ ಶೋ: ಜೂನ್‌ 14ಕ್ಕೆ ತೆರೆಗೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌