Spy camera | ಮಹಿಳೆಯರ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವನ ಸೆರೆ, ಎಲ್ಲಿ ಅಡಗಿರುತ್ತಿತ್ತು ಕಳ್ಳ ಕ್ಯಾಮೆರಾ? - Vistara News

ಕ್ರೈಂ

Spy camera | ಮಹಿಳೆಯರ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವನ ಸೆರೆ, ಎಲ್ಲಿ ಅಡಗಿರುತ್ತಿತ್ತು ಕಳ್ಳ ಕ್ಯಾಮೆರಾ?

ಸ್ಪೈ ಕ್ಯಾಮೆರಾ ಮೂಲಕ ಮಹಿಳೆಯರನ್ನು ಚಿತ್ರಿಸಿಕೊಂಡು ಅದನ್ನು ಬಳಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

VISTARANEWS.COM


on

Spy camera
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಸ್ಪೈ ಕ್ಯಾಮೆರಾದಿಂದ ಕದ್ದು ಅವರ ವಿಡಿಯೋ ಮಾಡಿಕೊಂಡು ನಂತರ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ನಗರ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮಹೇಶ್ (30) ಬಂಧಿತ ಆರೋಪಿ. ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಈತ ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದು, ನಂತರ ಮಹಿಳೆಗೆ ಇನ್‌ಸ್ಟಾಗ್ರಾನಲ್ಲಿ‌ ಮೆಸೇಜ್ ಮಾಡಿದ್ದ. ಫೇಕ್ ಅಕೌಂಟ್‌ನಿಂದ ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡಿದ್ದು, ಅಶ್ಲೀಲವಾಗಿ ಮಾತಾಡುವಂತೆ ಒತ್ತಾಯಿಸಿದ್ದ. ಕೆಲ ವಿಡಿಯೋ ತುಣುಕುಗಳನ್ನು ಕಳಿಸಿ, ಇವುಗಳನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಹೀಗೆ ಚಿತ್ರೀಕರಣ ಮಾಡಲು ಆತ ಮೊಬೈಲ್ ಚಾರ್ಜರ್‌ನಲ್ಲಿ ಇರುವ ಅತಿ ಸೂಕ್ಷ್ಮವಾದ ಕ್ಯಾಮೆರಾವನ್ನು ಬಳಸಿಕೊಂಡಿದ್ದ ಎಂದು ಗೊತ್ತಾಗಿದೆ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಂಧಿತನಿಂದ ಎರಡು ಸ್ಪೈ ಕ್ಯಾಮೆರಾ, ಲ್ಯಾಪ್‌ಟಾಪ್, 2 ಪೆನ್‌ಡ್ರೈವ್, 2 ಮೆಮೊರಿ ಕಾರ್ಡ್, ಎರಡು ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಥುರಾ ದೇವಳದಲ್ಲಿ ಕೃಷ್ಣ ಜನ್ಮಾಷ್ಟಮಿ ವೇಳೆ ಗುಂಪಿನಲ್ಲಿ ಉಸಿರುಗಟ್ಟಿ ಇಬ್ಬರ ಬಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Kidnap Case: ಹಿಂದೂ ಹುಡುಗನ ಜೊತೆಗೆ ಮುಸ್ಲಿಂ ಹುಡುಗಿ ನಾಪತ್ತೆ, ಕಿಡ್ನಾಪ್‌ ದೂರು

Kidnap Case: ಹುಡುಗಿಯನ್ನು ಹುಡುಗ ಬೈಕ್‌ನಲ್ಲಿ ಕರೆದೊಯ್ದಿರುವ ಶಂಕೆ ಇದೆ. ಮೊಬೈಲ್ ಟ್ರೇಸ್ ಮಾಡಿ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರದಲ್ಲಿ ಶಂಕರ್ ಬೈಕ್ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಂಧ್ರದ ಕರ್ನೂಲ್ ಬಸ್ಸು ಹತ್ತಿ ತೆರಳಿರುವುದು ಪತ್ತೆಯಾಗಿದೆ.

VISTARANEWS.COM


on

kidanp case
Koo

ಬೆಂಗಳೂರು: ಪ್ರೀತಿಸುವ ನಾಟಕವಾಡಿ ಬಾಲಕಿಯನ್ನು (Minor girl) ಕಿಡ್ನಾಪ್ (Kidnap Case) ಮಾಡಲಾಗಿದೆ ಎಂದು ಆರೋಪಿಸಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಹುಡುಗಿಯ ಪೋಷಕರು ದೂರು ನೀಡಿದ್ದಾರೆ. ಹುಡುಗಿ ಮುಸ್ಲಿಮಳಾಗಿದ್ದು, ಆಕೆಯ ಜೊತೆಗೆ ತೆರಳಿರುವ ಹುಡುಗ ಹಿಂದೂ ಧರ್ಮದವನಾಗಿದ್ದಾನೆ.

ರಜಿಯಾ ಹಾಗು ಅಬ್ದುಲ್ ರಹಿಂ ಎಂಬುವವರ ಹದಿನಾರು ವರ್ಷದ ಪುತ್ರಿಯನ್ನು ಶಂಕರ್‌ ಎಂಬಾತ ಕಿಡ್ನಾಪ್ ಮಾಡಿದ್ದಾನೆ ಎಂದು ದೂರು ಸಲ್ಲಿಸಲಾಗಿದೆ. ಕಳೆದ ಹದಿನಾಲ್ಕು ದಿನಗಳಿಂದ ಬಾಲಕಿ ಸಿಗದೆ ಪೋಷಕರು ಕಂಗಾಲಾಗಿದ್ದಾರೆ. ಪೋಷಕರು ಈಕೆಯನ್ನು ಕಾಲೇಜಿಗೆ ಬಿಟ್ಟು ಬಂದಿದ್ದರು. ನಂತರ ಕಾಲೇಜಿನಿಂದ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಂದ ಹುಡುಕಾಟ ನಡೆದಿದೆ.

ಮೊಬೈಲ್ ಕೂಡ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಗಿಯನ್ನು ಹುಡುಗ ಬೈಕ್‌ನಲ್ಲಿ ಕರೆದೊಯ್ದಿರುವ ಶಂಕೆ ಇದೆ. ಮೊಬೈಲ್ ಟ್ರೇಸ್ ಮಾಡಿ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರದಲ್ಲಿ ಶಂಕರ್ ಬೈಕ್ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಂಧ್ರದ ಕರ್ನೂಲ್ ಬಸ್ಸು ಹತ್ತಿ ತೆರಳಿರುವುದು ಪತ್ತೆಯಾಗಿದೆ. ಹೀಗಾಗಿ ಆಂದ್ರಪ್ರದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿರಬಹುದು ಎಂದು ತರ್ಕಿಸಲಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದವನ ಬಂಧನ

ಚಿಕ್ಕಬಳ್ಳಾಪುರ: ಮನೆ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಕರೆದೊಯ್ದ 17 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ (Physical Abuse ) ಎಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕಿ ಒಬ್ಬಳೇ ಆಟವಾಡುತ್ತಿದ್ದನ್ನು ಗಮನಿಸಿದ 17ರ ಪೋರ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿದ್ದಾನೆ. ತಿಂಡಿ ಆಸೆಗೆ ಆತನೊಂದಿಗೆ ಬಾಲಕಿ ಹೋಗಿದ್ದಾಳೆ. ಆದರೆ ಅಂಗಡಿ ಕರೆದುಕೊಂಡು ಹೋಗದೇ ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ವಾಪಸ್‌ ಬಾಲಕಿಯನ್ನು ಕಳಿಸಿದ್ದಾನೆ.

ಆದರೆ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಗಮನಿಸಿದ ಪೋಷಕರು ವಿಚಾರಿಸಿದ್ದಾರೆ. ಆಗ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಲಕಿ ಪೋಷಕರು ದೂರು ನೀಡಿದ್ದು, ಅತ್ಯಾಚಾರವೆಸಗಿದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Shawarma: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ಶೀಘ್ರದಲ್ಲೇ ರಾಜ್ಯದಲ್ಲಿ ಶವರ್ಮಾ ಬ್ಯಾನ್ ?

Continue Reading

ದೇಶ

New Criminal Law: ಹೊಸ ಕ್ರಿಮಿನಲ್‌ ಕಾನೂನಿನಂತೆ ಬೀದಿ ವ್ಯಾಪಾರಿ ವಿರುದ್ಧ ಮೊದಲ ಎಫ್‌ಐಆರ್‌ ದಾಖಲು

New Criminal Law: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದು ಜಾರಿಗೆ ಬಂದಿದ್ದು, ಹೊಸದಿಲ್ಲಿಯ ರೈಲ್ವೆ ನಿಲ್ದಾಣದ ಬಳಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೀದಿ ವ್ಯಾಪಾರಿಯ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಗಿದೆ. ಹೊಸ ಕ್ರಿಮಿನಲ್ ಕೋಡ್‌ನ ಸೆಕ್ಷನ್ 285ರ ಅಡಿಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ.

VISTARANEWS.COM


on

New Criminal Law
Koo

ನವದೆಹಲಿ: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದು ಜಾರಿಗೆ ಬಂದಿದೆ (New Criminal Law). ಹೊಸ ಕಾನೂನಿನ ಪ್ರಕಾರ ಹೊಸದಿಲ್ಲಿಯ ರೈಲ್ವೆ ನಿಲ್ದಾಣದ ಬಳಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೀದಿ ವ್ಯಾಪಾರಿಯ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಗಿದೆ.

ಹೊಸ ಕ್ರಿಮಿನಲ್ ಕೋಡ್‌ನ ಸೆಕ್ಷನ್ 285ರ ಅಡಿಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ. ಈ ಕಾನೂನಿನ ಪ್ರಕಾರ ಯಾವುದೇ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸಿದರೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸಂಚರಿಸುವ ಯಾವುದೇ ವ್ಯಕ್ತಿಗೆ ಅಪಾಯ ಅಥವಾ ಗಾಯವನ್ನು ಉಂಟು ಮಾಡಿದರೆ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ಭಾನುವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನೀರಿನ ಬಾಟಲಿಗಳು ಮತ್ತು ಗುಟ್ಕಾ ಮಾರಾಟ ಮಾಡುವ ಬೀದಿ ವ್ಯಾಪಾರಿಯನ್ನು ಗುರುತಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಬೀದಿ ವ್ಯಾಪಾರಿಯ ತಾತ್ಕಾಲಿಕ ಅಂಗಡಿಯು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದನ್ನು ಸ್ಥಳಾಂತರಿಸಲು ಪೊಲೀಸ್‌ ಸಿಬ್ಬಂದಿ ಕೇಳಿಕೊಂಡರೂ ಒಪ್ಪದೇ ಇದ್ದಾಗ ಎಫ್ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ಬೀದಿ ಬದಿ ವ್ಯಾಪಾರಿ ಭಾನುವಾರ ರಾತ್ರಿ ನವದೆಹಲಿ ರೈಲ್ವೆ ನಿಲ್ದಾಣದ ಬಳಿಯ ಪಾದಚಾರಿ ಮೇಲ್ಸೇತುವೆಯ ಕೆಳಗೆ ತನ್ನ ಅಂಗಡಿಯನ್ನು ನಿಲ್ಲಿಸಿದ್ದ ಎಂದು ಹೇಳಲಾಗಿದೆ. “ಆ ವ್ಯಾಪಾರಿಯು ಬೀದಿಯಲ್ಲಿ ನೀರಿನ ಬಾಟಲಿ, ಬೀಡಿ ಮತ್ತು ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಆತನ ಅಂಗಡಿ ಅಡ್ಡಿಯಾಗುತ್ತಿತ್ತು. ರಸ್ತೆಯಿಂದ ಅಂಗಡಿಯನ್ನು ತೆರವುಗೊಳಿಸುವಂತೆ ಸಬ್ ಇನ್ಸ್‌ಪೆಕ್ಟರ್ ಆ ವ್ಯಾಪಾರಿ ಬಳಿ ಹಲವು ಬಾರಿ ಮನವಿ ಮಾಡಿದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವ್ಯಾಪಾರಿಯನ್ನು ಬಿಹಾರದ ಪಾಟ್ನಾ ಮೂಲದ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.

ಏನಿದು ಹೊಸ ಕಾನೂನು?

ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಿತು. ಆದರೆ ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು.

ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯಿದೆಯು (Indian Evidence Act) ಇವೇ ಆ ಮೂರು ಹೊಸ ಕಾನೂನುಗಳು. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ

Continue Reading

ಕ್ರೈಂ

Actor Darshan: ಇಂದಾದ್ರೂ ಭೇಟಿಗೆ ಬರ್ತಾರಾ ದರ್ಶನ್‌ ಅಮ್ಮ, ತಮ್ಮ?

Actor Darshan: ದರ್ಶನ್‌ ತನ್ನ ಕುಟುಂಬದವರ ಜೊತೆಗೆ ಕೂಡ ಸುಮಧುರ ಬಾಂಧವ್ಯ ಹೊಂದಿಲ್ಲ. ಸಹೋದರ ದಿನಕರ್‌ ಮೇಲೆ ಆತ ಈ ಹಿಂದೆ ಹಲ್ಲೆ ನಡೆಸಿದ್ದಿದೆ. ತಾಯಿ ಮೀನಾ ಅವರ ಮಾತು ಕೂಡ ಕೇಳಿಸಿಕೊಳ್ಳದೆ ಪುಂಡಾಟ ಮಾಡಿದ ಉದಾಹರಣೆ ಇದೆ. ಆದರೂ, ಮನೆಯವರು ಬಂದರೆ ಮಾತ್ರ ಒಳಗೆ ಬಿಡಿ ಎಂದು ದರ್ಶನ್‌ ಜೈಲು ಸಿಬ್ಬಂದಿಗೆ ತಿಳಿಸಿದ್ದಾನೆ.

VISTARANEWS.COM


on

Actor Darshan In Central Jail remembering mother and son
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಭೇಟಿಗೆ ಸಹೋದರ ದಿನಕರ್ ಹಾಗೆ ತಾಯಿ ಮೀನಾ ಇಂದು ತೆರಳುವ ಸಾಧ್ಯತೆ ಇದೆ. ಬೆಳಿಗ್ಗೆ 11 ಘಂಟೆ ನಂತರ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೈಲು ಸೇರಿರುವ ದರ್ಶನ್ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರ ಭೇಟಿಗೂ ಮನಸ್ಸು ಮಾಡಿಲ್ಲ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ ಇತ್ತೀಚೆಗೆ ಭೇಟಿಯಾಗಿದ್ದರು.

ಆದರೆ ದರ್ಶನ್‌ ತನ್ನ ಕುಟುಂಬದವರ ಜೊತೆಗೆ ಕೂಡ ಸುಮಧುರ ಬಾಂಧವ್ಯ ಹೊಂದಿಲ್ಲ. ಸಹೋದರ ದಿನಕರ್‌ ಮೇಲೆ ಆತ ಈ ಹಿಂದೆ ಹಲ್ಲೆ ನಡೆಸಿದ್ದಿದೆ. ತಾಯಿ ಮೀನಾ ಅವರ ಮಾತು ಕೂಡ ಕೇಳಿಸಿಕೊಳ್ಳದೆ ಪುಂಡಾಟ ಮಾಡಿದ ಉದಾಹರಣೆ ಇದೆ. ಆದರೂ, ಮನೆಯವರು ಬಂದರೆ ಮಾತ್ರ ಒಳಗೆ ಬಿಡಿ ಎಂದು ದರ್ಶನ್‌ ಜೈಲು ಸಿಬ್ಬಂದಿಗೆ ತಿಳಿಸಿದ್ದಾನೆ.

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

ದರ್ಶನ್‌ ಭೇಟಿ ಮಾಡಿದ ರಕ್ಷಿತಾ- ಪ್ರೇಮ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರನ್ನು (Actor Darshan) ಕೆಲ ಆಪ್ತರು ಭೇಟಿ ಮಾಡುತ್ತಿದ್ದಾರೆ. ಈ ನಡುವೆ ನಟಿ ರಕ್ಷಿತಾ, ಪ್ರೇಮ್ ದಂಪತಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಪ್ರಕರಣದ ಬಗ್ಗೆ ರಕ್ಷಿತಾ, ಪ್ರೇಮ್ ದಂಪತಿ ಬೇಸರ ಹೊರಹಾಕಿದ್ದು, ಇಂತಹ ಪ್ರಕರಣ ನಡೆಯಬಾರದಿತ್ತು ಎಂದು ಹೇಳಿದ್ದಾರೆ.

ನಟ ದರ್ಶನ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಟಿ ರಕ್ಷಿತಾ, ಈ ಘಟನೆ ನಡೆದಿರುವುದು ದುರಾದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದು ಹೇಳಿದರು.

ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯಿಸಿ, ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿ, ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಇದನ್ನೂ ಓದಿ: Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

Continue Reading

ಕ್ರೈಂ

Assault Case: ಜೋಡಿಗೆ ಥಳಿತ; ʼಇದು ಮುಸ್ಲಿಂ ರಾಷ್ಟ್ರ…ʼ ಎಂದ ತೃಣಮೂಲ ಶಾಸಕ

Assault Case: ಬಿದಿರಿನ ದೊಣ್ಣೆಗಳಿಂದ ಇಬ್ಬರನ್ನು ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವ್ಯಕ್ತಿಯನ್ನು ತಜ್ಮುಲ್ ಅಲಿಯಾಸ್ “ಜೆಸಿಬಿ” ಎಂದು ಗುರುತಿಸಲಾಗಿದೆ. ಈತ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದ ಸ್ಥಳೀಯ ಟಿಎಂಸಿ ನಾಯಕ ಎಂದು ಹೇಳಲಾಗಿದೆ.

VISTARANEWS.COM


on

bengal assault case
Koo

ಕೋಲ್ಕತ್ತಾ: ಅನೈತಿಕ ಸಂಬಂಧದಲ್ಲಿ (Illicit relationship) ತೊಡಗಿದ್ದರು ಎನ್ನಲಾದ ಜೋಡಿಯೊಂಧರ ಮೇಲೆ ತೃಣಮೂಲ ಕಾಂಗ್ರೆಸ್ (‌Trinamoola Congress) ಕಾರ್ಯಕರ್ತರು ಅಮಾನುಷವಾಗಿ ಹಲ್ಲೆ (Assault Case) ನಡೆಸಿದ್ದು, ಇದರ ವಿಡಿಯೋ ಕ್ಲಿಪ್ ವೈರಲ್ (viral viedo) ಆದ ನಂತರ ಪಶ್ಚಿಮ ಬಂಗಾಳದ ಪ್ರತಿಪಕ್ಷಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿವೆ. “ಮುಸ್ಲಿಂ ರಾಷ್ಟ್ರ ನೀತಿ ಸಂಹಿತೆ ಪ್ರಕಾರ ನಡೆದುಕೊಳ್ಳಲಾಗಿದೆ…” ಎಂದು ತೃಣಮೂಲ ಕಾಂಗ್ರೆಸ್‌ ಶಾಸಕನೊಬ್ಬ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾನೆ.

ಬಿದಿರಿನ ದೊಣ್ಣೆಗಳಿಂದ ಇಬ್ಬರನ್ನು ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವ್ಯಕ್ತಿಯನ್ನು ತಜ್ಮುಲ್ ಅಲಿಯಾಸ್ “ಜೆಸಿಬಿ” ಎಂದು ಗುರುತಿಸಲಾಗಿದೆ. ಈತ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದ ಸ್ಥಳೀಯ ಟಿಎಂಸಿ ನಾಯಕ ಎಂದು ಹೇಳಲಾಗಿದೆ. ಸ್ಥಳೀಯ ಪಂಚಾಯ್ತಿಯ ತೀರ್ಪಿನ ನಂತರ ಈ ಘಟನೆ ನಡೆದಿದೆ. ಘಟನೆಯ ಕುರಿತು ಪಶ್ಚಿಮ ಬಂಗಾಳ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡು ತಜ್ಮುಲ್‌ನನ್ನು ಬಂಧಿಸಿದ್ದಾರೆ.

ಚೋಪ್ರಾ ಶಾಸಕ ಹಮೀದುಲ್ ರಹಮಾನ್, ಟಿಎಂಸಿಗೆ ತಜ್ಮುಲ್ ಜೊತೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ʼಮಹಿಳೆಯ ಚಟುವಟಿಕೆಗಳು ಅನೈತಿಕವಾಗಿದ್ದವು. ಇದು ಹಳ್ಳಿಯ ವಿಷಯವಾಗಿದ್ದು, ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಘಟನೆಯನ್ನು ಖಂಡಿಸುತ್ತೇವೆ. ಆದರೆ ಮಹಿಳೆಯೂ ತಪ್ಪು ಮಾಡಿದ್ದಾಳೆ. ಅವಳು ತನ್ನ ಗಂಡ, ಮಗ ಮತ್ತು ಮಗಳನ್ನು ತೊರೆದಿದ್ದಾಳೆ. ಮುಸ್ಲಿಂ ರಾಷ್ಟ್ರದ ಪ್ರಕಾರ ಕೆಲವು ನೀತಿ ಸಂಹಿತೆ ಮತ್ತು ನ್ಯಾಯವಿದೆ. ಈಗ ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತೃಣಮೂಲ ಶಾಸಕ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಪಕ್ಷ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಈ ಘಟನೆಗೆ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟಿಎಂಸಿ ಹೇಳಿದೆ.

ಕೇಂದ್ರ ಸಚಿವ ಮತ್ತು ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಅವರು ಟಿಎಂಸಿಯ ಶಾಸಕನ “ಮುಸ್ಲಿಂ ರಾಷ್ಟ್ರ” ಉಲ್ಲೇಖದ ಬಗ್ಗೆ ಆತಂಕಪಟ್ಟಿದ್ದಾರೆ. “ಮುಸ್ಲಿಂ ರಾಷ್ಟ್ರ ಕೆಲವು ನಿಯಮಗಳ ಅಡಿಯಲ್ಲಿ ಶಿಕ್ಷೆಗಳನ್ನು ಚರ್ಚಿಸುವ ಹೇಳಿಕೆಗಳು ಕಳವಳ ಮೂಡಿಸುತ್ತವೆ. ಟಿಎಂಸಿ ಪಶ್ಚಿಮ ಬಂಗಾಳವನ್ನು ಷರಿಯಾ ಕಾನೂನನ್ನು ಅನ್ವಯಿಸುವ ರಾಜ್ಯವೆಂದು ಘೋಷಿಸುತ್ತಿದೆಯೇ?” ಎಂದು ಸುಕಾಂತ ಮಜುಂದಾರ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಂಗಾಳ ಪೊಲೀಸರು ಹೇಳಿದ್ದೇನು?

ಇಸ್ಲಾಂಪುರ ಪೊಲೀಸ್ ಹೇಳಿಕೆಯಲ್ಲಿ, “ಇಸ್ಲಾಂಪುರ ಪಿಡಿ ಅಡಿಯಲ್ಲಿ ಚೋಪ್ರಾ ಪಿಎಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಒಬ್ಬ ವ್ಯಕ್ತಿಯನ್ನು ಪೊಲೀಸರು ತಕ್ಷಣ ಗುರುತಿಸಿ ಬಂಧಿಸಿದ್ದಾರೆ. ಸಂತ್ರಸ್ತ ಜೋಡಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ” ಎಂದು ತಿಳಿಸಿದೆ. ಇಸ್ಲಾಂಪುರ ಪೊಲೀಸ್ ಅಧೀಕ್ಷಕ ಜೋಬಿ ಥಾಮಸ್ ಕೆ. ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕ್ಲಿಪ್ ಅನ್ನು ವೀಕ್ಷಿಸಿದ್ದಾರೆ ಮತ್ತು ಅದನ್ನು ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.

ಭಾರೀ ಸಂಖ್ಯೆಯ ಜನರು ನೋಡುತ್ತಿದ್ದಂತೆಯೇ ನೋವಿನಿಂದ ಅಳುತ್ತಿದ್ದ ಮಹಿಳೆಗೆ ಆರೋಪಿಗಳು ಥಳಿಸಿದ ದೃಶ್ಯ ವೈರಲ್ ಆಗಿದೆ. ಹಲ್ಲೆ ಮಾಡಿದಾತ ಆಕೆಯ ತಲೆಕೂದಲು ಎಳೆದು ಒದೆಯುವುದು ಕಂಡುಬಂದಿತು. ಆರೋಪಿಗಳು ವ್ಯಕ್ತಿಯೊಬ್ಬನಿಗೆ ದೊಣ್ಣೆಗಳಿಂದ ಥಳಿಸಿದ್ದಾರೆ.

ಇದನ್ನೂ ಓದಿ: Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

Continue Reading
Advertisement
Rohit Sharma
ಪ್ರಮುಖ ಸುದ್ದಿ11 mins ago

Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

LPG Price Cut
ವಾಣಿಜ್ಯ11 mins ago

LPG Price Cut: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌; ಕಮರ್ಷಿಯಲ್ ಅಡುಗೆ ಅನಿಲ ದರ 30 ರೂ. ಇಳಿಕೆ

kidanp case
ಕ್ರೈಂ18 mins ago

Kidnap Case: ಹಿಂದೂ ಹುಡುಗನ ಜೊತೆಗೆ ಮುಸ್ಲಿಂ ಹುಡುಗಿ ನಾಪತ್ತೆ, ಕಿಡ್ನಾಪ್‌ ದೂರು

Rakshak Bullet Washed His Father grave
ಸ್ಯಾಂಡಲ್ ವುಡ್23 mins ago

Rakshak Bullet: ಅಜ್ಜಿ-ತಂದೆಯ ಸಮಾಧಿ ತೊಳೆದು ವಿಶೇಷ ವಿಡಿಯೊ ಮಾಡಿದ ರಕ್ಷಕ್ ಬುಲೆಟ್

Team India Captain
ಕ್ರೀಡೆ34 mins ago

Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

Water tank Collapsed
ದೇಶ36 mins ago

Water Tank Collapsed: ಭೀಕರ ದುರಂತ; ಇಬ್ಬರು ಸ್ಥಳದಲ್ಲೇ ಸಾವು-12ಮಂದಿಗೆ ಗಂಭೀರ ಗಾಯ

New Criminal Law
ದೇಶ47 mins ago

New Criminal Law: ಹೊಸ ಕ್ರಿಮಿನಲ್‌ ಕಾನೂನಿನಂತೆ ಬೀದಿ ವ್ಯಾಪಾರಿ ವಿರುದ್ಧ ಮೊದಲ ಎಫ್‌ಐಆರ್‌ ದಾಖಲು

Actor Darshan In Central Jail remembering mother and son
ಕ್ರೈಂ48 mins ago

Actor Darshan: ಇಂದಾದ್ರೂ ಭೇಟಿಗೆ ಬರ್ತಾರಾ ದರ್ಶನ್‌ ಅಮ್ಮ, ತಮ್ಮ?

Rakshit Shetty Visited Koragajja Temple And Prayed
ಸಿನಿಮಾ1 hour ago

Rakshit Shetty: ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ!

Parliament Sessions
ದೇಶ1 hour ago

Parliament Sessions: ಇಂದು ಸಂಸತ್‌ ಕಲಾಪ ಪುನರಾರಂಭ; ʼನೀಟ್‌ʼ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಸಾಧ್ಯತೆ: Live ಇಲ್ಲಿ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು22 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌