ಪುಟ್ಟ ಹುಡುಗನ ಕಳೆದು ಹೋದ ಅಪ್ಪನನ್ನು ಅಲ್ಲಿದ್ದವರು ಹುಡುಕಿದ್ದು ಹೇಗೆ? ಭಾವನಾತ್ಮಕ ವಿಡಿಯೋ ಇದು - Vistara News

ವೈರಲ್ ನ್ಯೂಸ್

ಪುಟ್ಟ ಹುಡುಗನ ಕಳೆದು ಹೋದ ಅಪ್ಪನನ್ನು ಅಲ್ಲಿದ್ದವರು ಹುಡುಕಿದ್ದು ಹೇಗೆ? ಭಾವನಾತ್ಮಕ ವಿಡಿಯೋ ಇದು

ಅಪ್ಪ-ಮಗ ಮತ್ತೆ ಒಂದಾದ ವಿಡಿಯೋವನ್ನು ನೋಡಿ ನೆಟ್ಟಿಗರು ಫುಲ್​ ಖುಷಿ ವ್ಯಕ್ತಪಡಿಸಿದ್ದಾರೆ. ‘ನಮಗಂತೂ ಕಣ್ಣಲ್ಲಿ ನೀರು ಬಂತು‘ ಎಂದು ಅದೆಷ್ಟೋ ಜನ ಕಮೆಂಟ್​ ಮಾಡಿದ್ದಾರೆ.

VISTARANEWS.COM


on

Viral News
ಬಾಲಕ ತನ್ನ ತಂದೆಯಿಂದ ದೂರಾದ ಕ್ಷಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಾತ್ರೆ, ಕಿಕ್ಕಿರಿದ ಜನಸಂದಣಿ ಇರುವ ಸಂತೆಯಲ್ಲೆಲ್ಲ ಮಕ್ಕಳು ಪಾಲಕರ ಕೈ ತಪ್ಪಿಸಿಕೊಳ್ಳುವ ಘಟನೆ ಅಲ್ಲಲ್ಲಿ-ಆಗಾಗ ನಡೆಯುತ್ತಿರುತ್ತದೆ. ಈಗೆಲ್ಲ ಹೀಗೆ ಕಳೆದು ಹೋದ ಮಕ್ಕಳು ಮತ್ತೆ ಅವರ ತಂದೆ-ತಾಯಿ ಮಡಿಲು ಸೇರಲು ವಿಳಂಬ ಆಗುವುದಿಲ್ಲ. ಮೈಕ್​​ನಲ್ಲಿ ಹೇಳಿಯೋ, ಅಲ್ಲಿರುವ ಪೊಲೀಸರ ಹುಡುಕಾಟದೊಂದಿಗೋ ಸಿಕ್ಕಿಬಿಡುತ್ತಾರೆ. ಹೀಗೆ ಅರ್ಜಂಟೀನದಲ್ಲೂ ಇಂಥದ್ದೇ ಒಂದು ಪ್ರಮಾದ ಆಗಿತ್ತು.

ಅದ್ಯಾವುದೋ ರಸ್ತೆ ಬದಿಯ ರೆಸ್ಟೋರೆಂಟ್​. ಅಲ್ಲಿ ಅನೇಕರು ಸೇರಿದ್ದರು. ಒಂದಷ್ಟು ಜನ ಸಂಗೀತ ವಾದ್ಯಗಳನ್ನೂ ನುಡಿಸುತ್ತಿದ್ದರು. ಅಲ್ಲೊಬ್ಬ ಉದ್ದನೆಯ ವ್ಯಕ್ತಿ, ತನ್ನ ತಲೆಯ ಮೇಲೆ ಪುಟ್ಟ ಬಾಲಕನನ್ನು ಕೂರಿಸಿಕೊಂಡು ಅತ್ತಿಂದತ್ತ ಓಡಾಡುತ್ತಿದ್ದಾನೆ. ಆ ಬಾಲಕ ಒಂದೇ ಸಮ ಮೂಗು-ಕಣ್ಣು ಉಜ್ಜಿಕೊಳ್ಳುತ್ತ, ದೊಡ್ಡದಾಗಿ ಅಳುತ್ತಿದ್ದಾನೆ. ಅದ್ಯಾಕೆ ಅಂದರೆ, ಆ ಜನಸಂದಣಿ ಮಧ್ಯೆ ಬಾಲಕ ತನ್ನ ತಂದೆಯ ಕೈ ತಪ್ಪಿಸಿಕೊಂಡಿದ್ದ. ಅಪ್ಪ ಕಾಣದೆ ಕಂಗಾಲಾಗಿ, ಅಳುತ್ತಿದ್ದ. ಅವನನ್ನು ಸಂತೈಸುವ ಸಲುವಾಗಿ ವ್ಯಕ್ತಿಯೊಬ್ಬ ಆತನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡಿದ್ದ.

ಬಾಲಕನಿಗೆ ಸಹಾಯ ಮಾಡಲು ಎಲ್ಲರೂ ನಿಶ್ಚಯಿಸಿದ್ದರು !
ಬಾಲಕ ತನ್ನ ಅಪ್ಪ ಕಾಣದೆ ಅಳುತ್ತಿದ್ದಾನೆಂಬ ವಿಷಯ ಶರವೇಗದಲ್ಲಿ ಅಲ್ಲಿದ್ದವರಿಗೆಲ್ಲ ಗೊತ್ತಾಗಿತ್ತು. ಅಲ್ಲಿ ಸಂಗೀತ ವಾದ್ಯಗಳನ್ನು ನುಡಿಸುತ್ತ, ಹಾಡುತ್ತಿದ್ದವರಿಗೂ ಅರಿವಿಗೆ ಬಂದಿತ್ತು. ಹಾಗಾಗಿ ಎಲ್ಲರೂ ಸೇರಿ ಹುಡುಗನಿಗೆ ಸಹಾಯ ಮಾಡಲು ನಿಶ್ಚಿಯಿಸಿಬಿಟ್ಟಿದ್ದರು. ಬಾಲಕನಿಂದ ಅವನ ಅಪ್ಪನ ಹೆಸರನ್ನು ಕೇಳಿ ತಿಳಿದು, ಎಲ್ಲರೂ ಒಟ್ಟಿಗೇ ಚಪ್ಪಾಳೆ ಹೊಡೆಯುತ್ತ ಆ ಹೆಸರನ್ನೇ ಕರೆಯತೊಡಗಿದರು. ಅಲ್ಲಿದ್ದ ಮ್ಯೂಸಿಷಿಯನ್ಸ್​ ಕೂಡ ವಾದ್ಯ ಸ್ವರದೊಂದಿಗೆ ಆ ಹುಡುಗನ ತಂದೆ ಹೆಸರನ್ನು ಗಾಯನ ಮಾದರಿಯಲ್ಲೇ ಕರೆಯತೊಡಗಿದರು. ಹೀಗೆ ಎಲ್ಲರೂ ಒಂದೇ ಸಮ ಹೆಸರು ಉಚ್ಚರಿಸತೊಡಗಿದಾಗ ಕೊನೆಗೂ ಬಾಲಕನ ತಂದೆಗೆ ಕರೆ ತಲುಪಿದೆ. ಆ ಸ್ಥಳಕ್ಕೆ ಅವರು ಬಂದಿದ್ದಾರೆ. ಕಣ್ಣೆದುರು ಬಂದ ಅಪ್ಪನನ್ನು ಪುಟ್ಟ ಹುಡುಗ ಓಡಿ ಹೋಗಿ ತಬ್ಬಿಕೊಂಡಿದ್ದಾನೆ.

ಈ ವಿಡಿಯೋ ನೋಡಿದವರೆಲ್ಲ ಫುಲ್​ ಖುಷಿಯಾಗಿದ್ದಾರೆ. ಇದೊಂದು ಭಾವನಾತ್ಮಕ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋ ಭರ್ಜರಿ ವೈಲರ್ ಆಗುತ್ತಿದ್ದು 2 ಮಿಲಿಯನ್​ಗೂ ಅಧಿಕ ವೀವ್ಸ್​ ಕಂಡಿದೆ. ‘ನಮಗೆ ಕಣ್ಣಲ್ಲಿ ನೀರು ಬಂತು’ ಎಂದು ಅನೇಕರು ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Land Dispute: ಭೂ ವಿವಾದ ಪ್ರಕರಣ; ಜೀವಂತ ಸಮಾಧಿಯಾದವನನ್ನು ರಕ್ಷಿಸಿದ ಬೀದಿನಾಯಿಗಳು!

Land Dispute: ಭೂ ವಿವಾದದಲ್ಲಿ ಜೀವಂತವಾಗಿ ಸಮಾಧಿ ಮಾಡಿದ ವ್ಯಕ್ತಿಯನ್ನು ನಾಯಿಗಳು ರಕ್ಷಿಸಿದ್ದು ಹೇಗೆ ಗೊತ್ತಾ?ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಮರೆಯುತ್ತಿದ್ದಾರೆ.ಇದರ ಮುಂದೆ ಸಂಬಂಧಗಳಿಗೂ ಬೆಲೆಯಿಲ್ಲ.ಆಸ್ತಿಗಾಗಿ ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ಬೀದಿನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

VISTARANEWS.COM


on

Land Dispute
Koo


ಆಗ್ರಾ: ಹಣ, ಆಸ್ತಿ, ಅಧಿಕಾರದ ಆಸೆಗೆ ಮನುಷ್ಯರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಸಾಕ್ಷಿಯಾಗಿದೆ. ಇಂದಿಗೂ ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಕಳೆದುಕೊಂಡು ಬಹಳ ಕ್ರೂರವಾಗುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ (Land Dispute )ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಸಂತ್ರಸ್ತ ರೂಪ್ ಕಿಶೋರ್ (24) ಎಂಬುದಾಗಿ ತಿಳಿದುಬಂದಿದೆ. ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಜುಲೈ 18 ರಂದು ರೂಪ್ ಕಿಶೋರ್ ಮೇಲೆ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು ಹಲ್ಲೆ ನಡೆಸಿದ್ದರು. ಅವರು ಅವನನ್ನು ಕತ್ತು ಹಿಸುಕಿ ನಂತರ ಅವನು ಸತ್ತಿದ್ದಾನೆಂದು ಭಾವಿಸಿ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ. ಆದರೆ ಅದೃಷ್ಟವಶಾತ್ ಕಿಶೋರ್ ಅವರನ್ನು ಸಮಾಧಿ ಮಾಡಿದ ಪ್ರದೇಶವನ್ನು ಬೀದಿ ನಾಯಿಗಳು ಅಗೆದು ಅವರ ದೇಹವನ್ನು ಕಚ್ಚಿ ತಿನ್ನಲು ಮುಂದಾದಾಗ ಕಿಶೋರ್ ಗೆ ಪ್ರಜ್ಞೆ ಬಂದಿದೆ. ಆಗ ಅವರು ಅಲ್ಲೇ ಹತ್ತಿರದ ಪ್ರದೇಶಕ್ಕೆ ನಡೆದುಕೊಂಡು ಹೋಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿಗಳು ತನ್ನ ಮಗನನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು, ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ, ನಂತರ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ ಎಂದು ಕಿಶೋರ್ ತಾಯಿ ಹೇಳಿದ್ದಾರೆ. ಈ ಬಗ್ಗೆ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

ಆಸ್ತಿಯ ವಿಚಾರಕ್ಕೆ ಜನರು ತಮ್ಮವರ ಮೇಲೆ ಹಲ್ಲೆ ಮಾಡುವ ಪ್ರಕರಣ ಇದೇ ಮೊದಲಲ್ಲಾ. ಈ ಹಿಂದೆ ಜುಲೈ ತಿಳಗಳಿನಲ್ಲಿ ಅನಂತಪುರ ಜಿಲ್ಲೆಯ ಗರ್ಲದಿನ್ನೆ ಮಂಡಲದ ಪೆನಕಚೆರ್ಲಾ ಗ್ರಾಮದಲ್ಲಿ ಆಸ್ತಿ, ಮನೆ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಆಕೆಯನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಜಿಲಾನಿ ಎಂಬ ವ್ಯಕ್ತಿ ತನ್ನ ಸಹೋದರಿ ಮೆಹಬೂಬಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading

Latest

Radhika Merchant: ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

Radhika Merchant: ಹಿಂದೂ ಧರ್ಮದಲ್ಲಿ ಕರಿಮಣಿಗೆ ಅದರದ್ದೇ ಆದ ಸ್ಥಾನವಿದೆ. ಆದರೆ ಈಗ ಫ್ಯಾಷನ್ ನೆಪದಲ್ಲಿ ಕರಿಮಣಿಯನ್ನು ಹಾಕದೇ ಹಾಗೇ ಹೋಗುವವರೂ ಇದ್ದಾರೆ. ಆಗರ್ಭ ಶ್ರೀಮಂತ ಮನೆತನದ ಸೊಸೆ ರಾಧಿಕಾ ಮರ್ಚೆಂಟ್ ತಮ್ಮ ಕುತ್ತಿಗೆಯಲ್ಲಿ ಕರಿಮಣಿಯನ್ನು ಧರಿಸಿರುವುದಕ್ಕೆ ಈಗ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿದೇಶದಲ್ಲಿ ತಾವು ವಿದೇಶಿಯರ ತರಹ ಇರಬೇಕು ಎಂಬ ಹಪಾಹಪಿ ಕೆಲವರಿಗೆ ಇರುತ್ತದೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಿಸಲು ಇಂಡಿಯಾ ಹೌಸ್‌ಗೆ ಭೇಟಿ ನೀಡಿದ ರಾಧಿಕಾ ಮರ್ಚೆಂಟ್ ಕುತ್ತಿಗೆಯಲ್ಲಿ ಕರಿಮಣಿ ನೋಡಿ ಸಂಪ್ರದಾಯವಾದಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ!

VISTARANEWS.COM


on

Radhika Merchant
Koo

ಮುಂಬೈ : ಮದುವೆಯಾದ ಮಹಿಳೆಯರು ಮಂಗಳಸೂತ್ರ ಧರಿಸುವುದು ಹಿಂದೂ ಸಂಸ್ಕೃತಿಯಾಗಿದೆ. ಹಾಗಾಗಿ ಆಗಿನ ಕಾಲದಲ್ಲಿ ಮದುವೆಯಾದ ಎಲ್ಲಾ ಮಹಿಳೆಯರು ಕೊರಳಿನಲ್ಲಿ ಮಂಗಳಸೂತ್ರ ಧರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಕೆಲವು ಮಹಿಳೆಯರು ಮಂಗಳಸೂತ್ರ ಧರಿಸುವುದಿಲ್ಲ. ಫ್ಯಾಷನ್‌ ಹೆಸರಿನಲ್ಲಿ ಕೆಲವರು ಮಂಗಳಸಸೂತ್ರವನ್ನು ಕಾಲಿಗೆ ಕಟ್ಟಿಕೊಂಡಿದ್ದೂ ಇದೆ! ಅಂತಹದರಲ್ಲಿ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ (Radhika Merchant) ಅವರು ಕೊರಳಿನಲ್ಲಿ ಮಂಗಳಸೂತ್ರ ಧರಿಸಿ ಪ್ಯಾರಿಸ್‌ನಲ್ಲಿ ಮಿಂಚಿದ್ದು ಸಾಮಾನ್ಯ ಜನರಲ್ಲಿ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಕಂಡು ಹಲವರು ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ಫೌಂಡೇಶನ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಡಿಯಲ್ಲಿ ಬರುವ ಇಂಡಿಯಾ ಹೌಸ್‍ಗೆ ಐಒಸಿ ಸದಸ್ಯೆಯಾದ ಅನಂತ್ ಅವರ ತಾಯಿ ನೀತಾ ಅಂಬಾನಿಯವರ ಜೊತೆ ಅವರ ಕುಟುಂಬ ಸದಸ್ಯರು 2024ರ ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಿಸಲು ಇಂಡಿಯಾ ಹೌಸ್‍ಗೆ ಭೇಟಿ ನೀಡಿದ್ದಾರೆ. ಆ ವೇಳೆ ನವವಿವಾಹಿತರಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿ ತಮ್ಮ ಕುಟುಂಬದ ಜೊತೆ ಇಂಡಿಯಾ ಹೌಸ್‍ಗೆ ಹೋಗಿದ್ದಾರೆ. ಅವರ ವಿಡಿಯೊಗಳು ಮತ್ತು ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ.

ಈ ವೇಳೆ ರಾಧಿಕಾ ಕಿತ್ತಳೆ ಬಣ್ಣದ ವೆಸ್ಟರ್ನ್ ಡ್ರೆಸ್ ಧರಿಸಿದ್ದರೆ, ಅನಂತ್ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಪ್ರಾಣಿಗಳ ಗುರುತುಗಳನ್ನು ಹೊಂದಿರುವ ಶರ್ಟ್‍ನ್ನು ಧರಿಸಿದ್ದರು. ಆದರೆ ಪ್ಯಾರಿಸ್‍ನಲ್ಲಿ ಫ್ಯಾಶನ್‍ಗಾಗಿ ರಾಧಿಕಾ ವೆಸ್ಟರ್ನ್ ಡ್ರೆಸ್ ಧರಿಸಿದ್ದರೂ ಕೂಡ ಭಾರತದ ಸಂಸ್ಕೃತಿಯನ್ನು ಮರೆಯಲಿಲ್ಲ. ಅವರು ತಮ್ಮ ಕೊರಳಿನಲ್ಲಿ ಮಂಗಳಸೂತ್ರವನ್ನು ಧರಿಸಿದ್ದರು. ಇದನ್ನು ಕಂಡು ಹಲವರು ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಮಂತ ಮನೆತನದ ಸೊಸೆಯಾದರೂ ಸಂಪ್ರದಾಯವನ್ನು ಪಾಲಿಸಿದ್ದಕ್ಕೆ ಹಲವರು ರಾಧಿಕಾಳನ್ನು ಹೊಗಳಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹ ಮಹೋತ್ಸವವು ಭಾರತೀಯ ಆಚರಣೆಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರ ಕುಟುಂಬಗಳಿಗೆ ಆಳವಾದ ಗೌರವವನ್ನು ಬಹಿರಂಗಪಡಿಸಿತ್ತು. ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಹಿಂದೂದೇವರ ಪೋಟೊಗಳನ್ನು ಹಾಕುವುದನ್ನು ಈ ಕುಟುಂಬ ಮರೆಯಲಿಲ್ಲ. ಹಾಗೇ ಮದುವೆಗೂ ಮುನ್ನಕುಟುಂಬದವರು ಮನೆಯಲ್ಲಿ ದೇವರ ಪೂಜೆ, ಹೋಮಗಳನ್ನು ಮಾಡಿಸಿದ್ದರು. ಅಲ್ಲದೇ ಜುಲೈ 12ರಿಂದ 14ರ ತನಕ ಆಚರಿಸಲಾದ ವಿವಾಹಮಹೋತ್ಸವದಲ್ಲಿ ಕೂಡ ಈ ಕುಟುಂಬದವರು ತಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಚಾಚು ತಪ್ಪದೇ ಪಾಲಿಸಿದ್ದಾರೆ.

ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಗೌರಿ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಿಮ್ ಕಾರ್ದಶಿಯಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮದುವೆಗೆ ಸಾಕ್ಷಿಯಾದರು.

ಇದನ್ನೂ ಓದಿ: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

ಜುಲೈ 12ರಂದು ಭವ್ಯ ಸಮಾರಂಭದೊಂದಿಗೆ ವಿವಾಹ ಮಹೋತ್ಸವ ಪ್ರಾರಂಭವಾಯಿತು, ನಂತರ ಜುಲೈ 13ರಂದು ‘ಶುಭ ಆಶೀರ್ವಾದ್’ ಸಮಾರಂಭ ನಡೆಯಿತು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಸಿದ್ಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಜುಲೈ 14ರಂದು ನಡೆದ ನಂತರದ ಭವ್ಯ ಆರತಕ್ಷತೆಯಲ್ಲಿ ಮನರಂಜನಾ ಉದ್ಯಮದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.

Continue Reading

ವೈರಲ್ ನ್ಯೂಸ್

ಜಯಾ ಬಚ್ಚನ್‌ ಯೂಟರ್ನ್‌; ಮೊನ್ನೆ ಅಮಿತಾಭ್‌ ಹೆಸರಿನಿಂದ ಗುರುತಿಸಿದ್ದಕ್ಕೆ ಗರಂ ಆಗಿದ್ದವರು ಸ್ವತಃ ಪತಿಯ ಹೆಸರು ಉಲ್ಲೇಖಿಸಿದರು!

Jaya Bachchan: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್‌ ಬಚ್ಚನ್‌ʼ ಎಂದು ಕರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ

VISTARANEWS.COM


on

Jaya Bachchan
Koo

ನವದೆಹಲಿ: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ (Jaya Bachchan) ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್‌ ಬಚ್ಚನ್‌ʼ ಎಂದು ಕರೆದುಕೊಂಡಿದ್ದಾರೆ. ಊಹಿಸಿರದ ಈ ಬೆಳವಣಿಗೆಯಿಂದ ಒಂದುಕ್ಷಣ ಅಚ್ಚರಿಗೊಳಗಾದ ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಬಳಿಕ ಜೋರಾಗಿ ನಗಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ಈ ವೇಳೆ ಹಾಜರಿದ್ದ ಪ್ರತಿಪಕ್ಷಗಳ ಸದಸ್ಯರಾದ ಕಾಂಗ್ರೆಸ್‌ನ ಜೈರಾಂ ರಮೇಶ್‌ ಮತ್ತು ಆಮ್‌ ಆದ್ಮಿ ಪಾರ್ಟಿಯ ರಾಘವ್‌ ಛಡ್ಡಾ ಅವರ ಮುಖದಲ್ಲಿಯೂ ನಗು ಅರಳಿದೆ.

ರಾಜ್ಯಸಭೆಯಲ್ಲಿ ಏನಾಯ್ತು?

ಜಯಾ ಬಚ್ಚನ್ ಮತ್ತು ಜಗದೀಪ್ ಧನ್ಕರ್ ನಡುವೆ ತಮಾಷೆಯ ಮಾತುಕತೆ ನಡೆಯಿತು. “ನಾನು ಜಯಾ ಅಮಿತಾಭ್‌ ಬಚ್ಚನ್‌ ಮಾತನಾಡುತ್ತಿದ್ದೇನೆ. ಇಂದು ನಿಮಗೆ ಊಟದ ವಿರಾಮ ಸಿಕ್ಕಿದೆಯೇ? ಇಲ್ಲ? ಅದಕ್ಕಾಗಿಯೇ ನೀವು ಜೈರಾಮ್ ಜಿ ಅವರ ಹೆಸರನ್ನು ಪದೇ ಪದೆ ಹೇಳುತ್ತಿದ್ದೀರಿ. ಅವರ ಹೆಸರನ್ನು ಉಲ್ಲೇಖಿಸದೆ ನಿಮಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಜಯಾ ಬಚ್ಚನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನ್ಕರ್, “ನಾನು ಇಂದು ಊಟಕ್ಕೆ ವಿರಾಮ ತೆಗೆದುಕೊಳ್ಳಲಿಲ್ಲ. ಆದರೆ ನಾನು ಜೈರಾಮ್‌ ಅವರೊಂದಿಗೆ ಊಟ ಮಾಡಿದೆʼʼ ಎಂದರು. ಜತೆಗೆ ತಾವು ಜಯಾ ಬಚ್ಚನ್‌ ಮತ್ತು ಅಮಿತಾಭ್‌ ಬಚ್ಚನ್‌ ಅವರ ಅಭಿಮಾನಿ ಎಂದೂ ತಿಳಿಸಿದರು. ಇದಕ್ಕೆ ಕೈಮುಗಿದು ಜಯಾ ಬಚ್ಚನ್‌ ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ಬಿಸಿ ಬಿಸಿ ಚರ್ಚೆಯಿಂದ ಕಾವೇರುತ್ತಿದ್ದ ರಾಜ್ಯಸಭೆ ಕೆಲ ಹೊತ್ತು ನಗೆಗಡಲಲ್ಲಿ ತೇಲಿ ಹಗುರವಾಯಿತು.

ಈ ಹಿಂದೆ ಜಯಾ ಬಚ್ಚನ್‌ ಹೇಳಿದ್ದೇನು?

ಜುಲೈ 29ರಂದು  ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಜಯಾ ಅಮಿತಾಭ್ ಬಚ್ಚನ್ ಜೀ, ದಯವಿಟ್ಟು ಮಾತನಾಡಿʼʼ ಎಂದು ಸದನದಲ್ಲಿ ಜಯಾ ಬಚ್ಚನ್ ಅವರನ್ನು ಕರೆದಿದ್ದರು. ಇದರಿಂದ ಕೆರಳಿದ ಜಯಾ ಬಚ್ಚನ್‌ ಅವರು, ʼʼಸರ್ ನನ್ನನ್ನು ಕೇವಲ ಜಯಾ ಬಚ್ಚನ್ ಎಂದು ಕರೆದರೆ ಸಾಕಿತ್ತುʼʼ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Parliament Session: ಪತಿ ಅಮಿತಾಬ್‌ ಹೆಸರು ಜಯಾ ಬಚ್ಚನ್‌ಗೆ ಅಲರ್ಜಿ! ಸಂಸತ್‌ನಲ್ಲಿ ಆ ಹೆಸರು ಹೇಳಬೇಡಿ ಎಂದ ನಟಿ!

ಆಗ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಸಂಸತ್ತಿನ ದಾಖಲೆಗಳಲ್ಲಿ ಅಧಿಕೃತವಾಗಿ ಜಯಾ ಅಮಿತಾಭ್‌ ಬಚ್ಚನ್ ಎಂದು ನಿಮ್ಮ ಹೆಸರನ್ನು ನೋಂದಾಯಿಸಲಾಗಿದೆʼʼ ಎಂದು ತಿಳಿಸಿದ್ದರು. ʼʼಇದು ಹೊಸ ಸಂಗತಿಯಾಗಿದೆ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಮಹಿಳೆಯರು ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳನ್ನು ಹೊಂದಿಲ್ಲ ಏಕೆ?ʼʼ ಎಂದು ಜಯಾ ಬಚ್ಚನ್ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಮತ್ತೊಮ್ಮೆ ಜಯಾ ಬಚ್ಚನ್‌ ತಮ್ಮ ಹೆಸರಿನ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Continue Reading

ದೇಶ

Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Wayanad Landslide: ದುರಂತ ಸ್ಥಳ ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ಅವರು ವಾಹನದಲ್ಲಿ ಕುಳಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ರಾಹುಲ್‌ ಭೇಟಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾನೆ.

VISTARANEWS.COM


on

wayanad Landslide
Koo

ವಯನಾಡ್‌: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ ಈಗ 300 ದಾಟಿದೆ. ಇನ್ನು ಈ ಮಧ್ಯೆಯೇ, ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರಿಂದ ರಾಹುಲ್‌ ಗಾಂಧಿಯವರಿಗೆ ಭಾರೀ ವಿರೋಧ ವ್ಯಕ್ತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ದುರಂತ ಸ್ಥಳ ವಯನಾಡಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ಅವರು ವಾಹನದಲ್ಲಿ ಕುಳಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ರಾಹುಲ್‌ ಭೇಟಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾನೆ. ವಾಹನದಲ್ಲಿ ಬಂದು ಪರಿಸ್ಥಿತಿ ಅವಲೋಕಿಸುವ ಅವಶ್ಯಕತೆ ಏನಿದೆ? ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಅವರಿಗೆ ನಿಜವಾಗಿಗೆ ಕಾಳಜಿ ಇದ್ದರೆ ವಾಹನದಿಂದ ಕೆಳಗಿಳಿಯಲಿ. ಕಾಲಿಗೆ ಮಣ್ಣಾಗುತ್ತದೆ ಎಂಬಚಿಂತೆಯೇ ಹಾಗಿದ್ದರೆ ಇಲ್ಲಿಗೆ ಬಂದಿದ್ದೇಕೆ? ಏನನ್ನು ನೋಡಲು ಆತ ಬಂದಿದ್ದಾರೆ ಎಂದು ವ್ಯಕ್ತಿಯೊಬ್ಬ ಕೋಪದಲ್ಲಿ ಕಿರುಚುತ್ತಾ ರಾಹುಲ್‌ ಇದ್ದ ವಾಹನವನ್ನು ತಡೆಯುವ ಪ್ರಯತ್ನ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅದಾಗಿಯೂ ಆತನನ್ನು ರಾಹುಲ್‌ ಗಾಂಧಿ ಲೆಕ್ಕಿಸಲೇಇಲ್ಲ. ವಾಹನ ಹಾಗೇ ಮುಂದಕ್ಕೆ ಚಲಿಸಿದೆ. ಆಗ ಆವ್ಯಕ್ತಿ ಮತ್ತಷ್ಟು ಕೋಪದಿಂದ ಕೂಗಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದ್ದು, ಎಲ್ಲರೂ ರಾಹುಲ್‌ ಗಾಂಧಿಯನ್ನು ಪ್ರವಾಸಿಗ ಎಂದು ವ್ಯಂಗ್ಯವಾಡಿದ್ದಾರೆ.

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ಇದನ್ನೂ ಓದಿ: Wayanad Landslide: ವಯನಾಡ್‌ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್‌, ಪ್ರಿಯಾಂಕಾ ಭೇಟಿ ಸ್ಥಗಿತ

Continue Reading
Advertisement
Physical abuse
ದೇಶ9 mins ago

Physical Abuse: ಹಾಸಿಗೆ ಹಿಡಿದಿದ್ದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ

BJP-JDS Padayatra ST Somashekhar
ಪ್ರಮುಖ ಸುದ್ದಿ15 mins ago

BJP-JDS Padayatra: ಅಸಮಾಧಾನಗೊಂಡ ಬಿಜೆಪಿ ಶಾಸಕರಿಂದ ಕಾಂಗ್ರೆಸ್ ಜನಾಂದೋಲನಕ್ಕೆ ಬೆಂಬಲ?

road Accident
ಚಿತ್ರದುರ್ಗ18 mins ago

Road Accident : ಡಿವೈಡರ್‌ಗೆ ಕಾರು ಡಿಕ್ಕಿಯಾಗಿ‌ ವಿದ್ಯಾರ್ಥಿನಿ ಸ್ಪಾಟ್‌ ಡೆತ್‌; ಲಾರಿ ಹರಿದು ಪಾದಚಾರಿ ಸಾವು

Gold Rate Today
ಚಿನ್ನದ ದರ22 mins ago

Gold Rate Today: ಕೊನೆಗೂ ಆಭರಣ ಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಇಳಿಕೆ

Akshay Kumar Bollywood folks send him condolence messages
ಬಾಲಿವುಡ್26 mins ago

Akshay Kumar: ನಾನು ಸತ್ತೇ ಹೋದೆ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ ಎಂದು ಗರಂ ಆದ ಅಕ್ಷಯ್‌ ಕುಮಾರ್‌!

PV Sindhu
ಕ್ರೀಡೆ28 mins ago

PV Sindhu: ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಅವಳಿ ಒಲಿಂಪಿಕ್​ ಪದಕ ವಿಜೇತೆ ಪಿ.ವಿ. ಸಿಂಧು

Ramakrishna Ashram
ರಾಯಚೂರು44 mins ago

Ramakrishna Ashram : ಪೆನ್ನು ಕದ್ದ ಬಾಲಕನನ್ನು ಕತ್ತಲೆ ಕೋಣೆಯಲ್ಲಿ ಕೂಡಿಟ್ಟ; ಮನಸೋ ಇಚ್ಛೆ ಥಳಿಸಿದ ರಾಮಕೃಷ್ಣ ಆಶ್ರಮದ ಗುರೂಜಿ!

IPL 2025
ಕ್ರೀಡೆ59 mins ago

IPL 2025: ಇನ್ನು ಮುಂದೆ ಹೀಗೆ ಮಾಡಿದರೆ ವಿದೇಶಿ ಆಟಗಾರರಿಗೆ ಐಪಿಎಲ್​ನಿಂದ 2 ವರ್ಷ ನಿಷೇಧ?

Wayanad Landslide
ದೇಶ1 hour ago

Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 344ಕ್ಕೆ ಏರಿಕೆ; ರಾಡಾರ್‌ಗೆ ಸಿಕ್ಕ ನಿಗೂಢ ಉಸಿರಾಟ ಯಾರದ್ದು?

meghashree DC Wayanad landslide 2
ಪ್ರಮುಖ ಸುದ್ದಿ1 hour ago

Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌