Bank privatisation | ಬ್ಯಾಂಕ್‌ಗಳ ಖಾಸಗೀಕರಣ ವಿಚಾರದಲ್ಲಿ ಆರ್‌ಬಿಐ ತಟಸ್ಥ: ಗವರ್ನರ್‌ ಶಕ್ತಿಕಾಂತ ದಾಸ್ - Vistara News

ಪ್ರಮುಖ ಸುದ್ದಿ

Bank privatisation | ಬ್ಯಾಂಕ್‌ಗಳ ಖಾಸಗೀಕರಣ ವಿಚಾರದಲ್ಲಿ ಆರ್‌ಬಿಐ ತಟಸ್ಥ: ಗವರ್ನರ್‌ ಶಕ್ತಿಕಾಂತ ದಾಸ್

ಬ್ಯಾಂಕ್‌ಗಳ ಖಾಸಗೀಕರಣ (Bank privatisation) ವಿಚಾರಕ್ಕೂ ಆರ್‌ಬಿಐಗೂ ಸಂಬಂಧ ಇಲ್ಲ, ಬ್ಯಾಂಕಿಂಗ್‌ ವ್ಯವಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಆರ್‌ಬಿಐ ಧ್ಯೇಯ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ವಿವರಿಸಿದ್ದಾರೆ.

VISTARANEWS.COM


on

rbi governer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸಾರ್ವಜನಿಕ ವಲಯದ ಮಾಲಿಕತ್ವ ವಿಚಾರದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿಲುವು ತಟಸ್ಥವಾಗಿದೆ ಎಂದು ( Bank privatisation) ಗವರ್ವರ್‌ ಶಕ್ತಿಕಾಂತ ದಾಸ್‌ ಅವರು ತಿಳಿಸಿದ್ದಾರೆ.

ಬ್ಯಾಂಕಿಂಗ್‌ ವ್ಯವಸ್ಥೆಯು ಸುಗಮವಾಗಿ ನಡೆಯುತ್ತಿರಬೇಕು. ಬ್ಯಾಂಕಿಂಗ್‌ ವಲಯದ ನಿಯಂತ್ರಕನಾಗಿ ಇದನ್ನು ಖಾತರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಆರ್‌ಬಿಐನ ಧ್ಯೇಯವಾಗಿದೆ. ಆದರೆ ಬ್ಯಾಂಕ್‌ಗಳ ಮಾಲಿಕತ್ವ ವಿಚಾರದಲ್ಲಿ ಆರ್‌ಬಿಐ ನಿಲುವು ತಟಸ್ಥವಾಗಿದೆ ಎಂದು ಗವರ್ನರ್‌ ಸ್ಪಷ್ಟಪಡಿಸಿದ್ದಾರೆ.

ಆರ್‌ಬಿಐನ ಬುಲೆಟಿನ್‌ನಲ್ಲಿ ಆರ್‌ಬಿಐ ಸಂಶೋಧಕರ ತಂಡದ ಸದಸ್ಯರು ಇತ್ತೀಚೆಗೆ ಸಾರ್ವಜನಿಕ ಬ್ಯಾಂಕ್‌ಗಳ ಬಿಗ್‌ ಬಾಂಗ್‌ ಖಾಸಗೀಕರಣ ಒಳ್ಳೆಯದಲ್ಲ ಎಂದಿದ್ದರು. ಆದರೆ ಇದು ತನ್ನ ಅಧಿಕೃತ ನಿಲುವು ಅಲ್ಲ ಎಂದು ಆರ್‌ಬಿಐ ಬಳಿಕ ಸ್ಪಷ್ಟನೆ ನೀಡಿತ್ತು.

” ಬ್ಯಾಂಕ್‌ಗಳ ಮಾಲೀಕರು ಬ್ಯಾಂಕ್‌ನಲ್ಲಿ ತಮ್ಮ ಷೇರು ಎಷ್ಟು ಇರಬೇಕು ಹಾಗೂ ಎಷ್ಟು ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸಬೇಕುʼʼ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಸಂದರ್ಶನವೊಂದರಲ್ಲಿ ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

Hassan Ali: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಕ್ರಿಕೆಟಿಗ ಹಸನ್‌ ಅಲಿ ಅವರು ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದು ಪೋಸ್ಟ್‌ ಮಾಡುವ ಮೂಲಕ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.

VISTARANEWS.COM


on

Hassan Ali
Koo

ಇಸ್ಲಾಮಾಬಾದ್:‌ ಜಮ್ಮು-ಕಾಶ್ಮೀರದ (Jammu-Kashmir) ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi Terror Attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಬಸ್‌ ಆಳವಾದ ಕಮರಿಗೆ ಬಿದ್ದು, ದುರಂತ ಸಂಭವಿಸಿದೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ʼಆಲ್ ಐಸ್ ಆನ್ ರಿಯಾಸಿʼ (All Eyes on Raesi) ಎನ್ನುವ ಪೋಸ್ಟ್‌ ವೈರಲ್‌ ಆಗಿದೆ. ಇದರ ಬೆನ್ನಲ್ಲೇ, ಉಗ್ರರ ದಾಳಿಯನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗಿ ಹಸನ್‌ ಅಲಿ (Hassan Ali) ಅವರು ಖಂಡಿಸಿದ್ದಾರೆ. ಹಾಗೆಯೇ, ಆಲ್‌ ಐಸ್‌ ಆನ್‌ ವೈಷ್ಣೋದೇವಿ (All Eyes On Vaishno Devi) ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವೈಷ್ಣೋದೇವಿಗೆ ತೆರಳುತ್ತಿದ್ದ ಹಿಂದುಗಳ ಮೇಲೆ ಉಗ್ರರು ದಾಳಿ ನಡೆಸಿದ್ದನ್ನು ಹಸನ್‌ ಅಲಿ ಅವರು ಖಂಡಿಸಿದ್ದಾರೆ. ಹಾಗೆಯೇ, ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದು ಪೋಸ್ಟ್‌ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ವೈಷ್ಣೋದೇವಿ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಸೂಚಿಸುವ ಜತೆಗೆ, ಎಲ್ಲರ ಗಮನವೂ ವೈಷ್ಣೋದೇವಿ ಯಾತ್ರಾಸ್ಥಳದ ಮೇಲಿದೆ ಎಂಬುದನ್ನು ಅವರು ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ತಿಳಿಸಿದ್ದಾರೆ.

ಹಸನ್‌ ಅಲಿ ಇನ್‌ಸ್ಟಾಗ್ರಾಂ ಸ್ಟೋರಿ

ಹಸನ್‌ ಅಲಿ ಪತ್ನಿ ಭಾರತೀಯಳು!

ಹಸನ್‌ ಅಲಿ ಅವರು ಭಾರತದ ಸಮಿಯಾ ಅರ್ಜು ಅವರನ್ನು ಮದುವೆಯಾಗಿದ್ದಾರೆ. ಹರಿಯಾಣದ ಸಮಿಯಾ ಅರ್ಜು ಅವರನ್ನು ಹಸನ್‌ ಅಲಿ ಅವರು 2019ರಲ್ಲಿ ಮದುವೆಯಾಗಿದ್ದಾರೆ. ಈ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಸಮಿಯಾ ಅರ್ಜು ಅವರು ದುಬೈನ ಎಮಿರೇಟ್ಸ್‌ ಏರ್‌ಲೈನ್ಸ್‌ನಲ್ಲಿ ಎಂಜಿನಿಯರ್‌ ಆಗಿದ್ದಾರೆ. ಇಬ್ಬರೂ ಎರಡು ವರ್ಷ ಪ್ರೀತಿಸಿ, ಬಳಿಕ ಮದುವೆಯಾಗಿದ್ದಾರೆ.

ಭಾರತದ ಸೆಲೆಬ್ರಿಟಿಗಳು ಮೌನ

ಇತ್ತೀಚೆಗೆ ಇಸ್ರೇಲ್‌ನ ವೈಮಾನಿಕ ದಾಳಿಯ ನಂತರ ದಕ್ಷಿಣ ಗಾಜಾದಲ್ಲಿ 45 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಳಿಕ ದಕ್ಷಿಣ ಗಾಜಾದ ರಫಾ ನಗರದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರಲ್ಲಿ ʼಆಲ್ ಐಸ್ ಆನ್ ರಫಾʼ ಎಂದು ಬರೆದು, ರಫಾ ನಿರಾಶ್ರಿತರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಈ ಪೋಸ್ಟ್‌ ಅನ್ನು ಭಾರತದ ಸೆಲೆಬ್ರಿಟಿಗಳೂ ಹಂಚಿಕೊಂಡಿದ್ದರು.

ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಆಲಿಯಾ ಭಟ್, ಸಮಂತಾ ರುತ್ ಪ್ರಭು, ತ್ರಿಪ್ತಿ ಡಿಮ್ರಿ, ರಿಚಾ ಚಡ್ಡಾ, ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಮುಂತಾದ ಸೆಲೆಬ್ರಿಟಿಗಳು ʼಆಲ್ ಐಸ್ ಆನ್ ರಫಾʼ ಪೋಸ್ಟ್‌ ಹಂಚಿಕೊಂಡು ಕಂಬನಿ ಮಿಡಿದಿದ್ದರು. ಸದ್ಯ ಇವರೆಲ್ಲ ಭಾರತದಲ್ಲೇ ನಡೆದ ದುರಂತದ ಬಗ್ಗೆ ಮೌನ ವಹಿಸಿದ್ದು ನೆಟ್ಟಿಗರನ್ನು ಕೆರಳಿಸಿದೆ. ʼಆಲ್ ಐಸ್ ಆನ್ ರಿಯಾಸಿʼ ಎನ್ನುವ ಪೋಸ್ಟ್‌ ಈ ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

Continue Reading

ಪ್ರಮುಖ ಸುದ್ದಿ

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

IND vs USA: ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಈ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 9 ರನ್​ಗೆ 4 ವಿಕೆಟ್​ ಕಿತ್ತು ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್​ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಎಡಗೈ ವೇಗಿ ಅರ್ಶದೀಪ್​ ಸಿಂಗ್​(9ಕ್ಕೆ 4 ವಿಕೆಟ್​) ಅವರ ಘಾತಕ ಬೌಲಿಂಗ್​ ದಾಳಿ ಮತ್ತು ಸೂರ್ಯಕುಮಾರ್​ ಯಾದವ್(50*) ಹಾಗೂ ಶಿವಂ ದುಬೆ(31*) ಜೋಡಿ​ಯ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಜತೆಗೆ ಈ ಗೆಲುವಿನೊಂದಿಗೆ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ.

ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

ಸೂರ್ಯ-ದುಬೆ ಆಸರೆ


ಚೇಸಿಂಗ್​ ವೇಳೆ ಭಾರತ ಕೂಡ ಅಮೆರಿಕದಂತೆ ಆರಂಭಿಕ ಆಘಾತ ಎದುರಿಸಿತು. ವಿರಾಟ್​ ಕೊಹ್ಲಿ(0) ಮತ್ತು ರೋಹಿತ್​ ಶರ್ಮ(3) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಬಳಿಕ ಬಂದ ಪಂತ್​ ಕೂಡ ಬಡಬಡನೆ ಒಂದು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 18 ರನ್​ಗೆ ಆಟ ಮುಗಿಸಿದರು. ಪಾಕ್​ ಮೂಲದ ಅಲಿ ಖಾನ್​ ಎಸೆತಕ್ಕೆ ಕ್ಲೀನ್ ಬೌಲ್ಡ್​ ಆದರು. ಅಲ್ಪ ಮೊತ್ತಕ್ಕೆ ಮೂರು ವಿಕೆಟ್​ ಕಳೆದುಕೊಂಡ ಭಾರತ ಒಂದು ಹಂತದಲ್ಲಿ ಈ ಮೊತ್ತವನ್ನು ಬಾರಿಸಲು ಸಾಧ್ಯವೇ ಎಂಬ ಅನುಮಾನ ಕೂಡ ಕಾಡಲಾರಂಭಿಸಿತು. ಆದರೆ, ಹಾರ್ಡ್​ ಹಿಟ್ಟರ್ ಸೂರ್ಯಕುಮಾರ್​ ಯಾದವ್​ ಯಾವುದೇ ಅಪಾಯಕಾರಿ ಹೊಡೆತಗಳಿಗೆ ಮುಂದಾಗದೆ ಸಮಯೋಚಿತ ಬ್ಯಾಟಿಂಗ್​ ನಡೆಸಿ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್​ ನೀಡಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್​ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್​ ಬೇಕಿದ್ದಾಗ ಸೂರ್ಯಕುಮಾರ್​ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್​ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್​ಗೆ ಅಜೇಯ 72 ರನ್​ ಒಟ್ಟುಗೂಡಿಸಿತು. ಸೂರ್ಯಕುಮಾರ್​ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಭರ್ತಿ 50 ರನ್​ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್​ ಬಾರಿಸಿದರು.

ಕೊಹ್ಲಿ ಮೊದಲ ಗೋಲ್ಡನ್​ ಡಕ್​


ಐರ್ಲೆಂಡ್​ ಮತ್ತು ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಡಕ್​ ಸಂಕಟ್ಟಕ್ಕೆ ಸಿಲುಕಿದರು. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದು ಕೊಹ್ಲಿಯ ಮೊದಲ ಗೋಲ್ಡನ್​ ಡಕ್​. ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್​ನಲ್ಲಿ ಶ್ರೇಷ್ಠ ಬ್ಯಾಟಿಂಗ್​ ಮೂಲಕ ಟೂರ್ನಿಯ ಗರಿಷ್ಠ ಸ್ಕೋರರ್​ ಆಗಿದ್ದ ಕೊಹ್ಲಿ ವಿಶ್ವಕಪ್​ ಟೂರ್ನಿಯಲ್ಲಿ ಎಡವುತ್ತಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.

ಪವರ್​ ಪ್ಲೇ ಬಳಿಕ ಚೇತರಿಕೆ ಕಂಡ ಅಮೆರಿಕ


ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಅಮೆರಿಕ ತಂಡ ಭಾರತದ ಬಿಗು ಬೌಲಿಂಗ್​ ದಾಳಿಗೆ ತತ್ತರಿಸಿತು. ಅರ್ಶದೀಪ್ ಸಿಂಗ್​ ಮೊದಲ ಎಸೆತದಲ್ಲೆ ವಿಕೆಟ್​ ಕೆಡವಿದರು. ಮುಂದಿನ ಓವರನಲ್ಲಿ ಮತ್ತೊಂದು ವಿಕೆಟ್​ ಬೇಟೆಯಾಡಿ ಅವಳಿ ಆಘಾತವಿಕ್ಕಿದರು. 3 ರನ್​ಗೆ 2 ವಿಕೆಟ್​ ಕಳೆದುಕೊಂಡ ಅಮೆರಿಕ ಪವರ್​ ಪ್ಲೇಯಲ್ಲಿ ಕೇವಲ 18 ರನ್​ ಮಾತ್ರ ಗಳಿಸಿತು. ಇದು ಟಿ20 ವಿಶ್ವಕಪ್​ ಟೂರ್ನಿಯ ಪವರ್​ ಪ್ಲೇಯಲ್ಲಿ ದಾಖಲಾದ ಕನಿಷ್ಠ ಮೊತ್ತದ 7ನೇ ನಿದರ್ಶನ. 2014ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ವೆಸ್ಟ್​ ಇಂಡೀಸ್​ ವಿರುದ್ಧ 4 ವಿಕೆಟ್​ಗೆ 13 ರನ್​ ಗಳಿಸಿದ್ದು ಸದ್ಯ ಕನಿಷ್ಠ ಮೊತ್ತದ ದಾಖಲೆಯಾಗಿಯೇ ಉಳಿದಿದೆ.

ಇದನ್ನೂ ಓದಿ Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

ಪವರ್​ ಪ್ಲೇ ಬಳಿಕ ಚೇತರಿಕೆ ಕಂಡ ಅಮೆರಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟಿತು. ಅನುಭವಿ ಬೌಲರ್​ಗಳಾದ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ಟಾರ್ಗೆಟ್​ ಮಾಡಿ ಸರಿಯಾಗಿ ದಂಡಿಸಿದರು. ಇಬ್ಬರು ನಾಲ್ಕು ಓವರ್​ ಎಸೆದು ತಲಾ 25 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್​ ಎನಿಸಿಕೊಂಡರು. ಟೂರ್ನಿಯಲ್ಲಿ ಮೊದಲ ಬಾರಿಗೆ ಓವರ್​ ನಡೆಸಿದ ಶಿವಂ ದುಬೆ ಒಂದೇ ಓವರ್​ಗೆ 11 ರನ್​ ಚಚ್ಚಿಸಿಕೊಂಡರು. ಅಚ್ಚರಿ ಎಂದರೆ ಅನುಭವಿ ಮತ್ತು ಹಿರಿಯ ಸ್ಪಿನ್ನರ್​ ರವೀಂದ್ರ ಜಡೇಜಾಗೆ ಈ ಪಂದ್ಯದಲ್ಲಿ ಓವರ್​ ನೀಡಲೇ ಇಲ್ಲ. ಹಾರ್ದಿಕ್​ ಪಾಂಡ್ಯ ನಾಲ್ಕು ಓವರ್​ ಎಸೆದು ಒಂದು ಮೇಡನ್​ ಸಹಿತ 14 ರನ್​ ವೆಚ್ಚದಲ್ಲಿ 2 ವಿಕೆಟ್​ ಕಿತ್ತರು.

ಸ್ಟೀವನ್ ಟೇಲರ್(24) ಮತ್ತು ಎನ್. ಆರ್ ಕುಮಾರ್(27) ರನ್​ ಬಾರಿಸಿ ತಂಡದ ಪರ ಅತ್ಯಧಿಕ ರನ್​ ಕಲೆ ಹಾಕಿದ ಬ್ಯಾಟರ್​ ಎನಿಸಿಕೊಂಡರು. ನ್ಯೂಜಿಲ್ಯಾಂಡ್​ನ ಮಾಜಿ ಆಟಗಾರ ಕೋರಿ ಆ್ಯಂಡರ್ಸನ್​ ತಲಾ 1 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 15 ರನ್​ಗೆ ಆಟಮುಗಿಸಿದರು. ಪಂದ್ಯಕ್ಕೂ ಮುನ್ನ ಭಾರತ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸುವುದಾಗಿ ಹೇಳಿದ್ದ ನಾಯಕ ಆ್ಯರೋನ್​ ಜೋನ್ಸ್​ ಬರೋಬ್ಬರಿ 22 ಎಸೆತ ಎದುರಿಸಿ ಕೇವಲ 11 ರನ್​ ಗಳಿಸಿ ವಿಫಲರಾದರು.

ಅರ್ಶದೀಪ್​ ಜೀವನಶ್ರೇಷ್ಠ ಬೌಲಿಂಗ್​


ಎಡಗೈ ವೇಗಿ ಅರ್ಶ​ದೀಪ್​ ಸಿಂಗ್​ ಈ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 9 ರನ್​ಗೆ 4 ವಿಕೆಟ್​ ಕಿತ್ತು ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್​ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್​ ಹೆಸರಿನಲ್ಲಿತ್ತು. ಅಶ್ವಿನ್​ ಅವರು 2014ರ ಟೂರ್ನಿಯಲ್ಲಿ 11ರನ್​ಗೆ 4 ವಿಕೆಟ್​ ಕೆಡವಿದ್ದರು.

Continue Reading

ದೇಶ

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

ವ್ಯಕ್ತಿಯು ಬಾಲಕಿಯನ್ನು ವಿವಸ್ತ್ರಗೊಳಿಸಿದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಮೊದಲು ವ್ಯಕ್ತಿಯ ತಲೆಯಲ್ಲಿ ಅತ್ಯಾಚಾರದ ಯೋಚನೆ ಇರಬೇಕು. ಬಾಲಕಿಯ ಜತೆ ಲೈಂಗಿಕ ಸಂಪರ್ಕ ಸಾಧಿಸಲು ಮುಂದಾಗಿರಬೇಕು. ಇಲ್ಲದಿದ್ದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಬಾಲಕಿಯನ್ನು ವಿವಸ್ತ್ರಗೊಳಿಸಿದರೆ 376 ಹಾಗೂ 511 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಆಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

VISTARANEWS.COM


on

Court Order
Koo

ಜೈಪುರ: ಬಾಲಕಿಯ ಒಳಉಡುಪನ್ನು ತೆಗೆದು, ಆಕೆಯನ್ನು ಬೆತ್ತಲೆಗೊಳಿಸುವುದು ಅತ್ಯಾಚಾರಕ್ಕೆ ನಡೆಸಿದ ಯತ್ನವಲ್ಲ ಎಂಬುದಾಗಿ ರಾಜಸ್ಥಾನ ಹೈಕೋರ್ಟ್‌ (Rajasthan High Court) ತೀರ್ಪು ನೀಡಿದೆ. ಸುಮಾರು 33 ವರ್ಷಗಳ ಹಿಂದಿನ ಪ್ರಕರಣದ ಕುರಿತು ಆದೇಶ ಹೊರಡಿಸಿದ ನ್ಯಾಯಾಲಯವು, ಯಾವುದೇ ವ್ಯಕ್ತಿಯು ಅಪ್ರಾಪ್ತೆಯ ಒಳಉಡುಪು ಬಿಚ್ಚಿ, ಆಕೆಯನ್ನು ವಿವಸ್ತ್ರಗೊಳಿಸಿದರೆ, ಅದನ್ನು ಅತ್ಯಾಚಾರಕ್ಕೆ ಯತ್ನ (Attempt To Rape) ಮಾಡಿದ ಪ್ರಕರಣ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಅನೂಪ್‌ ಕುಮಾರ್‌ ಧಾಂಡ್‌ ಅವರ ಏಕಸದಸ್ಯ ಪೀಠವು ತಿಳಿಸಿತು.

ಸುಮಾರು 33 ವರ್ಷಗಳ ಹಿಂದೆ ಅಂದರೆ, 1991ರ ಮಾರ್ಚ್‌ 9ರಂದು ವ್ಯಕ್ತಿಯೊಬ್ಬ 6 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ, ಆಕೆಯನ್ನು ವಿವಸ್ತ್ರಗೊಳಿಸಿದ್ದ. ಟೋಂಕ್‌ ಜಿಲ್ಲೆಯ ತೋಡಾರೈಸಿಂಗ್‌ ಪ್ರದೇಶದಲ್ಲಿ ರಾತ್ರಿ 8 ಗಂಟೆಗೆ ಬಾಲಕಿಯನ್ನು ಧರ್ಮಶಾಲೆಯೊಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಬಾಲಕಿಯ ಅಂಡರ್‌ವೇರ್‌ ಬಿಚ್ಚಿ, ಆಕೆಯನ್ನು ಬೆತ್ತಲೆಗೊಳಿಸಿದ್ದ. ಇದಾದ ಬಳಿಕ ಬಾಲಕಿಯು ಜೋರಾಗಿ ಕಿರುಚಿದ ಕಾರಣ ಗ್ರಾಮಸ್ಥರು ಬಂದು ಬಾಲಕಿಯನ್ನು ರಕ್ಷಿಸಿದ್ದರು.

Physical Abuse

ಪ್ರಕರಣದ ಬಳಿಕ ನನ್ನ ಮೊಮ್ಮಗಳ ಮೇಲೆ ಸುವಾಲಾಲ್‌ ಎಂಬಾತ (ಪ್ರಕರಣದ ವೇಳೆ ವ್ಯಕ್ತಿಗೆ 25 ವರ್ಷ ವಯಸ್ಸು) ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬುದಾಗಿ ಬಾಲಕಿಯ ಅಜ್ಜ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ಪ್ರಕರಣವು ಗಂಭೀರ ಸ್ವರೂಪ ಪಡೆದು, ಜಿಲ್ಲಾ ನ್ಯಾಯಾಲಯವು ಸುವಾಲಾಲ್‌ನನ್ನು ಅಪರಾಧಿ ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣೆ ವೇಳೆಯೇ ಸುವಾಲಾಲ್‌ ಎರಡೂವರೆ ತಿಂಗಳು ಜೈಲು ವಾಸ ಅನುಭವಿಸಿದ್ದರು.

ಹೈಕೋರ್ಟ್‌ ಆದೇಶವೇನು?

ಯಾವುದೇ ವ್ಯಕ್ತಿಯು ಬಾಲಕಿಯನ್ನು ವಿವಸ್ತ್ರಗೊಳಿಸಿದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಮೊದಲು ವ್ಯಕ್ತಿಯ ತಲೆಯಲ್ಲಿ ಅತ್ಯಾಚಾರದ ಯೋಚನೆ ಇರಬೇಕು. ಬಾಲಕಿಯ ಜತೆ ಲೈಂಗಿಕ ಸಂಪರ್ಕ ಸಾಧಿಸಲು ಮುಂದಾಗಿರಬೇಕು. ಇಲ್ಲದಿದ್ದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಬಾಲಕಿಯನ್ನು ವಿವಸ್ತ್ರಗೊಳಿಸಿದರೆ 376 ಹಾಗೂ 511 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಆಗುವುದಿಲ್ಲ. ಆದರೆ, ಬಾಲಕಿಯನ್ನು ಬೆತ್ತಲೆಗೊಳಿಸಿದರೆ, ಅದು ಆಕೆಯ ಘನತೆಗೆ ಧಕ್ಕೆ ತಂದಂತೆ. ಸೆಕ್ಷನ್‌ 354ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಬದಲಾಯಿಸಿ, ಸೆಕ್ಷನ್‌ 354ರ ಅಡಿಯಲ್ಲಿ ಮಾತ್ರ ಅಪರಾಧಿ ಎಂದು ಘೋಷಿಸಿತು.

ಇದನ್ನೂ ಓದಿ: Arvind Kejriwal: ದೆಹಲಿ ಹೈಕೋರ್ಟ್‌ನಿಂದ ಸಿಕ್ಕಿಲ್ಲ ರಿಲೀಫ್‌; ಸುಪ್ರೀಂ ಕೋರ್ಟ್‌ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್

Continue Reading

ಪ್ರಮುಖ ಸುದ್ದಿ

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಹೆಣಗಳು ಬೀಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ ಮಾವನ 300 ಕೋಟಿ ರೂ. ಆಸ್ತಿಯನ್ನು ಕಬಳಿಸಲು ಸೊಸೆಯು ಒಂದು ಕೋಟಿ ರೂ. ಸುಪಾರಿ ಕೊಟ್ಟು, ಮಾವನನ್ನು ಕೊಲೆ ಮಾಡಿಸಿದ್ದಾಳೆ. ಮೊದಲು ಹಿಂಟ್‌ ಆ್ಯಂಡ್‌ ರನ್‌ ಪ್ರಕರಣ ಆಗಿದ್ದ ಇದು ಈಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.

VISTARANEWS.COM


on

Mumbai
Koo

ಮುಂಬೈ: ಒಂದು ವಾರದ ಹಿಂದೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದ ಹಿಂಟ್‌ ಆ್ಯಂಡ್‌ ರನ್‌ ಕೇಸ್‌ಗೆ (Hit And Run Case) ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ. ಹಿಂಟ್‌ ಆ್ಯಂಡ್‌ ರನ್‌ಗೆ 82 ವರ್ಷದ ವ್ಯಕ್ತಿಯು ಕಳೆದ ವಾರ ಬಲಿಯಾಗಿದ್ದರು. ಆದರೆ, ಪೊಲೀಸ್‌ ತನಿಖೆಯ ಬಳಿಕ ಭೀಕರ ಮಾಹಿತಿಯೊಂದು ಬಯಲಾಗಿದೆ. ಮಾವನ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಡೆಯಲು ಸೊಸೆಯೇ 1 ಕೋಟಿ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎಂಬ ಸಂಗತಿಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಹೌದು, ನಾಗ್ಪುರ ಪ್ಲಾನಿಂಗ್‌ ಡಿಪಾರ್ಟ್‌ನಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್‌ ಪುಟ್ಟೇವಾರ್ ಎಂಬ ಮಹಿಳೆಯು ಸುಪಾರಿ ಕೊಟ್ಟು ತಮ್ಮ ಮಾವ, 82 ವರ್ಷದ ಪುರುಷೋತ್ತಮ್‌ ಪುಟ್ಟೇವಾರ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಸಂಗತಿಯು ಪೊಲೀಸರ ತನಿಖೆಯಿಂದ ಬಯಲಾಗಿದೆ. “ಮಾವನ ಹತ್ಯೆಗಾಗಿ ಮಹಿಳೆಯು ಸುಪಾರಿ ಕೊಟ್ಟಿದ್ದಾರೆ. ಹಲವು ದುಷ್ಕರ್ಮಿಗಳಿಗೆ 1 ಕೋಟಿ ರೂ. ಕೊಟ್ಟ ಅವರು, ಹಳೆಯ ಕಾರು ಖರೀದಿಸಿ, ಮಾವನಿಗೆ ಡಿಕ್ಕಿ ಹೊಡೆಸಿ ಕೊಂದು ಬಿಡಿ. ಆದರೆ, ಅದು ಅಪಘಾತದ ರೀತಿ ಆಗಿರಬೇಕು ಎಂಬುದಾಗಿ ಸೂಚಿಸಿದ್ದರು” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.

ಅರ್ಚನಾ ಮನೀಶ್‌ ಪಟ್ಟೇವಾರ್‌ ಅವರು ಪತಿಯ ಕಾರಿನ ಚಾಲಕನಾಗಿರುವ ಬಾಗ್ಡೆ, ಇತರ ಆರೋಪಿಗಳಾದ ನೀರಜ್‌ ನಿಮ್ಜೆ ಹಾಗೂ ಸಚಿನ್‌ ಧಾರ್ಮಿಕ್‌ ಎಂಬುವರಿಗೆ ಹಣ ಕೊಟ್ಟು ಸಂಚು ರೂಪಿಸಿದ್ದಾರೆ. ಇವರ ಸಂಚು ಬಯಲಾದ ಬಳಿಕ ಮೂವರನ್ನು ಬಂಧಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆ (IPC), ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಇವರಿಂದ ಎರಡು ಕಾರು, ಮೊಬೈಲ್‌ಗಳು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪುರುಷೋತ್ತಮ್‌ ಪುಟ್ಟೇವಾರ್‌ ಅವರ ಪತ್ನಿ ಶಕುಂತಲಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿದ್ದರು. ಇವರನ್ನು ಭೇಟಿಯಾದ ಪುರುಷೋತ್ತಮ್‌ ಪುಟ್ಟೇವಾರ್‌ ಅವರು ಮನೆಗೆ ವಾಪಸಾಗುವಾಗ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದರು. ಕಾರು ಹಿಂದಿನಿಂದ ಗುದ್ದಿತ್ತು. ಇದೊಂದು ಹಿಂಟ್‌ ಆ್ಯಂಡ್‌ ರನ್‌ ಕೇಸ್‌ ಎಂದೇ ಭಾವಿಸಲಾಗಿತ್ತು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಸೊಸೆಯೇ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಅರ್ಚನಾ ಅವರ ಪತಿಯು ವೃತ್ತಿಯಲ್ಲಿ ವೈದ್ಯರಾಗಿದ್ದು, ಪತ್ನಿಯ ಸಂಚು ತಿಳಿದು ಅವರಿಗೆ ಶಾಕ್‌ ಆಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder case : ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Continue Reading
Advertisement
Hassan Ali
ದೇಶ2 hours ago

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

IND vs USA
ಪ್ರಮುಖ ಸುದ್ದಿ2 hours ago

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

disqualification for hanawala Gram Panchayat Vice President and Cancellation of membership ordered
ಕರ್ನಾಟಕ2 hours ago

Koppala News: ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

Court Order
ದೇಶ3 hours ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ3 hours ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ3 hours ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ4 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ4 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ4 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ4 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌