ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು: ಅದನ್ನ ಕೇಳೋಕೆ ಸಿದ್ದರಾಮಯ್ಯ ಯಾರು ಎಂದ ಕೆ. ಜಿ. ಭೋಪಯ್ಯ - Vistara News

ಕೊಡಗು

ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು: ಅದನ್ನ ಕೇಳೋಕೆ ಸಿದ್ದರಾಮಯ್ಯ ಯಾರು ಎಂದ ಕೆ. ಜಿ. ಭೋಪಯ್ಯ

ವಿಶ್ವ ಹಿಂದೂ ಪರಿಷತ್, ಬಜರಂಗದಳದವರು ಪ್ರತಿ ವರ್ಷ ಅಭ್ಯಾಸ ವರ್ಗ ಮಾಡುತ್ತಾರೆ. ಈ ವರ್ಷ ಕೊಡಗಿನಲ್ಲಿ ಈ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ. ತ್ರಿಶೂಲ ಬ್ಯಾನ್ ಆಗಿದೆಯಾ? ಆತ್ಮರಕ್ಷಣೆ ಅಭ್ಯಾಸ ಮಾಡಿದರೆ ತಪ್ಪೇನು ಎಂದು ಬಿಜೆಪಿ ಮುಖಂಡ ಕೆ ಜಿ ಭೋಪಯ್ಯ ಪ್ರಶ್ನಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಡಗು: ಗನ್ ಹಿಡಿಯೋದು ನಮ್ಮ ಜನ್ಮ ಸಿದ್ದ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಸಿದ್ದರಾಮಯ್ಯ?
ಹೀಗೆ ಏಕವಚನದಲ್ಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸ್ಪೀಕರ್‌ ಕೆ.ಜಿ. ಭೋಪಯ್ಯ ಪ್ರಶ್ನೆ ಹಾಕಿದ್ದಾರೆ. ಕೊಡಗಿನ ಶಾಲೆಯಲ್ಲಿ ಬಜರಂಗದಳದ ವತಿಯಿಂದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ ಪ್ರಕರಣ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಮಡಿಕೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಸ್ರ್ತಾಸ್ತ್ರ ತರಬೇತಿ ಕುರಿತು ಸೋಮವಾರ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, ಈ ಪ್ರಶಿಕ್ಷಣ ವರ್ಗ ಕಾನೂನಿಗೆ ವಿರುದ್ಧವಾದದ್ದು. ನಮ್ಮ ರಾಜ್ಯದಲ್ಲಿ ಗೃಹ ಸಚಿವ, ಶಿಕ್ಷಣ ಸಚಿವರು ಇದ್ದಾರೆಯೇ ಎಂದು ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಭೋಪಯ್ಯ, ಆರ್‌ಎಸ್ಎಸ್ ಶಿಬಿರದಲ್ಲಿ ಶಾಸಕರು ಭಾಗವಹಿಸಬಾರದು ಅಂತ ಕಾನೂನಿದ್ಯಾ? ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಭೇಟಿ ಕೊಡೋದು ನನ್ನ ಕರ್ತವ್ಯ.. ಗನ್ ಹಿಡಿಯೋದು ನಮ್ಮ ಜನ್ಮ ಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಸಿದ್ದರಾಮಯ್ಯ? ಹೀಗೆಂದು ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.

ಕೆ. ಜಿ. ಬೋಪಯ್ಯ
ಸಿಧರಾಮಯ್ಯ

ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿ ವರ್ಷ ಅಭ್ಯಾಸ ವರ್ಗ ಮಾಡುತ್ತಾರೆ. ಈ ವರ್ಷ ಕೊಡಗಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ. ತ್ರಿಶೂಲ ಬ್ಯಾನ್ ಆಗಿದೆಯಾ? ಸಿದ್ದರಾಮಯ್ಯರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ದಿನಚರಿ ಶುರುವಾಗೋದೆ ಅಲ್ಪಸಂಖ್ಯಾತರನ್ನು ಹೇಗೆ ಓಲೈಸಲಿ‌ ಎನ್ನುವುದರಿಂದ. ಸಿದ್ದರಾಮಯ್ಯ ನಮಗೆ ಸಂವಿಧಾನದ ಬದ್ಧತೆ ಬಗ್ಗೆ ಹೇಳಿ ಕೊಡುವ ಅಗತ್ಯ ಇಲ್ಲ ಎಂದು ಭೋಪಯ್ಯ ಹೇಳಿದ್ದಾರೆ.

ಇವರದೇ ಪಕ್ಷದ ದಲಿತ ಶಾಸಕರೊಬ್ಬರ ಮನೆಗೆ ಡಿ ಜೆ ಹಳ್ಳಿ, ಕೆ ಜೆ ಹಳ್ಳಿಯಲ್ಲಿ ಬೆಂಕಿ ಹಾಕಿದಾಗ ಸಂವಿಧಾನ ಎಲ್ಲೋಗಿತ್ತು? ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ ಮೇಲೆ‌ ದಾಳಿ ಮಾಡಿದಾಗ ಸಂವಿಧಾನ ಇರಲಿಲ್ವಾ..? ಸಿದ್ದರಾಮಯ್ಯ ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು ಎಂದು ಭೋಪಯ್ಯ ಸಲಹೆ ನೀಡಿದ್ದಾರೆ.

ಏರ್ ಗನ್ ಬಳಸಲು ಲೈಸೆನ್ಸ್ ಬೇಕಿಲ್ಲ. ಸೆಲ್ಫ್ ಡಿಫೆನ್ಸ್ ಬೇಕಲ್ವಾ? ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ ಹೌದು, ಆದರೆ ಅದು ಖಾಸಗಿ ಶಾಲೆ. ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡಿದ್ರೆ ಚೆನ್ನಾಗಿರಲ್ಲ, ನಮಗೂ ಮಾತಾಡೋಕೆ ಬರುತ್ತೆ. ಹಿಂದೂ ಸಮಾಜದ ರಕ್ಷಣೆಗೆ ಯುವಕರು ಅಭ್ಯಾಸ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಭೋಪಯ್ಯ ಸಮರ್ಥಿಸಿಕೊಂಡಿದ್ದಾರೆ.
ಎಸ್‌ಡಿಪಿಐ ಸಂಘಟನೆಯವರು ಹಾದಿ ಬೀದಿಯಲ್ಲಿ ಹೋಗೋರು, ಅವರಿಗೆಲ್ಲಾ ಪ್ರತಿಕ್ರಿಯೆ ಕೊಡಲಾರೆ. ಎಸ್‌ಡಿಪಿಐ, ಪಿಎಫ್‌ಐ ಈ ದೇಶಕ್ಕೆ ಮಾರಕ. ಅವುಗಳನ್ನ ಬ್ಯಾನ್ ಮಾಡಬೇಕು. ಎಸ್‌ಡಿಪಿಐ ಪ್ರಕರಣ ದಾಖಲು ಮಾಡಿದೆ, ಮಾಡಲಿ. ಎದುರಿಸುವ ಶಕ್ತಿ ನನಗಿದೆ ಎಂದು ಭೋಪಯ್ಯ ಹೇಳಿದ್ದಾರೆ.

ಇದನ್ನೂ ಓದಿ| ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಖಂಡಿಸಿ‌ದ ಎಸ್‌ಡಿಪಿಐ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka weather : ಇಂದು ಕರಾವಳಿ, ಮಲೆನಾಡಿನಲ್ಲಿ ಹಗುರ, ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

Karnataka Weather Forecast : ರಾಜ್ಯಾದ್ಯಂತ ನೈರುತ್ಯ ಮುಂಗಾರು ದುರ್ಬಲಗೊಂಡಿದೆ. ಇದರ ನಡುವೆಯೂ ಕರಾವಳಿ, ಮಲೆನಾಡು ಭಾಗದಲ್ಲಿ ಹಗುರದಿಂದ ಕೂಡಿದ ಮಳೆಯಾದರೆ, ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Karnataka weather Forecast
Koo

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಒಳನಾಡಿನ ಕೆಲವು ಭಾಗಗಳಲ್ಲಿ ಹಗುರದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ (Rain News) ಗುಡುಗು ಸಾಥ್‌ ನೀಡಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು, ವಿಜಯಪುರ, ಯಾದಗಿರಿಯ ಪ್ರತ್ಯೇಕ ಸ್ಥಳದಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಆದರೆ ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ಇದನ್ನೂ ಓದಿ: Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

ಹೆಚ್ಚಿನ ಜನಕ್ಕೆ ಬೆಳಗಿನ ತಿಂಡಿಯ ಮಹತ್ವವೇ ತಿಳಿದಿರುವುದಿಲ್ಲ. ಈ ಮಾತನ್ನು ಹೇಳುವುದಕ್ಕೂ ಕಾರಣವಿದೆ. ಬೆಳಗ್ಗೆ (Morning Nutrition) ತಿಂಡಿಯನ್ನು ಎದ್ದ ನಾಲ್ಕು ತಾಸುಗಳ ನಂತರ ತಿನ್ನುವುದು, ಕೆಲವೊಮ್ಮೆ ತಿಂಡಿಯನ್ನೇ ತಿನ್ನದಿರುವುದು, ದಿನದ ಪ್ರಾರಂಭಕ್ಕೆ ಸೂಕ್ತ ಅಲ್ಲದ್ದನ್ನು ತಿನ್ನುವುದು, ಕೇವಲ ಕಾಫಿ/ಟೀ ಕುಡಿದು ಮಧ್ಯಾಹ್ನ ಊಟ ಮಾಡುವುದು- ಇಂಥ ಉದಾಹರಣೆಗಳು ಕಡಿಮೆಯೇನಿಲ್ಲ. ಆದರೆ ಬೆಳಗಿನ ತಿಂಡಿಯನ್ನು ದಿನದ ಅತ್ಯಂತ ಆರೋಗ್ಯಕರ ಊಟವನ್ನಾಗಿ ಮಾಡುವುದು ಮಹತ್ವದ್ದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ರಾತ್ರಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಅಧಿಕ ಸತ್ವಗಳನ್ನು ಹೊಂದಿದ ಆಹಾರವನ್ನೇ ತಿನ್ನಬೇಕು ಎಂದಾದರೆ, ಏಕೆ ಹಾಗೆ? ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಸುವುದು ಸಾಧ್ಯವಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳು ಮನದಲ್ಲಿದ್ದರೆ, ಅವಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ ಇರುವಂಥ ಆಹಾರ ಅಗತ್ಯ. ಈ ಸತ್ವಗಳ ಮಿಶ್ರಣವು ದೇಹವು ದೀರ್ಘಕಾಲದವರೆಗೆ ಬಳಲದಂತೆ ನೋಡಿಕೊಳ್ಳುತ್ತದೆ. ದಿನವಿಡೀ ಅಗತ್ಯವಾದ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ ಮತ್ತು ಆಹಾರ ತಿಂದ ತೃಪ್ತಿಯನ್ನು ಒದಗಿಸುತ್ತದೆ. ಜೊತೆಗೆ, ಬೇಗ ಹಸಿವಾಗುವುದನ್ನು ತಡೆಯುತ್ತದೆ. ಇಂಥ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಗ್ರಾಸವನ್ನು ಒದಗಿಸಿಕೊಡುತ್ತದೆ. ಈ ಬಗ್ಗೆ ವಿವರಣೆ ಇಲ್ಲಿದೆ.

South Indian breakfast

ಸಂಕೀರ್ಣ ಪಿಷ್ಟಗಳು

ನಮ್ಮೆಲ್ಲ ಚಟುವಟಿಕೆಗಳನ್ನು ಮಾಡುವುದಕ್ಕೆ ನಮಗೆ ಪಿಷ್ಟ ಅಥವಾ ಕಾರ್ಬೊಹೈಡ್ರೇಟ್‌ಗಳು ಬೇಕು. ಆದರೆ ಮೈದಾ ಅಥವಾ ಸಂಸ್ಕರಿತ ತಿನಿಸುಗಳಿಂದ ಬರುವಂಥ ಸರಳ ಪಿಷ್ಟವಲ್ಲ, ದೀರ್ಘ ಕಾಲದವರೆಗೆ ಶಕ್ತಿಯನ್ನು ಉಣಿಸುವಂಥ ಸಂಕೀರ್ಣವಾದ ಪಿಷ್ಟಗಳು ಬೇಕು. ಇದನ್ನು ಇಡೀ ಧಾನ್ಯಗಳು, ಓಟ್ಸ್‌, ಸಿರಿ ಧಾನ್ಯಗಳು, ಕಿನೊವಾ, ರಾಗಿ ಮುಂತಾದ ನಾರುಭರಿತ ಅಂದರೆ ತೌಡು ಸಹಿತವಾದ ಧಾನ್ಯಗಳಿಂದ ಪಡೆಯಬಹುದು. ಈ ಧಾನ್ಯಗಳಿಂದ ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ, ಚಿತ್ರಾನ್ನ… ನಿಮಗೆ ಇಷ್ಟವಾದ ಯಾವುದನ್ನಾದರೂ ಮಾಡಿ.

ಪ್ರೊಟೀನ್‌

ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯ. ಇದರಿಂದ ದೇಹದ ರಿಪೇರಿ ಕೆಲಸ, ಹಾರ್ಮೋನುಗಳ ಕ್ಷಮತೆ, ಕಿಣ್ವಗಳ ಉತ್ಪಾದನೆ ಮುಂತಾದ ಮಹತ್ವದ ಕೆಲಸಗಳೆಲ್ಲವೂ ಮಟ್ಟಸವಾಗಿ ಇರುತ್ತದೆ. ಇದಕ್ಕಾಗಿ ಹಾಲು, ಮೊಸರು, ಗ್ರೀಕ್‌ ಯೋಗರ್ಟ್‌, ಪನೀರ್‌, ತೋಫು, ಮೊಟ್ಟೆ, ಕಾಳುಗಳು, ಸೋಯಾ, ಕಾಯಿ ಮತ್ತು ಬೀಜಗಳು ಬೆಳಗಿನ ಆಹಾರದಲ್ಲಿ ಇರಬೇಕು. ಆಮ್ಲೆಟ್‌ ಜೊತೆಗೆ ಇಡೀಧಾನ್ಯದ ಬ್ರೆಡ್‌ ಅಥವಾ ಚಪಾತಿಯಂಥವು ಬೇಕು ಎನ್ನುವುದು ಸ್ಪಷ್ಟವಾಗಿದೆಯಲ್ಲವೇ?

ಆರೋಗ್ಯಕರ ಕೊಬ್ಬು

ಇದು ಸಹ ಅತಿ ಮುಖ್ಯವಾದ ಸತ್ವ. ದೇಹದ ತೂಕವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬು ದೇಹದಲ್ಲಿ ಜಮೆಯಾಗದಂತೆ ಕಾಯ್ದುಕೊಳ್ಳಲು ಇದು ಅಗತ್ಯ. ದೇಹದ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡಲು ಈ ಕೊಬ್ಬು ಬೇಕೇಬೇಕು. ಇದಕ್ಕಾಗಿ ಅವಕಾಡೊ, ಕಾಯಿ-ಬೀಜಗಳು, ತುಪ್ಪ, ಕೊಬ್ಬರಿ ಎಣ್ಣೆಯಂಥ ಆರೋಗ್ಯಕರ ತೈಲಗಳು, ಪೀನಟ್‌ಬಟರ್‌ ಅಥವಾ ಇನ್ನಾವುದಾದರೂ ಬೀಜಗಳ ತುಪ್ಪ- ಇವೆಲ್ಲ ಶರೀರಕ್ಕೆ ಬೇಕು. ಮೆದುಳಿನ ಆರೋಗ್ಯ ರಕ್ಷಣೆಗಂತೂ ಇವು ತೀರಾ ಅಗತ್ಯವಾದವು. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಇಡೀ ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾಗಿದ್ದು.

drinking water

ನೀರು

ಇದಿಷ್ಟರ ಜೊತೆಗೆ ದಿನಕ್ಕೆ ಮೂರು ಲೀ. ನೀರು ಕುಡಿಯುವುದು ಬಹುಮುಖ್ಯ. ರಾತ್ರಿಡೀ ನೀರಿಲ್ಲದೆ ಇರುವಂಥ ದೇಹಕ್ಕೆ ಬೆಳಗಿನ ಹೊತ್ತು ಒಂದೆರಡು ಗ್ಲಾಸ್‌ ನೀರು ಕುಡಿಸಿ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಸಕ್ಕರೆ ರಹಿತವಾದ ಯಾವುದೇ ರಸಗಳನ್ನು ಸೇರಿಸಿಕೊಳ್ಳಬಹುದು. ಜೊತೆಗೆ, ದಿನವಿಡೀ ಹರ್ಬಲ್‌ ಚಹಾಗಳು, ಎಳನೀರು, ರಸಭರಿತ ಹಣ್ಣು-ತರಕಾರಿಗಳು, ಮಜ್ಜಿಗೆ- ಇಂಥವೆಲ್ಲ ದಿನದ ಮೂರು ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Rain News : ಭಾನುವಾರ ರಾಯಚೂರು ಸೇರಿದಂತೆ ಹಲವೆಡೆ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ರಾಯಚೂರು/ಬೆಂಗಳೂರು: ಭಾನುವಾರ ರಾಯಚೂರು ನಗರದಾದ್ಯಂತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ (Rain News) ವಾತಾವರಣ ಕೂಲ್‌ (Karnataka weather Forecast) ಆಗಿತ್ತು. ದಿಢೀರ್‌ ಮಳೆಯಿಂದಾಗಿ ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ಕೊಂಚ ನಿರಾಸೆಯಾಗಿತ್ತು. ಕೆಲವಡೆ ಮಳೆಯಿಂದ ವಾಹನ ಸವಾರರು ಪರದಾಡಿದರು.

ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿತ್ತು. ಕರಾವಳಿಯ ಹಲವು ಕಡೆಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿತ್ತು. ಗೋಕರ್ಣದಲ್ಲಿ 2, ಶಿರಾಲಿ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ 1 ಸೆಂ.ಮೀ ಮಳೆಯಾಗಿತ್ತು.

ಮುಂದಿನ 24 ಗಂಟೆ ಮಳೆ ಸಾಧ್ಯತೆ

ಜೂ. 17, 18, 19 ರಂದು ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಹಗುರದಿಂದ ಕೂಡಿರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಕೂಡಿದ ಮಳೆಯಾಗಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 21 ಡಿ.ಸೆ ಇರಲಿದೆ.

ಬಳಿಕ ಜೂನ್‌ 20 ಮತ್ತು 21ರಂದು ಕರಾವಳಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದೆಡೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Road Accident: ಸುಂಟಿಕೊಪ್ಪ‌ ಬಳಿ ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

Road Accident: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳ ಬಳಿ‌ ಅಪಘಾತ ನಡೆದಿದೆ. ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾರೆ.

VISTARANEWS.COM


on

Road Accident
Koo

ಕೊಡಗು: ಖಾಸಗಿ ಬಸ್ ಹಾಗೂ ದ್ವಿಚಕ್ರ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ, ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳ ಬಳಿ‌ ನಡೆದಿದೆ. ಸುಂಟಿಕೊಪ್ಪ‌ ನಿವಾಸಿ ಪಟ್ಟೆಮನೆ ಲೋಕೇಶ್ ಕುಮಾರ್ (59) ಮೃತ ದುರ್ದೈವಿ.

ಕಳೆದ ಹಲವು ವರ್ಷಗಳಿಂದ ಲೋಕೇಶ್‌ ವಾಹನ ಚಾಲಕರಾಗಿದ್ದರು. ಸುಂಟಿಕೊಪ್ಪದ ಗದ್ದೆಹಳ್ಳ ಬಳಿ‌ ತೆರಳುತ್ತಿದ್ದಾಗ ಖಾಸಗಿ ಬಸ್‌ನೊಂದಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್‌ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!

ಭೀಮಾ ತೀರದಲ್ಲಿ ಗುಂಡಿನ ದಾಳಿ; ರೌಡಿಶೀಟರ್‌ ಸ್ಥಳದಲ್ಲೇ ಸಾವು

ವಿಜಯಪುರ: ಭೀಮಾ ತೀರದಲ್ಲಿ ಗುಂಡಿನ ದಾಳಿ ನಡೆದು, ರೌಡಿಶೀಟರ್‌ ಮೃತಪಟ್ಟಿದ್ದಾನೆ. ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆಯ ಮನೆ ಬಳಿ ಇದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ (Shootout Case) ನಡೆಸಿ ರೌಡಿಶೀಟರ್‌ನ ಕೊಲ್ಲಲಾಗಿದೆ.

ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತ. ಮನೆಯಿಂದ ಚಟಚಟಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಹಂತಕರು ದಾಳಿ ಮಾಡಿದ್ದಾರೆ. ಅಶೋಕ‌ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡಿಗಳು ತಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಅಶೋಕ ಹೊರಬಂದಿದ್ದ. ಕೊಲೆ ಹಾಗೂ ಇತರೆ ಕೇಸ್‌ಗಳಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಯನ್ನು ಹಳೆ ದ್ವೇಷದಿಂದ ಕೊಲೆ ಮಾಡಿರೋ ಸಂಶಯ ಮೂಡಿದೆ.

ಕೊಲೆಗೀಡಾದ ಅಶೋಕ ಪತ್ನಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2ರ ಬಿಜೆಪಿ ಸದಸ್ಯೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಡಚಣ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಓವರ್‌ ಟೇಕ್‌ ವಿಷ್ಯಕ್ಕೆ ಯುವಕನ ಕೊಚ್ಚಿ ಕೊಂದ ದುಷ್ಕರ್ಮಿಗಳು; ಮಗನ ಶವ ಕಂಡು ತಂದೆ ಕಣ್ಣೀರು

murder Case

ಹೊಸಕೋಟೆ: ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನೆ (Murder Case) ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿದ್ದಾನೆ. ನವೀನ್‌ ನಾಯಕ್‌ ಮೃತ (27) ದುರ್ದೈವಿ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್ 75 ಡಾಬ ಬಳಿ ಘಟನೆ ನಡೆದಿದೆ.

ನವೀನ್ ನಾಯಕ್ ಗಂಗಾಪುರ ಗ್ರಾಮದ ನಿವಾಸಿಯಾಗಿದ್ದಾನೆ. ಭಾನುವಾರ ಬೆಳಗಿನ ಜಾವ ತರಕಾರಿ ವ್ಯಾಪಾರಕ್ಕೆ ಕಾರೊಂದರಲ್ಲಿ ಹೋಗುತ್ತಿದ್ದಾಗ, ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದವರನ್ನು ನವೀನ್‌ ನಾಯಕ್‌ ಪ್ರಶ್ನೆ ಮಾಡಿದ್ದ. ಈ ವೇಳೆ ಕಾರಿನಲ್ಲಿದ್ದವರಿಗೂ ನವೀನ್‌ ನಡುವೆ ಗಲಾಟೆ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಸಕೋಟೆ ಡಿವೈಎಸ್‌ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಓವರ್‌ ಟೇಕ್‌ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾರಣಾಂತಿಕವಾಗಿ ನಾಲ್ವರು ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ನವೀನ್‌ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Renuka Swamy Murder:‌ ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!

ರಸ್ತೆ ಬದಿಯಲ್ಲಿ ಬಿದ್ದಿದ್ದ ನವೀನ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Continue Reading

ಮಳೆ

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Rain news : ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆ ಆಗಿದೆ. ಆದರೆ ಕರಾವಳಿ ಭಾಗದಲ್ಲಿ ವರುಣಾರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಭಾನುವಾರ ರಾಜ್ಯಾದ್ಯಂತ ಕೆಲವೆಡೆ ಮಳೆಯ ಸಿಂಚನವಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ (Rain News) ಗುಡುಗು ಸಾಥ್‌ ನೀಡಲಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಜೂನ್‌ 16ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು, ವಿಜಯಪುರ, ಯಾದಗಿರಿಯ ಪ್ರತ್ಯೇಕ ಸ್ಥಳದಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಆದರೆ ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ಇದನ್ನೂ ಓದಿ: Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

ಮತ್ತೊಂದು ವಾರ ಮಳೆ ಎಚ್ಚರಿಕೆ ಕೊಟ್ಟ ತಜ್ಞರು

ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ತಜ್ಞರು ಕೊಟ್ಟಿದ್ದಾರೆ. ಮೊದಲ ಮೂರು ದಿನ ಅಂದರೆ ಜೂ. 17, 18, 19 ರಂದು ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಹಗುರದಿಂದ ಕೂಡಿರಲಿದೆ.

ಬಳಿಕ ಜೂನ್‌ 20 ಮತ್ತು 21ರಂದು ಕರಾವಳಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದೆಡೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಜಲಾಶಯಗಳ ನೀರಿನ ಮಟ್ಟ ಹೀಗಿದೆ

karnataka weather Forecast Dam Level

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Train Accident
ದೇಶ1 min ago

Train Accident: ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ; 5 ಮಂದಿ ಸಾವು

Actor Darshan old interview goes viral Explain About Murder And His Mindset
ಸ್ಯಾಂಡಲ್ ವುಡ್3 mins ago

Actor Darshan: ಕೊಲೆಯನ್ನು ಆತುರದಲ್ಲಿ ಮಾಡಿರ್ತಾನೆ ಬಳಿಕ ಕೊರಗುತ್ತಾನೆ; ದರ್ಶನ್ ಹಳೆಯ ಸಂದರ್ಶನ ವೈರಲ್‌!

Paris Olympics 2024
ಕ್ರೀಡೆ3 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಗೀತ ಗೋವಿಂದಂ ಚಿತ್ರದ ಹಾಡು; ಹರ್ಷ ವ್ಯಕ್ತಪಡಿಸಿದ ರಶ್ಮಿಕಾ-ದೇವರಕೊಂಡ

Actor Darshan case real star upendra react about case
ಸ್ಯಾಂಡಲ್ ವುಡ್9 mins ago

Actor Darshan: ದರ್ಶನ್ & ಗ್ಯಾಂಗ್ ಪೊಲೀಸ್ ವಿಚಾರಣೆ ಲೈವ್ ಸ್ಟ್ರೀಮಿಂಗ್ ಆಗಬೇಕು ಎಂದ ಉಪೇಂದ್ರ!

water Price hike in bwssb
ಬೆಂಗಳೂರು14 mins ago

Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

Maoists Killed
ದೇಶ30 mins ago

Maoists Killed: ಭದ್ರತಾ ಪಡೆಗಳ ಕಾರ್ಯಾಚರಣೆ; ಮತ್ತೆ 4 ಮಾವೋವಾದಿಗಳ ಹತ್ಯೆ

petrol diesel price hike
ಪ್ರಮುಖ ಸುದ್ದಿ38 mins ago

Petrol Diesel Price: ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಇಂದು ಬಿಜೆಪಿ ಮಿಂಚಿನ ಪ್ರತಿಭಟನೆ

Shah Rukh Khan Took ₹1 As Signing Amount For 'Nayak'
ಬಾಲಿವುಡ್47 mins ago

Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು!

Encounter In Bandipora
ದೇಶ1 hour ago

Encounter In Bandipora: ಬಂಡಿಪೋರಾದಲ್ಲಿ ಎನ್‌ಕೌಂಟರ್‌; ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

BAN vs NEP
ಕ್ರೀಡೆ1 hour ago

BAN vs NEP: ಸ್ವಿಮ್ಮಿಂಗ್ ಪೂಲ್​ಗೆ ಜಿಗಿದು ಸಂಭ್ರಮಿಸಿದ ನೇಪಾಳ ಅಭಿಮಾನಿ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ17 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ18 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ23 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌