Fake letter | ಗೆಲಿಲಿಯೋ ಗೆಲಿಲಿ ಅವರ ಹಳೆಯ ಕೈಬರಹದ ಪತ್ರ ಅವರದ್ದಲ್ಲ! - Vistara News

ವೈರಲ್ ನ್ಯೂಸ್

Fake letter | ಗೆಲಿಲಿಯೋ ಗೆಲಿಲಿ ಅವರ ಹಳೆಯ ಕೈಬರಹದ ಪತ್ರ ಅವರದ್ದಲ್ಲ!

ಖ್ಯಾತ ಭೌತವಿಜ್ಞಾನಿ, ಗಣಿತಜ್ಞ ಗೆಲಿಲಿಯೋ ಗೆಲಿಲಿ ಬರೆದಿದ್ದು ಎನ್ನಲಾದ ಪತ್ರವೊಂದನ್ನು ಇದುವರೆಗೂ ಜತನವಾಗಿ ಕಾಪಾಡಿಕೊಳ್ಳಲಾಗಿತ್ತು. ಅದೀಗ ಫೇಕ್‌ (Fake letter) ಎಂದು ಗೊತ್ತಾಗಿದೆ.

VISTARANEWS.COM


on

Galileo Galilei
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

೧೬ನೇ ಶತಮಾನದ ಇಟಲಿಯ ಪ್ರಖ್ಯಾತ ಖಗೋಳಶಾಸ್ತ್ರಜ್ಞ/ ಭೌತಶಾಸ್ತ್ರ/ ಗಣಿತಜ್ಞ ಹಾಗೂ ತತ್ವಜ್ಞಾನಿ ಗೆಲಿಲಿಯೋ ಗೆಲಿಲಿ ಅವರದೆನ್ನಲಾದ ಕೈಬರಹವೀಗ ನಕಲಿ ಎಂದು ಸಾಬೀತಾಗಿದೆ. ಮಿಚಿಗನ್‌ ವಿಶ್ವವಿದ್ಯಾನಿಲಯ ಗೆಲಿಲಿಯೋ ಅವರದೆನ್ನಲಾದ ಕೈಬರಹದ ಪರೀಕ್ಷೆ ನಡೆಸಿದ್ದು, ಅದು ೨೦ನೇ ಶತಮಾನದಲ್ಲಿ ಮಾಡಿದ ಫೋರ್ಜರಿ (Fake letter) ಎಂದು ಬಹಿರಂಗಪಡಿಸಿದೆ.

೧೬ನೇ ಶತಮಾನದಲ್ಲಿ ಗೆಲಿಲಿಯೋ ಅವರೇ ಬರೆದ ಹಾಳೆಯೆಂದು ವಿವರಿಸಲಾದ ಕಾಗದಪತ್ರವೊಂದು ಈವರೆಗೆ ಮಿಚಿಗನ್‌ ವಿಶ್ವವಿದ್ಯಾನಿಲಯದ ಸಂಗ್ರಹದಲ್ಲಿತ್ತು. ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಇಡಲಾಗಿದ್ದ ಈ ಪತ್ರ, ಅದರ ಹೆಮ್ಮೆಯ ಸಂಗ್ರಹಗಳಲ್ಲಿ ಒಂದಾಗಿತ್ತು. ಈಗ ಅದೇ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಈ ಕಾಗದದ ಪರೀಕ್ಷೆ ನಡೆಸಿದ್ದು ಇದೊಂದು ನಕಲಿ ಪತ್ರ ಎಂದು ಬಹಿರಂಗಪಡಿಸಿದ್ದಾರೆ. ಈ ಕಾಗದದಲ್ಲಿ ಇರುವ ವಾಟರ್‌ಮಾರ್ಕ್‌ ೧೮ನೇ ಶತಮಾನಕ್ಕಿಂತ ಹೆಚ್ಚು ಹಳೆಯದಲ್ಲ. ಗೆಲಿಲಿಯೋ ಮರಣಾ ನಂತರದ ನೂರು ವರ್ಷಗಳ ನಂತರದ ಕಾಗದವಿದು ಎಂದು ಹೇಳಿದ್ದಾರೆ.

ಇದೀಗ ಮಿಚಿಗನ್‌ ಗ್ರಂಥಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪತ್ರ ನಕಲಿ ಎಂದು ತಿಳಿದಾದ ಮೇಲೆ, ಗ್ರಂಥಾಲಯದ ಮಧ್ಯಂತರ ಡೀನ್‌, ಡೊನ್ನಾ ಎಲ್‌ ಹೇವರ್ಡ್‌, ಈ ಗೆಲಿಲಿಯೋ ಆ ಗೆಲಿಲಿಯೋ ಅಲ್ಲ ಎಂದು ತಿಳಿದು ಬಹಳ ಬೇಸರವಾಯಿತು. ಎಂದು ನ್ಯೂಯಾರ್ಕ್‌ ಟೈಮ್ಸ್‌ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ೧೯೩೮ರ ನಂತರದ ಹಲವು ಪ್ರಸಿದ್ಧ ವ್ಯಕ್ತಿಗಳ ಕಾಗದ ಪತ್ರಗಳಿವೆ. ವಿಶ್ವವಿದ್ಯಾನಿಲಯದ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದ ಡೆಟ್ರಾಯ್ಟ್‌ ಬ್ಯುಸಿನೆಸ್‌ಮೆನ್‌ ಟ್ರೇಸಿ ಮೆಕ್‌ಗ್ರೆಗರ್‌ ೧೯೩೪ರಲ್ಲಿ ತಾವು ಹರಾಜಿನಲ್ಲಿ ಪಡೆದ ಅಮೂಲ್ಯ ದಾಖಲೆಗಳನ್ನು ನೀಡುವ ಸಂದರ್ಭ ಈ ದಾಖಲೆಯೂ ಅದರಲ್ಲಿ ಬಹುಮುಖ್ಯವಾಗಿತ್ತು. ಅವರ ಪ್ರಕಾರ ಇದು ಪಿಸಾದ ಬಿಷಪ್‌ ಒಬ್ಬರ ಸಂಗ್ರಹದಲ್ಲಿ ೧೮೫೮-೧೯೩೧ರವರೆಗೆ ಇದ್ದಿತ್ತೆಂದು ಹೇಳಲಾದ ಕಾಗದಪತ್ರಗಳಾಗಿವೆ.‌

ಇದನ್ನೂ ಓದಿ | Viral photo | ಅಜ್ಜಿಯ ಶವಪೆಟ್ಟಿಗೆಯೊಂದಿಗೆ ನಗುತ್ತಾ ಕುಳಿತ ಕುಟುಂಬಸ್ಥರು!

ಗೆಲಿಲಿಯೋ ಅವರದ್ದೇ ಎಂದು ನಂಬಲಾಗಿ ಈವರೆಗೆ ವೀಕ್ಷಣೆಗೆ ಇಟ್ಟಿದ್ದ ಈ ಪತ್ರದಲ್ಲಿ ೧೬೦೯ರಲ್ಲಿ ಅವರು ಬರೆದಿದ್ದು ಎನ್ನಲಾದ ದೂರದರ್ಶಕದ ಬಗೆಗಿನ ವಿವರಗಳಿವೆ. ಗೆಲಿಲಿಯೋ ಅವರು ಇಂತಹ ವಿವರಗಳನ್ನು ನಿಜಕ್ಕೂ ಬರೆದಿದ್ದು, ಇದರ ಮುಂದುವರಿದ ಭಾಗ ಇಟಲಿಯ ಫ್ಲಾರೆನ್ಸ್‌ ಕೇಂದ್ರ ಗ್ರಂಥಾಲಯದಲ್ಲಿ ಪ್ರದರ್ಶನಕ್ಕೆ ಲಭ್ಯವಿದೆ. ಜಾರ್ಜಿಯಾ ವಿಶ್ವವಿದ್ಯಾನಿಲಯದ ಇತಿಹಾಸ ತಜ್ಞ ನಿಕ್‌ ವೈಲ್ಡಿಂಗ್‌ ಎನ್ನುವವರು ಇತ್ತೀಚೆಗೆ ಈ ಪತ್ರದ ಬಗ್ಗೆ ಮೊದಲು ಸಂದೇಹ ವ್ಯಕ್ತಪಡಿಸಿದ್ದು, ʻ೧೭ನೇ ಶತಮಾನದ ಡಾಕ್ಯುಮೆಂಟ್‌ ಇವು ಎಂದು ಹೇಳಲು ಕಷ್ಟವೆನಿಸುತ್ತದೆ. ಇದರಲ್ಲಿ ಬಳಸಲಾದ ಕಾಗದ, ಶಾಯಿ, ಹಾಗೂ ಬರಹದ ಶೈಲಿ ಎಲ್ಲವೂ ಅಷ್ಟು ಹಳೆಯದ್ದೆನ್ನುವುದಕ್ಕೆ ಪುಷ್ಟಿ ನೀಡುತ್ತಿಲ್ಲʼ ಎಂದಿದ್ದರು. ವೈಲ್ಡಿಂಗ್‌ ಅವರು ತಮ್ಮ ಸಂದೇಹದ ಬಗ್ಗೆ ವಿವರವಾಗಿ ಮಿಚಿಗನ್‌ ವಿಶ್ವವಿದ್ಯಾನಿಲಯಕ್ಕೆ ಇಮೇಲ್‌ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಿಚಿಗನ್‌ ಮಿಶ್ವವಿದ್ಯಾನಿಲ, ಇದರ ಪರೀಕ್ಷೆಗೆ ಮುಂದಾಯಿತು. ಮೂರು ತಿಂಗಳ ನಂತರ ಹಲವು ಪರೀಕ್ಷೆಗಳಿಂದ ವೈಲ್ಡಿಂಗ್‌ ಅವರ ಸಂದೇಹ ನಿಜವಾಗಿದ್ದು, ಖಂಡಿತವಾಗಿಯೂ ಗೆಲಿಲಿಯೋ ಅವರೇ ಬರೆದ ಕಾಗದಪತ್ರವಲ್ಲ. ಬಹುಶಃ ೧೯೨೦-೩೦ರ ಅಂದಾಜಿನಲ್ಲಿ ಅಂದಿನ ಖ್ಯಾತ ಫೋರ್ಜರ್‌ ಟೋಬಿಯಾ ನಿಕೋತ್ರ ಅವರ ಬಳಿ ಫೋರ್ಜರಿ ಮಾಡಿಸಿದ್ದಿರಬಹುದು ಎಂದು ಬಹಿರಂಗಪಡಿಸಿದೆ.

ಜೊತೆಗೆ ವಿಶ್ವವಿದ್ಯಾನಿಲಯಕ್ಕೆ ೧೯೩೦ಕ್ಕೂ ಮೊದಲು ಗೆಲಿಲಿಯೋ ಅವರದ್ದು ಎಂದು ಹೇಳಲಾಗುವ ಈ ಪತ್ರದ ಬಗೆಗೆ ಖಚಿತವಾದ ಆಧಾರಗಳಿಲ್ಲ. ಜೊತೆಗೆ, ಈ ಕಾಗದವನ್ನು ನಿಕೋತ್ರ ಅವರು ಮಾಡಿದ್ದರೆನ್ನಲಾದ ಇತರ ಫೋರ್ಜರಿಗೆ ಹೋಲಿಕೆ ಮಾಡಿದರೆ, ಇದಕ್ಕೆ ಹೆಚ್ಚು ಪುಷ್ಟಿ ದೊರೆಯುತ್ತಿದೆ. ಹೀಗಾಗಿ, ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ. ಇನ್ನು ಮುಂದೆ ಗೆಲಿಲಿಯೋ ಅವರದ್ದು ಎಂದು ಹೇಳಿ ಈ ಪತ್ರ ಪ್ರದರ್ಶಿಸುವಂತಿಲ್ಲ. ಆದರೆ, ಬಹುಶಃ ನಕಲಿ/ ಫೋರ್ಜರಿ ಪತ್ರಗಳ ಅಧ್ಯಯನಕ್ಕೆ ಬಹುಶಃ ಇದೊಂದು ಉತ್ತಮ ವಸ್ತುವಾಗಬಲ್ಲದು ಎಂದೂ ಹೇಳಿದೆ.

ಇದನ್ನೂ ಓದಿ: ʼಬೈ ಬೈ ಸರ್‌ʼ-ಮೂರೇ ಶಬ್ದದ ರಾಜೀನಾಮೆ ಪತ್ರ ನಮಗೆಲ್ಲ ಮಾದರಿಯೆಂದ ನೆಟ್ಟಿಗರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Karnataka Rain : ಸಮುದ್ರಕ್ಕೆ ಇಳಿಯದಂತೆ ಕಡಲತೀರದಲ್ಲಿ ರೆಡ್ ಫ್ಲ್ಯಾಗ್ ಅಳವಡಿಸಿದರೂ ಹುಚ್ಚಾಟ ತೋರಿದ ಪ್ರವಾಸಿಗರಿಗೆ ಲೈಫ್‌ಗಾರ್ಡ್‌ಗಳು ಬಿಸಿ ಮುಟ್ಟಿಸಿದ್ದಾರೆ. ಅಪಾಯವನ್ನು ಲೆಕ್ಕಿಸದೇ ಈಜಲುತ್ತಿದ್ದವರನ್ನು ದಡಕ್ಕೆ ಎಳೆದು ತಂದು ಥಳಿಸಿದ್ದಾರೆ.

VISTARANEWS.COM


on

By

Karnataka weather Forecast
Koo

ಕಾರವಾರ: ಭಾರಿ ಮಳೆ (Karnataka Rain) ನಡುವೆ ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರನ್ನು ದರದರನೇ ಎಳೆದುತಂದು ಲೈಫ್‌ಗಾರ್ಡ್‌ ಸಿಬ್ಬಂದಿ ಥಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಘಟನೆ ನಡೆದಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಅಬ್ಬರ ಒಂದೆಡೆ ಸಮುದ್ರತೀರದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಅಪಾಯದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಕೆಲ ಪ್ರವಾಸಿಗರು ಸಮುದ್ರಕ್ಕಿಳಿದು, ಈಜುತ್ತಿದ್ದರು. ಅಪಾಯಕಾರಿ ರೀತಿಯಲ್ಲಿ ಅಲೆಗಳು ಅಪ್ಪಳಿಸುತ್ತಿದ್ದರೂ ಲೆಕ್ಕಿಸದೇ ಮೋಜು ಮಸ್ತಿ ಮಾಡುತ್ತಿದ್ದರು.

ಹೀಗಾಗಿ ನೀರಲ್ಲಿ ಈಜಲು ತೆರಳಿದ್ದ ಪ್ರವಾಸಿಗರಿಗೆ ಥಳಿಸಿ ಲೈಫ್‌ಗಾರ್ಡ್‌ಗಳು ದಡಕ್ಕೆ ಕರೆತಂದಿದ್ದಾರೆ. ಬಳಿಕ ಸೂಚನೆಯನ್ನು ನಿರ್ಲಕ್ಷ್ಯಿಸಿ ನೀರಿಗಿಳಿದಿದ್ದಕ್ಕೆ ಹೊಡೆದು ಬುದ್ಧಿ ಹೇಳಿದ್ದಾರೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜತೆಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿಯೇ ನೀರಿಗಿಳಿಯದಂತೆ ಕಡಲತೀರದಲ್ಲಿ ರೆಡ್ ಫ್ಲ್ಯಾಗ್ ಅಳವಡಿಸಿದರೂ ಹುಚ್ಚಾಟ ತೋರಿದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಲಾಗಿದೆ.

ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ ಅಧೋಗತಿ

ಚಿಕ್ಕಮಗಳೂರಿನಲ್ಲಿ ರಣಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಕೇವಲ 7 ದಿನಕ್ಕೆ 96 ಇಂಚು ಪ್ರಮಾಣದ ಮಳೆ ದಾಖಲಾಗಿದೆ. ಇತ್ತ ನಿರಂತರ ಮಳೆಯಿಂದಾಗಿ ಚಾರ್ಮಾಡಿ ಹೆದ್ದಾರಿ ಸಂಚಾರ ಅಧೋಗತಿ ತಲುಪಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ವಾಹನ ಚಲಾಯಿಸಲು ಚಾಲಕರು ಪರದಾಡುತ್ತಿದ್ದಾರೆ. ಮಂಜು ಮಿಶ್ರಿತ ಮಳೆಯಿಂದಾಗಿ ಸಂಚಾರಕ್ಕೆ ಅಡೆತಡೆಯಾಗಿದ್ದು ಜತೆಗೆ ಗುಡ್ಡ ಕುಸಿತದ ಆತಂಕವು ಹೆಚ್ಚಿದೆ. ಕಳೆದ ಭಾನುವಾರ ರಾತ್ರಿ ಚಾರ್ಮಾಡಿಯ ಆಲೆಖಾನ್ ಬಳಿ ಗುಡ್ಡ ಕುಸಿದಿತ್ತು.

ಇದನ್ನೂ ಓದಿ: Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

ಮನೆಗಳಿಗೆ ನುಗ್ಗುತ್ತಿರುವ ನೀರು, ಕೆರೆಯಂತಾದ ಜಮೀನು

ಉತ್ತರಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆ ಅಬ್ಬರಕ್ಕೆ ಹಲವೆಡೆ ಮನೆಗಳಿಗೆ ನೀರು ನುಗ್ಗುತ್ತಿದೆ. ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿ ಹೆದ್ದಾರಿ ಪಕ್ಕದ ಜಮೀನು ಕೆರೆಯಂತಾಗಿತ್ತು. ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಗುಡ್ಡ ಕುಸಿಯುವ ಭೀತಿಯಲ್ಲಿ ಜನರು ಕಾಲಕಳೆಯುತ್ತಿದ್ದಾರೆ. ಕಾರವಾರ, ಅಂಕೋಲಾ ಭಾಗದಲ್ಲಿ ಸಮುದ್ರಕ್ಕೆ ನೀರು ಹರಿದುಹೋಗದೇ ಹಲವೆಡೆ ಅವಾಂತರವೇ ಸೃಷ್ಟಿಯಾಗಿದೆ.

ಇನ್ನೂ ಉತ್ತರಕನ್ನಡದಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಸೂಪಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಜೋಯಿಡಾದ ಗಣೇಶಗುಡಿಯಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೂಪಾ ಜಲಾಶಯದ ಗರಿಷ್ಠ 564 ಮೀ ಸಾಮರ್ಥ್ಯ ಇದ್ದು, ಸದ್ಯ ಜಲಾಶಯದಲ್ಲಿ 532.32 ಮೀ ನೀರು ಸಂಗ್ರಹವಾಗಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಬಾಳ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ತೀರ ಪ್ರದೇಶದ ತೋಟ, ಮನೆಗಳಿಗೆ ನೀರು ನುಗ್ಗಿದೆ. ನೆರೆಯಿಂದಾಗಿ ಗ್ರಾಮದ ಜನರು ಸಂತ್ರಸ್ತರಾಗುವ ಆತಂಕ ಎದುರಾಗಿದೆ. ಮಲೆನಾಡಿನಲ್ಲಿ ಹೆಚ್ಚು ಮಳೆಯಾದ ಕಾರಣ ಗುಂಡಬಾಳ ನದಿ ನೀರಿನಮಟ್ಟ ಏರಿಕೆ ಆಗಿದೆ. ನದಿ ಪಾತ್ರದ ನಿವಾಸಿಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯಾಡಳಿತದಿಂದ ಸೂಚನೆ ನೀಡಿದೆ.

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶ, ಗದ್ದೆ ಸಾಲುಗಳಿಗೆ ಭಾರೀ ಪ್ರಮಾಣದ ನೀರು ಹರಿದುಹೋಗುತ್ತಿದೆ. ಜನವಸತಿ ಪ್ರದೇಶಗಳತ್ತ ನೀರು ನುಗ್ಗಿ, ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ. ಸಗ್ರಿ, ಗುಂಡಿಬೈಲು, ಚಕ್ರತೀರ್ಥ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಜತೆಗೆ ಬೈಲಕೆರೆ, ಕಲ್ಸಂಕ ಮಠದಬೆಟ್ಟು ಜಲಾವೃತಗೊಂಡಿದೆ. ಬೈಲಕೆರೆ ಸಮೀಪ ಮನೆಗಳಿಗೆ ನೀರು ನುಗ್ಗಿ ನೆರೆ ಸೃಷ್ಟಿಯಾಗಿತ್ತು. ಹೀಗಾಗಿ ಗುಂಡಿಬೈಲು ಸಮೀಪ ಐದಾರು ಕುಟುಂಬಗಳ ಸದಸ್ಯರನ್ನು ಅಗ್ನಿಶಾಮಕ ದಳದಿಂದ ರಕ್ಷಣೆ ಮಾಡಲಾಗಿದೆ. ಒಂದು ಮನೆಯ ಮೂವರನ್ನು ರಕ್ಷಣೆ ಮಾಡಿ, ಪಾಡಿಗಾರು ಸಮೀಪ ನಾಲ್ಕು ಮನೆಗಳ ಜನರನ್ನು ಎತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಿದ್ದಾರೆ. ಉಡುಪಿ ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿ ಸಂಪೂರ್ಣ ನೆರೆಯಾಗಿದೆ. ಉಡುಪಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಹುಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದು, ನಗರದ ಗುಂಡಿಬೈಲು ವಾಹನ ಸಂಚಾರ ದುಸ್ತರ ಪರಿಸ್ಥಿತಿಯಲ್ಲಿ ಇದೆ.

ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ದಿನವು ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಅಂಡರ್ ಪಾಸ್ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಸರ್ವಿಸ್ ರಸ್ತೆ ಬ್ಲಾಕ್ ಆಗಿದೆ ಎಂದು ಸ್ಥಳೀಯರು ಕಿಡಿಕಾರಿದರು. ಸ್ಥಳೀಯರ ದೂರಿನ ಹಿನ್ನೆಲೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪರಿಸ್ಥಿತಿ ಅವಲೋಕಿಸಿದರು. ತಕ್ಷಣ ಈ ಸಮಸ್ಯೆಗೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಸರ್ವಿಸ್ ರಸ್ತೆ ಪಕ್ಕದಲ್ಲಿರುವ ಚರಂಡಿ ವ್ಯವಸ್ಥೆ, ಸರಿ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಸರಿಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಾಥ್‌ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Vicky Pedia: ಸಂಜನಾ..ಸಂಜನಾ …`I Love You’ ಸಂಜನಾ; ಬಾಲಕನ ಹಾಡಿಗೆ ಹೊಸ ಟಚ್ ಕೊಟ್ಟ ವಿಕಾಸ್ ವಿಕ್ಕಿಪಿಡಿಯ! 

Vicky Pedia: ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್‌ ಮಾಡಿ ಸಖತ್‌ ಫೇಮಸ್‌ ಆಗಿದ್ದರು. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

VISTARANEWS.COM


on

Vicky Pedia I love you sanjana song trend
Koo

ಬೆಂಗಳೂರು: ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ʻನಾನು ನಂದಿನಿʼ ಹಾಡಿನ ಮೂಲಕ ಸಖತ್‌ ಸೆನ್ಷೇಷನ್‌ ಕ್ರಿಯೇಟ್‌ ಮಾಡಿದವರು ಇವರು. ಸದಾ ಒಂದಲ್ಲ ಒಂದು ಕ್ರಿಯೇಟಿವ್‌ ವಿಡಿಯೊ ಹಂಚಿಕೊಳ್ಳುವ ವಿಕ್ಕಿ ತಂಡ, ಮತ್ತೊಂದು ಹಾಡು ಸಖತ್‌ ಟ್ರೆಂಡ್‌ ಆಗಿದೆ. ಅದುವೆ `I Love you ಸಂಜನಾʼ ಸಾಂಗ್‌.

ಅಸಲಿಗೆ ಈ ಹಾಡನ್ನು ಒಬ್ಬ ಪುಟ್ಟ ಹುಡುಗ ಹಾಡಿ ವಿಡಿಯೊ ಪೋಸ್ಟ್‌ ಮಾಡಿದ್ದ. ಈ ಹಾಡನ್ನು ಹಾಡಿದ ಬಾಲಕನ ಹೆಸರು ರಂಜಿತ್. ಕಲಾರತಿ ಮಹಾದೇವ ಎಂಬುವರ ಇನ್‌ಸ್ಟಾದಲ್ಲಿ ಒರಿಜನಲ್‌ ವಿಡಿಯೊ ಪೋಸ್ಟ್‌ ಆಗಿದೆ. ಈ ಹಾಡಿಗೆ ಸಖತ್‌ ಆಗಿ ಮ್ಯೂಸಿಕ್‌ ಕಂಪೋಸ್‌ ಮಾಡಿ, ರೀಲ್ಸ್‌ ಶೇರ್‌ ಮಾಡಿದ್ದಾರೆ ವಿಕ್ಕಿಪೀಡಿಯಾ ಟೀಂ. ಇನ್ನು ಈ ಹಾಡು ಭರ್ಜರಿ ವೈರಲ್‌ ಆಗುತ್ತಿದ್ದು, ಅನೇಕರು ಹುಕ್‌ಸ್ಟೆಪ್ಸ್‌ ಹಾಕುತ್ತಿದ್ದಾರೆ. ಮಕ್ಕಳು,ದೊಡ್ಡವರು ಸೇರದಂತೆ ಅನೇಕರು ಈ ಹಾಡಿಗೆ ಹೆಜ್ಜೆ ಹಾಕಿ ಶೇರ್‌ ಮಾಡುತ್ತಿದ್ದಾರೆ. ಜತೆಗೆ ಅವರಲ್ಲಿಯೇ ಪರಿಚಯವಿರುವ ಸಂಜನಾ ಹೆಸರುಗಳಿಗೆ ಟ್ಯಾಗ್‌ ಕೂಡ ಮಾಡುತ್ತಿದ್ದಾರೆ. ಈಗಾಗಲೇ ಭಾರಿ ವೀಕ್ಷಣೆ ಕಂಡಿದೆ ಈ ಹಾಡು.

ಏನಿದು ಹಾಡು?

ನಿಮ್ಮ ಅಮ್ಮನ ಕೈಯಲ್ಲಿ ತಲೆ ಬಾಚಿಸಿಕೊಂಡು
ನಿಮ್ಮ ಅಪ್ಪನ ಕೈಯಲ್ಲಿ ಶೂ ಹಾಕಿಸಿಕೊಂಡು
ನೀನೆ ನಡ್ಕೋಂಡ್‌ ಬರ್ತೀರ
ಅದೇ ಕಣೇ ಟ್ರೆಂಡ್‌
ಸಂಜನಾ..i love you ಸಂಜನಾ

ಇದನ್ನೂ ಓದಿ: Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್‌ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್‌ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು.

ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್‌ ಮಾಡಿ ಸಖತ್‌ ಫೇಮಸ್‌ ಆಗಿದ್ದರು. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

Continue Reading

Latest

Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

Viral Video: ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ನೋಡಿದರೆ ಆ ಯುವತಿಯ ಕುರಿತು ಕನಿಕರ ಬರುತ್ತದೆ.

VISTARANEWS.COM


on

Viral Video
Koo

ಕೆಲವೊಂದು ದೇಶಗಳಲ್ಲಿ ಕಪ್ಪು ವರ್ಣದ ಜನರನ್ನು ಕಡೆಗಣಿಸುತ್ತಾರೆ. ಈ ಬಗ್ಗೆ ಅನೇಕರು ಹೋರಾಟ ನಡೆಸಿದರೂ ಕೂಡ ಕಪ್ಪು ಮತ್ತು ಬಿಳಿ ಮನುಷ್ಯರ ನಡುವಿನ ತಾರತಮ್ಯ ನಿಂತಿಲ್ಲ. ಅದರಲ್ಲೂ ಎಲ್ಲರಿಗೂ ಮಾದರಿಯಾಗಬೇಕಾಗಿದ್ದ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳೇ ಇಂತಹ ತಾರತಮ್ಯ ಮಾಡುತ್ತಿರುವುದು ನಿಜವಾಗಲೂ ಬೇಸರದ ವಿಚಾರವೇ ಸರಿ. ಅಮೆರಿಕದಲ್ಲಂತೂ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿರುತ್ತದೆ. ಇದೀಗ ಯುಎಸ್ ಅಧ್ಯಕ್ಷ ಜೋ ಬೈಡನ್ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ನಿರ್ಲಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಇದು ಚರ್ಚೆಗೆ ಕಾರಣವಾಗಿದೆ.

ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಡಿಯೊದಲ್ಲಿ, ಕಪ್ಪು ಅಮೆರಿಕನ್ ಯುವತಿ ಕೈಯಲ್ಲಿ ಬೈಡನ್‌-ಹ್ಯಾರಿಸ್ ಬೋರ್ಡ್‌ ಹಿಡಿದು ಬೈಡನ್ ಅವರನ್ನು ಸ್ವಾಗತಿಸಲು ಆ ಮಹಿಳೆ ಕಾಯುತ್ತಿದ್ದಳು. ಆದರೆ ಯುಎಸ್ ಅಧ್ಯಕ್ಷ ಬೈಡನ್ ಮಹಿಳೆಯನ್ನು ಕಡೆಗಣಿಸಿದ್ದಾರೆ. ಆಕೆಯ ಮೊದಲು ನಿಂತಿದ್ದ ಬಿಳಿ ವರ್ಣದ ಮಹಿಳೆಯರನ್ನು ಹಗ್ ಮಾಡಿದ ಅವರು ಆಕೆಯನ್ನು ಬಿಟ್ಟು ಆಕೆಯ ನಂತರ ನಿಂತ ಬಿಳಿ ವರ್ಣದ ಮತ್ತೊಬ್ಬ ಮಹಿಳೆಯನ್ನು ಹಗ್ ಮಾಡಿದ್ದಾರೆ. ಆಕೆಯನ್ನು ಕಣ್ಣೆತ್ತಿ ನೋಡದ ಅಧ್ಯಕ್ಷರನ್ನು ಕಂಡು ಆಕೆ ಬೇಸರಗೊಂಡಿದ್ದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆ ಅಧ್ಯಕ್ಷರನ್ನು ನೋಡಿದಾಗ ತುಂಬಾ ಖುಷಿಯಾಗಿದ್ದರು ಆದರೆ ಅವಳನ್ನು ಗುರುತಿಸದಿದ್ದಾಗ ನಿರಾಶೆಗೊಂಡರು ಎಂದು ಅದರಲ್ಲಿ ಬರೆಯಲಾಗಿದೆ. ಅಲ್ಲದೇ “ತನ್ನ “ಹೀರೋ ತನ್ನ ಬಣ್ಣದ ಜನರನ್ನು ಇಷ್ಟಪಡುವುದಿಲ್ಲ ಎಂದು ಅವಳು ಅರಿತುಕೊಂಡ ಕ್ಷಣ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೈಡನ್ ಪ್ರಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದರೆ ಬೈಡನ್ ಅವರನ್ನು ಶ್ವೇತಭವನಕ್ಕೆ ಕರೆದೊಯ್ದ ಕಪ್ಪು ವರ್ಣದ ಮತದಾರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತೋರಿಸಿವೆ. ಅಲ್ಲದೇ ಕೆಲವು ಕಪ್ಪು ಮತದಾರರು, ವಿಶೇಷವಾಗಿ ಯುವಕರ ಆರ್ಥಿಕತೆ ಮತ್ತು ಮತದಾರರ ಹಕ್ಕುಗಳ ಆದ್ಯತೆಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ನಲ್ಲಿ ವಾಸ, ಫ್ಲೈಟ್‌ನಲ್ಲಿ ಓಡಾಟ; ಶ್ರೀಮಂತ ಕಳ್ಳನೀಗ ಪೊಲೀಸರ ಬಲೆಗೆ!

“ಟ್ರಂಪ್ ಇದನ್ನು ಪ್ರಚಾರದ ಜಾಹೀರಾತಾಗಿ ನಡೆಸಬೇಕು” ಎಂದು ಕೆಲವರು ಹೇಳಿದ್ದಾರೆ. ಈಗಾಗಲೇ ಜೂನ್‌ನಲ್ಲಿ ಡೆಟ್ರಾಯಿಟ್‍ನ 180 ಚರ್ಚ್‍ನಲ್ಲಿ ಸುಮಾರು 200 ಜನರನ್ನುದ್ದೇಶಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಜೋ ಬೈಡನ್ ಅವರ ಪಾತ್ರವನ್ನು ಟೀಕಿಸುವ ಮೂಲಕ ಕಪ್ಪು ಮತದಾರರನ್ನು ಆಕರ್ಷಿಸಿದರು ಎನ್ನಲಾಗಿದೆ. ಹಾಗಾಗಿ ಅಮೆರಿಕದಲ್ಲಿ ಹೆಚ್ಚಿನ ಬೆಂಬಲ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿದೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Viral Video : ಮೆಟ್ರೊದಲ್ಲಿ ಪರ್ಸ್ ಕದಿಯಲು ಮುಂದಾದ ಕಳ್ಳನಿಗೆ ಬಿತ್ತು ಗೂಸಾ! ವಿಡಿಯೊ ನೋಡಿ

Viral Video: ಕೆಲವರು ದುಡಿಯುವುದಕ್ಕೆ ಆಗದೇ ಕಳ್ಳತನ ಮಾರ್ಗ ಹಿಡಿಯುತ್ತಾರೆ. ಇನ್ನು ಕೆಲವರು ಕಳ್ಳತನವನ್ನೇ ದುಡಿಮೆಯನ್ನಾಗಿಸಿಕೊಳ್ಳುತ್ತಾರೆ. ದೆಹಲಿ ಮೆಟ್ರೋದಲ್ಲಿ ಪರ್ಸ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನಿಗೆ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಈ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ, ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ನೇಮಿಸಲಾದ ಮೆಟ್ರೋ ಮಾರ್ಷಲ್‌ಗಳು ಎಲ್ಲಿದ್ದಾರೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ಬಸ್, ರೈಲು, ಮಾರುಕಟ್ಟೆ, ರಸ್ತೆಗಳಲ್ಲಿ ಜನರ ಬೆಲೆಬಾಳುವ ವಸ್ತುಗಳನ್ನು, ಪರ್ಸ್‌ಗಳನ್ನು ಹಾಡುಹಗಲಿನಲ್ಲಿಯೇ ಜನಸಂದಣಿ ಇರುವಂತಹ ಸ್ಥಳಗಳಲ್ಲಿಯೇ ದರೋಡೆ ಮಾಡುತ್ತಿದ್ದಾರೆ. ಇದೀಗ ದೆಹಲಿ ಮೆಟ್ರೋದಲ್ಲಿ ಪರ್ಸ್ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್ ಕದಿಯಲು ಕಳ್ಳ ಮುಂದಾದಾಗ ವ್ಯಕ್ತಿಯೊಬ್ಬ ಕಳ್ಳನನ್ನು ಹಿಡಿದು ಥಳಿಸಿದ್ದಾನೆ. ಮೆಟ್ರೋ ಒಳಗೆ ಕಳ್ಳನನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಮಧ್ಯವಯಸ್ಕ ವ್ಯಕ್ತಿಯೊಬ್ಬ ಜನಜಂಗುಳಿ ಇರುವ ರೈಲಿನಲ್ಲಿ ಪರ್ಸ್ ಕದಿಯುತ್ತಿದ್ದ ಕಳ್ಳನನ್ನು ಒದೆಯುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಆರೋಪಿಯು ಆ ವ್ಯಕ್ತಿಯ ಬಳಿ ಮತ್ತೆ ಈ ಕೆಲಸ ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಆ ವ್ಯಕ್ತಿಯು ಅವನ ವಿನಂತಿಯನ್ನು ಕೇಳದೆ ಜನಗಳ ಮುಂದೆ ಅವನಿಗೆ ಕಪಾಳಮೋಕ್ಷ ಮಾಡುತ್ತಿದ್ದಾನೆ. ನಂತರ ಆರೋಪಿಯು ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸುತ್ತಾ ವ್ಯಕ್ತಿಯ ಪಾದಗಳನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಆರೋಪಿಯು ಅವನ ಪಾದಗಳನ್ನು ಸ್ಪರ್ಶಿಸಲು ಬಂದಾಗ ಆ ವ್ಯಕ್ತಿ ಅವನ ಎದೆಗೆ ಒದೆಯುತ್ತಾನೆ ಮತ್ತು ನಂತರ ಪದೇ ಪದೇ ಕಪಾಳಮೋಕ್ಷ ಮಾಡುತ್ತಾನೆ.

ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಘಟನೆ ನೆಡೆದ ನಿಖರವಾದ ದಿನಾಂಕ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಈ ವಿಡಿಯೊ ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಈ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ, ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ನೇಮಿಸಲಾದ ಮೆಟ್ರೋ ಮಾರ್ಷಲ್‌ಗಳು ಎಲ್ಲಿದ್ದಾರೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

ಇಂತಹ ಕಳ್ಳತನದ ಪ್ರಕರಣಗಳು ದಿನಕ್ಕೊಂದು ಬೆಳಕಿಗೆ ಬರುತ್ತಿದೆ. ಅದರಲ್ಲೂ ಮೆಟ್ರೋ ಸಿಟಿಗಳಾದ ದೆಹಲಿ, ಬೆಂಗಳೂರಿನಂತಹ ಸ್ಥಳಗಳಲ್ಲಿ ಈ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಜನಸಂದಣಿ ಇರುವ ಸ್ಥಳದಲ್ಲಿ ಹಾಡುಹಗಲಿನಲ್ಲಿಯೇ ಕಳ್ಳನೊಬ್ಬ ವಯಸ್ಕ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿ ಓಡಿ ಹೋಗುತ್ತಿರುವುದು ಕಂಡುಬಂದಿದೆ.

Continue Reading
Advertisement
Murder Case
Latest7 mins ago

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

road Accident
ಕೊಪ್ಪಳ8 mins ago

Road Accident : ಕೊಪ್ಪಳದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

Abhishek Sharma
ಪ್ರಮುಖ ಸುದ್ದಿ9 mins ago

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

MUDA site scandal
ಕರ್ನಾಟಕ27 mins ago

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

steel flyover bridge shivananda circle
ಪ್ರಮುಖ ಸುದ್ದಿ34 mins ago

Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Gurdaspur attack
ವಿದೇಶ35 mins ago

Gurdaspur Attack: ಗುರುದಾಸಪುರ ಉಗ್ರ ದಾಳಿಯ ರೂವಾರಿ, ಐಎಸ್ಐ ಅಧಿಕಾರಿಯನ್ನು ಕರಾಚಿಯಲ್ಲಿ ಫಿನಿಷ್ ಮಾಡಿದ ‘ಅಪರಿಚಿತರು’!

Karnataka Rain
ಮಳೆ36 mins ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Haveri accident Shivanna couple helped the money to families
ಸ್ಯಾಂಡಲ್ ವುಡ್45 mins ago

Shiva Rajkumar: ಹಾವೇರಿ ಅಪಘಾತ; ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ಮಾಡಿದ ಶಿವಣ್ಣ ದಂಪತಿ

Mumbai Cricket Association
ಪ್ರಮುಖ ಸುದ್ದಿ50 mins ago

Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

Paris Olympics 2024
ದೇಶ1 hour ago

Paris Olympics 2024: ಸರ್ಕಾರಿ, ಖಾಸಗಿ ವಲಯದ ಪಾಲುದಾರಿಕೆಯಿಂದ ಕ್ರೀಡೆಗಳ ಭವಿಷ್ಯ ನಿರ್ಧಾರ: ಪಾರ್ಥ್ ಜಿಂದಾಲ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ36 mins ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ1 hour ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ18 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ21 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ21 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಟ್ರೆಂಡಿಂಗ್‌