Alia Bhatt | ಅಲಿಯಾ ಭಟ್‌ ಬೇಬಿ ಬಂಪ್‌ ಹೊಸ ಫೋಟೋಗಳು ವೈರಲ್‌! - Vistara News

ಫೋಟೊ

Alia Bhatt | ಅಲಿಯಾ ಭಟ್‌ ಬೇಬಿ ಬಂಪ್‌ ಹೊಸ ಫೋಟೋಗಳು ವೈರಲ್‌!

ನಟಿ ಅಲಿಯಾ ಭಟ್‌ (Alia Bhatt) ಅವರ ಬೇಬಿ ಬಂಪ್‌ ಪೋಟೋಗಳು ವೈರಲ್‌ ಆಗಿವೆ. ಇಲ್ಲಿವೆ ಅವರು ಶೇರ್‌ ಮಾಡಿಕೊಂಡಿರುವ ಪೋಟೋಗಳು!

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರೆಗ್ನೆನ್ಸಿ ಫ್ಯಾಷನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ಬಾಲಿವುಡ್‌ ನಟಿ ಅಲಿಯಾ ಭಟ್ (Alia Bhatt) ಅವರು ಮತ್ತೊಮ್ಮೆ ತಮ್ಮ ಬೇಬಿ ಬಂಪ್‌ ಫೋಟೊವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಪ್ರಮೋಷನ್‌ ವೇಳೆ ಅವರ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ಪ್ರಚಾರವನ್ನೂ ಮಾಡಿದ್ದಾರೆ.

ಇದನ್ನೂ ಓದಿ | Alia Bhatt | ಹಾಲಿವುಡ್‌ನ ʻಹಾರ್ಟ್‌ ಆಫ್ ಸ್ಟೋನ್‌ʼ ಸಿನಿಮಾ ಚಿತ್ರೀಕರಣ ಮುಗಿಸಿದ ಆಲಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Summer Travel Tips: ಬೇಸಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡಬೇಕೇ? ಇಲ್ಲಿವೆ ನೋಡಿ ಪರ್ಫೆಕ್ಟ್‌ ತಾಣಗಳು!

ಶಾಂತವಾದ, ತಂಪಾದ ವಿದೇಶೀ (Summer Travel Tips) ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್‌ ಐದು ಜಾಗಗಳು ಇಲ್ಲಿವೆ.

VISTARANEWS.COM


on

Summer Travel
Koo

ಬೇಸಿಗೆ ಬಂದಾಕ್ಷಣ (Summer Travel Tips) ಪ್ರವಾಸಗಳ ಸುಗ್ಗಿ. ಬೇಸಿಗೆಯಲ್ಲಿ ಬಿಸಿಲ ಝಳವನ್ನು ತಪ್ಪಿಸಿ, ನಿತ್ಯದ ಅದೇ ಜಂಜಾಟವನ್ನು ಮರೆತು ಒಂದಿಷ್ಟು ದಿನ ಎಲ್ಲಾದರೂ ಹೋಗಿ ಬರೋಣ ಎಂದು ಎಲ್ಲರಿಗೂ ಅನಿಸುವುದುಂಟು. ಮಕ್ಕಳು ಮರಿಗಳಿರುವ ಹೆತ್ತವರಿಗೆ ಬೇಸಿಗೆ ರಜೆಯಲ್ಲಿ ಎಲ್ಲಾದರೂ ಹೋಗಿ ಬರುವ ತವಕ. ಹೀಗೆ ಬಹುತೇಕ ಎಲ್ಲರೂ ಪ್ರವಾಸ ಬಯಸುವ ಕಾಲ ಎಂದರೆ ಅದು ಬೇಸಿಗೆ ಕಾಲ. ಇಂಥ ಬೇಸಿಗೆಯಲ್ಲಿ ವಿದೇಶೀ ಪ್ರವಾಸವೂ ಕೂಡ ಸಾಕಷ್ಟು ಮಂದಿಯ ಕನಸು. ಶಾಂತವಾದ, ತಂಪಾದ ವಿದೇಶೀ ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್‌ ಐದು ಜಾಗಗಳು ಇಲ್ಲಿವೆ. ಇವೆಲ್ಲವೂ ಬೇಸಿಗೆಯಲ್ಲಿ ಹೋಗಿ ಬರಬಹುದಾದ ಪರ್ಫೆಕ್ಟ್‌ ತಾಣಗಳು.

Zermatt, Switzerland

ಝರ್ಮಾಟ್‌, ಸ್ವಿಜರ್‌ಲ್ಯಾಂಡ್

ಝರ್ಮಾಟ್‌ ಎಂಬ ಪುಟ್ಟ ಪಟ್ಟಣ ಸ್ವಿಜರ್‌ಲ್ಯಾಂಡಿನ ಆಲ್ಫ್ಸ್‌ ಪರ್ವತ ಶ್ರೇಣಿಗಳ ಮಧ್ಯದಲ್ಲಿದೆ. ಹಾಗಾಗಿಯೇ ಈ ಪಟ್ಟಣ ಸ್ಕೀಯಿಂಗ್‌, ಚಾರಣ, ಕೇಬಲ್‌ ಕಾರ್‌ ಪಯಣ ಸೇರಿದಂತೆ ಹಲವು ಸಾಹಸಮಯ ಚಟುವಟಿಕೆಗಳಿಗೆ ಪ್ರಸಿದ್ಧ ತಾಣ. ಮನಮೋಹಕ ಹುಲ್ಲುಗಾವಲು, ಹಿಮಪರ್ವತ ಸಾಲು, ಪಟ್ಟಣದ ಜೀವನಕ್ರಮ, ಸುಮ್ಮನೆ ನಡೆಯಲು ಬೇಕಾದಷ್ಟು ಜಾಗ ಎಲ್ಲವೂ ಈ ಪಟ್ಟಣವನ್ನು ಪ್ರವಾಸಿಗರ ಕನಸಿನ ತಾಣವನ್ನಾಗಿಸಿದೆ. ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಇಲ್ಲಿಗೆ ಭೇಟಿ ಕೊಡಲು ಪ್ರಶಸ್ತ ಸಮಯ. ಝೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಜಿನೀವಾ ವಿಮಾನ ನಿಲ್ದಾಣದಿಂದ ಇಲ್ಲಿಗೆ ರೈಲಿನಲ್ಲಿ ಹೋಗಬಹುದು. ವೆಚ್ಚ (ಉಳಿದುಕೊಳ್ಳಲು ಹಾಗೂ ಊಟೋಪಚಾರ): ಸುಮಾರು 1.8 ಲಕ್ಷ ರೂಪಾಯಿಗಳು (ಒಂದು ವಾರದ ಪ್ರವಾಸಕ್ಕೆ)

Bali, Indonesia

ಬಾಲಿ, ಇಂಡೋನೇಷ್ಯಾ

ಹನಿಮೂನಿಗರ ಸ್ವರ್ಗ ಎಂದೇ ಪ್ರಸಿದ್ಧವಾಗಿರುವ ಬಾಲಿ ಬೇಸಿಗೆಯಲ್ಲಿ ಪಯಣಿಸಬಹುದಾದ ಅತ್ಯಂತ ಸುಂದರ ತಾಣ. ಇಂಡೋನೇಷ್ಯಾದ ಪ್ರಕೃತಿ ಸೌಂದರ್ಯ, ದೇವಾಲಯಗಳು, ಸಾಂಸ್ಕೃತಿ ಉತ್ಸವಗಳು ಎಲ್ಲವೂ ಪ್ರವಾಸಿಗರ ಕಣ್ಣಿಗೆ ಹಬ್ಬ. ಸಾವಿರಾರು ಮಂದಿ ಇಲ್ಲಿನ ಸ್ಪಾ ಟ್ರೀಟ್‌ಮೆಂಟ್‌ಗಳಿಗಾಗಿಯೂ ಬರುತ್ತಾರೆ. ಬಾಲಿ ಸಫಾರಿ, ಮರೈನ್‌ ಪಾರ್ಕ್‌ ಭೇಟಿ, ಬಗೆಬಗೆಯ ಜಲಕ್ರೀಡೆಗಳು ಇಲ್ಲಿನ ಪ್ರವಾಸದ ಪ್ರಮುಖ ಆಕರ್ಷಣೆಗಳು. ಮೇ ತಿಂಗಳಿಂದ ಜುಲೈವರೆಗೆ ಇಲ್ಲಿಗೆ ಭೇಟಿ ಕೊಡಲು ಸಕಾಲ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಟ 35,000 ರೂಪಾಯಿಗಳು ಖರ್ಚಾಗಬಹುದು.

Pokhara, Nepal

ಪೊಖಾರಾ, ನೇಪಾಳ

ನೇಪಾಳದ ಅದ್ಭುತ ಸೌಂದರ್ಯದ ಊರುಗಳಲ್ಲಿ ಪೊಖಾರಾ ಕೂಡಾ ಒಂದು. ಇಲ್ಲಿಂದ ಕಾಣುವ ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಬೌದ್ಧಸ್ತೂಪಗಳು, ದೇವಾಲಯಗಳು ಹೀಗೆ ನೇಪಾಳದ ಸಂಸ್ಕೃತಿಯನ್ನು ಕಾಣಲು ಪೊಖಾರಾ ಉತ್ತಮ ಜಾಗ. ಇಲ್ಲಿನ ಪ್ಯೂ ಸರೋವರದಲ್ಲಿ ಬೋಟಿಂಗ್, ಮಚುಪುಚರೇ ಶಿಖರ ದರ್ಶನ, ಝಿಪ್‌ ಲೈನಿಂಗ್‌, ಹಿಮಾಲಯದಲ್ಲಿ ಚಾರಣ, ಬಂಜೀ ಜಂಪಿಂಗ್ ಇತ್ಯಾದಿಗಳನ್ನೂ ಸಮಯವಿದ್ದರೆ ಮಾಡಬಹುದು. ಏಪ್ರಿಲ್‌ನಿಂದ ಜೂನ್‌ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡಬಹುದು.‌ ಒಬ್ಬರಿಗೆ ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಸುಮಾರು ಕನಿಷ್ಠ 10,000 ರೂಪಾಯಿಗಳು ಖರ್ಚಾಗಬಹುದು.

Hamburg, Germany

ಹ್ಯಾಂಬರ್ಗ್‌, ಜರ್ಮನಿ

ಜರ್ಮನಿಯ ಹ್ಯಾಂಬರ್ಗ್‌ ನಗರ ಪ್ರಸಿದ್ಧ ಬೇಸಿಗೆಯ ಪ್ರವಾಸೀ ತಾಣಗಳ ಪೈಕಿ ಒಂದಾಗಿದೆ. 19ನೇ ಶತಮಾನದಲ್ಲಿ ನಿರ್ಮಾಣವಾದ ಈ ನಗರದ ವಾಸ್ತುಶಿಲ್ಪ, ಬೀದಿಗಳು, ಸಂಸ್ಕೃತಿ ಎಲ್ಲವೂ ಕೂಡಾ ಹೊಸ ಪರಿಚಯವನ್ನೇ ಮಾಡಿಸುತ್ತದೆ. ಮುಖ್ಯವಾಗಿ ಇಲ್ಲಿನ ಬೀಯರ್‌ಗಳು, ಅವುಗಳನ್ನು ತಯಾರು ಮಾಡುವ ಮನೆಗಳು, ಉದ್ಯಮ ಎಲ್ಲವೂ ನೋಡಬೇಕಾದಂಥದ್ದೇ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 52,000 ರೂಪಾಯಿಗಳು ಖರ್ಚಾಗಬಹುದು.

Whistler, Canada

ವಿಸ್ಲರ್‌, ಕೆನಡಾ

ಸಮುದ್ರ ತೀರದ ಈ ಪಟ್ಟಣ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ ಪಟ್ಟಣ. ಬೆಟ್ಟಗುಡ್ಡಗಳಲ್ಲಿ ಚಾರಣ, ವನ್ಯಧಾಮಗಳಲ್ಲಿ ಸಫಾರಿ, ಕಲೆ ಸಂಸ್ಕೃತಿಗಳ ಪರಿಚಯ ಇತ್ಯಾದಿಗಳನ್ನು ನೋಡಿ ಅನುಭವಿಸಲು ಇಷ್ಟವಿರುವ ಮಂದಿ ಈ ಊರನ್ನು ತುಂಬಾ ಇಷ್ಟಪಡಬಹುದು. ಜೂನ್‌ನಿಂದ ಆಗಸ್ಟ್‌ ತಿಂಗಳ ಸಮಯ ಇಲ್ಲಿಗೆ ಭೇಟಿ ಕೊಡಲು ಅತ್ಯಂತ ಪ್ರಶಸ್ತ. ಒಂದು ಶಿಖರದಿಂದ ಇನ್ನೊಂದಕ್ಕೆ ಇರುವ ಗೊಂಡೋಲಾ ರೈಡ್‌, ಆರ್ಟ್‌ ಮ್ಯೂಸಿಯಂಗಳು, ಪುರಾತನ ಕಟ್ಟ್ಡಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಇಲ್ಲಿ ಸಮಯ ಕಳೆಯಬಹುದು. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 60,000 ರೂಪಾಯಿಗಳು ಖರ್ಚಾಗಬಹುದು.

Continue Reading

ಗಣೇಶ ಚತುರ್ಥಿ

Top 10 Ganesh Temple In India: ಒಮ್ಮೆ ನೋಡಲೇಬೇಕಾದ ದೇಶದ ಪ್ರಸಿದ್ಧ ಗಣೇಶ ಮಂದಿರಗಳಿವು

ಆದಿ ಪೂಜಿತನಾಗಿರುವ ಗಣೇಶನಿಗೆಂದು ನಮ್ಮ (Top 10 Ganesh Temple In India) ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ದೇವಸ್ಥಾನಗಳು ಅನನ್ಯವಾಗಿವೆ. ಅಂಥ ಹತ್ತು ಗಣೇಶ ಮಂದಿರಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

VISTARANEWS.COM


on

Top 10 Ganesh Temple In India
Koo

ಗಣಪತಿ ಹಬ್ಬ ಇನ್ನೇನು ಬಂದೇಬಿಟ್ಟಿತು. ಗಣಪತಿಯನ್ನು (Top 10 Ganesh Temple In India) ಪ್ರತಿಷ್ಠಾಪಿಸಿ, ಪೂಜಿಸಲೆಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಹಲವರು ತಮ್ಮ ಪ್ರೀತಿಯ ಗಣಪತಿಯ ಆಗಮನಕ್ಕೆಂದು ಭರ್ಜರಿ ತಯಾರಿಯನ್ನೇ ನಡೆಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ನಮ್ಮ ದೇಶದಲ್ಲಿ ಆದಿ ಪೂಜಿತನಾಗಿರುವ ಗಣೇಶನಿಗೆಂದು ಲಕ್ಷಾಂತರ ದೇವಸ್ಥಾನಗಳಿವೆ. ಅದರಲ್ಲಿ ಅತ್ಯಂತ ಪ್ರಸಿದ್ಧವಾದ ಕೆಲವು ಗಣಪತಿ ದೇವಸ್ಥಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

Siddhivinayak Temple, Mumbai

ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ

ಈ ದೇವಸ್ಥಾನ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರಭಾದೇವಿಯಲ್ಲಿದೆ. ಈ ಮಂದಿರಕ್ಕೆ ಸುಮಾರು 200 ವರ್ಷಗಳಷ್ಟು ಇತಿಹಾಸವಿದೆ. ಈ ದೇಗುಲದಲ್ಲಿ ಗಣೇಶನ ಅಕ್ಕಪಕ್ಕದಲ್ಲಿ ರಿದ್ಧಿ ಮತ್ತು ಸಿದ್ಧಿ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ನಿತ್ಯ ಸಹಸ್ರಾರು ಭಕ್ತರು ಈ ಮಂದಿರಕ್ಕೆ ಭೇಟಿ ನೀಡುತ್ತಾರೆ. ಇಲ್ಲಿಗೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಆಗಾಗ ಭೇಟಿ ನೀಡುತ್ತಿರುತ್ತಾರೆ.
ದೇಗುಲದ ಸಮಯ
ಬೆಳಗ್ಗೆ 5ರಿಂದ ರಾತ್ರಿ 9

Ganpatipule Temple, Ratnagiri

ಗಣಪತಿಪುಲೆ ದೇವಸ್ಥಾನ, ರತ್ನಗಿರಿ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಗಣಪತಿಪುಲೆ ದೇವಸ್ಥಾನವಿದೆ. ಈ ದೇವಸ್ಥಾನವನ್ನು 400 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ ದೇವಸ್ಥಾನ ಪಶ್ಚಿಮ ದಿಕ್ಕಿಗೆ ಮುಖ ಮಾಡಿದ್ದು, ಗಣಪತಿ ದೇವರು ಪಶ್ಚಿಮ ಘಟ್ಟವನ್ನು ಕಾಪಾಡುತ್ತಿದ್ದಾರೆ ಎಂದು ನಂಬಲಾಗಿದೆ. ಈ ದೇವಸ್ಥಾನಕ್ಕೆ ಹಿಂದೆ ಹಸಿರಿನ ಬೆಟ್ಟಗಳನ್ನು ನೀವು ಕಾಣಬಹುದು. ದೇಗುಲದಲ್ಲಿ ಮುಂಜಾನೆ 5, ಮಧ್ಯಾಹ್ನ 12 ಮತ್ತು ಸಂಜೆ 7 ಗಂಟೆಗೆ ಮಹಾ ಮಂಗಳಾರತಿ ನಡೆಸಲಾಗುತ್ತದೆ.
ದೇಗುಲದ ಸಮಯ
ಬೆಳಗ್ಗೆ 5ರಿಂದ ರಾತ್ರಿ 9

Kanhipakam Vinayaka Temple, Chittoor

ಕಾಣಿಪಾಕಂ ವಿನಾಯಕ ದೇವಸ್ಥಾನ, ಚಿತ್ತೂರು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಹುದಾ ನದಿ ದಡದಲ್ಲಿ ಕಾಣಿಪಾಕಂ ವಿನಾಯಕ ದೇವಸ್ಥಾನವಿದೆ. ಈ ದೇಗುಲವನ್ನು 11ನೇ ಶತಮಾನದ ಆರಂಭದಲ್ಲಿ ಚೋಳರ ರಾಜ ಕಟ್ಟಿದ್ದರು ಎಂದು ಹೇಳಲಾಗಿದೆ. ಈ ದೇವಸ್ಥಾನದ ಮೂರ್ತಿಯ ಎತ್ತರ ಕ್ರಮೇಣವಾಗಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ನಂಬುತ್ತಾರೆ. ಇದು ದೇಶದ ಅತ್ಯಂತ ಸುಂದರವಾದ ಗಣಪತಿ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ.
ದೇಗುಲದ ಸಮಯ
ಬೆಳಗ್ಗೆ 5ರಿಂದ ರಾತ್ರಿ 9

Moti Dungri Ganesh Temple, Jaipur

ಮೋತಿ ಡುಂಗ್ರಿ ಗಣೇಶ ದೇವಸ್ಥಾನ, ಜೈಪುರ

ಈ ದೇವಸ್ಥಾನವನ್ನು ಜೈಪುರದ ಮೋತಿ ಡುಂಗ್ರಿಯ ಬೆಟ್ಟಗಳ ನಡುವೆ 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಸೀಥ್‌ ಜೈರಾಮ್‌ ಪೈಲ್ವಾನ್‌ ಮತ್ತು ಮಹಂತ್‌ ಶಿವ್‌ ನಾರಾಯಣ್ ಅವರು ಈ ದೇವಸ್ಥಾನವನ್ನು ನಿರ್ಮಿಸಿದರು. ಈ ದೇಗುಲ ನಿರ್ಮಾಣಕ್ಕೆ ನಾಲ್ಕು ವರ್ಷಗಳ ತಗುಲಿತು. 1761ರಲ್ಲಿ ದೇವಸ್ಥಾನ ಸಂಪೂರ್ಣವಾಗಿ ನಿರ್ಮಾಣವಾಯಿತು.
ದೇವಸ್ಥಾನದ ಸಮಯ
ಮುಂಜಾನೆ 4.30ರಿಂದ ಮಧ್ಯಾಹ್ನ 11.30
ಸಂಜೆ 5.45ರಿಂದ ರಾತ್ರಿ 9.00

Manakula Vinayagar Temple, Pondicherry

ಮನಕುಲ ವಿನಯಗರ್ ದೇವಸ್ಥಾನ, ಪುದುಚೆರಿ

ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಪುದುಚೆರಿಯಲ್ಲಿ ಮನಕುಲ ವಿನಯಗರ್ ದೇವಸ್ಥಾನವಿದೆ. ಈ ಪ್ರದೇಶದಲ್ಲಿ ಇದನ್ನು ಅತ್ಯಂತ ಹಳೆಯ ದೇವಸ್ಥಾನ ಎಂದು ಕರೆಯಲಾಗುತ್ತದೆ. ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನದಲ್ಲಿ ನೃತ್ಯದ ಭಂಗಿಯಲ್ಲಿರುವ ಗಣೇಶನ ಮೂರ್ತಿಯಿರುವುದು ವಿಶೇಷ.
ದೇವಸ್ಥಾನದ ಸಮಯ
ಮುಂಜಾನೆ 5.45ರಿಂದ ಮಧ್ಯಾಹ್ನ 12.30
ಸಂಜೆ 4ರಿಂದ ರಾತ್ರಿ 9.30

Ranthambore Ganesha Temple, Rajasthan

ರಣಥಂಬೋರ್‌ ಗಣೇಶ ದೇಗುಲ, ರಾಜಸ್ಥಾನ

ರಾಜಸ್ಥಾನದಲ್ಲಿನ ಪ್ರಸಿದ್ಧ ಗಣೇಶ ದೇವಸ್ಥಾನವೆಂದರೆ ಅದು ರಣಥಂಬೊರ್ ಗಣೇಶ ದೇವಸ್ಥಾನ. ಕ್ರಿ.ಶ.1300ರಲ್ಲಿ ರಾಜ ಹಮ್ಮೀರ ಈ ದೇವಸ್ಥಾನವನ್ನು ನಿರ್ಮಿಸಿದನು. ಈ ದೇವಸ್ಥಾನಕ್ಕೆ ತೆರಳಬೇಕೆಂದರೆ ನೀವು 250 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ಈ ದೇವಸ್ಥಾನಕ್ಕೆ ಪ್ರಪಂಚದಾದ್ಯಂತದಿಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ನೋಡಲೇಬೇಕಾದ ಅಪರೂಪದ ದೇವಸ್ಥಾನ ಇದು.
ದೇವಸ್ಥಾನದ ಸಮಯ
ಬೆಳಗ್ಗೆ 6ರಿಂದ ರಾತ್ರಿ 8

Rockfort Ucchi Pillayar Koil Temple, Tamil Nadu

ರಾಕ್‌ಫೋರ್ಟ್‌ ಉಚ್ಚಿ ಪಿಲ್ಲಯಾರ್‌ ಕೊಯ್ಲ್‌ ದೇವಸ್ಥಾನ, ತಮಿಳುನಾಡು

ತಮಿಳುನಾಡಿನ ತಿರುಚಿ ಜಿಲ್ಲೆಯ ರಾಕ್‌ಫೋರ್ಟ್‌ನಲ್ಲಿ ಈ ದೇವಸ್ಥಾನ ಕಾಣಸಿಗುತ್ತದೆ. ಈ ದೇವಸ್ಥಾನವನ್ನು 7ನೇ ಶತಮಾನದಲ್ಲಿ ಪಲ್ಲವರು ನಿರ್ಮಿಸಿದರು. ಈ ದೇವಸ್ಥಾನವು 273 ಅಡಿ ಎತ್ತರದ ಕಲ್ಲಿನ ಮೇಲಿದೆ. 437 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನ ತಲುಪಬೇಕು. ಇಲ್ಲಿ ನೂರು ಕಂಬಗಳಿರುವ ದೊಡ್ಡ ಸಭಾಂಗಣವೂ ಇದ್ದು, ತಮಿಳುನಾಡಿನಾದ್ಯಂತ ಈ ದೇಗುಲಕ್ಕೆ ಭಕ್ತರಿದ್ದಾರೆ.
ದೇಗುಲದ ಸಮಯ
ಬೆಳಗ್ಗೆ 5.30ರಿಂದ ಮಧ್ಯಾಹ್ನ 12
ಸಂಜೆ 4ರಿಂದ ರಾತ್ರಿ 9

Mustard and kadalekalu Ganesha Temple, Hampi

ಸಾಸಿವೆಕಾಳು ಮತ್ತು ಕಡಲೆಕಾಳು ಗಣೇಶ ದೇವಸ್ಥಾನ, ಹಂಪಿ

ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಹಂಪಿಯಲ್ಲಿ ಸಾಸಿವೆಕಾಳು ಮತ್ತು ಕಡಲೆಕಾಳು ಗಣೇಶನ ದೇವಸ್ಥಾನವಿದೆ. ಇಲ್ಲಿನ ಗಣೇಶ ದೇವಸ್ಥಾನವನ್ನು ಕ್ರಿ.ಶ. 1500ರಲ್ಲಿ ನಿರ್ಮಿಸಲಾಯಿತು. ಇದರಲ್ಲಿ ಅತಿ ಎತ್ತರದ ಗಣೇಶನ ಮೂರ್ತಿಯಿದ್ದು, ಯುನೆಸ್ಕೋ ಈ ಸ್ಥಳವನ್ನು ವಿಶ್ವ ಪಾರಂಪರಿಕ ಸ್ಥಳ ಎಂದು ಗುರುತಿಸಿದೆ. ವಿಜಯನಗರ ಸಾಮ್ರಾಜ್ಯದ ರಾಜ ನರಸಿಂಹ 2 ಈ ದೇಗುಲವನ್ನು ನಿರ್ಮಿಸಿದನು ಎಂಬ ದಾಖಲೆ ಇದೆ.
ದೇವಸ್ಥಾನದ ಸಮಯ
ಬೆಳಗ್ಗೆ 6ರಿಂದ ಸಂಜೆ 6

Karpaga Vinayagar Temple, Pillaiyarpatti, Tamil Nadu

ಕರ್ಪಗ ವಿನಯಗರ ದೇವಸ್ಥಾನ, ಪಿಳ್ಳಯಾರ್‌ಪಟ್ಟಿ, ತಮಿಳುನಾಡು

ತಮಿಳುನಾಡಿನ ಪಿಳ್ಳಯಾರ್‌ಪಟ್ಟಿಯಲ್ಲಿ ಈ ದೇವಸ್ಥಾನವಿದೆ. ಈ ದೇಗುಲವನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಯಿತು. 1600 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಅತ್ಯದ್ಭುತ ಶಿಲ್ಪಕಲೆಯನ್ನು ನೀವು ಕಾಣಬಹುದು. ಇಲ್ಲಿ ಗಣೇಶನ ಮೂರ್ತಿ ಉತ್ತರ ದಿಕ್ಕಿಗೆ ಮುಖ ಮಾಡಿದೆ. ದೇಶದ ಅಪರೂಪದ ದೇವಸ್ಥಾನಗಳಲ್ಲಿ ಇದೂ ಒಂದು.
ದೇವಸ್ಥಾನದ ಸಮಯ
ಬೆಳಗ್ಗೆ 6ರಿಂದ ಮಧ್ಯಾಹ್ನ 12
ಸಂಜೆ 4ರಿಂದ ರಾತ್ರಿ 8

Ganesha Temple, Gangtok, Sikkim

ಗಣೇಶ ದೇವಸ್ಥಾನ, ಗ್ಯಾಂಕ್ಟಕ್‌, ಸಿಕ್ಕಿಂ

ಸಿಕ್ಕಿಂನ ಗ್ಯಾಂಕ್ಟಕ್‌ನಲ್ಲಿ ವಿಶೇಷ ಗಣೇಶ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1953ರಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನದಿಂದ ಕಾಂಚನಜುಂಗ ಬೆಟ್ಟ ಮತ್ತು ಗ್ಯಾಂಕ್ಟಕ್‌ ನಗರದ ಸುಂದರ ದೃಶ್ಯವನ್ನು ನೋಡಬಹುದು. ಇದು ಅತ್ಯಂತ ಸುಂದರವಾದ ದೇಗುಲಗಳಲ್ಲಿ ಒಂದು ಎಂದೂ ಕರೆಸಿಕೊಂಡಿದೆ.
ದೇವಸ್ಥಾನದ ಸಮಯ
ಬೆಳಗ್ಗೆ 9ರಿಂದ ಸಂಜೆ 5

ಇದನ್ನೂ ಓದಿ: Famous Ganesha Temples: ಭಕ್ತರ ಮನಸ್ಸಿಗೆ ನೆಮ್ಮದಿ ನೀಡುವ ತಾಣ, ಕರ್ನಾಟಕದ ಪ್ರಮುಖ ಗಣಪತಿ ದೇವಸ್ಥಾನಗಳಿವು

Continue Reading

ಗಣೇಶ ಚತುರ್ಥಿ

Ganesh Chaturthi: ದೇಶದ ಟಾಪ್‌ 10 ಗಣೇಶ ಪೆಂಡಾಲ್‌ಗಳಿವು, ಇವುಗಳ ವಿಶೇಷ ಏನು?

ಗಣೇಶೋತ್ಸವ (Ganesh Chaturthi) ಪೆಂಡಾಲ್‌ಗಳು ಮಹಾರಾಷ್ಟ್ರದಲ್ಲಿ ಪ್ರಸಿದ್ಧ. ಆದರೆ ಬೇರೆ ಕೆಲವು ರಾಜ್ಯಗಳಲ್ಲೂ ಅದ್ಧೂರಿ ಗಣೇಶ ಪೆಂಡಾಲ್‌ಗಳು ಇರುತ್ತವೆ. ಆ ಕುರಿತ ಕಿರು ಪರಿಚಯ ಇಲ್ಲಿದೆ.

VISTARANEWS.COM


on

Ganesh Chaturthi Decoration
Koo

ಗಣೇಶನ ಹಬ್ಬದ (Ganesh Chaturthi) ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸುವುದಕ್ಕೆಂದು ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ. ತಮ್ಮ ತಮ್ಮಲ್ಲೇ ಸ್ಪರ್ಧೆ ಎನ್ನುವಂತೆ ಒಂದಕ್ಕಿಂತ ಒಂದು ಚಂದದ ಗಣಪನನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಅದರಲ್ಲೂ ಕೆಲವು ಸ್ಥಳಗಳ ಗಣಪನಂತೂ ಇಡೀ ದೇಶದಲ್ಲೇ ಪ್ರಖ್ಯಾತಿ ಪಡೆದುಕೊಂಡುಬಿಟ್ಟಿವೆ. ಆ ರೀತಿಯಲ್ಲಿ ಖ್ಯಾತಿ ಪಡೆದುಕೊಂಡ ಕೆಲವು ಗಣಪತಿ ಪೆಂಡಾಲ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

Lalbagh Ka Raja, Mumbai

ಲಾಲ್‌ಬಾಗ್‌ ಕಾ ರಾಜಾ, ಮುಂಬೈ

ಮಹಾರಾಷ್ಟ್ರದ ಮುಂಬೈನ ಲಾಲ್‌ಬಾಗ್‌ ಕಾ ರಾಜಾ ಭಾರತದಲ್ಲಿ ಅತ್ಯಂತ ಖ್ಯಾತಿ ಪಡೆದುಕೊಂಡಿರುವ ಗಣಪತಿ ಪೆಂಡಾಲ್‌ ಆಗಿದೆ. ಇದು ದೇಶದ ಅತಿ ದೊಡ್ಡ ಗಣಪತಿ ಪೆಂಡಾಲ್‌ ಕೂಡ ಹೌದು. ಇಲ್ಲಿ ಹತ್ತು ದಿನಗಳ ಕಾಲ ಗಣಪತಿಗೆ ವಿಶೇಷ ಪೂಜೆ ನಡೆಯುತ್ತದೆ. ಲಾಲ್‌ಬಾಗ್‌ ಮಾರುಕಟ್ಟೆ ಸ್ಥಳದಲ್ಲೇ ಗಣಪತಿಯನ್ನು ಸ್ಥಾಪಿಸಲಾಗುತ್ತದೆ. 1934ರಲ್ಲಿ ಕಾಂಬ್ಳಿ ಕುಟುಂಬದಿಂದ ಸ್ಥಾಪಿಸಲ್ಪಟ್ಟ ಶ್ರೀಮಂತ ಇತಿಹಾಸ ಇಲ್ಲಿನ ಗಣೇಶನಿಗೆ. ಇಲ್ಲಿ ಲಕ್ಷಾಂತರ ಭಕ್ತರು ಗಣಪನ ದರ್ಶನ ಮಾಡುತ್ತಾರೆ.

Siddhivinayak Temple, Mumbai

ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ

ಮುಂಬೈನಲ್ಲಿರುವ ಮತ್ತೊಂದು ಪ್ರಸಿದ್ಧ ಗಣಪತಿ ಪೆಂಡಾಲ್‌ ಸಿದ್ಧಿವಿನಾಯಕ ದೇವಸ್ಥಾನದ ಪೆಂಡಾಲ್‌. ಈ ದೇವಸ್ಥಾನ ಕೂಡ ಭಾರಿ ಫೇಮಸ್‌. ಈ ದೇವಾಲಯ 18ನೇ ಶತಮಾನದ್ದು. 1801ರಲ್ಲಿ ದೇವಬಾಯಿ ಪಾಟೀಲ್‌ ಹೆಸರಿನ ಮಹಿಳೆಯೊಬರು ಈ ದೇವಸ್ಥಾನ ನಿರ್ಮಿಸಿದರು. ಎರಡೂವರೆ ಅಡಿ ಎತ್ತರದ ಗಣಪನ ಮೂರ್ತಿ ಇಲ್ಲಿದೆ. ಇಲ್ಲಿಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಂದು ದೇವರ ಆಶೀರ್ವಾದ ಪಡೆಯುತ್ತಾರೆ.

Dagdusheth Halwai Ganpati, Pune

ದಗ್ಡು ಶೇಠ್ ಹಲ್ವಾಯಿ ಗಣಪತಿ, ಪುಣೆ

ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾದ ಪುಣೆಯು ಪ್ರಸಿದ್ಧ ದಗ್ಡು ಶೇಠ್ ಹಲ್ವಾಯಿಯಲ್ಲಿ ಗಣಪತಿ ದೇವಾಲಯ ಕೂಡ ಪ್ರಖ್ಯಾತ ದೇವಾಲಯವಾಗಿದೆ. ಅತಿ ಎತ್ತರದ ಗಣೇಶನ ಮೂರ್ತಿ ಈ ದೇಗುಲದಲ್ಲಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಹೆಸರಾಂತ ಸಿಹಿ ವ್ಯಾಪಾರಿ ದಗ್ಡು ಶೇಠ್ ಹಲ್ವಾಯಿ ಮತ್ತು ಅವರ ಪತ್ನಿ ಲಕ್ಷ್ಮಿಬಾಯಿ ಈ ದೇವಾಲಯವನ್ನು ಸ್ಥಾಪಿಸಿದರು. ದೇಗುಲದ ಗಣೇಶನ ಮೂರ್ತಿ 2.2 ಮೀಟರ್‌ ಎತ್ತರವಿದೆ. ಇಲ್ಲಿ ವಿನಾಯಕ ಚತುರ್ಥಿಗೆ ಗಣೇಶನನ್ನು ಸ್ಥಾಪಿಸಿ ಹತ್ತು ದಿನಗಳ ಕಾಲ ವಿಶೇಷ ಪೂಜೆ ನಡೆಸಲಾಗುತ್ತದೆ.

Manache Ganpati, Pune

ಮನಾಚೆ ಗಣಪತಿ, ಪುಣೆ

ಪುಣೆಯ ಗಣೇಶ ಚತುರ್ಥಿ ಆಚರಣೆಯ ಮತ್ತೊಂದು ಸುಂದರ ಸ್ಥಳವೆಂದರೆ ಮನಾಚೆ ಗಣಪತಿ ಪೆಂಡಾಲ್‌. “ಮನಾಚೆ ಗಣಪತಿ” ಎಂದರೆ ಮರಾಠಿಯಲ್ಲಿ ಮನಸಿನ ಗಣಪತಿ, ಗೌರವಾನ್ವಿತ ಗಣಪತಿ ಎಂದರ್ಥ. ಅಷ್ಟವಿನಾಯಕ ಯಾತ್ರೆ ಎಂದು ಕರೆಯಲ್ಪಡುವ ನಿರ್ದಿಷ್ಟ ಅನುಕ್ರಮದಲ್ಲಿ ಈ ದೇವಾಲಯಗಳಿಗೆ ಭೇಟಿ ನೀಡುವ ಸಂಪ್ರದಾಯವು ಹಲವಾರು ಶತಮಾನಗಳ ಹಿಂದಿನದಾಗಿದೆ.
ಆ ಎಂಟು ಗಣಪತಿಗಳಲ್ಲಿ ಕಸ್ಬಾ ಗಣಪತಿ, ತಾಂಬಡಿ ಜೋಗೇಶ್ವರಿ ಗಣಪತಿ, ಗುರೂಜಿ ತಾಲಿಮ್ ಗಣಪತಿ, ಕೇಸರಿ ವಾಡ ಗಣಪತಿ, ತುಳಶಿಬಾಗ್ ಗಣಪತಿ, ಸರಸ್ಬಾಗ್ ಗಣಪತಿ, ಶನಿವಾರ ವಾಡ ಗಣಪತಿ ಮತ್ತು ಅಲ್ಕಾ ಚೌಕ್ ಗಣಪತಿ ಸೇರಿವೆ.

Khairatabad Ganapati, Hyderabad

ಖೈರತಾಬಾದ್ ಗಣಪತಿ, ಹೈದರಾಬಾದ್

ಹೈದರಾಬಾದ್‌ನ ಖೈರತಾಬಾದ್ ಗಣಪತಿ ಪೆಂಡಾಲ್ ದೇಶದಲ್ಲೇ ಅತ್ಯಂತ ಖ್ಯಾತಿಯ ಪೆಂಡಾಲ್‌ ಆಗಿದೆ. ಇಲ್ಲಿಗೆಂದೇ ನುರಿತ ಕುಶಲಕರ್ಮಿಗಳು ಅತಿ ದೊಡ್ಡ ಗಾತ್ರದ ಗಣೇಶ ಮೂರ್ತಿಯನ್ನು ರಚಿಸುತ್ತಾರೆ. ಇಲ್ಲಿ ಸುಮಾರು 60 ಅಡಿ ಎತ್ತರದಷ್ಟು ಗಣಪತಿಯನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ 1954ರ ಕಾಲದಿಂದಲೂ ಗಣಪತಿಯನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಮೊದಲಿಗೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ ದಿವಂಗತ ಎಸ್.ಶಂಕರಯ್ಯ ಅವರು ಗಣಪತಿಯನ್ನು ಸ್ಥಾಪಿಸಿದರು ಎಂಬ ಇತಿಹಾಸವಿದೆ.

Keshavji Naik Chawl Ganpati, Mumbai

ಕೇಶವಜಿ ನಾಯಕ್ ಚಾಳ್ ಗಣಪತಿ, ಮುಂಬೈ

ಮುಂಬೈನ ಕೇಶವಜಿ ನಾಯಕ್ ಚಾಳ್‌ನ ಗಣಪತಿ ಪೆಂಡಾಲ್‌ ಕೂಡ ವಿಶೇಷ ಗಣಪತಿ ಪೆಂಡಾಲ್‌ಗಳಲ್ಲಿ ಒಂದಾಗಿದೆ. ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಗಣಪತಿ ಸ್ಥಾಪನೆ ಮಾಡಲಾಗುತ್ತಿದೆ. 1893ರಲ್ಲಿ ಕೇಶವಜಿ ನಾಯಕ್‌ ಅವರು ಗಿರ್ಗಾಂವ್ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಗಣೇಶನ ಆಶೀರ್ವಾದವನ್ನು ಸಿಗಲಿ ಎನ್ನುವ ಉದ್ದೇಶದೊಂದಿಗೆ ಇಲ್ಲಿ ಗಣಪತಿ ಸ್ಥಾಪನೆ ಮಾಡಿದರು ಎನ್ನಲಾಗುತ್ತದೆ. ಇಲ್ಲಿಯೂ ಕೂಡ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಲಾಗುತ್ತದೆ.

Shri Public Ganeshotsava, Goa

ಶ್ರೀ ಸಾರ್ವಜನಿಕ ಗಣೇಶೋತ್ಸವ, ಗೋವಾ

ಗೋವಾದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್‌ ಅತ್ಯಂತ ಪ್ರಸಿದ್ಧ ಪೆಂಡಾಲ್‌ಗಳಲ್ಲಿ ಒಂದಾಗಿದೆ. ಇಲ್ಲಿನ ಗಣಪತಿ ನೋಡಲೆಂದು ರಾಜ್ಯದ ಮೂಲೆಮೂಲೆಗಳಿಂದ ಜನರು ಬರುತ್ತಾರೆ. ಗಣೇಶನ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ರೀತಿಯ ಚಟುವಟಿಕೆಗಳನ್ನು ಹಬ್ಬದ ಸಮಯದಲ್ಲಿ ಏರ್ಪಡಿಸಲಾಗುತ್ತದೆ.

Mysore Palace Ganapathi

ಮೈಸೂರು ಅರಮನೆ, ಮೈಸೂರು

ಮೈಸೂರಿನಲ್ಲಿ ದಸರಾ ಪ್ರಸಿದ್ಧ. ಹಾಗೆಯೇ ಇಲ್ಲಿ ಗಣೇಶ ಹಬ್ಬವೂ ಪ್ರಸಿದ್ಧವೇ. ಅರಮನೆಗೆ ಸಂಬಂಧ ಪಟ್ಟಂತೆ ಗಣೇಶ ದೇವಸ್ಥಾನವಿದ್ದು, ಅಲ್ಲಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ನಡೆಸಲಾಗುತ್ತದೆ. ಇಲ್ಲಿನ ಗಣೇಶ ಹಬ್ಬಕ್ಕೆ ರಾಜ ವೈಭವದ ಸ್ಪರ್ಶವಿರುತ್ತದೆ. ಅದನ್ನು ನೋಡಲೆಂದೇ ಜನ ಗಣೇಶ ಹಬ್ಬದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡುತ್ತಾರೆ.

RK Mutt ganpati utsav Kolkata

ಆರ್‌ ಕೆ ಮಠ, ಕೋಲ್ಕೋತಾ

ಪಶ್ಚಿಮ ಬಂಗಾಳದಲ್ಲಿ ಗಣೇಶ ಹಬ್ಬ ಅದ್ಧೂರಿಯಾಗಿ ನಡೆಯುವುದೆಂದರೆ ಅದು ಆರ್‌ ಕೆ ಮಠದಲ್ಲಿ. ಇಲ್ಲಿ ಕಲಾತ್ಮಕವಾಗಿ ಗಣೇಶನ ಸ್ಥಾಪನೆ ಮಾಡಲಾಗುತ್ತದೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್‌ನ ಶಾಖೆಯಾಗಿ, ಆರ್ಕೆ ಮಠವು ಆಧ್ಯಾತ್ಮಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಹಬ್ಬದ ಸಮಯದಲ್ಲಿ ಇಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬಂಗಾಲಿ ಸಂಸ್ಕೃತಿಯ ಮೆರುಗು ಇದಕ್ಕಿದೆ.

Sri Vidyaranya Yuvaka Sangha Ganeshotsav, Bangalore

ಶ್ರೀ ವಿದ್ಯಾರಣ್ಯ ಯುವಕ ಸಂಘದ ಗಣೇಶೋತ್ಸವ, ಬೆಂಗಳೂರು

ಬೆಂಗಳೂರಿನ ಬಸವನಗುಡಿಯಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘವು ಪ್ರತಿ ವರ್ಷ ಅದ್ಧೂರಿಯಾಗಿ ಗಣೇಶೋತ್ಸವದ ಪೆಂಡಾಲ್‌ ಹಾಕುತ್ತದೆ. ವಾರದ ಕಾಲ ನಡೆಯುವ ಗಣೇಶೋತ್ಸವದಲ್ಲಿ ದೇಶದ ಪ್ರಮುಖ ಕಲಾವಿದರ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತಿ ವರ್ಷ ವಿಭಿನ್ನವಾಗಿ ಈ ಸಂಘಟನೆಯಿಂದ ಗಣೇಶ ಸಂಭ್ರಮ ನಡೆಯುತ್ತದೆ.
ಹಾಗೆಯೇ, ಈ ಗಣೇಶ ಚತುರ್ಥಿಗೆ ಭೇಟಿ ನೀಡಲು ಇನ್ನೊಂದು ಪ್ರಸಿದ್ಧ ಸ್ಥಳವೆಂದರೆ ಬೆಂಗಳೂರಿನ ಜಯನಗರ ನಾಲ್ಕನೇ ಹಂತದಲ್ಲಿರುವ ಶ್ರೀ ವಿನಾಯಕ ದೇವಸ್ಥಾನ. ಇಲ್ಲೂ ಕೂಡ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಚೌತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಕರ್ನಾಟಕದ ಹಲವು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಭೇಟಿ ನೀಡಿ ದೇವರ ಆಶೀರ್ವಾದ ಪಡೆದು ಬರುತ್ತಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿಯೂ ಗಣೇಶ ಚತುರ್ಥಿ ದಿನ ವಿಶೇಷ ಪೂಜೆ ಇರುತ್ತದೆ.

ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?

Continue Reading

ಫೋಟೊ

Ragini Dwivedi: ಮಾದಕ ನಟಿ ರಾಗಿಣಿಯ ಬಿಂದಾಸ್ ಯೋಗ ನೋಡುವುದೇ ಯೋಗ!

ರಾಗಿಣಿ ದ್ವಿವೇದಿ ಬಹುಭಾಷಾ ನಟಿ. ಮನಮೋಹಕ ನೋಟ ಹಾಗೂ ಮಾದಕ ಮೈಮಾಟಕ್ಕೆ ಹೆಸರಾದವರು. ಯೋಗ ದಿನದ ಸಂದರ್ಭದಲ್ಲಿ ಅವರು ಹಂಚಿಕೊಂಡ ಕೆಲವು ವಿಶೇಷ ಭಂಗಿಯ ಚಿತ್ರಗಳು ಇಲ್ಲಿವೆ.

VISTARANEWS.COM


on

Ragini Dwivedi yoga images
Koo
Multilingual actress Ragini Dwivedi

ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಯೋಗದಿನದಂದು ಕೆಲ ಯೋಗಗಳನ್ನು ಮಾಡುತ್ತ ಸ್ಪೆಷಲ್‌ ಆಗಿ ವಿಷ್‌ ಮಾಡಿದ್ದಾರೆ.

Ragini devotes some time to yoga

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಗಿಣಿ ಸ್ವಲ್ಪ ಸಮಯವನ್ನು ಯೋಗಕ್ಕೆಂದೇ ಮೀಸಲಿಡುತ್ತಾರೆ.

Ragini Dwivedi posing doing Chakrasana on Yoga Day

ಯೋಗದಿನದಂದು ಚಕ್ರಾಸನ ಮಾಡುತ್ತ ಪೋಸ್‌ ನೀಡುತ್ತಿರುವ ರಾಗಿಣಿ ದ್ವಿವೇದಿ

Ragini Dwivedis fitness photo is going viral on the internet

ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ರಾಗಿಣಿ ದ್ವಿವೇದಿ ಫಿಟ್‌ನೆಸ್‌ ಫೋಟೊ

Sandalwood Bedagi has great importance for beauty and fitness

ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವನೀಡುವ ಸ್ಯಾಂಡಲ್‌ವುಡ್‌ ಬೆಡಗಿ

Fat girl keeps fit with yoga workout despite busy schedule

ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಯೋಗ ವರ್ಕೌಟ್‌ ಮಾಡುತ್ತ ಬಾಡಿಯನ್ನು ಫಿಟ್‌ ಆಗಿ ಇರಿಸಿಕೊಂಡ ತುಪ್ಪದ ಹುಡುಗಿ

ಇದನ್ನೂ ಓದಿ: Ragini Dwivedi: ಮಾದಕ ನಟಿ ರಾಗಿಣಿಯ ಬಿಂದಾಸ್ ಯೋಗ ನೋಡುವುದೇ ಯೋಗ!

Continue Reading
Advertisement
love jihad
ಕರ್ನಾಟಕ2 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

BUS
ಕರ್ನಾಟಕ2 hours ago

ಚಿಕ್ಕಮಗಳೂರಿನ ದತ್ತಪೀಠದಲ್ಲಿ 100 ಅಡಿ ಆಳಕ್ಕೆ ಬಿದ್ದ ಪ್ರವಾಸಿ ಬಸ್;‌ ಬಾಲಕ ಸಾವು, 29 ಮಂದಿಗೆ ಗಾಯ

ತುಮಕೂರು2 hours ago

Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

CSK vs SRH
ಕ್ರೀಡೆ2 hours ago

CSK vs SRH: ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ; ಹೈದರಾಬಾದ್​ ವಿರುದ್ಧ 78 ರನ್​ ಅಮೋಘ ಜಯ

Notes
ಕರ್ನಾಟಕ2 hours ago

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Narendra Modi
Lok Sabha Election 20242 hours ago

Narendra Modi: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಸ್ಪಷ್ಟ; ಪುನರುಚ್ಚರಿಸಿದ ಮೋದಿ

cet exam karnataka exam authority
ಕರ್ನಾಟಕ3 hours ago

CET 2024: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೈ ಬಿಡಲು ನಿರ್ಧಾರ, ಮರು ಪರೀಕ್ಷೆ ಇಲ್ಲ; ಅಂಕ ಪರಿಗಣನೆ ಹೇಗೆ?

PM Narendra Modi
ಕರ್ನಾಟಕ3 hours ago

PM Narendra Modi: ನಾಳೆ ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

Paris Olympics
ಕ್ರೀಡೆ3 hours ago

Paris Olympics: ಬೆಳ್ಳಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಶೂಟರ್​ ಮಹೇಶ್ವರಿ

Arecanut cultivation
ಚಿತ್ರದುರ್ಗ4 hours ago

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20249 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202411 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202413 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202414 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ17 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ21 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ3 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌