Motivational story | ಶ್ರೀಮಂತ ಉದ್ಯಮಿ ಮರಣ ಮಂಚದಲ್ಲಿ ಕುಳಿತು ಬರೆದ ವಿದಾಯ ಪತ್ರದಲ್ಲಿ ಏನಿತ್ತು? - Vistara News

ಪ್ರಮುಖ ಸುದ್ದಿ

Motivational story | ಶ್ರೀಮಂತ ಉದ್ಯಮಿ ಮರಣ ಮಂಚದಲ್ಲಿ ಕುಳಿತು ಬರೆದ ವಿದಾಯ ಪತ್ರದಲ್ಲಿ ಏನಿತ್ತು?

ನಮಗೆ ಬದುಕು ಕಳೆದುಹೋಗುವಾಗ ಏನೂ ಅನಿಸುವುದಿಲ್ಲ. ಆದರೆ, ಬದುಕು ಮುಗಿಯುತ್ತಿದೆ ಅಂದಾಗ ಎಲ್ಲವೂ ನೆನಪಾಗಲು ಶುರುವಾಗುತ್ತದೆ! ಅದು ಮಾಡಿಲ್ಲ.. ಇದು ಮಾಡಿಲ್ಲ. ಅವರನ್ನು ಮಾತನಾಡಿಸಿಲ್ಲ. ಇವರ ಜತೆ ಸಮಯ ಕಳೆದಿಲ್ಲ.. ಹೀಗೆ ಎಲ್ಲವೂ. ಆದರೆ ಅದು ನೆನಪಾದಾಗ ಎಲ್ಲ ಮುಗಿದೇ ಹೋಗಿರುತ್ತದೆ..

VISTARANEWS.COM


on

vidaya patra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- motivational story

ವಿಶ್ವನಾಥ ರಾಯರು ಪರಮ ಶ್ರೀಮಂತ. ಹತ್ತಾರು ಕಂಪನಿಗಳ ಒಡೆಯ. ಎಲ್ಲ ಆಸ್ತಿಪಾಸ್ತಿ ಲೆಕ್ಕ ಹಾಕಿದರೆ ಕನಿಷ್ಠ 500 ಕೋಟಿ ಬಾಳುತ್ತಿದ್ದರು. ಅದೊಂದು ದಿನ ರಾಯರು ತಮ್ಮ ವೃತ್ತಿ ಬದುಕಿನಿಂದ ವಿರಾಮ ಪಡೆಯಲು ನಿರ್ಧರಿಸಿದರು. ಮನೆಯವರನ್ನೆಲ್ಲ ಕರೆದು ತೀರ್ಮಾನ ಪ್ರಕಟಿಸಿ ಹೊಣೆಗಾರಿಕೆಗಳನ್ನು ಹಸ್ತಾಂತರಿಸಿದರು.

ನಾಳೆಯಿಂದ ಬದುಕನ್ನು ಇನ್ನಷ್ಟು ಖುಷಿಯಿಂದ ಕಳೆಯಬೇಕು, ಇಷ್ಟು ವರ್ಷ ಹಣದ ಹಿಂದೆಯೇ ಓಡಿದ್ದಾಯಿತು, ಈಗ ಊರು ಸುತ್ತಬೇಕು, ಫ್ರೆಂಡ್ಸ್ ಭೇಟಿ ಆಗಬೇಕು ಅಂದುಕೊಂಡರು.

ಹಾಗೆ ಮಲಗಿಕೊಂಡಾಗಲೇ ಎದೆಯಲ್ಲೇನೋ ಚಳಕ್ಕೆಂದಿತು. ಅಮ್ಮಾ ಅಂದವರೇ ರಾಯರು ಒಂದು ಬದಿಗೆ ತಿರುಗಿದರು. ಅಲ್ಲಿ ದೇವತೆಯೊಬ್ಬ ನಿಂತಿದ್ದ.

ಅವನಂದ: ರಾಯರೇ ನಿಮ್ಮ ಜೀವನ ಮುಗಿಯಿತು. ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ.

ರಾಯರಿಗೆ ವಿಷಯ ಅರ್ಥವಾಯಿತು. ಆದರೂ ಅವರೊಂದು ವಿನಂತಿ ಮಾಡಿದರು. “ದೇವಾ.. ನಾನು ಏನೇನೋ ಆಸೆ ಇಟ್ಟುಕೊಂಡಿದ್ದೆ. ಬದುಕನ್ನು ಚಂದವಾಗಿ ಬದುಕಬೇಕೆಂದು ಬಯಸಿದ್ದೆ. ಎಲ್ಲೆಲ್ಲೋ ತಿರುಗಾಡಬೇಕಿತ್ತು. ಒಂದು ತಿಂಗಳು ಅವಕಾಶ ಕೊಡು. ಜೀವದಾನ ಕೊಡು. ನಾನು ನನ್ನ ಸಮಸ್ತ ಆಸ್ತಿಯನ್ನು ಬರೆದುಕೊಡುತ್ತೇನೆ’ ಅಂದರು.

ದೇವರು ಒಪ್ಪಲಿಲ್ಲ. ‘ನನ್ನ ಕುಟುಂಬದವರನ್ನೊಮ್ಮೆ ಕಣ್ಣಾರೆ ನೋಡಬೇಕು. ನನ್ನ ಬ್ಯುಸಿ ಮಧ್ಯೆ ಅದೂ ಸಾಧ್ಯವಾಗಲಿಲ್ಲ. ಒಮ್ಮೆ ಫ್ರೆಂಡ್ಸ್, ಮನೆಯವರ ಜತೆ ಮನ ಬಿಚ್ಚಿ ಮಾತಾಡೋಕೆ ಒಂದು ಗಂಟೆ ಕೊಡು’ ಎಂದರು.

ದೇವರು ಅದಕ್ಕೂ ಒಪ್ಪಲಿಲ್ಲ. ಕೊನೆಗೆ ಒಂದು ಸಣ್ಣ ವಿದಾಯ ಪತ್ರ ಬರೆಯಲಾದರೂ ಒಂದು ನಿಮಿಷ ಕೊಡು ಎಂದು ಅಂಗಲಾಚಿದರು. ದೇವರಿಗೆ ಏನನಿಸಿತೋ ಏನೊ, ಆಯ್ತು ಅಂದವರೇ ಒಂದು ಸಣ್ಣ ಪೇಪರ್, ಪೆನ್ನು ಕೊಟ್ಟರು.

ವಿಶ್ವನಾಥ ರಾಯರು ಬರೆಯಲು ಶುರು ಮಾಡಿದರು..

ನಾನು ಸಾಕಷ್ಟು ಹಣ ಮಾಡಿದ್ದೇನೆ ಎಂಬ ಹೆಮ್ಮೆ ಇತ್ತು. ಹಣದಿಂದ ಏನನ್ನು ಬೇಕಾದರೂ ಖರೀದಿ ಮಾಡಬಲ್ಲೆ ಎಂಬ ಹುಂಬತನವಿತ್ತು. ಆದರೆ ಎಲ್ಲ ಹಣವನ್ನು ಕೊಡುತ್ತೇನೆ ಎಂದರೂ ಕನಿಷ್ಠ ಒಂದು ಗಂಟೆ ಅವಧಿಯನ್ನು ಖರೀದಿಸಲೂ ನನಗೆ ಸಾಧ್ಯವಾಗುತ್ತಿಲ್ಲ. ಎಲ್ಲರಿಗೆ ವಿದಾಯ ಹೇಳೋ ಈ ಘಳಿಗೆಯಲ್ಲಿ ನಾನು ಹೇಳೋದಿಷ್ಟೆ: ದಯವಿಟ್ಟು ನಿಮ್ಮ ಕುಟುಂಬ, ಸ್ನೇಹಿತರ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಬದುಕಿನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಿ. ನಿಮಗಿಷ್ಟವಾದ ಜಾಗಗಳಿಗೆ ಹೋಗಿ, ಮನೆ ಮಂದಿ ಜತೆ ಕಾಲ ಕಳೆಯಿರಿ.. ಯಾಕೆಂದರೆ ಇವೆಲ್ಲ ಮತ್ತೆ ಬೇಕೆಂದರೂ ಸಿಗುವುದಿಲ್ಲ.

ಬರೆಯುತ್ತಿದ್ದ ಕೈಗಳು ಹಾಗೇ ನಿಶ್ಚಲವಾದವು.

ಇದನ್ನೂ ಓದಿ| Motivational story: ಒಬ್ಬ ರಂಗುರಂಗಿನ ಬಿಸಿನೆಸ್‌ ಮ್ಯಾನ್‌ ಮತ್ತು ಅವನ ನಾಲ್ವರು ಮಡದಿಯರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗದಗ

Bus seized: ಆಂಧ್ರ ಸಿಎಂ ಕ್ಷೇತ್ರದ ಪ್ರವಾಸಿಗರು ಗದಗಿನಲ್ಲಿ ಲಾಕ್‌; ಇಡೀ ರಾತ್ರಿ ಆರ್‌ಟಿಒ ಕಚೇರಿಯಲ್ಲಿ ಕಳೆದ 49 ಮಂದಿ!

Bus Siege: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ‌ ಪುಲಿವೆಂದುಲಾ ಪಟ್ಟಣದ ನಿವಾಸಿಗಳು ಇವರಾಗಿದ್ದು, ಹೈದರಾಬಾದ್, ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯ ಪ್ರವಾಸ ಮಾಡಲು ಮುಂದಾಗಿದ್ದರು. ಹೈದರಾಬಾದ್‌ನಿಂದ ರಾಯಚೂರು ಮಾರ್ಗವಾಗಿ ಗದಗ ನಗರಕ್ಕೆ ಈ ಬಸ್‌ ಎಂಟ್ರಿಯಾಗಿತ್ತು. ಹೆದ್ದಾರಿಯಲ್ಲಿ ಬಸ್‌ ನಿಲ್ಲಿಸಿದ ಆರ್‌ಟಿಒ ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಚಾರ್ಸಿ, ಎಂಜಿನ್ ನಂಬರ್ ಅನ್ನೇ ತಿರುಚಿರುವ ಸಂಗತಿ ಗೊತ್ತಾಗಿದೆ. ಇದರ ಜತೆಗೆ ಉಳಿದ ದಾಖಲೆಗಳೂ ಸರಿ ಇರಲಿಲ್ಲ. ಹೀಗಾಗಿ ಬಸ್‌ ಅನ್ನು ಸೀಝ್‌ ಮಾಡಲಾಗಿದೆ.

VISTARANEWS.COM


on

Bus Siege Andhra Pradesh bus seized in Gadag and 49 tourists in trouble
Koo

ಗದಗ: ಇದೊಂದು ತಮ್ಮದಲ್ಲದ ತಪ್ಪಿಗೆ ಪರದಾಟ ನಡೆಸುತ್ತಿರುವ ಅಪರೂಪದ ಪ್ರಕರಣವಾಗಿದೆ. ಗದಗಿನಲ್ಲಿ ಆಂಧ್ರಪ್ರದೇಶ ಪ್ರವಾಸಿಗರು (Andhra Pradesh tourists) ಲಾಕ್‌ ಆಗಿದ್ದಾರೆ. ಒಂದಿಡೀ ರಾತ್ರಿ ಆರ್‌ಟಿಒ ಕಚೇರಿಯಲ್ಲಿಯೇ ಕಳೆಯುವಂತಾಗಿದೆ. ಇಷ್ಟಾದರೂ ಅವರಿಗೆ ಅಲ್ಲಿಂದ ಮುಕ್ತಿ ಸಿಕ್ಕಿಲ್ಲ. ಆಂಧ್ರಪ್ರದೇಶದ ಸಿಎಂ ಜಗನ್‌ ಮೋಹನ್‌ ರೆಡ್ಡಿ (Andhra Pradesh CM Jagan Mohan Reddy) ಅವರ ತವರು ಕ್ಷೇತ್ರದ ಮಂದಿ ಪ್ರವಾಸಕ್ಕೆಂದು ಬಂದಿದ್ದಾಗ ಗದಗ ಆರ್‌ಟಿಒ ಪೊಲೀಸರು ಬಸ್‌ ಅನ್ನು ತಡೆದಿದ್ದಾರೆ. ಈ ವೇಳೆ ಬಸ್‌ಗೆ ಸರಿಯಾದ ದಾಖಲೆಗಳು ಇಲ್ಲದೆ ಇದ್ದಿದ್ದರಿಂದ ಸೀಝ್‌ (Bus Siege) ಮಾಡಿ ಆರ್‌ಟಿಒ ಕಚೇರಿಗೆ ತಂದಿದ್ದಾರೆ. ಅನಿವಾರ್ಯವಾಗಿ ಪ್ರವಾಸಿಗರೂ ಅಲ್ಲಿಗೆ ಬಂದು ಕೂರುವಂತಾಗಿದೆ.

ಈಗ ಗದಗ ಆರ್‌ಟಿಒ ಕಚೇರಿಯಲ್ಲಿ ಆಂಧ್ರ ಪ್ರದೇಶ ಪುಲುವೆಂದುಲಾ ವಿಧಾನಸಭಾ ಕ್ಷೇತ್ರದ 49 ಮಂದಿ ಗೋಳಾಡುವಂತಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಆಂಧ್ರ ಪ್ರದೇಶದಿಂದ 10 ದಿನಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದರು.

ಆಂಧ್ರಪ್ರದೇಶದ ಕಡಪಾ ಜಿಲ್ಲೆಯ‌ ಪುಲಿವೆಂದುಲಾ ಪಟ್ಟಣದ ನಿವಾಸಿಗಳು ಇವರಾಗಿದ್ದು, ಹೈದರಾಬಾದ್, ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯ ಪ್ರವಾಸ ಮಾಡಲು ಮುಂದಾಗಿದ್ದರು. ಹೈದರಾಬಾದ್‌ನಿಂದ ರಾಯಚೂರು ಮಾರ್ಗವಾಗಿ ಗದಗ ನಗರಕ್ಕೆ ಈ ಬಸ್‌ ಎಂಟ್ರಿಯಾಗಿತ್ತು. ಹೆದ್ದಾರಿಯಲ್ಲಿ ಬಸ್‌ ನಿಲ್ಲಿಸಿದ ಆರ್‌ಟಿಒ ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

Bus Siege Andhra Pradesh bus seized in Gadag and 49 tourists in trouble
ರಸ್ತೆ ಪಕ್ಕವೇ ಅಡುಗೆ ಮಾಡಿ ಊಟ ಮಾಡುತ್ತಿರುವ ಆಂಧ್ರಪ್ರದೇಶದ ಪ್ರವಾಸಿಗರು.

ದಾಖಲೆಗಳೇ ಸರಿ ಇಲ್ಲ!

AP03 TE8520 ನಂಬರ್ ಪ್ಲೇಟ್‌ವುಳ್ಳ ಬಸ್ ಇದಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದಾಗ ಚಾರ್ಸಿ, ಎಂಜಿನ್ ನಂಬರ್ ಅನ್ನೇ ತಿರುಚಿರುವ ಸಂಗತಿ ಗೊತ್ತಾಗಿದೆ. ಇದರ ಜತೆಗೆ ಉಳಿದ ದಾಖಲೆಗಳೂ ಸರಿ ಇರಲಿಲ್ಲ. ಈ ಬಗ್ಗೆ ಬಸ್‌ ಚಾಲಕ, ನಿರ್ವಾಹಕರನ್ನು ಕೇಳಿದರೆ ಸರಿಯಾಗಿ ಉತ್ತರ ನೀಡಲಿಲ್ಲ. ಹೀಗಾಗಿ ಹೆದ್ದಾರಿಯಲ್ಲಿಯೇ ಬಸ್‌ ಅನ್ನು ಸೀಝ್‌ ಮಾಡಿದ ಅಧಿಕಾರಿಗಳು, ಆ ಬಸ್‌ ಅನ್ನು ಆರ್‌ಟಿಒ ಕಚೇರಿಗೆ ತಂದರು.

ಇದನ್ನೂ ಓದಿ: Prajwal Revanna Case: ನಿಖಿಲ್ ಎಲ್ಲಿದ್ದೀಯಪ್ಪಾ ಎಂದಿದ್ದಾಯ್ತು, ಈಗ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!

ಪ್ರವಾಸಿಗರ ಪರದಾಟ

ಈ ಎಲ್ಲ ಬೆಳವಣಿಗೆ ನಡುವೆ ಅಕ್ಷರಶಃ ನಲುಗಿರುವುದು ಆಂಧ್ರ ಪ್ರದೇಶದ ಪ್ರವಾಸಿಗರು. ಅವರು ಖುಷಿ ಖುಷಿಯಿಂದ ಪ್ರವಾಸಕ್ಕೆ ಹೊರಟಿದ್ದರು. ಆದರೆ, ಬಸ್‌ ದಾಖಲೆ ಸರಿ ಇಲ್ಲದಿರುವ ಬಗ್ಗೆ ಮಾಹಿತಿ ಇಲ್ಲದೇ ಇದ್ದರಿಂದ ಈಗ ಫಜೀತಿಗೆ ಸಿಲುಕಿದ್ದಾರೆ. ಬಸ್‌ಗೆ ಬಾಡಿಗೆ ಕೊಟ್ಟು ಬುಕ್‌ ಮಾಡಲಾಗಿದೆ. ಈಗ ಬೇರೆ ರಾಜ್ಯದಲ್ಲಿ ಬಸ್‌ ಸೀಜ್‌ ಆದರೆ ತಾವು ಏನು ಮಾಡುವುದು ಎಂಬ ಯೋಚನೆ ಎದುರಾಯಿತು. ಹೀಗಾಗಿ ಮಂಗಳವಾರ ಮಧ್ಯಾಹ್ನವೇ ಬಸ್‌ ಅನ್ನು ಸೀಜ್‌ ಮಾಡಲಾಗಿದ್ದರೂ ಬಸ್‌ ಜತೆಗೆ ಪ್ರಯಾಣಿಕರೂ ಆರ್‌ಟಿಒ ಕಚೇರಿಗೆ ಬಂದು ಕುಳಿತಿದ್ದರು. ನಮಗೆ ಬಸ್‌ ಅನ್ನು ಬಿಟ್ಟುಕೊಡಿ, ಇಲ್ಲವೇ ಬೇರೆ ಬಸ್‌ ಅನ್ನು ವ್ಯವಸ್ಥೆ ಮಾಡಿ ಎಂದು ಆರ್‌ಟಿಒ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಆರ್‌ಟಿಒ ಅಧಿಕಾರಿಗಳು ಇದ್ಯಾವುದಕ್ಕೂ ಜಗ್ಗುತ್ತಿಲ್ಲ. ದಾಖಲೆಗಳನ್ನು ತಿರುಚುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಹೀಗಾಗಿ ಈ ಬಸ್‌ ಅನ್ನು ಸೀಝ್‌ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Shah Rukh Khan : ಐಪಿಎಲ್ 2024ರ ಮೊದಲ ಪ್ಲೇಆಫ್ ಪಂದ್ಯದಲ್ಲಿ ಎಸ್ಆರ್​ಎಚ್​​​ ವಿರುದ್ಧ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಶಾರುಖ್ ಖಾನ್ ಅಹಮದಾಬಾದ್​ಗೆ ಬಂದಿದ್ದರು. ಪಂದ್ಯದ ಮುಕ್ತಾಯದ ತನಕ ಅವರು ಮೈದಾನದಲ್ಲಿಯೇ ಇದ್ದರು. ಬಳಿಕ ಅವರು ಮೈದಾನಕ್ಕೆ ಇಳಿದು ಕ್ಯಾಮೆರಾಗಳಿಗೆ ಫೋಸ್​ ಕೊಟ್ಟಿದ್ದರು. ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ಹೇಳಿದ್ದರು.

VISTARANEWS.COM


on

Shah Rukh Khan
Koo

ಅಹ್ಮದಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದಾಗಿ ವರದಿಗಳಾಗಿವೆ. ಅವರನ್ನು ತಕ್ಷಣವೇ ಅಹಮದಾಬಾದ್ ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR ) ಮತ್ತು ಸನ್​ರೈಸರ್ಸ್​​ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ನಟ ಬಿಸಿಲಿನ ಆಘಾತಕ್ಕೆ (Sun Stroke) ಒಳಗಾದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಐಪಿಎಲ್ 2024ರ ಮೊದಲ ಪ್ಲೇಆಫ್ ಪಂದ್ಯದಲ್ಲಿ ಎಸ್ಆರ್​ಎಚ್​​​ ವಿರುದ್ಧ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಶಾರುಖ್ ಖಾನ್ ಅಹಮದಾಬಾದ್​ಗೆ ಬಂದಿದ್ದರು. ಪಂದ್ಯದ ಮುಕ್ತಾಯದ ತನಕ ಅವರು ಮೈದಾನದಲ್ಲಿಯೇ ಇದ್ದರು. ಬಳಿಕ ಅವರು ಮೈದಾನಕ್ಕೆ ಇಳಿದು ಕ್ಯಾಮೆರಾಗಳಿಗೆ ಫೋಸ್​ ಕೊಟ್ಟಿದ್ದರು. ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ಹೇಳಿದ್ದರು. ಆದರೆ, ಅಲ್ಲಿಂದ ನಿರ್ಗಮಿಸಿದ ಬಳಿಕ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂದು ಹೇಳಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯದ ನಿಗಾ ವಹಿಸುತ್ತಿದ್ದಾರೆ ಎಂಬುದಾಗಿ ಮಾಹಿತಿ ದೊರಕಿದೆ.

ಫೈನಲ್ ತಲುಪಿದ ಕೆಕೆಆರ್

ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದ ನಂತರ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024 ರ ಫೈನಲ್​ಗೆ ಪ್ರವೇಶಿಸಿದೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಶಾರುಖ್ ಖಾನ್ ಮತ್ತು ಅವರ ಮಕ್ಕಳಾದ ಅಬ್ರಾಮ್, ಸುಹಾನಾ ಇದ್ದರು. ಜತೆಗೆ ನಟಿ ಅನನ್ಯಾ ಮತ್ತು ಶನಾಯಾ ಕೂಡ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

ಯಶಸ್ಸಿನ ಸಂಭ್ರಮದಲ್ಲಿ ಶಾರುಖ್​

ಶಾರುಖ್ ಖಾನ್ ಇತ್ತೀಚೆಗೆ ಮೂರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ: “ಪಠಾಣ್”, “ಜವಾನ್” ಮತ್ತು “ಡಂಕಿ”. ಆ ಬಳಿಕ ಅವರು ತಮ್ಮ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್​ ಜತೆಗೆ ಇದ್ದಾರೆ. ಈ ಬಾರಿ ಅವರ ತಂಡುವ ಫೈನಲ್​ಗೆ ಪ್ರವೇಶ ಪಡೆದಿದೆ. ಇದರ ಜತೆಎಗ ಕಿಂಗ್ ಖಾನ್ ತಮ್ಮ ಮುಂಬರುವ ಚಿತ್ರ “ಕಿಂಗ್” ನಲ್ಲಿ ಕೆಲಸ ಮಾಡುತ್ತಿದ್ದಾರೆ,

ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು
ಶಾರುಖ್ ಖಾನ್ ಅವರ ಆರೋಗ್ಯದ ಕುರಿತ ಮಾಹಿತಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಶಾರುಖ್ ಅವರ ಅನಾರೋಗ್ಯ ಎತ್ತಿ ತೋರಿಸುತ್ತಿದೆ.

Continue Reading

ಪ್ರಮುಖ ಸುದ್ದಿ

LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

LPL 2024: ನ್ಯಾಯಾಲಯದ ಆದೇಶದ ನಂತರ ನಗರದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆಹಮಾನ್ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಆದಾಗ್ಯೂ, ಅವರ ವಿರುದ್ಧದ ನಿಖರವಾದ ಆರೋಪಗಳು ಇನ್ನೂ ಸ್ಪಷ್ಟವಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿದ ದೇಶದ ಕ್ರೀಡಾ ಕಾಯ್ದೆಯ ಎರಡು ನಿಬಂಧನೆಗಳ ಅಡಿಯಲ್ಲಿ ಅವರನ್ನು ತನಿಖೆ ನಡೆಸಲಾಗುತ್ತಿದೆ.

VISTARANEWS.COM


on

LPL 2024
Koo

ಬೆಂಗಳೂರು: ಲಂಕಾ ಪ್ರೀಮಿಯರ್ ಲೀಗ್ (LPL 2024 ) ಫ್ರಾಂಚೈಸಿ ಡಂಬುಲ್ಲಾ ಥಂಡರ್ಸ್​​ನ ಮಾಲೀಕರಾಗಿರುವ ಬಾಂಗ್ಲಾದೇಶ ಮೂಲದ ಬ್ರಿಟಿಷ್ ಪ್ರಜೆ ತಮೀಮ್ ರೆಹಮಾನ್ ಅವರನ್ನು ಮ್ಯಾಚ್ ಫಿಕ್ಸಿಂಗ್ಸ್​​ನಲ್ಲಿ ತೊಡಗಿರುವ ಅನುಮಾನದ ಮೇಲೆ ಬುಧವಾರ ಬಂಧಿಸಲಾಗಿದೆ. ಕ್ರೀಡಾ ಸಚಿವಾಲಯದ ಕ್ರೀಡೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆಯ ವಿಶೇಷ ತನಿಖಾ ಘಟಕದ ಅಧಿಕಾರಿಯೊಬ್ಬರು ಬ್ರಿಟಿಷ್ ಪೌರತ್ವವನ್ನು ಹೊಂದಿರುವ ವ್ಯಕ್ತಿಯ ಬಂಧನ ದೃಢಪಡಿಸಿದ್ದಾರೆ. ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರೆಹಮಾನ್ ಅವರನ್ನು ಮೇ 31 ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಡಂಬುಲ್ಲಾ ಫ್ರಾಂಚೈಸಿಯನ್ನು ಬಾಂಗ್ಲಾದೇಶದ ಉದ್ಯಮಿಗಳ ನೇತೃತ್ವದ ಇಂಪೀರಿಯಲ್ ಸ್ಪೋರ್ಟ್ಸ್ ಗ್ರೂಪ್ ಏಪ್ರಿಲ್​ನಲ್ಲಿ ಖರೀದಿಸಿತ್ತು

ನ್ಯಾಯಾಲಯದ ಆದೇಶದ ನಂತರ ನಗರದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆಹಮಾನ್ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಆದಾಗ್ಯೂ, ಅವರ ವಿರುದ್ಧದ ನಿಖರವಾದ ಆರೋಪಗಳು ಇನ್ನೂ ಸ್ಪಷ್ಟವಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿದ ದೇಶದ ಕ್ರೀಡಾ ಕಾಯ್ದೆಯ ಎರಡು ನಿಬಂಧನೆಗಳ ಅಡಿಯಲ್ಲಿ ಅವರನ್ನು ತನಿಖೆ ನಡೆಸಲಾಗುತ್ತಿದೆ. ಎಲ್ಪಿಎಲ್ ಜುಲೈ 1 ರಿಂದ 21 ರವರೆಗೆ ನಡೆಯಲಿದೆ.

ಕೊಲಂಬೊದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್​ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಭಾರತೀಯ ಪ್ರಜೆಗಳಾದ ಯೋನಿ ಪಟೇಲ್ ಮತ್ತು ಪಿ ಆಕಾಶ್ ಅವರ ಪಾಸ್ಪೋರ್ಟ್​​ಗಳನ್ನು ಹಿಂದಿರುಗಿಸುವಂತೆ ಶ್ರೀಲಂಕಾದ ನ್ಯಾಯಾಲಯವು ಇತ್ತೀಚೆಗೆ ಆದೇಶಿಸಿದೆ. ಅನುಮತಿ ಪಡೆಯದೇ ಲೆಜೆಂಡ್ಸ್ ಲೀಗ್​ನಲ್ಲಿ ಪಟೇಲ್ ಒಂದು ತಂಡವನ್ನು ಹೊಂದಿದ್ದರು.

ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಇವರಿಬ್ಬರು ಮಾರ್ಚ್ 8 ಮತ್ತು 19 ರ ನಡುವೆ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಲೀಗ್​ನ ಪಂದ್ಯಗಳನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ.

2019 ರಲ್ಲಿ ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರವನ್ನು ಅಪರಾಧವೆಂದು ಪರಿಗಣಿಸಿದ ದಕ್ಷಿಣ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಿತ್ತು. ತಪ್ಪಿತಸ್ಥರೆಂದು ಸಾಬೀತಾದ ಯಾರಿಗಾದರೂ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಪಾವತಿಸಬೇಕಾಗುತ್ತದೆ.

ಹರಾಜಿನಲ್ಲಿ ಭರ್ಜರಿ ಬಿಡ್ಡಿಂಗ್​

500 ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುವ ಎಲ್​​ಪಿಎಲ್​ನ ಐದನೇ ಆವೃತ್ತಿಯ ಹರಾಜು ಮಂಗಳವಾರ ನಡೆದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಬಳಿಕ ನಾಲ್ಕು ವರ್ಷಗಳ ನಂತರ ಟೂರ್ನಿ ಆರಂಭಗೊಂಡಿದೆ. ಮಥೀಶಾ ಪಥಿರಾನಾ ಮಂಗಳವಾರ ಲಂಕಾ ಪ್ರೀಮಿಯರ್ ಲೀಗ್​ನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಪಂದ್ಯಾವಳಿಯ 2024 ರ ಆವೃತ್ತಿಗಾಗಿ ತಮ್ಮ ಹಳೆಯ ತಂಡವಾದ ಕೊಲಂಬೊ ಸ್ಟ್ರೈಕರ್​​ನಿಂದ ಅವರು 1 ಕೋಟಿ ರೂಪಾಯಿ ಪಡೆದುಕೊಂಡರು.

ಇದನ್ನೂ ಓದಿ: IPL 2024 : ಅಮ್ಮನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಕೆಕೆಆರ್​ ಪರ ಕ್ವಾಲಿಫೈಯರ್ ಆಡಿದ ಆಫ್ಘನ್​ ಕ್ರಿಕೆಟಿಗ

ಪಥಿರಾನಾ ಇತ್ತೀಚೆಗೆ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಲೀಗ್ 2018 ರಲ್ಲಿ ಪ್ರಾರಂಭವಾಗಬೇಕಿತ್ತು. ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಯೊಳಗಿನ ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಅನೇಕ ಬಾರಿ ಮುಂದೂಡಿಕೆಯಾಗಿತ್ತು. ಬಿ-ಲವ್ ಕ್ಯಾಂಡಿ ತಂಡವು ಫೈನಲ್​ನಲ್ಲಿ ಡಂಬುಲ್ಲಾ ಔರಾ ತಂಡವನ್ನು ಸೋಲಿಸುವ ಮೂಲಕ 2023 ರ ಆವೃತ್ತಿಯನ್ನು ಗೆದ್ದುಕೊಂಡಿತ್ತು. ಪಂದ್ಯಾವಳಿಯು ಐದು ಫ್ರಾಂಚೈಸಿಗಳ ನಡುವೆ ನಡೆಯುತ್ತದೆ.

Continue Reading

ಪ್ರಮುಖ ಸುದ್ದಿ

CM’s Bengaluru City Rounds: ರಸ್ತೆಗಳ ದುರಸ್ತಿಗೆ ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸಿಎಂ ಸೂಚನೆ

CM’s Bengaluru City Rounds: ರಸ್ತೆಗಳಲ್ಲಿ ಗುಂಡಿಗಳು ಬಿದ್ದ ಕೂಡಲೇ ದುರಸ್ತಿ ಮಾಡಬೇಕು. ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

VISTARANEWS.COM


on

CM's Bengaluru City Rounds
Koo

ಬೆಂಗಳೂರು: ನಗರದ ವಿವಿಧೆಡೆ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮಳೆಗಾಲ ನಿರ್ವಹಣೆಗೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಮಳೆ ಬಂದಾಗ ಮನೆ, ಮಳಿಗೆಗಳಿಗೆ ನೀರು ನುಗ್ಗಿದರೆ ಎಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM’s Bengaluru City Rounds) ಎಚ್ಚರಿಕೆ ನೀಡಿದ್ದಾರೆ.

ಇನ್ನು ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚನೆ ನೀಡಿರುವ ಸಿಎಂ ಅವರು, ಗುಂಡಿಗಳು ಬಿದ್ದ ಹಾಗೆಯೇ ಕೂಡಲೇ ದುರಸ್ತಿ ಮಾಡಬೇಕು, ಬಿಡಿಎನಲ್ಲಿಯೂ ಈ ರೀತಿ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು ಹಾಗೂ ಒಣಗಿರುವ ಕೊಂಬೆಗಳನ್ನು ಕತ್ತರಿಸಬೇಕು. ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಬೇಕು. ಮುಂಗಾರು ಪ್ರಾರಂಭವಾಗುವ ಮುಂಚಿತವಾಗಿ ರಾಜಕಾಲುವೆಗಳ ಹೂಳು ತೆಗೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ | CM City Rounds: ವಿಜಯನಗರ ರಾಜಕಾಲುವೆ; ಈ ವರ್ಷದೊಳಗೆ ಪರಿಹರಿಸದಿದ್ದರೆ ಮುಖ್ಯ ಎಂಜಿನಿಯರ್‌ ಸಸ್ಪೆಂಡ್‌: ಸಿಎಂ ವಾರ್ನಿಂಗ್

ಒಂದು ತಿಂಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ

ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿದ್ದು, ಅವುಗಳನ್ನು ಮುಚ್ಚಬೇಕು, ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳಿವೆ. ಈ ತಿಂಗಳಲ್ಲಿ ಭರ್ತಿ ಮಾಡಬೇಕು. ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ನಿರ್ಮಿಸಿರುವ ರಸ್ತೆ ಅಗಲೀಕರಣ ಮಾಡಬೇಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಕೆರೆಯ ಬಳಿ ಇನ್ನೊಂದು ಚರಂಡಿ ನಿರ್ಮಿಸಬೇಕು ಎಂದು ಸೂಚಿಸಿದರು.

ಈಜಿಪುರದಲ್ಲಿ ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಇವರ ಗುತ್ತಿಗೆ ರದ್ದು ಮಾಡಿ ಹೊಸಬರಿಗೆ ಕೊಡಲು ಸೂಚನೆ ನೀಡಲಾಗಿದೆ. ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣಾ ಆಯೋಗದಿಂದ ಅನುಮತಿ ಪಡೆದು 7-8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಸಿಎಂ ಹೇಳಿದರು.

ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವು ಗೊಳಿಸಬೇಕು. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿದೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಜೂನ್‌ಗೆ ಮುಂಚೆಯೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರವಾಹ ಸಂಬಂಧಿ ಸ್ಥಳಗಳನ್ನು ಮಾತ್ರ ಪರಿಶೀಲಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ, ಅದರಂತೆ ಪರಿಶೀಲಿಸಲಾಗಿದೆ. ಕೆರೆಗಳಿಂದ ತೆಗೆಯಲಾಗುವ ಹೂಳನ್ನು ಗುರುತು ಮಾಡಿರುವ ಸ್ಥಳಗಳಲ್ಲಿ (ಕ್ವಾರಿಗಳಿಗೆ) ಹಾಕಲಾಗುತ್ತಿದೆ. ಇನ್ನು ಬಿಬಿಎಂಪಿ ಚುನಾವಣೆ ಬಗ್ಗೆ ಲೋಕಸಭೆ ಫಲಿತಾಂಶದ ನಂತರ ಚಿಂತಿಸಲಾಗುವುದು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೂ ಯಲಹಂಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿತ್ತು. ಯಲಹಂಕ ಕೆರೆಗೆ ನೀರು ಹೋಗುವಂತೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಿಬಿಎಂಪಿಗೆ ನೀರು ಹೋಗಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಾಳಿ ಆಂಜನೇಯ ದೇವಾಲಯದ ಬಳಿ ಮಳೆ ಜಾಸ್ತಿಯಾದಾಗ ನೀರು ಹರಿಯಲು ಎತ್ತರ ಸಾಲಲ್ಲ, ಹೂಳು ತುಂಬಿತ್ತು. ಪರ್ಯಾಯವಾಗಿ ಇನ್ನೊಂದು ಮೋರಿ ನಿರ್ಮಿಸಲು. ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | CM’s Bengaluru City Rounds: ರಾಜಕಾಲುವೆ ಒತ್ತುವರಿ ಯಾರೇ ಮಾಡಿದ್ರೂ ಮುಲಾಜಿಲ್ಲದೆ ತೆರವು: ಸಿಎಂ ಎಚ್ಚರಿಕೆ

ಹಿಂದಿನ ಸರ್ಕಾರ ಜನವರಿ 2023 ರಲ್ಲಿ 193 ಕಿಮೀ ತೆರವು ಮಾಡಲು ಕ್ರಮ ತೆಗೆದುಕೊಂಡರು. ಮೊದಲೇ ಈ ಕೆಲಸ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. 1800 ಕೋಟಿ ರೋ. ಇದಕ್ಕೆ ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ. ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ. 12 ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ. ವಕೀಲರು ಇದಕ್ಕೆ ಹಾಜರಾಗುತ್ತಿದ್ದು, ಅಗತ್ಯ ಬಿದ್ದರೆ ವಿಶೇಷ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥ ಗೊಳಿಸಲಾಗುವುದು. 12.15 ಕಿಮೀ ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Continue Reading
Advertisement
Jayashree Gurannavar
ಕ್ರೈಂ4 mins ago

Jayashree Gurannavar: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅನಾರೋಗ್ಯದಿಂದ ನಿಧನ

CGI Technology In Film
ಸಿನಿಮಾ5 mins ago

CGI Technology In Film: ʼವೆಸ್ಟ್‌ವರ್ಲ್ಡ್‌ʼನಿಂದ ʼಅವತಾರ್‌ʼ ಚಿತ್ರದವರೆಗೆ ಸಿಜಿಐ ತಂತ್ರಜ್ಞಾನದ ರೋಚಕ ಹಾದಿ! ವಿಡಿಯೊಗಳಿವೆ

Bus Siege Andhra Pradesh bus seized in Gadag and 49 tourists in trouble
ಗದಗ7 mins ago

Bus seized: ಆಂಧ್ರ ಸಿಎಂ ಕ್ಷೇತ್ರದ ಪ್ರವಾಸಿಗರು ಗದಗಿನಲ್ಲಿ ಲಾಕ್‌; ಇಡೀ ರಾತ್ರಿ ಆರ್‌ಟಿಒ ಕಚೇರಿಯಲ್ಲಿ ಕಳೆದ 49 ಮಂದಿ!

Shah Rukh Khan
ಪ್ರಮುಖ ಸುದ್ದಿ13 mins ago

Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

LPL 2024
ಪ್ರಮುಖ ಸುದ್ದಿ33 mins ago

LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

CM's Bengaluru City Rounds
ಪ್ರಮುಖ ಸುದ್ದಿ53 mins ago

CM’s Bengaluru City Rounds: ರಸ್ತೆಗಳ ದುರಸ್ತಿಗೆ ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸಿಎಂ ಸೂಚನೆ

Back button saree blouse
ಫ್ಯಾಷನ್54 mins ago

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

Calcutta High Court
ಪ್ರಮುಖ ಸುದ್ದಿ1 hour ago

Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

Bomb Threat
ಪ್ರಮುಖ ಸುದ್ದಿ1 hour ago

Bomb Threat : ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆ; ದೆಹಲಿಯಲ್ಲಿ ಆತಂಕ

ಕರ್ನಾಟಕ2 hours ago

CM’s Bengaluru City Rounds: ರಾಜಕಾಲುವೆ ಒತ್ತುವರಿ ಯಾರೇ ಮಾಡಿದ್ರೂ ಮುಲಾಜಿಲ್ಲದೆ ತೆರವು: ಸಿಎಂ ಎಚ್ಚರಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ13 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌