ಪ್ರತಿಭಾವಂತ ಟೆಕ್ಕಿಗಳಿಗೆ ಭಾರಿ ಬೇಡಿಕೆ, ಎರಡಂಕಿಯಲ್ಲಿ ಸಂಬಳ ಹೆಚ್ಚಳ, ಬಡ್ತಿ

ಪ್ರಮುಖ ಸುದ್ದಿ

ಪ್ರತಿಭಾವಂತ ಟೆಕ್ಕಿಗಳಿಗೆ ಭಾರಿ ಬೇಡಿಕೆ, ಎರಡಂಕಿಯಲ್ಲಿ ಸಂಬಳ ಹೆಚ್ಚಳ, ಬಡ್ತಿ

ಐಟಿ ಕಂಪನಿಗಳಲ್ಲೀಗ ಪ್ರತಿಭಾವಂತ ಟೆಕ್ಕಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಈ ಟ್ರೆಂಡ್‌ ಇದೆ ಎನ್ನುತ್ತಾರೆ ನೇಮಕಾತಿ ವಲಯದ ತಜ್ಞರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರತಿಭಾವಂತ ಟೆಕ್ಕಿಗಳಿಗೆ ಐಟಿ ವಲಯದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಎರಡಂಕಿಯ ಶೇಕಡಾವಾರು ಲೆಕ್ಕದಲ್ಲಿ ಭರ್ಜರಿ ವೇತನ ಏರಿಕೆ, ಬಡ್ತಿ, ಇತರ ಸೌಕರ್ಯ ಸವಲತ್ತುಗಳನ್ನು ಕೂಡ ಕಂಪನಿಗಳು ನೀಡುತ್ತಿವೆ. ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿಗಳು ಕಸರತ್ತು ನಡೆಸುತ್ತಿವೆ.

ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಣ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಶೇ.27.7ಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ಶೇ.12-13ರ ಪ್ರಮಾಣದಲ್ಲಿ ವೇತನ ಏರಿಕೆಗೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಭಾವಂತ ಉದ್ಯೋಗಿಗಳಿಗೆ ಶೇ.22-23 ವೇತನ ಏರಿಕೆಯನ್ನೂ ನೀಡಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ 2022-23ರಲ್ಲಿ ಶೇ.7-8ರ ಮಟ್ಟದಲ್ಲಿ ಸಂಬಳ ಹೆಚ್ಚಿಸಲು ಉದ್ದೇಶಿಸಿದೆ.

ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಕೂಡ ಪ್ರತಿಭಾವಂತರಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ಸಂಬಳವನ್ನು ಹೆಚ್ಚಿಸಲಾಗುತ್ತಿದೆ. ಮೈಕ್ರೊಸಾಫ್ಟ್‌ ಇದಕ್ಕಾಗಿ ತನ್ನ ಬಜೆಟ್‌ ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟಿದೆ ಎಂದು ಸಿಇಒ ಸತ್ಯ ನಾಡೆಳ್ಳಾ ತಿಳಿಸಿದ್ದಾರೆ. ಭಾರತದಲ್ಲಿ ಪ್ರತಿಭಾವಂತರಿಗೆ ಶೇ.20ರ ಸರಾಸರಿಯಲ್ಲಿ ವೇತನ ಏರಿಕೆಯಾಗುತ್ತಿದೆ ಎಂದು ಎಚ್‌ಆರ್‌ ತಜ್ಞರು ತಿಳಿಸಿದ್ದಾರೆ. ಟಿಸಿಎಸ್‌, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ವಿಪ್ರೊ, ಟೆಕ್‌ ಮಹೀಂದ್ರಾದಲ್ಲಿ ಉದ್ಯೋಗಿಗಳ ವೆಚ್ಚದಲ್ಲಿ ಹೆಚ್ಚಳವಾಗಿದೆ.

ನೇಮಕಾತಿ ವಲಯದ ಟೀಮ್‌ಲೀಸ್‌ ವರದಿಯ ಪ್ರಕಾರ, ವಿಶೇಷ ಕೌಶಲದ ಅವಶ್ಯಕತೆ ಇರುವ ಉದ್ಯೋಗಿಗಳಿಗೆ ಭಾರಿ ಬೇಡಿಕೆ ಇದ್ದು, ಅವರ ವೇತನದಲ್ಲೂ ಗಣನೀಯ ಏರಿಕೆಯಾಗುತ್ತಿದೆ. ಎಬಿಸಿ ಕನ್ಸಲ್ಟೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ್‌ ಅಗರವಾಲ್‌ ಪ್ರಕಾರ ಐಟಿ ವಲಯದಲ್ಲಿ ಸರಾಸರಿ ಶೇ.12-14ರ ಲೆಕ್ಕದಲ್ಲಿ ವೇತನ ಏರಿಕೆಯಾಗಲಿದೆ. ಟಿಸಿಎಸ್‌ ಕಳೆದ ಅಕ್ಟೋಬರ್-ಡಿಸೆಂಬರ್‌ನಲ್ಲಿ 110,000 ಉದ್ಯೋಗಿಗಳಿಗೆ ಬಡ್ತಿ ನೀಡಿದೆ.
ಎಚ್‌ಸಿಎಲ್‌ ಟೆಕ್ನಾಲಜೀಸ್‌ ಹೊಸಬರಿಗೆ ವೇತನವನ್ನು ವಾರ್ಷಿಕ 3.6 ಲಕ್ಷ ರೂ.ಗಳಿಂದ 4.25ಲಕ್ಷ ರೂ.ಗೆ ಏರಿಸಿದೆ.


ಕಂಪನಿಗಳಿಗೆ 2021-22ರಲ್ಲಿ ಉದ್ಯೋಗಿಗಳ ವೆಚ್ಚ (ಕೋಟಿ ರೂ.ಗಳಲ್ಲಿ)

ಟಿಸಿಎಸ್‌ 107,554
ಇನ್ಫೋಸಿಸ್‌ 63,986
ಎಚ್‌ಸಿಎಲ್‌ 46,130
ವಿಪ್ರೊ 45,008
ಟೆಕ್‌ ಮಹೀಂದ್ರಾ 22,286
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Rave Party: ರೇವ್ ಪಾರ್ಟಿ ಪ್ರಕರಣ; ವಿಚಾರಣೆಗೆ ಹಾಜರಾದ ತೆಲುಗು ನಟಿ ಹೇಮಾ ಸಿಸಿಬಿ ವಶಕ್ಕೆ

Rave Party: ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಸೋಮವಾರ ಹಾಜರಾದ ವೇಳೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಳೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

VISTARANEWS.COM


on

Rave Party
Koo

ಬೆಂಗಳೂರು: ರೇವ್ ಪಾರ್ಟಿ ಪ್ರಕರಣದಲ್ಲಿ (Rave Party) ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ (Telugu actress Hema) ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾಗಿದ್ದ ನಟಿಯನ್ನು ವಶಕ್ಕೆ ಪಡೆಯಲಾಗಿದೆ. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದು, ಸಿಸಿಬಿ ತನಿಖಾಧಿಕಾರಿಗಳು ನಟಿಯ ಹೇಳಿಕೆ ಪಡೆಯುತ್ತಿದ್ದಾರೆ.

ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯ (Electronic city) ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವಿನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹಾಜರಾಗಿದ್ದರು. ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.

ಇದನ್ನೂ ಓದಿ |

ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವಿಡಿಯೊ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ನಟಿಯನ್ನು ವಶಕ್ಕೆ ಪಡೆದಿದ್ದು, ನಾಳೆ ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ತೀರ್ಮಾನಿಸಿದೆ.

Continue Reading

ದಾವಣಗೆರೆ

Davangere Lok Sabha Constituency: ದಾವಣಗೆರೆಯಲ್ಲಿ ನಾರಿಶಕ್ತಿ ಕದನ, ಯಾರು ಗೆದ್ದರೂ ಇತಿಹಾಸ

Davangere Lok Sabha Constituency: ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಯಾರು ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ. ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್‌, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಬಿ.ವಿನಯ್‌ ಕುಮಾರ್‌ ಅವರು ಕಣಕ್ಕಿಳಿದಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಜಾಸ್ತಿಯಾಗಿದೆ.

VISTARANEWS.COM


on

Davangere Lok Sabha Constituency
Koo

ದಾವಣಗೆರೆ: ಬೆಣ್ಣೆ ದೋಸೆಗೆ ಖ್ಯಾತಿಯಾಗಿರುವ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ (Davangere Lok Sabha Constituency) ಈ ಬಾರಿಯೂ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರ ಕುಟುಂಬಗಳ ನಡುವಿನ ಸಮರವೇ ಜೋರಾಗಿದೆ. ಆದರೆ, ಈ ಕುಟುಂಬಗಳ ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರ ಮಧ್ಯೆಯೇ, ಜಿ.ಬಿ. ವಿನಯ್‌ ಕುಮಾರ್‌ ಅವರು ಕಾಂಗ್ರೆಸ್‌ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತಗಳ ವಿಭಜನೆ ನಿರೀಕ್ಷಿಸಲಾಗಿದೆ.

ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಬಿಜೆಪಿಯು ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಕಣಕ್ಕಿಳಿಸಿದೆ. ಅತ್ತ, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇದರಿಂದಾಗಿ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ನಾರಿಶಕ್ತಿಯ ನಡುವಿನ ದೊಡ್ಡ ಸಮರವಾಗಿದೆ. ಹಾಗಾಗಿ, ಯಾರು ಗೆದ್ದರೂ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಜಿ.ಎಂ.ಸಿದ್ದೇಶ್ವರ್‌ ಅವರು ಅನಾರೋಗ್ಯದ ಮಧ್ಯೆಯೂ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಅಲೆಯು ಕೂಡ ಕ್ಷೇತ್ರದಲ್ಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಿಂದಾಗಿ ಕ್ಷೇತ್ರದಲ್ಲಿ ಭುಗಿಲೆದ್ದಿದ್ದ ಭಿನ್ನಮತವು ಶಮನವಾಗಿದೆ. ಹಾಗಾಗಿ, ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಗೆಲುವು ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ವರ್ಚಸ್ಸಿದೆ. ಇವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಚಿವರೂ ಆಗಿದ್ದಾರೆ. ಲಿಂಗಾಯತ ಮತಗಳ ಮೇಲೆ ಇವರ ಕುಟುಂಬದ ಹಿಡಿತವಿದೆ. ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಕಳೆದ ಒಂದು ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಜನರಿಗೆ ಹತ್ತಿರವಾಗಿದ್ದಾರೆ. ಮಾವ, ಪತಿಯ ಬಲದಿಂದ, ಸಮಾಜ ಸೇವೆ, ಕಾಂಗ್ರೆಸ್‌ ಗ್ಯಾರಂಟಿಗಳ ಫಲವಾಗಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಮುನ್ನಡೆಯ ವಿಶ್ವಾಸದಲ್ಲಿದ್ದಾರೆ. ಆದರೆ, ಜಿ.ಬಿ.ವಿನಯ್‌ ಕುಮಾರ್‌ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿರುವುದು ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ತುಸು ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ಪ್ರಭಾ ಮಲ್ಲಿಕಾರ್ಜುನ್

2019, 2014ರ ಫಲಿತಾಂಶ ಏನಾಗಿತ್ತು?

2019ರಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ ಅವರು ಕಾಂಗ್ರೆಸ್‌ನ ಎಚ್‌.ಬಿ.ಮಂಜಪ್ಪ ಅವರ ವಿರುದ್ಧ ಸುಮಾರು 1.69 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ 4 ಲೋಕಸಭೆ ಚುನಾವಣೆಗಳಲ್ಲೂ ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ್‌ ಅವರೇ ಗೆಲುವು ಸಾಧಿಸಿದ್ದಾರೆ. 2004, 2009 ಹಾಗೂ 2014ರಲ್ಲೂ ಜಿ.ಎಂ.ಸಿದ್ದೇಶ್ವರ್‌ ಅವರೇ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: Dakshina Kannada Lok Sabha Constituency : ದಕ್ಷಿಣ ಕನ್ನಡದಲ್ಲಿ ವಿಜಯ ಅಭಿಯಾನ ಮುಂದುವರಿಸಲು ಬಿಜೆಪಿ ಕಾತರ

Continue Reading

ಪ್ರಮುಖ ಸುದ್ದಿ

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Election Result 2024: ಪಕ್ಷಗಳ ಕುಂಡಲಿಯಾನುಸಾರ ಇಂಡೀ ಒಕ್ಕೂಟದ ರಚನಾತ್ಮಕ ಕಾರ್ಯವು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ 26 ಪಕ್ಷಗಳು ಒಟ್ಟುಗೂಡಿ ನಡೆಯಿತು. ಆ ದಿನ ಸೋಮವಾರ, ಪುನರ್ವಸು ನಕ್ಷತ್ರ ಕಟಕರಾಶಿಯಾಗಿ, ಅಮಾವಾಸ್ಯೆ ದಿನವಾಗಿತ್ತು. ವೆಸ್ಟ್-ಎಂಡ್ ಹೋಟೆಲ್ ವಾಸ್ತುಶಾಸ್ತ್ರ ದೋಷಗೊಂಡಿರುವ ಸ್ಥಳ. ಈ ಹೋಟೆಲ್‌ನಲ್ಲಿದ್ದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಸಂಗತಿ ಪ್ರತಿಪಕ್ಷಗಳಿಗೆ ನಕಾರಾತ್ಮಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಈ ಜೋತಿಷಿ.

VISTARANEWS.COM


on

Election Result 2024
Koo
– ಗಜೇಂದ್ರ ಬಾಬು, ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞರು- ಆದಿತ್ಯ ಜ್ಯೋತಿರ್ ವಿಜ್ಞಾನ ಶಾಲೆ

ಪ್ರಪಂಚದಲ್ಲೆ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ. ನಮ್ಮಂತಹ ಮಹಾನ್ ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಸುವುದೇ ಒಂದು ದೊಡ್ಡ ಸವಾಲು. ಚುನಾವಣೆ ನೀತಿ-ಸಂಹಿತೆಯನ್ನು ಹಾಗೂ ಈ ನೆಲದ ಕಾನೂನುಗಳನ್ನು ಪಾಲಿಸುವುದು ಕೇಂದ್ರ-ರಾಜ್ಯ ಸರ್ಕಾರ ಹಾಗೂ ಚುನಾವಣೆ ಆಯೋಗದ ಬಹು ದೊಡ್ಡ ಜವಾಬ್ದಾರಿ. ಇಂತಹ ಚುನಾವಣೆಗಳನ್ನು ನಡೆಸುವಾಗ ರಾಜಕಾರಣಿಗಳ-ಅಧಿಕಾರಿಗಳ ಹಾಗೂ ಮತದಾರರ ಜವಾಬ್ದಾರಿಯನ್ನು ಕಡೆಗಣಿಸುವಂತಿಲ್ಲಾ. ವೇದಾಂಗ ಜ್ಯೊತಿಷ್ಯ-ವಾಸ್ತು ಶಾಸ್ತ್ರ , ಪ್ರಾಪಂಚಿಕ ಜ್ಯೋತಿಷ ಇದನ್ನು ರಾಜಕಿಯ ಜ್ಯೋತಿಷ ಎಂದು ಕರೆಯುತ್ತಾರೆ. ಇದು ರಾಜಕೀಯ ಸರ್ಕಾರ ಮತ್ತು ನಿರ್ಧಿಷ್ಟ ರಾಷ್ಟ್ರ, ರಾಜ್ಯ ಅಥವಾ ನಗರವನ್ನು ನಿಯಂತ್ರಿಸುವ ಕಾನೂನುಗಳೊಂದಿಗೆ ವ್ಯವಹರಿಸುವ ಜ್ಯೋತಿಷದ ಶಾಖೆಯಾಗಿದೆ. ಈ ಹೆಸರು ಲ್ಯಾಟಿನ್ ಪದ ಮುಂಡಸ, ‘ವರ್ಲ್ಡ್’ ನಿಂದ (ಮಂಡೇನ್) ಹೆಸರನ್ನು ಪಡೆದುಕೊಂಡಿದೆ.

ಪ್ರಾಪಂಚಿಕ ಜ್ಯೋತಿಷವು ಜ್ಯೋತಿಷ ಶಾಸ್ತ್ರದ ಅತ್ಯಂತ ಪ್ರಾಚೀನ ಶಾಖೆ ಎಂದು ಜ್ಯೋತಿಷ ಇತಿಹಾಸಕಾರರಿಂದ ವ್ಯಾಪಕವಾಗಿ ನಂಬಲಾಗಿದೆ. ಆರಂಭಿಕ ಬ್ಯಾಬಿಲೋನಿಯನ್ ಜ್ಯೋತಿಷವು ಪ್ರಾಪಂಚಿಕ ಜ್ಯೋತಿಷದೊಂದಿಗೆ ಪ್ರತ್ಯೇಕ ಕಾಳಜಿ ಹೊಂದಿತ್ತು. ಇದು ಬೌಗೋಳಿಕ ಆಧಾರಿತವಾಗಿದೆ. ನಿರ್ಧಿಷ್ಟವಾಗಿ ದೇಶಗಳು ಮತ್ತು ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ರಾಷ್ಟ್ರದ ಆಡಳಿತ ಮುಖ್ಯಸ್ಥರಿಗೆ ರಾಜ್ಯ ಮತ್ತು ರಾಜನ ಯೋಗಕ್ಷೇಮದ ಬಗ್ಗೆ ಸಂಪೂರ್ಣವಾಗಿ ಕಾಳಜಿವಹಿಸುತ್ತದೆ. ಜ್ಯೋತಿಷ ಶಾಸ್ತ್ರದ ಅಭ್ಯಾಸಗಳು ಮತ್ತು ಗ್ರಹಗಳ ವ್ಯಾಖ್ಯಾನವನ್ನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲು ಸಹಸ್ರಮಾನಗಳಿಂದ ಬಳಸಲಾಗಿದೆ.

ಭಾರತ ದೇಶದಲ್ಲಿ ಚುನಾವಣೆ ಆಯೋಗದ ಅಂಕಿ ಅಂಶಗಳ ಪ್ರಕಾರ 98 ಕೋಟಿ ಮತದಾರರ ನೊಂದಣಿಯಾಗಿದೆ. ಪ್ರಪಂಚದಲ್ಲೆ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ದೇಶ.

ಒಂದು ದೇಶದ ಚುನಾವಣೆ ಫಲಿತಾಂಶ ಹೇಗೆ ಹೊರ ಹೊಮ್ಮುವ ಸಾಧ್ಯತೆಗಳ ಬಗ್ಗೆ ಜ್ಯೋತಿಷ ಹಾಗೂ ವಾಸ್ತು ಶಾಸ್ತ್ರ ರೀತಿಯ ಮತ್ತು ಇನ್ನಿತರ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ, ಆ ದೇಶ ಸ್ವಾತಂತ್ರ ಪಡೆದ ದಿನಾಂಕ, ವೇಳೆ, ಚುನಾವಣೆ ಪೋಷಿಸಿದ ದಿನಾಂಕ, ವೇಳೆ, ಚುನಾವಣೆ ನಡೆಯುವ ದಿನಾಂಕಗಳು, ವೇಳೆ, ರಾಜಕೀಯ ಪಕ್ಷಗಳು ಉದಯವಾದ ಜನ್ಮ ಕುಂಡಲಿ ಹೀಗೆ ಅನೇಕ ನಿಯತಾಂಕಗಳನ್ನು ಅನುಸರಿಸಿ ಒಂದು ನಿರ್ದಿಷ್ಟ ಅಂಶಕ್ಕೆ ಫಲಿತಾಂಶಗಳು ಊಹಿಸಬಹುದು.

ಚುನಾವಣೆಯನ್ನು ಘೋಷಿಸಿದ ದಿನ ಹೇಗಿತ್ತು?

ಚುನಾವಣೆಯನ್ನು ಆಯೋಗವು ಪೋಷಿಸಿದ ದಿನಾಂಕ 16ನೇ ಮಾರ್ಚ್ 2024, ಮಧ್ಯಾಹ್ನ 3 ಗಂಟೆಗೆ, ಶ್ರೀ ಶೋಭಕೃತ್‌ನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಸಪ್ತಮಿ ತಿಥಿ, ಶನಿವಾರ, ರೋಹಿಣಿ ನಕ್ಷತ್ರ, ಅಮೃತಸಿದ್ದಿಯೋಗ, ಕಟಕಲಗ್ನದಲ್ಲಿ ಲಗ್ನಾಧಿಪತಿಯಾದ ಚಂದ್ರನು 11 ರಲ್ಲಿ ಅಂದರೆ ಲಾಭದಲ್ಲಿ ರೋಹಿಣಿ ನಕ್ಷತ್ರದಲ್ಲಿ ಸ್ಥಿತನಾಗಿದ್ದು, ಚುನಾವಣೆಗಳನ್ನು ಈ ಕೆಳಕಂಡಂತೆ 7 ಹಂತಗಳಲ್ಲಿ ನಡೆಸಲಾಗಿದೆ ಹಾಗೂ ಅದರ ವಿವರಗಳು ಈ ಕೆಳಕಂಡಂತಿವೆ.

ಚುನಾವಣೆ ಪೋಷಿಸಿದ ಸಂವತ್ಸರ ಶ್ರೀ ಶೋಭಕೃತ್ ನಾಮ ಸಂವತ್ಸರ, ಆ ವರ್ಷದ ರಾಜ ಬುಧ. ಆದರೆ ಚುನಾವಣೆಗಳು ನಡೆದದ್ದು ಶ್ರೀ ಕ್ರೋಧಿನಾಮ ಸಂವತ್ಸರ ಹಾಗೂ ಈ ಸಂವತ್ಸರದ ಅಧಿಪತಿ ಕುಜ. ನೂತನ ಸಂವತ್ಸರದ ಯುಗಾದಿಯು ದಿನಾಂಕ: 19.04.2025ನೇ ಮಂಗಳವಾರ, ರೇವತಿ ನಕ್ಷತ್ರದೊಂದಿಗೆ ಪ್ರಾರಂಭಗೊಂಡಿರುತ್ತದೆ. ಈ ದಿನದ ಕುಂಡಲಿಯೇ ಈ ಸಂವತ್ಸರದ ಪ್ರಧಾನ ಪಾತ್ರವಹಿಸುತ್ತದೆ.

ನೂತನ ಸಂವತ್ಸರದಲ್ಲಿ ಸಂಭವಿಸುವ ನಾಲ್ಕು ಗ್ರಹಣಗಳು ಅಂದರೆ 2 ಸೂರ್ಯ ಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು ಭಾರತಕ್ಕೆ ಕಾಣುವುದಿಲ್ಲವಾದ್ದರಿಂದ ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ಹೆಚ್ಚಿನ ಕೆಟ್ಟ ಪರಿಣಾಮಗಳನ್ನು ಬೀರಲು ಸಾಧ್ಯವಾಗಿಲ್ಲ. ಶಾಂತಿಯುತ ಚುನಾವಣೆ ನಡೆದಿರುತ್ತದೆ.

ಚಂದ್ರನ ನಡೆಗೆಯಿಂದ ಮತದಾರರ ಮನಸ್ಸನ್ನು ಅಳಿಯುವ ಸಾಧ್ಯತೆಗಳು ಅಂದರೆ ದಿನಾಂಕ: 19.04.2024 ರಿಂದ ಪ್ರಾರಂಭಗೊಂಡ ಚುನಾವಣೆ ಪ್ರಕ್ರಿಯೆಗಳು ದಿನಾಂಕ: 01.06.2024ನೇ ಶನಿವಾರ ಕೊನೆಗೊಳ್ಳುವ ತನಕ ಚಂದ್ರನು ಸುಮಾರು 42 ದಿನಗಳ ಕಾಲ ಪ್ರಯಾಣಿಸಿ 2 ಪೂರ್ಣಿಮಾ ಹಾಗೂ 1 ಅಮಾವಾಸ್ಯೆಯನ್ನು ಸಂದಿಸಿ ಚುನಾವಣೆ ಫಲಿತಾಂಶವನ್ನು ಪೋಷಿಸುವ ದಿನಾಂಕ: 04.06.2024 ರಲ್ಲಿ ಪ್ರಯಾಣ ಬೆಳೆಸಿ ದಿನಾಂಕ: 06.06.2024 ರಂದು ಸಂಭವಿಸುವ ಅಮಾವಾಸ್ಯೆಯ ದಿನದಂದು ವೃಷಭ ರಾಶಿಯಲ್ಲಿ ಪಂಚ-ಗ್ರಹಗಳ ಕೂಟದಲ್ಲಿ ಮುಳುಗಿ ಮುಂದೆ ಸಾಗುತ್ತಾನೆ.

ಈ ಎಲ್ಲಾ ಮೇಲಿನ ಅಂಶಗಳನ್ನೊಳಗೊಂಡು ಭಾರತ ದೇಶದಲ್ಲಿ ನಡೆದ ಚುನಾವಣೆಗಳನ್ನು ಗ್ರಹಗತಿಗಳ ಆಧಾರದ ಮೇಲೆ ರಾಷ್ಟಿçಯ ಪಕ್ಷಗಳ ಕುಂಡಲಿಗಳನ್ನು ಪರಿಶೀಲಿಸಿ ಚುನಾವಣೆಯಲ್ಲಿ ಪಕ್ಷಗಳು ಗಳಿಸುವ ಅಂಕಿ-ಅಂಶಗಳು ಸೂಚಕಗಳನ್ನು ನೀಡಲಾಗಿದೆ.

ಸ್ವತಂತ್ರ ಭಾರತದ ಕುಂಡಲಿಯನ್ನು ಪರಿಶೀಲಿಸುವಾಗ, ಪುಷ್ಯ ನಕ್ಷತ್ರದ ಕಟಕ ರಾಶಿಯಲ್ಲಿ ಸ್ವಾತಂತ್ರ ಪಡೆದಿರುತ್ತೇವೆ (15.08.1947) ಪ್ರಸ್ತುತ ದೇಶಕ್ಕೆ ಅಷ್ಠಮ ಶನಿಯು ನಡೆಯುತ್ತಿದ್ದು ಚಂದ್ರದಶಾ 14.08.2015-13.08.2025, ಚಂದ್ರದಶಾ-ಶನಿ-ಭುಕ್ತಿಯು 13.06.2023 ರಿಂದ 12.02.2025.

ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ:

ಪಕ್ಷಗಳ ಕುಂಡಲಿಯಾನುಸಾರ ಇಂಡೀ ಒಕ್ಕೂಟದ ರಚನಾತ್ಮಕ ಕಾರ್ಯವು ದಿನಾಂಕ: 17.07.2023 ರಂದು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ 26 ಪಕ್ಷಗಳು ಒಟ್ಟುಗೂಡಿ ಕೇಂದ್ರದಲ್ಲಿರುವ ಬಿ.ಜೆ.ಪಿ ಸರ್ಕಾರವನ್ನು ಮಣಿಸಲು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ ಉದಯವಾಯಿತು. ಆ ದಿನ ಸೋಮವಾರ, ಪುನರ್ವಸು ನಕ್ಷತ್ರ ಕಟಕರಾಶಿಯಾಗಿ, ಅಮಾವಾಸ್ಯೆ ದಿನವಾಗಿತ್ತು. ವೆಸ್ಟ್-ಎಂಡ್ ಹೋಟೆಲ್ ವಾಸ್ತುಶಾಸ್ತ್ರ ದೋಷಗೊಂಡಿರುವ ಸ್ಥಳ, ಈ ಹೋಟೆಲ್‌ನಲ್ಲಿ ಹಿಂದಿನ ಮುಖ್ಯ ಮಂತ್ರಿಗಳು ಆಡಳಿತ ನಡೆಸಿ ಅಧಿಕಾರ ಕಳೆದುಕೊಂಡು ಇಂದಿಗೂ ಈ ಹೋಟೆಲ್‌ನ ಹೆಸರು ರಾಜಕೀಯದಲ್ಲಿ ಆಗಿಂದಾಗ್ಗೆ ಪ್ರಸ್ತಾಪದಲ್ಲಿರುತ್ತದೆ.

ಇಂಡೀ ಒಕ್ಕೂಟವು ಆಶಾಢ ಅಮಾವಾಸ್ಯೆ ದಿನದಂದು ಸ್ಥಾಪನೆಗೊಂಡು ಈವರೆಗೆ ಅನೇಕ ಏಳು-ಬೀಳುಗಳನ್ನು ಕಂಡಿರುತ್ತದೆ. ಒಗ್ಗಟ್ಟಿನ ಬಲ ಪ್ರದರ್ಶನದಲ್ಲಿ ಪಕ್ಷಗಳು ವಿಫಲವಾಗಿದೆ. ಪಕ್ಷಗಳ ನಾಯಕರುಗಳಲ್ಲಿ ಭಿನ್ನಾಭಿಪ್ರಾಯದ ಬಿರುಕು ಕಂಡು ಮತದಾರರ ಮನದಾಳದಲ್ಲಿ ನಕಾರಾತ್ಮಕ ತರಂಗಗಳು ಪ್ರಸರಿಸುವಂತಾಗಿ ಮತದಾನದಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ಮತ್ತೊಂದು ಮಹತ್ವವಾದ ವಿಷಯ ಇಂಡೀ ಒಕ್ಕೂಟವನ್ನು ನಾಯಕನಾರು? ಎಂಬ ಪ್ರಶ್ನೆಯು ಸಹಾ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತು. ಇದಕ್ಕೆ ಕಾರಣ ಮನೋಕಾರಕನಾದ ಚಂದ್ರನು ಅಮಾವಾಸ್ಯೆಯಲ್ಲಿ ವಾಸವಾಗಿದ್ದು (ಒಕ್ಕೂಟದ ಪ್ರಾರಂಭದ ದಿನ).

ಪರಿಸ್ಥಿತಿ ಬಿಜೆಪಿಗೆ ಅನುಕೂಕರವೇ?:

ಭಾರತೀಯ ಜನತಾ ಪಕ್ಷವು ದಿನಾಂಕ: 06.04.1950 ಬೆಳಿಗ್ಗೆ 11-40ಕ್ಕೆ ಚೈತ್ರ ಮಾಸದ ಕೃಷ್ಣ ಪಕ್ಷದ ಚತುರ್ತಿ ತಿಥಿಯ ಅನುರಾಧ ನಕ್ಷತ್ರದಂದು ಗುರುವಾರ ಪ್ರಾರಂಭವಾಯಿತು. (ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಜನ್ಮ ನಕ್ಷತ್ರವೂ ಕೂಡಾ ಅನುರಾಧ ನಕ್ಷತ್ರ ವೃಶ್ಚಿಕ ರಾಶಿ)

ಪ್ರಸ್ತುತ ಗೋಚಾರದಲ್ಲಿ ಈ ಪಕ್ಷಕ್ಕೆ ಗುರುಬಲವಿದ್ದು ವೃಶ್ಚಿಕ ರಾಶಿಗೆ ಗುರು-ಬುಧ-ಶುಕ್ರ-ರವಿ ದೃಷ್ಟಿಯಿಂದ ಅತಿವೇಗದ ಚಲನೆಯಿದ್ದರೂ, ಶನಿ ದೃಷ್ಠಿಯಿಂದ ಈ ಅತೀ ವೇಗವನ್ನು ತಡೆದು ಮಧ್ಯಮ ವೇಗ ಅಂದರೆ, ಮಂದ ವೇಗವಾಗಿ ಮುನ್ನಡೆಯಲಿದೆ. ಪ್ರಸ್ತುತ ಕುಜದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು, ಕುಜನು ಈ ಸಂವತ್ಸರದ ರಾಜನಾದುದರಿಂದ ಅನೇಕ ಅಡೆ-ತಡೆಗಳಿಂದ ಪಕ್ಷವು ಮುನ್ನುಗ್ಗುವ ಸಾಧ್ಯತೆಯು ಕಂಡು ಬರುತ್ತದೆ.

ಶ್ರೀ ನರೇಂದ್ರ ಮೋದಿಯವರ ಜನ್ಮ ಜಾತಕ ಹೇಗಿದೆ?

ಶ್ರೀ ನರೇಂದ್ರ ಮೋದಿಯವರು 17-09-1950 ಬೆಳಿಗ್ಗೆ 9-53 ಗುಜರಾತಿನ ವದಾನಗರದಲ್ಲಿ ಜನಿಸಿರುತ್ತಾರೆ. ಅಂದು ಭಾದ್ರಪದ ಮಾಸ ಶುಕ್ಲಪಕ್ಷ ಷಷ್ಠಿ ತಿಥಿ ಇದ್ದು, ಭಾನುವಾರ ಅನುರಾಧಾ ನಕ್ಷತ್ರದ ವೃಶ್ಚಿಕ ರಾಶಿಯಲ್ಲಿ ಜನನ. ಪ್ರಸ್ತುತ ಗೋಚಾರದಲ್ಲಿ ವೃಶ್ಚಿಕ ರಾಶಿಯವರಿಗೆ ಗುರುಬಲವಿದ್ದು, ನಾಲ್ಕು ಗ್ರಹಗಳು ವೃಶಭ ರಾಶಿಯಲ್ಲಿ ಸಂಯೋಗವಿದ್ದು ವೃಶ್ಚಿಕ ರಾಶಿಯಲ್ಲಿದ್ದ ದೃಷ್ಟಿ ಹಾಗೂ ಕುಂಭ ರಾಶಿಯಿಂದ ಶನಿಭಗವಾನರ ದೃಷ್ಟಿ ಸಹಾ ವೃಶ್ಚಿಕ ರಾಶಿಯಲ್ಲಿ ಇದ್ದು, ಇವರಿಗೆ ಪ್ರಸ್ತುತ ಕುಜ ದಶಾ ಗುರು ಭುಕ್ತಿ ಸಹಾ ಲಭ್ಯವಿರುತ್ತದೆ. ಜನ್ಮ ಕುಂಡಲಿಯಲ್ಲಿ ಶಶಿ ಮಂಗಳ ಯೋಗ ಹಾಗೂ ಬುಧ ಆದಿತ್ಯ ಯೋಗವಿದ್ದು, ರಾಜಯೋಗ ನಡೆಯುತ್ತಿದ್ದು, ಈ ರಾಜಯೋಗ ನೀಡುವ ಗ್ರಹಗಳು ಪ್ರಸ್ತುತ ಗೋಚಾರದಲ್ಲಿ ಶ್ರೀ ಮೋದಿಯವರ ರಾಶಿಯಾದ ವೃಶ್ಚಿಕವನ್ನು ವೀಕ್ಷಿಸುತ್ತಿರುವುದರಿಂದ ಈ ರಾಶಿಯವರಿಗೆ ರಾಜಬಲವಿರುತ್ತದೆ.

ಶ್ರೀ ನರೇಂದ್ರ ಮೋದಿಯವರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ದಿನಾಂಕ 14ನೇ ಮೇ 2024 ಮಂಗಳವಾರ ಪುಷ್ಯಾ ನಕ್ಷತ್ರ ಕಟಕ ರಾಶಿ ಅಭಿಜಿತ್ ಲಗ್ನದಲ್ಲಿ ಅಂದರೆ ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಬಂದ ನಕ್ಷತ್ರದಲ್ಲಿ ನಾಮಪತ್ರ ಸಲ್ಲಿಕೆ. ನಾಡೀ ಗ್ರಂಥಗಳ ಅನುಸಾರ ಯಾವ ರಾಜನು ಪುಷ್ಯಾ ನಕ್ಷತ್ರದ ದಿನ ಶಿವನ ಆರಾಧನೆಯನ್ನು ಮಾಡಿ ತನ್ನ ರಾಜ್ಯಕ್ಕಾಗಿ ಹಾಗೂ ದೇಶದ ಜನತೆಗಾಗಿ ಅಭಿವೃದ್ಧಿಯನ್ನು ಬಯಸಿ ಸಂಕಲ್ಪ ಮಾಡುತ್ತಾನೋ ಆ ರಾಜನು ತನ್ನ ರಾಜ್ಯವನ್ನು ಸುಭಿಕ್ಷೆಯಾಗಿ ಆಳುತ್ತಾನೆ ಎಂಬ ಉಲ್ಲೇಖ ದೊರೆಯುತ್ತದೆ. ಮೋದಿಯವರು ಈ ಮುಹೂರ್ತದಲ್ಲಿ ತಮ್ಮ ನಾಮಪತ್ರ ಸಲ್ಲಿಸಿರುವುದರಿಂದ ಅವರ ಸಂಕಲ್ಪ ಈಡೇರುವ ಸಾಧ್ಯತೆಗಳಿವೆ. ಈ ಎಲ್ಲಾ ಮೇಲಿನ ವಿಶ್ಲೇಷಗಳನುಸಾರ ಎನ್.ಡಿ.ಎ ಒಕ್ಕೂಟವು ಸುಮಾರು 330 ಲೋಕಸಭಾ ಸ್ಥಾನಗಳನ್ನು ಪಡೆದು ಮುಂದಿನ ಸರ್ಕಾರವನ್ನು ರಚನೆ ಮಾಡುವ ಸಾಧ್ಯತೆಗಳಿವೆ.

Continue Reading

ಕ್ರಿಕೆಟ್

Kedar Jadhav Retirement: ಧೋನಿ ಶೈಲಿಯಲ್ಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೇದಾರ್​ ಜಾಧವ್

Kedar Jadhav Retirement: 39 ವರ್ಷದ ಕೇದಾರ್ ಜಾಧವ್ 2014 ಮತ್ತು 2020 ರ ನಡುವೆ ಭಾರತಕ್ಕಾಗಿ 73 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜಾಧವ್ 2019 ರ ವಿಶ್ವಕಪ್ ಆಡಿದ್ದರು. ಕೇದಾರ್ ಜಾಧವ್ ಭಾರತ ಪರ ಕೊನೆಯ ಕೊನೆಯ ಬಾರಿಗೆ ಆಡಿದ್ದು 2020ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ.

VISTARANEWS.COM


on

Kedar Jadhav Retirement
Koo

ಮುಂಬಯಿ: ಟೀಮ್​ ಇಂಡಿಯಾದ ಹಿರಿಯ ಆಟಗಾರ, ಮಾಧ್ಯಮ ಕ್ರಮಾಂಕದ ಬ್ಯಾಟರ್​ ಕೇದಾರ್​ ಜಾಧವ್​(Kedar Jadhav ) ಅವರು ಅಂತಾರಾಷ್ಟ್ರೀಯ ಸೇರಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಸೋಮವಾರ ಅವರು ತಮ್ಮ ನಿವೃತ್ತಿಯನ್ನು(Kedar Jadhav Retirement) ಪ್ರಕಟಿಸಿದರು.

“1500 ಗಂಟೆಗಳಿಂದ ನನ್ನ ವೃತ್ತಿಜೀವನದುದ್ದಕ್ಕೂ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನನ್ನನ್ನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಎಂದು ಪರಿಗಣಿಸಿ” ಎಂದು ಕೇದಾರ್ ಜಾಧವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು.

ಜಾಧವ್​ ಅವರು ತಮ್ಮ ನಿವೃತ್ತಿ ಘೋಷಣೆಯನ್ನು ಎಂಎಸ್ ಧೋನಿ(Jadhav takes MS Dhoni’s route) ಅವರಂತೆ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ 2019 ರ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ಧೋನಿ, ಒಂದು ವರ್ಷದ ನಂತರ, ಆಗಸ್ಟ್ 15, 2020 ರಂದು ತಮ್ಮ ಇನ್​ಸ್ಟಾಗ್ರಾಮ್​ ಪ್ರೊಫೈಲ್‌ನಲ್ಲಿ ಎರಡು ಸಾಲಿನ ಹೇಳಿಕೆಯೊಂದಿಗೆ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ್ದರು. “ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. 1929 ಗಂಟೆಗಳಿಂದ ನನ್ನ ವೃತ್ತಿಜೀವನದುದ್ದಕ್ಕೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ” ಎಂದು ಬರೆದುಕೊಳ್ಳುವ ಮೂಲಕ ಧೋನಿ ನಿವೃತ್ತಿ ಪ್ರಕಟಿಸಿದ್ದರು. ಇದೇ ಹಾದಿಯನ್ನು ಜಾಧವ್​ ಕೂಡ ಅನುಸರಿಸಿದ್ದಾರೆ.

ಇದನ್ನೂ ಓದಿ T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

39 ವರ್ಷದ ಕೇದಾರ್ ಜಾಧವ್ 2014 ಮತ್ತು 2020 ರ ನಡುವೆ ಭಾರತಕ್ಕಾಗಿ 73 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜಾಧವ್ 2019 ರ ವಿಶ್ವಕಪ್ ಆಡಿದ್ದರು. ಕೇದಾರ್ ಜಾಧವ್ ಭಾರತ ಪರ ಕೊನೆಯ ಕೊನೆಯ ಬಾರಿಗೆ ಆಡಿದ್ದು 2020ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ. ಇದಾದ ಬಳಿಕ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕೇದಾರ್ ಜಾಧವ್ 73 ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು 6 ಅರ್ಧಶತಕ ಸೇರಿದಂತೆ 1389 ರನ್ ಗಳಿಸಿದ್ದಾರೆ. 9 ಟಿ20 ಪಂದ್ಯಗಳಲ್ಲಿ 122 ರನ್ ಗಳಿಸಿದ್ದಾರೆ.

ಫೆಬ್ರವರಿಯಲ್ಲಿ ಪುಣೆಯಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ವಿರುದ್ಧ ಮಹಾರಾಷ್ಟ್ರದ ಪರವಾಗಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು. ಜಾಧವ್ ಮಹಾರಾಷ್ಟ್ರದ 2023-24 ರ ರಣಜಿ ಟ್ರೋಫಿ ಅಭಿಯಾನದಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ 5 ಪಂದ್ಯಗಳಲ್ಲಿ 379 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದರು.

ಕೇದಾರ್ ಜಾಧವ್ 93 ಐಪಿಎಲ್ ಪಂದ್ಯಗಳನ್ನು ಆಡಿದ್ದು 1196 ರನ್ ಗಳಿಸಿದ್ದಾರೆ. ಅವರು 2018 ರಲ್ಲಿ ಐಪಿಎಲ್​ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಜಾಧವ್ 2010 ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್), 2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು 2013 ಮತ್ತು 2015 ರ ನಡುವೆ ಡೆಲ್ಲಿ ಮತ್ತು ಆರ್​ಸಿಬಿ ಪರ ಆಡಿದ್ದಾರೆ.

Continue Reading
Advertisement
Cow including lineman dies of electric shock
ಉಡುಪಿ4 mins ago

Electric shock : ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

Rave Party
ಕರ್ನಾಟಕ5 mins ago

Rave Party: ರೇವ್ ಪಾರ್ಟಿ ಪ್ರಕರಣ; ವಿಚಾರಣೆಗೆ ಹಾಜರಾದ ತೆಲುಗು ನಟಿ ಹೇಮಾ ಸಿಸಿಬಿ ವಶಕ್ಕೆ

Saree Fashion
ಫ್ಯಾಷನ್9 mins ago

Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

Hornbill bird sighting in Gangavathi
ಕರ್ನಾಟಕ11 mins ago

Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

Samsung Big TV Days Sale Exciting offer on big TVs
ದೇಶ14 mins ago

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Davangere Lok Sabha Constituency
ದಾವಣಗೆರೆ16 mins ago

Davangere Lok Sabha Constituency: ದಾವಣಗೆರೆಯಲ್ಲಿ ನಾರಿಶಕ್ತಿ ಕದನ, ಯಾರು ಗೆದ್ದರೂ ಇತಿಹಾಸ

Rahul Dravid
ಕ್ರಿಕೆಟ್17 mins ago

Rahul Dravid: ರೋಹಿತ್​, ಕೊಹ್ಲಿ, ಪಂತ್​ ಸೇರಿ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಕೋಚ್​ ದ್ರಾವಿಡ್​

Kannada New Movie Mandela nari shrinivas
ಸ್ಯಾಂಡಲ್ ವುಡ್17 mins ago

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Election Result 2024
ಪ್ರಮುಖ ಸುದ್ದಿ23 mins ago

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Fact Check
Fact Check35 mins ago

Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌