Rishi Sunak | ಬ್ರಿಟನ್ ಪಿಎಂ ರೇಸಿನಲ್ಲಿ ರಿಷಿ ಸುನಕ್ ಹಿಂದೆ ಬಿದ್ದಿದ್ದೇಕೆ? ಇಲ್ಲಿವೆ 7 ಕಾರಣ - Vistara News

EXPLAINER

Rishi Sunak | ಬ್ರಿಟನ್ ಪಿಎಂ ರೇಸಿನಲ್ಲಿ ರಿಷಿ ಸುನಕ್ ಹಿಂದೆ ಬಿದ್ದಿದ್ದೇಕೆ? ಇಲ್ಲಿವೆ 7 ಕಾರಣ

ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ನಿರ್ಧರಿಸುವ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ವರದಿಗಳ ಪ್ರಕಾರ, ರಿಷಿ ಸುನಕ್ (Rishi Sunak) ಅವರು ವೈಫಲ್ಯ ಸಾಧಿಸಿದ್ದು, ಲಿಜ್ ಟ್ರಸ್ ಅವರು ಬ್ರಿಟನ್ ಪ್ರಧಾನಿಯಾಗುವುದು ಖಚಿತವಾಗಿದೆ!

VISTARANEWS.COM


on

Rishi Sunak
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
vistara-vishleshane-

ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಬ್ರಿಟನ್‌ಗೆ ಹೊಸ ಸಾರಥಿ ಯಾರೆಂಬುದು ಸೋಮವಾರ ಸಾಯಂಕಾಲದ ಹೊತ್ತಿಗೆ ಗೊತ್ತಾಗಲಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಾಯಕರನ್ನು ಆಯ್ಕೆ ಮಾಡುವ ಕನ್ಸರ್ವೇಟಿವ್ ಪಕ್ಷದ ಪ್ರಕ್ರಿಯೆಗಳು ಅಂತಿಮ ಘಟ್ಟಕ್ಕೆ ಬಂದಿವೆ. ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ (Liz Truss) ಮತ್ತು ಮಾಜಿ ವಿತ್ತ ಸಚಿವ, ಭಾರತೀಯ ಮೂಲದ ರಿಷಿ ಸುನಕ್ (Rishi Sunak) ನಡುವೆ ಒಬ್ಬರು ಬ್ರಿಟನ್ ಪ್ರಧಾನಿ (Britain PM) ಆಗಲಿದ್ದಾರೆ. ಆದರೆ, ಶುಕ್ರವಾರ ಮುಕ್ತಾಯವಾದ ಅಂತಿಮ ಸುತ್ತಿನ ಮತದಾನದಲ್ಲಿ ಲಿಜ್ ಟ್ರಸ್ ಅವರು ಬಹುತೇಕ ಜಯಶಾಲಿ ಆಗಿ ಹೊರ ಹೊಮ್ಮಿದ್ದಾರೆ ಎನ್ನುತ್ತಿವೆ ವರದಿಗಳು. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಅಲ್ಲಿಗೆ, ಬ್ರಿಟನ್‌ ಮತ್ತೊಬ್ಬ ಮಹಿಳಾ ಪ್ರಧಾನಿಯನ್ನು ಕಾಣಲಿದೆ!

ಇದರ ಮಧ್ಯೆಯೇ, ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ – ಮೊದಲಿನಿಂದಲೂ ಪಿಎಂ ರೇಸಿನಲ್ಲಿ ಮುಂದಿದ್ದ ರಿಷಿ ಸುನಕ್ ಇದ್ದಕ್ಕಿದ್ದಂತೆ ಹಿಂದೆ ಬಿದ್ದಿದ್ದೇಕೆ?

ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ರಾಜಕೀಯ ಪಂಡಿತರು ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಆರಂಭದ ಸುತ್ತುಗಳಲ್ಲಿ ಲಿಜ್ ಸೇರಿದಂತೆ 10 ಸ್ಪರ್ಧಾಳುಗಳಿಗಿಂತಲೂ ರಿಷಿ ಅವರು ಬಹಳ ಮುಂದಿದ್ದರು ಮತ್ತು ಬಹುತೇಕರು ಅವರೇ ಮುಂದಿನ ಪ್ರಧಾನಿ ಎಂದು ಭಾವಿಸಿದ್ದರು. ಈಗ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿವೆ! ರಿಷಿ ಸುನಕ್ ಅವರ ಹಿನ್ನಡೆ ಅಥವಾ ವೈಫಲ್ಯಕ್ಕೆ ಸಾಕಷ್ಟು ಕಾರಣಗಳನ್ನು ಕೊಡಲಾಗುತ್ತಿದೆ. ಯಾವ ಕಾರಣ, ಯಾವ ರೀತಿಯಲ್ಲಿ ತನ್ನ ಪರಿಣಾಮ ಬೀರಿದೆ ಎಂಬುದನ್ನು ಊಹಿಸುವುದು ಕಷ್ಟ.

  1. ಜನಪ್ರಿಯತೆ ಕುಸಿಯಿತೇ?
    ಇನ್ಫೋಸಿಸ್ ಎಂಬ ಬಹುರಾಷ್ಟ್ರೀಯ ಐಟಿ ಕಂಪನಿಯನ್ನು ಕಟ್ಟಿ ಬೆಳೆಸಿದ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್, ಬ್ರಿಟನ್‌ನ ಸಂಸತ್ತಿನಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಬೋರಿಸ್ ಜಾನ್ಸನ್ ಸಂಪುಟದಲ್ಲಿ ವಿತ್ತ ಖಾತೆಯನ್ನು ನಿಭಾಯಿಸಿ ಸಾಕಷ್ಟು ಅನುಭವ ಗಳಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ತೋರಿದ ಆರ್ಥಿಕ ಜಾಣ್ಮೆ ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟಿದೆ. ಪಿಎಂ ಆಯ್ಕೆ ಸಂಬಂಧ ಬ್ರಿಟನ್‌ನಲ್ಲಿ ಅವರು ಜನಪ್ರಿಯತೆಯಲ್ಲಿ ತೀರಾ ಹಿಂದೆ ಬಿದ್ದಿಲ್ಲ. ಸಮೀಪದ ಎದುರಾಳಿಗಿಂತ 8ರಿಂದ 5 ಪಾಯಿಂಟುಗಳಷ್ಟೇ ಹಿಂದಿದ್ದಾರೆ. ಲಿಜ್ ಟ್ರಸ್ ಅವರ ಜನಪ್ರಿಯತೆ 92ರಿಂದ 95ರಷ್ಟಿದೆ. ಆದರೆ, ಕೆಲವು ವಾರಗಳ ಹಿಂದೆಯಷ್ಟೇ ರಿಷಿ ಸುನಕ್ ಅವರ ಹತ್ತಿರಕ್ಕೂ ಬರಲು ಲಿಜ್ ಅವರಿಗೆ ಸಾಧ್ಯವಾಗಿರಲಿಲ್ಲ ಎಂದರೆ ನಂಬಲೇಬೇಕು. ಅಂತಿಮ ಸುತ್ತು ಹತ್ತಿರವಾಗುತ್ತಿದ್ದಂತೆ ಎಲ್ಲವೂ ಬದಲಾಗಿ ಹೋಗಿದೆ.
  2. ಕಣ್ಣುಕುಕ್ಕುವ ಸಂಪತ್ತು ಮುಳುವಾಯಿತೇ?
    ಖಂಡಿತವಾಗಿಯೂ ರಿಷಿ ಸುನಕ್ ಮತ್ತು ಅಕ್ಷಿತಾ ಮೂರ್ತಿ ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿದ್ದಾರೆ. ಇನ್‌ಫ್ಯಾಕ್ಟ್, ಸುನಕ್ ಮತ್ತು ಅಕ್ಷಿತಾ ಮೂರ್ತಿ ಅವರು ಬ್ರಿಟನ್‌ನ ಕ್ವೀನ್ ಎಲಿಜಬೆತ್‌ಗಿಂತಲೂ ಶ್ರೀಮಂತರಂತೆ! ಸಾಮಾನ್ಯ ಜನರು ಎದುರಿಸುತ್ತಿರುವ ಆರ್ಥಿಕ ಸಂಕಟಗಳಿಗೆ ಆಗರ್ಭ ಶ್ರೀಮಂತ ಸುನಕ್ ಅವರು ಹೇಗೆ ಕಿವಿಯಾದಾರು ಎಂಬ ಅನುಮಾನಗಳು ಪ್ರಚಾರದ ವೇಳೆ ಮೂಡಿದವು. ಅಥವಾ ಮೂಡುವಂತೆ ಮಾಡಲಾಯಿತು! ಬ್ರಿಟನ್‌ನಲ್ಲಿ ಸದ್ಯಕ್ಕೆ ಜೀವನಮಟ್ಟ ಸಿಕ್ಕಾಪಟ್ಟೆ ಕಾಸ್ಟ್ಲೀ ಆಗಿದೆ. ಇದು ಕೂಡ ಅಲ್ಲೀಗ ಆತಂಕದ ಸಂಗತಿಯಾಗಿದೆ. ಈ ಸಮಸ್ಯೆಯನ್ನು ರಿಷಿ ಸುನಕ್ ಅವರು ಬಗೆ ಹರಿಸುವ ಬಗ್ಗೆ ಟೋರಿ(ಕನ್ಸರ್ವೇಟಿವ್ ಸಂಸದರು)ಗಳಿಗೆ ವಿಶ್ವಾಸ ಮೂಡಲಿಲ್ಲ! ವಿಪರ್ಯಾಸ ನೋಡಿ, ಯಾರಿಗೆ ಸುನಕ್ ಅವರ ಸಂಪತ್ತು ಅಡ್ಡಿಯಾಗಿದೆಯೋ, ಅವರಿಗೆ ಲಿಜ್ ಟ್ರಸ್ ಅವರ ಶ್ರೀಮಂತಿಕೆ ಯಾವುದೇ ತೊಂದರೆ ಕೊಟ್ಟಿಲ್ಲ! ಟೋರಿ ಪಕ್ಷದ ಡೇವಿಡ್ ಕ್ಯಾಮೆರೂನ್ ಅವರಿಂದ ಹಿಡಿದು, ಲಿಜ್ ಟ್ರಸ್ ಮತ್ತು ಹೊರ ಹೋಗುತ್ತಿರುವ ಬೋರಿಸ್ ಜಾನ್ಸನ್ ಅವರ ವರೆಗೂ ಎಲ್ಲರೂ ಶ್ರೀಮಂತರೇ; ಎಲ್ಲರೂ ಕೋಟ್ಯಧೀಶರು. ಸಾರ್ವತ್ರಿಕ ಚುನಾವಣೆ ಬಳಿಕ ಮುಂದಿನ ಪ್ರಧಾನಿ ಎಂದೇ ಬಿಂಬಿತರಾಗಿರುವ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಕೀರ್ ಸ್ಟಾರ್ಮರ್ ಕೂಡ ಆಗರ್ಭ ಶ್ರೀಮಂತ! ಇಷ್ಟಾಗಿಯೂ, ಸುನಕ್ ಅವರ ಶ್ರೀಮಂತಿಕೆಯೇ ಸೋಲಿಗೆ ಕಾರಣವಾಗುತ್ತಿದೆ ಎಂದರೆ ನಂಬುವುದು ಹೇಗೆ?
  3. ಚಹಾ ಕಪ್‌ನಲ್ಲಿ ಬಿರುಗಾಳಿ!
    ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮನೆಗೆ ಆಗಮಿಸಿದ್ದ ಪತ್ರಕರ್ತರಿಗೆ, ಪತ್ನಿ ಅಕ್ಷಿತಾ ಮೂರ್ತಿ ಅವರು ದುಬಾರಿ ಬೆಲೆಯ ಕಪ್‌ಗಳಲ್ಲಿ ಚಹಾ ನೀಡಿದ್ದು ಆಗ ಭಾರಿ ಸುದ್ದಿಯಾಗಿತ್ತು. ಮತ್ತೊಂದೆಡೆ, ಈ ಹಿಂದೆ ಸುನಕ್, ತನಗೆ ಮಧ್ಯಮ ವರ್ಗದ ಫ್ರೆಂಡ್ಸ್ ಇಲ್ಲ ಎಂದು ಹೇಳಿದ ವಿಡಿಯೊ ಕೂಡ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಹಿನ್ನಡೆಗೆ ಕಾರಣವಾಯಿತಾ? ಈ ಬಗ್ಗೆ ಸ್ಪಷ್ಟವಾಗಿ ಉತ್ತರವಿಲ್ಲ.
  4. ರಾಜೀನಾಮೆ ನೀಡಿದ್ದೇ ತಪ್ಪಾಯಿತೇ?
    ಹಾಗೆ ನೋಡಿದರೆ, ಬೋರಿಸ್ ಜಾನ್ಸನ್ ಅವರ ನೇತೃತ್ವದ ಸರ್ಕಾರದ ಪತನಕ್ಕೆ ಅಂತಿಮ ಮೊಳೆ ಹೊಡೆದಿದ್ದು ರಿಷಿ ಸುನಕ್ ಹಾಗೂ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಅವರು. ಜಾನ್ಸನ್ ಸಂಪುಟದಲ್ಲಿ ಈ ಇಬ್ಬರು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹಗರಣಗಳಲ್ಲಿ ಮುಳುಗುತ್ತಿದ್ದಂತೆ, ಗೊತ್ತಿದ್ದೂ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದನ್ನು ವಿರೋಧಿಸಿ, ಇವರಿಬ್ಬರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಇವರನ್ನು ಅನುಸರಿಸಿ ಸುಮಾರು 50 ಸಂಸದರು ರಾಜೀನಾಮೆಗೆ ಮುಂದಾದರು. ಇದರಿಂದಾಗಿ ಬೋರಿಸ್ ಜಾನ್ಸನ್ ಪಿಎಂ ಹುದ್ದೆಗೆ ರಾಜೀನಾಮೆ ನೀಡುವ ಒತ್ತಡ ಸೃಷ್ಟಿಯಾಯಿತು. ರಿಷಿ ಅವರು ಜಾನ್ಸನ್‌ ಬೆನ್ನಿಗಿರಿದರು ಎಂಬ ಭಾವನೆ ಸಾಮಾನ್ಯ ಜನರಲ್ಲೂ ದಟ್ಟವಾಗಿತ್ತು. ಇಂದಿನ ರಾಜಕೀಯ ಅಸ್ಥಿರತೆಗೆ ರಿಷಿ ನೇರವಾಗಿ ಕಾರಣವಾಗಿದ್ದಾರೆಂಬ ಅಸಮಾಧಾನವು ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲೂ ಇದೆ. ಈ ಅಸಮಾಧಾನವೇ ಸುನಕ್ ಅವರು ಪ್ರಧಾನಿ ಹುದ್ದೆಗೇರುವ ಕನಸಿಗೆ ಅಡ್ಡಿಯಾಯಿತು ಎಂಬ ವಿಶ್ಲೇಷಣೆಯಲ್ಲಿ ಹುರುಳಿಲ್ಲದಿಲ್ಲ. ಬೋರಿಸ್ ಜಾನ್ಸನ್ ಕೂಡ, ಬಹಿರಂಗವಾಗಿಯೇ ರಿಷಿ ಅವರಿಗೆ ತಮ್ಮ ಬೆಂಬಲ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಕೂಡ ಪರಿಣಾಮ ಬೀರಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
  5. ಆರ್ಥಿಕ ಸುಧಾರಣೆಗಳು
    ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ರಿಷಿ ಸುನಕ್ ಅವರು ಮಂಡಿಸಿದ ಅಥವಾ ನೀಡಿದ ಭರವಸೆಗಳು ಪ್ರಾಮಾಣಿಕ ಮತ್ತು ನಿಷ್ಠುರವಾಗಿದ್ದವು. ಬಹುಶಃ ಅವರ ಹಿನ್ನಡೆಗೆ ಈ ಸಂಗತಿಯೂ ಪ್ರಭಾವ ಬೀರಿರುವ ಸಾಧ್ಯತೆಗಳಿವೆ. ಪ್ರಚಾರದ ವೇಳೆ, ಅವರು ತೆರಿಗೆ ಕಡಿತದ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಬದಲಿಗೆ, ಮುಂಬರುವ ದಿನಗಳು ಇನ್ನಷ್ಟು ಕಠಿಣಗಳಾಗುವುದರಿಂದ, ಹಣದುಬ್ಬರ ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ಸಂಗತಿಯನ್ನು ಪ್ರಾಮಾಣಿಕವಾಗಿ ಮನದಟ್ಟು ಮಾಡಲು ಪ್ರಯತ್ನಿಸಿದರು. ಆದರೆ, ಎದುರಾಳಿ ಲಿಜ್ ಟ್ರಸ್ ಅವರು, ಹೆಚ್ಚಿನ ತೆರಿಗೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತವೆ. ಇದರಿಂದ ಹೂಡಿಕೆ ಕೂಡ ಕುಸಿಯಲಿದೆ. ಅಂತಿಮವಾಗಿ ಅದು ಆರ್ಥಿಕ ಚಟುವಟಿಕೆಗೆ ಹಿನ್ನಡೆ ತರುತ್ತದೆ. ಹಾಗಾಗಿ, ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ತೆರಿಗೆ ಕಡಿತ ಮಾಡುವುದೇ ಪರಿಹಾರ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಬಹುಶಃ ಅವರ ಈ ವಾದ ಫಲ ನೀಡಿದಂತಿದೆ. ಕನ್ಸರ್ವೇಟಿವ್ ಪಕ್ಷದ ಸಾಂಪ್ರದಾಯಿಕ ಮತದಾರರು ಇದೇ ಮನಸ್ಥಿತಿಯನ್ನು ಹೊಂದಿದವರು. ಅವರು ಕಡಿಮೆ ತೆರಿಗೆ ಮತ್ತು ವೆಚ್ಚ ನೀತಿಯಲ್ಲಿ ವಿಶ್ವಾಸ ಇಟ್ಟವರು. ಈ ನಂಬಿಕೆಗೆ ಟ್ರಸ್ ಧಕ್ಕೆ ಮಾಡಲಿಲ್ಲ; ಸುನಕ್ ಅವರಿಗೆ ಈ ಸಂಗತಿ ಅರ್ಥವಾಗಲಿಲ್ಲ! ಆದರೆ, ಕೆಲವರು ರಿಷಿ ಸುನಕ್ ಅವರ ಆರ್ಥಿಕ ಸುಧಾರಣೆ ಬಗೆಗಿನ ನೀತಿಗಳು ಕಠಿಣವಾಗಿದ್ದರೂ ಈ ಸಮಯಕ್ಕೆ ಅಗತ್ಯವಾಗಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
  6. ಇನ್ನೂ ಒಂದು ಕಾರಣವಿದೆ
    ಪಶ್ಚಿಮ ರಾಷ್ಟ್ರಗಳು ಎಷ್ಟೇ ಮುಂದುವರಿದಿದ್ದರೂ ಬಣ್ಣದ ಆಧಾರದ ಮೇಲೆ ತಾರತಮ್ಯ ಅನುಸರಿಸುವ ನೀತಿಯಿಂದ ಇನ್ನೂ ಪೂರ್ತಿಯಾಗಿ ಹೊರ ಬಂದಿಲ್ಲ. ವರ್ಣಭೇದ ಅವರ ಮನಸ್ಸಿನಾಳದಲ್ಲಿದೆ. ಹಾಗಂತ, ಬ್ರಿಟನ್ ಪಿಎಂ ಆಯ್ಕೆಯಲ್ಲಿ ವರ್ಣಭೇದವು ಪ್ರಭಾವ ಬೀರಿದೆ ಎಂದು ನೇರವಾಗಿ ಹೇಳುವುದು ಅಪಕ್ವ ಎನಿಸಿಕೊಳ್ಳುತ್ತದೆ. ಆದರೆ, ಕನ್ಸರ್ವೇಟಿವ್ ಪಕ್ಷದಲ್ಲಿ ನಾಯಕತ್ವವನ್ನು ಆಯ್ಕೆಯ ಮತದಾರ ಸಮೂಹವನ್ನು ವಿಶ್ಲೇಷಿಸಿದರೆ ಈ ಅನುಮಾನ ಕಾಡದೇ ಇರದು.
    ಪಕ್ಷದ ಹಳೆಯ ಸದಸ್ಯರನ್ನು ಪರಿಗಣಿಸಿದರೆ ವರ್ಣಭೇದ ಪ್ರಭಾವ ಬೀರಿರುವ ಸಾಧ್ಯತೆ ತಕ್ಕಮಟ್ಟಿಗಾದರೂ ಇದ್ದೇ ಇದೆ. ಬಿಳಿಯ ಅಲ್ಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾಗುವುದನ್ನು ಅವರಿಗೆ ಊಹಿಸಿಕೊಳ್ಳುವುದು ಕಷ್ಟವಾಗಿರಬಹುದು! ಹಾಗಾಗಿ, ಅವರ ಒಲವು ಸುನಕ್‌ಗಿಂತಲೂ ಲಿಜ್ ಟ್ರಸ್ ಅವರ ಕಡೆಗೆ ಹೆಚ್ಚಾಗಿರುವ ಸಾಧ್ಯತೆ ಇದೆ.
  7. ಅತಿವೇಗ ಅಪಾಯಕ್ಕೆ ಕಾರಣ
    ಬ್ರಿಟನ್ ರಾಜಕಾರಣದಲ್ಲಿ ರಿಷಿ ಸುನಕ್ ಅವರ ರಾಜಕೀಯ ಬೆಳಣಿಗೆಯನ್ನು ಗಮನಿಸಿದರೆ, ‘ಅತಿ ವೇಗ ಅಪಾಯಕ್ಕೆ ಕಾರಣ’ ಎಂಬ ಮಾತನ್ನು ನೆನಪಿಸುತ್ತದೆ. ಯಾಕೆಂದರೆ, ಪಿಎಂ ಹುದ್ದೆ ಸ್ಪರ್ಧೆ ತನಕದ ಅವರ ವೇಗವೇ ಅವರನ್ನು ಅಪಾಯಕ್ಕೆ ಸಿಲುಕಿಸಿದೆ. One who wields the crown never wears the crown ಎಂಬ ಮಾತು ಸುನಕ್ ಅವರಿಗೆ ಅಕ್ಷರಶಃ ಅನ್ವಯವಾಗುತ್ತಿದೆ. ವೇಗವಾಗಿ ದಕ್ಕಿದ ಜನಪ್ರಿಯತೆಯ ಲಾಭವನ್ನು ಮಾಡಿಕೊಳ್ಳಲು ಹೊರಟವರಿಗೆ, ಉದ್ದೇಶಿತ ಗುರಿಯನ್ನು ಸಾಧ್ಯವಾಗಲಿಲ್ಲ!

    ಇದನ್ನೂ ಓದಿ | Britain PM | ಬ್ರಿಟನ್ ಮುಂದಿನ ಪ್ರಧಾನಿ ಲಿಜ್ ಟ್ರಸ್, ರಿಷಿ ಸುನಕ್‌ಗೆ ಕೈ ತಪ್ಪಿದ ಪಟ್ಟ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Independence Day 2024: ಪ್ರಸ್ತುತ ನಾವು ಬಳಸುವ ರೂಪಾಯಿಗೂ (Indian Currency) ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ.

VISTARANEWS.COM


on

By

Independence Day 2024
Koo

ಭಾರತದಲ್ಲಿ ನಾಣ್ಯ, ನೋಟುಗಳು (Indian Currency) ಚಲಾವಣೆಗೆ ಬಂದು ಹಲವು ಶತಮಾನಗಳೇ ಕಳೆದಿವೆ. ಇದರ ಬಹುದೊಡ್ಡ ಇತಿಹಾಸವೇ ಇದೆ. “ರೂಪಾಯಿ” (Rupee) ಪದದ ಮೂಲ ಸಂಸ್ಕೃತ ಪದ ‘ರೂಪ್ಯ’ದಿಂದ (Rupya) ಬಂದಿದೆ. ಇದರರ್ಥ ಆಕಾರ, ಮುದ್ರೆಯೊತ್ತಲ್ಪಟ್ಟ, ಪ್ರಭಾವಿತ ಅಥವಾ ನಾಣ್ಯ ಎಂಬುದಾಗಿದೆ. ಸಂಸ್ಕೃತ ಪದ “ರೌಪ್ಯ” ಅಂದರೆ ಬೆಳ್ಳಿಯಿಂದ ಮುದ್ರಿಸಲ್ಪಟ್ಟದ್ದು ಎಂಬ ಅರ್ಥವನ್ನು ಹೊಂದಿದೆ.

ನಾವು ಪ್ರಸ್ತುತ ಬಳಸುವ ರೂಪಾಯಿಗೂ ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನೆಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು (British govt) ಮೊದಲ ಬಾರಿಗೆ ಕಾಗದದ ಕರೆನ್ಸಿಯನ್ನು ಪರಿಚಯಿಸಿದರು. 1861ರ ಕಾಗದದ ಕರೆನ್ಸಿ ಕಾಯಿದೆಯು ಬ್ರಿಟಿಷ್ ಭಾರತದ ವಿಶಾಲವಾದ ವಿಸ್ತಾರದ ಉದ್ದಕ್ಕೂ ನೀಡಲಾದ ನೋಟಿನ ಏಕಸ್ವಾಮ್ಯವನ್ನು ಸರ್ಕಾರಕ್ಕೆ ನೀಡಿತು.

ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ:

ಭಾರತದಲ್ಲಿ ನಾಣ್ಯಗಳನ್ನು ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಮುದ್ರಿಸಲಾಯಿತು. ಆಗ ಇದನ್ನು ಕರ್ಷಪಣಗಳು ಅಥವಾ ಪಣಗಳು ಎಂದು ಕರೆಯಲಾಗುತ್ತಿತ್ತು. ಈ ನಾಣ್ಯಗಳು ಅನಿಯಮಿತ ಆಕಾರ, ಪ್ರಮಾಣಿತ ತೂಕವನ್ನು ಹೊಂದಿತ್ತು.

ಬ್ರಿಟಿಷರ ಕಾಲದ ನಾಣ್ಯಗಳು

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಸಮಯದಲ್ಲಿ ಅಂದರೆ 1600ರಲ್ಲಿ ಮೊಘಲ್ ಕರೆನ್ಸಿಯು ಜನಪ್ರಿಯವಾಗಿತ್ತು. ಆದರೆ 1717ಎ.ಡಿನಲ್ಲಿ ಮೊಘಲ್ ಚಕ್ರವರ್ತಿ ಫರೂಖ್ ಸಿಯಾರ್ ಅವರು ಬ್ರಿಟಿಷರಿಗೆ ಬಾಂಬೆ ಟಂಕಸಾಲೆಯಲ್ಲಿ ಮೊಘಲ್ ಹಣವನ್ನು ನಾಣ್ಯ ಮಾಡಲು ಅನುಮತಿ ನೀಡಿದರು. ಅನಂತರ ಬ್ರಿಟಿಷರು ಚಿನ್ನದ ನಾಣ್ಯಗಳನ್ನು ಕ್ಯಾರೊಲಿನಾ ಎಂಬ ಹೆಸರಿನಲ್ಲಿ ತಂದರು. ಬೆಳ್ಳಿಯ ನಾಣ್ಯಗಳನ್ನು ಏಂಜಲೀನಾ ಎಂದು, ತಾಮ್ರದ ನಾಣ್ಯಗಳನ್ನು ಕಪ್ಪೆರೂನ್ ಮತ್ತು ತವರ ನಾಣ್ಯಗಳನ್ನು ಟಿನ್ನಿ ಎಂದು ಕರೆಯಲಾಯಿತು.


ಮೊದಲ ನೋಟು

18ನೇ ಶತಮಾನದಲ್ಲಿ ಬಂಗಾಳದಲ್ಲಿರುವ ಬ್ಯಾಂಕ್ ಆಫ್ ಹಿಂದೂಸ್ತಾನ್ ಜನರಲ್ ಬ್ಯಾಂಕ್ ಮತ್ತು ಬಂಗಾಳ ಬ್ಯಾಂಕ್ ಪೇಪರ್ ಕರೆನ್ಸಿಯನ್ನು ವಿತರಿಸಿದ ಭಾರತದ ಮೊದಲ ಬ್ಯಾಂಕುಗಳಾಗಿವೆ. 1812ರ ಸೆಪ್ಟೆಂಬರ್ 3ರಂದು ಬ್ಯಾಂಕ್ ಆಫ್ ಬೆಂಗಾಲ್ ಮೂಲಕ ಬ್ರಿಟಿಷರು ಇವುಗಳನ್ನು ಹೊರತಂದರು. ಇದು ಎರಡು ನೂರ ಐವತ್ತು ಸಿಕ್ಕಾ ರೂಪಾಯಿ ನೋಟಾಗಿತ್ತು.

ನಾಣ್ಯಗಳ ಕಾಯಿದೆ

1835ರ ನಾಣ್ಯಗಳ ಕಾಯಿದೆಯೊಂದಿಗೆ ದೇಶಾದ್ಯಂತ ಏಕರೂಪದ ನಾಣ್ಯವು ಚಲಾವಣೆಗೆ ಬಂದಿತ್ತು. 1858ರಲ್ಲಿ ಮೊಘಲ್ ಸಾಮ್ರಾಜ್ಯವು ಕೊನೆಗೊಂಡಿತು ಮತ್ತು ಬ್ರಿಟಿಷರು ನೂರು ರಾಜಪ್ರಭುತ್ವದ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಬಳಿಕ ನಾಣ್ಯಗಳ ಮೇಲೆ ಗ್ರೇಟ್ ಬ್ರಿಟನ್ ಪ್ರಭುತ್ವದ ರಾಜನ ಚಿತ್ರವನ್ನು ಮುದ್ರಿಸಲಾಯಿತು.

Indian Currency
Indian Currency


6ನೇ ಕಿಂಗ್ ಜಾರ್ಜ್ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಮೇಲಿನ ವಿನ್ಯಾಸಗಳನ್ನು ಬದಲಿಸಿದರು. ಆದರೆ 1857ರ ದಂಗೆಯ ನಂತರ, ಅವರು ವಸಾಹತುಶಾಹಿ ಭಾರತದ ಅಧಿಕೃತ ಕರೆನ್ಸಿಯಾಗಿ ರೂಪಾಯಿಯನ್ನು ಮಾಡಿದರು.
1862ರಲ್ಲಿ ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ, ವಿಕ್ಟೋರಿಯಾ ಭಾವಚಿತ್ರದೊಂದಿಗೆ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಸರಣಿಯನ್ನು ಬಿಡುಗಡೆ ಮಾಡಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ

ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು 1935ರಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರದ ನೋಟುಗಳನ್ನು ವಿತರಿಸಲು ಅಧಿಕಾರ ನೀಡಲಾಯಿತು. ಇದು ಮೊದಲಿಗೆ 10,000 ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಿತ್ತು. ಆದರೆ ಸ್ವಾತಂತ್ರ್ಯದ ಅನಂತರ ಇದನ್ನು ಅಮಾನ್ಯಗೊಳಿಸಲಾಯಿತು.


ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ನೋಟು

ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ಕಾಗದದ ಕರೆನ್ಸಿ 1938ರ ಜನವರಿಯಲ್ಲಿ 6ನೇ ಕಿಂಗ್ ಜಾರ್ಜ್ ಆವರ ಭಾವಚಿತ್ರವನ್ನು ಹೊಂದಿರುವ 5 ರೂಪಾಯಿ ನೋಟಾಗಿತ್ತು.


ಸ್ವಾತಂತ್ರ್ಯ ಅನಂತರದ ನೋಟು

1947ರಲ್ಲಿ ಸ್ವಾತಂತ್ರ್ಯ ಪಡೆದ ಅನಂತರ ಮತ್ತು 1950ರ ದಶಕದಲ್ಲಿ ಭಾರತ ಗಣರಾಜ್ಯವಾದಾಗ ಭಾರತದ ಆಧುನಿಕ ರೂಪಾಯಿಯ ವಿನ್ಯಾಸ ಪಡೆಯಿತು. ಪೇಪರ್ ಕರೆನ್ಸಿಗೆ ಆಯ್ಕೆ ಮಾಡಲಾದ ಚಿಹ್ನೆಯು ಸಾರಾನಾಥದಲ್ಲಿರುವ ಸಿಂಹದ ಚಿಹ್ನೆಯನ್ನು ಒಳಗೊಂಡಿತ್ತು. ಇದು 6ನೇ ಜಾರ್ಜ್ ನ ಬ್ಯಾಂಕ್ ನೋಟುಗಳನ್ನು ಬದಲಾಯಿಸಿತು. ಆದ್ದರಿಂದ, ಸ್ವತಂತ್ರ ಭಾರತವು ಮುದ್ರಿಸಿದ ಮೊದಲ ನೋಟು 1 ರೂಪಾಯಿ ನೋಟು.

1 ರೂಪಾಯಿ ನೋಟಿನ ಇತಿಹಾಸ ಹೀಗಿದೆ

ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1917ರ ನವೆಂಬರ್ 30ರಂದು ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಯಿತು. ಅದೂ ಮೊದಲನೇ ಮಹಾಯುದ್ಧದ ಸಮಯದಲ್ಲಿ.


ಆ ಕಾಲದಲ್ಲಿ ಒಂದು ರೂಪಾಯಿ ನಾಣ್ಯ ಬೆಳ್ಳಿಯದ್ದಾಗಿತ್ತು. ಆದರೆ ಯುದ್ಧದ ಕಾರಣ ಪರಿಸ್ಥಿತಿ ಹದಗೆಟ್ಟಿತು ಮತ್ತು ಒಂದು ರೂಪಾಯಿ ಬೆಳ್ಳಿಯ ನಾಣ್ಯವನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಮೊದಲ ಬಾರಿಗೆ ಜನರ ಮುಂದೆ ಒಂದು ರೂಪಾಯಿ ನೋಟು ಬಿಡುಗಡೆಯಾಯಿತು. ಇದರಲ್ಲಿ 5ನೇ ಜಾರ್ಜ್ ನ ಚಿತ್ರವನ್ನು ನೋಟಿನಲ್ಲಿ ಅಳವಡಿಸಲಾಗಿತ್ತು. ಇಂಗ್ಲೆಂಡಿನಲ್ಲಿ ಮುದ್ರಿತವಾಗಿರುವ ಈ ಒಂದು ರೂಪಾಯಿ ನೋಟಿನ ಮೌಲ್ಯ ಇತರ ನೋಟುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು.

ನೋಟುಗಳ ಮೈಲುಗಲ್ಲು

1917-1918ರಲ್ಲಿಯೂ ಹೈದರಾಬಾದ್ ನಿಜಾಮರು ತಮ್ಮ ಸ್ವಂತ ಕರೆನ್ಸಿಯನ್ನು ಮುದ್ರಿಸಿ ಬಿಡುಗಡೆ ಮಾಡುವ ಸೌಲಭ್ಯ ಹೊಂದಿದ್ದರು. ಮೊದಲನೆಯ ಮಹಾಯುದ್ಧದಲ್ಲಿ ಲೋಹದ ಕೊರತೆಯಿಂದಾಗಿ ಮೊರ್ವಿ ರಾಜಪ್ರಭುತ್ವದ ರಾಜ್ಯಗಳು ಹರ್ವಾಲಾ ಎಂದು ಕರೆಯಲ್ಪಡುವ ಸೀಮಿತ ಹೊಣೆಗಾರಿಕೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದ್ದವು.


1959ರಲ್ಲಿ ಭಾರತೀಯ ಹಜ್ ಯಾತ್ರಿಕರಿಗೆ ಹತ್ತು ರೂಪಾಯಿ ಮತ್ತು ನೂರು ರೂಪಾಯಿಗಳ ನೋಟನ್ನು ಬಿಡುಗಡೆ ಮಾಡಲಾಯಿತು. ಇದನ್ನು ಅವರು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5 ಮತ್ತು 10 ರೂ. ನೋಟುಗಳ ಮೇಲೆ ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವದ ಸ್ಮರಣಾರ್ಥದ ವಿನ್ಯಾಸವನ್ನು ಮಾಡಿ ಬಿಡುಗಡೆ ಮಾಡಿತ್ತು.


ನಾಣ್ಯಗಳ ಬದಲಿಗೆ ಟೋಕನ್

ಎರಡನೇ ಮಹಾಯುದ್ಧದ ಸಮಯದಲ್ಲಿ ಲೋಹದ ಕೊರತೆಯಿಂದಾಗಿ 36 ರಾಜಪ್ರಭುತ್ವದ ರಾಜ್ಯಗಳು ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಸಿಂಧ್, ಬಲೂಚಿಸ್ತಾನ್ ಮತ್ತು ಕೇಂದ್ರ ಪ್ರಾಂತ್ಯಗಳು ನಾಣ್ಯಗಳ ಬದಲಿಗೆ ಕಾಗದದ ಟೋಕನ್‌ಗಳನ್ನು ನೀಡಿದವು!


ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರ

ಅಂತಿಮವಾಗಿ 1996ರಲ್ಲಿ ಮಹಾತ್ಮಾ ಗಾಂಧಿ ಚಿತ್ರವನ್ನು ಹೊಂದಿರುವ ಕಾಗದದ ನೋಟುಗಳನ್ನು ಪರಿಚಯಿಸಲಾಯಿತು.

ಛಾಯಾಗ್ರಾಹಕನೊಬ್ಬ ತೆಗೆದ ಗಾಂಧಿಯ ಚಿತ್ರ

ಪ್ರಸ್ತುತ ನೋಟಿನಲ್ಲಿರುವ ಮಹಾತ್ಮ ಗಾಂಧಿಯವರ ನಗುಮುಖದ ಚಿತ್ರ ವ್ಯಂಗ್ಯಚಿತ್ರವೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಈ ಚಿತ್ರವನ್ನು 1946ರಲ್ಲಿ ಅಜ್ಞಾತ ಛಾಯಾಗ್ರಾಹಕರೊಬ್ಬರು ತೆಗೆದಿದ್ದು, ಅದನ್ನು ಕತ್ತರಿಸಿ ಮುದ್ರಿಸಲಾಗಿದೆ.


ರಾಜಕಾರಣಿ ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ಮಹಿಳಾ ಮತದಾರರ ಚಳವಳಿಯ ನಾಯಕರಾಗಿದ್ದ ಲಾರ್ಡ್ ಫ್ರೆಡ್ರಿಕ್ ವಿಲಿಯಂ ಪೆಥಿಕ್-ಲಾರೆನ್ಸ್ ಅವರ ಪಕ್ಕದಲ್ಲಿ ನಿಂತಿದ್ದ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಪ್ರಸ್ತುತ ರಾಷ್ಟ್ರಪತಿ ಭವನ ಎಂದು ಕರೆಯಲ್ಪಡುವ ಹಿಂದಿನ ವೈಸರಾಯ್ ಹೌಸ್‌ನಲ್ಲಿ ತೆಗೆಯಲಾಗಿತ್ತು. ಈ ಚಿತ್ರವನ್ನು 1996ರಲ್ಲಿ ಆರ್‌ಬಿಐ ಪರಿಚಯಿಸಿದ ಮಹಾತ್ಮ ಗಾಂಧಿ ಸರಣಿಯ ಬ್ಯಾಂಕ್ ನೋಟುಗಳಲ್ಲಿ ಬಳಸಲಾಗಿದೆ.


ವಿಭಿನ್ನ ಚಿತ್ರ ಬಳಕೆ

1981ರಲ್ಲಿ 10 ರೂ. ನೋಟು ಸಿಂಹದ ಲಾಂಛನ ಮತ್ತು ರಾಷ್ಟ್ರೀಯ ಪಕ್ಷಿಯಾದ ನವಿಲಿನ ಚಿತ್ರವನ್ನು ಹೊಂದಿತ್ತು.

1983- 84ರಲ್ಲಿ ಮುದ್ರಿಸಿರುವ 20 ರೂಪಾಯಿಯ ಬ್ಯಾಂಕ್ ನೋಟಿನ ಹಿಂಭಾಗದಲ್ಲಿ ಬೌದ್ಧರ ಚಕ್ರವನ್ನು ಒಳಗೊಂಡಿತ್ತು.

1996 ಜೂನ್‌ನಲ್ಲಿ ಮುದ್ರಿಸಲಾದ 100 ರೂ.ನ ನೋಟಿನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ ಹಿಂಭಾಗದಲ್ಲಿ ಹಿಮಾಲಯ ಪರ್ವತಗಳನ್ನು ಚಿತ್ರಿಸಲಾಗಿದೆ.


1996ರ ಜೂನ್‌ನಲ್ಲಿ 10 ರೂ. ನೋಟಿನ ಮುಂಭಾಗದಲ್ಲಿ ಗಾಂಧಿ ಮತ್ತು ಹಿಂಭಾಗದಲ್ಲಿ ಜೀವವೈವಿಧ್ಯವನ್ನು ಸಂಕೇತಿಸುವ ಭಾರತದ ಪ್ರಾಣಿಗಳನ್ನು ಪ್ರತಿನಿಧಿಸುವ ಚಿತ್ರವನ್ನು ಚಿತ್ರಿಸಲಾಯಿತು.

1997ರ ಮಾರ್ಚ್‌ನಲ್ಲಿ ಮುದ್ರಿಸಲಾದ 50 ರೂ.ಗಳ ನೋಟಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಭಾರತೀಯ ಸಂಸತ್ತು ಮತ್ತು ಮಹಾತ್ಮ ಗಾಂಧಿಯವರ ಚಿತ್ರವನ್ನು ನೀಡಲಾಗಿದೆ.


1997ರ ಅಕ್ಟೋಬರ್‌ನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರವಿರುವ 500 ರೂ.ಗಳನ್ನು ನೀಡಲಾಯಿತು ಮತ್ತು ಅದರ ಹಿಂಭಾಗದಲ್ಲಿ ದಂಡಿ ಮೆರವಣಿಗೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿತ್ತು.


ಇದು 1930ರ ಮಾರ್ಚ್ 12ರಂದು ಪ್ರಾರಂಭಿಸಿದ ಉಪ್ಪಿನ ಸತ್ಯಾಗ್ರಹವನ್ನು ಪ್ರತಿಬಿಂಬಿಸುತ್ತದೆ. ಗಾಂಧೀಜಿ ಅವರು ಆರಂಭಿಸಿದ ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಇದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉಪ್ಪಿನ ಮೇಲೆ ಬ್ರಿಟಿಷ್‌ ಪ್ರಾಬಲ್ಯದ ವಿರುದ್ಧ ಗಾಂಧೀಜಿ ತಮ್ಮ ಅನುಯಾಯಿಗಳೊಂದಿಗೆ ಅಹಮದಾಬಾದ್ ಬಳಿಯ ಅವರ ಸಬರಮತಿ ಆಶ್ರಮದಿಂದ ನವಸಾರಿ ಜಿಲ್ಲೆ ಗುಜರಾತ್‌ನ ಕರಾವಳಿ ಗ್ರಾಮವಾದ ದಂಡಿಗೆ ಮೆರವಣಿಗೆ ನಡೆಸಿದರು. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಉಪ್ಪನ್ನು ತಯಾರಿಸಿದರು. ಈ ರೀತಿಯಲ್ಲಿ 1930ರ ಏಪ್ರಿಲ್ 5ರಂದು ಗಾಂಧಿಯವರು ಉಪ್ಪಿನ ಕಾನೂನನ್ನು ಮುರಿದರು.


2000ರ ನವೆಂಬರ್‌ನಲ್ಲಿ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ 1000 ರೂ.ಯನ್ನು ನೀಡಲಾಯಿತು. ಅದರ ಹಿಂಭಾಗದಲ್ಲಿ ಧಾನ್ಯ ಕೊಯ್ಲು ಅಂದರೆ ಕೃಷಿ ವಲಯ, ತೈಲ ಸಂಸ್ಕರಣೆ ಇತ್ಯಾದಿ ಹೊಂದಿರುವ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿದೆ.

2001ರ ಆಗಸ್ಟ್‌ನಲ್ಲಿ ಗಾಂಧಿಯವರ ಚಿತ್ರದೊಂದಿಗೆ 20 ರೂ. ನೀಡಲಾಯಿತು. ಇದರಲ್ಲಿ ತಾಳೆ ಮರಗಳ ಚಿತ್ರವನ್ನು ಹಿಂಭಾಗದಲ್ಲಿ ಮುದ್ರಿಸಲಾಯಿತು.

ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

2001ರ ನವೆಂಬರ್ ನಲ್ಲಿ 5 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಹಿಂಭಾಗದಲ್ಲಿ ಕೃಷಿ ಯಾಂತ್ರೀಕರಣದ ಚಿತ್ರವನ್ನು ಚಿತ್ರಿಸಲಾಯಿತು.

2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರುವ ಸಲುವಾಗಿ ಹಿಂದಿನ 500 ಮತ್ತು 1000 ರೂ. ನೋಟುಗಳನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದರು. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದರು. ಮುಂದೆ 500 ರೂ.ಯ ಹೊಸ ಮಾದರಿ ನೋಟುಗಳೂ ಬಂದವು. ಬಳಿಕ ಇದೀಗ 2000 ರೂ. ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದ್ದು, ಚಲಾವಣೆಯಲ್ಲಿರುವ ಅದನ್ನು ಆರ್‌ಬಿಐ ಹಿಂಪಡೆದಿದೆ. 2024ರ ಅಕ್ಟೋಬರ್ ಬಳಿಕ ಈ 2000 ರೂ. ನೋಟುಗಳು ಅಧಿಕೃತವಾಗಿ ಇತಿಹಾಸದ ಪುಟವನ್ನು ಸೇರಲಿದೆ!

Continue Reading

ವಿದೇಶ

Foreign Conspiracy: ಬಾಂಗ್ಲಾ ನೆಪದಲ್ಲಿ ದೇಶ ಅಸ್ಥಿರಗೊಳಿಸುವ ಹುನ್ನಾರ; ವಿದೇಶಿ ಸಂಚನ್ನು ಭಾರತ ತಡೆದಿದ್ದು ಹೇಗೆ?

Foreign Conspiracy: ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಎಡಿಜಿ ನೇತೃತ್ವದ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು. ಈ ಸಮಿತಿಯು ಬಾಂಗ್ಲಾದೇಶದಲ್ಲಿ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ತೊಂದರೆಗೊಳಗಾದ ದೇಶದಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ.

VISTARANEWS.COM


on

By

Foreign Conspiracy
Koo

ನೆರೆಹೊರೆಯ ರಾಷ್ಟ್ರಗಳಲ್ಲಿ ಮುಖ್ಯವಾಗಿ ಭಾರತದ ಗಡಿಯನ್ನು (Indian border) ಹಂಚಿಕೊಂಡಿರುವ ಬಾಂಗ್ಲಾದಲ್ಲಿ (Bangladesh Unrest) ಸಾಮಾಜಿಕ ಅಶಾಂತಿ, ರಾಜಕೀಯ ಅಸ್ಥಿರತೆ ಉಂಟಾಗಿದ್ದರೂ ಇದು ಭಾರತದ ಮೇಲೆ ಯಾವುದೇ ಪ್ರಭಾವವನ್ನು ಬೀರಿಲ್ಲ. ರಾಷ್ಟ್ರವನ್ನು ಅಸ್ಥಿರಗೊಳಿಸುವ ಗುರಿ ಹೊಂದಿರುವ ವಿದೇಶಿ ಹಸ್ತಕ್ಷೇಪಗಳನ್ನು (Foreign Conspiracy) ತಡೆಗಟ್ಟುವ ಮೂಲಕ ಭಾರತದೊಳಗೆ ಉದ್ಭವವಾಗಬಹುದಾಗಿದ್ದ ಬಾಂಗ್ಲಾದಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ತಪ್ಪಿಸಿದೆ. ಭಾರತದೊಳಗೆ ಅಶಾಂತಿಯನ್ನು ಪ್ರಚೋದಿಸಲು ಬಾಹ್ಯ ಶಕ್ತಿಗಳ ಮೂಲಕ ಪ್ರಯತ್ನಗಳು ನಡೆದಿದ್ದರೂ ಭಾರತ ಸರ್ಕಾರದ ಪೂರ್ವಭಾವಿ ಕ್ರಮಗಳು ದೇಶವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸುರಕ್ಷಿತವಾಗಿ ಉಳಿಯುವಂತೆ ಮಾಡಿದೆ.


ಭಾರತ- ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಎಡಿಜಿ ನೇತೃತ್ವದ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು. ಈ ಸಮಿತಿಯು ಬಾಂಗ್ಲಾದೇಶದಲ್ಲಿ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ತೊಂದರೆಗೊಳಗಾದ ದೇಶದಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ನೆರೆಹೊರೆಯ ರಾಷ್ಟ್ರದಲ್ಲಿ ಉಂಟಾಗಿರುವ ಪರಿಸ್ಥಿತಿಯು ದೇಶದೊಳಗೆ ಪ್ರಭಾವ ಬೀರದಂತೆ ಯಶಸ್ವಿಯಾಗಿ ತಡೆಗಟ್ಟಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.


ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಆಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್‌ನಲ್ಲಿ (IPCS) ಹಿರಿಯ ಫೆಲೋ ಆಗಿರುವ ಅಭಿಜಿತ್ ಅಯ್ಯರ್ ಮಿತ್ರ ಅವರು ಮಾತನಾಡಿ, ಭಾರತದ ದೃಢವಾದ ವಿದೇಶಾಂಗ ನೀತಿ ಮತ್ತು ವಿದೇಶಿ ಎನ್‌ಜಿಒ ನಿಧಿಯ ಕಟ್ಟುನಿಟ್ಟಾದ ನಿಯಂತ್ರಣ ಭಾರತವನ್ನು ಸುರಕ್ಷಿತವಾಗಿ ಇರಿಸಿದೆ. ಒಮಿಡ್ಯಾರ್ ಮತ್ತು ಹಿಂಡೆನ್‌ಬರ್ಗ್‌ನಂತಹ ಗುಂಪುಗಳು ಭಾರತವನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕವಾಗಿ ಟೀಕಿಸುತ್ತಿವೆ. ಸರ್ಕಾರದ ಬಲವಾದ ನಿಲುವು ಗಮನಾರ್ಹ ಹಾನಿಯನ್ನುಂಟು ಮಾಡುವುದನ್ನು ತಪ್ಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Foreign Conspiracy
Foreign Conspiracy


ವಿದೇಶಾಂಗ ನೀತಿ ಮತ್ತು ರಾಜಕೀಯ ಆರ್ಥಿಕತೆಯಲ್ಲಿ ಪರಿಣಿತರಾದ ಪ್ರಮಿತ್ ಪಾಲ್ ಚೌಧುರಿ ಈ ಕುರಿತು ಮಾತನಾಡಿ, 1971ರಿಂದ ಬಾಂಗ್ಲಾದಲ್ಲಿ ಹಿಂದೂಗಳು ರಾಜಕೀಯ ಮತ್ತು ಧಾರ್ಮಿಕ ಮೂಲಭೂತವಾದಿಗಳ ದಾಳಿಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಬಂಗಾಳಿ ಬೌದ್ಧಿಕ ವರ್ಗವನ್ನು ಉದ್ದೇಶಪೂರ್ವಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

ಈ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಯಶಸ್ವಿಯಾಗಿದೆ. ಇತ್ತೀಚೆಗೆ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಗಳ ಮೇಲೆ ಪ್ರಭಾವ ಬೀರಲು ಅಂತಾರಾಷ್ಟ್ರೀಯ ವ್ಯಕ್ತಿಗಳು ಪ್ರಯತ್ನಿಸಿದರೂ ಭಾರತ ಸರ್ಕಾರವು ದೃಢವಾಗಿ ಇದನ್ನು ಎದುರಿಸಿತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂಬುದನ್ನು ಹಲವಾರು ಮಂದಿ ಒಪ್ಪಿಕೊಂಡಿದ್ದಾರೆ ಎಂದು ಔಧರಿ ಹೇಳಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಜತೆ ಕೊಟ್ಟಿರುವ ವಿಡಿಯೊ ನೋಡಿ.

Continue Reading

ವಿದೇಶ

Munich Massacre: 11 ಇಸ್ರೇಲಿ ಅಥ್ಲೀಟ್‌ಗಳ ಹತ್ಯೆಯ ಪ್ರತಿಕಾರ ರೋಚಕ! ʼಮೊಸಾದ್‌ʼ ಏಜೆಂಟರ ಆಪರೇಷನ್‌ ಹೀಗಿತ್ತು

1972ರ ಸೆಪ್ಟೆಂಬರ್ 5 ಮ್ಯೂನಿಚ್‌ನ (Munich Massacre) ಒಲಿಂಪಿಕ್ ಗ್ರಾಮಕ್ಕೆ ಎಂಟು ಸದಸ್ಯರು ನುಸುಳಿದರು. ಎಕೆ-47ಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಅವರು 11 ಇಸ್ರೇಲ್ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಒತ್ತೆಯಾಳಾಗಿ ತೆಗೆದುಕೊಂಡರು, ಆರಂಭಿಕ ದಾಳಿಯಲ್ಲಿ ಇಬ್ಬರನ್ನು ಕೊಂದು ಹಾಕಿದ್ದರು. ಈ ಹತ್ಯಾಕಾಂಡಕ್ಕೆ ಇಸ್ರೇಲ್ ಹೇಗೆ ರಣತಂತ್ರ ರೂಪಿಸಿತ್ತು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Munich Massacre
Koo

ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮೇಲೆಯೂ ಪ್ಯಾಲೆಸ್ತೀನ್ ಉಗ್ರಗಾಮಿಗಳ (Palestinian militant) ಕರಿಛಾಯೆಯ ಆತಂಕ ಇತ್ತು. ಯಾಕೆಂದರೆ ಜರ್ಮನಿಯ (Germany) ಮ್ಯೂನಿಚ್‌ನಲ್ಲಿ (Munich Massacre) 1972ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ನಡೆದ ಆ ಒಂದು ಘಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆಯ ಎಂಟು ಮಂದಿ 11 ಇಸ್ರೇಲಿ ಅಥ್ಲೀಟ್‌ಗಳನ್ನು (Israeli athletes) ಬರ್ಬರವಾಗಿ ಕೊಂದು ಹಾಕಿರುವ ನೋವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಪ್ರಧಾನಮಂತ್ರಿ ಗೋಲ್ಡಾ ಮೀರ್ (Prime Minister Golda Meir) ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ಗೆ ರಹಸ್ಯವಾಗಿ ಪ್ರತಿಕಾರ ತೆಗೆದುಕೊಳ್ಳುವಂತೆ ಆದೇಶಿಸಿದ್ದರು.

ಮುಂದಿನ ಏಳು ವರ್ಷ “ಆಪರೇಷನ್ ವ್ರಾತ್ ಆಫ್ ಗಾಡ್” ಎಂದು ಕರೆಯಲ್ಪಡುವ ರಹಸ್ಯ ಕಾರ್ಯಾಚರಣೆಯು ಯುರೋಪ್ ಮತ್ತು ಮಧ್ಯಪ್ರಾಚ್ಯದಾದ್ಯಂತ 12ಕ್ಕಿಂತಲೂ ಹೆಚ್ಚು ಶಂಕಿತರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡಲಾಯಿತು. ‘ಕಿಡಾನ್’ ಎಂದು ಕರೆಯಲ್ಪಡುವ ವಿಶೇಷ ತರಬೇತಿ ಪಡೆದ ಹಿಟ್-ತಂಡವನ್ನು ಒಳಗೊಂಡಿರುವ ಈ ರಹಸ್ಯ ಕಾರ್ಯಾಚರಣೆಯು ಹಲವಾರು ಪುಸ್ತಕಗಳು, ಸಾಕ್ಷ್ಯಚಿತ್ರಗಳು ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ನ ಚಲನಚಿತ್ರ “ಮ್ಯೂನಿಚ್”ನಲ್ಲಿ ಮೂಡಿ ಬಂದಿದೆ.

Munich Massacre
Israeli athletes

ಮ್ಯೂನಿಚ್ ಹತ್ಯಾಕಾಂಡ

1972ರ ಸೆಪ್ಟೆಂಬರ್ 5ರಂದು ಎಂಟು ಉಗ್ರರು ಮ್ಯೂನಿಚ್‌ನ ಒಲಿಂಪಿಕ್ ಗ್ರಾಮಕ್ಕೆ ನುಸುಳಿದರು. ಎಕೆ 47ಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಅವರು 11 ಇಸ್ರೇಲಿ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಒತ್ತೆಯಾಳಾಗಿ ತೆಗೆದುಕೊಂಡರು. ಆರಂಭಿಕ ದಾಳಿಯಲ್ಲಿ ಇಬ್ಬರನ್ನು ಕೊಂದರು. ಇಸ್ರೇಲ್ ಜೈಲಿನಲ್ಲಿರುವ 234 ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಈ ಸಮಯದಲ್ಲಿ ಜರ್ಮನ್ ಅಧಿಕಾರಿಗಳು ಮಾತುಕತೆಗೆ ಪ್ರಯತ್ನಿಸಿದರು.

ಅನಂತರ ಭಯೋತ್ಪಾದಕರು ವಾಯುನೆಲೆಗೆ ತೆರಳಿದರು. ಅಲ್ಲಿ ಎರಡು ಬೆಲ್ ಯುಹೆಚ್ -1 ಮಿಲಿಟರಿ ಹೆಲಿಕಾಪ್ಟರ್‌ಗಳು ಅವರನ್ನು ಕೈರೋಗೆ ಕರೆದುಕೊಂಡು ಹೋಗಿತ್ತು. ಜರ್ಮನ್ ಪೋಲೀಸರ ರಕ್ಷಣಾ ಪ್ರಯತ್ನದಲ್ಲಿ ಎಲ್ಲಾ ಒತ್ತೆಯಾಳುಗಳು, ಜರ್ಮನ್ ಪೊಲೀಸ್ ಅಧಿಕಾರಿ ಮತ್ತು ಐವರು ಭಯೋತ್ಪಾದಕರ ಸಾವಿಗೆ ಕಾರಣವಾಯಿತು.

Munich Massacre
Israeli PM Golda Meir

ಇಸ್ರೇಲ್ ಪ್ರತಿಕಾರ ಹೇಗಿತ್ತು?

ಮ್ಯೂನಿಚ್ ಹತ್ಯಾಕಾಂಡದ ಅನಂತರ ಪ್ರಧಾನಮಂತ್ರಿ ಗೋಲ್ಡಾ ಮೀರ್ ಅವರು ಮೊಸಾದ್ ಮುಖ್ಯಸ್ಥ ಝ್ವಿ ಜಮೀರ್ ಮತ್ತು ಭಯೋತ್ಪಾದನಾ ನಿಗ್ರಹ ಸಲಹೆಗಾರ ಅಹರಾನ್ ಯಾರಿವ್ ಅವರೊಂದಿಗೆ ಭಯೋತ್ಪಾದಕ ಗುಂಪುಗಳ ನಾಯಕರನ್ನು ಮುಗಿಸಲು ಯೋಜನೆಯನ್ನು ರೂಪಿಸಿದರು. ಈ ರಹಸ್ಯ ಕಾರ್ಯಾಚರಣೆಯು ವಿದೇಶಿ ನೆಲದಲ್ಲಿ ಹತ್ಯೆಗಳನ್ನು ನಡೆಸುವುದನ್ನು ಒಳಗೊಂಡಿತ್ತು. ಇದು ಬೃಹತ್ ರಾಜಕೀಯ ಮತ್ತು ನೈತಿಕ ಪರಿಣಾಮಗಳನ್ನು ಹೊಂದಿತ್ತು. ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಮತ್ತು ಮ್ಯೂನಿಚ್ ಸಂತ್ರಸ್ತರಿಗೆ ನ್ಯಾಯವನ್ನು ನೀಡಲು ನಿರ್ಣಾಯಕ ಕ್ರಮ ಅಗತ್ಯ ಎಂದು ಇಸ್ರೇಲ್ ನಾಯಕರು ನಂಬಿದ್ದರು.

ಕಿಡಾನ್ ಕಾರ್ಯಾಚರಣೆ

‘ಕಿಡಾನ್’ ಎಂದು ಕರೆಯಲ್ಪಡುವ ಮೊಸಾದ್‌ನ ವಿಶೇಷ ಘಟಕವು ಹತ್ಯೆಗಳನ್ನು ನಡೆಸುವ ಕಾರ್ಯವನ್ನು ನಿರ್ವಹಿಸುತ್ತಿತ್ತು. ಈ ಘಟಕವು ವಿವಿಧ ರೀತಿಯ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆ, ಹತ್ಯೆಯಲ್ಲಿ ಹೆಚ್ಚು ತರಬೇತಿ ಪಡೆದವರನ್ನು ಒಳಗೊಂಡಿತ್ತು. ಮ್ಯೂನಿಚ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ನ ಉನ್ನತ-ಶ್ರೇಣಿಯ ಸದಸ್ಯರನ್ನು ʼಕಿಡಾನ್ʼ ಗುರಿಯಾಗಿಸಿಕೊಂಡಿತ್ತು.

ಸರಣಿ ಹತ್ಯೆಗಳು

ಮುಂದಿನ ಹಲವಾರು ವರ್ಷಗಳಲ್ಲಿ ಮೊಸಾದ್‌ ತಂಡದವರು ಯುರೋಪ್ ಮತ್ತು ಮಧ್ಯಪ್ರಾಚ್ಯದಾದ್ಯಂತ ಉನ್ನತ ಮಟ್ಟದ ಹತ್ಯೆಗಳನ್ನು ನಡೆಸಿದ್ದರು. ಇದು ಅತ್ಯಂತ ಗಮನಾರ್ಹವಾದ ಕೆಲವು ಕಾರ್ಯಾಚರಣೆಗಳನ್ನು ಒಳಗೊಂಡಿತ್ತು.

ವೇಲ್ ಜ್ವೈಟರ್

ಮೊದಲ ಗುರಿ ರೋಮ್‌ನಲ್ಲಿ ವಾಸಿಸುತ್ತಿದ್ದ ಪ್ಯಾಲೆಸ್ಟೀನಿಯನ್ ಕವಿ ಮತ್ತು ಅನುವಾದಕ ವೇಲ್ ಜ್ವೈಟರ್ ಆಗಿದ್ದ. ಈತ ಸೆಪ್ಟೆಂಬರ್ ದಾಳಿಯ ಪ್ರಮುಖ ಮುಖ್ಯಸ್ಥನಾಗಿದ್ದ ಎನ್ನಲಾಗಿದೆ. 1972ರ ಅಕ್ಟೋಬರ್ 16ರಂದು ಇಬ್ಬರು ಮೊಸ್ಸಾದ್ ಹಿಟ್‌ಮ್ಯಾನ್‌ಗಳು ಜ್ವೈಟರ್‌ನ ಅಪಾರ್ಟ್ಮೆಂಟ್ ಕಟ್ಟಡದ ಲಾಬಿಯಲ್ಲಿ ಹೊಂಚು ಹಾಕಿ 11 ಬಾರಿ ಗುಂಡು ಹಾರಿಸಿದರು. ಆದರೆ ಜ್ವೈಟರ್ ಮೇಲಿನ ದಾಳಿಯನ್ನು ಮೊಸಾದ್‌ ಗುಪ್ತಚರವು ದೃಢೀಕರಿಸಿಲ್ಲ.

ಮಹಮೂದ್ ಹಂಶರಿ

ಫ್ರಾನ್ಸ್‌ನಲ್ಲಿ ಪಿಎಲ್‌ಒ ಪ್ರತಿನಿಧಿಯಾಗಿದ್ದ ಮಹಮೂದ್ ಹಂಶರಿ ಮುಂದಿನ ಗುರಿಯಾಗಿದ್ದ. ಮೊಸಾದ್ ಕಾರ್ಯಕರ್ತರು ಆತನನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಲ್ಲಿ ಪತ್ತೆ ಹಚ್ಚಿದರು. ಪತ್ರಕರ್ತರಂತೆ ನಟಿಸಿ ಆತನ ದೂರವಾಣಿಯಲ್ಲಿ ಬಾಂಬ್ ಇಡುವಲ್ಲಿ ಯಶಸ್ವಿಯಾದರು. 1972ರ ಡಿಸೆಂಬರ್ 8ರಂದು ಬಾಂಬ್ ಸ್ಫೋಟಿಸಿ, ಹಂಶರಿಯನ್ನು ಕೊಂದರು.

ಹುಸೇನ್ ಅಲ್ ಬಶೀರ್

ಸೈಪ್ರಸ್ ಮೂಲದ ಪಿಎಲ್‌ಒ ಆಪರೇಟಿವ್ ಹುಸೇನ್ ಅಲ್ ಬಶೀರ್ ಮೇಲೆ ದಾಳಿಯ ಯೋಜನೆ ರೂಪಿಸಿದ ಮೊಸ್ಸಾದ್ ಏಜೆಂಟ್‌ಗಳು 1973ರ ಜನವರಿ 24ರಂದು ನಿಕೋಸಿಯಾ ಹೊಟೇಲ್‌ನಲ್ಲಿ ಅವನ ಹಾಸಿಗೆಯ ಕೆಳಗೆ ಬಾಂಬ್ ಇಟ್ಟರು. ಇದರ ಸ್ಫೋಟದಿಂದ ಬಶೀರ್ ತಕ್ಷಣ ಸಾವನ್ನಪ್ಪಿದ್ದ.

Munich Massacre
Munich Massacre


ಬೈರುತ್ ಕಾರ್ಯಾಚರಣೆ

1973ರ ಎಪ್ರಿಲ್ 10ರಂದು ಬೈರುತ್‌ನಲ್ಲಿ ಅತ್ಯಂತ ರೋಚಕ ಕಾರ್ಯಾಚರಣೆ ನಡೆಸಲಾಯಿತು. ಮೊಸ್ಸಾದ್ ಸಿಬ್ಬಂದಿ ಇಸ್ರೇಲ್ ಕಮಾಂಡೋಗಳೊಂದಿಗೆ ಸೇರಿ ಗಣ್ಯ ಸಯೆರೆಟ್ ಮಟ್ಕಲ್ ಘಟಕದ ಮಹಿಳೆಯರಂತೆ ವೇಷ ಧರಿಸಿ ಬೈರುತ್‌ಗೆ ನುಸುಳಿದರು. ಕಾರ್ಯಾಚರಣೆಯು ಮೂರು ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿತ್ತು. ಮೊಹಮ್ಮದ್ ಯೂಸೆಫ್ ಅಲ್-ನಜ್ಜರ್, ಕಮಲ್ ಅಡ್ವಾನ್ ಮತ್ತು ಕಮಲ್ ನಾಸರ್. ಈ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಇದನ್ನೂ ಓದಿ: Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 91 ಜನ ಸಾವು

ಅಲಿ ಹಸನ್ ಸಲಾಮೆಹ್

“ರೆಡ್ ಪ್ರಿನ್ಸ್” ಎಂದು ಕರೆಯಲ್ಪಡುವ ಅಲಿ ಹಸನ್ ಸಲಾಮೆ ಮೊಸ್ಸಾದ್ ನ ಪ್ರಮುಖ ಗುರಿಯಾಗಿತ್ತು. ಸಲಾಮೆ ಮ್ಯೂನಿಚ್ ದಾಳಿಯ ಮುಖ್ಯಸ್ಥನಾಗಿದ್ದ. ಪಿಎಲ್‌ಒ ಮಾಜಿ ಮುಖ್ಯಸ್ಥ ಯಾಸರ್ ಅರಾಫತ್ ಅವರ ನಿಕಟ ಸಹವರ್ತಿಯಾಗಿದ್ದ.

ನಾರ್ವೆಯಲ್ಲಿ ವಿಫಲ ಪ್ರಯತ್ನದಲ್ಲಿ ಮೊಸ್ಸಾದ್ ತಂಡವು ಅಹ್ಮದ್ ಬೌಚಿಖಿ ಎಂಬ ಅಮಾಯಕ ಮೊರೊಕನ್ ಅಡುಗೆಯವನನ್ನು ತಪ್ಪಾಗಿ ಕೊಂದಿತು. ಬಳಿಕ ಸಲಾಮೆಯನ್ನು ಪತ್ತೆಹಚ್ಚಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿತು. 1979ರಲ್ಲಿ ಸಲಾಮೆ ಮತ್ತು ಅವನ ಹೆಂಡತಿಯೊಂದಿಗೆ ಸ್ನೇಹ ಬೆಳೆಸಿದ ರಹಸ್ಯ ಕಾರ್ಯಾಚರಣೆಯ ತಂಡಕ್ಕೆ ಪ್ರಗತಿ ದೊರೆಯಿತು. 1979ರ ಜನವರಿ 22ರಂದು ಸಲಾಮೆ ಬೈರುತ್‌ನಲ್ಲಿ ಕಾರ್ ಬಾಂಬ್‌ನಿಂದ ಕೊಲ್ಲಲ್ಪಟ್ಟನು. ಹೀಗೆ ಇಸ್ರೇಲ್‌ ತನ್ನ ವೈರಿಗಳ ಮೇಲೆ ಸೇಡು ತೀರಿಸಿಕೊಂಡಿತು.

Continue Reading

ವಿದೇಶ

Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದಿರುವ ಅನೇಕರು (Hindus in Bangla) ಒಂದಲ್ಲಾ ಒಂದು ರೀತಿಯ ನೋವಿನ ಕಥೆಯನ್ನು ಹೇಳುತ್ತಾರೆ. ಪೂರ್ವಜರ ಮನೆಗಳು ಮತ್ತು ನೆನಪುಗಳನ್ನು ಬಿಟ್ಟು ಬರುವುದು ಸುಲಭವಲ್ಲ. ಆದರೆ ಪ್ರಾಣ ರಕ್ಷಣೆಗಾಗಿ ಓಡಿ ಬರಲೇ ಬೇಕಾಯಿತು ಎನ್ನುವ ಅವರಲ್ಲಿ ದೇಶ, ಸಂಬಂಧಿಗಳನ್ನು ಬಿಟ್ಟು ಬಂದ ನೋವು ಇನ್ನೂ ಇದೆ. ಅದನ್ನು ಅವರು ಬಿಚ್ಚಿಟ್ಟಿದ್ದು ಹೀಗೆ. ಬಾಂಗ್ಲಾದಲ್ಲಿ ಹಿಂದೂಗಳು ಹೇಗಿದ್ದಾರೆ? ಬಾಂಗ್ಲಾ ವಲಸಿಗರ ಮನಕಲಕುವ ಮಾತುಗಳು ಇಲ್ಲಿವೆ.

VISTARANEWS.COM


on

By

Hindus in Bangla
Koo

ಭಾರತದ ಸ್ವಾತಂತ್ರ್ಯ ಅನಂತರವೂ ದೇಶದ ಗಡಿಯ ಭಾಗದಲ್ಲಿ ಬಾಂಗ್ಲಾದೇಶದ (bangladesh) ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳು ಪ್ರಭಾವವನ್ನು ಬೀರುತ್ತಲೇ ಇದೆ. ಇದು ಬಾಂಗ್ಲಾಕ್ಕೆ ಹತ್ತಿರದ ನೆರೆಯ ರಾಜ್ಯವಾದ ಪಶ್ಚಿಮ ಬಂಗಾಳದ (west bengal) ಜನರ ಮೇಲೆ ಅದರಲ್ಲೂ ಮುಖ್ಯವಾಗಿ ಬಾಂಗ್ಲಾದಿಂದ ವಲಸೆ ಬಂದಿರುವ (Immigrant) ಹಿಂದೂಗಳ (Hindus in Bangla) ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡುತ್ತಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ಬಾಂಗ್ಲಾದಿಂದ ಭಾರತಕ್ಕೆ ಬಂದರು. ಅವರು ಪಶ್ಚಿಮ ಬಂಗಾಳ, ತ್ರಿಪುರಾ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಆಶ್ರಯ ಪಡೆದರು. ಅನೇಕರು ತಮ್ಮ ಜೀವನವನ್ನು ಪುನರ್ ನಿರ್ಮಿಸುವ ಭರವಸೆಯಲ್ಲಿ ಬಂದರು. ಆದರೆ “ನಿರಾಶ್ರಿತರು” ಎಂಬ ಶಾಶ್ವತ ಹಣೆಪಟ್ಟಿಯನ್ನು ಪಡೆದರು.

ದಶಕಗಳ ಅನಂತರ ಬಾಂಗ್ಲಾದಲ್ಲಿ ಉಂಟಾಗುತ್ತಿರುವ ರಾಜಕೀಯ, ಸಾಮಾಜಿಕ ಸಂಘರ್ಷದ ಪರಿಣಾಮಗಳು ಬಾಂಗ್ಲಾದಿಂದ ವಲಸೆ ಬಂದಿರುವ ಜನರು ಇರುವ ರಾಜ್ಯಗಳಲ್ಲಿ ಪರಿಣಾಮ ಬೀರುತ್ತಿದೆ. ಇಲ್ಲಿರುವ ಅನೇಕ ಅಲ್ಪಸಂಖ್ಯಾತ ಸಮುದಾಯಗಳು ನೆರೆಯ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸುತ್ತಾರೆ. ಇದು ಬಂಗಾಳಿ ಹಿಂದೂಗಳ ಆತಂಕಕ್ಕೆ ಕಾರಣವಾಗುತ್ತದೆ. ಹಿಂದಿನ ದೌರ್ಜನ್ಯಗಳಿಗೆ ಸಾಕ್ಷಿಯಾದ ಹಲವಾರು ಬಂಗಾಳಿ ಹಿಂದೂಗಳು ಈ ಕುರಿತು ತಮ್ಮ ಅನುಭವಗಳನ್ನು oneindia ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ.


ಮನೆಗಳನ್ನು ಸುಟ್ಟು ಹಾಕಿದ್ದರು

1971ರಲ್ಲಿ ಭಾರತಕ್ಕೆ ಬಂದ ಸುಶೀಲ್ ಗಂಗೋಪಾಧ್ಯಾಯ ಅವರು ಮೂಲತಃ ಬಾಂಗ್ಲಾದೇಶದ ನೊವಾಖಾಲಿ ಜಿಲ್ಲೆಯವರು. ಅಲ್ಲಿ ಅವರು ದೊಡ್ಡ ಕುಟುಂಬ ಮತ್ತು ವಿಶಾಲವಾದ ಭೂಮಿಯನ್ನು ಹೊಂದಿದ್ದರು ಆದರೆ ವಿಮೋಚನಾ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೈನ್ಯ ಮತ್ತು ರಜಾಕಾರರು ದಾಳಿ ಮಾಡಿ ಇವರ ಮನೆಗಳನ್ನು ಸುಟ್ಟು ಹಾಕಿದರು. ಅನೇಕರು ಕ್ರೂರವಾಗಿ ಕೊಲ್ಲಲ್ಪಟ್ಟರು ಎಂದು ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯದ ಬಳಿಕ ಬಹುಸಂಖ್ಯಾತ ಸಮುದಾಯದ ದಬ್ಬಾಳಿಕೆಯು ಅವರನ್ನು ಭಾರತದಲ್ಲಿ ಶಾಶ್ವತ ಆಶ್ರಯ ಪಡೆಯಲು ಪ್ರೇರೇಪಿಸಿತ್ತು.


ಪ್ರಸ್ತುತ ಬಾಂಗ್ಲಾದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆ ಹೃದಯ ವಿದ್ರಾವಕವಾಗಿದೆ. ಗರ್ಭಿಣಿಯ ಹೊಟ್ಟೆಗೆ ಒದೆಯುವ ದೃಶ್ಯಗಳನ್ನು ನಾನು ನೋಡಿದ್ದೇನೆ. ಇಂತಹ ಕ್ರೂರತೆಯನ್ನು ಊಹಿಸಲೂ ಸಾಧ್ಯವಿಲ್ಲ. ಒಬ್ಬ ಭಾರತೀಯನಾಗಿ ನಾನು ಅವರನ್ನು ರಕ್ಷಿಸಬೇಕೆಂದು ಒತ್ತಾಯಿಸುತ್ತೇನೆ. ನಮ್ಮ ಸ್ಥಳೀಯ ಸಹೋದರರು ಅಲ್ಲಿ ಹಿಂದೂಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಮುಂದುವರೆಸಿದರೆ ನಾವು ಬಾಂಗ್ಲಾದೇಶದಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿಯನ್ನು ನಡೆಸಬೇಕಾಗಬಹುದು ಎನ್ನುತ್ತಾರೆ.


1971ರ ಅವರ ನೆನಪುಗಳು ಇನ್ನೂ ಜೀವಂತವಾಗಿವೆ. ಆಗ ನನಗೆ ಕೇವಲ 10 ಅಥವಾ 12 ವರ್ಷ. ರಜಾಕಾರರು ನಮ್ಮನ್ನು ಹಿಂಸಿಸಿದರು, ಪುರುಷರ ದೇಹಗಳನ್ನು ನದಿಗಳಿಗೆ ಎಸೆದು ತಾಯಿಯಂದಿರ ಮೇಲೆ ಅತ್ಯಾಚಾರ ನಡೆಸಿದರು. ಪಾಕಿಸ್ತಾನಿ ಸೇನೆಯಿಂದ ಅನೇಕ ಮಹಿಳೆಯರು ಗರ್ಭ ಧರಿಸುವಂತಾಯಿತು. ವರ್ಷಗಳ ಅನಂತರವೂ ಆ ಗಾಯಗಳು ಇನ್ನೂ ಉಳಿದಿವೆ ಎನ್ನುತ್ತಾರೆ ಅವರು.


ಭಾರತಕ್ಕೆ ಓಡಿ ಬಂದ ತುಂಬು ಗರ್ಭಿಣಿ

ಬಾಂಗ್ಲಾದೇಶದ ಬಂಗಾವ್‌ನ ಅನಿಮಾ ದಾಸ್‌ ಅವರ ಕಥೆ ಎಂತಹ ಕಲ್ಲು ಹೃದಯವನ್ನೂ ಕರಗಿಸಬಲ್ಲದು. ಆ ದುಃಖದ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಆಗ ನನ್ನ ಮಗ ಚಿಕ್ಕವ, ನನ್ನ ಮಗಳು ಹೊಟ್ಟೆಯಲ್ಲಿದ್ದಳು. ದೇಶಾದ್ಯಂತ ಸಂಘರ್ಷ ಉಂಟಾಗಿತ್ತು. ಮನೆಗಳು ಸುಟ್ಟುಹೋದವು, ಭಯದಿಂದ ಮಾವ ನಮ್ಮನ್ನು ಭಾರತಕ್ಕೆ ಕಳುಹಿಸಿದರು. ಪುರುಷರ ವಿರುದ್ಧ ಹಿಂಸಾಚಾರವನ್ನು ನೆನಪಿಸಿಕೊಂಡರೆ ಈಗಲೂ ಹೃದಯ ಕಂಪಿಸುತ್ತೆ ಎನ್ನುತ್ತಾರೆ.


ಬಳಿಕ ಹಲವು ಬಾರಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿ ಮತ್ತೆ ವಾಸಿಸುವ ಆಲೋಚನೆ ಮಾಡಲಾರೆ ಎನ್ನುತ್ತಾರೆ ಅವರು.


ಹಿಂದೂಗಳ ಮೇಲೆ ನಿರಂತರ ಶೋಷಣೆ

ಬಾಂಗ್ಲಾದೇಶದಿಂದ ವಲಸೆ ಬಂದ ಹರದನ್ ಬಿಸ್ವಾಸ್ ಅವರು ಮಾತನಾಡಿ, ನಿರಂತರ ಶೋಷಣೆಯು ಹಿಂದೂ ಸಮುದಾಯವನ್ನು ಅಲ್ಲಿ ಭಯದಲ್ಲೇ ಇರಿಸಿದೆ. ಅನೇಕರು ತಮ್ಮ ತಾಯ್ನಾಡಿಗೆ ಓಡಿಹೋಗಲು ಮತ್ತು ಭಾರತದಲ್ಲಿ ಆಶ್ರಯ ಪಡೆಯುವಂತೆ ಪ್ರೇರೇಪಿಸುತ್ತಿದೆ. ಹಿಂದೂಗಳು ಬಾಂಗ್ಲಾದೇಶದಲ್ಲಿ ಐತಿಹಾಸಿಕವಾಗಿ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ. ಸ್ವಾತಂತ್ರ್ಯದ ಸಮಯದಿಂದಲೂ ನಿರಂತರ ಅಪಾಯಗಳನ್ನು ಎದುರಿಸುತ್ತಲೇ ಇದ್ದಾರೆ ಎನ್ನುತ್ತಾರೆ ಅವರು.

ಅಜ್ಜನನ್ನು ಕಣ್ಣೆದುರೇ ಕೊಂದರು

1956ರಲ್ಲಿ ಭಾರತಕ್ಕೆ ಆಗಮಿಸಿದ್ದ ಪರೇಶ್ ದಾಸ್ ಅವರು ಮಾತನಾಡಿ, ನನ್ನ ಅಜ್ಜನನ್ನು ಕಣ್ಣೆದುರೇ ಕೊಂದರು. ಸೋದರಸಂಬಂಧಿಗಳ ಮೇಲೆ ಹಲ್ಲೆ ನಡೆಸಿದರು. ನಾವು ಭಯದಿಂದ ದೇಶ ಬಿಟ್ಟು ಬಂದೆವು. ಈಗ ಭಾರತದಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದರೂ, ನೊವಾಖಾಲಿಯಲ್ಲಿರುವ ನಮ್ಮ ಸಂಬಂಧಿಕರು ಇನ್ನೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ, ನನ್ನ ಚಿಕ್ಕಪ್ಪನನ್ನು ಜಮೀನು ವಿವಾದದಲ್ಲಿ ಕೊಲ್ಲಲಾಯಿತು. ಆಸ್ತಿಗಿಂತ ಅವರ ಜೀವನಕ್ಕೆ ಆದ್ಯತೆ ನೀಡುವಂತೆ ನಾನು ಅವರಿಗೆ ಹೇಳಿದ್ದೆ ಎಂದು ಅಳಲು ತೋಡಿಕೊಂಡರು.

ಹಿಂದೂ ಆಗಿರುವುದೇ ಅಲ್ಲಿ ಅಪರಾಧ

ರಶೋಮೊಯ್ ಬಿಸ್ವಾಸ್ ಅವರು 1971ರ ಅನಂತರದ ಕಿರುಕುಳಗಳನ್ನು ವಿವರಿಸುತ್ತಾ, ಹಿಂದೂ ಆಗಿರುವುದೇ ಅಲ್ಲಿ ಅಪರಾಧವಾಗಿತ್ತು. ಸ್ವಾತಂತ್ರ್ಯದ ಅನಂತರವೂ ಇದು ಕಡಿಮೆ ಆಗಲಿಲ್ಲ. ಪಾಕಿಸ್ತಾನಿ ಸೇನೆ ಮತ್ತು ಜಮಾತ್ ಪಡೆಗಳು ಹಿಂದುಗಳನ್ನೇ ಗುರಿಯಾಗಿಸಿಕೊಂಡು ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದವು.


ಇದನ್ನೂ ಓದಿ: Bangladesh Unrest: ಪ್ರತಿಭಟನೆಗೆ ಮಣಿದು ರಾಜೀನಾಮೆಗೆ ಮುಂದಾದ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಒಬೈದುಲ್ ಹಸನ್


ನನ್ನ ಕುಟುಂಬ ಅಲ್ಲಿ ಆಹಾರವಿಲ್ಲದೆ ಅನೇಕ ರಾತ್ರಿಗಳನ್ನು ಕಳೆದಿದೆ. ನಾವು ಈಗ ಭಾರತದಲ್ಲಿ ಶಾಂತಿಯಿಂದ ಬದುಕುತ್ತಿರುವಾಗ ನಮ್ಮ ಅನೇಕ ಸಂಬಂಧಿಕರು ಬಾಂಗ್ಲಾದೇಶದಲ್ಲಿ ಉಳಿದಿದ್ದಾರೆ. ಭಾರತ ಸರ್ಕಾರವು ಮಧ್ಯಪ್ರವೇಶಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಆಗ ಮಾತ್ರ ಅಲ್ಲಿ ಹಿಂದೂಗಳು ಭಯವಿಲ್ಲದೆ ಬದುಕಬಹುದು ಎನ್ನುತ್ತಾರೆ ಅವರು.

Continue Reading
Advertisement
Gallantry awards
ಪ್ರಮುಖ ಸುದ್ದಿ2 hours ago

Gallantry Awards: 103 ಶೌರ್ಯ ಪ್ರಶಸ್ತಿ ಪಟ್ಟಿ ಪ್ರಕಟ; ಪಟ್ಟಿಯಲ್ಲಿವೆ 4 ಕೀರ್ತಿ ಚಕ್ರಗಳು

Vinesh Phogat
ಪ್ರಮುಖ ಸುದ್ದಿ3 hours ago

Vinesh Phogat: ವಿನೇಶ್‌ ಪೋಗಟ್‌ಗೆ ಭಾರೀ ಹಿನ್ನಡೆ; ಬೆಳ್ಳಿ ಪದಕ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

duleep trophy
ಕ್ರೀಡೆ3 hours ago

Duleep Trophy: ದುಲೀಪ್‌ ಟ್ರೋಫಿ ತಂಡ ಪ್ರಕಟ; ಪಟ್ಟಿಯಲ್ಲಿಲ್ಲ ಕೊಹ್ಲಿ, ಶರ್ಮಾ ಹೆಸರು- ನಾಲ್ಕು ಟೀಮ್‌ಗಳ ನಾಯಕರು ಇವರೇ!

Reliance Foundation
ದೇಶ3 hours ago

Reliance Foundation: ಡಿಗ್ರಿ, ಪಿಜಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್ ಫೌಂಡೇಷನ್‌ನಿಂದ ವಿದ್ಯಾರ್ಥಿ ವೇತನ

Bank FD Rates
ಮನಿ-ಗೈಡ್3 hours ago

Bank FD Rates: ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಎಫ್‌ಡಿ ಬಡ್ಡಿ ದರ ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ?

Banking Recruitment 2024
ಉದ್ಯೋಗ4 hours ago

Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆ; ಐಬಿಪಿಎಸ್‌ನಿಂದ ಮತ್ತೆ ನೇಮಕ; complete details

Necklace Mangalya Fashion
ಫ್ಯಾಷನ್4 hours ago

Necklace Mangalya Fashion: ವಿವಾಹಿತರ ಮಾಂಗಲ್ಯಕ್ಕೂ ಸಿಕ್ತು ವೈವಿಧ್ಯಮಯ ನೆಕ್ಲೇಸ್‌ ರೂಪ!

Arun Yogiraj
ಬೆಂಗಳೂರು4 hours ago

Arun Yogiraj: ʼವಿಶ್ವ ಶ್ರೇಷ್ಠ ಕನ್ನಡಿಗ 2024ʼ ಪ್ರಶಸ್ತಿಗೆ ಶ್ರೀರಾಮ ವಿಗ್ರಹದ ರೂವಾರಿ ಅರುಣ್ ಯೋಗಿರಾಜ್‌ ಆಯ್ಕೆ

Shira News
ತುಮಕೂರು4 hours ago

Shira News: ಉದ್ಯೋಗ ಕೌಶಲಕ್ಕಾಗಿ ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪನೆ; ಟಿ.ಬಿ. ಜಯಚಂದ್ರ

Murder Case
ಕರ್ನಾಟಕ4 hours ago

Murder Case: ಪತ್ನಿಯನ್ನು ಸ್ಮಶಾನಕ್ಕೆ ಕರೆದೊಯ್ದು ಕೊಲೆಗೈದ ಪತಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌