ವಿವೇಕ್ ಒಬೆರಾಯ್ @46 - Vistara News

ಕಾಲಿವುಡ್

ವಿವೇಕ್ ಒಬೆರಾಯ್ @46

46ನೇ ವರ್ಷಕ್ಕೆ ಕಾಲಿಟ್ಟಿರುವ ವಿವೇಕ್‌ ಒಬೆರಾಯ್‌ಗೆ ಜನುಮದಿನದ ಶುಭಾಶಯ. ಅವರ ಸಿನಿಜರ್ನಿಯ ಏಳುಬೀಳುಗಳಲ್ಲಿ ಕೆಲವು ಮಹತ್ವದ ಹೆಜ್ಜೆಯನ್ನು ಇಲ್ಲಿ ದಾಖಲಿಸಲಾಗಿದೆ.

VISTARANEWS.COM


on

ವಿವೇಕ್ ಒಬೆರಾಯ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ವಿವೇಕ್ ಒಬೆರಾಯ್

1976ರ ಸೆಪ್ಟೆಂಬರ್ 3ರಂದು ಹೈದರಾಬಾದ್‌ನಲ್ಲಿ ಜನಿಸಿದರು. ವಿವೇಕಾನಂದ ಒಬೆರಾಯ್ ಇವರ ಮೂಲ ಹೆಸರು.

ವಿವೇಕ್ ಒಬೆರಾಯ್

2002ರಲ್ಲಿ ತೆರೆಕಂಡ ʼಕಂಪನಿʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಿಂದ ಅತ್ಯುತ್ತಮ ಚೊಚ್ಚಲ ನಟ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದೆ.

ವಿವೇಕ್ ಒಬೆರಾಯ್

2003ರಲ್ಲಿ ವಿವೇಕ್ ವಿವಾದದ ಹೇಳಿಕೆ ನೀಡಿದ್ದರು. ಐಶ್ವರ್ಯಾ ರೈ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಸಲ್ಮಾನ್ ಖಾನ್ 41 ಬಾರಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ವಿವೇಕ್ ಒಬೆರಾಯ್

2007ರ Shootout at Lokhandwala ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕಾಗಿ IIFA ಅವಾರ್ಡ್ಸ್‌ ಮತ್ತು AXN Action ಅವಾರ್ಡ್ಸ್‌ನಿಂದ ಅತ್ಯುತ್ತಮ ಖಳನಾಯಕ ಪ್ರಸಸ್ತಿ ದೊರೆತಿದೆ.

ವಿವೇಕ್ ಒಬೆರಾಯ್

2013 ರಿಂದ 2018 ವರೆಗೆ Zee ಟಿವಿ ಹಿಂದಿಯಲ್ಲಿ ಬರುವ ರಿಯಾಲಿಟಿ ಶೋ India’s Best Dramebaazನ ಮುಖ್ಯ ತೀರ್ಪುಗಾರರಾಗಿದ್ದರು.

ವಿವೇಕ್ ಒಬೆರಾಯ್

2017ರಲ್ಲಿ Vivegam ಚಿತ್ರದಲ್ಲಿ ನೆಗೆಟಿವ್‌ ಪಾತ್ರದೊಂದಿಗೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ವಿವೇಕ್ ಒಬೆರಾಯ್

2019ರಲ್ಲಿ ಶಿವರಾಜಕುಮಾರ್‌ ನಟನೆಯ ರುಸ್ತುಂ ಚಿತ್ರದಲ್ಲಿ DCP ಭರತ್ ರಾಜ್ ಪಾತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ವಿವೇಕ್ ಒಬೆರಾಯ್

Dharavi Bank ಮತ್ತು Indian Police Force ವಿವೇಕ್‌ ಅವರ ಮುಂಬರಲಿರುವ ವೆಬ್‌ ಸೀರಿಸ್‌ಗಳು.

ಇದನ್ನೂ ಓದಿ| Happy Birthday | ಕಿಚ್ಚನ ಹುಟ್ಟುಹಬ್ಬ ಸಂಭ್ರಮ, ಎಲ್ಲೆಲ್ಲೂ ಸೆಲೆಬ್ರೇಷನ್..!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

Kanguva Film: ಸೂರ್ಯ ಮತ್ತು ಬಾಬಿ ಡಿಯೋಲ್ ಎರಡು ಬುಡಕಟ್ಟುಗಳ ನಾಯಕರಾಗಿ ಇರುತ್ತಾರೆ. ಇವರಿಬ್ಬರ ನಡುವಿನ ಕಾಳಗ ಇಲ್ಲಿ ತೋರಿಸಲಾಗಿತ್ತು. ಟೀಸರ್‌ನಲ್ಲಿ ರಕ್ತಪಾತ ಮತ್ತು ಸಾವುಗಳು ಪ್ರಮುಖ ಹೈಲೈಟ್‌. ಬಾಬಿ ಡಿಯೋಲ್​ ಅವರು ‘ಕಂಗುವ’ ಚಿತ್ರದಲ್ಲಿ ಇನ್ನೂ ಕ್ರೂರವಾದ ಅವತಾರ ತಾಳಿದ್ದರು. ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ.

VISTARANEWS.COM


on

Kanguva Film Suriya-Bobby Deol's war scene with 10,000 people
Koo

ಬೆಂಗಳೂರು: ತಮಿಳು ಚಿತ್ರರಂಗದ (Tamil Cinema) ಖ್ಯಾತ ನಟ ಸೂರ್ಯ (Actor Surya) ಅವರ ಬಹು ನಿರೀಕ್ಷಿತ `ಕಂಗುವ’ (Kanguva Film) ಚಿತ್ರದ ಟೀಸರ್ ಔಟ್‌ ಆಗಿತ್ತು. ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಹೊಸ ಅವತಾರ ತಾಳಿದ್ದರು. ಬಾಬಿ ಡಿಯೋಲ್ ಒಳಗೊಂಡಿರುವ ಬೃಹತ್ ಯುದ್ಧದ ದೃಶ್ಯವನ್ನು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿತ್ತು. ವರದಿಯ ಪ್ರಕಾರ ಬರೋಬ್ಬರಿ 10,000 ಜನರನ್ನು ಈ ದೃಶ್ಯದಲ್ಲಿ ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ʻʻಗ್ರೀನ್‌ ಸ್ಟುಡಿಯೋ , ನಿರ್ದೇಶಕ ಶಿವ ಮತ್ತು ಇಡೀ ತಂಡ ಈ ದೃಶ್ಯಕ್ಕೆ ನ್ಯಾಯ ಸಲ್ಲಿಸಿದೆ ಎನ್ನಲಾಗಿದೆ. ಚಿತ್ರದಲ್ಲಿ ಸೂರ್ಯ ಶಿವಕುಮಾರ್, ಬಾಬಿ ಡಿಯೋಲ್ ಮತ್ತು 10,000ಕ್ಕೂ ಹೆಚ್ಚು ಜನರನ್ನು ಒಳಗೊಂಡಿರುವ ದೊಡ್ಡ ಯುದ್ಧದ ದೃಶ್ಯವನ್ನು ನಿರ್ದೇಶಕರು ಚೆನ್ನಾಗಿ ನಿಭಾಯಿಸಿದ್ದಾರೆʼʼಎನ್ನಲಾಗಿದೆ. ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರಗಳಲ್ಲಿ ಒಂದು ಎಂದು ಊಹಿಸಲಾಗಿರುವ ಕಂಗುವವನ್ನು (Kanguva Budget) ಸುಮಾರು 300 ಕೋಟಿಗೂ ಹೆಚ್ಚು ಬಜೆಟ್‌ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರವೂ ಚಿತ್ರರಂಗದಲ್ಲಿ ಬಹು ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.

ಇದನ್ನೂ ಓದಿ: Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

ಟೀಸರ್‌ನಲ್ಲಿ ಏನಿತ್ತು?

ಸೂರ್ಯ ಮತ್ತು ಬಾಬಿ ಡಿಯೋಲ್ ಎರಡು ಬುಡಕಟ್ಟುಗಳ ನಾಯಕರಾಗಿ ಇರುತ್ತಾರೆ. ಇವರಿಬ್ಬರ ನಡುವಿನ ಕಾಳಗ ಇಲ್ಲಿ ತೋರಿಸಲಾಗಿತ್ತು. ಟೀಸರ್‌ನಲ್ಲಿ ರಕ್ತಪಾತ ಮತ್ತು ಸಾವುಗಳು ಪ್ರಮುಖ ಹೈಲೈಟ್‌. ಬಾಬಿ ಡಿಯೋಲ್​ ಅವರು ‘ಕಂಗುವ’ ಚಿತ್ರದಲ್ಲಿ ಇನ್ನೂ ಕ್ರೂರವಾದ ಅವತಾರ ತಾಳಿದ್ದರು.

ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಸ್ಟುಡಿಯೋ ಗ್ರೀನ್ ನಿರ್ಮಾಣ ಸಂಸ್ಥೆಯು ಸೂರ್ಯ ಮತ್ತು ದಿಶಾ ಪಟಾನಿ ಅಭಿನಯದ ‘ಕಂಗುವ’ ಚಿತ್ರವನ್ನು ನಿರ್ಮಿಸುತ್ತಿದೆ.

38 ಭಾಷೆಗಳಲ್ಲಿ ಕಂಗುವ ಬಿಡುಗಡೆಗೆ ಪ್ಲ್ಯಾನ್

ಖ್ಯಾತ ಕಾಲಿವುಡ್ ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದರು. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದರು.

ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Pushpa 2 : ಪುಷ್ಪಾ 2 ಬಿಡುಗಡೆ ದಿನ ಮುಂದೂಡಿಕೆಯಾಗುತ್ತದೆಯೇ? ಚಿತ್ರ ತಂಡದ ಸ್ಪಷ್ಟನೆಯೇನು?

Pushpa 2: ಪುಷ್ಪಾ 2 ವಿಳಂಬವಾಗುತ್ತಿಲ್ಲ ಮತ್ತು ನಿಗದಿಯಂತೆ ಅಂದರೆ ಆಗಸ್ಟ್ 15, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕರು ಈಗ ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 15ರಂದು ‘ಪುಷ್ಪ 2’ ರಿಲೀಸ್ ಆಗಲಿದೆ. ಇದು ನಮ್ಮ ಬದ್ಧತೆ ಎಂದು ಸಿನಿಮಾ ತಂಡ ಹತ್ತಿರದ ಮೂಲಗಳು ತಿಳಿಸಿವೆ. ಅಲ್ಲು ಅರ್ಜುನ್ ಈ ತಿಂಗಳು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದು, ಜೂನ್ ವೇಳೆಗೆ ಉಳಿದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಆದ್ದರಿಂದ ಚಿತ್ರ ವಿಳಂಬವಾಗುವ ಸಾಧ್ಯತೆ ಇಲ್ಲ ಎಂದು ಮತ್ತೊಬ್ಬ ಆಂತರಿಕ ಮೂಲಗಳು ತಿಳಿಸಿವೆ.

VISTARANEWS.COM


on

Pushpa 2
Koo

ಬೆಂಗಳೂರು: ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ನಡುವೆ ಪುಷ್ಪಾ 2 ಮುಂದೂಡಲ್ಪಡಬಹುದು (Pushpa 2) ಎಂಬ ವದಂತಿಗಳ ಅವರನ್ನು ಬೇಸರಕ್ಕೆ ತಳ್ಳಿತ್ತು. ಆದರೆ ತಯಾರಕರು ಅಂತಿಮವಾಗಿ ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡೇಟ್ ಸಂಬಂಧಿತ ಸಮಸ್ಯೆಗಳಿಂದಾಗಿ ಎಡಿಟರ್​ ಆಂಟನಿ ರೂಬೆನ್ ಪುಷ್ಪಾ 2 ಬಳಗ ತೊರೆದಿದ್ದಾರೆ ಎಂಬ ಸುದ್ದಿಹರಡಿತ್ತು ಎಂದು ಪೀಪಿಂಗ್ ಮೂನ್ ಇತ್ತೀಚೆಗೆ ವರದಿ ಮಾಡಿದೆ. ಹೀಗಾಗಿ ಚಿತ್ರದ ಸಂಕಲನ ಕಾರ್ಯವನ್ನು ಪೂರ್ಣಗೊಳಿಸಲು ನವೀನ್ ನೂಲಿ ಅವರನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ಈ ಕಾರಣದಿಂದಾಗಿ ಪುಷ್ಪ 2 ಬಿಡುಗಡೆ ವಿಳಂಬಕ್ಕೆ ಕಾರಣವಾಗಬಹುದೇ ಎಂದು ಅನುಮಾನ ಎದ್ದಿದ್ದವು.

ಪುಷ್ಪಾ 2 ವಿಳಂಬವಾಗುತ್ತಿಲ್ಲ ಮತ್ತು ನಿಗದಿಯಂತೆ ಅಂದರೆ ಆಗಸ್ಟ್ 15, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕರು ಈಗ ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 15ರಂದು ‘ಪುಷ್ಪ 2’ ರಿಲೀಸ್ ಆಗಲಿದೆ. ಇದು ನಮ್ಮ ಬದ್ಧತೆ ಎಂದು ಸಿನಿಮಾ ತಂಡ ಹತ್ತಿರದ ಮೂಲಗಳು ತಿಳಿಸಿವೆ. ಅಲ್ಲು ಅರ್ಜುನ್ ಈ ತಿಂಗಳು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದು, ಜೂನ್ ವೇಳೆಗೆ ಉಳಿದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಆದ್ದರಿಂದ ಚಿತ್ರ ವಿಳಂಬವಾಗುವ ಸಾಧ್ಯತೆ ಇಲ್ಲ ಎಂದು ಮತ್ತೊಬ್ಬ ಆಂತರಿಕ ಮೂಲಗಳು ತಿಳಿಸಿವೆ.

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಪುಷ್ಪ 2 ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದರು. ಟೀಸರ್​ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿದ್ದಾರೆ. ಅವರು ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿದ್ದರು. ಅವರು ಗೂಂಡಾಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ.

ರಶ್ಮಿಕಾ ಅವರು ಬಹುನಿರೀಕ್ಷಿತ ಚಿತ್ರದ ಬಗ್ಗೆ ಮಾತನಾಡುವುದಾದರೆ. ಇದು ಎಂದಿಗಿಂತಲೂ ಭರವಸೆಯ ಸಿನಿಮಾವಾಗಿದೆ. “ಪುಷ್ಪಾ 2 ತುಂಬಾ ದೊಡ್ಡ ಸಿನಿಮಾವಾಗಲಿದೆ. ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಮೊದಲ ಚಿತ್ರದಲ್ಲಿ ನಾವು ಸ್ವಲ್ಪ ವಿಶೇಷವಾದದನ್ನು ನೀಡಿದ್ದೇವೆ. ಭಾಗ 2 ರಲ್ಲಿ, ನಮಗೆ ಜವಾಬ್ದಾರಿ ಹೆಚ್ಚಿದೆ ಎಂದೂ ನಮಗೆ ತಿಳಿದಿದೆ ಏಕೆಂದರೆ ಜನರು ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಹೊಂದಿದ್ದಾರೆ. ನಾವು ಅದನ್ನು ತಲುಪಿಸಲು ನಿರಂತರವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಪಿಂಕ್​ವಿಲ್ಲಾಗೆ ತಿಳಿಸಿದ್ದಾರೆ.

ಇದನ್ನೂ ಓದಿ: Namratha Gowda: ರೆಡ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ನಟಿ ನಮ್ರತಾ ಗೌಡ ಹಾಲಿಡೇ ಲುಕ್‌!

ಪುಷ್ಪಾ 2 ಅನ್ನು ಚಿತ್ರಮಂದಿರಗಳಲ್ಲಿ ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಚಿತ್ರವು ಖಂಡಿತವಾಗಿಯೂ ಬಾಕ್ಸ್ ಆಫೀಸ್ ಆಳುತ್ತಿದೆ. ಪುಷ್ಪಾ 2 ಚಿತ್ರದ ಥಿಯೇಟರ್ ಹಕ್ಕುಗಳನ್ನು ಅನಿಲ್ ತಡಾನಿ 200 ಕೋಟಿ ರೂ.ಗೆ ಮುಂಗಡವಾಗಿ ಖರೀದಿಸಿದ್ದಾರೆ ಎಂದು ಪಿಂಕ್​ವಿಲ್ಲಾ ಇತ್ತೀಚೆಗೆ ವರದಿ ಮಾಡಿತ್ತು. ಇದಕ್ಕೂ ಮೊದಲು, ಸಿಯಾಸತ್​​ನ ಮತ್ತೊಂದು ವರದಿಯು ಎಲ್ಲಾ ಭಾಷೆಗಳ ಹಕ್ಕುಗಳ ಒಪ್ಪಂದಕ್ಕಾಗಿ ತಯಾರಕರು 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಬೇಡಿಕೆ ಬಂದಿದೆ. ಈ ಚಿತ್ರವು ಎಸ್.ಎಸ್.ರಾಜಮೌಳಿ ಅವರ ಆರ್​ಆರ್​ಆರ್​ ಮೀರಿಸುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Continue Reading

South Cinema

Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

Thug Life Movie: ಈಗಾಗಲೇ ನವದೆಹಲಿಯಲ್ಲಿ ಕಮಲ್ ಹಾಸನ್ ಜತೆಗೆ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಸಿಂಬು. ದೆಹಲಿಯಲ್ಲಿ ನಡೆಯುತ್ತಿರುವ ಈ ಶೆಡ್ಯೂಲ್ ಮೇ 12 ರವರೆಗೆ ನಡೆಯಲಿದೆ. ಪ್ರೋಮೊದಲ್ಲಿ ಸಿಂಬು ಅತ್ಯಂತ ವೇಗದಲ್ಲಿ ಕಾರು ಓಡಿಸುವುದನ್ನು ನೋಡಬಹುದು. ದುಲ್ಕರ್ ಸಲ್ಮಾನ್ ಈ ಪಾತ್ರದಲ್ಲಿ ನಟಿಸಬೇಕಿತ್ತು ಎನ್ನಲಾಗಿತ್ತು. ಅವರ ಬದಲಿಗೆ ಸಿಂಬು ಬಂದಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Thug Life Simbu is the new gun wielding gangster in town
Koo

ಬೆಂಗಳೂರು:  ಕಾಲಿವುಡ್‌ ನಟ ಸಿಂಬು (Simbu Birthday), ಅವರ ನಿಜವಾದ ಹೆಸರು ಸಿಲಂಬರಸನ್ ಸಿಂಗು ರಾಜೇಂದರ್ (Silambarasan Thesingu Rajendar). ತಮಿಳು ಚಿತ್ರರಂಗದಲ್ಲಿ ನಟನಾಗಿ, ಕಥೆಗಾರ, ಸಂಗೀತ ನಿರ್ದೇಶಕ, ಬರಹಗಾರ, ಗಾಯಕ, ನೃತ್ಯಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಕಮಲ್ ಹಾಸನ್ (Thug Life Movie) ಮತ್ತು ಮಣಿರತ್ನಂ ಅವರು 1987ರ ʻನಾಯಗನ್ʼ ಚಿತ್ರದ ಬಳಿಕ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ʼಥಗ್ ಲೈಫ್ʼ ಎಂಬ ಶೀರ್ಷಿಕೆ ಇಡಲಾಗಿದೆ. ಇದೀಗ ಸಿಂಬು ಈ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಇದೀಗ ತಂಡ ಹೊಸ ಪ್ರೋಮೊ ಹಂಚಿಕೊಂಡಿದ್ದು ಸಿಂಬು ರಗಡ್‌ ಆಗಿ ಕಂಡಿದ್ದಾರೆ.

ಈಗಾಗಲೇ ನವದೆಹಲಿಯಲ್ಲಿ ಕಮಲ್ ಹಾಸನ್ ಜತೆಗೆ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಸಿಂಬು. ದೆಹಲಿಯಲ್ಲಿ ನಡೆಯುತ್ತಿರುವ ಈ ಶೆಡ್ಯೂಲ್ ಮೇ 12 ರವರೆಗೆ ನಡೆಯಲಿದೆ. ಪ್ರೋಮೊದಲ್ಲಿ ಸಿಂಬು ಅತ್ಯಂತ ವೇಗದಲ್ಲಿ ಕಾರು ಓಡಿಸುವುದನ್ನು ನೋಡಬಹುದು. ದುಲ್ಕರ್ ಸಲ್ಮಾನ್ ಈ ಪಾತ್ರದಲ್ಲಿ ನಟಿಸಬೇಕಿತ್ತು ಎನ್ನಲಾಗಿತ್ತು. ಅವರ ಬದಲಿಗೆ ಸಿಂಬು ಬಂದಿದ್ದಾರೆ ಎಂದು ವರದಿಯಾಗಿದೆ.

ತಮಿಳಿನ ಹಿರಿಯ ನಟ ಕಾರ್ತಿಕ್ ಅವರ ಪುತ್ರ ಗೌತಮ್ ಕಾರ್ತಿಕ್ ಕೂಡ ಕಮಲ್‌ ಸಿನಿಮಾ ಪಾತ್ರವರ್ಗಕ್ಕೆ ಸೇರುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ನಿರ್ವಹಿಸುತ್ತಿರುವ ಪಾತ್ರ ಬಹು ಮುಖ್ಯವಾದದ್ದು ಎನ್ನಲಾಗಿದೆ. ಪಕ್ಕಾ ಆ್ಯಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮ್ಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Simbu Birthday: ನಟ ಸಿಂಬುಗೆ ಜನುಮದಿನದ ಸಂಭ್ರಮ; ಫಸ್ಟ್‌ ಲುಕ್‌ ಹಂಚಿಕೊಂಡ ಕಮಲ್‌ ಹಾಸನ್‌!

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎ.ಆರ್.ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ. ಚಂದ್ರನ್ ಛಾಯಾಗ್ರಹಣ ʼಥಗ್ ಲೈಫ್ʼ ಸಿನಿಮಾದಲ್ಲಿದೆ. 1987ರಲ್ಲಿ ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ‘ನಾಯಕನ್’ ಸಿನಿಮಾ ರಿಲೀಸ್ ಆಗಿತ್ತು. ಇದಾದ ಬಳಿಕ ಸುಮಾರು 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

Continue Reading

ಕಾಲಿವುಡ್

Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

Jyotika Trolled: ಸೂರ್ಯ ಪತ್ನಿ ಜ್ಯೋತಿಕಾ ಏಕೆ ಮತ ಹಾಕಲಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಶ್ರೀಕಾಂತ್ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಟಿ ಏಕೆ ಮತದಾನ ಮಾಡಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ʻಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆʼ ಎಂದು ನಟಿ ಉತ್ತರ ನೀಡಿದ್ದಾರೆ. ಹೀಗಾಗಿ ನಟಿ ಜ್ಯೋತಿಕಾ ಟ್ರೋಲ್ ಆಗಿದ್ದಾರೆ. ನಟಿ ಜ್ಯೋತಿಕಾ (Jyotika Trolled) ಅವರು ಹಿಂದಿಯ ‘ಶ್ರೀಕಾಂತ್’ ಹೆಸರಿನ ( Srikanth with Rajkummar Rao) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

VISTARANEWS.COM


on

Jyotika Trolled For Claiming Online Private Voting
Koo

ಬೆಂಗಳೂರು: ನಟಿ ಜ್ಯೋತಿಕಾ (Jyotika Trolled) ಅವರು ಹಿಂದಿಯ ‘ಶ್ರೀಕಾಂತ್’ ಹೆಸರಿನ ( Srikanth with Rajkummar Rao) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಜ್ಯೋತಿಕಾ ಟ್ರೋಲ್ ಆಗಿದ್ದಾರೆ. ಕಳೆದ ತಿಂಗಳು, ನಟ ಸೂರ್ಯ ಚೆನ್ನೈನ ಮತಗಟ್ಟೆಯಲ್ಲಿ ಮತದಾನ ಮಾಡಲು ಆಗಮಿಸಿದ್ದರು. ಆದರೆ, ಅವರ ಪತ್ನಿ ಜ್ಯೋತಿಕಾ ಏಕೆ ಮತ ಹಾಕಲಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಶ್ರೀಕಾಂತ್ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಟಿ ಏಕೆ ಮತದಾನ ಮಾಡಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ʻಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆʼ ಎಂದು ನಟಿ ಉತ್ತರ ನೀಡಿದ್ದಾರೆ. ಹೀಗಾಗಿ ನಟಿ ಜ್ಯೋತಿಕಾ ಟ್ರೋಲ್ ಆಗಿದ್ದಾರೆ.

ಈವೆಂಟ್‌ನ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವರದಿಗಾರರೊಬ್ಬರು ಜ್ಯೋತಿಕಾ ಅವರಿಗೆ ಏಕೆ ವೋಟ್‌ ಮಾಡಲು ಬರಲಿಲ್ಲ? ಎಂದು ಕೇಳಿದ್ದರು. ಆಗ ನಟಿ ʻʻನಾನು ಪ್ರತಿ ವರ್ಷ ವೋಟ್‌ ಮಾಡುತ್ತೇನೆʼʼಎಂದಿದ್ದಾರೆ. ನಂತರ ಮತದಾನ ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು.ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ.

ಯಾಕೆ ಮತ ಹಾಕಲಿಲ್ಲ ಎಂಬುದನ್ನು ವಿವರಿಸಿದ ಜ್ಯೋತಿಕಾ ʻʻಕೆಲವೊಮ್ಮೆ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಬೇರೆ ರಾಜ್ಯಕ್ಕೆ ಹೋಗಿರಬಹುದು. ನಾವು ಅನಾರೋಗ್ಯಕ್ಕೆ ಒಳಗಾಗಬಹುದು, ಇದು ಖಾಸಗಿ ವಿಷಯವಾಗಿದೆʼʼಎಂದಿದ್ದಾರೆ ನಟಿ.

ಇದನ್ನೂ ಓದಿ: Jyotika and Suriya: ಸೂರ್ಯ ಜತೆ ಜಿಮ್‌ನಲ್ಲಿ ನಟಿ ಜ್ಯೋತಿಕಾ ಹೆವಿ ವರ್ಕೌಟ್!

ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟಿಯನ್ನು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ. ಒಬ್ಬರು ʻʻನಟಿಯ ಆರೋಗ್ಯ ಹದೆಗಟ್ಟಿದ್ದರಿಂದ ವೋಟ್‌ ಹಾಕದೇ ಇರಬಹುದುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ʻʻಇದೇನು ಬಿಗ್ ಬಾಸ್‌ನಲ್ಲಿ ಮತ ಚಲಾಯಿಸಿದಂತೆಯಾ?ʼʼಎಂದು ಕಮೆಂಟ್‌ ಮಾಡಿದ್ದಾರೆ. `ಜ್ಯೋತಿಕಾ ರೀತಿ ಆನ್​ಲೈನ್​ ವೋಟ್ ಮಾಡೋದು ಹೇಗೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.‘ಸಮಾಜ ಸುಧಾರಕಿ ಜ್ಯೋತಿಕಾ, ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷಕ್ಕೆ ಅಲ್ಲ, 5 ವರ್ಷಕ್ಕೊಮ್ಮೆ ಎಂದು. ನಾನು ಭಾರತದಲ್ಲಿ ಈವರೆಗೆ ಆನ್‌ಲೈನ್ ಮತದಾನದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ ಅವರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಜ್ಯೋತಿಕಾ ಕೊನೆಯದಾಗಿ ʻಶೈತಾನ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಈ ಚಿತ್ರದಲ್ಲಿ ಆರ್ ಮಾಧವನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಹಿಂದಿಯ ‘ಶ್ರೀಕಾಂತ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತುಶಾರ್ ಹಿರಾನಂದನಿ ಇದನ್ನು ನಿರ್ದೇಶನ ಮಾಡಿದ್ದು, ರಾಜ್​ಕುಮಾರ್ ರಾವ್, ಅಲಾಯ ಎಫ್, ಶರದ್ ಕೇಲ್ಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ.

Continue Reading
Advertisement
Virat Kohli
ಕ್ರೀಡೆ5 mins ago

Virat Kohli: ರೋಹಿತ್​ ಶರ್ಮ ರನ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ

Covid 19
ವಿದೇಶ6 mins ago

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Inspirational Story
ಶಿಕ್ಷಣ9 mins ago

Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

MLC Election Withdrawal of nomination paper says Suresh Sajjan
ಕರ್ನಾಟಕ11 mins ago

MLC Election: ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ

SSLC 2024 Exam 2
ಪ್ರಮುಖ ಸುದ್ದಿ21 mins ago

SSLC 2024 Exam 2: ಜೂ. 14ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ-2; ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

Two killed after being hit by the wheel of a chariot while performing at Veerabhadreswara fair
ಕರ್ನಾಟಕ29 mins ago

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Voter Turnout
ದೇಶ44 mins ago

Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Uttara Kannada News Take precautionary measures to prevent the spread of infectious diseases in the district says DC Gangubai manakar
ಉತ್ತರ ಕನ್ನಡ47 mins ago

Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

BJP State President B Y Vijayendra latest statement in bengaluru
ಕರ್ನಾಟಕ49 mins ago

BY Vijayendra: ವಿಧಾನಪರಿಷತ್ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ; ಬಿ.ವೈ.ವಿಜಯೇಂದ್ರ

Shed houses electric poles damaged due to heavy rain and wind in Karatagi
ಕೊಪ್ಪಳ52 mins ago

Heavy Rain: ಕಾರಟಗಿಯಲ್ಲಿ ಭಾರೀ ಮಳೆ ಗಾಳಿಗೆ ಅಪಾರ ಹಾನಿ; ಸಚಿವ ಶಿವರಾಜ ತಂಗಡಗಿ ಪರಿಶೀಲನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ24 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌