Video | ನಾಯಿ ಕಚ್ಚಿ ಬಾಲಕ ಒದ್ದಾಡುತ್ತಿದ್ದರೂ ಸುಮ್ಮನೇ ನಿಂತಿದ್ದ ಮಹಿಳೆ; ಆಕೆಯದ್ದೇ ಶ್ವಾನ ಅದು ! - Vistara News

ವೈರಲ್ ನ್ಯೂಸ್

Video | ನಾಯಿ ಕಚ್ಚಿ ಬಾಲಕ ಒದ್ದಾಡುತ್ತಿದ್ದರೂ ಸುಮ್ಮನೇ ನಿಂತಿದ್ದ ಮಹಿಳೆ; ಆಕೆಯದ್ದೇ ಶ್ವಾನ ಅದು !

ಲಿಫ್ಟ್​ನಲ್ಲಿ ಬಾಲಕನಿಗೆ ನಾಯಿ ಕಚ್ಚಿದೆ. ಅವನು ಕಾಲು ನೋವಿನಿಂದ ಒದ್ದಾಡುತ್ತಿದ್ದರೂ ಆ ಶ್ವಾನದ ಯಜಮಾನಿ ಮಾತ್ರ ಸುಮ್ಮನೆ ನಿಂತೇ ಇದ್ದಳು.

VISTARANEWS.COM


on

Dog Bite
ಲಿಫ್ಟ್​​ನಲ್ಲಿ ನಡೆದ ಘಟನೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಘಾಜಿಯಾಬಾದ್​: ಶ್ವಾನವನ್ನು ಸಾಕಿಕೊಂಡವರು ಅನೇಕರು ಅದನ್ನು ಹೋದಲ್ಲೆಲ್ಲ ಕರೆದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ. ನಗರಗಳಲ್ಲಂತೂ ನಾಯಿ ಬೆಲ್ಟ್​ ಹಿಡಿದು ಓಡಾಡುವವರು ಹಲವರು. ಅವರು ವಾಕಿಂಗ್ ಹೋಗಲಿ, ಮಾರ್ಕೆಟ್​ ಹೋಗಲಿ ಅಥವಾ ಇನ್ನೆಲ್ಲೇ ಹೋಗಲಿ, ಜತೆಗೆ ತಮ್ಮ ನಾಯಿಯನ್ನೂ ಕರೆದುಕೊಂಡು ಹೋಗುತ್ತಾರೆ. ಹೀಗೆ ಮಹಿಳೆಯೊಬ್ಬರೂ ತಾನು ಸಾಕಿದ ಶ್ವಾನವನ್ನು ಕರೆದುಕೊಂಡು ಎಲ್ಲಿಗೋ ಹೋಗಿದ್ದರು. ವಾಪಸ್​ ಬರುವಾಗ ಲಿಫ್ಟ್​​ನಲ್ಲಿ ಆ ನಾಯಿ ಬಾಲಕನೊಬ್ಬನಿಗೆ ಕಚ್ಚಿದೆ. ಆದರೆ ಆ ಮಹಿಳೆ ಬಾಲಕನನ್ನು ತಿರುಗಿಯೂ ನೋಡದೆ ಹೋಗಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್​ ವೈರಲ್ ಆಗುತ್ತಿದೆ. ಇಲ್ಲಿನ ರಾಜ್​ನಗರ ಎಕ್ಸ್​ಟೆನ್ಷನ್​​ನ ಚಾರ್ಮ್ಸ್ ಕ್ಯಾಸಲ್​​ ಫ್ಲ್ಯಾಟ್​​ನ ಲಿಫ್ಟ್​​ನಲ್ಲಿ ನಡೆದ ಘಟನೆ. ಬಾಲಕನಿಗೆ ನಾಯಿಕಚ್ಚಿದ ವಿಡಿಯೋ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಿಫ್ಟ್​ನಲ್ಲಿ ಪುಟ್ಟ ಬಾಲಕನೊಬ್ಬ ಶಾಲಾ ಬ್ಯಾಗ್​ ಹಾಕಿಕೊಂಡು ಮೊದಲೇ ನಿಂತಿದ್ದಾನೆ. ಆಗ ಅಲ್ಲೊಬ್ಬಳು ಮಹಿಳೆ, ತನ್ನ ಸಾಕು ನಾಯಿಯನ್ನು ಕರೆದುಕೊಂಡು ಬರುತ್ತಾಳೆ. ಒಂದು ಮೂಲೆಯಲ್ಲಿ ನಿಂತಿದ್ದ ಬಾಲಕ ಸ್ವಲ್ಪ ಮುಂದೆ ಹೋಗಲು ಪ್ರಯತ್ನಿಸಿದಾಗ ಆ ನಾಯಿ ಹುಡುಗನ ಬಲತೊಡೆಗೆ ಕಚ್ಚಿದೆ. ಆ ಹುಡುಗನಿಗೆ ತುಂಬ ನೋವಾಗಿದೆ. ಬಲಗಾಲನ್ನು ಮೇಲೆತ್ತಿ ಕುಂಟುತ್ತಾನೆ, ಆ ಭಾಗವನ್ನು ಉಜ್ಜಿಕೊಳ್ಳುತ್ತಾನೆ. ಅಷ್ಟೆಲ್ಲ ಆದರೂ ಮಹಿಳೆ ಮಾತ್ರ ಅದನ್ನು ನೋಡಿಯೂ ನೋಡಿಲ್ಲದಂತೆ ನಿಂತಿದ್ದಾಳೆ. ಹುಡುನ ಬಳಿ ಏನಾಯಿತೆಂದೂ ಅವಳು ಕೇಳಲಿಲ್ಲ. ಅವಳ ಫ್ಲೋರ್​ ಬಂದ ತಕ್ಷಣ ಲಿಫ್ಟ್​ನಿಂದ ಆಚೆಗೆ ಬರುತ್ತಾಳೆ. Akassh Ashok Gupta ಎಂಬುವರು ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಬಾಲಕನ ಪಾಲಕರು ಮಹಿಳೆ ಮತ್ತು ನಾಯಿಯ ವಿರುದ್ಧ ಘಾಜಿಯಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ನೆಟ್ಟಿಗರು ಮಹಿಳೆಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ‘ಆ ಮಗು ಅಷ್ಟು ನೋವಿನಲ್ಲಿದ್ದರೂ ಮಹಿಳೆಗೆ ಸ್ವಲ್ಪವೂ ಏನೂ ಅನ್ನಿಸಲಿಲ್ಲವಾ? ನಾಚಿಕೆಯಾಗಬೇಕು ಆಕೆಗೆ’ ಎಂದು ಒಬ್ಬರು ಹೇಳಿದ್ದರೆ, ‘ಇತ್ತೀಚೆಗೆ ಮನುಷ್ಯರು ಕರುಣೆ, ದಯೆ, ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿರುವುದು ಖೇದಕರ’ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಈಕೆಯೊಬ್ಬ ನಾಚಿಕೆಯಿಲ್ಲದ ಮಹಿಳೆ’ ಎಂದೂ ಜರಿದಿದ್ದಾರೆ. ಬೇರೆಯವರ ಮಕ್ಕಳ ಬಗ್ಗೆ ಇಷ್ಟು ನಿರ್ಲಕ್ಷ್ಯವಾ ಎಂದೂ ಹಲವರು ಕೇಳಿದ್ದಾರೆ.

ಇದನ್ನೂ ಓದಿ: Viral news | ಫ್ರೀಜರ್‌ ತುಂಡಿನಲ್ಲಿ ತೇಲುತ್ತಾ 11 ದಿನ ಸಮುದ್ರದಲ್ಲಿ ಬದುಕುಳಿದ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Viral Video: ಐಸ್ ಕ್ರೀಮ್‌ನಲ್ಲಿ ಚಿನ್ನದ ಉಂಗುರ ಅಡಗಿಸಿಕೊಟ್ಟ ಪ್ರಿಯತಮ! ಮುಂದೇನಾಯ್ತು?

ದಕ್ಷಿಣ ಕೊರಿಯಾದ ಮಾಲ್‌ನಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಮಾಡಿರುವ ವಿಡಿಯೋದಲ್ಲಿ (Viral Video) ಗೆಳತಿಗೆ ಗೊತ್ತಾಗದಂತೆ ಯುವಕ ಐಸ್ ಕ್ರೀಂ ಕೋನ್ ನಲ್ಲಿ ಚಿನ್ನದ ಉಂಗುರ ಅಡಗಿಸಿ ಇಟ್ಟು ಅದನ್ನು ಗೆಳತಿಗೆ ನೀಡಿದ್ದಾನೆ. ಆಕೆ ಪೂರ್ತಿ ಐಸ್ ಕ್ರೀಮ್ ತಿಂದಿದ್ದಾಳೆ. ಇಲ್ಲಿದೆ ಕುತೂಹಲಕಾರಿ ವಿಡಿಯೊ.

VISTARANEWS.COM


on

By

Viral Video
Koo

ಮದುವೆಯು (wedding) ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ನಿರ್ಧಾರವಾಗಿರುತ್ತದೆ. ಪ್ರತಿಯೊಬ್ಬರೂ ಇದನ್ನು ವಿಶೇಷವಾಗಿ ಹಂಚಿಕೊಳ್ಳಲು ಬಯಸುತ್ತಾರೆ. ಇಲ್ಲೊಬ್ಬ ತಾನು ಮದುವೆಯಾಗ ಬಯಸುವ ಹುಡುಗಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಲು ಹೋಗಿ ತಾನೇ ಆಶ್ಚರ್ಯಚಕಿತನಾದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ.

ದಕ್ಷಿಣ ಕೊರಿಯಾದ (South Korea) ಯುವಕನೊಬ್ಬ ಐಸ್ ಕ್ರೀಂನಲ್ಲಿ ಉಂಗುರವನ್ನು ಬಚ್ಚಿಟ್ಟು ತನ್ನ ಗೆಳತಿಯನ್ನು ಅಚ್ಚರಿಗೊಳಿಸಲು ಬಯಸಿದ ಘಟನೆಯ ವಿಡಿಯೋ ಇದಾಗಿದೆ. ದಕ್ಷಿಣ ಕೊರಿಯಾದ ಮಾಲ್‌ ನಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಈ ವಿಡಿಯೋ ಮಾಡಿದ್ದಾನೆ. ಗೆಳತಿಗೆ ಗೊತ್ತಾಗದಂತೆ ಯುವಕ ಐಸ್ ಕ್ರೀಂ ಕೋನ್ ನಲ್ಲಿ ಚಿನ್ನದ ಉಂಗುರ ಅಡಗಿಸಿ ಇಟ್ಟು ಅದನ್ನು ಗೆಳತಿಗೆ ನೀಡಿದ್ದಾನೆ. ಅನಂತರ ವಿಡಿಯೋದಲ್ಲಿ ಹುಡುಗಿ ಐಸ್ ಕ್ರೀಮ್ ತಿನ್ನುತ್ತಾಳೆ. ಆಕೆಗೆ ಐಸ್ ಕ್ರೀಮ್ ತಿನ್ನುವಾಗ ಆಕೆಗೆ ಉಂಗುರ ಸಿಗುತ್ತದೆ ಎಂದು ಆತ ಭಾವಿಸುತ್ತಾನೆ. ಆದರೆ ಹುಡುಗಿ ಸಂಪೂರ್ಣ ಐಸ್ ಕ್ರೀಂ ಅನ್ನು ತಿನ್ನುತ್ತಾಳೆ. ಆದರೆ ಐಸ್ ಕ್ರೀಮ್ ನಲ್ಲಿ ಉಂಗುರ ಆಕೆಗೆ ಸಿಗದೇ ಇದ್ದಾಗ ಹುಡುಗ ಆಶ್ಚರ್ಯ ಚಕಿತನಾಗುತ್ತಾನೆ.


ಹುಡುಗಿ ಐಸ್ ಕ್ರೀಮ್ ತಿನ್ನುವ ಸಂತೋಷವನ್ನು ಅತ್ಯಂತ ಮುಗ್ಧತೆಯಿಂದ ಆಚರಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಇನ್ ಸ್ಟಾ ಗ್ರಾಮ್ ಪುಟದಲ್ಲಿ k_kangs_ಹೆಸರಿನಲ್ಲಿ ಈ ವಿಡಿಯೋ ಅನ್ನು ಹಂಚಿಕೊಳ್ಳಲಾಗಿದೆ.
ಸುಮಾರು 13 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 76,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಜನರು ಈ ವಿಡಿಯೋವನ್ನು ಬಹಳಷ್ಟು ಇಷ್ಟಪಡುತ್ತಿದ್ದರೂ ಈ ಕ್ಲಿಪ್ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಷ್ಟಕ್ಕೂ ಆ ಉಂಗುರವನ್ನೇ ನುಂಗಿದ್ದೇ ಹುಡುಗಿಗೆ ಹೇಗೆ ತಿಳಿಯಲಿಲ್ಲ? ಈ ವಿಡಿಯೋ ನಕಲಿಯೋ ಅಲ್ಲವೋ ಎಂಬ ಪ್ರಶ್ನೆಯನ್ನು ಹಲವಾರು ಮಂದಿ ಕೇಳಿದ್ದಾರೆ.

PS4 ಅನ್ನು ಒಡೆದು ಹಾಕಿದಳು

ತನ್ನ ಸಂಗಾತಿಯನ್ನು ಅಚ್ಚರಿಗೊಳಿಸಲು ಗೆಳತಿಯೊಬ್ಬಳು ಮಾಡಿದ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಇದು ಇಲ್ಲಿಯವರೆಗೆ ನೋಡಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಗೆಳತಿ ತನ್ನ ಗೆಳೆಯನ ಪಿಎಸ್ 4 ಅನ್ನು ಒಡೆದು ಹಾಕುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ, ಅನಂತರ ಆಕೆ ಅವನನ್ನು ಆಶ್ಚರ್ಯಗೊಳಿಸುತ್ತಾಳೆ. ಕ್ಲಿಪ್‌ನಲ್ಲಿ, ಹುಡುಗಿ ತನ್ನ ಗೆಳೆಯನ ಪ್ಲೇಸ್ಟೇಷನ್ 4 ಅನ್ನು ಕ್ರೂರವಾಗಿ ಒಡೆದು ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ಆಕೆಯ ಅನಿರೀಕ್ಷಿತ ಕೃತ್ಯದಿಂದ ದಿಗ್ಭ್ರಮೆಗೊಂಡಂತೆ ತೋರುವ ಹುಡುಗನು ತನ್ನ ಹಾನಿಗೊಳಗಾದ ಆಟದ ವಸ್ತುಗಳತ್ತ ಕಣ್ಣು ಹಾಯಿಸಿದಾಗ ಮೂಕನಾಗುತ್ತಾನೆ. ಸಿಟ್ಟಿನಲ್ಲಿ ಗೆಳತೀ ಕೋಣೆಯಿಂದ ಹೊರನಡೆದಳು.

ಇದನ್ನೂ ಓದಿ: RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

ಏನಾಯಿತು ಎಂಬುದರ ಅರಿವಿಲ್ಲದ ಹುಡುಗ ಗೆಳತಿ ಹೊಸ ಪಿಎಸ್ 5 ನೊಂದಿಗೆ ಕೋಣೆಗೆ ಹಿಂತಿರುಗಿದಾಗ ಅವನು ಸಂಪೂರ್ಣ ಆಶ್ಚರ್ಯಚಕಿತನಾಗುತ್ತಾನೆ. ತಕ್ಷಣವೇ ತನ್ನ ಗೆಳತಿಯನ್ನು ತಬ್ಬಿಕೊಳ್ಳುತ್ತಾನೆ. ಈ ವಿಡಿಯೋವನ್ನು ಏಪ್ರಿಲ್ 29 ರಂದು ಹಂಚಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ, ಟ್ವಿಟರ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.

Continue Reading

ಕ್ರೀಡೆ

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

RCB FANS BIKE RALLY: ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಮೂರು ಪಂದ್ಯಗಳ ಮುಖಾಮುಖಿಯಲ್ಲೂ ಚೆನ್ನೈ ತಂಡವೇ ಗೆದ್ದಿದೆ.

VISTARANEWS.COM


on

RCB FANS BIKE RALLY
Koo

ಬೆಂಗಳೂರು: ಐಪಿಎಲ್​ನ(IPL 20124) ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್(Chennai Super Kings)​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಗಳು ಇಂದು ನಡೆಯುವ ಪ್ಲೇ ಆಫ್​ ಪ್ರವೇಶದ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಪಂದ್ಯಕ್ಕೂ ಮುನ್ನವೇ ಆರ್​ಸಿಬಿ(RCB) ಅಭಿಮಾನಿಗಳು(Craze RCB FANS) ಚಿನ್ನಸ್ವಾಮಿ ಮೈದಾನದ ಬಳಿ ಬೃಹತ್​ ಬೈಕ್​ ರ‍್ಯಾಲಿ(RCB FANS BIKE RALLY) ನಡೆಸಿ ತಮ್ಮ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪಂದ್ಯಕ್ಕೆ ಮಳೆಯ ಭೀತಿಯೂ ಇದ್ದು ಸಸ್ಯ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಅಲ್ಲದೆ ರಾತ್ರಿ ಮಳೆಯಾಗುವುದು ಬಹುತೇಕ ಖಚಿತ ಎನ್ನುವಂತಿದೆ. ಒಂದೆಡೆ ಆರ್​ಸಿಬಿ ಅಭಿಮಾನಿಗಳು ಮಳೆ ಬಾರದಂತೆ ಪ್ರಾರ್ಥಿಸುತ್ತಿದ್ದರೆ, ಮತ್ತೊಂದು ಕಡೆ ಚೆನ್ನೈ ಅಭಿಮಾನಿಗಳಿ ಮಳೆ ಬಂದು ಪಂದ್ಯ ರದ್ದಾಗಲಿ ಎಂದು ಪ್ರಾರ್ಥಿಸುತ್ತಿದ್ದರೆ. ಪಂದ್ಯ ರದ್ದಾದರೆ ಚೆನ್ನೈ 4ನೇ ತಂಡವಾಗಿ ಅಧಿಕೃತ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ. ಒಟ್ಟಾರೆ ಮಳೆ ಯಾರಿಗೆ ಅನುವು ಮಾಡಿಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಬ್‌ ಏರ್‌ ಸಿಸ್ಟಮ್‌


ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy)ವಿದೆ. ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ. ಒಂದೊಮ್ಮೆ ಮಳೆಯ ಆರ್ಭಟ ನಿಲ್ಲದೇ ಹೋದಲ್ಲಿ, ಆಗ ಎಷ್ಟೇ ದೊಡ್ಡ ತಂತ್ರಜ್ಞಾನವಿದ್ದರೂ ಇದು ಉಪಯೋಗಕ್ಕೆ ಬಾರದು. ಹೀಗಾಗಿ ಪಂದ್ಯದ ಅಳಿವು ಉಳಿವಿನ ಭವಿಷ್ಯ ಮಳೆಯ ಕೈಯಲ್ಲಿದೆ.

ಇದನ್ನೂ ಓದಿ RCB vs CSK: ವಾಹನ ಸವಾರರೇ ಗಮನಿಸಿ, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ದಾಖಲೆ


ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನು ಆಡಿವೆ. ಈ ಪೈಕಿ ಚೆನ್ನೈ ಐದರಲ್ಲಿ ಗೆದ್ದರೆ, ಆರ್​ಸಿಬಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠ ಎನ್ನಲಡ್ಡಿಯಿಲ್ಲ. ಇಲ್ಲಿ ನಡೆದ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆಲುವು ಸಾಧಿಸಿದೆ. ಈ ಆವೃತ್ತಿಯ 6 ಪಂದ್ಯಗಳ ಪೈಕಿ ಸಮಾನಾಗಿ 3 ಬಾರಿ ಚೇಸಿಂಗ್​ ಮತ್ತು ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳು ಜಯಿಸಿದೆ.

ಇತ್ತಂಡಗಳ ಒಟ್ಟು ಐಪಿಎಲ್​ ಮುಖಾಮುಖಿ


ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಮೂರು ಪಂದ್ಯಗಳ ಮುಖಾಮುಖಿಯಲ್ಲೂ ಚೆನ್ನೈ ತಂಡವೇ ಗೆದ್ದಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿಯೂ ಚೆನ್ನೈ ಗೆಲುವಿನ ಫೇವರಿಟ್​ ಆಗಿದೆ. ಈ ಬಾರಿಯ ಉದ್ಘಾಟನ ಪಂದ್ಯದಲ್ಲಿಯೂ ಚೆನ್ನೈ ಆರ್​ಸಿಬಿಗೆ ಸೋಲುಣಿಸಿತ್ತು.

Continue Reading

ವೈರಲ್ ನ್ಯೂಸ್

Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

Lok Sabha Election 2024: ಬಿಹಾರದ ಗೋಪಾಲ್‌ಗಂಜ್‌ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಸತ್ಯೇಂದ್ರ ಬೈಥಾ ಚುನಾವಣಾ ಪ್ರಚಾರಕ್ಕೆ ಕತ್ತೆ ಮೇಲೆ ತೆರಳುವ ಮೂಲಕ ಗಮನ ಸೆಳೆದಿದ್ದಾರೆ. ನಾಮಪತ್ರ ಸಲ್ಲಿಕೆಗೂ ಕತ್ತೆ ಮೇಲೆಯೇ ತೆರಳಿದ್ದರು. ಸತ್ಯೇಂದ್ರ ಬೈಥಾ ಆಗಮಿಸುತ್ತಿದ್ದಂತೆ ಅನೇಕರು ಮನೆಯಿಂದ ಹೊರಗೆ ಬಂದು ಅವರ ಜತೆ ಫೋಟೊ ಕ್ಲಿಕ್ಕಿಸುತ್ತಿದ್ದಾರೆ.

VISTARANEWS.COM


on

Lok Sabha Election 2024
Koo

ಪಟನಾ: ಲೋಕಸಭಾ ಚುನಾವಣೆಯ (Lok Sabha Election 2024) 4 ಹಂತಗಳ ಮತದಾನ ಈಗಾಗಲೇ ಪೂರ್ಣಗೊಂಡಿದೆ. ಇನ್ನುಳಿದ 3 ಹಂತಗಳಿಗೆ ಭರದ ಸಿದ್ದತೆ ನಡೆಯುತ್ತಿದೆ. ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ, ಪ್ರಚಾರದ ಭರಾಟೆಯಲ್ಲಿ ನಿರತರಾಗಿದ್ದಾರೆ. ಕೆಲವು ಕ್ಷೇತ್ರಗಳು ಘಟಾನುಘಟಿ ಸ್ಪರ್ಧಿಗಳ ಕಾರಣದಿಂದ ದೇಶದ ಗಮನ ಸೆಳೆದರೆ, ಇನ್ನು ಹಲವೆಡೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿಭಿನ್ನ ಕಸರತ್ತು ನಡೆಸಿ ಸುದ್ದಿಯಾಗುತ್ತಿದ್ದಾರೆ. ಇದೇ ರೀತಿ ಇಲ್ಲಿಯೊಬ್ಬರು ಸ್ಪರ್ಧಿ ತಮ್ಮ ವಿಶಿಷ್ಟ ಪ್ರಚಾರದಿಂದ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕತ್ತೆ ಮೇಲೆ ತೆರಳುವ ಮೂಲಕ ಬಿಹಾರದ ಸ್ವತಂತ್ರ ಅಭ್ಯರ್ಥಿಯೊಬ್ಬರು ಇಡೀ ದೇಶವೇ ತಮ್ಮ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಬಿಹಾರದ ಗೋಪಾಲ್‌ಗಂಜ್‌ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಸತ್ಯೇಂದ್ರ ಬೈಥಾ ಈ ರೀತಿ ಗಮನ ಸೆಳೆದವರು. ಗೋಪಾಲ್‌ಗಂಜ್‌ ಶ್ಯಾಮ್‌ಪುರ ನಿವಾಸಿಯಾದ ಅವರು ಚುನಾವಣಾ ಪ್ರಚಾರ ಮಾತ್ರವಲ್ಲ ನಾಮಪತ್ರ ಸಲ್ಲಿಕೆಗೂ ಕತ್ತೆ ಮೇಲೆಯೇ ತೆರಳಿದ್ದರು. ಸದ್ಯ ಅವರು ನಾಮಪತ್ರ ಸಲ್ಲಿಕೆಗೆ ಕತ್ತೆ ಮೇಲೆ ಮೆರವಣಿಗೆ ಮೂಲಕ ಸಾಗುತ್ತಿರುವ ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸತ್ಯೇಂದ್ರ ಬೈಥಾ ಹೇಳೋದೇನು?

ಹೊಸ ರೀತಿಯ ಪ್ರಚಾರ ಶೈಲಿಯ ಬಗ್ಗೆ ಮಾತನಾಡುವ ಸತ್ಯೇಂದ್ರ ಬೈಥಾ, ʼʼದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಾಗಿದೆ. ಹೀಗಾಗಿ ದುಬಾರಿ ಹಣ ಪಾವತಿಸಿ ನನ್ನಂತಹ ಅದೆಷ್ಟೋ ಜನರಿಗೆ ವಾಹನದಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಕತ್ತೆ ಮೇಲೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ನಿರ್ಧರಿಸಿದ್ದೇನೆ ನಾಮಪತ್ರ ಸಲ್ಲಿಕೆಗೂ ನಾನು ಕತ್ತೆ ಮೇಲೆಯೇ ತೆರಳಿದ್ದೆʼʼ ಎಂದು ಅವರು ವಿವರಿಸಿದ್ದಾರೆ. ಸತ್ಯೇಂದ್ರ ಬೈಥಾ ಆಗಮಿಸುತ್ತಿದ್ದಂತೆ ಅನೇಕರು ಮನೆಯಿಂದ ಹೊರಗೆ ಬಂದು ಅವರ ಜತೆ ಫೋಟೊ ಕ್ಲಿಕ್ಕಿಸುತ್ತಿದ್ದಾರೆ.

ಭರವಸೆ

ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ಜನರಿಗಾಗಿ ಯಾವೆಲ್ಲ ಕೆಲಸಗಳನ್ನು ಮಾಡ ಬಯಸುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ʼʼಜಿಲ್ಲೆಯಲ್ಲಿ ಸಕ್ಕರೆ ಖಾರ್ಖಾನೆ ಮತ್ತು ವಿಶ್ವ ವಿದ್ಯಾನಿಲಯ ತೆರೆಯಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುತ್ತೇನೆ. ಶುಚಿತ್ವಕ್ಕೂ ನಾನು ಒತ್ತು ಕೊಡುತ್ತೇನೆ. ಈ ಹಿಂದೆ ಅನೇಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದ ನಂತರ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ದೆಹಲಿ ಅಥವಾ ಪಾಟನಾದಲ್ಲಿ ವಾಸಿಸುತ್ತಿದ್ದರು. ಆದರೆ ನಾನು ಹಾಗಲ್ಲ. ನಾನು ಸ್ಥಳೀಯ ನಿವಾಸಿಯಾಗಿದ್ದು, ಸಾರ್ವಜನಿಕರಿಗೆ ದಿನದ 24 ಗಂಟೆಯೂ ಲಭ್ಯವಿರಲಿದ್ದೇನೆʼʼ ಎಂದು ಭರವಸೆ ನೀಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಇನ್ನು ಕತ್ತೆ ಸವಾರಿಗೆ ನೆಟ್ಟಿಗರು ವಿದ ವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ʼʼಇದು ಬಹಳ ಮಜವಾಗಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಪಾಪದ ಪ್ರಾಣಿಗೆ ಈ ರೀತಿಯ ಹಿಂಸೆ ನೀಡುತ್ತಿರುವುದು ಎಷ್ಟು ಸರಿ?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ʼʼಈ ರೀತಿ ಪ್ರಾಣಿ ಬಳಕೆಗೆ ಅನುಮತಿ ಇದೆಯೇ?ʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದ್ದಂತೂ ಸತ್ಯ.

ಗೋಪಾಲ್‌ಗಂಜ್‌ನಲ್ಲಿ ಮೇ 25ರಂದು 6ನೇ ಹಂತದಲ್ಲಿ ಮತದಾನ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಅಲೋಕ್‌ ಕುಮಾರ್‌ ಸುಮನ್‌ ಮತ್ತು ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟದಿಂದ ಚಂಚಲ್‌ ಕುಮಾರ್‌ ಪಾಸ್ವಾನ್‌ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Continue Reading

ಬೆಂಗಳೂರು

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಎಂಜಲು ಉಗುಳುವ ಬರದಲ್ಲಿ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆ ಹಾಕಿ ಪರದಾಡಿದ ಘಟನೆ ನಡೆದಿದೆ. ಮತ್ತೊಂದು ಕಡೆ ಕೆಎಸ್‌ಆರ್‌ಟಿಸಿ ಬಸ್‌ ಸಿಬ್ಬಂದಿ ಸೈಡ್‌ ಬಿಡಲಿಲ್ಲ ಎಂದು ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ.

VISTARANEWS.COM


on

By

KSRTC BUS Woman locks in window of KSRTC bus after going to spit
Koo

ಬೆಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆಯು ಲಾಕ್‌ ಆದ ಘಟನೆ ನಡೆದಿದೆ. ಕಿಟಿಕಿಯಲ್ಲಿ ತಲೆ ಸಿಕ್ಕಿಸಿಕೊಂಡ ಪರಿಣಾಮ ಮಹಿಳೆ ಕೆಲಕಾಲ ಪರದಾಡಬೇಕಾಯಿತು.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಎಂಜಲು ಉಗುಳಲು ಬಸ್‌ನ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆಯನ್ನು ಹೊರಹಾಕಿದ್ದರು. ಹೀಗೆ ಹೊರ ಹಾಕಿದ ತಲೆಯು ವಾಪಸ್‌ ಹಿಂದಕ್ಕೆ ಬಾರದೇ ಅಲ್ಲೆ ಲಾಕ್‌ ಆಗಿತ್ತು. ಕಾರಣ ಕಿಟಕಿಯ ಸಣ್ಣ ಜಾಗಕ್ಕೆ ನುಗ್ಗಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.

ಈ ವೇಳೆ ಮಹಿಳೆಯ ಪರದಾಟ ಹಾಗೂ ಕೂಗಾಟ ಕಂಡು ಸಹ ಪ್ರಯಾಣಿಕರು ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಹಿಳೆ ತಲೆ ಲಾಕ್‌ ಆಗಿರುವುದು ಗಮನಕ್ಕೆ ಬಂದಾಕ್ಷಣ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ಲಿಸಿದ್ದಾರೆ. ಬಳಿಕ 15 ನಿಮಿಷಗಳ ಕಾರ್ಯಾಚರಣೆ ಮಾಡಿ, ಜಾಗರೂಕತೆಯಿಂದ ಮಹಿಳೆಯ ತಲೆಯನ್ನು ಕಿಟಿಕಿಯಿಂದ ಬಿಡಿಸಿ, ರಕ್ಷಿಸಿದ್ದಾರೆ.

ಇತ್ತ ಮಹಿಳೆಯು ಬದುಕಿತು ಬಡ ಜೀವ ಎಂಬಂತೆ ತಲೆಯನ್ನು ಒಳಗೆ ಎಳೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

ಉಡುಪಿಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಹಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಯ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಆಗುಂಬೆಯಿಂದ ಹೆಬ್ರಿಗೆ ಹೊರಟಿತ್ತು. ಈ ವೇಳೆ ಬಸ್ ಹಿಂದೆ ಇದ್ದ ಪ್ರವಾಸಿಗರ ಕಾರಿಗೆ ಸೈಡ್ ನೀಡಲಿಲ್ಲ ಎನ್ನುವ ಆರೋಪವಿದೆ. ಹೀಗಾಗಿ ಗಾಟಿಯ ಮಧ್ಯೆ ಬಸ್‌ಗೆ ಅಡ್ಡಹಾಕಿ ನಿರ್ವಾಹಕ ಮತ್ತು ಚಾಲಕನಿಗೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಿಂದಾಗಿ ಘಾಟಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
RCB vs CSK
ಕ್ರೀಡೆ47 seconds ago

RCB vs CSK: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

Prajwal Revanna Case
ಪ್ರಮುಖ ಸುದ್ದಿ13 mins ago

Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

Virat Kohli
ಕ್ರೀಡೆ36 mins ago

Virat Kohli: ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಐಪಿಎಲ್​ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ಕೊಹ್ಲಿ

Girish's mother
ಕರ್ನಾಟಕ50 mins ago

Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

HD Deve Gowda
ಕರ್ನಾಟಕ55 mins ago

ಮೋದಿಯವರೇ, 3ನೇ ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿ; ಜನುಮ ದಿನದ ಶುಭಾಶಯ ಕೋರಿದ ಪ್ರಧಾನಿಗೆ ದೇವೇಗೌಡರ ಕೃತಜ್ಞತೆ

Viral Video
ದೇಶ58 mins ago

Viral Video: ಐಸ್ ಕ್ರೀಮ್‌ನಲ್ಲಿ ಚಿನ್ನದ ಉಂಗುರ ಅಡಗಿಸಿಕೊಟ್ಟ ಪ್ರಿಯತಮ! ಮುಂದೇನಾಯ್ತು?

Prajwal Revanna Case obscene video goes viral Advocate Devarajegowda SIT custody extended by 2 days
ಹಾಸನ58 mins ago

Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ

RCB vs CSK:
ಕ್ರೀಡೆ1 hour ago

RCB vs CSK: ಗೆದ್ದರೂ ಆರ್​ಸಿಬಿಗೆ ಪ್ಲೇ ಆಫ್​ ಖಚಿತವಲ್ಲ; ಹೀಗಿದೆ ರನ್​ರೇಟ್​ ಲೆಕ್ಕಾಚಾರ!

Karnataka Weather Forecast Rain alert
ಮಳೆ1 hour ago

Karnataka Weather : ಮಲೆನಾಡಿನಲ್ಲಿ ಮಳೆ ಮೋಡಿ; ಭಾನುವಾರವೂ ಅಬ್ಬರ ಇರಲಿದೆ ನೋಡಿ

Koppal tragedy
ಕೊಪ್ಪಳ2 hours ago

Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ23 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌