Virat kohli | ಶತಕ ಬಾರಿಸಿದ ಗೆಳೆಯ ಕೊಹ್ಲಿಗೆ ಅಪರೂಪದ ಫೋಟೊ ಗಿಫ್ಟ್‌ ಕೊಟ್ಟ ಎಬಿಡಿ ವಿಲಿಯರ್ಸ್‌ - Vistara News

ಕ್ರೀಡೆ

Virat kohli | ಶತಕ ಬಾರಿಸಿದ ಗೆಳೆಯ ಕೊಹ್ಲಿಗೆ ಅಪರೂಪದ ಫೋಟೊ ಗಿಫ್ಟ್‌ ಕೊಟ್ಟ ಎಬಿಡಿ ವಿಲಿಯರ್ಸ್‌

71ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿಗೆ ಗೆಳೆಯ ಎಬಿ ಡಿ ವಿಲಿಯರ್ಸ್‌ ವಿಶೇಷ ಫೋಟೊವನ್ನು ಪೋಸ್ಟ್‌ ಮಾಡಿ ಶುಭಾಶಯ ತಿಳಿಸಿದ್ದಾರೆ.

VISTARANEWS.COM


on

virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿಡಿ ವಿಲಿಯರ್ಸ್‌ ಹಾಗೂ ಕಿಂಗ್‌ ಕೊಹ್ಲಿ ಕುಚಿಕು ದೋಸ್ತ್‌ಗಳು. ಐಪಿಎಲ್‌ನ ಆರ್‌ಸಿಬಿ ತಂಡದ ಮೂಲಕ ಪರಿಚಿತರಾಗಿರುವ ಅವರು ಈಗ ಜೀವದ ಗೆಳೆಯರಾಗಿಬಿಟ್ಟಿದ್ದಾರೆ. ಅಫಘಾನಿಸ್ತಾನ ತಂಡದ ವಿರುದ್ಧ ವಿರಾಟ್ ಕೊಹ್ಲಿ ಗುರುವಾರ ಶತಕ ಬಾರಿಸಿದಾಗ ಅತಿ ಹೆಚ್ಚು ಸಂಭ್ರಮಿಸಿದವರಲ್ಲಿ ಎಬಿಡಿ ವಿಲಿಯರ್ಸ್‌ ಕೂಡ ಒಬ್ಬರು. ಶತಕ ಬಾರಿಸಿದ ತಕ್ಷಣ ಸತತವಾಗಿ ಎರಡು ಟ್ವೀಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ ಅವರು ಗೆಳೆಯ ಫಾರ್ಮ್‌ಗೆ ಮರಳಿದ್ದನ್ನು ಖುಷಿಯಿಂದ ಹೇಳಿಕೊಂಡಿದ್ದರು. ಮುಂದುವರಿದ ಅವರೀಗ ಶತಕದ ಸಾಧನೆ ಮಾಡಿದ ಕೊಹ್ಲಿಗೆ ವಿಶೇಷ ಫೋಟೊವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಚಿತ್ರ ನೋಡಿದ ವಿರಾಟ್‌ ಪತ್ನಿ ಅನುಷ್ಕಾ ಶರ್ಮ ಅವಕ್ಕಾಗಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ ರೆಟ್ರೊ ಸ್ಟೈಲ್‌ನಲ್ಲಿ ಫೋಟೊ ಒಂದನ್ನು ತೆಗೆಸಿಕೊಂಡಿದ್ದರು. ಅದರಲ್ಲಿ ತ್ರಿಚಕ್ರದ ಹಳೆ ರೆಟ್ರೊ ಸ್ಕೂಟರ್‌ನಲ್ಲಿ ವಿಲಿಯರ್ಸ್‌ ಮೇಲೆ ಕುಳಿತಿದ್ದರೆ, ವಿರಾಟ್‌ ಕೊಹ್ಲಿ ಕೆಳಗೆ ಕುಳಿತಿದ್ದಾರೆ. ಸುಂದರವಾಗಿರುವ ಆ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಎಬಿಡಿ, “”ಉತ್ತಮ ಪ್ರದರ್ಶನ ನೀಡಿದ ಗೆಳೆಯನಿಗೆ ಈ ಚಿತ್ರವನ್ನು ಶೇರ್‌ ಮಾಡುವ ಮೂಲಕ ಅಭಿನಂದಿಸುವೆ. ಇಂಥ ಇನಿಂಗ್ಸ್‌ಗಳೂ ಇನ್ನೂ ಬರಲಿ,” ಎಂದು ಬರೆದುಕೊಂಡಿದ್ದಾರೆ.

ಚಿತ್ರ ನೋಡಿದ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ, ಅಯ್ಯೊ ದೇವರೇ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿರಾಟ್‌ ಕೊಹ್ಲಿ, ಹೃದಯದ ಚಿತ್ರಗಳನ್ನು ಪ್ರತಿಯಾಗಿ ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಯಜ್ವೇಂದ್ರ ಚಹಲ್ ಸೇರಿದಂತೆ ಹಲವು ಕ್ರಿಕೆಟಿಗರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಟ್ಟಾರೆ ೧೮ ಲಕ್ಷ ಮಂದಿ ಎಬಿಡಿ ವಿಲಿಯರ್ಸ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇದನ್ನೂ ಓದಿ | Virat kohli | ವಿರಾಟ್‌ ಕೊಹ್ಲಿಗೆ ಸ್ಮರಣೀಯವಾಗಲಿದೆ ದುಬೈ ಪಿಚ್‌, ಇಲ್ಲಿದೆ ನೋಡಿ ಕಾರಣಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

IPL 2025: ಈ ಬಾರಿಯ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇಲವ 52 ರನ್​ ಮಾತ್ರ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ.

VISTARANEWS.COM


on

IPL 2025
Koo

ಬೆಂಗಳೂರು: ಮುಂದಿನ ಆವೃತ್ತಿಯ ಐಪಿಎಲ್(IPL 2025)​ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು(IPL Mega Auction 2025) ನಡೆಯಲಿದೆ. ಡಿಸೆಂಬರ್​ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಎಲ್ಲ ಫ್ರಾಂಚೈಸಿಗಳು ಬಿಸಿಸಿಐ ಜತೆ ನಾಳೆ(ಬುಧವಾರ) ಸಭೆ ನಡೆಸಲಿದ್ದು ಎಷ್ಟು ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈಗಾಗಲೇ ಆರ್​ಸಿಬಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಆಟಗಾರರನ್ನು ತಂಡದಿಂದ ಕೈ ಬಿಡಲಿದೆ ಎಂದು ವರದಿಯಾದೆ. ಇದರ ಬೆನ್ನಲ್ಲೇ ಆರ್​ಸಿಬಿ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಅವರು ಆರ್​ಸಿಬಿ(RCB) ಇನ್​ಸ್ಟಾಗ್ರಾಮ್​(RCB On Instagram) ಖಾತೆಯನ್ನು ಅನ್​ಫಾಲೋ ಮಾಡಿದ್ದಾರೆ.

ಮೂಲಗಳ ಪ್ರಕಾರ ಆರ್​ಸಿಬಿ ವಿರಾಟ್​ ಕೊಹ್ಲಿ, ಇಂಗ್ಲೆಂಡ್​ನ ವಿಲ್ ಜಾಕ್ಸ್​ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ನಾಯಕ ಫಾಫ್​ ಡು ಪ್ಲೆಸಿಸ್, ಕ್ಯಾಮರೂನ್​ ಗ್ರೀನ್​ ಸೇರಿ ಉಳಿದೆಲ್ಲ ಆಟಗಾರರನ್ನು​ ಕೂಡ ಕೈಬಿಡಲಿದೆ ಎಂದು ಮೂಲಗಳು 2 ದಿನಗಳ ಹಿಂದೆ ಮಾಹಿತಿ ನೀಡಿತ್ತು. ಈ ಬೆಳವಣಿಗೆ ಕಂಡು ಬಂದ ಬೆನ್ನಲ್ಲೇ ಗ್ಲೆನ್​ ಮ್ಯಾಕ್ಸ್​ವೆಲ್​ ಆರ್​ಸಿಬಿಯ ಅಧಿಕೃತ ​ಸ್ಟಾಗ್ರಾಮ್​ ಖಾತೆಯನ್ನು ಅನ್​ಫಾಲೋ ಮಾಡಿದ್ದಾರೆ. ಇದನ್ನು ನೋಡುವಾಗ ಮ್ಯಾಕ್ಸ್​ವೆಲ್​ಗೆ ಆರ್​ಸಿಬಿಯಿಂದ ಗೇಟ್​ ಪಾಸ್​ ಸಿಕ್ಕಿರುವುದು ಬಹುತೇಕ ಖಚಿತ ಎನ್ನುವಂತಿದೆ.

ಈ ಬಾರಿಯ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇಲವ 52 ರನ್​ ಮಾತ್ರ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ.

ಆರ್​ಸಿಬಿ ಸೇರಲಿದ್ದಾರಾ ರಾಹುಲ್​?


ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡಿರುವ ಕೆ.ಎಲ್​ ರಾಹುಲ್ ಈ ಬಾರಿ ಲಕ್ನೋ ತಂನಡ ತೊರೆಯುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಅವರು ಆರ್​ಸಿಬಿ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಆರ್​ಸಿಬಿ ಪರ ಆಡುವುದು ಕೂಡ ಅವರ ಬಯಕೆಯಾಗಿದೆ. ಇದೇ ವರ್ಷ ನಡೆದಿದ್ದ ಐಪಿಎಲ್​ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆ.ಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. 

ಇದನ್ನೂ ಓದಿ IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು

ಕಳೆದ ಮೂರು ಸೀಸನ್​ನಲ್ಲಿ ಡುಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್​ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ಮೂಲಕ 700ಕ್ಕೂ ಅಧಿಕ ರನ್​ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್​ ಎನಿಸಿಕೊಂಡಿದ್ದರು.

Continue Reading

ಕ್ರೀಡೆ

Paris Olympics: ಮನು ಭಾಕರ್​-ಸರಬ್ಜೊತ್‌ ಸಿಂಗ್​ ಕಂಚಿನ ನಿರೀಕ್ಷೆ; ಭಾರತದ ಇಂದಿನ ಸ್ಪರ್ಧೆಗಳ ವಿವರ ಹೀಗಿದೆ

Paris Olympics: ಇಂದು ನಡೆಯುವ 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ(Paris Olympics) ಸರಬ್ಜೊತ್‌ ಸಿಂಗ್‌ ಮತ್ತು ಮನು ಭಾಕರ್‌ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ

VISTARANEWS.COM


on

Koo

ಪ್ಯಾರಿಸ್‌: ಭಾನುವಾರ ನಡೆದಿದ್ದ ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್‌ ಸಿಂಗಲ್ಸ್​ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪದಕ ಖಾತೆ ತೆರೆದಿದ್ದ ಶೂಟರ್​ ಮನು ಭಾಕರ್‌, ಇನ್ನೊಂದು ಕಂಚಿನ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇಂದು ನಡೆಯುವ 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ(Paris Olympics) ಸರಬ್ಜೊತ್‌ ಸಿಂಗ್‌ ಜತೆ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತ ಇಂದು ಸ್ಪರ್ಧಿಸುವ ಪಂದ್ಯಗಳ ವಿವರ ಇಂತಿದೆ.

ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್‌ ಮತ್ತು ಸರಬ್ಜೊತ್‌ ಸಿಂಗ್‌ ಜೋಡಿ ಒಟ್ಟು 580 ಅಂಕ ಸಂಪಾದಿಸಿ ಕಂಚಿನ ಸ್ಪರ್ಧೆಗೆ ಅರ್ಹತೆ ಪಡೆದರು. ಇಂದು ನಡೆಯುವ ಪಂದ್ಯದಲ್ಲಿ ಭಾರತದ ಜೋಡಿ ಕೊರಿಯಾದ ಒಹ್‌ ಯೆ ಜಿನ್‌-ಲೀ ವೊನ್ಹೊ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ.

ಬ್ಯಾಡ್ಮಿಂಟನ್

ಪುರುಷರ ಸಿಂಗಲ್ಸ್‌: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.

ಮಹಿಳಾ ಸಿಂಗಲ್ಸ್‌: ಪಿ.ವಿ. ಸಿಂಧು.

ಪುರುಷರ ಡಬಲ್ಸ್‌: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌.

ಮಹಿಳಾ ಡಬಲ್ಸ್‌: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ. (ಮಧ್ಯಾಹ್ನ 12.00)

ಶೂಟಿಂಗ್

ಪುರುಷರ ಟ್ರ್ಯಾಪ್‌ ಅರ್ಹತಾ ಸುತ್ತು: ಪೃಥ್ವಿರಾಜ್‌ ತೊಂಡೈಮಾನ್‌.

ಮಹಿಳಾ ಟ್ರ್ಯಾಪ್‌ ಅರ್ಹತಾ ಸುತ್ತು: ರಾಜೇಶ್ವರಿ ಕುಮಾರಿ, ಶ್ರೇಯಸಿ ಸಿಂಗ್‌. (ಮಧ್ಯಾಹ್ನ 12.30)

10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ, ಪದಕ ಸುತ್ತು: ಮನು ಭಾಕರ್‌-ಸರಬ್ಜೋತ್ ಸಿಂಗ್‌. (ಮಧ್ಯಾಹ್ನ 1.00)
ಪುರುಷರ ಟ್ರ್ಯಾಪ್‌ ಫೈನಲ್‌ ( ರಾತ್ರಿ 7.00)

ಟೇಬಲ್‌ ಟೆನಿಸ್‌


ಪುರುಷರ ಸಿಂಗಲ್ಸ್‌: ಹರ್ಮೀತ್‌ ದೇಸಾಯಿ.

ಮಹಿಳಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಮಧ್ಯಾಹ್ನ 1.30)

ರೋಯಿಂಗ್​

ಪುರುಷರ ಸಿಂಗಲ್‌ ಸ್ಕಲ್‌ ಕ್ವಾರ್ಟರ್‌ ಫೈನಲ್‌: ಬಲ್ರಾಜ್‌ ಪನ್ವರ್‌. (ಮಧ್ಯಾಹ್ನ 1.40)

ಬಾಕ್ಸಿಂಗ್‌


ಪುರುಷರ 51 ಕೆಜಿ, 16ರ ಸುತ್ತು: (ಮಧ್ಯಾಹ್ನ 2.30)

ಮಹಿಳೆಯರ 57 ಕೆಜಿ ವಿಭಾಗ, 32ರ ಸುತ್ತು: ಜಾಸ್ಮಿನ್‌ ಲಾಂಬೋರಿಯ. (ಸಂಜೆ 4.38)

ಈಕ್ವೇಸ್ಟ್ರಿಯನ್‌


ಡ್ರೆಸ್ಸೇಜ್‌ ವೈಯಕ್ತಿಕ ಸ್ಪರ್ಧೆ: ಅನುಶ್‌ ಅಗರ್ವಾಲ್‌.(ಮಧ್ಯಾಹ್ನ 2.30)

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

ಆರ್ಚರಿ


ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ 64ರ ಸುತ್ತು: ಬಿ. ಧೀರಜ್‌, ತರುಣ್‌ದೀಪ್‌ ರಾಯ್‌, ಪ್ರವೀಣ್‌ ಜಾಧವ್‌.
ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಭಜನ್‌ ಕೌರ್‌.(ಮಧ್ಯಾಹ್ನ 3.30)

ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ 32ರ ಸುತ್ತು:(ಸಂಜೆ 4.15)

ಹಾಕಿ: ಭಾರತ-ಐರ್ಲೆಂಡ್‌(ಸಂಜೆ 4.45)

Continue Reading

ಕ್ರೀಡೆ

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Paris Olympics 2024 : 1900ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ (Paris Olympics 2024) ನಾಲ್ಕನೇ ದಿನದಲ್ಲಿ ಭಾರತ ಅಥ್ಲೀಟ್​ಗಳು ಕೆಲವು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಇದುವರೆಗೆ ಕೇವಲ 1 ಕಂಚಿನ ಪದಕವನ್ನು ಮಾತ್ರ ಪಡೆದಿದೆ. ಆದಾಗ್ಯೂ ಇನ್ನೂ ಪದಕಗಳನ್ನು ಗೆಲ್ಲುವ ಭರವಸೆಯಿದೆ. ಹೀಗಾಗಿ ಕ್ರೀಡಾಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಸೃಷ್ಟಿಯಾಗಿದೆ. ಪ್ರಮುಖವಾಗಿ ಒಂದು ಪದಕದ ಸ್ಪರ್ಧೆಯೂ ಮಂಗಳವಾರ ನಡೆಯಲಿದೆ.

ಒಲಿಂಪಿಕ್ಸ್​​ನ 4ನೇ ದಿನವಾದ ಜುಲೈ 30ರಂದು (Paris Olympics 2024) ಭಾರತದ ಶೂಟರ್ ಮನು ಭಾಕರ್ ಇತಿಹಾಸ ನಿರ್ಮಿಸುವ ಗುರಿ ಹೊಂದಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ (ಕಂಚು) ಗೆದ್ದ ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಯಾವುದೇ ಭಾರತೀಯ ಕ್ರೀಡಾಪಟು ಎರಡು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಗೆದ್ದರೆ ದೊಡ್ಡ ಸಾಧನೆಯಾಗಲಿದೆ.

1900ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.

ಭಾಕರ್ ಮತ್ತು ಸರಬ್ಜೋತ್ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಬಿಲ್ಲುಗಾರ ಧೀರಜ್ ಬೊಮ್ಮದೇವರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಜನ್ ಕೌರ್ ಮತ್ತು ಅಂಕಿತಾ ಭಕತ್ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.

ಪುರುಷರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ 2 ನೇ ದಿನದಂದು ಟ್ರ್ಯಾಪ್ ಶೂಟರ್ ಪೃಥ್ವಿರಾಜ್ ತೊಂಡೈಮನ್ ಪುಟಿದೇಳಲು ಪ್ರಯತ್ನಿಸಿದರೆ, ರಾಜೇಶ್ವರಿ ಕುಮಾರಿ ಮತ್ತು ಶ್ರೇಯಸಿ ಸಿಂಗ್ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ ಮೊದಲ ದಿನದಂದು ಅಭಿಯಾನಪ್ರಾರಂಭಿಸಲಿದ್ದಾರೆ.

ಬಾಕ್ಸರ್​ಗಳು ಕಣಕ್ಕೆ

ಭಾರತದ ಆರು ಭಾರತೀಯ ಬಾಕ್ಸರ್ ಗಳಲ್ಲಿ ಮೂವರು ನಾಳೆ ಕಣಕ್ಕಿಳಿಯಲಿದ್ದಾರೆ. ಪುರುಷರ 51 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್, ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಮತ್ತು ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ ಪವಾರ್ ಸ್ಪರ್ಧಿಸಲಿದ್ದಾರೆ.

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾ ವಿರುದ್ಧದ ಅಂತಿಮ ಗ್ರೂಪ್ ಪಂದ್ಯದಲ್ಲಿ ತಮ್ಮ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ. ಮಹಿಳಾ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೋಲುಗಳ ಬಳಿಕ ಮತ್ತೊಂದ ಪಂದ್ಯ ಆಡಲಿದ್ದಾರೆ.

ಇದನ್ನೂ ಓದಿ: Paris Olympics 2024 : ಪುರುಷರ ಆರ್ಚರಿ ತಂಡಕ್ಕೆ ಆಘಾತ, ಕ್ವಾರ್ಟರ್​ಫೈನಲ್​ನಲ್ಲಿ ಸೋಲು

ಶೂಟಿಂಗ್, ಬಾಕ್ಸಿಂಗ್ ಮತ್ತು ಬ್ಯಾಡ್ಮಿಂಟನ್ ಜೊತೆಗೆ, ಪುರುಷರ ಸಿಂಗಲ್ಸ್ ಸ್ಕಲ್ಸ್​ನಲ್ಲಿ ಬಲರಾಜ್ ಪನ್ವಾರ್ ಮತ್ತು ಈಕ್ವೆಸ್ಟ್ರಿಯನ್​ ವೈಯಕ್ತಿಕ ಡ್ರೆಸ್ಸಿಂಗ್ ಅರ್ಹತಾ ಸ್ಪರ್ಧೆಯಲ್ಲಿ ಅನುಷ್ ಅಗರ್ವಾಲ್ಲಾ ಸ್ಪರ್ಧಿಸಲಿದ್ದಾರೆ.

ಭಾರತದ ಪಂದ್ಯಗಳ ವಿವರ ಇಲ್ಲಿದೆ

  • ಶೂಟಿಂಗ್​​: ಪುರುಷರ​​ ಟ್ರ್ಯಾಪ್ ಅರ್ಹತಾ ಸುತ್ತಿನ 2ನೇ ದಿನ; ಪೃಥ್ವಿರಾಜ್ ತೊಡೈಮನ್, ಮಧ್ಯಾಹ್ನ 12.30ಕ್ಕೆ
  • ಶೂಟಿಂಗ್​: ಟ್ರ್ಯಾಪ್ ಮಹಿಳಾ ಅರ್ಹತಾ ಸುತ್ತಿನ ಮೊದಲ ದಿನ, ಶ್ರೇಯಸಿ ಸಿಂಗ್/ ರಾಜೇಶ್ವರಿ ಕುಮಾರಿ, ಮಧ್ಯಾಹ್ನ 12.30ಕ್ಕೆ
  • ಶೂಟಿಂಗ್: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ, ಕಂಚಿನ ಪದಕ ಪಂದ್ಯ, ಮನು ಭಾಕರ್-ಸರಬ್ಜೋತ್ ಸಿಂಗ್, ಮಧ್ಯಾಹ್ನ 1 ಗಂಟೆಗೆ
  • ಟೇಬಲ್ ಟೆನಿಸ್- ಮಹಿಳೆಯರ ಸಿಂಗಲ್ಸ್, ಶ್ರೀಜಾ ಅಕುಲಾ
  • ರೋಯಿಂಗ್- ಪುರುಷರ ಸಿಂಗಲ್ಸ್ ಸ್ಕಲ್ ಕ್ವಾರ್ಟರ್ ಫೈನಲ್ 4, ಬಲರಾಜ್ ಪನ್ವಾರ್ , ಮಧ್ಯಾಹ್ನ 1.40ರಿಂದ
  • ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸೇಜ್​- ಅನುಷ್ ಅಗರ್ವಾಲಾ, ಮಧ್ಯಾಹ್ನ 2.30 ರಿಂದ
  • ಹಾಕಿ: ಪುರುಷರ ಪೂಲ್ ಬಿ ಪಂದ್ಯ: ಐರ್ಲೆಂಡ್ ವಿರುದ್ಧ , ಸಂಜೆ 4.45ಕ್ಕೆ
  • ಆರ್ಚರಿ: ಮಹಿಳೆಯರ ವೈಯಕ್ತಿಕ 32ನೇ ಸುತ್ತು, ಅಂಕಿತಾ ಭಕತ್, ಸಂಜೆ 5.14ಕ್ಕೆ
  • ಆರ್ಚರಿ: ಮಹಿಳಾ ವೈಯಕ್ತಿಕ 32ನೇ ಸುತ್ತು, ಭಜನ್ ಕೌರ್, ಸಂಜೆ 5.27ಕ್ಕೆ
  • ಬ್ಯಾಡ್ಮಿಂಟನ್: ಪುರುಷರ ಡಬಲ್ಸ್ ಗ್ರೂಪ್ ಸಿ: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ಸಂಜೆ 5.30
  • ಬ್ಯಾಡ್ಮಿಂಟನ್: ಮಹಿಳಾ ಡಬಲ್ಸ್ ಗ್ರೂಪ್ ಸಿ: ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ, ಸಂಜೆ 6.20ಕ್ಕೆ
  • ಬಾಕ್ಸಿಂಗ್: ಪುರುಷರ 51 ಕೆ.ಜಿ ವಿಭಾಗ : ಅಮಿತ್ ಪಂಗಲ್, ಸಂಜೆ 7.16ಕ್ಕೆ
  • ಬಾಕ್ಸಿಂಗ್: ಪುರುಷರ 57 ಕೆ.ಜಿ ವಿಭಾಗ ಜೈಸ್ಮಿನ್ ಲಂಬೋರಿಯಾ, ರಾತ್ರಿ 9.08ರಿಂದ
  • ಆರ್ಚರಿ: ಪುರುಷರ ವೈಯಕ್ತಿಕ ಸುತ್ತಿನಲ್ಲಿ 32 ಧೀರಜ್ ಬೊಮ್ಮದೇವರ, 10.46ರಿಂದ
  • ಬಾಕ್ಸಿಂಗ್: ಮಹಿಳೆಯರ 54 ಕೆ.ಜಿ ವಿಭಾಗ, ಪ್ರೀತಿ, 01.06 ಗಂಟೆಗೆ
Continue Reading

ಕ್ರೀಡೆ

Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

Paris Olympics 2024 : ರಿಲೇ ಈ ವಾರದ ಕೊನೆಯಲ್ಲಿ ನಡೆಯಲಿವೆ. ಪೀಟಿ ಅವರು ಭಾನುವಾರ ನಡೆಯಲಿದೆ. ಸಂಪೂರ್ಣ ಸುಧಾರಿಸಿಕೊಳ್ಳುವುದಕ್ಕೆ ಅವರು ಸಜ್ಜಾಗಿದ್ದಾರೆ. “ಇದು ಒಂದು ನೆಪವಲ್ಲ, ಏಕೆಂದರೆ ಅದು ಎಂದಿಗೂ ನೆಪವಾಗಬೇಕೆಂದು ನಾನು ಬಯಸುವುದಿಲ್ಲ ನಾನು ಮುಂದಿನ ಸ್ಪರ್ಧೆಗೆ ರೆಡಿಯಾಗಬೇಕಾಗಿದೆ, “ಎಂದು ಪೀಟಿ ಹೇಳಿದರು.

VISTARANEWS.COM


on

Paris Olympics 2024
Koo

ಪ್ಯಾರಿಸ್​ : ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ (Paris Olympics 2024) 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಬ್ರಿಟಿಷ್ ಈಜುಗಾರ ಆಡಮ್ ಪೀಟಿ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಸೋಮವಾರ ಅವರ ತಂಡ ಈ ಮಾಹಿತಿಯನ್ಉ ನೀಡಿದೆ. ಪೀಟಿ ಅವರು ಸ್ಪರ್ಧೆಯಲ್ಲಿ ಅವರು ಇಟಲಿಯ ನಿಕೊಲೊ ಮಾರ್ಟಿನೆಂಗಿ ಅವರಿಗಿಂತ 0.02 ಸೆಕೆಂಡುಗಳ ಹಿಂದೆ ಬಿದ್ದ ಕಾರಣ ಬೆಳ್ಳಿ ಗೆದ್ದಿದ್ದರು. ಅವರು ಅಮೆರಿಕದ ನಿಕ್ ಫಿಂಕ್ ಅವರೊಂದಿಗೆ ಬೆಳ್ಳಿ ಹಂಚಿಕೊಂಡಿದ್ದಾರೆ.

ಸ್ಪರ್ಧೆಯ ದಿನದಂದು ತಮಗೆ ಅನಾರೋಗ್ಯವಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಆದರೆ ಬಂಗಾರ ಗೆಲ್ಲದೇ ಇರಲು ಅದನ್ನೇ ನೆಪವಾಗಿ ಬಳಸಲು ನಿರಾಕರಿಸಿದರು. ಪೀಟಿ ರೇಸ್​​ ನಂತರ ಗಂಟಲು ನೋವಿನಿಂದ ಮಾತನಾಡಲು ಹೆಣಗಾಡಿದ್ದರು. “ಫೈನಲ್ ಪಂದ್ಯದ ನಂತರದ ಕೆಲವೇ ಗಂಟೆಗಳಲ್ಲಿ, ಅವರ ರೋಗಲಕ್ಷಣಗಳು ಉಲ್ಬಣಗೊಂಡಿತು. ಸೋಮವಾರ ಮುಂಜಾನೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಆ ಸಮಯದಲ್ಲಿ ಅವರು ಪಾಸಿಟಿವ್​ ಎಂದು ಗೊತ್ತಾಯಿತು” ಎಂದು ಟೀಮ್ ಜಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ .

ಈಜಿನಲ್ಲಿ ಗೆದ್ದಿರುವ ಅವರು ರಿಲೇ ಸ್ಪರ್ಧೆಗಳಿಗೆ ಮತ್ತೆ ಮರಳುವ ಭರವಸೆ ಅವರು ಹೊಂದಿದ್ದಾರೆ. “ಅನಾರೋಗ್ಯದ ಯಾವುದೇ ಪ್ರಕರಣದಂತೆ, ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿದೆ. ಆರೋಗ್ಯವಾಗಿರಲು ಎಲ್ಲಾ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಂದು ಹೇಳಿದ್ದಾರೆ.

ರಿಲೇ ಈ ವಾರದ ಕೊನೆಯಲ್ಲಿ ನಡೆಯಲಿವೆ. ಪೀಟಿ ಅವರು ಭಾನುವಾರ ನಡೆಯಲಿದೆ. ಸಂಪೂರ್ಣ ಸುಧಾರಿಸಿಕೊಳ್ಳುವುದಕ್ಕೆ ಅವರು ಸಜ್ಜಾಗಿದ್ದಾರೆ. “ಇದು ಒಂದು ನೆಪವಲ್ಲ, ಏಕೆಂದರೆ ಅದು ಎಂದಿಗೂ ನೆಪವಾಗಬೇಕೆಂದು ನಾನು ಬಯಸುವುದಿಲ್ಲ ನಾನು ಮುಂದಿನ ಸ್ಪರ್ಧೆಗೆ ರೆಡಿಯಾಗಬೇಕಾಗಿದೆ, “ಎಂದು ಪೀಟಿ ಹೇಳಿದರು.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜುಲೈ 30ರಂದು ಭಾರತದ ವೇಳಾಪಟ್ಟಿ ಈ ರೀತಿ ಇದೆ

ಬೆಂಗಳೂರು: ಪ್ರೇಮಿಗಳ ನಗರಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​​ನ 4ನೇ ದಿನವಾದ ಜುಲೈ 30ರಂದು (Paris Olympics 2024) ಭಾರತದ ಶೂಟರ್ ಮನು ಭಾಕರ್ ಇತಿಹಾಸ ನಿರ್ಮಿಸುವ ಗುರಿ ಹೊಂದಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ (ಕಂಚು) ಗೆದ್ದ ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಯಾವುದೇ ಭಾರತೀಯ ಕ್ರೀಡಾಪಟು ಎರಡು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಗೆದ್ದರೆ ದೊಡ್ಡ ಸಾಧನೆಯಾಗಲಿದೆ.

ಇದನ್ನೂ ಓದಿ: Rohan Bopanna : ಅಂತಾರಾಷ್ಟ್ರೀಯ ಟೆನಿಸ್​ಗೆ ವಿದಾಯ ಘೋಷಿಸಿದ ಕನ್ನಡಿಗ ರೋಹನ್ ಬೋಪಣ್ಣ

1900ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.

ಭಾಕರ್ ಮತ್ತು ಸರಬ್ಜೋತ್ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಬಿಲ್ಲುಗಾರ ಧೀರಜ್ ಬೊಮ್ಮದೇವರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಜನ್ ಕೌರ್ ಮತ್ತು ಅಂಕಿತಾ ಭಕತ್ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.

Continue Reading
Advertisement
Liquor Price Karnataka
ಪ್ರಮುಖ ಸುದ್ದಿ6 mins ago

Liquor Price Karnataka: ನೊರೆ ನೊರೆ ಬಿಯರ್‌ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆ

Parliament Session
ರಾಜಕೀಯ10 mins ago

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Kerala Landslide
ದೇಶ16 mins ago

Kerala Landslide: ಕೇರಳದಲ್ಲಿ ಭೀಕರ ಭೂ ಕುಸಿತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮತ್ತಷ್ಟು ಮಂದಿ ಸಿಲುಕಿರುವ ಭೀತಿ

ದೇಶ20 mins ago

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

Rebel star Prabhas starrer The Rajasaab short glimpse released
ದೇಶ33 mins ago

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

IPL 2025
ಕ್ರೀಡೆ44 mins ago

IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

ಪ್ರಮುಖ ಸುದ್ದಿ47 mins ago

Uttara Kannada Landslide: ನೀರಿನಡಿ ಇನ್ನೂ 9 ದೇಹಗಳಿವೆ ಎಂದ ಸ್ವಾಮೀಜಿ! ಬರಲಿದೆ ಕೇರಳದಿಂದ ಬಾರ್ಜ್‌ ಮೌಂಟೆಡ್‌ ಹಿಟಾಚಿ

Mahila Samman Savings Certificate
ಮನಿ-ಗೈಡ್49 mins ago

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

Kerala Landslide
ದೇಶ57 mins ago

Kerala Landslide: ಕೇರಳದಲ್ಲಿ ವರುಣನ ರೌದ್ರ ನರ್ತನ ಶುರು; ಭಾರೀ ಭೂಕುಸಿತಕ್ಕೆ ಐವರು ಬಲಿ

Yogi Adithyanath
ದೇಶ1 hour ago

Yogi Adityanath: ಲವ್‌ ಜಿಹಾದ್‌ ಮಟ್ಟ ಹಾಕಲು ಯೋಗಿ ಆದಿತ್ಯನಾಥ್‌ ಪಣ; ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆಯ ಪ್ರಸ್ತಾವ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ17 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ20 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌