Leaf Spot disease: ಎಲೆ ಚುಕ್ಕೆ ರೋಗದ ಬಗ್ಗೆ ಸಂಶೋಧನೆ, ಉಚಿತ ಔಷಧ; ಸಚಿವ ಮಲ್ಲಿಕಾರ್ಜುನ್‌ ಭರವಸೆ - Vistara News

ಕರ್ನಾಟಕ

Leaf Spot disease: ಎಲೆ ಚುಕ್ಕೆ ರೋಗದ ಬಗ್ಗೆ ಸಂಶೋಧನೆ, ಉಚಿತ ಔಷಧ; ಸಚಿವ ಮಲ್ಲಿಕಾರ್ಜುನ್‌ ಭರವಸೆ

Leaf Spot disease : ರಾಜ್ಯದ ಏಳು ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ವಿಸ್ತಾರ ನ್ಯೂಸ್‌ ಅಭಿಯಾನ ನಡೆಸುತ್ತಿದೆ. ಇದಕ್ಕೆ ಸ್ಪಂದಿಸಿರುವ ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ.

VISTARANEWS.COM


on

Leaf spot disease Minister SS Mallikarjun
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಲಕ್ಷಾಂತರ ಅಡಕೆ ಬೆಳೆಗಾರರನ್ನು (Arecanut Growers) ಕಂಗಾಲು ಮಾಡಿರುವ ಎಲೆಚುಕ್ಕೆ ರೋಗದ (Leaf spot Disease) ಮೂಲದ ಬಗ್ಗೆ ಉನ್ನತ ಸಂಶೋಧನೆ ನಡೆಸಲಾಗುವುದು ಮತ್ತು ಬೆಳೆಗಾರರಿಗೆ ಈ ರೋಗ ತಡೆಗೆ ಉಚಿತ ಔಷಧ (Free Medicine) ಒದಗಿಸಲಾಗುವುದು ಎಂದು ರಾಜ್ಯದ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ (S.S Mallikarjun) ಭರವಸೆ ನೀಡಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೊಡಗು ಜಿಲ್ಲೆಯ ಸುಮಾರು 53,977.04 ಹೆಕ್ಟೇರ್‌ ತೋಟದಲ್ಲಿ ಕಾಣಿಸಿಕೊಂಡಿರುವ ರೋಗ ಮತ್ತು ಅದರಿಂದ ರೈತರ ಬದುಕಿನ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಸ್ತಾರ ನ್ಯೂಸ್‌ ನಡೆಸಿದ ವಿಶೇಷ ಅಭಿಯಾನಕ್ಕೆ (Vistara News Impact) ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಂದಿಸಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದೇನು?

ಎಲೆ ಚುಕ್ಕೆ ರೋಗ ಮಲೆನಾಡು, ಅರೆಮಲೆನಾಡು, ಕಾರವಾರ, ಮಂಗಳೂರು ಭಾಗದಲ್ಲಿ ಜಾಸ್ತಿ ಕಾಣಿಸಿಕೊಂಡಿದೆ. ಇದರ ಬಗ್ಗೆ ಉನ್ನತ ಸಂಶೋಧನೆ ನಡೆಯಬೇಕಾಗಿದೆ. ಹಿಂದಿನ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಸ್ಪಂದಿಸಿದೆ. ನಮ್ಮಲ್ಲೇ ಸಂಶೋಧನೆ ಮಾಡಿ ಸೂಕ್ತವಾದ ಔಷಧ ತಯಾರಿ‌ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಅನುದಾನ ಕೊಟ್ಟಿದ್ದೇವೆ ಎಂದು ಸಚಿವ ಮಲ್ಲಿಕಾರ್ಜುನ್‌ ವಿವರಿಸಿದರು.

ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ ಔಷಧ ಕಂಡುಹಿಡಿಯಬೇಕು. ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ. ಆದಷ್ಟು ಬೇಗ ಔಷಧ ಕಂಡುಹಿಡಿದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಸಮಸ್ಯೆ ಎದುರಿಸುತ್ತಿರುವ ಭಾಗದ ರೈತರು ಮತ್ತು ವಿಜ್ಞಾನಿಗಳನ್ನು ಸೇರಿಸಿ ಒಂದು ಸಮಿತಿ ಮಾಡಲಾಗಿದೆ. ಶಿವಮೊಗ್ಗ, ಬಾಗಲಕೋಟೆ ಕೃಷಿ ವಿವಿಗಳು ಜಂಟಿಯಾಗಿ ಸಂಶೋಧನೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಎಲೆ ಚುಕ್ಕೆ ರೋಗ ನಿವಾರಣೆಗೆ ಬೇಕಾದ ಔಷಧಗಳನ್ನು ಉಚಿತವಾಗಿ ನೀಡುತ್ತೇವೆ. ಎಲ್ಲೆಲ್ಲಿ ರೋಗ ಹೆಚ್ಚಾಗಿದೆಯೋ ಅಲ್ಲೆಲ್ಲ ಉಚಿತ ಔಷಧಗಳನ್ನು ತೋಟಗಾರಿಕಾ ಇಲಾಖೆ ಮೂಲಕ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ʻʻಹಿಂದಿನ ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿತು. ನಮ್ಮ ಸರ್ಕಾರ ರೈತರಿಗೆ ಒಳ್ಳೆಯ ಕೆಲಸ ಮಾಡ್ತಾ ಇದೆʼʼ ಎಂದು ಸಚಿವರು ಸಮರ್ಥಿಸಿದರು.

ರಾಜ್ಯ ಸರ್ಕಾರ ಎಲ್ಲ ನೆರವು ನೀಡಲಿದೆ ಎಂದ ಸಚಿವ ಮಧು ಬಂಗಾರಪ್ಪ

ʻʻಎಲೆಚುಕ್ಕೆ ರೋಗ ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ನಾವು ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಈಗಾಗಲೇ ಚಿಕ್ಕಮೊತ್ತದ ಹಣ ಬಿಡುಗಡೆ ಮಾಡಲಾಗಿದೆʼʼ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ʻʻಅಡಕೆಯನ್ನು ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಸಂಶೋಧನೆ ಮಾಡಲು ಯೂನಿವರ್ಸಿಟಿಗಳಿಗೆ ಹೇಳಿದ್ದೇವೆʼʼ ಎಂದು ಸಚಿವರು ತಿಳಿಸಿದರು. ʻʻಹಿಂದಿನ ಸರ್ಕಾರಗಳು ಕೂಡಾ ಹಲವು ಭರವಸೆಗಳನ್ನು ನೀಡಿವೆ. ಆದರೆ, ಯಾವುದೂ ಈಡೇರಿಲ್ಲʼʼ ಎಂಬುದನ್ನು ಸಚಿವ ಮಧು ಬಂಗಾರಪ್ಪ ಉಲ್ಲೇಖಿಸಿದರು.

madhu bangarappa

ʻʻ2019ರಲ್ಲಿ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಅಡಿಕೆ ಸಂಶೋಧನಾ ಕೇಂದ್ರ ಮಾಡುತ್ತೇವೆ, ಎಲೆಚುಕ್ಕಿ ರೋಗ ಕಂಟ್ರೋಲ್ ಮಾಡುತ್ತೇವೆ. ಇದಕ್ಕೆ 500 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಇವತ್ತಿನವರೆಗೂ ಒಂದು ಪೈಸೆ ಕೊಟ್ಟಿಲ್ಲʼʼ ಎಂದು ಉಲ್ಲೇಖಿಸಿದ ಮಧು ಬಂಗಾರಪ್ಪ, ಈ ಬಗ್ಗೆ ಯಾವ ಸಂಸದರೂ ದನಿ ಎತ್ತಿಲ್ಲ ಎಂದು ನೆನಪಿಸಿದರು.

ಹಾಗಂತ ನಾವು ಯಾರನ್ನೂ ಕಾಯುತ್ತಾ ಕುಳಿತುಕೊಲ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇರುವುದರಲ್ಲಿ ಸ್ವಲ್ಪ ಹಣ ನಾವು ಬಿಡುಗಡೆ ಮಾಡಿದ್ದೇವೆ. ಹೆಚ್ಚುವರಿ ಹಣ ನೀಡುವಂತೆ ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ʻʻಇದಕ್ಕೆ ಶಾಶ್ವತ ಪರಿಹಾರ ಇದಕ್ಕೆ ಹುಡುಕಬೇಕು. ಔಷಧವನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಒಂದು ಹಂತಕ್ಕೆ ಆಗಿದೆ. ಅದನ್ನು ದೊಡ್ಡಮಟ್ಟದಲ್ಲಿ ಮಾಡಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು. ಬರಗಾಲ ಘೋಷಣೆಯಾಗಿದ್ದರಿಂದ ಹೆಚ್ಚುವರಿ ಸಹಕಾರ ಕೊಡಿಸುವ ಬಗ್ಗೆಯೂ ಮಾತನಾಡುತ್ತೇವೆʼʼ ಎಂದು ಹೇಳಿದರು ಮಧು ಬಂಗಾರಪ್ಪ.

ಏನಿದು ಎಲೆ ಚುಕ್ಕೆ ರೋಗ, ಎಲ್ಲೆಲ್ಲಿ ಸಮಸ್ಯೆ?

ರಾಜ್ಯದ ಅಡಿಕೆ ಬೆಳೆಗಾರರು ತಮ್ಮ ಜೀವನದಲ್ಲಿ ಹಿಂದೆಂದೂ ಕಂಡರಿಯದಂತಹ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಹಲವಾರು ವರ್ಷಗಳಿಂದ ತಮ್ಮ ಜೀವನಕ್ಕೆ ಆಸರೆಯಾಗಿದ್ದ ಅಡಿಕೆ ತೋಟಗಳೆಲ್ಲಾ ʻಎಲೆ ಚುಕ್ಕೆ ರೋಗʼದಿಂದ ನೋಡ ನೋಡತ್ತಿದ್ದಂತೆಯೇ ಬಾಡಿ ಹೋಗುತ್ತಿರುವುದು ಅವರಿಗೆ ಅಘಾತವನ್ನುಂಟು ಮಾಡಿದೆ. ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಂದರೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಅಡಿಕೆ ತೋಟಗಳೆಲ್ಲಾ ನಾಶವಾಗುವ ಆತಂಕ ಎದುರಾಗಿದೆ.

ಸರ್ಕಾರದ ಪ್ರಾಥಮಿಕ ವರದಿ ಪ್ರಕಾರವೇ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಎಲೆಚುಕ್ಕಿ ರೋಗ ಕಾರಣಿಸಿಕೊಂಡಿದೆ. ಈ ಜಿಲ್ಲೆಗಳಲ್ಲಿ ಒಟ್ಟು 3,92,504 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಈ ವರ್ಷ ಇದರಲ್ಲಿ 53,977.04 ಹೆಕ್ಟೇರ್‌ ತೋಟದಲ್ಲಿ ಈ ರೋಗ ಸದ್ಯ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಇನ್ನೂ ಸರಿಯಾಗಿ ಸರ್ವೇ ನಡೆಯದೇ ಇರುವುದರಿಂದ ಈ ರೋಗಪೀಡಿತ ತೋಟದ ಪ್ರಮಾಣ ದುಪ್ಪಟ್ಟು ಹೆಚ್ಚಿರಬಹುದೆಂದು ಅಂದಾಜಿಸಲಾಗುತ್ತಿದೆ.

ಸರ್ಕಾರದ ವರದಿ ಪ್ರಕಾರವೇ 53,977.04 ಹೆಕ್ಟೇರ್‌ ತೋಟದಲ್ಲಿ ರೋಗ ಉಲ್ಭಣವಾಗಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆ- 28,788.04 ಹೆಕ್ಟೇರ್‌, ಶಿವಮೊಗ್ಗ ಜಿಲ್ಲೆ -11,950 ಹೆಕ್ಟೇರ್‌, ಉತ್ತರ ಕನ್ನಡ ಜಿಲ್ಲೆ -8,604 ಹೆಕ್ಟೇರ್‌, ಹಾಸನ ಜಿಲ್ಲೆ – 360 ಹೆಕ್ಟೇರ್‌, ದಕ್ಷಿಣ ಕನ್ನಡ ಜಿಲ್ಲೆ -3,623 ಹೆಕ್ಟೇರ್‌, ಉಡುಪಿ ಜಿಲ್ಲೆ -123 ಹೆಕ್ಟೇರ್‌, ಕೊಡಗು ಜಿಲ್ಲೆ – 529 ಹೆಕ್ಟೇರ್‌ ತೋಟ ಸೇರಿದೆ.

ರೋಗ ಬಂದಾಗ ಏನಾಗುತ್ತದೆ?

• ಅಡಿಕೆಯ ಸೋಗೆಯಲ್ಲಿ ಕಂದು ಬಣ್ಣದ ಸಣ್ಣ ಚುಕ್ಕೆ ಮೂಡುತ್ತದೆ.
• ಈ ಚುಕ್ಕೆಯ ಸುತ್ತ ಹಳದಿ ಬಣ್ಣದ ಆವೃತವಾಗಿರುತ್ತದೆ
• ಕೆಲವು ಕಡೆ ಕಪ್ಪು ಬಣ್ಣದಿಂದ ಆವೃತವಾಗಿರುವ ಬೂದು ಬಣ್ಣದ ಸಣ್ಣ ಚುಕ್ಕೆಗಳೂ ಕಾಣಿಸಿಕೊಳ್ಳುತ್ತವೆ.
• ಈ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಇಡೀ ಸೋಗೆಗೆ ಹಬ್ಬಿ ಅದನ್ನು ಒಗಣಿಸುತ್ತವೆ.
• ಎಲ್ಲ ಸೋಗೆ ಒಣಗಿ ಮರ ಸಾಯುತ್ತದೆ.

ಫಿಲೋಸ್ಟಿಕ್ಟಾ ಅರಕೆ ಮತ್ತು ಕೊಲೆಟೋಟ್ರೈಕಮ್‌ ಸ್ಪಿಸ್ಸೀಸ್‌ ಎನ್ನುವ ಶಿಲೀಂಧ್ರಗಳು ಎಲೆ ಚುಕ್ಕೆ ರೋಗ ಹರಡಲು ಕಾರಣ. ಕೊಲೆಟೋಟ್ರೈಕಮ್‌ ಶಿಲೀಂಧ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನು ಉಂಟು ಮಾಡುತ್ತದೆ. ಈ ಶಿಲೀಂಧ್ರದ ಬೇರೆ ಬೇರೆ ಉಪಜಾತಿಗಳು ಈ ರೋಗಕ್ಕೆ ಕಾರಣವಾಗುತ್ತಿವೆ.

ನಷ್ಟದಿಂದ ಬೇಸತ್ತು ನಾಲ್ವರು ಆತ್ಮಹತ್ಯೆ

ಎಲೆಚುಕ್ಕೆ ರೋಗದಿಂದ ಆಗಿರುವ ನಷ್ಟದಿಂದ ಬೇಸತ್ತು
೧. ಕೊಪ್ಪ ತಾಲೂಕಿನ ಕಕ್ಕದ್ದೆ ಗ್ರಾಮದಲ್ಲಿ ಅಡಿಕೆ ಬೆಳೆಗಾರ ರವೀಂದ್ರ
೨. ಶೃಂಗೇರಿ ತಾಲ್ಲೂಕಿನ ತೆಕ್ಕೂರು ಕೊಡತಲು ರೈತ ಅಭಿಲಾಷ್ (36)
೩. ಕಳಸ ತಾಲೂಕಿನ ಸಂಸೆಯ ಶಂಕರೇಗೌಡ
೪. ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರಿನ ಕೃಷ್ಣಪ್ಪಗೌಡ
ಹೀಗೆ ಅನೇಕ ರೈತರು ಈ ರೋಗದಿಂದಾದ ನಷ್ಟ ಭರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುರ್ತಾಗಿ ಆಗಬೇಕಿರುವುದೇನು? ವಿಸ್ತಾರ ಬೇಡಿಕೆ ಏನಿತ್ತು?

  1. ಎಲೆ ಚುಕ್ಕಿ ರೋಗ ಪೀಡಿತ ತೋಟಗಳ ಸಮೀಕ್ಷೆ ನಡೆಯಬೇಕು.
  2. ಅಗತ್ಯ ಇರುವ ರೈತರಿಗೆ ಪರಿಹಾರ ನೀಡಬೇಕು.
  3. ಸಲಹೆ ನೀಡಲಾಗಿರುವ ಔಷಧ ಸಿಂಪರಣೆಗೆ ಸರ್ಕಾರವೇ ನೆರವು ನೀಡಬೇಕು
  4. ಶೃಂಗೇರಿ ಮತ್ತು ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ವಿಜ್ಞಾನಿಗಳನ್ನು ನೇಮಿಸಬೇಕು.
  5. ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗಕ್ಕೆ ಪರಿಣಾಮಕಾರಿಯಾದ ಔಷಧ ಕಂಡು ಹಿಡಿಯುವಂತೆ ಅಗತ್ಯ ಎಲ್ಲ ಕ್ರಮ ತೆಗೆದುಕೊಳ್ಳಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ನಾನು ಹೊರಬಂದ್ರೆ ಸರ್ಕಾರ ಪತನ ಎಂದ ದೇವರಾಜೇಗೌಡ; ಹಾಗಾದ್ರೆ ಜೈಲಲ್ಲೇ ಇರ್ತಾರೆ ಎಂದ ಪರಮೇಶ್ವರ್‌

Prajwal Revanna Case: ಡಿಸಿಎಂ ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ ಆರೋಪಗಳ ಬಗ್ಗೆ ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Koo

ತುಮಕೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ಹಾಸನ ಪೆನ್‌ಡ್ರೈವ್‌ ಪ್ರಕರಣದ (Prajwal Revanna Case) ಹಿಂದಿನ ಮಾಸ್ಟರ್‌ ಮೈಂಡ್‌ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಪ್ರಕರಣದಲ್ಲಿ ಶಾಮೀಲಾಗಲು 100 ಕೋಟಿ ರೂ. ಆಫರ್‌ ನೀಡಿದ್ದರು ಎಂದು ಹೇಳಿದ್ದಾರೆ. ಇನ್ನು ನಾನು ಹೊರಗೆ ಬಂದರೆ ಸರ್ಕರ ಪತನವಾಗುತ್ತದೆ ಎಂಬ ದೇವರಾಜೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು, ಹಾಗಾದರೆ ಅವರು ಜೇಲಲ್ಲೇ ಇರಬೇಕಾಗುತ್ತೆ ಎಂದು ಹೇಳಿರುವುದು ಕಂಡುಬಂದಿದೆ.

ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ ಆರೋಪಗಳ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಆರೋಪಗಳ ಸಾಧಕ ಬಾಧಕಗಳನ್ನು ನೋಡಿ ಎಸ್‌ಐಟಿ ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ನಾನು ಹೊರಗೆ ಬಂದ್ರೆ ಸರ್ಕಾರ ಪತನ ಆಗುತ್ತೆ ಎಂಬ ದೇವರಾಜೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಹಾಗಾದ್ರೆ ಅವರು ಅಲ್ಲೇ ಇರಬೇಕಾಗುತ್ತೆ ಎಂದು ಮುಗುಳ್ನಗುವ ಮೂಲಕ ಪರೋಕ್ಷವಾಗಿ ಅವರು ಜೈಲಲ್ಲೇ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕ್ರೈಂ ರೇಟ್ ಹೆಚ್ಚಳ; ಉಡಾಫೆ ಉತ್ತರ ನೀಡಿದ ಗೃಹ ಸಚಿವ

ರಾಜ್ಯದಲ್ಲಿ ಕ್ರೈಂ ರೇಟ್ ಹೆಚ್ಚಳ ವಿಚಾರದ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಉಡಾಫೆ ಉತ್ತರ ನೀಡಿರುವುದು ಕಂಡುಬಂದಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ, ಒಂದೊಂದು ಘಟನೆಗೆ ಒಂದೊಂದು ಕಾರಣ ಇರುತ್ತೆ. ಜನರಲೈಸ್ ಮಾಡೊದಕ್ಕೆ ಆಗುತ್ತಾ? ಬಿಜೆಪಿ ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತ ಹೇಳಿದ್ಮೇಲೆ ಗೊತ್ತಾಗುತ್ತೆ. 2022-23 ರಲ್ಲಿ ಕ್ರೈಂ ರೇಟ್‌ ಎಷ್ಟಿತ್ತು? ನಾಲ್ಕು ತಿಂಗಳ ಬಗ್ಗೆ ಮಾತ್ರ ಹೇಳೊದು ಅಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ.

ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡಲ್ಲ. ಏನ್ ಕ್ರಮ ಬೇಕಾದರೂ ತೆಗೆದುಕೊಳ್ಳುತ್ತೇವೆ. ಬಿಜೆಪಿಯವರು ಎಷ್ಟೇ ಕಾನೂನು ವ್ಯವಸ್ಥೆ ಹಾಳು ಮಾಡಲು ಪ್ರಯತ್ನ ಮಾಡಿದ್ರು, ಕಂಟ್ರೋಲ್ ಮಾಡೋ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದ್ದಾರೆ.

ಹೇಮಾವತಿ ಲಿಂಕ್ ಕೆನಾಲ್ ವಿಚಾರ ಪ್ರತಿಕ್ರಿಯಿಸಿ, ಜಿಲ್ಲೆಗೆ ಕುಡಿಯುವ ನೀರಿಗಾಗಿ ಹೇಮಾವತಿ ನಾಲೆಯಿಂದ 24 ಟಿಎಂಸಿ ಹಂಚಿಕೆ ಆಗಿದೆ. ಆದರೆ ಎಂದೂ 18-19 ಟಿಎಂಸಿ ಮೇಲೆ ಹರಿದಿಲ್ಲ. ಹಾಸನ ಜಿಲ್ಲೆಯಿಂದ ನಮಗೆ 18-19 ಟಿಎಂಸಿ ಬಂದಿದೆ. ಇದು ಸೆಮಿಡ್ರೈವ್ ಕುಡಿಯುವ ನೀರಿಗೆ ಹಂಚಿಕೆ ಆದ ಯೋಜನೆ. ಕುಣಿಗಲ್ ಕೆರೆ, ಹೆಬ್ಬೂರು ಭಾಗಕ್ಕೆ ಇದೆ. ಈ‌ ಮಧ್ಯೆ ಸರ್ಕಾರದ ಮುಂದೆ ಗುಬ್ಬಿ ಬಳಿ 70 ಕಿಲೋ ಮೀಟರ್‌ನಿಂದ ಕುಣಿಗಲ್‌ಗೆ ನೇರವಾಗಿ ತೆಗೆದುಕೊಂಡು ಹೋಗುವ ಬಗ್ಗೆ ಪ್ರಸ್ತಾವನೆ ಬಂದಿದೆ. ಯೋಜನೆಗೆ ಪರ-ವಿರೋಧ ವ್ಯಕ್ತವಾಗಿದೆ. ಈ ಬಾರಿ ಸರ್ಕಾರ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ, 1000 ಕೋಟಿ ಕೊಟ್ಟಿದೆ. ಇದು ಸರ್ಕಾರದ ತೀರ್ಮಾನ, ಎಕ್ಸ್ ಪ್ರೆಸ್ ಕೆನಾಲ್ ತೀರ್ಮಾನ ಮಾಡಿದೆ, ಇಲಾಖೆ ಟೆಂಡರ್ ಕರೆದು ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ | DK Shivakumar: ದೇವರಾಜೇಗೌಡ ಮೆಂಟಲ್‌ ಕೇಸ್‌; 100 ಕೋಟಿ ರೂ. ಆಫರ್‌ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ

ಗುಬ್ಬಿ, ತುರುವೇಕೆರೆ ಭಾಗದ ರೈತರಿಗೆ ತೊಂದರೆ ಆಗಲಿದೆ ಅಂತ ಹೇಳಿದ್ದಾರೆ. ನಮಗೆ ನೀರು ಸರಿಯಾಗಿ ಸಿಗಲ್ಲ ಅಂತ ಹೇಳಿದ್ದಾರೆ. ನನಗೂ ಮನವಿ ಕೊಟ್ಟಿದ್ದಾರೆ. ಕ್ಯಾಬಿನೆಟ್‌ನಲ್ಲಿ ನಾನು, ರಾಜಣ್ಣ ತೊಂದರೆ ಆಗುತ್ತೆ ಅಂತ ವ್ಯಕ್ತಪಡಿಸಿದ್ದೇವೆ. ಕ್ಯಾಬಿನೆಟ್ ನಮ್ಮ ಇಬ್ಬರದ್ದೆ ಅಲ್ಲ, ರೈತರು ಕೆಲಸ ನಿಲ್ಲಿಸಿ ತಡೆದಿದ್ದಾರೆ. ಅದನ್ನು ಸರ್ಕಾರಕ್ಕೆ ಕಳಿಸುವ ಕೆಲಸ ಮಾಡುತ್ತಾರೆ. ನಾವು ಕೂಡ ಸಿಎಂ ಜತೆ ಮಾತನಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಎಲ್ಲದ್ದಕ್ಕೂ ಪರ ವಿರೋಧ ಇರುತ್ತೆ, ವಿಪಕ್ಷಗಳು ರಾಜಕೀಯ ಮಾಡುತ್ತಾರೆ. ಸಿಎಂ, ಡಿಸಿಎಂ ಜತೆ ಮಾತನಾಡಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದರು.

Continue Reading

ಕ್ರೈಂ

Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್‌

Murder case : ಬೆಂಗಳೂರಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲುಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಗದಗನಲ್ಲಿ ಗ್ರಾ.ಪಂ ಸದಸ್ಯನ ಮನೆ ಮೇಲೆ ದಾಳಿ (assault Case) ಮಾಡಲಾಗಿದೆ. ಉಡುಪಿಯಲ್ಲಿ ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

VISTARANEWS.COM


on

By

murder case
Koo

ಬೆಂಗಳೂರು/ಗದಗ/ಉಡುಪಿ: ಬೆಂಗಳೂರಿನ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ವ್ಯಕ್ತಿ ತಲೆ ಮೇಲೆ ಕಲ್ಲೆಸೆದು ಭೀಕರವಾಗಿ ಕೊಲೆ (Murder case) ಮಾಡಲಾಗಿದೆ. ನೇಪಾಳ ಮೂಲದ ಗಜೇಂದ್ರ ಸಿಂಗ್ ಕೊಲೆಯಾದವನು

ಕಳೆದ ಮೂರು ವರ್ಷದ ಹಿಂದೆ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಗಜೇಂದ್ರ ಸಿಂಗ್, ಯಲಹಂಕದ ತಿರುಪತಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಜತೆ ಬಾರ್‌ಗೆ ಹೋಗಿದ್ದ.

ಇಬ್ಬರು ಕಂಠಪೂರ್ತಿ ಕುಡಿದು ಮನೆಗೆ ಹೋಗುವಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗಿ ಗಜೇಂದ್ರ ಸಿಂಗ್ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಿ ಸಂತೋಷ್‌ ಎಸ್ಕೇಪ್‌ ಆಗಿದ್ದಾನೆ. ಘಟನೆ ಸಂಬಂದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೃತದೇಹವನ್ನು ಯಲಹಂಕ ‌ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

ಸೇಡಿಗಾಗಾಗಿ ಗ್ರಾಪಂ ಸದಸ್ಯನ ಮನೆ ಮೇಲೆ ದಾಳಿ

ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಸೇಡು ತೀರಿಸಿಕೊಳ್ಳಲು ರಾತ್ರೋರಾತ್ರಿ ಗ್ರಾಮ ಪಂಚಾಯಿತಿ ಸದಸ್ಯನ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇ 8ರ ಮಧ್ಯರಾತ್ರಿ ಘಟನೆ ನಡೆದಿದೆ.

ಗ್ರಾಮ ಪಂಚಾಯಿತಿ ಸದಸ್ಯ ಮಿಲಿಂದ್ ಕಾಳೆ ಮನೆ ಮೇಲೆ ದಾಳಿ ಮಾಡಲಾಗಿದೆ. ಘಟನೆಯ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಂಡ್ ಫ್ಯಾನ್ ವ್ಯವಹಾರವಾಗಿ ಮಿಲಿಂದ್ ಕಾಳೆ, ಪ್ರಕಾಶ್ ನಿಡಗುಂದಿ ಮಧ್ಯದ ಮುನಿಸಿನಿಂದ ಗಲಾಟೆ ನಡೆದಿದೆ ಎನ್ನಲಾಗಿದೆ. ಮಿಲಿಂದ್ ಕಾಳೆ ಮೇಲಿನ ಸೇಡಿಗಾಗಿ ಲಾಂಗ್, ಮಚ್ಚು, ರಾಡ್‌, ಕಲ್ಲುಗಳಿಂದ ದಾಳಿ ನಡೆಸಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗದಗ ಗ್ರಾಮೀಣ ಠಾಣೆಯಲ್ಲಿ ಸುಮಾರು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಹಲವರನ್ನು ಬಂಧಿಸಿದ್ದು, ಪರಾರಿ ಆಗಿರುವ ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಪ್ರಕರಣದ ಬೆನ್ನಲ್ಲೇ ಮೇ 9ರ ಮಧ್ಯಾಹ್ನ ಆರೋಪಿ ಪ್ರಕಾಶ್ ನಿಡಗುಂದಿ ಕಾರಿಗೆ ಬೆಂಕಿ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ. ಮಿಲಿಂದ್ ಕಾಳೆ ಮನೆ ಮೇಲೆ ದಾಳಿಯ ರಿವೇಂಜ್‌ಗೆ ಪ್ರಕಾಶ್‌ ನಿಡಗುಂದಿ ಕಾರಿಗೆ ಮಿಲಿಂದ ಕಾಳೆ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ. ಎರಡೂ ಬಣದಿಂದ ಹಲವರನ್ನು ಬಂಧಿಸಲಾಗಿದೆ. ಎರಡು ಕಡೆಯಿಂದಲ್ಲೂ ಪ್ರತ್ಯೇಕ ದೂರು ದಾಖಲಾಗಿದೆ.

ಉಡುಪಿಯಲ್ಲಿ ಪೆಟ್ರೋಲ್‌ ವಿಚಾರಕ್ಕೆ ಕಿರಿಕ್‌

ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಡೆದಿದೆ. ಎರಡು ಬೈಕ್‌ಗಳಲ್ಲಿ ಮಧ್ಯರಾತ್ರಿ ಬಂದ ಯುವಕರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದಾರೆ. ಪೆಟ್ರೋಲ್ ಹಾಕಲು ಹೇಳಿದಾಗ ಸಿಬ್ಬಂದಿ ಬಂದ್ ಆಗಿದೆ ಎಂದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರದೀಪ್ ಕುಮಾರ್ (26) ಹಲ್ಲೆಗೊಳಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಉತ್ತರ ಪ್ರದೇಶದ ಮಹಿಳೆ ಮೇಲೆ ಕರ್ನಾಟಕದ ವ್ಯಕ್ತಿ ಅತ್ಯಾಚಾರ; ಆಕೆಯ ಮತಾಂತರಕ್ಕೂ ಯತ್ನ!

ಬಹ್ರೇನ್‌ನಲ್ಲಿ ಸೈಫುದ್ದೀನ್‌ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅತ್ಯಾಚಾರದ ಬಳಿಕ ನಾನು ಗರ್ಭಿಣಿಯಾದೆ. ಗರ್ಭಪಾತ ಮಾಡಿಸಿಕೊ ಎಂದು ಪೀಡಿಸುವ ಜತೆಗೆ ಇಸ್ಲಾಂಗೆ ಮತಾಂತರವಾಗು ಎಂಬುದಾಗಿಯೂ ಒತ್ತಾಯ ಮಾಡಿದ. ಕೊನೆಗೆ ಆತನ ಕಿರುಕುಳ ತಾಳದೆ ಉತ್ತರ ಪ್ರದೇಶಕ್ಕೆ ಆಗಮಿಸಿದೆ ಎಂದು ಉತ್ತರ ಪ್ರದೇಶದ ಮಹಿಳೆ ದೂರಿದ್ದಾರೆ.

VISTARANEWS.COM


on

Woman
Koo

ಲಖನೌ: ಕರ್ನಾಟಕದ (Karnataka) ವ್ಯಕ್ತಿಯೊಬ್ಬ ಉತ್ತರ ಪ್ರದೇಶದ (Uttar Pradesh) ಮಹಿಳೆ ಮೇಲೆ ಬಹ್ರೇನ್‌ನಲ್ಲಿ ಅತ್ಯಾಚಾರ ಎಸಗಿ, ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಬಹ್ರೇನ್‌ನಿಂದ (Bahrain) ಉತ್ತರ ಪ್ರದೇಶದ ಲಖನೌಗೆ ಆಗಮಿಸಿದ ಮಹಿಳೆಯು ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

“ಬಹ್ರೇನ್‌ನಲ್ಲಿ ಸೈಫುದ್ದೀನ್‌ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅತ್ಯಾಚಾರದ ಬಳಿಕ ನಾನು ಗರ್ಭಿಣಿಯಾದೆ. ಗರ್ಭಪಾತ ಮಾಡಿಸಿಕೊ ಎಂದು ಪೀಡಿಸುವ ಜತೆಗೆ ಇಸ್ಲಾಂಗೆ ಮತಾಂತರವಾಗು ಎಂಬುದಾಗಿಯೂ ಒತ್ತಾಯ ಮಾಡಿದ. ಕೊನೆಗೆ ಆತನ ಕಿರುಕುಳ ತಾಳದೆ ಉತ್ತರ ಪ್ರದೇಶಕ್ಕೆ ಆಗಮಿಸಿದೆ” ಎಂಬುದಾಗಿ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೈಫುದ್ದೀನ್‌, ಕರ್ನಾಟಕದ ಬೀದರ್‌ ಜಿಲ್ಲೆಯವನಾಗಿದ್ದು, ಬಹ್ರೇನ್‌ನಲ್ಲಿ ವಾಸಿಸುತ್ತಿದ್ದಾನೆ. ಈತನಿಗೆ ಈಗಾಗಲೇ ಹುಡುಗಿ ನಿಶ್ಚಯವಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

Uttar Pradesh Police

ಬಹ್ರೇನ್‌ನಲ್ಲಿ ಮಹಿಳೆಯು ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಬಹ್ರೇನ್‌ನಲ್ಲಿದ್ದಾಗ ಕರ್ನಾಟಕ ಮೂಲದ ಸೈಫುದ್ದೀನ್‌ನನ್ನು ಮಹಿಳೆ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯದ ಸಲುಗೆಯನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಮಹಿಳೆಯು ಐದು ತಿಂಗಳ ಗರ್ಭಿಣಿ ಎಂಬುದನ್ನು ತಿಳಿದು, ಗರ್ಭಪಾತ ಮಾಡಿಸಿಕೊ ಎಂಬುದಾಗಿ ಕಿರುಕುಳ ನೀಡಿದ್ದಾನೆ. ಇಸ್ಲಾಂ ಧರ್ಮಕ್ಕೂ ಮತಾಂತರವಾಗು ಎಂದು ಪೀಡಿಸಿದ್ದಾನೆ ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ.

“ನನ್ನ ಮೇಲೆ ಅತ್ಯಾಚಾರ ಎಸಗಿದ ಸೈಫುದ್ದೀನ್‌ ವಿರುದ್ಧ ಬಹ್ರೇನ್‌ನಲ್ಲಿಯೇ ಕೇಸ್‌ ದಾಖಲಿಸಿದ್ದೇನೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾನು ನೀಡಿದ ದೂರು ಹಿಂಪಡೆಯುವಂತೆ ಸೈಫುದ್ದೀನ್‌ ಕುಟುಂಬಸ್ಥರು ಕಿರುಕುಳ ನೀಡಿದರು. ನಾನು ಐದು ತಿಂಗಳ ಗರ್ಭಿಣಿಯಾಗಿದ್ದಾಗ ಮೋಸ ಮಾಡಿದರು. ನಾನು 2024ರ ಫೆಬ್ರವರಿ 13ರಂದು ಮದುವೆಯಾದ. ಇಸ್ಲಾಂ ಕಾನೂನಿನಂತೆ ಮದುವೆ ಮಾಡಲಾಯಿತು. ಇದಾದ ಬಳಿಕ ನನ್ನನ್ನು ಮತಾಂತರ ಮಾಡಲು ಯತ್ನಿಸಿದರು. ಅಲ್ಲದೆ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊ ಎಂಬುದಾಗಿ ಮುಂಬೈಗೆ ಕಳುಹಿಸಿದರು. ಆದರೆ, ವೈದ್ಯರು ನನಗೆ ಗೊತ್ತಿಲ್ಲದೆ ಗರ್ಭಪಾತ ಮಾಡಿದರು” ಎಂಬುದಾಗಿ ಮಹಿಳೆ ಹೇಳಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Continue Reading

ಬೆಂಗಳೂರು

DK Shivakumar: ದೇವರಾಜೇಗೌಡ ಮೆಂಟಲ್‌ ಕೇಸ್‌; 100 ಕೋಟಿ ರೂ. ಆಫರ್‌ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ

DK Shivakumar: ತಮಗೆ 100 ಕೋಟಿ ರೂಪಾಯಿ ಆಫರ್‌ ನೀಡಿದ್ದಾರೆ ಎಂಬ ವಕೀಲ ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಮೆಂಟಲ್ ಕೇಸ್ ಅವನು. ಆತ ಏನು ಮಾತನಾಡುತ್ತಾನೋ, ಮಾತನಾಡಲಿ. ಏನು ಮಾಡುತ್ತಾನೋ ಮಾಡಲಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ನಾನು ಆಫರ್ ಮಾಡಿದರೆ ದೇವರಾಜೇಗೌಡ ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ ಎಂದು ಸವಾಲು ಹಾಕಿದ್ದಾರೆ.

VISTARANEWS.COM


on

DevarajeGowda mental case Rs 100 crore If offered he should file a complaint with Lokayukta says DK Shivakumar
Koo

ಹಾಸನ: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರವಾಗಿರಲು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ತಮಗೆ 100 ಕೋಟಿ ರೂಪಾಯಿ ಆಫರ್‌ ನೀಡಿದ್ದಾರೆ ಎಂಬ ವಕೀಲ ದೇವರಾಜೇಗೌಡ (Devarajegowda) ಆರೋಪಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಮೆಂಟಲ್ ಕೇಸ್ ಅವನು. ಆತ ಏನು ಮಾತನಾಡುತ್ತಾನೋ, ಮಾತನಾಡಲಿ. ಏನು ಮಾಡುತ್ತಾನೋ ಮಾಡಲಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ನಾನು ಆಫರ್ ಮಾಡಿದರೆ ದೇವರಾಜೇಗೌಡ ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನೀವು ಬುದ್ಧಿವಂತರು, ಜಾಣರಿದ್ದೀರಿ. ಆ ದೇವರಾಜೇಗೌಡನಂಥವರು ಯಾರೋ ಏನೋ ಹೇಳುತ್ತಾರೆಂದರೆ ಅದನ್ನು ಹಾಕಿಬಿಡುವುದಾ? ನಮಗೆ ರೆಪ್ಯುಟೇಷನ್ ಇದೆ. ಏನಾದರೂ ಆಧಾರ ಇದ್ದರೆ ಹಾಕಬೇಕು. ತಲೆ ಕೆಟ್ಟ, ಆಸ್ಪತ್ರೆಗೆ ಸೇರಬೇಕಾದವರ ಬಗ್ಗೆ ಮಾತನಾಡುತ್ತೀರಾ ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು.

ನಾನು ಆಫರ್ ಮಾಡಿದರೆ ದೇವರಾಜೇಗೌಡ ಅವರು ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ. ಎಲ್ಲ ಪೆನ್ ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ಸಂತ್ರಸ್ತೆಯರ ಬಗ್ಗೆ ಯಾರೂ ಏನೂ ಮಾತನಾಡುತ್ತಿಲ್ಲ ಏಕೆ? ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಮಾತನಾಡಲ್ಲ ಎಂದು ಡಿ.ಕೆ. ಶಿವಕುಮಾರ್‌ ಗರಂ ಆಗಿಯೇ ಹೇಳಿದರು.

ನನ್ನ ಹೆಸರನ್ನು ಕೆಲವರು ಉಪಯೋಗಿಸಿಕೊಳ್ಳುತ್ತಾರೆ‌. ನೀವು ನನ್ನ ಹೆಸರು ಬಳಸಿಕೊಳ್ಳುತ್ತೀರಾ? ನನ್ನ ಹೆಸರು ಬಳಸಿಕೊಂಡರೆ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ 93ನೇ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿದ್ದಾರೆ, ಇದು ಬಹಳ ಒಳ್ಳೆಯದು. ಅವರ ಹುಟ್ಟುಹಬ್ಬ, ಸಂತೋಷ ಕೊಡಲಿ, ದುಃಖವನ್ನು ದೂರ ಮಾಡಲಿ. ಆರೋಗ್ಯ ಆಯಸ್ಸನ್ನು ದೇವರು‌ ಕರುಣಿಸಲಿ ಎಂದು ನಮ್ಮ ಸರ್ಕಾರದ ಪರವಾಗಿ ಹಾರೈಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಅಲ್ಲೋಲ ಕಲ್ಲೋಲ ಸೃಷ್ಟಿಸಿದ ದೇವರಾಜೇಗೌಡ ಬಾಂಬ್‌

ಹಾಸನ ಜೆಎಂಎಫ್‌ಸಿ ಕೋರ್ಟ್‌ ಹೊರಗೆ ಪೊಲೀಸ್‌ ವ್ಯಾನ್‌ನೊಳಗಿದ್ದ ವಕೀಲ ದೇವರಾಜೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜತೆಗೆ ಮಾತನಾಡಿದ್ದಲ್ಲ ಎಂದು ಡಿ.ಕೆ. ಶಿವಕುಮಾರ್‌ ಶುಕ್ರವಾರ ಹೇಳಿದ್ದರು.

ನಾಲ್ಕು ಜನ ಮಂತ್ರಿಗಳ ಕಮಿಟಿ ಎಂದು ನಾನು ಹೇಳಿದ್ದೆನಲ್ಲವೇ? ಅವರ ಬಗ್ಗೆ ಹೇಳುತ್ತೇನೆ. ಎನ್‌. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಇನ್ನೊಬ್ಬ ಸಚಿವರನ್ನು ಈ ಪ್ರಕರಣವನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದಾರೆ. ಈಗ ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಆದರೆ, ಅದ್ಯಾವುದಕ್ಕೂ ನಾನು ಒಪ್ಪಲಿಲ್ಲ ಎಂದು ದೇವರಾಜೇಗೌಡ ಹೇಳಿದ್ದರು.

ಇಷ್ಟೆಲ್ಲ ದೊಡ್ಡ ಹಗರಣವಾಗಿರುವುದರಿಂದ ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ಹೋಗಿದ್ದರು. ನಮಗೆ ಸುಮಾರು 100 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ಅದರಲ್ಲಿ 5 ಕೋಟಿ ರೂಪಾಯಿ ಅಡ್ವಾನ್ಸ್ ಅನ್ನು ಬೋರಿಂಗ್ ಕ್ಲಬ್‌ನ ರೂಂ ನಂಬರ್ 110ಕ್ಕೆ ಕಳಿಸಿದ್ದರು. ಆ ಮೀಟಿಂಗ್‌ಗೆ ಚನ್ನರಾಯಪಟ್ಟಣದ ಎಂ.ಎ. ಗೋಪಾಲಸ್ವಾಮಿಯನ್ನು ಕಳಿಸಿದ್ದರು. ಐದು ಕೋಟಿ ರೂಪಾಯಿ ಕ್ಯಾಶ್‌ ಅನ್ನೂ ಕೊಟ್ಟು ಕಳಿಸಿದ್ದರು. ಈ 100 ಕೋಟಿ ರೂಪಾಯಿ ಆಫರ್ ಮಾಡಿದ್ದು ಡಿ.ಕೆ. ಶಿವಕುಮಾರ್ ಎಂದು ದೇವರಾಜೇಗೌಡ ಆರೋಪಿಸಿದ್ದರು.

ಒಪ್ಪದೇ ಇದ್ದಾಗ ಅಟ್ರಾಸಿಟಿ ಕೇಸ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಂಕ ತರಬೇಕು. ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ನನ್ನನ್ನು ಬಳಸಿಕೊಳ್ಳಲು ನೋಡಿದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ದಾಖಲು ಮಾಡಿದರು. ಅದರಲ್ಲಿ ಡಾಕ್ಯುಮೆಂಟ್ ಸಿಗಲಿಲ್ಲ ಎಂದು ದೇವರಾಜೇಗೌಡ ಹೇಳಿದ್ದರು.

ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌; ರೇವಣ್ಣ ವಿರುದ್ಧ ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!

ನನ್ನ ಮೇಲೆ ಸುಳ್ಳು ಕೇಸ್‌

ನನ್ನ ಮೇಲೆ ಹಾಕಲಾದ ಅಟ್ರಾಸಿಟಿ ಕೇಸ್‌ನಲ್ಲಿ ಯಾವುದೇ ಪ್ರಯೋಜನ ಆಗಿಲ್ಲವೆಂದು ಮತ್ತೊಬ್ಬಳ ಕೈಯಲ್ಲಿ 354a ಕೇಸ್ ಹಾಕಿಸಿದರು. ಅದೂ ವಿಫಲವಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಈ ಅತ್ಯಾಚಾರ ಪ್ರಕರಣದಲ್ಲಿಯೂ ಅವರಿಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಪೆನ್‌ಡ್ರೈವ್‌ ಸಿಕ್ಕಿದ್ದನ್ನು ಕೋರ್ಟ್‌ನಲ್ಲಿ ಸೀಜ್‌ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದರು.

Continue Reading
Advertisement
T20 World Cup 2024
ಕ್ರೀಡೆ58 seconds ago

T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

Cannes 2024 Indian influencer who stitched a 20 kg dress
ಬಾಲಿವುಡ್6 mins ago

Cannes 2024: 20 ಕೆಜಿ ತೂಕದ ಗೌನ್ ಧರಿಸಿ ಬೆರಗುಗೊಳಿಸಿದ ನ್ಯಾನ್ಸಿ ತ್ಯಾಗಿ!

ಕರ್ನಾಟಕ8 mins ago

Prajwal Revanna Case: ನಾನು ಹೊರಬಂದ್ರೆ ಸರ್ಕಾರ ಪತನ ಎಂದ ದೇವರಾಜೇಗೌಡ; ಹಾಗಾದ್ರೆ ಜೈಲಲ್ಲೇ ಇರ್ತಾರೆ ಎಂದ ಪರಮೇಶ್ವರ್‌

Woman
ದೇಶ9 mins ago

ಪತ್ನಿಯ ಶೀಲ ಶಂಕಿಸಿ, ಆಕೆಯ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕಿದ ದುಷ್ಟ; ಏನು ಮಾಡಬೇಕು ಇಂಥವರಿಗೆ?

murder case
ಕ್ರೈಂ12 mins ago

Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್‌

Pavitra Jayaram Relationship With Chandu Shilpa Prema statement
ಕಿರುತೆರೆ38 mins ago

Pavithra Jayaram: ನನ್ನ ಗಂಡನಿಗೂ ಪವಿತ್ರಾಗೂ ‘ಸಂಬಂಧ’ ಇದ್ದದ್ದು ನಿಜ ಎಂದ ಚಂದ್ರಕಾಂತ್‌ ಪತ್ನಿ!

Money Guide
ಮನಿ-ಗೈಡ್40 mins ago

Ration Card: ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ? ಇಲ್ಲಿದೆ ಸಂಪೂರ್ಣ ವಿವರ

T20 World Cup 2024
ಕ್ರೀಡೆ43 mins ago

T20 World Cup 2024: ಮೇ 25ಕ್ಕೆ ನ್ಯೂಯಾರ್ಕ್​ಗೆ ತೆರಳಲಿದೆ ಟೀಮ್ ಇಂಡಿಯಾದ ಮೊದಲ ಬ್ಯಾಚ್​

Mallikarjun Kharge
Lok Sabha Election 202445 mins ago

Mallikarjun Kharge: ಬುಲ್ಡೋಜರ್‌ ಹೇಳಿಕೆ ನೀಡಿದ ಮೋದಿ ವಿರುದ್ಧ ಕ್ರಮ ಕೈಗೊಳ್ಳಿ; ಚುನಾವಣಾ ಆಯೋಗಕ್ಕೆ ಖರ್ಗೆ

Woman
ದೇಶ48 mins ago

ಉತ್ತರ ಪ್ರದೇಶದ ಮಹಿಳೆ ಮೇಲೆ ಕರ್ನಾಟಕದ ವ್ಯಕ್ತಿ ಅತ್ಯಾಚಾರ; ಆಕೆಯ ಮತಾಂತರಕ್ಕೂ ಯತ್ನ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ21 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌