Lakme Fashion Week Celebrities | ಲ್ಯಾಕ್ಮೆ ಫ್ಯಾಷನ್‌ ವೀಕ್‌ ರ್‍ಯಾಂಪ್‌ ಸೀರೀಸ್‌ನಲ್ಲಿ ಸೆಲೆಬ್ರಿಟಿಗಳ ಆಕರ್ಷಕ ಕ್ಯಾಟ್‌ವಾಕ್‌ - Vistara News

ಫ್ಯಾಷನ್

Lakme Fashion Week Celebrities | ಲ್ಯಾಕ್ಮೆ ಫ್ಯಾಷನ್‌ ವೀಕ್‌ ರ್‍ಯಾಂಪ್‌ ಸೀರೀಸ್‌ನಲ್ಲಿ ಸೆಲೆಬ್ರಿಟಿಗಳ ಆಕರ್ಷಕ ಕ್ಯಾಟ್‌ವಾಕ್‌

ಪ್ರತಿಷ್ಠಿತ ಲ್ಯಾಕ್ಮೆ ಫ್ಯಾಷನ್‌ ವೀಕ್‌ನ (Lakme Fashion Week Celebrities) ಮೊದಲ ಹಾಗೂ ಎರಡನೇ ದಿನದಂದು ಸೆಲೆಬ್ರಿಟಿ ಡಿಸೈನರ್‌ಗಳ ಎಕ್ಸ್‌ಕ್ಲೂಸಿವ್‌ ಡಿಸೈನರ್‌ವೇರ್‌ಗಳಲ್ಲಿ ಬಾಲಿವುಡ್‌ ತಾರೆಯರು ಕ್ಯಾಟ್‌ವಾಕ್‌ ಮಾಡಿದರು. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Lakme Fashion Week Celebrities
ಟೀಮ್‌ನೊಂದಿಗೆ ಚಿತ್ರಂಗದಾ ಸಿಂಗ್‌, ನಟಿ (ಲ್ಯಾಕ್ಮೆ ಫ್ಯಾಷನ್‌ ವೀಕ್‌ ಇನ್ಸ್ಟಾ ಖಾತೆ)
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ (Lakme Fashion Week Celebrities) ಮಲೈಕಾ ಅರೋರಾ, ಚತ್ರಾಂಗದಾ ಸಿಂಗ್‌, ಕಲ್ಕಿ, ರಿಯಾ ಚಕ್ರವರ್ತಿ ಸೇರಿದಂತೆ ನಾನಾ ಸೆಲೆಬ್ರಿಟಿಗಳು ಭಿನ್ನ-ವಿಭಿನ್ನ ಡಿಸೈನರ್‌ ವೇರ್‌ಗಳಲ್ಲಿ ಕಾಣಿಸಿಕೊಂಡು ಕ್ಯಾಟ್‌ವಾಕ್‌ ಮಾಡಿದರು. ಮೊದಲ ದಿನದಿಂದಲೂ ಭಿನ್ನ ವಿಭಿನ್ನವಾಗಿ ನಡೆಯುತ್ತಿರುವ ಈ ಫ್ಯಾಷನ್‌ ವೀಕ್‌ನಲ್ಲಿ ಈ ಬಾರಿ ಸೆಲೆಬ್ರಿಟಿ ಡಿಸೈನರ್‌ವೇರ್‌ಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿತ್ತು.

ಸಿಲ್ಲೋಟ್ಸ್‌ನಲ್ಲಿ ಮಲೈಕಾ ಅರೋರಾ ವಾಕ್‌
ಲಿಮೆರಿಕ್‌ ಲೆಬೆಲ್‌ನ ಬ್ಲ್ಯೂ ತ್ರೀ ಪೀಸ್‌ನ ಕೇಪ್‌ನಂತೆ ಕಾಣುವ ಡಿಸೈನರ್‌ವೇರ್‌ ಧರಿಸಿದ್ದ ಮಲೈಕಾ ಅರೋರಾ ರ್‍ಯಾಂಪ್‌ ಮೇಲೆ ವಾಕ್‌ ಮಾಡಿ, ಪ್ರೇಕ್ಷಕರ ಮನ ಸೆಳೆದರು. ತಮ್ಮ ಮನೋಭಿಲಾಷೆಗೆ ತಕ್ಕಂತಿರುವ ಈ ಉಡುಪು ತಮ್ಮ ಐಡೆಂಟಿಟಿಯ ಪ್ರತೀಕ ಎಂದು ಹೇಳಿಕೊಂಡರು.

Lakme Fashion Week Celebrities
ಮಲೈಕಾ ಅರೋರಾ, ನಟಿ

ಅಫ್ರಿಕನ್‌ ರ್‍ಯಾಂಪ್‌ ಸಿಟಿ ಕಲೆಕ್ಷನ್‌ನಲ್ಲಿ ಚಿತ್ರಂಗದಾ ಸಿಂಗ್‌
ಇಶಾಮಿನ್‌ ಲೆಬೆಲ್‌ನ ವಿಭಿನ್ನ ಡಿಸೈನರ್‌ವೇರ್‌ ಆಫ್ರಿಕನ್‌ ರ್‍ಯಾಂಪ್‌ ಸಿಟಿ ಕಲೆಕ್ಷನ್‌ ಎಂದೇ ಕರೆಯಲಾಗುವ ಡಿಸೈನರ್‌ವೇರ್‌ನಲ್ಲಿ ನಟಿ ಚಿತ್ರಂಗದಾ ಸಿಂಗ್‌ ವಾಕ್‌ ಮಾಡಿದರು. ಅವರ ವಿಭಿನ್ನ ಹೇರ್‌ಸ್ಟೈಲ್‌ ಲುಕ್‌ಗೆ ಹೊಸತನ ನೀಡಿತ್ತು.

ಇದನ್ನೂ ಓದಿ | Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ

ರೆಸಾರ್ಟ್‌ವೇರ್‌ನಲ್ಲಿ ರಿಯಾ ಚರ್ಕವರ್ತಿ
ಕ್ವಾಪಾ ರೆಸಾರ್ಟ್‌ವೇರ್‌ ಡಿಸೈನರ್‌ವೇರ್‌ನಲ್ಲಿ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡ ರಿಯಾ ಚರ್ಕವರ್ತಿಯ ಮೇಕಪ್‌ ರೆಸಾರ್ಟ್ವೇರ್‌ಗೆ ಡಿಫರೆಂಟ್‌ ಲುಕ್‌ ನೀಡಿತ್ತು.

Lakme Fashion Week Celebrities
ರಿಯಾ ಚರ್ಕವರ್ತಿ, ನಟಿ

ಕಲ್ಕಿಯ ವಿಭಿನ್ನ ಅವತಾರ
ಡಿಸೈನರ್‌ ಅಭಿಷೇಕ್‌ ಶರ್ಮಾ ಅವರ ಚಿತ್ರ-ವಿಚಿತ್ರ ಟ್ರಾಪಿಕಲ್‌ ಪ್ಯಾಚ್‌ ವರ್ಕ್‌ನಂತೆ ಕಾಣುತ್ತಿದ್ದ ಪ್ರಿಂಝ್‌ ಸ್ಲಿಟ್‌ ಗೌನ್‌ನಂತೆ ಕಾಣುತ್ತಿದ್ದ ಉಡುಪು ಧರಿಸಿ ಕಲ್ಕಿಕೊಹ್ಲೀನ್‌ ವಾಕ್‌ ಮಾಡಿದರು.

ಇನ್ನು ಡಿಸೈನರ್‌ ಅಂಜು ಮೋದಿಯವರ ಟೆನ್ಸಿಲ್‌ ಕಲೆಕ್ಷನ್‌ನಲ್ಲಿ ನಟಿ ಸಂಜನಾ ಸಾಂಘ್ವಿ ಎಥ್ನಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಡಿಸೈನರ್‌ ಶಂತನು ನಿಖಿಲ್‌ ಅವರ ಲೆಬೆಲ್‌ಗಾಗಿ ನಟಿ ಕೃತಿ ಸನೂನ್‌ ಮೊದಲ ದಿನವೇ ವಾಕ್‌ ಮಾಡಿದ್ದರು. ನಟಿ ಮೃಣಾಲ್‌ ಠಾಕೂರ್‌ ಕೂಡ ಡಿಸೈನರ್‌ ಮಿಶ್ರು ಅವರ ರಾಣಿ ಪಿಂಕ್‌ ತ್ರೀ ಪೀಸ್‌ ಫ್ಲೋರಲ್‌ ಎಂಬೋಸಿಂಗ್‌ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದರು. ನಟಿ ಗೌಹರ್‌ ಖಾನ್‌ ಹಾಗೂ ವಿಜಯ್‌ ವರ್ಮಾ ಕೂಡ ಶೋ ಸ್ಟಾಪರ್‌ಗಳಾಗಿ ಎಲ್ಲರ ಮನ ಸೆಳೆದರು.

Lakme Fashion Week Celebrities
ಕಲ್ಕಿ ಕೊಚ್ಲಿನ್‌, ನಟಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Weekend style | ಆತ್ಮವಿಶ್ವಾಸವೇ ನನ್ನ ಫ್ಯಾಷನ್‌ ಎನ್ನುವ ಸುಮನಾ ಗೌಡ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Designer Hairpins Fashion: ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್‌ ಲುಕ್‌ ನೀಡುವಂತಹ ವೆರೈಟಿ ವಿನ್ಯಾಸದ ಡಿಸೈನರ್‌ ಹೇರ್‌ಪಿನ್‌ಗಳು ಆಗಮಿಸಿವೆ. ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲನ್ನು ಅಂದಗಾಣಿಸುವ ಇವು ಯಾವ್ಯಾವ ಬಗೆಯಲ್ಲಿ ಲಭ್ಯ? ಯಾವ ಕೂದಲಿಗೆ ಯಾವುದು? ಎಂಬುದರ ಬಗ್ಗೆ ಹೇರ್‌ಸ್ಟೈಲಿಸ್ಟ್ಗಳು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Designer Hairpins Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವಂತಹ ವೆರೈಟಿ ಡಿಸೈನರ್‌ ಹೇರ್‌ಪಿನ್‌ಗಳು (Designer Hairpins Fashion) ಟ್ರೆಂಡಿಯಾಗಿವೆ. ಸಿಂಪಲ್‌ ಪರ್ಲ್ ಡಿಸೈನ್‌ನಿಂದಿಡಿದು ಸ್ಟೋನ್‌ನಿಂದ ಸಿಂಗಾರಗೊಂಡ ಮಲ್ಟಿ ಡಿಸೈನ್‌ನ ಹೇರ್‌ಪಿನ್‌ಗಳು ಹೇರ್‌ಸ್ಟೈಲ್‌ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಹೆಣ್ಣುಮಕ್ಕಳ ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ ಹೇರ್‌ಪಿನ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರೆಯುತ್ತಿವೆ. ಆಯಾ ಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಹುಡುಗಿಯರನ್ನು ಸಿಂಗರಿಸುತ್ತಿವೆ.

Designer Hairpins Fashion

ಡಿಸೈನರ್‌ ಹೇರ್‌ಪಿನ್ಸ್ ಲೋಕ

ಫ್ಯಾನ್ಸಿ ಶಾಪ್‌ಗಳಿಗೆ ಕಾಲಿಟ್ಟರೇ ಸಾಕು, ಊಹೆಗೂ ಮೀರಿದ ಡಿಸೈನ್‌ನ ಗ್ರ್ಯಾಂಡ್‌ ಲುಕ್‌ ನೀಡುವಂತಹ ಹಾಗೂ ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲ್‌ ಅಂದಗಾಣಿಸುವಂತಹ ಹೇರ್‌ಪಿನ್ಸ್ ಲಭ್ಯ. ಅವುಗಳಲ್ಲಿ ಕ್ಯಾಶುವಲ್‌ ಲುಕ್‌ ನೀಡುವಂತವು ಹಾಗೂ ಎಥ್ನಿಕ್‌ ಲುಕ್‌ ನೀಡುವಂತವು ಮತ್ತು ಪಾರ್ಟಿವೇರ್‌ ಹೇರ್‌ಪಿನ್ಸ್ ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

Designer Hairpins Fashion

ಬೀಡ್ಸ್ -ಪರ್ಲ್ ಹೇರ್‌ಪಿನ್ಸ್

ಕೃತಕ ಮುತ್ತುಗಳಿಂದ ಸಿಂಗರಿಸಿದ ಹೇರ್‌ಪಿನ್‌ಗಳು ಒಂದು ಲೈನ್‌ನಿಂದಿಡಿದು ನಾಲ್ಕೈದು ಸಾಲಿನಂತಿರುವ ಡಿಸೈನ್‌ನವು ಮಿಕ್ಸ್ ಮ್ಯಾಚ್‌ ಬೀಡ್ಸ್‌ನೊಂದಿಗೆ ಡಿಸೈನ್‌ ಮಾಡಿದವು ಯುವತಿಯರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೇರಿವೆ. ಇವು ಜಡೆ ಹೆಣೆದವರೂ ಕೂಡ ಧರಿಸಬಹುದು. ಫ್ರೀ ಕೂದಲಿನ ಹೇರ್‌ಸ್ಟೈಲ್‌ ಮಾಡುವವರೂ ಧರಿಸಬಹುದು.

Designer Hairpins Fashion

ಡಿಸೈನರ್‌ ಹೇರ್‌ಪಿನ್ಸ್

ಹೂ ಗುಚ್ಛಗಳಂತೆ ಕಾಣುವ ಪುಟ್ಟ ಬಾಚಣಿಗೆಯ ಹಲ್ಲುಗಳ ಮೇಲೆ ಜೋಡಿಸಿದಂತೆ ಕಾಣುವ ಕ್ರಿಸ್ಟಲ್‌, ಬೀಡ್ಸ್, ಪರ್ಲ್‌, ತಂತಿಗಳಿಂದಲೇ ಅಬ್‌ಸ್ಟ್ರಾಕ್ಟ್ ಡಿಸೈನ್‌ ಮಾಡಿರುವ ಹೇರ್‌ ಪಿನ್ಸ್, ಯು ಶೇಪ್‌ ಡಿಸೈನರ್‌ ಹೇರ್‌ಪಿನ್ಸ್ ಸೇರಿದಂತೆ ನಾನಾ ಬಗೆಯವು ಈ ಕೆಟಗರಿಯಲ್ಲಿ ಪ್ರಚಲಿತದಲ್ಲಿವೆ.

ಇದನ್ನೂ ಓದಿ: Printed Handbags F ashion: ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿರುವ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್

ಕೂದಲಿಗೆ ತಕ್ಕಂತೆ ಡಿಸೈನರ್‌ ಹೇರ್‌ಪಿನ್ಸ್ ಆಯ್ಕೆ

· ಸ್ಟ್ರೇಟ್ ಹೇರ್‌ ಇದ್ದವರು ತೀರಾ ಭಾರವಾದ ಡಿಸೈನರ್‌ ಹೇರ್‌ಪಿನ್ಸ್ ಧರಿಸುವುದು ಬೇಡ. ಧರಿಸಿದಾಗ ಜಾರಬಹುದು, ಇಲ್ಲವೇ ಕೂದಲು ಕಿತ್ತು ಬರಬಹುದು.
· ಕೂದಲಿಗೆ ಮೆಸ್ಸಿ ವಿನ್ಯಾಸ ಮಾಡಿದಾಗ ಡಿಸೈನರ್‌ ಹೇರ್‌ಪಿನ್‌ ಧರಿಸಬಹುದು.
· ಲೈಟ್‌ವೈಟ್‌ ಹೇರ್‌ಪಿನ್‌ಗಳ ಆಯ್ಕೆ ಮಾಡುವುದು ಉತ್ತಮ.
· ಕರ್ಲಿ ಹೇರ್‌ ಇರುವಂತವರು ಆದಷ್ಟೂ ಅಬ್‌ಸ್ಟ್ರಾಕ್ಟ್‌ ಡಿಸೈನ್‌, ಅಥವಾ ಸಿಕ್ಕಿಹಾಕಿಕೊಳ್ಳುವಂತಹ ಕಾಂಪ್ಲೀಕೇಟೆಡ್ ಡಿಸೈನ್‌ ಇರುವಂತವನ್ನು ಆವಾಯ್ಡ್ ಮಾಡುವುದು ಉತ್ತಮ.
· ಚಿಕ್ಕ ಕೂದಲಿರುವವರು ಸಿಂಪಲ್‌ ಲೈನ್ಸ್‌ನಲ್ಲಿ ಡಿಸೈನ್‌ ಮಾಡಿರುವ ಹೇರ್‌ಪಿನ್ಸ್ ಧರಿಸಬಹುದು.
· ಧರಿಸುವ
· ಹೇರ್‌ಪಿನ್ಸ್‌ನ ಫಿನಿಶಿಂಗ್‌ ಚೆನ್ನಾಗಿರಬೇಕು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Printed Handbags Fashion: ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿರುವ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್

Printed Handbags Fashion: ಸಾದಾ ಹ್ಯಾಂಡ್‌ ಬ್ಯಾಗ್‌ಗಳ ನಡುವೆ ಇದೀಗ ನಾನಾ ಪ್ರಿಂಟ್ಸ್ ಇರುವಂತಹ ಹ್ಯಾಂಡ್‌ಬ್ಯಾಗ್‌ಗಳು ಟ್ರೆಂಡಿಯಾಗಿವೆ. ಇವುಗಳೊಂದಿಗೆ ಎಲ್ಲಾ ಬಗೆಯ ಉಡುಪಿನೊಂದಿಗೆ ಧರಿಸಬಹುದಾದಂತಹ ಮಲ್ಟಿಶೇಡ್‌ನವು ಬಂದಿವೆ. ಈ ಕುರಿತಂತೆ ಇಲ್ಲಿದೆ ವಿವರ.

VISTARANEWS.COM


on

Printed Handbags Fashion
ಚಿತ್ರಗಳು: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಿಂಟೆಡ್‌ ಹ್ಯಾಂಡ್‌ಬ್ಯಾಗ್ಸ್ (Printed Handbags Fashion) ಇದೀಗ ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ. ಸಾಲಿಡ್‌ ಶೇಡ್ಸ್ ಡಿಸೈನ್‌ ಹೊಂದಿದ ಹ್ಯಾಂಡ್‌ಬ್ಯಾಗ್ಸ್ ಟ್ರೆಂಡ್‌ ನಡುವೆ ಇದೀಗ ನಾನಾ ಬಗೆಯ ಪ್ರಿಂಟ್ಸ್ ಇರುವಂತವು ಕೂಡ ಟ್ರೆಂಡಿಯಾಗಿವೆ. ಎಲ್ಲಾ ಬಗೆಯ ಉಡುಪು ಹಾಗೂ ಸೀರೆಯೊಂದಿಗೂ ಮ್ಯಾಚ್‌ ಮಾಡಬಹುದಾದಂತಹ ಮಲ್ಟಿಶೇಡ್‌ನವು ಹೆಚ್ಚಾಗಿ ಮಹಿಳೆಯರನ್ನು ಆಕರ್ಷಿಸತೊಡಗಿವೆ.

Printed Handbags Fashion

ಪ್ರಿಂಟೆಡ್‌ ಹ್ಯಾಂಡ್‌ಬ್ಯಾಗ್ಸ್ ಜರ್ನಿ

“ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್ ಮೊದಲಿನಿಂದಲೂ ಇದ್ದವು. ಆದರೆ, ಈ ಮೊದಲು ಅಷ್ಟಾಗಿ ಟ್ರೆಂಡಿಯಾಗಿರಲಿಲ್ಲ. ಮಹಿಳೆಯರು ಹೆಚ್ಚಾಗಿ ಸಾದಾ ಹಾಗೂ ಸಾಲಿಶ್‌ ಶೇಡ್‌ನವನ್ನು ಮಾತ್ರ ಬಳಸುತ್ತಿದ್ದರು. ಇನ್ನು, ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ, ಈ ಪ್ರಿಂಟೆಡ್‌ ಡಿಸೈನ್‌ನವು ದೊರೆಯುತ್ತಿದ್ದವು. ಆದರೆ, ಅವುಗಳ ಬೆಲೆ ದುಬಾರಿಯಾಗಿರುತ್ತಿದ್ದದ್ದರಿಂದ ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆಯಿತ್ತು. ಬರಬರುತ್ತಾ ಈ ಡಿಸೈನ್‌ನವು ಕೂಡ ಸಾಮಾನ್ಯ ಮಹಿಳೆಯರ ಕೈಗೆಟಕುವಂತಹ ದರದಲ್ಲಿ ದೊರೆಯಲಾರಂಭಿಸಿದವು. ಬ್ರಾಂಡ್‌ರಹಿತವಾಗಿಯೂ ಸಿಗಲಾರಂಭಿಸಿದವು. ಪರಿಣಾಮ, ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್‌ಗಳು ಚಾಲ್ತಿಗೆ ಬಂದವು ಎನ್ನುತ್ತಾರೆ ಇಮೇಜ್‌ ಸ್ಟೈಲಿಸ್ಟ್ ರೀಟಾ.

Printed Handbags Fashion

ಟ್ರೆಂಡಿಯಾಗಿರುವ ಪ್ರಿಂಟೆಡ್‌ ಬ್ಯಾಗ್ಸ್

ಫ್ಲೋರಲ್‌, ಟ್ರಾಪಿಕಲ್‌, ಜೆಮಿಟ್ರಿಕಲ್‌, ಸ್ಟ್ರೈಪ್ಸ್, ಜೀಬ್ರಾ ಪ್ರಿಂಟ್ಸ್, ವೈಲ್ಡ್ ಅನಿಮಲ್‌ ಪ್ರಿಂಟ್ಸ್, ರಂಗೋಲಿ ಡಿಸೈನ್ಸ್, ಮಂಡಲಾ ಆರ್ಟ್, ಅಬ್‌ಸ್ಟ್ರಾಕ್ಟ್‌ ಆರ್ಟ್ ಸೇರಿದಂತೆ ನಾನಾ ಪ್ರಿಂಟ್ಸ್‌ಗಳಿರುವ ಹ್ಯಾಂಡ್‌ಬ್ಯಾಗ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಚಿಕ್ಕ ಪರ್ಸ್‌ನಂತಹ ಸೈಜಿನಿಂದಿಡಿದು ಟೊಟೆ ಬ್ಯಾಗ್‌ನಂತಹ ದೊಡ್ಡ ಹ್ಯಾಂಡ್‌ಬ್ಯಾಗ್‌ಗಳ ವಿನ್ಯಾಸದಲ್ಲೂ ದೊರೆಯುತ್ತಿವೆ.

Printed Handbags Fashion

ಪ್ರಿಂಟೆಡ್‌ ಹ್ಯಾಂಡ್‌ಬ್ಯಾಗ್ಸ್ ರಿಪ್ಲೀಕಾ

ದೊಡ್ಡ ಬ್ರಾಂಡ್‌ಗಳ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್‌ಗಳು ಕೊಂಚ ದುಬಾರಿ. ಇದನ್ನು, ಮನಗೊಂಡ ಲೋಕಲ್‌ ಹ್ಯಾಂಡ್‌ಬ್ಯಾಗ್‌ ತಯಾರಕರು ಅವುಗಳ ಕಾಪಿ ತರಲಾರಂಭಿಸಿದ್ದಾರೆ. ಬ್ರಾಂಡ್‌ ಹೆಸರು ಅಚ್ಚಾಗಾದಿದ್ದರೂ ನೋಡಲು ಥೇಟ್‌ ಅವುಗಳಂತೆಯೇ ಕಾಣಿಸುತ್ತವೆ. ಇವು ಕೈಗೆಟಕುವ ಬೆಲೆಯಲ್ಲಿ ದೊರೆಯಲಾರಂಭಿಸಿವೆ ಎನ್ನುತ್ತಾರೆ ಬ್ಯಾಗ್‌ ಮಾರಾಟಗಾರರು

ಇದನ್ನೂ ಓದಿ: New Trend: ಕೋಟ್‌ ರಹಿತ ಪ್ಯಾಂಟ್ ಸೂಟ್ಸ್ ಇದೀಗ ಹೊಸ ಟ್ರೆಂಡ್!

ಪ್ರಿಂಟೆಡ್‌ ಬ್ಯಾಗ್‌ ಆಯ್ಕೆ ಹೇಗೆ?

  • ಟ್ರೆಂಡಿಯಾಗಿರುವ ಪ್ರಿಂಟ್ಸ್ ಇರುವಂತವನ್ನು ಸೆಲೆಕ್ಟ್ ಮಾಡಿ.
  • ಬ್ಲ್ಯಾಕ್‌ ಹಾಗೂ ವೈಟ್‌ ಎಲ್ಲಾ ಔಟ್‌ ಫಿಟ್‌ಗಳಿಗೂ ಮ್ಯಾಚ್‌ ಮಾಡಬಹುದು.
  • ಟೂ ಇನ್‌ ಒನ್‌ ಶೈಲಿಯಲ್ಲಿ ಧರಿಸಬಹುದಾದಂಥವು ಟ್ರೆಂಡ್‌ನಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

New Trend: ಕೋಟ್‌ ರಹಿತ ಪ್ಯಾಂಟ್ ಸೂಟ್ಸ್ ಇದೀಗ ಹೊಸ ಟ್ರೆಂಡ್!

New Trend: ಇದೀಗ ಕೋಟ್‌ ಇಲ್ಲದ ಪ್ಯಾಂಟ್‌ ಸೂಟ್‌ಗಳು ಟ್ರೆಂಡಿಯಾಗಿವೆ. ನ್ಯೂಡ್‌ ಶೇಡ್‌ನ ಕೋ ಆರ್ಡ್ ಸೆಟ್‌ ರೂಪದಲ್ಲಿ ಕಾಣಿಸಿಕೊಂಡಿರುವ ಈ ಕ್ರಾಪ್‌ ವೇಸ್ಟ್‌ಕೋಟ್‌ ಪ್ಯಾಂಟ್‌ಗಳ ಫ್ಯಾಷನ್‌ ಬಗ್ಗೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್.

VISTARANEWS.COM


on

New Trend
ಚಿತ್ರಗಳು: ಶ್ವೇತಾ ತಿವಾರಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೋಟ್‌ ರಹಿತ ಪ್ಯಾಂಟ್‌ ಸೂಟ್ಸ್ (New Trend) ಇದೀಗ ಟ್ರೆಂಡಿಯಾಗಿದೆ. ಹೌದು, ಇತ್ತೀಚೆಗೆ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಮಾಡೆಲ್‌ಗಳು ಈ ಶೈಲಿಯ ಪ್ಯಾಂಟ್‌ಸೂಟ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ಶ್ವೇತಾ ತಿವಾರಿ ಧರಿಸಿದ್ದ ನ್ಯೂಡ್‌ ಕೋಟ್‌ಲೆಸ್‌ ಪ್ಯಾಂಟ್‌ ಸೂಟ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದ್ದು, ಸದ್ಯ ಬಾಲಿವುಡ್‌ ಫ್ಯಾಷನ್‌ ಲೋಕದಲ್ಲಿ ಟ್ರೆಂಡಿಯಾಗಿವೆ.

ಬದಲಾದ ಸೂಟ್‌ ಕಾನ್ಸೆಪ್ಟ್

“ಸೂಟ್‌ ಅಂದರೇ, ಕೋಟ್‌ ಎನ್ನುವ ಕಾಲವೊಂದಿತ್ತು. ಆದರೆ, ಈ ವೇಸ್ಟ್‌ಕೋಟ್‌ ಇದೀಗ ಕಂಪ್ಲೀಟ್‌ ಬದಲಾಗಿದೆ. ಹೌದು, ಇದಕ್ಕೆ ತಕ್ಕಂತೆ, ಸೆಲೆಬ್ರೆಟಿಗಳು ಕೂಡ ಗ್ಲಾಮರಸ್‌ ಲುಕ್‌ ನೀಡುವಂತಹ ಕ್ರಾಪ್‌ ವೇಸ್ಟ್‌ಕೋಟ್‌ ಜೊತೆಗೆ ಪ್ಯಾಂಟ್‌ಸೂಟನ್ನು ಕೋಟ್‌ ರಹಿತ ಧರಿಸಲಾರಂಭಿಸಿದ್ದಾರೆ. ಆದರೆ, ಇವು ನೋಡಲು ವಿಭಿನ್ನವಾಗಿ ಕಾಣಿಸುತ್ತವೆ. ಸ್ಲಿವ್‌ಲೆಸ್‌ ವೇಸ್ಟ್‌ಕೋಟ್‌ಗಳು ಈ ಪ್ಯಾಂಟ್‌ ಸೂಟ್‌ಗೆ ಸಾಥ್‌ ನೀಡಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಕ್ಲೆಮೆಂಟೊ. ಅವರ ಪ್ರಕಾರ, ಇಂತಹ ವೇಸ್ಟ್‌ಕೋಟ್‌ಗಳು ಕೇವಲ ಹೆಣ್ಣುಮಕ್ಕಳ ಫ್ಯಾಷನ್‌ನಲ್ಲಿ ಮಾತ್ರ ಕಂಡು ಬರಲು ಸಾಧ್ಯ. ಇನ್ನೂ ಪುರುಷರ ಪ್ಯಾಂಟ್‌ ಸೂಟ್‌ನಲ್ಲಿ ಇವು ಎಂಟ್ರಿ ನೀಡಿಲ್ಲ. ನೀಡಿದ್ದರೂ ಅದು ಇನ್ನೂ ನಮ್ಮ ರಾಷ್ಟ್ರಕ್ಕೆ ಕಾಲಿಟ್ಟಿಲ್ಲ ಎನ್ನುತ್ತಾರೆ.

ಏನಿದು ಕೋಟ್‌ ಇಲ್ಲದ ಪ್ಯಾಂಟ್‌ ಸೂಟ್‌?

ಸ್ಲಿವ್‌ಲೆಸ್‌ ಕ್ರಾಪ್‌ ಶೈಲಿಯ ವೇಸ್ಟ್ ಕೋಟ್‌ ಜೊತೆಗಿನ ಪ್ಯಾಂಟ್‌ ಸೂಟ್‌ ಎನ್ನಬಹುದು. ಫುಲ್‌ ಸೆಟ್‌ನೊಳಗೆ ಬರುವಂತಹ ಉಡುಗೆಯೇ ಇದರ ಹೈಲೈಟ್‌! ಸಿಂಪಲ್‌ ಆಗಿ ಹೇಳಬೇಕೆಂದರೇ, ಇದರಲ್ಲಿ ಧರಿಸುವ ಕೋಟ್‌ ಮೈನಸ್‌ ಆಗಿ ಕೇವಲ ವೇಸ್ಟ್‌ಕೋಟ್‌ ಟಾಪ್‌ನ ಪಾತ್ರವಹಿಸುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಇದನ್ನೂ ಓದಿ: Fashion Show News: ಸಿಇಎಸ್‌ ಫ್ಯಾಷನ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ರ‍್ಯಾಂಪ್‌ ಶೋ

ಪ್ಯಾಂಟ್‌ ಸೂಟ್‌ಗೂ ಗ್ಲಾಮರ್‌ ಟಚ್‌

ಸೂಟ್‌ನಲ್ಲಿ ಗ್ಲಾಮರ್‌ ಟಚ್‌ ನೀಡಲು ಫ್ಯಾಷನ್‌ ಡಿಸೈನರ್‌ ಗಳು ಏನೆಲ್ಲಾ ಸರ್ಕಸ್ ನಡೆಸುತ್ತಾರೆಂದರೇ, ಇದೀಗ ಇವನ್ನು ಕೋಟ್‌ ಇಲ್ಲದೇ ಡಿಸೈನ್‌ ಮಾಡಿ ಚಾಲ್ತಿಗೆ ತಂದಿದ್ದಾರೆ. ಅಚ್ಚರಿ ಎಂದರೇ ಇವು ಇದೀಗ ಪ್ಯಾಂಟ್‌ಸೂಟ್‌ ಪ್ರಿಯ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರನ್ನು ಸೆಳೆಯತೊಡಗಿವೆ. ಈ ವರ್ಗದ ಯುವತಿಯರ ಫಾರ್ಮಲ್‌ ಔಟ್‌ಫಿಟ್‌ ಕೆಟಗರಿಗೆ ಸೇರಿವೆ ಎನ್ನುತ್ತಾರೆ ಪ್ಯಾಂಟ್‌ ಸೂಟ್‌ ಸ್ಪೆಷಲಿಸ್ಟ್ ರಿಯಾ.

  • ನ್ಯೂಡ್‌, ನ್ಯೂಟ್ರಲ್‌ ಶೇಡ್‌ನವು ಟ್ರೆಂಡಿಯಾಗಿವೆ.
  • ಸಿಂಪಲ್‌ ಲುಕ್‌ಗೆ ಮಾತ್ರ ಇವು ಆಕರ್ಷಕವಾಗಿ ಕಾಣಿಸುತ್ತವೆ.
  • ಕಾರ್ಪೋರೇಟ್‌ ಮಹಿಳೆಯರ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (radhika merchant) ಅವರನ್ನು ಇದೇ ತಿಂಗಳ 12ರಂದು ಮುಂಬಯಿನ (mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿರುವ ಅನಂತ್ ಅಂಬಾನಿ (Anant Ambani) ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಗಳು ಯಾವುದು, ಇದರ ಬೆಲೆ ಎಷ್ಟು ಗೊತ್ತೇ?

VISTARANEWS.COM


on

By

Anant Ambani
Koo

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹಾಗೂ ರಿಲಾಯನ್ಸ್ ಫೌಂಡೇಶನ್ ನ (Reliance Foundation) ಸಂಸ್ಥಾಪಕಿ ನೀತಾ ಅಂಬಾನಿ (nita ambani) ಅವರ ಕೊನೆಯ ಪುತ್ರ ಅನಂತ್ ಅಂಬಾನಿ (Anant Ambani) ತಮ್ಮ ಮದುವೆಯ ಕಾರಣದಿಂದ ಕಳೆದ ಒಂದು ವರ್ಷದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (radhika merchant) ಅವರನ್ನು ಇದೇ ತಿಂಗಳ 12ರಂದು ಮುಂಬಯಿನ (mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಈ ನಡುವೆ ಇದೀಗ ಅನಂತ್ ಅಂಬಾನಿ ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.

ಕ್ಯುರೇಟೆಡ್ ಮತ್ತು ಅತ್ಯದ್ಭುತ ದುಬಾರಿ ವಾಚ್ ಸಂಗ್ರಹಣೆಗಾಗಿ ಹೆಸರುವಾಸಿಯಾಗಿರುವ ಅನಂತ್ ಅಂಬಾನಿ ಅವರ ಬಳಿ ಇರುವ ಕೆಲವು ಅಸಾಧಾರಣ ವಾಚ್ ಸಂಗ್ರಹದ ಕುರಿತು ಕಿರು ಮಾಹಿತಿ ಇಲ್ಲಿದೆ.


ಪಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚೈಮ್

ಅನಂತ್ ಅಂಬಾನಿ ಗ್ರ್ಯಾಂಡ್ ಮಾಸ್ಟರ್ ಚೈಮ್ ಸೇರಿದಂತೆ ಪಾಟೆಕ್ ಫಿಲಿಪ್ ಅವರ ಅತ್ಯಂತ ದುಬಾರಿ ಕೈಗಡಿಯಾರಗಳಲ್ಲಿ ಎರಡನ್ನು ಹೊಂದಿದ್ದಾರೆ. ಪಾಟೆಕ್‌ ನ ಅತ್ಯಂತ ದುಬಾರಿ ಕೈಗಡಿಯಾರ ಇದಾಗಿದೆ. ಇದುವರೆಗೆ ಇದರ ಏಳು ವಾಚ್‌ಗಳನ್ನು ಮಾತ್ರ ಮಾಡಲಾಗಿದೆ. ಇದು ಇತ್ತೀಚೆಗೆ ಹರಾಜಿನಲ್ಲಿ 31 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2.58 ಬಿಲಿಯನ್ ರೂ.ಗಳಾಗಿದೆ.


ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಕಾನ್ಸೆಪ್ಟ್ ಜಿಎಂಟಿ ಟೂರ್‌ಬಿಲ್ಲನ್

ರಾಯಲ್ ಓಕ್‌ನ 30ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಬಿಡುಗಡೆ ಮಾಡಲಾದ ಈ ದಪ್ಪ ಗಡಿಯಾರವು ಟೈಟಾನಿಯಂ ಕೇಸ್ ಮತ್ತು ಅಸ್ಥಿಪಂಜರ ಮಾದರಿಯ ಡಯಲ್ ಅನ್ನು ಒಳಗೊಂಡಿದೆ. ಅದರ ಸಂಕೀರ್ಣ ಕಾರ್ಯವಿಧಾನ ಮೋಡಿ ಮಾಡುವಂತಿದೆ. ಮೈ ಯ ಶಾಖ ಮತ್ತು ಜಿಎಂಟಿ ಕಾರ್ಯದೊಂದಿಗೆ ಇದು ಕಾರ್ಯ ನಿರ್ವಹಿಸುತ್ತದೆ. ಇದರ ಅಂದಾಜು ಬೆಲೆ 1.9 ಕೋಟಿ ರೂ.


ಪಾಟೆಕ್ ಫಿಲಿಪ್ ನಾಟಿಲಸ್ ಟ್ರಾವೆಲ್ ಟೈಮ್

ಪಾಟೆಕ್ ಫಿಲಿಪ್ ವಾಚ್‌ ನ ಅತ್ಯಂತ ಅಪರೂಪದ ವಾಚ್ ಇದಾಗಿದ್ದು, ಮಾಣಿಕ್ಯ, ವಜ್ರ ಬಿಳಿ ಚಿನ್ನವನ್ನು ಒಳಗೊಂಡಿದೆ. ಅತ್ಯಂತ ಐಷಾರಾಮಿ ಕೈಗಡಿಯಾರವಾದ ಇದು ಕೆಂಪು ಮಾಣಿಕ್ಯ, ಹಸಿರು ಪಚ್ಚೆಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಅಂದಾಜು ಬೆಲೆ 8.2 ಕೋಟಿ ರೂ.

ಇದನ್ನೂ ಓದಿ: Nita Ambani: 50-60 ಬನಾರಸಿ ಸೀರೆ ಖರೀದಿಸಿದ ನೀತಾ ಅಂಬಾನಿ: ಸೀರೆಯ ದರ ಎಷ್ಟು?


ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಟೂರ್‌ಬಿಲ್ಲನ್

ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಶುದ್ಧ, ಸ್ಫಟಿಕದಂತಹ ನೀಲಮಣಿಯನ್ನು ಹೊಂದಿದೆ. ಇದು ಅಸಾಧಾರಣ ಬಾಳಿಕೆ ಮತ್ತು ಸ್ಕ್ರಾಚ್ ಪ್ರತಿರೋಧವನ್ನು ಹೊಂದಿದೆ. ಹಸಿರು ನೀಲಮಣಿಯನ್ನು ಒಳಗೊಂಡಿರುವ ಇದರ ಅಂದಾಜು ಬೆಲೆ 25 ಕೋಟಿ ರೂ.


ಪಾಟೆಕ್ ಫಿಲಿಪ್ ಸ್ಕೈ ಮೂನ್ ಟೂರ್ಬಿಲ್ಲಾನ್

ಪಾಟೆಕ್ ಫಿಲಿಪ್ ರಚಿಸಿದ ಅತ್ಯಂತ ಅಪರೂಪದ ಕೈಗಡಿಯಾರಗಳಲ್ಲಿ ಸ್ಕೈ ಮೂನ್ ಟೂರ್‌ಬಿಲ್ಲನ್ ನಲ್ಲಿ ಕ್ಯಾಲೆಂಡರ್, ಚಂದ್ರನ ಚಲನೆಯ ಸೂಚಕ ಸೇರಿದಂತೆ ಹನ್ನೆರಡು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಸಂಕೀರ್ಣ ವಿನ್ಯಾಸ ಮತ್ತು ಅಸಾಧಾರಣ ಕರಕುಶಲತೆಯು ಸ್ವಿಸ್ ವಾಚ್‌ಮೇಕಿಂಗ್ ಅನ್ನು ಅತ್ಯುತ್ತಮವಾಗಿಸಿದೆ. ಇದರ ಅಂದಾಜು ಬೆಲೆ 54 ಕೋಟಿ ರೂ.

Continue Reading
Advertisement
Viral Video
Latest2 mins ago

Viral Video: ಸಾವು ಹೇಗೆಲ್ಲ ಹೊಂಚು ಹಾಕುತ್ತದೆ! ಈ ವಿಡಿಯೊ ನೋಡಿ

Viral Video
ವೈರಲ್ ನ್ಯೂಸ್7 mins ago

Viral Video: ವಿಮಾನದಲ್ಲಿ ದಢೂತಿ ಹೆಂಗಸಿನ ಡ್ಯಾನ್ಸ್‌! ನಗಲಾರದೆ ಅಳಲಾರದೆ ತೊಳಲಾಡಿದ ಪ್ರಯಾಣಿಕರು!

OTT Releases
ಸಿನಿಮಾ16 mins ago

OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

Sexual Harassment
Latest23 mins ago

Sexual Harassment: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

Woman Doctor
ದೇಶ34 mins ago

ಬೇರೆ ಹುಡುಗಿಗೆ ಮೋಸ ಆಗಬಾರದು; ಮದುವೆಯಾಗಲ್ಲ ಎಂದ ಗೆಳೆಯನ ಗುಪ್ತಾಂಗ ಕತ್ತರಿಸಿದ ಯುವತಿ! Video ಇದೆ

Designer Hairpins Fashion
ಫ್ಯಾಷನ್46 mins ago

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Amritpal Singh
ದೇಶ1 hour ago

Amritpal Singh: ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ಗೆ ಪೆರೋಲ್‌

Bridge Collapse
ದೇಶ2 hours ago

Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Stabbing Case
ಕರ್ನಾಟಕ2 hours ago

Stabbing Case: ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ಇರಿದು ಕೊಂದ ವಿದ್ಯಾರ್ಥಿ!

ಕರ್ನಾಟಕ2 hours ago

Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌