Pro Kabaddi | ಯೋಧಾಸ್‌ಗೆ ಶರಣಾದ ಬೆಂಗಳೂರು ಬುಲ್ಸ್‌, ತವರಿನ ಪ್ರೇಕ್ಷಕರಿಗೆ ನಿರಾಸೆ - Vistara News

ಕ್ರಿಕೆಟ್

Pro Kabaddi | ಯೋಧಾಸ್‌ಗೆ ಶರಣಾದ ಬೆಂಗಳೂರು ಬುಲ್ಸ್‌, ತವರಿನ ಪ್ರೇಕ್ಷಕರಿಗೆ ನಿರಾಸೆ

ಪ್ರೊ ಕಬಡ್ಡಿ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಯುಪಿ ಯೋಧಾಸ್‌ ಪಡೆ ಬೆಂಗಳೂರು ಬುಲ್ಸ್‌ ವಿರುದ್ಧ 44-37 ಅಂತರದಲ್ಲಿ ಜಯ ಗಳಿಸಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೊ ಪ್ರೊ ಕಬಡ್ಡಿ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಯುಪಿ ಯೋಧಾಸ್‌ ಪಡೆ ಬೆಂಗಳೂರು ಬುಲ್ಸ್‌ ವಿರುದ್ಧ 44-37 ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು. ಸತತ ಎರಡು ಸೋಲಿನಿಂದ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಪ್ರದೀಪ್‌ ನರ್ವಾಲ್‌ ಹಾಗೂ ಸುರಿಂದರ್‌ ಸಿಂಗ್‌ ತಲಾ 14 ಅಂಕಗಳನ್ನು ಗಳಿಸುವ ಮೂಲಕ ಜಯದ ಹಾದಿಯನ್ನು ಸುಗಮಗೊಳಿಸಿದರು. ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು.

ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಆಗಲೇ ಕಾಲ ಮಿಂಚಿತ್ತು. ಬೆಂಗಳೂರು ಬುಲ್ಸ್‌ ಪರ ವಿಕಾಶ್‌ ಕಂಡೋಲ (12) ಹಾಗೂ ಭರತ್‌ (9) ರೈಡಿಂಗ್‌ ಅಂಕಗಳನ್ನು ಗಳಿಸಿದರು. ಆದರೆ ಈ ಪ್ರಯತ್ನ ಬಲಿಷ್ಠ ಯುಪಿ ಯೋಧಾಸ್‌ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ದ್ವಿತೀಯಾರ್ಧದ ಕೊನೆಯಲ್ಲಿ ಯುಪಿ ಯೋಧಾಸ್‌ ಪಡೆಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಪ್ರಥಮಾರ್ಧದಲ್ಲಿ ಬೆಂಗಳೂರು ಎರಡು ಬಾರಿ ಆಲೌಟ್‌ ಆದದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿತು.

ಯುಪಿ ಯೋಧಾಸ್‌ಗೆ ಬೃಹತ್‌ ಮುನ್ನಡೆ

ಸುರೇಂದರ್‌ ಗಿಲ್‌ ಹಾಗೂ ಪ್ರದೀಪ್‌ ನರ್ವಾಲ್‌ ಅವರ ಅದ್ಭುತ ರೈಡಿಂಗ್‌ ಅಂಕಗಳ ನೆರವಿನಿಂದ ಯುಪಿ ಯೋಧಾಸ್‌ ಪಡೆ ಬೆಂಗಳೂರು ಬುಲ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 26-12 ಅಂತರದಲ್ಲಿ ಬೃಹತ್‌ ಮುನ್ನಡೆ ಕಂಡಿತು. ಈ ಇಬ್ಬರು ಆಟಗಾರರು 16 ರೈಡಿಂಗ್‌ ಅಂಕಗಳನ್ನು ಗಳಿಸಿ, ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದರು. 5 ಟ್ಯಾಕಲ್‌ ಅಂಕಗಳ ಜೊತೆಯಲ್ಲಿ ಎರಡು ಬಾರಿ ಬೆಂಗಳೂರು ಬುಲ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ಯುಪಿ ಯೋಧಾಸ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಬೆಂಗಳೂರು ಬುಲ್ಸ್‌ ಯಾವುದೇ ವಿಭಾಗದಲ್ಲೂ ಮಿಂಚುವಲ್ಲಿ ವಿಫಲವಾಗಿ ಪ್ರಥಮಾರ್ಧದಲ್ಲಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆಮೂಡಿಸಿತು.

ಇದನ್ನೂ ಓದಿ : Pro Kabaddi | ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೇರಿ ಪಲ್ಟನ್‌, ಯು ಮುಂಬಾ ವಿರುದ್ಧ ರೋಚಕ ಜಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup Super 8 Stage: ಸೂಪರ್​-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್​ ಪಂದ್ಯ ಅನುಮಾನ!

T20 World Cup Super 8 Stage: ಸೂಪರ್ 8ನಲ್ಲಿ(T20 World Cup 2024) ಪ್ರತಿ ತಂಡಗಳು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ದ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್​ ಪ್ರವೇಶಿಸಿದೆ.

VISTARANEWS.COM


on

T20 World Cup Super 8
Koo

ಸೇಂಟ್ ಲೂಸಿಯಾ​: ಟಿ20 ವಿಶ್ವಕಪ್​ನ(T20 World Cup) ಹಲವು ಲೀಗ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಪಂದ್ಯಗಳು ರದ್ದುಗೊಂಡಿದ್ದವು. ಸೂಪರ್​-8 ಹಂತಕ್ಕೇರುವಲ್ಲಿ(T20 World Cup Super 8 Stage) ಕೆಲ ತಂಡಕ್ಕೆ ಮಳೆ ಭಾರೀ ಹಿನ್ನಡೆ ಉಂಟುಮಾಡಿತ್ತು. ಇದೀಗ ಸೂಪರ್​-8 ಹಂತದ ಪಂದ್ಯಗಳಿಗೂ(T20 World Cup Super 8) ಮಳೆ ಭೀತಿ ಎದುರಾಗಿದೆ.

ಜೂನ್​ 19ರಂದು ನಾರ್ತ್​ಸೌಂಡ್​ನಲ್ಲಿ ನಡೆಯಲಿರುವ ಸೂಪರ್​ 8ನ ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಗ್ರಾಸ್​ ಐಲೆಟ್​, ಬ್ರಿಜ್​ಟೌನ್​, ಸೇಂಟ್​ ವಿನ್ಸೆಂಟ್​ನಲ್ಲಿ ಸೂಪರ್​-8ನ ಇತರ ಪಂದ್ಯಗಳು ನಿಗದಿಯಾಗಿವೆ. ಈ ಪೈಕಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆ ಭೀತಿ ಇದೆ.

ಭಾರತ-ಆಸೀಸ್​ ಪಂದ್ಯಕ್ಕೂ ಮಳೆ ಭೀತಿ


ಜೂನ್​ 24ರಂದು ಗ್ರಾಸ್​ ಐಲೆಟ್​ನಲ್ಲಿ ನಡೆಯಲಿರುವ ಭಾರತ-ಆಸೀಸ್​(Australia vs India) ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಾಗಿ ಭಾರತ ಅಫಘಾನಿಸ್ತಾನ ಮತ್ತು ಬಾಂಗ್ಲಾ ಎದುರಿನ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್​ ಟಿಕೆಟ್​ ಖಾತ್ರಿಗೊಳಿಸಬೇಕು. ಜೂನ್​ 29ರಂದು ಬ್ರಿಜ್​ಟೌನ್​ನಲ್ಲಿ ನಿಗದಿಯಾಗಿರುವ ಫೈನಲ್​ ಪಂದ್ಯವೂ ಮಳೆ ಭೀತಿ ಎದುರಾಗಿದೆ.

ಇದನ್ನೂ ಓದಿ Team India: ಬಾರ್ಬಡೋಸ್​ನಲ್ಲಿ ಬೀಚ್​ ವಾಲಿಬಾಲ್​ ಆಡಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​


ಸೂಪರ್ 8ನಲ್ಲಿ(T20 World Cup 2024) ಪ್ರತಿ ತಂಡಗಳು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ದ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್​ ಪ್ರವೇಶಿಸಿದೆ.

ಗುಂಪು 1: ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಬಾಂಗ್ಲಾದೇಶ

ಗುಂಪು 2: ಯುಎಸ್ಎ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ

ಎರಡು ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳು ಜಾರಿಯಲ್ಲಿವೆ. ಒಂದೊಮ್ಮೆ ಮಳೆಯಿಂದ ಮೀಸಲು ದಿನವೂ ಸೆಮಿಫೈನಲ್​ ಪಂದ್ಯ ನಡೆಯದಿದ್ದರೆ ಆಗ ರನ್​ ರೇಟ್ ಆಧಾರದಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್​ ಪ್ರವೇಶ ಪಡೆಯಲಿದೆ. ಫೈನಲ್​ನ ಮೀಸಲು ದಿನವೂ ರದ್ದುಗೊಂಡರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯೀ ಎಂದು ನಿರ್ಧರಿಸಲಾಗುತ್ತದೆ.

ಬೌಂಡರಿ ಕೌಂಟ್​ ಇಲ್ಲ

2019 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್​ ಫೈನಲ್​ ಪಂದ್ಯ ಟೈ ಆದರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ
Continue Reading

ಕ್ರೀಡೆ

Team India: ಬಾರ್ಬಡೋಸ್​ನಲ್ಲಿ ಬೀಚ್​ ವಾಲಿಬಾಲ್​ ಆಡಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​

Team India: ಬಾರ್ಬಡೋಸ್(Barbados) ಬೀಚ್​ನಲ್ಲಿ ವಿರಾಟ್​ ಕೊಹ್ಲಿ, ರಿಂಕು ಸಿಂಗ್​, ಯಶಸ್ವಿ ಜೈಸ್ವಾಲ್, ಚಹಲ್​, ಸಂಜು ಸ್ಯಾಮ್ಸನ್​, ಶಿವಂ ದುಬೆ, ಹಾರ್ದಿಕ್​ ಪಾಂಡ್ಯ ಸೇರಿ ಕೆಲ ಆಟಗಾರರು ಬೀಚ್​ ವಾಲಿಬಾಲ್​ ಆಡಿ ಎಂಜಾಯ್​ ಮಾಡಿದ್ದಾರೆ.

VISTARANEWS.COM


on

Team India
Koo

ಬಾರ್ಬಡೋಸ್: ಸೂಪರ್​-8 ಪಂದ್ಯವನ್ನಾಡಲು ವೆಸ್ಟ್ ಇಂಡೀಸ್​ ತಲುಪಿರುವ ಟೀಮ್​ ಇಂಡಿಯಾದ(Team India) ಆಟಗಾರರು ಪಂದ್ಯಕ್ಕೂ ಮುನ್ನ ಇಲ್ಲಿನ ಪ್ರಸಿದ್ಧ ಬಾರ್ಬಡೋಸ್(Barbados) ಬೀಚ್​ನಲ್ಲಿ ವಾಲಿಬಾಲ್​(Beach Volleyball) ಆಡಿ ಎಂಜಾಯ್​ ಮಾಡಿದ್ದಾರೆ. 2 ತಂಡಗಳಾಗಿ ಆಟಗಾರರು ಮತ್ತು ಕೋಚಿಂಗ್​ ಸಿಬ್ಬಂದಿಗಳು ಶರ್ಟ್​ ಲೆಸ್​ ಆಗಿ ವಾಲಿಬಾಲ್​ ಆಡಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ವಿರಾಟ್​ ಕೊಹ್ಲಿ, ರಿಂಕು ಸಿಂಗ್​, ಯಶಸ್ವಿ ಜೈಸ್ವಾಲ್ ಸೇರಿ ಕೆಲ ಆಟಗಾರರು ಜತೆಯಾಗಿ ಆಡಿದರೆ, ಮತ್ತೊಂದು ತಂಡದಲ್ಲಿ ಚಹಲ್​, ಸಂಜು ಸ್ಯಾಮ್ಸನ್​, ಶಿವಂ ದುಬೆ, ಹಾರ್ದಿಕ್​ ಪಾಂಡ್ಯ ಆಡಿದ್ದಾರೆ. ಎಲ್ಲರು ಮೋಜು ಮಸ್ತಿ ಮಾಡಿ ಆಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.


ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿರುವ ಭಾರತ ಸೂಪರ್-8ನಲ್ಲಿ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಿಲಿದೆ. ಕೆನಡಾ ವಿರುದ್ಧದ ಅಂತಿಮ ಲೀಗ್​ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಭಾರತಕ್ಕೆ ಮೂರು ಲೀಗ್​ ಪಂದ್ಯವನ್ನಾಡುವ ಅವಕಾಶ ಮಾತ್ರ ಲಭಿಸಿತ್ತು. ವಿರಾಟ್​ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್​ ಡಕ್​ ಕೂಡ ಒಳಗೊಂಡಿದೆ. ಮಹತ್ವದ ಸೂಪರ್​-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ.

ಇದನ್ನೂ ಓದಿ Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್​ 20ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ

ಕೊಹ್ಲಿ ವೈಫಲ್ಯಕ್ಕೆ ನಿಧಾನಗತಿ ಪಿಚ್ ಕಾರಣ!


ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

Continue Reading

ಕ್ರೀಡೆ

MS Dhoni: ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ತಡೆದು ನಿಲ್ಲಿಸಿ ಫೋಟೊ ತೆಗೆಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

MS Dhoni: ಕಳೆದ ವಾರವಷ್ಟೇ ಧೋನಿ ಅವರು ಪ್ಯಾರಿಸ್​ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ. ಈ ಫೋಟೊ ಎಲ್ಲಡೆ ವೈರಲ್​ ಆಗಿತ್ತು. ಇದೀಗ ರಾಂಚಿಯಲ್ಲಿ ಅಭಿಮಾನಿಯೊಬ್ಬ ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ನಿಲ್ಲಿಸಿ ಅವರ ಜತೆ ಫೋಟೊ ತೆಗಿಸಿಕೊಂಡಿದ್ದಾನೆ.

VISTARANEWS.COM


on

MS Dhoni
Koo

ರಾಂಚಿ: ಐಪಿಎಲ್​ ಟೂರ್ನಿ ಮುಗಿಸಿ ಪ್ಯಾರಿಸ್​ ಪ್ರವಾಸ ಮಾಡಿದ್ದ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಮತ್ತೆ ತವರಿಗೆ ವಾಪಸ್​ ಆಗಿದ್ದಾರೆ. ತವರಿಗೆ ಮರಳಿದ್ದೇ ತಡ ರಾಂಚಿಯಲ್ಲಿ ಧೋನಿ ತಮ್ಮ ಐಶಾರಾಮಿ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೊವನ್ನು ಧೋನಿ ಅವರ ಅಭಿಮಾನಿಯೊಬ್ಬ(ms dhoni fan) ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದೇ ವೇಳೆ ಧೋನಿ ಜತೆಗೆ ಈ ಅಭಿಮಾನಿ ಫೋಟೊ ಕೂಡ ತೆಗೆಸಿಕೊಂಡಿದ್ದಾರೆ.


ಕಳೆದ ವಾರವಷ್ಟೇ ಧೋನಿ ಅವರು ಪ್ಯಾರಿಸ್​ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ. ಈ ಫೋಟೊ ಎಲ್ಲಡೆ ವೈರಲ್​ ಆಗಿತ್ತು. ಇದೀಗ ರಾಂಚಿಯಲ್ಲಿ ಅಭಿಮಾನಿಯೊಬ್ಬ ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ನಿಲ್ಲಿಸಿ ಅವರ ಜತೆ ಫೋಟೊ ತೆಗಿಸಿಕೊಂಡಿದ್ದಾನೆ. ಈ ಫೊಟೊ ಕಂಡ ಧೋನಿ ಅಭಿಮಾನಿಗಳು ನೀವು ನಿಜವಾಗಿಯೂ ಅದೃಷ್ಟಶಾಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ. ಅವರ ಭೇಟಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಕೆಲ ಅಭಿಮಾನಿಗಳು ಧೋನಿಯನ್ನು ಭೇಟಿಯಾಗಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. 

ಇದನ್ನೂ ಓದಿ MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಇದುವರೆಗೆ ತಮ್ಮ ನಿವೃತ್ತಿ ಪ್ರಕಟಿಸಿಲ್ಲ. ಮುಂದಿನ ಬಾರಿಯೂ ಅವರು ಆಡಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ.

ಆರ್​ಸಿಬಿ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​(CSK) ತಂಡ 17ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದಿತ್ತು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ 27 ರನ್​ಗಳ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನ ಮರು ದಿನವೇ ಧೋನಿ(MS Dhoni) ತಮ್ಮ ತವರಾದ ರಾಂಚಿಗೆ ಮರಳಿದ್ದರು. ತವರಿನಲ್ಲಿ ಬೈಕ್​ ರೈಡಿಂಗ್​ ಮಾಡಿದ್ದರು. ಅವರು ಬೈಕ್​ನಲ್ಲಿ ಸುತ್ತಾಡಿಕೊಂಡು ವಾಪಸ್​ ಮನೆಗೆ ಬರುತ್ತಿರುವ ವಿಡಿಯೊ ವೈರಲ್​ ಆಗಿತ್ತು.

ಧೋನಿ ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್​ಹೌಸ್​ನ ವಿಡಿಯೊ ವೈರಲ್​ ಆಗಿತ್ತು.

Continue Reading

ಕ್ರೀಡೆ

Sandeep Lamichhane: ಪಾಕ್​ ಆಟಗಾರನನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ನೇಪಾಳ ಸ್ಪಿನ್ನರ್​

Sandeep Lamichhane: ನೇಪಾಳ ತಂಡದ ಪ್ರಮುಖ ಸ್ಪಿನ್ನರ್‌ ಸಂದೀಪ್‌ ಲಮಿಚಾನೆ(Sandeep Lamichhane) ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಪಂದ್ಯಗಳನ್ನಾಡಿ 100 ವಿಕೆಟ್​ ಕಿತ್ತ ವಿಶ್ವದ 2ನೇ ಬೌಲರ್​(fastest bowler to 100 T20I wickets) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

VISTARANEWS.COM


on

Sandeep Lamichhane
Koo

ಕಿಂಗ್ಸ್‌ಟೌನ್‌: ಅತ್ಯಾಚಾರ ಪ್ರಕರಣ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಟಿ20 ವಿಶ್ವಕಪ್​ ಆಡಲಿಳಿದ ನೇಪಾಳ ತಂಡದ ಪ್ರಮುಖ ಸ್ಪಿನ್ನರ್‌ ಸಂದೀಪ್‌ ಲಮಿಚಾನೆ(Sandeep Lamichhane) ಅವರು ಟಿ20 ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಕಡಿಮೆ ಪಂದ್ಯಗಳನ್ನಾಡಿ 100 ವಿಕೆಟ್​ ಕಿತ್ತ ವಿಶ್ವದ 2ನೇ ಬೌಲರ್​(fastest bowler to 100 T20I wickets) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಸೋಮವಾರ ಬಾಂಗ್ಲಾದೇಶ(BAN vs NEP) ವಿರುದ್ಧದ ಟಿ20 ವಿಶ್ವಕಪ್​ ಲೀಗ್​ ಪಂದ್ಯದಲ್ಲಿ 2 ವಿಕೆಟ್​ ಪಡೆಯುವ ಮೂಲಕ ವೇಗವಾಗಿ 100 ವಿಕೆಟ್​ ಕಿತ್ತ ಮೈಲುಗಲ್ಲು ನಿರ್ಮಿಸಿದರು. ವಿಶ್ವ ದಾಖಲೆ ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಖಾನ್(Rashid Khan)​ ಹೆಸರಿನಲ್ಲಿದೆ. ರಶೀದ್​ 53 ಪಂದ್ಯಗಳಿಂದ 100 ವಿಕೆಟ್​ ಕಿತ್ತಿದ್ದಾರೆ. ಲಮಿಚಾನೆ 54 ಪಂದ್ಯ ಆಡಿ 100 ವಿಕೆಟ್​ ಪೂರ್ತಿಗೊಳಿಸಿದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್‌ ಲಮಿಚಾನೆಗೆ ಯುಎಸ್‌ ವೀಸಾ ಲಭಿಸುವುದು ವಿಳಂಬವಾಗಿತ್ತು. ಹೀಗಾಗಿ ಅವರು ಆರಂಭಿಕ ಪಂದ್ಯಳಲ್ಲಿ ಆಡುವ ಅವಕಾಶ ಕಳೆದುಕೊಂಡರು.

ಟಿ20ಯಲ್ಲಿ ವೇಗವಾಗಿ 100 ವಿಕೆಟ್​ ಕಿತ್ತ ಬೌಲರ್​ಗಳು


ರಶೀದ್​ ಖಾನ್​-53 ಪಂದ್ಯ

ಸಂದೀಪ್‌ ಲಮಿಚಾನೆ-54 ಪಂದ್ಯ

ಹ್ಯಾರಿಸ್ ರೌಫ್- 71 ಪಂದ್ಯ

ಮಾರ್ಕ್ ಅಡೇರ್-72 ಪಂದ್ಯ

ಬಿಲಾಲ್ ಖಾನ್-72 ಪಂದ್ಯ

ಲಸಿತ್ ಮಾಲಿಂಗ-76 ಪಂದ್ಯ

ಸಂದೀಪ್‌ ಲಮಿಚಾನೆ ಅವರು 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಮರು ವಿಚಾರಣೆ ನಡೆಸಿದ ನೇಪಾಳ ಹೈಕೋರ್ಟ್(Nepal High Court) ಕಳೆದ ತಿಂಗಳಷ್ಟೇ ಲಮಿಚಾನೆ ಅವರನ್ನು ನಿರಪರಾಧಿ ಎಂದು ಘೋಷಿಸಿತ್ತು. ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಅವರಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

ಇದನ್ನೂ ಒದಿ Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

ಏನಿದು ಪ್ರಕರಣ?

2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.

2022ರಲ್ಲಿ ಲಾಮಿಚಾನೆ ಅವರು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದ ಕೆರಿಬಿಯನ್​ ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವೇಳೆ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರಂಟ್​ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್​ಗೆ ಹಾಜರುಪಡಿಸಿದ್ದರು. ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳು ಜೈಲಿನಲ್ಲಿದ್ದರು.

Continue Reading
Advertisement
Petrol Diesel Price Hike
ಕರ್ನಾಟಕ10 mins ago

Petrol Diesel Price Hike: ಕೇಂದ್ರ ಸರ್ಕಾರ ಹಣ ಕೊಟ್ಟಿದ್ರೆ ತೆರಿಗೆ ಹೆಚ್ಚಿಸುವ ಅಗತ್ಯವೇ ಇರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

International Yoga Day 2024
Latest31 mins ago

International Yoga Day 2024: ಕುತ್ತಿಗೆ ನೋವಿನ ನಿವಾರಣೆಗೆ ಯಾವ ಆಸನಗಳು ಸೂಕ್ತ?

Job Recruitment
ಉದ್ಯೋಗ34 mins ago

Job Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆಗಳಿಗೆ ಅರ್ಜಿ ಆಹ್ವಾನ

Rahul Gandhi
ದೇಶ46 mins ago

Rahul Gandhi: ರಾಯ್‌ಬರೇಲಿಯನ್ನೇ ಆಯ್ಕೆ ಮಾಡಿಕೊಂಡ ರಾಹುಲ್‌ ಗಾಂಧಿ; ವಯನಾಡಿನಲ್ಲಿ ಪ್ರಿಯಾಂಕಾ ಸ್ಪರ್ಧೆ!

Rahul Gandhi
ಕರ್ನಾಟಕ1 hour ago

Rahul Gandhi: ರಾಹುಲ್ ಗಾಂಧಿ ಬಗ್ಗೆ ವಿವಾದಾದ್ಮಕ ವಿಡಿಯೊ; ಯುಟ್ಯೂಬರ್‌ ವಿರುದ್ಧ ಎಫ್‌ಐಆರ್‌

Actor Chikkanna
ಕರ್ನಾಟಕ1 hour ago

Actor Chikkanna: ‌ದರ್ಶನ್‌ ಜತೆ ಪಾರ್ಟಿ ಮಾಡಿದ್ದು ನಿಜ; ಪೊಲೀಸರಿಗೆ ಸ್ಫೋಟಕ ಮಾಹಿತಿ ನೀಡಿದ ಚಿಕ್ಕಣ್ಣ!

Karnataka weather Forecast
ಮಳೆ2 hours ago

Karnataka Weather : ಬೆಂಗಳೂರು, ಚಿಕ್ಕಮಗಳೂರಲ್ಲಿ ಸುರಿದ ಧಾರಾಕಾರ ಮಳೆ

Viral Video
Latest2 hours ago

Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

Viral Video
Latest2 hours ago

Viral Video: ಗಂಭೀರ ಸ್ಥಿತಿಯಲ್ಲಿರುವ ಅಪ್ಪನ ಆಸೆ ಈಡೇರಿಕೆ; ಆಸ್ಪತ್ರೆಯ ಐಸಿಯುನಲ್ಲೇ ಮಗಳ ಮದುವೆ!

Sex Worker
ಪ್ರಮುಖ ಸುದ್ದಿ2 hours ago

ಸೆಕ್ಸ್‌ ವರ್ಕರ್‌ಗೆ ಮಾಡಿದ ಮೆಸೇಜ್‌ ಗೊತ್ತಾಗಿ ಪತ್ನಿ ವಿಚ್ಛೇದನ; ಆ್ಯಪಲ್‌ ಕಂಪನಿ ವಿರುದ್ಧ ಕೇಸ್‌ ಜಡಿದ ಪತಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು7 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು8 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌