International Yoga Day 2024: ಕುತ್ತಿಗೆ ನೋವಿನ ನಿವಾರಣೆಗೆ ಯಾವ ಆಸನಗಳು ಸೂಕ್ತ? - Vistara News

Latest

International Yoga Day 2024: ಕುತ್ತಿಗೆ ನೋವಿನ ನಿವಾರಣೆಗೆ ಯಾವ ಆಸನಗಳು ಸೂಕ್ತ?

International Yoga Day 2024: ನಿಯಮಿತವಾದ ಯೋಗಾಭ್ಯಾಸದಿಂದ ಶರೀರವನ್ನು ಕಾಡುವ ಹಲವು ಬಗೆಯ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ, ಬಾಧಿಸುವ ಕುತ್ತಿಗೆ ನೋವನ್ನು ಕಡಿಮೆ ಮಾಡಲು ಉಪಯುಕ್ತವಾದ ಆಸನಗಳನ್ನು ಇಲ್ಲಿ ತಿಳಿಸಲಾಗಿದೆ. ಆದರೆ ಇದಕ್ಕೆಲ್ಲ ಸ್ವಯಂ ವೈದ್ಯ ಮಾಡದೆಯೆ, ಸರಿಯಾದ ಮಾರ್ಗದರ್ಶನದ ಜೊತೆಗೆ ಇದನ್ನು ಅಭ್ಯಾಸ ಮಾಡುವುದು ಅಗತ್ಯ.

VISTARANEWS.COM


on

International Yoga Day 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇಹ ಮತ್ತು ಮನಸ್ಸುಗಳ ಮೇಲಿನ ಮನಸ್ಸಿನ ಒತ್ತಡ ನಿವಾರಣೆಗೆ ಯೋಗ (International Yoga Day 2024) ಬಹು ಉಪಯುಕ್ತ. ಸರಿಯಾದ ಉಸಿರಾಟ ಕ್ರಮದೊಂದಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಮೈ-ಮನಗಳ ಸಮನ್ವಯವನ್ನು ಸಾಧಿಸಬಹುದು. ಜೊತೆಗೆ, ಹಲವಾರು ನೋವುಗಳಿಗೆ, ಶರೀರದ ತೊಂದರೆಗಳಿಗೆ ಉಪಶಮನವನ್ನೂ ಪಡೆಯಬಹುದು. ಈ ನಿಟ್ಟಿನಲ್ಲಿ, ಕುತ್ತಿಗೆ ನೋವಿನ ಶಮನಕ್ಕೆ ಉಪಯುಕ್ತವಾದ ಆಸನಗಳನ್ನು ಇಲ್ಲಿ ನೀಡಲಾಗಿದೆ. ಆದರೆ ಇವುಗಳನ್ನೆಲ್ಲ ಅಭ್ಯಾಸ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯ. ಜೊತೆಗೆ ಅನುಭವಿಯಾದ ಯೋಗ ತರಬೇತುದಾರರ ಮಾರ್ಗದರ್ಶನವೂ ಅಗತ್ಯ.

ಕುತ್ತಿಗೆ ನೋವು:

ಬೆನ್ನು ಹುರಿಯ ಸರ್ವೈಕಲ್‌ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಇತ್ತೀಚಿನ ವರ್ಷಗಳ ಬಹಳಷ್ಟು ಜನರು ಅನುಭವಿಸುವ ತೊಂದರೆ. ಜೀವನಶೈಲಿಯ ದೋಷಗಳು, ಸ್ಕ್ರೀನ್‌ ಸಮಯ ಅತಿಯಾಗುವುದು, ಜೀರ್ಣಾಂಗದ ತೊಂದರೆಗಳು, ಗಾಯ, ವಯಸ್ಸು ಮುಂತಾದ ಹಲವು ಕಾರಣಗಳು ಇದಕ್ಕಿರಬಹುದು. ತಲೆಯ ಹಿಂಭಾಗದಲ್ಲಿ ನೋವು, ಕುತ್ತಿಗೆ, ಭುಜ, ಮೊಣಕೈಗಳಲ್ಲಿ ನೋವು, ತಲೆಸುತ್ತು ಮುಂತಾದ ಹಲವು ಲಕ್ಷಣಗಳು. ಈ ನೋವು ಕಡಿಮೆ ಮಾಡುವುದಕ್ಕೆ ಉಪಯುಕ್ತ ಎನ್ನಬಹುದಾದ ಆಸನಗಳಿವು.

International Yoga Day 2024
International Yoga Day 2024

ಮಕರಾಸನ:

ಕುತ್ತಿಗೆಯಿಂದ ಹಿಡಿದು ಬೆನ್ನಿನ ಕೆಳಭಾಗದವರೆಗಿನ ನೋವು ಶಮನಕ್ಕೆ ಇದು ಪರಿಣಾಮಕಾರಿ. ಮೊದಲಿಗೆ, ಹೊಟ್ಟೆ ಅಡಿ ಮಾಡಿ, ಕಾಲುಚಾಚಿ ನೇರ ಮಲಗಿ. ಕೈಗಳೆರಡನ್ನೂ ಮುಖದ ಅಡಿಭಾಗಕ್ಕೆ ಬರುವಂತೆ ಮಡಿಸಿಟ್ಟುಕೊಳ್ಳಿ. ಕೈಗಳ ಮೇಲೆ ಗಲ್ಲ ಇರಿಸಿ, ಅದಾಗದಿದ್ದರೆ ಹಣೆಯನ್ನಾದರೂ ಇರಿಸಬಹುದು. ಹಲವು ನಿಮಿಷಗಳವರೆಗೆ ಹೀಗೆ ಮಲಗಿ, ದೇಹವನ್ನೆಲ್ಲ ಸಡಿಲ ಬಿಡಿ.

International Yoga Day 2024
International Yoga Day 2024

ಸೇತುಬಂಧಾಸನ:

ದೇಹಕ್ಕೆ ಬಲ ನೀಡುವುದು ಮಾತ್ರವಲ್ಲದೆ, ಶರೀರದ ಸಮನ್ವಯವನ್ನೂ ಈ ಆಸನ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಯಾವುದೇ ‌ʻಬ್ರಿಜ್ ಪೋಸ್ʼ ಎಂದು ಕರೆಸಿಕೊಳ್ಳುವಂಥ ಆಸನಗಳು ಕಾಲಿನಿಂದ ಹಿಡಿದು ಕುತ್ತಿಗೆಯವರೆಗಿನ ನಾನಾ ಭಾಗಗಳ ಬಲವನ್ನು ಹೆಚ್ಚಿಸುತ್ತವೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತುವ ಈ ಆಸನ ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ.

International Yoga Day 2024
International Yoga Day 2024

ಭುಜಂಗಾಸನ:

ಬೆನ್ನುಹುರಿಯ ಬಲವರ್ಧನೆಗೆ ಅಗತ್ಯವಾದ ಆಸನವಿದು. ಬೆನ್ನುಹುರಿಯ ಅಕ್ಕಪಕ್ಕದ ಸ್ನಾಯುಗಳು ಸಹ ಇದರಿಂದ ಬಲಗೊಳ್ಳುತ್ತವೆ. ಜೊತೆಗೆ, ಸೊಂಟ, ಕಿಬ್ಬೊಟ್ಟೆ, ಎದೆ, ಭುಜ ಮತ್ತು ತೋಳುಗಳ ಸ್ನಾಯುಗಳ ಮೇಲೂ ಇದು ಕೆಲಸ ಮಾಡುತ್ತದೆ. ಹೆಡೆ ಎತ್ತಿದ ಹಾವಿನಂತೆ ಕಾಣುವ ಭಂಗಿಯಿದು. ಮೊದಲಿಗೆ ಮುಖ ಅಡಿ ಮಾಡಿ ಮಲಗಿ. ಹಸ್ತಗಳನ್ನು ಎದೆಯ ಪಕ್ಕದಲ್ಲಿ ಊರಿ, ಕಟಿಯಿಂದ ಮೇಲೆ ಭಾಗವನ್ನು ನಿಧಾನಕ್ಕೆ ಮೇಲೆತ್ತಿ ನಿಲ್ಲಿಸಿ.

International Yoga Day 2024
International Yoga Day 2024

ಧನುರಾಸನ:

ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ಬೆನ್ನು ಮತ್ತು ಸೊಂಟದ ಬಲವರ್ಧನೆಗೆ ಇದು ಸಹಾಯಕ. ಇದಲ್ಲದೆ, ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ಶಮನ ಮಾಡುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಉಪಶಮನಕ್ಕೂ ಇದು ಉಪಯುಕ್ತವಾಗಿದೆ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು. ನೋಡುವುದಕ್ಕೆ ಬಿಲ್ಲಿನಂತೆ ಬಾಗಿರುವಂತೆ ಕಾಣುತ್ತದೆ ದೇಹ.

ಇದನ್ನೂ ಓದಿ:Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

International Yoga Day 2024
International Yoga Day 2024

ಗೋಮುಖಾಸನ:

ಎದೆ, ತೋಳು, ಭುಜ, ಕುತ್ತಿಗೆ, ಕಾಲುಗಳನ್ನು ಬಲಗೊಳಿಸುವ ಆಸನವಿದು. ಹೆಚ್ಚಿನ ವ್ಯಾಯಾಮವಿಲ್ಲದೆ ಜಡ ಬದುಕನ್ನು ನಡೆಸುತ್ತಿರುವವರಿಗೆ ಇದು ಹೆಚ್ಚು ಉಪಯುಕ್ತ. ಈ ಆಸನದಲ್ಲಿ ಬೆನ್ನು ಹುರಿ ಸರಿಯಾಗಿ ಹಿಗ್ಗಿ, ಅದರ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಬೆನ್ನು ನೇರವಾಗಿರಿಸಿಕೊಂಡು, ಕಾಲುಗಳೆರನ್ನು ಮುಂದೆ ಚಾಚಿ ಕುಳಿತುಕೊಳ್ಳಿ. ಮೊದಲಿಗೆ, ಬಲಗಾಲನ್ನು ಮಡಿಸಿ, ಬಲಪಾದ ಎಡಪೃಷ್ಠದ ಪಕ್ಕ ಬರುವಂತೆ ಇರಿಸಿ, ನಂತರ ಎಡಮಂಡಿಯನ್ನು ಬಲಮಂಡಿಯ ಮೇಲೆ ಬರುವಂತೆ ಮಡಿಸಿಡಿ. ಬಲಗೈ ಮೇಲೆತ್ತಿ, ಬೆನ್ನಿನ ಹಿಂದೆ ಮಡಿಸಿ, ಎಡಗೈಯನ್ನು ಕೆಳಗಿನಿಂದಲೇ ಮಡಿಸಿ, ಬಲಗೈ ಬೆರಳುಗಳನ್ನು ಹಿಡಿದುಕೊಳ್ಳಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: 13ನೇ ಮಹಡಿಯಿಂದ ಬಿದ್ದರೂ ಈಕೆಯ ಒಂದೇ ಒಂದು ಮೂಳೆ ಮುರಿದಿಲ್ಲ! ವಿಡಿಯೊ ನೋಡಿ

Viral Video: ಆಕಸ್ಮಾತ್ ಆಗಿ ಕಾಲು ಜಾರಿ ಬಿದ್ದು ಮೂಳೆ ಮುರಿದು ತಿಂಗಳಿಡೀ ನಡೆಯುವುದಕ್ಕೆ ಆಗದೇ ಒದ್ದಾಡುವವರನ್ನು ನೋಡಿರುತ್ತೇವೆ. ಆದರೆ ರಷ್ಯಾದಲ್ಲಿ ಮಹಿಳೆಯೊಬ್ಬರು 13ನೇ ಮಹಡಿಯಿಂದ ಬಿದ್ದರು ಏನೂ ಆಗದವರ ಹಾಗೇ ಎದ್ದು ಅಂಬ್ಯುಲೆನ್ಸ್ ಕಡೆಗೆ ನಡೆದುಕೊಂಡೇ ಹೋಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಮಹಿಳೆ ಎತ್ತರದ ಮಹಡಿಯಿಂದ ಮೈದಾನದಲ್ಲಿದ್ದ ಹುಲ್ಲುಗಾವಲಿನ ಮೇಲೆ ಬಿದ್ದು, ನಂತರ ತಾನಾಗಿಯೇ ಎದ್ದೇಳುವ ವಿಡಿಯೊ ಅಚ್ಚರಿ ಮೂಡಿಸಿದೆ.

VISTARANEWS.COM


on

Viral Video
Koo


ಮೊದಲ ಮಹಡಿಯಿಂದ ಬಿದ್ದವರ ಜೀವ ಉಳಿಯುವುದೇ ಕಷ್ಟ. ಅಂತಹದರಲ್ಲಿ ರಷ್ಯಾದಲ್ಲಿ 22 ವರ್ಷದ ಮಹಿಳೆಯೊಬ್ಬರು ಎತ್ತರದ ಕಟ್ಟಡದ 13ನೇ ಮಹಡಿಯಿಂದ ಬಿದ್ದರೂ ಆಕೆಗೆ ಸಣ್ಣಪುಟ್ಟ ಗಾಯಗಳಾಗಿ ಆಕೆ ಬದುಕುಳಿದಿದ್ದು ಪವಾಡ ಎನ್ನಲಾಗಿದೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆಶ್ಚರ್ಯವೆನೆಂದರೆ ಆಕೆಯ ಒಂದೇ ಒಂದು ಮೂಳೆ ಕೂಡ ಮುರಿತಕ್ಕೊಳಗಾಗಿಲ್ಲ.

ಮಹಿಳೆ ಎತ್ತರದ ಮಹಡಿಯಿಂದ ಮೈದಾನದಲ್ಲಿದ್ದ ಹುಲ್ಲುಗಾವಲಿನ ಮೇಲೆ ಬಿದ್ದು, ನಂತರ ತಾನಾಗಿಯೇ ಎದ್ದೇಳುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಮಹಿಳೆ ತಾನಾಗಿಯೇ ಆಂಬ್ಯುಲೆನ್ಸ್ ಕಡೆಗೆ ಆರಾಮವಾಗಿ ನಡೆದುಕೊಂಡು ಬಂದಿದ್ದಾಳೆ.

ಜುಲೈ 16ರಂದು ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮಹಾರಾಷ್ಟ್ರದ ಡೊಂಬಿವಲಿಯ ಕಾಂಪ್ಲೆಕ್ಸ್ ಒಂದರ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಡೊಂಬಿವಿಲಿಯ ಪೂರ್ವ ಕಲ್ಯಾಣ್ ಶೀಲ್ ರಸ್ತೆಯ ವಿಕಾಸ್ ನಾಕಾ ಪ್ರದೇಶದ ಗ್ಲೋಬ್‌ಸ್ಟೇಟ್ ಎಂಬ ಸಂಕೀರ್ಣದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

ಮೃತರನ್ನು ನಾಗಿನಾದೇವಿ ಮಂಜಿರಾಮ್ ಎಂದು ಗುರುತಿಸಲಾಗಿದ್ದು, ಅಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ವಿರಾಮದ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ಸಂಕೀರ್ಣದ ಗೋಡೆಯ ಬಳಿ ನಿಂತು ತಮಾಷೆ ಮಾಡಿಕೊಳ್ಳುತ್ತಿದ್ದರು. ಆ ವೇಳೆ ನಾಗಿನಾದೇವಿಯನ್ನು ಬಂಟಿ ಎಂದು ಕರೆಯಲಾದ ವ್ಯಕ್ತಿ ತಮಾಷೆಗೆ ತಳ್ಳಿದ್ದಾನೆ. ಇದರಿಂದ ಆಕೆ ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದಿದ್ದಾಳೆ. ಇದರ ಪರಿಣಾಮ ಆಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎನ್ನಲಾಗಿದೆ.

Continue Reading

ದೇಶ

CM Yogi Adityanath: ಗುಮಾಸ್ತರೂ ನಮ್ಮ ಫೋನ್ ಎತ್ತುತ್ತಿಲ್ಲ! ಯೋಗಿ ಎದುರು ಬಿಜೆಪಿ ಮುಖಂಡರ ಅಳಲು!

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಸಾಕಷ್ಟು ಹೆಚ್ಚಾಗಿದೆ. ಅಧಿಕಾರಿಗಳ ಅಧಿಕೃತ ಮೊಬೈಲ್ ಸಂಖ್ಯೆಗಳಿಗೆ ಕಾಲ್ ಮಾಡಿದರೂ ತೆಗೆದುಕೊಳ್ಳುವುದಿಲ್ಲ. ಈಗ ಸಣ್ಣ ಸರ್ಕಾರಿ ಗುಮಾಸ್ತರು ಕೂಡ ಇದನ್ನು ಮಾಡಲು ಪ್ರಾರಂಭಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಉತ್ತರಪ್ರದೇಶದ ಅಜಂಗಢದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಬಳಿ ದೂರಿದ್ದಾರೆ.

VISTARANEWS.COM


on

By

CM Yogi Adityanath
Koo

ಉತ್ತರ ಪ್ರದೇಶದಲ್ಲಿ (Uttar pradesh) ಜನಪ್ರತಿನಿಧಿಗಳ ಫೋನ್ ಸ್ವೀಕರಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಎಚ್ಚರಿಸಿದ್ದಾರೆ. ಅಧಿಕಾರಿಗಳು ಫೋನ್ ಎತ್ತುವುದಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಸಿಎಂ ಯೋಗಿ ಅವರಿಗೆ ದೂರು ನೀಡಿದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಪಕ್ಷದ ಮುಖಂಡರೊಬ್ಬರು ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಸಾಕಷ್ಟು ಹೆಚ್ಚಾಗಿದೆ. ಅಧಿಕಾರಿಗಳ ಅಧಿಕೃತ ಮೊಬೈಲ್ ಸಂಖ್ಯೆಗಳಿಗೆ ಕಾಲ್ ಮಾಡಿದರೂ ತೆಗೆದುಕೊಳ್ಳುವುದಿಲ್ಲ. ಈಗ ಸಣ್ಣ ಸರ್ಕಾರಿ ಗುಮಾಸ್ತರು ಕೂಡ ಇದನ್ನು ಮಾಡಲು ಪ್ರಾರಂಭಿಸಿದ್ದಾರೆ ಎಂದು ದೂರಿದರು. ಲೋಕಸಭೆ ಚುನಾವಣೆಯ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಹೆಚ್ಚುತ್ತಿದೆ. ಆದರೆ ತಮ್ಮ ಮಾತು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಯೋಗಿ ಆದಿತ್ಯನಾಥ್ ಸೋಮವಾರ ವಾರಣಾಸಿ ಮತ್ತು ಅಜಂಗಢ ಪ್ರವಾಸದಲ್ಲಿದ್ದರು. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ಅದಕ್ಕೂ ಮುನ್ನ ಅಜಂಗಢಕ್ಕೆ ಭೇಟಿ ನೀಡಿದ್ದರು. ಇಲ್ಲಿ ಮೊದಲಿಗೆ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಎಲ್ಲಾ ಶಾಸಕರು, ಎಂಎಲ್ಸಿಗಳು, ಸಚಿವರು, ಕಮಿಷನರ್, ಐಜಿ, ಎಲ್ಲಾ ಡಿಎಂಗಳು ಮತ್ತು ಎಸ್ಪಿಗಳು ಹಾಜರಿದ್ದರು. ಈ ಸಭೆಯಲ್ಲಿ ಸಿಎಂ ಯೋಗಿ ಅವರ ಮುಂದೆ ಬಿಜೆಪಿ ಮುಖಂಡರೊಬ್ಬರು ಅಧಿಕಾರಗಳ ವಿರುದ್ಧ ನೇರವಾಗಿ ಮುಖ್ಯಮಂತ್ರಿಗೆ ದೂರು ನೀಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಶಾಸಕರಿಂದ ಸಲಹೆಗಳನ್ನು ಕೇಳಿದರು. ಯಾರಾದರೂ ಸಲಹೆ ನೀಡುವ ಮುನ್ನವೇ ವಿಧಾನ ಪರಿಷತ್ ಸದಸ್ಯ ರಾಮ್‌ಸುರತ್ ರಾಜ್‌ಭರ್ ಮಾತನಾಡಿ, ಅಧಿಕಾರಿಗಳು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಅಸಹಯಾಕತೆ ತೋಡಿಕೊಂಡರು.

ಆಗ ಸಿಎಂ ಯೋಗಿ, ಇಲ್ಲಿ ಕುಳಿತಿರುವ ಅಧಿಕಾರಿಗಳಲ್ಲಿ ಯಾರು ಹೀಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಆಗ ರಾಜ್ ಭರ್ ಅವರನ್ನು ಮರೆತುಬಿಡಿ, ಈಗ ಕೆಳಹಂತದ ಸರ್ಕಾರಿ ಗುಮಾಸ್ತರು ಕೂಡ ಇದನ್ನು ಮಾಡಲು ಪ್ರಾರಂಭಿಸಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಸಾಕಷ್ಟು ಹೆಚ್ಚಾಗಿದೆ. ಇತರ ಕೆಲವು ಬಿಲ್‌ಗಳಿಂದಲೂ ಇದೇ ರೀತಿಯ ದೂರುಗಳು ಬಂದಿವೆ ಎಂದು ಹೇಳಿದರು.

ಇದನ್ನೂ ಓದಿ: Union Budget 2024: ಕಾಶಿ ಕಾರಿಡಾರ್‌ ಮಾದರಿಯಲ್ಲಿ ಬಿಹಾರದ ಎರಡು ದೇಗುಲಗಳ ಅಭಿವೃದ್ಧಿ

ಆಗ ಸಿಎಂ ಯೋಗಿ ಅವರ ಬಳಿ ಏನಾದರೂ ಪುರಾವೆ ಇದ್ದರೆ ಖಂಡಿತ ಹೇಳಲಿ ಎಂದು ಹೇಳಿದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಾರೆ. ಸಿಎಂ ಯೋಗಿ ಕೆಲವೇ ಜನರನ್ನು ಭೇಟಿ ಮಾಡುತ್ತಾರೆ ಎಂದು ಅವರದೇ ಪಕ್ಷದವರೇ ಟೀಕಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯೋಗಿ ಆದಿತ್ಯನಾಥ್ ನಿರಂತರವಾಗಿ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

Continue Reading

ಕರ್ನಾಟಕ

14 Hour Workday Bill: 14 ಗಂಟೆ ಕೆಲಸ ಮಾಡಿದರೆ ಹಾರ್ಟ್‌ ಅಟ್ಯಾಕ್‌ ಗ್ಯಾರಂಟಿ? ವೈದ್ಯರು ಹೇಳೋದೇನು?

ಕಾನೂನುಬದ್ಧವಾಗಿ ಕೆಲಸದ ಸಮಯವನ್ನು 12 ಅಥವಾ 14 ಗಂಟೆಗಳಿಗೆ (14 Hour Workday Bill) ವಿಸ್ತರಿಸಬೇಕು ಎನ್ನುವ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘ (ಕೆಐಟಿಯು) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ತಿದ್ದುಪಡಿ ಕಾಯಿದೆ ಜಾರಿಯಾದರೆ ಪ್ರಸ್ತುತ ಮೂರು ಶಿಫ್ಟ್ ಇರುವಲ್ಲಿ ಎರಡು ಶಿಫ್ಟ್ ವ್ಯವಸ್ಥೆ ಜಾರಿಯಾಗಲಿದೆ. ಇದು ಮೂರನೇ ಒಂದು ಭಾಗದಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಹೆಚ್ಚು ಹೊತ್ತು ಕೆಲಸ ಮಾಡಿದರೆ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

14 Hour Workday Bill
Koo

ಕಾನೂನುಬದ್ಧವಾಗಿಯೇ ಕೆಲಸದ ಸಮಯವನ್ನು 14 ಗಂಟೆಗೆ (14 Hour Workday Bill) ವಿಸ್ತರಿಸಬೇಕು ಎನ್ನುವ ಐಟಿ ಕಂಪನಿಗಳ (karnataka IT company) ಪ್ರಸ್ತಾವನೆಯನ್ನು ಪರಿಗಣಿಸಿ 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ (Karnataka Shops and Commercial Establishments Act) ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಕಾರ್ಮಿಕ ಕಾನೂನುಗಳು 12 ಗಂಟೆಗಳ ಕೆಲಸದ ಸಮಯವನ್ನು ಅನುಮತಿಸುತ್ತವೆ. ಇದು 10 ಗಂಟೆಗಳ ಜೊತೆಗೆ 2 ಗಂಟೆಗಳ ಹೆಚ್ಚುವರಿ ಸಮಯವನ್ನು ಒಳಗೊಂಡಿರುತ್ತದೆ. ಸರ್ಕಾರದ ಹೊಸ ಪ್ರಸ್ತಾವನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ತಿದ್ದುಪಡಿಯು ಪ್ರಸ್ತುತ ಮೂರು ಶಿಫ್ಟ್ ಇರುವಲ್ಲಿ ಎರಡು ಶಿಫ್ಟ್ ವ್ಯವಸ್ಥೆ ಜಾರಿಯಾಗಲಿದೆ. ಇದು ಮೂರನೇ ಒಂದು ಭಾಗದಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಬಳಿಕ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘ (ನಾಸ್ಕಾಮ್) ತಾನು ಈ ಕಾಯಿದೆಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.

ವೈದ್ಯರಿಂದಲೂ ಖಂಡನೆ

ಈ ತಿದ್ದುಪಡಿ ಮಸೂದೆ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಮೂಲದ ವೈದ್ಯ ಡಾ. ಸುಧೀರ್ ಕುಮಾರ್, ಅತಿಯಾದ ಕೆಲಸದಿಂದ ಉಂಟಾಗುವ ಅಸಂಖ್ಯಾತ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಕೇವಲ 24 ಗಂಟೆಗಳಿರುವ ದಿನದಲ್ಲಿ ನೌಕರರು 14 ಗಂಟೆಗಳ ಕಾಲ ಕೆಲಸ ಮಾಡಿದರೆ ಹೆಚ್ಚುವರಿ 1-2 ಗಂಟೆಗಳ ಸಮಯವನ್ನು ಪ್ರಯಾಣಕ್ಕಾಗಿ ಮೀಸಲಿಡುತ್ತಾರೆ. ಇದರಿಂದ ಅವರು ನಿದ್ರೆ ಮತ್ತು ವ್ಯಾಯಾಮಕ್ಕೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುವುದು, ಕುಟುಂಬಕ್ಕೆ ಸಮಯವನ್ನು ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದಾರೆ.

ಆರೋಗ್ಯಕರ ಜೀವನಕ್ಕೆ ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಅಗತ್ಯವಿರುತ್ತದೆ. 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಅಧಿಕ ತೂಕ, ಬೊಜ್ಜು, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೊಂದಿರುತ್ತಾರೆ. ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡುವುದು ಅನಿವಾರ್ಯವಾಗಿ ನಿದ್ರೆಯ ತೀವ್ರ ಅಭಾವ ಮತ್ತು ಈ ಸಂಬಂಧಿತ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ.

14 Hour Workday Bill
14 Hour Workday Bill


ಆರೋಗ್ಯದ ಮೇಲೆ ಪರಿಣಾಮ ಏನು?

ಮಿತಿ ಮೀರಿದ ಕೆಲಸದ ಸಮಯವು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಅತಿಯಾದ ಕೆಲಸವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅತಿಯಾದ ಕೆಲಸವು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಹಾರ್ಮೋನ್. ಇದರಿಂದ ಮೆದುಳಿಗೆ ಮಂಜು ಅವರಿಸಿದಂತಾಗುವುದು, ಅಧಿಕ ರಕ್ತದೊತ್ತಡ ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆ (WHO) 2016ರಲ್ಲಿ ಪಾರ್ಶ್ವವಾಯು, ರಕ್ತಕೊರತೆ, ಹೃದ್ರೋಗದಿಂದ 7,45,000 ಜನರ ಸಾವಿಗೆ ದೀರ್ಘಾವಧಿಯ ಕೆಲಸದ ಸಮಯವು ಕಾರಣ ಎಂದು ಹೇಳಿದೆ. ಈ ಅಂಕಿ ಅಂಶಗಳ ಪ್ರಮಾಣ 2000 ಇಸವಿಯಿಂದ ಶೇ. 29ರಷ್ಟು ಹೆಚ್ಚಳವಾಗಿದೆ. ವಾರಕ್ಕೆ 55 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ವ್ಯಕ್ತಿಗಳು ಇದನ್ನು ಎದುರಿಸುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ವಾರಕ್ಕೆ 35ರಿಂದ 40 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೋಲಿಸಿದರೆ ಇವರಲ್ಲಿ ಶೇ. 35ಕ್ಕಿಂತ ಹೆಚ್ಚಿನ ಮಂದಿಗೆ ಪಾರ್ಶ್ವವಾಯು ಅಪಾಯ ಮತ್ತು ಶೇ. 17ರಷ್ಟು ಮಂದಿಗೆ ಹೃದಯ ಕಾಯಿಲೆಯಿಂದ ಸಾಯುವ ಅಪಾಯ ಹೆಚ್ಚಾಗಿದೆ.

14 Hour Workday Bill
14 Hour Workday Bill


ಜಾಗತಿಕ ಸಮಸ್ಯೆ

ಅತಿಯಾಗಿ ಕೆಲಸ ಮಾಡುವುದು ಜಾಗತಿಕ ಸಮಸ್ಯೆಯಾಗಿದ್ದರೂ ಏಷ್ಯಾದ ದೇಶಗಳಲ್ಲಿ ವಿಶೇಷವಾಗಿ ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಅಧಿಕಾರಿಗಳು ಈ ಬಗ್ಗೆ ಗಮನಾರ್ಹ ಕಳವಳ ವ್ಯಕ್ತಪಡಿಸಿದ್ದಾರೆ. ಜಪಾನ್‌ನಲ್ಲಿ, ‘ಕರೋಶಿ’ ಎಂದರೆ “ಅತಿಯಾದ ಕೆಲಸದಿಂದ ಸಾವು” ಎಂಬ ಪದವು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Union Budget 2024 : ಬಜೆಟ್​ನಲ್ಲಿ ದೊಡ್ಡ ಮೊತ್ತ ಮೀಸಲಾಗಿರುವುದು ಸಾಲದ ಬಡ್ಡಿ ಕಟ್ಟಲು!

ಸ್ಟ್ರೋಕ್ ಮತ್ತು ಹೃದಯ ರಕ್ತನಾಳದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅತಿಯಾದ ಕೆಲಸ ಕಾರಣ ಎನ್ನುತ್ತಾರೆ ಸಂಶೋಧಕರು. ಅತಿಯಾದ ಕೆಲಸವು ಸೆರೆಬ್ರೊವಾಸ್ಕುಲರ್, ಹೃದಯ ರಕ್ತನಾಳದ ಕಾಯಿಲೆಗಳು, ಟೈಪ್ 2 ಮಧುಮೇಹ ಮತ್ತು ಹೃದ್ರೋಗ, ಕೆಲವು ಕ್ಯಾನ್ಸರ್‌ಗಳು, ಸಂಧಿವಾತ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆ ಮತ್ತು ಇತರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು.

Continue Reading

Latest

Child Rescued: ಆಟವಾಡುತ್ತ ಕೂದಲಿನ ಕ್ಲಿಪ್ ನುಂಗಿದ 10 ತಿಂಗಳ ಮಗು!

Child Rescued: ಸಾಮಾನ್ಯವಾಗಿ ಮನೆಯಲ್ಲಿ ಚಿಕ್ಕಮಗುವಿದ್ದರೆ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಮನೆಯಲ್ಲಿದ್ದ ಪಿನ್, ನಾಣ್ಯ, ಚಿಕ್ಕ ಚಿಕ್ಕ ವಸ್ತುಗಳನ್ನು ಮಕ್ಕಳ ಕೈಗೆ ಸಿಕ್ಕದ ಹಾಗೇ ನೋಡಿಕೊಳ್ಳಬೇಕಾಗುತ್ತದೆ. ಮಗುವೊಂದು ತಾಯಿ ನಿದ್ರೆಗೆ ಜಾರಿದಾಗ ಆಟವಾಡುತ್ತಾ ತಲೆಗೆ ಹಾಕುವ ಕ್ಲಿಪ್ ಅನ್ನು ನುಂಗಿದ ಘಟನೆ ನಡೆದಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು ಗಮನಿಸಿ ಪೋಷಕರು ಮಗುವನ್ನು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಸಕಾಲಿಕ ಕ್ರಮದಿಂದ ಮಗು ಅಪಾಯದಿಂದ ಪಾರಾಗಿದೆ.

VISTARANEWS.COM


on

Koo

ಚಿಕ್ಕ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಮಕ್ಕಳನ್ನು ನೋಡಿಕೊಳ್ಳುವಾಗ ಅಪ್ಪಿತಪ್ಪಿ ನಿಮ್ಮ ಗಮನ ಬೇರೆ ಕಡೆ ಹೋದರೆ ನಿಮ್ಮ ಮಕ್ಕಳು ಅಪಾಯಕ್ಕೆ ಒಳಗಾಗಬಹುದು. ಅಂತಹದೊಂದು ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. 10 ತಿಂಗಳ ಮಗು ತನ್ನ ತಾಯಿಯ ಕೂದಲಿಗೆ ಹಾಕುವ ಕ್ಲಿಪ್ ಅನ್ನು ನುಂಗಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಮಗು (Child Rescued) ಪ್ರಾಣಾಪಾಯದಿಂದ ಪಾರಾಗಿದೆ.

ವರದಿಗಳ ಪ್ರಕಾರ, ತಾಯಿ ನಿದ್ರೆಗೆ ಜಾರಿದ ತಕ್ಷಣ, ಹತ್ತಿರದಲ್ಲಿ ಆಟವಾಡುತ್ತಿದ್ದ 10 ತಿಂಗಳ ಮಗು ತಾಯಿಯು ಕೂದಲಿಗೆ ಹಾಕಿಕೊಂಡಿದ್ದ ಕ್ಲಿಪ್ ಅನ್ನು ನುಂಗಿದೆ. ಮಗು ಕ್ಲಿಪ್ ನುಂಗಿದ ತಕ್ಷಣ, ಮಗುವಿನ ಸ್ಥಿತಿ ಗಂಭೀರವಾಗಿದೆ. ಆಗ ಪೋಷಕರು ಮಗುವನ್ನು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ದರು. ಆದರೆ ಮಗುವಿಗೆ ಉಸಿರಾಟದ ತೊಂದರೆಯಾಗುತ್ತಿದ್ದ ಕಾರಣ ವೈದ್ಯರು ಚಿಕಿತ್ಸೆ ನೀಡದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ. ಕೊನೆಗೆ, ಪೋಷಕರು ಮಗುವನ್ನು ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯ ವೈದ್ಯರು ಘಟನೆಯ ಬಗ್ಗೆ ಮಾಹಿತಿ ಪಡೆದು ತಕ್ಷಣ ತಂಡವನ್ನು ರಚಿಸಿ ಮಗುವಿಗೆ ಚಿಕಿತ್ಸೆ ನೀಡಿ ಸುಮಾರು 3 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಹೊಟ್ಟೆಯಿಂದ ಕ್ಲಿಪ್ ಅನ್ನು ತೆಗೆದುಹಾಕಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ, ಪೂರ್ಣಿಯಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ಮಗುವಿನ ಪೋಷಕರಿಗೆ ಆಟವಾಡಲು ಸಣ್ಣ ಆಟಿಕೆಗಳನ್ನು ನೀಡಬಾರದು ಎಂದು ಮನವಿ ಮಾಡಿದೆ. ಹಲ್ಲುಗಳು ಬರಲು ಹೊರಟಾಗ, ಮಗುವು ಯಾವಾಗಲೂ ತನ್ನ ಬಾಯಿಯಲ್ಲಿ ಏನನ್ನಾದರೂ ಜಗಿಯಲು ಇಷ್ಟಪಡುತ್ತದೆ. ಮಗುವಿಗೆ ಸಣ್ಣ ಆಟಿಕೆಗಳನ್ನು ನೀಡಿದರೆ, ಅವುಗಳನ್ನು ನುಂಗಬಹುದು. ಪಿನ್‌ಗಳು, ಕ್ಲಿಪ್‌ಗಳು, ಚೂಪಾದ ವಸ್ತುಗಳು, ಕೀಟನಾಶಕಗಳು, ವಿಷಕಾರಿ ಮತ್ತು ಸುಡುವ ವಸ್ತುಗಳು, ಹೇರ್ ಕ್ಲಿಪ್‌ಗಳು, ಪೆನ್ ಮತ್ತು ಸಣ್ಣ ಆಟಿಕೆಗಳನ್ನು ಚಿಕ್ಕ ಮಕ್ಕಳಿಂದ ದೂರವಿಡಬೇಕು. ಇದರೊಂದಿಗೆ, ಪೋಷಕರು ಸಣ್ಣ ಮಕ್ಕಳ ಮೇಲೆ ಕಣ್ಣಿಡಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

ಈ ಹಿಂದೆ ಇದೇ ರೀತಿಯ ಘಟನೆ ವೈರಲ್ ಆಗಿತ್ತು. ಮಕ್ಕಳ ಸುತ್ತಲೂ ಸಣ್ಣ ವಸ್ತುಗಳನ್ನು ಇಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಪೋಷಕರನ್ನು ಎಚ್ಚರಿಸುವ ಪ್ರಯತ್ನದಲ್ಲಿ ತಾಯಿಯೊಬ್ಬಳು ತನ್ನ ಭಯಾನಕ ಕಥೆಯನ್ನು ಹಂಚಿಕೊಂಡಿದ್ದಳು. ಅಮೆಲಿಯಾ ಟಿವಿ ನೋಡುತ್ತಿದ್ದಾಗ ಅವರ ಪತಿ ಇದ್ದಕ್ಕಿದ್ದಂತೆ ತಮ್ಮ ಎರಡು ವರ್ಷದ ಮಗು ಅಳಲು ಪ್ರಯತ್ನಿಸುತ್ತಿದ್ದು, ಆದರೆ ಅವಳ ಗಂಟಲನ್ನು ಹಿಡಿದು ಒದ್ದಾಡುತ್ತಿರುವುದನ್ನು ಗಮನಿಸಿದರು, ಆದರೆ ಮಗು ಕೂಗುವಾಗ ಯಾವುದೇ ಶಬ್ದ ಹೊರಬರುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ, ಮಗು ಕೂದಲಿನ ಕ್ಲಿಪ್ ಅನ್ನು ನುಂಗಿದೆ ಎಂದು ಅವರು ಅರಿತುಕೊಂಡರು. ಇಬ್ಬರೂ ಭಯಭೀತರಾದರು, ಆದರೆ ತಂದೆ ಮಗುವಿನ ಬೆನ್ನಿನ ಹಿಂಭಾಗಕ್ಕೆ ಹೊಡೆಯುವ ಮೂಲಕ ಆ ವಸ್ತುವನ್ನು ಹೊರಗೆ ತೆಗೆದಿದ್ದಾರೆ ಎನ್ನಲಾಗಿದೆ

Continue Reading
Advertisement
Allergies During Monsoon
ಆರೋಗ್ಯ18 mins ago

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ7 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ7 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ7 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ7 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ8 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ8 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ9 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕರ್ನಾಟಕ9 hours ago

Assembly Session: ಕೆಳಮನೆಯಲ್ಲಿ ವಿಧಾನ ಮಂಡಲ ಅನರ್ಹತಾ‌ ನಿವಾರಣಾ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ13 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ17 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌