Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು! - Vistara News

ಪ್ರಮುಖ ಸುದ್ದಿ

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Rain News: ವಿಜಯನಗರ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದ್ದು, ಕೂಡ್ಲಿಗಿ ತಾಲೂಕಿನ ಕೆಲವು ಗ್ರಾಮಗಳ ರಸ್ತೆಗಳು ಕಡೆ ಹಳ್ಳದಂತಾಗಿ ಬದಲಾಗಿದ್ದವು. ಅದೇ ರೀತಿ ಕಳೆದ ಎರಡು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

VISTARANEWS.COM


on

Rain News
ಕೊಪ್ಪಳ ಜಿಲ್ಲೆಯ ಕಿನ್ನಾಳ ರಸ್ತೆ ಜಲಾವೃತವಾಗಿರುವುದು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯನಗರ/ಕೊಪ್ಪಳ: ರಾಜ್ಯದ ವಿಜಯನಗರ, ಕೊಪ್ಪಳ ಜಿಲ್ಲೆಯ ಹಲವೆಡೆ ಬುಧವಾರ ಮಳೆ (Rain News) ಆರ್ಭಟಿಸಿದ್ದು, ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ರಸ್ತೆಗಳು ಕೆರೆಗಳಂತೆ ಬದಲಾಗಿದ್ದವು. ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿ ಸುತ್ತಮುತ್ತಲಿನ ಹಂಪಿ, ಕಮಲಾಪುರ, ಚಿತ್ತವಾಡಗಿ, ಶಾನಭಾಗ ಸರ್ಕಲ್ ಸೇರಿ ಹಲವು ಕಡೆ ನಿರಂತರ ಮಳೆ ಸುರಿದಿದ್ದರಿಂದ ಬೈಕ್ ಸವಾರರು ಹೈರಾಣಾದರು. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕೂಡ್ಲಿಗಿ ತಾಲೂಕಿನಲ್ಲಿ ಹಳ್ಳದಂತಾದ ರಸ್ತೆಗಳು

ವಿಜಯನಗರ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದ್ದು, ಕೂಡ್ಲಿಗಿ ತಾಲೂಕಿನ ಕೆಲವು ಗ್ರಾಮಗಳ ರಸ್ತೆಗಳು ಕಡೆ ಹಳ್ಳದಂತಾಗಿ ಬದಲಾಗಿದ್ದವು. ಕೂಡ್ಲಿಗಿ ತಾಲೂಕಿನ ಮಹಾದೇವಪುರ ಗ್ರಾಮದಲ್ಲಿ ಹಳ್ಳದಂತೆ ಮಳೆ ನೀರು ಹರಿಯಿತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಗ್ರಾಮದೊಳಕ್ಕೆ ನೀರು ನುಗಿದ್ದರಿಂದ ಜನ ಪರದಾಡುವಂತಾಗಿದೆ. ಇನ್ನು ಹೊಸಪೇಟೆಯ ರಾಣಿಪೇಟೆಯಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಹೊಸಪೇಟೆಯಲ್ಲಿ ಭಾರಿ ಮಳೆ: ಮಳೆಯಿಂದಾಗಿ ಹೊಸಪೇಟೆಯ ಕೆಲವು ರಸ್ತೆಗಳು ಕೆರೆಯಂತಾಗಿದ್ದವು. ಕಾಲೇಜು ರಸ್ತೆ, ನೂರು ಹಾಸಿಗೆ ಆಸ್ಪತ್ರೆ ರಸ್ತೆ ಸೇರಿದಂತೆ ಕೆಲವು ಕಡೆ ಹಳ್ಳದಂತೆ ಮಳೆ ನೀರು ಹರಿಯಿತು. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬೈಕ್‌ಗಳು ಅರ್ಧಕ್ಕರ್ಧ ಮುಳುಗಿದವು. ಮಳೆ ನೀರು ರಸ್ತೆ ಮೇಲೆಯೇ ನಿಂತಿದ್ದರಿಂದ ವಾಹನ ಸವಾರರು ಹೈರಾಣಾದರು.

ಕೊಪ್ಪಳ ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕಳೆದ ಎರಡು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ಭರ್ಜರಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೊಪ್ಪಳ ನಗರದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯಾದ್ಯಂತ ನಿರಂತರ ಮಳೆಗೆ ರಸ್ತೆಗಳು ಹಳ್ಳಗಳಾಗಿ ಪರಿವರ್ತನೆಯಾಗಿವೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ.

ಇದನ್ನೂ ಓದಿ | Karnataka Weather : ಕರಾವಳಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಮಳೆ ಜತೆಗೆ ರಭಸವಾಗಿ ಬೀಸಲಿದೆ ಗಾಳಿ

ಜಿಲ್ಲೆಯ ಕಿನ್ನಾಳದಲ್ಲಿ ರಾಜಕಾಲುವೆ ತುಂಬಿ ಹರಿದಿದ್ದರಿಂದ ರಸ್ತೆ ತುಂಬೆಲ್ಲಾ ನೀರು ಆವರಿಸಿತ್ತು. ಇದರಿಂದ ಮಂಗಳೂರು, ಕಿನ್ನಾಳ ಗ್ರಾಮಗಳಿಗೆ ತೆರಳಲು ಜನರ ಪರದಾಡಿದರು. ಪ್ರಗತಿ ನಗರ, ಕಲ್ಯಾಣ ನಗರಗಳಿಗೆ ತೆರಳಲೂ ಸಹ ಜನರ ಪರದಾಡುವಂತಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Bypoll Results: ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 13ರ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟಕ್ಕೆ ಜಯ!

Bypoll Results: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಾಂಗ್ರೆಸ್‌ನ ಕಮಲೇಶ್ ಠಾಕೂರ್ ಡೆಹ್ರಾದಲ್ಲಿ ಗೆಲುವು ಸಾಧಿಸಿದ್ದಾರೆ. ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷ (AAP) ಮೊಹಿಂದರ್ ಭಗತ್ 23,000 ಮತಗಳಿಂದ ಗೆದ್ದಿದ್ದಾರೆ. ಬಿಜೆಪಿಯು ಕೇವಲ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಲೋಕಸಭೆ ಚುನಾವಣೆ ಬಳಿಕ ಬಿಜೆಪಿಗೆ ಇದು ಭಾರಿ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

VISTARANEWS.COM


on

Bypoll Results
Koo

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ (NDA) ಭಾರಿ ಪೈಪೋಟಿ ನೀಡಿದ್ದ ಇಂಡಿಯಾ ಒಕ್ಕೂಟವು (INDIA Bloc) ವಿಧಾನಸಭೆಯ 13 ಕ್ಷೇತ್ರಗಳ ಉಪಚುನಾವಣೆಯಲ್ಲೂ ಪ್ರಾಬಲ್ಯ ಸಾಧಿಸಿದೆ. ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಫಲಿತಾಂಶವು (Bypoll Results) ಶನಿವಾರ (ಜುಲೈ 13) ಪ್ರಕಟವಾಗಿದ್ದು, ಇಂಡಿಯಾ ಒಕ್ಕೂಟವು 10 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ (Narendra Modi) ವರ್ಚಸ್ಸಿನ ಬಿಜೆಪಿಯು ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದೆ. ಒಬ್ಬ ಸ್ವತಂತ್ರ ಅಭ್ಯರ್ಥಿಯು ಗೆಲುವು ಸಾಧಿಸಿದ್ದಾರೆ.

ಯಾವ ರಾಜ್ಯದಲ್ಲಿ ಯಾರಿಗೆ ಮೇಲುಗೈ?

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷವು ಕ್ಲೀನ್‌ ಸ್ವೀಪ್‌ ಮಾಡಿದೆ. ಚುನಾವಣೆ ನಡೆದ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಇನ್ನು, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ತಲಾ 2 ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು 1 ಕ್ಷೇತ್ರ ಹಾಗೂ ಬಿಹಾರದ ರುಪೌಲಿ ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಯು ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಗೆದ್ದಿದ್ದು ಎಲ್ಲಿ?

ಬಿಜೆಪಿಯು ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹಿಮಾಚಲ ಪ್ರದೇಶದ ಹಮೀರ್‌ಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪುಷ್ಪಿಂದರ್‌ ವರ್ಮಾ ವಿರುದ್ಧ ಬಿಜೆಪಿಯ ಆಶಿಶ್‌ ಶರ್ಮಾ ಅವರು 1,500 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಕಮಲೇಶ್‌ ಶಾ ಅವರು ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಅಮರ್‌ವಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್‌ನ ದೀರೆನ್‌ ಶಾ ವಿರುದ್ಧ 3,252 ಮತಗಳ ಅಂತರದಿಂದ ಗೆದ್ದಿದ್ದಾರೆ.

ಹಿಮಾಚಲ ಪ್ರದೇಶ ಸಿಎಂ ಪತ್ನಿಗೆ ಜಯ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಾಂಗ್ರೆಸ್‌ನ ಕಮಲೇಶ್ ಠಾಕೂರ್ ಡೆಹ್ರಾದಲ್ಲಿ ಗೆಲುವು ಸಾಧಿಸಿದ್ದಾರೆ. ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷ (AAP) ಮೊಹಿಂದರ್ ಭಗತ್ 23,000 ಮತಗಳಿಂದ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ ರಾಯ್‌ಗಂಜ್‌, ರಣಘತ್ ದಕ್ಷಿಣ, ಬಾಗ್ಡಾ ಮತ್ತು ಮಾನಿಕ್ತಾಲಾ ಕ್ಷೇತ್ರಗಳಲ್ಲಿ ಕಟಿಎಂಸಿ, ಉತ್ತರಾಖಂಡದ ಬದ್ರಿನಾಥ್ ಮತ್ತು ಮಂಗ್ಲೌರ್‌ನಲ್ಲಿ ಕಾಂಗ್ರೆಸ್, ಪಂಜಾಬ್‌ನ ಜಲಂಧರ್ ವೆಸ್ಟ್‌ನಲ್ಲಿ ಟಿಎಂಸಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: MLC Election Result: ಮಹಾರಾಷ್ಟ್ರ ಎಂಎಲ್‌‌ಸಿ ಚುನಾವಣೆ; ಇಂಡಿ ಕೂಟಕ್ಕೆ ಕೈ ಕೊಟ್ಟ 7 ಕಾಂಗ್ರೆಸ್ ಶಾಸಕರು!

Continue Reading

ಪ್ರಮುಖ ಸುದ್ದಿ

MS Dhoni : ಅಂಬಾನಿ ಪುತ್ರನ ಮದುವೆಯಲ್ಲಿ ಬಿಂದಾಸ್​ ​ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

MS Dhoni : ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೊದಲ್ಲಿ ವೀಡಿಯೊದಲ್ಲಿ ಸಾಕ್ಷಿ ಮತ್ತು ಝಿವಾ ಕಾಣಿಸದಿದ್ದರೂ, ಧೋನಿ ಕೂಲ್ ಡಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.

VISTARANEWS.COM


on

MS Dhoni
Koo

ಬೆಂಗಳೂರು: ಎಂಎಸ್ ಧೋನಿ (MS Dhoni ) ಕ್ರಿಕೆಟ್ ಮೈದಾನದ ಒಳಗೆ ಮತ್ತು ಹೊರಗೆ ಅಪರೂಪದ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಮೈದಾನದಲ್ಲಿ ಒತ್ತಡದ ಸಂದರ್ಭಗಳಲ್ಲಿಯೂ ಅವರ ತಣ್ಣಗೆ ಇರುವುದರಿಂದ ಕ್ಯಾಪ್ಟನ್ ಕೂಲ್​ ಎಂದೇ ಕರೆಯುತ್ತಾರೆ. ಹೀಗಾಗಿ ಅವರ ನಾಯಕತ್ವದಲ್ಲಿ ಭಾರತ ನಂ.1 ಸ್ಥಾನ ಪಡೆದುಕೊಂಡಿತ್ತು. ಇಂಥ ಧೋನಿ ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಹೇರ್​ಸ್ಟೈಲ್​, ಸೂಪರ್​ ಬೈಕ್ ಸವಾರಿ ಸೇರಿದಂತೆ ವಿಭಿನ್ನ ರೂಪದಲ್ಲಿ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಇದೀಗ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ವೇಳೆ ಬಿಂದಾಸ್​ ಆಗಿ ಕುಣಿಯುವ ಮೂಲಕ ಮತ್ತೊಂದು ಬಾರಿ ಸುದ್ದಿಗೆ ಬಂದಿದ್ದಾರೆ.

ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೊದಲ್ಲಿ ವೀಡಿಯೊದಲ್ಲಿ ಸಾಕ್ಷಿ ಮತ್ತು ಝಿವಾ ಕಾಣಿಸದಿದ್ದರೂ, ಧೋನಿ ಕೂಲ್ ಡಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ, ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಕುಣಿದಿದ್ದರು. ಸೆಲೆಬ್ರಿಟಿಗಳಲ್ಲಿ ಕ್ರಿಕೆಟಿಗರ ಜೊತೆಗೆ ಬಾಲಿವುಡ್ ಮತ್ತು ಹಾಲಿವುಡ್ ತಾರೆಯರು ಸೇರಿಕೊಂಡಿದ್ದರು. ಅವರ ನಡುವೆ ಧೋನಿ ತಮ್ಮ ವಿಶಿಷ್ಟ ಸ್ಟೆಪ್​ಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಕ್ರಿಕೆಟಿಗರಲ್ಲಿ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಅವರು ಎಂಎಸ್ ಧೋನಿ ಅವರೊಂದಿಗೆ ಡಾನ್ಸ್ ಮಾಡಿದ್ದಾರೆ. ಎಂಎಸ್ ಧೋನಿ. ಪತ್ನಿ ಸಾಕ್ಷಿ ಧೋನಿ ಮತ್ತು ಕ್ರಿಕೆಟಿಗ ಇಶಾನ್ ಕಿಶನ್ ಅವರೊಂದಿಗೆ ನೃತ್ಯ ಮಾಡುತ್ತಿರುವ ಮತ್ತೊಂದು ವೀಡಿಯೊ ವೈರಲ್ ಆಗಿದೆ.

ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಯಜುವೇಂದ್ರ ಚಾಹಲ್ ವಿವಾಹ ಸಮಾರಂಭದಲ್ಲಿ ಹಾಜರಿದ್ದರು.

ಖುಷಿಯಲ್ಲಿರುವ ಭಾರತದ ಆಟಗಾರರು

ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಲ್ ಕಳೆದ ತಿಂಗಳು ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆದ ಟಿ 20 ವಿಶ್ವಕಪ್ 2024 ಅನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು. ಬಾರ್ಬಡೋಸ್​​ನಲ್ಲಿ ನಡೆದ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸುವ ಮೂಲಕ ಭಾರತ ಪ್ರಶಸ್ತಿ ಗೆದ್ದುಕೊಂಡಿತು. ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ.

ಇದನ್ನೂ ಓದಿ: T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 3 ವಿಕೆಟ್​​ಗಳನ್ನು 20 ರನ್​ ವೆಚ್ಚದಲ್ಲಿ ಪಡೆದಿದ್ದರು. ನಿರ್ಣಾಯಕ ಕೊನೆಯ ಓವರ್ ಎಸೆದು 16 ರನ್​ಗಳನ್ನು ರಕ್ಷಿಸಿದ್ದರು. ಅವರು ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರಂತಹ ಅಪಾಯಕಾರಿ ಆಟಗಾರರ ವಿಕೆಟ್ ಪಡೆದಿದ್ದರು.

ಸೂರ್ಯಕುಮಾರ್ ಯಾದವ್ ಕೂಡ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್​ 8 ಪಂದ್ಯಗಳಲ್ಲಿ 199 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನ, ಯುಎಸ್ಎ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಇನಿಂಗ್ಸ್​ ಆಡಿದ್ದಾರೆ. ಆದರೆ ಪಂದ್ಯಾವಳಿಯ ಕೊನೆಯ ಓವರ್​​ನಲ್ಲಿ ಅವರು ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಲು ಕಠಿಣ ಕ್ಯಾಚ್ ತೆಗೆದುಕೊಂಡಿದ್ದರು. ಮಿಲ್ಲರ್ ಅವರ ವಿಕೆಟ್ ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿತ್ತು.

ಜಸ್ಪ್ರೀತ್ ಬುಮ್ರಾ 8 ಪಂದ್ಯಗಳಲ್ಲಿ 8.26 ಸರಾಸರಿ ಮತ್ತು 4.17 ಅಸಾಧಾರಣ ಎಕಾನಮಿ ರೇಟ್​ಗಳಲ್ಲಿ 15 ವಿಕೆಟ್​​ ಪಡೆದರು. ಬುಮ್ರಾ ಅವರ ವೀರೋಚಿತ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದಿದ್ದರು.

Continue Reading

ವಿದೇಶ

Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ‘ಮಿಲಿಟರಿ ಚೀಫ್’ ಸೇರಿ 71 ಮಂದಿಯ ಹತ್ಯೆ

Israel Hamas War: ಇಸ್ರೇಲ್‌ ಮೇಲೆ ನಿರಂತರವಾಗಿ ದಾಳಿಗೆ ಪಿತೂರಿ ನಡೆಸುವ, 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಯೋಜನೆಯ ರೂವಾರಿ ಎನಿಸಿರುವ ಮೊಹಮ್ಮದ್‌ ಡೈಫ್‌ ಹತ್ಯೆಗಾಗಿ ಹಲವು ವರ್ಷಗಳಿಂದಲೂ ಇಸ್ರೇಲ್‌ ಗುಪ್ತಚರ ಇಲಾಖೆಯು ಪ್ಲಾನ್‌ ಮಾಡಿತ್ತು ಎಂದು ಹೇಳಲಾಗುತ್ತಿದೆ. ಕೊನೆಗೆ ಆತನನ್ನು ಹೊಡೆದುರುಳಿಸುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ.

VISTARANEWS.COM


on

Israel Hamas War
Koo

ಜೆರುಸಲೇಂ: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Israel Hamas War) ನಡೆಸಿದ ದಾಳಿಗೆ ನಿರಂತರವಾಗಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌, ಹಮಾಸ್‌ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಗಾಜಾ ಪಟ್ಟಿಯ ಖಾನ್‌ ಯೌನಿಸ್‌ (Khan Younis) ಪ್ರದೇಶದ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ್ದು, ಅಕ್ಟೋಬರ್‌ 7ರ ದಾಳಿಯ ರೂವಾರಿ, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್ (Mohammed Deif)‌ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆದರೆ, ಇಸ್ರೇಲ್‌ ದಾಳಿಯಲ್ಲಿ 71 ಮಂದಿ ಮೃತಪಟ್ಟಿದ್ದಾರೆ.

ಖಾನ್‌ ಯೌನಿಸ್‌ ಪ್ರದೇಶವು ಹಮಾಸ್‌ ಉಗ್ರರ ಸುರಕ್ಷಿತ ತಾಣ ಎಂದೇ ಖ್ಯಾತಿ ಪಡೆದಿದೆ. ಇದರ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ ಕಾರಣ 71 ಮಂದಿ ಮೃತಪಟ್ಟರೆ, 289 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ನಾಗರಿಕರು ಎಂದು ಗಾಜಾ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಹಾಗೆಯೇ, ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

ಇಸ್ರೇಲ್‌ ಮೇಲೆ ನಿರಂತರವಾಗಿ ದಾಳಿಗೆ ಪಿತೂರಿ ನಡೆಸುವ, 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವ ಯೋಜನೆಯ ರೂವಾರಿ ಎನಿಸಿರುವ ಮೊಹಮ್ಮದ್‌ ಡೈಫ್‌ ಹತ್ಯೆಗಾಗಿ ಹಲವು ವರ್ಷಗಳಿಂದಲೂ ಇಸ್ರೇಲ್‌ ಗುಪ್ತಚರ ಇಲಾಖೆಯು ಪ್ಲಾನ್‌ ಮಾಡಿತ್ತು ಎಂದು ಹೇಳಲಾಗುತ್ತಿದೆ. ಖಾನ್‌ ಯೌನಿಸ್‌ ಪ್ರದೇಶದಲ್ಲಿ ಮೊಹಮ್ಮದ್‌ ಡೈಫ್‌ ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್‌ ಯೋಧರು ದಾಳಿಯ ಮೂಲಕ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್‌ ಪ್ರತಿದಾಳಿ ನಿಲ್ಲಿಸುತ್ತಿಲ್ಲ.

ಇದನ್ನೂ ಓದಿ: Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Continue Reading

ಕ್ರೀಡೆ

T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

T20 World Cup 2024 : ಯುಎಸ್ಎಯಲ್ಲಿ ಪಂದ್ಯಾವಳಿ ಯಶಸ್ವಿಯಾಗಿದೆ ಎಂದು ತೋರುತ್ತದೆಯಾದರೂ, ಹಣಕಾಸಿನ ದೃಷ್ಟಿಯಿಂದ ಅದು ಸುಳ್ಳು. ಪಿಟಿಐ ವರದಿಯ ಪ್ರಕಾರ, ಟಿ 20 ವಿಶ್ವಕಪ್​​ ಯುಎಸ್ಎ ಚರಣ ಬಜೆಟ್​​ ಅನ್ನು ಮೀರಿದೆ ಮತ್ತು ಆಟದ ಆಡಳಿತ ಮಂಡಳಿಗೆ ದೊಡ್ಡ ನಷ್ಟವಾಗಿದೆ. ವರದಿಯ ಪ್ರಕಾರ, ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ವಿಶ್ವ ಆಡಳಿತ ಮಂಡಳಿಯ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಮಂಡಳಿಯು ನಷ್ಟದ ಬಗ್ಗೆ ಚರ್ಚಿಸಲಿದೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 (T20 World Cup 2024 ) ಹಲವಾರು ಕಾರಣಗಳಿಗಾಗಿ ಸ್ಮರಣೀಯ ಎನಿಸಿದೆ. ಕ್ರಿಕೆಟ್​ ಹೆಚ್ಚು ಪ್ರಚಲಿತದಲ್ಲಿಲ್ಲದ ಯುಎಸ್ಎ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಿದ್ದು ಆ ಕಾರಣಗಳಲ್ಲಿ ಒಂದಾಗಿದೆ. ಐಸಿಸಿ ಕೆಲವು ಸಮಯದಿಂದ ಯುಎಸ್ ಮಾರುಕಟ್ಟೆಯನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಕಪ್ ಆಯೋಜಿಸಿದ್ದ ದೊಡ್ಡ ಹೆಜ್ಜೆಯಾಗಿದೆ. ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಸೆಳೆಯಲು ಐಸಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಯುಎಸ್ಎ ನಲ್ಲಿ ನಿಗದಿಪಡಿಸಿತ್ತು.

ಯುಎಸ್ಎಯಲ್ಲಿ 16 ಪಂದ್ಯಗಳನ್ನು ನಡೆಸಲಾಗಿತ್ತು. ನ್ಯೂಯಾರ್ಕ್, ಫ್ಲೋರಿಡಾ ಮತ್ತು ಡಲ್ಲಾಸ್ ಕ್ರೀಡಾಕೂಟದ ಆತಿಥ್ಯ ವಹಿಸಿದ್ದವು. ಅದರಲ್ಲೂ ಪಾಕಿಸ್ತಾನದ ವಿರುದ್ಧ ಯುಎಸ್ಎ ತಂಡದ ಅಚ್ಚರಿಯ ಗೆಲುವು ದೇಶದಲ್ಲಿ ಆಟದ ಬಗ್ಗೆ ಸಾಕಷ್ಟು ಕುತೂಹಲವ ಹುಟ್ಟುಹಾಕಿದೆ. ಐಸಿಸಿ ಪ್ರಕಾರ, ಸ್ಪರ್ಧೆಯ ಸಮಯದಲ್ಲಿ ಒಟ್ಟು 2.7 ಮಿಲಿಯನ್ ಯುಎಸ್ಎ ಮೂಲದ ಬಳಕೆದಾರರು ತಮ್ಮ ವೆಬ್​ಸೈಟ್​ ಮತ್ತು ಅಪ್ಲಿಕೇಷನ್​ ಮೂಲಕ ಪಂದ್ಯಗಳನ್ನು ವೀಕ್ಷಿಸಿದ್ದರು. ಇದು 2022 ರ ಟಿ 20 ವಿಶ್ವಕಪ್​ಗಿಂತ ಶೇಕಡಾ 370 ರಷ್ಟು ಅಧಿಕ.

ಐಸಿಸಿಗೆ ದೊಡ್ಡ ನಷ್ಟ

ಯುಎಸ್ಎಯಲ್ಲಿ ಪಂದ್ಯಾವಳಿ ಯಶಸ್ವಿಯಾಗಿದೆ ಎಂದು ತೋರುತ್ತದೆಯಾದರೂ, ಹಣಕಾಸಿನ ದೃಷ್ಟಿಯಿಂದ ಅದು ಸುಳ್ಳು. ಪಿಟಿಐ ವರದಿಯ ಪ್ರಕಾರ, ಟಿ 20 ವಿಶ್ವಕಪ್​​ ಯುಎಸ್ಎ ಚರಣ ಬಜೆಟ್​​ ಅನ್ನು ಮೀರಿದೆ ಮತ್ತು ಆಟದ ಆಡಳಿತ ಮಂಡಳಿಗೆ ದೊಡ್ಡ ನಷ್ಟವಾಗಿದೆ. ವರದಿಯ ಪ್ರಕಾರ, ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ವಿಶ್ವ ಆಡಳಿತ ಮಂಡಳಿಯ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಮಂಡಳಿಯು ನಷ್ಟದ ಬಗ್ಗೆ ಚರ್ಚಿಸಲಿದೆ.

ಇದನ್ನೂ ಓದಿ: Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

ಲೆಕ್ಕಪರಿಶೋಧನೆ ಇನ್ನೂ ನಡೆಯುತ್ತಿರುವುದರಿಂದ ನಷ್ಟದ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಆದಾಗ್ಯೂ, ಪಂದ್ಯಾವಳಿಯ ಯುಎಸ್ ಲೆಗ್ಗೆ ನಷ್ಟವು ಲಕ್ಷಾಂತರ ಡಾಲರ್​ಗಳಾಗಿದೆ ಎಂಬ ಭಾವನೆ ಪ್ರಮುಖ ಮಂಡಳಿಯ ಸದಸ್ಯರಲ್ಲಿದೆ.

ಟೂರ್ನಮೆಂಟ್ ನಿರ್ದೇಶಕ ಕ್ರಿಸ್ ಟೆಟ್ಲಿ ಅವರು ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ರಾಜೀನಾಮೆ ನೀಡಿರುವುದು ಈ ನಷ್ಟದ ಹಿನ್ನೆಲೆಯಲ್ಲಿ ಎನ್ನಲಾಗಿದೆ. ಟೆಟ್ಲಿಯ ಪ್ರದರ್ಶನದಿಂದ ಅನೇಕ ಸದಸ್ಯರು ಸಂತೋಷವಾಗಿಲ್ಲ. ಅವರು ರಾಜೀನಾಮೆ ನೀಡಿದ್ದರು ಟಿ 20 ವಿಶ್ವಕಪ್​​ನ ಯುಎಸ್ಎ ಲೆಗ್​ಗೂ ಇದಕ್ಕೂ ಯಾವುದೇ ಸಂಬಂಧವಿದೆ ಎಂದು ಹೇಳಲಾಗುವುದಿಲ್ಲ” ಎಂದು ಐಸಿಸಿ ಮಂಡಳಿಯ ಮೂಲಗಳು ಪಿಟಿಐಗೆ ತಿಳಿಸಿವೆ.

ನ್ಯೂಯಾರ್ಕ್ ನಗರವನ್ನು ಈವೆಂಟ್​​ನ ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಿದ್ದಕ್ಕಾಗಿ ಐಸಿಸಿಯ ಪ್ರಭಾವಿ ಸದಸ್ಯರು ಆಡಳಿತ ಮಂಡಳಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್​​ನಲ್ಲಿ ಮೀಸಲಾದ ಕ್ರಿಕೆಟ್ ಕ್ರೀಡಾಂಗಣವಿಲ್ಲದ ಕಾರಣ, ತಾತ್ಕಾಲಿಕ ಸ್ಟೇಡಿಯಮ್​ ನಿರ್ಮಿಸಲಾಗಿತ್ತು. ಆದರೆ ಪಿಚ್ ಮತ್ತು ಔಟ್​​ಫೀಲ್ಡ್​ ತೀವ್ರ ಟೀಕೆಗೆ ಒಳಗಾಯಿತು.

Continue Reading
Advertisement
Car Catches fire
ಕೊಡಗು11 mins ago

Car Catches fire: ಮಡಿಕೇರಿ ಬಳಿ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸ್ವಿಫ್ಟ್‌ ಕಾರು!

Bypoll Results
ದೇಶ27 mins ago

Bypoll Results: ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 13ರ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟಕ್ಕೆ ಜಯ!

MS Dhoni
ಪ್ರಮುಖ ಸುದ್ದಿ28 mins ago

MS Dhoni : ಅಂಬಾನಿ ಪುತ್ರನ ಮದುವೆಯಲ್ಲಿ ಬಿಂದಾಸ್​ ​ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

CM Siddaramaiah
ಕರ್ನಾಟಕ45 mins ago

CM Siddaramaiah: ಕೆಪಿಸಿಸಿ ಕಚೇರಿ ಸ್ವಚ್ಛತಾ ಸಿಬ್ಬಂದಿಗೆ ಮನೆ ನೀಡಲು ಸಿಎಂ ಸೂಚನೆ

Israel Hamas War
ವಿದೇಶ53 mins ago

Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ‘ಮಿಲಿಟರಿ ಚೀಫ್’ ಸೇರಿ 71 ಮಂದಿಯ ಹತ್ಯೆ

karnataka Weather Forecast
ಮಳೆ1 hour ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

Healthy Food For Dengue
ಫ್ಯಾಷನ್1 hour ago

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

radioactive material
ದೇಶ2 hours ago

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

Ambani Wedding Fashion
ಫ್ಯಾಷನ್2 hours ago

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Bagalkot news
ಕರ್ನಾಟಕ2 hours ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 hour ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ7 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಟ್ರೆಂಡಿಂಗ್‌