Kantara Movie | ನಟ ಕಮಲ್ ಹಾಸನ್‌ಗೆ ಕಮಾಲ್ ಮಾಡಿದ ಕಾಂತಾರ ಸಿನಿಮಾ! - Vistara News

ಪ್ರಮುಖ ಸುದ್ದಿ

Kantara Movie | ನಟ ಕಮಲ್ ಹಾಸನ್‌ಗೆ ಕಮಾಲ್ ಮಾಡಿದ ಕಾಂತಾರ ಸಿನಿಮಾ!

ರಿಷಭ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ‘ಕಾಂತಾರ’ (Kantara Movie ) ಚಿತ್ರವನ್ನು ವೀಕ್ಷಿಸಿರುವ ನಟ ಕಮಲ್ ಹಾಸನ್ ಅವರು, ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

VISTARANEWS.COM


on

Kantara and Kamal Haasan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಿಷಭ್ ಶೆಟ್ಟಿ (Rishabh Shetty) ನಿರ್ದೇಶನ ಹಾಗೂ ನಟನೆಯ ಕಾಂತಾರ (Kantara Movie ) ಚಿತ್ರಕ್ಕೆ ಹರಿದುಬರುತ್ತಿರುವ ಮೆಚ್ಚುಗೆಯ ಮಾತುಗಳಿಗೆ ಕೊನೆಯೇ ಇಲ್ಲ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಹೊಗಳಿದ ಬೆನ್ನಲ್ಲೇ, ಉಳಗನಾಯಗನ್ ಎಂದೇ ಖ್ಯಾತರಾಗಿರುವ ಕಮಲ್ ಹಾಸನ್ (Kamal Haasan) ಕೂಡ, ಕಾಂತಾರ ಕನ್ನಡ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರೆ. ಶುಕ್ರವಾರ ಅವರು ಕಾಂತಾರ ಸಿನಿಮಾ ವೀಕ್ಷಿಸಿ, ರಿಷಭ್ ಶೆಟ್ಟಿ ಅವರಿಗೆ ಬೆನ್ನು ತಟ್ಟಿದ್ದಾರೆ. ಅಲ್ಲದೇ, ರಿಷಭ್ ಅವರು ಕತೆ ಹೇಳಿದ ರೀತಿ ಪ್ರೇರಣಾದಾಯಕವಾಗಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕಾಂತಾರಾ ಕತೆಗೆ ಜನರು ಮಾರು ಹೋಗುತ್ತಿದ್ದಾರೆ. ಬಾಯಿ ಮಾತಿನಿಂದಲೇ ಈ ಕನ್ನಡದ ಸಿನಿಮಾಗೆ ಭಾರೀ ಪ್ರಚಾರ ಸಿಗುತ್ತಿದೆ. ಈಗಾಗಲೇ ಚಿತ್ರವು ಜಗತ್ತಿನಾದ್ಯಂತ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಭಾರತದಲ್ಲೇ ಸುಮಾರು 9000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಚಿತ್ರವು ಪ್ರದರ್ಶನವಾಗುತ್ತಿದೆ. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದ ಸಿನಿಮಾ, ನಂತರ ಹಿಂದಿ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಎಲ್ಲೆಡೆಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಕೆಜಿಎಫ್ 1 ಮತ್ತು ಕೆಜಿಎಫ್ 2 ನಂತರ ಕಾಂತಾರ ಕೂಡ ಭಾರೀ ದೊಡ್ಡ ಮಟ್ಟದಲ್ಲಿ ಕನ್ನಡದ ಚಿತ್ರರಂಗವನ್ನು ಜಾಗತಿಕ ಭೂಪಟದಲ್ಲಿ ಪ್ರತಿಷ್ಠಾಪಿಸಿದೆ. ಕಾಂತಾರಾ ಸಿನಿಮಾವು, ಸಾಂಸ್ಕೃತಿಕ ಹಿನ್ನೆಲೆ, ತಾಂತ್ರಿಕ ವೈಭವವನ್ನು ಸಮನಾಗಿ ಮಿಳಿತವಾದ ಚಿತ್ರವಾಗಿದೆ.

ಇದನ್ನೂ ಓದಿ | Kantara Movie | ʻಹ್ಯಾಟ್ಸ್‌ ಆಫ್‌ ರಿಷಬ್‌ʼಎಂದು ಕಾಂತಾರ ಸಿನಿಮಾ ಹೊಗಳಿದ ಸೂಪರ್‌ ಸ್ಟಾರ್‌ ರಜನಿಕಾಂತ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

GT World Mall: ಪಂಚೆ ಧರಿಸಿ ಬಂದ ರೈತರಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ ಜಿಟಿ ವರ್ಲ್ಡ್‌ ಮಾಲ್‌

GT World Mall: ʼಪಂಚೆ ಧರಿಸಿದವರನ್ನು ಒಳಗೆ ಬಿಡುವುದಿಲ್ಲ, ಈ ಬಗ್ಗೆ ನಮಗೆ ಸೂಚನೆ ಇದೆʼ ಎಂದು ಸೆಕ್ಯುರಿಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿದ್ದಾರೆ. ಯಾಕೆ ಬಿಡುವುದಿಲ್ಲ ಎಂದು ಮರುಪ್ರಶ್ನಿಸಿದ ರೈತರ ಮಗನಿಗೆ ʼನಿಮ್ಮ ಮೇಲೆ ಕೇಸ್‌ ಹಾಕುತ್ತೇವೆʼ ಎಂದು ಕೂಡ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

gt world mall
Koo

ಬೆಂಗಳೂರು: ಬೆಂಗಳೂರಿನ ಜಿಟಿ ವರ್ಲ್ಡ್‌ ಮಾಲ್‌ನಲ್ಲಿ (GT World Mall) ಪಂಚೆ (Dhoti) ಧರಿಸಿ ಬಂದ ರೈತರೊಬ್ಬರಿಗೆ ಮಾಲ್‌ ಸೆಕ್ಯುರಿಟಿ ಒಳಗೆ ಬಿಡದೆ ಅವಮಾನ (Insult) ಮಾಡಿ ಕಳಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಇರುವ ಜಿಟಿ ವರ್ಲ್ಡ್‌ ಮಾಲ್‌ಗೆ ಇಂದು ಬಂದ ರೈತರೊಬ್ಬರನ್ನು ಪಂಚೆ ಧರಿಸಿದ್ದಾರೆ ಎಂಬ ಕಾರಣದಿಂದ ಮಾಲ್‌ನ ಸಿಬ್ಬಂದಿ ಒಳಗೆ ಬಿಡಲಿಲ್ಲ. ಈ ಕುರಿತು ಪ್ರಶ್ನಿಸಿದಾಗ, ʼಪಂಚೆ ಧರಿಸಿದವರನ್ನು ಒಳಗೆ ಬಿಡುವುದಿಲ್ಲ, ಈ ಬಗ್ಗೆ ನಮಗೆ ಸೂಚನೆ ಇದೆʼ ಎಂದು ಸೆಕ್ಯುರಿಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿದ್ದಾರೆ. ಯಾಕೆ ಬಿಡುವುದಿಲ್ಲ ಎಂದು ಮರುಪ್ರಶ್ನಿಸಿದ ರೈತರ ಮಗನಿಗೆ ʼನಿಮ್ಮ ಮೇಲೆ ಕೇಸ್‌ ಹಾಕುತ್ತೇವೆʼ ಎಂದು ಕೂಡ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬವರ ತಂದೆ ಮೂಲತಃ ರೈತರಾಗಿದ್ದು ಅವರು ಹಾವೇರಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದರು. ಜು. 16ರಂದು ತಮ್ಮ ವೃದ್ಧ ತಂದೆಯವರಿಗೆ ಸಿನಿಮಾ ತೋರಿಸಿ ಖುಷಿಪಡಿಸಲು ನಿರ್ಧರಿಸಿದ ನಾಗರಾಜ್, ತಂದೆಯನ್ನು ಜಿಟಿ ಮಾಲ್‌ಗೆ ಕರೆದೊಯ್ದಿದ್ದರು. ಸಾಮಾನ್ಯವಾಗಿ ಪಂಚೆ ಉಡುವ ಹವ್ಯಾಸವಿರುವ ಅವರು ಎಂದಿನಂತೆಯೇ ಪಂಚೆ ಉಟ್ಟು ಮಗನ ಜೊತೆಗೆ ಮಾಲ್‌ಗೆ ತೆರಳಿದ್ದರು.

ಇದರಿಂದ ಆಕ್ರೋಶಗೊಂಡಿರುವ ರೈತ ವೇದಿಕೆಯ ಮುಖಂಡರು ಜಿಟಿ ವರ್ಲ್ಡ್‌ ಮಾಲ್‌ಗೆ ಪಂಚೆ ಧರಿಸಿ ಪ್ರವೇಶಿಸುವ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಪಂಚೆ ಧರಿಸಿದವರನ್ನು, ರೈತರನ್ನು ಕೀಳಾಗಿ ಕಾಣುವ ಈ ಮನೋಭಾವ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಚಡ್ಡಿ ಧರಿಸಿ ಬಂದವರನ್ನು ಒಳಗೆ ಬಿಡುತ್ತೀರಿ, ಪಂಚೆ ಧರಿಸಿದ ರೈತರನ್ನು ಯಾಕೆ ಬಿಡುವುದಿಲ್ಲ ಎಂದು ಆಕ್ರೋಶಿತ ಜನತೆ ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಶ್ನಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಪಂಚೆ ಧರಿಸಿ ಬಂದ ರೈತರೊಬ್ಬರನ್ನು ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ. ಇದು ಬಹಳ ದೊಡ್ಡ ಸುದ್ದಿಯಾಗಿತ್ತು. ಬಳಿಕ ಮೆಟ್ರೋ ಎಂಡಿಯೇ ಈ ಬಗ್ಗೆ ಕ್ಷಮೆ ಯಾಚಿಸಿ, ಹೀಗೆ ಮಾಡಿದ ಮೆಟ್ರೋ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡಿದ್ದರು.

ಇಂದು ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಚಾಲನೆ

ಬೆಂಗಳೂರು: ರಾಜಧಾನಿಯ ಬಹು ನಿರೀಕ್ಷಿತ 3.3 ಕಿಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ (Double-Decker Flyover), ದಕ್ಷಿಣ ಭಾರತದ (South India) ಮೊದಲ ಮೆಟ್ರೋ ಕಂ ಮೇಲ್ಸೇತುವೆ (Metro Cum Flyover) ಇಂದು (Inauguration) ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಇದನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಶಾಸಕರು ಇರಲಿದ್ದಾರೆ.

ಈ ಫ್ಲೈಓವರ್‌ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ (Silk Board Junction) ಜೋಡಿಸಲಿದೆ. ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ವಾಹನ ದಟ್ಟಣೆಗಾಗಿ ಕುಖ್ಯಾತವಾಗಿರುವ ಸಿಎಸ್‌ಬಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಅವ್ಯವಸ್ಥೆಯನ್ನು ಈ ಮೇಲ್ಸೇತುವೆ ಹಗುರಗೊಳಿಸಲಿದೆ.

ಫ್ಲೈಓವರ್ ನಿರ್ಮಿತವಾಗಿದ್ದರೂ ಅದನ್ನು ವಾಹನ ಸಂಚಾರಕ್ಕೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಳಂಬ ಮಾಡಿತ್ತು. ಬಲವಂತವಾಗಿ ತೆರೆಯುವುದಾಗಿ ಕಳೆದ ವಾರ ಎಎಪಿ ನಾಯಕರು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Continue Reading

ಪ್ರಮುಖ ಸುದ್ದಿ

Double-Decker Flyover: ಇಂದು ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಚಾಲನೆ; ದಕ್ಷಿಣ ಭಾರತದ ಪ್ರಥಮ ಮೆಟ್ರೋ ಕಂ ಮೇಲ್ಸೇತುವೆ

Double-Decker Flyover: ಈ ಫ್ಲೈಓವರ್‌ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ (Silk Board Junction) ಜೋಡಿಸಲಿದೆ. ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ.

VISTARANEWS.COM


on

Double-Decker Flyover
Koo

ಬೆಂಗಳೂರು: ರಾಜಧಾನಿಯ ಬಹು ನಿರೀಕ್ಷಿತ 3.3 ಕಿಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ (Double-Decker Flyover), ದಕ್ಷಿಣ ಭಾರತದ (South India) ಮೊದಲ ಮೆಟ್ರೋ ಕಂ ಮೇಲ್ಸೇತುವೆ (Metro Cum Flyover) ಇಂದು (Inauguration) ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಇದನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಶಾಸಕರು ಇರಲಿದ್ದಾರೆ.

ಈ ಫ್ಲೈಓವರ್‌ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ (Silk Board Junction) ಜೋಡಿಸಲಿದೆ. ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ವಾಹನ ದಟ್ಟಣೆಗಾಗಿ ಕುಖ್ಯಾತವಾಗಿರುವ ಸಿಎಸ್‌ಬಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಅವ್ಯವಸ್ಥೆಯನ್ನು ಈ ಮೇಲ್ಸೇತುವೆ ಹಗುರಗೊಳಿಸಲಿದೆ.

ಫ್ಲೈಓವರ್ ನಿರ್ಮಿತವಾಗಿದ್ದರೂ ಅದನ್ನು ವಾಹನ ಸಂಚಾರಕ್ಕೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಳಂಬ ಮಾಡಿತ್ತು. ಬಲವಂತವಾಗಿ ತೆರೆಯುವುದಾಗಿ ಕಳೆದ ವಾರ ಎಎಪಿ ನಾಯಕರು ಎಚ್ಚರಿಕೆ ನೀಡಿದ್ದರು.

ಮೇಲ್ಸೇತುವೆಯ ಲೂಪ್‌ಗಳು ಮತ್ತು ಇಳಿಜಾರುಗಳ ನಿರ್ಮಾಣವನ್ನು M/s ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಕಾರ್ಯಗತಗೊಳಿಸಿದೆ. ರಾಗಿಗುಡ್ಡದಿಂದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಬರುವ ವಾಹನ ಬಳಕೆದಾರರು ಎ ರ‍್ಯಾಂಪ್ ಮೂಲಕ ಹೊಸೂರು ರಸ್ತೆ ಮತ್ತು ಸಿ ರ‍್ಯಾಂಪ್ ಮೂಲಕ ಎಚ್ಎಸ್ಆರ್ ಲೇಔಟ್ ತಲುಪುತ್ತಾರೆ.

ನೆಲಮಟ್ಟದಲ್ಲಿರುವ ರ‍್ಯಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರ‍್ಯಾಂಪ್ ಎ ಅನ್ನು ಸಂಪರ್ಕಿಸುತ್ತದೆ. ಎಚ್‌ಎಸ್‌ಆರ್ ಲೇಔಟ್‌ನಿಂದ ಬರುವವರು ರ‍್ಯಾಂಪ್ ಎ ಮತ್ತು ಹಳದಿ ಲೈನ್ ಮೆಟ್ರೋ ಲೈನ್‌ನ ಮೇಲೆ ಹಾದು ಹೋಗುವ ರ‍್ಯಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ಬಿಟಿಎಂ ಲೇಔಟ್‌ಗೆ ಪ್ರವೇಶಿಸಲು ಡೌನ್ ರ‍್ಯಾಂಪ್ ಇಯೊಂದಿಗೆ ಮುಂದುವರಿಯುತ್ತದೆ.

ರ‍್ಯಾಂಪ್ ಎ ಮತ್ತು ರ‍್ಯಾಂಪ್ ಬಿ ಎರಡೂ ಅಸ್ತಿತ್ವದಲ್ಲಿರುವ ಮಡಿವಾಳ ಮೇಲ್ಸೇತುವೆಯ ಮೇಲೆ ವಿಲೀನಗೊಳ್ಳುತ್ತವೆ. ಇವು ಅತ್ಯಂತ ಜನನಿಬಿಡ ರಾಷ್ಟ್ರೀಯ ಹೆದ್ದಾರಿ (NH-44) ನಲ್ಲಿ ನಿರಂತರವಾಗಿ ಮುಂದುವರಿಯುತ್ತವೆ. ಇವು ನಾಲ್ಕು ನಿರಂತರ ವೇಗಳನ್ನು ಒಳಗೊಂಡಿವೆ.

ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಹಳದಿ ಮಾರ್ಗದ ಮೆಟ್ರೋಗಾಗಿ ರಸ್ತೆ ಮೇಲ್ಸೇತುವೆಯ ಮೊದಲ ಹಂತವನ್ನು ಈಗಾಗಲೇ ನಿರ್ಮಿಸಲಾಗಿದೆ. BMRCL ಪ್ರಕಾರ, A, B ಮತ್ತು C ರ್ಯಾಂಪ್‌ಗಳು ಮೇ 2024ರೊಳಗೆ ಪೂರ್ಣಗೊಂಡು ಕಾರ್ಯಾರಂಭಿಸಬೇಕಿತ್ತು. D ಮತ್ತು E ರ‍್ಯಾಂಪ್‌ಗಳನ್ನು ಡಿಸೆಂಬರ್ 2024ರೊಳಗೆ ಕಾರ್ಯಾರಂಭ ಮಾಡಲಾಗುತ್ತದೆ.

ಇದನ್ನೂ ಓದಿ: Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Continue Reading

ಪ್ರಮುಖ ಸುದ್ದಿ

Muharram 2024: ಏಕತೆಯ ಸಂದೇಶ ಸಾರುವ ಮುಹರ್ರಮ್ ಆಚರಣೆ

Muharram 2024: ಮುಹರ್ರಮ್ ತಿಂಗಳ ಮೊದಲ ಹತ್ತು ದಿನಗಳು ವಿಶೇಷತೆಯ ದಿನಗಳಾಗಿವೆ. ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರ್ರಮ್ ಆಗಿದೆ. ಅಲ್ಲದೇ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದಲೂ ಈ ಹಬ್ಬದಲ್ಲಿ ಪಾಲ್ಗೊಂಡು ಸೌಹಾರ್ದತೆಯಿಂದ ಆಚರಿಸುತ್ತಾರೆ. ಮುಹರಂ ವೇಳೆ ಆಲಾಯಿ ಕುಣಿತ, ಮುಹರಂ ಪದಗಳನ್ನು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತದೆ.

VISTARANEWS.COM


on

Muharram 2024
Koo
Hashim Bannur

-ಹಾಶಿಂ ಬನ್ನೂರು
ಮುಹರಮ್ ತಿಂಗಳು (Muharram 2024) ಮುಸ್ಲಿಮರ ಹೊಸ ವರ್ಷದ ಪ್ರಾರಂಭ ತಿಂಗಳು. ಈ ತಿಂಗಳಲ್ಲಿ ವಿಶೇಷವಾದ ಹಬ್ಬಗಳನ್ನು ಬಹಳ ವಿಜ್ರಂಭಣೆ ಭಯ ಭಕ್ತಿಯಿಂದ ಆಚರಿಸುತ್ತಾರೆ. ಮುಹರ್ರಮ್ ತಿಂಗಳ ಮೊದಲ ಹತ್ತು ದಿನಗಳು ವಿಶೇಷತೆಯ ದಿನಗಳಾಗಿವೆ. ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರ್ರಮ್ ಆಗಿದೆ. ಅಲ್ಲದೇ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದಲೂ ಈ ಹಬ್ಬದಲ್ಲಿ ಪಾಲ್ಗೊಂಡು ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮುಹರಮ್ ಹಬ್ಬವನ್ನು ಬಾಬಯ್ಯ ಹಬ್ಬ ಎಂದು ಕರೆಯುತ್ತಾರೆ.
ಮುಹರಮ್ ಒಂದು ತಿಂಗಳ ಹೆಸರಾಗಿದ್ದು ಇಸ್ಲಾಮಿಕ್ ಮುಸಲ್ಮಾನರ ಹಿಜರಿ ಕ್ಯಾಲೆಂಡರ್ ಪ್ರಕಾರ ಮೊದಲನೇ ತಿಂಗಳು. ಮುಸ್ಲಿಮರಿಗೆ ಇದು ಹೊಸ ವರ್ಷ ದುಖಃದಿಂದ ಗೌರವದಿಂದ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ . ಮುಹರಮ್ ಎಂಬುವುದು ಅರೇಬಿಕ್ ಪದವಾಗಿದ್ದು “ನಿಷಿದ್ಧ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ತಿಂಗಳಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ಮಾಡಲು ಸೂಕ್ತವಾಗಿರುವುದಿಲ್ಲ. ಮುಹರಂ 9 ತಾಸೂಆ ಮತ್ತು 10 ನೇ ಆಶುರಾ ದಿನದಂದು ಉಪವಾಸವಿರುವುದು ಮತ್ತು ಸತ್ಕರ್ಮಗಳನ್ನು ವೃದ್ಧಿಗೊಳಿಸುವುದು ಮನೆ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಈ ತಿಂಗಳ ವಿಶೇಷತೆ.
ಆದರೆ ಆಚಾರಕ್ಕಿಂತಲೂ ಅನಾಚಾರವು ಮುಹರಮ್ ಹೆಸರಿನಲ್ಲಿ ನಡೆಯುವುದು ಬಹಳ ಖೇದಕರ ಹಾಗೂ ವಿಷಾದನೀಯ ಸಂಗತಿ. ಮುಹರಮ್ ತಿಂಗಳ ಆಚರಣೆಗೆ ಬಹಳ ದುಖಃಕರವಾದ ಸಂಗತಿ ಮತ್ತು ಐತಿಹಾಸಿಕ ಘಟನೆಗಳೂ ಇದೆ. ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸ.ಅ ರವರ ಮಗಳಾದ ಫಾತಿಮಾ ಬೀವಿ ಹಾಗೂ ನಾಲ್ಕನೇ ಖಲೀಫರಾಗಿದ್ದ ಇಮಾಮ್ ಅಲಿ ರ.ಅ ಈ ದಂಪತಿಗಳ ಮಕ್ಕಳಾದ ಇಮಾಮ್ ಹಸನ್ ಮತ್ತು ಹುಸೈನ್ ದರ್ಮ ಪ್ರಚಾರಕ್ಕಾಗಿ ಶತ್ರುವಿನ ಮುಂದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಕರ್ ಬಲಾ ಮಣ್ಣಿನಲ್ಲಿ ಶಹೀದರಾದ ದಿನವಾಗಿದೆ ಮುಹರಮ್ ಈ ಘಟನೆಯ ನೆನಪು ಮತ್ತು ಸ್ಮರಣೆಯೇ ಈ ಆಚರಣೆಯ ಪ್ರಮುಖ ಉದ್ದೇಶ. ಹಬ್ಬ ಎಂದ ಕೂಡಲೇ ಎಲ್ಲರೂ ಸಂತೋಷ ಮೂಡುತ್ತದೆ. ಆದರೆ ಮೊಹರಂ ಹಬ್ಬದ ಆಚರಣೆ ದುಖಃದ ಪ್ರತೀಕ. ವರ್ಷಗಳ ಹಿಂದೆ ನಡೆದ ಒಂದು ದುರಂತ ಕಥೆಯೇ ಇದಕ್ಕೆ ಕಾರಣ.

muharram

ದುಃಖದ ಛಾಯೆ

ಮುಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುವುದು, ಶೋಕಾಚರಣೆಗಳಲ್ಲಿ ತೊಡಗಿಕೊಳ್ಳೋದು ಮತ್ತು ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ. ಈ ವೇಳೆ ಆಲಾಯಿ ಕುಣಿತ, ಮುಹರಮ್ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತದೆ. ಮುಹರಮ್ ಹೆಸರಿನಲ್ಲಿ ನಡೆಯುವ ಈ ಎಲ್ಲಾ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಸಲ್ಪಡುತ್ತಾ ಬಂದಿದೆ ಹೊರತು ಇದಕ್ಕೆ ಯಾವುದೇ ಧಾರ್ಮಿಕವಾದ ಪುರಾವೆಗಳು ಇಲ್ಲ. ನಮ್ಮ ನಾಡಿನ ಹಲವೆಡೆ ಜಾತಿ ಮತ ಧರ್ಮ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಮುಹರಮ್ ಆಚರಿಸೂದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಪದ್ಧತಿ ಇದನ್ನು ಶಾಂತಿ ಸೌಹಾರ್ದತೆಯ ಸಂಕೇತ ಎಂದರೂ ತಪ್ಪಾಗಲಾರದು.

ಮುಸ್ಲಿಮೇತರರೂ ಭಾಗಿ

ರಾಯಚೂರು ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮುಹರಂ ಪ್ರಚಲಿತವಾಗಿದೆ.

ರಾಮುಲಸ್ವಾಮಿ!

ಹೊಸಪೇಟೆಯ ರಾಮುಲಸ್ವಾಮಿ ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ಪ್ರಸಿದ್ಧಿ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್ ಗಳಿಗೆ ಹಿಂದೂ ಮುಸ್ಲಿಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ‘ಕಜ್ಜಿಗಳನ್ನು ವಾಸಿ ಮಾಡಿಕೊಳ್ಳುತ್ತಾರೆ. ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮುಹರಮ್ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ-ಮುಸ್ಲಿಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ.

ಇದನ್ನೂ ಓದಿ: Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

ಬೆಟಗೇರಿಯಲ್ಲಿ ಹಿಂದೂ-ಮುಸ್ಲಿಂ ಸಡಗರ

ಗದಗ ಬೆಟಗೇರಿಯಲ್ಲಿ ನಡೆಯುವ ಮುಹರಮ್ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ ಭಕ್ತರು ಪಾಲ್ಗೊಂಡು ಮೈ ತುಂಬಿದ ದೇವರಿಂದ ಮಳೆ ಬೆಳೆ ಕುರಿತು ಹೇಳಿಕೆ- ಕೇಳಿಕೆ ಮಾಡುತ್ತಾರೆ. ಸೊಟಕನ ಹಾಳದ ಡೋಲಿ ಮತ್ತು ಕೈ ದೇವರು ದ್ಯಾಮವ್ವನ ಗುಡಿಗೆ ಭೇಟಿಯಿತ್ತಾಗ ಊರ ಜನ ಇಮಾಮ ಹುಸೇನರು ತಂಗಿ ದ್ಯಾಮವ್ವನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ. ಹೀಗೆ ರಾಜ್ಯದ ಹಲವು ಗ್ರಾಮ ಪ್ರದೇಶಗಳಲ್ಲಿ ಮತ್ತು ದೇಶ ವಿದೇಶಗಳಲ್ಲಿ ಮುಹರಮ್ ಆಚರಣೆಯು ವಿಜೃಂಭಣೆಯಿಂದ ಆಚರಿಸುತ್ತಾರೆ.ಒಟ್ಟಿನಲ್ಲಿ ಮುಹರಮ್ ಆಚರಣೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳು ಅನಾಹುತಗಳಿಗೆ ಕಾರಣವಾಗದಿರಲಿ. ಶಾಂತಿ ಸೌಹಾರ್ದತೆ ಸಂತೋಷ ಸಾರುವುದೇ ಎಲ್ಲಾ ಹಬ್ಬದ ಮೂಲ ಉದ್ದೇಶ.

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!

ರಾಜಮಾರ್ಗ ಅಂಕಣ: 11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

VISTARANEWS.COM


on

world emoji day ರಾಜಮಾರ್ಗ ಅಂಕಣ
Koo

ಜುಲೈ 17 ವಿಶ್ವ ಇಮೋಜಿ ದಿನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ʻಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ’ ಎನ್ನುತ್ತದೆ ಚೈನೀಸ್ (Chinese) ಭಾಷೆ. ನಾವು, ನೀವೆಲ್ಲ ವಾಟ್ಸ್ಯಾಪ್ (WhatsApp), ಫೇಸ್ ಬುಕ್ (Facebook), ಟ್ವಿಟರ್ (Twitter) ಎಲ್ಲ ಕಡೆಗಳಲ್ಲಿ ಮೆಸೇಜ್ (Message) ರವಾನೆ ಮಾಡುವಾಗ, ಸ್ವೀಕಾರ ಮಾಡುವಾಗ ಈ ಚಂದ ಚಂದವಾದ ಎಮೋಜಿಗಳನ್ನು (Emojis) ಬಳಕೆ ಮಾಡಿಯೇ ಮಾಡಿರುತ್ತೇವೆ. ಉದ್ದುದ್ದ ಮೆಸೇಜ್ ಟೈಪಿಸಲು ಆಸಕ್ತಿ ಇಲ್ಲದೆ ಹೋದಾಗ, ಸಮಯದ ಕೊರತೆ ಇದ್ದಾಗ ಒಂದು ಎಮೋಜಿ ಹಾಕಿ ಭಾವನೆಗಳನ್ನು ವ್ಯಕ್ತಪಡಿಸಿದ್ದು ಇದೆ. ಈ ಎಮೋಜಿಗಳು ಉಂಟುಮಾಡುತ್ತಿರುವ ಮೂಡ್ ಇದೆಯಲ್ಲ ಅದು ವರ್ಣನಾತೀತ ಮತ್ತು ಭಾವನಾತೀತ.

ಈ ಎಮೋಜಿಗಳು ಇಂದು ಜಾಗತಿಕ ಭಾಷೆಯೇ ಆಗಿಬಿಟ್ಟಿವೆ!

ಈ ಎಮೋಜಿಗಳಿಗೂ ಒಂದು ಇತಿಹಾಸ ಇದೆ ಎಂದರೆ ನಮಗೆ ನಂಬುವುದು ಕಷ್ಟ ಆಗಬಹುದು. ಜಪಾನ್ ಭಾಷೆಯಲ್ಲಿ ಎ ಅಂದರೆ ಚಿತ್ರ. ಮೋಜಿ ಅಂದರೆ ಅಕ್ಷರ. ಒಟ್ಟಿನಲ್ಲಿ ಎಮೋಜಿ ಅಂದರೆ ಚಿತ್ರಾಕ್ಷರ ಎಂದರ್ಥ.

ಈ ಎಮೋಜಿಗಳು ಜನಿಸಿದ್ದು ಜಪಾನನಲ್ಲಿ. 1999ರಲ್ಲಿ ಜಪಾನ್ ದೇಶದ ಒಬ್ಬ ಸಾಮಾನ್ಯ ತಂತ್ರಜ್ಞ, ಆತನ ಹೆಸರು ಶಿಗೆತರ ಕುರಿತ, ಡೊಕೊಮೊ ಮೊಬೈಲ್ ಕಂಪೆನಿಗಾಗಿ ಈ ರೀತಿಯ 176 ಎಮೋಜಿಗಳನ್ನು ಡಿಸೈನ್ ಮಾಡಿ ಕೊಟ್ಟರು. ಅದರಲ್ಲಿ ನಗುವ, ಅಳುವ, ಸಿಟ್ಟು ತೋರುವ, ಕೊಂಕು ನುಡಿಯುವ, ಬೇಸರ ವ್ಯಕ್ತಪಡಿಸುವ, ಆನಂದ ಬಾಷ್ಪ ಸುರಿಸುವ, ಕೆಣಕುವ, ಸಿಡಿಯುವ….ಹೀಗೆ ನವರಸಗಳನ್ನು ಸ್ಫುರಿಸುವ ಎಮೋಜಿಗಳೂ ಇದ್ದವು. ಅವುಗಳು ಬಹುಬೇಗ ಜನಪ್ರಿಯ ಆದವು.

ಮುಂದೆ ಎಲ್ಲ ಮೊಬೈಲ್ ಕಂಪೆನಿಗಳು ಮುಗಿಬಿದ್ದು ಸಾವಿರಾರು ಎಮೋಜಿಗಳನ್ನು ತಮ್ಮ ಸಾಫ್ಟ್ ವೇರಗಳಲ್ಲಿ ಸಂಗ್ರಹ ಮಾಡಿ ಮಾರ್ಕೆಟ್ ಮಾಡಿದವು.

ಅದರಲ್ಲೂ ಆನಂದ ಭಾಷ್ಪ ಸುರಿಸುವ ಒಂದು ಎಮೋಜಿಯನ್ನು ನಾವು ಹೆಚ್ಚು ಬಳಕೆ ಮಾಡುತ್ತೇವೆ. ಅದನ್ನು 2015ರಲ್ಲಿ ಆಕ್ಸ್ಫರ್ಡ್ ವಿವಿಯು ‘ ವರ್ಷದ ಪದ’ ( ವರ್ಡ್ ಆಫ್ ದ ಇಯರ್) ಎಂದು ಪ್ರಶಸ್ತಿ ಕೊಟ್ಟು ಗೌರವಿಸಿತು. ಹಲವು ಮೊಬೈಲ್ ಕಂಪೆನಿಗಳು ಎಮೋಜಿಗಳನ್ನು ಜನಪ್ರಿಯ ಮಾಡಲು ಕೇವಲ ಅವುಗಳನ್ನು ಬಳಸಿ ಪ್ರೇಮಪತ್ರಗಳನ್ನು ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿದವು! ಚಿತ್ರಕಲಾ ಸ್ಪರ್ಧೆಗಳೂ ಹಲವೆಡೆ ನಡೆದವು.

emoji1

ಆಪಲ್ ಮೊಬೈಲ್ ಕಂಪೆನಿ ಇನ್ನಷ್ಟು ಮುಂದೆ ಹೋಗಿ ಜೆನ್ ಮೋಜಿ ಎಂಬ ಹೆಸರಿನ ಅಪಡೆಟೆಡ್ ವರ್ಷನನ್ನು ಡೆವಲಪ್ ಮಾಡಿತು. ಈ ಚಿತ್ರಾಕ್ಷರದ ಸಂಕೇತಗಳು ಬಹುಬೇಗ ಜನಪ್ರಿಯ ಆದವು ಮತ್ತು ಜಗತ್ತಿನಾದ್ಯಂತ ತಲುಪಿದವು. ಒಂದರ್ಥದಲ್ಲಿ ಈ ಎಮೋಜಿಗಳು ಭಾಷೆಗಳ ಹಂಗನ್ನು ಮೀರಿ ಬೆಳೆದವು. ಇನ್ನೂ ಕೆಲವು ಮೊಬೈಲ್ ಕಂಪೆನಿಗಳು ತಮ್ಮ ಆಯ್ಕೆಯ ಎಮೋಜಿಗಳನ್ನು ಡಿಸೈನ್ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿ ಉದಾರತೆ ಮೆರೆದವು.

ಜುಲೈ 17 ಎಮೋಜಿ ದಿನ ಯಾಕೆ?

11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಈಗ ಜನಪ್ರಿಯವಾಗುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ನ ಭಾಗವಾಗಿ ಕೂಡ ಈ ಎಮೋಜಿಗಳು ಉಂಟುಮಾಡುತ್ತಿರುವ ಪ್ರಭಾವವನ್ನು ಮತ್ತು ಸಂತೋಷವನ್ನು ನಾನು ಮತ್ತೆ ಬರೆಯುವ ಅಗತ್ಯವೇ ಇಲ್ಲ.

ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…

Continue Reading
Advertisement
Ravindra Jadeja
ಕ್ರೀಡೆ2 mins ago

Ravindra Jadeja: ವಿಶ್ವಕಪ್​ ಟ್ರೋಫಿಯೊಂದಿಗೆ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಜಡೇಜಾ

Terror Attacks in India
ದೇಶ5 mins ago

Terror Attacks in India: ಭಾರತದೊಳಕ್ಕೆ ನುಸುಳಲು ಉಗ್ರರಿಗೆ ಪಾಕಿಸ್ತಾನ ಧನಸಹಾಯ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

Director Arrest gajendra in murder case
ಸ್ಯಾಂಡಲ್ ವುಡ್19 mins ago

Director Arrest: ಕೊಲೆ ಕೇಸ್​​ನಲ್ಲಿ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಡಲ್​ವುಡ್ ನಿರ್ದೇಶಕ ಅರೆಸ್ಟ್​!

Vicky Kaushal Kissing Scenes of 27 Seconds deleated From Bad Newz
ಬಾಲಿವುಡ್47 mins ago

Vicky Kaushal: 27 ಸೆಕೆಂಡುಗಳ ಕಾಲ ಚುಂಬಸಿದ ವಿಕ್ಕಿ ಕೌಶಲ್ -ತೃಪ್ತಿ; ಸೆನ್ಸಾರ್‌ ಬೋರ್ಡ್‌ನಿಂದ ಬಿತ್ತು ಕತ್ತರಿ!

uttara kannada landslide shirur
ಉತ್ತರ ಕನ್ನಡ57 mins ago

Uttara Kannada Landslide: ಭೂಕುಸಿತದ ಜಾಗದ ಬಳಿಯೇ ʼಸುನಾಮಿʼ ಎಫೆಕ್ಟ್‌; ನೀರಿನ ರಭಸಕ್ಕೆ ಕೊಚ್ಚಿಹೋದ ಮಹಿಳೆ

Ajit Pawar
ರಾಜಕೀಯ59 mins ago

Ajit Pawar: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ಗೆ ಶಾಕ್‌; ಎನ್‌ಸಿಪಿಗೆ ರಾಜೀನಾಮೆ ನೀಡಿದ ಆಪ್ತ

KL Rahul
ಕ್ರೀಡೆ1 hour ago

KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

Samarjit Lankesh Monalisa Kannada Movie 20 Years Celebration Gowri Movie 2 Songs Released
ಸ್ಯಾಂಡಲ್ ವುಡ್2 hours ago

Samarjit Lankesh: ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ: ರಿಲೀಸ್ ಆಯ್ತು ‘ಗೌರಿ’ ಚಿತ್ರದ ಹಾಡುಗಳು

gt world mall
ಪ್ರಮುಖ ಸುದ್ದಿ2 hours ago

GT World Mall: ಪಂಚೆ ಧರಿಸಿ ಬಂದ ರೈತರಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ ಜಿಟಿ ವರ್ಲ್ಡ್‌ ಮಾಲ್‌

Kylian Mbappe
ಕ್ರೀಡೆ2 hours ago

Kylian Mbappe: ಬಾಲ್ಯದ ಕನಸಿನ ರಿಯಲ್‌ ಮ್ಯಾಡ್ರಿಡ್‌ ತಂಡ ಸೇರಿದ ಕೀಲಿಯನ್‌ ಎಂಬಾಪೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌