Fifa World Cup| ಕಾಲ್ಚೆಂಡಿನ ಕಾಳಗಕ್ಕೆ ಕತಾರ್​, ಈಕ್ವೆಡಾರ್ ಸಜ್ಜು​; ಯಾರಿಗೆ ಒಲಿಯಲಿದೆ ಗೆಲುವು? - Vistara News

Latest

Fifa World Cup| ಕಾಲ್ಚೆಂಡಿನ ಕಾಳಗಕ್ಕೆ ಕತಾರ್​, ಈಕ್ವೆಡಾರ್ ಸಜ್ಜು​; ಯಾರಿಗೆ ಒಲಿಯಲಿದೆ ಗೆಲುವು?

ಫಿಫಾ ಕಾಲ್ಚೆಂಡಿನ ಕರಾಮತ್ತಿಗೆ ಕ್ಷಣಗಣನೆ ಆರಂಭವಾಗಿದ್ದು ಭಾನುವಾರ ಅಧಿಕೃತ ಚಾಲನೆ ದೊರೆಯಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್​ ಮತ್ತು ಈಕ್ವೆಡಾರ್​ ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

VISTARANEWS.COM


on

fifa world cup 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಕಾಲ್ಚೆಂಡಿನ ಕಲರವ ಫಿಫಾ ವಿಶ್ವ ಕಪ್(Fifa World Cup 2022)​ಗೆ ಕ್ಷಣಗಣನೆ ಆರಂಭವಾಗಿದ್ದು ಭಾನುವಾರ ಈ ವರ್ಣರಂಜಿತ ಜಾತ್ರೆಗೆ ಚಾಲನೆ ದೊರೆಯಲಿದೆ. ದೋಹಾದ ಅಲ್‌ ಬೈತ್‌ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ತಂಡಗಳು ಎದುರಾಗಲಿದ್ದು, ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿವೆ.

ಭಾನುವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಇತ್ತಂಡಗಳು ಕಾದಾಟ ನಡೆಸಲಿದ್ದು ಅಂಕ ಪಟ್ಟಿಯಲ್ಲಿ ಖಾತೆ ತೆರೆಯುವುದು ಉಭಯ ತಂಡಗಳ ಗುರಿಯಾಗಿದೆ. ಆಫ್ರಿಕನ್‌ ಚಾಂಪಿಯನ್‌ ಸೆನೆಗಲ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ‘ಎ’ ಗುಂಪಿನಲ್ಲಿವೆ. ಅವುಗಳ ಸವಾಲು ಮೀರಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಗೆದ್ದರಷ್ಟೇ ನಾಕೌಟ್‌ ಹಂತ ಪ್ರವೇಶಿಸುವ ಸಾಧ್ಯತೆಯಿದೆ ಎಂಬುದರ ಅರಿವು ಎರಡೂ ತಂಡಗಳಿಗೆ ಇವೆ. ಏಕೆಂದರೆ ಪ್ರತಿ ಗುಂಪಿನಿಂದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ ನಾಕೌಟ್‌ ಹಂತ ಪ್ರವೇಶಿಸಲಿವೆ.

ಕತಾರ್​ ನೆಚ್ಚಿನ ತಂಡ

ಫಿಫಾ ಶ್ರೇಯಾಂಕದಲ್ಲಿ ಆತಿಥೇಯ ಕತಾರ್​ 50 ಹಾಗೂ ಈಕ್ವೆಡಾರ್​ 44ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಇದುವರೆಗೆ ಮೂರು ಸಲ ಎದುರಾಗಿದ್ದು, ತಲಾ ಒಂದರಲ್ಲಿ ಗೆದ್ದು ಸಮಬಲ ಸಾಧಿಸಿವೆ. ಇನ್ನೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 2018ರಲ್ಲಿ ದೋಹಾದಲ್ಲಿ ಕೊನೆಯ ಬಾರಿ ಎದುರಾಗಿದ್ದಾಗ ಕತಾರ್‌ 4-3 ಗೋಲುಗಳ ಅಂತರದಿಂದ ಮೇಲುಗೈ ಸಾಧಿಸಿತ್ತು. ಈ ಲೆಕ್ಕಾಚಾರದಲ್ಲಿ ಕತಾರ್​ ಗೆಲುವಿನ ನೆಚ್ಚಿನ ತಂಡವಾಗಿದೆ. ಜತೆಗೆ ತವರು ನೆಲದ ಪ್ರೇಕ್ಷಕರ ಬೆಂಬಲವೂ ಕತಾರ್‌ ತಂಡಕ್ಕಿದೆ. 2019ರ ಏಷ್ಯಾ ಕಪ್‌ ಚಾಂಪಿಯನ್‌ ತಂಡದ ಸ್ಟ್ರೈಕರ್​ಗಳಾದ ಅಕ್ರಮ್‌ ಅಫೀಫ್ ಮತ್ತು ಅಲ್ಮೋಜ್‌ ಅಲಿ ತಂಡದ ನೆಚ್ಚಿನ ಆಟಗಾರರಾಗಿದ್ದಾರೆ.

ಗೆಲುವಿನ ಸಂಪ್ರದಾಯ ಮುಂದುವರಿಸುತ್ತಾ ಕತಾರ್​

ಫಿಫಾ ಫುಟ್ಬಾಲ್​ ವಿಶ್ವ ಕಪ್‌ಗೆ ಆತಿಥ್ಯ ವಹಿಸಿದ್ದ ಯಾವುದೇ ದೇಶಗಳು ಮೊದಲ ಪಂದ್ಯವನ್ನು ಸೋತ ಇತಿಹಾಸವಿಲ್ಲ. ಆ ಸಂಪ್ರದಾಯವನ್ನು ಮುಂದುವರಿಸಬೇಕಾದ ಸವಾಲು ಕತಾರ್‌ ಮುಂದಿದೆ. ಟೂರ್ನಿಗೆ ಆತಿಥ್ಯ ವಹಿಸಿರುವುದರಿಂದ ಕತಾರ್‌ ತಂಡ ವಿಶ್ವ ಕಪ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಆದರೆ ಈಕ್ವೆಡಾರ್, ದಕ್ಷಿಣ ಅಮೆರಿಕದಂತಹ ಅತ್ಯಂತ ಬಲಿಷ್ಠ ತಂಡಗಳ ವಿರುದ್ಧ ಗೆಲುವಿನ ಹರ್ಡಲ್ಸ್​ ದಾಟಿ ಬಂದಿದೆ ಎಂಬುದೊಂದು ಕುತೂಹಲ.

ಈಕ್ವೆಡಾರ್‌ ತಂಡಕ್ಕೆ ಇದು ನಾಲ್ಕನೇ ವಿಶ್ವ ಕಪ್‌ ಟೂರ್ನಿ. ಒಮ್ಮೆ ಮಾತ್ರ ನಾಕೌಟ್‌ ಹಂತ ಪ್ರವೇಶಿಸಿದೆ. 2006ರ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತ್ತು.

ಪಂದ್ಯ ಆರಂಭ: ರಾತ್ರಿ 9.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನೆಮಾ

ಇದನ್ನೂ ಓದಿ | Fifa World Cup | ಫುಟ್ಬಾಲ್‌ ವಿಶ್ವ ಕಪ್‌ ಪಂದ್ಯಗಳು ನಡೆಯುವ ಸ್ಟೇಡಿಯಮ್‌ಗಳು ಯಾವುದೆಲ್ಲ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Meghana Gaonkar : ಮೇಘನಾ ಗಾಂವ್ಕರ್​ಗೆ ಖುಷಿಗೆ ʼದಿ ಜಡ್ಜ್‌ಮೆಂಟ್‌ʼ ಕಾರಣ, ಯಾಕೆ ಗೊತ್ತಾ?

Meghana Gaonkar: ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್‌ʼ ಸಿನಿಮಾ ಪೋಸ್ಟರ್‌, ಫಸ್ಟ್‌ಲುಕ್‌, ಟೀಸರ್‌ ಮತ್ತು ಟ್ರೇಲರ್‌ಗಳಲ್ಲಿ ನಟಿ ಮೇಘನಾ ಗಾಂವ್ಕರ್‌ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು ಹೊಸ ಪಾತ್ರದ ಬಗ್ಗೆ ಮೇಘನಾ ಗಾಂವ್ಕರ್‌ ಒಂದಷ್ಟು ಮಾತನಾಡಿದ್ದಾರೆ.

VISTARANEWS.COM


on

meghana Goankar
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್‌, ರೊಮ್ಯಾನ್ಸ್‌ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಮೇಘನಾ ಗಾಂವ್ಕರ್‌ (Meghana Gaonkar), ಈ ಬಾರಿ ಲೀಗಲ್‌-ಥ್ರಿಲ್ಲರ್‌ ಶೈಲಿಯ ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್‌ʼ ಸಿನಿಮಾ ಪೋಸ್ಟರ್‌, ಫಸ್ಟ್‌ಲುಕ್‌, ಟೀಸರ್‌ ಮತ್ತು ಟ್ರೇಲರ್‌ಗಳಲ್ಲಿ ನಟಿ ಮೇಘನಾ ಗಾಂವ್ಕರ್‌ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು ಹೊಸ ಪಾತ್ರದ ಬಗ್ಗೆ ಮೇಘನಾ ಗಾಂವ್ಕರ್‌ ಒಂದಷ್ಟು ಮಾತನಾಡಿದ್ದಾರೆ.

1) ʼದ ಜಡ್ಜ್‌ಮೆಂಟ್‌ʼ ಸಿನಿಮಾಕ್ಕೆ ಎಂಟ್ರಿಯಾಗಿದ್ದು ಹೇಗೆ?

ನಿಜಾ ಹೇಳಬೇಕೆಂದರೆ, ʼದ ಜಡ್ಜ್‌ಮೆಂಟ್‌ʼ ಸಿನಿಮಾಕ್ಕೆ ಕೊನೆಯದಾಗಿ ಸೇರ್ಪಡೆಯಾಗಿದ್ದೇ ನಾನು. ಇನ್ನೇನು ನಾನು ಮಾಡಬೇಕಾದ ಪಾತ್ರದ ಶೂಟಿಂಗ್‌ ಮಾಡೋದಕ್ಕೆ ನಾಲ್ಕೈದು ದಿನಗಳಷ್ಟೇ ಇದೆ ಎನ್ನುವಾಗ ಈ ಸಿನಿಮಾದ ಆಫರ್‌ ಬಂತು. ಆ ನಂತರ ಒಂದೇ ದಿನದಲ್ಲಿ ಆ ಆಫರ್‌ನ ನಾನೂ ಒಪ್ಪಿಕೊಂಡೆ. ಹೀಗೆ ʼದ ಜಡ್ಜ್‌ಮೆಂಟ್‌ʼ ಸಿನಿಮಾಕ್ಕೆ ಎಂಟ್ರಿಯಾದೆ.

2) ʼದ ಜಡ್ಜ್‌ಮೆಂಟ್‌ʼ ಸಿನಿಮಾ ಒಪ್ಪಿಕೊಳ್ಳಲು ಕಾರಣ?

ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳದ್ದು, ಒಂದು ತೂಕವಾದರೆ, ʼದ ಜಡ್ಜ್‌ಮೆಂಟ್‌ʼ ಸಿನಿಮಾದ ಪಾತ್ರದ್ದು ಇನ್ನೊಂದು ತೂಕ. ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿದೆ. ಸಿನಿಮಾದ ಕಥೆ, ಪಾತ್ರ, ಕಲಾವಿದರು ಮತ್ತು ತಂತ್ರಜ್ಞರ ತಂಡ ಎಲ್ಲವೂ ಇಷ್ಟವಾಯಿತು. ಹೀಗಾಗಿ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ.

3) ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?

ಈ ಸಿನಿಮಾದಲ್ಲಿ ನಾನು ಪ್ರೊಫೆಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರವಿಚಂದ್ರನ್‌ ಸರ್‌ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದೇನೆ. ಇಂದಿನ ಜನರೇಶನ್‌ನ ಮಹಿಳೆಯರು ಹೇಗೆ ಸ್ವತಂತ್ರವಾಗಿ ಬದುಕಲು ಬಯಸುತ್ತಾರೋ, ಅಂಥದ್ದೇ ಒಂದು ಪಾತ್ರ ಇದಾಗಿದೆ. ನನ್ನ ಪಾತ್ರ ಮತ್ತು ಸಿನಿಮಾದಲ್ಲಿ ನಾನಿರುವ ಸನ್ನಿವೇಶಗಳು ಹೆಚ್ಚಾಗಿ ಮನೆಯಲ್ಲೇ ನಡೆಯುತ್ತದೆ. ತುಂಬ ಎಮೋಶನ್‌ ಕ್ಯಾರಿ ಮಾಡುವಂಥ ಪಾತ್ರ ಇದಾಗಿದೆ.

4) ಮೊದಲ ಬಾರಿಗೆ ರವಿಚಂದ್ರನ್‌ ಅವರೊಂದಿಗೆ ಅಭಿನಯಿಸಿದ್ದು ಹೇಗಿತ್ತು?

ಮೊದಲ ಬಾರಿಗೆ ರವಿಚಂದ್ರನ್‌ ಅವರಂಥ ಲೆಜೆಂಡರಿ ಸ್ಟಾರ್‌ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬ ಖುಷಿಯಿದೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ಇದೂ ಕೂಡ ಒಂದು ಕಾರಣ. ಕೆಲ ವರ್ಷಗಳ ಹಿಂದೆ ರವಿಚಂದ್ರನ್‌ ಅವರೊಂದಿಗೆ ಅಭಿನಯಿಸುವ ಅವಕಾಶ ಬಂದಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ʼದ ಜಡ್ಜ್‌ಮೆಂಟ್‌ʼ ಸಿನಿಮಾದಲ್ಲಿ ಅದು ನೆರವೇರಿದೆ. ರವಿಚಂದ್ರನ್‌ ಅವರೊಂದಿಗೆ ಕೆಲಸ ಮಾಡಿದ್ದು, ನಿಜಕ್ಕೂ ಖುಷಿಕೊಟ್ಟಿದೆ.

ಇದನ್ನೂ ಓದಿ: Sandalwood Movie : ಸಿಂಹಗುಹೆಯಲ್ಲಿ ವಿಡಿಯೋ ಪೆನ್ ಡ್ರೈವ್ ಸದ್ದು!

5) ನಿಮ್ಮ ಪ್ರಕಾರ ʼದ ಜಡ್ಜ್‌ಮೆಂಟ್‌ʼ ಅಂದ್ರೇನು?

ಇದೊಂದು ಕಂಪ್ಲೀಟ್‌ ಕೋರ್ಟ್‌ ರೂಂ ಡ್ರಾಮಾ ಇರುವ ಲೀಗಲ್‌-ಥ್ರಿಲ್ಲರ್‌ ಸಿನಿಮಾ. ನನ್ನ ಪ್ರಕಾರ ಕನ್ನಡದಲ್ಲಿ ಇಂಥ ಸಿನಿಮಾಗಳು ಬಂದಿದ್ದು ತುಂಬ ವಿರಳ. ಅಂಥ ವಿರಳ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ ʼದ ಜಡ್ಜ್‌ಮೆಂಟ್‌ʼ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಇದೊಂದು ಲೀಗಲ್‌-ಥ್ರಿಲ್ಲರ್‌ ಶೈಲಿಯ ಸಿನಿಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಹೆಚ್ಚೇನೂ ಹೇಳಲಾರೆ.

6) ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ತಯಾರಿ ಹೇಗಿತ್ತು?

ಯಾವುದೇ ಸಿನಿಮಾದ ಪಾತ್ರವಾದರೂ, ಅದಕ್ಕೆ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಗಂಭೀರವಾಗಿದೆ. ಮನಸ್ಸಿನ ಭಾವನೆಗಳನ್ನು ಮಾತಿಗಿಂತ ಹೆಚ್ಚಾಗಿ ಭಾವನೆಗಳ ಮೂಲಕವೇ ತೋರಿಸಬೇಕಾಗಿತ್ತು. ಕಡಿಮೆ ಡೈಲಾಗ್ಸ್‌ನಲ್ಲಿ ಹೆಚ್ಚು ಅಭಿನಯಕ್ಕೆ ಸ್ಕೋಪ್‌ ಇರುವಂಥ ಪಾತ್ರ ಇದಾಗಿತ್ತು. ನಿರ್ದೇಶಕ ಗುರುರಾಜ್‌ ಕುಲಕರ್ಣಿ ಸಿನಿಮಾದ ಪ್ರತಿ ಪಾತ್ರಗಳು, ಸನ್ನಿವೇಶಗಳು ಹೇಗೆ ಬರಬೇಕು ಎಂಬುದನ್ನು ಕಲಾವಿದರಿಗೆ ಅರ್ಥೈಸಿ ಅವರಿಂದ ಅಭಿನಯ ತೆಗೆಸುತ್ತಿದ್ದರು.

7) ನಿರ್ದೇಶಕರು ಮತ್ತು ಚಿತ್ರತಂಡದ ಬಗ್ಗೆ ಏನು ಹೇಳುವಿರಿ?

ʼದ ಜಡ್ಜ್‌ಮೆಂಟ್‌ʼ ಸಿನಿಮಾದ ನಿರ್ದೇಶಕ ಗುರುರಾಜ್‌ ಮೂಲತಃ ಸಾಫ್ಟ್‌ವೇರ್‌ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದವರು. ಸಾಕಷ್ಟು ವಿಷಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. . ಬಿಗ್‌ ಕಾಸ್ಟಿಂಗ್‌, ಬಿಗ್‌ ಬಜೆಟ್‌ ಇಟ್ಟುಕೊಂಡು ಅಂದುಕೊಂಡಂತೆ, ಪ್ಲಾನ್‌ ಪ್ರಕಾರ ಇಡೀ ಸಿನಿಮಾವನ್ನು ನಿರ್ದೇಶಕರು ಮತ್ತು ಚಿತ್ರತಂಡ ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ತುಂಬ ಪ್ಯಾಶನೇಟ್‌ ಆಗಿ ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ.

8) ʼದ ಜಡ್ಜ್‌ಮೆಂಟ್‌ʼ ಮೇಲೆ ನಿಮ್ಮ ನಿರೀಕ್ಷೆ ಹೇಗಿದೆ?

ನನ್ನ ಪ್ರಕಾರ, ʼದ ಜಡ್ಜ್‌ಮೆಂಟ್‌ʼ ಮಾಮೂಲಿ ಎಂಟರ್‌ಟೈನ್ಮೆಂಟ್‌ ಸಿನಿಮಾಗಳ ಸಾಲಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೇರುವ ಸಿನಿಮಾವಲ್ಲ. ಕನ್ನಡದ ಮಟ್ಟಿಗೆ ತುಂಬ ಅಪರೂಪವಾಗಿರುವ ಲೀಗಲ್‌-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾ ಬಂದಿದೆ. ಇದರಲ್ಲೊಂದು ಒಳ್ಳೆಯ ವಿಷಯವಿದೆ. ಅದನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ಹೇಳಿದ್ದಾರೆ. ಆಡಿಯನ್ಸ್‌ಗೆ ಖಂಡಿತವಾಗಿಯೂ ʼದ ಜಡ್ಜ್‌ಮೆಂಟ್‌ʼ ಒಂದು ಒಳ್ಳೆಯ ಅನುಭವ ಕೊಟ್ಟು, ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ.

Continue Reading

ಪ್ರಮುಖ ಸುದ್ದಿ

Sandalwood Movie : ಸಿಂಹಗುಹೆಯಲ್ಲಿ ವಿಡಿಯೋ ಪೆನ್ ಡ್ರೈವ್ ಸದ್ದು!

Sandalwood Movie : ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಕಥೆ ಇರುವ ನಮ್ಮ ಚಿತ್ರದಲ್ಲಿ ಹೊರಗಡೆ ನಡೆಯುತ್ತಿರುವ ವಿಚಾರಗಳೇ ಇರಬಹುದು ಎನಿಸಿದರೂ ಅದು ಕಾಕತಾಳೀಯ. ವರ್ಷದ ಹಿಂದೆಯೇ ನಮ್ಮ ಚಿತ್ರ ಸೆನ್ಸಾರ್​ ಆಗಿತ್ತು. ಹೀರೋ‌ನೇ ಅಂಥಾ ವಿಡಿಯೋ‌ ಮಾಡ್ತಾನಾ;? ಯಾರು ಯಾಕೆ ಮಾಡ್ತಾನೆ ಅನ್ನೋದೇ ಸಸ್ಪೆನ್ಸ್ ಎಂದು ನಿರ್ದೇಶಕ ಎಸ್‌ಜಿಆರ್ ಹೇಳಿದ್ದಾರೆ.

VISTARANEWS.COM


on

Sandalwood Movie
Koo

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೇ ಹೋಲುವ ಝಲಕ್ ಒಳಗೊಂಡ ಸಿಂಹಗುಹೆ ಚಿತ್ರದ (Sandalwood Movie) ಟೀಸರ್ ಇದೀಗ ಭಾರೀ ಸದ್ದು ಮಾಡುತ್ತಿದೆ. ಅಶ್ಲೀಲ ವಿಡಿಯೋ ಪ್ರಕರಣ, ಪೆನ್ ಡ್ರೈವ್ ನಂಥ ವಿಚಾರಗಳೂ ಈ ಟೀಸರ್ ನಲ್ಲಿದೆ. ಈಗಾಗಲೇ ಬಿಡುಗಡೆಯಾದ ಈ ಟೀಸರ್ ಹಲವಾರು ಪ್ರಶ್ನೆ ಹಾಗು ಕುತೂಹಲ ಹುಟ್ಟು ಹಾಕಿದೆ. ಸಮರ್ಥ, ತಾಜಾ ಚಿತ್ರಗಳ ನಂತರ ಎಸ್‌.ಜಿ.ಆರ್. ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಹಗುಹೆ ಚಿತ್ರದ ಟೀಸರ್ ಸದ್ಯ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ನಿರ್ದೇಶಕ ಎಸ್‌ಜಿಆರ್ ಮಾತನಾಡಿ, ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಕಥೆ ಇರುವ ನಮ್ಮ ಚಿತ್ರದಲ್ಲಿ ಹೊರಗಡೆ ನಡೆಯುತ್ತಿರುವ ವಿಚಾರಗಳೇ ಇರಬಹುದು ಎನಿಸಿದರೂ ಅದು ಕಾಕತಾಳೀಯ. ವರ್ಷದ ಹಿಂದೆಯೇ ನಮ್ಮ ಚಿತ್ರ ಸೆನ್ಸಾರ್​ ಆಗಿತ್ತು. ಹೀರೋ‌ನೇ ಅಂಥಾ ವಿಡಿಯೋ‌ ಮಾಡ್ತಾನಾ;? ಯಾರು ಯಾಕೆ ಮಾಡ್ತಾನೆ ಅನ್ನೋದೇ ಸಸ್ಪೆನ್ಸ್.

ಇನ್ನು ಅನೇಕ ವಿಚಾರಗಳು ಚಿತ್ರದಲ್ಲಿವೆ. ಸಮಾಜದಲ್ಲಿ ಹೇಗಿರಬೇಕು, ಹೇಗಿರಬಾರದು ಅಂತ ಮೆಸೇಜ್ ಹೇಳಿದ್ದೇವೆ. ಮೊಬೈಲ್ ನಿಂದ ಏನೇನಾಗುತ್ತೆ ಅನ್ನೋದೂ ಚಿತ್ರದಲ್ಲಿದೆ.ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಜೂನ್ ವೇಳೆಗೆ ರಿಲೀಸ್ ಮಾಡುವ ಪ್ಲಾನಿದೆ ಎಂದು ಹೇಳಿದರು.

ಸಹ ನಿರ್ಮಾಪಕ ಕೃಷ್ಣ ಮಾತನಾಡಿ, ಡೈರೆಕ್ಟರ್ ಬಂದು ಒಂಟಿ ಮನೆಯಲ್ಲಿ ಈ ಥರ ನಡೆಯುತ್ತೆ ಅಂತ ಹೇಳಿದರು. ಕಥೆ ಇಂಟರೆಸ್ಟಿಂಗ್ ಆಗಿದೆ ಅಂತ ನಿರ್ಮಾಣಕ್ಕೆ ಮುಂದಾದೆವು ಎಂದರು.

ಇದನ್ನೂ ಓದಿ: A: Film by Upendra : ರೀ ರಿಲೀಸ್ ನಲ್ಲೂ ದಾಖಲೆ ನಿರ್ಮಿಸಿದ ಉಪೇಂದ್ರ ನಿರ್ದೇಶನದ “A”

ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ, ನಾನು ಚಿತ್ರದ ಸಾಂಗ್, ಆರ್.ಆರ್. ಮಾಡಿದ್ದೇನೆ. ನಾನೂ ಸಹ 2 ಹಾಡುಗಳನ್ನು ಹಾಡಿದ್ದೇನೆ. ಈಗಾಗಲೇ ರಿಲೀಸ್ ಆಗಿರುವ ಸಾಂಗ್ ವೈರಲ್ ಆಗಿದೆ‌ ಎಂದರು.

ನಟಿ ಅನುರಾಧಾ ಮಾತನಾಡಿ, ಈವರೆಗೆ ಸಣ್ಣಪುಟ್ಟ ರೋಲ್ ಮಾಡಿಕೊಂಡಿದ್ದೆ. ಇದೇ ಫಸ್ಟ್ ಟೈಂ ಸೆಕೆಂಡ್ ಲೀಡ್ ಮಾಡಿದ್ದೇನೆ. ಹಳ್ಳಿ ಹುಡುಗಿ ನಾಯಕನ ಲವರ್ ಪಾತ್ರ ಎಂದರು. ನಾಯಕ ರವಿ ಶಿರೂರ್ ಅವರು ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಿವಿಶ್ಕಾ ಪಾಟೀಲ್ ಚಿತ್ರದ ನಾಯಕಿಯಾಗಿದ್ದಾರೆ. ಎ.ಸಿ. ಮಹೇಂದರ್ ಅವರ ಛಾಯಾಗ್ರಹಣ, ಶಿವನಂಜೇಗೌಡ ಅವರ ಸಾಹಿತ್ಯ, ಸೈ ರಮೇಶ್ ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ,

Continue Reading

ವಿದೇಶ

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

ವಿಮಾನಗಳಲ್ಲಿ ಪ್ರಕ್ಷುಬ್ಧತೆಯ (Flight Turbulence) ಸಮಯದಲ್ಲಿ ಸುರಕ್ಷಿತವಾಗಿರಲು ಪ್ರಯಾಣಿಕರಿಗೆ ಅಮೆರಿಕದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌, ವಿಮಾನ ಸಿಬ್ಬಂದಿ ಪಾಲಿಸಬಹುದಾದ ಮತ್ತು ಪ್ರಯಾಣಿಕರು ನಿರ್ವಹಿಸಬೇಕಾದ ಮಾರ್ಗಸೂಚಿಯನ್ನು ನೀಡಿದೆ. ಈ ಕುರಿತ ವಿವರಣೆ ಇಲ್ಲಿದೆ. ವಿಮಾನದೊಳಗಿನ ಪ್ರಕ್ಷುಬ್ಧತೆ (Flight Turbulence) ಎಂದರೇನು, ಇದರಿಂದ ಪಾರಾಗುವುದು ಹೇಗೆ ಎಂಬ ಮಾಹಿತಿಯೂ ಇಲ್ಲಿದೆ.

VISTARANEWS.COM


on

By

Flight Turbulence
Koo

ವಿಮಾನ (flight) ಹಾರುವಾಗ ವಾಯು ಒತ್ತಡದಿಂದ ಕೆಲವೊಮ್ಮೆ ಪ್ರಕ್ಷುಬ್ಧತೆ (Flight Turbulence) ಉಂಟಾಗುತ್ತದೆ. ವಿಮಾನ ನಡುಗುತ್ತದೆ. ಈ ಸಂದರ್ಭದಲ್ಲಿ ಹಠಾತ್ ಆಘಾತಗಳು ಸಂಭವಿಸಿ ಸಾವು ನೋವು ಉಂಟಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬೇಕಾಗುತ್ತದೆ. ಇತ್ತೀಚೆಗೆ ಸಿಂಗಾಪುರ ಏರ್‌ಲೈನ್ಸ್ (singapore airlines) ವಿಮಾನ ಇಂಥದ್ದೇ ಪರಿಸ್ಥಿತಿಗೆ ಒಳಗಾಗಿ ಪ್ರಯಾಣಿಕರೊಬ್ಬರು ಸಾವಿಗೀಡಾಗಿ, ಹಲವರು ಪ್ರಯಾಣಿಕರು ಗಾಯಗೊಂಡಿದ್ದರು. ಲಂಡನ್‌ನಿಂದ ಸಿಂಗಾಪುರಕ್ಕೆ ಹಾರುತ್ತಿದ್ದ ಬೋಯಿಂಗ್ 777-312ER ವಿಮಾನ 321ರಲ್ಲಿದ್ದ ಪ್ರಯಾಣಿಕರು ವಾಯು ಪ್ರಕ್ಷುಬ್ಧತೆಯ ಭಯಾನಕತೆಯನ್ನು ಅನುಭವಿಸಬೇಕಾಯಿತು.

ವಾಯು ಪ್ರಕ್ಷುಬ್ಧತೆ ಎಂದರೇನು?

ವಾಯು ಪ್ರಕ್ಷುಬ್ಧತೆಯು ಭೂಮಿಯ ವಾತಾವರಣದಲ್ಲಿ ಗಾಳಿಯ ಅನಿಯಮಿತ ಮತ್ತು ಅನಿರೀಕ್ಷಿತ ಚಲನೆಯಿಂದ ಉಂಟಾಗುತ್ತದೆ. ಇದು ವಿಮಾನ ಹಾರಾಟದ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ವೇಗವಾಗಿ ವಾಹನ ಓಡಿಸುತ್ತಿದ್ದಾಗ ಯಾವ ಸೂಚನಾ ಫಲಕ ಇಲ್ಲದೆ ಹಠಾತ್‌ ಹಂಪ್‌ ಎದುರಾದಾಗ ಏನಾಗುತ್ತದೋ ವಿಮಾನದೊಳಗೆ ಹಾಗೆಯೇ ಆಗುತ್ತದೆ. ವಿಮಾನವು ಚಾಲಕನ ನಿಯಂತ್ರಣ ಕಳೆದುಕೊಂಡು ಪತನಗೊಳ್ಳುವಂತಾಗುತ್ತದೆ.

ಆಗ ಏನು ಮಾಡಬೇಕು?

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಕುಳಿತಿರಬೇಕು. ಸೈನ್ ಆಫ್ ಆಗಿದ್ದರೂ, ಅದನ್ನು ಬಿಗಿಯಾಗಿ ಇರಿಸಬೇಕು.
ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿ. ಅವರ ಮಾತನ್ನು ಕೇಳಿ. ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಕ್ಷುಬ್ಧತೆಯ ಸಮಯದಲ್ಲಿ ಕ್ಯಾಬಿನ್ ಸುತ್ತಲೂ ಚಲಿಸುವುದನ್ನು ತಪ್ಪಿಸಿ ಮತ್ತು ಆತಂಕದಿಂದ ಕಿರುಚದೇ ಮೌನವಾಗಿ ಕುಳಿತುಕೊಳ್ಳಿ.

ಕ್ಯಾಬಿನ್‌ನಲ್ಲಿ ಇಟ್ಟಿರುವ ವಸ್ತುಗಳು ಮೈಮೇಲೆ ಬೀಳದಂತೆ ಸುರಕ್ಷಿತವಾಗಿರಿಸಿ. ಸೋರಿಕೆ ಅಥವಾ ಬೀಳುವಿಕೆಯನ್ನು ತಪ್ಪಿಸಲು ವಸ್ತುಗಳನ್ನು ಓವರ್ ಹೆಡ್ ವಿಭಾಗಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ.
ಪ್ರಕ್ಷುಬ್ಧತೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ. ರೆಸ್ಟ್ ರೂಮ್‌ ಅನ್ನು ಬಳಸಬೇಕಾದರೆ ಎದ್ದೇಳುವ ಮೊದಲು ಶಾಂತ ಕ್ಷಣಕ್ಕಾಗಿ ಕಾಯಿರಿ. ಸ್ಥಿರತೆಗಾಗಿ ಹ್ಯಾಂಡ್ರೈಲ್‌ಗಳನ್ನು ಬಳಸಿ.

ವಾಯು ಪ್ರಕ್ಷುಬ್ಧತೆಗೆ ಕಾರಣಗಳೇನು?

ಚಂಡಮಾರುತ, ಜೆಟ್ ಸ್ಟ್ರೀಮ್‌ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳಿಂದ ವಾಯು ಪ್ರಕ್ಷುಬ್ಧತೆ ಉಂಟಾಗಬಹುದು. ಹವಾಮಾನ ಬದಲಾವಣೆಗಳಿಂದಾಗಿ ಗಾಳಿಯ ಪ್ರಕ್ಷುಬ್ಧತೆಯು ಆಗಾಗ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ತೀವ್ರವಾದ ಪ್ರಕ್ಷುಬ್ಧ ಘಟನೆಗಳು ಅಪರೂಪ. ಪೈಲಟ್‌ಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ.

ಇದನ್ನೂ ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ಮಾಜಿ ಪೈಲೆಟ್ ಹೇಳಿದ್ದೇನು?

43 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಪೈಲಟ್ ಕ್ಯಾಪ್ಟನ್ ಕ್ರಿಸ್ ಹ್ಯಾಮಂಡ್ ಅವರು ಈ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಇಂಥ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೆಚ್ಚು ಸಮಾಧಾನದಿಂದ ಇರಿಸುವಂತೆ ಮಾಡುವ ಜವಾಬ್ದಾರಿ ಪೈಲಟ್‌ನದ್ದಾಗಿದೆ. ಎಲ್ಲಕ್ಕಿಂತ ಪೈಲಟ್‌ ತಾನು ಸಮಾಧಾನದಿಂದ ಇದ್ದು, ವಿವೇಚನೆ ಮತ್ತು ಅನುಭವ ಬಳಸಿ ವಿಮಾನವನ್ನು ನಿಯಂತ್ರಿಸಬೇಕಾಗುತ್ತದೆ. ಅನುಭವಿ ಚಾಲಕರು ಇಂಥ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡುತ್ತಾರೆ.

Continue Reading

ವೈರಲ್ ನ್ಯೂಸ್

Viral Video: ಮದುವೆಗೂ ಮೊದಲು ವಧುವನ್ನು ಕಿಡ್ನ್ಯಾಪ್‌ ಮಾಡಲೇಬೇಕು! ಇದು ಈ ಜನಾಂಗದ ಕಡ್ಡಾಯ ನಿಯಮ!

ಮದುವೆಗೂ ಮುನ್ನ ಹಿಂಬಾ ಬುಡಕಟ್ಟಿನ ಸಂಪ್ರದಾಯದಲ್ಲಿ ವಧುವನ್ನು ಅಪಹರಿಸಿ ನೂರು ದಿನಗಳ ಕಾಲ ಕೆಂಪು ಮಣ್ಣಿನ ಲೇಪನ ಮಾಡಲಾಗುತ್ತದೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ವಿವಾಹ ವಿಧಿವಿಧಾನಗಳು (Wedding Rituals) ವಿಶ್ವದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆಯಾಗಿರುತ್ತದೆ. ಅದರಲ್ಲೂ ಕೆಲವೊಂದು ಚಿತ್ರವಿಚಿತ್ರ ಆಚರಣೆಗಳೂ ಇವೆ. ಅದರಲ್ಲಿ ನಮಿಬಿಯಾದ (Namibia) ಅರೆ ಅಲೆಮಾರಿ ಬುಡಕಟ್ಟು (tribe) ಜನಾಂಗವಾದ ಹಿಂಬಾದ (himba) ಈ ವಿವಾಹ ಆಚರಣೆಯು ಸೇರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋಗಳು ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ಹಿಂಬಾವನ್ನು ನಮೀಬಿಯಾದ ಕೊನೆಯ ಅರೆ ಅಲೆಮಾರಿ ಬುಡಕಟ್ಟು ಜನಾಂಗ ಎಂದು ಪರಿಗಣಿಸಲಾಗಿದೆ. ಸುಮಾರು 50,000 ಜನಸಂಖ್ಯೆಯನ್ನು ಹೊಂದಿರುವ ಇವರು ಇಲ್ಲಿನ ಸ್ಥಳೀಯ ಜನರು. ಅವರಿಗೆ ಸ್ವಂತ ಮನೆಗಳಿದ್ದರೂ ಮಳೆ ಅಥವಾ ನೀರಿನ ಕೊರತೆಯಿಂದಾಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಾರೆ. ಹೀಗಾಗಿ ಇವರನ್ನು ಅರೆ ಅಲೆಮಾರಿ ಎಂದು ಕರೆಯಲಾಗುತ್ತದೆ. ಈ ಬುಡಕಟ್ಟು ಜನ ತಮ್ಮ ವಿಚಿತ್ರ ವಿವಾಹ ಪದ್ಧತಿಗಳಿಂದಾಗಿ ಆಗಾಗ್ಗೆ ಎಲ್ಲರ ಗಮನ ಸೆಳೆಯುತ್ತಾರೆ.

ವಧುವಿನ ಅಪಹರಣ

ಹಿಂಬಾ ಬುಡಕಟ್ಟಿನಲ್ಲಿ ಮದುವೆಗೆ ಮೊದಲು ವಧುವನ್ನು ಅಪಹರಿಸಲಾಗುತ್ತದೆ. ಆಕೆಯನ್ನು 100 ದಿನಗಳ ಕಾಲ ಹೆಚ್ಚಿನ ಭದ್ರತೆಯ ಕೋಣೆಯಲ್ಲಿ ಇರಿಸಲಾಗುತ್ತದೆ. ಆ ಸಮಯದಲ್ಲಿ ಕೆಂಪು ಮಣ್ಣನ್ನು ಅವಳ ಸಂಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಇದೀಗ ಅಂತಹ ವಿಡಿಯೋ ವೈರಲ್ ಆಗಿದೆ. ಹಿಂಬಾ ಬುಡಕಟ್ಟಿನಲ್ಲಿ ಮದುವೆಯ ಸಂಪ್ರದಾಯದಲ್ಲಿ ವಧುವಿನ ಅಪಹರಣ ಮತ್ತು ಅವಳಿಗೆ ಕೆಂಪು ಮಣ್ಣನ್ನು ಹೊದಿಸುವುದನ್ನು ಒಳಗೊಂಡಿರುತ್ತದೆ.

ಹೀಗೆ ಅವಳನ್ನು ಅಪಹರಿಸುವಾಗ ವಧು ಹೊಸ ಬಟ್ಟೆ ಮತ್ತು ದುಬಾರಿ ಆಭರಣಗಳೊಂದಿಗೆ ಅಲಂಕರಿಸಲ್ಪಡುತ್ತಾಳೆ. ಈ ಸಮಯದಲ್ಲಿ ಅವಳು ಧರಿಸುವ ಕೆಲವು ವಿಶೇಷ ಉಡುಪುಗಳು ಒಕೋರಿ ಎಂದು ಕರೆಯಲ್ಪಡುವ ಚರ್ಮದ ಶಿರಸ್ತ್ರಾಣವಾಗಿದೆ. ಇದು ಸಾಮಾನ್ಯವಾಗಿ ವಧುವಿನ ತಾಯಿಯಿಂದ ಸಿಗುವ ಉಡುಗೊರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹಿಂಬಾ ಬುಡಕಟ್ಟಿನ ಹುಡುಗಿಯೊಬ್ಬಳು ತನ್ನ ದೇಹದಾದ್ಯಂತ ಕೆಂಪು ಮಣ್ಣನ್ನು ಲೇಪಿಸಿಕೊಂಡು ಕುಳಿತಿದ್ದಾಳೆ. ಕಾಲ್ಬೆರಳಿನಿಂದ ಕೂದಲಿನವರೆಗೆ, ಹುಡುಗಿ ಕೆಂಪು ಮಣ್ಣಿನಲ್ಲಿಮುಚ್ಚಲ್ಪಟ್ಟಿರುತ್ತಾಳೆ.
ಘಾನಾದ ಫ್ರಾಫಾ ಬುಡಕಟ್ಟು ಕೂಡ ಈ ಪದ್ಧತಿಯನ್ನು ಅನುಸರಿಸುತ್ತದೆ.

ಈ ಕುರಿತು ಕಾಮೆಂಟ್ ಮಾಡಿರುವ ಒಬ್ಬರು, ಹುಡುಗಿಯನ್ನು 100 ದಿನಗಳ ಕಾಲ ಕೆಂಪು ಮಣ್ಣಿನಲ್ಲಿ ಮುಚ್ಚಲು ಏನಾದರೂ ವೈಜ್ಞಾನಿಕ ಕಾರಣವಿದೆಯೇ ಎಂದು ಪ್ರಶ್ನಿಸಿದ್ದಾರೆ.


ಮದುವೆ ಮತ್ತು ಮಧುಚಂದ್ರದ ಮೊದಲು ಅವಳ ಚರ್ಮವನ್ನು ನಯಗೊಳಿಸುವುದಕ್ಕಾಗಿ ಮತ್ತು ಅವಳ ದೇಹವನ್ನು ಸ್ವಚ್ಛ ಗೊಳಿಸುವುದಕ್ಕಾಗಿ ಈ ರೀತಿ ಮಾಡುತ್ತಾರೆಯೇ ಎಂಬುದನ್ನು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಂಪ್ರದಾಯ, ಪದ್ಧತಿ ಮತ್ತು ಆಚರಣೆಗಳು ವೈಜ್ಞಾನಿಕ ಮಹತ್ವವನ್ನು ಹೊಂದಿವೆ ಮತ್ತು ಜನರು ಅದನ್ನು ಅನುಸರಿಸುವಂತೆ ಮಾಡಲು ಧಾರ್ಮಿಕ ನಂಬಿಕೆಗಳಿಗೆ ಸೇರಿಸಲಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ

Continue Reading
Advertisement
road Accident
ತುಮಕೂರು3 mins ago

Road Accident: ಬೈಕ್‌ಗಳ ಅಪಘಾತ; ಮಗನ ಕಣ್ಣೆದುರೇ ರಕ್ತಕಾರಿ ತಾಯಿ ಮೃತ್ಯು; ಮೂವರು ಗಂಭೀರ

lok sabha election 2024 supreme court
ಪ್ರಮುಖ ಸುದ್ದಿ6 mins ago

Lok Sabha Election 2024: ಬೂತ್‌ವಾರು ಮತದಾನ ವಿವರ ನೀಡಬೇಕಿಲ್ಲ: ಸುಪ್ರೀಂ ಕೋರ್ಟ್‌

meghana Goankar
ಸಿನಿಮಾ12 mins ago

Meghana Gaonkar : ಮೇಘನಾ ಗಾಂವ್ಕರ್​ಗೆ ಖುಷಿಗೆ ʼದಿ ಜಡ್ಜ್‌ಮೆಂಟ್‌ʼ ಕಾರಣ, ಯಾಕೆ ಗೊತ್ತಾ?

Hardik Pandya & Natasa Stankovic
ಕ್ರೀಡೆ24 mins ago

Hardik Pandya & Natasa Stankovic: ಹಾರ್ದಿಕ್​ ಪಾಂಡ್ಯಗೆ ಕೈ ಕೊಟ್ಟರೇ ಪತ್ನಿ ನತಾಶಾ!

Sandalwood Movie
ಪ್ರಮುಖ ಸುದ್ದಿ31 mins ago

Sandalwood Movie : ಸಿಂಹಗುಹೆಯಲ್ಲಿ ವಿಡಿಯೋ ಪೆನ್ ಡ್ರೈವ್ ಸದ್ದು!

Bank fraud Scam in Urban Co operative Bank of Karwar
ಕರ್ನಾಟಕ59 mins ago

Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಸಾವಿರ ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

RR vs SRH
ಕ್ರೀಡೆ1 hour ago

RR vs SRH: ಹೈದರಾಬಾದ್-ರಾಜಸ್ಥಾನ್ ನಡುವಣ ಇಂದಿನ ಕ್ವಾಲಿಫೈಯರ್​ ಪಂದ್ಯಕ್ಕೆ ಮಳೆ ಕಾಟ ಇದೆಯೇ?

COMEDK UGET Result 2024 Out
ಶಿಕ್ಷಣ1 hour ago

COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

Rotary June Run
ಪ್ರಮುಖ ಸುದ್ದಿ2 hours ago

Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

Flight Turbulence
ವಿದೇಶ3 hours ago

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌