Team India | ರಾಜಾ, ನೀವು ಬರದಿದ್ದರೆ ನಮಗೇನೂ ಆಗುವುದಿಲ್ಲ; ಪಾಕ್‌ಗೆ ತಿರುಗೇಟು ಕೊಟ್ಟ ಅಭಿಮಾನಿಗಳು! - Vistara News

ಕ್ರಿಕೆಟ್

Team India | ರಾಜಾ, ನೀವು ಬರದಿದ್ದರೆ ನಮಗೇನೂ ಆಗುವುದಿಲ್ಲ; ಪಾಕ್‌ಗೆ ತಿರುಗೇಟು ಕೊಟ್ಟ ಅಭಿಮಾನಿಗಳು!

ಪಾಕಿಸ್ತಾನ ತಂಡ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರದಿದ್ದರೆ ಬಿಸಿಸಿಐಗೆ ನಷ್ಟವೇನೂ ಆಗುವುದಿಲ್ಲ ಎಂದು ಕ್ರಿಕೆಟ್‌ ಅಭಿಮಾನಿಗಳು ಪಿಸಿಬಿ ಅಧ್ಯಕ್ಷ ರಮೀಜ್‌ ರಾಜಾಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಭಾರತ ತಂಡ ಮುಂದಿನ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿರುವ ಮಾತನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಅಗಾಗ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದೆ. ಅಂತೆಯೇ ಪಿಸಿಬಿ ಮುಖ್ಯಸ್ಥ ರಮೀಜ್‌ ರಾಜಾ ಅವರು ಶುಕ್ರವಾರ, ನೀವು ಬರದಿದ್ದರೆ, ನೀವು ಆಯೋಜಿಸುವ ಏಕ ದಿನ ವಿಶ್ವ ಕಪ್‌ಗೆ ನಾವು ಬರುವುದಿಲ್ಲ. ಹಾಗಾದರೆ ನಿಮ್ಮ ವಿಶ್ವ ಕಪ್‌ ನೋಡುವವರು ಯಾರು ಎಂದು ಪ್ರಶ್ನಿಸಿದ್ದರು. ಮಾತಿಗೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೆಂಡಾಮಂಡಲರಾಗಿದ್ದು, ಬಗೆಬಗೆಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವ ವಿಚಾರ ಭಾರತ ಸರ್ಕಾರದ ತೀರ್ಮಾನಕ್ಕೆ ಬದ್ಧವಾಗಿರುತ್ತದೆ. ಹೀಗಾಗಿ ಟೀಮ್‌ ಇಂಡಿಯಾ ಏಷ್ಯಾ ಕಪ್‌ಗೆ ಅಲ್ಲಿಗೆ ಹೋಗುವುದಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಏಷ್ಯಾ ಕಪ್‌ ತಟಸ್ಥ ತಾಣದಲ್ಲಿ ನಡೆಯುತ್ತದೆ ಎಂಬುದಾಗಿ ಹೇಳಿದ್ದರು. ಇದಕ್ಕೆ ಹಿಂದೊಮ್ಮೆ ಪಿಸಿಬಿ ಅಧ್ಯಕ್ಷ ರಮೀಜ್‌ ರಾಜಾ ಪ್ರತಿಕ್ರಿಯೆ ಕೊಟ್ಟಿದ್ದರು. ಅದನ್ನೇ ಶುಕ್ರವಾರ ಪುನರುಚ್ಚರಿಸಿ “ನಮ್ಮ ನಿಲುವು ಕೂಡ ಸ್ಪಷ್ಟ. ಭಾರತ ಬಂದರೆ ಮಾತ್ರ ೨೦೨೩ರಲ್ಲಿ ಭಾರತ ಆಯೋಜಿಸುವ ವಿಶ್ವ ಕಪ್‌ಗೆ ನಮ್ಮ ತಂಡವನ್ನು ಕಳುಹಿಸುತ್ತೇವೆ. ಇಲ್ಲದಿದ್ದರೆ ನಾವು ಹೋಗುವುದಿಲ್ಲ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯದಿದ್ದರೆ, ಆ ವಿಶ್ವ ಕಪ್‌ ನೋಡಲು ಜನರೇ ಬರುವುದಿಲ್ಲ,” ಎಂಬುದಾಗಿ ಹೇಳಿಕೆ ಕೊಟ್ಟಿದ್ದರು.

“ಮಿಸ್ಟರ್‌ ರಮೀಜ್‌ ರಾಜಾ, ಪಾಕಿಸ್ತಾನ ತಂಡ ಭಾರತಕ್ಕೆ ಬರದೇ ಹೋದರೆ ನಷ್ಟವೇನೂ ಇಲ್ಲ. ಭಾರತದ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಸಾಲುಗಟ್ಟಿ ನಿಲ್ಲುತ್ತಾರೆ. ನಿಮ್ಮ ಪಂದ್ಯಕ್ಕಿಂತ ಹೆಚ್ಚಿನ ಮಂದಿ ನಮ್ಮ ಪಂದ್ಯವನ್ನು ವೀಕ್ಷಿಸುತ್ತಾರೆ,” ಎಂಬುದಾಗಿ ಕ್ರಿಕೆಟ್‌ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ಟ್ವೀಟ್‌ ಮಾಡಿ, ಪಾಕಿಸ್ತಾನ ಕ್ರಿಕೆಟ್‌ ತಂಡ ಇತ್ತೀಚಿನ ದಿನಗಳಲ್ಲಿ ಟಿ೨೦ ಮಾದರಿಯಲ್ಲಿ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ. ಅದರೆ, ಕ್ರಿಕೆಟ್‌ ಜಗತ್ತು ಭಾರತ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಹೆಚ್ಚು ನೆಚ್ಚಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ಭಾರತ ಮತ್ತು ಜಿಂಬಾಬ್ವೆ ನಡುವೆ ಇತ್ತೀಚೆಗೆ ನಡೆದ ಟಿ೨೦ ವಿಶ್ವ ಕಪ್‌ ಪಂದ್ಯವನ್ನು ಉದಾಹರಣೆಯನ್ನಾಗಿ ಇಟ್ಟುಕೊಂಡು ಬಿಸಿಸಿಐ ಸಾಮರ್ಥ್ಯವನ್ನು ಬಣ್ಣಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ೮೨,೫೦೭ ಮಂದಿ ಪ್ರೇಕಕ್ಷರು ಬಂದಿದ್ದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಿನ ಫೈನಲ್ ಪಂದ್ಯವನ್ನು ೮೦, ೪೬೨ ಮಂದಿ ವೀಕ್ಷಿಸಿದ್ದರು. ಇದನ್ನೇ ಉದಾಹರಣೆಯಾಗಿ ಕೊಟ್ಟು, ನೀವು ಬರದಿದ್ದರೇ ಏನೂ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Ramiz Raja | ಭಾರತದ ಜತೆ ಕ್ರಿಕೆಟ್​ ಆಡದಿದ್ದರೆ ಪಾಕ್ ಕ್ರಿಕೆಟ್​ ಮಂಡಳಿ ಕುಸಿತ ಗ್ಯಾರಂಟಿ: ರಮೀಜ್​ ರಾಜಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rohit Sharma : ಏಕ ದಿನ ಸರಣಿಗಾಗಿ ಶ್ರೀಲಂಕಾ ತಲುಪಿದ ರೋಹಿತ್, ವಿರಾಟ್​ ಕೊಹ್ಲಿ

Rohit Sharma : ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಊಹಾಪೋಹಗಳು ಇದ್ದವು. ಆದರೆ, ರೋಹಿತ್ ಅವರನ್ನು ಏಕದಿನ ನಾಯಕನನ್ನಾಗಿ ಘೋಷಿಸಲಾಯಿತು. ಕೊಹ್ಲಿಯನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಯಿತು. 2024 ರ ಟಿ 20 ವಿಶ್ವಕಪ್​ನಲ್ಲಿ ಭಾರತದ ಗೆಲುವಿನ ಒಂದು ತಿಂಗಳ ನಂತರ ಭಾರತೀಯ ದಿಗ್ಗಜರು ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ.

VISTARANEWS.COM


on

Koo

ಬೆಂಗಳೂರು: ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಸ್ಟಾರ್ ಆಟಗಾರರು ಏಕ ದಿನ ಸರಣಿಗಾಗಿ ಕೊಲಂಬೊಗೆ ಬಂದಿಳಿದಿದ್ದಾರೆ. ಅವರು ಶ್ರೀಲಂಕಾ ವಿರುದ್ಧದ ಭಾರತದ ಏಕದಿನ ಸರಣಿಗೆ ಮುಂಚಿತವಾಗಿ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ. ಜುಲೈ 29, ಸೋಮವಾರ ಮಧ್ಯಾಹ್ನ ಕೊಹ್ಲಿ ದ್ವೀಪ ರಾಷ್ಟ್ರಕ್ಕೆ ಬಂದಿಳಿದಿದ್ದಾರೆ. ರೋಹಿತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಭಾನುವಾರ ಲಂಕಾ ತಲುಪಿದ್ದಾರೆ. 50 ಓವರ್​ಗಳ ಸರಣಿ ಪ್ರಾರಂಭವಾಗುವ ಮೊದಲು ಕೊಹ್ಲಿ ಮತ್ತು ರೋಹಿತ್ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಟಿ 20 ವಿಶ್ವಕಪ್ ಗೆಲುವಿನ ನಂತರ ಜೂನ್ 29 ರಂದು ಸ್ಟಾರ್ ಜೋಡಿ ಟಿ 20 ಯಿಂದ ನಿವೃತ್ತಿ ಘೋಷಿಸಿದ್ದರು.

ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಊಹಾಪೋಹಗಳು ಇದ್ದವು. ಆದರೆ, ರೋಹಿತ್ ಅವರನ್ನು ಏಕದಿನ ನಾಯಕನನ್ನಾಗಿ ಘೋಷಿಸಲಾಯಿತು. ಕೊಹ್ಲಿಯನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಯಿತು. 2024 ರ ಟಿ 20 ವಿಶ್ವಕಪ್​ನಲ್ಲಿ ಭಾರತದ ಗೆಲುವಿನ ಒಂದು ತಿಂಗಳ ನಂತರ ಭಾರತೀಯ ದಿಗ್ಗಜರು ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಆ ದಿನವೇ, ರೋಹಿತ್ ಮತ್ತು ಕೊಹ್ಲಿ ಭಾರತಕ್ಕಾಗಿ ಕಿರು ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರು. ಆಟದ ಉಳಿದ ಎರಡು ಸ್ವರೂಪಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಕುಟುಂಬದೊಂದಿಗೆ ಸಮಯ ಕಳೆದ ಕೊಹ್ಲಿ-ರೋಹಿತ್

ಟಿ 20 ಐ ನಿವೃತ್ತಿಯ ನಂತರ, ಕೊಹ್ಲಿ ಮತ್ತು ರೋಹಿತ್ ತಮ್ಮ ಕುಟುಂಬಗಳೊಂದಿಗೆ ಸುಂದರ ಸಮಯವನ್ನು ಕಳೆದರು. ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳಾದ ವಮಿಕಾ ಮತ್ತು ಅಕೆ ಕೊಹ್ಲಿ ಅವರೊಂದಿಗೆ ಲಂಡನ್ ಗೆ ಹಾರಿದ್ದಾರೆ. ರೋಹಿತ್ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಮತ್ತು ಮಗಳು ಸಮೈರಾ ಅವರೊಂದಿಗೆ ಯುಎಸ್ಎಗೆ ತೆರಳಿದ್ದರು.

ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರು ಸಜ್ಜು

ಈ ಸರಣಿಯಲ್ಲಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ತಂಡಕ್ಕಾಗಿ ಆಡಲಿದ್ದಾಋಎ. ಕೆಎಲ್ ರಾಹುಲ್ ಕೂಡ ಸರಣಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಟಿ 20 ಐ ಸರಣಿಯಿಂದ ವಿಶ್ರಾಂತಿ ಪಡೆದ ವಿಶ್ವ ಚಾಂಪಿಯನ್ ಕುಲದೀಪ್ ಯಾದವ್ ಮರಳಲಿದ್ದಾರೆ. ಹರ್ಷಿತ್ ರಾಣಾ ಕೂಡ ಸರಣಿಯಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಈ ಆಟಗಾರರು ಕೊಲಂಬೊದಲ್ಲಿ ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರ ಅಡಿಯಲ್ಲಿ ತರಬೇತಿ ಪಡೆಯಲಿದ್ದಾರೆ.

ಇದನ್ನೂ ಓದಿ: Paris Olympics 2024 : ಮನು ಭಾಕರ್ ಸೇರಿದಂತೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ಎಕ್ಸ್​ ಖಾತೆಯಲ್ಲಿ ಐಫೆಲ್​ ಟವರ್ ಚಿತ್ರ

ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಭಾರತ ತಂಡವು ಪಲ್ಲೆಕೆಲೆಯಲ್ಲಿ ನಡೆಯಲಿರುವ 3 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾಗವಹಿಸುತ್ತಿದೆ. ಶ್ರೀಲಂಕಾ ವಿರುದ್ಧ ಭಾರತ 2-0 ಮುನ್ನಡೆ ಸಾಧಿಸಿದ್ದು, ಜುಲೈ 30 ರಂದು ನಡೆಯಲಿರುವ 3 ನೇ ಟಿ 20 ಐ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಟಿ 20 ಐ ತಂಡದ ಅನೇಕ ಆಟಗಾರರು ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ 50 ಓವರ್​ಗಳ ಸ್ವರೂಪದ ಸರಣಿ ಆಗಸ್ಟ್ 2 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 7 ರವರೆಗೆ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

IND vs SL T20 : ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಜಯ, ಸರಣಿ ಕೈವಶ

IND vs SL T20 : ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಂತೆಯೇ ಭಾರತ ರನ್ ಮಾಡಲು ಆರಂಭಿಸಿ 6 ರನ್ ಬಾರಿಸಿದ್ದಾಗ ಮಳೆ ಶುರುವಾಯಿತು. ತುಂಬಾ ಹೊತ್ತು ನಷ್ಟವಾದ ಕಾರಣ ಭಾರತಕ್ಕೆ 8 ಓವರ್​ಗಳಲ್ಲಿ 76 ರನ್ ಸವಾಲು ನೀಡಲಾಯಿತು. ಭಾರತ ಇನ್ನೂ 3 ಎಸೆತ ಬಾಕಿ ಇರುವಾಗ 3 ವಿಕೆಟ್​ ನಷ್ಟಕ್ಕೆ 81 ರನ್ ಬಾರಿಸಿ ಗೆಲುವು ಕಂಡಿತು.

VISTARANEWS.COM


on

IND vs SL T20
Koo

ಪಲ್ಲೆಕೆಲೆ: : ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ (IND vs SL T20) ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆಯೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ. ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಸೂರ್ಯಕುಮಾರ್ ಯಾದವ್ ಇದರೊಂದಿಗೆ ಭರ್ಜರಿ ಆರಂಭ ಮಾಡಿದರೆ ಕೋಚ್ ಗೌತಮ್ ಗಂಭೀರ್​ ಕೂಡ ಮೊದಲ ಯಶಸ್ಸು ಸಾಧಿಸಿದ್ದಾರೆ. ಮಳೆಯಿಂದ ಬಾಧಿತವಾತ ಪಂದ್ಯದಲ್ಲಿ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಂತೆಯೇ ಭಾರತ ರನ್ ಮಾಡಲು ಆರಂಭಿಸಿ 6 ರನ್ ಬಾರಿಸಿದ್ದಾಗ ಮಳೆ ಶುರುವಾಯಿತು. ತುಂಬಾ ಹೊತ್ತು ನಷ್ಟವಾದ ಕಾರಣ ಭಾರತಕ್ಕೆ 8 ಓವರ್​ಗಳಲ್ಲಿ 76 ರನ್ ಸವಾಲು ನೀಡಲಾಯಿತು. ಭಾರತ ಇನ್ನೂ 3 ಎಸೆತ ಬಾಕಿ ಇರುವಾಗ 3 ವಿಕೆಟ್​ ನಷ್ಟಕ್ಕೆ 81 ರನ್ ಬಾರಿಸಿ ಗೆಲುವು ಕಂಡಿತು.

ಮೊದಲು ಬ್ಯಾಟ್ ಮಾಡಿದ ಲಂಕಾ ಪವರ್​ ಪ್ಲೇನಲ್ಲಿ 54 ರನ್ ಗಳಿಸಿತು. ಪಥುಮ್ ನಿಸ್ಸಾಂಕಾ ಉತ್ತಮವಾಗಿ ಆಡಿದರು. ಕುಸಾಲ್ ಮೆಂಡಿಸ್ ಅವರ ವಿಕೆಟ್ ಕಳೆದುಕೊಂಡರು. ನಿಸ್ಸಾಂಕಾ 24 ಎಸೆತಗಳಲ್ಲಿ 32 ರನ್ ಗಳಿಸಿ ರವಿ ಬಿಷ್ಣೋಯ್ ಬೌಲಿಂಗ್​ಗೆ ಔಟಾದರು. ಬಳಿಕ ಕುಸಾಲ್ ಪೆರೆರಾ ಅತ್ಯುತ್ತಮ ಪ್ರದರ್ಶನ ನೀಡಿದರು. ಮಧ್ಯಮ ಓವರ್ಗಳಲ್ಲಿ ಇನ್ನಿಂಗ್ಸ್​ಗೆ ವೇಗ ನೀಡಿದ ಅವರು 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ನೊಂದಿಗೆ 53 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 16ನೇ ಓವರ್ನಲ್ಲಿ ಪೆರೆರಾ ಮತ್ತು ಕಮಿಂಡು ಮೆಂಡಿಸ್ ಅವರನ್ನು ಒಂದೇ ಓವರ್​ನಲ್ಲಿ ಔಟ್ ಮಾಡಿದರು.

ಪೆರೆರಾ ಔಟಾದ ನಂತರ ಶ್ರೀಲಂಕಾ ಕೊನೆಯ ನಾಲ್ಕು ಓವರ್ ಗಳಲ್ಲಿ ಕೇವಲ 22 ರನ್ ಗಳಿಸಿತು. ದಸುನ್ ಶನಕಾ ಮತ್ತು ವನಿಂದು ಹಸರಂಗ ಗೋಲ್ಡನ್ ಡಕ್​ ಔಟಾದರ. ಭಾರತದ ಪರ ಬಿಷ್ಣೋಯ್ ತಮ್ಮ 4 ಓವರ್​ಗಳ ಸ್ಪೆಲ್​ನಲ್ಲಿ 3 ವಿಕೆಟ್ ಪಡೆದರು. ಅರ್ಷ್ದೀಪ್ ಸಿಂಗ್ 2 ವಿಕೆಟ್ ಉರುಳಿಸಿದರು.

ಸೂರ್ಯಕುಮಾರ್, ಜೈಸ್ವಾಲ್ ಗೆಲುವು ತಂದುಕೊಟ್ಟರು

ಭಾರತದ ರನ್ ಚೇಸ್ ನ ಮೊದಲ ಓವರ್ ನಲ್ಲಿ ಮಳೆ ಬಂತು. ಆದರೆ ಅಂತಿಮವಾಗಿ ಭಾರತಕ್ಕೆ 8 ಓವರ್ಗಳಲ್ಲಿ 78 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಗಿಲ್​ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಆಡಲು ಬಂದ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾದರು. ಹೀಗಾಗಿ ಭಾರತ ಅವರು ಆರಂಭಿಕ ತೊಂದರೆಯಲ್ಲಿ ಸಿಲುಕಿತು.

ಇದನ್ನೂ ಓದಿ: Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಅಬ್ಬರಿಸಿದರು. ಭಾರತವು ರನ್​ಗಳಿಕೆಯಲ್ಲಿ ಹಿಂದೆ ಬೀಳದಂತೆ ನೋಡಿಕೊಂಡರು. 12 ಎಸೆತಗಳಲ್ಲಿ 26 ರನ್ ಗಳಿಸಿದ ಸೂರ್ಯಕುಮಾರ್ ಮಥೀಶಾ ಪತಿರಾನಾ ಎಸೆತಕ್ಕೆ ಔಟಾದರು. ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಗಳಿಸಿದರು.

ಡೆತ್ ಓವರ್​ಗಳಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾರ್ದಿಕ್ ಪಾಂಡ್ಯ ಎಲ್ಲಾ ಪ್ರಯತ್ನ ಮಾಡಿದರು. ಅವರು ಒಂಬತ್ತು ಎಸೆತಗಳಲ್ಲಿ 22 ರನ್ ಗಳಿಸಿ ಔಟಾಗದೆ ಉಳಿದರು.

Continue Reading

ಪ್ರಮುಖ ಸುದ್ದಿ

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

Womens Asia Cup : ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

VISTARANEWS.COM


on

Women's Asia Cup
Koo

ಪಲ್ಲೆಕೆಲೆ: ಫೈನಲ್ ಪಂದ್ಯದಲ್ಲಿ ವೈಫಲ್ಯ ಕಂಡ ಭಾರತ ಮಹಿಳೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದ್ದು, ಮಹಿಳೆಯರ ಏಷ್ಯಾ ಕಪ್​ (Womens Asia Cup) ಟ್ರೋಫಿ ಉಳಿಸಲು ವಿಫಲಗೊಂಡಿದೆ. ಕಳೆದ ಬಾರಿ ಭಾರತ ಚಾಂಪೊಯನ್ ಆಗಿತ್ತು, ಅಲ್ಲದೆ, ಈ ಬಾರಿಯೂ ತಂಡ ಉತ್ತಮವಾಗಿತ್ತು. ಆದರೆ, ಕಪ್ ಗೆಲ್ಲುವಲ್ಲಿ ಕೊನೇ ಕ್ಷಣದಲ್ಲಿ ಎಡವಿತು. ಇದೇ ವೇಳೆ ಚಾಮರಿ ಅಟ್ಟಪಟ್ಟು ನೇತೃತ್ವದ ಲಂಕಾ ವನಿತೆಯರು ಮೊದಲ ಬಾರಿಗೆ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಲಂಕಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಭಾರತ ತಂಡ ಹಾಲಿ ಆವೃತ್ತಿಯಲ್ಲೂ ಬಲಾಢ್ಯ ತಂಡವಾಗಿತ್ತು. ಈ ಹಿಂದಿನ ಎಂಟು ಆವೃತ್ತಿಗಳಲ್ಲಿ 7 ಟ್ರೋಫಿ ಗೆದ್ದಿತ್ತು. ಅಂತೆಯೇ 8ನೇ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅದಕ್ಕೆ ಲಂಕಾ ವನಿತೆಯರು ಅವಕಾಶ ಕೊಡಲಿಲ್ಲ. ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್​​ನಲ್ಲಿ ಪ್ರವೇಶಿಸಿದ್ದ ದ್ವೀಪರಾಷ್ಟ್ರ, ಕೊನೆಗೂ 6ನೇ ಪ್ರಯತ್ನದಲ್ಲಿ ಗೆಲುವಿನ ಕನಸು ನನಸಾಗಿಸಿಕೊಂಡಿದೆ.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಆರಂಭಿಕ ಹಿನ್ನಡೆ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಬೆಂಬಲವಾಗಿನಿಂತರು. ಹೀಗಾಗಿ ಎರಡನೇ ವಿಕೆಟ್​ಗೆ ಲಂಕಾ ತಂಡ 87 ರನ್ ಗಳಿಸಿತು. ಇದೇ ವೇಳೆ ಚಾಮರಿ ಅರ್ಧ ಶತಕ ಬಾರಿಸಿದರು.
43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 61 ರನ್ ಗಳಿಸಿದ್ದ ಚಾಮರಿ ಔಟಾದರೂ ಹರ್ಷಿತಾ ಗೆಲುವಿನ ಕಡೆಗೆ ಮುನ್ನುಗ್ಗಿದರು. ಹರ್ಮನ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ ಅರ್ಧಶತಕ ಪೂರೈಸಿದರು.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಮಂಧಾನ ಏಕಾಂಗಿ ಹೋರಾಟ

ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 44 ರನ್ ಬಂದರೂ ಶಫಾಲಿ ವರ್ಮಾ 16 ರನ್​ಗಳಿಗೆ ಆಟ ಮುಗಿಸಿದರು. ಫೈನಲ್​ಗೆ ಎಂಟ್ರಿ ಪಡೆದ ಉಮಾ ಚೆಟ್ರಿ 9 ರನ್​ಗೆ ನಿರ್ಗಮಿಸಿದರು. ಹರ್ಮನ್​ಪ್ರೀತ್​ ಕೌರ್​ (11) ಬೇಗನೆ ಔಟಾದ ಕಾರಣ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಬ್ರೇಕ್ ಬಿತ್ತು. ಸತತ ವಿಕೆಟ್​ ಪತನದ ಮಧ್ಯೆಯೂ ಮಂಧಾನ ಅರ್ಧಶತಕ ಸಿಡಿಸಿ ಆಸರೆಯಾದರು.

ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಲು ನೆರವಾದರು. ಜೆಮಿಮಾ ರೊಡ್ರಿಗಸ್ 29 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ ಅಬ್ಬರದ 30 ರನ್ ಕಲೆ ಹಾಕಿದರು. ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 1 ರನ್ ಗಳಿಸಿದರು.

Continue Reading

ಪ್ರಮುಖ ಸುದ್ದಿ

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Manu Bhaker : ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Manu Bhaker
Koo

ನವದೆಹಲಿ: 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಮೆಡಲ್​ಗಳ ಖಾತೆ ತೆರೆದ ಹರಿಯಾಣದ ಮನು ಭಾಕರ್ (Manu Bhaker) ಅವರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಅವರಾಗಿದ್ದಾರೆ.

ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಹರಿಯಾಣದ ಮಗಳಿಂದ ಇಡೀ ದೇಶ ನಿರೀಕ್ಷಿಸುತ್ತಿದ್ದ ಪದಕದ ಭರವಸೆ ಈಡೇರಿದೆ ಎಂದು ಹೇಳಿದ್ದಾರೆ.

ದೇಶದ ಹೆಮ್ಮೆಯ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್​ನಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ ಎಂದು ಸೈನಿ ಪೋಸ್ಟ್ ಮಾಡಿದ್ದಾರೆ.

ಇಂದು, 22 ವರ್ಷದ ಮನು ಭಾಕರ್ ಇಡೀ ದೇಶ ಮತ್ತು ಹರಿಯಾಣ ರಾಜ್ಯವು ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಬ್ಬ ಹರ್ಯಾಣ ಜನ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಎಕ್ಸ್ ಗೆ ತೆರಳಿ ಮಹಿಳಾ ಅಥ್ಲೀಟ್ ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

“ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೂಟಿಂಗ್​​ನಲ್ಲಿ 12 ವರ್ಷಗಳ ಪದಕಗಳ ಬರವನ್ನು ಕೊನೆಗೊಳಿಸಿದ್ದಾರೆ. ಈ ಸಾಧನೆಯೊಂದಿಗೆ ಮನು ಭಾಕರ್​ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ ಮತ್ತು “ಭಾರತಕ್ಕೆ ಮೊದಲ ಪದಕ ಪಡೆದ ಮನು ಭಾಕರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Continue Reading
Advertisement
Paris Olympics 2024
ಕ್ರೀಡೆ32 mins ago

Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

Rajendra Nagara tragedy
ದೇಶ59 mins ago

Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Mosquito Repellents
ಆರೋಗ್ಯ1 hour ago

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

DK Shivakumar
ಕರ್ನಾಟಕ1 hour ago

DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

ICW 2024
ಫ್ಯಾಷನ್2 hours ago

ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

Aditya Birla Group
ಚಿನ್ನದ ದರ2 hours ago

Aditya Birla Group: ಟಾಟಾ, ಅಂಬಾನಿಯೊಂದಿಗೆ ಸ್ಪರ್ಧೆ: ಆಭರಣ ವ್ಯಾಪಾರಕ್ಕೆ ಬಿರ್ಲಾ ಎಂಟ್ರಿ!

ಪ್ರಮುಖ ಸುದ್ದಿ2 hours ago

Rohit Sharma : ಏಕ ದಿನ ಸರಣಿಗಾಗಿ ಶ್ರೀಲಂಕಾ ತಲುಪಿದ ರೋಹಿತ್, ವಿರಾಟ್​ ಕೊಹ್ಲಿ

karnataka Rain
ಮಳೆ2 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

New Toll System
ತಂತ್ರಜ್ಞಾನ2 hours ago

New Toll System: ಫಾಸ್ಟ್‌ ಟ್ಯಾಗ್‌ಗೂ ಉಪಗ್ರಹ ಆಧರಿತ ಟೋಲ್‌ ಸಂಗ್ರಹಕ್ಕೂ ಏನು ವ್ಯತ್ಯಾಸ? ಏನು ಪ್ರಯೋಜನ?

Manu Bhaker
ಪ್ರಮುಖ ಸುದ್ದಿ2 hours ago

Paris Olympics 2024 : ಮನು ಭಾಕರ್ ಸೇರಿದಂತೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ಎಕ್ಸ್​ ಖಾತೆಯಲ್ಲಿ ಐಫೆಲ್​ ಟವರ್ ಚಿತ್ರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌