Motivational story | ಹಣದ ಆಸೆಗೆ ಬಿದ್ದ ವಂಚಕ ಮತ್ತು ವ್ಯಾಮೋಹವೇ ಇಲ್ಲ ಮಹಮ್ಮದ್‌ ಅಬ್ದುಲ್ಲಾ! - Vistara News

ಪ್ರಮುಖ ಸುದ್ದಿ

Motivational story | ಹಣದ ಆಸೆಗೆ ಬಿದ್ದ ವಂಚಕ ಮತ್ತು ವ್ಯಾಮೋಹವೇ ಇಲ್ಲ ಮಹಮ್ಮದ್‌ ಅಬ್ದುಲ್ಲಾ!

Motivational story | ಅವರನ್ನು ಪ್ರಾಮಾಣಿಕತೆಯ ಪರೀಕ್ಷೆಗೆ ಒಡ್ಡಲು ಯಾರೂ ಮುಂದಾಗಲಿಲ್ಲ. ಆದರೆ, ಅವರೇ ಒಡ್ಡಿಕೊಂಡರು. ಅಷ್ಟು ಹೊತ್ತಿಗೆ ಅವರ ಕೈಲಿದ್ದ ಹಣವೇ ನಾಪತ್ತೆಯಾಗಿತ್ತು!

VISTARANEWS.COM


on

ship travel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- Motivational story
ಇದು ಕೆಲವು ದಶಕಗಳ ಹಿಂದಿನ ಕಥೆ. ಮಹಮ್ಮದ್ ಅಬ್ದುಲ್ಲಾ ಅವರು ತುಂಬ ತಿಳಿವಳಿಕೆ ಹೊಂದಿರುವ ಪ್ರಾಮಾಣಿಕ ಮನುಷ್ಯ. ಹಣವಂತರೇ ಆದರೂ ಅಂತಸ್ತಿನ ಆಸೆಗೆ ಬಿದ್ದವರಲ್ಲ. ಇನ್ನೊಬ್ಬರ ಜತೆ ಜಗಳ ಮಾಡಿದವರಲ್ಲ. ಅವರು ಒಮ್ಮೆ ಮುಂಬಯಿಯಿಂದ ಸೌದಿಗೆ ಹಡಗಿನಲ್ಲಿ ಪ್ರಯಾಣ ಮಾಡಬೇಕಾಗಿ ಬಂತು.

ಹೋದಲ್ಲಿ ಯಾರಾದರೂ ಬಡವರು ಸಿಕ್ಕಿದರೆ, ಯಾರಿಗಾದರೂ ತುರ್ತು ಅಗತ್ಯ ಬಿದ್ದರೆ ಇರಲಿ ಎಂದು ತಮ್ಮ ಪ್ರಯಾಣದ ಖರ್ಚಿನ ಹೊರತಾಗಿಯೂ ಒಂದು ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದರು. ಆ ಕಾಲದಲ್ಲಿ ಅಷ್ಟೊಂದು ದೊಡ್ಡ ಮೊತ್ತ ಯಾರಲ್ಲೂ ಇರುತ್ತಿರಲಿಲ್ಲ.

ಅಬ್ದುಲ್ಲಾ ಅವರು ತಮ್ಮ ವಿವೇಕದ ಮಾತು, ಸಂಯಮದ ನಡೆಯಿಂದ ಪ್ರಯಾಣ ಆರಂಭವಾದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ಹತ್ತಿರವಾದರು. ಹಲವಾರು ಮಂದಿ ಅವರ ಬಳಿ ಬಂದು ಮಾತನಾಡಿ ಹೋಗುತ್ತಿದ್ದರು. ಕೆಲವರು ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆದುಕೊಂಡರು.

ಈ ನಡುವೆ, ಪ್ರಯಾಣಿಕರಲ್ಲಿ ಒಬ್ಬ ಅವರಿಗೆ ಸ್ವಲ್ಪ ಹೆಚ್ಚು ಆತ್ಮೀಯನಾದ. ಮಾತಿನ ನಡುವೆ ಅವರು ತಾನು ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಇಟ್ಟುಕೊಂಡಿದ್ದು, ಸೌದಿಯಲ್ಲಿ ಯಾರಿಗಾದರೂ ಅಗತ್ಯ ಇರುವವರಿಗೆ ಹಂಚಲು ತೀರ್ಮಾನಿಸಿದ್ದನ್ನು ಅವನಿಗೂ ಹೇಳಿದರು.

ಅಷ್ಟು ಹೊತ್ತಿಗೆ ಆ ವ್ಯಕ್ತಿಗೆ ಆಸೆ ಶುರುವಾಯಿತು. ಹೇಗಾದರೂ ಮಾಡಿ ಹಣವನ್ನು ಲಪಟಾಯಿಸಬೇಕು ಎಂದು ಯೋಚನೆ ಮಾಡಿದ. ಒಂದು ಬೆಳಗ್ಗೆ ಅವರು ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ. ʻನನ್ನ ಒಂದು ಲಕ್ಷ ರೂ. ಕಾಣೆಯಾಗಿದೆ. ಯಾರೋ ತೆಗೆದಿದ್ದಾರೆ. ಈಗ ನಾನು ಏನು ಮಾಡಲಿ?’ ಎಂದು ಅಳತೊಡಗಿದ. ಹಡಗಿನ ಸಿಬ್ಬಂದಿ ಬಂದು ಏನೆಂದು ವಿಚಾರಿಸಿದರು. ʻಹಣ ಇದ್ದರೆ ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರುತ್ತದೆ. ಸಿಕ್ಕೇ ಸಿಗುತ್ತದೆʼ ಎಂದು ಧೈರ್ಯ ಹೇಳಿದರು.

ಎಲ್ಲರನ್ನೂ ವಿಚಾರಿಸಿದ್ದಲ್ಲದೆ ತಪಾಸಣೆಯನ್ನೂ ನಡೆಸಿದರು. ಮಹಮ್ಮದ್ ಅಬ್ದುಲ್ಲಾ ಅವರ ಸರದಿ ಬಂದಾಗ,`ʻಬೇಡ ಸ್ವಾಮಿ.. ನಿಮ್ಮನ್ನು ನಾವು ತಪಾಸಣೆ ಮಾಡುವುದಿಲ್ಲ. ನಿಮ್ಮ ಬಗ್ಗೆ ಸಂಶಯಪಡುವುದು ಕೂಡಾ ತಪ್ಪಾಗುತ್ತದೆ,” ಎಂದರು. ಆದರೆ, ಅಬ್ದುಲ್ಲಾ ಒಪ್ಪಲಿಲ್ಲ. ʻಇಲ್ಲ ಹಣ ಕಳವಾಗಿದೆ. ನೀವು ನನ್ನನ್ನು ತಪಾಸಣೆ ಮಾಡದೆ ಹೋದರೆ ಸಂಶಯ ಉಳಿದುಹೋಗುತ್ತದೆ. ಹೀಗಾಗಿ ತಪಾಸಣೆ ಮಾಡಿ,’ ಎಂದು ಒತ್ತಾಯಿಸಿದರು.

ಅಬ್ದುಲ್ಲಾ ಅವರನ್ನು ತಪಾಸಣೆ ಮಾಡಿದಾಗಲೂ ಏನೂ ಸಿಗಲಿಲ್ಲ. ಕೊನೆಗೂ ಯಾರ ಬಳಿಯಲ್ಲೂ ಅಷ್ಟು ಮೊತ್ತ ಸಿಗಲೇ ಇಲ್ಲ.

ಇದಾಗಿ ಎರಡು ದಿನಗಳ ಬಳಿಕ ಅದೇ ಸಹ ಪ್ರಯಾಣಿಕ ಬಂದು ಅಬ್ದುಲ್ಲಾ ಅವರನ್ನು ಕೇಳಿದ: ಅಲ್ಲಾ ಸ್ವಾಮಿ, ನನ್ನ ಬಳಿ ಒಂದು ಲಕ್ಷ ರೂ. ಇದೆ ಅಂದಿರಿ. ಆದರೆ, ತಪಾಸಣೆ ಮಾಡಿದಾಗ ಸಿಗಲಿಲ್ಲವಲ್ಲ.. ಎಲ್ಲಿ ಹೋಯಿತು? ಎಂದು ಹೇಳಿದ.

ಅಬ್ದುಲ್ಲಾ ನಗುತ್ತಾ ಹೇಳಿದರು: ನಾನು ಅದನ್ನು ಸಮುದ್ರಕ್ಕೆ ಎಸೆದು ಬಿಟ್ಟೆ.

ಸಹ ಪ್ರಯಾಣಿಕ ಕೇಳಿದ: ಯಾಕೆ?

ಅಬ್ದುಲ್ಲಾ ಹೇಳಿದರು: ನಾನು ಬದುಕಿನಲ್ಲಿ ಸಂಪಾದಿಸಿರುವುದು ಎರಡು ದೊಡ್ಡ ಆಸ್ತಿಗಳನ್ನು. ಒಂದು ಪ್ರಾಮಾಣಿಕತೆ, ಇನ್ನೊಂದು ಇತರರ ನಂಬಿಕೆ. ಒಂದು ವೇಳೆ ನನ್ನ ಬಳಿ ಹಣ ಸಿಕ್ಕಿದ್ದರೂ ಜನ ಖಂಡಿತವಾಗಿ ಅದು ನನ್ನದೇ ಎಂದು ನಂಬುತ್ತಿದ್ದರೋ ಏನೋ.. ಆದರೆ, ಕೆಲವರಾದರೂ ನನ್ನ ಪ್ರಾಮಾಣಿಕತೆಯನ್ನು ಸಂಶಯಪಡುತ್ತಿದ್ದರು. ಅಷ್ಟಕ್ಕೂ ನಾನು ಇದನ್ನು ಯಾರಿಗಾದರೂ ಕೊಡಬೇಕೆಂದೇ ತಂದದ್ದು. ಅದರ ಬಗ್ಗೆ ನನಗೆ ವ್ಯಾಮೋಹವಿರಲಿಲ್ಲ. ಹಾಗಾಗಿ ಸಮುದ್ರಕ್ಕೆ ಎಸೆದೆ. ಒಂದು ವೇಳೆ, ನೀನು ಈ ರೀತಿ ಕುತಂತ್ರ ಮಾಡದೆ ನೇರವಾಗಿ ಕೇಳಿದ್ದರೂ ಪೂರ್ತಿ ಅಲ್ಲದಿದ್ದರೂ ದೊಡ್ಡ ಮೊತ್ತವನ್ನು ಕೊಡುತ್ತಿದ್ದೆ.

ಸಹ ಪ್ರಯಾಣಿಕ ನಾಚಿ ತಲೆ ತಗ್ಗಿಸಿದ.

ಇದನ್ನೂ ಓದಿ | Motivational story | ಅಲ್ಲಾ ಮಾರಾಯ್ತಿ ಆನೆ ರಾಣಿ.. ನಿನ್ನ ಮರಿ ಮರ ಯಾಕೆ ಹತ್ತಬೇಕು? ಟಾಪರ್‌ ಯಾಕಾಗ್ಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Paris Olympics 2024 : 1900ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ (Paris Olympics 2024) ನಾಲ್ಕನೇ ದಿನದಲ್ಲಿ ಭಾರತ ಅಥ್ಲೀಟ್​ಗಳು ಕೆಲವು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಇದುವರೆಗೆ ಕೇವಲ 1 ಕಂಚಿನ ಪದಕವನ್ನು ಮಾತ್ರ ಪಡೆದಿದೆ. ಆದಾಗ್ಯೂ ಇನ್ನೂ ಪದಕಗಳನ್ನು ಗೆಲ್ಲುವ ಭರವಸೆಯಿದೆ. ಹೀಗಾಗಿ ಕ್ರೀಡಾಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಸೃಷ್ಟಿಯಾಗಿದೆ. ಪ್ರಮುಖವಾಗಿ ಒಂದು ಪದಕದ ಸ್ಪರ್ಧೆಯೂ ಮಂಗಳವಾರ ನಡೆಯಲಿದೆ.

ಒಲಿಂಪಿಕ್ಸ್​​ನ 4ನೇ ದಿನವಾದ ಜುಲೈ 30ರಂದು (Paris Olympics 2024) ಭಾರತದ ಶೂಟರ್ ಮನು ಭಾಕರ್ ಇತಿಹಾಸ ನಿರ್ಮಿಸುವ ಗುರಿ ಹೊಂದಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ (ಕಂಚು) ಗೆದ್ದ ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಯಾವುದೇ ಭಾರತೀಯ ಕ್ರೀಡಾಪಟು ಎರಡು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಗೆದ್ದರೆ ದೊಡ್ಡ ಸಾಧನೆಯಾಗಲಿದೆ.

1900ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.

ಭಾಕರ್ ಮತ್ತು ಸರಬ್ಜೋತ್ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಬಿಲ್ಲುಗಾರ ಧೀರಜ್ ಬೊಮ್ಮದೇವರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಜನ್ ಕೌರ್ ಮತ್ತು ಅಂಕಿತಾ ಭಕತ್ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.

ಪುರುಷರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ 2 ನೇ ದಿನದಂದು ಟ್ರ್ಯಾಪ್ ಶೂಟರ್ ಪೃಥ್ವಿರಾಜ್ ತೊಂಡೈಮನ್ ಪುಟಿದೇಳಲು ಪ್ರಯತ್ನಿಸಿದರೆ, ರಾಜೇಶ್ವರಿ ಕುಮಾರಿ ಮತ್ತು ಶ್ರೇಯಸಿ ಸಿಂಗ್ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ ಮೊದಲ ದಿನದಂದು ಅಭಿಯಾನಪ್ರಾರಂಭಿಸಲಿದ್ದಾರೆ.

ಬಾಕ್ಸರ್​ಗಳು ಕಣಕ್ಕೆ

ಭಾರತದ ಆರು ಭಾರತೀಯ ಬಾಕ್ಸರ್ ಗಳಲ್ಲಿ ಮೂವರು ನಾಳೆ ಕಣಕ್ಕಿಳಿಯಲಿದ್ದಾರೆ. ಪುರುಷರ 51 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್, ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಮತ್ತು ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ ಪವಾರ್ ಸ್ಪರ್ಧಿಸಲಿದ್ದಾರೆ.

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾ ವಿರುದ್ಧದ ಅಂತಿಮ ಗ್ರೂಪ್ ಪಂದ್ಯದಲ್ಲಿ ತಮ್ಮ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ. ಮಹಿಳಾ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೋಲುಗಳ ಬಳಿಕ ಮತ್ತೊಂದ ಪಂದ್ಯ ಆಡಲಿದ್ದಾರೆ.

ಇದನ್ನೂ ಓದಿ: Paris Olympics 2024 : ಪುರುಷರ ಆರ್ಚರಿ ತಂಡಕ್ಕೆ ಆಘಾತ, ಕ್ವಾರ್ಟರ್​ಫೈನಲ್​ನಲ್ಲಿ ಸೋಲು

ಶೂಟಿಂಗ್, ಬಾಕ್ಸಿಂಗ್ ಮತ್ತು ಬ್ಯಾಡ್ಮಿಂಟನ್ ಜೊತೆಗೆ, ಪುರುಷರ ಸಿಂಗಲ್ಸ್ ಸ್ಕಲ್ಸ್​ನಲ್ಲಿ ಬಲರಾಜ್ ಪನ್ವಾರ್ ಮತ್ತು ಈಕ್ವೆಸ್ಟ್ರಿಯನ್​ ವೈಯಕ್ತಿಕ ಡ್ರೆಸ್ಸಿಂಗ್ ಅರ್ಹತಾ ಸ್ಪರ್ಧೆಯಲ್ಲಿ ಅನುಷ್ ಅಗರ್ವಾಲ್ಲಾ ಸ್ಪರ್ಧಿಸಲಿದ್ದಾರೆ.

ಭಾರತದ ಪಂದ್ಯಗಳ ವಿವರ ಇಲ್ಲಿದೆ

  • ಶೂಟಿಂಗ್​​: ಪುರುಷರ​​ ಟ್ರ್ಯಾಪ್ ಅರ್ಹತಾ ಸುತ್ತಿನ 2ನೇ ದಿನ; ಪೃಥ್ವಿರಾಜ್ ತೊಡೈಮನ್, ಮಧ್ಯಾಹ್ನ 12.30ಕ್ಕೆ
  • ಶೂಟಿಂಗ್​: ಟ್ರ್ಯಾಪ್ ಮಹಿಳಾ ಅರ್ಹತಾ ಸುತ್ತಿನ ಮೊದಲ ದಿನ, ಶ್ರೇಯಸಿ ಸಿಂಗ್/ ರಾಜೇಶ್ವರಿ ಕುಮಾರಿ, ಮಧ್ಯಾಹ್ನ 12.30ಕ್ಕೆ
  • ಶೂಟಿಂಗ್: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ, ಕಂಚಿನ ಪದಕ ಪಂದ್ಯ, ಮನು ಭಾಕರ್-ಸರಬ್ಜೋತ್ ಸಿಂಗ್, ಮಧ್ಯಾಹ್ನ 1 ಗಂಟೆಗೆ
  • ಟೇಬಲ್ ಟೆನಿಸ್- ಮಹಿಳೆಯರ ಸಿಂಗಲ್ಸ್, ಶ್ರೀಜಾ ಅಕುಲಾ
  • ರೋಯಿಂಗ್- ಪುರುಷರ ಸಿಂಗಲ್ಸ್ ಸ್ಕಲ್ ಕ್ವಾರ್ಟರ್ ಫೈನಲ್ 4, ಬಲರಾಜ್ ಪನ್ವಾರ್ , ಮಧ್ಯಾಹ್ನ 1.40ರಿಂದ
  • ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸೇಜ್​- ಅನುಷ್ ಅಗರ್ವಾಲಾ, ಮಧ್ಯಾಹ್ನ 2.30 ರಿಂದ
  • ಹಾಕಿ: ಪುರುಷರ ಪೂಲ್ ಬಿ ಪಂದ್ಯ: ಐರ್ಲೆಂಡ್ ವಿರುದ್ಧ , ಸಂಜೆ 4.45ಕ್ಕೆ
  • ಆರ್ಚರಿ: ಮಹಿಳೆಯರ ವೈಯಕ್ತಿಕ 32ನೇ ಸುತ್ತು, ಅಂಕಿತಾ ಭಕತ್, ಸಂಜೆ 5.14ಕ್ಕೆ
  • ಆರ್ಚರಿ: ಮಹಿಳಾ ವೈಯಕ್ತಿಕ 32ನೇ ಸುತ್ತು, ಭಜನ್ ಕೌರ್, ಸಂಜೆ 5.27ಕ್ಕೆ
  • ಬ್ಯಾಡ್ಮಿಂಟನ್: ಪುರುಷರ ಡಬಲ್ಸ್ ಗ್ರೂಪ್ ಸಿ: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ಸಂಜೆ 5.30
  • ಬ್ಯಾಡ್ಮಿಂಟನ್: ಮಹಿಳಾ ಡಬಲ್ಸ್ ಗ್ರೂಪ್ ಸಿ: ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ, ಸಂಜೆ 6.20ಕ್ಕೆ
  • ಬಾಕ್ಸಿಂಗ್: ಪುರುಷರ 51 ಕೆ.ಜಿ ವಿಭಾಗ : ಅಮಿತ್ ಪಂಗಲ್, ಸಂಜೆ 7.16ಕ್ಕೆ
  • ಬಾಕ್ಸಿಂಗ್: ಪುರುಷರ 57 ಕೆ.ಜಿ ವಿಭಾಗ ಜೈಸ್ಮಿನ್ ಲಂಬೋರಿಯಾ, ರಾತ್ರಿ 9.08ರಿಂದ
  • ಆರ್ಚರಿ: ಪುರುಷರ ವೈಯಕ್ತಿಕ ಸುತ್ತಿನಲ್ಲಿ 32 ಧೀರಜ್ ಬೊಮ್ಮದೇವರ, 10.46ರಿಂದ
  • ಬಾಕ್ಸಿಂಗ್: ಮಹಿಳೆಯರ 54 ಕೆ.ಜಿ ವಿಭಾಗ, ಪ್ರೀತಿ, 01.06 ಗಂಟೆಗೆ
Continue Reading

ಭವಿಷ್ಯ

Dina Bhavishya : ಬಣ್ಣದ ಮಾತುಗಳನ್ನು ನಂಬಿ ಈ ರಾಶಿಯವರು ಯಾವುದೇ ವ್ಯವಹಾರ ಮಾಡ್ಬೇಡಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ದಶಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya
Koo

ಚಂದ್ರನು ಮಂಗಳವಾರ ಮಿಥುನ ರಾಶಿಯಲ್ಲೇ ನೆಲಸಲ್ಲಿದ್ದು, ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೀನ ರಾಶಿಯವರು ಅನಿವಾರ್ಯ ಕಾರಣಗಳಿಂದ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ, ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ತುಲಾ ರಾಶಿಯವರು ಅತಿಯಾದ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಜೀವನದ ಪ್ರಮುಖ ನಿರ್ಧಾರಗಳ ಕುರಿತು ನೀವು ಕುಟುಂಬದೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (30-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.
ತಿಥಿ: ದಶಮಿ 16:44 ವಾರ: ಮಂಗಳವಾರ
ನಕ್ಷತ್ರ: ಕೃತ್ತಿಕಾ 10:22 ಯೋಗ: ವೃದ್ಧಿ 15:54
ಕರಣ: ವಿಷ್ಟಿ (ಭದ್ರ) 16:44 ಅಮೃತಕಾಲ: ಬೆಳಗ್ಗೆ 08:02 ರಿಂದ 09:36
ದಿನದ ವಿಶೇಷ: ತುಳಸೀದಾಸರ ಆರಾಧನೆ

ಸೂರ್ಯೋದಯ : 06:05   ಸೂರ್ಯಾಸ್ತ : 06:47

ರಾಹುಕಾಲ: ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 02:01 ರಿಂದ 03:37
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಬಣ್ಣದ ಮಾತುಗಳನ್ನು ನಂಬಿ ಇಂದು ಯಾವುದೇ ಹೂಡಿಕೆ ವ್ಯವಹಾರಗಳಲ್ಲಿ ತೊಡಗುವುದು ಬೇಡ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ಬೇಸರ ತರಿಸಬಹುದು. ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಹಾಸ್ಯಪ್ರಜ್ಞೆಯ ನಡವಳಿಕೆಯಿಂದಾಗಿ ಇತರರನ್ನು ಚುಂಬಕದಂತೆ ಆಕರ್ಷಿಸಿ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವಿರಿ. ಭೂ ಹಾಗೂ ಹೂಡಿಕೆ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ತೊಡುಗುವುದು ಬೇಡ. ಇದರಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಉತ್ಸಾಹ ತುಂಬಿದ ವಾತಾವರಣ ಇರಲಿದೆ. ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ. ಅನಾವಶ್ಯಕ ಖರ್ಚು ಮಾಡಿ ಆಮೇಲೆ ಹಳಹಳಿಸುವುದು ಬೇಡ. ಕುಟುಂಬದ ಯಜಮಾನನ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕಟಕ: ನೀವು ಇತರರನ್ನು ಶ್ಲಾಘಿಸುವ ಮೂಲಕ ಯಶಸ್ಸನ್ನು ಆನಂದಿಸುವ ಸಾಧ್ಯತೆ ಇದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಪ್ರೇಮಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಸಿಂಹ:ಆತ್ಮವಿಶ್ವಾಸತೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಆಪ್ತರೊಂದಿಗೆ ವಾದಕ್ಕಿಳಿಯುವ ಸಾಧ್ಯತೆ ಇದೆ, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಮನೋರಂಜನೆಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಸಕಾರಾತ್ಮಕ ಆಲೋಚನೆಗಳು ನಿಮಗೆ ಪುಷ್ಟಿ ನೀಡಲಿವೆ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನವಿದು. ವಿವಾಹ ಅಪೇಕ್ಷಿತರಿಗೆ ಶುಭ ಸೂಚನೆ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸದೃಢವಾಗಿ ಇರುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಜೀವನದ ಪ್ರಮುಖ ನಿರ್ಧಾರಗಳ ಕುರಿತು ನೀವು ಕುಟುಂಬದೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಹಳೆಯ ಸ್ನೇಹಿತರೊಂದಿಗೆ ಆತ್ಮೀಯ ಮಾತುಕತೆಯಲ್ಲಿ ತೊಡಗುವಿರಿ. ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಕುರಿತು ಆಲೋಚನೆ ಮಾಡುವಿರಿ. ಸಂಗಾತಿಯಿಂದ ಸಲಹೆ ಪಡೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಾಧಾರಣ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೋರ್ಟ್ ಕಚೇರಿ ವ್ಯಾಜ್ಯಗಳು ವಿಜಯವನ್ನು ತಂದು ಕೊಡಲಿವೆ. ದಿನದ ಕೊನೆಯಲ್ಲಿ ಯಾವುದಾದರೂ ಕಾರಣದಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಮಿಶ್ರಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಕರ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೋ ಮೂಲದಿಂದ ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ. ಕುಟುಂಬದ ಸದಸ್ಯರ ಅಪಸ್ವರದಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಮಾತಿಗೆ ವಿರಾಮ ನೀಡಿ. ಉದ್ಯೋಗಿಗಳಿಗೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ನಿಮ್ಮ ಕೋಪದ ಮನಸ್ಥಿತಿ ಇತರರ ಮೇಲೆ ಪ್ರಭಾವ ಬೀರಬಹುದು. ಅನಿವಾರ್ಯ ಕಾರಣಗಳಿಂದ ಸ್ನೇಹಿತರ ಸಹಾಯ ಬೇಡವ ಸಾಧ್ಯತೆ ಇದೆ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಹೊಂದಲಿದ್ದೀರಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮೀನ: ಅನಿವಾರ್ಯ ಕಾರಣಗಳಿಂದ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ, ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

NEET-UG : ಅಭ್ಯರ್ಥಿಗಳು ಇತ್ತೀಚಿನ ಸುದ್ದಿ ಮತ್ತು ವಿವರಣೆ ಮತ್ತು ಸೂಚನೆಗಳಿಗಾಗಿ ಎಂಸಿಸಿ ವೆಬ್​ಸೈಟ್​ಗೆ ಭೇಟಿ ನೀಡಲು ಸೂಚಿಸಲಾಗಿದೆ. ದೇಶಾದ್ಯಂತ ಸುಮಾರು 710 ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 1.10 ಲಕ್ಷ ಎಂಬಿಬಿಎಸ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದೆ. ಅಲ್ಲದೆ, ಆಯುಷ್ ಮತ್ತು ನರ್ಸಿಂಗ್ ಸೀಟುಗಳಲ್ಲದೆ 21,000 ಬಿಡಿಎಸ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.

VISTARANEWS.COM


on

NEET-UG
Koo

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (NEET-UG) 2024 ರ ಕೌನ್ಸೆಲಿಂಗ್ ಆಗಸ್ಟ್ 14 ರಿಂದ ಪ್ರಾರಂಭವಾಗಲಿದೆ ಎಂದು ಎಂಸಿಸಿ ಸೋಮವಾರ ಹೊರಡಿಸಿದ ನೋಟಿಸ್​ನಲ್ಲಿ ತಿಳಿಸಿದೆ. ಆದಾಗ್ಯೂ ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಣಿ ಆಗಸ್ಟ್ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಇತ್ತೀಚಿನ ಸುದ್ದಿ ಮತ್ತು ವಿವರಣೆ ಮತ್ತು ಸೂಚನೆಗಳಿಗಾಗಿ ಎಂಸಿಸಿ ವೆಬ್​ಸೈಟ್​ಗೆ ಭೇಟಿ ನೀಡಲು ಸೂಚಿಸಲಾಗಿದೆ. ದೇಶಾದ್ಯಂತ ಸುಮಾರು 710 ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 1.10 ಲಕ್ಷ ಎಂಬಿಬಿಎಸ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದೆ. ಅಲ್ಲದೆ, ಆಯುಷ್ ಮತ್ತು ನರ್ಸಿಂಗ್ ಸೀಟುಗಳಲ್ಲದೆ 21,000 ಬಿಡಿಎಸ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.

ಅಖಿಲ ಭಾರತ ಕೋಟಾದ ಶೇ.15ರಷ್ಟು ಸೀಟುಗಳು ಮತ್ತು ಎಲ್ಲ ಏಮ್ಸ್, ಜಿಪ್ಮರ್ ಪುದುಚೆರಿ, ಎಲ್ಲ ಕೇಂದ್ರೀಯ ವಿವಿ ಸೀಟುಗಳು ಮತ್ತು ಶೇ.100ರಷ್ಟು ಡೀಮ್ಡ್ ವಿವಿ ಸೀಟುಗಳಿಗೆ ಎಂಸಿಸಿ ಕೌನ್ಸೆಲಿಂಗ್ ನಡೆಸಲಿದೆ.

ಪರೀಕ್ಷೆಯ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಶುಕ್ರವಾರ ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿತ್ತು

Continue Reading

ಪ್ರಮುಖ ಸುದ್ದಿ

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Asia Cup cricket : ಈ ಟೂರ್ನಿಯ 2026 ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ನಡೆಯಲಿದೆ. ಸಾಂಪ್ರದಾಯಿಕವಾಗಿ ಏಷ್ಯಾ ಕಪ್ ಐಸಿಸಿ ಪಂದ್ಯಾವಳಿಯ ಪೂರ್ವಸಿದ್ಧತಾ ಟೂರ್ನಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮುಂಬರುವ ವಿಶ್ವಕಪ್​ಗೆ ಮೊದಲು ಆಡಲಾಗುತ್ತದೆ. 2023 ರಲ್ಲಿ, ಏಷ್ಯಾ ಕಪ್ ಅನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿತು.

VISTARANEWS.COM


on

Asia Cup cricket
Koo

ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಆಹ್ವಾನದಲ್ಲಿ ಘೋಷಿಸಿದಂತೆ 2025ರ ಆವೃತ್ತಿಯ ಏಷ್ಯಾ ಕಪ್ ಭಾರತದಲ್ಲಿ (Asia Cup Cricket) ನಡೆಯಲಿದೆ. ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಮುಂಬರುವ ಆವೃತ್ತಿಯಲ್ಲಿ ಟಿ 20 ಸ್ವರೂಪದಲ್ಲಿ ನಡೆಯಲಿದ್ದು ಭಾರತದ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.

ಈ ಟೂರ್ನಿಯ 2026 ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ನಡೆಯಲಿದೆ. ಸಾಂಪ್ರದಾಯಿಕವಾಗಿ ಏಷ್ಯಾ ಕಪ್ ಐಸಿಸಿ ಪಂದ್ಯಾವಳಿಯ ಪೂರ್ವಸಿದ್ಧತಾ ಟೂರ್ನಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮುಂಬರುವ ವಿಶ್ವಕಪ್​ಗೆ ಮೊದಲು ಆಡಲಾಗುತ್ತದೆ. 2023 ರಲ್ಲಿ, ಏಷ್ಯಾ ಕಪ್ ಅನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿತು. ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ ಕಾರಣ ‘ಹೈಬ್ರಿಡ್ ಮಾದರಿಯಲ್ಲಿ’ ನಡೆಸಲಾಯಿತು. ಇದರ ಪರಿಣಾಮವಾಗಿ, ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು.

2027ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಬಾಂಗ್ಲಾದೇಶದಲ್ಲಿ ಆತಿಥ್ಯ ವಹಿಸಲಿದೆ. ಅದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಯೋಜಿಸಲಾದ 50 ಓವರ್ ಗಳ ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಡೆಯಲಿದೆ.

2025ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ಏಷ್ಯಾಕಪ್ ಹಾಗೂ 2027ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ 50 ಓವರ್ಗಳ ಏಷ್ಯಾಕಪ್​ನಲ್ಲಿ ತಲಾ 13 ಪಂದ್ಯಗಳು ನಡೆಯಲಿವೆ.

‘ಪುರುಷರ ಏಷ್ಯಾ ಕಪ್ ಪಂದ್ಯಾವಳಿ’ ಎಂದರೆ ನಿಯೋಜಿತ ಸದಸ್ಯರನ್ನು ಒಳಗೊಂಡ ಎಸಿಸಿ ಆಯೋಜಿಸುವ ಮತ್ತು ನಿರ್ವಹಿಸುವ ದ್ವೈವಾರ್ಷಿಕ ಹಿರಿಯ ಪುರುಷರ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದ ತಂಡಗಳು ಮತ್ತು ಅರ್ಹತಾ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಎಸಿಸಿಯ ಟೆಸ್ಟ್ ಅಲ್ಲದ ಸದಸ್ಯ ತಂಡವೊಂದು ಭಾಗವಹಿಸುತ್ತದೆ ಎಂದು ಎಸಿಸಿ ತನ್ನ ಐಇಒಐ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಏಷ್ಯಾಕಪ್ ಟಿ20 ಟ್ರೋಫಿ ಗೆದ್ದ ಬಳಿಕ ಭಾರತ ಹಾಲಿ ಚಾಂಪಿಯನ್ ಎನಿಸಿಕೊಂಡಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು ವಿರುದ್ಧ 10 ವಿಕೆಟ್​ಗಳ ಗೆಲವು ದಾಖಲಿಸಲಾಗಿತ್ತು. 7-1-21-6 ಅಂಕಗಳ ನಂತರ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದ್ದು, ಎಂಟು ಬಾರಿ ಪ್ರಶಸ್ತಿ ಗೆದ್ದಿದೆ.

Continue Reading
Advertisement
Sadhguru  Jaggi Vasudev
ಆರೋಗ್ಯ11 mins ago

Sadhguru Jaggi Vasudev: ನಮ್ಮ ಹೃದಯವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Paris Olympics 2024
ಕ್ರೀಡೆ26 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Side Effects Of Dry Fruits
ಆರೋಗ್ಯ26 mins ago

Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Karnataka Weather Forecast
ಮಳೆ26 mins ago

Karnataka Weather : 8 ಜಿಲ್ಲೆಗಳಿಗೆ ವ್ಯಾಪಕ ಮಳೆ ಎಚ್ಚರಿಕೆ, ಬಿರುಗಾಳಿ ಸಾಥ್‌

dina bhavishya
ಭವಿಷ್ಯ56 mins ago

Dina Bhavishya : ಬಣ್ಣದ ಮಾತುಗಳನ್ನು ನಂಬಿ ಈ ರಾಶಿಯವರು ಯಾವುದೇ ವ್ಯವಹಾರ ಮಾಡ್ಬೇಡಿ

NEET-UG
ಪ್ರಮುಖ ಸುದ್ದಿ6 hours ago

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ವೈರಲ್ ನ್ಯೂಸ್6 hours ago

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Paris Olympics 2024
ಕ್ರೀಡೆ6 hours ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

Asia Cup cricket
ಪ್ರಮುಖ ಸುದ್ದಿ6 hours ago

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Viral video
ವೈರಲ್ ನ್ಯೂಸ್7 hours ago

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ12 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ13 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ16 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌