Longest Kiss | 58 ಗಂಟೆ, 35 ನಿಮಿಷ, 58 ಸೆಕೆಂಡ್‌ ಸತತ ಚುಂಬನ, ಈಗ ಗಿನ್ನೆಸ್‌ ದಾಖಲೆಗೆ ಭಾಜನ - Vistara News

ಪ್ರಮುಖ ಸುದ್ದಿ

Longest Kiss | 58 ಗಂಟೆ, 35 ನಿಮಿಷ, 58 ಸೆಕೆಂಡ್‌ ಸತತ ಚುಂಬನ, ಈಗ ಗಿನ್ನೆಸ್‌ ದಾಖಲೆಗೆ ಭಾಜನ

ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಆಗಾಗ ಸಿಹಿಮುತ್ತೊಂದನ್ನು ನೀಡುವುದು ಸುಖೀ ದಾಂಪತ್ಯದ ಲಕ್ಷಣ. ಆದರೆ, ಥಾಯ್ಲೆಂಡ್‌ನಲ್ಲಿ ದಂಪತಿಯು 58 ಗಂಟೆ ಸತತವಾಗಿ ಲಿಪ್‌ಲಾಕ್‌ (Longest Kiss) ಮಾಡಿದ್ದು ಈಗ ಗಿನ್ನೆಸ್‌ ದಾಖಲೆಗೆ ಪಾತ್ರವಾಗಿದೆ.

VISTARANEWS.COM


on

Longest Kiss Record
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ಯಾಂಕಾಕ್‌: ಅಸಾಧಾರಣ ಕೆಲಸಗಳು ಗಿನ್ನೆಸ್‌ ದಾಖಲೆಗೆ ಭಾಜನವಾಗುತ್ತವೆ. ಆದರೆ, ಥಾಯ್ಲೆಂಡ್‌ನಲ್ಲಿ ‘ಅಸಾಧಾರಣ ಚುಂಬನ’ವೊಂದು (Longest Kiss) ಗಿನ್ನೆಸ್‌ ರೆಕಾರ್ಡ್‌ಗೆ ಪಾತ್ರವಾಗಿದೆ. ಹೌದು, ಪತಿ, ಪತ್ನಿಯು ೫೮ ಗಂಟೆ, ೩೫ ನಿಮಿಷ ಹಾಗೂ ೫೮ ಸೆಕೆಂಡ್‌ಗಳವರೆಗೆ ಸತತವಾಗಿ ಲಿಪ್‌ಲಾಕ್‌ ಮಾಡಿದ್ದು ಗಿನ್ನೆಸ್‌ ದಾಖಲೆ ಬರೆದಿದೆ.

ವ್ಯಾಲೆಂಟೈನ್ಸ್‌ ಡೇ ಹಿನ್ನೆಲೆಯಲ್ಲಿ ೨೦೧೩ರಲ್ಲಿ ಪಟ್ಟಾಯದಲ್ಲಿ ‘ಸುದೀರ್ಘ ಚುಂಬನ’ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಕ್ಕಚೈ ತಿರಾನಾರಾತ್ ಹಾಗೂ ಲಕ್ಸಾನಾ ತಿರಾನಾರಾತ್‌ ದಂಪತಿಯು ಫೆಬ್ರವರಿ ೧೨ರಿಂದ ೧೪ರವರೆಗೆ ಸತತವಾಗಿ ಮುತ್ತಿನ ಮತ್ತಿನಲ್ಲಿಯೇ ಕಾಲ ಕಳೆದಿದ್ದರು. ೨೦೧೩ರಿಂದ ಇದುವರೆಗೆ ಯಾರೂ ಇಷ್ಟು ಸುದೀರ್ಘವಾಗಿ ಕಿಸ್‌ ಮಾಡದ ಕಾರಣ ಥಾಯ್ಲೆಂಡ್‌ ದಂಪತಿಯದ್ದೇ ಸುದೀರ್ಘ ಚುಂಬನ ಎಂದು ಪರಿಗಣಿಸಿ ಗಿನ್ನೆಸ್‌ ದಾಖಲೆ ಎಂಬುದಾಗಿ ಘೋಷಿಸಲಾಗಿದೆ.

ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ದಂಪತಿಗೆ ೨.೬೭ ಲಕ್ಷ ರೂ. ಹಾಗೂ ಎರಡು ಡೈಮಂಡ್‌ ಉಂಗುರಗಳೂ ಲಭಿಸಿದ್ದವು. ಇವರಿಗಿಂತ ಮೊದಲು ೨೦೧೧ರಲ್ಲಿ ೪೬ ಗಂಟೆ, ೨೪ ನಿಮಿಷ ಹಾಗೂ ೯ ಸೆಕೆಂಡ್‌ ಕಿಸ್‌ ಮಾಡಿದ್ದೇ ದಾಖಲೆಯಾಗಿತ್ತು.

ಇದನ್ನೂ ಓದಿ | Shivamogga SP | ಡಿಯರ್‌ ಎಸ್‌ಪಿ ಸರ್‌.. ಪ್ಲೀಸ್‌ ನನಗೆ ಹುಡುಗಿ ಹುಡುಕಿ ಕೊಡಿ; ಯುವಕ ಬರೆದ ಪತ್ರ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

UK Election: ಇಂಗ್ಲೆಂಡ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್‌ ಪಕ್ಷ; ಭಾರತದ ಮೇಲೇನು ಪರಿಣಾಮ?

UK Election: ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ.

VISTARANEWS.COM


on

UK Election
Koo

ಲಂಡನ್‌: ಜಗತ್ತಿನ ಗಮನ ಸೆಳೆದಿದ್ದ ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆ(UK Election)ಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷೆಯಂತೆಯೇ ಈ ಬಾರಿ ಕನ್ಸರ್ವೇಟಿವ್‌ ಪಕ್ಷದ, ಭಾರತದ ಮೂಲದ ರಿಷಿ ಸುನಕ್‌ (Rishi Sunak) ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಲೇಬರ್‌ ಪಕ್ಷ (Labour Party) ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಇದೀಗ ಕೀರ್‌ ಸ್ಟಾರ್ಮರ್‌ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ಲೇಬರ್ ಪಕ್ಷವು ಎಡಪಂಥೀಯ ನಿಲುವು ಹೊಂದಿದ್ದು ಸಹಜವಾಗಿಯೇ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಸುಮಾರು 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷವು ಭಾರತದ ಜತೆ ಬ್ರಿಟನ್‌ನ ಸಂಬಂಧ ವೃದ್ಧಿಸುವತ್ತ ಪ್ರಯತ್ನ ನಡೆಸಿತ್ತು.

ಕೀರ್‌ ಸ್ಟಾರ್ಮರ್‌ ನಿಲುವೇನು?

ಬ್ರೆಕ್ಸಿಟ್ ಅನ್ನು ಕಾರ್ಯರೂಪಕ್ಕೆ ತರುವುದಾಗಿ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಹತ್ವಾಕಾಂಕ್ಷೆಯ ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಈಗಾಗಲೇ ಪಕ್ಷ ತಿಳಿಸಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದ (FTA), ತಂತ್ರಜ್ಞಾನ, ಭದ್ರತೆ, ಶಿಕ್ಷಣ ಮತ್ತು ಹವಾಮಾನ ಬದಲಾವಣೆ ಮುಂತಾದ ಅಂಶಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಅವರು ಆಸಕ್ತಿ ಹೊಂದಿದ್ದಾರೆ.

ಲೇಬರ್‌ ಪಕ್ಷದ ಪ್ರಣಾಳಿಕೆಯು ವ್ಯಾಪಾರ ಒಪ್ಪಂದಕ್ಕೆ ಒತ್ತು ನೀಡುವ ಮೂಲಕ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸುವ ವಿಚಾರವನ್ನು ಒಳಗೊಂಡಿತ್ತು. ಇಂಗ್ಲೆಂಡ್‌ನಲ್ಲಿರುವ ಭಾರತೀಯ ವಲಸಿಗರೊಂದಿಗಿನ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದ ಭಾಗವಾಗಿ ಸ್ಟಾರ್ಮರ್ ಪ್ರಚಾರದ ಸಮಯದಲ್ಲಿ ಹಿಂದೂಫೋಬಿಯಾವನ್ನು ಖಂಡಿಸಿದ್ದರು. ಜತೆಗೆ ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಮನವೊಲಿಕೆಗೆ ಮುಂದಾಗಿದ್ದರು.

ಆದಾಗ್ಯೂ ಸ್ಟಾರ್ಮರ್‌ ಅವರ ಮಹತ್ವಾಕಾಂಕ್ಷೆಯ ವಿದೇಶಾಂಗ ನೀತಿಯ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಸವಾಲುಗಳಿವೆ. ವಿಶೇಷವಾಗಿ ವಲಸೆ ನೀತಿಗಳು ಮತ್ತು ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

ಕಾಶ್ಮೀರದ ಬಗ್ಗೆ ನಿಲುವು

ಈ ಹಿಂದೆ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತದ ಪ್ರತಿಪಾದನೆಗೆ ವಿರುದ್ಧವಾದ ನಿಲುವನ್ನು ಲೇಬರ್ ಪಕ್ಷ ಹೊಂದಿತ್ತು. ಕಾಶ್ಮೀರ ವಿಷಯದಲ್ಲಿನ ಅದರ ಧೋರಣೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ 2020ರಲ್ಲಿ ಲೇಬರ್ ಪಕ್ಷದ ನಾಯಕತ್ವ ವಹಿಸಿದ ಸ್ಟಾರ್ಮರ್, ಭಾರತದ ವಿಚಾರದಲ್ಲಿ ತಮ್ಮ ಪಕ್ಷ ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದ್ದರು. ಭಾರತೀಯ ಸಮುದಾಯದ ಜತೆಗಿನ ಸಭೆಗಳಲ್ಲಿ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಸ್ಟಾರ್ಮರ್ ಅವರು ‘ಕಾಶ್ಮೀರವು ಒಂದು ಆಂತರಿಕ ವಿಚಾರ’ ಮತ್ತು ಭಾರತ ಹಾಗೂ ಪಾಕಿಸ್ತಾನಗಳು ಅದನ್ನು ಬಗೆಹರಿಸಿಕೊಳ್ಳಲಿವೆ ಎಂದು ಹೇಳಿ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಸುಮಾರು ಒಂದೂವರೆ ದಶಕಗಳ ಕನ್ಸರ್ವೇಟಿವ್‌ ಪಕ್ಷದ ಅಧಿಕಾರ ಕೊನೆಗೊಳಿಸಿ ಲೇಬರ್‌ ಪಕ್ಷ ಸರ್ಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಯಾವ ರೀತಿ ಸಂಬಂಭ ಕಾಯ್ದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Continue Reading

ಕ್ರೀಡೆ

IND vs ZIM: ಇಂದು ಭಾರತ-ಜಿಂಬಾಬ್ವೆ ಮೊದಲ ಟಿ20 ಪಂದ್ಯ; ಎಷ್ಟು ಗಂಟೆಗೆ ಆರಂಭ?

IND vs ZIM: ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿಯಾಗಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್​ನಲ್ಲಿ ರನ್​ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಹೇಳಿ ಕೇಳಿ ಭಾರತ ತಂಡದಲ್ಲಿ ಐಪಿಎಲ್​ ಸ್ಟಾರ್​ಗಳೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಹೊಡಿಬಡಿ ಆಟ ಇವರಿಗೆ ಹೊಸತೇನಲ್ಲ.

VISTARANEWS.COM


on

Koo

ಹರಾರೆ: ಭಾರತ ಮತ್ತು ಜಿಂಬಾಬ್ವೆ(Zimbabwe vs India) ನಡುವಣ 5 ಪಂದ್ಯಗಳ ಟಿ20 ಸರಣಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಇತ್ತಂಡಗಳ(IND vs ZIM) ಮೊದಲ ಪಂದ್ಯ ಇಂದು(ಶನಿವಾರ) ಹರಾರೆ(Harare) ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 4.30ಕ್ಕೆ ಆರಂಭಗೊಳ್ಳಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ ಪ್ರಸಾರಗೊಳ್ಳಲಿದೆ.

ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 2 ಪಂದ್ಯ ಗೆದ್ದಿದೆ. ಕೊನೆಯ ಬಾರಿ ಇತ್ತಂಡಗಳು ಆಡಿದ್ದು 2022ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ. ಈ ಪಂದ್ಯವನ್ನು ಭಾರತ 71 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಪಿಚ್​ ರಿಪೋರ್ಟ್​


ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿಯಾಗಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್​ನಲ್ಲಿ ರನ್​ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಹೇಳಿ ಕೇಳಿ ಭಾರತ ತಂಡದಲ್ಲಿ ಐಪಿಎಲ್​ ಸ್ಟಾರ್​ಗಳೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಹೊಡಿಬಡಿ ಆಟ ಇವರಿಗೆ ಹೊಸತೇನಲ್ಲ. ಅತ್ತ ಜಿಂಬಾಬ್ಬೆ ಕೂಡ ಯುವ ಪಡೆಯನ್ನೇ ನೆಚ್ಚಿಕೊಂಡಿದೆ. ಒಟ್ಟಾರೆ ಬೌಲರ್​ಗಳು ಇಂದು ಶಕ್ತಿ ಮೀರಿ ಪ್ರದರ್ಶನ ತೋರುವ ಸ್ಥಿತಿ ಎದುರಾಗಬಹುದು.

ಈಗಾಗಲೇ ಹಿರಿಯ ಆಟಗಾರರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಕೂಡ ನಡೆಯಲಿದೆ. ಇದು ಟಿ20 ಸ್ವರೂಪದಲ್ಲಿಯೇ ನಡೆಯಲಿದೆ. ಜತೆಗೆ 2026ರಲ್ಲಿ ಟಿ20 ವಿಶ್ವಕಪ್​ ಕೂಡ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ರಚಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಇದೀಗ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಯುವ ಆಟಗಾರರು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್​ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಹೀಗಾಗಿ ಎಲ್ಲ ಆಟಗಾರರು ಶ್ರೇಷ್ಠ ಪ್ರದರ್ಶನ ತೋರಬೇಕು. ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಟ್ರಂಪ್‌ಕಾರ್ಡ್‌ ಆಗುವ ಸಾಧ್ಯತೆ ಇದೆ. ಆವೇಶ್‌ ಖಾನ್‌, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ಹರ್ಷಿತ್‌ ರಾಣಾ ಅವರಿಗೆ ಇದೊಂದು ಅಗ್ನಿಪರೀಕ್ಷೆ.

ಇದನ್ನೂ ಓದಿ Team India: ರೋಹಿತ್​, ಸೂರ್ಯಕುಮಾರ್​, ದುಬೆ, ಜೈಸ್ವಾಲ್​ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್​ ಶಿಂಧೆ

ಶುಭಮನ್​ ಗಿಲ್​ ಈ ಸರಣಿಯಲ್ಲಿ ಯಶಸ್ವಿಯಾದರೆ ಮುಂದಿನ ದಿನದಲ್ಲಿ ನಾಯಕನಾಗುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಮಳೆಯನ್ನೇ ಸುರಿಸಿದ್ದ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಪ್ರದರ್ಶನದ ಮೇಕೆಯೂ ಬಹಳ ನಿರೀಕ್ಷೆ ಇದೆ. ಒಟ್ಟಾರೆ ಈ ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನದಲ್ಲಿ ಅವರ ಮುಂದಿನ ಕ್ರಿಕೆಟ್​ ಭವಿಷ್ಯ ಅಡಗಿದೆ ಎನ್ನಲಡ್ಡಿಯಿಲ್ಲ. ಗಿಲ್​ ಜತೆ ಅಭಿಷೇಕ್​ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಈ ವಿಚಾರವನ್ನು ಪಂದ್ಯಕ್ಕೂ ಮುನ್ನವೇ ನಾಯಕ ಗಿಲ್​ ಖಚಿತಪಡಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಭಾರತ ಅಜೇಯವಲ್ಲ. 2 ಸೋಲು ಕೂಡ ಕಂಡಿದೆ. ಅನುಭವಿ ಆಲ್​ರೌಂಡರ್​ ಹಾಗೂ ನಾಯಕನಾಗಿರುವ ಸಿಕಂದರ್​ ರಾಜಾ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜತೆಗೆ ತಂಡದ ನೂತನ ಕೋಚ್​ ಆಗಿರುವ ಜಸ್ಟಿನ್‌ ಸ್ಯಾಮ್ಸನ್‌ ಅವರ ಮಾರ್ಗದರ್ಶನ ಕೂಡ ತಂಡಕ್ಕೆ ನೆರವಾಗಬಹುದು. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕು.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಕಿಷ್ಕಿಂಡಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಧವಳ ಧಾರಿಣಿ ಅಂಕಣ: ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ.

VISTARANEWS.COM


on

ಧವಳ ಧಾರಿಣಿ ಅಂಕಣ rama and sugreeva
Koo

ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಕೋರಿದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸರ್ವಲೋಕಸ್ಯ ಧರ್ಮಾತ್ಮಾ ಶರಣ್ಯಃ ಶರಣಂ ಪುರಾ.
ಗುರುರ್ಮೇ ರಾಘವಃ ಸೋSಯಂ ಸುಗ್ರೀವಂ ಶರಣಂ ಗತಃ৷৷ಕಿ. ಕಾಂ.4.20৷৷

ಧರ್ಮಾತ್ಮನಾದ (ಶ್ರೀರಾಮನು) ಈ ಹಿಂದೆ ಸಕಲೋಕಗಳಿಗೆ ರಕ್ಷಕನಾಗಿದ್ದನೋ, ಎಲ್ಲರಿಗೂ ಆಶ್ರಯಭೂತನಾಗಿದ್ದನೋ, ನನ್ನ ಗುರುವಾದ ಈ ರಘುವರನು ಇಂದು ಸುಗ್ರೀವನನ್ನು ಆಶ್ರಯಿಸಲು ಬಂದಿರುವನು.

ಪಂಪಾನದಿಯ ತೀರದಲ್ಲಿ ಹನುಮಂತ ರಾಮ ಲಕ್ಷ್ಮಣರನ್ನು ಪರೀಕ್ಷಿಸಲು ಭಿಕ್ಷುವಿನ ವೇಷಧರಿಸಿ ಅವರೆದುರು ನಿಂತು ಅವರ ಪರಿಚಯ ಕೇಳಿದಾಗ ಲಕ್ಷ್ಮಣ ತಾವು ಸುಗ್ರೀವನಲ್ಲಿ ಶರಣಾಗಲು/ ಆಶ್ರಯಕೋರಲು ಬಂದಿದ್ದೇವೆ ಎಂದು ಹೇಳುತ್ತಾನೆ.

ಕಿಷ್ಕಿಂಡಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಬರುವ ಈ ರೀತಿಯ ಎಂಟು ಶ್ಲೋಕಗಳನ್ನು ಓದುತ್ತಾ ಹೋದಂತೆ ಒಮ್ಮೆಲೇ ರಾಮನ ಕುರಿತ್ತಾದ ನಮ್ಮ ಭಾವನೆಗಳೆಲ್ಲವುದಕ್ಕೂ ವಿರುದ್ಧವಾದ “ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಬಯಸಿ ಬಂದಿದ್ದಾನೆ” ಎನ್ನುವ ಮಾತುಗಳು ನೋಡಿ ಆಶ್ಚರ್ಯಮೂಡುತ್ತದೆ. ಕೆಲ ಕಾಲ ನಾವು ಓದುತ್ತಿರುವುದು ವಾಲ್ಮೀಕಿ ಬರೆದ ರಾಮಾಯಣವೋ ಅಥವಾ ಇನ್ಯಾರದೋ ಎನ್ನುವ ಸಂಶಯಕ್ಕೆ ಒಳಗಾಗುತ್ತೇವೆ. ರಾಮನ ಹದಿನಾರು ಗುಣಗಳಲ್ಲಿ ಒಂದಾದ “ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ- ಸಿಟ್ಟುಗೊಂಡು ರಾಮನೇನಾದರೂ ಯುದ್ಧಕ್ಕೆ ನಿಂತರೆ ದೇವತೆಗಳೂ ಸಹ ಅಂಜುವರು” ಎನ್ನುವ ಪರಾಕ್ರಮಗಳನ್ನು ವರ್ಣಿಸಿದ ಕವಿ ಇಲ್ಲಿ ಎಲ್ಲವನ್ನೂ ಕಳೆದುಕೊಂಡು ದೀನನಾಗಿ ಮುಳುಗುವವನಿಗೆ ಹುಲ್ಲುಕಡ್ಡಿಯಾದರೂ ಆಗಬಹುದು ಎನ್ನುವ ರೀತಿಯಲ್ಲಿ ನಿಂತಿದ್ದಾನೆ. ಲಕ್ಷ್ಮಣ ಹನುಮಂತನ ಹತ್ತಿರು ಒಮ್ಮೆ ಸುಗ್ರೀವನನ್ನು ಭೆಟ್ಟಿ ಮಾಡಿಸು ಎಂದು ಯಾಚಿಸುವಾಗ ಉಪಯೋಗಿಸುವ ಶಬ್ಧಗಳನ್ನು ಗಮನಿಸಿ

  1. ರಾಮಶ್ಚ ಸುಗ್ರೀವಂ ಶರಣಂ ಗತೌ
  2. ಸುಗ್ರೀವಂ ನಾಥಮಿಚ್ಛತಿ
  3. ಸುಗ್ರೀವಂ ಶರಣಂ ಗತಃ
  4. ಶರಣ್ಯಶ್ಶರಣಂ ಪುರಾ…. ಸುಗ್ರೀವಂ ಶರಣಂ ಗತಃ
  5. ಸುಗ್ರೀವಂ ವಾನರೇನ್ದ್ರಂ ತು ರಾಮಶ್ಶರಣಮಾಗತಃ
  6. ಶರಣಂ ಗತೇ.

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಕಣ್ಣೀರು ತುಂಬಿಕೊಂಡು ಕೇಳಿಕೊಳ್ಳುವುದು

  1. ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ.

ಸ ರಾಮೋ ವಾನರೇನ್ದ್ರಸ್ಯ ಪ್ರಸಾದಮಭಿಕಾಙ್ಕ್ಷತೇ.

ಯಾವನ ಪ್ರಸನ್ನತೆಯಿಂದ ಎಲ್ಲ ಪ್ರಜೆಗಳೂ ಸರ್ವದಾ ಪ್ರಸನ್ನಚಿತ್ತರಾಗಿರುತ್ತಿದ್ದರೋ ಅಂತಹ ಶ್ರೀರಾಮನೀಗ ವಾನರೇಂದ್ರನಾದ ಸುಗ್ರೀವನ ಅನುಗ್ರಹವನ್ನು ಬಯಸಿ ಬಂದಿದ್ದಾನೆ.

ಒಂದು ಕಡೆ ಮಹಾತೇಜಸ್ವಿಯಾದ, ಸರ್ವಗುಣ ಸಂಪನ್ನನಾದ, ವಶಿಷ್ಠ, ವಿಶ್ವಾಮಿತ್ರ, ಅತ್ರಿ, ಅಗಸ್ತ್ಯರಿಂದ ಅನುಗ್ರಹಿಸಲ್ಪಟ್ಟ, ನಾಲ್ಕು ಸಮುದ್ರಪರ್ಯಂತರವೂ ಧರ್ಮಸ್ಥಾಪನೆಗಾಗಿ ಇರುವ ಚಕ್ರವರ್ತಿಗಳ ಪೀಠ ಎಂದು ಕೀರ್ತಿಸಲ್ಪಟ್ಟ ರಾಮ ಲಕ್ಷ್ಮಣನ ಮಾತನ್ನು ಮೌನವಾಗಿ ಕೇಳುತ್ತಾ ನಿಂತಿದ್ದಾನೆ. ಅವರು ಆಶ್ರಯವನ್ನು ಕೇಳುವುದು ಯಾರಲ್ಲಿ ಅಂದರೆ, ಹೆಂಡತಿಯನ್ನೂ ಸೇರಿ, ತನ್ನದೆಲ್ಲವನ್ನೂ, ಕಳೆದುಕೊಂಡು ವಾಲಿಯ ಭಯದಿಂದ ಜೀವ ಉಳಿಸಿಕೊಳ್ಳಲು ಋಷ್ಯಮೂಕ ಪ್ರರ್ವತಶ್ರೇಣಿಯಲ್ಲಿ ನಾಲ್ವರೊಂದಿಗೆ ಇರುವ ಸುಗ್ರೀವನಲ್ಲಿ. ಲಕ್ಷ್ಮಣನಿಗೆ ಈ ಮಾತುಗಳನ್ನು ಹೇಳುವಾಗ ಹೊಟ್ಟೆಯಲ್ಲಿ ಸಂಕಟವಾಗಿರಬೇಕು. ಹೇಳಲೇ ಬೇಕಾದ ಅನಿವಾರ್ಯತೆಯಿಂದ ಹೇಳುವಾಗ ಆತ ದೀನನಾಗಿ ಕಣ್ಣೀರಧಾರೆಯನ್ನು ಹರಿಸುತ್ತಾ – “ಏವಂ ಬ್ರುವಾಣಂ ಸೌಮಿತ್ರಿಂ ಕರುಣಂ ಸಾಶ್ರುಲೋಚನಮ್” ಹನುಮಂತನಲ್ಲಿ ಯಾಚಿಸುತ್ತಿದ್ದ. ಈ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ತಾಳಮದ್ದಳೆಯಲ್ಲಿ ವಾಲಿ ರಾಮನಿಗೆ ಸುಗ್ರೀವನ ಸಹಾಯವನ್ನು ಕೇಳಿರುವುದರ ಕುರಿತು “ಇವನು ನಿನಗೆ ಸಹಾಯಿಯೇ ನೀ I ನೀನವನ ಬಲದಲಿ ನಿನ್ನ ವೈರಿಯ..Iʼ ಎಂದು ಛೇಡಿಸುವ ಪದ್ಯಗಳಿವೆ. (ಪಾರ್ತಿಸುಬ್ಬನ ಪದ್ಯಗಳ ರಚನೆಯ ಕುರಿತು ಕನ್ನಡಸಾಹಿತ್ಯ ಲೋಕ ಚರ್ಚೆ ಮಾಡಬೇಕು. ಯಕ್ಷಗಾನ ಕವಿಗಳೆನ್ನುವ ಅಸಡ್ಡೆಯಿಂದ ಹೊರಬರಬೇಕಾಗಿದೆ). ವಾಲಿಯ ಪ್ರಮುಖವಾದ ಪ್ರಶ್ನೆಯೇ ರಾಮ ಸುಗ್ರೀವನಲ್ಲಿ ಶರಣು ಬಂದಿರುವುದು ಯಾಕೆ ಎನ್ನುವುದು. ಅದಕ್ಕೆ ಆಧಾರವಾಗಿ ಈ ಮೇಲಿನ ಶ್ಲೋಕವನ್ನು ಗಮನಿಸಬಹುದು.

ರಾಮಾಯಣದಲ್ಲಿ ಸುಗ್ರೀವನ ಕುರಿತು ತಿಳಿದಿರುವ ಅಂಶಗಳೆಂದರೆ ಆತುರಗೆಟ್ಟವ, ಸ್ತ್ರೀವ್ಯಾಮೋಹಿ, ಅಂಜುಕುಳಿ, ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದವ. ತನಗೇ ಒಂದು ನೆಲೆಯಿಲ್ಲದ ವಾನರೋರ್ವನಲ್ಲಿ ರಾಮ ಅದು ಹೇಗೆ ಶರಣು ಬರಲು ಸಾಧ್ಯ, ವಾಲ್ಮೀಕಿ ಈ ಭಾಗವನ್ನು ಯಾಕೆ ಹೇಳಿರಬಹುದು ಎನ್ನುವುದನ್ನು ವಿವೇಚಿಸಿಸಲು ಅರಣ್ಯಕಾಂಡದೊಳಗೆ ಪ್ರವೇಶಿಸಬೇಕು.

ರಾಮಾಯಣದಲ್ಲಿ ಅರಣ್ಯಕಾಂಡ ಮತ್ತು ಕಿಷ್ಕಿಂದಾ ಕಾಂಡಗಳಿಲ್ಲದಿದ್ದರೆ ಈ ಮಹಾಕಾವ್ಯವೇ ಹುಟ್ಟುತ್ತಿರಲಿಲ್ಲವೇನೋ. ರಾಮಾವತಾರದ ಉದ್ಧೇಶವೇ ಅರಣ್ಯಕಾಂಡದಲ್ಲಿ ಅದೂ ಆತ ಚಿತ್ರಕೂಟಕ್ಕೆ ಬರುವಾಗಿನಿಂದ ಪ್ರಾರಂಭವಾಗುತ್ತದೆ. ರಾವಣವಧೆಗೆ ಯೋಜನೆಯನ್ನು ನಿರೂಪಿಸಿರುವುದು ಅಗಸ್ತ್ಯರ ಆಶ್ರಮದಲ್ಲಿ. ಇದಕ್ಕಿಂತಲೂ ರೋಚಕವಾದ ವಿಷಯವೆಂದರೆ ಕೈಕೇಯಿ ದಶರಥನ ಹತ್ತಿರ ಕೇಳುವ ವರ “ರಾಮ ವನವಾಸಕ್ಕೆ ಹೋಗಲಿ” ಎಂದು, ಆದರೆ ರಾಮನ ಹತ್ತಿರ “ದಶರಥ ನನಗೆ ವರವನ್ನು ಕೊಟ್ಟ ಪ್ರಕಾರ ನೀನು ದಂಡಕಾರಣ್ಯಕ್ಕೆ ಹೋಗಬೇಕು” ಎನ್ನುತ್ತಾಳೆ. ಬುದ್ಧಿವಂತೆಯಾದ ಕೈಕೇಯಿಗೆ ದಂಡಕಾರಣ್ಯದ ರಾಕ್ಷಸರ ವಿಷಯ ತಿಳಿದಿದೆ. ಹಿಂದೆ ದಶರಥ ಶಂಭರನ ಹತ್ತಿರ ಕಾಳಗ ಮಾಡಿದ್ದು ಇದೇ ದಂಡಕಾರಣ್ಯದಲ್ಲಿ. ಹಾಗಾಗಿ ರಾಕ್ಷಸರ ಕೈಯಲ್ಲಿ ರಾಮನಿಗೆ ಅಪಾಯವಾದರೆ ಆಗಲಿ ಎನ್ನುವ ಕುತ್ಸಿತ ಬುದ್ಧಿ ಅವಳದಾಗಿತ್ತು.

ರಾಮನಿಗೆ ಸೀತೆಯ ಮೇಲೆ ಅಪಾರವಾದ ಪ್ರೀತಿ ಇತ್ತು. ಸೀತಾಪಹರಣವೆನ್ನುವುದು ಆತ ನಿರೀಕ್ಷಿಸದ ಘಟನೆ. ಆಕೆಗೆ ರಾಕ್ಷಸರಿಂದ ತೊಂದರೆ ಆಗಬಹುದೆನ್ನುವ ಅನುಮಾನ ಇದ್ದೇಇತ್ತು. ಲಕ್ಷ್ಮಣ ಆಕೆಯನ್ನು ಬಿಟ್ಟು ತನ್ನನ್ನು ಹುಡುಕಲು ಬಂದಾಗಲೇ ಆತನಿಗೆ ಅನುಮಾನ ಕಾಡಿತ್ತು. “ಅವಳು ಏನೇ ಅಂದರೂ ಆಕೆಯನ್ನು ಒಂಟಿಯಾಗಿ ಬಿಟ್ಟು ನೀನು ಬರಬಾರದಿತ್ತು ಎಂದು” ಲಕ್ಷ್ಮಣನ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ. ಸೀತೆ ಬದುಕ್ಕಿದ್ದಾಳೋ ಅಥವಾ ಅಪಹರಣಕ್ಕೊಳಗಾದಳೋ ಎನ್ನುವುದನ್ನು ತಿಳಿಯದೇ ದಿಗ್ಮೂಢನಾಗಿದ್ದ. ಅಡವಿಯಲ್ಲಿ ಇರುವ ಎಲ್ಲಾ ಗಿಡಗಳನ್ನೂ, ಮರಗಳನ್ನೂ ಆತ ಹುಚ್ಚನಂತೆ ಕೂಗಿ ಕೂಗಿ ತನ್ನ ಸೀತೆ ಎಲ್ಲಿ ಇದ್ದಾಳೆ ವಿಲಾಪಿಸುತ್ತಿದ್ದ. ವಿರಹದ ದುಃಖ ಎಲ್ಲಿಯವರೆಗೆ ತಿರುಗಿತು ಎಂದರೆ ಗೋದಾವರೀ ನದಿಯ ಹತ್ತಿರ ಸೀತೆಯ ವಿಷಯವನ್ನು ಕೇಳುತ್ತಾನೆ. ಪರ್ವತವನ್ನು ಪುಡಿಮಾಡಿಬಿಡುತ್ತೇನೆ ಎಂದು ಕೂಗಾಡುತ್ತಾನೆ.

ಸಕಲ ಪ್ರಪಂಚವನ್ನೇ ಸುಟ್ಟು ಪುಡಿಮಾಡುವೆ ಎಂದು ಬಿಲ್ಲಿನ ನಾಣನ್ನು ಬಿಗಿದು “ಕ್ಷುರವೆನ್ನುವ ಬಾಣವನ್ನು” ಹೂಡಿದಾಗ ಆತನ ಕ್ರೋಧವನ್ನು ಗಮನಿಸಿದ ಲಕ್ಷ್ಮಣ ಆತನನು ಸಮಾಧಾನ ಪಡಿಸುತ್ತಾನೆ. ಲಕ್ಷ್ಮಣ ರಾಮನಿಗೆ ಧರ್ಮದ ವಿವೇಕವನ್ನು ಹೇಳುವುದು ರಾಮಾಯಣದಲ್ಲಿ ಸೊಗಸಾಗಿ ವರ್ಣಿತವಾಗಿದೆ. ವಿಪ್ಪತ್ತು ಎನ್ನುವುದು ಎಂತಹ ದೊಡ್ದ ಮನುಷ್ಯರಿಗೂ ಬರುತ್ತದೆ. ಆಗ ವಿವೇಕವನ್ನು ಕಳೆದುಕೊಳ್ಳಬಾರದು. ತಮ್ಮ ಕುಲಪುರೋಹಿತರಾದ ವಶಿಷ್ಠರ ನೂರುಮಂದಿ ಮಕ್ಕಳು ವಿಶ್ವಾಮಿತ್ರರಿಂದ ಹತರಾದರೂ ಅವರು ತಾಳ್ಮೆಯನ್ನು ತಂದು ಪ್ರತಿ ಶಾಪವನ್ನು ಕೊಡದಿರುವ ವಿಷಯವನ್ನು ತಿಳಿಸಿ ಸಮಾಧಾನ ಮಾಡುತ್ತಾನೆ. ಸಂಕಟಬಂದಾಗ ಧೃತಿಗೆಡದೇ ಅದನ್ನು ಪರಿಹರಿಸುವ ಉಪಾಯವನ್ನು ಹುಡಕಬೇಕೆಂದು ಹೇಳಿದಾಗ ರಾಮ ಸ್ವಲ್ಪಮಟ್ಟಿಗೆ ಸಮಾಧಾನಗೊಳ್ಳುತ್ತಾನೆ. ಅರಣ್ಯದಲ್ಲಿದ್ದ ಮೃಗಗಳ ಹತ್ತಿರ ವೈದೇಹಿಯ ಎಲ್ಲಿದ್ದಾಳೆ ಎಂದು ಕೇಳಿದಾಗ ಅವುಗಳು ದಕ್ಷಿಣದಿಕ್ಕಿಗೆ ಮುಖಮಾಡಿ ಆಕಾಶದ ಕಡೆಗೆ ನೋಡುತ್ತಿದ್ದವು. ಈ ಶಕುನದ ಲಕ್ಷಣದಂತೆ ಅವರು ಆಕಾಶಮಾರ್ಗದಲ್ಲಿ ದಕ್ಷಿಣದ ಕಡೆ ಹುಡುಕಲು ಪ್ರಾರಂಭಿಸುತ್ತಾರೆ.

ಅವರಿಗೆ ಮೊದಲು ಎದುರಾದ ಸವಾಲು ಸೀತೆಯನ್ನು ಯಾರು ಕದ್ದೊಯ್ದಿರಬಹುದೆನ್ನುವುದು. ಆಗ ಆತನಿಗೆ ಈ ವಿಷಯವನ್ನು ಹೇಳುವುದು ಜಟಾಯು. “ಪುತ್ರೋ ವಿಶ್ರವಸಃ ಸಾಕ್ಷಾದ್ಭಾತ್ರಾ ವಶ್ರವಣಸ್ಯ ಚ” ರಾವಣ ವಿಶ್ರವಸನ ಮಗ, ಕುಬೇರನ ಸಾಕ್ಷಾತ ಸಹೋದರ, ಎನ್ನುವ ಮೂಲಕ ಮೊತ್ತಮೊದಲ ಬಾರಿಗೆ ರಾವಣನೆನ್ನುವವನ ವಿಷಯವನ್ನು ರಾಮನಿಗೆ ತಿಳಿಸುತ್ತಾ ಮುಂದೆ ಹೇಳಲು ಸಾಧ್ಯವಾಗದೇ ಜೀವಬಿಡುತ್ತಾನೆ. ಅಲ್ಲಿಂದ ಮುಂದೆ ಆತನಿಗೆ ರಾವಣನ ಇರುವ ತಾಣವೆಲ್ಲಿ ಎನ್ನುವ ಸಂಶಯ ಉಂಟಾಗುತ್ತದೆ. ರಾಮಾಯಣದ ಪ್ರಕಾರ ಲಂಕೆಯೆನ್ನುವುದು ಒಂದು ಅಬೇಧ್ಯವಾದ ಪ್ರದೇಶವಾಗಿತ್ತು. ರಾವಣ ಅಲ್ಲಿಂದ ಜಗತ್ತಿನ ಬೇರೆಕಡೆ ಹೋಗಿ ಆಕ್ರಮಣ ಮಾಡುತ್ತಿದ್ದ. ಸಮುದ್ರದ ಮದ್ಯದಲ್ಲಿರುವ ಈ ದ್ವೀಪ ಪುರಾಣದ ಕಾಲದಿಂದಲೂ ಹೊರಗಿನ ಪ್ರಪಂಚಕ್ಕೆ ತಿಳಿದಿರಲಿಲ್ಲ. ಮೊದಲು ಅದು ಗಂಧರ್ವರ, ಯಕ್ಷರ ವಾಸ ಸ್ಥಳವಾಗಿತ್ತು. ದೇವತೆಗಳು ವಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಕುಬೇರನಿಂದ ಲಂಕೆಯನ್ನು ರಾವಣ ವಶಪಡಿಸಿಕೊಂಡಮೇಲೆ ದೇವತೆಗಳಿಗೂ ಅದು ಅಪರಿಚಿತ ಪ್ರದೇಶವಾಯಿತು. ಲಂಕೆ ಇರುವ ಪ್ರದೇಶ ಯಾರಿಗೂ ಗೊತ್ತಿರಲಿಲ್ಲ.

ಅದನ್ನು ಮೊದಲು ತಿಳಿದುಕೊಳ್ಳಲು ದಕ್ಷಿಣದೆಡೆಗೆ ಹುಡುಕಲು ಹೊರಡುತ್ತಾರೆ. ಸತಿವಿಯೋಗದದುಃಖದಿಂದ ಭ್ರಮಿತನಾದ ರಾಮನಿಗೆ ಲಕ್ಷ್ಮಣನೇ ಮಾರ್ಗದರ್ಶನ ಮಾಡುತ್ತಾನೆ. ಇಲ್ಲಿ ಲಕ್ಷ್ಮಣನ ವಿವೇಕ ಮತ್ತು ಪ್ರಕೃತಿಯೊಡನೆ ಆತನಿಗಿರುವ ತಾದಾತ್ಯ್ಮತೆ ಚನ್ನಾಗಿ ವ್ಯಕ್ತವಾಗುತ್ತದೆ. ಅವನಿಗೆ ತನ್ನ ವೈಪಲ್ಯದಿಂದ ಅಣ್ಣ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು ಎನ್ನುವ ಯಾವ ನೋವನ್ನು ಹೊರಗಡೆ ತೋರಿಸಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆತ ವಿವೇಚನೆಯನ್ನು ಮಾಡುತ್ತಿರುತ್ತಾನೆ. ಶೂರ್ಪನಖಿ, ಅಯೋಮುಖಿಯರಿಗೆ ಶಿಕ್ಷಿಸಿದ್ದು, ಇಂದ್ರಜಿತುವಿನ ವಧಾ ಪ್ರಕರಣ ಇಲ್ಲೆಲ ಅದನ್ನು ಗಮನಿಸಬಹುದು. ಸುಮಿತ್ರೆ ಹೇಳಿದ ಇನ್ನುಮುಂದೆ ಅರಣ್ಯವೇ ನಿನಗೆ ಅಯೋಧ್ಯೆ, ರಾಮನೇ ನಿನಗೆ ದಶರಥನಂತೆ, ಸೀತೆಯಲ್ಲಿ ತನ್ನನ್ನು ಕಾಣು ಎನ್ನುವ ಮಾತುಗಳು ಅವನಲ್ಲಿ ಮನಮಾಡಿದ್ದವು. ಆತನಿಗೆ ಶಕುನಗಳ ಕುರಿತು ಅರಿವಿತ್ತು. ರಾಮನಿಗೆ ಸಮಾಧಾನ ಮಾಡುತ್ತಾ ಮುಂದೆ ಸೀತಾನ್ವೇಷಣೆಯ ಕರ್ತವ್ಯವನ್ನು ಸೂಚಿಸಿ ಅಡವಿಯಲ್ಲಿ ದಕ್ಷಿಣಕ್ಕೆ ನಡೆಯುವಂತೆ ಪ್ರೇರೇಪಿಸುತ್ತಾನೆ. ಆಗ ಇದ್ದಕ್ಕಿದ್ದಂತೆ ಅವನ ಎಡತೋಳು ಅದುರಿತು, ಅದು ಅನಿಷ್ಟಸೂಚಕವಾದ ಶಕುನ, ಆದರೆ ಅದರ ಬೆನ್ನಲ್ಲೇ ಮಂಜುಲಕವೆನ್ನುವ ಹೆಸರಿನ ಮಹಾಭಯಂಕರ ಪಕ್ಷಿಯ ಧ್ವನಿ ಕೇಳಿಸಿತು. ಆತ ರಾಮನಿಗೆ “ಸದ್ಯದಲ್ಲಿಯೇ ಭಯಂಕರವಾದ ಯುದ್ಧದ ಸನ್ನಿವೇಶ ತಮಗೆ ಎದುರಾಗುತ್ತದೆ. ಪಕ್ಷಿಯ ಧ್ವನಿ ಕೇಳಿಸಿರುವದರಿಂದ ಅದರಲ್ಲಿ ನಮ್ಮಿಬ್ಬರಿಗೂ ವಿಜಯವಾಗುತ್ತದೆ” ಎಂದು ಹೇಳುತ್ತಾನೆ.

ಇದ್ದಕ್ಕಿದ್ದಂತೆ ಯಾವುದೋ ವಿಶಾಲವಾದ ತೋಳುಗಳು ಅವರಿಬ್ಬರನ್ನೂ ಬಂಧಿಸಿಬಿಡುತ್ತವೆ. ಅದು ಕಬಂಧನೆನ್ನುವ ರಾಕ್ಷಸನದು. ಆತನಿಗೆ ತಲೆಯೇ ಇರಲಿಲ್ಲ, ಹೊಟ್ಟೆಯಲ್ಲಿ ಬಾಯಿ ಇತ್ತು. ಅರಣ್ಯದಲ್ಲಿರುವ ಮೃಗ ಪಕ್ಷಿ ಪ್ರಾಣಿಗಳನ್ನು ತನ್ನ ಬಾಹುಗಳಲ್ಲಿ ಹಿಡಿದು ತಿನ್ನುತ್ತಿದ್ದ. ರಾಮ ಲಕ್ಷ್ಮಣರಿಬ್ಬರನ್ನೂ ಒಂದೊಂದು ತೋಳಿನಲ್ಲಿ ಹಿಡಿದು ತಿನ್ನಲು ಬಯಸಿದಾಗ ಆತನಿಂದ ತಪ್ಪಿಸಿಕೊಳ್ಳಲು ಅವರಿಬ್ಬರೂ ಆತನ ತೋಳುಗಳನ್ನು ಕತ್ತರಿಸಿಬಿಡುತ್ತಾರೆ. ಯಾವಾಗ ಆತನ ಕೈ ಕತ್ತರಿಸಲ್ಪಟ್ಟಿತೋ ಆ ರಾಕ್ಷಸ ಆಶ್ವರ್ಯಚಕಿತನಾಗಿ ಅವರಿಬ್ಬರ ಪರಿಚಯವನ್ನು ಕೇಳುತ್ತಾನೆ. ರಾಮ ತಮ್ಮಿಬರ ಪರಿಚಯವನ್ನು ಹೇಳಿದೊಡನೆಯೇ ಅತ ತನ್ನ ಪರಿಚಯವನ್ನು ಹೇಳಲುಪಕ್ರಮಿಸುತ್ತಾನೆ. ದನುವಿನ ಪುತ್ರನಾದ ಆತ ಗಂಧರ್ವನಾಗಿದ್ದ. ಸುಂದರನಾದ ರೂಪವನ್ನು ಹೊಂದಿದ್ದ, ಆದರೆ ಘೋರವಾದ ರೂಪವನ್ನು ಧರಿಸಿ ಅಡವಿಯಲ್ಲಿದ್ದ ಋಷಿಮುನಿಗಳಿಗೆ ತೊಂದರೆಕೊಡುತ್ತಿದ್ದ. ಒಮ್ಮೆ ಸ್ಥೂಲಶಿರಸನೆನ್ನುವ ಮುನಿಗೆ ಹೀಗೆ ಪೀಡಿಸಲು ಹೋದಾಗ ಮುನಿ, ನಿನಗೆ ಈ ಘೋರರೂಪವೇ ಶಾಶ್ವತವಾಗಿ ಉಳಿಯಲಿ ಎಂದು ಶಾಪವನ್ನು ಕೊಟ್ಟಕಾರಣದಿಂದ ಅರಣ್ಯದಲ್ಲಿ ರಾಕ್ಷಸನಾಗಿಬಿಟ್ಟ. ತನ್ನ ತಪ್ಪಿನ ಅರಿವಾಗಿ ಆತ ಋಷಿಯಲ್ಲಿ ಉಶ್ಶ್ಯಾಪವನ್ನು ಬೇಡಿದಾಗ, ಮುನಿ ”ರಾಮಲಕ್ಷ್ಮಣರು ಮುಂದೊಂದು ದಿನ ಅರಣ್ಯಕ್ಕೆ ಬಂದಾಗ ನಿನ್ನ ಎರಡೂ ತೋಳುಗಳನ್ನು ಕಡಿದು ಜೀವಂತವಾಗಿ ಸುಡುವರೋ ಆಗ ಪುನಃ ನಿನ್ನ ಕಾಂತಿಯುತವಾದ ಶರೀರ ನಿನಗೆ ದೊರೆಯುವುದು” ಎಂದು ನುಡಿಯುತ್ತಾನೆ.

ಶಾಪದ ಕಾರಣ ರೂಪಿನೊಂದಿಗೆ ಸ್ವಭಾವವವೂ ರಾಕ್ಷಸತ್ವವೇ ಆಗಿ ಬದಲಾಗಿಬಿಡುತ್ತದೆ. ಶಾಪಗ್ರಸ್ತನಾದವ ಬ್ರಹ್ಮನನ್ನು ಕುರಿತು ತಪಸ್ಸುಮಾಡಿ ದೀರ್ಘಾಯುಷ್ಯವನ್ನು ಪಡೆಯುತ್ತಾನೆ. ವರದ ಮದದಿಂದ ಇಂದ್ರನನ್ನು ಎದುರಿಸಿದಾಗ ದೇವೇಂದ್ರ ಈತನ ತಲೆಯ ಮೇಲೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಪ್ರಹಾರಕ್ಕೆ ಕಬಂಧನ ತಲೆ ಕಾಲು ಎಲ್ಲ ಶರೀರದೊಳಗೆ ಸೇರಿ ಹೊಟ್ಟೆಯಲ್ಲಿ ಬಾಯಿಮೂಡಿತು. ಸೋತು ಸುಣ್ಣವಾದ ರಾಕ್ಷಸ ಇಂದ್ರನಿಗೆ ತನ್ನನ್ನು ರಕ್ಷಿಸೆಂದು ಕೇಳಲು, ಆತ “ನಿನ್ನ ತೋಳುಗಳು ಯೋಜನದಷ್ಟು ವಿಸ್ತೀರ್ಣವಾಗಲಿ, ಮುಂದೆ “ಯದಾ ರಾಮಃ ಸಲಕ್ಷ್ಮಣಃ I ಛೇತ್ಸತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯಸಿ II- ಲಕ್ಷ್ಮಣಸಹಿತನಾದ ರಾಮನು ನಿನ್ನ ಎರಡೂ ತೋಳುಗಳನ್ನು ಯಾವಾಗ ಕಡಿಯುವನೋ ಆಗ ನಿನ್ನ ಶಾಪವಿಮೋಚನೆಯಾಗುತ್ತದೆ” ಎಂದು ಹೇಳುತ್ತಾನೆ. ಇಷ್ಟು ಹೇಳಿ ಆತ ರಾಮನ ಹತ್ತಿರ ತನ್ನನ್ನು ಈಗಲೇ ಜೀವಂತವಾಗಿ ಸುಡು ಎಂದು ಹೇಳಿದಾಗ ರಾಮ ಒಪ್ಪುವುದಿಲ್ಲ. ಕಬಂಧನಿಗೆ ಸೀತೆಯನ್ನು ರಾವಣ ಕದ್ದೊಯ್ದಿರುವ ವಿಷಯ ತಿಳಿದಿದೆ. ಕುಳಿತಲ್ಲಿಯೇ ಆತ ಅದನ್ನು ಗಮನಿಸಿದ್ದಾನೆ. ರಾಮನಿಗೆ ಸೀತೆಯನ್ನು ರಾವಣ ಕದ್ದೊಯ್ದವಿಷಯ ತಿಳಿಸಿ ಅವನ ಲಂಕೆಯನ್ನು ಹುಡುಕಲು ಒಬ್ಬ ಒಳ್ಳೆಯ ಮಿತ್ರನನ್ನು ಹುಡುಕಿಕೊಡುವುದಾಗಿ ಹೇಳುತ್ತಾನೆ. ಹಾಗೆ ಹೇಳಬೇಕೆಂದರೆ ತನಗೆ ಮೊದಲಿನ ರೂಪ ಸಿಕ್ಕರೆ ಮಾತ್ರ ಸಾಧ್ಯವೆಂದು ಶರತ್ತು ಹಾಕುತ್ತಾನೆ. ರಾಮನಿಗೆ ರಾವಣ ಸೀತೆಯನ್ನು ಎಲ್ಲಿಟ್ಟರಬಹು, ಆತ ಹೇಗಿರಬಹುದು ಎನ್ನುವ ಸಂಗತಿಗಳ ಅರಿವಿಲ್ಲ. ರಾಕ್ಷಸನ ಹೆಸರು ಮಾತ್ರ ಆತನಿಗೆ ತಿಳಿದಿದೆ. ಆತ ಇರುವುದೆಲ್ಲಿ, ಹಾಗಾಗಿ ಕಬಂಧನ ಜೀವ ಇರುವಾಗಲೇ ಸುಡಲು ಒಪ್ಪುತ್ತಾನೆ.

ಈ ಮೊದಲು ವಿರಾಧನೆನ್ನುವ ರಾಕ್ಷಸ ರಾಮನಲ್ಲಿ ತನ್ನನ್ನು ಜೀವಂತವಾಗಿ ಹುಗಿಯಲು ಹೇಳಿದ್ದ. ಹಾಗೆ ಜೀವಂತ ಹುಗಿದಾಗ ಆತನ ಶಾಪವಿಮೋಚನೆಯಾಗಿತ್ತು. ಇದೀಗ ಕಬಂಧನನ್ನು ಸುಟ್ಟ ತಕ್ಷಣದಲ್ಲಿ ಆತ ಮೊದಲಿನ ಗಂಧರ್ವನಾಗಿ ರಾಮನಿಗೆ ಕಾಣಿಸಿಕೊಂಡು ಕೊಡುವ ಸಲಹೆಯೇ ಸುಗ್ರೀವ ಎನ್ನುವ ವಾನರ ಇಲ್ಲಿಯೇ ಋಷ್ಯಮೂಕ ಪರ್ವತದಲ್ಲಿದ್ದಾನೆ. ಅತ ಇಂದ್ರನ ಮಗ. ಆತನ ಅಣ್ಣನಾದ ವಾಲಿ ಸುಗ್ರೀವನನ್ನು ಕಾರಣಾಂತರದಿಂದ ರಾಜ್ಯಭ್ರಷ್ಟನನ್ನಾಗಿ ಮಾಡಿದ್ದಾನೆ, ಎನ್ನುತ್ತಾ ರಾವಣನಿರುವ ಸ್ಥಳವನ್ನು ತಿಳಿಸಲು ಸುಗ್ರೀವನೊಬ್ಬನಿಗೆ ಸಾಧ್ಯ ಎನ್ನುತ್ತಾನೆ. ಕಾರ್ಯಸಾಧನೆಗೆ ಆರು ಮಾರ್ಗಗಳನ್ನು ಅನುಸರಿಸಬೇಕು. ಅವುಗಳು ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯಗಳು. ಇದರಲ್ಲಿ ನಿನ್ನಂತೆ ಪತ್ನಿಯನ್ನು ಕಳೆದುಕೊಂಡ ಸುಗ್ರೀವನಿಗೆ ನಿನ್ನ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ಆತನಲ್ಲಿ ನೀನು ಸಮಾಶ್ರಯವನ್ನು ಕೋರಬಹುದು ಎನ್ನುತ್ತಾನೆ. ಆ ವಾನರನಲ್ಲಿ ಅಗ್ನಿಸಾಕ್ಷಿಯಾಗಿ ಮಿತ್ರತ್ವವನ್ನು ಮಾಡಿಕೋ ಎನ್ನುವುದನ್ನು ಒತ್ತಿ ಹೇಳುತ್ತಾನೆ. ಸುಗ್ರೀವನ ಸಂಪೂರ್ಣ ಪರಿಚಯವನ್ನು ಮೊದಲು ರಾಮನಿಗೆ ಮಾಡಿಕೊಡುವುದೇ ಕಬಂಧನ್ನುವ ರಾಕ್ಷಸ. ತಾಮಸೀ ವ್ಯಕ್ತಿತ್ವದ ರಾಕ್ಷಸನಿಗೆ ವಾಲಿಯ ಪರಿಚಯವೋ ಇತ್ತು, ಆದರೆ ಆತ ವಾಲಿಗಿಂತ ಸುಗ್ರೀವನನ್ನೇ ಅಶ್ರಯ ಹೊಂದಲು ತಿಳಿಸುವ ಕಾರಣವೇ “ಕಷ್ಟದಲ್ಲಿರುವವರಿಗೆ ಕಷ್ಟದಲ್ಲಿರುವವರೇ ನೆರವಾಗುತ್ತಾರೆ” ಎನ್ನುವುದು.

ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ಇದು ಕಬಂಧನೇ ಹೇಳಿದಂತೆ ಹೆಂಡತಿಯ ವಿಯೋಗದಲ್ಲಿರುವ ಸುಗ್ರೀವನಿಗೆ ತನ್ನ ಕಷ್ಟ ಅರ್ಥವಾಗುತ್ತದೆ ಎನ್ನುವ ನಿಟ್ಟಿನಲ್ಲಿ. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ. ಸುಗ್ರೀವನ ಕುರಿತು ಪ್ರಚಲಿತದಲ್ಲಿದ್ದಂತೆ ಚಂಚಲ, ಅಂಜುಕುಳಿ ಸ್ವಭಾವ ಎನ್ನುವುದಕ್ಕೆ ವಿರುದ್ದವಾದ ಸ್ವಭಾವ ಆತನದ್ದಾಗಿತ್ತು. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

Continue Reading

ಅಂಕಣ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು.

VISTARANEWS.COM


on

ರಾಜಮಾರ್ಗ ಅಂಕಣ captain pranjal shaurya award
Koo

ಕರ್ನಾಟಕದ ಸೈನಿಕನಿಗೆ ದೊರೆಯಿತು ರಾಷ್ಟ್ರದ ಗೌರವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕಳೆದ ವರ್ಷವಿಡೀ ಕನ್ನಡ ನಾಡಿನಲ್ಲಿ (Karnataka) ಮೊಳಗಿದ್ದು ಇದೇ ಸೈನಿಕನ (Soldier) ಯಶೋಗಾಥೆ! ಅದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿ ಮಾಡಿದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಅವರು ದೇಶಕ್ಕಾಗಿ ಹುತಾತ್ಮರಾದ (Martyr) ರೋಮಾಂಚಕ ಕಥೆ.

ನಾನು ಅಂದು ಬರೆದ ಹಾಗೆ ಪ್ರಾಂಜಲ್ ಅವರು ಆಗರ್ಭ ಶ್ರೀಮಂತ ಕುಟುಂಬದ ಒಬ್ಬನೇ ಮಗ ಆಗಿದ್ದರು. ಅವರ ತಂದೆ ವೆಂಕಟೇಶ್ ಅವರು ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ MRPL ಇದರ ಎಂಡಿ ಆಗಿ ನಿವೃತ್ತಿಯನ್ನು ಹೊಂದಿದ್ದರು. ಹಾಗಿದ್ದರೂ ಮಗ ಸ್ವ ಇಚ್ಛೆಯಿಂದ ಸೈನ್ಯಕ್ಕೆ ಹೊರಟು ನಿಂತಾಗ ವೆಂಕಟೇಶ್ ಅಥವಾ ಅವರ ಪತ್ನಿ ತಡೆಯಲಿಲ್ಲ ಅನ್ನುವುದು ಶ್ರೇಷ್ಠ ನಿದರ್ಶನ.

ಅಂತಿಮ ಸಂಸ್ಕಾರದ ಹೊತ್ತು ಮಿಡಿಯಿತು ವೆಂಕಟೇಶ್ ಕುಟುಂಬ

ಪ್ರೀತಿ ಮಾಡಿ ಮದುವೆಯಾದ ಪತ್ನಿ ಅದಿತಿ ಕೂಡ ಗಂಡನ ಉಜ್ವಲ ರಾಷ್ಟ್ರಪ್ರೇಮಕ್ಕೆ ನೆರಳಾಗಿ ನಿಂತರು. ಮುಂದೆ ಪ್ರಾಂಜಲ್ ಅವರು ಭಯೋತ್ಪಾದಕರ ಜೊತೆಗೆ ಕೊನೆಯ ಉಸಿರಿನವರೆಗೂ ಹೋರಾಡಿ ಉಸಿರು ಚೆಲ್ಲಿದ ಘಟನೆಯು ನಡೆದಾಗ, ತ್ರಿವರ್ಣ ಧ್ವಜ ಹೊದ್ದು ಮಲಗಿದ ಪ್ರಾಂಜಲ್ ಪಾರ್ಥಿವ ಶರೀರ ಮನೆಯ ಅಂಗಳಕ್ಕೆ ಬಂದಾಗ ಸೈನಿಕನ ಕುಟುಂಬವು ಒಮ್ಮೆ ನಡುಗಿದ್ದು ಹೌದು.

ಹುತಾತ್ಮ ಸೈನಿಕನ ಹೆಂಡತಿ ಹೊರಗೆ ಅಳಲಿಲ್ಲ

ಆದರೆ ತಕ್ಷಣ ಸಾವರಿಸಿಕೊಂಡ ಆ ರಾಷ್ಟ್ರಭಕ್ತ ಕುಟುಂಬ ಪ್ರಾಂಜಲ್ ಅಂತಿಮ ಸಂಸ್ಕಾರದ ಅವಧಿಯಲ್ಲಿ ತೋರಿದ್ದು ಸಾವಧಾನದ ಮತ್ತು ಭಾವನೆಗಳ ನಿಯಂತ್ರಣದ ಅನನ್ಯ ಮಾದರಿಯನ್ನು. ಅದರಲ್ಲಿಯೂ ಹುತಾತ್ಮ ಸೈನಿಕನ ಪತ್ನಿ ಅಳಬಾರದು ಎಂದು ಮನದಲ್ಲಿ ಸಂಕಲ್ಪಿಸಿ ಅದಿತಿ ಅಂದು ಕಲ್ಲುಬಂಡೆಯ ಹಾಗೆ ನಿಂತಿದ್ದರು. ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಕರ್ನಾಟಕದ ವೀರ ಸೇನಾನಿಯ ಅಂತ್ಯ ಇಡೀ ನಾಡನ್ನು ದುಃಖದ ಮಡುವಿನಲ್ಲಿ ದೂಡಿತ್ತು.

Family of Captain MV Pranjal ರಾಜಮಾರ್ಗ ಅಂಕಣ

ಕಲ್ಯಾ ಶಾಲೆಯಲ್ಲಿ ನಿರ್ಮಾಣವಾಯಿತು ಕ್ಯಾ. ಪ್ರಾಂಜಲ್ ಸ್ಮಾರಕ

ಇಡೀ ಕನ್ನಡ ನಾಡು ದುಃಖ ಮತ್ತು ಸೂತಕದ ಛಾಯೆಯಲ್ಲಿ ಮುಳುಗಿದ್ದಾಗ ನಾಡಿನಾದ್ಯಂತ ಶ್ರದ್ಧಾಂಜಲಿ ಸಭೆಗಳು ನಡೆದವು. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಶಾಲೆಯ ಅಂಗಳದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಿರ್ಮಿಸಿದರು. ಈ ವರ್ಷ ಜನವರಿ 26ರಂದು ಸಂಜೆ ನಡೆದ ಈ ಭಾವುಕ ಕಾರ್ಯಕ್ರಮದಲ್ಲಿ ಸೈನಿಕನ ತಂದೆ ವೆಂಕಟೇಶ್ ಮತ್ತು ತಾಯಿ ಇಬ್ಬರೂ ಭಾಗವಹಿಸಿದ್ದರು. ನಿವೃತ್ತ ಸೈನಿಕರ ವೇದಿಕೆಯು ಗೌರವಾರ್ಪಣೆ ಮಾಡಿತ್ತು. ಕಲ್ಯಾ ಎಂಬ ಪುಟ್ಟ ಗ್ರಾಮ, ಅಲ್ಲಿನ ಸರಕಾರಿ ಶಾಲೆ, ಅಧ್ಯಾಪಕರು, ಮಕ್ಕಳು, ಹೆತ್ತವರು, ನೂರಾರು ಸಂಖ್ಯೆಯ ಗ್ರಾಮಸ್ಥರು ಸೇರಿ ಕಂಬನಿ ಮಿಡಿದ ಅತ್ಯಪೂರ್ವ ಕಾರ್ಯಕ್ರಮ ಅದಾಗಿತ್ತು.

Raja Marga Column Captain MV Pranjal Memorial

ಅದೇ ವೀರ ಸೈನಿಕನಿಗೆ ಇಂದು ದೊರೆಯಿತು ರಾಷ್ಟ್ರದ ಗೌರವ

ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು. ಹುತಾತ್ಮ ಸೈನಿಕನ ಪತ್ನಿ ಅದಿತಿಯವರ ಅದೇ ಭಾವುಕ ಮುಖ, ಅಮ್ಮನ ಅಕ್ಕರೆ ತುಂಬಿದ ಆಳವಾದ ಕಣ್ಣುಗಳು, ಪ್ರಾಂಜಲ್ ಹೆಸರು ಮೊಳಗಿದಾಗ ದೃಢವಾದ ಹೆಜ್ಜೆಗಳೊಂದಿಗೆ ತಾಯಿ ಮತ್ತು ಪತ್ನಿ ಇಬ್ಬರೂ ವೇದಿಕೆಯೇರಿದ್ದು, ಎದೆಯಲ್ಲಿ ಜ್ವಾಲಾಮುಖಿ ಇದ್ದರೂ ತುಟಿಯಲ್ಲಿ ಅರಳಿದ ಹೂ ನಗು, ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಿದಾಗ ಅದಿತಿಯವರ ಕಣ್ಣಲ್ಲಿ ಒಮ್ಮೆ ಮಿಂಚಿ ಮರೆಯಾದ ಪ್ರೌಡ್ ಫೀಲಿಂಗ್.

ಈ ದೃಶ್ಯವು ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ರಕ್ತವನ್ನು ಬಿಸಿ ಮಾಡುವುದು ಖಂಡಿತ. ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

Continue Reading
Advertisement
Anant Ambani wedding
ಕ್ರೀಡೆ9 mins ago

Anant Ambani wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರದಲ್ಲಿ ಪಾಲ್ಗೊಂಡ ಧೋನಿ, ಪಾಂಡ್ಯ ಬ್ರದರ್ಸ್​, ಇಶಾನ್​ ಕಿಶನ್​

dengue fever death bangalore
ಕ್ರೈಂ21 mins ago

Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

UK Election
ವಿದೇಶ33 mins ago

UK Election: ಇಂಗ್ಲೆಂಡ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್‌ ಪಕ್ಷ; ಭಾರತದ ಮೇಲೇನು ಪರಿಣಾಮ?

Heart Attack
ಕ್ರೀಡೆ42 mins ago

Heart Attack: ಚೆಸ್​ ಆಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಗ್ರ್ಯಾಂಡ್‌ಮಾಸ್ಟರ್

Janhvi Kapoor Stuns In Peacock Lehenga
ಬಾಲಿವುಡ್42 mins ago

Janhvi Kapoor: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ನವಿಲಂತೆ ಕಂಗೊಳಿಸಿದ ಜಾಹ್ನವಿ ಕಪೂರ್!

death by shock in pg
ಕ್ರೈಂ45 mins ago

Death by Shock: ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ಹೊಡೆದು ವಿದ್ಯಾರ್ಥಿ ಸಾವು

Deepika Padukone heads to Anant Ambani Radhika Merchant sangeet in a saree
ಬಾಲಿವುಡ್1 hour ago

Deepika Padukone: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ಸೀರೆಯಲ್ಲಿ ಮಿಂಚಿದ್ದು ಹೀಗೆ!

illegal relationship chitradurga
ಕ್ರೈಂ1 hour ago

Illegal Relationship: ಪರ ಸ್ತ್ರೀಯೊಂದಿಗೆ ಲಾಡ್ಜಿಗೆ ಬಂದು ಪರಲೋಕ ಸೇರಿದ!

Hardik Pandya
ಕ್ರೀಡೆ1 hour ago

Hardik Pandya: ನತಾಶಾ ಜತೆ ವಿಚ್ಛೇದನ ಖಚಿತ; ಸುಳಿವು ನೀಡಿದ ಹಾರ್ದಿಕ್​ ಪಾಂಡ್ಯ ಪೋಸ್ಟ್​!

UK Election
ವಿದೇಶ2 hours ago

UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ4 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ16 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ18 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ19 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ21 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ22 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು23 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು24 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌