Viral Video| ಡ್ರೈವ್​ ಮಾಡುತ್ತಿದ್ದಾಗಲೇ ಬಸ್​ ಚಾಲಕ ಸಾವು; ಸಿಗ್ನಲ್​ನಲ್ಲಿ ನಿಂತಿದ್ದವರಿಗೆ ರಭಸದಿಂದ ಡಿಕ್ಕಿ ಹೊಡೆದ ವಾಹನ - Vistara News

ವೈರಲ್ ನ್ಯೂಸ್

Viral Video| ಡ್ರೈವ್​ ಮಾಡುತ್ತಿದ್ದಾಗಲೇ ಬಸ್​ ಚಾಲಕ ಸಾವು; ಸಿಗ್ನಲ್​ನಲ್ಲಿ ನಿಂತಿದ್ದವರಿಗೆ ರಭಸದಿಂದ ಡಿಕ್ಕಿ ಹೊಡೆದ ವಾಹನ

ದುರಂತ ನಡೆದಿದ್ದು ಮಧ್ಯಪ್ರದೇಶ ಜಬಲ್ಪುರದಲ್ಲಿ. ಇದು ನಗರದೊಳಗೇ ಸಂಚರಿಸುವ ಬಸ್​ ಆಗಿದ್ದು, ರಾಣಿತಲ್​ಗೆ ಹೋಗುತ್ತಿತ್ತು. ಬಸ್​ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

Bus driver dies By heart Attack Bus Rams into Other Vehicle
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಬಲ್ಪುರ: ಟ್ರಾಫಿಕ್​ ಸಿಗ್ನಲ್​ನಲ್ಲಿ ನಿಂತಿದ್ದ ದ್ವಿಚಕ್ರವಾಹನಗಳು, ಕಾರು, ಆಟೋಗಳಿಗೆ ಹಿಂದಿನಿಂದ ಬಂದ ಬಸ್​​ವೊಂದು ಡಿಕ್ಕಿ ಹೊಡೆದು, ಒಬ್ಬರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಬಸ್​ ಚಾಲಕನ ಪ್ರಮಾದ ಎಂದೇ ಗೋಚರಿಸುತ್ತದೆ. ಆದರೆ ವಾಸ್ತವದಲ್ಲಿ ಆಗಿದ್ದೇ ಬೇರೆ. ಬಸ್​ ಚಾಲಕನನ್ನೂ ದೂರುವಂತಿಲ್ಲ. ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕ, ಅಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ಆತನ ಜೀವ ಹೋಗುತ್ತಿದ್ದಂತೆ ಬಸ್​​ ನಿಯಂತ್ರಣ ಕಳೆದುಕೊಂಡು, ಉಳಿದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಅಂದಹಾಗೇ, ದುರಂತ ನಡೆದಿದ್ದು ಮಧ್ಯಪ್ರದೇಶ ಜಬಲ್ಪುರದಲ್ಲಿ. ಇದು ನಗರದೊಳಗೇ ಸಂಚರಿಸುವ ಬಸ್​ ಆಗಿದ್ದು, ರಾಣಿತಲ್​ಗೆ ಹೋಗುತ್ತಿತ್ತು. ಚಾಲಕ ಹರ್​ದೇವ್​ ಪಾಲ್​​ (60) ಎಂದಿನಂತೆ ಬಸ್​ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಅವರಿಗೆ ಹೃದಯಾಘಾತ ಆಗಿ, ಸ್ಟೀರಿಂಗ್​ ವೀಲ್​ ಮೇಲೆ ಬಿದ್ದಿದ್ದಾರೆ. ಆಗ ಬಸ್​ ನಿಯಂತ್ರಣ ಕಳೆದು ಹೋಗಿ, ಟ್ರಾಫಿಕ್​ ಸಿಗ್ನಲ್​​ನಲ್ಲಿ ನಿಂತಿದ್ದವರ ಮೇಲೆ ಹರಿದಿದೆ.

ಬಸ್​​ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿದ್ದಾರೆ. ಬಸ್ ಚಕ್ರದ ಅಡಿಗಾಗಿ ಮಾರುದೂರ ಎಳೆದುಕೊಂಡು ಹೋಗಿ ದಾರುಣವಾಗಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಇನ್ನು ಆಟೋದಲ್ಲಿ ಇದ್ದ ಮಕ್ಕಳೂ ಸೇರಿ ಆರು ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಸ್​ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಪಾಸಣೆ ಮಾಡಿದ ವೈದ್ಯರು, ಜೀವ ಅದಾಗಲೇ ಹೋಗಿದೆ. ಹಠಾತ್​ ಹೃದಯಾಘಾತವೇ ಚಾಲಕನ ಸಾವಿಗೆ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video| ಪ್ರೀ ವೆಡ್ಡಿಂಗ್​ ಫೋಟೋಶೂಟ್​ ವೇಳೆ ಕೆರಳಿದ ಗಜ; ಸ್ವಲ್ಪದರಲ್ಲೇ ಪಾರಾದ ಮದುಮಕ್ಕಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral video: ಪೋಷಕರ ಫೋಟೊ ಶೋಕಿ; ಮೊಸಳೆ ಎದುರು ಮಕ್ಕಳಿಗೆ ಪ್ರಾಣ ಸಂಕಟ! ಆಘಾತಕಾರಿ ವಿಡಿಯೊ

ರಸ್ತೆಬದಿಯಲ್ಲಿ ಮೊಸಳೆಯನ್ನು ನೋಡಿದ ಮಕ್ಕಳು ಪೋಷಕರನ್ನು ಕರೆಯುತ್ತಾರೆ. ಅವರು ಮಕ್ಕಳನ್ನು ಅದರ ಮುಂದೆ ನಿಂತು ಫೋಟೋಗೆ ಪೋಸ್ ನೀಡುವಂತೆ ಒತ್ತಾಯಿಸುತ್ತಾರೆ. ಮಕ್ಕಳು ಭಯದಿಂದಲೇ ಮೊಸಳೆಯ ಮುಂದೆ ನಿಂತು ಸಾಕಷ್ಟು ಫೋಟೋಗಳಿಗೆ ಪೋಸ್ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದ್ದು, ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

By

Viral video
Koo

ತಂದೆ ತಾಯಿಗೆ ಮಕ್ಕಳೇ ಜೀವವಾಗಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಅವರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿರುವ ವಿಡಿಯೋವೊಂದು (Viral Video) ಈಗ ಎಲ್ಲ ಪೋಷಕರಲ್ಲೂ ಆತಂಕ ಉಂಟು ಮಾಡಿದೆ ಮಾತ್ರವಲ್ಲ ಸಾಕಷ್ಟು ಆಕ್ರೋಶವನ್ನೂ ಹುಟ್ಟು ಹಾಕಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವೈರಲ್ ಆಗಿರುವ ಈ ವಿಡಿಯೋದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಫೋಟೋಗಾಗಿ ಮೊಸಳೆಯ (photo pose with alligator) ಹತ್ತಿರ ನಿಲ್ಲುವಂತೆ ಪ್ರೋತ್ಸಾಹಿಸುತ್ತಿರುವುದನ್ನು ಕಾಣಬಹುದು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳು ರಸ್ತೆಬದಿಯಲ್ಲಿ ಮೊಸಳೆಯನ್ನು ನೋಡಿ ಪೋಷಕರನ್ನು ಕರೆಯುತ್ತಾರೆ. ಅವರು ಮಕ್ಕಳನ್ನು ಅದರ ಮುಂದೆ ನಿಂತು ಫೋಟೋಗೆ ಪೋಸ್ ನೀಡುವಂತೆ ಒತ್ತಾಯಿಸುತ್ತಾರೆ. ಮಕ್ಕಳು ಭಯದಿಂದಲೇ ಮೊಸಳೆಯ ಮುಂದೆ ನಿಂತು ಸಾಕಷ್ಟು ಫೋಟೋಗಳಿಗೆ ಪೋಸ್ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅಜಾಗರೂಕತೆಯ ಈ ದೃಶ್ಯದಲ್ಲಿ ಮೊಸಳೆ ಬಾಯ್ತೆರೆ ದು ನಿಂತಿತ್ತು. ಕೊಂಚ ಎಚ್ಚರ ತಪ್ಪಿದರೂ ಇದು ಬಹುದೊಡ್ಡ ಅನಾಹುತವನ್ನೇ ಉಂಟು ಮಾಡುತ್ತಿತ್ತು. ಆದರೆ ಈ ವಿಡಿಯೋದಲ್ಲಿ ಯಾರೊಬ್ಬರೂ ಅಪಾಯದ ಬಗ್ಗೆ ಯೋಚಿಸದಿರುವುದು ನೆಟ್ಟಿಗರನ್ನು ಕೆರಳಿಸಿದೆ.

ವಿಡಿಯೋದ ಸ್ಥಳ ಮತ್ತು ದಿನಾಂಕವನ್ನು ಪತ್ತೆ ಮಾಡಲಾಗಲಿಲ್ಲ. ಆದರೂ ಇದು ಸುಮಾರು 8 ತಿಂಗಳ ಹಿಂದಿನದ್ದು ಎಂದು ತಿಳಿದು ಬಂದಿದ್ದು, ಎಜೆ ಎಲ್ಲಿಸ್ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಸುಮಾರು 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.


ಒಬ್ಬ ಬಳಕೆದಾರರು , ಪೋಷಕರು ಇದನ್ನು ಹೇಗೆ ಅನುಮತಿಸಬಹುದು? ಎಂದು ಪ್ರಶ್ನಿಸಿದ್ದರೆ ಇನ್ನೊಬ್ಬರು ಖಂಡಿತವಾಗಿ, ಪೋಷಕರು ಮೊಸಳೆಯೊಂದಿಗೆ ಮಕ್ಕಳನ್ನು ಸ್ನೇಹಶೀಲವಾಗಿರಲು ಬಿಡುವುದು ಅದ್ಭುತ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬರು ಇದು ಹುಚ್ಚುತನ. ಮೊಸಳೆಗಳು ಕೆಲವೇ ಸೆಕೆಂಡುಗಳಲ್ಲಿ ದಾಳಿ ನಡೆಸಿದ್ದನ್ನು ನಾನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

ಪೋಷಕರಿಗೆ ಇದು ತಮಾಷೆಯಾದರೆ ಮಕ್ಕಳಿಗೆ ಇದು ಭಯವನ್ನು ಉಂಟು ಮಾಡಿದೆ ಎಂದು ಇನ್ನೊಬ್ಬರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ.

ಮತ್ತೊಬ್ಬರು ಜನರಿಗೆ ಇದು ನಿಜವಾಗಿಯೂ ಅರ್ಥವಾಗುವುದಿಲ್ಲ. ಮೊಸಳೆಗಳು ನೀರು, ಭೂಮಿಯಲ್ಲಿ ಎಷ್ಟು ವೇಗವಾಗಿ ಇರುತ್ತದೆ ಎಂದು ಯಾರೂ ಯೋಚಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, ಮೊಸಳೆಯದ್ದು ಆಕಳಿಕೆ ಅಲ್ಲ. ಅದು ಅಲ್ಲಿರುವ ಜನರಲ್ಲಿ ಒಬ್ಬರು ತನ್ನ ಬಾಯಿಗೆ ಹೊಂದಿಕೊಳ್ಳುತ್ತಾರೆಯೇ ಎಂದು ಯೋಚಿಸುತ್ತಿದೆ ಎಂದು ತಿಳಿಸಿದ್ದಾರೆ.

Continue Reading

ದೇಶ

Vande Bharat Express: ಮತ್ತೆ ಸುದ್ದಿಯಾದ ವಂದೇ ಭಾರತ್‌ ರೈಲು; ಮಾಂಸಾಹಾರ ಸರ್ವ್‌ ಮಾಡಿದ ಸಿಬ್ಬಂದಿಗೆ ಕಪಾಳಮೋಕ್ಷ

Vande Bharat Express: ಊಟದ ಪ್ಯಾಕೆಟ್‌ನಲ್ಲಿನ ಲೇಬಲ್ ಅನ್ನು ಗಮನಿಸದ ಹಿರಿಯ ವ್ಯಕ್ತಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾರೆ. ತಿಂದ ನಂತರ ಮಾಂಸಾಹಾರವೆಂದು ಗೊತ್ತಾಗಿದ್ದು, ಇದರಿಂದ ಕುಪಿತಗೊಂಡ ಅವರು ಆಹಾರ ವಿತರಿಸಿದ ಸಿಬ್ಬಂದಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ.

VISTARANEWS.COM


on

Vande Bharat Express
Koo

ನವದೆಹಲಿ: ವಂದೇ ಭಾರತ್‌ ರೈಲು(Vande Bharat Express) ಶುರುವಾದ ನಂತರ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಕೆಲವೊಮ್ಮೆ ರೈಲಿನ ಮೇಲೆ ಕಲ್ಲೆಸೆತ, ಇನ್ನು ಕೆಲವೊಮ್ಮೆ ರೈಲಿನಲ್ಲಿ ಸಿಗುವ ಕಳಪೆ ಊಟ ಹೀಗೆ ಸದಾ ಯಾವುದಾದರೂ ವಿವಾದಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಹಿರಿಯ ಪ್ರಯಾಣಿಕರೊಬ್ಬರು (Elderly Passenger), ತಾವು ಕೇಳಿದ ಸಸ್ಯಾಹಾರದ (Vegetarian) ಬದಲಿಗೆ ಮಾಂಸಾಹಾರವನ್ನು (Non-Vegetarian Meal) ನೀಡಿದ್ದಾನೆಂದು ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟನೆ ವಿವರ:

ಹೌರಾದಿಂದ ರಾಂಚಿಗೆ (Ranchi) ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಜುಲೈ 26 ರಂದು ನಡೆದ ಈ ಘಟನೆಯನ್ನು ಸಹ-ಪ್ರಯಾಣಿಕ ಕುನಾಲ್ ವರ್ಮಾ ಅವರು ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಊಟದ ಪ್ಯಾಕೆಟ್‌ನಲ್ಲಿನ ಲೇಬಲ್ ಅನ್ನು ಗಮನಿಸದ ಹಿರಿಯ ವ್ಯಕ್ತಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾರೆ. ತಿಂದ ನಂತರ ಮಾಂಸಾಹಾರವೆಂದು ಗೊತ್ತಾಗಿದ್ದು, ಇದರಿಂದ ಕುಪಿತಗೊಂಡ ಅವರು ಆಹಾರ ವಿತರಿಸಿದ ಸಿಬ್ಬಂದಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಇದು ಇತರ ಪ್ರಯಾಣಿಕರಿಗೆ ಹಿಡಿಸಲಿಲ್ಲ, ಮಧ್ಯಪ್ರವೇಶಿಸಿದ ಪ್ರಯಾಣಿಕರು ಹಿರಿಯ ಪ್ರಯಾಣಿಕ ಆಹಾರ ವಿತರಕ ಸಿಬ್ಬಂದಿಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿರಿಯ ಪ್ರಯಾಣಿಕನ ವರ್ತನೆಗೆ ಅಸಮಾಧಾನಗೊಂಡಿರುವ ಸಹ ಪ್ರಯಾಣಿಕರು ಆತನ ವಿರುದ್ಧ ಹರಿಹಾಯ್ದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೀವು ಏಕೆ ಅವರಿಗೆ ಹೊಡೆಯತ್ತಿದ್ದೀರಿ? ನಿಮ್ಮ ವಯಸ್ಸನ್ನು ನೋಡಿ. ವಯಸ್ಸಿಗೆ ತಕ್ಕಂತೆ ವರ್ತಿಸಿ ಎಂದು ಹೇಳಿದ್ದಾರೆ ಈ ವೇಳೆ ಆಹಾರ ವಿತರಿಸಿದ ಸಿಬ್ಬಂದಿ ಪದೇ ಪದೇ ಕ್ಷಮೆಯಾಚಿಸುವುದನ್ನು ಕಾಣಬಹುದು. ಇತರ ಪ್ರಯಾಣಿಕರು ಹಿರಿಯ ವ್ಯಕ್ತಿಯನ್ನು ಕ್ಷಮೆಯಾಚಿಸಿ ಎಂದು ಹೇಳುತ್ತಾರೆ.

ಇನ್ನು ಘಟನೆಯ ಬಗ್ಗೆ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅದನ್ನು ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ವೃದ್ಧನ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Continue Reading

Latest

Viral Video: ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

Viral Video: ಹಾವೆಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆಯ ತಲೆಯಿಂದ ಹಾವು ನಿಧಾನಕ್ಕೆ ತೆವಳುತ್ತ ಹೋಗುತ್ತಿರುವ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿದೆ.ಮಲಗಿದ್ದ ಮಹಿಳೆಯ ಕೂದಲಿನ ಮೂಲಕ ಹಾವು ನಿಧಾನಕ್ಕೆ ತೆವಳಿ, ಆಕೆಯ ಕೂದಲನ್ನು ಸುತ್ತಿ, ಅವಳ ತಲೆಯ ಹಿಂಭಾಗಕ್ಕೆ ಹೋಗಿದೆ. ಮಹಿಳೆಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ತೋರುತ್ತದೆ.. ಇದು ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ಹಾವು ಮನೆಯ ಹಿತ್ತಲಿನಲ್ಲಿ, ರಸ್ತೆಯ ಬದಿಯಲ್ಲಿ ಹರಿದಾಡುವುದನ್ನು ನಾವು ನೋಡಿರುತ್ತೇವೆ. ಹಾಗೇ ಕೆಲವೊಮ್ಮೆ ಹಾವು ಮನೆಯೊಳಗೆ ಅಡುಗೆ ಮನೆಯಲ್ಲಿ, ಶೌಚಾಲಯದಲ್ಲಿ ಹರಿದಾಡುತ್ತವೆ. ಅದರಲ್ಲೂ ಮಹಿಳೆಯರು ಹಾವನ್ನು ನೋಡಿದರೆ ಭಯಭೀತರಾಗುತ್ತಾರೆ. ಆದರೆ ಇಲ್ಲೊಂದು ಹಾವು ಮಲಗಿದ್ದ ಮಹಿಳೆಯ ತಲೆಯ ಕೂದಲಿನಲ್ಲಿ ಹರಿದಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಮಲಗಿದ್ದ ಮಹಿಳೆಯ ಕೂದಲಿನ ಮೂಲಕ ಹಾವು ತೆವಳುತ್ತಿದೆ. ಹಾವು ಆಕೆಯ ಕೂದಲನ್ನು ಸುತ್ತಿ, ಅವಳ ತಲೆಯ ಹಿಂಭಾಗಕ್ಕೆ ಹೋಗಿದೆ. ಮಹಿಳೆಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ತೋರುತ್ತದೆ. @kashikyatra ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಈ ವೈರಲ್ ವಿಡಿಯೊಗೆ “ಲೇಹ್ ಲಡಾಖ್ ಬೈಕ್ ರೈಡ್ ಟೂರ್ ಪ್ಯಾಕೇಜ್” ಎಂದು ಶೀರ್ಷಿಕೆ ನೀಡಲಾಗಿದೆ.

ಸುಮಾರು 2.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ಬಳಕೆದಾರರು ತನ್ನ ಖಾತೆಯಲ್ಲಿ ಇಂತಹ ಅನೇಕ ಭಯಾನಕ ಹಾವಿನ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಇದು ಒಂದು. ಈ ವಿಡಿಯೊ ಅನೇಕರ ಗಮನವನ್ನು ಸೆಳೆದಿದೆ ಮತ್ತು ಹಲವಾರು ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವಿಡಿಯೊವನ್ನು 226 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು 128 ಸಾವಿರ ಜನರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸುಮಾರು 2,098 ಜನರು ಕಾಮೆಂಟ್ ಮಾಡಿದ್ದಾರೆ. ಇದನ್ನು ವೀಕ್ಷಿಸಿದವರಲ್ಲಿ ಹೆಚ್ಚಿನವರು ಆಘಾತಕ್ಕೊಳಗಾಗಿದ್ದಾರೆ ಮತ್ತು ಎಮೋಜಿಗಳ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ.

ಹಾವು ಮಹಿಳೆಯ ಕೂದಲನ್ನು ಸುರಕ್ಷಿತ ಮತ್ತು ಬೆಚ್ಚಗಿನ ಸ್ಥಳವೆಂದು ತಪ್ಪಾಗಿ ಭಾವಿಸಿರಬಹುದು ಎಂದು ಊಹಿಸಲಾಗಿದೆ. ಒಬ್ಬ ಬಳಕೆದಾರರು “ಹರ್ ಹರ್ ಮಹಾದೇವ್” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಹಾವನ್ನು ಬಫ್ ಪಟ್ಟಿಯ ಕೀಲ್ಬ್ಯಾಕ್ ಎಂದು ಗುರುತಿಸಿದ್ದಾರೆ, ಬಿಹಾರದಲ್ಲಿ ಇದೇ ರೀತಿಯ ಹಾವುಗಳೊಂದಿಗೆ ಆಡಿದ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. ಈ ರೀತಿಯ ಹಾವು ಹಾನಿಕಾರಕವಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

ವೈರಲ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನವನ್ನು ಸೆಳೆದಿದೆ, ಇದು ವನ್ಯಜೀವಿಗಳು ಮಾನವರೊಂದಿಗೆ ಸಂವಹನ ನಡೆಸುವ ಅನಿರೀಕ್ಷಿತ ವಿಧಾನವಾಗಿದೆ ಎನ್ನಲಾಗಿದೆ. ಒಬ್ಬ ವ್ಯಕ್ತಿಗೆ ತುಂಬಾ ಹತ್ತಿರದಲ್ಲಿ ಹಾವನ್ನು ನೋಡುವುದು ಭಯವನ್ನು ಹುಟ್ಟಿಸಿದರೂ ನಮ್ಮ ಪರಿಸರದೊಂದಿಗೆ ನಾವು ಹಂಚಿಕೊಳ್ಳುವ ಜೀವಿಗಳನ್ನು ಗೌರವಿಸುವ ಮತ್ತು ಅರ್ಥಮಾಡಿಕೊಳ್ಳುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.

Continue Reading

Latest

Viral Video: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!

Viral Video: ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುವುದು ಖಂಡಿತ.

VISTARANEWS.COM


on

Viral Video
Koo


ಸಾಮಾನ್ಯವಾಗಿ ಮನುಷ್ಯರಲ್ಲಿ ಸ್ನೇಹಿತನೊಬ್ಬ ಸಂಕಷ್ಟದಲ್ಲಿದ್ದಾಗ ಮತ್ತೊಬ್ಬ ಸ್ನೇಹಿತ ಸಹಾಯಕ್ಕೆ ಬರುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಹಾಗೇ ಪ್ರಾಣಿಗಳು ಸಹ ತಮ್ಮ ಸ್ನೇಹಿತನ ಮೇಲೆ ಆಕ್ರಮಣ ನಡೆದರೆ ಅದನ್ನು ಕಾಪಾಡಲು ಬರುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಆದರೆ ಚಿಕ್ಕ ಪುಟ್ಟ ಜೀವಿಗಳು ಕೂಡ ತಮ್ಮ ಸಹಚರರು ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವುದನ್ನು ನೋಡಿದಾಗ ಆಶ್ಚರ್ಯವಾಗುವುದು ಖಂಡಿತ. ಇದೀಗ ಹಲ್ಲಿಯೊಂದು ಸಂಕಷ್ಟದಲ್ಲಿರುವ ತನ್ನ ಸ್ನೇಹಿತನ ಸಹಾಯಕ್ಕೆ ಬಂದು ಅದರ ಜೀವ ಉಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.

ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂತವರಿಗೂ ಆಶ್ಚರ್ಯವಾಗುವುದು ಖಂಡಿತ.

ಹಲ್ಲಿ ಹಾವನ್ನು ಮುಖಾಮುಖಿಯಾಗಿ ಎದುರಿಸಿದೆ. ಹಾವು ಅದಕ್ಕೆ ಕಚ್ಚುತ್ತಿದ್ದರೂ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು, ಸಿಕ್ಕಿಬಿದ್ದ ತನ್ನ ಸಹಚರನನ್ನು ಉಳಿಸಲು ಅದು ಧೈರ್ಯಶಾಲಿಯಾಗಿ ಹೋರಾಡಲು ಪ್ರಾರಂಭಿಸಿದೆ. ಆಗ ಹಾವು ತನ್ನ ಹಿಡಿತ ಕಳೆದುಕೊಂಡು ಕೆಳಗೆ ಬಿದ್ದಿದೆ. ಧೈರ್ಯಶಾಲಿ ಹಲ್ಲಿಯ ಪಟ್ಟುಬಿಡದ ದೃಢನಿಶ್ಚಯವು ಈ ಜಯಕ್ಕೆ ಕಾರಣವಾಗಿದೆ ಮತ್ತು ಇದರಿಂದ ಸ್ನೇಹಿತನ ಜೀವ ಉಳಿದಿದೆ. ಕೊನೆಗೂ ಸ್ನೇಹವು ಶತ್ರುವಿನ ಮೇಲೆ ಜಯ ಸಾಧಿಸಿದೆ.

ಇದನ್ನೂ ಓದಿ: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

ಈ ಅದ್ಭುತವಾದ ವಿಡಿಯೊವು ನಿಜವಾದ ಸ್ನೇಹಿತರು ಒಬ್ಬರಿಗೊಬ್ಬರು ಸಹಾಯ ಮಾಡಲು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ ಎಂಬುದನ್ನು ಸೂಚಿಸುತ್ತದೆ. ಸ್ನೇಹಕ್ಕಾಗಿ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಹಾಗೂ ಇತರ ಜೀವಿಗಳು ಕೂಡ ಹೋರಾಡುತ್ತವೆ ಎಂಬುದನ್ನು ಈ ವಿಡಿಯೊದಲ್ಲಿ ನಾವು ಕಾಣಬಹುದು. ಅಲ್ಲದೇ ಈ ವಿಡಿಯೊದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸಹ ಸಾಬೀತಾಗಿದೆ. ಶತ್ರುವಿನ ಜೊತೆ ಜೊತೆಯಾಗಿ ನಿಂತು ಹೋರಾಡಿದರೆ ಅವರ ಮೇಲೆ ಜಯ ಸಾಧಿಸಬಹುದು ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.

Continue Reading
Advertisement
Ismail Haniyeh
ವಿದೇಶ52 seconds ago

Ismail Haniyeh: ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಬರ್ಬರ ಹತ್ಯೆ

Puri Jagannath Temple
ದೇಶ26 mins ago

Puri Jagannath Temple: ಪುರಿ ಜಗನ್ನಾಥ ಮಂದಿರದ ನಕಲಿ ಕೀ ಪತ್ತೆ; ಅಪಾರ ಪ್ರಮಾಣದ ಬಂಗಾರ ಕಳವು?

Nabha Natesh in red gown Darling movie review
ಟಾಲಿವುಡ್38 mins ago

Nabha Natesh: ರೆಡ್ ಗೌನ್‌ನಲ್ಲಿ ‘ಪಟಾಕ’ ಮಿಂಚಿಂಗ್; ಟಾಲಿವುಡ್‌ನಲ್ಲಿ ನಭಾ ನಟೇಶ್ ಧಮಾಕ!

winning tips ರಾಜಮಾರ್ಗ ಅಂಕಣ
ಅಂಕಣ47 mins ago

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Actor Darshan Chethan Kumar on Darshan Case
ಸ್ಯಾಂಡಲ್ ವುಡ್56 mins ago

Actor Darshan: ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ!

Narayana Murthy
ದೇಶ1 hour ago

Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

drowned kalaburagi
ಕ್ರೈಂ1 hour ago

Drowned: ಆತ್ಮಹತ್ಯೆಗಾಗಿ ನದಿಗೆ ಹಾರಿದ ಮಹಿಳೆ ರಕ್ಷಣೆ, ಬದುಕಿಸಲು ಹೋದ ಗಂಡ- ಬಂಧು ಜಲಸಮಾಧಿ

ITR Filing
ದೇಶ1 hour ago

ITR Filing: ಐಟಿ ರಿಟರ್ನ್ಸ್ ಫೈಲ್‌ಗೆ ಇಂದು ಅಂತಿಮ ದಿನ; ಗಡುವು ವಿಸ್ತರಣೆಗೆ ಕಾದರೆ ದಂಡ ಕಟ್ಟಬೇಕಾದೀತು!

wayanad landslide bandipur checkpost
ಪ್ರಮುಖ ಸುದ್ದಿ2 hours ago

Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Wayanad Landslide
ದೇಶ2 hours ago

Wayanad Landslide: ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಇಂದೂ ಭಾರಿ ಮಳೆಯ ಮುನ್ಸೂಚನೆ, ಮುಂದುವರಿದ ಕಾರ್ಯಾಚರಣೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ21 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌