Bollywood Stars Fashion | ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ತಾರೆಯರ ಹೈ ಫ್ಯಾಷನ್‌ - Vistara News

ಲೈಫ್‌ಸ್ಟೈಲ್

Bollywood Stars Fashion | ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ತಾರೆಯರ ಹೈ ಫ್ಯಾಷನ್‌

ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಲಿವುಡ್‌ ತಾರೆಯರು ಮಾತ್ರವಲ್ಲ, ಬಾಲಿವುಡ್‌ ತಾರೆಯರು ತಮ್ಮದೇ ಆದ ಫ್ಯಾಷನ್‌ವೇರ್‌ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು. ಅವರ ವಿಭಿನ್ನ ಡಿಸೈನರ್‌ವೇರ್‌ಗಳ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Bollywood Stars Fashion
ಚಿತ್ರಕೃಪೆ : ರೆಡ್‌ ಸೀ ಫಿಲ್ಮ್ ಫೆಸ್ಟಿವಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹಾಲಿವುಡ್‌ ತಾರೆಯರು ಮಾತ್ರವಲ್ಲ, ಬಾಲಿವುಡ್‌ ತಾರೆಯರು ಕೂಡ ತಮ್ಮದೇ ಆದ ಫ್ಯಾಷನ್‌ವೇರ್‌ಗಳಲ್ಲಿ ಕಾಣಿಸಿಕೊಂಡು, ಅಲ್ಲಿನ ರೆಡ್‌ಕಾರ್ಪೆಟ್‌ ಸಮಾರಂಭದ ಘನತೆ ಹೆಚ್ಚಿಸಿದರು.

ಅಂದಹಾಗೆ, ಈ ಕಾರ್ಯಕ್ರಮ ಸೌದಿಯಲ್ಲಿ ನಡೆದ ಮೊಟ್ಟ ಮೊದಲ ಫಿಲ್ಮ್‌ ಫೆಸ್ಟಿವಲ್‌ ಎನ್ನಲಾಗಿದೆ. ಡಿಸೆಂಬರ್‌ ೧ರಿಂದ ೧೦ರವರೆಗೆ ನಡೆಯುತ್ತಿರುವ ಈ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಿನಿಮಾ ತಾರೆಯರು ಎಲ್ಲೆಡೆಯಿಂದ ಆಗಮಿಸಿ ಭಾಗವಹಿಸಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ತಾರೆಯರು ಧರಿಸಿದ್ಧ ಫ್ಯಾಷನ್‌ವೇರ್‌ ಹಾಗೂ ಡಿಸೈನರ್‌ವೇರ್‌ಗಳು ರೆಡ್‌ಕಾರ್ಪೆಟ್‌ನಲ್ಲಿ ಹೈಲೈಟಾಗಿದ್ದವು.

ಬಾಲಿವುಡ್‌ ತಾರೆಯರ ಫ್ಯಾಷನ್‌ವೇರ್‌

ನಟಿ ಪ್ರಿಯಾಂಕಾ ಚೋಪ್ರಾ, ಕರೀನಾ-ಸೈಫ್‌ ಜೋಡಿ, ಫ್ರೀಡಾ ಪಿಂಟೋ. ಸೋನಂ ಕಪೂರ್‌, ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌, ಎ. ಆರ್‌. ರೆಹಮಾನ್‌ ಸೇರಿದಂತೆ ಸಾಕಷ್ಟು ಬಾಲಿವುಡ್‌ ಗಣ್ಯರು ತಮ್ಮದೇ ಆದ ಯೂನಿಕ್‌ ಸ್ಟೈಲ್‌ನ ಫ್ಯಾಷನ್‌ವೇರ್‌ಗಳಲ್ಲಿ ಪಾಲ್ಗೊಂಡು ನೆರೆದಿದ್ದವರ ಮನ ಗೆದ್ದರು.

ಕರೀನಾ-ಸೈಫ್‌ ಕಪಲ್‌ ಗೋಲ್ಸ್‌

ಫಿಲ್ಮ್‌ ಫೆಸ್ಟಿವಲ್‌ಗೆ ಪಾಲ್ಗೊಳ್ಳುವ ಮುನ್ನ ಕರೀನಾ ಸಾದಾ ಸೀ ಬ್ಲ್ಯೂ ಶೇಡ್‌ನ ಕಟೌಟ್‌ ಗೌನ್‌ನಲ್ಲಿ, ಸೈಫ್‌ ಅಲಿ ಖಾನ್‌ ಬಂಡಿ ಸೂಟ್‌ನಲ್ಲಿ ಕಾಣಿಸಿಕೊಂಡರು. ನಂತರ ಚಾಕೋಲೇಟ್‌ ಗೋಲ್ಡನ್‌ ಶೇಡ್‌ನ ಶೀರ್‌ ಸೀರೆಯಲ್ಲಿ ಕರೀನಾ, ವೆಸ್ಟರ್ನ್ ಶೈಲಿಯ ಸೂಟ್‌ನಲ್ಲಿ ಸೈಫ್‌ ಎಲ್ಲರ ಮನಸೆಳೆದರು.

Bollywood Stars Fashion
ಪ್ರಿಯಾಂಕಾ ಚೋಪ್ರಾ, ನಟಿ

ಪ್ರಿಯಾಂಕಾ ಯೆಲ್ಲೋ ಗೌನ್‌

ನಟಿ ಪ್ರಿಯಾಂಕಾ ಚೋಪ್ರಾ , ಯೆಲ್ಲೋ ಸಾಟಿನ್‌ ಗೌನ್‌ನಲ್ಲಿ ಅತ್ಯಾಕರ್ಷಕವಾಗಿ ಕಂಡರು. ಮತ್ತೊಮ್ಮೆ ಧರಿಸಿದ ಗೋಲ್ಡನ್ ಶೈನಿಂಗ್‌ ಗೌನ್‌ ಕೂಡ ವಿಭಿನ್ನವಾಗಿತ್ತು. ವಿಪರ್ಯಾಸವೆಂದರೇ, ಈ ಎರಡೂ ಡ್ರೆಸ್‌ಗಳು ನೆಟ್ಟಿಗರ ಟ್ರೋಲ್‌ಗೆ ಕಾರಣವಾಯಿತು. ಕಾರಣ ಇಷ್ಟೇ! ಎರಡೂ ಡ್ರೆಸ್‌ಗಳನ್ನು ಬೇರೆ ನಟಿಯರು ಧರಿಸಿದ್ದರು. ಇದು ಕಾಕತಾಳೀಯವಾದರೂ ನಟಿಯ ಡ್ರೆಸ್‌ ಹೈಲೈಟಾಗದೇ ಫ್ಯಾಷನ್‌ ಕಾಪಿಕ್ಯಾಟ್‌ ಲಿಸ್ಟ್‌ಗೆ ಸೇರಿತು ಎನ್ನುತ್ತಾರೆ ಸ್ಟೈಲಿಸ್ಟ್‌ ರಿಯಾ.

Bollywood Stars Fashion
ಫ್ರೀಡಾ ಪಿಂಟೋ, ನಟಿ

ಇತರೇ ನಟಿಯರ ರೆಡ್‌ಕಾರ್ಪೆಟ್‌ ಡ್ರೆಸ್‌

ಪ್ರಿಯಾಂಕಾ ಚೋಪ್ರಾ ಧರಿಸಿದ ಯೆಲ್ಲೋ ಶೇಡ್‌ನ ಅನುಕರಣೀಯ ಎಂಬಂತೆ ನಟಿ ಫ್ರೀಡಾ ಪಿಂಟೋ ಕೂಡ ಅದೇ ಶೇಡ್‌ನ ಉಡುಪು ಧರಿಸಿದ್ದರು. ಇನ್ನು ಸೋನಂ ಕಪೂರ್‌ ಸ್ಯಾಟಿನ್‌ ರೆಡ್‌ ಗೌನ್‌ ರೆಡ್‌ ಧರಿಸಿದ್ದರು. ನಟಿ ಕಾಜೋಲ್‌ ಕೂಡ ಬ್ಲಾಕ್‌ ಕಲರ್‌ ಡ್ರೆಸ್‌ ಧರಿಸಿದ್ದರು. ಹೆಚ್ಚೆನೂ ವಿಭಿನ್ನವಾಗಿರಲಿಲ್ಲ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Bollywood Stars Fashion
ಶಾರೂಖ್‌ ಖಾನ್‌, ನಟ

ಶಾರೂಖ್‌ ಬ್ಲಾಕ್‌ ಸೂಟ್‌

ಎಂದಿನಂತೆ ಶಾರೂಖ್‌ ಖಾನ್‌ ಬ್ಲಾಕ್‌ ಸೂಟ್‌ ಕ್ಲಾಸಿ ಲುಕ್‌ ನೀಡಿತ್ತು. ಇದು ಅವರ ಯೂನಿಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸಾಕ್ಷಿ ಎಂಬಂತಿತ್ತು.

ಇವರೊಂದಿಗೆ ಭಾಗವಹಿಸಿದ ಎ.ಆರ್‌.ರೆಹಮಾನ್‌ ಅವರದ್ದು ಕೂಡ ಎಂದಿನಂತೆ ಬ್ಲಾಕ್‌ ಸೂಟ್‌ ಧರಿಸಿದ್ದರು. ಇಬ್ಬರದು ಯೂನಿಫಾರ್ಮ್ ಡ್ರೆಸ್‌ನಂತೆ ಕಾಣುತ್ತಿತ್ತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star Fashion | ಬ್ಲ್ಯಾಕ್‌ ಲೆದರ್‌ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಗ್ಲಾಮರಸ್‌ ಲುಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

National Doctor’s Day: ಇಂದು ರಾಷ್ಟ್ರೀಯ ವೈದ್ಯರ ದಿನ; ಕಾಳಜಿಯ ಕೈಗಳಿಗೆ ಕೃತಜ್ಞತೆ ಹೇಳುವ ದಿನ

National Doctor’s Day: ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಜುಲೈ ತಿಂಗಳ ಈ ಮೊದಲ ದಿನವನ್ನು ಮೀಸಲಿಡಲಾಗಿದೆ. ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

National Doctor’s Day
Koo

ವೈದ್ಯರನ್ನು ನಾರಾಯಣನೆಂದು ಕರೆಯುವ ವಾಡಿಕೆಯಿದೆ ಭಾರತದಲ್ಲಿ. ಹಾಗೆಲ್ಲ ದೇವರೆಂದು ಪೂಜಿಸುವ ವೃತ್ತಿಯಲ್ಲಿರುವವರಿಗೂ ʻಸಾಕಪ್ಪಾʼ ಎನಿಸುವಂತೆ ವೈದ್ಯರ ಮೇಲಿನ ದಾಳಿಗಳು, ನೀಟ್‌ ಪರೀಕ್ಷೆಗಳ ಅವಾಂತರ ಮುಂತಾದವು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿವೆ. ಅವುಗಳ ನಡುವೆಯೇ, ಈ ಗುಣ ಪಡಿಸುವ ಕೈಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಬಂದಿದೆ. ಇಂದು ರಾಷ್ಟ್ರೀಯ ವೈದ್ಯರ ದಿನ (National Doctor’s Day).
ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಈ ದಿನವನ್ನು ಮೀಸಲಿಡಲಾಗಿದೆ. ಇದೊಂದೇ ದಿನ ಸಾಕು ಎನ್ನುವ ಅರ್ಥದಲ್ಲಿ ಅಲ್ಲ, ಆದರೆ ಇಂದಾದರೂ ನೆನಪಿನಿಂದ ನಿಂನಿಮ್ಮ ವೈದ್ಯರಿಗೆ ಸಣ್ಣದೊಂದು ʻಥ್ಯಾಂಕ್ಸ್‌ʼ ಹೇಳಲು, ಅವರ ಕಾಳಜಿಯ ಕುರಿತಾಗಿ ಕೃತಜ್ಞತೆ ಸಲ್ಲಿಸಲು ಮರೆಯದಿರಿ ಎನ್ನುವ ಉದ್ದೇಶ ಇದರ ಹಿಂದಿದೆ.

Doctor’s Day

ಇಂದೇ ಏಕೆ?

ಜುಲೈ ಮೊದಲ ದಿನವೇ ವೈದ್ಯರ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ರೋಗಿಗಳ ನೋವನ್ನು ಶಮನ ಮಾಡುವ, ಗುಣಪಡಿಸುವ ಮತ್ತು ಬದುಕನ್ನು ಸಹನೀಯಗೊಳಿಸುವ ವೈದ್ಯರಿಗೆ ಇಂದೇ ಕೃತಜ್ಞತೆ ಸಲ್ಲಿಸುವುದಕ್ಕೆ ಕಾರಣಗಳಿವೆ. ಡಾ. ಬಿಪಿನ್‌ ಚಂದ್ರ ರಾಯ್‌ ಅವರ ಸಂಸ್ಮರಣಾರ್ಥವಾಗಿ ಭಾರತ ಸರಕಾರ ಈ ದಿನವನ್ನು ವೈದ್ಯರ ದಿನವೆಂದು 1991ರಲ್ಲಿ ಘೋಷಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಪಿನ್‌ ಚಂದ್ರ ರಾಯ್‌, ಖ್ಯಾತ ವೈದ್ಯರು ಮತ್ತು ಸ್ವಾತಂತ್ರ ಹೋರಾಟಗಾರರೂ ಆಗಿದ್ದರು.

ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿ, ವೈದ್ಯಕೀಯ ಕ್ಷೇತ್ರಕ್ಕೆ ಸಾಂಸ್ಥಿಕ ಬಲವನ್ನು ನೀಡುವಲ್ಲಿ ಡಾ. ರಾಯ್‌ ಪ್ರಮುಖರಾಗಿದ್ದರು. ತಾವೇ ಸ್ವತಃ ಒಳ್ಳೆಯ ವೈದ್ಯರಾಗಿ, ಬಹಳಷ್ಟು ಜೀವಗಳನ್ನು ಉಳಿಸಿದ್ದರು. ಸ್ವಾತಂತ್ರ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ದೇಶಕ್ಕೆ ಅವರು ನೀಡಿದ ಕೊಡುಗೆಗಾಗಿ, ಭಾರತದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿ ʻಭಾರತ ರತ್ನʼ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಆರೋಗ್ಯಕ್ಷೇತ್ರ ಮತ್ತು ನಾಗರಿಕ ಆರೋಗ್ಯ ವಲಯದಲ್ಲಿ ವೃತ್ತಿಪರತೆ ಮತ್ತು ಮಾನವೀಯತೆಯ ಉನ್ನತ ಆದರ್ಶಗಳನ್ನು ಸೃಷ್ಟಿಸಿರುವ ಸಾವಿರಾರು ವೈದ್ಯರು ನಮ್ಮ ಕಣ್ಣೆದುರಿಗಿದ್ದಾರೆ. ನೂರೆಂಟು ಸವಾಲುಗಳ ನಡುವೆ, ಜೀವ ಉಳಿಸುವ ಕೈಂಕರ್ಯದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು, ಅದರಲ್ಲೇ ತೃಪ್ತಿಯನ್ನು ಕಂಡವರ ಕತೆಗಳನ್ನು, ದೃಷ್ಟಾಂತಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲೇ ಜೀವ ಒತ್ತಡ ಇಟ್ಟು ಹಗಲಿರುಳು ದುಡಿದ ವೈದ್ಯರು ಜಗತ್ತಿನ ಉದ್ದಗಲಕ್ಕೆ ಕಾಣಸಿಗುತ್ತಾರೆ. ಸಮಾಜಕ್ಕೆ ಈ ವೃತ್ತಿ ನೀಡುತ್ತಿರುವ ಕೊಡುಗೆಗೆ ಧನ್ಯವಾದ ಹೇಳುವುದೂ ಅಗತ್ಯವಲ್ಲವೇ? ಈ ವರ್ಷದ ಘೋಷವಾಕ್ಯ: ಗುಣಪಡಿಸುವ ಕೈಗಳು, ಕಾಳಜಿಯ ಹೃದಯಗಳು.

Continue Reading

ಪ್ರಮುಖ ಸುದ್ದಿ

Dengue Fever: ರಾಜಧಾನಿಯಲ್ಲಿ ಡೆಂಗ್ಯು ಜ್ವರಕ್ಕೆ ಒಂದು ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Dengue Fever: ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

VISTARANEWS.COM


on

Dengue fever rises across the state including Bengaluru BBMP Commissioner also get fever
Koo

ಬೆಂಗಳೂರು: ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯು ಸೋಂಕಿನಿಂದಲೇ (Dengue Fever) ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ (BBMP) ಖಚಿತಪಡಿಸಿದೆ. ಕಳೆದ ಶುಕ್ರವಾರ ಎರಡು ಡೆಂಗ್ಯು ಶಂಕಿತ ಸಾವಿನ ಪ್ರಕರಣಗಳು ಸಂಭವಿಸಿದ್ದವು. ಇದರಲ್ಲಿ ಒಂದು ಸಾವು ಡೆಂಗ್ಯುವಿನಿಂದಾಗಿದೆ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ (BBMP Health Audit) ಖಚಿತಪಡಿಸಿದೆ.

ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯು ಕಾರಣವವಾಗಿದೆ. ಆದರೆ 80ರ ವೃದ್ಧೆಯ ಸಾವಿಗೆ ಕ್ಯಾನ್ಸರ್ ಕಾರಣ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನಗರದಲ್ಲಿ ಸದ್ಯ 1743 ಆಕ್ಟಿವ್ ಡೆಂಗ್ಯು ಕೇಸ್‌ಗಳು ಇವೆ.

ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

ಇದೂವರೆಗೂ ನಗರದಲ್ಲಿ ಇಬ್ಬರು ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದಾರೆ. ಸಿವಿ ರಾಮನ್ ನಗರದ 27 ವರ್ಷದ ಯುವಕ ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದು, ಈತ ತೀವ್ರ ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

Continue Reading

ಆರೋಗ್ಯ

Watermelon At Night: ಸಂಜೆ 7 ಗಂಟೆಯ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

watermelon at night: ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಕಲ್ಲಂಗಡಿ ಹಣ್ಣು ಸೇವನೆಗೆ ಸೂಕ್ತ. ಆದರೆ ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಲೇಖನ ಓದಿ.

VISTARANEWS.COM


on

Watermelon At Nigh
Koo

ಪ್ರಕೃತಿದತ್ತವಾಗಿ ಸಿಗುವ ಹಣ್ಣು ಹಂಪಲುಗಳಿಂದ ದೇಹ ತಂಪು ಮಾಡಿಕೊಂಡು ಆರೋಗ್ಯವಾಗಿರಲು ಪ್ರಯತ್ನಿಸುತ್ತೇವೆ. ಸಾಕಷ್ಟು ಹಣ್ಣುಗಳು ತೂಕ ಇಳಿಕೆಗೆ ಪೂರಕವಾಗಿಯೂ ಇವೆ. ಹೆಚ್ಚು ಲೈಕೋಪೀನ್‌ ಇರುವ ಕಲ್ಲಂಗಡಿ ಹಣ್ಣೂ ಕೂಡಾ, ತೂಕ ಇಳಿಕೆಗೆ ಸಹಾಯ ಮಾಡುವ ಹಣ್ಣೇ ಆಗಿದೆ. ಆದರೆ, ಹಾಗಂತ, ಈ ಕಲ್ಲಂಗಡಿಯನ್ನೇ ತಿಂದು ತೂಕ ಇಳಿಸಲು ಪ್ರಯತ್ನಿಸುವ ಮಂದಿಯೂ ಇಲ್ಲದಿಲ್ಲ. ಕಡಿಮೆ ಕ್ಯಾಲರಿಯ, ಹೆಚ್ಚು ನೀರಿನಂಶ ಇರುವ ತಂಪಾದ ಹಣ್ಣು ಕಲ್ಲಂಗಡಿಯನ್ನು ತಿಂದು ತೂಕ ಇಳಿಸಿಕೊಂಡವರೂ ಇದ್ದಾರೆ ನಿಜ. ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಈ ಹಣ್ಣು ಸೇವನೆಗೆ ಸೂಕ್ತ. ಆದರೆ, ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಬನ್ನಿ, ಕಲ್ಲಂಗಡಿಯನ್ನು (watermelon at night) ಯಾಕೆ ರಾತ್ರಿ ತಿನ್ನಬಾರದು ಎಂಬುದನ್ನು ತಿಳಿಯೋಣ.

Watermelon

ಇದು ಆಮ್ಲೀಯ ಗುಣ ಹೊಂದಿದೆ

ವಾಟರ್‌ ಮೆಲನ್‌ ಎಂಬ ತನ್ನ ಹೆಸರೇ ಹೇಳುವಂತೆ, ಕಲ್ಲಂಗಡಿ ಹಣ್ಣಿನಲ್ಲಿ 90ಕ್ಕೂ ಹೆಚ್ಚು ಪ್ರತಿಶತ ನೀರಿದೆ. ಲೈಕೋಪೀನ್, ಪೊಟಾಶಿಯಂ, ಹಾಗೂ ಸಾಕಷ್ಟು ಪ್ರಮಾಣದಲ್ಲಿ ಇತರ ಪೋಷಕಾಂಶಗಳೂ ಇವೆ. ನಾರಿನಂಶವೂ ಹೆಚ್ಚಿದೆ. ಹಾಗಾಗಿ ಜೀರ್ಣಕ್ರಿಯೆಗೆ ಸಹಾಯವನ್ನೂ ಮಾಡುತ್ತದೆ ನಿಜ. ಆದರೆ, ಇವೆಲ್ಲ ಇದ್ದೂ, ಕಲ್ಲಂಗಡಿ ಹಣ್ಣನ್ನು ಯಾವಾಗ ಎಷ್ಟು ತಿನ್ನಬೇಕು ಎಂಬ ಅರಿವು ಇರಬೇಕು. ಮುಖ್ಯವಾಗಿ ರಾತ್ರಿ ಮಲಗಲು ಹೋಗುವ ಮುನ್ನ ತಿನ್ನಬಾರದು. ಅಂದರೆ, ರಾತ್ರಿಯೂಟ ಎಂದು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಸಂಜೆ ಏಳರ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಯಾಕೆಂದರೆ, ಕಲ್ಲಂಗಡಿ ಹಣ್ಣು ಸ್ವಲ್ಪ ಅಸಿಡಿಕ್‌ ಅಂದರೆ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ದೇಹ ವಿಶ್ರಾಂತಿಗೆ ಹೊರಡುವ ಸಂದರ್ಭ ಇದರ ಸೇವನೆ ಒಳ್ಳೆಯದಲ್ಲ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನೂ ನಿಧಾನಗೊಳಿಸುವ ಅಪಾಯವಿರುತ್ತದೆ.

Woman Eating Watermelon

ಮಧ್ಯಾಹ್ನ ಸೇವನೆ ಸೂಕ್ತ

ಕಲ್ಲಂಗಡಿ ಹಣ್ಣಿನ ಸೇವನೆಗೆ ಅತ್ಯಂತ ಒಳ್ಳೆಯ ಸಮಯ ಎಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಒಂದು ಗಂಟೆ. ಈ ಸಂದರ್ಭ ದೇಹದ ಜೀರ್ಣಕ್ರಿಯೆಯ ಶಕ್ತಿ ಅತ್ಯಂತ ಹೆಚ್ಚಿರುತ್ತದೆ. ಆಗ, ಕಲ್ಲಂಗಡಿ ಹಣ್ಣಿನ ಪೋಷಕಾಂಶಗಳೂ ಸಹ ದೇಹಕ್ಕೆ ಸಮರ್ಪಕವಾಗಿ ಸಿಗುತ್ತದೆ.

Digestive Issues Coffee Side Effects

ಜೀರ್ಣಕ್ರಿಯೆ ಸ್ನೇಹಿಯಲ್ಲ

ನಾವಂದುಕೊಂಡಂತೆ, ರಾತ್ರಿಯ ಹೊತ್ತು ಕಲ್ಲಂಗಡಿ ಹಣ್ಣು ಜೀರ್ಣಕ್ರಿಯೆಯ ಸ್ನೇಹಿಯಲ್ಲ. ಹಗಲಿನಲ್ಲಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡಿದರೂ ರಾತ್ರಿಯಾದ ಮೇಲೆ, ದೇಹ ವಿಶ್ರಾಂತಿಯಲ್ಲಿರುವಾಗ ಇದರ ವರಸೆ ಬದಲಾಗುತ್ತದೆ. ಹಾಗಾಗಿ, ರಾತ್ರಿ ಇದನ್ನು ಸೇವಿಸಿದರೆ, ಮಾರನೇ ದಿನ ಹೊಟ್ಟೆ ಕೆಡುವುದು, ಚೆನ್ನಾಗಿ ಕರಗಿದ ಅನುಭವ ಆಗದೆ ಇರುವುದು, ಹೊಟ್ಟೆ ಸಂಬಂಧೀ ಕಿರಿಕಿರಿಗಳು ಉಂಟಾಗುವ ಸಂಭವ ಇವೆ.

Belly Fat Reduction

ತೂಕ ಏರುವ ಆತಂಕ

ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ರಾತ್ರಿ ಸೇವಿಸಿದರೆ, ತೂಕ ಹೆಚ್ಚಾಗುವ ಸಂಭವವೂ ಇದೆ.

Sleeping tips

ರಾತ್ರಿ ನಿದ್ರೆಗೆ ಭಂಗ

ಕೇವಲ ಇವಿಷ್ಟೇ ಅಲ್ಲ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿರುವುದರಿಂದ ಆಗಾಗ ಮೂತ್ರ ಬರುವ ಸಂಭವ ಹೆಚ್ಚು. ಹೀಗಾಗಿ, ರಾತ್ರಿಯ ನಿದ್ದೆಗೆ ಭಂಗ ಉಂಟಾಗಲೂಬಹುದು.

Home Remedies For Cough And Cold

ನೆಗಡಿಯ ಆತಂಕ

ಶೀತ ಪ್ರಕೃತಿಯ ದೇಹ ಇರುವ ಮಂದಿಗೆ ರಾತ್ರಿ ಕಲ್ಲಂಗಡಿ ಸೇವನೆಯಿಂದ ತಲೆನೋವು, ನೆಗಡಿ ಬರುವ ಸಂಭವವೂ ಇದೆ. ಮಾರನೇ ದಿನ ತಲೆ ಭಾರವಾದ ಸ್ಥಿತಿ, ತಲೆನೋವಿನ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿ: Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ

ಕಲ್ಲಂಗಡಿ ಹಣ್ಣನ್ನು ಅಂಗಡಿಯಿಂದ ತಂದ ತಕ್ಷಣ ತಾಜಾ ಆಗಿರುವಾಗಲೇ ಕತ್ತರಿಸಿ ತಿನ್ನುವುದು ಒಳ್ಳೆಯದು. ಅದನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ. ತಾಜಾ ತಿನ್ನುವುದರಿಂದ ಆರೋಗ್ಯದ ಲಾಭಗಳು ಹೆಚ್ಚು.

Continue Reading

ಫ್ಯಾಷನ್

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಧರಿಸುವುದು ಇಷ್ಟವಾದರೂ ಹೆಚ್ಚಾಗಿ ನಾವು ಇದರಲ್ಲಿ ಕಂಫರ್ಟ್ ಆಗಿರೋದು ಸಾಧ್ಯವಿಲ್ಲ. ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು ಮಾತ್ರವಲ್ಲ ನೀವು ಹೆಚ್ಚು ಕಂಫರ್ಟ್ ಆಗಿ ಇರಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

VISTARANEWS.COM


on

By

Off Shoulder Tops Fashion
Koo

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Continue Reading
Advertisement
New Rules
ವಾಣಿಜ್ಯ7 mins ago

New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

new criminal law
ಕ್ರೈಂ26 mins ago

New Criminal Law: ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ ಹಾಸನದಲ್ಲಿ ದಾಖಲು, ಯಾವ ಕೇಸ್?‌

tumkur News Assault Case
ತುಮಕೂರು43 mins ago

Tumkur News : ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆದು ಮನಬಂದಂತೆ ಥಳಿಸಿದ ಉಪಾಧ್ಯಕ್ಷ!

Amith Shah
ದೇಶ44 mins ago

Amit Shah: ಹೊಸ ಕ್ರಿಮಿನಲ್ ಕಾನೂನಿನಲ್ಲಿ ಶಿಕ್ಷೆಯ ಬದಲು ನ್ಯಾಯಕ್ಕೆ ಪ್ರಾಧಾನ್ಯತೆ; ಅಮಿತ್ ಶಾ

Parliament Sessions
ದೇಶ45 mins ago

Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್‌-ಮೋದಿ ಜಟಾಪಟಿ

Meghana Raj didn't want to enter the film Father Sundarraj
ಸ್ಯಾಂಡಲ್ ವುಡ್51 mins ago

Meghana Raj: ಮೇಘನಾ ರಾಜ್‌  ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ಇಷ್ಟವಿರಲಿಲ್ಲ; ಬೇಸರ ಹೊರಹಾಕಿದ್ದ ಅಪ್ಪ ಸುಂದರರಾಜ್​ 

Assault Case in Hubballi
ಹುಬ್ಬಳ್ಳಿ1 hour ago

Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

DK ShivaKumar
ಪ್ರಮುಖ ಸುದ್ದಿ1 hour ago

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

M.R.Jayaram
ಪ್ರಮುಖ ಸುದ್ದಿ1 hour ago

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

Actor Darshan
ಕರ್ನಾಟಕ1 hour ago

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ22 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌