Iran Punishment | 2022ರಲ್ಲಿ 500ಕ್ಕೂ ಅಧಿಕ ಮಂದಿಯನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ - Vistara News

ಪ್ರಮುಖ ಸುದ್ದಿ

Iran Punishment | 2022ರಲ್ಲಿ 500ಕ್ಕೂ ಅಧಿಕ ಮಂದಿಯನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ

ಮರಣದಂಡನೆಯನ್ನು ರದ್ದುಗೊಳಿಸಲು ಒತ್ತಾಯ ಕೇಳಿ ಬರುತ್ತಿರುವ ಹೊತ್ತಿನಲ್ಲಿ ಇರಾನ್ ಸರ್ಕಾರವು(Iran Punishment), ಪ್ರಸಕ್ತ ಸಾಲಿನಲ್ಲಿ 500ಕ್ಕೂ ಅಧಿಕ ಮಂದಿಯನ್ನು ಗಲ್ಲಿಗೇರಿಸಿದೆ.

VISTARANEWS.COM


on

Iran Government
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೆಹ್ರಾನ್: ಪ್ರಸಕ್ತ ವರ್ಷದಲ್ಲಿ ಈವರೆಗೆ ಇರಾನ್ ಸರ್ಕಾರವು (Iran Punishment) 500ಕ್ಕೂ ಅಧಿಕ ಮಂದಿಯನ್ನು ಗಲ್ಲಿಗೇರಿಸಿ ಕೊಂದು ಹಾಕಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಈ ಪ್ರಮಾಣವು ಗರಿಷ್ಠ ಎಂದು ಹೇಳಲಾಗುತ್ತಿದೆ. ನಾರ್ವೇ ಮೂಲದ ಮಾನವಹಕ್ಕುಗಳ ಸಂಘಟನೆಯಾದ ಇರಾನ್ ಮಾನವ ಹಕ್ಕುಗಳ ವರದಿಯ ಪ್ರಕಾರ, 2022ರಲ್ಲಿ ನೇಣಿಗೇರಿಸಲಾದವರ ಸಂಖ್ಯೆ ಈಗ 500 ದಾಟಿದೆ. ಈ ವರದಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್ 4ರಂದು ಇರಾನ್‌ನ ರಜಾಯಿ ಶಹ್ರಾ ಎಂಬಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಈ ಗಲ್ಲಿಗೇರಿದವರ ವಿರುದ್ಧ ಇರಾನ್ ಸರ್ಕಾರವು, ಇಸ್ರೇಲಿ ಬೇಹುಗಾರಿಕೆಯೊಂದಿಗೆ ಕೈಜೋಡಿಸಿದ ಆರೋಪವನ್ನು ಹೊರಿಸಿತ್ತು.

ಅಮಾನವೀಯ ಮತ್ತು ಕ್ರೂರ ಮರಣದಂಡನೆಯನ್ನು ಖಂಡಿಸಿರುವ ಮಾನವ ಹಕ್ಕುಗಳ ಸಂಘನೆಯು, ರಾಜಕೀಯ ಕೈದಿಗಳ ವಿರುದ್ಧ ಭದ್ರತಾ ಸಂಬಂಧಿ ಆರೋಪಗಳನ್ನು ಹೊರಿಸಿ, ಮರಣ ದಂಡನೆ ವಿಧಿಸುವುದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.

ಕಳೆದ ವರ್ಷ ಇರಾನ್ 333 ಜನರನ್ನು ಗಲ್ಲಿಗೇರಿಸಿತ್ತು. ಈ ಪೈಕಿ 55 ಜನರನ್ನು ಅಧಿಕಾರಿಗಳ ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಅಂದರೆ, ಎಲ್ಲ ಗಲ್ಲು ಶಿಕ್ಷೆಗಳನ್ನು ನ್ಯಾಯಾಲಯವೇ ಘೋಷಿಸಬೇಕೆಂದೇನೂ ಇಲ್ಲ.

ಇದನ್ನೂ ಓದಿ | Iran Abolishes Morality Police | ಮಹ್ಸಾ ಅಮಿನಿ ಸಾವಿಗೆ ಸಿಕ್ಕಿತು ನ್ಯಾಯ, ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ರದ್ದು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Flood: ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು 6 ತಂಡ ರಚಿಸಿದ ಬಿಜೆಪಿ; ನಾಳೆಯಿಂದ ಪ್ರವಾಸ

Karnataka Flood: ನೆರೆ ಪೀಡಿತ ಪ್ರದೇಶಗಳಿಗೆ (Karnataka Flood) ಭೇಟಿ ನೀಡುವ ಉದ್ದೇಶದಿಂದ ರಾಜ್ಯ ಬಿಜೆಪಿಯು 6 ತಂಡಗಳನ್ನು ರಚನೆ ಮಾಡಿದೆ. ಜುಲೈ 30 ಮತ್ತು 31ರಂದು ಈ ತಂಡಗಳು ಪ್ರವಾಸ ಕೈಗೊಳ್ಳಲಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

VISTARANEWS.COM


on

Karnataka Flood
Koo

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ನೆರೆ ಪೀಡಿತ ಪ್ರದೇಶಗಳಿಗೆ (Karnataka Flood) ಭೇಟಿ ನೀಡುವ ಉದ್ದೇಶದಿಂದ ರಾಜ್ಯ ಬಿಜೆಪಿಯು 6 ತಂಡಗಳನ್ನು ರಚನೆ ಮಾಡಿದ್ದು,, ಜುಲೈ 30 ಮತ್ತು 31ರಂದು ಈ ತಂಡಗಳು ಪ್ರವಾಹ ಪೀಡಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಶಾಸಕರಾದ ಅರಗ ಜ್ಞಾನೇಂದ್ರ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿನ ತಂಡಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿವೆ.

ಆರ್. ಅಶೋಕ್ ಅವರ ತಂಡವು ಮಂಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ, ಆರಗ ಜ್ಞಾನೇಂದ್ರ ಅವರ ತಂಡವು ಶಿವಮೊಗ್ಗ ಜಿಲ್ಲೆಯಲ್ಲಿ, ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ತಂಡವು ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ, ಛಲವಾದಿ ನಾರಾಯಣಸ್ವಾಮಿ ತಂಡವು ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ, ಅರವಿಂದ ಬೆಲ್ಲದ್ ಅವರ ತಂಡವು ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ, ಬಿ. ಶ್ರೀರಾಮುಲು ಅವರ ತಂಡವು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ಇದನ್ನೂ ಓದಿ | BJP-JDS Padayatra: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್‌

ಪಾದಯಾತ್ರೆಗೂ ಮುನ್ನ ಪ್ರವಾಹ ಸ್ಥಳಗಳಿಗೆ ಭೇಟಿ: ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಹೆಚ್ಚಾಗಿದೆ. ಹೀಗಾಗಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲು ಬಿಜೆಪಿಯಿಂದ 6 ತಂಡ ರಚನೆ ಮಾಡಿದ್ದೇವೆ. ವಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅರವಿಂದ ಬೆಲ್ಲದ್ ಸೇರಿ 6 ನಾಯಕರ ನೇತೃತ್ವದಲ್ಲಿ 6 ತಂಡ ರಚನೆಯಾಗಿದೆ. ಮಂಗಳವಾರ, ಬುಧವಾರ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮೈಸೂರು ಚಲೋ ಪಾದಯಾತ್ರೆ ಪೂರ್ವಭಾವಿ ಸಭೆ ಬಳಿಕ ಅವರು ಮಾತನಾಡಿದರು. ಇನ್ನು ಬಿಜೆಪಿ ಪಾದಯಾತ್ರೆ ಆರಂಭಿಸಲು ಸಕಾರಣಗಳು ಇವೆ, ಬಿಜೆಪಿ ಅವಧಿಯಲ್ಲಿ ನಮ್ಮ ಮೇಲೆ ಸಾಕಷ್ಟು ಅಪಪ್ರಚಾರ ಮಾಡಲು ಕಾಂಗ್ರೆಸ್ ಯಶಸ್ವಿಯಾಯಿತು. ಶೇ.40 ವಿಚಾರದಲ್ಲಿ ಯಶಸ್ವಿಯಾಗಿ ಅಪಪ್ರಚಾರ ಮಾಡಿ, ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ, ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿಕೊಡಿ ಅಂತ ಸಿಎಂ ಪತ್ರ ತೆಗೆದುಕೊಂಡು ಹೋದರೆ ಏ ಏನ್ರೀ ಅಭಿವೃದ್ಧಿ ಕೆಲಸ, ಗ್ಯಾರಂಟಿ ಕೊಡುತ್ತಿಲ್ಲವೇನ್ರೀ, ಅದೇ ಅಭಿವೃದ್ಧಿ ಕೆಲಸ ಎಂದು ಸಿಎಂ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆಗೆ ಮೂರು ದಿನಗಳ ಮುಂಚೆ ಗೃಹ ಲಕ್ಷ್ಮೀ ಯೋಜನೆ ಹಣ ಖಾತೆಗೆ ಹೋಗಿದೆ, ಬಳಿಕ ಸ್ಥಗಿತ ಆಗಿದೆ. ಚುನಾವಣೆ ಹತ್ತಿರ ಬಂದಾಗ ಖಾತೆಗೆ ಜಮಾ‌ ಆಗುತ್ತದೆ, ಚುನಾವಣೆ ಮುಗಿದ ಬಳಿಕ ಬಂದ್ ಆಗುತ್ತದೆ, ಇದು ಕಾಂಗ್ರೆಸ್ ಗ್ಯಾರಂಟಿ. ಇನ್ನೆರಡು ತಿಂಗಳು ಹೋದರೆ ಕೆಎಸ್ಆರ್‌ಟಿಸಿಗೆ ಬೀಗ ಹಾಕುತ್ತಾರೆ ಅಷ್ಟೇ. ವಾಲ್ಮೀಕಿ ನಿಗಮ ಅಧೀಕ್ಷಕ ಚಂದ್ರಶೇಖರ ಡೆತ್ ‌ನೋಟ್ ನೋಡಿದ ಮೇಲೆ ಕೂಡ ವಾಲ್ಮೀಕಿ ನಿಗಮದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ಹೇಳುತ್ತಾರೆ. ಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಡವರಿಗೆ ತಲುಪಬೇಕಿದ್ದ ಮೂರರಿಂದ ನಾಲ್ಕು ಸಾವಿರ ಕೋಟಿ ಬೆಲೆ ಬಾಳುವ ಸೈಟುಗಳು ಉಳ್ಳವರ ಪಾಲಾಗಿವೆ ಎಂದು ಆರೋಪಿಸಿದರು.

ನಿವೇಶನ ಹಗರಣ ನಡೆದಿದೆ, ಯಾವುದೇ ಕಾರಣಕ್ಕೂ ನಿವೇಶನ ಹಂಚಿಕೆ ಆಗಬಾರದು ಅಂತ ಮುಡಾ ಅಧ್ಯಕ್ಷ ಮರಿಗೌಡ ಅವರೇ ಕಮಿಷನರ್‌ಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ತನಿಖೆ ಸರಿ ಇದೆ ಎಂದು ಒಪ್ಪಿಕೊಳ್ಳುತ್ತಾರೆ. ಬಳಿಕ ಮುಡಾ ಸೈಟ್ ಹಂಚಿಕೆ ನಿಲ್ಲಿಸಬೇಕು ಅಂತ ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದೇಶದ ಬಳಿಕವೂ ಯತೇಚ್ಛವಾಗಿ ಸೈಟ್ ಹಂಚಿಕೆ ಮಾಡುತ್ತಾರೆ. ತನಿಖಾ ವರದಿ ಕೂಡ ಇದೆ. ಇದಾದ ಮೇಲೂ ಮುಡಾ ಕಮಿಷನರ್ ಸೈಟ್ ಹಂಚಿಕೆ ಮಾಡುತ್ತಾರೆ. ಅವರ ಹಿಂದಿರೋ ಶಕ್ತಿ ಯಾವುದು ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮ ಹಗರಣ ಹಾಗೂ ಮುಡಾ ಹಗರಣದಿಂದ ಪರಿಶಿಷ್ಟರಿಗೆ, ಬಡವರಿಗೆ ಅನ್ಯಾಯ ಆಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕಿದೆ. ಬಿಜೆಪಿ ಹೋರಾಟದಿಂದ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಸದನದಲ್ಲಿ ವಾಲ್ಮೀಕಿ ಹಗರಣ ಚರ್ಚೆ ಮಾಡಿದ್ದರು. ಆದರೆ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲ. ಇವರ ಹಣೆಬರಹ ಬಯಲಿಗೆ ಬರಲಿದೆ ಅಂತ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ಬಂಡವಾಳ‌ ಹೊರ ಬರಲಿದೆ ಅಂತ ಸದನದಲ್ಲಿ ಚರ್ಚೆಗೆ ಅವಕಾಶವೇ ನೀಡಲಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ | KRS Dam: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ; ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ

ಆಗಸ್ಟ್ 3ರಿಂದ ಮೈಸೂರು ಚಲೋ ಪಾದಯಾತ್ರೆ

ಕಾಂಗ್ರೆಸ್ ಅವರ ಗೊಡ್ಡು ಬೆದರಿಕೆಗೆ ನಮ್ಮ‌ ಕಾರ್ಯಕರ್ತರು ಹೆದರಲ್ಲ. ನಿಮ್ಮ ವಿರುದ್ಧ ಹೋರಾಟ ಮಾಡದಿದ್ದರೆ ಭಗವಂತ ಕೂಡ ಮೆಚ್ಚಲ್ಲ. ನಿಮ್ಮ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ನಮ್ಮ ಪಕ್ಷದ ಹಾಗೂ ಜೆಡಿಎಸ್‌ ಪಕ್ಷದ ಎಲ್ಲಾ ಹಿರಿಯರು ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡಿದ್ದೇವೆ. ಆಗಸ್ಟ್ 3ರಿಂದ ಪಾದಯಾತ್ರೆ ಆರಂಭವಾಗಿ, ಆಗಸ್ಟ್ 10ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಡವರ ಪರವಾಗಿ ಈ ಹೋರಾಟ ನಡೆಯಲಿದೆ.

Continue Reading

Latest

Viral News: ʼಎಣ್ಣೆ ಹೊಡೆಯಿರಿ, ಇಂಗ್ಲಿಷ್‌ ಕಲಿಯಿರಿʼ ಎಂದು ಬೋರ್ಡ್‌ ಹಾಕಿದ್ದ ಮದ್ಯದಂಗಡಿ ಮಾಲೀಕನಿಗೆ ದಂಡ!

Viral News: ಮದ್ಯದ ಅಂಗಡಿಯ ಮಾಲೀಕನೊಬ್ಬ ಗ್ರಾಹಕರನ್ನು ಆಕರ್ಷಿಸಲು ಜಾಹೀರಾತನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದೀಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟವನ್ನುಂಟುಮಾಡಿದೆ. ಮದ್ಯದಂಗಡಿಯ ಮಾಲೀಕ ಇಂಗ್ಲಿಷ್ ಮಾತನಾಡಲು ಕಲಿಯಿರಿ ಎಂಬ ಸಂದೇಶವನ್ನು ಬರೆದಿರುವ ಬ್ಯಾನರ್ ಹಾಕಿ ಆ ಸಂದೇಶದ ಕೆಳಗೆ ಬಾಣವೊಂದನ್ನು ಬಿಡಿಸಿದ್ದು, ಅದು ಮದ್ಯದಂಗಡಿಯನ್ನು ತೋರಿಸುತ್ತಿತ್ತು. ಈ ಬ್ಯಾನರ್‌ನ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral News
Koo


ಕುಡಿದ ಮತ್ತಿನಲ್ಲಿ ಜನರು ಏನೇನೋ ಮಾತನಾಡುತ್ತಾರೆ. ಅವರು ಏನು ಹೇಳುತ್ತಿದ್ದಾರೆ ಎಂದು ಯಾರಿಗೂ ಅರ್ಥವಾಗುವುದಿಲ್ಲ! ಕುಡುಕರು ಮಾತನಾಡುವ ಶೈಲಿ ಯಾವ ರೀತಿ ಇರುತ್ತದೆ ಎಂದರೆ ಕೆಲವು ಜನರಿಗೆ ಅರ್ಥವಾಗದೆ ಇರುವ ಇಂಗ್ಲೀಷ್ ಭಾಷೆ ಮಾತನಾಡಿದ ಹಾಗೆಯೇ ಅನಿಸುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಮದ್ಯದ ಅಂಗಡಿಯೊಂದು ಗ್ರಾಹಕರನ್ನು ಆಕರ್ಷಿಸಲು ಜಾಹೀರಾತನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿ ಇದೀಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟವನ್ನುಂಟುಮಾಡಿದೆ.

ಕುಡಿದ ಮತ್ತಿನಲ್ಲಿ ಜನರು ತೊದಲು ಮಾತನಾಡುವುದನ್ನೇ ಇಂಗ್ಲಿಷ್‍ನಲ್ಲಿ ಮಾತನಾಡುವ ಶೈಲಿಯಂದು ಹೇಳಿ ಜಾಹೀರಾತನ್ನು ಹಾಕಿದ್ದಕ್ಕಾಗಿ ಮಧ್ಯಪ್ರದೇಶದ ಮದ್ಯದಂಗಡಿ ಮಾಲೀಕರಿಗೆ 10,000 ರೂ.ಗಳ ದಂಡ ವಿಧಿಸಲಾಗಿದೆ. ಬುರ್ಹಾನ್ಪುರ ಜಿಲ್ಲೆಯ ನಚನ್‍ಖೇಡಾದಲ್ಲಿರುವ ಮದ್ಯದಂಗಡಿಯ ಬಳಿ ಮಾಲೀಕ ” ಇಂಗ್ಲಿಷ್ ಬೋಲ್ನಾ ಸೀಖೇʼʼ (ಇಂಗ್ಲಿಷ್ ಮಾತನಾಡಲು ಕಲಿಯಿರಿ) ಎಂಬ ಸಂದೇಶವನ್ನು ಬರೆದಿರುವ ಬ್ಯಾನರ್ ಹಾಕಿದ್ದ. ಈ ಸಂದೇಶದ ಕೆಳಗೆ ಬಾಣವೊಂದನ್ನು ಬಿಡಿಸಿದ್ದು, ಅದು ಮದ್ಯದಂಗಡಿಯನ್ನು ತೋರಿಸುತ್ತಿತ್ತು. ಈ ಬ್ಯಾನರ್ ನ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬುರ್ಹಾಂಪುರ ಜಿಲ್ಲಾಧಿಕಾರಿ ಶನಿವಾರ ಮದ್ಯದಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಅಬಕಾರಿ ಇಲಾಖೆ ಮದ್ಯದಂಗಡಿ ಮಾಲೀಕನಿಗೆ ನೋಟಿಸ್ ನೀಡಿದೆ.

ಇದಕ್ಕೆ ಉತ್ತರಿಸಿದ ಅಂಗಡಿ ಮಾಲೀಕ, ತನ್ನ ಅಂಗಡಿಯಿಂದ 40-5೦ ಅಡಿ ದೂರದಲ್ಲಿರುವ ಇನ್ನೊಬ್ಬ ವ್ಯಕ್ತಿಯ ಖಾಸಗಿ ಜಮೀನಿನಲ್ಲಿ ಬ್ಯಾನರ್ ಹಾಕಲಾಗಿದೆ. ಹಾಗಾಗಿ ಇದು ಬೇರೆ ಯಾರೋ ಪಿತೂರಿ ಮಾಡಿ ಹೀಗೆ ಮಾಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾನೆ. ಆದರೆ ಅಧಿಕಾರಿಗಳು ಆತ ಮದ್ಯದ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 10,000 ರೂ.ಗಳ ದಂಡ ವಿಧಿಸಿದರು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

ಈ ಬ್ಯಾನರ್ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯುವಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ, ಅವರು “ಇಂಗ್ಲಿಷ್ ಕಲಿಯಿರಿ” ಎಂಬ ಸಂದೇಶದಿಂದ ಪ್ರಭಾವಿತರಾಗಬಹುದು ಮತ್ತು ಮದ್ಯದಂಗಡಿಗೆ ಪ್ರವೇಶಿಸಿ ಮದ್ಯಪಾನ ಮಾಡಬಹುದು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇದು ಸ್ಪೋಕನ್ ಇಂಗ್ಲಿಷ್ ಕೋಚಿಂಗ್ ಸೆಂಟರ್‌ನ ಜಾಹೀರಾತಿನಂತೆ ಕಾಣುವುದರಿಂದ ಇದು ಜನರನ್ನು ದಾರಿತಪ್ಪಿಸುವ ಸಂಚು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಪೋಟೊ ನೆಟ್ಟಿಗರಲ್ಲಿ ನಗುವನ್ನುಂಟುಮಾಡಿದೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Paris Olympics 2024: ಮತ್ತೊಂದು ಕಂಚಿನ ಪದಕದ ಸನಿಹ ಮನು ಭಾಕರ್, ನಾಳೆ ಇತಿಹಾಸ ಸೃಷ್ಟಿ?

Paris Olympics 2024: ಮನು ಭಾಕರ್‌ ಹಾಗೂ ಸರಬ್ಜೋತ್‌ ಸಿಂಗ್‌ ಅವರು 20 ಖಚಿತ ಶಾಟ್‌ಗಳ ಮೂಲಕ 580 ಪಾಯಿಂಟ್‌ಗಳನ್ನು ಗಳಿಸಿ 10 ಎಂ ಏರ್‌ ಪಿಸ್ತೂಲ್‌ ಮಿಕ್ಸ್ಡ್‌ ಟೀಮ್‌ ಇವೆಂಟ್‌ನ ಕಂಚಿನದ ಪದಕದ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಈ ಜೋಡಿ ಗೆಲುವು ಸಾಧಿಸಿದರೆ ಭಾರತಕ್ಕೆ ಕಂಚಿನ ಪದಕ ಸಿಗಲಿದೆ.

VISTARANEWS.COM


on

Paris Olympics 2024
Koo

ಪ್ಯಾರಿಸ್:‌ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್​ನಲ್ಲಿ 22 ವರ್ಷದ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಮನು ಭಾಕರ್‌ ಅವರು ಮತ್ತೊಂದು ಇತಿಹಾಸ ಸೃಷ್ಟಿಸುವ ಅವಕಾಶ ಪಡೆದಿದ್ದಾರೆ. ಹೌದು, 10 ಎಂ ಏರ್‌ ಪಿಸ್ತೂಲ್‌ ಮಿಕ್ಸ್ಡ್‌ ಟೀಮ್‌ ಇವೆಂಟ್‌ನಲ್ಲಿ ಭಾರತದ ಮನು ಭಾಕರ್‌ ಹಾಗೂ ಸರಬ್ಜೋತ್‌ ಸಿಂಗ್‌ ಅವರು ಕಂಚಿನ ಪದಕದ ಸುತ್ತಿಗೆ ತೆರಳಿದ್ದು, ಮತ್ತೊಂದು ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.

ಮನು ಭಾಕರ್‌ ಹಾಗೂ ಸರಬ್ಜೋತ್‌ ಸಿಂಗ್‌ ಅವರು 20 ಖಚಿತ ಶಾಟ್‌ಗಳ ಮೂಲಕ 580 ಪಾಯಿಂಟ್‌ಗಳನ್ನು ಗಳಿಸಿ 10 ಎಂ ಏರ್‌ ಪಿಸ್ತೂಲ್‌ ಮಿಕ್ಸ್ಡ್‌ ಟೀಮ್‌ ಇವೆಂಟ್‌ನ ಕಂಚಿನದ ಪದಕದ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮಂಗಳವಾರ ಅವರು ಕೊರಿಯಾದ ಕ್ಸುಯೆ ಲಿ ಹಾಗೂ ವೋನ್ಹೋ ಲೀ ಅವರ ಜತೆ ಸೆಣಸಾಟ ನಡೆಸಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮನು ಭಾಕರ್‌ ಹಾಗೂ ಸರಬ್ಜೋತ್‌ ಸಿಂಗ್‌ ಜೋಡಿಯು ಭಾರತಕ್ಕೆ ಮತ್ತೊಂದು ಪದಕ ತಂದು ಕೊಡಲಿದ್ದಾರೆ. ಹಾಗಾಗಿ, ಎಲ್ಲರ ಗಮನವೀಗ ಮಂಗಳವಾರದ ಪಂದ್ಯದ ಮೇಲಿದೆ.

ಒಲಿಂಪಿಕ್ಸ್‌ನಲ್ಲಿ ಇಂದು ಭಾರತೀಯರು

  • ಮಧ್ಯಾಹ್ನ 3.30: ಶೂಟಿಂಗ್‌- 10 ಎಂ ಏರ್‌ ರೈಫಲ್‌ ಮೆನ್ಸ್‌ ಫೈನಲ್-‌ ಅರ್ಜುನ್‌ ಬಬುತಾ
  • ಸಂಜೆ 4.15- ಹಾಕಿ- ಮೆನ್ಸ್‌ ಪೂಲ್‌ ಬಿ- ಇಂಡಿಯಾ vs ಅರ್ಜೆಂಟೀನಾ
  • 5.30- ಬ್ಯಾಡ್ಮಿಂಟನ್-‌ ಮೆನ್ಸ್‌ ಸಿಂಗಲ್ಸ್‌ ಗ್ರೂಪ್‌ ಸ್ಟೇಜ್-‌ ಲಕ್ಷ್ಯಾ ಸೇನ್‌ vs ಜೂಲಿಯನ್‌ ಕರಾಗಿ (ಜರ್ಮನಿ)
  • 6.31- ಅರ್ಚರಿ- ಮೆನ್ಸ್‌ ಟೀಮ್‌ ಕ್ವಾರ್ಟರ್‌ ಫೈನಲ್‌ (ಧೀರಜ್‌ ಬೊಮ್ಮದೇವರ/ಪ್ರವೀಣ್‌ ಜಾಧವ್/ತರುಣ್‌ದೀಪ್‌ ರಾಯ್)
  • 8.18- ಅರ್ಚರಿ- ಮೆನ್ಸ್‌ ಟೀಮ್‌ ಬ್ರಾಂಜ್‌ ಮೆಡಲ್‌ ಮ್ಯಾಚನ್‌ (ಧಿರಜ್‌ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣ್‌ದೀಪ್‌ ರಾಯ್
  • 8.41- ಅರ್ಚರಿ೦ ಮೆನ್ಸ್‌ ಟೀಮ್‌ ಗೋಲ್ಡ್‌ ಮೆಡಲ್‌ ಮ್ಯಾಚ್‌ (ಧೀರಜ್‌ ಬೊಮ್ಮದೇವರ/ಪ್ರವೀಣ್‌ ಜಾಧವ್/ತರುಣ್‌ದೀಪ್‌ ರಾಯ್)‌
  • 11.30- ಟೇಬಲ್‌ ಟೆನಿಸ್-‌ ವುಮೆನ್ಸ್‌ ಸಿಂಗಲ್ಸ್‌ ರೌಂಡ್‌ ಆಫ್‌ 32- ಶ್ರೀಜಾ ಅಕುಲಾ vs ಜಿಯಾನ್‌ ಜೆಂಗ್‌ (ಸಿಂಗಾಪುರ)

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Continue Reading

Latest

Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Business Ideas ಹಿಂದೆಲ್ಲ ಮಣ್ಣಿನ ಪಾತ್ರೆಗಳು ಮನೆ ತುಂಬಾ ಇರುತ್ತಿದ್ದವು. ಆದರೆ ಈಗ ಆ ಜಾಗವನ್ನು ಪ್ಲಾಸ್ಟಿಕ್, ಅಲ್ಯುಮಿನಿಯಂ ಆವರಿಸಿಕೊಂಡಿವೆ.ಆದರೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅರಿವು ಇತ್ತೀಚೆಗೆ ಆಗುತ್ತಿದೆ. ಮರಳಿ ಮಣ್ಣಿಗೆ ಅನ್ನುವಂತೆ ಈಗ ನಿಧಾನಕ್ಕೆ ಕೆಲವರು ಮಣ್ಣಿನ ಪಾತ್ರೆಗಳತ್ತ ಒಲವು ತೋರಿಸುತ್ತಿದ್ದಾರೆ. ರಾಜಸ್ಥಾನದ ಕುಟುಂಬವೊಂದು ಮಣ್ಣಿನ ಮಡಿಕೆ ತಯಾರಿಸುವ ಕಂಪನಿಯೊಂದನ್ನು ಶುರು ಮಾಡಿದ್ದು, ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ! ಈ ಕುರಿತ ವರದಿ ಇಲ್ಲಿದೆ.

VISTARANEWS.COM


on

Business Ideas
Koo


ಮಣ್ಣಿನ ಮಡಿಕೆ(Business Ideas)ಗಳನ್ನು ಬಹಳ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇಂದಿನ ಕಾಲದಲ್ಲಿ ಮಣ್ಣಿನ ಮಡಿಕೆಗಳ ಬದಲು ಸ್ಟೀಲ್, ಅಲ್ಯೂಮಿನಿಯಂ, ಕಬ್ಬಿಣ, ನಾನ್‌ಸ್ಟಿಕ್ ಮುಂತಾದ ಪಾತ್ರೆಗಳನ್ನು ಬಳಸುತ್ತಾರೆ. ಇದರಿಂದ ಅನೇಕ ಕುಂಬಾರರು ಮತ್ತು ಕುಶಲಕರ್ಮಿಗಳಿಗೆ ಜೀವನ ಸಾಗಿಸಲು ಬಹಳ ಕಷ್ಟಕರವಾಗಿದೆ. ಆದರೆ ರಾಜಸ್ಥಾನದ ಹೃದಯಭಾಗದಲ್ಲಿರುವ ಕುಟುಂಬವೊಂದು ಮಣ್ಣಿನ ಮಡಿಕೆ ತಯಾರಿಸುವ ಕಂಪನಿಯೊಂದನ್ನು ಶುರು ಮಾಡಿದ್ದು, ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದ್ದಾರಂತೆ!

Clay Utensils
Clay Utensils

ಈ ಕುಟುಂಬದವರು ಮಣ್ಣಿನ ಪಾತ್ರೆಗಳು ಮತ್ತು ಕಿಚನ್‍ವೇರ್‌ಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಮಧ್ಯವರ್ತಿಗಳ ಸಮಸ್ಯೆಯನ್ನು ನಿವಾರಿಸಲು ಅವರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರೊಂದಿಗೆ ತಲುಪಿಸುವ ಮೂಲಕ ಕುಂಬಾರರು ಮತ್ತು ಕುಶಲಕರ್ಮಿಗಳ ಜೀವನೋಪಾಯವನ್ನು ಪುನರುಜ್ಜೀವನಗೊಳಿಸುವುದು ಈ ಕುಟುಂಬದ ಉದ್ದೇಶವಾಗಿದೆ. ನೂರಕ್ಕೂ ಹೆಚ್ಚು ಕುಶಲಕರ್ಮಿಗಳೊಂದಿಗೆ ಪಾಲುದಾರರಾಗುವ ಮೂಲಕ, ಈ ಕುಟುಂಬದವರ ಕಂಪನಿಯು ವರ್ಷಪೂರ್ತಿ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಇತ್ತೀಚೆಗೆ, ಶಾರ್ಕ್ ಟ್ಯಾಂಕ್ ಸೀಸನ್ 2ರಲ್ಲಿ ಈ ಕಂಪನಿ ಬ್ರಾಂಡ್ ಹೂಡಿಕೆದಾರನ್ನು ಆಕರ್ಷಿಸಿತ್ತು. ಹಾಗಾಗಿ ಅವರು ಈ ಕಂಪೆನಿಯ ಜೊತೆಗೆ 50 ಲಕ್ಷ ರೂ.ಗಳ ಒಪ್ಪಂದವನ್ನು ಪಡೆದುಕೊಂಡಿತು ಎನ್ನಲಾಗಿದೆ.

ಈ ಕಂಪನಿಯ ವ್ಯವಸ್ಥಾಪಕ ದತ್ತಾತ್ರೇಯ ಅವರು ಈ ಬಗ್ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. ಅವರು ತಿಳಿಸಿದಂತೆ ಅವರಿಗೆ ಉದ್ಯಮಿಯಾಗುವ ಯೋಜನೆ ಇರಲಿಲ್ಲ. ಅವರ ಕುಟುಂಬದಲ್ಲಿ ಯಾರೂ ಉದ್ಯಮಿಯಾಗಲು ಬಯಸಿರಲಿಲ್ಲ. ಆದರೆ ಈಗ ಕಾರ್ಪೊರೇಟ್ ಜಗತ್ತಿನಲ್ಲಿ ಸಂತೋಷದಿಂದ ಕೆಲಸ ಮಾಡುತ್ತಿರುವುದಾಗಿ ಅವರು ಸಂತೋಷದಿಂದ ಹೇಳಿಕೊಂಡಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅವರಿಗೆ ಈ ಉದ್ಯಮ ಮಾಡುವ ಯೋಚನೆ ಬಂದಿದೆ. ಹಲವಾರು ಕುಂಬಾರರು ತಮ್ಮ ಕರಕುಶಲ ವಸ್ತುಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡುತ್ತಿರುವುದನ್ನು ದತ್ತಾತ್ರೆಯ ಅವರು ನೋಡಿದ್ದಾರೆ. ಲಾಕ್‍ಡೌನ್‍ನಿಂದಾಗಿ, ಅವರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವುದನ್ನು ಕಂಡು ದತ್ತಾತ್ರೆಯ ಅವರ ಕುಟುಂಬದವರು ಸೇರಿ ಅವರಿಗೆ ಸಹಾಯ ಮಾಡಿದ್ದಾರೆ. ಆ ಮೂಲಕ ಅವರು 2020ರಲ್ಲಿ ಈ ವ್ಯವಹಾರವನ್ನು ನೊಂದಾಯಿಸಿಕೊಂಡು ದೇಶದ ಹಲವಡೆ ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೇ 2023ರಲ್ಲಿ ಅವರು ತಮ್ಮ ಕೆಲಸವನ್ನು ತೊರೆದು ವ್ಯವಹಾರಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳಲು ನಿರ್ಧರಿಸಿದರು. ಆದರೆ ಈ ವ್ಯವಹಾರ ಮಾಡಲು ಹಲವು ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ. ನಂತರ ಉತ್ಪನ್ನಗಳನ್ನು ಪಟ್ಟಿ ಮಾಡುವುದರಿಂದ ಮಾರ್ಕೆಟಿಂಗ್‍ವರೆಗೆ ಎಲ್ಲವನ್ನೂ ಕಲಿಯಲು ಅವರು ಯೂಟ್ಯೂಬ್‌ನಲ್ಲಿ ಮಾಹಿತಿ ಕಲೆ ಹಾಕಿದ್ದಾರೆ.

ನಂತರ ಅವರು ರಾಜಸ್ಥಾನ ಮತ್ತು ಅದರಾಚೆ ಇರುವ 120ಕ್ಕೂ ಹೆಚ್ಚು ಕುಶಲಕರ್ಮಿಗಳೊಂದಿಗೆ ಸಹಯೋಗ ಮಾಡಿಕೊಂಡು ಈ ವ್ಯವಹಾರ ಮುಂದುವರಿಸಿದ್ದಾರೆ, ಮತ್ತು ಈ ಕುಶಲಕರ್ಮಿಗಳು ನುರಿತ ಕುಶಲಕರ್ಮಿಗಳಾಗಿದ್ದು, ಅವರಲ್ಲಿ ಅನೇಕರು ರಾಷ್ಟ್ರಪತಿ ಪ್ರಶಸ್ತಿಗಳು ಅಥವಾ ಯುನೆಸ್ಕೋ ಪ್ರಶಂಸೆಗಳಿಂದ ಗೌರವ ಪಡೆದುಕೊಂಡವರಾಗಿದ್ದರು. ಅಲ್ಲದೇ ಕುಶಲಕರ್ಮಿಗಳಲ್ಲಿ ಮುಖ್ಯವಾಗಿ ಮಹಿಳೆಯರು, ಉತ್ಪಾದನೆಯ ಪ್ರತಿಯೊಂದು ಅಂಶದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಕಂಪನಿಯು ಬಟ್ಟಲುಗಳು, ವೈನ್ ಗ್ಲಾಸ್ , ಕುಕ್ಕರ್‌ಗಳು, ಅಡುಗೆ ಮಡಕೆಗಳು, ಸಾಸ್ ಪ್ಯಾನ್‌ಗಳು, ತವಾ (ಫ್ರೈಯಿಂಗ್ ಪ್ಯಾನ್), ಕಡಾಯಿ (ವೋಕ್), ಮಣ್ಣಿನ ಹಂಡಿ (ಅಡುಗೆ ಬೇಸಿನ್), ಚಹಾ ಲೈಟ್ ಹೋಲ್ಡರ್‌ಗಳು, ವಿಗ್ರಹಗಳು ಮತ್ತು ಹೆಚ್ಚಿನವುಗಳನ್ನು ಜೇಡಿಮಣ್ಣನ್ನು ಬಳಸಿ ತಯಾರಿಸುತ್ತಾರೆ. ಹಾಗೆಯೇ ಕುಶಲಕರ್ಮಿಗಳಿಗೆ ಬೇಡಿಕೆಯ ಆಧಾರದ ಮೇಲೆ ವಸ್ತುಗಳನ್ನು ತಯಾರಿಸಲು ಆದೇಶಿಸಲಾಗುತ್ತದೆ. ನಂತರು ಅವರು ಉತ್ಪನ್ನಗಳನ್ನು ಸಂಗ್ರಹಿಸಿ ಅದರ ಗುಣಮಟ್ಟದ ತಪಾಸಣೆ ಮಾಡಿ ನಂತರ ಅವುಗಳನ್ನು ಪ್ಯಾಕ್ ಮಾಡಿ ಗ್ರಾಹಕರಿಗೆ ಕಳುಹಿಸುತ್ತಾರೆ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

ಅಷ್ಟೇ ಅಲ್ಲದೇ ಕುಂಬಾರರಿಗೆ ಉತ್ತಮ ಆದಾಯ ನೀಡುವುದಲ್ಲದೇ ಯುವ ಪೀಳಿಗೆಯನ್ನು ಕೂಡ ಈ ಕುಟುಂಬ ವ್ಯವಹಾರದಲ್ಲಿ ಸಹಕರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಅವರು ಪ್ರಸ್ತುತ 65ಕ್ಕೂ ಹೆಚ್ಚು ರೀತಿಯ ಅಡುಗೆ ಪಾತ್ರೆಗಳನ್ನು ಮಾರಾಟ ಮಾಡುತ್ತಾರೆ ಎಂದು ದತ್ತಾತ್ರೇಯ ಮಾಹಿತಿ ನೀಡಿದ್ದಾರೆ. ಪ್ರತಿಯೊಂದು ಉತ್ಪನ್ನವು ಸಾಂಪ್ರದಾಯಿಕ ಕಲಾತ್ಮಕತೆ ಮತ್ತು ಆಧುನಿಕ ಸಂವೇದನೆಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ, ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಇದನ್ನು ಮಾರಾಟ ಮಾಡುತ್ತೇವೆ. ಯಾಕೆಂದರೆ ಸಾಂಕ್ರಾಮಿಕ ರೋಗವು ರಾಷ್ಟ್ರವನ್ನು ದಾಳಿ ಮಾಡಿದ ನಂತರ, ಜನರು ಆರೋಗ್ಯಕರ ಜೀವನಶೈಲಿಯತ್ತ ಬದಲಾವಣೆ ಮಾಡಿಕೊಳ್ಳುತ್ತಿರುವುದನ್ನು ಅವರು ಗಮನಿಸಿರುವುದಾಗಿ ತಿಳಿಸಿದ್ದಾರೆ. ಅವರ ಕಂಪೆನಿಯಿಂದ ಈ ವಸ್ತುಗಳನ್ನು ಪ್ರಸ್ತುತ 20 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಮತ್ತು ಭಾರತದ ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Continue Reading
Advertisement
Rajendra Nagara tragedy
ದೇಶ3 mins ago

Rajendra Nagar Tragedy: 3 IAS ಆಕಾಂಕ್ಷಿಗಳ ಸಾವು ಪ್ರಕರಣ; ಸ್ಥಳದಲ್ಲಿ ಬುಲ್ಡೋಜರ್‌ಗಳ ಗರ್ಜನೆ!

Money Guide
ಮನಿ-ಗೈಡ್18 mins ago

Money Guide: ಷೇರು V/S ಚಿನ್ನ: ಹೂಡಿಕೆಗೆ ಯಾವುದು ಬೆಸ್ಟ್‌? ಇಲ್ಲಿದೆ ತಜ್ಞರ ಸಲಹೆ

Actor Darshan Jail And Gave vijayalakshmi Prasada To Husband
ಸ್ಯಾಂಡಲ್ ವುಡ್25 mins ago

Actor Darshan: ದರ್ಶನ್ ಗಾಗಿ ದೇವರ ಪ್ರಸಾದ ತಂದ ವಿಜಯಲಕ್ಷ್ಮಿ

Road Accident
ವಿಜಯಪುರ30 mins ago

Road Accident : ಮಿನಿ ಟ್ರಕ್‌ ಪಲ್ಟಿಯಾಗಿ 30ಕ್ಕೂ ಅಧಿಕ ಮಂದಿಗೆ ಗಾಯ; ಬಸ್‌ನಿಂದ ಬಿದ್ದು ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿ

Karnataka Flood
ಪ್ರಮುಖ ಸುದ್ದಿ39 mins ago

Karnataka Flood: ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು 6 ತಂಡ ರಚಿಸಿದ ಬಿಜೆಪಿ; ನಾಳೆಯಿಂದ ಪ್ರವಾಸ

Viral News
Latest52 mins ago

Viral News: ʼಎಣ್ಣೆ ಹೊಡೆಯಿರಿ, ಇಂಗ್ಲಿಷ್‌ ಕಲಿಯಿರಿʼ ಎಂದು ಬೋರ್ಡ್‌ ಹಾಕಿದ್ದ ಮದ್ಯದಂಗಡಿ ಮಾಲೀಕನಿಗೆ ದಂಡ!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024: ಮತ್ತೊಂದು ಕಂಚಿನ ಪದಕದ ಸನಿಹ ಮನು ಭಾಕರ್, ನಾಳೆ ಇತಿಹಾಸ ಸೃಷ್ಟಿ?

Business Ideas
Latest2 hours ago

Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ
ಕರ್ನಾಟಕ2 hours ago

KRS Dam: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ; ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ

signal free corridor
ಪ್ರಮುಖ ಸುದ್ದಿ2 hours ago

Signal-Free Corridor: ಬೆಂಗಳೂರಿನಲ್ಲಿ 17 ಸಿಗ್ನಲ್ ಮುಕ್ತ ಕಾರಿಡಾರ್‌; ಯಾವ ಮಾರ್ಗಗಳಲ್ಲಿ ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka rain
ಮಳೆ2 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ22 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

ಟ್ರೆಂಡಿಂಗ್‌