Prerane | ಆಂತರಿಕ ಚೈತನ್ಯದೊಂದಿಗೆ ಸಂಬಂಧ ಸ್ಥಾಪಿಸಿ - Vistara News

ಪ್ರಮುಖ ಸುದ್ದಿ

Prerane | ಆಂತರಿಕ ಚೈತನ್ಯದೊಂದಿಗೆ ಸಂಬಂಧ ಸ್ಥಾಪಿಸಿ

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮಚಿಂತಕರು ಇಲ್ಲಿ ಬರೆಯಲಿದ್ದಾರೆ.

VISTARANEWS.COM


on

prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Prerane

ಸ್ವಾಮಿ ಯೋಗೀಶ್ವರನಂದಾ
ಬದುಕಿನ ಒತ್ತಡಗಳು ಎಷ್ಟು ಜೋರಾಗಿರುತ್ತವೆ ಎಂದರೆ ಅವು ಮಾನಸಿಕವಾಗಿ ಮತ್ತು ದೈಹಿಕವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತಿರುತ್ತವೆ. ನಮ್ಮಲ್ಲಿ ಬಹುತೇಕರು ಒಂದಲ್ಲಾ ಒಂದು ರೀತಿಯ ಆತಂಕ, ಭಯ, ಖಿನ್ನತೆಗಳನ್ನು ಅನುಭವಿಸುತ್ತಲೇ ಇರುತ್ತೇವೆ. ಇದು ಒತ್ತಡಕ್ಕೆ ಸಂಬಂಧಿತ ಅನಾರೋಗ್ಯವನ್ನು ಉಂಟುಮಾಡಬಹುದು. ನಾವು ಸಿಟ್ಟಾದಾಗ ಅಥವಾ ಬೇಸರಗೊಂಡಾಗ, ದೇಹವು ‘ಹೋರಾಟ ಅಥವಾ ಹಾರಾಟ’ಕ್ಕೆ ಸಿದ್ಧರಾಗುವಂತೆ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ನಮ್ಮ ಮುಂದಿರುವ ಸಾಮಾಜಿಕ ಮಾನದಂಡಗಳು ನಮ್ಮೆಲ್ಲಾ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಶಾಂತಿಯಿಂದ, ತಾರ್ಕಿ ಕವಾಗಿ ಪರಿಹಾರ ಕಂಡುಕೊಳ್ಳುವಂತೆ ಚೌಕಟ್ಟು ನಿಗದಿಪಡಿಸಿವೆ. ಎಲ್ಲಿಯೂ ಪ್ರತಿರೋಧಕ್ಕೆ ಪ್ರೇರಣೆ ನೀಡಲೇಬೇಕೆಂಬ ಹಟವಿಲ್ಲ. ಹೀಗಾಗಿಯೇ ನಮಗೆ ಹುಟ್ಟಿದಾಗಿನಿಂದ ನಮ್ಮ ಭಾವನೆಗಳನ್ನು ಹುದುಗಿರಿಸಿಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇದರ ಪರಿಣಾಮವೇನು ಗೊತ್ತೇ? ನಮ್ಮ ಹಾರ್ಮೋನ್‌ಗಳು ಅಗೋಚರ ರೀತಿಯಲ್ಲಿ ಕ್ರೋಧಗೊಳ್ಳುತ್ತವೆ. ಅಗ ರಕ್ತದೊತ್ತಡ, ಹೃದಯರೋಗ, ಉಸಿರಾಟದ ತೊಂದರೆ, ಅಜೀರ್ಣ, ತಲೆನೋವು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಇದಕ್ಕೆ ಪರಿಹಾರ ಪ್ರತಿರೋಧ ವ್ಯಕ್ತಪಡಿಸುವುದು ಕಲಿಯುವುದು ಅಥವಾ ಇವುಗಳಿಂದ ತಪ್ಪಿಸಿಕೊಳ್ಳುವುದು ಅಲ್ಲ, ಇಂತಹ ಪ್ರತಿಕ್ರಿಯೆಗಳು ನಮ್ಮ ಸಂಬಂಧಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಒತ್ತಡವನ್ನು ಜಯಿಸಲು ಕೆಲವು ಸ್ವೀಕಾರಾರ್ಹ ವಿಧಾನಗಳಿವೆ. ಅದರಲ್ಲಿ ಧ್ಯಾನವು ಒಂದು.

ಧ್ಯಾನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ. ಅದು ಸುರಕ್ಷಿತ, ಪರಿಣಾಮಕಾರಿ ಮತ್ತು ಖರ್ಚಿಲ್ಲದ ದಾರಿ. ಹೇಗೆ ಧ್ಯಾನ ಮಾಡಬೇಕೆಂದು ಒಮ್ಮೆ ನಾವು ಅರಿತರೆ, ನಮ್ಮೊಳಗೆ ಒಂದು ಸಿದ್ಧ ಪರಿಹಾರ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಹುದಾಗಿದೆ ಮತ್ತು ಅದನ್ನು ಯಾವ ಸಮಯದಲ್ಲಿಯಾದರೂ, ಎಲ್ಲಿಯಾದರೂ ಬಳಸಬಹುದು.
ಧ್ಯಾನವು ದೈಹಿಕ ವಿರಾಮವನ್ನು ನೀಡುತ್ತದೆ. ಒಂದು ಹಿತವಾದ, ಆನಂದಮಯ ಅನುಭವದಲ್ಲಿ ಮುಳುಗುವಂತೆ ಮಾಡುತ್ತದೆ ಮತ್ತು ಆಗ ನಾವು ಪ್ರಾಪಂಚಿಕ ಜಗತ್ತಿನ ಸಮಸ್ಯೆಗಳಿಗೆ ವಿಚಲಿತರಾಗುವುದಿಲ್ಲ. ಧ್ಯಾನದ ಪ್ರಕ್ರಿಯೆಯು ನಮ್ಮ ಲಕ್ಷ್ಯವನ್ನು ಹಣೆಯ ಮಧ್ಯದ ಒಂದು ಬಿಂದುವಿನ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಆಗ ನಾವು ನಮ್ಮ ಬಾಹ್ಯ ದೇಹದ ಮೇಲಿನ ಲಕ್ಷ್ಯವನ್ನು ಕಳೆದುಕೊಳ್ಳುತ್ತೇವೆ. ದೇಹವು ನಿದ್ರೆಯಲ್ಲಿರುವಂತೆ ವಿರಮಿಸುತ್ತದೆ.

ಧ್ಯಾನದಲ್ಲಿ ಮೆದುಳಿನ ತರಂಗಗಳು ಶಾಂತಿ ಮತ್ತು ಸಂಪೂರ್ಣ ವಿರಾಮ ಭಾವದಲ್ಲಿರುವ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆಂತರಿಕ ಬೆಳಕು ಮತ್ತು ಶಬ್ದದ ಕುರಿತ ಅಧ್ಯಯನದ ಮೂಲಕ ನಮಗೆ ಹೆಚ್ಚುವರಿ ಲಾಭ ದೊರೆಯುತ್ತದೆ. ಅದು ನಮ್ಮನ್ನು ಭೌತಿಕ ಜಗತ್ತಿನ ಆಚೆಯಿಂದ ಬರುವ ಚೈತನ್ಯದೊಂದಿಗೆ ಸಂಪರ್ಕದಲ್ಲಿರಿಸುತ್ತದೆ. ಅದು ದಿವ್ಯ ಪ್ರೇಮ, ಪ್ರಜ್ಞೆ ಮತ್ತು ಆನಂದದ ಶಕ್ತಿಶಾಲಿ ಪ್ರವಾಹ.

ಅದು ಅಳತೆಗೆ ಮೀರಿದ ಆಧ್ಯಾತ್ಮಿಕ ಅನುಭವ. ಪ್ರತಿ ವ್ಯಕ್ತಿಯೊಳಗಿನ ಈ ಪ್ರವಾಹವು ವ್ಯಕಿಯ ಒಳಗೇ ಇರುತ್ತದೆ ಮತ್ತು ಮೂರನೇ ಕಣ್ಣ್ಣಿನಿಂದ ಅದನ್ನು ಸಂಪರ್ಕಿಸಬಹುದು. ಅದು ನಮಗೆ ದೈಹಕ ವಿರಾಮಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ನಮ್ಮನ್ನು ಯಾವುದೇ ಬಾಹ್ಯ ಭಾವಪರವಷತೆಗಿಂತ ಮಿಗಿಲಾದ ಅತ್ಯಂತ ಶಕ್ತಿಶಾಲಿ ಮತ್ತು ಶಾಶ್ವತ ಭಾವಪರವಷತೆ ಯಲ್ಲಿ ಮೀಯಿಸುತ್ತದೆ. ನಮ್ಮ ದೇಹ, ಮನಸ್ಸು ಮತ್ತು ಆತ್ಮವು ದೇಹದ ಪ್ರತೀ ಭಾಗದ ಮೂಲಕ ಚಿಮ್ಮುವ ಚಿರಂತನ ಅಲೆಗಳ ಅನುಭವವನ್ನು ಹೊಂದುತ್ತದೆ.

ನಮ್ಮ ಆತ್ಮದಿಂದ ಹುಟ್ಟುವ ಈ ಅನುಭವವು ಬೆಳಕು ಮತ್ತು ಶಬ್ದದ ಪ್ರವಾಹದ ರೂಪದಲ್ಲಿರುವ ಸ್ವಂತ ಸಾರದೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಈ ಪ್ರವಾಹವು ಪ್ರತಿಯೊಂದನ್ನು ಅಸ್ತಿತ್ವಕ್ಕೆ ತರುವ ಬಲವಾಗಿದೆ. ನಮ್ಮ ಆತ್ಮವು ಆ ಸಾರದ ಒಂದು ಹನಿ ಮಾತ್ರ. ಈ ಸೃಷ್ಟಿಶೀಲ ಶಕ್ತಿ, ಅದರಿಂದ ಹರಿಯುವ ಪ್ರವಾಹ ಮತ್ತು ನಮ್ಮ ಆತ್ಮ ಎಲ್ಲವನ್ನೂ ಪ್ರೀತಿ, ಪ್ರಜ್ಞೆ ಮತ್ತು ಆನಂದವೆಂದು ಹೇಳಲಾಗುತ್ತದೆ.

ನಾವು ಕೇವಲ ನಮ್ಮ ದೇಹ ಮತ್ತು ಮನಸ್ಸಿನ ಕುರಿತು ಜಾಗೃತರಾಗಿದ್ದೇವೆ. ನಮಗೆ ನಮ್ಮ ನೈಜ ಲಕ್ಷಣ, ಆತ್ಮದ ಕುರಿತು ಗಮನವಿಲ್ಲ. ಧ್ಯಾನದಲ್ಲಿ, ದೇಹ ಮತ್ತು ಮನಸ್ಸು ನಿಶ್ಯಬ್ದವಾಗಿದ್ದಾಗ, ನಾವು ಆತ್ಮದ ಲಕ್ಷಣಕ್ಕೆ ಜಾಗೃತರಾಗುತ್ತೇವೆ.
ಆತ್ಮವು ಪ್ರವಾಹವನ್ನು ಸಂಧಿಸಿದಾಗ, ಅದು ಕಾಂತೀಯವಾಗುತ್ತದೆ. ನಮ್ಮ ಆತ್ಮವು ಪ್ರವಾಹದ ಆರಂಭಬಿಂದುವಿನಲ್ಲಿ ಏಕಾಗ್ರವಾದಾಗ, ಮೂರನೇ ಕಣ್ಣು ಅದರಲ್ಲಿ ಲೀನವಾಗುತ್ತದೆ. ಆಗ ನಾವು ಆ ಪ್ರವಾಹದೊಂದಿಗೆ ಸಾಗತೊಡಗುತ್ತೇವೆ. ನಮ್ಮ ಆತ್ಮವು ಪ್ರಜ್ಞೆಯಿಂದ ಮೇಲೇರುತ್ತದೆ ಮತ್ತು ಉನ್ನತ ಲೋಕದ ಪ್ರಯಾಣಿಸತೊಡಗುತ್ತದೆ.

ಲೇಖಕರು ಸಂಗಮ ಆಶ್ರಮದ ಮುಖ್ಯಸ್ಥರು,
ಆಧ್ಯಾತ್ಮಿಕ ಪ್ರವಚನಕಾರರು

ಇದನ್ನು ಓದಿ| Prerane | ಭಾರತೀಯ ವಿದ್ಯೆಗಳ ವಿಶೇಷತೆ ಏನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

VISTARANEWS.COM


on

Bomb Threat
Koo

ಹೈದರಾಬಾದ್: ದೇಶದ ಮೂಲೆ ಮೂಲೆಯಿಂದ ದಿನ ಬೆಳಗ್ಗೆದ್ದ ಬಾಂಬ್​ ಬೆದರಿಕೆಯ (Bomb Threat) ಸುದ್ದಿಗಳು ಹರದಿ ಬರುತ್ತಿವೆ. ಅಂತೆಯೇ ಮಂಗಳವಾರ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಅಧಿಕೃತ ನಿವಾಸ ಪ್ರಜಾ ಭವನಕ್ಕೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ‘ಡಯಲ್-100’ ಗೆ ಕರೆ ಮಾಡಿ ಬಾಂಬ್ ಇರಿಸಲಾಗಿದೆ ಮತ್ತು ಅದು ಹೈದರಾಬಾದ್ ನಗರದ ಪ್ರಜಾ ಭವನದಲ್ಲಿ ಸ್ಫೋಟಗೊಳ್ಳುತ್ತದೆ ಎಂದು ಎಚ್ಚರಿಸಿದ್ದ. ಬಳಿಕ ಅದು ಹುಸಿ ಬಾಂಬ್​ ಕರೆ ಎಂದು ಗೊತ್ತಾಗಿದೆ.

ಫೋನ್ ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಆವರಣದಲ್ಲಿ ಶೋಧ ನಡೆಸಿದ್ದಾರೆ.. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಮತ್ತು ಬಾಂಬ್ ಬೆದರಿಕೆ ಕರೆ ಹುಸಿ ಎಂದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಸಿ ಕರೆ ಹೈದರಾಬಾದ್​ನಿಂದ ಮಾಡಲಾಗಿದೆ. ಕರೆ ಮಾಡಿದವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಪ್ರಾಥಮಿಕ ತನಿಖೆಯ ಸಮಯದಲ್ಲಿ, ಕರೆ ಮಾಡಿದವರು ಬೆಳಿಗ್ಗೆಯಿಂದ ಇಂತಹ ಕರೆಗಳನ್ನು ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದಕ್ಕೂ ಮುನ್ನ ತೆಲಂಗಾಣದ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಿ.ಅನಸೂಯಾ ಅವರು ಪ್ರಜಾ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಉಪ ಮುಖ್ಯಮಂತ್ರಿಯ ಕುಟುಂಬ ಸದಸ್ಯರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಚರ್ಚಿಸಿದರು. ಸಂದರ್ಶಕರನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ಪ್ರಜಾ ಭವನದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಜಾ ಭವನದ ಒಂದು ಭಾಗವನ್ನು ವಾರಕ್ಕೆ ಎರಡು ಬಾರಿ ನಡೆಯುವ ಕುಂದುಕೊರತೆ ನಿವಾರಣಾ ಸಭೆಯಾದ ‘ಪ್ರಜಾ ವಾಣಿ’ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Cab Service: ನ್ಯಾಯಾಲಯವು ಆದೇಶದಲ್ಲಿ. ರಿಟ್ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಕ್ಯಾಬ್ ಸಂಸ್ಥೆಗಳು ಈಗ ನಿಗದಿಪಡಿಸಿದ ಶೇಕಡಾ 5 ಸೇವಾ ಶುಲ್ಕ ಸಂಗ್ರಹಿಸಲು ಮಾತ್ರ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಅಪ್ಲಿಕೇಶನ್ ಆಧಾರಿತ ಆಟೋ ಚಾಲಕರ ಸೇವಾ ಶುಲ್ಕವನ್ನು ಕರ್ನಾಟಕ ಸಾರಿಗೆ ಇಲಾಖೆ ನವೆಂಬರ್ 25, 2022 ರಂದು ಶೇಕಡಾ 5 ಕ್ಕೆ (ಮೂಲ ಶುಲ್ಕಕ್ಕೆ ಅನ್ವಯವಾಗುವ ಜಿಎಸ್​ಟಿಯೊಂದಿಗೆ) ಮಿತಗೊಳಿಸಿತ್ತು.

VISTARANEWS.COM


on

Cab service
Koo

ಬೆಂಗಳೂರು: ಆ್ಯಪ್ ಮೂಲಕ ಕಾರ್ಯಾಚರಿಸುವ ಕ್ಯಾಬ್ ಅಗ್ರಿಗೇಟರ್​ಗಳು (Cab Service) ಗ್ರಾಹಕರಿಂದ ಸಂಗ್ರಹಿಸುವ ಸೇವಾ ಶುಲ್ಕ ನಿಗದಿಪಡಿಸುವ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ ಎಂದು ಬಾರ್ ಆ್ಯಂಡ್​ ಬೆಂಚ್ ವರದಿ ಮಾಡಿದೆ. ಕ್ಯಾಬ್​ ಕಂಪನಿಗಳು ಗರಿಷ್ಠ ಶೇಕಡಾ 5ರಷ್ಟು ಸೇವಾ ಶುಲ್ಕ ಮಾತ್ರ ಸಂಗ್ರಹಿಬಹುದು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರಿಂದಾಗಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಲ್ಲಿ ಆ್ಯಪ್ ಆಧಾರಿತ ಕ್ಯಾಬ್​​ಗಳನ್ನು ಬಳಸುವ ಗ್ರಾಹಕರಿಗೆ ಅನುಕೂಲವಾಗಲಿದೆ. ಮಿತಿ ಮೀರಿ ಶುಲ್ಕ ವಿಧಿಸುವ ಕಂಪನಿಗಳ ಯೋಜನೆಗೆ ಕಡಿವಾಣ ಬೀಳಲಿದೆ.

ನ್ಯಾಯಾಲಯವು ಆದೇಶದಲ್ಲಿ. ರಿಟ್ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಕ್ಯಾಬ್ ಸಂಸ್ಥೆಗಳು ಈಗ ನಿಗದಿಪಡಿಸಿದ ಶೇಕಡಾ 5 ಸೇವಾ ಶುಲ್ಕ ಸಂಗ್ರಹಿಸಲು ಮಾತ್ರ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಅಪ್ಲಿಕೇಶನ್ ಆಧಾರಿತ ಆಟೋ ಚಾಲಕರ ಸೇವಾ ಶುಲ್ಕವನ್ನು ಕರ್ನಾಟಕ ಸಾರಿಗೆ ಇಲಾಖೆ ನವೆಂಬರ್ 25, 2022 ರಂದು ಶೇಕಡಾ 5 ಕ್ಕೆ (ಮೂಲ ಶುಲ್ಕಕ್ಕೆ ಅನ್ವಯವಾಗುವ ಜಿಎಸ್​ಟಿಯೊಂದಿಗೆ) ಮಿತಗೊಳಿಸಿತ್ತು. ಆದರೆ ಉಬರ್, ಓಲಾ ಮತ್ತು ರ್ಯಾಪಿಡೊದಂತಹ ರೈಡ್-ಹೆಯ್ಲಿಂಗ್ ಅಪ್ಲಿಕೇಶನ್ ಗಳು ಈ ಕ್ರಮವನ್ನು ಪ್ರಶ್ನಿಸಿದ್ದವು. ಶೇಕಡಾ 20 ರಷ್ಟು ಸಾಮಾನ್ಯ ದರ ವಿಧಿಸಲು ಅನುಮತಿ ನೀಡಬೇಕು ಮತ್ತು ಮೂಲ ದರದ ಜತೆಗೆ ಶೇಕಡಾ 20ರಷ್ಟು ಸರ್ಜ್​ ಪ್ರೈಸ್ ಅಥವಾ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಬೇಕು ಎಂದು ಕೋರಿತ್ತು. ಈ ಎಲ್ಲ ಕಂಪನಿಗಳು ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕಾನೂನುಬಾಹಿರ, ನಿರಂಕುಶ ಮತ್ತು ತರ್ಕರಹಿತ ಎಂದು ವಾದಿಸಿದ್ದವು.

ಇದನ್ನು ಓದಿ : Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

ನೋಟಿಸ್ ಅನ್ನು ನ್ಯಾಯಾಲಯವು ಜನವರಿ 2023 ರಲ್ಲಿ ತಡೆಹಿಡಿದಿತ್ತು. ಶೇಕಡಾ 10 ರ ಅನುಕೂಲಕರ ಶುಲ್ಕದೊಂದಿಗೆ ಅಗ್ರಿಗೇಟರ್​ಗಳು ಅಲ್ಪಾವಧಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿತು. ಸೋಮವಾರ, ನ್ಯಾಯಾಲಯವು ಅಂತಿಮವಾಗಿ ಅರ್ಜಿಗಳನ್ನು ವಜಾಗೊಳಿಸಿತು. ಈ ತೀರ್ಪಿನಿಂದ ಬೆಂಗಳೂರಿನ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Lok Sabha Election : ಏಪ್ರಿಲ್ 19ರಂದು ಚುನಾವಣೆಗಳು ಪ್ರಾರಂಭವಾದಾಗಿನಿಂದ ಪ್ರಮುಖ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 3 ಪ್ರತಿಶತದಷ್ಟು ಪ್ರಗತಿ ಕಂಡಿದೆ. ಕಡಿಮೆ ಮತದಾನ ಹಾಗೂ ಸರ್ಕಾರದ ಅಸ್ಥಿರತೆಯ ಬಗ್ಗೆ ಇದ್ದ ಆರಂಭಿಕ ಕಳವಳಗಳು ನಿಧಾನವಾಗಿದೆ. ಆದರೆ, ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಪ್ರಕಾರ ಮಾರುಕಟ್ಟೆ ಚಂಚಲತೆ ಮುಂದುವರಿದಿದೆ.

VISTARANEWS.COM


on

Lok Sabha Election
Koo

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ಆರು ಹಂತಗಳ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಆನ್​ಲೈನ್​ ಸ್ಟಾಕ್ ಟ್ರೇಡಿಂಗ್ ಮತ್ತು ಹೂಡಿಕೆ ಸಂಸ್ಥೆಯಾಗಿರುವ ಐಐಎಫ್ಎಲ್ ಸೆಕ್ಯುರಿಟೀಸ್ ತನ್ನ ಸಮೀಕ್ಷೆಯನ್ನು ಪ್ರಕಟಿಸಿದೆ. ಅದರ ಪ್ರಕಾರ ಈ ಬಾರಿ ಬಿಜೆಪಿ 320 ಸ್ಥಾನಗಳನ್ನು ಸಲೀಸಾಗಿ ಗೆಲ್ಲಲಿದೆ. ಇದು 2019ರ 303 ಸೀಟ್​ಗಳಿಂತ ಅಧಿಕ. ಆರನೇ ಹಂತದ ಮತದಾನ ಸೇರಿದಂತೆ ಬಿಜೆಪಿಗೆ ಹೆಚ್ಚು ಮತಗಳು ಬೀಳುವ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ 3 ಶೇಕಡಾ ಮತ ಚಲಾವಣೆ ಕುಸಿತ ಕಂಡಿದೆ. (ಹಿಂದಿಯೇತರ ರಾಜ್ಯಗಳಲ್ಲಿ 0.6 ಶೇಕಡಾ ಕುಸಿತ) ಇದು ಬಿಜೆಪಿಗೆ ನಷ್ಟ ಎಂದು ಅಂದಾಜಿಸಲಾಗುತ್ತದೆ. ಇದರ ಹೊರತಾಗಿಯೂ, ಉತ್ತರ ಪ್ರದೇಶ (ಎಸ್ಪಿ-ಬಿಎಸ್ಪಿ ಮೈತ್ರಿಯ ಅನುಪಸ್ಥಿತಿ), ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸಿಗುವ ಸ್ಥಾನಗಳ ಲಾಭಗಳ ಮೂಲಕ ಬಿಜೆಪಿ ಬಹುಮತ ಹೆಚ್ಚಿಸಿಕೊಳ್ಳಲಿದೆ ಎಂದು ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ.

ಒಟ್ಟು ಆರು ಹಂತಗಳ ಮತದಾನ ಮುಕ್ತಾಯವಾಗಿದ್ದು ಶೇಕಡಾ 89ರಷ್ಟು ಮತಗಳು ಚಲಾವಣೆಯಾಗಿದೆ. ಈ 486 ಸ್ಥಾನಗಳ ಪೈಕಿ ಬಿಜೆಪಿ 278 ಸ್ಥಾನಗಳಲ್ಲಿ ಗೆಲುವು ಸಾಧಿಸಿಲಿದೆ. ಜೂನ್ 1 ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆಗೆ ಮುಂಚಿತವಾಗಿ ಮೊದಲ ಎರಡು ಹಂತಗಳಲ್ಲಿ ಮತದಾನದ ಪ್ರಮಾಣ ಕುಸಿತ ಕಂಡಿದೆ. ಆದಾಗ್ಯೂ ಬಿಜೆಪಿ 320ರ ಗಡಿ ಮುಟ್ಟುವುದು ಖಚಿತ ಎಂದು ಅದು ಅಂದಾಜಿಸಿದೆ. ಇದೇ ವೇಳೆ ಕೊನೇ ಹಂತದ ಮತದಾನ 2019 ರ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಬಹುದು ಸಮೀಕ್ಷೆ ಹೇಳಿದೆ.

ಏಪ್ರಿಲ್ 19ರಂದು ಚುನಾವಣೆಗಳು ಪ್ರಾರಂಭವಾದಾಗಿನಿಂದ ಪ್ರಮುಖ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 3 ಪ್ರತಿಶತದಷ್ಟು ಪ್ರಗತಿ ಕಂಡಿದೆ. ಕಡಿಮೆ ಮತದಾನ ಹಾಗೂ ಸರ್ಕಾರದ ಅಸ್ಥಿರತೆಯ ಬಗ್ಗೆ ಇದ್ದ ಆರಂಭಿಕ ಕಳವಳಗಳು ನಿಧಾನವಾಗಿದೆ ಕಡಿಮೆಯಾಗಿದೆ. ಆದರೆ, ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಪ್ರಕಾರ ಮಾರುಕಟ್ಟೆ ಚಂಚಲತೆ ಮುಂದುವರಿದಿದೆ.

ಇದನ್ನೂ ಓದಿ: Lok Sabha Election : ಲವ್​ ಜಿಹಾದ್ ಶುರುವಾಗಿದ್ದೇ ಜಾರ್ಖಂಡ್​ನಿಂದ; ಜೆಎಮ್​ಎಮ್​ ವಿರುದ್ಧ ಮೋದಿ ಗಂಭೀರ ಆರೋಪ

1951-67ನ್ನು ಹೊರತುಪಡಿಸಿ ಭಾರತದಲ್ಲಿ ಸತತವಾಗಿ ನಡೆದ 3 ಲೋಕಸಭಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳಗೊಂಡ ಉದಾಹರಣೆಗಳು ಇಲ್ಲ. ಅಂತೆಯೇ 2014 ಮತ್ತು 2019 ರ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳ ಕಂಡ ನಂತರ 2024 ರ ಚುನಾವಣೆಯಲ್ಲಿ ಯಥಾವತ್​ ಪ್ರಮಾಣ ಸ್ವಲ್ಪ ಕುಸಿತ ಕಂಡಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

ಐಐಎಫ್ಎಲ್ ಸೆಕ್ಯುರಿಟೀಸ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ 2019 ರ ಒಟ್ಟು ಸ್ಥಾನಕ್ಕೆ ಇನ್ನೂ 10 ಸ್ಥಾನಗಳನ್ನು ಸೇರ್ಪಡೆಗೊಳಿಸಲಿದೆ. ಅಂದರೆ ಒಟ್ಟು 80ರಲ್ಲಿ 72 ಬಿಜೆಪಿ ಪಾಲಾಗಲಿದೆ. 2019ರಲ್ಲಿ ಅದು 62 ಆಗಿತ್ತು. ನರೇಂದ್ರ ಮೋದಿ ನೇತೃತ್ವದ ಪಕ್ಷವು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ 2019ಕ್ಕಿಂತ ತಲಾ 5 ಹೆಚ್ಚುವರಿ ಸ್ಥಾನಗಳನ್ನು ಗಳಿಸಲದೆ. ಬಂಗಾಳದಲ್ಲಿ 18ರಿಂದ 23ಕ್ಕೆ ಏರಿಕೆಯಾದರೆ, ಒಡಿಶಾದಲ್ಲಿ 8ರಿಂದ 13ಕ್ಕೆ ಜಿಗಿಯಲಿದೆ. ಅಲ್ಲದೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ತಲಾ 3 ಸ್ಥಾನಗಳನ್ನು ಪಡೆಯಲಿದೆ.

ಬೇಸ್​ ಪಾಯಿಂಟ್​ಗಳ ಕುಸಿತ

6 ಹಂತಗಳ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮತದಾನದ ಪ್ರಮಾಣದಲ್ಲಿ ಸರಾಸರಿ 150 ಬೇಸಿಸ್ ಪಾಯಿಂಟ್​​ಗಳ ಕುಸಿತ ಕಂಡುಬಂದಿದೆ. ಮೊದಲ ಹಂತದಲ್ಲಿ ಮತದಾನದ 400 ಬೇಸಿಸ್ ಪಾಯಿಂಟ್​ಗಳ ಕುಸಿತ ಹೋಲಿಸಿದರೆ ಇದು ಕಡಿಮೆ. ಹಂತ 4 ಮತ್ತು 5ನೇ ಹಂತದಲ್ಲಿ 2019 ಕ್ಕೆ ಹೋಲಿಸಿದರೆ ಅಲ್ಪ ಏರಿಕೆ ಕಂಡಿದ್ದು. 6 ನೇ ಹಂತವು ಅಲ್ಪ ಕುಸಿತ ದಾಖಲಾಗಿದೆ ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

2019 ರ ಚುನಾವಣೆಗೆ ಹೋಲಿಸಿದರೆ 486 ಸ್ಥಾನಗಳಲ್ಲಿ ಒಟ್ಟು 156 ಸ್ಥಾನಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ತಿಳಿಸಿದೆ.

ಅನಿರೀಕ್ಷಿತ ಫಲಿತಾಂಶ ಅಸಾಧ್ಯ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಪ್ರಮಾಣದ ಮತ ಹಂಚಿಕೆ ವ್ಯತ್ಯಾಸ ಆಗಿದೆ. ಹೀಗಾಗಿ 2024 ರ ಚುನಾವಣೆಯ ಫಲಿತಾಂಶ 2004 ರ ಚುನಾವಣೆಗಳಂತೆ ಅಚ್ಚರಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ ಎಂದು ಐಐಎಫ್ಎಲ್ ದೃಢವಾಗಿ ಹೇಳಿದೆ.

ಕರ್ನಾಟಕದಲ್ಲಿ ನಷ್ಟ

“ಮೈತ್ರಿ / ಅಭ್ಯರ್ಥಿ ಆಯ್ಕೆ ಸಮಸ್ಯೆಗಳಿಂದಾಗಿ ರಾಜಸ್ಥಾನ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಗೆ ನಷ್ಟವಾಗಬಹುದು. ಆದರೆ, ಮಹಾರಾಷ್ಟ್ರದಲ್ಲಿ ಎನ್​ಡಿಎ 2 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಅಂದಾಜಿಸಿದೆ. 2019 ರಲ್ಲಿ 224 ಸ್ಥಾನಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವ ಮೂಲಕ ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಳ್ಳುತ್ತದೆ ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

Continue Reading

ಪ್ರಮುಖ ಸುದ್ದಿ

Hike in Seed Price: ನೆರೆಯ ರಾಜ್ಯಗಳಿಗೆ ಹೋಲಿಸಿದ್ರೆ ಬಿತ್ತನೆ ಬೀಜ ದರ ಕರ್ನಾಟಕದಲ್ಲೇ ಕಡಿಮೆ: ಸಿಎಂ

Hike in Seed Price: 2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದ್ದು, ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರಗಳು ಸಹ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ಮಾರಾಟದ ದರ ಏರಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

VISTARANEWS.COM


on

Hike in Seed Price
Koo

ಬೆಂಗಳೂರು: ಬಿತ್ತನೆ ಬೀಜದ ದರ ಶೇ.60ರಷ್ಟು ಹೆಚ್ಚಳವಾದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಮತ್ತು ಜೆಡಿಎಸ್‌ ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳ ದರದ (Hike in Seed Price) ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಬಿತ್ತನೆ ಬೀಜಗಳ ದರ ಕರ್ನಾಟಕದಲ್ಲೇ ಕಡಿಮೆ ಇದೆ. ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಕಾರಣ ದರ ಹೆಚ್ಚಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದ್ದು, ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರಗಳು ಸಹ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ಮಾರಾಟದ ದರ ಏರಿಕೆಯಾಗಿದೆ. ಈ ದರ ಏರಿಕೆ ಮುಂಗಾರು ಬೆಳೆ ಬೆಳೆಯುವ ಎಲ್ಲ ರಾಜ್ಯಗಳಲ್ಲಿಯೂ ಆಗಿದ್ದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೀಜಗಳ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗದಿಪಡಿಸುವ ಸಂದರ್ಭಗಳಲ್ಲಿ ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಠ APMC ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 2022-23ನೇ ಸಾಲಿಗೆ ಹೋಲಿಸಿದಾಗ 2023-24ನೇ ಸಾಲಿನಲ್ಲಿ ವಿವಿಧ ಬೆಳೆಗಳ ಖರೀದಿ ದರಗಳಲ್ಲಿ (Procurement Rates) ಗರಿಷ್ಠ ಶೇ.59.58ರಷ್ಟು ವ್ಯತ್ಯಾಸವಾಗಿರುತ್ತದೆ. ರೈತರು ತಮ್ಮ ಜಮೀನಿನಲ್ಲಿಯೇ ಬೀಜಗಳನ್ನು ಉತ್ಪಾದನೆ ಮಾಡುತ್ತಾರೆ. ಇದನ್ನು ಕರ್ನಾಟಕ ರಾಜ್ಯ ಬೀಜ ನಿಗಮ ನಿ., ರಾಷ್ಟ್ರೀಯ ರಾಜ್ಯ ಬೀಜ ನಿ., ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡು ಸರಬರಾಜು ಮಾಡುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ಈ ಬಾರಿ ಹೆಸರು ಬಿತ್ತನೆ ಬೀಜಗಳ ಎಲ್‌-1 ದರವು ಶೇ.48.5, ಉದ್ದು ದರವು ಶೇ.37.72, ತೊಗರಿ ಸೇರಿ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು ಮತ್ತು ಜೋಳದ ಎಲ್‌-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ. ಬೀಜಗಳ ಖರೀದಿ ದರದಲ್ಲಿನ ಹೆಚ್ಚಳದ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ವರ್ಗಾವಣೆಯಾಗಿರುತ್ತದೆ ಎನ್ನುವುದು ಗಮನಾರ್ಹ ಅಂಶವಾಗಿದೆ.

ಇದಲ್ಲದೆ ಕೆಲ ಬಿತ್ತನೆ ಬೀಜದ ದರದಲ್ಲಿ ಇಳಿಕೆ ಹಾಗೂ ಯಥಾಸ್ಥಿತಿ ಕೂಡ ಕಂಡುಬಂದಿದೆ. 2024ರ ಮುಂಗಾರು ಹಂಗಾಮಿನ ಸೋಯಾ ಅವರೆ ಬಿತ್ತನೆ ಬೀಜದ ದರವು 2023ರ ಮುಂಗಾರು ಹಂಗಾಮಿನ ಎಲ್‌-1 ದರಗಳ ಹೋಲಿಕೆಯಲ್ಲಿ ಶೇ.8ರಷ್ಟು ಕಡಿತಗೊಂಡಿರುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜದ ದರ ಕಳೆದ ಸಾಲಿನಷ್ಟೇ ಇದ್ದು ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಬಿ.ಟಿ. ಹತ್ತಿ ಬಿತ್ತನೆ ಬೀಜಗಳನ್ನು ರಾಜ್ಯ ಸರ್ಕಾರದ ಇಲಾಖಾ ವತಿಯಿಂದ ರಿಯಾಯತಿ ದರದಲ್ಲಿ ವಿತರಣೆ ಮಾಡುತ್ತಿಲ್ಲ. ಬಿ.ಟಿ. ಹತ್ತಿ ಬಿತ್ತನೆ ಬೀಜಗಳ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸುತ್ತದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023ರ ಹೋಲಿಕೆಯಲ್ಲಿ ಈ ಬಾರಿ ಗರಿಷ್ಠ ಶೇ.48.50ರಷ್ಟಿದೆ. ಆದಾಗ್ಯೂ, ನೆರೆಯ ರಾಜ್ಯಗಳಲ್ಲಿನ ಪ್ರಸಕ್ತ ಸಾಲಿನ ಬಿತ್ತನೆ ಬೀಜಗಳ ದರಗಳ ಏರಿಕೆಯ ಹೋಲಿಕೆಯಲ್ಲಿ ರಾಜ್ಯದಲ್ಲಿನ ಬಿತ್ತನೆ ಬೀಜಗಳ ದರದ ಏರಿಕೆಯು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಸೋಯಾ ಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್‌-1 ದರವು 8500 ರೂ. ನಿಗದಿಯಾಗಿದ್ದು ಕರ್ನಾಟಕದಲ್ಲಿ ಇದು 7270 ರೂ. ನಿಗದಿಯಾಗಿದೆ. ಅದೇ ರೀತಿ, ತೊಗರಿ ಬೆಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 25,000 ರೂ. ಇದ್ದು, ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್‌ಗೆ 17,900 ರೂ. ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ 23,500, 14,000 ರೂ. ಇದ್ದು ಕರ್ನಾಟಕದಲ್ಲಿ ಕ್ರಮವಾಗಿ 18,600 ರೂ., 12,500 ರೂ. ನಿಗದಿಪಡಿಸಲಾಗಿದೆ. ಈ ಹೋಲಿಕೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದರಗಳು ಗಣನೀಯವಾಗಿ ಕಡಿಮೆ ಇರುವುದು ಕಂಡುಬರುತ್ತದೆ.

ಇದನ್ನೂ ಓದಿ | Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಆಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ, ಬಿತ್ತನೆ ಬೀಜಗಳ ದರಗಳು ಏರಿಕೆಯಾಗಿರುವ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ಕುರಿತು ಕೃಷಿ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ವಾಸ್ತವ ಸ್ಥಿತಿಯನ್ನು ವಿವರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

Continue Reading
Advertisement
Bomb Threat
ಪ್ರಮುಖ ಸುದ್ದಿ6 mins ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ18 mins ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ21 mins ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ53 mins ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ54 mins ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ58 mins ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ58 mins ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

MLA Belur Gopalakrishna latest statement in Hosnagara
ಶಿವಮೊಗ್ಗ1 hour ago

MLC Election: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಖಚಿತ: ಬೇಳೂರು

Toyota Technical Training Institute students Excellent performance in India Skills Competition 2024
ಕರ್ನಾಟಕ1 hour ago

Toyota: ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024; ಟಿಟಿಟಿಐ ವಿದ್ಯಾರ್ಥಿಗಳ ಉತ್ತಮ ಸಾಧನೆ

World Menstrual Hygiene Day in Hosapete
ಆರೋಗ್ಯ1 hour ago

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು11 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌