Fifa World Cup | ರಾಮೋಸ್​ ಹ್ಯಾಟ್ರಿಕ್ ಗೋಲ್​ ಸಾಹಸ; ಕ್ವಾರ್ಟರ್​ ಫೈನಲ್ ತಲುಪಿದ ಪೋರ್ಚುಗಲ್ - Vistara News

ಕ್ರೀಡೆ

Fifa World Cup | ರಾಮೋಸ್​ ಹ್ಯಾಟ್ರಿಕ್ ಗೋಲ್​ ಸಾಹಸ; ಕ್ವಾರ್ಟರ್​ ಫೈನಲ್ ತಲುಪಿದ ಪೋರ್ಚುಗಲ್

ಸ್ವಿಜರ್​ಲ್ಯಾಂಡ್ ವಿರುದ್ಧ 6-1 ಗೋಲ್​ಗಳ ಅಂತರದಿಂದ ಗೆಲುವು ಸಾಧಿಸಿದ ಪೋರ್ಚುಗಲ್ ತಂಡ ಕತಾರ್​ ಫಿಫಾ ವಿಶ್ವ ಕಪ್​ ಟೂರ್ನಿಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದೆ.

VISTARANEWS.COM


on

PORTUGAL fifa world cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಬದಲಿ ಆಟಗಾರನಾಗಿ ಕಣಕ್ಕಿಳಿದ ಸ್ಟ್ರೈಕರ್​ ಗೊನ್ಕಾಲೊ ರಾಮೋಸ್​ ಬಾರಿಸಿದ ಹ್ಯಾಟ್ರಿಕ್​ ಗೋಲುಗಳ ನೆರವಿನಿಂದ ಪೋರ್ಚುಗಲ್​ ತಂಡ ಸ್ವಿಜರ್​ಲ್ಯಾಂಡ್​ ವಿರುದ್ಧ 6-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಮುಂದಿನ ಕ್ವಾರ್ಟರ್​ ಫೈನಲ್​ ಕದನದಲ್ಲಿ ಸ್ಪೇನ್​ ಗೆ ಆಘಾತವಿಕ್ಕಿದ ಮೊರೊಕ್ಕೋ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಬುಧವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಪೋರ್ಚುಗಲ್​ನ 21 ವರ್ಷ ವಯಸ್ಸಿನ ರಮೋಸ್ ಅತ್ಯದ್ಭುತ ಪ್ರದರ್ಶನದ ತೋರಿದರು. ಈ ಪ್ರದರ್ಶನದ ನೆರವಿನಿಂದ ಸ್ವಿಜರ್​ಲ್ಯಾಂಡ್​ ತಂಡವನ್ನು ಪೋರ್ಚ್‍ಗಲ್ 6-1 ಗೋಲುಗಳಿಂದ ಸದೆಬಡಿಯಿತು. ಜತೆಗೆ 2006ರ ಬಳಿಕ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆ ಮಾಡಿತು.

ತಂಡದ ಸ್ಟಾರ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸ್ಥಾನದಲ್ಲಿ ಆಡಲಿಳಿದ ರಮೋಸ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಈ ಪಂದ್ಯವನ್ನು ಸ್ಮರಣೀಯವಾಗಿಸಿದರು. ಮೊದಲ ವಿಶ್ವಕಪ್ ಆಡುತ್ತಿರುವ ರಮೋಸ್, 17ನೇ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಬಳಿಕ ಪೇಪ್ 33ನೇ ನಿಮಿಷದಲ್ಲಿ ಮತ್ತೊಂದು ಗೋಲ್​ ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. 51ನೇ ನಿಮಿಷದಲ್ಲಿ ತಮ್ಮ 2ನೇ ಗೋಲು ಸಾಧಿಸಿದ ರಮೋಸ್ ಅವರಿಂದ ಸ್ಫೂರ್ತಿ ಪಡೆದ ರಫೀಲ್ ಕ್ಯುರಿರೊ ಮುನ್ನಡೆಯನ್ನು 4-0 ಗೆ ಏರಿಸಿದರು. 58ನೇ ನಿಮಿಷದಲ್ಲಿ ಸ್ವಿಜರ್​ಲ್ಯಾಂಡ್​ನ ಮ್ಯಾನ್ಯುಯಲ್ ಅಕಾಂಜಿ ಎದುರಾಳಿ ತಂಡದ ಏಕೈಕ ಗೋಲು ಬಾರಿಸಿದರು.

ರಮೋಸ್ 67ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಪ್ರಸಕ್ತ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯ ಮುಕ್ತಾಯದ ಅವಧಿಯಲ್ಲಿ ಬದಲಿ ಆಟಗಾರ ರಫೀಲ್ ಲಿಯೊ ಮತ್ತೊಂದು ಗೋಲು ಗಳಿಸಿದರು. ಇಲ್ಲಿಗೆ ಪೋರ್ಚುಗಲ್​ ಕೈ ಮೇಲಾಯಿತು. ಪಂದ್ಯದುದಕ್ಕೂ ರೊನಾಲ್ಡೊ ಅನುಪಸ್ಥಿತಿ ಕಾಡಲೇ ಇಲ್ಲ.

ಇದನ್ನೂ ಓದಿ | FIFA World Cup | ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಪಡೆದು ಇತಿಹಾಸ ಸೃಷ್ಟಿಸಿದ ಮೊರಾಕ್ಕೊ ತಂಡ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Viral Run Out Video: ರನೌಟ್​ ಪ್ರಯತ್ನದ ವಿಡಿಯೊವನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Viral Run Out Video
Koo

ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್​ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದೆ. ಮಕ್ಕಳ ಕ್ರಿಕೆಟ್​ ಟೂರ್ನಿಯಲ್ಲಿ ರನೌಟ್​ ಮಾಡು ಹರಸಾಹಸಪಟ್ಟ ವಿಡಿಯೊವೊಂದು ವೈರಲ್(Viral Run Out Video)​ ಆಗಿದೆ.

ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳು ಕ್ರಿಕೆಟ್ ಟೂರ್ನಿಯೊಂದ ಪಂದ್ಯವನ್ನು ಆಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಟ್ರೈಕರ್​ನಲ್ಲಿದ್ದ ಬ್ಯಾಟರ್​ ಚೆಂಡನ್ನು ಹೊಡೆದು ರನ್​ ಗಳಿಸಲು ನಾನ್​ಸ್ಟ್ರೈಕ್​ಗೆ ಓಡಿದ್ದಾನೆ. ಚೆಂಡು ಫೀಲ್ಡರ್​ ಕೈ ಸೇರಿದ ಕಾರಣ ನಾನ್​ಸ್ಟ್ರೈಕ್​ಕರ್​ನಲ್ಲಿದ್ದ ಬ್ಯಾಟರ್​ ಓಡಲು ನಿರಾಕರಿಸಿ ನಾನ್​ಸ್ಟ್ರೈಕ್​ನಲ್ಲಿಯೇ ನಿಲ್ಲುತ್ತಾನೆ. ಸುಲಭವಾಗಿ ರನೌಟ್​ ಅವಕಾಶ ಸಿಕ್ಕರೂ ಕೂಡ ಫೀಲ್ಡರ್​ ಗಡಿಬಿಡಿಯಲ್ಲಿ ಚೆಂಡನ್ನು ಕೀಪರ್​ ಕೈಗೆ ಎಸೆಯದೆ ನಾನ್​ಸ್ಟ್ರೈಕ್​ನತ್ತ ಬಿಸಾಡುತ್ತಾನೆ. ಚೆಂಡು ವಿಕೆಟ್​ಕೆ ಬಡಿಯದೆ ಮತ್ತೊಂದು ಫೀಲ್ಡರ್​ ಕೈ ಸೇರಿತು. ಆತ ಕೀಪರ್​ ಕಡೆ ಚೆಂಡನ್ನು ಎಸೆದ ವೇಳೆ ಪಿಚ್​ ಬದಿಯಲ್ಲಿ ನಿಂತಿದ್ದ ಫೀಲ್ಡರ್​ ಒಬ್ಬ ಚೆಂಡು ಕ್ಯಾಚ್​ ಹಿಡಿದು ವಿಕೆಟ್​ಕೆ ಎಸೆತುತ್ತಾನೆ. ಇಲ್ಲಿಯೂ ಗುರಿ ತಪ್ಪುತ್ತದೆ. ನಾನ್​ಸ್ಟ್ರೈಕ್​ನಲ್ಲಿದ್ದ ಬ್ಯಾಟರ್​ಗಳು ತಮ್ಮ ಪಾಡಿಗೆ ತಾವು ಚರ್ಚೆಯಲ್ಲಿ ಮಗ್ನರಾಗಿರುತ್ತಾರೆ. ಕೀಪರ್​ ಕೂಡ ರನೌಟ್​ ಮಾಡಲು ಎಡವುತ್ತಾನೆ. ಎದುರಾಳಿಗಳ ಪರದಾಟ ಕಂಡ ಬ್ಯಾಟರ್​ ತಕ್ಷಣ ಸ್ಟ್ರೈಕ್​ಗೆ ಓಡಿ ರನೌಟ್​ ಅಪಾಯದಿಂದ ಪಾರಾಗಿದ್ದಾನೆ.

ಈ ಹಾಸ್ಯಮಯ ರನೌಟ್​ ಪ್ರಯತ್ನದ ವಿಡಿಯೊವನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

ಐಸಿಸಿ ಕೂಟಗಳಲ್ಲಿ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ.

2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್​​ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿದೆ.

Continue Reading

ಕ್ರೀಡೆ

Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Hardik Pandya: ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ.

VISTARANEWS.COM


on

Hardik Pandya
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 world cup 2024)​ ಟೂರ್ನಿಗಾಗಿ ಈಗಾಗಲೇ ನ್ಯೂಯಾರ್ಕ್(eam India in New York)​ ತಲುಪಿರುವ ಟೀಮ್​ ಇಂಡಿಯಾದ(Team India ) ಮೊದಲ ಬ್ಯಾಚ್​ ಅಭ್ಯಾಸ ಆರಂಭಿಸಿದೆ. ಆಟಗಾರರು ಅಭ್ಯಾಸ ನಿರತ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಕೌಟುಂಬಿಕ ಸಮಸ್ಯೆಯನ್ನು ಬದಿಗೊತ್ತಿ ಹಾರ್ದಿಕ್​ ಪಾಂಡ್ಯ(Hardik Pandya) ಕೂಡ ತಂಡದ ಯಶಸ್ಸಿಗಾಗಿ ಟಿ20 ಆಡಲು ಸಜ್ಜಾಗಿದ್ದಾರೆ. ಲಂಡನ್​ನಿಂದ ನೇರವಾಗಿ ನ್ಯೂಯಾರ್ಕ್​ಗೆ ಬಂದಿಳಿದ ಪಾಂಡ್ಯ ಟೀಮ್​ ಇಂಡಿಯಾ ಜತೆ ಅಭ್ಯಾಸ ನಡೆಸಿದ್ದಾರೆ.

ಟೀಮ್​ ಇಂಡಿಯಾದ ದ್ವಿತೀಯ ಬ್ಯಾಚ್​ ಇಂದು ನ್ಯೂಯಾರ್ಕ್​ಗೆ ತಲುಪಲಿದೆ. ಗುರುವಾರದಿಂದ ಈ ಆಟಗಾರರು ಕೂಡ ಅಭ್ಯಾಸ ಆರಂಭಿಸಲಿದ್ದಾರೆ. ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ. ಈ ಎಲ್ಲ ಮಾತುಗಳ ಮಧ್ಯೆಯೂ ಪಾಂಡ್ಯ ದೇಶದ ಕರ್ತವ್ಯಕ್ಕೆ ಹಾಜರಾಗಿದ್ದು ಟಿ20 ವಿಶ್ವಕಪ್​ಗೆ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಪಾಂಡ್ಯಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ


Continue Reading

ಪ್ರಮುಖ ಸುದ್ದಿ

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Rishabh Pant:

VISTARANEWS.COM


on

Rishab Pant
Koo

ಬೆಂಗಳೂರು: ಭೀಕರ ಕಾರು ಅಫಘಾತದ ಬಳಿಕ ಚೇತರಿಸಿಕೊಂಡು ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ರಾಷ್ಟ್ರೀಯ ಕರ್ತವ್ಯಕ್ಕೆ ಹಾಜರಾಗಿರುವ ರಿಷಭ್ ಪಂತ್​ಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿದೆ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಹೊಸ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವ ಅವರ ವಿಡಿಯೊವನ್ನು ಶೇರ್ ಮಾಡಿದೆ. ಸುಂದರ ಕ್ರಿಕೆಟ್ ಆಟಗಾರ ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಮತ್ತೆ ತಮ್ಮ ದೇಶಕ್ಕಾಗಿ ಆಡುವ ವಿಷಯವನ್ನು ಸಂಭ್ರಮಿಸುವಂತೆ ಮಾಡಿದೆ. ಜೂನ್ 5ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ತಂಡದ ಮತ್ತೊಬ್ಬ ವಿಕೆಟ್ ಕೀಪರ್-ಬ್ಯಾಟರ್​ ಸಂಜು ಸ್ಯಾಮ್ಸನ್​ಗಿಂತ ಮುಂಚಿತವಾಗಿ ಪಂತ್ ಅವರನ್ನು ಆರಂಭಿಕ ಇಲೆವೆನ್​​ನಲ್ಲಿ ಆಯ್ಕೆ ಮಾಡಿದರೆ, ಅದು ಮೆನ್ ಇನ್ ಬ್ಲೂ ತಂಡದ ಐತಿಹಾಸಿಕ ಕ್ಷಣವಾಗಬಹುದು.

ಪಂತ್ ಪಿಚ್​ಗೆ ಮರಳುವ ಮೊದಲು ಹೃದಯಪೂರ್ವಕ ಸಂದೇಶದೊಂದಿಗೆ ಭಾರತೀಯ ಶರ್ಟ್​ನಲ್ಲಿ ತಮ್ಮ ಹೊಸ ನೋಟದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಒಂದು ಇಣುಕು ನೋಟವನ್ನು ನೀಡಿದ್ದಾರೆ.

“ಸಿದ್ಧ. ಸಮರ್ಥ. ನಿರ್ಧರಿಸಲಾಗಿದೆ! ಪ್ರತಿಕೂಲ ಪರಿಸ್ಥಿತಿಯಿಂದ ಗೆಲುವಿನವರೆಗೆ, ಐಸಿಸಿ ಪುರುಷರ ಟಿ 20 ವಿಶ್ವಕಪ್​ಗೆ ರಿಷಭ್ ಪಂತ್​ ಅವರ ಪ್ರಯಾಣವು ದೃಢನಿಶ್ಚಯಕ್ಕೆ ಸಾಕ್ಷಿ. ಜೂನ್ 5 ರಿಂದ ನಡೆಯಲಿರುವ ಟಿ20 ವಿಶ್ವ ಕಪ್​ನಲ್ಲಿ ವಿಕೆಟ್ ಕೀಪರ್​, “ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

ಭಯಾನಕ ಘಟನೆಯ ನಂತರ ಪಂತ್ ಮರಳಿದ್ದಾರೆ

ಡಿಸೆಂಬರ್ 30, 2022 ರ ಸಂಜೆ, ಪಂತ್ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಭಯಾನಕ ಕಾರು ಅವಘಡದಲ್ಲಿ ಸಿಲುಕಿದ್ದರು. ಅವರ ವಾಹನವು ರಸ್ತೆ ಬಿಟ್ಟು ಹೆಚ್ಚಿನ ವೇಗದಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಹೊಸ ವರ್ಷದ ಮುನ್ನಾದಿನವನ್ನು ಕುಟುಂಬದೊಂದಿಗೆ ಕಳೆಯಲು ಮುಂಜಾನೆ ಮನೆಗೆ ಪ್ರಯಾಣಿಸುತ್ತಿದ್ದಾಗ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.

ಆ ಪ್ರದೇಶದ ಸ್ಥಳೀಯರು ಅವರನ್ನು ಉರಿಯುತ್ತಿರುವ ವಾಹನದಿಂದ ಹೊರಗೆಳೆದು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದರು. ಪುನಶ್ಚೇತನ ಮತ್ತು ಚೇತರಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ಪಂತ್ ಅವರ ಮೊಣಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಸಂಪೂರ್ಣ ಆರೋಗ್ಯಕ್ಕೆ ಮರಳಲು ಅವರಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಹಿಡಿಯಿತು. ಆದಾಗ್ಯೂ ಅಷ್ಟೊಂದು ಭೀಕರ ಅಪಘಾತದ ಬಳಿಕ ಅವರು ಚೇತರಿಸಿಕೊಂಡ ವೇಗ ಅಸಾಮಾನ್ಯವಾಗಿದೆ.

Continue Reading

ಕ್ರೀಡೆ

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

T20 World Cup: ವರದಿಯ ಪ್ರಕಾರ, ಐಸಿಸ್ ಅನುಯಾಯಿಗಳು Matrix.org ನೆಟ್ವರ್ಕ್​ನಲ್ಲಿ ಆನ್ಲೈನ್ ಚಾಟ್ ರೂಮ್​​ಗಳನ್ನು ಬಳಸುತ್ತಿರುವುದು ಕಂಡುಬಂದಿದೆ, ಅಲ್ಲಿ ಅವರು “ನಿಮ್ಮ ಶಸ್ತ್ರಾಸ್ತ್ರವನ್ನು ಸಿದ್ಧಪಡಿಸಿ, ನಿಮ್ಮ ಯೋಜನೆಯನ್ನು ರೂಪಿಸಿ ಮತ್ತು ನಂತರ ನಮ್ಮವರನ್ನು ಆಕರ್ಷಿಸಿ” ಎಂಬ ಸಂದೇಶ ಹಾಕಿದ್ದಾರೆ. ವಿಶೇಷವಾಗಿ ಟಿ 20 ವಿಶ್ವಕಪ್​ನಂತ ಪ್ರಮುಖ ಕ್ರೀಡಾಕೂಟಗಳನ್ನು ಗುರಿಯಾಗಿಸುವ ಬಗ್ಗೆ ಈ ಸಂದೇಶದಲ್ಲಿ ತಿಳಿಸಲಾಗಿದೆ.

VISTARANEWS.COM


on

T20 World Cup
Koo

ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸಲಿರುವ ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಅಭ್ಯಾಸ ಪಂದ್ಯಗಳು ಆರಂಭಗೊಂಡಿವೆ. ಈ ಮೆಗಾ-ಈವೆಂಟ್ ಜೂನ್ 1 ರಂದು ಪ್ರಾರಂಭವಾಗಲಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಏತನ್ಮಧ್ಯೆ ಟೂರ್ನಿಗೆ ಐಸಿಸ್​ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್​ ಸಿರಿಯಾ ಗ್ರೂಪ್) ಬೆದರಿಕೆ ಒಡ್ಡಿದೆ. ಉಗ್ರರು ಪ್ರಸಾರ ಮಾಡಿದ ಆಘಾತಕಾರಿ ಸಂದೇಶದಿಂದ ಕ್ರಿಕೆಟ್ ಜಗತ್ತು ತಲ್ಲಣಗೊಂಡಿದೆ. ಭಯೋತ್ಪಾದಕ ಬೆದರಿಕೆಯು ಈವೆಂಟ್​ಗೆ ಸಂಬಂಧಿಸಿದ ಸಂಘಟಕರು ಮತ್ತು ಸದಸ್ಯರ ಮೇಲೆ ಮಾತ್ರವಲ್ಲದೆ, ಪಂದ್ಯಾವಳಿಗೆ ಸಜ್ಜಾಗುತ್ತಿರುವ ಕ್ರಿಕೆಟ್ ಉತ್ಸಾಹಿಗಳು ಮತ್ತು ಬೆಂಬಲಿಗರಲ್ಲಿ ಆತಂಕ ಉಂಟು ಮಾಡಿದೆ. ವಆಯಾ ರಾಷ್ಟ್ರಗಳನ್ನು ಹಲವಾರು ಸ್ಥಳಗಳಲ್ಲಿ ಹುರಿದುಂಬಿಸಲು ಈಗಾಗಲೇ ಮನಸ್ಸು ಮಾಡಿದವರ ಅಭಿಮಾನಿಗಳ ಮೇಲೆ ಆತಂಕದ ಛಾಯೆಯನ್ನು ಮೂಡಿಸಿದೆ.

ವರದಿಯ ಪ್ರಕಾರ, ಐಸಿಸ್ ಅನುಯಾಯಿಗಳು Matrix.org ನೆಟ್ವರ್ಕ್​ನಲ್ಲಿ ಆನ್ಲೈನ್ ಚಾಟ್ ರೂಮ್​​ಗಳನ್ನು ಬಳಸುತ್ತಿರುವುದು ಕಂಡುಬಂದಿದೆ, ಅಲ್ಲಿ ಅವರು “ನಿಮ್ಮ ಶಸ್ತ್ರಾಸ್ತ್ರವನ್ನು ಸಿದ್ಧಪಡಿಸಿ, ನಿಮ್ಮ ಯೋಜನೆಯನ್ನು ರೂಪಿಸಿ ಮತ್ತು ನಂತರ ನಮ್ಮವರನ್ನು ಆಕರ್ಷಿಸಿ” ಎಂಬ ಸಂದೇಶ ಹಾಕಿದ್ದಾರೆ. ವಿಶೇಷವಾಗಿ ಟಿ 20 ವಿಶ್ವಕಪ್​ನಂತ ಪ್ರಮುಖ ಕ್ರೀಡಾಕೂಟಗಳನ್ನು ಗುರಿಯಾಗಿಸುವ ಬಗ್ಗೆ ಈ ಸಂದೇಶದಲ್ಲಿ ತಿಳಿಸಲಾಗಿದೆ.

ಅಂತರ್ಜಾಲದಲ್ಲಿ ಪ್ರಸಾರವಾದ ಗ್ರಾಫಿಕ್ ಪೋಸ್ಟರ್ ಅನ್ನು ಬಳಸಿಕೊಂಡು, ಭಯೋತ್ಪಾದಕ ಸಂಘಟನೆಯು ರೈಫಲ್ ಹಿಡಿದಿರುವ ವ್ಯಕ್ತಿಯನ್ನು ಚಿತ್ರಿಸುವ ಮೂಲಕ ತೀವ್ರ ಬೆದರಿಕೆಯನ್ನು ರವಾನಿಸಿದೆ. ನೀವು ಪಂದ್ಯಗಳಿಗಾಗಿ ಕಾಯಿರಿ…. ಮತ್ತು ನಾವು ನಿಮಗಾಗಿ ಕಾಯುತ್ತೇವೆ……” ಹೆಚ್ಚುವರಿಯಾಗಿ, ಪೋಸ್ಟ್​​ನಲ್ಲಿ ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂ ಮತ್ತು ಜೂನ್ 9 ರ ನಡೆಯಲಿರುವ ಭಾರತ- ಪಾಕ್ ಪಂದ್ಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಟಿಕೆಟ್ ಮಾರಾಟ ಮತ್ತು ಪ್ರಸಾರ ಅಂಕಿಅಂಶಗಳ ದೃಷ್ಟಿಯಿಂದ ಹೆಚ್ಚು ಪ್ರಚಾರವನ್ನು ಪಡೆದ ಪಂದ್ಯ ಇದಾಗಿದೆ.

ಚಿತ್ರದಲ್ಲಿ ಕ್ರೀಡಾಂಗಣದ ಚಿತ್ರಣದ ಮೇಲೆ ವೈಮಾನಿಕ ಡ್ರೊನ್​ಗಳನ್ನು ಸುತ್ತಿಸಲಾಗಿದೆ. ಇದರೊಂದಿಗೆ ಡೈನಮೈಟ್ ಕಡ್ಡಿ ಮತ್ತು ಟಿಕ್ಕಿಂಗ್ ಗಡಿಯಾರವಿದೆ. ಮ್ಯಾನ್​ಹಟ್​ನ ಹೊರಗೆ ಇತ್ತೀಚೆಗೆ ನಿರ್ಮಿಸಲಾದ ಸ್ಥಳದಲ್ಲಿ ಇಂಡೋ-ಪಾಕ್ ಪಂದ್ಯಕ್ಕೆ ಗರಿಷ್ಠ 34,000 ಅಭಿಮಾನಿಗಳು ಹಾಜರಾಗುವ ನಿರೀಕ್ಷೆಯಿದೆ. ಐಸೆನ್ಹೋವರ್ ಪಾರ್ಕ್​ನ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯಲಿರುವ ಎಂಟು ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಒಂದಾಗಿದೆ.

Continue Reading
Advertisement
Love Jihad
ಪ್ರಮುಖ ಸುದ್ದಿ3 mins ago

Love Jihad: ಲವ್ ಜಿಹಾದ್ ತಡೆಗೆ ಹೆಲ್ಪ್‌ಲೈನ್‌ ಆರಂಭಿಸಿದ ಶ್ರೀರಾಮಸೇನೆ

Karan Bhushan Singh
ದೇಶ15 mins ago

Karan Bhushan Singh: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಡಿಕ್ಕಿಯಾಗಿ ಇಬ್ಬರ ಸಾವು

mlc election
ರಾಜಕೀಯ17 mins ago

MLC Election: ಒಂದಾದ ಸಿಎಂ- ಡಿಸಿಎಂ, ಪರಂ ಗರಂ; ಅಖಾಡಕ್ಕಿಳಿದ ರಮೇಶ್‌ ಕುಮಾರ್‌

Viral Run Out Video
ಕ್ರೀಡೆ24 mins ago

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Ambareesh Birthday during Sumalatha Ambareesh Talks About Abhishek Ambareesh And Aviva
ಸ್ಯಾಂಡಲ್ ವುಡ್30 mins ago

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

All Eyes on Rafah
ರಾಜಕೀಯ35 mins ago

All Eyes on Rafah: 30 ಮಿಲಿಯನ್ ಜನರನ್ನು ತಲುಪಿದ ‘ಆಲ್ ಐಸ್ ಆನ್ ರಫಾ’ ಪೋಸ್ಟ್‌!

Bomb Threat
ಪ್ರಮುಖ ಸುದ್ದಿ37 mins ago

Bomb Threat: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಸಂದೇಶ; ಆತಂಕ ಸೃಷ್ಟಿ

Hardik Pandya
ಕ್ರೀಡೆ1 hour ago

Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Viral Video
ವೈರಲ್ ನ್ಯೂಸ್2 hours ago

Viral Video: ಇವನೇ ನಿಜವಾದ ಹೀರೋ! ಇವರ ಧೈರ್ಯ, ಶೌರ್ಯಕ್ಕೆ ಸರಿಸಾಟಿಯೇ ಇಲ್ಲ; ವೈರಲಾಯ್ತು ವಿಡಿಯೋ

TOP 5 Movies big budget Movie in OTT
ಒಟಿಟಿ2 hours ago

TOP 5 Movies: ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ20 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌