Viral Video| ಮೊಸಳೆ ಪಕ್ಕ, ಮೊಸಳೆಯಂತೆಯೇ ಹೋಗಿ ಮಲಗಿ ಅದರ ಕಾಲು ಎಳೆದು ಕೀಟಲೆ ಕೊಟ್ಟವನಿಗೆ ನೆಟ್ಟಿಗರಿಂದ ಬುದ್ಧಿವಾದ! - Vistara News

ವೈರಲ್ ನ್ಯೂಸ್

Viral Video| ಮೊಸಳೆ ಪಕ್ಕ, ಮೊಸಳೆಯಂತೆಯೇ ಹೋಗಿ ಮಲಗಿ ಅದರ ಕಾಲು ಎಳೆದು ಕೀಟಲೆ ಕೊಟ್ಟವನಿಗೆ ನೆಟ್ಟಿಗರಿಂದ ಬುದ್ಧಿವಾದ!

ವಿಡಿಯೊ ನೋಡಿದ ಅನೇಕರು ಇದು ಮೂರ್ಖತನದ ಪರಮಾವಧಿ ಎಂದೇ ಹೇಳಿದ್ದಾರೆ. ‘ಈತ ಅತ್ಯಂತ ಸೃಜನಾತ್ಮಕವಾಗಿ ಸಾಯಲು ಹೊರಟಿದ್ದಾನೆ’ ಎಂದೂ ಟೀಕಿಸಿದ್ದಾರೆ.

VISTARANEWS.COM


on

Man Wears Crocodile Costume pull its leg video viral
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಸಳೆ ಅದೆಷ್ಟು ಭಯಂಕರ ಸರೀಸೃಪ ಎಂಬುದು ನಮಗೆಲ್ಲ ಗೊತ್ತು. ಅದು ನರಭಕ್ಷಕ..ಮೊಸಳೆಯಿದ್ದ ನದಿ-ಕೆರೆಗಳ ದಡಕ್ಕೆ ಹೋದಾಗ ಮೈಯೆಲ್ಲ ಕಣ್ಣಾಗಿರಬೇಕು. ಇಲ್ಲದೆ ಇದ್ದರೆ ಅದರ ಬಾಯಿಗೆ ಬೀಳಲು ನಿಮಿಷ ಸಾಕು.. ಹೀಗಿರುವಾಗ ವ್ಯಕ್ತಿಯೊಬ್ಬ ಮೊಸಳೆಯ ಪಕ್ಕದಲ್ಲಿ ಮಲಗಿ, ಅದರ ಕಾಲು- ಮೈ ಮುಟ್ಟುತ್ತ ತಮಾಷೆಯಾಡಿದ್ದಾನೆ. ಆದರೆ ಅವನು ಇದಕ್ಕಾಗಿ ಬೊಂಬಾಟ್​ ಐಡಿಯಾ ಮಾಡಿದ್ದ. ಮೊಸಳೆಯಂಥ ವೇಷ ಧರಿಸಿ ಆ ಸರೀಸೃಪದ ಪಕ್ಕ ಮಲಗಿಕೊಂಡಿದ್ದ.

ಈಗಂತೂ ಎಲ್ಲ ರೀತಿಯ ಪ್ರಾಣಿಗಳ ಕಾಸ್ಟ್ಯೂಮ್​​ಗಳು (ಉಡುಪು) ಮಾರುಕಟ್ಟೆಯಲ್ಲಿ ಲಭ್ಯ. ಹುಲಿ, ಕರಡಿ, ಗೊರಿಲ್ಲಾ, ನಾಯಿ ಸೇರಿ ವಿವಿಧ ಪ್ರಾಣಿಗಳ ಮಾದರಿಯ ಬಟ್ಟೆಗಳು ಸಿಗುತ್ತವೆ. ಈ ವ್ಯಕ್ತಿ ಮೊಸಳೆಯಂಥ ಉಡುಪು ಖರೀದಿಸಿದ್ದ. ನದಿ ದಡದ ಮೇಲೆ, ಮೊಸಳೆಯ ಚರ್ಮದಂಥ ಬಟ್ಟೆ ಧರಿಸಿ, ನಿಜವಾದ ಮೊಸಳೆ ಪಕ್ಕದಲ್ಲಿ ಮಲಗಿದ್ದ. ಹಾಗೇ, ಮಲಗಿದವನು ಸುಮ್ಮನಿರದೆ, ಅದರ ಕಾಲನ್ನು ಮುಟ್ಟುತ್ತಿದ್ದ. ಹಿಡಿದು ಎಳೆಯುತ್ತಿದ್ದ. ಒಟ್ಟಾರೆ ಅದಕ್ಕೆ ಕೀಟಲೆ ಕೊಡುತ್ತಿದ್ದ. ಆದರೆ ಆ ಮೊಸಳೆ ಸುಮ್ಮನೆ ಮಲಗಿತ್ತು. ಬಹುಶ್ಯಃ ಅವನನನ್ನು ಅದು ಇನ್ನೊಂದು ಮೊಸಳೆ ಎಂದೇ ಭಾವಿಸಿತ್ತು. ಈ ವಿಡಿಯೊವನ್ನು ನರೇಂದ್ರ ಸಿಂಗ್​ ಎಂಬುವರು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡು ‘ಈತ ಅದ್ಯಾವ ಡ್ರಗ್ಸ್​ ತೆಗೆದುಕೊಂಡಿರಬಹುದು?’ ಎಂದು ಫನ್ನಿ ಕ್ಯಾಪ್ಷನ್​ ಬರೆದಿದ್ದಾರೆ.

ಆದರೆ ನೆಟ್ಟಿಗರು ಆ ವ್ಯಕ್ತಿಯ ಈ ಕೀಟಲೆಯನ್ನು ಪ್ರೋತ್ಸಾಹಿಸಿಲ್ಲ. ‘ಶೌರ್ಯಕ್ಕೂ, ಮೂರ್ಖತನಕ್ಕೂ ಒಂದು ಚಿಕ್ಕ ಅಂತರವಷ್ಟೇ ಇದೆ’ ಎಂದು ಒಬ್ಬರು ಕಮೆಂಟ್ ಬರೆದಿದ್ದರೆ, ಇನ್ನೊಬ್ಬರು ‘ಅತ್ಯಂತ ಸೃಜನಶೀಲ ಮಾರ್ಗದಲ್ಲಿ ಸಾಯಲು ಹೊರಟಿದ್ದಾನೆ’ ಎಂದು ಹೇಳಿದ್ದಾರೆ. ಮೊಸಳೆಯೊಂದಿಗೆ ಆಟವೆಂದರೆ ಅಪಾಯದ ಪರಮಾವಧಿ ಎಂದೇ ಎಲ್ಲರೂ ಹೇಳುತ್ತಾರೆ. ಅಂಥದ್ದರಲ್ಲಿ ಈತ ತಾನಾಗೇ ಹೋಗಿ, ಕೆಣಕಿ ಅದರ ಬಾಯಿಗೆ ಬೀಳುತ್ತಿದ್ದಾನೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮನಕಲಕುವ ಸುದ್ದಿ ಇದು; ಬೋಟ್​ ಕಟ್ಟುತ್ತಿದ್ದ ಅಪ್ಪನ ಎದುರೇ 1 ವರ್ಷದ ಮಗುವನ್ನು ಎಳೆದೊಯ್ದು, ನುಂಗಿದ ಮೊಸಳೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

AR Rahman: ಹಾಡಿನ ಮೂಲಕ ಟೀಮ್​ ಇಂಡಿಯಾಕ್ಕೆ ‘ಜೈ ಹೋ’ ಎಂದ ಎಆರ್ ರೆಹಮಾನ್

AR Rahman: ಭಾರತೀಯ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದ ಅಜಯ್ ದೇವಗನ್ ಅವರ ‘ಮೈದಾನ್’ ಸಿನೆಮಾದ ‘ಟೀಮ್ ಇಂಡಿಯಾ ಹೈ ಹಮ್’ ಎಂಬ ಹಾಡನ್ನು ಹಾಡುವ ಮೂಲಕ ಟಿ20 ವಿಶ್ವ ಕಪ್​ ಗೆದ್ದ ಭಾರತ ತಂಡಕ್ಕೆ ಎಆರ್ ರೆಹಮಾನ್ ಅಭಿನಂಧಿಸಿದ್ದಾರೆ.

VISTARANEWS.COM


on

AR Rahman
Koo

ಮುಂಬಯಿ: ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು. ಈ ಐತಿಹಾಸಿಕ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್(AR Rahman) ವಿಶೇಷ ಹಾಡೊಂದರ ಮೂಲಕ ಅಭಿನಂಧಿಸಿದ್ದಾರೆ.

‘ಟೀಮ್ ಇಂಡಿಯಾ ಹೈ ಹಮ್’ ಎಂಬ ಶೀರ್ಷಿಕೆಯ ಹಾಡೊಂದನ್ನು ಹಾಡುವ ಮೂಲಕ ವಿಶ್ವಕಪ್​ ಗೆದ್ದ ತಂಡಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಡಿಯೊ ಸಾಂಗ್​ ಸದ್ಯ ಸಾಮಾಜಿಕ ಕಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ಹಾಡಿನ ಲಿಂಕ್​ ಅನ್ನು ಎಆರ್ ರೆಹಮಾನ್ ಅವರು ತಮ್ಮ ಅಧಿಕೃತ ಟ್ವೀಟರ್​ ಎಕ್ಸ್​ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ರೆಹಮಾನ್ ಅವರು ತಮ್ಮ ಮಹಾಕಾವ್ಯವನ್ನು ವಿಶ್ವಕಪ್ ವಿಜಯದ ಸಲುವಾಗಿ ಮೆನ್ ಇನ್ ಬ್ಲೂಗೆ ಅರ್ಪಿಸಿದರು. ವೀಡಿಯೊದಲ್ಲಿ, ಭಾರತೀಯ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದ ಅಜಯ್ ದೇವಗನ್ ಅವರ ‘ಮೈದಾನ್’ ಸಿನೆಮಾದ ‘ಟೀಮ್ ಇಂಡಿಯಾ ಹೈ ಹಮ್’ ಹಾಡು ಹಾಡುತ್ತಿರುವುದನ್ನು ಕಾಣಬಹುದು. ಮೂಲ ಹಾಡನ್ನು ಎಆರ್ ರೆಹಮಾನ್ ಮತ್ತು ನಕುಲ್ ಅಭ್ಯಂಕರ್ ಹಾಡಿದ್ದಾರೆ.


ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತ್ತು.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

Continue Reading

ಕರ್ನಾಟಕ

Road Rage Case: ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಕಾರು ಮಾಲೀಕನ ಕಾಪಾಡಿದ ಡ್ಯಾಶ್‌ ಕ್ಯಾಮೆರಾ; ವಿಡಿಯೊ ಇದೆ

Road Rage Case: ಬೆಂಗಳೂರಿನ ಹೊರವಲಯದ ವರ್ತೂರು ರಸ್ತೆಯಲ್ಲಿ ಮತ್ತೊಂದು ರೋಡ್‌ ರೇಜ್‌ ಪ್ರಕರಣ ನಡೆದಿದೆ. ಡ್ಯಾಶ್‌ ಕ್ಯಾಮೆರಾ ಇದ್ದಿದ್ದರಿಂದ ಹೇಗೆ ಬಚಾವ್‌ ಆದರು ಎಂನ ಬಗ್ಗೆ ಕಾರಿನ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

VISTARANEWS.COM


on

Road Rage Case
Koo

ಬೆಂಗಳೂರು: ರಾಜಧಾನಿಯಲ್ಲಿ ರೋಡ್‌ ರೇಜ್‌ ಪ್ರಕರಣಗಳ (Road Rage Case) ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರೂ ವಾಹನ ಅಡ್ಡಗಟ್ಟಿ ಕಿರಿಕ್‌ ಮಾಡುವ ಕಿಡಿಗೇಡಿಗಳನ್ನು ಕಾಣುತ್ತಿರುತ್ತೇವೆ. ಇದೇ ರೀತಿ ನಗರದಲ್ಲಿ ಒಬ್ಬ ವ್ಯಕ್ತಿಗೆ ಕಹಿ ಅನುಭವ ಆಗಿದ್ದು, ಕಾರಿನಲ್ಲಿ ಡ್ಯಾಶ್‌ ಕ್ಯಾಮೆರಾ ಇದ್ದಿದ್ದರಿಂದ ಆತ ಬಚಾವ್‌ ಆಗಿದ್ದಾನೆ.

ರೋಡ್‌ ರೇಜ್‌ ಪ್ರಕರಣದ ಬಗ್ಗೆ ಪಿಯೂಷ್‌ ಕುಕರ್‌ ಎಂಬ ವ್ಯಕ್ತಿ ಎಕ್ಸ್‌ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಡ್ಯಾಶ್‌ ಕ್ಯಾಮೆರಾದಲ್ಲಿ ರೆಕಾರ್ಡ್‌ ಆದ ವಿಡಿಯೊವನ್ನು ಹಾಕಿದ್ದಾರೆ. ನಗರದ ಹೊರವಲಯದ ವರ್ತೂರು ರಸ್ತೆಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿ ಸೋಮವಾರ ತಡರಾತ್ರಿ (ಜುಲೈ 1) ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಡಾಶ್‌ ಕ್ಯಾಮ್‌ ಅಗತ್ಯವಿಲ್ಲ ಎಂದು ಯಾರಾದರೂ ನಿಮಗೆ ಹೇಳಿದಾಗ, ಈ ವಿಡಿಯೊವನ್ನು ಅವರಿಗೆ ತೋರಿಸಿ. ಬೆಂಗಳೂರು ಹೊರವಲಯದಲ್ಲಿ ರೋಡ್‌ ರೇಜ್‌ ಘಟನೆ ನಡೆದಿದ್ದು, ರಾತ್ರಿ 10.25ರ ಸುಮಾರಿಗೆ ನಗರದ ಹೊರವಲಯದ ವರ್ತೂರು ರಸ್ತೆಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ ಬಳಿ ನನಗೆ ಕಿರುಕುಳ ನೀಡಲಾಗಿದೆ. ಡ್ಯಾಶ್‌ ಕ್ಯಾಮೆರಾ ಇದ್ದ ಹಿನ್ನೆಲೆಯಲ್ಲಿ ತಾನು ಪಾರಾದೆ ಎಂದು ಪಿಯೂಷ್‌ ಕುಕರ್‌ ಹೇಳಿದ್ದಾರೆ.

ಪಿಯೂಷ್‌ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಸ್ಕೂಟರ್‌ ಚಾಲಕ ದಾರಿ ಬಿಡದೆ ನಡುರಸ್ತೆಯಲ್ಲಿ ಹೋಗುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ. ಅದಾದ ಬಳಿಕ ಬೊಲೆರೋ ವಾಹನ ಚಾಲಕ ಏಕಾಏಕಿ ಬಂದು ಅಡ್ಡಗಟ್ಟುತ್ತಾನೆ. ನಂತರ ಕಾರಿನ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗಲಭೆಗೆ ನಾನು ಯಾವುದೇ ರೀತಿ ಪ್ರಚೋದನೆ ನೀಡದಿದ್ದರೂ ಆತನೇ ಹಿಂದಿನಿಂದ ಜೋರಾಗಿ ಹಾರ್ನ್‌ ಮಾಡುತ್ತಿದ್ದ. ನಂತರ ಆತ ಕಾರಿನ ಹಿಂಬದಿ ತೆರಳಿ ಡ್ಯಾಶ್‌ ಕ್ಯಾಮೆರಾ ಇರುವುದನ್ನು ಗಮನಿಸಿ ವಾಪಸ್‌ ಬಂದಿದ್ದಾನೆ.

ಬೊಲೆರೋ ವಾಹನ ಚಾಲಕ ಪಿಯೂಷ್‌ ಜತೆ ವಾಗ್ವಾದ ನಡೆಸುತ್ತಿದ್ದಾಗ, ಮತ್ತೊಬ್ಬ ವ್ಯಕ್ತಿ ಸ್ಕೂಟರ್‌ನಲ್ಲಿ ಯೂ ಟರ್ನ್‌ ಮಾಡಿಕೊಂಡು ಕಾರಿನ ಬಳಿ ಬರುತ್ತಾನೆ. ಸ್ಕೂಟರ್‌ ಕಾರಿನ ಹತ್ತಿರಕ್ಕೆ ಬಂದಾಗ ಬೊಲೆರೋ ವಾಹನ ಚಾಲಕ, ಕಾರಿನಲ್ಲಿ ಡ್ಯಾಶ್‌ ಕ್ಯಾಮ್‌ ಇರುವ ಬಗ್ಗೆ ಆತನಿಗೆ ಸಂಜ್ಞೆ ಮಾಡುತ್ತಾನೆ. ಆಗ ಇಬ್ಬರೂ ಅಲ್ಲಿಂದ ನಿರ್ಗಮಿಸುತ್ತಾರೆ. ಇದರಿಂದ ಕಾರಿನಲ್ಲಿ ಡ್ಯಾಶ್‌ ಕ್ಯಾಮೆರಾ ಇದ್ದರೆ ಉಪಯೋಗಕ್ಕೆ ಬರುತ್ತದೆ ಎಂದು ಪಿಯೂಷ್‌ ಸಲಹೆ ನೀಡಿದ್ದಾರೆ.

ಇದನ್ನೂ ಓದಿ | Road Accident : ಹೆದ್ದಾರಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ಗೆ ‌ವೃದ್ಧ ಸಾವು; ಯುವಕನ ತಲೆ ಮೇಲೆ ಹರಿದ ಟ್ಯಾಂಕರ್‌

ಇನ್ನು ಬೆಂಗಳೂರಿನಲ್ಲಿ, ವಿಶೇಷವಾಗಿ ಐಟಿ ಕಾರಿಡಾರ್‌ ಭಾಗದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ರೋಡ್‌ ರೇಜ್‌ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ 112 ಗೆ ಡಯಲ್ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Continue Reading

ಕ್ರೀಡೆ

Shoaib Akhtar: ಭಗವದ್ಗೀತೆಯ ಸಂದೇಶ ಹಂಚಿಕೊಂಡ ಪಾಕ್​ ಆಟಗಾರ ಶೋಯೆಬ್ ಅಖ್ತರ್

Shoaib Akhtar: ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್​ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

VISTARANEWS.COM


on

Shoaib Akhtar
Koo

ಕರಾಚಿ: ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್(Shoaib Akhtar) ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಭಗವದ್ಗೀತೆಯಲ್ಲಿ (Bhagavad Gita) ಉಲ್ಲೇಖಿಸಲಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ ಎಂಬ ಸಂದೇಶವನ್ನು ಅಖ್ತರ್ ಇನ್​ಸ್ಟಾದಲ್ಲಿ ಸ್ಟೋರಿ ಹಾಕಿದ್ದಾರೆ. ಇದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಇದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿದೆ.

ಅಖ್ತರ್​ ಅವರು ಹಂಚಿಕೊಂಡ ಸ್ಟೋರಿಯಲ್ಲಿ, ವಿಷ್ಣುವಿನ ಅವತಾರವಾದ ಫೋಟೊವನ್ನು ಹಂಚಿಕೊಂಡು, ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು ಎಂಬ ಸಂದೇಶ ಬರೆಯಲಾಗಿದೆ. ಅಖ್ತರ್​ ಅವರು ಭಗವದ್ಗೀತೆಯ ಈ ಸಾರವನ್ನು ಹಾಕಿದಕ್ಕೆ ಮುಸ್ಲಿಂ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುರಾನ್​ ಹಲವು ಸಂದೇಶವಿದೆ ಇದನ್ನು ಬಿಟ್ಟು ಭಗವದ್ಗೀತೆಯ ಸಂದೇಶ ಹಾಕಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ಅಖ್ತರ್​ ಅವರು ತಮ್ಮ ಈ ಪೋಸ್ಟ್ ಡಿಲೀಟ್​ ಮಾಡಿಲ್ಲ.

ಪಾಕ್​ ವೇಗಿಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರದೇಶದ ರಾವಲ್ಪಿಂಡಿಯಲ್ಲಿ ಜನಿಸಿದ ಅಖ್ತರ್‌ “ರಾವಲ್ಪಿಂಡಿ ಎಕ್ಸ್‌ಪ್ರೆಸ್” ಎಂದೇ ಕ್ರಿಕೆಟ್​ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 2022ರಲ್ಲಿ ಅಖ್ತರ್ ಅವರು ‘ರಾವಲ್ಪಿಂಡಿ ಎಕ್ಸ್‌ಪ್ರೆಸ್; ರೇಸಿಂಗ್ ಎಗೇನ್ಸ್ಟ್ ದಿ ಆಡ್ಸ್’ ಎಂದ ಶೀರ್ಷಿಕೆಯ ತಮ್ಮ ಜೀವನಚರಿತ್ರೆಯ ಚಿತ್ರವನ್ನು ಘೋಷಣೆ ಮಾಡಿದ್ದರು. ಆದರೆ ಈ ಚಿತ್ರದ ನಿರ್ಮಾಣ ಆರಂಭವಾಗಿರುವ ಬಗ್ಗೆ ಸದ್ಯ ಇದುವರೆಗೆ ಯಾವುದೇ ಮಾಹಿತಿ ಇಲ್ಲ.

ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್​ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ IND vs PAK: ಶೋಯೆಬ್ ಅಖ್ತರ್ ಕಾಲೆಳೆದ ಸಚಿನ್​ ತೆಂಡೂಲ್ಕರ್-ವೀರೇಂದ್ರ ಸೆಹವಾಗ್

ಭಾರತಕ್ಕೆ ಬೆಂಬಲ ಸೂಚಿಸಿದ್ದ ಅಖ್ತರ್​


ಕಳೆದ ವರ್ಷ ನಡೆದಿದ್ದ ಏಷ್ಯಾಕಪ್​ನಲ್ಲಿ(Asia Cup 2023) ಪಾಕಿಸ್ತಾನ(IND vs PAK) ತಂಡವನ್ನು(IND vs PAK) ಫೈನಲ್​ ರೇಸ್​ನಿಂದ ಹೊರ ಹಾಕಲು ಭಾರತ ತಂಡ ಒಂದು ರೀತಿಯ ಫಿಕ್ಸಿಂಗ್​ ನಡೆಸುತ್ತಿದೆ ಎಂದು ಹೇಳಿದ್ದ ನೆಟ್ಟಿಗರೊಬ್ಬರಿಗೆ ಶೋಯೆಬ್ ಅಖ್ತರ್ ಸರಿಯಾಗಿ ಜಾಡಿಸಿದ್ದರು. ಅಸಂಬದ್ಧ ಹೇಳಿಕೆ ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದರು.

ಭಾರತದ ಎದುರು ಪಾಕಿಸ್ತಾನ ಗೆಲ್ಲಲಿಲ್ಲ ಎಂಬ ಮಾತ್ರಕ್ಕೆ ಈ ಕೀಳುಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ನು ಮಂದೆ ನೀಡಿದರೆ ಎಚ್ಚರಿಕೆ. ಭಾರತ ತನ್ನ ಆಟದ ಸಾಮರ್ಥ್ಯದಿಂದ ಗೆದ್ದಿದೆ. ನಮ್ಮವರಿಗೆ ಇದು ಸಾಧ್ಯವಾಗಿಲ್ಲ. ಸೋಲು ಕಂಡ ಬಳಿಕ ಭಾರತದ ಮೇಲೆ ಸುಮ್ಮನೆ ಗೂಬೆ ಕೂರಿಸೋದು ಬಿಟ್ಟುಬಿಡಿ” ಎಂದು ಸರಿಯಾಗಿ ಜಾಡಿಸಿದ್ದರು. ಅಖ್ತರ್ ಭಾರತ ತಂಡದ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದರೂ ಕೂಡ ಕೆಲವೊಮ್ಮೆ ಬೆಂಬಲವನ್ನು ಸೂಚಿಸಿದ್ದಾರೆ. ವಿಶೇಷವಾಗಿ ಸಚಿನ್​ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.

Continue Reading

ಕ್ರೀಡೆ

Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

Virat Kohli: 829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್‌ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ.

VISTARANEWS.COM


on

Virat Kohli
Koo

ದುಬೈ: ಟಿ20 ಕ್ರಿಕೆಟ್​ಗೆ ವಿದಾಯ(virat kohli retirement) ಹೇಳಿದ ವಿರಾಟ್​ ಕೊಹ್ಲಿಗೆ(Virat Kohli) ಗೌರವ ಸೂಚಕವಾಗಿ ಅವರ ಫೋಟೊವನ್ನು ಬುರ್ಜ್‌ ಖಲೀಫಾ(Burj Khalifa) ಕಟ್ಟಡದ ಮೇಲೆ ಪ್ರದರ್ಶನ ಮಾಡಲಾಯಿತು. ಲೇಸರ್​ ಲೈಟ್​ಗಳ ಮೂಲಕ ಕೊಹ್ಲಿಯ ಫೋಟೊ ಕಂಗೊಳಿಸಿದ ವಿಡಿಯೊ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಫೈನಲ್​ ಪಂದ್ಯದಲ್ಲಿ 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.

829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್‌ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ. ಹೈಮೆನೋಕಾಲಿಸ್‌ ಎಂಬ ಮರುಭೂಮಿಯ ಹೂವಿನ ಆಕಾರವು ಈ ಕಟ್ಟಡದ ತಳವಿನ್ಯಾಸಕ್ಕೆ ಪ್ರೇರಣೆಯಾಗಿದೆ. 2004ರ ಸೆಪ್ಟಂಬರ್‌ 20ರಂದು ಪ್ರಾರಂಭವಾದ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡದ್ದು 2010ರ ಜನವರಿ 4ರಂದು.

ಇದನ್ನೂ ಓದಿ Virat Kohli: ನನ್ನ ​ಅಹಂಕಾರವೇ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎಂದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ದುಬೈ ಸರ್ಕಾರ ಈ ಹಿಂದೆ ಭಾರತದ 77ನೇ ಸ್ವಾತಂತ್ರ್ಯೋತ್ಸವದಂದು ಭಾರತದ ತ್ರಿವರ್ಣ ಧ್ವಜ, ಕೋವಿಡ್ ಸಂಕಷ್ಟದ ವೇಳೆ ಭಾರತಕ್ಕೆ ಧೈರ್ಯ ತುಂಬುವ ಸಂದೇಶವನ್ನು ಬುರ್ಜ್‌ ಖಲೀಫಾದಲ್ಲಿ ಪ್ರದರ್ಶಿಸಿತ್ತು. ಹಲವು ಭಾರತೀಯ ಚಲನಚಿತ್ತರಗಳ ಫೋಸ್ಟರ್​ಗಳನ್ನು ಕೂಡ ಬುರ್ಜ್‌ ಖಲೀಫಾದಲ್ಲಿ ಪ್ರರ್ಶಿಸಲಾಗುತ್ತದೆ. ಕಟ್ಟಡದ ಹೊರ ಆವರಣದ ಒಂದು ಸುತ್ತು ಬರಬಹುದಾದ ವೀಕ್ಷಣಾ ಬಾಲ್ಕನಿ 124 ಮತ್ತು 125ನೇ ಮಹಡಿಯಲ್ಲಿವೆ. ಗಾಜಿನ ಗೋಡೆಯ ಮೂಲಕ ನಾವು ಸುತ್ತಲಿನ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಪ್ರತಿಷ್ಠಿತ ಹೊಟೇಲ್‌ಗ‌ಳು, ಪ್ರಖ್ಯಾತ ಅಪಾರ್ಟ್‌ಮೆಂಟ್‌ಗಳು, ವ್ಯಾಪಾರಿ ಕೇಂದ್ರಗಳು ಇತ್ಯಾದಿ ಇವೆ. ಈ ಕಟ್ಟಡದಲ್ಲಿ ಒಂದು ಐಷಾರಾಮಿ ಮನೆಯನ್ನು ಹೊಂದುವುದು ದೇಶ-ವಿದೇಶಗಳ ಕೋಟ್ಯಾಧಿಪತಿಗಳ ಕನಸು ಎಂದರೆ ತಪ್ಪಲ್ಲ. ಈ ಕಟ್ಟಡವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಒಳಿತಾಗಿದೆ. ಹಾಗೆಯೇ ದೇಶ-ವಿದೇಶಗಳ ಪ್ರವಾಸಿಗರಿಗೆ ಈ ಅದ್ಭುತ ಕಟ್ಟಡವನ್ನು ನೋಡುವ ಸ್ಮರಣೀಯ ಅನುಭವ ಲಭ್ಯವಾಗುತ್ತದೆ. ಬುರ್ಜ್‌ ಖಲೀಫಾದ 125ನೇ ಮಹಡಿಯವರೆಗೆ ಹೋಗಲು ಪ್ರವಾಸಿಗರಿಗೆ ಅವಕಾಶವಿದೆ. ವಾರ್ಷಿಕ ಎರಡು ಮಿಲಿಯನ್​ಗೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

Continue Reading
Advertisement
AR Rahman
ಕ್ರೀಡೆ2 mins ago

AR Rahman: ಹಾಡಿನ ಮೂಲಕ ಟೀಮ್​ ಇಂಡಿಯಾಕ್ಕೆ ‘ಜೈ ಹೋ’ ಎಂದ ಎಆರ್ ರೆಹಮಾನ್

Press Day celebration Programme in hosapete
ವಿಜಯನಗರ2 mins ago

Press Day: ಹೊಸಪೇಟೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ

Police Arrest
Latest4 mins ago

Police Arrest: ಅಕ್ರಮ ಮದ್ಯ ಸಾಗಿಸಲು ಸಹಾಯ; ಸಿಕ್ಕಿ ಬಿದ್ದ ಸಿಐಡಿ ಲೇಡಿ ಆಫೀಸರ್!

Turbulence
ದೇಶ9 mins ago

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿದ ವ್ಯಕ್ತಿ-ವಿಡಿಯೋ ಇದೆ

Shraddha Nrityarnava special dance festival in Bengaluru
ಕರ್ನಾಟಕ9 mins ago

Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

Yuva Sambhrama 2024 programme for 3 days from July 12 in Bengaluru
ಕರ್ನಾಟಕ10 mins ago

Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

Rohit Sharma
ಕ್ರೀಡೆ24 mins ago

Rohit Sharma: ಪಿಚ್​ ಮಣ್ಣು ತಿಂದಿದ್ದೇಕೆ?; ಪ್ರತಿಕ್ರಿಯಿಸಿದ ರೋಹಿತ್​

Allahabad High Court
ದೇಶ31 mins ago

Allahabad High Court: ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಹೈಕೋರ್ಟ್ ಕಳವಳ

Physical Abuse
ಬೆಂಗಳೂರು34 mins ago

Physical Abuse : ಶಿಕ್ಷಕನಿಂದ ಇದೆಂಥ ಅನಾಚಾರ! ಬಾಲಕಿಗೆ ಲೈಂಗಿಕ ಕಿರುಕುಳ

Actor Darshan Devil gang gets life imprisonment What do legal experts say
ಕ್ರೈಂ48 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹೆಸರು ಆಚೆ ಬಂದದ್ದು ಹೀಗೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ20 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌