Bihar Hooch Tragedy | ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತಕ್ಕೆ 4 ಬಲಿ, ಕುಡಿದವರು ಸಾಯ್ತಾರೆ ಎಂದ ನಿತೀಶ್ - Vistara News

ದೇಶ

Bihar Hooch Tragedy | ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತಕ್ಕೆ 4 ಬಲಿ, ಕುಡಿದವರು ಸಾಯ್ತಾರೆ ಎಂದ ನಿತೀಶ್

ಬಿಹಾರದ ಸರನ್‌ ಜಿಲ್ಲೆಯಲ್ಲಿ ಕಳ್ಳಬಟ್ಟಿ ದುರಂತ (Bihar Hooch Tragedy) ಸಂಭವಿಸಿದ ಬೆನ್ನಲ್ಲೇ, ಸಿವಾನ್‌ ಜಿಲ್ಲೆಯಲ್ಲೂ ಕಳ್ಳಬಟ್ಟಿ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನು, ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನಿತೀಶ್‌, “ಕುಡಿದವರು ಸಾಯುತ್ತಾರೆ” ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

VISTARANEWS.COM


on

Bihar Hooch Tragedy
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಟನಾ: ಬಿಹಾರದ ಸರನ್‌ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವಿಸಿ ೫೦ಕ್ಕೂ ಅಧಿಕ ಜನ ಮೃತಪಟ್ಟ ಪ್ರಕರಣ (Bihar Hooch Tragedy) ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಸಿವಾನ್‌ ಜಿಲ್ಲೆಯಲ್ಲಿಯೂ ಇಂತಹದ್ದೇ ದುರಂತ ಸಂಭವಿಸಿದೆ. ಸರನ್‌ ಜಿಲ್ಲೆಯ ಭಗವಾನ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ಕುಡಿದು ನಾಲ್ವರು ಮೃತಪಟ್ಟಿದ್ದಾರೆ.

ಕಳ್ಳಬಟ್ಟಿ ಸೇವಿಸಿ ನಾಲ್ವರು ಮೃತಪಟ್ಟರೆ, ಹಲವರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಕಳ್ಳಬಟ್ಟಿ ಸೇವಿಸಿದವರ ಕುರಿತು ಅಧಿಕಾರಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಛಾಪ್ರಾ ದುರಂತದಲ್ಲಿ ಮೃತರ ಸಂಖ್ಯೆ ೫೩
ಸರನ್‌ ಜಿಲ್ಲೆ ಛಾಪ್ರಾ ಪ್ರದೇಶದಲ್ಲಿ ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ ೫೩ಕ್ಕೆ ಏರಿಕೆಯಾಗಿದೆ. ಇನ್ನು, ರಾಜ್ಯದ ಹಲವೆಡೆ ಕಳ್ಳಬಟ್ಟಿ ಸೇವಿಸಿ ನಾಗರಿಕರು ಮೃತಪಡುತ್ತಿರುವ ಕುರಿತು ನಿತೀಶ್‌ ಕುಮಾರ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ‌ಅಲ್ಲದೆ, ಛಾಪ್ರಾ ದುರಂತದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ.

ಕುಡಿದವರು ಸಾಯ್ತಾರೆ ಎಂದ ನಿತೀಶ್‌
ಬಿಹಾರದ ಕಳ್ಳಬಟ್ಟಿ ದುರಂತಗಳ ಕುರಿತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, “ಯಾರು ಕಳ್ಳಬಟ್ಟಿ ಸೇವಿಸುತ್ತಾರೋ, ಅವರು ಸಾಯುತ್ತಾರೆ (Jo Piyega, Woh Marega)” ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. “ರಾಜ್ಯದಲ್ಲಿ ಸಾರಾಯಿ ನಿಷೇಧಿಸಲಾಗಿದೆ. ಕಳ್ಳಬಟ್ಟಿ ನಿಯಂತ್ರಣಕ್ಕೆ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಕೆಲವರು ತಪ್ಪು ಹೆಜ್ಜೆ ಇಡುತ್ತಿದ್ದಾರೆ” ಎಂದಿದ್ದಾರೆ. ಇದಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿತೀಶ್‌ ಕುಮಾರ್‌ ಅವರು ಕ್ರಮ ತೆಗೆದುಕೊಳ್ಳುವ ಬದಲು ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿವೆ.

ಇದನ್ನೂ ಓದಿ | Bihar Hooch Tragedy | ಕಳ್ಳಬಟ್ಟಿ ಸೇವಿಸಿ 20 ಜನ ಸಾವು, ಕುಡಿದು ಅಸ್ವಸ್ಥರಾದವರಿಗಾಗಿ ಶೋಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಖಾತೆ ಹೊಂದಿರುವ ಸದಸ್ಯರ ಮರಣದ ಬಳಿಕ ಅವರ ಆಧಾರ್ ದೃಢೀಕರಣ ಇಲ್ಲದೆಯೂ ಡೆತ್ ಕ್ಲೈಮ್ ಸೆಟ್ಲ್ ಮೆಂಟ್ (EPF Death Claim) ಮಾಡಿಕೊಳ್ಳಬಹುದು. ಇದಕ್ಕಾಗಿ ಇಪಿಎಫ್‌ಒ ಪ್ರಮುಖ ಬದಲಾವಣೆಯನ್ನು ಮಾಡಿದೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

EPF Death Claim
Koo

ಉದ್ಯೋಗಿಗಳ ಭವಿಷ್ಯ ನಿಧಿ (Employees Provident Fund) ಖಾತೆ ಹೊಂದಿರುವ ಸದಸ್ಯರ ಮರಣದ ಬಳಿಕ ಆಧಾರ್ ( Aadhaar) ದೃಢೀಕರಣಕ್ಕೆ ಸಂಬಂಧಿಸಿ ಎದುರಾಗಿರುವ ಪ್ರಮುಖ ಸವಾಲುಗಳ ಹಿನ್ನೆಲೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಡೆತ್ ಕ್ಲೈಮ್ (EPF Death Claim) ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಇದು ಆಧಾರ್ ಲಿಂಕ್ ಮಾಡದ ಹಲವಾರು ಸದಸ್ಯರಿಗೆ ಅನುಕೂಲವಾಗಲಿದೆ.

ಮೇ 17ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಇ- ಆಫೀಸ್ ಫೈಲ್ ಮೂಲಕ ಪ್ರಭಾರ ಅಧಿಕಾರಿಯಿಂದ (OIC) ಅನುಮೋದನೆ ಪಡೆದ ಬಳಿಕವೇ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಸತ್ತವರ ಸದಸ್ಯತ್ವ ಮತ್ತು ಹಕ್ಕುದಾರರ ನ್ಯಾಯಸಮ್ಮತತೆಯನ್ನು ದೃಢೀಕರಿಸಲು ಕೈಗೊಂಡ ಪರಿಶೀಲನಾ ಕಾರ್ಯವಿಧಾನಗಳನ್ನು ಕಡತವು ಸೂಕ್ಷ್ಮವಾಗಿ ದಾಖಲಿಸಬೇಕು. ಇದರಲ್ಲಿ ವಂಚನೆಯ ಅಪಾಯವನ್ನು ಕಡಿಮೆ ಮಾಡಲು ಒಐಸಿ ನಿರ್ದೇಶಿಸಿದಂತೆ ಈ ಪ್ರೋಟೋಕಾಲ್ ಅನ್ನು ಎಚ್ಚರಿಕೆಯಿಂದ ಕಾರ್ಯಗತಗೊಳಿಸಲಾಗುವುದು ಎಂದು ಇಪಿಎಫ್‌ಒ ತಿಳಿಸಿದೆ.

ಯುಎಎನ್ ನಲ್ಲಿ ಸದಸ್ಯರ ವಿವರಗಳು ನಿಖರವಾಗಿದ್ದರೂ ಯುಐಡಿ ಡೇಟಾಬೇಸ್‌ನಲ್ಲಿ ನಿಖರವಾಗಿಲ್ಲದ ಸಂದರ್ಭಗಳಲ್ಲಿ ಮಾತ್ರ ಈ ನಿರ್ದೇಶನಗಳು ಅನ್ವಯಿಸುತ್ತವೆ ಎಂದು ಸೂಚನೆಯು ಉಲ್ಲೇಖಿಸುತ್ತದೆ.

ಸಮಸ್ಯೆಗಳು ಏನು?

ಇಪಿಎಫ್‌ಒ ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ ಸಾವಿನ ಸಂದರ್ಭದಲ್ಲಿ ಆಧಾರ್‌ನ ದೃಢೀಕರಣದ ಕುರಿತು ಕ್ಷೇತ್ರ ಕಚೇರಿಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಇವುಗಳಲ್ಲಿ ಕೆಲವು ಆಧಾರ್ ದಾಖಲೆಯಲ್ಲಿನ ಅಸಮರ್ಪಕತೆ ಮತ್ತು ಅಪೂರ್ಣ ವಿವರಗಳು, ಆಧಾರ್ ಅನುಷ್ಠಾನದ ಮೊದಲು ವಿವರಗಳ ಅಲಭ್ಯತೆ, ನಿಷ್ಕ್ರಿಯಗೊಳಿಸಿದ ಖಾತೆಗಳು ಮತ್ತು ಆಧಾರ್ ಮೌಲ್ಯೀಕರಿಸುವಲ್ಲಿ ತಾಂತ್ರಿಕ ಸಮಸ್ಯೆಗಳು ಸೇರಿವೆ.

ಈ ಸಮಸ್ಯೆಗಳು ಉಲ್ಲೇಖಿಸಲಾದ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಅನಗತ್ಯ ವಿಳಂಬವನ್ನು ಉಂಟು ಮಾಡುತ್ತವೆ. ಅವುಗಳನ್ನು ಪರಿಹರಿಸಲು ಇಪಿಎಫ್‌ಒ ಈಗ ಈ ಷರತ್ತುಗಳೊಂದಿಗೆ ಆಧಾರ್ ಅನ್ನು ಸೀಡಿಂಗ್ ಮಾಡದೆಯೇ ಭೌತಿಕ ಇಪಿಎಫ್‌ ಕ್ಲೈಮ್‌ಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ.

ಇದನ್ನೂ ಓದಿ: Reservation in Outsourcing: ಇನ್ನು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ; ಸಿದ್ದರಾಮಯ್ಯ ಸರ್ಕಾರದ ಮಹತ್ವದ ಆದೇಶ

ಪರಿಹಾರ ಹೇಗೆ?

ಇಪಿಎಫ್‌ ಹೊಂದಿರುವ ಸದಸ್ಯನ ಸಾವಿನ ಸಂದರ್ಭದಲ್ಲಿ ಆಧಾರ್ ದೃಢೀಕರಣಕ್ಕೆ ಇಲ್ಲದೆ ಭೌತಿಕ ಕ್ಲೈಮ್‌ ಗಳ ಮೂಲಕ ತಾತ್ಕಾಲಿಕ ಭತ್ಯೆಯನ್ನು ಒದಗಿಸಲು ಒಐಸಿ ಅನುಮೋದನೆ ಕಡ್ಡಾಯವಾಗಿದೆ. ಮೃತರ ಸದಸ್ಯತ್ವ ಮತ್ತು ಹಕ್ಕುದಾರರ ದೃಢೀಕರಣವನ್ನು ಖಚಿತಪಡಿಸಲು ವಿವರವಾದ ಪರಿಶೀಲನೆಯು ಮುಖ್ಯವಾಗಿದೆ. ವಂಚನೆಯನ್ನು ತಡೆಗಟ್ಟಲು ಒಐಸಿ ನಿರ್ದೇಶನದಂತೆ ಸರಿಯಾದ ಕ್ರಮ ಕೈಗೊಳ್ಳಲಾಗುವುದು.

ಆಧಾರ್ ಇಲ್ಲದೇ ಇದ್ದರೆ ಏನು ಮಾಡಬಹುದು?

ಇಪಿಎಫ್‌ಒ ವೆಬ್‌ಸೈಟ್ ಮಾಹಿತಿ ಪ್ರಕಾರ, ಆಧಾರ್ ಇಲ್ಲದ ಸದಸ್ಯರ ಮರಣದ ಸಂದರ್ಭದಲ್ಲಿ ನಾಮಿನಿಯ ಆಧಾರ್ ವಿವರಗಳನ್ನು ದಾಖಲಿಸಲಾಗುತ್ತದೆ ಮತ್ತು ಅವನು ಅಥವಾ ಅವಳು ಜೆಡಿ ಫಾರ್ಮ್‌ಗೆ ಸಹಿ ಮಾಡಬೇಕು. ಇತರ ಪ್ರಕ್ರಿಯೆಗಳು ಒಂದೇ ಆಗಿರುತ್ತವೆ. ನಾಮನಿರ್ದೇಶನವು ಗೈರುಹಾಜರಾಗಿದ್ದರೆ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ಜೆಡಿಗೆ ದೃಢೀಕರಿಸಬಹುದು ಮತ್ತು ಅವರ ವಿವರಗಳನ್ನು ಸಲ್ಲಿಸಬೇಕು.

Continue Reading

ದೇಶ

Cyclone Remal: ʼರೆಮಾಲ್‌ʼ ಅಬ್ಬರಕ್ಕೆ ಬಂಗಾಳ, ಬಾಂಗ್ಲಾ ತತ್ತರ-ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣ

Cyclone Remal: ಪಶ್ಚಿಮ ಬಂಗಾಳ ರೆಮಾಲ್‌ ಚಂಡಮಾರುತದ ಹಿನ್ನೆಲೆ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂ ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 21 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಅಂತಾರಾಷ್ಟ್ರೀಯ ಮತ್ತು ದೇಶೀಯ ಒಟ್ಟು 394 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

VISTARANEWS.COM


on

Cyclone Remal
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal) ಮತ್ತು ಬಾಂಗ್ಲಾದೇಶ(Bangladesh)ಗಳಲ್ಲಿ ರೆಮಾಲ್‌ ಚಂಡಮಾರುತ(Cyclone Remal)ದ ಅಬ್ಬರ ಜೋರಾಗಿದೆ. ಪ್ರತಿ ಗಂಟೆಗೆ 135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ತಡರಾತ್ರಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಇನ್ನು ಬಾಂಗ್ಲಾದೇಶದ ಮೋಂಗ್ಲಾ ಭಾಗದ ಸಾಗರ್‌ ದ್ವೀಪ ಮತ್ತು ಖೇಪುಪರಾ ಸಮೀಪ ಬಿರುಗಾಳಿ ಬೀಸುತ್ತಿದ್ದು, ಭಾರೀ ಮಳೆಯಾಗುತ್ತಿದೆ. ಇನ್ನು ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮನೆ, ಹೊಲ ಗದ್ದೆಗಳಿಗೆ ನೀರು ನುಗ್ಗಿದೆ.

ಇನ್ನು ಪಶ್ಚಿಮ ಬಂಗಾಳ ರೆಮಾಲ್‌ ಚಂಡಮಾರುತದ ಹಿನ್ನೆಲೆ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂ ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 21 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಅಂತಾರಾಷ್ಟ್ರೀಯ ಮತ್ತು ದೇಶೀಯ ಒಟ್ಟು 394 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪ್ರತಿಕೂಲ ಹವಾಮಾನವನ್ನು ಪರಿಗಣಿಸಿ ಹಲವಾರು ರೈಲುಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಪ್ರಧಾನಿ ಮೋದಿ ಮಹತ್ವದ ಸಭೆ

ರೆಮಾಲ್ ಚಂಡಮಾರುತ ಅಪ್ಪಳಿಸುವ ಮುನ್ನವೇ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಭಾನುವಾರ ಸಭೆ ನಡೆಸಿದರು. ರೆಮಾಲ್ ಚಂಡಮಾರುತ ಪಶ್ಚಿಮ ಬಂಗಾಳ ಕರಾವಳಿಗಳ ಮತ್ತು ಬಾಂಗ್ಲಾದೇಶ ನಡುವೆ ಮಧ್ಯರಾತ್ರಿಯ ವೇಳೆಗೆ ಭೂಕುಸಿತವನ್ನು ಉಂಟು ಮಾಡಲಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಂಭವಿಸಲಿರುವ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಖುದ್ದು ಮೋದಿ ಅವರು ಪರಿಶೀಲಿಸಿದರು.

ಇದನ್ನೂ ಓದಿ: FIR Filed: ದೇಗುಲದಲ್ಲಿ ಸ್ತ್ರೀಯರು ಬಟ್ಟೆ ಬದಲಿಸೋ ಜಾಗದಲ್ಲಿ ಸಿಸಿಟಿವಿ ಇಟ್ಟ ಅರ್ಚಕ; ಕೀಚಕ ಕೃತ್ಯಕ್ಕೆ ಬಿತ್ತು ಕೇಸ್!

IMD ಪ್ರಕಾರ, ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಶನಿವಾರ ಸಂಜೆ ಚಂಡಮಾರುತವಾಗಿ ಮಾರ್ಪಟ್ಟಿದೆ. ಪಶ್ಚಿಮ ಬಂಗಾಳದ ಕ್ಯಾನಿಂಗ್ ಪಟ್ಟಣದ ದಕ್ಷಿಣಕ್ಕೆ 200 ಕಿಮೀ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ಇದು ಉತ್ತರದ ಕಡೆಗೆ ಚಲಿಸುತ್ತಿದ್ದು, ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೆಪುಪಾರ ನಡುವಿನ ಕರಾವಳಿಗೆ ಅಪ್ಪಳಿಸುತ್ತಲೇ ಇರುತ್ತದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

Continue Reading

ಆರೋಗ್ಯ

Colour In Food: ನಾವು ಸೇವಿಸುವ ಕಲ್ಲಂಗಡಿ ಸುರಕ್ಷಿತವೇ?; ಆಹಾರ ತಜ್ಞರು ಏನು ಹೇಳಿದ್ದಾರೆ?

ಕೆಂಪುಕೆಂಪಾಗಿರುವ ಕಲ್ಲಂಗಡಿ ಹಣ್ಣುಗಳಿಗೆ ನಿಜವಾಗಲೂ ಬಣ್ಣ ಬರಲು (Colour In Food) ಚುಚ್ಚು ಮದ್ದು ನೀಡಲಾಗುತ್ತದೆಯೇ? ಈ ಕುರಿತು ಆಹಾರ ತಜ್ಞರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Color In Food
Koo

ಮಾರುಕಟ್ಟೆಯಲ್ಲಿ (market) ಕೆಂಪು ಕೆಂಪಾಗಿರುವ (Colour In Food) ಕಲ್ಲಂಗಡಿ (Watermelon) ಹಣ್ಣನ್ನು ಕಂಡರೆ ಎಂಥವರ ಬಾಯಲ್ಲೂ ನೀರೂರುತ್ತದೆ. ಆದರೆ ಇತ್ತೀಚೆಗಂತೂ ಈ ಹಣ್ಣುಗಳಿಗೆ ಚುಚ್ಚು ಮದ್ದು (inject the harmful colour) ನೀಡಲಾಗುತ್ತದೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (social media) ಭಾರಿ ಚರ್ಚೆಯಾಗುತ್ತಿದೆ. ಆದರೆ ಇದು ನಿಜ ಹೌದೋ ಅಲ್ಲವೋ ಎನ್ನುವ ಕುರಿತು ಆಹಾರ ತಜ್ಞರು (Food expert) ಹೇಳುವುದೇನು ಗೊತ್ತೇ?

ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣುಗಳ ಬಗ್ಗೆ ಚಿಂತಿಸುವುದು ಬಿಡಿ. ಇದಕ್ಕೆ ಹಾನಿಕಾರಕ ಬಣ್ಣಗಳಿಂದ ಚುಚ್ಚಲಾಗುತ್ತದೆ ಎಂಬ ವರದಿ ಸರಿಯಲ್ಲ ಎಂದು ಆಹಾರ ಪರಿಣತರು ಹೇಳಿದ್ದಾರೆ.

ಹಣ್ಣು ಮಾರಾಟಗಾರರು ಕಲ್ಲಂಗಡಿಗಳಿಗೆ ರೆಡ್-ಬಿ ಎಂದು ಕರೆಯಲ್ಪಡುವ ಹಾನಿಕಾರಕ ಬಣ್ಣದ ಎರಿಥ್ರೋಸಿನ್- ಬಿ ಅನ್ನು ಚುಚ್ಚುತ್ತಾರೆ ಎನ್ನುವ ಮಾಧ್ಯಮ ವರದಿಗಳ ಕುರಿತು ಮಾಧ್ಯಮದವರನ್ನು ಹಿರಿಯ ಆಹಾರ ಪರಿಣತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅವರ ಪ್ರಕಾರ, ಕಲ್ಲಂಗಡಿ ಹಣ್ಣಿಗೆ ಒಂದೇ ಸ್ಥಳದಲ್ಲಿ ಬಣ್ಣವನ್ನು ಚುಚ್ಚುವುದರಿಂದ ನಿರ್ದಿಷ್ಟ ಭಾಗದಲ್ಲಿ ಮಾತ್ರ ಹಣ್ಣು ಕೆಂಪಾಗಲು ಸಾಧ್ಯ. ಸಂಪೂರ್ಣ ಹಣ್ಣು ಕೆಂಪಾಗುವುದಿಲ್ಲ. ಒಂದು ಸ್ಥಳದಲ್ಲಿ ಕಲ್ಲಂಗಡಿಗೆ ಬಣ್ಣವನ್ನು ಚುಚ್ಚಿದರೆ ಅಲ್ಲಿನ ಪ್ರದೇಶ ಮಾತ್ರ ಬಣ್ಣ ಪಡೆಯುತ್ತದೆ. ಆದರೆ ಮಾಧ್ಯಮಗಳಲ್ಲಿ ತೋರಿಸಿರುವ ಹಣ್ಣುಗಳು ಸಂಪೂರ್ಣವಾಗಿ, ಸಮವಾಗಿ ಕೆಂಪು ಬಣ್ಣದಲ್ಲಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು ಇದರಲ್ಲಿ ಫೋಟೋಶಾಪ್ ಕಾರ್ಯನಿರ್ವಹಿಸಿದೆ.


ಅನೇಕ ಮಂದಿ ಕಲ್ಲಂಗಡಿಯಲ್ಲಿ ಬಳಸುವ ಸಾಮಾನ್ಯ ಕಲಬೆರಕೆ ಎರಿಥ್ರೋಸಿನ್ ಬಿ ಎಂದು ಹೇಳಿದ್ದಾರೆ. ಇದು ಕೆಂಪು ಬಣ್ಣವಾಗಿದ್ದು ಅದು ಹಣ್ಣನ್ನು ಮಾಗಿದ ಮತ್ತು ರಸಭರಿತವಾಗಿ ಕಾಣುವಂತೆ ಮಾಡುತ್ತದೆ. ಇದು ಕಲ್ಲಂಗಡಿಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಇದರ ವಿಡಿಯೋ ಭಾರಿ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ನಲ್ಲಿ ಈ ಪ್ರಯೋಗ ಮಾಡುತ್ತಿರುವ ವ್ಯಕ್ತಿಯೊಬ್ಬ ಕಲ್ಲಂಗಡಿಗೆ ರಾಸಾಯನಿಕಗಳನ್ನು ಚುಚ್ಚುತ್ತಿರುವುದನ್ನು ಕಾಣಬಹುದು.


ಎರಿಥ್ರೋಸಿನ್ ಬಿ ಸೇವನೆ ಪರಿಣಾಮ

WebMD ಪ್ರಕಾರ, ಎರಿಥ್ರೋಸಿನ್ ಬಿ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಹಸಿವಾಗದಿರುವುದಕ್ಕೆ ಕಾರಣವಾಗಬಹುದು. ಪ್ರಸ್ತುತ ಸಂಶೋಧನೆ ಮತ್ತು ಆಹಾರ ವಿಜ್ಞಾನ ಜರ್ನಲ್‌ನಲ್ಲಿನ ಅಧ್ಯಯನವು ಈ ವಿಷಕಾರಿ ಸಂಯುಕ್ತವು ಗರ್ಭಿಣಿಯರ ಹೊಟ್ಟೆಯಲ್ಲಿರುವ ಭ್ರೂಣಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಈ ಚುಚ್ಚುಮದ್ದು ಹಾಕಿರುವ ಹಣ್ಣುಗಳು ವೇಗವಾಗಿ ಕೊಳೆಯಲು ಪ್ರಾರಂಭಿಸುತ್ತದೆ. ಹೀಗಾಗಿ ಇದು ಹೆಚ್ಚಿನ ಕಲ್ಲಂಗಡಿಗಳಿಗೆ ಬಳಸಲು ಸಾಧ್ಯವಿಲ್ಲ ಎಂದು ಆಹಾರ ಪರಿಣತರು ಹೇಳಿದ್ದಾರೆ.

ಚುಚ್ಚುಮದ್ದುಗಳನ್ನು ಹಾಕಿರುವ ಹಣ್ಣುಗಳಲ್ಲಿ ರಂಧ್ರಗಳು ಕಾಣಿಸುತ್ತವೆ. ಭಾರತದ ಬೇಸಿಗೆಯಲ್ಲಿ ಈ ಹಣ್ಣುಗಳು ವೇಗವಾಗಿ ಕೊಳೆಯಲು ಕಾರಣವಾಗುತ್ತವೆ. ಹೀಗಾಗಿ ಭಾರತೀಯ ರೈತರು ಈ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

Continue Reading

ದೇಶ

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Varanasi: ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಸ್ಪರ್ಧೆ ತೀವ್ರವಾದರೂ ಜನ ಮಾತ್ರ ಮೋದಿ ಅವರಿಗೇ ಬೆಂಬಲ ಎನ್ನುತ್ತಿದ್ದಾರೆ. ಅದರಲ್ಲೂ, ಕನ್ನಡಿಗರು ಏನೆಂದರು ಎಂಬ ಕುರಿತು ವಿಸ್ತಾರ ನ್ಯೂಸ್‌ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

VISTARANEWS.COM


on

Varanasi
Koo

ಪ್ರತ್ಯಕ್ಷದರ್ಶಿ ವರದಿ: ವಿಕ್ರಮ್

ವಾರಾಣಸಿ: ಲೋಕಸಭೆ ಚುನಾವಣೆಯು (Lok Sabha Election 2024) ಕೊನೆಯ ಹಂತ ತಲುಪಿದೆ. ಜೂನ್‌ 1ರಂದು ಏಳನೇ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆಗೆ ತೆರೆ ಬೀಳಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ (Varanasi) ಸ್ಪರ್ಧಿಸಿದ್ದು, ಸುಮಾರು 7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ವಾರಾಣಸಿಯಲ್ಲಿ ನೆಲೆಸಿರುವ ಕನ್ನಡಿಗರಂತೂ ಮೋದಿ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಹೇಳಿದ್ದೇನು? ಇಲ್ಲಿದೆ ‌‘ವಿಸ್ತಾರ ನ್ಯೂಸ್‌’ ಗ್ರೌಂಡ್‌ ರಿಪೋರ್ಟ್.‌

“ನಾವು ಬೆಂಗಳೂರಿನಿಂದ ಕಾಶಿಗೆ ಬಂದು ನೆಲೆಸಿದ್ದೇವೆ. 2012ರ ಕೊನೆಯಲ್ಲಿ ನಾವು ಇಲ್ಲಿಗೆ ಬಂದೆವು. ನಾವು ಇಲ್ಲಿಗೆ ಬಂದಾಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ನಾವು ಎರಡೂ ಸರ್ಕಾರಗಳನ್ನು ನೋಡಿದ ಕಾರಣ ನಮಗೆ ನಿಜವಾದ ವ್ಯತ್ಯಾಸ ಗೊತ್ತು. ಮೊದಲಿಗೆ ಇಲ್ಲಿ ವಿದ್ಯುತ್‌ ವೋಲ್ಟೇಜ್‌ ಇರಲಿಲ್ಲ. ಈಗ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಗಂಗೆಯು ಶುದ್ಧಗೊಂಡಿದ್ದಾಳೆ. ಇಲ್ಲಿ ಗಲಭೆಗಳು ಸಂಪೂರ್ಣವಾಗಿ ನಿಂತಹೋಗಿವೆ. ಒಂದೇ ಒಂದು ಗಲಾಟೆ ನಡೆಯುವುದಿಲ್ಲ. ಕಳೆದ 10 ವರ್ಷಗಳಲ್ಲಿ ಅಪಾರ ಅಭಿವೃದ್ಧಿಯಾಗಿದೆ” ಎಂಬುದಾಗಿ ಕನ್ನಡಿಗರೊಬ್ಬರು ಮಾಹಿತಿ ನೀಡಿದ್ದಾರೆ.

“ಸಮಾಜದಲ್ಲಿ ಧರ್ಮ ಇದ್ದಾಗಲೇ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿಯೇ, ನರೇಂದ್ರ ಮೋದಿ ಅವರು ಯಾವುದೇ ಗಲಾಟೆ, ಗದ್ದಲ ಇಲ್ಲದೆ, 150 ಎಕರೆ ಜಾಗವನ್ನು ಪಡೆದುಕೊಂಡು, ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಿಸಿದ್ದಾರೆ. ಹಾಗಾಗಿ, ಮೋದಿ ಅವರು ಲಕ್ಷಾಂತರ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ” ಎಂಬುದಾಗಿ ಹೇಳಿದ್ದಾರೆ. ಇನ್ನೊಬ್ಬ ಕನ್ನಡಿಗ ಮಾತನಾಡಿ, “ನಾನು ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೇನೆ. ನನ್ನ ಮೊದಲ ವೋಟು ಮೋದಿ ಅವರಿಗೆ” ಎಂದು ಯುವಕ ಹೇಳಿದ್ದಾರೆ.

ಮೈಸೂರಿನವರಾದ, 1984ರಲ್ಲಿಯೇ ವಾರಾಣಸಿಗೆ ತೆರಳಿದ, ಸ್ವಾಮೀಜಿ ಆಗಿರುವ ಮತ್ತೊಬ್ಬ ಕನ್ನಡಿಗ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದಾರೆ. “ಕಳೆದ 40 ವರ್ಷಗಳಿಂದ ಕಾಶಿಯಲ್ಲಿಯೇ ನೆಲೆಸಿದ್ದೇನೆ. ಮೊದಲು ಸ್ವಚ್ಛತೆ, ಅಭಿವೃದ್ಧಿಯಾಗಿರಲಿಲ್ಲ. ಕಾಶಿಗೆ ಶೇ.90ರಷ್ಟು ಜನ ಬರುವುದು ದಕ್ಷಿಣ ಭಾರತದಿಂದಲೇ. ಈಗ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಘಾಟ್‌ಗಳನ್ನು ಸ್ವಚ್ಛಗೊಳಿಸಿ, ಭಕ್ತರಿಗೆ ಅನುಕೂಲ ಮಾಡಲಾಗಿದೆ. ಮೋದಿ ಅವರಿರದಿದ್ದರೆ ವಾರಾಣಸಿ ನಾಶವಾಗುತ್ತಿತ್ತು” ಎಂದಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಕಾಶಿಯ ಬಹುತೇಕ ನಾಗರಿಕರು ಕೂಡ ಮೋದಿ ಅವರ ಆಡಳಿತವನ್ನು ಮೆಚ್ಚಿದ್ದಾರೆ.

ಮೋದಿ ವಿರುದ್ಧ ಕಣಕ್ಕಿಳಿದ ನಾಯಕರಿವರು

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Continue Reading
Advertisement
EPF Death Claim
ಮನಿ ಗೈಡ್13 mins ago

EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ

IPL 2024
ಕ್ರೀಡೆ21 mins ago

IPL 2024 : ಗೆಲ್ಲಬೇಕಾಗಿರುವುದು ಐಪಿಎಲ್​ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು

Dhruva Sarja Entry to Bollywood in brother Role
ಸ್ಯಾಂಡಲ್ ವುಡ್28 mins ago

Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

Toothpaste For Cleaning
ಲೈಫ್‌ಸ್ಟೈಲ್30 mins ago

Toothpaste For Cleaning: ಅಡುಗೆ ಮನೆ ಕೊಳೆಯಾಗಿದೆಯೇ? ಸ್ವಚ್ಛತೆಗೆ ಟೂತ್‌ಪೇಸ್ಟ್‌ ಬಳಸಿ!

Cyclone Remal
ದೇಶ37 mins ago

Cyclone Remal: ʼರೆಮಾಲ್‌ʼ ಅಬ್ಬರಕ್ಕೆ ಬಂಗಾಳ, ಬಾಂಗ್ಲಾ ತತ್ತರ-ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣ

child death belagavi
ಕ್ರೈಂ47 mins ago

Child Death: ಆಟವಾಡುತ್ತ ಸಂಪ್‌ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ, ಮಳೆಗೆ ಮರ ಬಿದ್ದು ಮಹಿಳೆ ಸಾವು

IPL 2024
ಕ್ರೀಡೆ49 mins ago

IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​, ಇಲ್ಲಿದೆ ವಿಡಿಯೊ

IPL 2024
ಕ್ರೀಡೆ1 hour ago

IPL 2024 : ‘ಪ್ಲೇಯರ್​​ ಆಫ್​ ದಿ ಟೂರ್ನಮೆಂಟ್​’ ಸೇರಿ ನಾನಾ ಪ್ರಶಸ್ತಿ ವಿಜೇತ ಪಟ್ಟಿ ಇಲ್ಲಿದೆ

Color In Food
ಆರೋಗ್ಯ1 hour ago

Colour In Food: ನಾವು ಸೇವಿಸುವ ಕಲ್ಲಂಗಡಿ ಸುರಕ್ಷಿತವೇ?; ಆಹಾರ ತಜ್ಞರು ಏನು ಹೇಳಿದ್ದಾರೆ?

israel palestine war12
ವಿದೇಶ1 hour ago

Israel Palestine War: ಇಸ್ರೇಲ್‌ ಪ್ರತೀಕಾರದ ದಾಳಿ, 35 ಪ್ಯಾಲೆಸ್ತೀನೀಯರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು16 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌