Actor Prabhas | ಸಲ್ಮಾನ್‌ ಖಾನ್‌ ಮದುವೆ ಆದ ನಂತರ ನನ್ನ ಮದುವೆ ಎಂದ ನಟ ಪ್ರಭಾಸ್‌! - Vistara News

ಟಾಲಿವುಡ್

Actor Prabhas | ಸಲ್ಮಾನ್‌ ಖಾನ್‌ ಮದುವೆ ಆದ ನಂತರ ನನ್ನ ಮದುವೆ ಎಂದ ನಟ ಪ್ರಭಾಸ್‌!

ಪ್ರಭಾಸ್ (Actor Prabhas )​ ಪಾಲ್ಗೊಂಡಿರುವ ಈ ಸಂಚಿಕೆ ಡಿಸೆಂಬರ್​​ 30ರಂದು ‘ಆಹಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಪ್ರಭಾಸ್​ ಜತೆ ನಟ ಗೋಪಿಚಂದ್​ ಕೂಡ ಸಾಥ್​ ನೀಡಿದ್ದಾರೆ.

VISTARANEWS.COM


on

Actor Prabhas
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗುತ್ತಿದ್ದು, ಈ ಬಾರಿ ಪ್ರಭಾಸ್‌ (Actor Prabhas) ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್‌ ತಮ್ಮ ಮದುವೆ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದು, ಕಾರ್ಯಕ್ರಮದ ಪ್ರೋಮೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಂದಮೂರಿ ಅವರು ಪ್ರಭಾಸ್‌ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಪ್ರಭಾಸ್‌ ಮಜವಾಗಿ ಉತ್ತರ ನೀಡಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರು ಪ್ರಭಾಸ್‌ ಅವರಿಗೆ ಮದುವೆ ಯಾವಾಗ ಎಂದು ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ಪ್ರಭಾಸ್‌ ʻʻಸಲ್ಮಾನ್‌ ಖಾನ್‌ ಅವರು ಮದುವೆಯಾದ ನಂತರ ಮದುವೆ ಆಗುತ್ತೇನೆʼʼ ಎಂದು ಉತ್ತರ ನೀಡಿದ್ದಾರೆ. ನಟ ಗೋಪಿಚಂದ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆಗಾಗ ಪ್ರಭಾಸ್‌ ಅವರ ಕಾಲೆಳೆದಿದ್ದಾರೆ. ಇತ್ತೀಚೆಗೆ ನಿಧನರಾದ ಮಹೇಶ್ ಬಾಬು ಅವರ ತಂದೆ ಘಟ್ಟಮನೇನಿ ಶಿವರಾಮ ಕೃಷ್ಣ ಅವರ ಬಗ್ಗೆಯೂ ಕಾರ್ಯಕ್ರಮದಲ್ಲಿ ಪ್ರಭಾಸ್ ಪ್ರಸ್ತಾಪಿಸಿದ್ದಾರೆ. ಪ್ರಭಾಸ್​ ಪಾಲ್ಗೊಂಡಿರುವ ಈ ಸಂಚಿಕೆ ಡಿಸೆಂಬರ್​​ 30ರಂದು ‘ಆಹಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಪ್ರಭಾಸ್​ ಜತೆ ನಟ ಗೋಪಿಚಂದ್​ ಕೂಡ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್‌: ನಟ ನಂದಮೂರಿ ಬಾಲಕೃಷ್ಣ

https://twitter.com/Bhaiophysicist/status/1604103806639284226?s=20&t=WdpT2Z010lv7xXQ9U8-i3Q

ಫ್ರಭಾಸ್‌-ಕೃತಿ ಸೇನನ್‌ ಡೇಟಿಂಗ್‌ ವದಂತಿ!
ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ ಮೂಲಕ ಪ್ರಭಾಸ್ ಅವರ ಪ್ರೇಮ ಜೀವನದ ಬಗ್ಗೆಯೂ ಮಾತನಾಡಿದ್ದರೆ. ಈ ಹಿಂದೆ ಅಷ್ಟೇ ನಟ ಪ್ರಭಾಸ್‌ ಹಾಗೂ ಬಾಲಿವುಡ್‌ ನಟಿ ಕೃತಿ ಸೇನನ್‌ ಪ್ರೀತಿಯ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಬಾಲಿವುಡ್‌ನ ಸ್ಟಾರ್ ನಟ ವರುಣ್ ಧವನ್ ಕೆಲವು ದಿನಗಳ ಹಿಂದಷ್ಟೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಪ್ರಭಾಸ್ ಹೃದಯದಲ್ಲಿ ಒಬ್ಬರು ಡಾರ್ಲಿಂಗ್ ಇದ್ದಾರೆಂದು ಹೇಳಿಕೆ ನೀಡಿದ್ದರು. ಬಳಿಕ ನಟಿ ಈ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದರು. ಇನ್‌ಸ್ಟಾ ಪೋಸ್ಟ್‌ ಮೂಲಕ ಈ ಸುದ್ದಿಗಳ ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದರು.

https://twitter.com/NusratArfah/status/1604476844732215296?s=20&t=WdpT2Z010lv7xXQ9U8-i3Q

ಕೃತಿ ಸೇನನ್‌ ಪೋಸ್ಟ್‌ನಲ್ಲಿ ʻʻಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ (Varun Dhawan) ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈ ರೂಮರ್ಸ್‌ ಖಂಡಿವಾಗಿಯೂ ಬೆಸ್‌ಲೆಸ್‌ʼʼಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ | OTT Release This Week | ಚಿತ್ರಮಂದಿರಗಳಲ್ಲಿ ಪ್ರಬಲ ಪೈಪೋಟಿ ನೀಡಿದ ಸಿನಿಮಾಗಳು ಈ ವಾರ ಒಟಿಟಿಯಲ್ಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

Shobha Shetty: ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

VISTARANEWS.COM


on

Shobha Shetty car gift to yashwanth birthday
Koo

‘ಅಗ್ನಿಸಾಕ್ಷಿ’ (Shobha Shetty) ಹಾಗೂ ‘ನಮ್ಮ ರುಕ್ಕು’ ಧಾರಾವಾಹಿಗಳಲ್ಲಿ ನಟಿಸಿದ ಶೋಭಾ ಶೆಟ್ಟಿ ಸದ್ಯ ತೆಲುಗು ವೀಕ್ಷಕರ ಮನ ಗೆದ್ದಿದ್ದಾರೆ.

ನಟ ಯಶ್ವಂತ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಲು ಆಕೆ ಮುಂದಾಗಿದ್ದಾರೆ. ಈಗಾಗಲೇ ಇಬ್ಬರು ಮದುವೆ ನಿಶ್ಚಯವಾಗಿದೆ.

ಶೋಭಾ ಈಗಾಗಲೇ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. ಬೀಸ್ಟ್ ಎಕ್ಸ್‌ಯುವಿ 700 ಕಾರ್‌ ಅನ್ನು ಈ ವರ್ಷ ಯಶ್ವಂತ್ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಆಗಿ ಕೊಟ್ಟಿದ್ದಾರೆ.

ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿಯ ತನು ಪಾತ್ರ ಆಕೆಗೆ ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

Continue Reading

ಕರ್ನಾಟಕ

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Kalki 2898 AD: ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

VISTARANEWS.COM


on

Kalki 2898 AD Final Trailer Released
Koo

ಬೆಂಗಳೂರು: ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ (Kalki 2898 AD) ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

ಟ್ರೇಲರ್‌ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್.‌ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್‌ ಆಗಿಯೇ ಮಿಂಚು ಹರಿಸಿದ್ದಾರೆ.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

ʼಕಲ್ಕಿ 2898 ADʼ ಚಿತ್ರದ ಟ್ರೇಲರ್‌ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯ ವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌

ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ.

ಇದನ್ನೂ ಓದಿ: Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ ಮತ್ತು ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‌

Continue Reading

ಬಾಲಿವುಡ್

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!

Amitabh Bachchan: ಅಮಿತಾಭ್‌ ಅವರು ಅಶ್ವಿನಿ ದತ್ ಅವರ ಕಾಲಿಗೆ ನಮಸ್ಕರಿಸಿದ್ದು. ಅಮಿತಾಭ್‌ (Amitabh Bachchan) ಅವರೇ ಅಶ್ವಿನಿ ದತ್ ಅವರಿಗೆ ಕಾಲಿಗೆ ನಮಸ್ಕರಿಸಿದ್ದು ಹಲವರಿಗೆ ಅಚ್ಚರಿ ತಂದಿದೆ. ಬಿಗ್​ ಬಿ ಕೂಡ ತಮ್ಮ ವೃತ್ತಿಜೀವನದಲ್ಲಿ ಬೇರೆ ನಿರ್ಮಾಪಕರ ಕಾಲಿಗೆ ನಮಸ್ಕರಿಸಿದ್ದನ್ನು ನಾನು ನೋಡಿಲ್ಲ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

VISTARANEWS.COM


on

Amitabh Bachchan touched Aswini Dutt feet
Koo

ಬೆಂಗಳೂರು: ನಾಗ್ ಅಶ್ವಿನ್ ಅವರ ಕಲ್ಕಿ 2898 ADಯ (Kalki 2898 AD) ಪ್ರೀ-ರಿಲೀಸ್ ಈವೆಂಟ್ ಮುಂಬೈನಲ್ಲಿ ನಡೆಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಒಂದು ಕ್ಷಣ ಎಲ್ಲರ ಗಮನ ಸೆಳೆದಿದ್ದು, ಅಮಿತಾಭ್‌ ಅವರು ಅಶ್ವಿನಿ ದತ್ ಅವರ ಕಾಲಿಗೆ ನಮಸ್ಕರಿಸಿದ್ದು. ಅಮಿತಾಭ್‌ (Amitabh Bachchan) ಅವರೇ ಅಶ್ವಿನಿ ದತ್ ಅವರಿಗೆ ಕಾಲಿಗೆ ನಮಸ್ಕರಿಸಿದ್ದು ಹಲವರಿಗೆ ಅಚ್ಚರಿ ತಂದಿದೆ.

ನಿರ್ಮಾಪಕ ಅಶ್ವಿನ್‌ ವೇದಿಕೆಗೆ ಬಂದಾಗ, ಅಮಿತಾಭ್‌ ಅವರ ಬಗ್ಗೆ ಮಾತನಾಡಿ, “ಅಶ್ವಿನಿ ದತ್ ಹಾಗೂ ಅವರ ಇಬ್ಬರು ಪುತ್ರಿಯರು (ಸ್ವಪ್ನಾ, ಪ್ರಿಯಾಂಕಾ) ವೈಜಯಂತಿ ಫಿಲ್ಮ್ಸ್ ಮಾಲೀಕರಾಗಿದ್ದಾರೆ. ಅಶ್ವಿನಿ ದತ್ ತುಂಬ ಸರಳ, ವಿನಮ್ರ ವ್ಯಕ್ತಿ. ಪ್ರತಿ ಬಾರಿ ಶೂಟಿಂಗ್‌ ಸೆಟ್‌ಗೆ ಅವರು ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲʼʼ ಎಂದು ಅಶ್ವಿನ್‌ ಅವರ ಪಾದಕ್ಕೆ ನಮಸ್ಕರಿಸಿದರು ಅಮಿತಾಭ್‌.

ರಾಮ್ ಗೋಪಾಲ್ ವರ್ಮಾ ಈ ಬಗ್ಗೆ ಟ್ವೀಟ್‌ ಮಾಡಿ ʻಅಮಿತಾಭ್​ ಬಚ್ಚನ್​ ಅವರಿಂದ ಈ ಗೌರವ ಪಡೆದಿದ್ದು ಅಶ್ವಿನಿ ದತ್​ ಅವರ ಸಾಧನೆ. ಎನ್​ಟಿಆರ್​ ಅವರಿಂದ ಆರಂಭಗೊಂಡು, ಇಂದಿನ ಯುವ ಹೀರೋಗಳ ತನಕ ಯಾರೂ ಕೂಡ ಈ ರೀತಿ ಮಾಡಿಲ್ಲ . ಬಿಗ್​ ಬಿ ಕೂಡ ತಮ್ಮ ವೃತ್ತಿಜೀವನದಲ್ಲಿ ಬೇರೆ ನಿರ್ಮಾಪಕರ ಕಾಲಿಗೆ ನಮಸ್ಕರಿಸಿದ್ದನ್ನು ನಾನು ನೋಡಿಲ್ಲ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

ಅಶ್ವಿನಿ ದತ್ ಟಾಲಿವುಡ್‌ನ ಅತಿ ದೊಡ್ಡ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅವರ ವೃತ್ತಿಜೀವನದಲ್ಲಿ, ಎನ್‌ಟಿಆರ್, ಎಎನ್‌ಆರ್, ಕೃಷ್ಣ, ಸೋಭನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ನಾಗಾರ್ಜುನ, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಟಿಸಿದ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಹಾಗೂ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಟ್ರೇಲರ್‌ನಲ್ಲಿ ಸಿನಿಮಾದ ಪಂಚ್‌ ಡೈಲಾಗ್‌, ಫೈಟ್ಸ್‌ ನೋಡಿ ಅಭಿಮಾನಿಗಳು ದಶಕದ ಟ್ರೇಲರ್‌ ಎಂದು ಹೇಳುತ್ತಿದ್ದಾರೆ. ಚಿತ್ರದ ಟ್ರೇಲರ್‌ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್‌ ಸೋತಿಲ್ಲ ಎಂದು ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹೇಳುವ ಡೈಲಾಗ್‌ ಟ್ರೇಲರ್‌ನ ಹೈಲೆಟ್‌ ಆಗಿದೆ.


Continue Reading

ಟಾಲಿವುಡ್

Aishwarya Arjun: ಪತಿ ಜತೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ ಐಶ್ವರ್ಯಾ ಸರ್ಜಾ!

Aishwarya Arjun: ಐಶ್ವಯಾ ಅರ್ಜುನ್​ 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ನಟಿಸಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಸಿನಿಮಾ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು. ಉಮಾಪತಿ ಅವರು ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಪುತ್ರ ಹಾಗೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.

VISTARANEWS.COM


on

Aishwarya Arjun best evening with umapathy ramaiah
Koo

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಸರ್ಜಾ (Aishwarya Arjun) ಅವರ ವಿವಾಹ ನಟ ಉಮಾಪತಿ ರಾಮಯ್ಯ ಅವರೊಂದಿಗೆ ಚೆನ್ನೈನಲ್ಲಿ ಸೋಮವಾರ (ಜೂನ್​ 10ರಂದು) ನಡೆದಿತ್ತು. ಇದೀಗ ಮದುವೆ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪತಿ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಉಮಾಪತಿ ಅವರು ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಪುತ್ರ ಹಾಗೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.  ಐಶ್ವಯಾ ಅರ್ಜುನ್​ 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ನಟಿಸಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಸಿನಿಮಾ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.
ಸಂಗೀತ ಕಾರ್ಯಕ್ರಮದಲ್ಲಿ ಉಮಾಪತಿ ಮತ್ತು ನಟಿ ಐಶ್ವರ್ಯಾ ಲೈಟ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಮಸ್ತ್ ಆಗಿ ಹೆಜ್ಜೆ ಹಾಕಿದೆ ಜೋಡಿ. ಪಾರ್ಟಿ ಫೋಟೋ ಶೇರ್ ಮಾಡಿ ಸುಂದರ ಸಂಜೆ ಎಂದು ನಟಿ ಅಡಿಬರಹ ನೀಡಿದ್ದಾರೆ.

ಇದನ್ನೂ ಓದಿ: Dolly Dhananjay: ಮೈಸೂರಿನಲ್ಲಿ ಡಾಲಿ ಧನಂಜಯ್‌ ಅಭಿನಯದ ‘ಕೋಟಿ’ ಸಿನಿಮಾ ವೀಕ್ಷಿಸಲಿರುವ ಪ್ರತಾಪ್ ಸಿಂಹ!

ಜೂನ್ 14ರಂದು ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ಅದ್ಧೂರಿಯಾಗಿ ಮಾಡಲಾಯ್ತು. ಈ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಉಪೇಂದ್ರ, ರಜನಿಕಾಂತ್, ಶಿವಕಾರ್ತಿಕೇಯನ್, ನಟಿ ಸ್ನೇಹಾ, ವಿಜಯ್ ಸೇತುಪತಿ, ಪ್ರಭುದೇವ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.

2023ರ ಅಕ್ಟೋಬರ್ 27 ರಂದು ಈ ಇವರಿಬ್ಬರ ಎಂಗೇಜ್​ಮೆಂಟ್​ ಇದೇ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮದುವೆಯಾಗಲು ನಿರ್ಧರಿಸಿದ ಅವರು ಕಳೆದ ವರ್ಷ ಎಂಗೇಜ್​ಮೆಂಟ್ ಮಾಡಿಕೊಂಡು ಇದೀಗ ಮದುವೆಯಾಗಿದ್ದಾರೆ. ಐಶ್ವರ್ಯಾ ಮತ್ತು ಉಮಾಪತಿ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯಿತ್ತು. ಬಳಿಕ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು. ಐಶ್ವಯಾ ಅರ್ಜುನ್​ 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ನಟಿಸಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು.
Continue Reading
Advertisement
Suraj Revanna Case
ಕರ್ನಾಟಕ12 mins ago

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಪ್ರಜ್ವಲ್‌ ರೇವಣ್ಣ ಅರೆಸ್ಟ್‌

Doodle V3 E-Cycle
ಆಟೋಮೊಬೈಲ್19 mins ago

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

Suraj Revanna Case
ಕರ್ನಾಟಕ41 mins ago

Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Empty Stomach Foods
ಆರೋಗ್ಯ1 hour ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ2 hours ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ3 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ3 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ8 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌