Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?; ಇಲ್ಲಿದೆ ವರ್ಷ ಭವಿಷ್ಯ - Vistara News

ಪ್ರಮುಖ ಸುದ್ದಿ

Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?; ಇಲ್ಲಿದೆ ವರ್ಷ ಭವಿಷ್ಯ

ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಬರಲಿರುವ ವರ್ಷ ಹೇಗಿರಲಿದೆ? (Yearly Horoscope 2023), ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ನಿಮ್ಮ ರಾಶಿಗಿರುವ ಶುಭಾಶುಭ ಫಲಗಳೇನು? ತಿಳಿಯಲು ಇಲ್ಲಿ ಓದಿ.

VISTARANEWS.COM


on

Yearly Horoscope 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Yearly Horoscope 2023

ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು
ಇದು 2023ನೇ ಇಸವಿಯ ವರ್ಷ ಭವಿಷ್ಯ (Yearly Horoscope 2023). ಅಂದರೆ ಜನವರಿ 1, 2023ರಿಂದ ಡಿಸೆಂಬರ್ 31, 2023ರ ತನಕದ ಹನ್ನೆರಡು ತಿಂಗಳು ಅನ್ವಯ ಆಗುವಂಥ ಒಂದು ವರ್ಷದ ಅವಧಿಯ ಶುಭಾಶುಭ ಫಲಗಳ ಮಾಹಿತಿ. ಶುಭಕೃತ್ ಹಾಗೂ ಶೋಭಕೃತ್ ಸಂವತ್ಸರದ ಫಲಗಳು ಕ್ರಮವಾಗಿ ಮೂರು ತಿಂಗಳು ಹಾಗೂ ಒಂಬತ್ತು ತಿಂಗಳು ಅನ್ವಯ ಆಗುವಂಥ ಗೋಚಾರ ಫಲ ಇಲ್ಲಿದೆ.

ಈ ಬಗ್ಗೆ ತಿಳಿದುಕೊಳ್ಳುವ ಮೊದಲಿಗೆ ಗ್ರಹಗಳ ಗೋಚಾರದ (ಗ್ರಹ ಸಂಚಾರ) ಕುರಿತು ಸ್ವಲ್ಪ ಮಾಹಿತಿ ತಿಳಿದುಕೊಳ್ಳೊಣ. ನಿಮಗೆ ಗೊತ್ತಿರಲಿ, ಇದು ಯುಗಾದಿ ಭವಿಷ್ಯ ಅಲ್ಲ. ಹೊಸ ವರ್ಷ (ಕ್ಯಾಲೆಂಡರ್‌ ಪದ್ಧತಿಯಲ್ಲಿ) 2023ರ ಜನವರಿಯಿಂದ ಡಿಸೆಂಬರ್ ಎಂಬ ಲೆಕ್ಕಕ್ಕೆ ತೆಗೆದುಕೊಂಡು ನೀಡಲಾಗುತ್ತಿದೆ.

ಜ್ಯೋತಿಷ ರೀತಿಯಾಗಿ ಎರಡೂವರೆ ವರ್ಷಕ್ಕೆ ಒಮ್ಮೆ (ಸಾಮಾನ್ಯ ಪರಿಕ್ರಮದಲ್ಲಿ, ಅಂದರೆ ವಕ್ರೀ ಹಾಗೂ ಮುಂದಿನ ಮನೆಗಳಿಗೆ ವೇಗವಾಗಿ ಚಲಿಸುವ ಅವಧಿ ಹೊರತು ಪಡಿಸಿ) ಶನಿ ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತದೆ. ಅಂದರೆ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಇನ್ನು ಗುರು ಗ್ರಹ ಸಾಧಾರಣವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ. ಛಾಯಾ ಗ್ರಹಗಳು ಎನಿಸಿಕೊಂಡ ರಾಹು- ಕೇತುಗಳ ಸಂಚಾರ ಅವಧಿ ಹದಿನೆಂಟು ತಿಂಗಳು. ಇವುಗಳನ್ನು ಸಮಸಪ್ತಕ ಎನ್ನಲಾಗುತ್ತದೆ, ಅಪ್ರದಕ್ಷಿಣೆಯಾಗಿ ಏಳು ಸ್ಥಾನಗಳ ಅಂತರದಲ್ಲಿ ಒಂದು ರಾಶಿಯಲ್ಲಿ ಒಂದೂವರೆ ವರ್ಷದಂತೆ ಸಂಚರಿಸುತ್ತವೆ. ಈ ಪ್ರಮುಖ ಗ್ರಹ ಸಂಚಾರದ ವಿವರ ಜನವರಿ ಹಾಗೂ ಡಿಸೆಂಬರ್ ಮಧ್ಯೆ ಹೀಗಿದೆ:

Yearly Horoscope 2023

ಶನಿ: ಜನವರಿ 1, 2023ರಿಂದ ಜನವರಿ 17, 2023ರ ತನಕ ಮಕರ, ಜನವರಿ 17, 2023ರಿಂದ ಡಿಸೆಂಬರ್ 31, 2023ರ ತನಕ ಕುಂಭ ರಾಶಿಯಲ್ಲಿ ಸಂಚಾರ.
ಗುರು: ಜನವರಿ 1, 2023ರಿಂದ ಏಪ್ರಿಲ್ 22, 2023ರ ತನಕ ಮೀನ, ಏಪ್ರಿಲ್ 22, 2023ರಿಂದ ಡಿಸೆಂಬರ್ 31, 2023ರ ತನಕ ಮೇಷ ರಾಶಿಯಲ್ಲಿ ಸಂಚಾರ.
ರಾಹು- ಕೇತು: ಜನವರಿ 1, 2023ರಿಂದ ಅಕ್ಟೋಬರ್ 30, 2023ರ ತನಕ ಮೇಷ, ಅಕ್ಟೋಬರ್ 30, 2023ರಿಂದ ಡಿಸೆಂಬರ್ 31, 2023ರ ತನಕ ಮೀನ ರಾಶಿಯಲ್ಲಿ ಸಂಚಾರ.

ಇಲ್ಲಿರುವುದು ಗೋಚಾರ ಫಲ ಮಾತ್ರ. ಅಂದರೆ ಹನ್ನೆರಡು ರಾಶಿಗಳಿಗೆ ಗ್ರಹ ಸಂಚಾರದ ಆಧಾರದಲ್ಲಿ ಪ್ರಭಾವ ಹೇಗಿರುತ್ತದೆ ಎಂಬುದರ ವಿವರಣೆ ಮಾತ್ರ. ನಿಮ್ಮ ಜನ್ಮ ಜಾತಕದಲ್ಲಿನ ಗ್ರಹ ಸ್ಥಿತಿ, ದಶಾ ಸಂಧಿ ಕಾಲ, ದಶಾ- ಭುಕ್ತಿಗಳ ಬದಲಾವಣೆ ಈ ಎಲ್ಲವೂ ಮುಖ್ಯ ಆಗುತ್ತದೆ. ಆದ್ದರಿಂದ ಇಲ್ಲಿ ನೀಡುವ ಫಲಗಳು ಸಂಪೂರ್ಣವಾಗಿ ಆಗಬೇಕು ಅಂತೇನೂ ಇಲ್ಲ. ಆದರೆ ಪ್ರಭಾವ ಖಂಡಿತಾ ಇರುತ್ತದೆ.

Yearly Horoscope 2023

ಮೇಷ : ಕುಜ ಗ್ರಹ ಅಧಿಪತಿಯಾದ ನಿಮಗೆ ಹುಟ್ಟಿದ ಸಮಯದಲ್ಲಿ ಶನಿ ಗ್ರಹವು ಸ್ಥಿತಿ ಉತ್ತಮವಾಗಿ ಇದ್ದಲ್ಲಿ ಹಾಗೂ ಉತ್ತಮ ದಶಾ- ಭುಕ್ತಿ ಕಾಲ ಇದಾಗಿದ್ದಲ್ಲಿ ಉತ್ತಮವಾದ ವರ್ಷಗಳಲ್ಲಿ ಇದೂ ಒಂದು ಎನಿಸಿಕೊಳ್ಳಲಿದೆ. ಜನವರಿಯಲ್ಲಿ ಹನ್ನೊಂದನೇ ಮನೆಯ ಶನಿ ಸಂಚಾರದ ವೇಳೆ ಲಾಭ ಕಾಣುತ್ತೀರಿ. ಆಸ್ತಿ ಲಾಭ, ವಾಹನ ಲಾಭ, ಸಾಮಾಜಿಕವಾಗಿ ಪ್ರಭಾವಿಗಳ ಜತೆಗೆ ಸಂಪರ್ಕ ಹಾಗೂ ಆ ಮೂಲಕವಾಗಿ ಸಾಮಾಜಿಕವಾಗಿ, ವೈಯಕ್ತಿಕವಾಗಿ ಲಾಭ, ವರ್ತಕರು- ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆ. ಇನ್ನು ಹನ್ನೆರಡು ಹಾಗೂ ಜನ್ಮ ರಾಶಿಯಲ್ಲಿ ಗುರು ಸಂಚಾರ ಇರುವಾಗ ಆರೋಗ್ಯ ಕಡೆಗೆ ಹಾಗೂ ನಿಮ್ಮ ವೆಚ್ಚದ ಬಗ್ಗೆ ಲಕ್ಷ್ಯ ನೀಡಿ. ಡಯಾಬಿಟೀಸ್, ಬಿಪಿ ಸಮಸ್ಯೆ ಇರುವವರು ಆಹಾರ- ಪಥ್ಯದ ಕಡೆಗೆ ನಿಗಾ ನೀಡಿ. ಸೂಕ್ತ ಆಹಾರ- ಅಗತ್ಯ ಪ್ರಮಾಣದ ನೀರು ಸೇವನೆ ಮಾಡಿ.
ನೀವಾಗಿಯೇ ಬಲಿಷ್ಠರ ಜತೆಗೆ ವೈರತ್ವ ಮಾಡಿಕೊಳ್ಳಬೇಡಿ. ಇನ್ನು ವರ್ಷದ ಹತ್ತು ತಿಂಗಳು ನಿಮ್ಮ ಜನ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಸಂಚರಿಸುವಾಗ ದುರ್ಜನರ ಸಹವಾಸ, ಅಹಂಭಾವ ಇರುತ್ತದೆ. ಇದರಿಂದ ನಿಮ್ಮ ಆತ್ಮೀಯರೇ ದೂರ ಆಗುವ, ಸಂಸಾರದಲ್ಲಿ -ಪಾಲುದಾರಿಕೆ ವ್ಯವಹಾರದಲ್ಲಿ ಜಗಳ ಆಗಲಿದೆ. ಮಾತಿನಲ್ಲಿ ಎಚ್ಚರ ಇರಲಿ. ವರ್ಷದ ಕೊನೆ ಎರಡು ತಿಂಗಳು ಆದಾಯ- ವ್ಯಯ ಅಲ್ಲಿಂದ ಅಲ್ಲಿಗೆ ಎಂಬಂತೆ ಇರುತ್ತದೆ.

Yearly Horoscope 2023

ವೃಷಭ: ಶುಕ್ರ ಗ್ರಹ ನಿಮ್ಮ ರಾಶಿಗೆ ಅಧಿಪತಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುವಾಗ ವೃತ್ತಿಪರರು- ಉದ್ಯೋಗಿಗಳಾದವರಿಗೆ ಅಷ್ಟೇನೂ ಸಮಾಧಾನದ ಸಮಯ ಅಲ್ಲ. ನಿಮ್ಮ ಪಾಲಿಗೆ ಬರಬೇಕಾದ ಮೆಚ್ಚುಗೆ, ಪ್ರಮೋಷನ್, ಸಂಬಳದಲ್ಲಿನ ಹೆಚ್ಚಳವು ಇನ್ನ್ಯಾರದೋ ಪಾಲಾಗುತ್ತದೆ. ನೀವು ಸದುದ್ದೇಶದಿಂದಲೇ ಹೇಳಿದ ವಿಚಾರವನ್ನು ಮತ್ತೊಂದು ಬಗೆಯಲ್ಲಿ ಗ್ರಹಿಸಿ, ಅಥವಾ ಕಥೆ ಕಟ್ಟಿ ಹೇಳಿ ನಿಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ಆಗುತ್ತದೆ. ಎಷ್ಟೇ ಒತ್ತಡ ಅಂತಿದ್ದರೂ ನಿಮ್ಮ ಪಾಲಿನ ಕೆಲಸವನ್ನು ಅಥವಾ ಉದ್ಯೋಗ ಸ್ಥಳದಲ್ಲಿನ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ. ಕಷ್ಟವೋ ಸುಖವೋ ನೀವೇ ಮಾಡಿ. ಆಗದಿದ್ದಲ್ಲಿ ನಿಮ್ಮ ಮೇಲಧಿಕಾರಿಗೇ ಮನವಿ ಮಾಡಿ, ನಿಮ್ಮಿಂದ ಇದು ಸಾಧ್ಯವಿಲ್ಲ ಎಂಬುದನ್ನು ತಿಳಿಸಿ. ಆದರೆ ನೀವಾಗಿಯೇ ತೀರ್ಮಾನ ಮಾಡಬೇಡಿ. ಆಲಸ್ಯವೋ ತಿರಸ್ಕಾರವೋ ನಿಮಗೆ ಉರುಳಾಗಬಹುದು.
ಏಪ್ರಿಲ್‌ ತಿಂಗಳ ತನಕ ಹನ್ನೊಂದರಲ್ಲಿ ಗುರು ಸಂಚಾರ ವೇಳೆ ನಾನಾ ಲಾಭ ಆಗುತ್ತದೆ. ತೀರ್ಥಕ್ಷೇತ್ರ ದರ್ಶನ, ಗುರುಗಳ ಆರಾಧನೆಗೆ ಅವಕಾಶ, ಮನೆಯಲ್ಲಿ ನೆಮ್ಮದಿ, ಸಜ್ಜನರ ಒಡನಾಟ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಹೀಗೆ ಶುಭ ಫಲಗಳಿವೆ. ಅದೇ ಹನ್ನೆರಡನೇ ಮನೆಯಲ್ಲಿ ಗುರು ಸಂಚಾರದ ವೇಳೆ ಖರ್ಚಿನ ಪ್ರಮಾಣ ಹೆಚ್ಚು. ಹನ್ನೆರಡರಲ್ಲಿ ಸಂಚರಿಸುವ ರಾಹು ಹಾಗೂ ಆರನೇ ಮನೆಯಲ್ಲಿ ಇರುವ ಕೇತು ಆದಾಯ- ವ್ಯಯದ ಬಗ್ಗೆ ಅಂದಾಜು ಸಿಗದಂಥ ಸ್ಥಿತಿಗೆ ದೂಡುತ್ತವೆ. ವರ್ಷದ ಕೊನೆ ಹೊತ್ತಿಗೆ ಭೂಮಿ ಖರೀದಿ ಯೋಗ ಇದೆ. ಹಿತಶತ್ರುಗಳು ಹಾಗೂ ದುರ್ವ್ಯಸನಗಳ ಬಗ್ಗೆ ಜಾಗ್ರತೆ ಮುಖ್ಯ.

ಮಿಥುನ : ಬುಧ ಗ್ರಹ ನಿಮ್ಮ ರಾಶಿಗೆ ಅಧಿಪತಿ. ಕಳೆದ ಎರಡೂ ಚಿಲ್ಲರೆ ವರ್ಷದಿಂದ ಎಂಟನೇ ಮನೆಯ ಶನಿಯಿಂದಾಗಿ ನಾನಾ ರೀತಿ ಪಡಿಪಾಟಲು ಕಂಡಿರುವ ನಿಮಗೆ ಈ ಹಿಂದಿನಂತಹ ಕಷ್ಟಗಳು ಸದ್ಯಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಅವಮಾನ ಎದುರಿಸುವ ಸನ್ನಿವೇಶಗಳು ಕಡಿಮೆ ಆಗುತ್ತವೆ. ನೀವು ತೆಗೆದುಕೊಳ್ಳಬೇಕಾದ ಎಚ್ಚರವೆಲ್ಲ ತಂದೆ ಅಥವಾ ತಂದೆಗೆ ಸಮಾನರಾದವರು, ದೊಡ್ಡಪ್ಪ- ಚಿಕ್ಕಪ್ಪ, ಮಾವ ಇವರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಗುರು ಹತ್ತು- ಹನ್ನೊಂದನೇ ಮನೆಯಲ್ಲಿ ಸಂಚರಿಸುವುದರಿಂದ ವೃತ್ತಿ ಬದುಕು ಉತ್ತಮಗೊಳ್ಳುತ್ತದೆ, ಜತೆಗೆ ಈ ಹಿಂದಿನ ಹೂಡಿಕೆಗಳು ಅತ್ಯುತ್ತಮ ಲಾಭ ನೀಡುತ್ತವೆ. ಅಂದುಕೊಳ್ಳದ ರೀತಿಯಲ್ಲಿ ಬಡ್ತಿ, ವೇತನ ಹೆಚ್ಚಳ ಕಾಣುತ್ತದೆ. ಮೇಲಧಿಕಾರಿಗಳು, ಉತ್ತಮ ಸ್ಥಾನ- ಮಾನದಲ್ಲಿ ಇರುವವರು ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಹೆಚ್ಚಿನ ಜವಾಬ್ದಾರಿ ಹಾಗೂ ಸ್ಥಾನ ನೀಡಲಿದ್ದಾರೆ.
ಈ ವರ್ಷ ರಾಹು ಹನ್ನೊಂದನೇ ಮನೆ ಹಾಗೂ ಕೇತು ಐದನೇ ಮನೆಯಲ್ಲಿ ಬಹುತೇಕ ಸಂಚರಿಸಲಿದೆ. ಜಾಗ ಖರೀದಿ, ಸಟ್ಟಾ ವ್ಯವಹಾರದಲ್ಲಿ ಲಾಭ, ವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವು ಇವೆ. ಆದರೆ ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ. ಅವರ ಆರೋಗ್ಯ, ಯಾರ ಜತೆಗೆ ಸ್ನೇಹ- ಸಲುಗೆಯಿಂದ ಇದ್ದಾರೆ ಗಮನಿಸಿ. ವರ್ಷದ ಕೊನೆ ಎರಡು ತಿಂಗಳು ದಿಢೀರ್ ಎಂದು ಬರುವ ಹಣಕ್ಕೆ ಆಸೆ ಪಡದಿರಿ. ಉದ್ಯೋಗ ಸ್ಥಳದಲ್ಲಿ ಜಾಗ್ರತೆಯಿಂದ ಇರಿ.

Yearly Horoscope 2023

ಕಟಕ: ನಿಮ್ಮ ರಾಶಿಯ ಅಧಿಪತಿ ಚಂದ್ರ. ಈ ವರ್ಷದ ಶುರುವಿನಲ್ಲಿ ಕುಂಭ ರಾಶಿಗೆ ಶನಿಯ ಪ್ರವೇಶ ಆಗುವುದರೊಂದಿಗೆ ಎಂಟನೇ ಮನೆಗೆ ಶನೈಶ್ಚರ ಬಂದಂತಾಗುತ್ತದೆ. ಶನಿ ಶಾಂತಿ ಮಾಡಿಸಿಕೊಳ್ಳುವುದು ಅಗತ್ಯ. ಆಂಜನೇಯ, ಈಶ್ವರನ ಆರಾಧನೆಯನ್ನು ಮಾಡಿ. ಇನ್ನು ಕೆಲ ಸಮಯ ನಿಮ್ಮ ಪಾಲಿಗೆ ತುಂಬ ಕ್ಲಿಷ್ಟಕರವಾಗಿರುತ್ತದೆ. ಸ್ವಭಾವತಃ ಭಾವನಾ ಜೀವಿಗಳಾದ ನಿಮಗೆ ನಾನಾ ಕಡೆಗಳಲ್ಲಿ ಅವಮಾನಗಳು ಎದುರಾಗುತ್ತವೆ. ಅಪಘಾತ ಆಗುವ ಸಾಧ್ಯತೆಗಳಿವೆ. ಏನೇ ವೈದ್ಯೋಪಚಾರ ಮಾಡಿದರೂ ಕಾಯಿಲೆ ಏನು ಅಂತಲೇ ಗೊತ್ತಾಗದಂಥ ಸ್ಥಿತಿ ಸೃಷ್ಟಿ ಆಗಲಿದೆ ಅಥವಾ ಕಾಯಿಲೆ ಗುಣ ಆಗದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಜನ್ಮ ಜಾತಕದಲ್ಲಿ ಶನಿ ಗ್ರಹದ ಸ್ಥಿತಿ ಹೇಗಿದೆ ಹಾಗೂ ಸದ್ಯಕ್ಕೆ ನಿಮಗೆ ನಡೆಯುತ್ತಿರುವ ದಶಾ- ಭುಕ್ತಿ ಯಾವುದು ಎಂಬ ಬಗ್ಗೆ ಜ್ಯೋತಿಷಿಗಳಲ್ಲಿ ತೋರಿಸಿಕೊಳ್ಳುವುದು ಸೂಕ್ತ.
ಇನ್ನು ಗುರು ಗ್ರಹ ನಿಮ್ಮ ರಾಶಿಯಿಂದ ಒಂಬತ್ತು ಹಾಗೂ ಹತ್ತನೇ ಮನೆಯಲ್ಲಿ ಸಂಚರಿಸಲಿದ್ದು, ನಿಮ್ಮ ತಂದೆ ಮನೆ ಕಡೆಯಿಂದ ಬರಬೇಕಾದ ಆಸ್ತಿ ಬರುತ್ತದೆ. ಅಥವಾ ಕೊರ್ಟ್‌ ಕಟೆಕಟೆಯಲ್ಲಿ ಇರುವ ವ್ಯಾಜ್ಯಗಳು ರಾಜೀ- ಸಂಧಾನದ ಮೂಲದ ಬಗೆಹರಿಯುವ ಅವಕಾಶ ಇದೆ. ಇನ್ನು ಯಾವುದನ್ನೆಲ್ಲ ನೀವು ಅದೃಷ್ಟ ಇರಬೇಕು ಅಂದುಕೊಳ್ಳುತ್ತೀರೋ ಅವು ನಿಮ್ಮ ಪರವಾಗಿ ಆಗಲಿವೆ. ಇನ್ನು ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ನಿಮ್ಮ ಬೆನ್ನ ಹಿಂದೆ ನಡೆಯುವಂತಹ ಹಲವು ಸಂಗತಿಗಳು ಗಮನಕ್ಕೆ ಬಾರದಿರಬಹುದು. ಅವು ನಿಮಗೆ ಅನುಕೂಲವಾಗಿರಲ್ಲ. ತಾಯಿಯ ಆರೋಗ್ಯ ಕಡೆಗೆ ಗಮನ ನೀಡಿ, ಬೆಲೆಬಾಳುವ ವಸ್ತುಗಳ ದುರಸ್ತಿಗಾಗಿ ಹೆಚ್ಚಿನ ವೆಚ್ಚ ಆಗಬಹುದು. ವರ್ಷದ ಕೊನೆ ಎರಡು ತಿಂಗಳು ಸಹೋದರ- ಸಹೋದರಿಯರಿಂದ ಅನುಕೂಲ, ತಂದೆಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಸಿಂಹ: ನಿಮ್ಮ ರಾಶ್ಯಾಧಿಪತಿ ರವಿ. ಈ ವರ್ಷದ ಶುರುವಾದ ಜನವರಿಯ ತನಕ ಆರನೇ ಮನೆಯಲ್ಲಿ ಸಂಚರಿಸುವ ಶನಿ ಕೊನೆ ಹಂತದಲ್ಲಿ ಮೊದಲ ತಿಂಗಳು ಕೆಲವು ಅನುಕೂಲ ಮಾಡಬಹುದು. ಕೆಲಸ ಬದಲಾವಣೆ ಮಾಡಿಕೊಳ್ಳುವ ಹಾಗಿದ್ದಲ್ಲಿ ಮೊದಲ ಇಪ್ಪತ್ತು ದಿನದೊಳಗೆ ಮುಗಿಸಿಕೊಂಡು ಬಿಡಿ. ಇದರ ಜತೆಗೆ ಹಣಕಾಸು ವಿಚಾರಗಳು ಒಂದಿಷ್ಟು ಅನುಕೂಲ ಆಗಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಳಿ ಯಾವುದೇ ಹಣಕಾಸಿನ ವ್ಯವಹಾರ ನಡೆಸದೇ ಇರುವುದು ಕ್ಷೇಮ. ಯಾವುದೇ ಕೆಲಸ ಕುತ್ತಿಗೆಗೆ ಬರುವ ತನಕ ಕಾಯಬೇಡಿ. ಮುಖ್ಯವಾಗಿ ಸೋಮಾರಿತನವನ್ನು ಬಿಡಬೇಕು ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಇಎಂಐಗಳನ್ನು ಕಟ್ಟಬೇಕಾದ ಸರಿಯಾದ ದಿನಾಂಕಕ್ಕೆ ಕಟ್ಟಿಬಿಡಿ. ನಿಮ್ಮ ಕ್ರೆಡಿಟ್‌ ಸ್ಕೋರ್ ಮೇಲೆ ಪರಿಣಾಮ ಬೀರಿ, ಸಮಸ್ಯೆಗಳನ್ನು ಎದುರಿಸುವಂಥ ಯೋಗ ನಿಮಗೆ ಇದೆ. ಆದ್ದರಿಂದ ಈ ಕಡೆಗೆ ಗಮನ ವಹಿಸಿ, ಪಾವತಿ ಸರಿಯಾದ ಸಮಯಕ್ಕೆ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳಲ್ಲಿ ಏನೋ ಸರಿಹೋಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಇನ್ನು ಸಂಗಾತಿಯ ಜತೆ ಎಲ್ಲ ವಿಚಾರ ಹಂಚಿಕೊಂಡು, ಪಾರದರ್ಶಕವಾಗಿ ಇರುವುದು ಉತ್ತಮ. ಬೃಹಸ್ಪತಿ ನಿಮಗೆ ಎಂಟನೇ ಮನೆಯಲ್ಲಿ, ಅಂದರೆ ಏಪ್ರಿಲ್ ತನಕ ಅದೇ ಮನೆಯಲ್ಲಿ ಇರುವುದರಿಂದ ಕಾನೂನು ವಿಚಾರಗಳಲ್ಲಿ ಸಮಸ್ಯೆಗೆ ಸಿಲುಕುವಂಥ ಸಾಧ್ಯತೆ ಇರುತ್ತದೆ. ಬಾಯಿ ಚಪಲ ಕಡಿಮೆ ಮಾಡಿಕೊಳ್ಳಿ. ಮಸಾಲೆಯುಕ್ತವಾದದ್ದು, ಎಣ್ಣೆಯಿಂದ ಕರಿದ ಪದಾರ್ಥಗಳ ಸೇವನೆಯಿಂದ ದೂರ ಇರಿ. ಗುರು- ಹಿರಿಯರಿಗೆ ಗೌರವ ನೀಡಿ. ಒಂಬತ್ತನೇ ಮನೆಯಲ್ಲಿ ಸಂಚರಿಸುವ ರಾಹು ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವೈಮನಸ್ಯ, ಭಿನ್ನಾಭಿಪ್ರಾಯ ಆಗಬಹುದು. ಅಷ್ಟೇ ಅಲ್ಲ, ಅವರ ಆರೋಗ್ಯದ ಸಲುವಾಗಿ ಹೆಚ್ಚಿನ ಖರ್ಚಾಗಲಿದೆ. ಮೂರನೇ ಮನೆಯಲ್ಲಿ ಸಂಚರಿಸುವ ಕೇತು ಸಹೋದರ- ಸಹೋದರಿಯರ ಮೂಲಕ ಲಾಭ ತರುತ್ತದೆ. ವರ್ಷದ ಕೊನೆ ಎರಡು ತಿಂಗಳು ಹಗಲುಗನಸು ಕಾಣಬೇಡಿ, ಜತೆಗೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು.

ಕನ್ಯಾ: ನಿಮ್ಮ ರಾಶ್ಯಾಧಿಪತಿ ಬುಧ. ಜನವರಿಯಲ್ಲಿ ಆರನೇ ಮನೆಯಲ್ಲಿ ಶನಿ ಸಂಚಾರ ಆರಂಭಿಸುವುದರೊಂದಿಗೆ ಆದಾಯ ಮೂಲಗಳು, ಆದಾಯ ಪ್ರಮಾಣ ಜಾಸ್ತಿ ಆಗುತ್ತವೆ. ನಿಮ್ಮ ಆರ್ಥಿಕ ಸವಾಲುಗಳನ್ನು ನಿರ್ವಹಿಸಲು ಬಲ ದೊರೆಯುತ್ತದೆ. ನಿಮ್ಮ ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ದೊಡ್ಡ ದೊಡ್ಡ ಸಾಲಗಳು ಇದ್ದಲ್ಲಿ ತೀರಿಸಿಕೊಳ್ಳು ತ್ತೀರಿ. ಎಂದಿಗಿಂತ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಇಷ್ಟು ಸಮಯ ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ಈಗ ಅನುಷ್ಠಾನಕ್ಕೆ ತರುತ್ತೀರಿ. ಇನ್ನು ಏಳನೇ ಮನೆಯಲ್ಲಿ ಗುರು ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳು ಉತ್ತಮಗೊಳ್ಳುತ್ತವೆ. ಸಾಂಸಾರಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ದೂರ ಪ್ರದೇಶ ಹಾಗೂ ವಿದೇಶಗಳಿಂದ ಶುಭ ಸುದ್ದಿ ಕೇಳಿಬರುತ್ತದೆ. ಆ ಸಮಯದಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್‌ನ ತನಕ ಒಟ್ಟಾರೆ ಶುಭ ಫಲಗಳನ್ನು ಕಾಣುತ್ತೀರಿ. ಆದರೆ ಆ ನಂತರದಲ್ಲಿ, ಅಂದರೆ ಏಪ್ರಿಲ್‌ನಿಂದ ಗುರು ಎಂಟನೇ ಮನೆಯಲ್ಲಿ ಸಂಚರಿಸುವಾಗ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಮತ್ತಿತರ ಶುಲ್ಕಗಳ ಕಡೆಗೆ ಲಕ್ಷ್ಯ ನೀಡಿ.
ಇನ್ನು ಇದ್ದಕ್ಕಿದ್ದಂತೆ ದೇಹದ ತೂಕ ಜಾಸ್ತಿ ಆಗಬಹುದು. ಆದ್ದರಿಂದ ನಾಲಗೆ ಚಪಲ ಇರುವರು ಎಚ್ಚರಿಕೆಯಿಂದ ಇರಬೇಕು. ಕಾನೂನು ವ್ಯಾಜ್ಯಗಳು ಎದುರಾಗಬಹುದು, ಮತ್ತೊಬ್ಬರ ಪರವಾಗಿ ಜಾಮೀನು ನಿಂತು, ಆ ನಂತರ ಹಣಕಾಸು ಸಂಸ್ಥೆಗಳಿಂದ ನೋಟಿಸ್ ಪಡೆಯುವುದು ಇತ್ಯಾದಿ ಸಾಧ್ಯತೆಗಳಿವೆ. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎಂಟನೇ ಮನೆಯ ರಾಹು ಹಾಗೂ ಎರಡನೇ ಮನೆಯ ಕೇತು ಈ ವರ್ಷದ ಅಕ್ಟೋಬರ್‌ ತನಕ ಒಳ್ಳೆ ಫಲಗಳನ್ನು ನೀಡುವುದಿಲ್ಲ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಕಾಣಿಸಬಹುದು. ಗುಪ್ತಾಂಗ ಕಾಯಿಲೆ ಸಹ ಕಾಣಿಸಿಕೊಳ್ಳಬಹುದು. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ. ವರ್ಷದ ಕೊನೆಯ ಎರಡು ತಿಂಗಳು ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ವಾಲದಂತೆ ನೋಡಿಕೊಳ್ಳಿ.

ತುಲಾ: ನಿಮ್ಮ ರಾಶ್ಯಾಧಿಪತಿ ಶುಕ್ರ. ಈ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ನಿಮ್ಮ ರಾಶಿಯಿಂದ ನಾಲ್ಕು ಮತ್ತು ಐದನೇ ಮನೆಯಲ್ಲಿ ಶನಿ ಸಂಚರಿಸುತ್ತದೆ. ಜನವರಿಯ ಒಂದು ತಿಂಗಳು ಮಕರದಲ್ಲಿ ಶನಿ ಸಂಚರಿಸುವ ತನಕ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಇನ್ನು ಮಾತನಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಒರಟಾದ ಮಾತುಗಳನ್ನು ಆಡಬೇಡಿ- ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಹಾಗಿಲ್ಲದಿದ್ದಲ್ಲಿ ವಿನಾಕಾರಣ ವೈರತ್ವ ಬೆಳೆಯುವಂತೆ ಆಗುತ್ತದೆ. ಹೊಸದಾಗಿಯೇ ಕೊಂಡು ತಂದರೂ ಮೇಲಿಂದ ಮೇಲೆ ವಾಹನಗಳು ರಿಪೇರಿಗೆ ಬರುತ್ತವೆ. ಇನ್ನು ನಿಮ್ಮ ವಾಹನಗಳನ್ನು ಬೇರೆಯವರಿಗೆ ನೀಡದಿರಿ. ಅಥವಾ ನೀವೇ ಚಲಾಯಿಸುವಾಗ ಕೂಡ ಹೆಚ್ಚಿನ ನಿಗಾ ಮಾಡಿ. ಶನಿಯು ಜನವರಿ ಹದಿನೇಳನೇ ತಾರೀಕಿನ ನಂತರ ಐದನೇ ಮನೆಯಲ್ಲಿ ಸಂಚರಿಸುವಾಗ ನೀವೆಷ್ಟು ಧರ್ಮಿಷ್ಠರು, ಸತ್ಯವಂತರಾರುತ್ತೀರೋ ಅಷ್ಟು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ಹಳೆಯ ಕಾಯಿಲೆಗಳು ಉಲ್ಬಣ ಆಗಬಹುದು. ಯಾವುದೇ ಕಾರಣಕ್ಕೆ ಮನೆ ಮದ್ದು, ಸ್ವಯಂ ವೈದ್ಯ ಮಾಡಕೂಡದು. ಸುಲಭಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದ ಆರೋಗ್ಯ ಸಮಸ್ಯೆಗಳು ಕೆಲವು ಕಾಡಬಹುದು. ಯಾವ ವೈದ್ಯರು, ಯಾವ ಔ‍ಷಧಗಳು ಕೆಲಸಕ್ಕೆ ಬರುತ್ತಿಲ್ಲ ಎನಿಸಬಹುದು. ಆದರೆ ಇದರಿಂದ ಧೈರ್ಯಗೆಡಬೇಡಿ. ದೇವರ ಮೇಲೆ ನಂಬಿಕೆ ಹೋಗದಿರಲಿ. ತಪ್ಪುತಪ್ಪಾದ ವಿಚಾರಗಳ ಕಡೆಗೆ ಆಕರ್ಷಿತರಾಗದಂತೆ ಎಚ್ಚರಿಕೆ ಅಗತ್ಯ.
ಜನ್ಮ ರಾಶಿಯಲ್ಲೇ ಕೇತು ಹಾಗೂ ಸಪ್ತಮದಲ್ಲಿ ರಾಹು ಈ ವರ್ಷದ ಹತ್ತು ತಿಂಗಳು ಇರುತ್ತದೆ. ಆ ವೇಳೆಯಲ್ಲಿ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪ ಕರ್ಮಾಸಕ್ತಿ ಹೆಚ್ಚು ಮಾಡುತ್ತವೆ. ಸಂಗಾತಿ ಬಗ್ಗೆ ಇಲ್ಲ ಸಲ್ಲದ ಅನುಮಾನ, ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಸೆಳೆತ ಇತ್ಯಾದಿ ದುರಾಲೋಚನೆಗಳು ಬರುತ್ತವೆ. ಗಣಪತಿ- ಸುಬ್ರಹ್ಮಣ್ಯ ಆರಾಧನೆ ಮಾಡಿ. ವರ್ಷದ ಕೊನೆ ಎರಡು ತಿಂಗಳಲ್ಲಿ ಭೂಮಿ ಖರೀದಿಗೆ ಪ್ರಯತ್ನಿಸಬಹುದು. ಅದರಲ್ಲಿ ಮೋಸ ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿ. ಯಾವುದಕ್ಕೂ ಜ್ಯೋತಿಷಿಗಳಲ್ಲಿ ಒಮ್ಮೆ ಜಾತಕವನ್ನು ತೋರಿಸಿ, ದಶಾ-ಭುಕ್ತಿ ಪರಿಶೀಲನೆ ಮಾಡಿಸಿಕೊಳ್ಳಿ.

ವೃಶ್ಚಿಕ : ನಿಮಗೆ ರಾಶ್ಯಾಧಿಪತಿ ಕುಜ. ಇನ್ನು ಜನವರಿ ತಿಂಗಳ ಮೊದಲ ಹದಿನೇಳು ದಿವಸ ಮಾತ್ರ ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಹಾಗೂ ಆ ನಂತರದಲ್ಲಿ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ಆದ್ದರಿಂದ ಜನವರಿಯಲ್ಲಿ ಮಾತ್ರ ಹಣಕಾಸಿನ ಹರಿವು ಚೆನ್ನಾಗಿ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಅದು ಸ್ವಲ್ಪ ಮಟ್ಟಿಗಾದರೂ ಇಳಿಕೆ ಕಾಣುತ್ತಾ ಬರುತ್ತಿರುವುದು ಗಮನಕ್ಕೆ ಬರಲಿದೆ. ಲೆಕ್ಕಾಚಾರ ಇಲ್ಲದಂತೆ ಯಾವುದೇ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕುವುದಿದ್ದಲ್ಲಿ, ಸಾಲ ಮಾಡುವುದಿದ್ದಲ್ಲಿ ಮುಂದಕ್ಕೆ ಹಾಕುವುದು ಉತ್ತಮ. ಈಗಾಗಲೇ ಮುಂದುವರಿದಿದ್ದೀನಿ ಅಂತಾದರೆ, ಬಜೆಟ್ ವಿಚಾರದಲ್ಲಿ ಒಂದಕ್ಕೆ ಸಾವಿರ ಬಾರಿ ಆಲೋಚನೆ ಮಾಡಿ. ಏಕೆಂದರೆ ಜನವರಿ ನಂತರದಲ್ಲಿ ಪರಿಸ್ಥಿತಿ ಇಲ್ಲಿಯವರೆಗೆ ಇದ್ದಂತೆ ಇರುವುದಿಲ್ಲ. ವಯಸ್ಸಾದ, ಅನಾರೋಗ್ಯದಿಂದ ಇರುವ ತಾಯಿ ಇದ್ದಲ್ಲಿ ಕಾಲಕಾಲಕ್ಕೆ ಸೂಕ್ತ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿ. ನಿಮ್ಮಿಂದ ಈಡೇರಿಸುವುದಕ್ಕೆ ಅಥವಾ ಪೂರೈಸುವುದಕ್ಕೆ ಸಾಧ್ಯ ಆಗುವಂಥದ್ದರ ಬಗ್ಗೆ ಮಾತ್ರ ಮಾತು ನೀಡಿ, ಇಲ್ಲದಿದ್ದರೆ ಮಾತು ತಪ್ಪುವಂತಾಗುತ್ತದೆ. ಜತೆಗೆ ವರ್ಚಸ್ಸಿಗೆ ಪೆಟ್ಟು ಬೀಳುತ್ತದೆ. ಮುಂದಿನ ವರ್ಷದ ಏಪ್ರಿಲ್ ತನಕ ಪಂಚಮದಲ್ಲಿ ಗುರು ಸಂಚಾರ ಇರುತ್ತದೆ. ಈ ವೇಳೆ ಸಂತಾನ ಅಪೇಕ್ಷಿತರನ್ನು ಹೊರತುಪಡಿಸಿದಂತೆ ಉಳಿದವರಿಗೆ ಒಳ್ಳೆ ಸಮಯ. ಉತ್ತಮ ಫಲಗಳು ಸಿಗುತ್ತವೆ.
ಅದಾದ ಮೇಲೆ ವರ್ಷ ಪೂರ್ತಿ ಆರನೇ ಮನೆಯಲ್ಲಿ ಗುರು ಸಂಚರಿಸುವಾಗ ಮೇಲಧಿಕಾರಿಗಳ ಜತೆಗೆ ಮಾತುಕತೆ ವೇಳೆ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಜತೆಗೆ ವ್ಯವಹಾರದಲ್ಲಿ ಕಾಗದ- ಪತ್ರಗಳನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿ. ಹನ್ನೆರಡನೇ ಮನೆ ಕೇತು ಖರ್ಚನ್ನು ಹೆಚ್ಚು ಮಾಡಿದರೂ ದೇವತಾ ಆರಾಧನೆ ಕಡೆಗೆ ಮನಸ್ಸು ನೀಡುತ್ತದೆ. ಆರನೇ ಮನೆ ರಾಹು ಭೂಮಿ, ಷೇರು, ಮ್ಯೂಚುವಲ್ ಫಂಡ್‌ಗಳ ಮೂಲಕ ಆದಾಯ ತರುತ್ತದೆ. ಇನ್ನು ವರ್ಷದ ಕೊನೆ ಎರಡು ತಿಂಗಳು ಈ ಹಿಂದೆ ಮಾಡಿದ್ದ ಹೂಡಿಕೆಯಿಂದ ಹಣ ಬರಬಹುದು. ಅದೇ ವೇಳೆ ಮಕ್ಕಳ ಓದು, ಆರೋಗ್ಯದ ಕಡೆಗೆ ಲಕ್ಷ್ಯ ನೀಡಬೇಕು.

ಧನುಸ್ಸು : ನಿಮ್ಮ ರಾಶ್ಯಾಧಿಪತಿ ಗುರು. ಇಷ್ಟು ವರ್ಷದ ಸಾಡೇಸಾತ್ ಶನಿಯ ಪ್ರಭಾವ ಸಂಪೂರ್ಣವಾಗಿ ದೂರ ಆಗುವ ಕಾಲ ಇದು. ಜನವರಿ ಹದಿನೇಳನೇ ತಾರೀಕಿನಂದು ಮೂರನೇ ಮನೆಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಆ ನಂತರ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೃಢವಾದ ಬದಲಾವಣೆ ಗಮನಿಸಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ಇರುವ ಕೆಲಸದಲ್ಲಿ ಅಥವಾ ಕೆಲಸ ಬದಲಾವಣೆಯೊಂದಿಗೆ ಸಂಬಳದಲ್ಲಿ ಹೆಚ್ಚಳ, ಪ್ರಮೋಷನ್, ಹೊಸ ವ್ಯಾಪಾರದ ಆಲೋಚನೆಗಳು ಬರಲಿವೆ. ಇನ್ನು ಹೊಸ ವ್ಯಾಪಾರವನ್ನು ಶುರು ಮಾಡಬೇಕು ಎಂದುಕೊಂಡವರಿಗೆ ಅನುಕೂಲಕರವಾದ ವೇದಿಕೆ ಸಿಗಲಿದೆ. ಹಣಕಾಸಿನ ನೆರವು ನೀಡುವುದಕ್ಕೆ, ಅದು ಸಾಲದ ರೂಪದಲ್ಲೇ ಆದರೂ ಅದನ್ನು ನೀಡುವುದಕ್ಕೆ ಜನ ದೊರೆಯುತ್ತಾರೆ.
ನಾಲ್ಕನೆ ಮನೆಯಲ್ಲಿ, ಏಪ್ರಿಲ್‌ ತನಕ ಗುರು ಮೀನದಲ್ಲಿ ಸಂಚಾರ ಮಾಡುವಾಗ ಮನೆ- ಸೈಟು ಖರೀದಿ, ಮನೆ ಕಟ್ಟಿಸುವ ಯೋಗ, ಕಾರು- ಬೈಕ್‌ಗಳು ಖರೀದಿಸಬೇಕು ಎಂದಿರುವವರಿಗೆ ವಾಹನ ಖರೀದಿ ಯೋಗ ಇತ್ಯಾದಿ ಶುಭ ಫಲಗಳು ಇವೆ. ಏಪ್ರಿಲ್‌ನಲ್ಲಿ ಗುರುವು ಐದನೇ ಮನೆಯಲ್ಲಿ ಸಂಚಾರ ಮಾಡುವಾಗ ದೂರದ ಪ್ರದೇಶಗಳಿಗೆ ತೆರಳುವ ಯೋಗ, ಅದರಿಂದ ಲಾಭ ಆಗುವ ಯೋಗಗಳಿವೆ. ಹನ್ನೊಂದನೇ ಮನೆಯಲ್ಲಿ ಕೇತು ಸಂಚರಿಸುವಾಗ ಅದೃಷ್ಟ ಬಲದಿಂದ ವ್ಯಾಜ್ಯ, ತಂಟೆ- ತಕರಾರು ಇದ್ದಲ್ಲಿ ನಿವಾರಣೆ ಆಗುತ್ತವೆ. ನಿಮಗೊಂದು ವರ್ಚಸ್ಸು ಇದ್ದು, ಇತರರು ನಿಮ್ಮ ಮಾತನ್ನು ಪಾಲಿಸುತ್ತಾರೆ. ಐದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಮಕ್ಕಳ ಆರೋಗ್ಯದ ಕುರಿತು ಜಾಗ್ರತೆಯಿಂದ ಇರಬೇಕು. ವರ್ಷದ ಕೊನೆ ಎರಡು ತಿಂಗಳು ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಿ. ಅವರಿಗೆ ಮರೆವು ಸಮಸ್ಯೆ, ಅನಾರೋಗ್ಯ ಇತ್ಯಾದಿ ಸಮಸ್ಯೆಗಳು ಆಗಬಹುದು.

ಮಕರ : ನಿಮ್ಮ ರಾಶ್ಯಾಧಿಪತಿ ಶನಿ. ನಿಮಗೆ ಸಾಡೇಸಾತ್ ಶನಿಯ ಪ್ರಭಾವ 2025ರ ಮಾರ್ಚ್ ತನಕ ಇದೆ. ಜನವರಿಯಲ್ಲಿ ಕುಂಭಕ್ಕೆ ಶನಿ ಪ್ರವೇಶಿಸುವುದರೊಂದಿಗೆ ಎರಡನೇ ಮನೆಯಲ್ಲಿ ಸಂಚಾರ ಇರುತ್ತದೆ. ಧನ ಸ್ಥಾನದಲ್ಲಿ ಶನಿ ಸಂಚಾರ ಸಮಯದಲ್ಲಿ ಹಣದ ಹರಿವು ಸ್ವಲ್ಪ ಮಟ್ಟಿಗೆ ಸರಾಗ ಆಗುತ್ತದೆ. ಆದರೆ ನೀವು ಮುಖ್ಯವಾದ ಜನವರಿಯ ಮೊದಲ ಇಪ್ಪತ್ತು ದಿನ ಜನ್ಮ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯ ಬಗ್ಗೆ ಜಾಗ್ರತೆ ವಹಿಸಿ. ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಆಲಸ್ಯ ಮಾಡದಿರಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಜನವರಿಯಿಂದ ಆಚೆಗೆ ಎರಡನೇ ಮನೆಯಲ್ಲಿ ಶನಿ ಸಂಚರಿಸುವಾಗ ಸ್ವಲ್ಪ ಆತಂಕ ಇರುತ್ತದೆ. ಒತ್ತಡ, ಹಿಂಸೆ ಅಥವಾ ಬೇರೆ ಯಾವುದೇ ಕಾರಣಕ್ಕೂ ಕೆಲಸ ಬಿಡುವ ನಿರ್ಧಾರ ಮಾಡಬೇಡಿ. ಇನ್ನು ಏಪ್ರಿಲ್ ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು ಆ ನಂತರ ಈ ವರ್ಷದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿದೆ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಹಾಗೇ ಮುಂದುವರಿಯಲಿದೆ. ಇದು ಏಪ್ರಿಲ್ ತನಕ ಇಂಥದ್ದೊಂದು ಭಾವನೆ ಮನಸ್ಸಿನಲ್ಲಿ ಇರುತ್ತದೆ.
ಆ ನಂತರ ಗುರು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಭೂಮಿ ಲಾಭ ಆಗುವುದೋ ಅಥವಾ ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ. ಈ ಅವಧಿಯಲ್ಲಿ ದುಡ್ಡಿನ ವಿಚಾರಕ್ಕೆ ಎಚ್ಚರಿಕೆಯಿಂದ ಮುಂದಕ್ಕೆ ಹೆಜ್ಜೆ ಇಡಿ. ಹಿರಿಯರು- ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಈ ವರ್ಷದ ಹತ್ತು ತಿಂಗಳು ನಾಲ್ಕರಲ್ಲಿ ರಾಹು ಇದ್ದು ನಿಮ್ಮದೇ ಸುಖ- ಸವಲತ್ತಿಗೆ ಇರುವಂಥ ಅನುಕೂಲಗಳು ನಿಮಗೇ ಇಲ್ಲದಂತೆ, ದೊರೆಯದಂತಾಗುತ್ತದೆ. ಹತ್ತರಲ್ಲಿ ಕೇತು ಇರುವುದರಿಂದ ಉದ್ಯೋಗ, ವೃತ್ತಿಯಲ್ಲಿ ಸವಾಲುಗಳು ಜಾಸ್ತಿ ಆಗುತ್ತವೆ. ವರ್ಷದ ಕೊನೆ ಎರಡು ತಿಂಗಳು ಭೂಮಿಯಿಂದ ಲಾಭ ಇದೆ. ತಂದೆಯ ಸಲುವಾಗಿ ಅಥವಾ ತಂದೆ ಸಮಾನರಿಗಾಗಿ ಹೆಚ್ಚಿನ ಖರ್ಚಿದೆ.

ಕುಂಭ : ನಿಮ್ಮ ರಾಶ್ಯಾಧಿಪತಿಯೂ ಶನಿಯೇ. ಆದರೆ ನಿಮಗೆ ಈಗ ಏಳರಾಟ ಶನಿಯ ಒಂದು ಹಂತ, ಅಂದರೆ ಎರಡೂವರೆ ವರ್ಷ ಮುಗಿಸಿದ್ದೀರಿ. ಜನವರಿ ತಿಂಗಳಿನಿಂದ ನಿಮ್ಮದೇ ಜನ್ಮ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದಾದರೂ ದೀರ್ಘಾವಧಿ ಔಷಧೋಪಚಾರ ತೆಗೆದುಕೊಳ್ಳಬೇಕಾದ ಕಾಯಿಲೆಯಿಂದ ಬಳಲುವಂತಾಗುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆತ್ಮವಿಶ್ವಾಸ ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗುತ್ತದೆ. ವೈದ್ಯರ ಸಲಹೆ- ಸೂಚನೆಯನ್ನು ಪಡೆಯದೆ ಯಾವುದೇ ಡಯೆಟ್, ಪಥ್ಯ, ಹೊಸ ಔಷಧಗಳು ತೆಗೆದುಕೊಳ್ಳದಿರಿ. ಅಂದಹಾಗೆ ಎರಡನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ಏಪ್ರಿಲ್ ತನಕ ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಎರಡನೇ ಸ್ಥಾನ ಕುಟುಂಬ ಸ್ಥಾನವೂ ಹೌದು. ಆದ್ದರಿಂದ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಇನ್ನು ಸಂಬಂಧ ಸಹ ವೃದ್ದಿ ಆಗುತ್ತದೆ.
ಆ ನಂತರ, ಏಪ್ರಿಲ್‌ನಿಂದ ಮೂರನೇ ಮನೆಯಲ್ಲಿ ಗುರು ಸಂಚರಿಸುವಾಗ ನಿಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸಬಲ್ಲ ಚಾಕಚಕ್ಯತೆ ಬರುತ್ತದೆ. ಸಹೋದರ- ಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆ. ಆ ಮೂಲಕ ಕೆಲವು ಕಠಿಣವಾದ ಕೆಲಸ ಸಹ ಸಲೀಸಾಗಿ ಮಾಡಿ ಮುಗಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಷೇರು ದಲ್ಲಾಳಿಗಳಿಗೆ ಹಣದ ಹರಿವು ಉತ್ತಮವಾಗಿರುತ್ತದೆ. ಒಂಬತ್ತರಲ್ಲಿ ಕೇತು ಸಂಚಾರ ಇರುವುದರಿಂದ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವರ್ಷದ ಕೊನೆ ಎರಡು ತಿಂಗಳು ಎಷ್ಟೇ ಹಣ ಬಂದರೂ ಅಲ್ಲಿಂದ ಅಲ್ಲಿಗೆ ಖರ್ಚು ಎಂಬಂತಾಗುತ್ತದೆ. ಇನ್ನು ಚರ್ಮ ವ್ಯಾಧಿ- ಕೂದಲು ಹೊಟ್ಟು, ಹಲ್ಲು ಇವುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮೀನ : ನಿಮ್ಮ ರಾಶ್ಯಾಧಿಪತಿ ಗುರು. ಜನವರಿಯ ಮೊದಲ ಹದಿನೇಳು ದಿನಗಳು ಮೀನ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರ ಇರುತ್ತದೆ. ಆ ನಂತರದಲ್ಲಿ ವ್ಯಯ ಸ್ಥಾನಕ್ಕೆ ಬರಲಿದೆ. ಸಾಡೇಸಾತ್ ಶನಿಯ ಆರಂಭದ ಘಟ್ಟ ಇದು. ಈಗಾಗಲೇ ಕುಂಭ ರಾಶಿಯಲ್ಲಿ ಕೆಲ ಸಮಯ ಶನಿ ಇದ್ದು, ಮತ್ತೆ ಮಕರ ರಾಶಿಗೆ ಹೋಗಿದ್ದು ಹೌದಾದರೂ ಈಗ ಪೂರ್ಣಾವಧಿಯಾಗಿ ಶನಿಯ ಏಳರಾಟದ ಅನುಭವ ನಿಮಗೆ ಆಗಲಿದೆ. ಏಪ್ರಿಲ್‌ ತನಕ ಜನ್ಮ ರಾಶಿಯಲ್ಲೇ ಇರುವ ಗುರುವಿನಿಂದ ನಾನಾ ಬಗೆಯ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಜನ್ಮ ಗುರು ಮನುಷ್ಯರಿಗೆ ದುಃಖವನ್ನು ನೀಡುತ್ತಾನೆ. ಆರೋಗ್ಯ ಸಮಸ್ಯೆಗಳು, ಇತರರಿಂದ ಅವಮಾನ, ಕೆಲಸ ಮಾಡುವುದಕ್ಕೆ ಮನಸ್ಸಿದ್ದರೂ ಸನ್ನಿವೇಶಗಳು ಅನುಕೂಲಕರವಾಗಿ ಇಲ್ಲದಿರುವುದು ಇವೆಲ್ಲ ಏಪ್ರಿಲ್‌ ತನಕ ಇರುತ್ತದೆ. ಕೆಲಸ ಮಾಡುವುದಕ್ಕೆ ಹಿಂಸೆ ಆಗುತ್ತಿದೆ ಎಂದು ಉದ್ಯೋಗ ಬಿಡುವುದಕ್ಕೆ ಹೋಗಬೇಡಿ. ಏಕೆಂದರೆ ಆದರೆ ಇದು ಏಪ್ರಿಲ್ ತನಕ ಮಾತ್ರ.
ಆ ನಂತರ ಎರಡನೇ ಮನೆಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಈ ಸಂದರ್ಭದಲ್ಲಿ ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು. ನೀವು ಅಂದುಕೊಂಡಂತೆ ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು, ಹೊಸದಾಗಿ ಕೆಲಸ ಬದಲಾವಣೆ ಮಾಡುವುದಕ್ಕೆ ಅವಕಾಶ ಇತ್ಯಾದಿ ಶುಭ ಫಲಗಳನ್ನು ಅನುಭವಿಸುತ್ತೀರಿ. ಆದರೆ ನಿಮಗೆ ಸಾಡೇ ಸಾತ್ ಶನಿಯ ಆರಂಭ ಪೂರ್ಣಾವಧಿಗೆ ಆಗಿರುವುದರಿಂದ ಹೊಸ ಯೋಜನೆಗಳು, ದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರ- ವ್ಯವಹಾರಗಳನ್ನು ಮಾಡದಿರಿ. ಇನ್ನು ಅಕ್ಟೋಬರ್ ತನಕ ರಾಹು ದ್ವಿತೀಯದಲ್ಲಿ ಇದ್ದು ನಿಮ್ಮನ್ನು ಭ್ರಮಾಧೀನರನ್ನಾಗಿ ಮಾಡಲಿದ್ದು, ಹಗಲುಗನಸು ಕಾಣದಿರಿ. ಇನ್ನು ಎಂಟನೇ ಮನೆಯಲ್ಲಿನ ಕೇತು ಗುಪ್ತ ರೋಗಗಳು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟುಮಾಡಬಹುದು. ವರ್ಷದ ಕೊನೆ ಎರಡು ತಿಂಗಳು ನಿಮ್ಮ ಆಪ್ತರು ನಿಮ್ಮಿಂದ ದೂರ ಆಗಬಹುದು. ಸಂಸಾರದಲ್ಲಿ ವಿರಸ ಏರ್ಪಡಬಹುದು.

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

T20 World Cup: ಮೊದಲು ಬ್ಯಾಟ್ ಮಾಡಿದ ಯುಎಸ್​ಎ ಬಳಗ 18.5 ಓವರ್​ಗಳಲ್ಲಿ 115 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಇನ್ನೂ 64 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವೇ ಇಲ್ಲದೆ 117 ರನ್​ ಗಳಿಸಿ ಗೆಲುವು ಸಾಧಿಸಿತು.

VISTARANEWS.COM


on

T20 world Cup 2024
Koo

ಬಾರ್ಬಡೋಸ್​: ಟಿ20 ವಿಶ್ವ ಕಪ್​ 2024ರ (T20 world Cup 2024) ಬಿ ಗುಂಪಿನ ಸೂಪರ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಯುಎಸ್​ಎ ತಂಡ 10 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಯುಎಸ್​ಎ ತಂಡದ ಸೆಮಿಫೈನಲ್​ಗೇರುವ ಕಸನು ಕಮರಿದೆ. ಈ ಹಂತದಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದಾಗ್ಯೂ ಮೊಟ್ಟ ಮೊದಲ ಬಾರಿಗೆ ವಿಶ್ವ ಕಪ್​ ವೇದಿಕೆ ಪ್ರವೇಶಿಸಿದ್ದ ಯುಎಸ್​ಎ ತಂಡ ಸೂಪರ್ 8 ಹಂತಕ್ಕೇರುವ ಮೂಲಕ ಮೂಲಕ ಅವಿಸ್ಮರಣೀಯ ಸಾಧನೆ ಮಾಡಿದೆ. ಅತ್ತ ಇಂಗ್ಲೆಂಡ್ ತಂಡ ಆಡಿರುವ ಮೂರರಲ್ಲಿ 2 ಪಂದ್ಯಗಳನ್ನು ಗೆದ್ದು ಸದ್ಯ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇಲ್ಲಿನ ಕೆನ್ಸಿಂಗ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ಬಳಗ 18.5 ಓವರ್​ಗಳಲ್ಲಿ 115 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಇನ್ನೂ 64 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವೇ ಇಲ್ಲದೆ 117 ರನ್​ ಗಳಿಸಿ ಗೆಲುವು ಸಾಧಿಸಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್​ಗಳಾದ ಜೋಸ್​ ಬಟ್ಲರ್​ (83) ಹಾಗೂ ಫಿಲ್​ ಸಾಲ್ಟ್​ (25) ಯುಎಸ್​ಎ ಬೌಲರ್​ಗಳನ್ನು ಚೆಂಡಾಡಿದರು. ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದ ಈ ಜೋಡಿ ಬಳಿಕ ಏಕಾಏಕಿ ವೇಗ ವೃದ್ಧಿಸಿತು. ಯುಎಸ್​ಎ ತಂಡದ ರೂಪಿಸಿದ ಯಾವುದೇ ರಣತಂತ್ರಕ್ಕೆ ಬಗ್ಗದ ಅವರಿಬ್ಬರೂ ನಿರಾಯಾಸವಾಗಿ ಪಂದ್ಯ ಗೆಲ್ಲಿಸಿದರು.

ಇದನ್ನೂ ಓದಿ: IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

ಯುಎಸ್​​ಎ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಯುಎಸ್​ಎ ತಂಡ ಉತ್ತಮವಾಗಿ ಆಡಲಿಲ್ಲ. ಅಂಡ್ರೀಸ್ ಗೌಸ್​ 8 ರನ್​ಗೆ ವಿಕೆಟ್ ಒಪ್ಪಿಸಿದರೆ ಸ್ಟೀವನ್ ಟೈಲರ್​ 12 ರನ್​ಗಳಿಗೆ ಸೀಮಿತಗೊಂಡರು. ನಿತೀಶ್ ಕುಮಾರ್​ 30 ರನ್ ಬಾರಿಸಿದರೆ ಆ್ಯರೋನ್ ಜೋನ್ಸ್​ 10 ರನ್​ಗೆ ಔಟಾದರು. ಕೋರಿ ಆ್ಯಂಡರ್ಸನ್​​ 29 ರನ್ ಬಾರಿಸಿದರೆ ಮಿಲಿಂದ್ ಕುಮಾರ್ 4 ರನ್​ಗೆ ವಿಕೆಟ್​ ಒಪ್ಪಿಸಿದರು. ಹರ್ಮೀತ್​ ಸಿಂಗ್​ 21 ರನ್​ಗೆ ಔಟಾದಾಗ ಯುಎಸ್​ಎ 115 ರನ್​ಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಅ ಬಳಿಕ ಬಂದ ಎಲ್ಲ ಬ್ಯಾಟರ್​​ಗಳು ಶೂನ್ಯಕ್ಕೆ ಔಟಾದರು. ಕ್ರಿಸ್​ ಜೋರ್ಡಾನ್​ ಸತತ ನಾಲ್ಕು ವಿಕೆಟ್ ಪಡೆದರು. ಹೀಗಾಗಿ ಯುಎಸ್​ಎ 115 ರನ್​ಗಳಿಗೆ ಆಲ್​ಔಟ್​ ಆಯಿತು.

ಇಂಗ್ಲೆಂಡ್ ಪರ ಜೋರ್ಡಾನ್​ 4 ವಿಕೆಟ್ ಉರುಳಿಸಿದರೆ ಅದಿಲ್ ರಶೀದ್ ಹಾಗೂ ಸ್ಯಾಮ್​ ಕರ್ರನ್​ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ರೀಸ್​ ಟೋಪ್ಲೆ ಹಾಗೂ ಲಿವಿಂಗ್​ಸ್ಟನ್​ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

Continue Reading

ದೇಶ

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

SBI: ದೇಶಾದ್ಯಂತ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಬ್ಯಾಂಕ್‌ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ದೇಶಾದ್ಯಂತ 2024-25ನೇ ಹಣಕಾಸು ವರ್ಷದಲ್ಲಿ 400 ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಿದೆ. ಈ ಕುರಿತು ಎಸ್‌ಬಿಐ ಚೇರ್ಮನ್‌ ಮಾಹಿತಿ ನೀಡಿದ್ದಾರೆ.

VISTARANEWS.COM


on

SBI
Koo

ಮುಂಬೈ: ದೇಶದಲ್ಲೇ ಬೃಹತ್‌ ಬ್ಯಾಂಕ್‌ ಎನಿಸಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (SBI) ಹೊಸ ಶಾಖೆಗಳನ್ನು (SBI New Branches) ಇನ್ನು ನಿಮ್ಮೂರಿಗೂ ಬರುವ ದಿನಗಳು ದೂರವಿಲ್ಲ. ಹೌದು, 2024-25ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಗ್ರಾಮೀಣ ಭಾಗಗಳೂ ಸೇರಿ 400 ಹೊಸ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ಇದರಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲೂ ಜನ ಬ್ಯಾಂಕ್‌ಗಳನ್ನು ಹೊಂದಬಹುದಾಗಿದೆ. ಹೊಸ ಶಾಖೆಗಳನ್ನು ತೆರೆಯುವ ಕುರಿತು ಎಸ್‌ಬಿಐ ಚೇರ್ಮನ್‌ ದಿನೇಶ್‌ ಕುಮಾರ್‌ ಖಾರಾ (Dinesh Kumar Khara) ಅವರು ಮಾಹಿತಿ ನೀಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, “ದೇಶದಲ್ಲಿ ಶೇ.89ರಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ಹಾಗೂ ಶೇ.98ರಷ್ಟು ವಹಿವಾಟು ಬ್ಯಾಂಕ್‌ ಹೊರತಾಗಿ ನಡೆಯುತ್ತಿವೆ. ಹೀಗಿರುವಾಗ ಬ್ಯಾಂಕ್‌ಗಳ ಬ್ರ್ಯಾಂಚ್‌ಗಳು ಏಕೆ ಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ದೇಶದ ಪ್ರತಿಯೊಂದು ಭಾಗದಲ್ಲೂ, ಹೊಸ ಹೊಸ ಪಟ್ಟಣ, ಗ್ರಾಮಗಳಿಗೂ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಇದೇ ಕಾರಣಕ್ಕಾಗಿಯೇ 2024-25ನೇ ಹಣಕಾಸು ವರ್ಷದಲ್ಲಿ ದೇಶದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬ್ರ್ಯಾಂಚ್‌ಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

electoral bonds

“ದೇಶಾದ್ಯಂತ ಹೊಸ ಹೊಸ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳನ್ನು ಸ್ಥಳಗಳ ಹುಡುಕಾಟ ನಡೆಯುತ್ತಿದೆ. ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್‌ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸ್ಥಳಗಳನ್ನು ನಿರ್ಧರಿಸುವ ಕೆಲಸ ನಡೆಯುತ್ತಿದೆ. ದೇಶದ ಜನರಿಗೆ ಬ್ಯಾಂಕ್‌ಗಳ ಅವಶ್ಯಕತೆ ಹೆಚ್ಚಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ದೇಶದ ಪ್ರತಿಯೊಂದು ಭಾಗದಲ್ಲಿ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಆ ಅವಶ್ಯಕತೆಯನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ” ಎಂದು ಪಿಟಿಐಗೆ ವಿವರಿಸಿದರು.

2023-24ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ 59 ಗ್ರಾಮಗಳು ಸೇರಿ 137 ಕಡೆ ಹೊಸ ಶಾಖೆಗಳನ್ನು ಎಸ್‌ಬಿಐ ತೆರೆದಿದೆ ಹಾಗೂ ಅವುಗಳಲ್ಲಿ ವಹಿವಾಟು ನಡೆಯುತ್ತಿದೆ. 2024ರ ಮಾರ್ಚ್‌ ಅಂತ್ಯಕ್ಕೆ ದೇಶಾದ್ಯಂತ ಎಸ್‌ಬಿಐ 22,542 ಬ್ರ್ಯಾಂಚ್‌ಗಳನ್ನು ಹೊಂದಿರುವ ಬೃಹತ್‌ ನೆಟ್‌ವರ್ಕ್‌ ಎನಿಸಿದೆ. ದೇಶದ ವಿಶ್ವಾಸಾರ್ಹ, ಗ್ರಾಹಕರನ್ನು ಸೆಳೆಯುವ ಬ್ಯಾಂಕ್‌ ಎಂಬ ಖ್ಯಾತಿಯನ್ನೂ ಎಸ್‌ಬಿಐ ಗಳಿಸಿದೆ.

ಇದನ್ನೂ ಓದಿ: SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

Continue Reading

ಪ್ರಮುಖ ಸುದ್ದಿ

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ ಎರಡು ವಿಕೆಟ್​ ಕಬಳಿಸಿ ಎದುರಾಳಿ ತಂಡ ರನ್​ ಗಳಿಕೆಗೆ ಕಡಿವಾಣ ಹಾಕಿದರು. ಪರಿಣಾಮವಾಗಿ ದಕ್ಷಿಣ ಆಫ್ರಿಕಾ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಇನ್ನೂ 56 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟಕ್ಕೆ 220 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IND vs SA
Koo

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ (IND VS SA) ಹರ್ಮನ್​ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳೆಯರ ತಂಡ 3-0 ಕ್ಲೀನ್ ಸ್ವೀಪ್​ ಸಾಧನೆ ಮಾಡಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ 6 ವಿಕೆಟ್​ ವಿಜಯ ಸಾಧಿಸಿದ ಭಾರತದ ವನಿತೆಯರು ಅವಿಸ್ಮರಣೀಯ ಸಾಧನೆ ಮಾಡಿದರು. ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ 143 ರನ್​ಗಳ ಗೆಲುವು ಸಾಧಿಸಿದ್ದ ಮಹಿಳೆಯರು ಎರಡನೇ ಪಂದ್ಯದಲ್ಲಿ 4 ರನ್​ಗಳ ವಿಜಯ ತಮ್ಮದಾಗಿಸಿಕೊಂಡಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು ಆಯೋಜನೆಗೊಂಡಿದ್ದವು. ಮೂರನೇ ಪಂದ್ಯದಲ್ಲಿ ಆರಂಭಿಕ ಎಡಗೈ ಬ್ಯಾಟರ್​ ಸ್ಮೃತಿ ಮಂಧಾನ ಮತ್ತೊಮ್ಮೆ ಭರ್ಜರಿ ಇನ್ನಿಂಗ್ಸ್ ಕಟ್ಟುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಮೂರನೇ ಶತಕವನ್ನು 10 ರನ್​ಗಳ ಕೊರತೆಯಿಂದ ಕಳೆದುಕೊಂಡಿದ್ದಾರೆ.ಒಂದು ವೇಳೆ ಶತಕ ಬಾರಿಸಿದ್ದರೆ ಪುರುಷರ ತಂಡದ ವಿರಾಟ್ ಕೊಹ್ಲಿಯ ಸಾಧನೆಯನ್ನು ಸರಿಗಟ್ಟುವ ಅವಕಾಶ ಇತ್ತು. ಅದನ್ನವರು ನಷ್ಟ ಮಾಡಿಕೊಂಡರು.

ಮೊದಲೆರಡು ಪಂದ್ಯಗಳು ಗೆದ್ದ ಕಾರಣ ಸರಣಿ ಭಾರತದ ಕೈವಶವಾಗಿತ್ತು. ಹೀಗಾಗಿಔಪಚಾರಿಕ ಎನಿಸಿದ್ದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ, ಉತ್ತಮ ಪ್ರದರ್ಶನ ನೀಡುವ ಉದ್ದೇಶ ಹೊಂದಿತ್ತು. ಆದರೆ ಭಾರತೀಯ ಬೌಲರ್​ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಬಂದರೂ ಉಳಿದ ಬ್ಯಾಟರ್​​ಗಳು ವೈಫಲ್ಯ ಕಂಡರು. ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ ಎರಡು ವಿಕೆಟ್​ ಕಬಳಿಸಿ ಎದುರಾಳಿ ತಂಡ ರನ್​ ಗಳಿಕೆಗೆ ಕಡಿವಾಣ ಹಾಕಿದರು. ಪರಿಣಾಮವಾಗಿ ದಕ್ಷಿಣ ಆಫ್ರಿಕಾ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಇನ್ನೂ 56 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟಕ್ಕೆ 220 ರನ್ ಬಾರಿಸಿ ಗೆಲುವು ಸಾಧಿಸಿತು.

ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್​

219 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 61 ರನ್​ ಪೇರಿಸಿತು. ಶಫಾಲಿ ವರ್ಮಾ 25 ರನ್​ಗೆ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಪ್ರಿಯಾ ಪೂನಿಯಾ ಅವರು ಸ್ಮೃತಿ ಮಂಧಾನ ಜೊತೆಗೂಡಿ ಇನಿಂಗ್ಸ್​ ಕಟ್ಟಿದರು. ಈ ಜೋಡಿಯೂ 2ನೇ ವಿಕೆಟ್​​ಗೆ ಅರ್ಧ ಶತಕದ ಜತೆಯಾಟ ನೀಡಿತು.

ಇದನ್ನೂ ಓದಿ:T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಸ್ಮೃತಿ, ಈ ಪಂದ್ಯದಲ್ಲೂ ಶತಕ ಸಿಡಿಸುವ ಭರವಸೆ ಮೂಡಿಸಿದ್ದರು. ಆದರೆ 90 ರನ್ ಗಳಿಸಿದ್ದ ಆತುರ ಮಾಡಿ ವಿಕೆಟ್ ಒಪ್ಪಿಸಿದರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಮಿಂಚಿದರು. ಸರಣಿಯಯ ಹಿಂದಿನ 2 ಪಂದ್ಯಗಳಲ್ಲಿ ಕ್ರಮವಾಗಿ 117 ಮತ್ತು 135 ರನ್ ಗಳಿಸಿದ್ದರು. ಹರ್ಮನ್​ಪ್ರೀತ್​ ಕೌರ್ಕೂ 42 ರನ್ ಗಳಿಸಿದರು. ಜೆಮಿಮಾ ರೊಡ್ರಿಗಸ್ (19) ಮತ್ತು ರಿಚಾ ಘೋಷ್​ (6) ಗೆಲುವು ತಂದುಕೊಟ್ಟು.

ಭಾರತದ ಮಾರಕ ಬೌಲಿಂಗ್


ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ಉತ್ತಮ ಆರಂಭ ಪಡೆಯಿತು ನಾಯಕಿ ಲಾರಾ ವೊಲ್ವಾರ್ಡ್ಟ್ ಅರ್ಧಶತಕ ಸಿಡಿಸಿ ಮಿಂಚಿದರು. ತಜ್ಮಿನ್ ಬ್ರಿಟ್ಸ್ ಕೂಡ 38 ರನ್​ಗಳ ಉಪಯುಕ್ತ ಕಾಣಿಕೆ ನೀಡಿದರು. ಹೀಗಾಗಿ 100 ರನ್​ಗಳ ಆರಂಭಿಕ ಜತೆಯಾಟ ಸಿಕ್ಕಿತು. ನಂತರ ಮರಿಜಾನ್ನೆ ಕಪ್ 7, ಆನ್ನೆಕೆ ಬೋಷ್ 5, ಸುನೆ ಲೂಸ್ 13 ರನ್ ಗಳಿಸಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಶಂಗಾಸೆ (16) ನಾಡಿನ್ ಡಿ ಕ್ಲರ್ಕ್ (26) ಕೂಡ ಔಟಾದರು. ಭಾರತೀಯ ಬೌಲರ್​ಗಳು ಪ್ರಭಾವ ಬೀರಿದರು. ಮೈಕೆ ಡಿ ರಿಡ್ಡರ್ ಕೊನೆ ಹಂತದಲ್ಲಿ ಅಜೇಯ 26 ರನ್ ಪೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ದೀಪ್ತಿ , ಅರುಂಧತಿ ಜತೆಗೆ ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಉರುಳಿಸಿದರು.

Continue Reading

ಪ್ರಮುಖ ಸುದ್ದಿ

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

T20 world Cup 2024: ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ, ಫೆಡರಲ್ ಸಚಿವರೊಬ್ಬರು ಬಾಬರ್ ಅಜಂ ಬೇಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ. ಅವರ ವಿರುದ್ಧ ತಂಡದ ಆಟಗಾರರು ಪಿತೂರಿ ನಡೆಸಿದ್ದಾರೆ ಎಂದು ಹೇಳುವ ವೀಡಿಯೊ ವೈರಲ್ ಆಗಿದೆ.

VISTARANEWS.COM


on

T20 world cup 2024
Koo

ನವದೆಹಲಿ: 2024 ರ ಟಿ 20 ವಿಶ್ವಕಪ್​ನಲ್ಲಿ (T20 World Cup 2024) ಪಾಕ್​ ತಂಡದ ಕಳಪೆ ಪ್ರದರ್ಶನ ಕ್ರಿಕೆಟ್​ ಕ್ಷೇತ್ರದಲ್ಲಿ ಚರ್ಚೆಯ ವಸ್ತು. ಆ ತಂಡದ ಹುಂಬತನಕ್ಕೂ ಆಟಕ್ಕೂ ತಾಳಮೇಳ ಇಲ್ಲದಿರುವ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಈ ವಿಷಯ ಇದೀಗ ಅಲ್ಲಿನ ಪಾರ್ಲಿಮೆಂಟ್​​ನಲ್ಲಿ ಅನುರಣಿಸಿದೆ. ಆಟದ ವೈಖರಿಗೆ ಅಲ್ಲಿನ ರಾಜಕಾರಣಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಶಿಶು ಅಮೆರಿಕ ವಿರುದ್ಧವೂ ಸೋತಿದ್ದು ಅವರಿಗೆ ಪ್ರಶ್ನಾಹ್ನ ಸಂಗತಿಯಾಗಿದೆ.

ಯುಎಸ್ಎ ಮತ್ತು ಭಾರತದ ವಿರುದ್ಧ ಪಾಕಿಸ್ತಾನದ ಅನಿರೀಕ್ಷಿತ ಸೋಲಿನ ನಂತರ ಈ ಟೀಕೆ ಬಂದಿದೆ/ ಇದು ಸೂಪರ್ 8 ಗೆ ಪ್ರವೇಶಿಸುವ ಅವಕಾಶಗಳಿಗೆ ಗಮನಾರ್ಹವಾಗಿ ಅಡ್ಡಿಯಾಗಿದೆ. ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ, ಫೆಡರಲ್ ಸಚಿವರೊಬ್ಬರು ಬಾಬರ್ ಅಜಂ ಬೇಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ. ಅವರ ವಿರುದ್ಧ ತಂಡದ ಆಟಗಾರರು ಪಿತೂರಿ ನಡೆಸಿದ್ದಾರೆ ಎಂದು ಹೇಳುವ ವೀಡಿಯೊ ವೈರಲ್ ಆಗಿದೆ.

ಪಾಕಿಸ್ತಾನದ ಸತತ ಸೋಲಿಗೆ ಪ್ರತಿಕ್ರಿಯೆಯಾಗಿ ಈ ವ್ಯಂಗ್ಯದ ಹೇಳಿಕೆ ಬಂದಿದೆ. ಇದು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರನ್ನು ಕೆರಳಿಸಿದೆ. ಈ ವಿಷಯವನ್ನು ರಾಜಕೀಯಗೊಳಿಸಲಾಗಿದೆ. ಪಿಎಂಎಲ್ (ಎನ್) ಸದಸ್ಯರೊಬ್ಬರು ರಾಜಕೀಯ ಎದುರಾಳಿ, ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಅವರನ್ನು ಟೀಕಿಸಲು ಸೋಲಿನ ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಬರ್ ಸೋಲಿನ ಚರ್ಚೆಯ ಸಭೆಯನ್ನು ನಡೆಸಬೇಕು. ತಂಡದ ವೈಫಲ್ಯಕ್ಕೆ ಇತರ ಆಟಗಾರರನ್ನು ದೂಷಿಸಬೇಕು ಎಂದು ಸಂಸದರು ತಮಾಷೆಯಾಗಿ ಹೇಳಿದ್ದಾರೆ. ಇದು ಹಿರಿಯ ಕ್ರಿಕೆಟಿಗರ ಇಮ್ರಾನ್ ಅವರನ್ನು ಪರೋಕ್ಷವಾಗಿ ದೂಷಿಸುವುದಾಗಿದೆ.

2024 ರ ಟಿ 20 ವಿಶ್ವಕಪ್​​ಗೆ ಸ್ವಲ್ಪ ಮೊದಲು ವೈಟ್-ಬಾಲ್ ನಾಯಕನಾಗಿ ಮರು ನೇಮಕಗೊಂಡ ಬಾಬರ್ ಅಜಮ್, ತಂಡದ ಕಳಪೆ ಪ್ರದರ್ಶನಕ್ಕಾಗಿ ತೀವ್ರ ಹಿನ್ನಡೆಯನ್ನು ಎದುರಿಸಬೇಕಾಯಿತು. ಏಕದಿನ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ನಂತರ ಶಾಹೀನ್ ಅಫ್ರಿದಿ ನಾಯಕನಾಗಿ ವಿಫಲಗೊಂಡ ನಂತರ, ಬಾಬರ್ ತಮ್ಮ ಪಾತ್ರವನ್ನು ಪುನರಾರಂಭಿಸಿದ್ದರು. ಆದರೆ ತಂಡದ ಅದೃಷ್ಟವನ್ನು ತಿರುಗಿಸಲು ಅವರಿಗೆ ಸಾಧ್ಯವಾಗಲಿಲ್ಲ. ತಂಡದ ಆಟಗಾರರೇ ಅವರ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

ಬಾಬರ್ ತನ್ನ ಕುಟುಂಬದೊಂದಿಗೆ ಲಂಡನ್​ನಲ್ಲಿ ರಜಾದಿನಗಳನ್ನು ಆನಂದಿಸುತ್ತಿದ್ದರೆ, ತಂಡದ ಉಳಿದವರು ಪಾಕಿಸ್ತಾನಕ್ಕೆ ಮರಳಿದ್ದಾರೆ. ಬಾಬರ್​​ಗೆ ಪಂದ್ಯಾವಳಿಯಿಂದ ತಂಡವು ಬೇಗನೆ ನಿರ್ಗಮಿಸಿರುವ ಬಗ್ಗೆ ವರದಿಯನ್ನು ನೀಡುವಂತೆ ಕೇಳಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ವರದಿಯನ್ನು ಪರಿಶೀಲಿಸಲಿದ್ದು, ಇದು ನಾಯಕನಾಗಿ ಬಾಬರ್ ಅವರ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಪಿಸಿಬಿ ಈಗ ಈ ಕಳವಳಗಳನ್ನು ಪರಿಹರಿಸುವ ಮತ್ತು ಪಾಕಿಸ್ತಾನ ಕ್ರಿಕೆಟ್​​ನ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸವಾಲಿನ ಕಾರ್ಯವನ್ನು ಎದುರಿಸುತ್ತಿದೆ.

Continue Reading
Advertisement
T20 world Cup 2024
ಕ್ರೀಡೆ36 mins ago

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

SBI
ದೇಶ47 mins ago

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

IND vs SA
ಪ್ರಮುಖ ಸುದ್ದಿ55 mins ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ1 hour ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ2 hours ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ3 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ3 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ3 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ3 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sonakshi Sinha
ಬಾಲಿವುಡ್3 hours ago

Sonakshi Sinha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್;‌ Photos ಇಲ್ಲಿವೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌