ಮಗು ಹೆತ್ತುಕೊಡಲಿಲ್ಲ ಎಂದು ಪತ್ನಿಯ ಗುಪ್ತಾಂಗವನ್ನು ಬ್ಲೇಡ್​​ನಿಂದ ಕೊಯ್ದ ದುಷ್ಟ ಪತಿ; ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ - Vistara News

ಕ್ರೈಂ

ಮಗು ಹೆತ್ತುಕೊಡಲಿಲ್ಲ ಎಂದು ಪತ್ನಿಯ ಗುಪ್ತಾಂಗವನ್ನು ಬ್ಲೇಡ್​​ನಿಂದ ಕೊಯ್ದ ದುಷ್ಟ ಪತಿ; ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ

ಪ್ರತಿದಿನದ ಜಗಳದಿಂದ ಬೇಸತ್ತು ತವರು ಮನೆ ಸೇರಿದ್ದ ಪತ್ನಿಯನ್ನು ರವೀಂದ್ರ ವಾಪಸ್​ ಕರೆದುಕೊಂಡು ಬಂದಿದ್ದ. ಆದರೆ ಬಂದ ಮೇಲೆ ಮತ್ತೆ ಜಗಳ ತೆಗೆದಿದ್ದ.

VISTARANEWS.COM


on

Two killed as two bikes collide head on
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎಂದು ಹೆಂಡತಿಯನ್ನು ಸದಾ ಮೂದಲಿಸುತ್ತ, ಜಗಳವಾಡುತ್ತಿದ್ದ ಪತಿಯೀಗ ಮತ್ತೊಂದು ಹಂತದ ಕ್ರೌರ್ಯ ತೋರಿಸಿದ್ದಾನೆ. ತನ್ನ ಹೆಂಡತಿಯ ಗುಪ್ತಾಂಗವನ್ನು ಬ್ಲೇಡ್ ನಿಂದ ಕೊಯ್ದು ಗಾಯಗೊಳಿಸಿದ್ದಾನೆ. ಆಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದ ಲಖನೌದ ರವೀಂದ್ರ ಎಂಬಾತ ತನ್ನ ಪತ್ನಿ ಬಸುರಾಗಲಿಲ್ಲ ಎಂಬ ಕಾರಣಕ್ಕೆ ಕ್ರೋಧಗೊಂಡು ಈ ಕೃತ್ಯ ಎಸಗಿದ್ದಾನೆ. ಮದುವೆಯಾಗಿ ಆರುವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಇತ್ತೀಚೆಗೆ ದಂಪತಿ ಮಧ್ಯೆ ಜಗಳವಾಗುತ್ತಿತ್ತು. ಗಂಡನ ಕಾಟ ತಡೆಯಲಾಗದ ಆಕೆ ಎಂಟು ತಿಂಗಳ ಹಿಂದೆ ತವರು ಮನೆ ಸೇರಿದ್ದರು.

ಡಿಸೆಂಬರ್ 25ರಂದು ಪತ್ನಿಯಿದ್ದಲ್ಲಿಗೆ ಹೋದ ರವೀಂದ್ರ ಆಕೆಯ ಮನವೊಲಿಸಿ ವಾಪಸ್ ಕರೆದುಕೊಂಡು ಬಂದಿದ್ದ. ಹೀಗೆ ಬಂದವನು ಅಸಹಜ ಲೈಂಗಿಕ ಕ್ರಿಯೆ ನಡೆಸಲು ಮುಂದಾದ. ಆದರೆ ಆಕೆ ಸುತಾರಾಂ ಒಪ್ಪಲಿಲ್ಲ. ಸಿಟ್ಟಾದ ರವೀಂದ್ರ ತನ್ನ ಪತ್ನಿಯ ಗುಪ್ತಾಂಗ ಗಾಯಗೊಳಿಸಿದ್ದಾನೆ. ಆರೋಪಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಅವನು ತಪ್ಪಿಸಿಕೊಂಡಿದ್ದಾನೆ.

ಇದನ್ನೂ ಓದಿ: Suspicious Death | ಅನುಮಾನಾಸ್ಪದ ರೀತಿಯಲ್ಲಿ ಪೊಲೀಸ್‌ ಪೇದೆ ಪತ್ನಿ ಸಾವು; ಕೊಲೆ ಎಂದು ಪೋಷಕರ ಆರೋಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ‘ಕೈದಿ ನಂ. 6106…ನಮ್ದೇ ದರ್ಬಾರುʼ ಅಂದ್ರು ಫ್ಯಾನ್ಸ್‌; ಮೊಬೈಲ್ ಕವರ್, ಆಟೋ, ಬೈಕ್‌ಗಳಲ್ಲಿ ಸ್ಟಿಕ್ಟರ್ ಟ್ರೆಂಡ್!

Actor Darshan: ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಜತೆಗೆ ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ನಮ್ಮ ಬಾಸ್‌ ಜೈಲಿಗೆ ಹೋದರು ಅಭಿಮಾನ ಕಡಿಮೆ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

VISTARANEWS.COM


on

Actor Darshan fans starts sticker trend mobile cover 6106
Koo

ಬೆಂಗಳೂರು: ದರ್ಶನ್ ಸಿನಿಮಾ (Actor Darshan) ಸ್ಟೈಲ್ ಫಾಲೋ ಮಾಡ್ತಿದ ಫ್ಯಾನ್ಸ್ ಈಗ ದರ್ಶನ್‌ ಅವರ ಕೈದಿ ನಂಬರ್‌ವನ್ನು ಟ್ರೆಂಡ್ ಮಾಡಿದ್ದಾರೆ. ದರ್ಶನ್ ಕೈದಿ ನಂಬರ್‌ಗೆ ಡಿಮ್ಯಾಂಡ್‌ ಸಿಕ್ಕಾಪಟ್ಟೆ ಆಗಿದೆ. ದರ್ಶನ್‌ ಕೈದಿ ನಂಬರ್‌ವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜತೆಗೆ ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ನಮ್ಮ ಬಾಸ್‌ ಜೈಲಿಗೆ ಹೋದರು ಅಭಿಮಾನ ಕಡಿಮೆ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ʻʻಡಿ 6106ʼʼಎಂದು ಒಬ್ಬ ಅಭಿಮಾನಿ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ದರ್ಶನ್ ಕೈದಿ ನಂಬರ್‌ನಲ್ಲಿಯೇ ಮೊಬೈಲ್ ಕವರ್‌ ಕೂಡ ಬಂದಿದೆ. ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್‌ವನ್ನು ನೂರಾರು ಫ್ಯಾನ್ಸ್‌ ಹಾಕಿಕೊಂಡು ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಾರೆ. ಕೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದೆ.

ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ.ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇತ್ತೀಚೆಗೆ ಅವರ ವಿಶೇಷ ಚೇತನ ಅಭಿಮಾನಿಯೊಬ್ಬರು ಅವರನ್ನು ನೋಡಲು ಬಂದಿದ್ದರು. ಈ ಘಟನೆಯ ನಂತರ ಅಭಿಮಾನಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದು ಜೈಲಿನಿಂದಲೇ ನಟ ದರ್ಶನ್ ಮನವಿ ತಿಳಿಸಿದ್ದಾರೆ.

ಇದನ್ನೂ ಓದಿ: Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

ಖೈದಿ ನಂಬರ್​ 6106 ಎಂಬ ಶೀರ್ಷಿಕೆ ನಮಗೆ ಬೇಕು ಎಂದು ಭದ್ರಾವತಿ ಮೂವೀ ಮೇಕರ್ಸ್​ ಸಂಸ್ಥೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ‌ ಅರ್ಜಿ ಸಲ್ಲಿಸಿದೆ. ಈ ನಡುವೆ ಈ ಅರ್ಜಿಯನ್ನು ಪರಿಶೀಲಿಸಿದ ಮಂಡಳಿ, ಸದ್ಯಕ್ಕೆ ಈ ಟೈಟಲ್‌ಅನ್ನು ಕೊಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದು, ಸದ್ಯಕ್ಕೆ ಹೋಲ್ಡ್‌ನಲ್ಲಿಟ್ಟಿದೆ. ಸದ್ಯಕ್ಕೆ ಪೆಂಡಿಂಗ್‌ ಇಡಲಾಗಿದೆ ಎಂದು ಮಂಡಳಿ ಅರ್ಜಿ ಮೇಲೆ ಬರೆದಿದೆ. ಈಗಾಗಲೇ ಭದ್ರಾವತಿ ಮೂವೀ ಮೇಕರ್ಸ್ ಸಂಸ್ಥೆ ಕನ್ನಡಲ್ಲಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಇದು ನಾಲ್ಕನೇ ಚಿತ್ರ.

ಈ ಮುಂಚೆ ಮೈಸೂರಿನಲ್ಲಿ ದರ್ಶನ್‌ ಅಭಿಮಾನಿ ಧನುಷ್‌ ದರ್ಶನ್‌ ಕುರಿತಾಗಿ ಕಣ್ಣೀರಿಟ್ಟು 6106 ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್ ಎಂದಿದ್ದರು. ಮಾತ್ರವಲ್ಲ ಇನ್ಮುಂದೆ ಆ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದೂ ಹೇಳಿಕೊಂಡಿದ್ದರು. ದರ್ಶನ್‌ಗೆ ನೀಡಿರುವ ಈ ನಂಬರ್‌ವನ್ನು ಆರ್ ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಅಭಿಮಾನಿ ಮುಂದಾಗಿದ್ದರು. ದರ್ಶನ್ ಜೈಲುವಾಸ ನೆನೆದು ಗಳಗಳನೆ ಕಟ್ಟೀರಿಟ್ಟಿದ್ದರು. ಶೀಘ್ರವಾಗಿ ದರ್ಶನ್‌ ಬಿಡುಗಡೆಗೆ ಆಗಬೇಕು ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಕೂಡ ಹೊತ್ತಿದ್ದರು ಧನುಷ್‌. ʻʻನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ‌ ಬಾಸ್ ಅವರನ್ನು ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದ್ರೆ ರಾಜಾರೋಷವಾಗಿ ಬರ್ತಾರೆʼʼಎಂದು ಹೇಳಿಕೊಂಡಿದ್ದರು.

Continue Reading

ಕ್ರೈಂ

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Valmiki Corporation Scam: ಮಾಜಿ ಸಚಿವ ನಾಗೇಂದ್ರ ಮತ್ತು ಟೀಮ್, ಪ್ರಕರಣದಲ್ಲಿ ತಮ್ಮ ಹೆಸರು ಹೇಳದಂತೆ ಆರೋಪಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ನ್ಯಾಯಾಧೀಶರ ಮುಂದೆಯೇ ಆರೋಪಿಯೊಬ್ಬ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ ಸಾಕ್ಷಿ ನಾಶ ಹಾಗೂ ಆರೋಪಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಾಗೇಂದ್ರಗೆ ಸಂಕಷ್ಟ ಎದುರಾಗಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದ (Valmiki Corporation Scam) ಪ್ರಕರಣದಲ್ಲಿ ರಾಜೀನಾಮೆ (Resignation) ನೀಡಿರುವ ಮಾಜಿ ಸಚಿವ ನಾಗೇಂದ್ರ (Ex Minister Nagendra) ಸಿಬಿಐ (CBI) ತನಿಖಾ ಸಂಸ್ಥೆಯಿಂದ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇದೇ ಕಾರಣವಾಗಿ ನಾಗೇಂದ್ರ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ.

ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆಯ ಬಳಿಕ ನಿಗಮದ ಹಗರಣ ಬೆಳಕಿಗೆ ಬಂದಿತ್ತು. ನಿಗಮದ 186 ಕೋಟಿ ರೂ. ಹಣವನ್ನು ಅಕ್ರಮವಾಗಿ ಅನ್ಯ ರಾಜ್ಯದ ಖಾತೆಗಳಿಗೆ ವರ್ಗಾವಣೆ ಮಾಡಿಸಿದ್ದನ್ನು ಚಂದ್ರಶೇಖರ್‌ ಡೆತ್‌ನೋಟ್‌ ಬೆಳಕಿಗೆ ಬಂದಿತ್ತು. ನಂತರ ಈ ವಿಚಾರದಲ್ಲಿ ಬಿಜೆಪಿ ರಾಜ್ಯವ್ಯಾಪಿ ತೀವ್ರ ಪ್ರತಿಭಟನೆಗೆ ಇಳಿದಿತ್ತು. ಇದರಿಂದ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಅಧಿಕಾರಿಗಳ ಮೇಲೆ ಸರಕಾರ ಕ್ರಮ ಕೈಗೊಂಡು ತನಿಖೆಗೆ ಎಸ್‌ಐಟಿ ರಚಿಸಿತ್ತು. ಒತ್ತಡ ಹೆಚ್ಚಿದ ಪರಿಣಾಮ ಸಚಿವ ನಾಗೇಂದ್ರ ತಲೆದಂಡವೂ ಆಗಿತ್ತು.

ಈ ನಡುವೆ, ಮಾಜಿ ಸಚಿವ ನಾಗೇಂದ್ರ ಮತ್ತು ಟೀಮ್, ಪ್ರಕರಣದಲ್ಲಿ ತಮ್ಮ ಹೆಸರು ಹೇಳದಂತೆ ಆರೋಪಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ನ್ಯಾಯಾಧೀಶರ ಮುಂದೆಯೇ ಆರೋಪಿಯೊಬ್ಬ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ ಸಾಕ್ಷಿ ನಾಶ ಹಾಗೂ ಆರೋಪಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಾಗೇಂದ್ರಗೆ ಸಂಕಷ್ಟ ಎದುರಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಆದರೆ ಹಗರಣದಲ್ಲಿ ಸಿಬಿಐ ಸಹ ಎಂಟ್ರಿ ಆಗಿದೆ. ನೂರು ಕೋಟಿಗೂ ಮಿಕ್ಕಿದ ಹಣದ ಅವ್ಯವಹಾರ ಆಗಿರುವುದರಿಂದ ಸಿಬಿಐ ತನ್ನದೇ ರೀತಿಯಲ್ಲಿ ತನಿಖೆ ಆರಂಭಿಸಿದೆ. ಹೀಗಾಗಿ ನಾಗೇಂದ್ರಗೆ ಬಂಧನದ ಭೀತಿ ಶುರುವಾಗಿದೆ. ರಾಜೀನಾಮೆ ಕೊಟ್ಟ ಬಳಿಕ ನಾಗೇಂದ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಅತ್ತ ಪಕ್ಷದ ಕೆಲಸದಲ್ಲೂ ಕಾಣಿಸಿಕೊಳ್ಳುತ್ತಿಲ್ಲ; ಇತ್ತ ಕ್ಷೇತ್ರದಲ್ಲೂ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಹೀಗಾಗಿ, ಬಂಧನದ ಭೀತಿಯಿಂದ ಹಿನ್ನೆಲೆಯಲ್ಲಿ ಉಳಿದಿರಬಹುದು ಎಂದು ಭಾವಿಸಲಾಗಿದೆ.

ತನಿಖೆಗೆ ಇಡಿ ಎಂಟ್ರಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ ಕೂಡ ಎಂಟ್ರಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ತನಿಖೆ ಪ್ರಾರಂಭಿಸಿದ ಇಡಿ, ಜೈಲಿನಲ್ಲಿ ಇರುವ ಆರೋಪಿಗಳ ವಿಚಾರಣೆ ನಡೆಸಿದೆ. ಪದ್ಮನಾಭ್ ಮತ್ತು ಪರುಶರಾಮ್ ಹೇಳಿಕೆ ದಾಖಲಿಸಿದೆ. ಈಗಾಗಲೇ ಸಿಬಿಐ ಕೂಡ ಇವರ ಹೇಳಿಕೆ ದಾಖಲಿಸಿದೆ.

ಮತ್ತೊಬ್ಬನ ಬಂಧನ

ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬನನ್ನು ಎಸ್‌ಐಟಿ ಈ ವಾರ ವಶಕ್ಕೆ ಪಡೆದಿದೆ. ಅಧೀಕ್ಷಕ ಚಂದ್ರಶೇಖರ ಡೆತ್ ನೋಟ್‌ನಲ್ಲಿ ಹೆಸರು ಬರೆದಿದ್ದ ಸಾಯಿತೇಜ ಎಂಬ ಆರೋಪಿಯನ್ನು ಎಸ್ಐಟಿ ಅಧಿಕಾರಿಗಳು ಚೆನ್ನಗಿರಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಸಾಯಿತೇಜ ಸೇರಿ ಇಬ್ಬರ ಬಂಧನ ಮಾಡಲಾಗಿದ್ದು, ಸದ್ಯ ಸಿಐಡಿ ಕಚೇರಿಯಲ್ಲಿ ವಶಕ್ಕೆ ಪಡೆದಿರುವ ಆರೋಪಿ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: R Ashok: ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿ ಎಂದ ಆರ್‌.ಅಶೋಕ್‌

Continue Reading

ಸ್ಯಾಂಡಲ್ ವುಡ್

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

ಹಲವು ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತುತ್ತಿದ್ದಾರೆ. ಇದೀಗ ಈ ಸಾಲಿಗೆ ಗಾಯಕಿ ಡಾ.ಶಮಿತಾ ಮಲ್ನಾಡ್ ಸೇರ್ಪಡೆಯಾಗಿದ್ದಾರೆ. ʻʻಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು, ಒಳ್ಳೆ ಕೆಲಸಗಳಿಗೆ ಕೈ ಚಾಚಿದ್ದವರು. ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾʼʼಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Actor Darshan support by singer dr shamitha malnad
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ ದರ್ಶನ್‌. ದರ್ಶನ್ ಪರ ಒಲವು ತೋರಿದವರ (Actor Darshan) ಸಂಖ್ಯೆ ತೀರಾ ಕಡಿಮೆ. ಇದೀಗ ಹಲವು ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತುತ್ತಿದ್ದಾರೆ. ಇದೀಗ ಈ ಸಾಲಿಗೆ ಗಾಯಕಿ ಡಾ.ಶಮಿತಾ ಮಲ್ನಾಡ್ (dr shamitha malnad) ಸೇರ್ಪಡೆಯಾಗಿದ್ದಾರೆ. ʻʻಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು, ಒಳ್ಳೆ ಕೆಲಸಗಳಿಗೆ ಕೈ ಚಾಚಿದ್ದವರು. ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾʼʼಎಂದು ಬರೆದುಕೊಂಡಿದ್ದಾರೆ. ಇದೀಗ ಅವರ ಪೋಸ್ಟ್‌ ವೈರಲ್‌ ಆಗುತ್ತಿದೆ.

ʻʻಮನಸೇ ಮನಸೇ,,, ಸೋಲೋ ಗೆಲುವೋ, ನೋವೋ ನಲಿವೋ, ಏಳೋ ಬೀಳೋ,,ಕಲ್ಲೋ ಮುಳ್ಳೋ ಜೀವನದ ಹಾದಿ ಸುಲಭವಲ್ಲ.. ಯಶಸ್ಸಿನ ಹಾದಿ ಸುಗಮವಲ್ಲ… ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು
ದರ್ಶನ್ ತೂಗುದೀಪ.. ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು, ಒಳ್ಳೆ ಕೆಲಸಗಳಿಗೆ ಕೈ ಚಾಚಿದ್ದವರು,, ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾ…. ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು,, ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು,,, ತಪ್ಪಾಗಿದೆಯೋ ಇಲ್ಲವೋ ಏನಾಗಿದೆ ಎಂದು ಅರಿಯದವರು ನಾವು.. ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು,,, ತಪ್ಪಾಗಿದ್ದರೆ ನ್ಯಾಯಾಂಗವಿದೆ, ಕಾನೂನಿದೆ,,,
ಶಿಕ್ಷೆ ಇದೇʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

ʻʻ ಅಕಾಲ ನಿಧನರಾದ ಶ್ರೀ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ,,, ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ,, ನೆರವು, ಆಸರೆ, ನ್ಯಾಯ ಬೇಕಿದೆ,, ಹಾಗೆ ಸೋಶಿಯಲ್ ಮೀಡಿಯಾವನ್ನು ದಯವಿಟ್ಟು ಒಳಿತಿಗೆ ಉಪಯೋಗಿಸಿ,, ಎಲ್ಲರ ಮೇಲೆ ಗೌರವವಿರಲಿ,, ಕಾಮೆಂಟ್ಸ್, ಪೋಸ್ಟ್, ಮೇಲೆ ಹಿಡಿತವಿರಲಿ,,
ದರ್ಶನ್ ಅಣ್ಣಾ,, ಕನ್ನಡದ ಕುಟುಂಬ,, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ,, ಕಲಾವಿದರ ಕುಟುಂಬ,, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗ್ಲೂ ಜೊತೆ ಇರುತ್ತೇವೆ,, ಅಲ್ಲವೇ??? ಹಾಗೆ ಪ್ರೀತಿ ಅಭಿಮಾನ ಬದಲಾಗದು,, ತಪ್ಪು ಯಾರು ಮಾಡಿದ್ದರೂ ಶಿಕ್ಷೆ ಆಗಬೇಕು .. ನ್ಯಾಯ ಎಲ್ಲರಿಗೂ ಒಂದೇ,,, ದರ್ಶನ್ ಅವರನ್ನು ಪ್ರೀತಿಸುವ ಎಲ್ಲರಿಗೂ ನೋವಾಗಿದೆ,,ಸಂಕಟವಾಗಿದೆ,, ಇದು ಸಂಯಮ, ತಾಳ್ಮೆ, ಪ್ರಾರ್ಥನೆಯ ಸಮಯ,,
ಸಿಟ್ಟು, ಕೋಪ, ಅಸಹನೆ, ಹತಾಶೆ ದರ್ಶನ್ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ತೊಂದರೆ ಒಡ್ಡಬಹುದು,,
ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು,,, ಕಾಯೋಣ ,, ಸಮಾಧಾನದಿಂದ..ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ…ʼʼಎಂದು ಬರೆದುಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy murder case) ನಟ ದರ್ಶನ್‌ (Actor Darshan) ಹಾಗೂ ಸಹಚರರು ಜೈಲುವಾಸದಲ್ಲಿದ್ದಾರೆ. ಇತ್ತ ನಿತ್ಯವೂ ಅಭಿಮಾನಿಗಳು ದರ್ಶನ್‌ (Darshan Fans) ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಿದ್ದು, ಪೊಲೀಸರಿಗೆ ತಲೆ ಬಿಸಿಯಾಗಿದೆ. 

Continue Reading

ಕಲಬುರಗಿ

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಬಂದಿದ್ದ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

murder Case in Kalaburagi
Koo

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ (Murder case ) ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಘಟನೆ ನಡೆದಿದೆ. ಮಹೇಶ್ ಕೊಲಾಟೆ (28) ಬರ್ಬರವಾಗಿ ಕೊಲೆಯಾದವನು.

ಮಹಾರಾಷ್ಟ್ರದ ಪುಣೆಯಿಂದ ಗಾಣಗಾಪುರ ದತ್ತನ ದರ್ಶನಕ್ಕೆ ಮಹೇಶ್‌ ಆಗಮಿಸಿದ್ದ. ಗಾಣಗಾಪುರದ ಸಂಗಮದ ಪಕ್ಕದಲ್ಲಿರುವ ಜಮೀನಿನಲ್ಲಿ ಮಹೇಶ್‌ನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

ಮಹೇಶ್ ಕಳೆದ ಎರಡು ತಿಂಗಳಿಂದ ಊರು ಬಿಟ್ಟು ಬಂದಿದ್ದ ಎನ್ನಲಾಗಿದೆ. ಮನೆಯವರಿಗೂ ಹೇಳದೆ ಮನೆ ಬಿಟ್ಟಿದ್ದ ಮಹೇಶ್‌ ದೇವಸ್ಥಾನಗಳಿಗೆ ಅಲೆದಾಡುತ್ತಿದ್ದ. ಮೊನ್ನೆ ಗಾಣಾಗಪುರಕ್ಕೆ ಬಂದಿರುವುದಾಗಿ ಹೇಳಿದ್ದ ಮಹೇಶ್ ಬಳಿಕ ಕೊಲೆಯಾಗಿ ಹೋಗಿದ್ದ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಹಂತಕರು ಯಾರು? ಯಾಕಾಗಿ ಹತ್ಯೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ನವದೆಹಲಿ: 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದ ಎಐಎಂಐಎಂ(AIMIM) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಅವರ ದಿಲ್ಲಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಕುರಿತು(AIMIM) ಎಕ್ಸ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿದೆ.

ಇನ್ನು ಘಟನೆ ಬಗ್ಗೆ ಸ್ವತಃ ಓವೈಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಕೆಲವು ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅದೂ ಅಲ್ಲದೇ ಮನೆಯ ಗೋಡೆಗಳಿಗೆ ಕಪ್ಪು ಮಸಿ ಬಳಿದಿದ್ದಾರೆ. ಒಬ್ಬ ಸಂಸದನಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ? ಘಟನೆ ಬಗ್ಗೆ ದಿಲ್ಲಿ ಪೊಲೀಸರನ್ನು ಕೇಳಿದರೆ ಅವರು ಅಸಾಯಕರಂತೆ ನಿಲ್ಲುತ್ತಿದ್ದಾರೆ. ಅಮಿತ್‌ ಶಾ ಅವರೇ ನಿಮ್ಮ ಮೂಗಿನ ಕೆಳಗೇ ಹೀಗೆಲ್ಲಾ ನಡೆಯುತ್ತಿದೆ ಸ್ಪೀಕರ್‌ ಓಂ ಬಿರ್ಲಾ ಅವರೇ ಸಂಸದನಿಗೆ ರಕ್ಷಣೆ ಇದೆಯೋ ಇಲ್ಲವೋ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಸಾವರ್ಕರ್‌ ಮಾದರಿಯ ಹೇಡಿತನ ನಿಲ್ಲಿಸಿ

ಈ ‘ಸಾವರ್ಕರ್ ಮಾದರಿಯ ಹೇಡಿತನದ ವರ್ತನೆ’ ನಾನು ಹೆದರುವುದಿಲ್ಲ ಎಂದೂ ಓವೈಸಿ ಹೇಳಿದ್ದಾರೆ. “ನನ್ನ ಮನೆಯನ್ನು ಗುರಿಯಾಗಿಸುವ ಗೂಂಡಾಗಳ ಬಗ್ಗೆ ಹೆದರಿಕೆಯಿಲ್ಲ. ಈ ಸಾವರ್ಕರ್ ಮಾದರಿಯ ಹೇಡಿತನದ ನಡವಳಿಕೆಯನ್ನು ನಿಲ್ಲಿಸಿ. ಸ್ವಲ್ಪ ಮಸಿ ಎಸೆದ ನಂತರ ಅಥವಾ ಕೆಲವು ಕಲ್ಲುಗಳನ್ನು ಹೊಡೆದು ನಂತರ ಓಡಿ ಹೋಗುವಂತಹ ಹೇಡಿತನ ಬೇಡ ಎಂದು ಅವರು ಹೇಳಿದರು. ಸೇರಿಸಲಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಿಡಿಗೇಡಿಗಳು ಓವೈಸಿ ನಿವಾಸದ ಎದುರು ಅಳವಡಿಸಿದ್ದ ನೇಮ್‌ಪ್ಲೇಟ್‌ ಮೇಲೆ ಕಪ್ಪು ಮಸಿ ಬಳಿದು ಓದಿ ಹೋಗಿದ್ದಾರೆ. ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸಿದ್ದರು. ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ, ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗುವ ಮೂಲಕ ಮುಕ್ತಾಯಗೊಳಿಸಿದರು. 2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು “ಜೈ ಭೀಮ್, ಅಲ್ಲಾ-ಒ-ಅಕ್ಬರ್ ಮತ್ತು ಜೈ ಹಿಂದ್” ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಓವೈಸಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಿಂದೂ ಫೈರ್ ಬ್ರಾಂಡ್​ ಮಾಧವಿ ಲತಾ ವಿರುದ್ಧ ಗೆಲುವು ಸಾಧಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan fans starts sticker trend mobile cover 6106
ಸ್ಯಾಂಡಲ್ ವುಡ್23 mins ago

Actor Darshan: ‘ಕೈದಿ ನಂ. 6106…ನಮ್ದೇ ದರ್ಬಾರುʼ ಅಂದ್ರು ಫ್ಯಾನ್ಸ್‌; ಮೊಬೈಲ್ ಕವರ್, ಆಟೋ, ಬೈಕ್‌ಗಳಲ್ಲಿ ಸ್ಟಿಕ್ಟರ್ ಟ್ರೆಂಡ್!

Valmiki Corporation Scam
ಕ್ರೈಂ25 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Virat Kohli
ಕ್ರಿಕೆಟ್32 mins ago

Virat Kohli: ಕೊಹ್ಲಿ ಕ್ಲಾಸ್ ಪ್ಲೇಯರ್, ಫೈನಲ್​ನಲ್ಲಿ ಆಡುತ್ತಾರೆ ಎಂದು ಬೆಂಬಲ ಸೂಚಿಸಿದ ನಾಯಕ ರೋಹಿತ್​

karnataka Rain
ಮಳೆ33 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Viral Video
Latest35 mins ago

Viral Video: ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

Viral Video
Latest37 mins ago

Viral Video: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

Actor Darshan support by singer dr shamitha malnad
ಸ್ಯಾಂಡಲ್ ವುಡ್58 mins ago

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

airtel price hike
ಪ್ರಮುಖ ಸುದ್ದಿ1 hour ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

murder Case in Kalaburagi
ಕಲಬುರಗಿ1 hour ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್1 hour ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ33 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ19 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು20 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ24 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌