Venus Transit 2022 | ಮಕರ ರಾಶಿ ಪ್ರವೇಶಿಸಿದ ಶುಕ್ರ; ಈ ನಾಲ್ಕು ರಾಶಿಯವರಿಗೆ ಧನ ಲಾಭ - Vistara News

ಪ್ರಮುಖ ಸುದ್ದಿ

Venus Transit 2022 | ಮಕರ ರಾಶಿ ಪ್ರವೇಶಿಸಿದ ಶುಕ್ರ; ಈ ನಾಲ್ಕು ರಾಶಿಯವರಿಗೆ ಧನ ಲಾಭ

ಇಂದು ಶುಕ್ರ ಗ್ರಹವು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಲಿದೆ (Venus Transit 2022 ). ಶುಕ್ರನ ಈ ಸಂಚಾರ ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಅದರಲ್ಲೂ ನಾಲ್ಕು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆ ರಾಶಿಗಳು ಯಾವವು ಎಂಬುದನ್ನು ತಿಳಿಯಲು ಇಲ್ಲಿ ಓದಿ.

VISTARANEWS.COM


on

Venus Transit 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜ್ಯೋತಿಷ ಶಾಸ್ತ್ರದಲ್ಲಿ ಗ್ರಹಗಳ ಸಂಚಾರ, ರಾಶಿ ಬದಲಾವಣೆಯು ಅತ್ಯಂತ ಮಹತ್ವದ್ದಾಗಿದೆ. ಇದು ಪ್ರಕೃತಿ ಮತ್ತು ಜೀವಿಗಳ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತದೆ. ಭೌತಿಕ ಸುಖ-ಸಮೃದ್ಧಿಯ ಕಾರಕ ಗ್ರಹವಾಗಿರುವ ಶುಕ್ರ ಗ್ರಹವು ಡಿಸೆಂಬರ್ 29ರಂದು ಧನು ರಾಶಿಯಿಂದ ಮಕರ ರಾಶಿಗೆ (Venus Transit 2022) ಪ್ರವೇಶಿಸಲಿದೆ.

ಜೀವನದಲ್ಲಿ ಸುಖ-ಸಮೃದ್ಧಿಗಳು ಶುಕ್ರಗ್ರಹದ ಶುಭ ಪ್ರಭಾವದಿಂದ ದೊರೆಯುತ್ತದೆ. ಹಾಗಾಗಿ ಶುಕ್ರ ಗ್ರಹದ ಶುಭ ಪ್ರಭಾವಕ್ಕೆ ಒಳಗಾಗುವ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಕಾಣಬಹುದಾಗಿದೆ. ಜೊತೆಗೆ ದಾಂಪತ್ಯ ಜೀವನದಲ್ಲಿ, ಪ್ರೇಮ ವಿಚಾರಗಳಲ್ಲಿ ಒಳಿತಾಗುತ್ತದೆ.

ಈ ಬಾರಿಯ ಕ್ಯಾಲೆಂಡರ್ ವರ್ಷಾಂತ್ಯದಲ್ಲಿನ ಶುಕ್ರ ಗ್ರಹದ ಈ ಸಂಚಾರವು ನಾಲ್ಕು ರಾಶಿಯವರ ಅದೃಷ್ಟ ಬದಲಾಯಿಸಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೀಗೆ ಅದೃಷ್ಟ ಪಡೆಯಲಿರುವ ರಾಶಿಗಳು ಯಾವವು ಎಂಬುದನ್ನು ತಿಳಿಯೋಣ.

Horoscope Today

ಮೇಷ : ವರ್ಷಾಂತ್ಯದಲ್ಲಿ ಸಂಭವಿಸುತ್ತಿರುವ ಶುಕ್ರ ಗ್ರಹ ಸಂಚಾರವು ಮೇಷ ರಾಶಿಯವರಿಗೆ ಶುಭ ಫಲವನ್ನು ನೀಡುತ್ತದೆ. ಶುಕ್ರ ಗ್ರಹದ ಗೋಚಾರವು ವೃತ್ತಿ ಕ್ಷೇತ್ರದಲ್ಲಿ ಸಫಲತೆಯನ್ನು ತಂದುಕೊಡಲಿದೆ. ಕಾರ್ಯ ಕ್ಷೇತ್ರದಲ್ಲಿ ಅನುಭವಿಗಳ ಮಾರ್ಗದರ್ಶನ ದೊರಕುವುದಲ್ಲದೇ, ಸಹೋದ್ಯೋಗಿಗಳ ಪ್ರಶಂಸೆ ಸಹ ಲಭಿಸಲಿದೆ. ಶುಕ್ರ ಗ್ರಹದ ಉತ್ತಮ ಪರಿಣಾಮದಿಂದಾಗಿ ದಾಂಪತ್ಯ ಜೀವನವು ಮತ್ತಷ್ಟು ಮಧುರವಾಗಲಿದೆ. ಶುಕ್ರನ ಕೃಪೆಯ ಜೊತೆಗೆ ಜವಾಬ್ದಾರಿಯಿಂದ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮ. ಶುಕ್ರ ಗ್ರಹದ ಗೋಚಾರದ ಸಮಯದಲ್ಲಿ ಯಾವುದೇ ಕಾರಣಕ್ಕೂ ಅಹಂಕಾರ ಪಡದೇ, ಎಲ್ಲರೊಂದಿಗೂ ವಿನಮ್ರತೆಯಿಂದ ನಡೆದುಕೊಳ್ಳುವುದು ಉತ್ತಮ.

ಮಿಥುನ : ಈ ರಾಶಿಯವರಿಗೆ ಶುಕ್ರ ಗ್ರಹದ ಗೋಚಾರವು ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಆಸ್ತಿ ಅಥವಾ ನಿವೇಶನಗಳ ಖರೀದಿ ಬಗ್ಗೆ ಯೋಚಿಸುತ್ತಿದ್ದರೆ, ಅಂಥವರಿಗೆ ಲಾಭ ಉಂಟಾಗುವ ಸಂಭವ ಹೆಚ್ಚಿದೆ. ಜೊತೆಗೆ ಆದಾಯವು ಸಹ ಹೆಚ್ಚಲಿದೆ. ಜೀವನದಲ್ಲಿ ಸುಖ ಸಮೃದ್ಧಿ ದೊರಕುವುದರ ಜೊತೆಗೆ ಸಂಗಾತಿಯ ಸಂಪೂರ್ಣ ಬೆಂಬಲ ದೊರಕಲಿದೆ. ಸಂಗಾತಿಯ ಹುಟುಕಾಟದಲ್ಲಿ ಇರುವವರಿಗೆ ಈ ಅವಧಿಯಲ್ಲಿ ಯಶಸ್ಸು ಸಿಗಲಿದೆ. ಆಸಕ್ತಿ ಇದ್ದವರು ಈ ಸಮಯದಲ್ಲಿ ಯಾವುದಾದರೂ ಟ್ರೈನಿಂಗ್ ಅಥವಾ ಸೆಮಿನಾರ್‌ಗಳಲ್ಲಿ ಪಾಲ್ಗೊಂಡರೆ, ಇದರ ಲಾಭ ಮುಂದಿನ ದಿನಗಳಲ್ಲಿ ದೊರಕುವುದು ಖಚಿತವಾಗಿದೆ. ಶುಕ್ರ ಗ್ರಹ ಗೋಚಾರದ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

ಕನ್ಯಾ : ಈ ರಾಶಿಯವರಿಗೆ ಶುಕ್ರ ಗ್ರಹ ಗೋಚಾರವು ಒಳಿತನ್ನು ಉಂಟು ಮಾಡಲಿದೆ. ಸಂತಾನ ಅಪೇಕ್ಷಿಸುವವರಿಗೆ ಶುಭ ಸುದ್ದಿ ದೊರಕುವ ಸಂಭವ ಹೆಚ್ಚಿದೆ. ಕನ್ಯಾ ರಾಶಿಯವರು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಯೋಚನೆ ಹೊಂದಿದ್ದರೆ, ಈ ಅವಧಿಯಲ್ಲಿ ಅದು ನೇರವೇರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ಒದಗಿ ಬರಲಿವೆ. ಸಂಗಾಂತಿಯೊಂದಿಗಿನ ವೈಮನಸ್ಸು ದೂರವಾಗುತ್ತದೆ.

ಮಕರ: ಈ ಗೋಚಾರದಿಂದ ವಿವಾಹಿತರಿಗೆ ಜೀವನದಲ್ಲಿ ಹೊಸ ಖುಷಿ ಒದಗಿ ಬರಲಿದೆ. ಸಂಗಾಂತಿಯೊಂದಿಗೆ ಮನಸ್ತಾಪಗಳಿದ್ದಲ್ಲಿ, ಈ ಅವಧಿಯಲ್ಲಿ ಅದು ದೂರವಾಗುತ್ತದೆ. ದಂಪತಿಗಳ ನಡುವೆ ಸಾಮರಸ್ಯ ಹೆಚ್ಚುತ್ತದೆ. ಐಷಾರಾಮಿ ವಸ್ತುಗಳಿಗೆ ಹೆಚ್ಚು ಹಣ ವ್ಯಯವಾಗುತ್ತದೆ. ಹಾಗಾಗಿ ಖರ್ಚಿನ ಬಗ್ಗೆ ನಿಗಾ ವಹಿಸುವುದು ಉತ್ತಮ. ಶುಕ್ರ ಗೋಚಾರವು ಈ ರಾಶಿಯವರಿಗೆ ಹೆಚ್ಚಿನ ಒಳಿತನ್ನು ಮಾಡುತ್ತದೆ. ಜೊತೆಗೆ ಸಮಾಜದಲ್ಲಿ ಗೌರವ ಪ್ರತಿಷ್ಟೆಗಳು ವೃದ್ಧಿಯಾಗಲಿದೆ.

ಇದನ್ನೂ ಓದಿ | Vakri Budh 2022 | ನಾಳೆ ಬುಧನ ವಕ್ರಿ ಸಂಚಾರ; ಯಾವ ರಾಶಿಯ ಮೇಲೆ ಏನು ಪರಿಣಾಮ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Kulgam: ಹತ ಮೂವರು ಉಗ್ರರಲ್ಲಿ ಬಸಿತ್‌ ದರ್‌ ಎಂಬಾತನ ಹತ್ಯೆಯು ಪ್ರಾಮುಖ್ಯತೆ ಪಡೆದಿದೆ. ಈತನು ಲಷ್ಕರೆ ತಯ್ಬಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (TRF) ಕಮಾಂಡರ್‌ ಆಗಿದ್ದು, ಸೈನಿಕರ ಪಟ್ಟಿಯಲ್ಲಿ ಎ ಗ್ರೇಡ್‌ ಉಗ್ರನಾಗಿದ್ದಾನೆ. ಈತನ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು.

VISTARANEWS.COM


on

Kulgam
Koo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಕೆಲ ದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಬೆಂಗಾವಲು ವಾಹನಗಳ ಮೇಲೆ ನಡೆಸಿದ ದಾಳಿಗೆ ಭಾರತೀಯ ಸೇನೆಯು (Indian Army) ಸೇಡು ತೀರಿಸಿಕೊಂಡಿದೆ. ಕುಲ್ಗಾಮ್‌ನಲ್ಲಿ (Kulgam) ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಒಟ್ಟು ಮೂವರು ಉಗ್ರರನ್ನು ಭದ್ರತಾ ಸಿಬ್ಬಂದಿಯು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಉಗ್ರರ ವಿರುದ್ಧ ಸೇನೆ ಕೈಗೊಂಡ ಕಾರ್ಯಾಚರಣೆಯಲ್ಲಿ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.

ಸೋಮವಾರ (ಮೇ 6) ತಡರಾತ್ರಿಯೇ ಕುಲ್ಗಾಮ್‌ನ ರೆಡ್ವಾಣಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಭದ್ರತಾ ಸಿಬ್ಬಂದಿಗೆ ಗುಪ್ತಚರ ಮಾಹಿತಿ ದೊರೆತಿತ್ತು. ಇದರ ಅನ್ವಯ ರಾತ್ರೋರಾತ್ರಿ ಸೈನಿಕರು ಕಾರ್ಯಾಚರಣೆ ಕೈಗೊಂಡು ಮೂವರನ್ನು ಹತ್ಯೆಗೈದಿದ್ದಾರೆ. ಭಾರತದ ಸೈನಿಕರು ಕಾರ್ಯಾಚರಣೆ ಕೈಗೊಳ್ಳುತ್ತಲೇ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಆದರೆ, ಕಾರ್ಯಾಚರಣೆ ವೇಳೆ ಭಾರಿ ಮುನ್ನಡೆ ಸಾಧಿಸಿದ ಯೋಧರು ಒಬ್ಬ ಕಮಾಂಡರ್‌ ಸೇರಿ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.

ಹತ ಬಸಿತ್‌ ದರ್.

ಬಸಿತ್‌ ದರ್‌ ಮೋಸ್ಟ್‌ ವಾಂಟೆಡ್‌

ಹತ ಮೂವರು ಉಗ್ರರಲ್ಲಿ ಬಸಿತ್‌ ದರ್‌ ಎಂಬಾತನ ಹತ್ಯೆಯು ಪ್ರಾಮುಖ್ಯತೆ ಪಡೆದಿದೆ. ಈತನು ಲಷ್ಕರೆ ತಯ್ಬಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (TRF) ಕಮಾಂಡರ್‌ ಆಗಿದ್ದು, ಸೈನಿಕರ ಪಟ್ಟಿಯಲ್ಲಿ ಎ ಗ್ರೇಡ್‌ ಉಗ್ರನಾಗಿದ್ದಾನೆ. ಈತನ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ, ಪೊಲೀಸರು ಹಾಗೂ ನಾಗರಿಕರ ಹತ್ಯೆ ಸೇರಿ ಈತನ ವಿರುದ್ಧ 18 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಪೂಂಚ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಮೊದಲೇ ಸೇನೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅರೆ ಸೈನಿಕ ಪಡೆ ಮತ್ತು ಪೊಲೀಸರು ಅವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಇನ್ನು ಈ ಆಪರೇಷನ್‌ನಲ್ಲಿ ಇದುವರೆಗೆ ಯಾರೂ ಅರೆಸ್ಟ್‌ ಆಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

Continue Reading

ಕ್ರೀಡೆ

T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

T20 World Cup: ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿಯ ಪ್ರಾಬಲ್ಯವು ಪರಿಣಾಮಕಾರಿಯಾಗಿದೆ. ಅವರು 10 ಪಂದ್ಯಗಳಲ್ಲಿ 81.33 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಮತ್ತು ಐದು ಅರ್ಧಶತಕಗಳೊಂದಿಗೆ 123.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

VISTARANEWS.COM


on

t20 world cup
Koo

ಬೆಂಗಳೂರು: ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಯಾವಾಗಲೂ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಅವರಿಗಾಗಿ ವಿಶೇಷ ರಣ ತಂತ್ರ ರೂಪಿಸುತ್ತಿದ್ದಾರೆ. ಕೊಹ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಇನ್ನೂ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಆದರೆ, ವೈಟ್-ಬಾಲ್ ಸ್ವರೂಪಗಳಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಹಾಗೆಯೇ ಮುಂದಿನ ಟಿ20 ವಿಶ್ವ ಕಪ್​ನಲ್ಲಿಯೂ (T20 World Cup) ಪಾರಮ್ಯ ಸಾಧಿಸುವ ಯೋಜನೆ ಹೊಂದಿದ್ದಾರೆ.

ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿಯ ಪ್ರಾಬಲ್ಯವು ಪರಿಣಾಮಕಾರಿಯಾಗಿದೆ. ಅವರು 10 ಪಂದ್ಯಗಳಲ್ಲಿ 81.33 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಮತ್ತು ಐದು ಅರ್ಧಶತಕಗಳೊಂದಿಗೆ 123.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಜೂನ್ 9 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಮತ್ತೊಮ್ಮೆ ತಂಡಕ್ಕಾಗಿ ಪ್ರದರ್ಶನ ನೀಡುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲಿದೆ. ಇದು ಪಾಕಿಸ್ತಾನ ತಂಡದ ಚಿಂತೆಯನ್ನು ಹೆಚ್ಚಳ ಮಾಡಿದೆ. ಆದರೆ, ವಿರಾಟ್​ ತಮಗೆ ಏನೂ ಆಗಿಲ್ಲ ಎಂಬುದಾಗಿ ಹೇಳಿದ್ದಾರೆ. ಜತೆಗೆ ಕೊಹ್ಲಿಗಾಗಿ ರಣ ತಂತ್ರ ರೆಡಿಯಾಗಿದೆ ಎಂಬುದಾಗಿಯೂ ನುಡಿದಿದ್ದಾರೆ.

ಎಲ್ಲರಿಗೂ ಇದೆ ಯೋಜನೆ

ಒಂದು ತಂಡವಾಗಿ ನೀವು ಯಾವಾಗಲೂ ವಿಭಿನ್ನ ತಂಡಗಳ ವಿರುದ್ಧ ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜಿಸುತ್ತೀರಿ. ನಾವು ಕೇವಲ ಒಬ್ಬ ಆಟಗಾರನ ವಿರುದ್ಧ ಏನನ್ನೂ ಯೋಜಿಸುವುದಿಲ್ಲ. ನಾವು ಎಲ್ಲಾ 11 ಆಟಗಾರರಿಗಾಗಿ ಯೋಜಿಸಿದ್ದೇವೆ. ನ್ಯೂಯಾರ್ಕ್​​ನ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ ನಾವು ಅದಕ್ಕೆ ಅನುಗುಣವಾಗಿ ಯೋಜಿಸುತ್ತೇವೆ. ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾವು ಅವರ ವಿರುದ್ಧವೂ ಯೋಜನೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಐರ್ಲೆಂಡ್ ಪ್ರವಾಸಕ್ಕೆ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಹೇಳಿದರು.

ಇದನ್ನೂ ಓದಿ: T20 World Cup : ಬುಮ್ರಾಗೆ ವಿಶ್ರಾಂತಿ ನೀಡಲು ನಿರಾಕರಿಸಿದ ಮುಂಬೈ ಇಂಡಿಯನ್ಸ್​; ವಿಶ್ವ ಕಪ್​ ಆಡಲು ಸಮಸ್ಯೆ

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 2022 ರ ಆವೃತ್ತಿಯ ಟಿ 20 ವಿಶ್ವಕಪ್​ನ್ಲಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. 160 ರನ್​ಗಳ ಗುರಿ ಬೆನ್ನತ್ತಿದ ಮೆನ್ ಇನ್ ಬ್ಲೂ ತಂಡ 6.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತು. ಒತ್ತಡದ ಪರಿಸ್ಥಿತಿಯ ನಡುವೆ, ಕೊಹ್ಲಿ 53 ಎಸೆತಗಳಲ್ಲಿ 82* ರನ್ ಗಳಿಸಿದ್ದರು. ಮತ್ತು ಹಾರ್ದಿಕ್ ಪಾಂಡ್ಯ (37 ಎಸೆತಗಳಲ್ಲಿ 40 ರನ್) ಅವರೊಂದಿಗೆ 113 ರನ್​ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

Lok Sabha Election 2024: ರಾಜ್ಯದ 14 ಕ್ಷೇತ್ರಗಳ ಪೈಕಿ ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.72.75 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.57.20 ವೋಟಿಂಗ್‌ ಆಗಿದೆ.

VISTARANEWS.COM


on

Lok Sabha Election 2024
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಹಳ್ಳಿ ಜೀವನದ ವಿಷಯಾಧಾರಿತ ಮತಗಟ್ಟೆ ಆಕರ್ಷಕವಾಗಿ ನಿರ್ಮಾಣಗೊಂಡಿದ್ದು, ಮತದಾರರ ಗಮನ ಸೆಳೆಯಿತು.
Koo

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (lok sabha election 2024) ಮಂಗಳವಾರ ನಡೆದಿದ್ದು, ಮತದಾರರು ಉತ್ಸಾಹದಿಂದ ಹಕ್ಕು ಚಲಾವಣೆ ಮಾಡಿದ್ದಾರೆ. ಸಂಜೆ 5ಗಂಟೆವರೆಗೆ ಶೇ.66.05 ಮತದಾನ (Voter Turnout) ನಡೆದಿದೆ.

14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಸಂಜೆ 6ಗಂಟೆವರೆಗೆ ನಡೆಯಲಿದೆ. ಬೆಳಗ್ಗೆ ಮೊದಲ ಎರಡು ಗಂಟೆಗಳಲ್ಲಿ ಅಂದರೆ 9 ಗಂಟೆವರೆಗೆ ಶೇ.9.45% ಮತದಾನ ದಾಖಲಾಗಿತ್ತು. ಬಳಿಕ 11 ಗಂಟೆಗೆ ಶೇ.24.48 ಹಾಗೂ 1 ಗಂಟೆವರೆಗೆ ಶೇ.41.59 ಮತದಾನ ವರದಿಯಾಗಿತ್ತು. ಅದೇ ರೀತಿ ಮಧ್ಯಾಹ್ನ 3ಗಂಟೆವರೆಗೆ ಶೇ.54.20 ವೋಟಿಂಗ್‌ ನಡೆದಿದೆ. ಇನ್ನು ಸಂಜೆ 5 ಗಂಟೆ ವೇಳೆಗೆ ಶೇ. 66.05 ವೋಟಿಂಗ್‌ ದಾಖಲಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.72.75 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.57.20 ವೋಟಿಂಗ್‌ ಆಗಿದೆ.

ಕ್ಷೇತ್ರವಾರು ಮತದಾನ ಮಾಹಿತಿ

ಚಿಕ್ಕೋಡಿ-ಶೇ. 72.75
ಬೆಳಗಾವಿ- ಶೇ.65.67
ಬಾಗಲಕೋಟೆ- ಶೇ.65.55
ವಿಜಯಪುರ-ಶೇ.60.95
ಕಲಬುರಗಿ- ಶೇ. 57.20
ರಾಯಚೂರು-ಶೇ.59.48
ಬೀದರ್‌- ಶೇ.60.17
ಕೊಪ್ಪಳ- ಶೇ.66.05
ಬಳ್ಳಾರಿ-ಶೇ.68.94
ಹಾವೇರಿ-ಶೇ.71.90
ಧಾರವಾಡ-ಶೇ.67.15
ಉತ್ತರ ಕನ್ನಡ – 69.57
ದಾವಣಗೆರೆ-ಶೇ.70.90
ಶಿವಮೊಗ್ಗ-72.07

ಇದನ್ನೂ ಓದಿ Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Continue Reading

ಪ್ರಮುಖ ಸುದ್ದಿ

School Jobs: 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ತಡೆ; ಮಮತಾ ಸರ್ಕಾರಕ್ಕೆ ಚಾಟಿ

School Jobs: 2016ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕ ಮಾಡಲಾಗಿತ್ತು. ಈ ಪ್ರಕ್ರಿಯೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ನೇಮಕಗೊಂಡ 25,753 ಮಂದಿಯನ್ನು ವಜಾಗೊಳಿಸಬೇಕು ಹಾಗೂ ಅವರು ಇದುವರೆಗೆ ಪಡೆದ ವೇತನವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಹಂತಿರುಗಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು.

VISTARANEWS.COM


on

School Jobs
Koo

ನವದೆಹಲಿ: ಪಶ್ಚಿಮ ಬಂಗಾಳದ (West Bengal) ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು (School Jobs) ಕೆಲಸದಿಂದ ವಜಾಗೊಳಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್‌ (Supreme Court) ತಡೆಯಾಜ್ಞೆ ನೀಡಿದೆ. ಹಾಗೆಯೇ, ನೇಮಕಾತಿ ವೇಳೆ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ನೇಮಕಗೊಂಡ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿಗೆ 25,753 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸಿ ಏಪ್ರಿಲ್‌ 22ರಂದು ಕೋಲ್ಕೊತಾ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದರು. ಹಾಗೆಯೇ, “ನೇಮಕಾತಿ ಹಗರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿ, ಅದನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ನೇಮಕಗೊಂಡವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು” ಎಂದು ಸೂಚಿಸಿದರು.

“ಸರ್ಕಾರಿ ನೌಕರಿ ಸಿಗುವುದೇ ತುಂಬ ವಿರಳ. ಹಾಗಾಗಿ, ನೌಕರರನ್ನು ವಜಾಗೊಳಿಸಿದರೆ, ಸಾರ್ವಜನಿಕ ನಂಬಿಕೆ ಎಂಬುದೇ ಇರುವುದಿಲ್ಲ. ಇದು ವ್ಯವಸ್ಥಿತ ವಂಚನೆಯಾಗಿದೆ. ಸರ್ಕಾರಿ ಉದ್ಯೋಗವನ್ನು ಕಾನೂನು ಬಾಹಿರವಾಗಿ ಪಡೆದುಕೊಂಡರೆ, ಜನರಿಗೆ ವ್ಯವಸ್ಥೆ ಮೇಲೆ ನಂಬಿಕೆಯೇ ಇರುವುದಿಲ್ಲ. ಇನ್ನು ನೇಮಕಾತಿ ಪ್ರಕ್ರಿಯೆ ಸೇರಿ ಯಾವುದೇ ದಾಖಲೆಗಳು ಸರ್ಕಾರದ ಬಳಿ ಇಲ್ಲ. ಸರ್ಕಾರದ ಬಳಿ ದಾಖಲೆಯೇ ಇಲ್ಲ ಎಂದರೆ ಹೇಗೆ? ನೇಮಕಾತಿ ವೇಳೆ ಎಲ್ಲ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಇಡಬಹುದಿತ್ತಲ್ಲ” ಎಂದು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಚಾಟಿ ಬೀಸಿತು.

2016ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕ ಮಾಡಲಾಗಿತ್ತು. ಈ ಪ್ರಕ್ರಿಯೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ನೇಮಕಗೊಂಡ 25,753 ಮಂದಿಯನ್ನು ವಜಾಗೊಳಿಸಬೇಕು ಹಾಗೂ ಅವರು ಇದುವರೆಗೆ ಪಡೆದ ವೇತನವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಹಂತಿರುಗಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಖಾಲಿ OMR ಹಾಳೆಗಳನ್ನು ಸಲ್ಲಿಸಿ, ಕಾನೂನುಬಾಹಿರವಾಗಿ ನೇಮಕಗೊಂಡ ಆರೋಪದಲ್ಲಿ ವಜಾಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನವನ್ನು ಹಿಂದಿರುಗಿಸಬೇಕು ಎಂದು ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರ ವಿಭಾಗೀಯ ಪೀಠ ಹೇಳಿತ್ತು. ಈ ಶಿಕ್ಷಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿತ್ತು.

ಇದನ್ನೂ ಓದಿ: Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Continue Reading
Advertisement
Kulgam
ದೇಶ6 mins ago

Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Lok Sabha Election
Latest21 mins ago

Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

guava leaves benefits
ಆರೋಗ್ಯ33 mins ago

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

t20 world cup
ಕ್ರೀಡೆ48 mins ago

T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

Lok Sabha Election 2024
ಪ್ರಮುಖ ಸುದ್ದಿ56 mins ago

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

School Jobs
ಪ್ರಮುಖ ಸುದ್ದಿ1 hour ago

School Jobs: 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ತಡೆ; ಮಮತಾ ಸರ್ಕಾರಕ್ಕೆ ಚಾಟಿ

Karnataka Weather Forecast
ಮಳೆ1 hour ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Akshaya Tritiya 2024
ಫ್ಯಾಷನ್1 hour ago

Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

T20 world Cup
ಪ್ರಮುಖ ಸುದ್ದಿ1 hour ago

T20 World Cup : ಬುಮ್ರಾಗೆ ವಿಶ್ರಾಂತಿ ನೀಡಲು ನಿರಾಕರಿಸಿದ ಮುಂಬೈ ಇಂಡಿಯನ್ಸ್​; ವಿಶ್ವ ಕಪ್​ ಆಡಲು ಸಮಸ್ಯೆ

Lok Sabha Election 2024
ಬೀದರ್‌1 hour ago

Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ3 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌