Viral Video | ಇದರಲ್ಲಿ ಬಾಳೆ ಹಣ್ಣು ಯಾವುದು? ಪಕ್ಕದಲ್ಲಿರುವುದು ಏನು?-ಹಣ್ಣಿನ ರುಚಿ ಕೆಡಿಸುವ ವಿಡಿಯೊ ಇದು! - Vistara News

ವೈರಲ್ ನ್ಯೂಸ್

Viral Video | ಇದರಲ್ಲಿ ಬಾಳೆ ಹಣ್ಣು ಯಾವುದು? ಪಕ್ಕದಲ್ಲಿರುವುದು ಏನು?-ಹಣ್ಣಿನ ರುಚಿ ಕೆಡಿಸುವ ವಿಡಿಯೊ ಇದು!

Science Girl ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ವಿಡಿಯೊ ಶೇರ್​ ಆಗಿದೆ. ವಿಡಿಯೊ ನೋಡಿಯಾದ ಮೇಲೆ ಬಾಳೆ ಹಣ್ಣು ತಿನ್ನುವಾಗಲೆಲ್ಲ ಇದೇ ದೃಶ್ಯ ನೆನಪಾಗಬಹುದು !

VISTARANEWS.COM


on

ball python looks like a banana Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಳೆ ಹಣ್ಣು ಬಹುತೇಕರು ಇಷ್ಟಪಟ್ಟು ತಿನ್ನುವ ಹಣ್ಣು. ಹೊಟ್ಟೆಯ ಹಸಿವು ತಣಿಸಲೂ, ಆರೋಗ್ಯಕ್ಕೂ ಇದು ಬೆಸ್ಟ್​. ಅದರಲ್ಲೂ ಸಿಪ್ಪೆ ಮೇಲೆ ಚುಕ್ಕಿಬಿದ್ದ ಬಾಳೆ ಹಣ್ಣು ಅಂದರೆ, ಹೆಚ್ಚು ಮಾಗುತ್ತಿರುವ ಬಾಳೆ ಹಣ್ಣು ಒಳ್ಳೆಯದು ಎಂದು ಬಲ್ಲವರು ಹೇಳುತ್ತಾರೆ. ಆದರೆ ಈ ವಿಡಿಯೊ ನೋಡಿಯಾದ ಮೇಲೆ ಹೇಳಿ? ನಿಮಗೆ ಚುಕ್ಕಿ ಬಾಳೆ ಹಣ್ಣು ತಿನ್ಬೇಕು ಅನ್ನಿಸತ್ತಾ?

ಅರೆ, ನಾವ್ಯಾಕೆ ಹೀಗೆ ಹೇಳ್ತಿದ್ದೇವೆ? ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊ ಬಾಳೆಹಣ್ಣಿನ ರುಚಿ ಕೆಡಿಸೋದು ಪಕ್ಕಾ ಎಂಬಂತಿದೆ. ಚುಕ್ಕಿ ಬಾಳೆಹಣ್ಣಿನ ಪಕ್ಕ ಹೆಬ್ಬಾವಿನ ಮರಿಯೊಂದು ಇದೆ. ಅದು ಥೇಟ್​ ಬಾಳೆಹಣ್ಣಿನಂತೆಯೇ ಕಾಣುತ್ತಿದೆ. ಪುಟ್ಟ ಹೆಡೆಯೊಂದಿದೆಯಷ್ಟೇ!. ಬಾಳೆಹಣ್ಣನ್ನು ಮತ್ತು ಆ ಹೆಬ್ಬಾವನ್ನು ಅಕ್ಕ-ಪಕ್ಕ ಇಟ್ಟು, ಒಮ್ಮೆಲೇ ನೋಡಿದರೆ ಬಾಳೆಹಣ್ಣು ಯಾವುದು?-ಹಾವು ಯಾವುದು ಎಂದು ಗೊತ್ತಾಗುವುದೇ ಕಷ್ಟ.

Science Girl ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ವಿಡಿಯೊ ಶೇರ್​ ಆಗಿದೆ. ಅಂದಹಾಗೇ, ಈ ಹೆಬ್ಬಾವಿನ ಹೆಸರೇ ಬನಾನಾ ಬಾಲ್​ ಹೆಬ್ಬಾವು. ಅದರ ಮೈಪೂರ್ತಿ ಹಳದಿ ಬಣ್ಣವಿದ್ದು, ಚುಕ್ಕಿ ಬಿದ್ದಿದೆ. ಮಾಗುತ್ತಿರುವ ಬಾಳೆಹಣ್ಣಿನಂತೆಯೇ ಕಾಣುತ್ತದೆ. ನೆಟ್ಟಿಗರನ್ನಂತೂ ಸಿಕ್ಕಾಪಟೆ ಗೊಂದಲಕ್ಕೀಡು ಮಾಡಿದೆ.

ಇದನ್ನೂ ಓದಿ: Viral video | ಹೊರೆ ಹೊತ್ತ ಕೈಗಳು, ತಾನಾಗಿಯೇ ಚಲಿಸುವ ಸೈಕಲು! ಇವನ ದುಡಿಮೆಯೇ ಸರ್ಕಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Inspirational Story: ಕಣ್ಣೆದುರೆ ಸುಟ್ಟು ಕರಕಲಾದ ಮಗಳ ದುರಂತ ಅಂತ್ಯ; ಬಡಮಕ್ಕಳಿಗೆ ದಾರಿದೀಪವಾದ ಎಎಸ್‌ಐ

Inspirational Story: ಮಗಳ ದುರಂತ ಸಾವಿನಿಂದ ನೊಂದಿದ್ದ ಎಎಸ್‌ಐ ಲೋಕೇಶಪ್ಪ ಬಡಮಕ್ಕಳಲ್ಲಿ ಮಗಳನ್ನು ಕಾಣುತ್ತಿದ್ದಾರೆ. ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣವನ್ನು ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ಧನ ಸಹಾಯ ಮಾಡುತ್ತಿದ್ದಾರೆ

VISTARANEWS.COM


on

By

Inspirational Story
ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಲೋಕೇಶಪ್ಪ
Koo

ಬೆಂಗಳೂರು: ಜನ-ಸಾಮಾನ್ಯರ ರಕ್ಷಣೆ ಮಾಡುವ ಆ ಎಎಸ್‌ಐಗೆ ಮಗಳೇ ಜೀವವಾಗಿದ್ದಳು. ಆಕೆಯ ಭವಿಷ್ಯಕ್ಕಾಗಿ ನೂರಾರು ಕನಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸಾಕಿ ಸಾಲುಹಿದ್ದ ಮಗಳು ಅಗ್ನಿ ದುರಂತದಲ್ಲಿ ತಂದೆ ಕಣ್ಣೆದುರೇ ಸುಟ್ಟು ಕರಕಲಾಗಿದ್ದಳು. ಮಗಳ ಅಗಲಿಕೆಯಿಂದ ಮನನೊಂದಿದ್ದ ಅವರು ಕೊರಗಿ ಕಂಗಲಾಗಿದ್ದರು. ಆದರೆ ಮಗಳ ಸಾವಿಗೆ ಗೌರವ ಸರ್ಮಪಿಸಬೇಕೆಂದು ಆ ಖಾಕಿ ಇಟ್ಟ ಹೆಜ್ಜೆ ಹಲವು ಮಕ್ಕಳ ಭವಿಷ್ಯಕ್ಕೆ ದಾರಿ (Inspirational Story) ದೀಪವಾಗಿದೆ.

ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕೆಲಸ ಮಾಡುತ್ತಿರುವ ಲೋಕೇಶಪ್ಪ ಬಡ ಮಕ್ಕಳಿಗೆ ಮಾಡಿದ ದಾನದಿಂದಲೇ ಹೆಸರು ಮಾಡಿದ್ದಾರೆ. 2019ರಲ್ಲಿ ಬೆಂಕಿ ಅವಘಡದಲ್ಲಿ ತಮ್ಮ ಮಗಳು ಹರ್ಷಾಲಿಯನ್ನು ಕಳೆದುಕೊಂಡಿದ್ದರು. ಇದರಿಂದ ಮನನೊಂದಿದ್ದ ಅವರು ಮಗಳ ಸಾವಿನ ಗೌರವಾರ್ಥವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ತಮ್ಮ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣವನ್ನು ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ಧನಸಹಾಯ ಮಾಡುತ್ತಿದ್ದಾರೆ. ಲೊಕೇಶಪ್ಪ ಪತ್ನಿ ಕೂಡ ಮಗಳನ್ನು ಕಳೆದುಕೊಂಡು ತೀವ್ರವಾಗಿ ನೊಂದಿದ್ದರು. ಹೀಗಾಗಿ ಶಿಕ್ಷಣ ಇಲಾಖೆಯ ಕೆಲಸ ಬಿಟ್ಟು , ಹರ್ಷಾಲಿ ಹೆಸರಿನಲ್ಲಿ ಎನ್‌ಜಿಒ ಶುರು ಮಾಡಿ ಅದರ ಮೂಲಕ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

ಇನ್ನು ಲೋಕೇಶಪ್ಪ ದಂಪತಿ ಕಳೆದ ಒಂದು ವರ್ಷದಿಂದ ಈ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಮೈಸೂರು 1, ಹಾಸನ 4 , ಬೆಂಗಳೂರು 1 ಶಾಲೆ ಸೇರಿ ಒಟ್ಟು ಆರು ಸರ್ಕಾರಿ ಶಾಲೆಗಳಲ್ಲಿರುವ ಬಡ ಮಕ್ಕಳನ್ನು ಗುರುತಿಸಿದ್ದಾರೆ. ಅವರ ವಿದ್ಯಾಭ್ಯಾಸಕ್ಕೆ ಬೇಕಾದ ಪರಿಕರಗಳಾದ ಪುಸ್ತಕ, ಪೆನ್ನು, ಪೆನ್ಸಿಲ್, ವಾಟರ್ ಬಾಟಲ್ ಸೇರಿದಂತೆ ಹಲವು ವಸ್ತುಗಳನ್ನ ವಿತರಣೆ ಮಾಡುತ್ತಿದ್ದಾರೆ.

ಆರು ಶಾಲೆಗಳ ಸುಮಾರು 600‌ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿದ್ದಾರೆ. ಬೆಂಗಳೂರಿನ 200 ಮಕ್ಕಳು ಸೇರಿದಂತೆ 600 ಮಕ್ಕಳಿಗೆ ಆಸರೆಯಾಗಿದ್ದಾರೆ. ಸದ್ಯ ಎಎಸ್‌ಐ ಅವರ ಕೆಲಸಕ್ಕೆ ಹಲವೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಡ ಮಕ್ಕಳಲ್ಲಿ ತನ್ನ ಮಗಳನ್ನ ಕಾಣುತ್ತಿರುವ ಎಎಸೈ ಲೊಕೇಶಪ್ಪ ಪ್ರತಿ ವರ್ಷವೂ ಕೂಡ ಮಗಳ ಸಾವಿನ ದಿನವನ್ನು ದಾನ ಮಾಡುವ ಮೂಲಕ ಸ್ಮರಣಾರ್ಥ ದಿನವಾಗಿ ಮಾಡಲು ನಿರ್ಧರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral News: ನೀರ ಬಿಟ್ಟು ರಸ್ತೆಗೆ ಬಂದ ಮೊಸಳೆಗೆ ಇಲ್ಲೇನು ಕೆಲಸ? ಅಪರೂಪದ Video ಇಲ್ಲಿದೆ ನೋಡಿ

Viral News: ಮೊಸಳೆ ಯಾರಿಗೆ ಗೊತ್ತಿಲ್ಲ ಹೇಳಿ? ಚೂಪಾದ ಉಗುರು, ಹಲ್ಲು, ದೈತ್ಯ ದೇಹ ನೋಡಿದರೆ ಸಾಕು ಹಲವರು ಬೆಚ್ಚಿ ಬೀಳುತ್ತಾರೆ. ಅಂತಹ ಪ್ರಾಣಿ ಧುತ್ತನೆ ಕಣ್ಣೆದುರು ಬಂದರೆ ಹೇಗಾಗಬೇಡ? ಅದರಲ್ಲಿಯೂ ನೀರಿನಲ್ಲಿ ಇರುವ ಪ್ರಾಣಿ ರಸ್ತೆಗೆ ಬಂದರೆ ಓಡಾಡುವವರು ಬೆಚ್ಚಿ ಬೀಳದೆ ಇರುತ್ತಾರಾ? ಹೌದು ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿದೆ. ಈ ಅಪರೂಪದ ವಿಡಿಯೊ ಇಲ್ಲಿದೆ ನೋಡಿ.

VISTARANEWS.COM


on

Viral News
Koo

ಮುಂಬೈ: ಮೊಸಳೆ (Crocodile) ಜಲಚರ. ಸಾಮಾನ್ಯವಾಗಿ ನದಿಯಲ್ಲಿ, ದೊಡ್ಡ ದೊಡ್ಡ ಸರೋವರಗಳಲ್ಲಿ, ಸಮುದ್ರದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ದಡಕ್ಕೆ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಮೈ ಬೆಚ್ಚಗೆ ಮಾಡಿಕೊಂಡು ಮತ್ತೆ ನೀರೊಳಗೆ ತೆರಳುತ್ತವೆ. ಇದೆಲ್ಲರಿಗೂ ಗೊತ್ತಿರುವ ವಿಷಯ. ಇದರಲ್ಲೇನು ವಿಶೇಷ ಎಂದು ನೀವು ಪ್ರಶ್ನಿಸಬಹುದು. ಇಲ್ಲಿದೆ ಟ್ವಿಸ್ಟ್‌. ನೀರಲ್ಲಿ ಇರುವ ಮೊಸಳೆ ನಗರಕ್ಕೆ ಅದರಲ್ಲಿಯೂ ಜನ ನಿಬಿಡ ರಸ್ತೆಗೆ ಬಂದರೆ ಹೇಗಾಗಬಹುದು? ಇದೆಲ್ಲ ಕಲ್ಪನೆ, ಸಿನಿಮಾದಲ್ಲಿ ನಡೆಯಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಹಾಗಾದರೆ ನಿಜವಾಗಿಯೂ ರಸ್ತೆಗೆ ಮೊಸಳೆ ಬಂದಿತ್ತೆ? ಎಲ್ಲಿ? ಯಾಕೆ? ಮುಂತಾದ ನಿಮ್ಮ ಪ್ರಶ್ನೆಗೆ ಈ ವೈರಲ್‌ ವಿಡಿಯೊದಲ್ಲಿ ಇದೆ ಉತ್ತರ (Viral News).

ಮಹಾರಾಷ್ಟ್ರದಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಈ ಮಳೆಗೆ ಬೇಗ ಬೇಗ ಮನೆ ಸೇರಿಕೊಂಡು ಬಿಡಬೇಕು ಎಂದು ಧಾವಂತದಲ್ಲಿ ಸಾಗುತ್ತಿದ್ದ ರತ್ನಗಿರಿ ಜಿಲ್ಲೆಯ ಜನರಿಗೆ ಕನಸಿನಲ್ಲಿಯೂ ಊಹಿಸದ ಅಚ್ಚರಿ ರಸ್ತೆ ಮಧ್ಯೆ ಎದುರಾಗಿತ್ತು. ತಮ್ಮ ಪಾಡಿಗೆ ತಾವು ಸಾಗುತ್ತಿದ್ದ ವಾಹನ ಚಾಲಕರು ಒಂದು ಕ್ಷಣ ದಂಗಾಗಿ ನಿಂತು ಅಪರೂಪದ ಅತಿಥಿಯನ್ನು ದಿಟ್ಟಿಸಿ ನೋಡತೊಡಗಿದರು. ಹೌದು, ಭಾರಿ ಮಳೆಯಿಂದಾಗಿ ಬೃಹತ್‌ ಗಾತ್ರದ ಮೊಸಳೆಯೊಂದು ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಎತ್ತ ಹೋಗಬೇಕು ಎನ್ನುವುದು ತಿಳಿಯದೆ ಅದು ಜನ ನಿಬಿಡ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿರುವ ದೃಶ್ಯ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

ರತ್ನಗಿರಿ ಜಿಲ್ಲೆಯ ಚಿಪ್ಲುನ್‌ ಎಂಬಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಚಿಪ್ಲುನ್‌ನಲ್ಲಿ ಹರಿಯುವ ಶಿವ ನದಿ ಅನೇಕ ಮೊಸಳೆಗಳಿಗೆ ಆಶ್ರಯತಾಣ. ಇಲ್ಲಿ ಜೋರಾಗಿ ಸುರಿದ ಮಳೆಗೆ ಬೃಹತ್‌ ಗಾತ್ರದ ಮೊಸಳೆಯೊಂದು ನೀರಿನಲ್ಲಿ ಕೊಚ್ಚಿಕೊಂಡು ಬಂದಿದೆ. ಅದು ರಸ್ತೆಯಲ್ಲಿ ಸಂಚರಿಸುವುದನ್ನು ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವಾಹನಗಳ ಬೆಳಕಿನಲ್ಲಿ ಮೊಸಳೆ ರಸ್ತೆಯಲ್ಲಿ ರಾಜಾರೋಷವಾಗಿ ಅಡ್ಡಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ರತ್ನಗಿರಿ ಮೊಸಳೆಗಳಿಗೆ ಪ್ರಸಿದ್ಧ

ಭಾರತದ ಮೂರು ಮೊಸಳೆ ಪ್ರಭೇದಗಳಲ್ಲಿ ಒಂದಾದ ಮಗ್ಗರ್ ಮೊಸಳೆಗಳಿಗೆ ರತ್ನಗಿರಿ ಬಹಳ ಪ್ರಸಿದ್ಧ. ರತ್ನಗಿರಿ ಜಿಲ್ಲೆಯ ಚಿಪ್ಲುನ್ ಮತ್ತು ಇತರ ಸ್ಥಳಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಜುಲೈ 2ರ ತನಕ ಧಾರಾಕಾರ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

ಸದ್ಯ ವಿಡಿಯೊ ನೋಡಿದರ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮೊಸಳೆ ನೆಲದ ಮೇಲೆ ಇಷ್ಟು ಸರಾಗವಾಗಿ ನಡೆಯುತ್ತದೆ ಎನ್ನುವುದು ಗೊತ್ತೆ ಇರಲಿಲ್ಲ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಕಣ್ಣನ್ನು ನಂಬಲೇ ಸಾಧ್ಯವಾಗುತ್ತಿಲ್ಲ ಎಂದು ಇನ್ನೂ ಹಲವರು ಉದ್ಘರಿಸಿದ್ದಾರೆ. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ಎಂದು ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನೀರು ಬಿಟ್ಟು ರಸ್ತೆಯಲ್ಲಿ ಮೊಸಳೆಗೆ ಏನು ಕೆಲಸ? ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

Continue Reading

ವಾಣಿಜ್ಯ

Birla Opus: ಬಿರ್ಲಾ ಪೇಂಟ್ ಜಾಹೀರಾತು ನಿಮಗೂ ಇಷ್ಟ ಆಗಿರಬೇಕಲ್ಲವೇ? ಇದರ ಸಂದೇಶ ಏನು? ಹಿನ್ನೆಲೆ ಏನು? ಕುತೂಹಲಕರ ಮಾಹಿತಿ

ಆದಿತ್ಯ ಬಿರ್ಲಾ ಗ್ರೂಪ್‌ನ (Aditya Birla Group) ಗ್ರಾಸಿಮ್ ಇಂಡಸ್ಟ್ರೀಸ್ ಅಡಿಯಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ತನ್ನ ಮೊದಲ ವಿಷಯಾಧಾರಿತ ಸಂವಹನ ಚಿತ್ರವನ್ನು ಬಿಡುಗಡೆ ಮಾಡಿದೆ. ‘ಮೇಕ್ ಲೈಫ್ ಬ್ಯೂಟಿಫುಲ್’ ಎಂಬ ಅಡಿಬರಹದ ಅಡಿಯಲ್ಲಿ ಬಿರ್ಲಾ ಓಪಸ್‌ನ (Birla Opus) ಬ್ರಾಂಡ್ ಫಿಲಾಸಫಿಯನ್ನು ಈ ಜಾಹೀರಾತು ಚಿತ್ರವು ಪ್ರದರ್ಶಿಸಿದೆ. ಬದುಕನ್ನು ಸುಂದರಗೊಳಿಸು ಎಂಬ ಸಂದೇಶ ಸಾರುವ ಈ ಜಾಹೀರಾತಿನ ಕಲ್ಪನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಜಾಹೀರಾತಿನ ಹಿನ್ನೆಲೆಯ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Birla Opus
Koo

ವಕ್ತ್ ಎ ಹಿ ಖುಷಿಯೋ ಕೋ ಖೋಲ್ ದೋ ದುನಿಯಾ ಕೋ ರಂಗ್ ದೋ… ಜಾಹೀರಾತಿನಲ್ಲಿ ಬರುವ ಈ ಹಾಡು ಎಲ್ಲರ ಮನದಲ್ಲೂ ಗುನುಗುನಿಸುತ್ತಿರಬಹುದು. ಬಿರ್ಲಾ ಪೇಂಟ್ ನ (Birla Opus) ಈ ಜಾಹೀರಾತು (advertisement) ಎಲ್ಲರಿಗೂ ಇಷ್ಟವಾಗಿರಬೇಕು. ಇದರ ಸಂದೇಶ ಏನು, ಹಿನ್ನೆಲೆ ಏನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಣ್ಣಗಳೇ (colour) ಇಲ್ಲದ ತನ್ನ ಸುತ್ತಮುತ್ತಲಿನ ಪ್ರಪಂಚಕ್ಕೆ ಪುಟ್ಟ ಬಾಲಕನೊಬ್ಬ (kid) ಬಣ್ಣ ಕೊಡುತ್ತಾ ಹೋಗುತ್ತಾನೆ. ತಾಯಿ ಮೊದಲು ಆತನನ್ನು ತಡೆಯುತ್ತಾಳೆ. ಆದರೆ ಬಾಲಕ ತನ್ನ ಪಟ್ಟು ಬಿಡುವುದಿಲ್ಲ. ಎಲ್ಲರೂ ಅವನು ನೀಡಿದ ಬಣ್ಣದ ಖುಷಿಯಲ್ಲಿ ಮಿಂದೇಳುವಗ ಆತನ ತಾಯಿಗೂ ಬಣ್ಣ ಬೇಕೆಂದೆನಿಸುತ್ತದೆ. ಅಲ್ಲಿಗೆ ಜಾಹೀರಾತು ಕೊನೆಗೊಳ್ಳುತ್ತದೆ.

ಆದಿತ್ಯ ಬಿರ್ಲಾ ಗ್ರೂಪ್‌ನ (Aditya Birla Group) ಗ್ರಾಸಿಮ್ ಇಂಡಸ್ಟ್ರೀಸ್ ಅಡಿಯಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ತನ್ನ ಮೊದಲ ವಿಷಯಾಧಾರಿತ ಸಂವಹನ ಚಿತ್ರವನ್ನು ಬಿಡುಗಡೆ ಮಾಡಿದೆ. ‘ಮೇಕ್ ಲೈಫ್ ಬ್ಯೂಟಿಫುಲ್’ ಎಂಬ ಅಡಿಬರಹದ ಅಡಿಯಲ್ಲಿ ಬಿರ್ಲಾ ಓಪಸ್‌ನ ಬ್ರಾಂಡ್ ಫಿಲಾಸಫಿಯನ್ನು ಈ ಚಿತ್ರವು ಪ್ರದರ್ಶಿಸಿದೆ.

ಇದು ಬಿರ್ಲಾ ಓಪಸ್ ಬ್ರ್ಯಾಂಡ್‌ನ ಬದಲಾವಣೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ ಮತ್ತು ಹೆಚ್ಚು ಸುಂದರವಾದ ಜಗತ್ತನ್ನು ರಚಿಸಲು ಸಹಾಯ ಮಾಡುತ್ತದೆ ಎನ್ನುವ ಸಂದೇಶವನ್ನು ಒಳಗೊಂಡಿದೆ.

ಹಿಂದೆಂದೂ ಮಾಡದಿರುವ ಹೈ-ಡೆಫಿನಿಷನ್, ನೈಜ ಸಿಲೂಯೆಟ್‌ಗಳೊಂದಿಗೆ 3ಡಿ ವೈಶಿಷ್ಟ್ಯದ ಅನಿಮೇಷನ್ ಚಿತ್ರ ಇದಾಗಿದೆ.

ಖ್ಯಾತ ಭಾರತೀಯ ಸಂಗೀತ ಸಂಯೋಜಕ ರಾಮ್ ಸಂಪತ್ ರಚಿಸಿದ ಸುಮಧುರ ಟ್ರ್ಯಾಕ್ ಅನ್ನು ಇದು ಒಳಗೊಂಡಿದೆ. ಜಗತ್ತಿಗೆ ಬಣ್ಣ ನೀಡಿ ಸಂದೇಶದೊಂದಿಗೆ ಅಭಿಯಾನವನ್ನು ಉಂಟು ಮಾಡುವಂತಿದೆ.

ಈ ಜಾಹೀರಾತು ಚಿತ್ರವನ್ನು ಹಿಂದಿ ಮತ್ತು ಎಲ್ಲಾ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಮಾಡಲಾಗಿದೆ. ಪ್ರಚಾರ ಅಭಿಯಾನ ಮೂಡಿಸಲು ಮತ್ತು ಪ್ರಯೋಗಗಳನ್ನು ಪ್ರೇರೇಪಿಸಲು ಎಲ್ಲ ಮಾದರಿಯ ಮಾಧ್ಯಮಗಳಿಂದ ಇದು ಬೆಂಬಲಿತವಾಗಿದೆ.
ಲಿಯೋ ಬರ್ನೆಟ್ ಇಂಡಿಯಾದಿಂದ ಸಂವಹನವನ್ನು ಪರಿಕಲ್ಪನೆ ಮಾಡಲಾಗಿದ್ದು, ಬ್ರೆಜಿಲ್ ಮೂಲದ ಪ್ರಮುಖ ಜಾಗತಿಕ ಅನಿಮೇಷನ್ ಸ್ಟುಡಿಯೋ ಝಾಂಬಿ ಸ್ಟುಡಿಯೋ ಇದನ್ನು ನಿರ್ಮಿಸಿದೆ.

ಪೇಂಟ್ ಉದ್ಯಮ ಪ್ರವೇಶ

2024ರ ಫೆಬ್ರವರಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಬಿರ್ಲಾ ಓಪಸ್ ಅನ್ನು ಪ್ರಾರಂಭಿಸುವುದರೊಂದಿಗೆ ಪೇಂಟ್ ಉದ್ಯಮಕ್ಕೆ ಪ್ರವೇಶಿಸಿದೆ. ತನ್ನ ಪೇಂಟ್ಸ್ ವ್ಯವಹಾರವನ್ನು ವಿಸ್ತರಿಸಲು ಬದ್ಧವಾಗಿರುವ ಕಂಪನಿಯು 2025ರ ವೇಳೆಗೆ ರಾಷ್ಟ್ರವ್ಯಾಪಿ ಆರು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ.

ಇದರ ಉದ್ದೇಶ ಏನು?

ಅನಿಮೇಷನ್ ಜಾಹೀರಾತು ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಬಿರ್ಲಾ ಓಪಸ್‌ನ ಸಿಇಒ ರಕ್ಷಿತ್ ಹರ್‌ಗಾವೆ, ಉದ್ದೇಶ ಮತ್ತು ಮೌಲ್ಯದೊಂದಿಗೆ ಇರುವ ಉತ್ಪನ್ನಗಳು ಮತ್ತು ಅನುಭವಗಳನ್ನು ಹುಡುಕುವ ಇಂದಿನ ಗ್ರಾಹಕರ ವಿವೇಚನಾಶೀಲ ಅಭಿರುಚಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಚಿತ್ರದ ತಮಾಷೆಯ ನಿರೂಪಣೆಯೊಂದಿಗೆ ‘ಮೇಕ್’ ಎಂಬ ನಮ್ಮ ಬ್ರ್ಯಾಂಡ್ ನಂಬಿಕೆಯನ್ನು ನಿರೂಪಿಸುತ್ತದೆ. ಲೈಫ್ ಬ್ಯೂಟಿಫುಲ್.. ಎಂಬುದು ನಮ್ಮ ಗ್ರಾಹಕರೊಂದಿಗೆ ಈ ಪರಿವರ್ತನೆಯ ಪ್ರಯಾಣವನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂಬ ಸಂದೇಶವನ್ನು ಇದು ಸಾರುತ್ತದೆ ಎಂದು ಹೇಳಿದರು.

ಬಿರ್ಲಾ ಓಪಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಇಂದರ್‌ಪ್ರೀತ್ ಸಿಂಗ್, ಬಿರ್ಲಾ ಓಪಸ್‌ಗಾಗಿ ನಮ್ಮ ಮೊದಲ ಬ್ರ್ಯಾಂಡ್‌ ಕಿರುಚಿತ್ರವನ್ನು ಅನಾವರಣಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. ಹಾಲಿವುಡ್ ಚಲನಚಿತ್ರಗಳಲ್ಲಿನ ಹೆಚ್ ಡಿ ಅನಿಮೇಷನ್‌ಗೆ ಹೋಲಿಸಬಹುದಾದ ವಿಶ್ವದ ಅತ್ಯುತ್ತಮ ಅನಿಮೇಷನ್ ಶೈಲಿಗಳ ಮೂಲಕ ನೈಜ ಸೌಂದರ್ಯವನ್ನು ಈ ಕಿರುಚಿತ್ರವು ಉದಾಹರಿಸುತ್ತದೆ. ಇದು ಭಾರತದಲ್ಲಿನ ಬಣ್ಣಗಳ ಉದ್ಯಮದಲ್ಲಿ ಮೊದಲನೆಯದು. ಖ್ಯಾತ ಸಂಗೀತ ಸಂಯೋಜಕ ರಾಮ್ ಸಂಪತ್ ಅವರು ರಚಿಸಿರುವ ‘ದುನಿಯಾ ಕೋ ರಂಗ್ ದೋ’ ಸಂದೇಶವು ಜೀವನದಲ್ಲಿ ಭರವಸೆ, ಸಂತೋಷ ಮತ್ತು ಸೌಂದರ್ಯವನ್ನು ಕಂಡುಕೊಳ್ಳುವ ಪ್ರಬಲ ಕಲ್ಪನೆಯೊಂದಿಗೆ ಅನುರಣಿಸುತ್ತದೆ ಎಂದರು.

ಬಿರ್ಲಾ ಓಪಸ್ ಇಂದಿನ ಕ್ರಿಯಾತ್ಮಕ ಹೊಸ ಭಾರತೀಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಬ್ರ್ಯಾಂಡ್ ಆಗಿದೆ ಮತ್ತು ನಾವು ಅಭಿಯಾನಕ್ಕೆ ತಾಜಾ ಮತ್ತು ನವೀನ ವಿಧಾನವನ್ನು ನೀಡಲು ಬಯಸಿದ್ದೇವೆ. ಕಥೆ ಹೇಳುವಿಕೆಗಾಗಿ ಅನಿಮೇಷನ್ ಅನ್ನು ಬಳಸುವುದರಿಂದ, ನಮ್ಮ ಚಿತ್ರವು ನಮ್ಮ ಪ್ರೇಕ್ಷಕರು ಹೇಗೆ ಸ್ಫೂರ್ತಿದಾಯಕ ಮತ್ತು ರೂಪಾಂತರಗೊಳ್ಳುವ ಬಣ್ಣದಿಂದ ತಮ್ಮನ್ನು ಸುತ್ತುವರಿದಿರಬಹುದು ಎಂಬುದನ್ನು ಗ್ರಹಿಸಲು ಮಾಡಿರುವ ಕಲಾತ್ಮಕ ವಿಧಾನವಾಗಿದೆ ಎಂದು ಸಿಸಿಒ ಪಬ್ಲಿಸಿಸ್ ಗ್ರೂಪ್ – ಸೌತ್ ಏಷ್ಯಾ ಮತ್ತು ಚೇರ್ಮನ್ ರಾಜದೀಪಕ್ ದಾಸ್ ತಿಳಿಸಿದ್ದಾರೆ.


ಚಿತ್ರದ ಪರಿಕಲ್ಪನೆ ಏನು?

ಕಪ್ಪು ಬಿಳುಪಿನ ಜಗತ್ತಿನಲ್ಲಿ ಚಿತ್ರವು ತೆರೆದುಕೊಳ್ಳುತ್ತದೆ. ಮಗು ತನ್ನ ಮನೆಯಲ್ಲಿರುವ ವಸ್ತುವನ್ನು ಸ್ಪರ್ಶಿಸುತ್ತದೆ. ಅದು ಬಣ್ಣ ಪಡೆಯುತ್ತದೆ. ಮಗುವಿಗೆ ರೋಮಾಂಚನವಾಗುತ್ತದೆ. ಮಗು ಈ ರೀತಿ ಮಾಡುವುದನ್ನು ಯಾರಾದರೂ ನೋಡಿದರೆ ಆತನ ಮೇಲೆ ಕೋಪಗೊಳ್ಳಬಹುದು ಎಂದು ತಾಯಿ ಕಳವಳ ವ್ಯಕ್ತಪಡಿಸುತ್ತಾಳೆ. ಆದ್ದರಿಂದ ಹಾಗೆ ಮಾಡದಂತೆ ಹೇಳಿ ಅವನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಮನೆಯಿಂದ ತಾಯಿಯೊಂದಿಗೆ ಮಗನು ಹೊರಬಂದಾಗ ಅವನು ಮತ್ತೆ ತನ್ನ ಶಕ್ತಿಯನ್ನು ಬಳಸಲು ಪ್ರಯತ್ನಿಸುತ್ತಾನೆ ಮತ್ತು ಅನಂತರ ಅದನ್ನು ಸಂಭ್ರಮಿಸುತ್ತಾ ಹೋಗುತ್ತಾನೆ. ಮಂದ ಮತ್ತು ನಿರ್ಜೀವ ಜಗತ್ತನ್ನು ಅವನು ವರ್ಣರಂಜಿತ, ರೋಮಾಂಚಕ ಮತ್ತು ಸಂತೋಷವಾಗಿ ಪರಿವರ್ತಿಸುತ್ತಾ ಸಾಗುತ್ತಾನೆ. ಜಗತ್ತನ್ನು ಸುಂದರ ಸ್ಥಳವನ್ನಾಗಿ ಮಾಡಲು ತನ್ನ ಮಗ ತಂದ ಸಕಾರಾತ್ಮಕ ಪರಿಣಾಮವನ್ನು ತಾಯಿ ಅನಂತರ ಅರಿತುಕೊಳ್ಳುತ್ತಾಳೆ.

ಇದನ್ನೂ ಓದಿ: NEET-UG Row: ನೀಟ್‌ ಕೌನ್ಸೆಲಿಂಗ್‌ಗೆ ತಡೆ ಇಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್

ಬಿರ್ಲಾ ಓಪಸ್ ಪೇಂಟ್ಸ್

ಆದಿತ್ಯ ಬಿರ್ಲಾ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಗ್ರಾಸಿಮ್ ಇಂಡಸ್ಟ್ರೀಸ್ ಅಡಿಯಲ್ಲಿರುವ ಬಿರ್ಲಾ ಓಪಸ್ ಪೇಂಟ್ಸ್ ಭಾರತದ ಗ್ರಾಹಕರಿಗೆ ಅಲಂಕಾರಿಕ ಚಿತ್ರಕಲೆಗೆ ಬೇಕಾದ ಬಣ್ಣಗಳನ್ನು ಒದಗಿಸುತ್ತದೆ. 2024ರಲ್ಲಿ ಪ್ರಾರಂಭವಾದ ಬಿರ್ಲಾ ಓಪಸ್ ಪೇಂಟ್ಸ್ ಇಂಟೀರಿಯರ್, ಎಕ್ಸ್‌ಟೀರಿಯರ್ಸ್, ವಾಟರ್‌ಫ್ರೂಫಿಂಗ್, ಎನಾಮೆಲ್ ಪೇಂಟ್‌ಗಳು, ವುಡ್ ಫಿನಿಶ್‌ಗಳು ಮತ್ತು ವಾಲ್‌ಪೇಪರ್‌ಗಳಂತಹ ವಿಭಾಗಗಳಾದ್ಯಂತ ಉನ್ನತ ಉತ್ಪನ್ನಗಳ ಶ್ರೇಣಿಯನ್ನು ಒಳಗೊಂಡ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ಹೊಂದಿದೆ.

ಭಾರತದಾದ್ಯಂತ ಹರಡಿರುವ ಆರು ಉತ್ಪಾದನಾ ಘಟಕಗಳೊಂದಿಗೆ ಬಿರ್ಲಾ ಓಪಸ್ ಪೇಂಟ್ಸ್ ಅಲಂಕಾರಿಕ ಬಣ್ಣಗಳ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಅಂತೂ, ಈ ವಿಶಿಷ್ಟ ಜಾಹೀರಾತು ಈ ಉತ್ಪನ್ನಕ್ಕೆ ಭಾರಿ ಪ್ರಚಾರ ತಂದು ಕೊಟ್ಟಿದೆ.‌ ಈ ಜಾಹೀರಾತಿನ ಸೃಜನಶೀಲ ಕಲ್ಪನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Continue Reading

ವೈರಲ್ ನ್ಯೂಸ್

Goldman of Bihar: ಈತ ಬಂಗಾರದ ಮನುಷ್ಯ! ಕೊರಳಲ್ಲಿದೆ 5 ಕೆಜಿ ಚಿನ್ನ! ಬೈಕ್‌ನಲ್ಲೂ ಇದೆ ಬಂಗಾರ!

ಬಿಹಾರದ ಗೋಲ್ಡ್ ಮ್ಯಾನ್ (Goldman of Bihar) ಎಂದೇ ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ಚಿನ್ನವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರು ಸುಮಾರು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿಕೊಂಡೇ ಓಡಾಡುತ್ತಾರೆ. ಮಾತ್ರವಲ್ಲದೇ ಅವರು ಚಿನ್ನದ ಬೈಕ್ ಅನ್ನೂ ಹೊಂದಿದ್ದಾರೆ. ಇವರ ಕುರಿತ ಕುತೂಹಲಕಾರಿ ವರದಿ ಇಲ್ಲಿದೆ.

VISTARANEWS.COM


on

By

Goldman of Bihar
Koo

ಐದು ಕಿಲೋ ಗ್ರಾಂನಷ್ಟು ಚಿನ್ನವನ್ನು ಧರಿಸಿಕೊಂಡು ಚಿನ್ನದ ಬೈಕ್ ನಲ್ಲಿ ಆತ ಸವಾರಿ ಮಾಡುತ್ತಿದ್ದರೆ ಎಲ್ಲರೂ ಹುಬ್ಬೇರಿಸಿಕೊಂಡು ನೋಡುತ್ತಾರೆ. ಬಿಹಾರದ (bihar) ಗೋಲ್ಡ್ ಮ್ಯಾನ್ (Goldman of Bihar) ಎಂದೇ ಕರೆಯಲಾಗುವ ಆತನಿಗೆ ಚಿನ್ನದ ಮೇಲಿನ ಪ್ರೀತಿ ಈಗ ದೇಶಾದ್ಯಂತ ಚರ್ಚೆಯಲ್ಲಿದೆ. ಆತನ ಕುರಿತಾದ ವಿಡಿಯೋ, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (viral video) ಆಗುತ್ತಿದೆ.

ಬಿಹಾರದ ಗೋಲ್ಡ್ ಮ್ಯಾನ್ ಎಂದೇ ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಸುಮಾರು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿಕೊಂಡೇ ಓಡಾಡುತ್ತಾರೆ. ಮಾತ್ರವಲ್ಲದೇ ಅವರು ಚಿನ್ನದ ಬೈಕ್ ಅನ್ನೂ ಹೊಂದಿದ್ದಾರೆ. ಇದನ್ನು ಬೆಂಗಳೂರಿನಲ್ಲಿ ರಚಿಸಲಾಗಿದೆ. ಇದರ ನಿರ್ಮಾಣಕ್ಕೆ ಏಳರಿಂದ ಎಂಟು ತಿಂಗಳು ಬೇಕಾಯಿತು ಮತ್ತು 11 ರಿಂದ 12 ಲಕ್ಷ ರೂ. ಖರ್ಚಾಗಿದೆ ಎನ್ನಲಾಗಿದೆ.


ಬಿಹಾರದ ಬಂಗಾರದ ಮನುಷ್ಯ ಪ್ರೇಮ್ ಸಿಂಗ್ ಅವರಿಗೆ ತಾವು ಧರಿಸುವ ಚಿನ್ನದಿಂದಲೇ ಸುದ್ದಿಯಲ್ಲಿದ್ದಾರೆ. ಇವರ ಕುರಿತು ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಹೀಗಾಗಿ ಯಾವುದೇ ಕಳ್ಳರ ಭಯವಿಲ್ಲದೆ ಇಷ್ಟೊಂದು ಚಿನ್ನವನ್ನು ಧರಿಸಿಕೊಂಡು ಓಡಾಡುತ್ತೇನೆ. ಬೈಕ್‌ಗೂ 150 ರಿಂದ 200 ಗ್ರಾಂ ಚಿನ್ನವನ್ನು ಹಾಕಿದ್ದೇನೆ. ಇದು ಬಿಹಾರ ಸರ್ಕಾರ ಹಾಗೂ ಪೊಲೀಸರ ಪಾಲಿಗೆ ಗೌರವದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾರುಖ್‌ ಖಾನ್‌ ನನ್ನು ಕಾಪಿ ಮಾಡಲು ಹೋಗಿ ಯೂಟ್ಯೂಬರ್‌ಗಳು ಜೈಲು ಪಾಲು

ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಲೈಕ್ಸ್ , ಕಾಮೆಂಟ್‌ ಪಡೆಯಲು ಯುವಕರು ಅನೇಕ ದುಸ್ಸಾಹಸಗಳಿಗೆ ಕೈ ಹಾಕಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದೇ ರೀತಿ ಇದೀಗ ಯುವಕರು ಸಿನಿಮಾವೊಂದರಲ್ಲಿ ಹೀರೊ ಲುಕ್‌ ಅನ್ನು ನಕಲು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ಉತ್ತರ ಪ್ರದೇಶದ ಬುಲಂದ್ ಶಹರ್‌ನ ದಿಬಾಯ್‌ನಲ್ಲಿ ಆರು ಯುಟ್ಯೂಬರ್‌ಗಳು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಬ್ಯಾಂಡೇಜ್ ಧರಿಸಿದ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿದ್ದಾರೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಡಿಯೋದಲ್ಲಿ ಆರು ಮಂದಿ ಯುವಕರು ರಕ್ತದಂತೆ ಕಾಣುವ ಬಣ್ಣವನ್ನು ಬ್ಯಾಂಡೇಜ್‌ಗೆ ಬಳಿದುಕೊಂಡು ಅದನ್ನು ಮುಖಕ್ಕೆ ಸುತ್ತಿಕೊಂಡು ಕೈಯಲ್ಲಿ ಕೋಲುಗಳನ್ನು ಹಿಡಿದು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿಹಾಕಿದ್ದಾರೆ. ಇವರಲ್ಲಿ ಒಬ್ಬ ಶರ್ಟ್ ಧರಿಸಿದೆ ತನ್ನ ಇಡೀ ದೇಹವನ್ನು ರಕ್ತದ ಕಲೆಯಂತೆ ಕಾಣುವ ಬ್ಯಾಂಡೇಜ್‌ನಿಂದ ಮುಚ್ಚಿಕೊಂಡಿದ್ದಾನೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ವಿಡಿಯೋ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದ್ದು, ಮಾತ್ರವಲ್ಲ ಇದರಿಂದ ಪೊಲೀಸರು ಇವರನ್ನು ಹುಡುಕಿಕೊಂಡು ಬರುವಂತಾಗಿದೆ. ಈ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ವಿಡಿಯೋ 15 ನಿಮಿಷಗಳ ಕಾಲವಿದ್ದು, ಸಮಾಜದ ಜನತೆಗೆ ಉಪದ್ರವ ನೀಡುವಂತಹ ಈ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದಕ್ಕೆ ಶೀರ್ಷಿಕೆ ನೀಡಲಾಗಿದೆ.

ಈ ಆರು ಮಂದಿ ಸ್ಥಳೀಯರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೇ ಮುಂದೆ ಇಂತಹ ಕುಚೇಷ್ಠೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Continue Reading
Advertisement
tumkur News Assault Case
ತುಮಕೂರು20 seconds ago

Tumkur News : ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆದು ಮನಬಂದಂತೆ ಥಳಿಸಿದ ಉಪಾಧ್ಯಕ್ಷ!

Amith Shah
ದೇಶ1 min ago

Amit Shah: ಹೊಸ ಕ್ರಿಮಿನಲ್ ಕಾನೂನಿನಲ್ಲಿ ಶಿಕ್ಷೆಯ ಬದಲು ನ್ಯಾಯಕ್ಕೆ ಪ್ರಾಧಾನ್ಯತೆ; ಅಮಿತ್ ಶಾ

Parliament Sessions
ದೇಶ3 mins ago

Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್‌-ಮೋದಿ ಜಟಾಪಟಿ

Meghana Raj didn't want to enter the film Father Sundarraj
ಸ್ಯಾಂಡಲ್ ವುಡ್8 mins ago

Meghana Raj: ಮೇಘನಾ ರಾಜ್‌  ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ಇಷ್ಟವಿರಲಿಲ್ಲ; ಬೇಸರ ಹೊರಹಾಕಿದ್ದ ಅಪ್ಪ ಸುಂದರರಾಜ್​ 

Assault Case in Hubballi
ಹುಬ್ಬಳ್ಳಿ18 mins ago

Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

DK ShivaKumar
ಪ್ರಮುಖ ಸುದ್ದಿ23 mins ago

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

M.R.Jayaram
ಪ್ರಮುಖ ಸುದ್ದಿ26 mins ago

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

Actor Darshan
ಕರ್ನಾಟಕ30 mins ago

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

DCM Post
ಕರ್ನಾಟಕ1 hour ago

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

Sheikh Abdul Rashid
ದೇಶ1 hour ago

Sheikh Abdul Rashid: ಸೆರೆಮನೆಯಿಂದ ನೇರ ಸಂಸತ್‌ಗೆ! ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ʼಉಗ್ರರ ಬೆಂಬಲಿಗʼನ ಪ್ರಮಾಣವಚನಕ್ಕೆ NIA ಅಸ್ತು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ22 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌