Helicopter Crash | ಹೆಲಿಕಾಪ್ಟರ್ ಪತನ, ಉಕ್ರೇನ್ ಸಚಿವ ಸೇರಿ 18 ಜನರು ದುರ್ಮರಣ - Vistara News

ವಿದೇಶ

Helicopter Crash | ಹೆಲಿಕಾಪ್ಟರ್ ಪತನ, ಉಕ್ರೇನ್ ಸಚಿವ ಸೇರಿ 18 ಜನರು ದುರ್ಮರಣ

ಉಕ್ರೇನ್ ರಾಜಧಾನಿ ಕೀವ್‌ನ ಬ್ರೋವರಿಯ ಶಿಶುವಿಹಾರ ಪಕ್ಕದಲ್ಲಿ ಈ ಹೆಲಿಕಾಪ್ಟರ್ ಪತನ (Helicopter Crash) ಸಂಭವಿಸಿದೆ.

VISTARANEWS.COM


on

Helicopter Crash @ Ukrain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಉಕ್ರೇನ್‌ನ ರಾಜಧಾನಿ ಕೀವ್‌ನ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ (Helicopter Crash) ಒಳಾಡಳಿತ ಸಚಿವ ಹಾಗೂ ಮೂವರು ಮಕ್ಕಳು ಸೇರಿ ಒಟ್ಟು 18 ಜನರು ಮೃತರಾಗಿದ್ದಾರೆ. ನಗರದ ಶಿಶುವಿಹಾರವೊಂದರ ಬಳಿ ಈ ಅವಘಡ ನಡೆದಿದೆ ಕೀವ್ ಗವರ್ನರ್ ಒಲೆಕ್ಸಿ ಕುಲೆಬಾ ಅವರು ತಿಳಿಸಿದ್ದಾರೆ.

ಈ ಹೆಲಿಕಾಪ್ಟರ್ ದುರಂತದಲ್ಲಿ 29 ಜನರು ಗಾಯಗೊಂಡಿದ್ದಾರೆ. ಈ ಪೈಕಿ 15 ಮಕ್ಕಳಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಲೆಬಾ ಅವರು ತಿಳಿಸಿದ್ದಾರೆ.

ಕೀವ್‌ನ ಬ್ರೋವರಿ ಎಂಬಲ್ಲಿ ದುರಂತ ಸಂಭವಿಸಿದೆ. ಇದರಲ್ಲಿ ಉಕ್ರೇನ್ ಒಳಾಡಳಿತ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಪ್ರಯಾಣಿಸುತ್ತಿದ್ದರು. 2021ರಲ್ಲಿ ಅವರು ಒಳಾಡಳಿತ ಸಚಿವರಾಗಿ ನೇಮಕವಾಗಿದ್ದರು.

ಇದನ್ನೂ ಓದಿ | Russia Ukraine war | ತಿರುಗೇಟು ಕೊಟ್ಟ ಉಕ್ರೇನ್‌, ಒಂದೇ ದಿನ ರಷ್ಯಾದ 800 ಯೋಧರ ಹತ್ಯೆ ಎಂದು ಸೇನೆ ಘೋಷಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

ಫೈಸಲ್‌ ರಾಜಾ ಅಬಿದಿ ಎಂಬ ಪಾಕಿಸ್ತಾನದ ಮಾಜಿ ಸಂಸದನು ಭಾರತದ ಕುರಿತು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ” ಎಂದು ಟಿವಿ ಸಂದರ್ಶನದ ವೇಳೆ ಹೇಳಿದ್ದಾನೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

VISTARANEWS.COM


on

Faisal Raza Abidi
Koo

ಇಸ್ಲಾಮಾಬಾದ್:‌ ಅಸಮರ್ಥ ನಾಯಕತ್ವ, ಉಗ್ರರ ಪೋಷಣೆ, ರಾಜಕೀಯ ಅರಾಜಕತೆ, ಧಾರ್ಮಿಕ ಮೂಲಭೂತವಾದ, ಸೇನೆಯ ಸರ್ವಾಡಳಿತ ಸೇರಿ ಹಲವು ಕಾರಣಗಳಿಂದಾಗಿ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಹಣಕಾಸು ನೆರವಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಇಷ್ಟಿದ್ದರೂ ಅಲ್ಲಿನ ನಾಯಕರು ಮಾತ್ರ ಅಹಂಕಾರದ ಮಾತುಗಳನ್ನಾಡುವುದು, ಭಾರತದ ವಿರುದ್ಧ ಉದ್ಧಟತನದ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, “2026ರ ನವೆಂಬರ್‌ನಲ್ಲಿ ಭಾರತವು (India) ತುಂಡು ತುಂಡಾಗುತ್ತದೆ” ಎಂಬುದಾಗಿ ಪಾಕಿಸ್ತಾನದ (Pakistan) ಮಾಜಿ ಸಂಸದನೊಬ್ಬ (Pakistan ex Senator) ನಾಲಗೆ ಹರಿಬಿಟ್ಟಿದ್ದಾನೆ.

ಸುದ್ದಿವಾಹಿನಿಯೊಂದರ ಜತೆ ಮಾತನಾಡುವ ವೇಳೆ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಫೈಸಲ್‌ ರಾಜಾ ಅಬಿದಿ (Faisal Raza Abidi) ಎಂಬ ಮಾಜಿ ಸಂಸದನು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ. ನರೇಂದ್ರ ಮೋದಿ ಅವರ ಹಿಂದುತ್ವ ಅಜೆಂಡಾ ಕೂಡ ಪತನವಾಗುತ್ತದೆ” ಎಂದು ಹೇಳಿದ್ದಾನೆ.

“ಅಖಂಡ ಭಾರತ ಕಲ್ಪನೆಯ ಕುರಿತು ಪಾಕಿಸ್ತಾನ ಮಾತನಾಡಿದರೆ ತಮಾಷೆ ಮಾಡುತ್ತಾರೆ. ಆದರೆ, 2026ರ ನವೆಂಬರ್‌ 26ರಂದು ಅಲ್ಲಾ ಪಾಕಿಸ್ತಾನದ ಪರವಾಗಿರುತ್ತಾನೆ. ಅಂದು ನಡೆಯುವ ಘಟನೆಯು ನಿಮ್ಮನ್ನು ಅಚ್ಚರಿಯ ಮಡುವಿನಲ್ಲಿ ಬೀಳಿಸುತ್ತದೆ. ಮೋದಿ ಹಿಂದುತ್ವದಿಂದ ಹೊರಗೆ ಬರಲಿರುವ ಜನ, ಪ್ರಾಣ ಉಳಿದರೆ ಸಾಕು ಎಂದು ಹೇಳುತ್ತಾರೆ. ಪಾಕಿಸ್ತಾನದ ಶಸ್ತ್ರಾಸ್ತ್ರಗಳು ಹಾಗೂ ಮಾನವ ಸಂಪನ್ಮೂಲವು ಭಾರತದ ನಾಶಕ್ಕೆ ಸಿದ್ಧವಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿಯೇ ಭಾರತ ತುಂಡು ತುಂಡಾಗುವುದೇ ಮುಖ್ಯ” ಎಂಬುದಾಗಿ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದಾನೆ.

“ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಅವರ ಪ್ರತಿಪಾದನೆಗೆ ಜನರಿಂದ ಅಪಾರ ಬೆಂಬಲವೂ ವ್ಯಕ್ತವಾಗುತ್ತಿದೆ. ಹಾಗಾಗಿ, ಭಾರತವು ಚೂರು ಚೂರು ಆಗುವುದು ಮುಖ್ಯ” ಎಂಬುದಾಗಿ ಅಬಿದಿ ಹೇಳಿದ್ದಾನೆ. ಆ ಮೂಲಕ ಭಾರತದ ಮೇಲೆ ಪಾಕಿಸ್ತಾನವು ಶಸ್ತ್ರಾಸ್ತ್ರಗಳ ಸಮೇತ ದಾಳಿ ಮಾಡುತ್ತದೆ ಎಂಬುದರ ಮುನ್ಸೂಚನೆ ನೀಡಿದ್ದಾನೆ. ಇದುವರೆಗೆ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧಕ್ಕಿಳಿದಿರುವ ಪಾಕಿಸ್ತಾನವು, ನಾಲ್ಕಕ್ಕೆ ನಾಲ್ಕು ಬಾರಿಯೂ ಹೀನಾಯವಾಗಿ ಸೋಲುಂಡಿದೆ. ಇನ್ನು ಮೋದಿ ಆಡಳಿತದಲ್ಲಿ 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, 2019ರ ಪುಲ್ವಾಮ ದಾಳಿಗೆ ಪ್ರತಿಯಾಗಿ ಬಾಲಾಕೋಟ್‌ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ. ಹೀಗಿದ್ದರೂ, ಪಾಕಿಸ್ತಾನದ ನಾಯಕರು ಭಾರತದ ವಿಚಾರದಲ್ಲಿ ಹಗುರವಾಗಿ ಮಾತನಾಡುವುದನ್ನು ಬಿಟ್ಟಿಲ್ಲ ಎಂಬುದಕ್ಕೆ ಇದೇ ನಿದರ್ಶನವಾಗಿದೆ.

ಇದನ್ನೂ ಓದಿ: Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

Continue Reading

ವಿದೇಶ

United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

United Nations: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಮತ್ತು ಅಯೋಧ್ಯೆಯಲ್ಲಿರುವ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ ವಿಶ್ವಸಂಸ್ತೆಯ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ, ಪಾಕಿಸ್ತಾನ ಸದಾ ಕುಕೃತ್ಯಗಳ ಮೂಲಕವೇ ಕುಖ್ಯಾತಿಯನ್ನು ಪಡೆದಿದೆ ಎಂದು ತಿರುಗೇಟು ಕೊಟ್ಟರು.

VISTARANEWS.COM


on

United Nations
Koo

ಅಮೆರಿಕ: ಪಾಕಿಸ್ತಾನ(Pakistan) ಎಲ್ಲಾ ಆಯಾಮಗಳಲ್ಲಿ ಅತ್ಯಂತ ಸಂಶಯಾತ್ಮಕ ಚಟುವಟಿಕೆ, ದುಷ್ಕೃತ್ಯ(dubious track)ಗಳ ಟ್ರ್ಯಾಕ್‌ ರೆಕಾರ್ಡ್‌ಗಳನ್ನು ಹೊಂದಿದೆ ಎಂದು ವಿಶ್ವಸಂಸ್ಥೆ(United States)ಯಲ್ಲಿ ಭಾರತ ಹೇಳಿದೆ. ವಿಶ್ವಸಂಸ್ಥೆಯ(United Nations) ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ (Ruchira Kamboj)ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಮತ್ತು ಅಯೋಧ್ಯೆಯಲ್ಲಿರುವ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ ವಿಶ್ವಸಂಸ್ತೆಯ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ, ಪಾಕಿಸ್ತಾನ ಸದಾ ಕುಕೃತ್ಯಗಳ ಮೂಲಕವೇ ಕುಖ್ಯಾತಿಯನ್ನು ಪಡೆದಿದೆ ಎಂದು ತಿರುಗೇಟು ಕೊಟ್ಟರು.

ಶಾಂತಿಯ ಸೌದಾರ್ಹತೆಯ ಸಂಸ್ಕೃತಿ ಎಂಬ ವಿಚಾರದ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ರುಚಿರಾ, ಇಂತಹ ಸವಾಲಿನ ಸ್ಥಿತಿಯಲ್ಲೂ ಭಾರತ ಶಾಂತಿ ಕಾಪಾಡಲು ಯತ್ನಿಸುತ್ತಿದೆ. ರಚನಾತ್ಮಕ ಮಾತುಕತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ನಾವು ಆದಷ್ಟು ಇಂತಹ ಟೀಕೆಗಳಿಗೆ ತಲೆಗೆಡಿಸಿಕೊಳ್ಳದೇ ಧನಾತ್ಮಕವಾಗಿ ಮುಂದುವರೆಯಲು ಇಚ್ಛಿಸುತ್ತೇವೆ. ನಮ್ಮ ಎದುರಿಗಿರುವವರು ನೀಡಿರುವ ಹೇಳಿಕೆ ಅವರ ವಿನಾಶಕಾರಿ ಮನೋಭಾವನ್ನು ತೋರಿಸುತ್ತದೆ. ಗೌರವ ಮತ್ತು ರಾಜತಾಂತ್ರಿಕವಾಗಿ ವಿಷಯಗಳನ್ನು ಚರ್ಚಿಸುವುದಕ್ಕೆ ಭಾರತ ಯಾವಾಗಲೂ ಬೆಂಬಲ ನೀಡುತ್ತದೆ. ಸ್ವತಃ ತನ್ನ ಬಂದರುಗಳಲ್ಲಿ ವಿನಾಶಕಾರಿ ಚಟುವಟಿಕೆಗಳು ನಡೆಯುತ್ತಿರುವ ದೇಶದ ಬಗ್ಗೆ ಕೇಳವಂತಹ ಮತ್ತು ಟೀಕಿಸುವಂತಹ ಉದ್ದೇಶ ನಮಗೂ ಇದೆ ಎಂದು ಖಡಕ್ಕಾಗಿ ಹೇಳಿದ್ದಾರೆ.

ಭಯೋತ್ಪಾದನೆ ಎಂಬುದು ಎಲ್ಲಾ ಧರ್ಮಗಳು ಪ್ರತಿಪಾದಿಸುವ ಶಾಂತಿ ಮತ್ತು ಸೌಹಾರ್ದತೆಗೆ ನೇರ ತದ್ವಿರುದ್ಧವಾದ ವಿಚಾರವಾಗಿದೆ. ಅದು ಒಳ್ಳೆಯ ವಿಚಾರಗಳಿಗೆ ಅಡ್ಡಿಯಾಗಿ ನಿಂತಿದ್ದು, ಹಗೆತನವನ್ನು ಹುಟ್ಟುಹಾಕುತ್ತದೆ ಮತ್ತು ವಿಶ್ವಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಆಧಾರವಾಗಿರುವ ಗೌರವ ಮತ್ತು ಸಾಮರಸ್ಯದ ಸಾರ್ವತ್ರಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯರು ಒಟ್ಟಾಗಿ ನಿಂತಿ ಪ್ರಪಂಚಾದ್ಯಂತ ಶಾಂತಿ ಸೌಹಾರ್ದತೆ ಕಾಪಾಡಲು ಪಣತೊಡಬೇಕಿದೆ. ಇಡೀ ಪ್ರಪಂಚವೇ ಒಂದು ಕುಟುಂಬ. ನನ್ನ ದೇಶ ಇದರಲ್ಲಿ ನಂಬಿಕೆಯನ್ನಿಟ್ಟುಕೊಂಡಿದೆ ಎಂದು ರುಚಿಕಾ ಹೇಳಿದರು.

ಇದನ್ನೂ ಓದಿ:Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಅಸಮ ಅಭಿವೃದ್ಧಿಯಿಂದ ಜಗತ್ತು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ, ತಾರತಮ್ಯ ಮತ್ತು ಹಿಂಸಾಚಾರದ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಚರ್ಚ್‌ಗಳು, ಮಠಗಳು, ಗುರುದ್ವಾರಗಳು, ಮಸೀದಿಗಳು, ದೇವಾಲಯಗಳು ಮತ್ತು ಸಿನಗಾಗ್‌ಗಳು ಸೇರಿದಂತೆ ಪವಿತ್ರ ಸ್ಥಳಗಳ ಮೇಲೆ ಹೆಚ್ಚುತ್ತಿರುವ ದಾಳಿಯಿಂದ ನಾವು ವಿಶೇಷವಾಗಿ ಕಳವಳಗೊಂಡಿದ್ದೇವೆ, ಅಂತಹ ಕೃತ್ಯಗಳಿಗೆ ಜಾಗತಿಕ ಸಮುದಾಯದಿಂದ ತ್ವರಿತ ಮತ್ತು ಒಗ್ಗಟ್ಟಿನ ಪ್ರತಿಕ್ರಿಯೆಯ ಅಗತ್ಯವಿದೆ. ಹೀಗಾಗಿ ರಾಯಕೀಯ ಲಾಭ ಮರೆತು ಸವಾಲುಗಳನ್ನು ಎದುರಿಸುವ ಪ್ರಯತ್ನ ಮಾಡೋಣ ಎಂದು ಅವರು ಹೇಳಿದರು.


Continue Reading

ವಿದೇಶ

Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸುಖಕ್ಕೆ ಬೇಕು ಪ್ರತಿ ವರ್ಷ 25 ಹುಡುಗಿಯರು! ಏನಿದು ಆಹ್ಲಾದ ತಂಡ?

Kim Jong Un: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕುರಿತಾದ ಇನ್ನೊಂದು ಬೆಚ್ಚಿ ಬೀಳಿಸುವ ಸಂಗತಿ ಹೊರ ಬಿದ್ದಿದೆ. ಕಿಮ್‌ ಜಾಂಗ್‌ ಉನ್‌ ಪ್ರತಿ ವರ್ಷ ತನ್ನ ʼಆಹ್ಲಾದ ತಂಡʼಕ್ಕಾಗಿ 25 ಹುಡುಗಿಯರನ್ನು ಆರಿಸಿಕೊಳ್ಳುತ್ತಾನೆ ಎಂದು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿರುವ ಯುವತಿಯೊಬ್ಬಳು ತಿಳಿಸಿದ್ದಾಳೆ. ಶಾಲೆಯಲ್ಲಿ ಓದುತ್ತಿರುವ ಚಂದದ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಅವರನ್ನು ಸರ್ವಾಧಿಕಾರಿಯ ಲೈಂಗಿಕ ಬಯಕೆಯನ್ನು ತೀರಿಸಲು ಬಳಸಲಾಗುತ್ತದೆ ಎಂದು ಯುವತಿ ವಿವರಿಸಿದ್ದಾಳೆ.

VISTARANEWS.COM


on

Kim Jong Un
Koo

ಫ್ಯೊಂಗ್ಯಾಂಗ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ (Kim Jong Un) ಬಗ್ಗೆ ವಿವಿಧ ಕಥೆಗಳನ್ನು ಕೇಳಿದ್ದೇವೆ. ಇದೀಗ ಆ ದೇಶದ ಯುವತಿಯೊಬ್ಬಳು ಬೆಚ್ಚಿ ಬೀಳಿಸುವ ಘೋರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾಳೆ. ಕಿಮ್‌ ಜಾಂಗ್‌ ಉನ್‌ ಪ್ರತಿ ವರ್ಷ ತನ್ನ ʼಆಹ್ಲಾದ ತಂಡʼ (Pleasure Squad)ಕ್ಕಾಗಿ 25 ಹುಡುಗಿಯರನ್ನು ಆರಿಸಿಕೊಳ್ಳುತ್ತಾನೆ ಎಂದು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿರುವ ಈ ಯುವತಿ ಹೇಳಿದ್ದಾಳೆಂದು ವರದಿಯೊಂದು ತಿಳಿಸಿದೆ. ವಿಶೇಷವೆಂದರೆ ಹುಡುಗಿಯರನ್ನು ಅವರ ರೂಪ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದೂ ಯುವತಿ ವಿವರಿಸಿದ್ದಾಳೆ.

ಕಿಮ್‌ನ ಈ ಆಹ್ಲಾದ ತಂಡಕ್ಕಾಗಿ ಅವರನ್ನು ತನ್ನನ್ನು ಎರಡು ಬಾರಿ ಪರಿಗಣಿಸಿದ್ದರು. ಆದರೆ ತನ್ನ ಕುಟುಂಬದ ಸ್ಥಾನಮಾನದಿಂದಾಗಿ ಆಯ್ಕೆಯಾಗಿರಲಿಲ್ಲ ಎಂಬ ವಿಚಾರವನ್ನೂ ಆಕೆ ತಿಳಿಸಿದ್ದಾಳೆ.

ಆಯ್ಕೆ ಹೇಗೆ?

ಇನ್ನು ಈ ಕರಾಳ ಸಂಗತಿಯನ್ನು ಯುವತಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಿಮ್‌ ಜಾಂಗ್‌ ಉನ್‌ ತಂಡದ ಸದಸ್ಯರು ಶಾಲೆಗಳಿಗೆ ತೆರಳಿ ಚಂದದ ಹುಡುಗಿಯರನ್ನು ಹುಡುಕುತ್ತಾರೆ. ಒಂದಷ್ಟು ಜನರನ್ನು ಆಯ್ಕೆ ಮಾಡುವ ಅವರು ಬಳಿಕ ಆ ಹುಡುಗಿಯರ ಕುಟುಂಬದ ಸ್ಥಿತಿ ಮತ್ತು ರಾಜಕೀಯ ನಿಲುವುಗಳನ್ನು ಶೋಧಿಸುತ್ತಾರೆ. ಹೀಗೆ ಪರಿಶೀಲಿಸುವ ವೇಳೆ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದ ಕುಟುಂಬಕ್ಕೆ ಸೇರಿದ ಮತ್ತು ದಕ್ಷಿಣ ಕೊರಿಯಾ ಅಥವಾ ಇತರ ದೇಶಗಳಲ್ಲಿ ಸಂಬಂಧಿಕರು ಹೊಂದಿರುವ ಹುಡುಗಿಯರನ್ನು ಕೈಬಿಡಲಾಗುತ್ತದೆ ಎಂದು ಹೇಳಿದ್ದಾಳೆ.

ಕನ್ಯತ್ವ ಪರೀಕ್ಷೆ

ಎಲ್ಲ ಕೂಲಂಕುಷವಾಗಿ ಪರಿಶೀಲಿಸಿದ ನಂತರ ಉಳಿದುಕೊಳ್ಳುವ ಹುಡುಗಿಯರ ಕನ್ಯತ್ವ ಪರೀಕ್ಷಿಸಲು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಸಣ್ಣ ಗಾಯ ಕಂಡು ಬಂದರೂ ಆಕೆಯನ್ನು ಕೈ ಬಿಡಲಾಗುತ್ತದೆ. ಹೀಗೆ ಹಲವು ಕಠಿಣ ಹಂತಗಳನ್ನು ದಾಟಿದ ಹುಡುಗಿಯರ ಪೈಕಿ ಕೆಲವರನ್ನು ಫ್ಯೊಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಎಲ್ಲ ಆಸೆಗಳನ್ನು ಪೂರೈಸಬೇಕಾಗುತ್ತದೆ ಎಂದು ಯುವತಿ ತಿಳಿಸಿದ್ದಾಳೆ.

ಮೂರು ಗುಂಪು

ಆಯ್ಕೆಯಾದ ಹುಡುಗಿಯರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ತಂಡಕ್ಕೆ ಮಸಾಜ್‌ ತರಬೇತಿ ನೀಡಿದರೆ ಇನ್ನೊಂದು ಗುಂಪಿಗೆ ಹಾಡು ಮತ್ತು ನೃತ್ಯವನ್ನು ಹೇಳಿಕೊಡಲಾಗುತ್ತದೆ. ಮೂರನೇ ತಂಡ ಸರ್ವಾಧಿಕಾರಿ ಮತ್ತು ಆತನ ಆಪ್ತರಿಗೆ ಲೈಂಗಿಕವಾಗಿ ಸಹಕರಿಸಬೇಕು. ಅವರು ಸರ್ವಾಧಿಕಾರಿ ಮತ್ತು ಇತರ ಪುರುಷರ ಲೈಂಗಿಕ ವಾಂಛೆಗೆ ಸಹಕರಿಸಬೇಕು. ಪುರುಷರನ್ನು ಹೇಗೆ ಮೆಚ್ಚಿಸಬೇಕು ಎನ್ನುವುದನ್ನು ಅವರಿಗೆ ಕಲಿಸಲಾಗುತ್ತದೆ ಎಂದು ಯುವತಿ ವಿವರಿದ್ದಾಳೆ.

ಇದನ್ನೂ ಓದಿ: Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

ಅತ್ಯಂತ ಆಕರ್ಷಕ ಹುಡುಗಿಯರನ್ನು ಸರ್ವಾಧಿಕಾರಿಯ ಸೇವೆ ಮಾಡಲು ಆಯ್ಕೆ ಮಾಡಿದರೆ, ಇತರರನ್ನು ಕೆಳದರ್ಜೆಯ ಜನರಲ್‌ಗಳು ಮತ್ತು ರಾಜಕಾರಣಿಗಳನ್ನು ತೃಪ್ತಿಪಡಿಸಲು ನಿಯೋಜಿಸಲಾಗುತ್ತದೆ. ವಿಶೇಷ ಎಂದರೆ ಹುಡುಗಿಯರ ವಯಸ್ಸು ಇಪ್ಪತ್ತು ದಾಟಿದ ನಂತರ ಅವರನ್ನು ತಂಡದಿಂದ ಕೈ ಬಿಡಲಾಗುತ್ತದೆ. ಆ ಪೈಕಿ ಕೆಲವರು ಬಾಡಿಗಾರ್ಡ್‌ ಅನ್ನು ಮದುವೆಯಾಗುತ್ತಾರೆ. ಈ ʼಆಹ್ಲಾದ ತಂಡʼ ಕಿಮ್ ಜಾಂಗ್ ಉನ್‌ನ ತಂದೆ ಕಿಮ್ ಜಾಂಗ್-2 ಕಾಲದಲ್ಲಿಯೇ ಇತ್ತು. ಅವರು ಹೀಗೆ ಲೈಂಗಿಕ ಸಂಬಂಧ ಹೊಂದುವುದು ಅಮರತ್ವವನ್ನು ನೀಡುತ್ತದೆ ಎಂದು ನಂಬಿದ್ದರು ಎಂದು ಯುವತಿ ಕರಾಳ ದಂಧೆಯ ಮೇಲೆ ಬೆಳಕು ಚೆಲ್ಲಿದ್ದಾಳೆ. ಕಿಮ್ ಜಾಂಗ್-2 2011ರಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಅಮೆರಿಕದ ಬುದ್ಧಿಗೇಡಿಗಳ ವರದಿಯಲ್ಲಿ ಭಾರತದ ಬಗ್ಗೆ ಹಸಿ ಸುಳ್ಳುಗಳು

ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ.

VISTARANEWS.COM


on

Religious Freedom
Koo

ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರದ ಕಮಿಷನ್‌ ಆನ್‌ ಇಂಟರ್‌ನ್ಯಾಷನಲ್‌ ರಿಲಿಜಿಯಸ್‌ ಫ್ರೀಡಂ (USCIRF Report) ವರದಿ ಬಿಡುಗಡೆ ಮಾಡಿದೆ. ಭಾರತ ಸೇರಿ 17 ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ಕಳವಳ ವ್ಯಕ್ತಪಡಿಸಿದೆ. “ಭಾರತ ಸೇರಿ 17 ದೇಶಗಳಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸುವ, ಧಾರ್ಮಿಕ ವಿಚಾರಗಳ ಮೇಲೆ ನಂಬಿಕೆ ಇರಿಸುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಿ ರಾಷ್ಟ್ರೀಯವಾದಿ ನೀತಿಗಳ ಹೇರಿಕೆಯಿಂದಾಗಿ ಇತರ ಧರ್ಮಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಿದೆ. ದ್ವೇಷ ಕಾರುವ ವಾಕ್ಚಾತುರ್ಯ, ಕೋಮುವಾದದಿಂದ ಕೂಡಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದಕ್ಕೆ ಉದಾಹರಣೆಯಾಗಿದೆ” ಎಂದು ಹೇಳಿದೆ. ಇದಕ್ಕೆ ಭಾರತ ಸರ್ಕಾರ ತಿರುಗೇಟು ನೀಡಿದ್ದು, “ಯುಎಸ್‌ಸಿಐಆರ್‌ಎಫ್‌ ವರದಿಯು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿ ತಯಾರಿಸಿದ್ದಾಗಿದೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದೆ. “ಇದಕ್ಕೂ ಮೊದಲು ಕೂಡ ಇಂತಹ ವರದಿಗಳನ್ನು ಅದು ಪ್ರಕಟಿಸಿತ್ತು. ಭಾರತದ ಕುರಿತು ಷಡ್ಯಂತ್ರದಿಂದ ಕೂಡಿದ ವರದಿ ಬಿಡುಗಡೆ ಮಾಡುವುದು ಅದಕ್ಕೆ ರೂಢಿಯೇ ಆಗಿದೆ. ಯುಎಸ್‌ಸಿಐಆರ್‌ಎಫ್‌ ವರದಿಯಲ್ಲಿ ಯಾವುದೇ ಹುರುಳಿಲ್ಲ” ಎಂದಿದೆ ಭಾರತ.

ಈ ವರದಿ ಯಾರೋ ಅಡ್ಡಕಸಬಿಗಳು ತಯಾರಿಸಿದ ವರದಿಯಂತೆ ಕಾಣಿಸುತ್ತಿದೆ. ಬಹುಶಃ ಅವರು ಭಾರತಕೆಕ ಬಂದು ಇಲ್ಲಿನ ಧಾರ್ಮಿಕ ಸಹಿಷ್ಣುತೆ, ಸಹಬಾಳ್ವೆ ಇತ್ಯಾದಿಗಳನ್ನು ನೋಡಿದ್ದರೆ ಇಂಥ ವರದಿ ತಯಾರಿಸುತ್ತಿರಲಿಲ್ಲ. ಭಾರತದಿಂದ ಆಚೆಗೆ ಕುಳಿತು ಭಾರತದ ವಿರುದ್ಧವೇ ಯುಟ್ಯೂಬ್‌ ವಿಡಿಯೋ ಮಾಡಿ ಬಿಡುವ ʼಬುದ್ಧಿವಂತʼರ ಮಾತುಗಳನ್ನು ಕೇಳಿಕೊಂಡು ಇದನ್ನು ತಯಾರಿಸಿದಂತೆ ಇದೆ. ಈ ವರದಿಯ ಅಕ್ಷರಕ್ಷರವೂ ಸುಳ್ಳು ಎಂಬುದಕ್ಕೆ ಸಾಕ್ಷಿಗಳನ್ನು ನೀಡಬಹುದು. ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಎಂಬ ಜಾಗತಿಕ ಸಂಸ್ಥೆ ಕಳೆದ ವರ್ಷ ನೀಡಿರುವ ಜಾಗತಿಕ ವರದಿಯಲ್ಲಿ, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಹೇಳಿದೆ. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಆ ವರದಿ ನೀಡಿತ್ತು. ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿದೆ. ಭಾರತದ ನಂತರದ 4 ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನಂತರದ ಸ್ಥಾನದಲ್ಲಿ ಅಮೆರಿಕ ದೇಶ ಇದೆ. ಯುಎಸ್‌ಸಿಐಆರ್‌ಎಫ್‌ ಇದನ್ನು ಗಮನಿಸಿದಂತಿಲ್ಲ.

ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನೂ ಬಹುಸಂಖ್ಯಾತರಂತೆಯೇ ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತ ಹಿತಚಿಂತನೆ ನೋಡಿಕೊಳ್ಳುವುದಕ್ಕಾಗಿಯೇ ಕೇಂದ್ರದಲ್ಲಿ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼ ಇದೆ. ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಅಲ್ಲಿಯ ಅಲ್ಪಸಂಖ್ಯಾತರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಸೋಗಲಾಡಿ ವರದಿ ಅದನ್ನೇನಾದರೂ ನೆನಪಿಸಿಕೊಂಡಿದೆಯೇ?

ಈ ವರದಿಯನ್ನು ಹೊರಡಿಸಿದ ಅಮೆರಿಕದ ಬುಡದಲ್ಲಿ ಏನಿದೆ ಎಂದು ಸ್ವಲ್ಪ ನೋಡೋಣ. ಅತಿ ಹಳೆಯ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಆ ದೇಶದಲ್ಲಿ ಇನ್ನೂವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ. ಬರಾಕ್‌ ಒಬಾಮರಂಥ ಅಲ್ಪಸಂಖ್ಯಾತರು ಅಧ್ಯಕ್ಷರಾಗಲು ಹಲವು ಶತಮಾನಗಳೇ ಬೇಕಾಯಿತು. ಮಹಿಳೆಯರೂ ತಮ್ಮ ಮತದಾನದ ಹಕ್ಕನ್ನು ಪಡೆಯಲು ಬಡಿದಾಡಬೇಕಾಯಿತು. ಇನ್ನು ಅಲ್ಲಿನ ಆಫ್ರಿಕನ್‌ ಸಮುದಾಯ ಅನುಭವಿಸುತ್ತಿರುವ ಸಂಕಷ್ಟವನ್ನು ಹೇಳಬೇಕಾಗಿಯೇ ಇಲ್ಲ. ಇವರನ್ನು ಇಲ್ಲಿ ನೂರಾರು ವರ್ಷಗಳ ಕಾಲ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ಹೋಗಲಾಡಿಸಲು ಲಿಂಕನ್‌ನಂಥ ಮುತ್ಸದ್ಧಿ ಬಲಿದಾನ ಮಾಡಬೇಕಾಯಿತು. ಈಗಲೂ ಅಲ್ಲಿ ಕರಿಯರ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ನಡೆಸಲಾಗುತ್ತಿರುವ ʼಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ʼ ಚಳವಳಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಅಲ್ಲಿನ ಮೂಲವಾಸಿ ಅಮೆರಿಕನ್‌ ಸಮುದಾಯದವರನ್ನು ಯಾವ ರೀತಿ ನಿರ್ಮೂಲನ ಮಾಡಲಾಯಿತು ಎಂಬುದು ಚರಿತ್ರೆಯಲ್ಲಿ ಸೇರಿಹೋಗಿರುವ ಕರಾಳ ಅಧ್ಯಾಯಗಳಲ್ಲೊಂದು. ಇಂದು ಹುಡುಕಿದರೂ ಆ ಜನಾಂಗ ಅಲ್ಲಿ ಸಿಗುವುದಿಲ್ಲ. ಇನ್ನು ಮುಸ್ಲಿಮರ ವಿಷಯಕ್ಕೆ ಬಂದರೆ, 9/11 ಘಟನೆಯ ನಂತರ ಅಲ್ಲಿ ಪ್ರತಿಯೊಬ್ಬ ಮುಸ್ಲಿಮನನ್ನೂ ಶಂಕಿತ ಭಯೋತ್ಪಾದಕನಂತೆಯೇ ನೋಡಲಾಗುತ್ತದೆ. ಮುಸ್ಲಿಮರನ್ನು ಈ ಅನುಮಾನದಿಂದಾಗಿಯೇ ಅಲ್ಲಿನ ಸರ್ಕಾರಿ ಆಡಳಿತಾತ್ಮಕ ಹುದ್ದೆಗಳಲ್ಲಿ ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಇಂಥ ದೇಶ, ಭಾರತದಂಥ ʼವಸುಧೈವ ಕುಟುಂಬಕಂʼ ಮಂತ್ರವನ್ನು ಸಾರಿದ ಪುರಾತನ ಸಂಸ್ಕೃತಿಯ ದೇಶಕ್ಕೆ ಬುದ್ಧಿವಾದ ಹೇಳುವುದು ಒಂದು ಕೆಟ್ಟ ಜೋಕ್.‌

ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ. ಅಮೆರಿಕ ಇಂಥವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು.

ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ

Continue Reading
Advertisement
IPL 2024
Latest1 min ago

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

Faisal Raza Abidi
ದೇಶ7 mins ago

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

Wonderla Bengaluru
ಕರ್ನಾಟಕ14 mins ago

Wonderla Bengaluru: ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

training for election duty staff in Karwar
ಉತ್ತರ ಕನ್ನಡ18 mins ago

Lok Sabha Election 2024: ಗೊಂದಲಕ್ಕೆ ಅವಕಾಶವಿಲ್ಲದೆ ಚುನಾವಣೆ ನಡೆಸಲು ಉ.ಕ ಡಿಸಿ ಸೂಚನೆ

IPL 2024
ಕ್ರೀಡೆ32 mins ago

IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

Rohith Vemula
ದೇಶ53 mins ago

Rohith Vemula: ರೋಹಿತ್‌ ವೇಮುಲ ದಲಿತನೇ ಅಲ್ಲ ಎಂದ ಪೊಲೀಸರು; ಕೇಸ್‌ ಕ್ಲೋಸ್‌, ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್‌ ಚಿಟ್

IPL 2024
Latest58 mins ago

IPL 2024 : ನನ್ನ ನಿದ್ದೆಗೆಡಿಸಿದ್ದ ರೋಹಿತ್​ ಶರ್ಮಾ; ಗಂಭೀರ್​ ಹೀಗೆ ಹೇಳಲು ಕಾರಣವೇನು?

Vidyashree HS
ಬೆಂಗಳೂರು1 hour ago

Vidyashree HS: ಬೆಂಗಳೂರಿನಲ್ಲಿ ಮೇ 4ರಂದು ವಿದ್ಯಾಶ್ರೀ ಎಚ್.ಎಸ್. ಭರತನಾಟ್ಯ ರಂಗಪ್ರವೇಶ

Prajwal Revanna Case
ಕರ್ನಾಟಕ2 hours ago

Prajwal Revanna Case: ರೇವಣ್ಣ ಮನೆ ಕೆಲಸದ ಮಹಿಳೆ ಕಿಡ್ನ್ಯಾಪ್‌ ಕೇಸ್; 2ನೇ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

Summer Fashion
ಫ್ಯಾಷನ್2 hours ago

Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ4 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ15 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌