Jacinda Ardern: ‘ನನಗಿನ್ನು ಅಧಿಕಾರ ಸಾಕು’ ಎನ್ನುತ್ತ ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟ ನ್ಯೂಜಿಲ್ಯಾಂಡ್​​​ನ ಜಸಿಂದಾ ಆರ್ಡರ್ನ್​​​​​ - Vistara News

ವಿದೇಶ

Jacinda Ardern: ‘ನನಗಿನ್ನು ಅಧಿಕಾರ ಸಾಕು’ ಎನ್ನುತ್ತ ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟ ನ್ಯೂಜಿಲ್ಯಾಂಡ್​​​ನ ಜಸಿಂದಾ ಆರ್ಡರ್ನ್​​​​​

ಜಸಿಂದಾ ಆರ್ಡರ್ನ್​ ಮೂಲತಃ ಬಡಕುಟುಂಬದವರು. ಇವರ ತಂದೆ ಪೊಲೀಸ್​ ಅಧಿಕಾರಿ. ನ್ಯೂಜಿಲ್ಯಾಂಡ್​ ಮಾಜಿ ಪ್ರಧಾನಿ ಹೆಲೆನ್​ ಕ್ಲಾರ್ಕ್​ ಅವರ ಕಚೇರಿಯಲ್ಲಿ ಕೆಲಸಕ್ಕೆ ಸೇರುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನ ಪ್ರಾರಂಭಿಸಿದರು.

VISTARANEWS.COM


on

New Zealand Jacinda Ardern resigned
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಅಧಿಕಾರ ಬೇಕು, ಮತ್ತೂ ಬೇಕು..ಮುಂದಿನ ಅವಧಿಗೂ ಬೇಕು ಎಂಬ ಹೆಬ್ಬಯಕೆ ರಾಜಕಾರಣಿಗಳಿಗೆ ತೀರುವುದೇ ಇಲ್ಲ. ಬಹುತೇಕ ರಾಜಕೀಯ ನಾಯಕರು ಆಡಳಿತ ಚುಕ್ಕಾಣಿ ಹಿಡಿದೇ ಇರಬೇಕು ಎಂದೇ ಬಯಸುತ್ತಾರೆ. ಹೀಗಿರುವಾಗ ನ್ಯೂಜಿಲ್ಯಾಂಡ್​ ಪ್ರಧಾನಮಂತ್ರಿ ಜಸಿಂದಾ ಆರ್ಡರ್ನ್​​ ಅದಕ್ಕೆ ವ್ಯತಿರಿಕ್ತ ಎನ್ನಿಸಿದ್ದಾರೆ. 2017ರಿಂದಲೂ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಹುದ್ದೆಯಲ್ಲಿರುವ ಜಸಿಂದಾ, ‘ನನಗಿನ್ನು ಅಧಿಕಾರ ಸಾಕು’ ಎನ್ನುತ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನ್ಯೂಜಿಲ್ಯಾಂಡ್​​ನಲ್ಲಿ ಇನ್ನು 9ತಿಂಗಳಲ್ಲಿ ಕೇಂದ್ರ ಚುನಾವಣೆ ಇದೆ. ಅದರ ಮಧ್ಯೆ ಜಸಿಂದಾ ರಾಜೀನಾಮೆ ಕುತೂಹಲ ಮೂಡಿಸಿದೆ.

ಜಸಿಂದಾ ಆರ್ಡರ್ನ್​ ನಿಜಕ್ಕೂ ಯಾಕಾಗಿ ರಾಜೀನಾಮೆ ನೀಡಿದರು ಎಂಬುದು ಖಚಿತವಾಗಿಲ್ಲ. ಅವರೂ ಕೂಡ ತಮಗೆ ಅಧಿಕಾರ ಸಾಕು ಎಂದು ಹೇಳಿದ್ದಾರೆ ಹೊರತು, ಇಂಥದ್ದೇ ಕಾರಣಕ್ಕೆ ಸ್ಥಾನ ಬಿಡುತ್ತೇನೆ ಎಂದು ಹೇಳಿಕೊಂಡಿಲ್ಲ. ಪ್ರಧಾನಿ ಹುದ್ದೆಗೆ ಹೊಸ ಅಭ್ಯರ್ಥಿಯನ್ನು ಇದುವರೆಗೆ ನ್ಯೂಜಿಲೆಂಡ್ ಲೇಬರ್ ಪಾರ್ಟಿ ಹೆಸರಿಸಿಲ್ಲ. ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ ಜಸಿಂದಾ, ‘ರಾಜೀನಾಮೆ ಕೊಡಬೇಕು ಎಂಬುದು ನನ್ನ ವೈಯಕ್ತಿಕ ನಿರ್ಧಾರ. ಫೆ.7ಕ್ಕೆ ನನ್ನ ಅಧಿಕಾರ ಅವಧಿ ಮುಗಿಯುತ್ತದೆ. ನಾನು ಕಳೆದ 6ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿದ್ದೇನೆ. ಈ ಪುಟ್ಟ ದ್ವೀಪವನ್ನು ಮುನ್ನಡೆಸುವುದು ನನಗೇನೂ ಸುಲಭವಾಗರಲಿಲ್ಲ. ಅತ್ಯಂತ ಸವಾಲಿನ ಕೆಲಸವಾಗಿತ್ತು. ಹಾಗಂತ ಕಷ್ಟ ಎಂಬ ಕಾರಣಕ್ಕೇ ಪ್ರಧಾನಿ ಹುದ್ದೆ ಬಿಡುತ್ತಿಲ್ಲ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈಗಿನ ಪ್ರಧಾನಿ ಆಯ್ಕೆಗೆ ಮರು ಚುನಾವಣೆ ನಡೆಯುವುದನ್ನೂ ನಾನು ಬಯಸುತ್ತಿಲ್ಲ ಎಂದಿದ್ದಾರೆ.

ಜಸಿಂದಾ ಆರ್ಡರ್ನ್​ ಮೂಲತಃ ಬಡಕುಟುಂಬದವರು. ಇವರ ತಂದೆ ಪೊಲೀಸ್​ ಅಧಿಕಾರಿ. ನ್ಯೂಜಿಲ್ಯಾಂಡ್​ ಮಾಜಿ ಪ್ರಧಾನಿ ಹೆಲೆನ್​ ಕ್ಲಾರ್ಕ್​ ಅವರ ಕಚೇರಿಯಲ್ಲಿ ಕೆಲಸಕ್ಕೆ ಸೇರುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನ ಪ್ರಾರಂಭಿಸಿದ ಜಸಿಂದಾ, ಬಳಿಕ ಬ್ರಿಟನ್​​ನಲ್ಲಿ ಟೋನಿ ಬ್ಲೇರ್​ ಪ್ರಧಾನಿಯಾಗಿದ್ದಾಗ ಅವರ ಸರ್ಕಾರದಲ್ಲಿ ನೀತಿ ಸಲಹೆಗಾರರಾಗಿ ಕೆಲಸ ಮಾಡಲು ಹೋದರು. ಅಲ್ಲಿಂದ ವಾಪಸ್​ ಬಂದು, ಮೊಟ್ಟ ಮೊದಲು 2008ರಲ್ಲಿ ನ್ಯೂಜಿಲ್ಯಾಂಡ್​ ಸಂಸತ್ತಿಗೆ ಆಯ್ಕೆಯಾದರು. ಬಳಿಕ 2017ರಲ್ಲಿ ಪ್ರಧಾನಿ ಹುದ್ದೆಗೆ ಏರಿದರು. ಪ್ರಧಾನಿ ಹುದ್ದೆಯಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಪ್ರಧಾನಿ ಎಂಬ ಖ್ಯಾತಿಯನ್ನೂ ಪಡೆದರು. ಮೊದಲ ಖ್ಯಾತಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್​ ಭುಟ್ಟೋ ಅವರದ್ದು. ಹಾಗೇ, ಕೊವಿಡ್​ 19 ಸನ್ನಿವೇಶದಲ್ಲಿ ಅತ್ಯಂತ ಸಮರ್ಪಕವಾಗಿ ಆಡಳಿತ ನಡೆಸಿ, ಕೊರೊನಾ ಸವಾಲನ್ನು ಮೆಟ್ಟಿನಿಂತ ಪ್ರಧಾನಿ ಎಂಬ ಹೆಗ್ಗಳಿಕೆಗೂ ಜಸಿಂದಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ: INDvsNZ ODI | ಭಾರತಕ್ಕೆ ಗಿಲ್​ ಮಾಂಗೆ ಮೋರ್​; ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ 12 ರನ್​ ಜಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Vijay Mallya: ದಿವಾಳಿಯೆಂದು ಪರಾರಿಯಾಗಿದ್ದ ವಿಜಯ್ ಮಲ್ಯಗೆ ಲಂಡನ್‌ನಲ್ಲಿದೆ 117 ಕೋಟಿಯ ಬಂಗಲೆ!

ಸಾಲ ಮಾಡಿ ವಂಚಿಸಿ ಭಾರತದಿಂದ ಓಡಿ ಹೋಗಿರುವ ಉದ್ಯಮಿ ವಿಜಯ ಮಲ್ಯ (Vijay Mallya) ಅವರು ಯುಕೆಯಲ್ಲಿ 14 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 117 ಕೋಟಿ ಬೆಲೆ ಬಾಳುವ ಎಸ್ಟೇಟ್ ಅನ್ನು ಭಾರತದಿಂದ ಓಡಿ ಹೋಗುವ ಕೆಲವು ತಿಂಗಳ ಮೊದಲು ಖರೀದಿ ಮಾಡಿದ್ದು, ಇದು ಹೇಗಿದೆ ಗೊತ್ತೇ? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Vijay Mallya
Koo

ಸಾಲ ಮಾಡಿ ಭಾರತದಿಂದ (india) ಓಡಿ ಹೋಗಿರುವ ಉದ್ಯಮಿ (businessman) ವಿಜಯ ಮಲ್ಯ (Vijay Mallya) ಅವರ ಪುತ್ರ ಸಿದ್ದಾರ್ಥ್ ಮಲ್ಯ (Siddharth Mallya ) ಮತ್ತು ಜಾಸ್ಮಿನ್ (Jasmine) ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ಇತ್ತೀಚೆಗೆ ಲಂಡನ್ ನಲ್ಲಿರುವ (london) ವಿಜಯ ಮಲ್ಯ ಅವರ 14 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 117 ಕೋಟಿ ಬೆಲೆ ಬಾಳುವ ಭವನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವಿವಾಹಕ್ಕಿಂತ ಹೆಚ್ಚಾಗಿ ಮಲ್ಯ ಅವರ ಎಸ್ಟೇಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿದೆ.

ಹರ್ಟ್‌ಫೋರ್ಡ್‌ಶೈರ್‌ನ (Hertfordshire) ಟೆವಿನ್‌ನ ಸ್ಲೀಪಿ ಹಳ್ಳಿಯ ಲೇಡಿವಾಕ್ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್‌ ಅವರ ವಿವಾಹಕ್ಕೆ ಸಾಕ್ಷಿಯಾಯಿತು. ವಿಸ್ತಾರವಾದ ಲೇಡಿವಾಕ್ ಎಸ್ಟೇಟ್ ಅನ್ನು ವಿಜಯ್ ಮಲ್ಯ ಅವರು ಭಾರತದಿಂದ ಯುಕೆಗೆ ಪಲಾಯನ ಮಾಡುವ ಕೆಲವೇ ತಿಂಗಳುಗಳ ಮೊದಲು 2015ರಲ್ಲಿ ಖರೀದಿಸಿದ್ದರು.

68 ವರ್ಷದ ಮಲ್ಟಿ ಮಿಲಿಯನೇರ್ ವಿಜಯ್‌ ಮಲ್ಯ ಪ್ರಸ್ತುತ ಯುಕೆಯಲ್ಲಿದ್ದಾರೆ. 900 ಕೋಟಿಗೂ ಹೆಚ್ಚು ಸಾಲ ವಂಚನೆ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ. ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಈ ಬಗ್ಗೆ ತನಿಖೆ ನಡೆಸುತ್ತಿದೆ.


ವಿಜಯ್ ಮಲ್ಯ ಅವರು ಎಫ್1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರ ತಂದೆ ಆಂಥೋನಿ ಹ್ಯಾಮಿಲ್ಟನ್ ಅವರಿಂದ ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಲೇಡಿವಾಕ್ ಎಸ್ಟೇಟ್ ಅನ್ನು ಖರೀದಿಸಿದ್ದರು. 2021ರ ರೆಡಿಫ್ ವರದಿಯ ಪ್ರಕಾರ ಸ್ವ-ಘೋಷಿತ ‘ಕಿಂಗ್ ಆಫ್ ಗುಡ್ ಟೈಮ್ಸ್’ ಒಡೆತನದ ಎಲ್ಲಾ ಲಕ್ಷಣಗಳನ್ನು ಈ ಆಸ್ತಿ ಹೊಂದಿದೆ.

ಇಲ್ಲಿರುವ ದೊಡ್ಡ ನಿವಾಸವು 30 ಎಕರೆ ಭೂಮಿಯಲ್ಲಿದೆ. ಮೂರು-ಮನೆಗಳ ಎಸ್ಟೇಟ್ ಅನೇಕ ಔಟ್‌ಹೌಸ್‌ಗಳು, ಈಜುಕೊಳಗಳು, ಕಾರಂಜಿಗಳು ಮತ್ತು ಟೆನ್ನಿಸ್ ಕೋರ್ಟ್‌ಗಳನ್ನು ಹೊಂದಿದೆ. ಜೊತೆಗೆ ಮಲ್ಯ ಅವರ ದುಬಾರಿ ಕಾರುಗಳ ದೊಡ್ಡ ಫ್ಲೀಟ್ ಅನ್ನು ನಿರ್ವಹಿಸಲು ಸಮರ್ಥವಾಗಿರುವ ಗ್ಯಾರೇಜ್ ಅನ್ನು ಒಳಗೊಂಡಿದೆ.


ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ಅವರ ವಿವಾಹದಲ್ಲಿ ಅತಿಥಿಯೊಬ್ಬರು ಪೋಸ್ಟ್ ಮಾಡಿದ ದೃಶ್ಯಗಳು ಮದುವೆಗೆ ಅತಿಥಿಗಳಿಂದ ತುಂಬಿರುವ ಹರ್ಟ್‌ಫೋರ್ಡ್‌ಶೈರ್ ಭವನವನ್ನು ತೋರಿಸುತ್ತವೆ. ಇದರಲ್ಲಿ ಅಂದಗೊಳಿಸಲಾದ ಹುಲ್ಲುಹಾಸು ಮತ್ತು ಸಸ್ಯಾಲಂಕಾರವನ್ನು ಈ ಬೃಹತ್ ನಿವಾಸವು ಒಳಗೊಂಡಿದೆ.


ಹರ್ಟ್‌ಫೋರ್ಡ್‌ಶೈರ್‌ನಲ್ಲಿ ಲೇಡಿವಾಕ್

ವಿಜಯ್ ಮಲ್ಯ ಲೇಡಿವಾಕ್ ಎಸ್ಟೇಟ್ ಅನ್ನು 11.5 ಮಿಲಿಯನ್ ಪೌಂಡ್ ಗೆ ಖರೀದಿಸಿದ್ದಾರೆ. ಎರಡು ವರ್ಷಗಳಲ್ಲಿ ಭಾರೀ ಭದ್ರತೆಯ ಲೇಡಿವಾಕ್ ಎಸ್ಟೇಟ್‌ನಲ್ಲಿ ವ್ಯಾಪಕವಾದ ನವೀಕರಣಗಳನ್ನು ಕೈಗೊಳ್ಳಲಾಯಿತು.

ಇದನ್ನೂ ಓದಿ: T20 world Cup 2024 : ವೆಸ್ಟ್​ ಇಂಡೀಸ್​​ನಲ್ಲೂ ಮನೆಯೂಟ ಮಾಡುತ್ತಿರುವ ಸೂರ್ಯಕುಮಾರ್​, ಹಾರ್ದಿಕ್ ಪಾಂಡ್ಯ!

ಮಲ್ಯ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ಅನಂತರ ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳು, ಡೆಕೋರೇಟರ್‌ಗಳು ಮತ್ತು ಲ್ಯಾಂಡ್‌ಸ್ಕೇಪ್ ಕಲಾವಿದರ ನಿರಂತರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇವರ ಈ ಎಸ್ಟೇಟ್ ಹಲವು ಸಿಸಿಟಿವಿ ಕೆಮರಾಗಳು, ಕಬ್ಬಿಣದ ಗೇಟ್‌ ಮತ್ತು ಬಹು ಭದ್ರತಾ ಸಿಬ್ಬಂದಿಗಳೊಂದಿಗೆ ಹೆಚ್ಚು ಕಾವಲುಗಾರರನ್ನು ನೇಮಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ. ಮಲ್ಯ ಕುಟುಂಬ ಇಲ್ಲಿಗೆ ಬರುವಾಗ ತಮ್ಮೊಂದಿಗೆ ಹೆಚ್ಚಿನ ಸಂಖ್ಯೆಯ ಕಾರುಗಳು ಮತ್ತು ಸಿಬ್ಬಂದಿಯನ್ನು ಕರೆತಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Continue Reading

Latest

Viral Video: ಕ್ಯಾಸಿನೋದಲ್ಲಿ 33 ಕೋಟಿ ರೂ. ಜಾಕ್‌ಪಾಟ್‌; ಖುಷಿ ಹೆಚ್ಚಾಗಿ ಹಾರ್ಟ್‌ ಅಟ್ಯಾಕ್‌!

Viral Video: ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4ಮಿಲಿಯನ್ ಡಾಲರ್ ಜಾಕ್‌ಪಾಟ್‌ ಗೆದ್ದ ಶ್ರೀಮಂತ ವ್ಯಕ್ತಿಯೊಬ್ಬ ಗೆಲುವಿನ ಖುಷಿ ತಡೆದುಕೊಳ್ಳಲಾಗದೆ ಹೃದಯ ಸ್ತಂಭನದಿಂದ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಹಣ ಗೆದ್ದ ಖುಷಿಯಲ್ಲಿದ್ದ ಅವರು ಆ ಖುಷಿಯನ್ನು ಅನುಭವಿಸಲು ಮಾತ್ರ ಆಗಲಿಲ್ಲ. ಗೆದ್ದ ಉತ್ಸಾಹದಲ್ಲಿದ್ದ ಅವರು ಕಾರ್ಡಿಯಾಕ್ ಅರೆಸ್ಟ್ ಆಗಿ ಅಲ್ಲೆ ಕುಸಿದು ಬಿದ್ದರು. ಜಾಕ್‌ಪಾಟ್ ಹೊಡೆದ ಖುಷಿಯನ್ನು ತಡೆದುಕೊಳ್ಳಲಾಗದೆ ಭಾವಪರವಶರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

VISTARANEWS.COM


on

Viral Video
Koo

ತುಂಬಾ ಖುಷಿಯಾದಾಗ ಕೆಲವರಿಗೆ ತಮ್ಮ ಖುಷಿಯನ್ನು ಹೇಗೆ ವ್ಯಕ್ತಪಡಿಸುವುದು ಎಂದು ಗೊತ್ತಾಗುವುದಿಲ್ಲ. ಇನ್ನು ಕೆಲವರಿಗೆ ಯಾವುದಾದರೂ ಶಾಕಿಂಗ್‌ ನ್ಯೂಸ್‌ ಸುದ್ದಿ ಹೇಳಿದರೂ ಯಾವುದೇ ತರಹದ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇಲ್ಲೊಬ್ಬರು ಖುಷಿಯನ್ನು ತಡೆದುಕೊಳ್ಳಲಾಗದೇ ಮೃತಪಟ್ಟ ಘಟನೆ ನಡೆದಿದೆ. ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊನದಲ್ಲಿ ಕೋಟಿ ಕೋಟಿ ಹಣ ಗೆದ್ದ ವ್ಯಕ್ತಿಯೊಬ್ಬರು ಖುಷಿಯನ್ನು ತಡೆದುಕೊಳ್ಳಲಾಗದೇ ಮೃತಪಟ್ಟಿರುವ ವಿಡಿಯೊವೊಂದು ವೈರಲ್‌ (Viral Video) ಆಗಿದೆ.

ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4 ಮಿಲಿಯನ್ ಡಾಲರ್ (ಸುಮಾರು 33 ಕೋಟಿ ರೂ. ) ಜಾಕ್‌ಪಾಟ್‌ ಗೆದ್ದ ಶ್ರೀಮಂತ ವ್ಯಕ್ತಿಯೊಬ್ಬ ಗೆಲುವಿನ ಖುಷಿ ತಡೆದುಕೊಳ್ಳಲಾಗದೆ ಹೃದಯ ಸ್ತಂಭನದಿಂದ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಕ್ಯಾಸಿನೊಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ವ್ಯಕ್ತಿ ಪ್ರತಿ ಸಲ ಬರಿಗೈಯಲ್ಲಿ ವಾಪಾಸ್‌ ಆಗುತ್ತಿದ್ದರಂತೆ. ಆದರೆ ಈ ಬಾರಿ ಮಾತ್ರ ಇವರಿಗೆ ಜಾಕ್‌ಪಾಟ್‌ ಹೊಡೆದಿದೆ.

ಅವರು ನಿರೀಕ್ಷಿಸದಂತಹ ಖುಷಿ ಅಂದು ಅವರ ಪಾಲಿಗೆ ಒಲಿದು ಬಂದಿತ್ತು. ಹಣ ಗೆದ್ದ ಖುಷಿಯಲ್ಲಿದ್ದ ಅವರು ಆ ಖುಷಿಯನ್ನು ಅನುಭವಿಸಲು ಮಾತ್ರ ಆಗಲಿಲ್ಲ. ಗೆದ್ದ ಉತ್ಸಾಹದಲ್ಲಿದ್ದ ಅವರು ಕಾರ್ಡಿಯಾಕ್ ಅರೆಸ್ಟ್‌ ಆಗಿ ಅಲ್ಲೆ ಕುಸಿದು ಬಿದ್ದರು. ಜಾಕ್‌ಪಾಟ್‌ ಹೊಡೆದ ಖುಷಿಯನ್ನು ತಡೆದುಕೊಳ್ಳಲಾಗದೆ ಭಾವಪರವಶರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕುಸಿದುಬಿದ್ದ ವ್ಯಕ್ತಿಗೆ ಕ್ಯಾಸಿನೊ ಸಿಬ್ಬಂದಿ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಿದರೂ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅತಿಯಾದ ಸಂತೋಷವೇ ವ್ಯಕ್ತಿಯ ಕಾರ್ಡಿಯಾಕ್‌ ಅರೆಸ್ಟ್‌ಗೆ ಕಾರಣ ಎಂದು ವೈದ್ಯರು ಘೋಷಿಸಿದರು.

ಇದನ್ನೂ ಓದಿ: Dating Trend: ʼ3 ತಿಂಗಳ ಡೇಟಿಂಗ್‌ʼ! ಯುವ ಜನತೆಯ ಹೊಸ ಟ್ರೆಂಡ್‌!

ಮರೀನಾ ಕೊಲ್ಲಿಯಲ್ಲಿರುವ ಈ ಕ್ಯಾಸಿನೊ ಅದರ ನಾಲ್ಕು ಹಂತದ ಗೇಮಿಂಗ್ ಫ್ಲೋರ್ರ ಸ್ಪೇಸ್ ಮತ್ತು 2300ಕ್ಕೂ ಹೆಚ್ಚಿನ ಸ್ಲಾಟ್ ಯಂತ್ರಗಳೊಂದಿಗೆ ಹೊಸ ಮತ್ತು ಜನಪ್ರಿಯ ಎಲೆಕ್ಟ್ರಾನಿಕ್ ಗೇಮಿಂಗ್ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸುತ್ತದೆ. 250ಕ್ಕೂ ಹೆಚ್ಚಿನ ಆಟಗಳೊಂದಿಗೆ ಭೇಟಿನೀಡುವ ಪ್ರತಿಯೊಬ್ಬರಿಗೂ ಭರಪೂರ ಮನರಂಜನೆ ಒದಗಿಸುತ್ತದೆ. ಇಲ್ಲಿ ಮೂವತ್ತಕ್ಕೂ ಹೆಚ್ಚಿನ ಖಾಸಗಿ ಗೇಮಿಂಗ್ ಕೊಠಡಿಗಳಿವೆ. 500ಕ್ಕೂ ಹೆಚ್ಚಿನ ಗೇಮಿಂಗ್ ಟೇಬಲ್‌ಗಳಿವೆ. 

Continue Reading

ಪ್ರಮುಖ ಸುದ್ದಿ

Pakistan: ಪಾಕ್‌ನಲ್ಲಿ ಹಿಂದುಗಳು ಸೇರಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ; ಅಲ್ಲಿನ ಸಚಿವನೇ ಒಪ್ಪಿಕೊಂಡ ಸತ್ಯ ಇದು!

Pakistan: ಅಲ್ಪಸಂಖ್ಯಾತರು ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಹತ್ಯೆ ಮಾಡಲಾಗುತ್ತಿದೆ. ಅವರ ಮೇಲೆ ಧರ್ಮನಿಂದನೆಯ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ನಾವು ಪಾಕಿಸ್ತಾನದ ಅಲ್ಪಸಂಖ್ಯಾತ ಸಹೋದರ ಹಾಗೂ ಸಹೋದರಿಯರನ್ನು ರಕ್ಷಣೆ ಮಾಡಬೇಕಿದೆ ಎಂಬುದಾಗಿ ಆ ದೇಶದ ರಕ್ಷಣಾ ಸಚಿವ ಖವಾಜ ಆಸಿಫ್‌ ಅವರು ಸಂಸತ್ತಿನಲ್ಲಿಯೇ ಹೇಳಿದ್ದಾರೆ. ಆ ಮೂಲಕ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ಹೇಗಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.

VISTARANEWS.COM


on

Pakistan
Koo

ಇಸ್ಲಾಮಾಬಾದ್:‌ ಉಗ್ರರ ಪೋಷಣೆ, ಇಸ್ಲಾಮಿಕ್‌ ಮೂಲಭೂತವಾದಿಗಳ ಅಟ್ಟಹಾಸ, ಬಲವಂತದ ಮತಾಂತರದಿಂದಾಗಿ ಪಾಕಿಸ್ತಾನದಲ್ಲಿ (Pakistan) ಅಲ್ಪಸಂಖ್ಯಾತರಾಗಿರುವ ಹಿಂದುಗಳು ಸೇರಿ ಹಲವು ಧಾರ್ಮಿಕ ಅಲ್ಪಸಂಖ್ಯಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಿನ ಬೆಳಗಾದರೆ, ಹಿಂದುಗಳನ್ನು ಮತಾಂತರ ಮಾಡುವುದು, ದೇವಾಲಯಗಳ ಮೇಲೆ ದಾಳಿ ಮಾಡುವುದು ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತವೆ. ಇದರ ಬೆನ್ನಲ್ಲೇ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬುದನ್ನು ಆ ದೇಶದ ರಕ್ಷಣಾ ಸಚಿವ ಖವಾಜ ಆಸಿಫ್‌ (Khawaja Asif) ಅವರೇ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಗುಂಪು ಹತ್ಯೆ, ಧರ್ಮನಿಂದನೆ ಸೇರಿ ಹಲವು ಪ್ರಕರಣಗಳು ಕೇಳಿಬಂದಿದ್ದು, ಇದನ್ನು ಖಂಡಿಸಿ ಶೆಹಬಾಜ್‌ ಷರೀಫ್‌ ನೇತೃತ್ವದ ಸರ್ಕಾರವು ನಿರ್ಣಯ ಮಂಡಿಸಿತು. ಇದೇ ವೇಳೆ ಖವಾಜ ಆಸಿಫ್‌ ಮಾತನಾಡಿದರು. “ಪಾಕಿಸ್ತಾನದಲ್ಲಿ ಪ್ರತಿದಿನ ಅಲ್ಪಸಂಖ್ಯಾತರ ಕೊಲೆಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರೂ ಸುರಕ್ಷಿತವಲ್ಲ. ಇಸ್ಲಾಂನಲ್ಲೇ ಸಣ್ಣ ಸಮುದಾಯಗಳಿಗೂ ಕೂಡ ರಕ್ಷಣೆ ಇಲ್ಲದಂತಾಗಿದೆ” ಎಂದು ಹೇಳುವ ಮೂಲಕ ಇಸ್ಲಾಮಿಕ್‌ ಮೂಲಭೂತವಾದದ ಅಟ್ಟಹಾಸವನ್ನು ಜಗಜ್ಜಾಹೀರು ಮಾಡಿದ್ದಾರೆ.

“ಅಲ್ಪಸಂಖ್ಯಾತರು ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಹತ್ಯೆ ಮಾಡಲಾಗುತ್ತಿದೆ. ಅವರ ಮೇಲೆ ಧರ್ಮನಿಂದನೆಯ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ನಾವು ಪಾಕಿಸ್ತಾನದ ಅಲ್ಪಸಂಖ್ಯಾತ ಸಹೋದರ ಹಾಗೂ ಸಹೋದರಿಯರನ್ನು ರಕ್ಷಣೆ ಮಾಡಬೇಕಿದೆ. ಅವರು ಕೂಡ ಬಹುಸಂಖ್ಯಾತರು ಹೊಂದಿರುವಷ್ಟೇ ಹಕ್ಕುಗಳನ್ನು ಹೊಂದಿದ್ದಾರೆ. ಪಾಕಿಸ್ತಾನವು ಎಲ್ಲ ನಾಗರಿಕರಿಗೂ ಸೇರಿದೆ. ಮುಸ್ಲಿಮರು ಇರಲಿ, ಕ್ರೈಸ್ತರು ಇರಲಿ, ಸಿಖ್ಖರು ಸೇರಿ ಯಾವುದೇ ಧರ್ಮೀಯರು ಇರಲಿ, ನಮ್ಮ ಸಂವಿಧಾನವು ಅವರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಅವರ ರಕ್ಷಣೆಗೆ ಸಂವಿಧಾನ ಇದೆ” ಎಂಬುದಾಗಿ ಹೇಳಿದರು.

ಪಾಕಿಸ್ತಾನದಲ್ಲಿ ಧರ್ಮನಿಂದನೆ, ಅಲ್ಪಸಂಖ್ಯಾತರ ಹತ್ಯೆಯನ್ನು ಖಂಡಿಸಿ ಸರ್ಕಾರವೇ ನಿರ್ಣಯ ಮಂಡಿಸಿದರೂ, ಅದರ ಅಂಗೀಕಾರಕ್ಕೆ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷವು ಬಿಡಲಿಲ್ಲ. ಪಾಕಿಸ್ತಾನದಲ್ಲಿ ನಿತ್ಯ ದೇವಾಲಯಗಳ ಮೇಲೆ ದಾಳಿ, ಮೂರ್ತಿಗಳ ಭಂಜನೆ, ಹಿಂದುಗಳ ಮತಾಂತರ, ಅಲ್ಪಸಂಖ್ಯಾತ ಯುವತಿಯರ ಮೇಲೆ ಅತ್ಯಾಚಾರ, ಗುಂಪು ಹತ್ಯೆಗಳು ನಡೆಯುತ್ತಲೇ ಇವೆ. ಇದಕ್ಕಾಗಿ ನಿರ್ಣಯ ಮಂಡಿಸಿದರೂ ಪಿಟಿಐ ಪಕ್ಷವು ಮೂಲಭೂತವಾದಿ ಮನಸ್ಥಿತಿಯನ್ನೇ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದೆ.

ಇದನ್ನೂ ಓದಿ: Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Continue Reading

ದೇಶ

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

AI Sex Dolls: ಚೀನಾದ ಶೆಂಝೆನ್‌ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್‌ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಸುದ್ದಿಸಂಸ್ಥೆಯು ವರದಿ ಮಾಡಿದೆ.

VISTARANEWS.COM


on

Sex Doll
Koo

ನವದೆಹಲಿ: ಭಾರತ ಸೇರಿ ಜಗತ್ತಿನೆಲ್ಲೆಡೆ ಪ್ರತಿಯೊಂದು ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನ ಕಾಲಿಟ್ಟಿದೆ. ಲವ್‌ ಲೆಟರ್‌ ಬರೆಯುವುದರಿಂದ ಹಿಡಿದು ಕೋಡ್‌ ರಚನೆವರೆಗೆ, ರೋಬೊಗಳು ಕುಳಿತಲ್ಲಿಗೆ ಬಂದು ಊಟ ಸರಬರಾಜು ಮಾಡುವವರೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪಸರಿಸಿದೆ. ಇದರ ಬೆನ್ನಲ್ಲೇ, ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸೆಕ್ಸ್‌ ಬೊಂಬೆಗಳನ್ನು (AI Powered Sex Dolls) ಅಥವಾ ಸೆಕ್ಸ್‌ ರೋಬೊಗಳನ್ನು ಅಭಿವೃದ್ಧಿಪಡಿಸಿದ್ದು, ಇವು ಮನುಷ್ಯರಿಗೆ ನೈಜ ಲೈಂಗಿಕ ಸುಖವನ್ನು ಅನುಭವಿಸಲು ಸಾಧ್ಯವಾಗಿಸುತ್ತವೆ ಎಂದು ತಿಳಿದುಬಂದಿದೆ.

ಹೌದು, ಚೀನಾದ ಶೆಂಝೆನ್‌ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್‌ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಸುದ್ದಿಸಂಸ್ಥೆಯು ವರದಿ ಮಾಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಪುರುಷರು, ಮಹಿಳೆಯರು ಸೇರಿ ಯಾರಿಗೇ ಆಗಲಿ ಲೈಂಗಿಕ ಸುಖ ಅನುಭವಿಸಲು ಬೇರೊಬ್ಬರ ಅವಶ್ಯಕತೆಯೇ ಇರುವುದಿಲ್ಲ. ಸೆಕ್ಸ್‌ ಡಾಲ್‌ಗಳ ಮೂಲಕವೇ ಸಂಭೋಗ ಸುಖ ಅನುಭವಿಸಬಹುದು ಎಂದು ಹೇಳಲಾಗುತ್ತಿದೆ.

ಇವುಗಳ ಕಾರ್ಯನಿರ್ವಹಣೆ ಹೇಗೆ?

ಜಗತ್ತಿನಲ್ಲಿ ಇದುವರೆಗೆ ಕೃತಕವಾಗಿ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿರಲಿಲ್ಲ. ಆದರೆ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚೀನಾ ವಿಜ್ಞಾನಿಗಳು ನೈಜ ಸುಖ ಅನುಭವಿಸುವ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸೆಕ್ಸ್‌ ಡಾಲ್‌ಗಳು ಬ್ಯಾಟರಿ ಚಾಲಿತ ಆಗಿರುತ್ತವೆ. ಅವುಗಳ ಮಾಂಸಖಂಡಗಳು ಕೂಡ ಮನುಷ್ಯರ ಹಾಗೆ ಇರಲಿದ್ದು, ಫ್ಲೆಕ್ಸಿಬಲ್‌ ಕೂಡ ಆಗಿರಲಿವೆ. ಮನುಷ್ಯರ ಭಾವನೆಗಳಿಗೆ ಸ್ಪಂದಿಸಿ, ನಿಜವಾದ ಲೈಂಗಿಕ ಸುಖವನ್ನು ಅನುಭವಿಸಲು ಇವು ನೆರವಾಗಲಿವೆ ಎಂದು ಹೇಳಲಾಗುತ್ತಿದೆ. ಹಲವು ಸವಾಲುಗಳನ್ನು ಮೀರಿಯೂ ವಿಜ್ಞಾನಿಗಳು ಈ ಕನಸು ನನಸಾಗಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ರೇಟ್‌ ಎಷ್ಟಾಗಬಹುದು?

ವಿಜ್ಞಾನಿಗಳು ಈಗಾಗಲೇ ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 5.6 ಅಡಿಯ ರೋಬೊಗಳನ್ನು ತಯಾರಿಸುತ್ತಿದ್ದು, ಬಳಸುವವರಿಗೆ ಅನುಕೂಲವಾಗಲಿ ಎಂದು 29 ಕೆ.ಜಿ ತೂಕದ ಡಾಲ್‌ಗಳನ್ನು ತಯಾರಿಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಇವುಗಳನ್ನು ತಯಾರಿಸುವ ಕಾರಣ ಆರಂಭದಲ್ಲಿ ಇವುಗಳ ಬೆಲೆಯು 1.25 ಲಕ್ಷ ರೂ.ನಿಂದ 6 ಲಕ್ಷ ರೂ.ವೆರೆಗೆ ಇರಲಿವೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ ಸೆಕ್ಸ್‌ ರೋಬೊಗಳನ್ನು ತಯಾರಿಸುವುದರಿಂದ ಮನುಷ್ಯ ಮನುಷ್ಯನ ಸಂಬಂಧ, ಬಾಂಡಿಂಗ್‌ ಹಾಳಾಗುತ್ತದೆ ಎಂದು ಒಂದಷ್ಟು ಮಡಿವಂತರು ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Love Sex Dhoka: ಪ್ರೀತಿಸುವ ನಾಟಕವಾಡಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌; ಯುವಕನ ಬಂಧನಕ್ಕಾಗಿ ಪೊಲೀಸ್‌ ಠಾಣೆ ಮುಂದೆ ಯುವತಿ ಧರಣಿ

Continue Reading
Advertisement
Members of Parliament
Latest16 mins ago

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

Actor Darshan Judicial Custody Jailer Gave UTP Number
ಕ್ರೈಂ1 hour ago

Actor Darshan: ದರ್ಶನ್‌, ಪ್ರದೋಷ್‌ನಿಂದ ಮೂರು ಪಿಸ್ತೂಲ್‌ ವಶಕ್ಕೆ

Health Tips Kannada
ಆರೋಗ್ಯ1 hour ago

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

NEET Paper Leak
ಶಿಕ್ಷಣ1 hour ago

NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಸಂಜೀವ್ ಮುಖಿಯಾ; ಈತ ನಟೋರಿಯಸ್‌!

Karnataka Weather
ಕರ್ನಾಟಕ2 hours ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ2 hours ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ2 hours ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ9 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌