ಹಿರೇಕೆರೂರು ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಿ.ಎಸ್‌. ಯಡಿಯೂರಪ್ಪ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ - Vistara News

ಪ್ರಮುಖ ಸುದ್ದಿ

ಹಿರೇಕೆರೂರು ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಿ.ಎಸ್‌. ಯಡಿಯೂರಪ್ಪ: ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ

ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಬಿ.ಸಿ. ಪಾಟೀಲ್‌ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದೂ ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

VISTARANEWS.COM


on

BS yediyurappa contributed more to hirekerur development says cm basavaraj bommai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಈ ಕ್ಷೇತ್ರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಬಿ.ಎಸ್‌. ಯಡಿಯೂರಪ್ಪ ಎಂದು ಶ್ಲಾಘಿಸಿದರು.

ಹಿರೇಕೆರೂರು ಮತ್ತು ಬ್ಯಾಡಗಿ ತಾಲ್ಲೂಕಿನ 56 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆಯ ಲೋಕಾರ್ಪಣೆ, ರಟ್ಟಿಹಳ್ಲಿ ತಾಲ್ಲೂಕಿನ 7 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ, ಹಾಗೂ ಹಿರೇಕೆರೂರು ಮತ್ತು ರಟ್ಟೀಹಳ್ಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದವರು. ಅವರ ಕಾಲದಲ್ಲಿ ಪ್ರಾರಂಭವಾದ ಸರ್ವಜ್ಞ ಏತನೀರಾವರಿ, ಕೆರೆ ತುಂಬಿಸುವ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳು, ಇವೆಲ್ಲಕ್ಕೂ ಇಂದು ಚಾಲನೆ ಹಾಗೂ ಉದ್ಘಾಟನೆಯನ್ನು ಮಾಡುತ್ತಿದ್ದೇವೆ.

ಇದನ್ನೂ ಓದಿ : Election 2023 | ಯು.ಬಿ. ಬಣಕಾರ್‌ ಕಾಂಗ್ರೆಸ್‌ ಸೇರ್ಪಡೆ, ಸಚಿವ ಬಿ.ಸಿ ಪಾಟೀಲ್‌ ವಿರುದ್ಧ ಸ್ಪರ್ಧೆಗೆ ಟಿಕೆಟ್‌ ಪಕ್ಕಾ

ಈ ಕಾರ್ಯಕ್ರಮದ ರೂವಾರಿ ಸಚಿವ ಬಿ.ಸಿ. ಪಾಟೀಲರು. ಅವರ ನೇತೃತ್ವದಲ್ಲಿ ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಸುಮಾರು 25-30 ವರ್ಷಗಳ ಬೇಡಿಕೆಗಳನ್ನು ಈ ಅವಧಿಯಲ್ಲಿ ಪೂರ್ಣ ಮಾಡಿದ್ದಾರೆ. ರಾಜಿನಾಮೆ ನೀಡಿದಾಗ ಈ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಪ್ರತಿಜ್ಞೆಯನ್ನು ಅವರು ನಡೆಸಿಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಂಡ ಧೀಮಂತ ನಾಯಕರು ಬಿ.ಸಿ.ಪಾಟೀಲರು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಬಿ.ಸಿ. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಳಗಾವಿ

Belagavi Lok Sabha Constituency: ಶೆಟ್ಟರ್‌ ವರ್ಸಸ್‌ ಹೆಬ್ಬಾಳ್ಕರ್‌; ಯಾರಿಗೆ ಬೆಳಗಾವಿ ಕುಂದಾ?

Belagavi Lok Sabha Constituency: ಯುವ ನಾಯಕತ್ವ, ಸುರೇಶ್‌ ಅಂಗಡಿ ಕುಟುಂಬದ ಪ್ರಾಬಲ್ಯ ಇಲ್ಲದಿರುವುದು, ಗ್ಯಾರಂಟಿ ಯೋಜನೆಗಳು ಸೇರಿ ಹಲವು ಅಂಶಗಳು ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ ಸಕಾರಾತ್ಮಕವಾಗಿವೆ ಎಂಬುದಾಗಿ ತಿಳಿದುಬಂದಿದೆ. ಆದರೆ, ಸುರೇಶ್‌ ಅಂಗಡಿಯವರು ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ನಂತರ ಮಂಗಲಾ ಅಂಗಡಿಯವರು ಕೂಡ ಗೆದ್ದಿದ್ದು, ಆ ಮೂಲಕ ಬಿಜೆಪಿ ಬೇರುಗಳನ್ನು ಗಟ್ಟಿಗೊಳಿಸಿದ್ದು ಮೃಣಾಲ್‌ಗೆ ಕುತ್ತಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

VISTARANEWS.COM


on

Belagavi Lok Sabha Constituency
Koo

ಬೆಳಗಾವಿ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೆಳಗಾವಿ ಲೋಕಸಭೆ ಚುನಾವಣೆ ಕ್ಷೇತ್ರದ (Belagavi Lok Sabha Constituency) ಚುನಾವಣೆಯು ಈ ಬಾರಿ ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿ ಭದ್ರಕೋಟೆಯೇ ಆಗಿರುವ ಬೆಳಗಾವಿಯಲ್ಲಿ ಈ ಬಾರಿ ಬಿಜೆಪಿಯಿಂದ ಜಗದೀಶ್‌ ಶೆಟ್ಟರ್‌ (Jagadish Shettar) ಕಣಕ್ಕಿಳಿದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ (Mrinal Hebbalkar) ಸ್ಪರ್ಧಿಸಿದ್ದಾರೆ. ಹಾಗಾಗಿ, ಬೆಳಗಾವಿ ಲೋಕಸಭೆ ಕ್ಷೇತ್ರವು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ತೆರಳಿ, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ವಾಪಸಾದ ಜಗದೀಶ್‌ ಶೆಟ್ಟರ್‌ ಅವರು ಸ್ಥಳೀಯ ನಾಯಕರ ವಿಶ್ವಾಸ ಗಳಿಸುವುದು, ಕಾರ್ಯಕರ್ತರಿಗೆ ಬಲ ತುಂಬುದು, ಮೋದಿ ಅವರ ಅಲೆಯನ್ನು ಸದುಪಯೋಗ ಮಾಡಿಕೊಳ್ಳುವುದು ಸೇರಿ ಹಲವು ತಂತ್ರಗಳನ್ನು ಹೂಡಿದ್ದರು. ಇನ್ನು ಮಂಗಲಾ ಸುರೇಶ್‌ ಅಂಗಡಿಯವರು ಜಗದೀಶ್‌ ಶೆಟ್ಟರ್‌ ಅವರಿಗೆ ಸಂಬಂಧಿಯಾದ ಕಾರಣ ಅಷ್ಟೇನೂ ಹೊರಗಿನವರು ಎಂಬ ಭಾವನೆ ಇಲ್ಲ. ಇನ್ನು, ಜಗದೀಶ್‌ ಶೆಟ್ಟರ್‌ ಅವರು ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಹಾಗಾಗಿ, ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌ ಪರ ಒಲವಿದೆ ಎಂದೇ ಹೇಳಲಾಗುತ್ತಿದೆ.

Jagadish Shettar

ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಗನನ್ನು ಕಣಕ್ಕಿಳಿಸಿ, ಮಗನಿಗಿಂತ ಹೆಚ್ಚಾಗಿ ಅವರೇ ಪ್ರಚಾರ ಕೈಗೊಂಡಿದ್ದಾರೆ. ಯುವ ನಾಯಕತ್ವ, ಸುರೇಶ್‌ ಅಂಗಡಿ ಕುಟುಂಬದ ಪ್ರಾಬಲ್ಯ ಇಲ್ಲದಿರುವುದು, ಗ್ಯಾರಂಟಿ ಯೋಜನೆಗಳು ಸೇರಿ ಹಲವು ಅಂಶಗಳು ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ ಸಕಾರಾತ್ಮಕವಾಗಿವೆ ಎಂಬುದಾಗಿ ತಿಳಿದುಬಂದಿದೆ. ಆದರೆ, ಸುರೇಶ್‌ ಅಂಗಡಿಯವರು ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ನಂತರ ಮಂಗಲಾ ಅಂಗಡಿಯವರು ಕೂಡ ಗೆದ್ದಿದ್ದು, ಆ ಮೂಲಕ ಬಿಜೆಪಿ ಬೇರುಗಳನ್ನು ಗಟ್ಟಿಗೊಳಿಸಿದ್ದು ಮೃಣಾಲ್‌ಗೆ ಕುತ್ತಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಿಂದಿನ ಚುನಾವಣೆ ಫಲಿತಾಂಶ ಏನಾಗಿತ್ತು?

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್‌ ಅಂಗಡಿ ಅವರು ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಸುರೇಶ್ ಅಂಗಡಿ ಅವರು ಕಾಂಗ್ರೆಸ್‌ನ ವಿರೂಪಾಕ್ಷಿ ಸಾಧುಣ್ಣವರ್‌ ವಿರುದ್ಧ ಗೆಲುವು ಸಾಧಿಸುವ ಜತೆಗೆ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, ಸುರೇಶ್‌ ಅಂಗಡಿಯವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ 2021ರಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಆಗ, ಸುರೇಶ್‌ ಅಂಗಡಿ ಅವರ ಪತ್ನಿ ಮಂಗಲಾ ಸುರೇಶ್‌ ಅಂಗಡಿ ಅವರು ಸತೀಶ್‌ ಜಾರಕಿಹೊಳಿ ವಿರುದ್ಧ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Continue Reading

ಪ್ರಮುಖ ಸುದ್ದಿ

Hassan Lok Sabha Constituency : ಅತ್ಯಾಚಾರ ಆರೋಪಿ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮತ್ತೆ ಗೆಲ್ಲುವರೇ?

Hassan Lok Sabha Constituency: ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿವೆ. ಜೆಡಿಎಸ್ 4, ಕಾಂಗ್ರೆಸ್ 2, ಬಿಜೆಪಿ 2 ಸ್ಥಾನಗಳನ್ನು ಹೊಂದಿವೆ.

VISTARANEWS.COM


on

Hassan Lok Sabha Constituency
Koo

ಹಾಸನ ಲೋಕಸಭಾ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು. 1957ರಲ್ಲಿ ಈ ಕ್ಷೇತ್ರವನ್ನು ಹಾಸನ ಎಂದು ಗುರುತಿಸಲಾಯಿತು. 1974 ರಲ್ಲಿ, ಹಾಸನ ಕ್ಷೇತ್ರವು ಕರ್ನಾಟಕದ ಭಾಗವಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಜನತಾದಳದಿಂದ ಹಾಗೂ ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿದೆ. 1999ರಲ್ಲಿ ದೇವೇಗೌಡರನ್ನು ಸೋಲಿಸಿದ್ದ ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಎಂ.ಪಟೇಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಮೂಲಕ ದಶಕಗಳ ಹಿಂದಿನ ರಾಜಕೀಯ ಹೋರಾಟಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ಬೆಂಗಳೂರಿನಿಂದ 200 ಕಿಲೋಮೀಟರ್ ದೂರದಲ್ಲಿರುವ ಈ ನಗರವು ಹೊಯ್ಸಳ ರಾಜರ ಪ್ರಾಚೀನ ತಾಣಗಳಿಗೆ ನೆಲೆಯಾಗಿದೆ. ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 2,016,000. ಈ ಪೈಕಿ 1,561,000 ಮತದಾರರಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಜನಸಂಖ್ಯೆಯ ಸುಮಾರು 78% ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, 22% ರಷ್ಟು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.

ಹಾಸನ ಲೋಕಸಭೆ ಕ್ಷೇತ್ರ ಸಾಮಾನ್ಯ ವರ್ಗದ ಸಂಸತ್ ಸ್ಥಾನವಾಗಿದೆ. ಇದು ಇಡೀ ಹಾಸನ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗವನ್ನು ಒಳಗೊಂಡಿದೆ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿವೆ. ಜೆಡಿಎಸ್ 4, ಕಾಂಗ್ರೆಸ್ 2, ಬಿಜೆಪಿ 2 ಸ್ಥಾನಗಳನ್ನು ಹೊಂದಿವೆ.

ಹಿಂದಿನ ಫಲಿತಾಂಶಗಳು

2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಬಿಎಸ್ಪಿಯ ವಿನೋದ್ ರಾಜ್ ಕೆ.ಎಚ್ 38,761 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.2019ರ ಚುನಾವಣೆಯಲ್ಲಿ ಜೆಡಿಎಸ್ ಶೇ.52.92ರಷ್ಟು ಮತಗಳನ್ನು ಪಡೆದಿತ್ತು.

2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 5,09,841 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಜೆಡಿಎಸ್ ಶೇ.44.44ರಷ್ಟು ಮತಗಳನ್ನು ಪಡೆದಿದೆ.

ಇದನ್ನೂ ಓದಿ: Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರು ಬಿಜೆಪಿಯ ಕೆ.ಎಚ್.ಹನುಮೇಗೌಡ ಅವರನ್ನು 2,91,113 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.50.63ರಷ್ಟು ಮತಗಳನ್ನು ಪಡೆದಿತ್ತು.

ದೇವೇಗೌಡ ಕುಟುಂಬದ ಭದ್ರಕೋಟೆ

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ಪಕ್ಷ ಮತ್ತು ಕುಟುಂಬದ ಭದ್ರಕೋಟೆಯಾಗಿ ಪರಿವರ್ತಿಸಿದ್ದಾರೆ. 1991ರಲ್ಲಿ ಅವರ ಮೊದಲ ವಿಜಯದ ನಂತರ, ಅವರು 1998, 2004, 2009 ಮತ್ತು 2014 ರಲ್ಲಿ ಮರು ಆಯ್ಕೆಯಾದರು.

ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 2016000. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 69.34% ರಷ್ಟಿತ್ತು. ಎಸ್ಸಿ ಮತದಾರರು ಸುಮಾರು 19.5% ರಷ್ಟಿದ್ದರೆ, ಎಸ್ಟಿ ಮತದಾರರು ಸುಮಾರು 1.8% ರಷ್ಟಿದ್ದಾರೆ. ಸುಮಾರು 1294690 ಗ್ರಾಮೀಣ ಮತದಾರರು 78.4% ರಷ್ಟಿದ್ದಾರೆ.

Continue Reading

ಲೈಫ್‌ಸ್ಟೈಲ್

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ನೌಕಾಪಡೆ ನಿವೃತ್ತ ಅಧಿಕಾರಿ ವಯಸ್ಸಿನಲ್ಲಿ ಸುಮಾರು ಹತ್ತು ವರ್ಷಗಳಷ್ಟು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು ಇವರು (Ways To Stay Young) ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

VISTARANEWS.COM


on

Ways To Stay Young
Koo

56 ವರ್ಷದ ನಿವೃತ್ತ ನೌಕಾದಳದ ಅಧಿಕಾರಿ ಜೋಸೆಫ್‌ ಡಿಟೂರಿ ಇತ್ತೀಚೆಗೆ 93 ದಿನಗಳ ಕಾಲ ಅಟ್ಲಾಂಟಿಕ್‌ ಸಮುದ್ರದಾಳದಲ್ಲಿ ವಾಸಿಸುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ. ಅಷ್ಟೇ ಅಲ್ಲ, ಸಾಗರದಾಳದಲ್ಲಿ ಜೀವಿಸುವುದರಿಂದ ತಮ್ಮ ವಯಸ್ಸನ್ನೂ ಕಡಿಮೆಗೊಳಿಸಿರುವುದು ಇಲ್ಲಿ ಅಚ್ಚರಿಯ ವಿಷಯ.
ಹೌದು. ಒತ್ತಡದ ಪಾಡ್‌ ಒಂದರೊಳಗೆ 93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ಸುಮಾರು ಹತ್ತು ವರ್ಷಗಳಷ್ಟು ವಯಸ್ಸಿನಲ್ಲಿ ಇವರು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು (Ways To Stay Young) ಇವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

man spends 93 days under atlantic sea becomes 10 years younger

ದಾಖಲೆ ಅಷ್ಟೇ ಅಲ್ಲ

ಸಮುದ್ರದಾಳದಲ್ಲಿ 93 ದಿನಗಳ ಕಾಲ ಜೀವಿಸುವ ಮೂಲಕ ದಾಖಲೆ ಬರೆಯುವುದಷ್ಟೇ ಅಲ್ಲ, ಮಾನಸಿಕವಾಗಿ, ದೈಹಿಕವಾಗಿ, ಮತ್ತಷ್ಟು ಆರೋಗ್ಯವಂತರಾಗಿ, ಉಲ್ಲಾಸದಾಯಕ ವ್ಯಕ್ತಿಯಾಗಿ ಹೊರ ಜಗತ್ತಿಗೆ ಮರಳಿದ್ದಾರೆ. ಒತ್ತಡದ ಪಾಡ್‌ ಒಂದರಲ್ಲಿ ಸಮುದ್ರದಾಳದಲ್ಲಿ ಜೀವಿಸಿದ ಕಾರಣ, ಮನುಷ್ಯನ ದೇಹದ ಮೇಲೆ ಇದು ಬೀರುವ ಪರಿಣಾಮ ಇತ್ಯಾದಿಗಳನ್ನು ಡಿಟೂರಿ ಅವರು ಜಗತ್ತಿಗೆ ಸಾಬೀತುಪಡಿಸಿ ತೋರಿಸಿದ್ದಾರೆ. ಹೊರ ಬಂದ ಮೇಲೆ ಅವರ ಮೇಲೆ ನಡೆದ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳು, ಈತ ಸಾಬೀತುಪಡಿಸಿದ ವಿಚಾರಗಳನ್ನು ಅಧಿಕೃತಗೊಳಿಸಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ 93 ದಿನಗಳಲ್ಲಿ ಡಿಟೂರಿ ಅವರು 10 ವರ್ಷಗಳಷ್ಟು ಯೌವನವನ್ನು ಮರಳಿ ಪಡೆದಿದ್ದಾರೆ ಎಂದು ದೃಢಪಡಿಸಿವೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಡಿಟೂರಿ ಅವರ ಸ್ಟೆಮ್‌ ಸೆಲ್‌ (ಕಾಂಡ ಕೋಶ)ಗಳು ಗಣನೀಯವಾಗಿ ಏರಿದ್ದು, ಕೊಲೆಸ್ಟೆರಾಲ್‌ ಮಟ್ಟವು 72 ಪಾಯಿಂಟ್‌ಗಳಷ್ಟು ಕೆಳಗಿಳಿದಿವೆ. ದೇಹದಲ್ಲಿದ್ದ ಇತರ ಯುರಿಯೂತದ ಲಕ್ಷಣಗಳೂ ಕಡಿಮೆಯಾಗಿವೆ. ನಿದ್ದೆಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಮುಖ್ಯವಾಗಿ ರಾತ್ರಿಯ ಗಾಢ ನಿದ್ದೆಯ ಗುಣಮಟ್ಟ ಶೇ.೬೦ರಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ಪ್ರತಿ ವ್ಯಕ್ತಿಯ ವರ್ಣತಂತುಗಳು ವಯಸ್ಸಾದ ಹಾಗೆ ಚಿಕ್ಕದಾಗುತ್ತಾ ಬರುವುದರಿಂದ, ಇಲ್ಲಿ, ಡಿಟೂರಿ ಅವರ ವರ್ಣತಂತು ಶೇ.೨೦ರಷ್ಟು ಉದ್ದವಾಗಿದ್ದು, ಇದು ಯೌವನವನ್ನು 10 ವರ್ಷಗಳಷ್ಟು ಮರಳಿಸಿದೆ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ.

ಆರೋಗ್ಯ ಸುಧಾರಣೆ

ಡಿಟೂರಿ ಅವರ ಮಿದುಳಿನ ಆರೋಗ್ಯ ಕೂಡಾ ಸಾಕಷ್ಟು ಸುಧಾರಿಸಿದ್ದು, ಅವರು ಮತತೆ ಲವಲವಿಕೆಯಿಂದ ಜೀವನೋತ್ಸಾಹದಿಂದ ಮರಳಿ ಬಂದಿರುವುದು ವಿಶೇಷ. ಸಮುದ್ರದಾಳದಲ್ಲಿ ಹೈಪರ್‌ಬಾರಿಕ್‌ ಚೇಂಬರ್‌ ಒಳಗೆ ಅವರು 93 ದಿನಗಳ ಕಾಲ ಉಳಿದುಕೊಂಡಿದ್ದು, ಇದು ಅವರ ಒಟ್ಟಾರೆ ಆರೋಗ್ಯಕ್ಕೆ ಭಾರೀ ಸಕಾರಾತ್ಮಕ ಪರಿಣಾಮ ಬೀರಿದೆ. ಡಿಟೂರಿ ಅವರೇ ಹೇಳುವಂತೆ, 100 ಚದರ ಅಡಿಯ ಚೇಂಬರ್‌ ಒಳಗೆ ಸಮುದ್ರದಾಳದಲ್ಲಿ ಜೀವಿಸುವ ಸಂದರ್ಭದಲ್ಲಿ ವಾರಕ್ಕೆ ಐದು ದಿನಗಳ ಕಾಲ ಪ್ರತಿ ನಿತ್ಯವೂ ಒಂದು ಗಂಟೆಗಳ ಕಾಲ ವ್ಯಾಯಾಮ ಇತ್ಯಾದಿಗಳನ್ನು ಅವರು ಮಾಡಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗಿರಲು ಹೊರಗೆ ನೆಲದ ಮೇಲಿದ್ದಾಗ ಮಾಡುವ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ಶಿಸ್ತನ್ನು ಪಾಲಿಸಿದ್ದೂ ಕೂಡಾ ಈ ಆರೋಗ್ಯ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಸಕಾರಾತ್ಮಕ ಪರಿಣಾಮ

ಜನರು ಪ್ರವಾಸಕ್ಕಾಗಿ ಆಗಾಗ ಹೊರಗೆ ತಿರುಗಾಡಿ ಬರುವ ಬದಲು ಹೀಗೆ ಎರಡು ವಾರಗಳ ಕಾಲ ಸಮುದ್ರದಾಳದಲ್ಲಿ ಕಳೆಯಬಹುದು. ಇದು ದೇಹಾರೋಗ್ಯಕ್ಕೆ, ಮಾನಸಿಕ ಆರೋಗ್ಯಕ್ಕೆ ಕೊಡುವ ಸಕಾರಾತ್ಮಕ ಪರಿಣಾಮವನ್ನು ಅನುಭವಿಸಿ ನೋಡಬಹುದು ಎಂದು ಅವರು ಹೇಳಿದ್ದಾರೆ. ಡಿಟೂರಿ ಅವರು ಈ ಹಿಂದೆಯೂ 2023ರಲ್ಲಿ ಸಮುದ್ರದಾಳದಲ್ಲಿ 74 ದಿನಗಳ ಕಾಲ ಕಳೆದಿದ್ದರು. ಇದೇ ಮೊದಲ ಬಾರಿಗೆ ಸಮುದ್ರದಾಳದಲ್ಲಿ 93 ದಿನಗಳನ್ನು ಕಳೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆಯೂ 100 ದಿನಗಳ ಕಾಲ ಸಮುದ್ರದಡಿಯಲ್ಲಿ 30 ಅಡಿ ಆಳದಲ್ಲಿ ಸ್ಟೀಲ್‌ ಹಾಗೂ ಗ್ಲಾಸ್‌ನಿಂದ ಮಾಡಿದ ಹೊಟೇಲ್‌ ಒಂದರಲ್ಲಿ ಇರುವ ಮೂಲಕವೂ ದಾಖಲೆ ಬರೆದಿದ್ದರು.

Continue Reading

ಪ್ರಮುಖ ಸುದ್ದಿ

Chamarajanagar Lok Sabha Constituency : ಚಾಮರಾಜನಗರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್​​ಗೆ ತವಕ

Chamarajanagar Lok Sabha Constituency : ಚಾಮರಾಜನಗರ ಲೋಕಸಭೆ ಕ್ಷೇತ್ರ, ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಈ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರವು 1962 ರಲ್ಲಿ ಅಸ್ತಿತ್ವಕ್ಕೆ ಬಂದಿತು.

VISTARANEWS.COM


on

Chamarajanagar Lok Sabha Constituency
Koo

ಬೆಂಗಳೂರು: ಚಾಮರಾಜನಗರ ಲೋಕಸಭಾ ಕ್ಷೇತ್ರವು (Chamarajanagar Lok Sabha Constituency) ಜನಸಂಖ್ಯೆಯ ದೃಷ್ಟಿಯಿಂದ ಜಿಲ್ಲೆಯು ರಾಜ್ಯದ ಮೂರನೇ ಅತಿದೊಡ್ಡ ಕ್ಷೇತ್ರ. ಈ ಜಿಲ್ಲೆಗೆ ಮೈಸೂರು ರಾಜ ಚಾಮರಾಜ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರವು ಕರ್ನಾಟಕದ ದಕ್ಷಿಣ ಭಾಗದಲ್ಲಿದೆ ಮತ್ತು ಪ್ರಸ್ತುತ ಬಿಜೆಪಿಯ ದಿ. ವಿ ಶ್ರೀನಿವಾಸ್ ಪ್ರಸಾದ್ ಪ್ರತಿನಿಧಿಸುತ್ತಿದ್ದರು. ಭಾರತದ ಚುನಾವಣಾ ಆಯೋಗದ ಪ್ರಕಾರ 2019 ರಲ್ಲಿ ಒಟ್ಟು ಮತದಾರರ ಸಂಖ್ಯೆ 16,86,333. ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಬಾಲರಾಜ್ ಬಿಜೆಪಿಯಿಂದ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಕಾಂಗ್ರೆಸ್​​ನಿಂದ ಸ್ಪರ್ಧಿಸಲಿದ್ದಾರೆ.

ಚಾಮರಾಜನಗರ ಕ್ಷೇತ್ರವು ಮೈಸೂರು ರಾಜ್ಯದ ಭಾಗವಾಗಿತ್ತು. 1977 ರಿಂದ ಇದನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ. ಈ ಕ್ಷೇತ್ರದಲ್ಲಿ ಈವರೆಗೆ ಒಟ್ಟು 17 ಚುನಾವಣೆಗಳು ನಡೆದಿದ್ದು, ಅದರಲ್ಲಿ ಕಾಂಗ್ರೆಸ್ 12 ಬಾರಿ ಗೆದ್ದಿದೆ. ಇದಲ್ಲದೆ, ಜನತಾದಳ ಎರಡು ಬಾರಿ ಗೆದ್ದಿದ್ದರೆ ಜೆಡಿಎಸ್ ಮತ್ತು ಜೆಡಿಯು ಅಭ್ಯರ್ಥಿಗಳು ತಲಾ ಒಂದು ಬಾರಿ ಗೆದ್ದಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಗ್ಗಡದೇವನಕೋಟೆ, ನಂಜನಗೂಡು, ವರುಣಾ, ಟಿ.ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 7 ಸ್ಥಾನಗಳು ಕಾಂಗ್ರೆಸ್, 1 ಜೆಡಿಎಸ್ ಪಾಲಾಗಿವೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್​ ಪ್ರಸಾದ್ ಮೂಲಕ ಮೊದಲ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿತ್ತು. ಅದನ್ನು ಉಳಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಜನತಾದಳವು ಮೊದಲು ಈ ಕಾಂಗ್ರೆಸ್ ಭದ್ರಕೋಟೆಯನ್ನು ಮುರಿದಿತ್ತು. 1999ರಲ್ಲಿ ಶ್ರೀನಿವಾಸ್ ಪ್ರಸಾದ್ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ನ ಆರ್.ಧ್ರುವನಾರಾಯಣ ಅವರು ಕ್ಷೇತ್ರವನ್ನು ಕಸಿದುಕೊಂಡಿದ್ದರು.

ಹೇಗಿದೆ ಮತದಾರರ ಸ್ಥಿತಿ

2011ರ ರ ಜನಗಣತಿಯ ಪ್ರಕಾರ ಚಾಮರಾಜನಗರವು 1020791 ಜನಸಂಖ್ಯೆಯನ್ನು ಹೊಂದಿತ್ತು. ಸರಾಸರಿ ಸಾಕ್ಷರತಾ ಪ್ರಮಾಣವು 61.43% – ಮಹಿಳೆಯರಲ್ಲಿ 54.92% ಮತ್ತು ಪುರುಷರಲ್ಲಿ 67.93% ಆಗಿತ್ತು. ಕ್ಷೇತ್ರದ ಒಟ್ಟು ಮತದಾರರಲ್ಲಿ ಸುಮಾರು 1436492 ಗ್ರಾಮೀಣ ಮತದಾರರು ಸುಮಾರು 85.1% ರಷ್ಟಿದ್ದಾರೆ. ಎಸ್ಸಿ ಮತ್ತು ಎಸ್ಟಿ ಮತದಾರರು ಕ್ರಮವಾಗಿ 25.2% ಮತ್ತು 13.9% ರಷ್ಟಿದ್ದಾರೆ.

ಇದನ್ನೂ ಓದಿ: Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

ಹಿಂದಿನ ಫಲಿತಾಂಶಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ವಿ .ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್​ನ ಆರ್. ಧ್ರುವನಾರಾಯಣ ಅವರನ್ನು 1,817 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.44.74ರಷ್ಟು ಮತಗಳನ್ನು ಪಡೆದಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್​ನ ಆರ್.ಧ್ರುವನಾರಾಯಣ ಅವರು ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ ಅವರನ್ನು 1,41,182 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ ಈ ಕ್ಷೇತ್ರದಲ್ಲಿ 50.11% ಮತಗಳನ್ನು ಗಳಿಸಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಆರ್.ಧ್ರುವನಾರಾಯಣ ಅವರು ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ ಅವರನ್ನು 4,002 ಮತಗಳ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 37.99% ಮತಗಳನ್ನು ಪಡೆದಿತ್ತು.

Continue Reading
Advertisement
Belagavi Lok Sabha Constituency
ಬೆಳಗಾವಿ7 mins ago

Belagavi Lok Sabha Constituency: ಶೆಟ್ಟರ್‌ ವರ್ಸಸ್‌ ಹೆಬ್ಬಾಳ್ಕರ್‌; ಯಾರಿಗೆ ಬೆಳಗಾವಿ ಕುಂದಾ?

Sweating And Body Odor
ಆರೋಗ್ಯ8 mins ago

Sweating And Body Odor: ಅತಿಯಾಗಿ ಬೆವರುತ್ತಿದ್ದೀರಾ? ಈ ಆಹಾರಗಳು ನಿಮ್ಮ ಬೆವರ ದುರ್ಗಂಧಕ್ಕೆ ಮುಖ್ಯ ಕಾರಣ!

karnataka Weather Forecast
ಮಳೆ38 mins ago

Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Hassan Lok Sabha Constituency
ಪ್ರಮುಖ ಸುದ್ದಿ1 hour ago

Hassan Lok Sabha Constituency : ಅತ್ಯಾಚಾರ ಆರೋಪಿ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮತ್ತೆ ಗೆಲ್ಲುವರೇ?

Ways To Stay Young
ಲೈಫ್‌ಸ್ಟೈಲ್1 hour ago

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

Tattoo Care
ಆರೋಗ್ಯ2 hours ago

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

Banglore rain
ಪ್ರಮುಖ ಸುದ್ದಿ2 hours ago

Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

Chamarajanagar Lok Sabha Constituency
ಪ್ರಮುಖ ಸುದ್ದಿ2 hours ago

Chamarajanagar Lok Sabha Constituency : ಚಾಮರಾಜನಗರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್​​ಗೆ ತವಕ

Dina Bhavishya
ಭವಿಷ್ಯ2 hours ago

Dina Bhavishya : ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ

Amul Milk
ದೇಶ7 hours ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌